ಕಪ್ಪು ಮೋಡ, ಬೆಳ್ಳಿ ಅಂಚು

ಕಪ್ಪು ಮೋಡ, ಬೆಳ್ಳಿ ಅಂಚು ಮುಂಗೈಯಲ್ಲಿ ಸಣ್ಣನೆಯ ನೋವು, ಒಳಗೆ ಸೂಜಿ ಸುಳಿದಾಡಿ ಹೊರಗೆಳೆದಂತೆ. ಮೆಲ್ಲನೆ ಕಣ್ಣು ತೆರೆದೆ. ಶೀಲಾ ಮಂಚದ ಕಂಬಿಗೆ ನೇತು ಹಾಕಿದ್ದ ಗ್ಲೂಕೋಸ್ ಡ್ರಿಪ್ಸ್ ಬಿಚ್ಚಿ ಕೆಳಗಿಡುತ್ತಾ ಕೇಳಿದಳು- ‘ಈಗ […]

ದೇವಕಿಯಮ್ಮನ ತರವಾಡು ಮನೆ

(ಹೆಚ್ಚಾಗಿ ಕನ್ನಡದಲ್ಲಿ ಬಳಕೆಯಲ್ಲಿಲ್ಲದ-ಪ್ರಾದೇಶಿಕವೆನ್ನಬಹುದಾದ ಪದಗಳ ಅರ್ಥಗಳನ್ನು ಕೆಳಗೆ ನೀಡಲಾಗಿದೆ-ಸಂ) ಕಾರ್ತಿಕ ಮಾಸದ ಮುಸ್ಸಂಜೆ. ಆ ತರವಾಡು ಮನೆಯ ಅಗಲ ಕಿರಿದಾದ ಮೂರು ಸುತ್ತು ಉದ್ದೋ ಉದ್ದ ಚಾಚಿರುವ ಚಾವಡಿಗೆ ಕತ್ತಲು ಅಂಬೆಗಾಲಿಕ್ಕುತ್ತಿತ್ತು. ಮುಂಭಾಗದ ಚಾವಡಿಯ […]

ಫೈಲಿಂಗ್ ಕ್ಲರ್ಕ್ ಶೃಂಗಾರಪುರೆ

ಸುರೇಶ ಮಹಾದೇವ ಶೃಂಗಾರಪುರೆ ಖಂಡೋಬಾನ ಪರಮ ಭಕ್ತ. ಸಂಕಟದ ಗಳಿಗೆ ಬಂದಾಗಲೆಲ್ಲಾ ಆತ ಮನೆಯಲ್ಲಿರಲಿ, ಆಫೀಸಿನಲ್ಲಿರಲಿ ಅಲ್ಲಾ ರಸ್ತೆಯಲ್ಲಿರಲಿ ನಡೆಯುತ್ತಿರಲಿ ಖಂಡೋಬಾನ ಧ್ಯಾನಕ್ಕೆ ತೊಡಗುತ್ತಾನೆ. ಮನಸ್ಸಿನಲ್ಲಿಯೆ ಆತ ಖಂಡೋಬಾನ ಮೂರ್ತಿಗೆ ವಿವಿಧ ಅಲಂಕಾರ ಮಾಡುತ್ತಾನೆ. […]

ಧಣಿಗಳ ಬೆಳ್ಳಿಲೋಟ

ಆ ಮಾನಗೇಡಿ ಹೊಳೆಗೆ ಒಂದಷ್ಟು ಉಗುರೆಡೆಯಲ್ಲಾದರೂ ನಾಚಿಕೆಯೆಂಬುದು ಇದ್ದಿದ್ದರೆ, ಒಂದಾ ಆ ಪರಿಯ ಬೈಗಳಿಗೆ ಅದು ತಟ್ಟನೆ ಇಂಗಿಹೋಗುತ್ತಿತ್ತು ಅಥವಾ ಸರ್ರೆಂದು ನುಗ್ಗಿ ಬಂದು ಆಕೆಯನ್ನು ನುಂಗಿ ಬಿಡುತ್ತಿತ್ತು. ಅದೆಂತದ್ದೂ ಇಲ್ಲದೆ ಅದು “ […]

ಸಿನಿಮ

ಮಧ್ಯಾಹ್ನದ ಉರಿಬಿಸಿಲಿನ ಕೃಪೆಯಿಂದ ಮನೆಯ ಗೋಡೆ, ಛಾವಣಿ ಕಾದು, ಉಟ್ಟ ಸೀರೆಯೆಲ್ಲ ಬೆವರ ಮುದ್ದೆಯಾಗಿ, ಗಾಳಿಯ ಸುಳಿವೂ ಇಲ್ಲದ ಸ್ಥಿತಿಯಲ್ಲಿ ಉಸಿರುಗಟ್ಟಿದವಳಂತೆ ಒದ್ದಾಡಿದ ಅವಳು ಸಹಜವಾಗಿಯೇ ಹಾಯೆನಿಸುವ ವಾತಾವರಣವನ್ನು ಹುಡುಕಿಕೊಂಡು ಬೀಚಿಗೆ ಬಂದಿದ್ದಳು. ಇಡೀ […]

ಕಾಲದೊಡನೆ ಅಶ್ವತ್ಥನ ಸ್ಪರ್ಧೆ

ನಾವು ಐವರು, ಶಾಸ್ತ್ರಿಗಳ ಮನೆಯ ಮುಂದಿನ ಉದ್ಯಾನವನದಲ್ಲಿ ಎಳೆಹಗಲಿನ ಬಿಸಿಲಿನ ಹಿತಕ್ಕೆ ಬೆನ್ನೊಡ್ಡಿಕುಳಿತಿದ್ದೆವು. ಗರಿಕೆಯಮೇಲಿನ ಹಿಮಮಣಿ ಇನ್ನೂ ತನ್ನ ಹೊಳಪನ್ನು ನೀಗಿಕೊಂಡಿರಲಿಲ್ಲ. ಅಗಸೆ ಗಿಡದ ನೀಲಿ ಹೂ ಆಕಾಶದ ನೀಲಕ್ಕೆ ಬಣ್ಣ ಹಚ್ಚುತ್ತಿತ್ತು. ಶಾಲು […]

ಏನೆಂದೂ ಆಗದವರು

ನನ್ನ ಕಾರ್ಖಾನೆ ಬಸ್ಸು ಮಲ್ಲೇಶ್ವರಂ ಸ್ಟಾಪ್ ಬಳಿಗೆ ಬರುತ್ತಿದ್ದಂತೆ ನನ್ನ ಕಣ್ಣುಗಳು ಕಿಟಕಿಯತ್ತ ಹರಿಯುತ್ತವೆ. ಅಲ್ಲಿ ಕಾರ್ಮಿಕರ ಬಸ್ಸಿಗಾಗಿ ಕಾಯುತ್ತಾ ನಿಂತ ರವಿ ಕಾಣುತ್ತಾನೆ. ನನ್ನ ಮುಖ ಕಂಡೊಡನೆ ಮುಗುಳ್ನಗುತ್ತಾನೆ. “ಸಂಜೆ ಸಿಗ್ತೀಯಾ? ಎಲ್ಲಿ? […]

ಎಚ್ಚರಕ್ಕೊಂದು ಎಚ್ಚರ

ಅನೂಪನ ಒತ್ತಾಯವಿರದಿದ್ದಲ್ಲಿ ನಾನು ಈ ರಿಯೂನಿಯನ್ನಿಗೆ ಬರುತ್ತಿರಲಿಲ್ಲವೇನೋ. ಐದು ದಿನಗಳ ತಮಾಷೆ. ಮೋಜೇ ಮೋಜು ಹೊರತು – ಬೇರೇನಿಲ್ಲ. ಎರಡನೆಯ ಹಗಲಿನ ಕೊನೆಗಾಣಿಸುವುದೇ ನನಗೆ ಇಷ್ಟು ದುಸ್ತರವೆನಿಸುತ್ತಿರುವಾಗ, ಇನ್ನು ಮೂರು ಸಂಜೆಗಳವರೆಗೆ ಮನಸ್ಸನ್ನು ಒತ್ತಾಯದ […]

ಈ ಪರಿಯ ಒಲುಮೆ… ಅನಿವಾರ್ಯ ಮತ್ತು ಅನಿರ್ವಚನೀಯ

ನಿರಂಜನ ಕಣತಿಯ ಮೂರೂವರೆ ತಿಂಗಳುಗಳ ಅನಿಶ್ಚಿತತೆಯಲ್ಲಿ ಏರನ್ನೋ, ತಿರುವನ್ನೋ ಹೂಡುವಂತೆ ಹಿಮ ಯುಗಾದಿಯ ಬಳಿಕದ ಮೂರನೆಯ ದಿನದಂದು ಅವನ ಮೊಬೈಲಿಗೆ ಫೋನಿಸಿದ್ದಳು. ಭಾನುವಾರದ ಎಂಟರ ಏರುಬಿಸಿಲಿನ ಬೆಳಗು. ಮುಂಬಿನ ಬೇಸಗೆಯ ಅತೀವ ಧಗೆಗೆ ಅಣಿಗೊಳ್ಳುತ್ತಿದ್ದ […]

ತ್ರಿವಿಕ್ರಮ

ಏರ್‍ಪೋರ್ಟ್ ರಸ್ತೆಯಲ್ಲಿ ಹಗಲುಗನಸುತ್ತ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಎದುರಿನ ಕವಲುದಾರಿಯ ಆ ಬದಿಯಿಂದ ಬಂದ ಸೈಕಲ್ಲಿಗೆ ಈ ಬದಿಯಿಂದ ಬಂದ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದು, ಸೈಕಲ್ ಕೆಳಗುರುಳಿ, ಆಟೋ ಪಲ್ಟಿ ಹಾಕಿದ ದೃಶ್ಯ ಕಾಣಿಸಿ, ಬಹುಶಃ […]