ಕಟಕಟೆಯಲ್ಲಿ ಇಂದು ಫಿರ್ಯಾದುಗಳ ಗೋಜಿಲ್ಲ

ಎಲ್ಲ ನೇರ ಅಂತ ಲಾಯರ್ ಹೇಳಿದ್ದರು.
ಈ ನಾಲ್ಕಂತಸ್ತಿನ ಎರಡನೇ ಮಹಡಿಗೆ ಕುರಿಮಂದೆಯಂತಹ ಜನಜಂಗುಳಿಯಲ್ಲಿ ನಿರ್ವಿಣ್ಣವಾಗಿ ಹತ್ತಿ ಬಲಗಡೆಯ ಹತ್ತಡಿಯಗಲದ ಜನವೇ ಜನವಿದ್ದ ಕಾರಿಡಾರಿನಲ್ಲಿ ಹೆಜ್ಜೆ ಹಾಕುವಾಗ ನಿಮ್ಮ ರಿಸ್ಟ್‌ವಾಚು ಹತ್ತು ಮುಕ್ಕಾಲು ತೋರಿಸುತ್ತಿರುತ್ತದೆ. ಅದನ್ನೊಮ್ಮೆ, ಹಾಗೆಯೇ, ಸಾವಕಾಶದಿಂದ ಕೊರಳಿಗೆ ಇಳಿಬಿಟ್ಟಿದ್ದ ನಿಮ್ಮ ಮೊಬೈಲಿನಲ್ಲೊಮ್ಮೆ ನೋಡಿ, – ಎರಡರ ವೇಳೆಯ ದಾಖಲುಗಳನ್ನೊಮ್ಮೆ ತಾಳೆ ಹಾಕಿ, ಕಿಸೆಯಿಂದ ಟಿಷ್ಯೂವೆಳೆದು ಹಣೆಯ ಮೇಲಿನ ಹನಿಗಳನ್ನೊತ್ತಿ ಹೀರಿ ಮುದುಡಿ ಎಂಥದೋ ಅಸಹನೆಯಿಂದ ಊoಠಿe ಣoಜಚಿಥಿ is ಣhe ಟಚಿsಣ ಜಚಿಥಿ ಎಂದು ನಿಮಗೆ ನೀವೇ ಸಶಬ್ದ ಹೇಳಿಕೊಳ್ಳುತ್ತೀರಿ. ನಿಮ್ಮ ಮಗ್ಗುಲು ಹಾಯುತ್ತಿದ್ದ ಹೆಣ್ಣು ಚಹರೆ ಅದನ್ನು ಕೇಳಿಸಿಕೊಂಡು ವಿಷಣ್ಣ ನಕ್ಕು ಮುಂದೆ ಸಾಗುತ್ತದೆ. ನಿಮಗೆ ಆ ಕುರಿತು ಕಸಿವಿಸಿಯಾಗುವುದಿಲ್ಲ. ಈ ಕಾರಿಡಾರಿನ ನಾಲ್ಕನೇ ಕಂಬದ ಮಗ್ಗುಲಿನ ಕಟಾಂಜನಕ್ಕೊರಗಿ ಸಾಧಾರಣ ಒಂದೂವರೆ ತಿಂಗಳಿಗೊಂದಾವರ್ತಿ ಗಂಟೆಗಟ್ಟಲೆ ಕಾಯುವುದು ಎರಡು ವರ್ಷಗಳಿಂದ ಅಭ್ಯಾಸವಾಗಿಬಿಟ್ಟಿದೆ ನಿಮಗೆ. ಎಷ್ಟೋ ಕಣ್ಣುಗಳು ನಿಮ್ಮನ್ನೇ ನೋಡುತ್ತಿರಬಹುದು, ನೋಡಿ ಏನೇನನ್ನೆಲ್ಲ ಕಲ್ಪಿಸಿಕೊಳ್ಳುತ್ತಿರಬಹುದು ಎಂಬ ಮುಜುಗರವಾಗಲಿ, ಈ ಮಂದೆಯ ನಡುವೆ ಅವಳು ಕಾಣುವ ಮೊದಲೇ ಸಶಬ್ಧ ಢವಿಸುತ್ತಿದ್ದ ‘ಎದೆಗಾರಿಕೆ’ಯಾಗಲಿ, ನಿಮ್ಮನ್ನು ನೋಡುತ್ತಲೇ ಅವಳು ಹೇಗೆ ಪ್ರತಿಕ್ರಿಯಿಸಬಹುದೆಂಬ ಊಹೆಗಳ ಗೋಜಲಾಗಲಿ ಈಗ ನಿಮ್ಮಲಿಲ್ಲ. ಮುಸುಮುಸು ಅಳು, ಬಿಕ್ಕುವ ಹೆಣ್ಣು ಮೋರೆಗಳು, ಅವುಗಳೊಟ್ಟಿಗೆ ಮರುಕ ಕಾಣಿಸುವ ಇನ್ನಿತರೆ ಚರ್ಯೆಗಳು ಪಟ್ಟು ಬಿಡದ ಗಂಡು ಧಿಮಾಕುಗಳು, ಮಕ್ಕಳ ವಾರಸಿಕೆ ಕುರಿತಾದ ದಾವೆಗಳು, ಮಾಸಾಶನದ ಲೇವಾದೇವಿಗಳು, ಜತೆಜತೆಗಿನ ಮನೋವಿಕಾರಗಳು ನಿಮ್ಮನ್ನು ಈಗ ಅಲುಗಿಸುವುದಿಲ್ಲ. ಈಗೇನಿದ್ದರೂ ನಿಮ್ಮ ಕಾಳಜಿಗಳು ನಿಮ್ಮ ನೆಲೆಯನ್ನಷ್ಟೇ ಕುರಿತಾದವು. ನೀವೀಗ ತಟಸ್ಥರು, ನಿಲುವೂ ನಿರ್ಲಿಪ್ತ, ಏತಕ್ಕೂ ಸಿದ್ಧವೆಂಬ ಧೋರಣೆ. ತಯಾರಿಯಿಂದ ರೂಢಿಸಿಕೊಂಡ ಸಮಾಧಾನ ಒಂದಷ್ಟು, ಜೊತೆಗೆ ನಿಮ್ಮ ಲಾಯರು ಹೇಳಿದ್ದಾರೆ. ಇನ್ನು ಎಲ್ಲ ನೇರ, ಕಟೆಕಟೆಯಲ್ಲಿ ಇಂದು ಫಿರ್ಯಾದುಗಳ ಗೋಜಿಲ್ಲ.

ಶನಿವಾರವಷ್ಟೆ ಹಡ್ಸನ್ ಸರ್ಕಲ್ಲಿನ ಟ್ರಾಫಿಕ್ ರಾಡಿಯಲ್ಲಿ ಮೊದಲ ಗೇರಿನಲ್ಲಿ ಡಾಮರು ಉಜ್ಜುತ್ತ ಹೆಣಗುತ್ತಿರುವಾಗ ಲಾಯರ ಫೋನು ಬಂದಿತ್ತು. ‘ಅವಳು ಎಲ್ಲಾನೂ ವಿತ್‌ಡ್ರಾ ಮಾಡ್ಕೊತಾಳಂತೆ, ಕೇಸರೀ, ಏನೂ ಅಲ್ಯುಮ್ನೀ ಬೇಡ ಅಂತ ಹೇಳಿದ್ದಾಳಂತೆ. ಅವಳ ಲಾಯರ್ ಸುಮನ್ ಫೋನ್ ಮಾಡಿದ್ರು. ಬೇಗ ಮುಗಿಸಿಬಿಡೋಣ ಮೇಡಮ್- ಸುಮ್ಮನೆ ಇಬ್ಬರಿಗೂ ತೊಂದರೆ, ಇಬ್ಬರಿಗೂ ಚಿಕ್ಕ ವಯಸ್ಸು, ಇದೊಂದು ಕ್ಲಿಯರ್ ಆದರೆ ಅವರವರ ಬದುಕು ಅವರವರು ನೋಡ್ಕೋಬಹುದಲ್ವೇ ಅಂದರು. ನೀವು ನಾಳಿದ್ದು ವೆಡ್‌ನೆಸ್‌ಡೇ ಸೀದಾ ಹತ್ತು ಗಂಟೆಗೆ ಮಾಮೂಲು ಸೆಕೆಂಡ್ ಫ್ಲೋರ್ ಹಾಲಿಗೆ ಬಂದುಬಿಡಿ. ಅಲ್ಲೇ ಸಿಗ್ತೀನಿ’ ಹಿಯರಿಂಗುಗಳ ಮಾಸಾವರಿ ಆವರ್ತನೆಯನ್ನು ಸ್ವಾಭಾವಿಕವೆಂಬಂತೆ ನಿಮ್ಮ ದೈನಂದಿನದಲ್ಲಿ ಅಳವಡಿಸಿಕೊಂಡಿದ್ದ ನಿಮಗೆ ಈ ಬಗೆಯ ತಿರುವು, ಇತ್ಯರ್ಥ ಅಸಹಜವೆನ್ನಿಸಿತ್ತು. ಎರಡೂವರೆ ವರ್ಷಗಳಿಂದ ಅವಳು ನಿಮ್ಮೊಟ್ಟಿಗಿದ್ದಿಲ್ಲವಾದರೂ ಮುಂದೆ ಎಂದಾದರೂ ಒಮ್ಮೆ ಅವಳು ತನ್ನ ನಿಲುವುಗಳನ್ನು ಬದಲಿಸಿಕೊಳ್ಳ ಬಹುದೆಂಬ ಕ್ಷೀಣ ಆಶಾವಾದ ನಿಮ್ಮಲ್ಲಿ ಇಲ್ಲದಿದ್ದುದಂತೂ ಇಲ. ಈಗಷ್ಟೆ ಕರೀಕೋಟು, ಕಟಕಟೆಗಳ ವ್ಯವಹಾರ ಉದ್ರಿಕ್ತಕೊಳ್ಳುತ್ತಿರುವಾಗ ಅವಳ ಈ ನಿರ್ಧಾರ ತೀರಾ ಅಸಂಗತವೆನ್ನಿಸಿತ್ತು. ಒಟ್ಟಿಗಿಲ್ಲವಾದರೂ ಕಾಗದದ ಮೇಲಾದರೂ ಅವಳು ನಿಮ್ಮದೇ ಹೆಣ್ಣು ಎನ್ನುವ ಸಮಾಧಾನವಿತ್ತು. ಇದು ನಿಜವೇ? ನಿಜವಿದ್ದರೂ ಅದು ತನ್ನ ಭವಿಷ್ಯದ ರೂಪುರೇಶೆಗಳನ್ನು ಕೂಲಂಕಷ ತಡಕಿ ಸೂಕ್ತವೆಂದು ತೆಗೆದುಕೊಂಡ ನಿಲುವೆ? ಇಲ್ಲವೆ ಇದೊಂದು ಹೊಸ ಸಂಚು, ಹವಣಿಕೆಯೆ? ‘ಅವಳು ಯಾರನ್ನೋ ಮದುವೆ ಮಾಡಿಕೊಂಡು ಫಾರಿನ್ನಿಗೆ ಹೋಗೋ ತರಾತುರಿಯ್ಲಲಿದ್ದಾಳಂತೆ ಅಂತ ಸೂಕ್ಷ್ಮವಾಗಿ ಸುಮನ್ ಹೇಳಿದರು. ಬಿಟ್ಟುಬಿಡಿ ಕೇಸರಿ, ಸೂರೇ ಮುರಿದು ಬೀಳ್ತಿರಬೇಕಾದರೆ ಪಾಯ ಯಾಕೆ ತಡಕ್ತಿದ್ದೀರಿ? ಬುಧವಾರ ಇಬ್ಬರೂ ಜಾಯಿಂಟ್ ಆಗಿ ಒಂದು ಸೈನ್ ಮಾಡಿಬಿಟ್ಟರೆ ಅಲ್ಲಿಂದ ಒಂದು ಹದಿನೈದು ದಿನದಲ್ಲಿ ಎಲ್ಲಾ ಮುಗಿದುಬಿಡುತ್ತೆ. ಙou ಛಿಚಿಟಿ geಣ ಡಿeಚಿಜಥಿ ಜಿoಡಿ ಚಿಟಿoಣheಡಿ iಟಿಟಿiಟಿgs iಟಿ ಟiಜಿe ನಿಮಗೆ ಯಾವುದನ್ನೂ ನಂಬಲಾಗುವುದಿಲ್ಲ. ಅವಳು ನಿಮ್ಮೊಟ್ಟಿಗೆ ಇಲ್ಲ ಎಂಬುದನ್ನೂ.
*
*
*
ಹಾಗೆ ನೋಡಿದರೆ ಅವಳೊಟ್ಟಿಗಿನ ಎಂಟು ವರ್ಷಗಳ ಸಾಂಗತ್ಯದಲ್ಲಿ ಅವಳ ಯಾವುದೇ ನಡೆವಳಿಯನ್ನು ಇದು ಹೀಗೆ ಎಂದು ಖಚಿತ ಹೇಳಲಾಗಿದ್ದಿಲ್ಲ. ಮದುವೆಗೆ ಮೊದಲಿನ ಪ್ರಣಯವನ್ನು ಕುರಿತಂತೆ. ಪುರಾವೆಗೆಂಬಂತೆ ನಿಮ್ಮಿಬ್ಬರ ಮೊದಲ ಆಪ್ತ ಸಂದರ್ಭವನ್ನು ನೆನಪಿಸಿಕೊಳ್ಳಿ. ಸ್ಯಾಂಕಿ ಕೆರೆಯ ಮಗ್ಗುಲಿನ ಪಾರ್ಕ್ ಬಾಜೂ ಚಾಟ್ ತಿನ್ನುವಾಗ ಅಚಾನಕ್ಕಾಗಿ ನೀವು ಅವಳ ತುಟಿ ಮುದ್ದಿಸಿದಾಗ ಅವಳು ನಿಮ್ಮ ಮೋರೆಯನ್ನು ಹಿಂದೆ ತಳ್ಳಿರಲಿಲ್ಲ. ಆದರೆ ಮರುಸಂಜೆ ನಿಮ್ಮನ್ನು ಆಫೀಸಿನಲ್ಲಿ ಸಂಪರ್ಕಿಸಿ ನೀವು ಮಾಡಿದ್ದು ಘನಘೋರ ಅಪರಾಧವೆಂಬಂತೆ ಹೀನಾಯಮಾನ ಬೈದಿದ್ದಳು. ನೀವು ಸಲ್ಲದ ಅಪರಾಧಿಪ್ರಜ್ಞೆಯಿಂದ ಮತ್ತೆ ಸಾಯಂಕಾಲ ಅವಳನ್ನು ಭೆಟ್ಟಿ ಮಾಡಿ ಕ್ಷಮೆ ಕೇಳಲು ಹೋಗಿದ್ದೀರಿ. ಆದರೆ ಆದ್ದದೇ ಬೇರೆ- ಅಂದು ಮತ್ತೊಂದು ಏಕಾಂತ! ಮತ್ತಷ್ಟು ಮುದ್ದು!! ಅವಳನ್ನು ವಿಮೆನ್ಸ್ ಹಾಸ್ಟೆಲ್ ಬದಿ ಡ್ರಾಪ್ ಮಾಡುವಾಗ ನಿಮ್ಮ ಕಿಸೆಗೆ ಕೈ ಹಾಕಿ ಪರ್ಸಿನಿಂದ ನೂರರ ಐದು ನೋಟುಗಳನ್ನು ತೆಗೆದುಕೊಂಡು ಖಿhis is ಠಿeಡಿಞs ಜಿoಡಿ mಥಿ seಡಿviಛಿe ಎಂದು ಬೀಳ್ಕೊಟ್ಟಿದ್ದಳು !! ಆ ವಯಸ್ಸಿನ ನಿಮ್ಮ ಹುಮ್ಮಸ್ಸಿಗೆ ಅದು ತಪ್ಪಾಗಿ ತೋರಲಿಲ್ಲ. ಮತ್ತೊಮ್ಮೆ ನಿಮ್ಮ ಆಫೀಸಿಗೆ ಬಂದು ನಿಮ್ಮೊಟ್ಟಿಗೆ ತರಾತುರಿಯಲ್ಲಿ ಮಾತನಾಡಿ ಹೋಗುವ ಮುನ್ನ ಕೈಗೊಂದು ಚೀಟಿ ಕೊಟ್ಟಿದ್ದಳು. ನಮ್ಮ ಪ್ರೀತಿ ಮುಂದುವರೆಯಬೇಕಿದ್ದಲ್ಲಿ ಸಂಜೆ ಏಳಕ್ಕೆ ಬ್ಲಾಕ್ ಕೆಡಿಲ್ಯಾಕ್ ಬಳಿ ನನ್ನನ್ನು ಸಂಧಿಸು – ಎಂಬ ಒಕ್ಕಣೆ. ನೀವು ನಿಮ್ಮ ಸಂಜೆಯ ತುರ್ತಿನ ಮೀಟಿಂಗೊಂದನ್ನು ರದ್ದು ಮಾಡಿ ಆ ಪಬ್ಬಿನ ಮುಂದೆ ಅವಳಿಗೆ ಏಳರಿಂದ ಎಂಟೂವರೆಯವರೆಗೆ ಕಾಯುತ್ತ ಗಸ್ತು ಹೊಡೆದಿದ್ದೀರಿ. ಕೊನೆಗೆ ಬೇಸತ್ತು ಅವಳ ಹಾಸ್ಟೆಲ್ಲಿಗೆ ಹೋದಾಗ ಸೆಕ್ಯುರಿಟಿಯವನಿಂದ ‘ಅವರಿಗೆ ತಲೆನೋವಂತೆ ಸಾರ್! ಬೆಳಗ್ಗೆ ಮಾತಾಡ್ತಾರಂತೆ’ ಎಂದು ಹೇಳಿಕಳಿಸಿದ್ದಳು!! ಇನ್ನೊಮ್ಮೆ ಸಿನಿಮಾಕ್ಕೆಂದು ರೆಕ್ಸ್‌ಗೆ ಹೋದಾಗ ನ್ಯೂಸ್‌ರೀಲ್ ಮತ್ತು ಟ್ರೈಲರ್‌ಗಳು ನೋಡಲು ಸಿಕ್ಕಲಿಲ್ಲವೆಂದು ಎಬ್ಬಿಸಿ ಆಚೆಗೆಳೆದುಕೊಂಡು ಬಂದಿದ್ದಳು. ಅವಳಿಗೆ ನಿಮ್ಮ ಮೇಲೆ ಪ್ರೀತಿ ಇರಲಿಲ್ಲವೆಂದೇನಲ್ಲ. ಅಥವಾ ಹಾಗೇ ನೀವು ನಿಮಗೆ ಸಮಜಾಯಿಷಿ ಕೊಟ್ಟುಕೊಳ್ಳುತ್ತಾ ನಂಬುತ್ತೀರಿ. ಅವಳೂ ನೀವು ಫೋನು ಮಾಡದಿದ್ದರೆ ಕಣ್ಣುಕ್ಕಿಸಿ ಮುಸುಮುಸು ಮಾಡುತ್ತಿದ್ದಳು. ‘ಕೇಸರಿ, ಙouಡಿ ಚಿಡಿe so sತಿeಚಿಣ!! ಕಣ್ತುಂಬಿಕೊಂಡು ಮನಸಾರೆ ಹೇಳುತ್ತಿದ್ದಳು. ಹಾಗಂತ ಎಲ ಸರಿ ಸುಸೂತ್ರವಿತ್ತು ಅಂತೇನಲ್ಲ. ‘ಅವನನ್ನ ನೋಡು, ಹೇಗೆ ನನ್ನನ್ನೇ ದುರುದುರು ನೋಡ್ತಾ ಇದಾನೆ. ಅವನಿಗೆ ಹೋಗಿ ನಾಲ್ಕು ತದಕಬಾರದಾ? ‘ಗಂಡಸು ಅಂದರೆ ತನ್ನ ಹೆಣ್ಣನ್ನು ಚೆನ್ನಾಗಿ ನೋಡ್ಕೊಬೇಕು. ನೀನು ಚಂದ್ರನ ಮೇಲಿದ್ದರೂ ಇಲ್ಲಿಗೆ ಬಂದು ಕರೆದುಕೊಂಡು ಹೋದರೆ ಮಾತ್ರ ನಾನು ಬರ್ತೀನಿ’ ‘ಹಲೋ…!! ಕೇಸರೀ, ಯಾರೋ ನನ್ನನ್ನು ಫಾಲೋ ಮಾಡ್ತಾ ಇದಾನೆ ಕಣೋ! ಹಾಸ್ಟಲ್ ರೋಡ್‌ನಲ್ಲಿ ಇದೀನಿ. ಟಕ್ಕಂತ ಬಂದು ಫೈಟ್ ಮಾಡೋ!!’ ‘ಥೂ ನಿನ್ನ!! ನೀನೇನು ಸೀಮೇಲಿ ಇಲ್ಲದ ಗಂಡು ಅದ್ಕೊಂಡಿದ್ದೀಯಾ? ನಾನು ಚಿಟಿಕೆ ಹೊಡೆದರೆ ಸಾಲಾಗಿ ನಿಲ್ತಾರೆ ಗೊತ್ತಾ?’ ಮುದುವೆಗೆ ಮೊದಲೇ ಇಷ್ಟೆಲ್ಲ ಇದರೂ ನೀವು ಅವಳನ್ನು ಮದುವೆಯಾದದ್ದಾದರೂ ಏಕೆ? ‘ಏನೋ! ನಾನೇನು ಬಿಟ್ಟೀ ಅಂತಂದು ಕೊಂಡುಬಿಟ್ಟಿದ್ದೀಯಾ? ಇಷ್ಟು ದಿನ ಮಜಾ ಮಾಡಿದ ಹಾಗಲ್ಲ. ಒಂದು ಹೆಣ್ಣಿನ ಬದುಕು ಹಾಳುಮಾಡಿದ್ರೆ ನಿನಗೆ ಕೇಡು ತಪ್ಪಿದ್ದಲ್ಲ ತಿಳೀತಾ?’ ಎಲ್ಲೆಂದರಲ್ಲಿ ಬಾಯಿ ಮಾಡುವ ಅವಳೊಟ್ಟಿಗೆ ನೀವು ಬೇರೇನು ಮಾಡಬಹುದಿತ್ತು? ಅಂತೂ ಇಂತೂ ಮದುವೆ ಅಂತೊಂದು ಆಯಿತು.

ಈ ರೀತಿಯ ಮಾತು, ನಡತೆಯ ಹೊರತು ಪಡಿಸಿದರೆ ಅವಳು ಕೆಟ್ಟವಳೇನಲ್ಲ, ಎಷ್ಟಾದರೂ ಅವಳು ನಿಮ್ಮ ಮುದ್ದಿನ ಹೆಣ್ಣು, ನಿಮ್ಮನ್ನು ನೀವು ಅವಳಿಗೆ ಪೂರ್ತಾ ಒಪ್ಪಿಸಿಕೊಂಡುಬಿಟ್ಟಿದ್ದಿರಿ. ಒಂದಷ್ಟು ಪ್ರಣಯ ಮದುವೆ, ಮತ್ತೆ ಮದುವೆಯೊಳಗಿನ ಪ್ರಣಯ…. ಮೊದಮೊದಲು ಎಷ್ಟು ಚಂದವಿದ್ದೀರಿ ನೀವು ಒಬ್ಬರಿಗೊಬ್ಬರು! ಎಷ್ಟೋ ಅವರಿವರ ಎದುರು ನೀವಾಳಿಸಿ ಹಾಕುವಷ್ಟು. ಒಟ್ಟಿಗಿದ್ದಲ್ಲಿ ಎಷ್ಟೋ ಜೋಡಿ ಕಣ್ಣುಗಳು ನೆಟ್ಟು ನಿಲ್ಲವಷ್ಟು. ಮತ್ತೆಲ್ಲಿ ತಪ್ಪಿತು ಹೇಳಿ ತಾಳ? ಪ್ರೀತಿಯ ಭಾಷೆಗೆ ಮದುವೆಯೊಳಗಿನ ವ್ಯಾಕರಣವೇ ಬೇರೆ. ಎಷ್ಟೇ ಸರಂಜಾಮು, ಆಸಾನು ಇದ್ದರೂ ಬದುಕಿನ ವ್ಯವಹಾರದಲ್ಲಿ ಅದಕ್ಕೆ ಬದ್ಧವಾಗಲೇಬೇಕಷ್ಟೆ. ‘ನನಗೆ ಮದುವೆ ಅಂದರೆ ಅಡಿಗೆ ಮಾಡಬೇಕು. ನಿನ್ನ ಬಟ್ಟೆಬರೆ ನೋಡಿಕೊಳ್ಳಬೇಕು. ಅಂತೆಲ್ಲ ಗೊತ್ತೇ ಇರಲಿಲ್ಲ. ಏನಿದ್ದರೂ ಆಳುಕಾಳು ಮಾಡಿದ್ದನ್ನು ನಿನಗೊಪ್ಪಿಸಿಕೊಂಡು ಸದಾ ಮುದ್ದು ಮಾಡಿಕೊಂಡೇ ಇರೋದು ಅಂದ್ಕೊಂಡಿದ್ದೆ !!’ ‘ಥೂ ! ಹಾಳು ಒಲೆ ಮುಂದೆ ಹೋದರೆ ಮುಖ ಎಲ್ಲ ಸುರುಟಿ ಹೋಗುತ್ತಪ್ಪ ‘ಖಿhis is uಣಣeಡಿಟಥಿ ಟಿoಟಿseಟಿsiಛಿಚಿಟ!! ’ ‘ನಮಗೊಂದು ಮಗೂ ಆಯ್ತು ಅಂತಿಟ್ಕೊಳ್ಳೋಣ. ಅದರಲ್ಲಿ ನಿನ್ನ ಜವಾಬ್ದಾರಿನೇ ಹೆಚ್ಚು ತಿಳೀತಾ ‘ಙou hಚಿve ಣo moಣheಡಿ ಣhಚಿಣ.’ ತಮಾಷೆಗೆಂದು ಸುರುಗೊಂಡ ಇಂತಹ ಮಾತುಗಳು ಲಗಾಮಿಲ್ಲದೆ ಆಗಾಗ್ಗೆ ಸವ್ವಾರಿಗೊಂಡಾಗ ನಿಮಗೂ ಕಿರಿಕಿರಿಯಾಗುತ್ತಿತ್ತು. ನಿಮ್ಮ ಬದುಕು ಸ್ಕೂಟರಿನಿಂದ ಬೈಕಿಗೆ, ಬೈಕಿನಿಂದ ಸೆಕೆಂಡ್ ಹ್ಯಾಂಡ್ ಮಾರುತಿಗೆ, ಅಲ್ಲಿಂದ ಹೊಸತಕ್ಕೆ ಮತ್ತೊಂದೆಂದು ಬೊಲೋರೋಗೆ ಬಡ್ತಿಗೊಂಡಾಗ ಆ ವೆಚ್ಚಗಳನ್ನು ತೂಗಿಸಿಲೆಂದೇ ಎಷ್ಟೆಲ್ಲ ಹೆಣಗುತ್ತಿದ್ದಿರಿ ನೀವು ? ಬೆಳಗಿನ ಏಳಕ್ಕೆ ಹೊರಟರೆ ಮತ್ತು ಗೂಡು ಸೇರುವುದು ರಾತ್ರಿ ಹನ್ನೆರಡರ ಸುಮಾರಿಗೆ. ಹಾಗಂತ ಅವಳ ದೈನಂದಿನ ಸುಗಮವಿತ್ತು ಅಂತೇನಲ್ಲ. ಕಾನ್ಸೆಪ್ಟ್ ಸೆಲ್ಲಿಂಗ್ ಅಂತ ಊರೆಲ್ಲ ತಡಕುತ್ತ, ಗುಣಮಟ್ಟದ ಬದುಕನ್ನು ಹಣದೊಟ್ಟಿಗೆ ಅಳೆಯುತ್ತಾ ಮದುವೆಯ ಇತಿಮಿತಿಗಳನ್ನು ಅವಳೂ ಮರೆತುಬಿಟ್ಟಿದ್ದಳಷ್ಟೆ, ಬೇಕಾದಾಗ ಇಬ್ಬರೂ ಒಬ್ಬರಿಗೊಬ್ಬರು ದಕ್ಕುತ್ತಿದ್ದುದೇ ಕಡಿಮೆ. ದಟ್ಟಣೆಯ ಊರು ಒಳಗೊಳಗೇ ಹತ್ತರಿ ಹೊಡೆದು ಥೋಪಡ ತೆಗೆದು ಇಬ್ಬರನ್ನೂ ಟೊಳ್ಳಾಗಿಸಿತ್ತಷ್ಟೆ. ಮದುವೆಯ ನಾಲ್ಕು ವರ್ಷಗಳ ಬಳಿಕ ಇಬ್ಬರ್‍ಲಲೂ ಒಬ್ಬರಿಗೊಬ್ಬರಿಗೆಂದು ಮಾತು ಉಳಿದಿರಲಿಲ್ಲ. ಮಾತಿಗಿಳಿದರೆ ವಾದ ಅಂತ ಮಾತೇ ಸಲ್ಲ, ಯಾವುದೇ ಟ್ರಾಫಿಕ್ ರಾಡಿಯ ಜಂಕ್ಷನ್ನಿನಲ್ಲಿ ಹೆಣಗಿಸಿಕೊಂಡು ಕ್ರಮಿಸುವಾಗ ನೀವು ನಿಮ್ಮ ಬೊಲೇರೋದದಿಂದ ಅವಳ ಸ್ಯಾಂತ್ರೋವನ್ನು ಗಮನಿಸಿ ಹಾಯ್ ಅಂದಿದ್ದರೆ ಅದು ವಾರದ ಸಾರ್ಥಕ್ಯ. ಇಲ್ಲವೋ ಅವಳು ಮನೆ ಸೇರಿದ ಬಳಿಕ ಫೋನಿನ್ಲಲೇ ವ್ಯಾಜ್ಯ. ರಾತ್ರಿ ಹನ್ನೆರಡರ ಸುಮಾರಿಗೆ ಅವಳಿಗೆ ಮದುವೆಗೆ ಮುನ್ನ ಚೆನ್ನೈನಲ್ಲಿ ತಿಂದ ತೊಯಿಸಿದ ಮಿನಿ ಇಡ್ಲಿಯ ನೆನಪಾದರೆ ಅದನ್ನು ನೀವು ಮರುದಿನ ಹೇಗಾದರೂ ಒಪ್ಪಿಸಲೇಬೇಕು. ಇಲವೋ – ಸುನಾಮಿಯ ತತ್ತರ. ತನಗೂ ತನ್ನ ಬದುಕಿಗೂ ನಡುವೆ ಒಂದು ಕಿಡಿಯ ಅಂತರವಷ್ಟೆ ಅಂತ ಫೋನು ಒಮ್ಮೆ. ದಡಬಡಿಸಿ ಮನೆ ಸೇರಿದರೆ ರಾದ್ಧಾಂತ. ಮತ್ತೊಮ್ಮೆ ಹದಿಮೂರನೇ ಮಹಡಿಯಿಂದ ಧುಮುಕುವ ಧಮಕಿ. ಒಂದೇ ಎರಡೇ…? ಒಟ್ಟಿಗಿದ್ದುಕೊಂಡೇ ಇಬ್ಬರೂ ಒಬ್ಬರಿಂದೊಬ್ಬರು ಕಳೆದುಹೋಗಿದ್ದಿರಿ. ಧಾವಂತದ ಊರಿನಲ್ಲಿ ಸಮಾಧಾನವೇ ಇರಲಿಲ್ಲ. ತಪ್ಪು ನಿಮ್ಮಲ್ಲಿಲ್ಲವೆಂದೇನಲ್ಲ. ಆ ರಚ್ಚೆ, ರಂಪಗಳ ಹತೋಟಿ ತರಲಾಗದೆ ನೀವು ವ್ಯಗ್ರಗೊಂಡಿದ್ದೆ. ಕೆಲವೊಮ್ಮೆ ಬಾಯಿಗಿಂತ ಕೈ ಮುಂದೆ ಹೋದದ್ದಿದೆ. ಕೈಗೆ ಸಿಕ್ಕಿದ್ದನ್ನು ಕಿತ್ತು ರಾಚಾಡಿದ್ದಿದೆ. ಹಾಗಂತ ನಿಮ್ಮಲ್ಲಿ ಅವಳ ಬಗ್ಗೆ ಪ್ರೀತಿ ಇರಲಿಲ್ಲವೆಂತೇನಲ್ಲ. ಆಗಾಗ್ಗೆ ತೋಡಿಕೊಳ್ಳುವ ವ್ಯವಧಾನವಿರಲಿಲ್ಲ. ಇದ್ದಕ್ಕಿದ್ದಂತೆ ಒಂದು ಆಗಸ್ಟ್ ನಸುಕಿನಲ್ಲಿ ಅವಳು ಮನೆ ಬಿಟ್ಟಾಗ ನೀವು ಹೌಹಾರಿದ್ದು ಹದಿನೈದು ದಿನಗಳ ನಂತರವೆ. ಅವಳಿದ್ದಲ್ಲಿ ಹೋಗಿ ತಿಪ್ಪರಲಾಗವಿಟ್ಟರೂ ಬಗ್ಗಲಿಲ್ಲ ಹೆಣ್ಣು. ‘ನನಗೆ ನಿನ್ನ ಮೇಲೆ ಪ್ರೀತಿ ಇಲ ಅಂತ್ಲಲ. We ಛಿಚಿಟಿಟಿoಣ ಟive ಣogeಣheಡಿ ಅಷ್ಟೆ. ನಾನು ಕೊನೇ ಕಾಲದಲ್ಲೂ ನಿನ್ನನ್ನು ಇಷ್ಟೇ ಪ್ರೀತಿಸ್ತೀನಿ…. ನಾನು ನಿನ್ನ ಜೊತೇಲಿ ಇಲದಿದ್ದರೂ ನನ್ನ ನೋಡ್ಕೊತೀ ಅಲ್ಲವಾ ನನಗೆ ಕೇಳಿದಾಗ ದುಡ್ಡು ಕೊಡ್ತೀ ತಾನೇ ?’ ನೀವು ಏನೆಂದು ತಾನೆ ಉತ್ತರಿಸಬಲ್ಲಿರಿ – ಬುಡವಲುಗಿದ ಮರದಂತೆ ಘಾಸಿಗೊಂಡ ಮನೋಸ್ಥಿತಿಯಲ್ಲಿ ? ‘ನಾವಿಬ್ಬರೂ ಅಷ್ಟು ಚೆನ್ನಾಗಿದ್ವಲ್ಲೋ ! ಯಾರದೋ ಕಣ್ಣು ಬಿದ್ದಿರಬೇಕು !

ಹೀಗಿರುವಲ್ಲಿ ಅವಳ ಯಾವ ಮಾತನ್ನು ನಂಬುವುದು ? ಯಾವುದನ್ನು ನಂಬದೇ ಬಿಡುವುದು ? ನೀವೂ ಸೋತು ಹೋಗಿದ್ದೀರಿ. ಈ ಕಟಕಟೆಯಲ್ಲೋ – ಎಷ್ಟೊಂದು ನಾಲ್ಕು ಗೋಡೆ ನಡುವಿನ ಸೂಕ್ಷ್ಮಗಳಿಗೆ ಹೊಣೆ ಹೊರಬೇಕಾಗುತ್ತದೆ. ಎಷ್ಟು ಖಾಸಗೀ ಮಾತುಗಳಿಗೆ ಸಬೂತು, ಸಬೂಬು ಕೊಡಬೇಕಾಗುತ್ತದೆ. ‘ಈ ಮನುಷ್ಯನನ್ನು ನಂಬಬೇಡಿ. ಅವನು ಯಾರಿಗೆ ಬೇಕಾದರೂ ಟೋಪಿ ಹಾಕಬಲ್ಲ. ನಾನು ಇವನನ್ನು ಎಂದೂ ಪ್ರೀತಿಸಲೇ ಇಲ್ಲ. I goಣ mಚಿಡಿಡಿieಜ ಣo him ouಣ oಜಿ ಠಿeಡಿeಟಿಣಚಿಟ ಠಿಡಿessuಡಿe ಇವುಗಳಲ್ಲಿ ಯಾವುದು ಸತ್ಯ ? ಯಾವುದು ಪೂರ್ತಾ ಸತ್ಯ. ನಿಮ್ಮಬ್ಬರಿಗಷ್ಟೇ ಗೊತ್ತು. ಊe ಟಿeeಜs heಟಠಿ. ಠಿsಥಿಛಿhiಚಿಣಡಿiಛಿ heಟಠಿ. ಅವನ ವೈಯಕ್ತಿಕ ಸಮಸ್ಯೆಗಳು ನನಗೊಬ್ಬಳಿಗಷ್ಟೇ ಗೊತ್ತು. ನಾನೊಬ್ಬಳೆ ಅವನಿಗೆ ಸಹಾಯ ಮಾಡಬಲ್ಲವಳು. ಆದರೆ ನನ್ನ ಬದುಕನ್ನು ನುಂಗಿ ನೀರು ಕುಡಿದವನಿಗೆ ನಾನೇಕೆ ಸಹಾಯ ಮಾಡಬೇಕು ?’ ಎಲ್ಲ ಹತಾಶೆಗಳಿಗೂ ನಿಮ್ಮ ಮೌನವಷ್ಟೇ ಉತ್ತರ. ‘ಇಷ್ಟು ವರ್ಷ ಜೊತೇಲಿದ್ದರೂ ಒಂದು ಮಗು ಅಂತ ಆಗಲಿಲ್ಲ. I ಜoಟಿಣ ಞಟಿoತಿ ತಿhಚಿಣ he is- ತಿheಣheಡಿ he is imಠಿoಣeಟಿಣ!!
*
*
*
ಹೇಳಿಕೊಟ್ಟ ಮಾತು ತಬ್ಬಿಬ್ಬಾಗುವುದಿಲ್ಲ
ಸದ್ದಿರದ ಸಮ್ಮತಿಗೆ ಉಬ್ಬಸಗಳಿಲ್ಲ
ಹೇಳಿದ್ದೆಲ್ಲ ಸತ್ಯ – ಹೊರತು ಬೇರೇನಿಲ್ಲ.
ಅಂತ ಪ್ರಮಾಣಕ್ಕೆ ದೇವರ ಹೆಸರಂತೆ
ಅದು ಬದನೆಕಾಯಿಯದ್ದಾದರೂ ಸರಿಯೆ
ಕೋರ್ಟಿನ ಹಾಲಿನಲ್ಲಿ ದುಂಡು ಮೇಜಿನ ಸುತ್ತ ನೆರೆದವರ ಹಿಂದೆ ನಿಂತು ಮುಂಗಾಲೆತ್ತಿ ನೀವು ಅಲ್ಲಿರುವವರಲ್ಲಿ ಅವಳನ್ನು ಹುಡುಕುತ್ತೀರಿ. ಅಡ್ವೋಕೇಟ್ ಸುಮನ್‌ರ ತುಸು ಹಿಂದಕ್ಕೆ ಕುಳಿತು ಅವಳು ಮೇಲಿನ ಗವಾಕ್ಷಿಯತ್ತ ನೋಡುತ್ತಿದ್ದಾಳೆ. ಎರಡು ತಿಂಗಳುಗಳಲ್ಲಿ ತುಸು ತೂಕ ಹೆಚ್ಚಿದೆ ಅನ್ನಿಸುತ್ತದೆ. ನೀವು ಒಳಾಂಗಣದ್ಲಲೂ ಧರಿಸಬಹುದಾದ ಚಿಟಿಣigಟಚಿಡಿe ಕನ್ನಡಕವನ್ನು ಹಾಕಿಕೊಂಡು ಅವಳ ನೇರ ನೋಟವನ್ನು ಮಾಚಿಕೊಳ್ಳುತ್ತೀರಿ. ನೀವು ಅವಳನ್ನು ನೋಡುತ್ತಿದ್ದೀರಿ ಅನಿಸಿದ ಕೂಡಲೇ ಅವಳು ಮುಸುಡಿ ಕೊಂಕಿಸಿ ಅಣಕಿಸಿ ನಗುತ್ತಾಳೆ. ನೀವು ನಗೆ ಚೆಲ್ಲುತ್ತೀರಿ. ಈಗ ನಿಮ್ಮ ಲಾಯರು ನೀವು ಬಂದದ್ದನ್ನು ಗಮನಿಸಿ ನಿಮ್ಮತ್ತ ಬಂದು, ಕೆಲವು ದೇಶಾವರಿಗಳನ್ನು ಕಲಿಸುತ್ತಾರೆ. ಜಡ್ಜ್ ಕೇಳಬಹುದಾದ ಪ್ರಶ್ನೆಗಳನ್ನೂ, ಅದಕ್ಕೆ ತಕ್ಕ ಉತ್ತರಗಳನ್ನೂ ಹೇಳಿಕೊಡುತ್ತಾರೆ. ನೀವು ತಲೆಯಾಡಿಸುತ್ತೀರಿ. ಇದು ಸಹಿಗೆ ಮುನ್ನದ ಎusಣ ಜಿoಡಿ ಜಿoಡಿmಚಿಟiಣಥಿ ಅಷ್ಟೆ!

ಇನ್ನು ವಿಚಾರಣೆ ಸುರು. ಔಪಚಾರಿಕವೆಂದರೂ ಏನೆಲ್ಲ ಕಲಕುವ ಪ್ರಶ್ನೆಗಳನ್ನು ಕೇಳುಕೇಳುತ್ತಾರೆ ಅವರು. ನಿಮ್ಮ ಹೆಸರು, ಅವಳದ್ದು. ಮದುವೆಯ ತೇದಿ ಸ್ಥಳ, ಆಹ್ವಾನ ಪತ್ರಿಕೆಯ ಸಬೂತು ಹೀಗೆ…. ನೀವು ಎಲ್ಲಕ್ಕೂ ಯಾರದ್ದೋ ಎನ್ನುವ ಉತ್ತರ ಕೊಡುತ್ತೀರಿ. ಈಗ ಮದುವೆಯ ಫೋಟೋವನ್ನು ಮುಂದೊಡ್ಡುತ್ತಾರೆ. ‘ಇದನ್ನು ನೀವು ಗುರುತಿಸುತ್ತೀರೋ?’ ನೀವು ಹೌದೆಂದು ಗೋಣು ಆಡಿಸಿದರೂ ಮಗ್ಗುಲಿಗೇ ಇರುವ ಅವಳ ಲಾಯರ್‌ಗಷ್ಟೇ ಕೇಳಿಸುವ ಹಾಗೆ is iಣ me? I ಜoubಣ iಣ!! ಎಂದು ನಗುತ್ತೀರಿ. ಅವರೂ ನಗುತ್ತಾರೆ. ಪಕ್ಕದಲ್ಲೇ ಇದ್ದ ಅವಳು ಕಿಡಿಕಿಡಿಯಾಗುತ್ತಾಳೆ. ‘ನಾಚಿಕೆಯಾಗೋಲ್ಲ ನೋಡಿ. ಕಂತ್ರೀ ಅವನು. ತನ್ನ ಮಾತಿನಲ್ಲೇ ಎಲ್ಲರಿಗೂ ಮೋಸ ಮಾಡುತ್ತಾನೆ’ ನೀವು ವಿಚಲಿತರಾಗುವುದಿಲ್ಲ. ಕಡಿದು ಹೋಗುತ್ತಿರುವ ತಂತು ನಿಮ್ಮದಲ್ಲವೇ ಅಲ್ಲ. ಅವಳು ನಿಂತಲ್ಲೇ ಕಣ್ಣುಕ್ಕಿ ಬಿಕ್ಕುತ್ತಾಳೆ. ‘ಈ ಫೋಟೋ ನೋಡಿದ ಮೇಲೆ ನೀವು ನಿಮ್ಮ ನಿಲುವು ಬದಲಿಸಿಕೊಳ್ಳುವ ಸಾಧ್ಯತೆಯೇನಾದರೂ….’ ಅವರ ಮಾತು ತುಂಡರಿಸುವಂತೆ ಅವಳು ಹೇಳುತ್ತಾಳೆ- Who ತಿiಟಟ ಟive ತಿiಣh ಣhis mಚಿಟಿ!! ನೀವು ಎಲ್ಲ ಲಿಪ್ತತೆಗಳನ್ನು ಬದಿಗೊತ್ತಿ ಬುದ್ದಿಗಷ್ಟೇ ಕಿವಿಗೊಡುತ್ತೀರಿ. ಹೃದಯ ಹಿಂಜರಿಯುತ್ತದೆ. ಇಬ್ಬರ ಹೇಳಿಕೆಗಳನ್ನು ದಾಖಲಿಸಿ ಬೆರಳಚ್ಚು ತೆಗೆದ ಕಾಗದದ ಮೇಲೆ ರುಜು ಮಾಡಲು ಹೇಳುತ್ತಾರೆ. ಅವಳು ಸಹಿ ಮಾಡಿ ತಿರುಗಿ ನಿಮ್ಮತ್ತ ನೋಡಿ ಇನ್ನು ಗೆದ್ದೆನೆಂದು ಸೊಟ್ಟಗೆ ನಗುತ್ತಾಳೆ. ನೀವು ಸಾವಕಾಶ. ನಿಮ್ಮ ದಸ್ಕತ್ತನ್ನು ಎಲ್ಲವನ್ನೂ ಕೊಡವಿಕೊಳ್ಳುವ ಅಲಿ ಮಂಡಿಸುತ್ತೀರಿ. ನಿಮ್ಮ ಕಣ್ಣಿನಿಂದ ತೊಟ್ಟಿಕ್ಕಿದ ಕೆಲವು ಬಿಂದುಗಳನ್ನು ನೀವು ತೊಟ್ಟಿರುವ ಗಾಜು ಹಿಡಿದು ನೋಟ ಮುಸುಕಾಗಿಸುತ್ತದೆ.

ಯಾವುದೋ ಪರ್ವ ಕಳೆದ ನಿರಾಳದಲ್ಲಿ ನೀವು ಅದೇ ಕಾರಿಡಾರಿನಲ್ಲಿ ಕ್ಷಿಪ್ರವಾಗಿ ಹೆಜ್ಜೆ ಹಾಕುತ್ತೀರಿ. ನಿಮ್ಮ ಬದುಕಿನಲ್ಲಿ ಇನ್ನು ಅವಳಿಲ್ಲವಾದರೂ ಪೂರ್ತಾ ಇಲ್ಲ ಅಂತೇನಿಲ್ಲ. ನಿಮ್ಮ ಮನೆಯ ಅಲ್ಮೇರಾದ ಖಾಸಗೀ ಫೈಲೊಂದರಲ್ಲಿ ನಿಮ್ಮಿಬ್ಬರ ಜೂಟ ದಸ್ಕತ್ತಿಗೆ ಸಾಕ್ಷಿಯಾಗುವಂತೆ ‘ನಿಮ್ಮ ಜೀವಿತದ್ದು ದಾಖಲೆಯಾಗಿ ಇನ್ನು ಕೋರ್ಟಿನ ಬಿಕರಿಯನ್ನು ಕಾದಿರಿಸಿಕೊಳ್ಳಬೇಕಿದೆ. ನೀವಿನ್ನು ಡಿವೋರ್ಸಿನ ಬಾಲಂಗೋಚಿಯನ್ನು ಹೊತ್ತು ತಿರುಗಲಿಕ್ಕಿದೆ. ಹಾಗೇ ಅವಳ, ಬೆನ್ನಿನಲ್ಲಿ ನನ್ನ ಹೆಸರಿಲ್ಲವೆಂದಲ್ಲ. ಅವಳ ಬೆನ್ನಿನ ಸೆಡಹಿನ ಹುರಿಯನ್ನು ತಡಕಿದರೆ ಹೆಣ್ಣು ಗತ್ತುಗಳ ಗರಡಿಯಲ್ಲಿ ಪಳಗಿದ ನಿಮ್ಮ ದಸ್ತಕತ್ತಿನ ಹಿಸ್ಸೆಯೂ ಸಿಗಬಹುದಷ್ಟೆ.

ಹೆಜ್ಜೆ ಭಾರವೆನಿಸಿದರೂ ನೀವು ದಾಪುಗಾಲಿನಲ್ಲಿ ಆಚೆ ಬರುತ್ತೀರಿ ನೋಡದೆ ಬೊಲೇರೋ ಬಳಿ ಬಂದು ಸಿಗರೇಟು ಹೊತ್ತಿಸಿಕೊಂಡಾಗ ಮೊಬೈಲು ರಿಂಗಣಿಸುತ್ತದೆ.
‘ಕೇಸರೀ’….! ನಾನು ಹಿಮಾ ಕಣೋ!! Soಡಿಡಿಥಿ ಜಿoಡಿ eveಡಿಥಿಣhiಟಿg ಎರಡು ವರ್ಷಗಳ ಬಳಿಕ ಫೋನಿಸಿದ ಅವಳು ಬಿಕ್ಕುತ್ತಾಳೆ. ‘ನನ್ನದೊಂದು ರಿಕ್ವೆಸ್ಟ್ ಇದೆ. ಇಲ ಅನ್ನ ಬೇಡವೋ.’

ಯಾವುದೋ ಅವಿನಾಭಾವದ ತಂತು ನಿಮ್ಮನ್ನು ಜಗ್ಗಿದಂತಾಗಿ ನಿಮ್ಮದೆ ಭಾರದಿಂದ ಉಮ್ಮಳಿಸುತ್ತದೆ. ‘ಹೇಳು. ಒಟ್ಟಿಗಿದ್ದಾಗಲಂತೂ ನನಗೆ ನಿನ್ನ ಮಾತು ಕೇಳುವ ಪೇಶನ್ಸ್ ಇರಲಿಲ್ಲ. ‘ನನಗೊಂದು ಮಗು ಬೇಕು ಕಣೋ. I ತಿಚಿಟಿಣ ಣo beಛಿome ಚಿ moಣheಡಿ. ನಾನು ತಾಯಿಯಾಗಬೇಕು. ನಾನು ನಿನ್ನ ಮಗುವಿನ ತಾಯಿಯಾಗಬೇಕು. Wiಟಟ ಥಿou ಟeಟಿಜ me ಚಿ sಠಿeಡಿm, mಚಿಟಿ?…. Pಟeಚಿse!! ’
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.