ಕೆಲವು ಬೇವಾರಸೀ ಟಿಪ್ಪಣಿ

(೨೧ನೇ ಜುಲೈ ೨೦೦೧)

ಇಂಗ್ಲಿಷಿನ ‘ಲಿಗಸಿ’ ಇದಕ್ಕೆ ಕನ್ನಡದ ಪರಿಭಾಷೆಯನು? ಹುಡುಕುತ್ತಲೇ ಇದ್ದೇನೆ. ಕಳೆದ ಹತ್ತು ವರ್ಷಗಳಿಂದ… ಅಂದರೆ ಮೈಯಲ್ಲಿ ಗಂಡಸ್ತಿಕೆಯ ಛಾಪು ಗಟ್ಟಿಕೊಂಡಂದಿನಿಂದ. ಮನಸ್ಸು ಹುಡುಗು ಅಳುಮುಂಜಿತನವನ್ನು ಕಳಚಿಕೊಂಡಾಗಿನಿಂದ. ಅಮ್ಮನ ಸೆರಗಿನಾಚೆಗಿನ ಪ್ರಪಂಚಕ್ಕೆ ನನ್ನನ್ನು ನಾನು ಒಡ್ಡಿಕೊಂಡಾಗಿನಿಂದ. ಸರಳವಾಗಿ ಈ ಬುದ್ಧಿ ತನ್ನ ಅತೀವ ಖಾಸಗೀ ಸ್ವಾಯತ್ತತೆಯನ್ನು ಅನುಭವಿಸತೊಡಗಿದಂದಿನಿಂದ. ಈವರೆಗಂತೂ ಸಿಕ್ಕಿಲ್ಲ. ನಿಮ್ಮಲ್ಲಿದ್ದರೆ ಹೇಳಿ. ಸದ್ಯದ ಜೀವಿತದಲ್ಲಿ ಸಿಕ್ಕ ಸಿಕ್ಕ ಇಂಗ್ಲಿಷ್- ಕನ್ನಡ ನಿಘಂಟುಗಳನ್ನು ತೆಗೆದು ‘ಲೆಗೆಸಿ’ಗೆ ಕನ್ನಡದ ಪರ್ಯಾಯವನ್ನು ತಡಕಿದ್ದೂ ಒಂದು ಪ್ರತೀತಿ. ಪಿತ್ರಾರ್ಜಿತ ಅನ್ನುವುದು ಎಲ್ಲೂ ಸಿಗುವ ಸಾಮಾನ್ಯ ಅರ್ಥವಾದರೂ ನನಗೆ ಅದೇಕೋ ಸೂಕ್ತ ಅಂತನ್ನಿಸುವುದಿಲ್ಲ. ಇದರಲ್ಲಿ ಅಡಕಗೊಂಡಿರುವ ಸೊತ್ತು. ಆಸ್ತಿಪಾಸ್ತಿ, ಎಂಥದೋ ನಿರಾಯಾಸದ ಗಳಿಕೆ… ಇಂಥ ಲಗತ್ತುಗಳು ನನಗೆ ಎಂದಿದ್ದರೂ ಹೇಸಿಗೆಯೇ. ನಾನು ಇಂಥವರ ಮಗ, ಇಂಥವಳ ಗಂಡ, ಇವರಿಗೆ ಅಳಿಯ, ಅವನಿಗೆ ಷಡ್ಡಕ… ಇವುಗಳೆಲ್ಲ ಒಂದು ನಮೂನೆ ಪಿಡುಗಿದ್ದ ಹಾಗೆ. ಸತ್ತು ವೈತರಣಿ ದಾಟಿಯೂ ಉಳಿದೇಬಿಡುವ ಸೋಂಕು. ಕಳಚಿಕೊಳ್ಳಲು ಸಾಧ್ಯವಿದ್ದಿದ್ದಲ್ಲಿ ಯಾತರದ್ದೂ ಹಂಗಿಲ್ಲದ ನಿರ್ವಾಣ ನನಗೆ ಪರಮಪ್ರಿಯ. ಮೊನ್ನೆ ಸುಮ್ಮನೆ ಖುಷಿಗೆಂದು ವಾರುಣಿಯೊಟ್ಟಿಗೆ ಗರುಡ ಮಾಲಿಗೆ ಹೋಗಿದ್ದೆ. ನನ್ನ ೨೮ನೇ ಹುಟ್ಟಿನ ತೇದಿಯ ಮುನ್ನಾ ದಿನ. ಉಡುಗೊರೆಯ ನೆವದಲ್ಲಿ ತಲೆಯಿಂದ ಕಾಲಿನವರೆಗೆ ಹೊಸ ತೊಡಿಕೆಗಳ ಖರೀದಿ. ನನಗೆಂದು ೧೦ ಸಾವಿರಕ್ಕೂ ಮೀರಿ ಕಾರ್ಡು ಉಜ್ಜಿದ್ದಳು. ಮರುದಿನ ಎಲ್ಲವನ್ನೂ ತೊಟ್ಟು ಅವಳೊಟ್ಟಿಗೆ ಹೊರಟಾಗ ಹತ್ತೆಂಟು ಬ್ರ್ಯಾಂಡುಗಳ ನಡೆದಾಡುವ ಜಾಹಿರಾತಿನಂತಾಗಿಬಿಟ್ಟಿದ್ದೆ. ಸಂಜೆ ಎಬೋನಿಯಲ್ಲಿ ವೈನ್ ಗುಟುಕಿಸುತ್ತ, ಊeಥಿ, I ಜಿeeಟ- I hಚಿve beಛಿome ಚಿ mಚಿಟಿiquiಟಿe ಡಿessuಡಿeಛಿಣeಜ!!! ಒಳ್ಳೇ ನಡೆದಾಡೋ ಅಡ್ವರ್ಟೈಸ್‌ಮೆಂಟ್ ಥರಾ ಮಾಡಿಬಿಟ್ಟಿದ್ದೀ… ಅಂತ ಮುನಿಸು ತೋರಿದ್ದೆ. ‘ಇನ್ನೆನು ಡೆಸರ್ಟಿನ ಹೊತ್ತಿಗೆ ಕಳಚುವುದು ಇದೆಯಲ್ಲ?’- ಅಂತ ಕಣ್ಣು ಮಿಟುಕಿಸಿದ್ದಳು. ‘ನನಗೆ ಈ ಹೆಸರುಗಳನ್ನು ಕುರಿತಾಗಿ ಮೊದಲಿನಿಂದಲೇ ಜಿಗುಪ್ಸೆ, ಅಡಿಡಾಸ್, ರೀಬಾಕ್, ಲೀ, ಜಾಕೀ, ಲೀ ಕೂಪರ್… ಅಸಹ್ಯ ಅನ್ನಿಸುತ್ತೆ, ವಾರೀ!!’ ಅಂದಾಗ ಹಾಗೇ ನಕ್ಕಿದ್ದಳು. ಸುಂದರ ಸಂಜೆ ಸರಿರಾತ್ರಿಯಲ್ಲಿ ಹೊರಳುವಾಗ ಇಬ್ಬರೂ ಅವಳ ಮನೆ ಸೇರಿದ್ದೆವು. ನನ್ನ ತೊಡಿಕೆಗಳನ್ನು ಒಂದೊಂದೇ ಕಳಚುತ್ತ ಮದುವೆ ವಿಷಯ ಪ್ರಸ್ತಾಪಿಸಿದ್ದಳು. ಲಗತ್ತುಗಳಿರದೆಯೇ ಬದುಕಬೇಕು ಎನ್ನುವ ನನ್ನ ಅಭಿಮತವನ್ನು ಮತ್ತೊಮ್ಮೆ ಖಡಾಖಂಡಿತ ಹೇಳಿದ್ದೆ. We ಚಿಡಿe ಣogeಣheಡಿ ಚಿs ಟoಟಿg ಚಿs ತಿe ಚಿಡಿe ಛಿomಜಿoಡಿಣಚಿbಟe ತಿiಣh eಚಿಛಿh oಣheಡಿ, hoಟಿeಥಿ! ಎಲ್ಲ ಕಳಚಿದ ಮೇಲೂ ತೊಟ್ಟ ಕಾಮಸೂತ್ರದ ಎಸಳನ್ನು ಕಂಡು ನಕ್ಕವಳು ಖಿhis is ಚಿ bಡಿಚಿಟಿಜ ಣoo!!ಎಂದು ಛೇಡಿಸಿದ್ದಳು.

ನಾನು ಹೀಗೇ. ನಾಗರಿಕತೆಗೆ ರೇಖೆಗಳ ರೂಪು ಹಚ್ಚುತ್ತ ಮನೆ ಮಠ ಊರು ಕಟ್ಟುವ ನಮ್ಮಂತಹವರೆಲ್ಲ ಪ್ರಾಯಶಃ ಹೀಗೆಯೇ ಏನೋ. ನಮ್ಮದು ಗೆರೆ ಬರೆಯುವ ಜಾಯಮಾನ. ಐ-ಬಾರಿನಲ್ಲಿ ಹೆಣ್ಣು ಹಬ್ಬಿ ತೊನೆದಷ್ಟೇ ಸರಾಗ ರಾಮನವಮಿಯ ಕಲ್ಯಾಣಿಗೆ ತಲೆದೂಗುವುದು. ಬರ್ಮ್ಯುಡಾಸ್ ಬಿಗಿದು ಮಾಲ್ ಹೊಕ್ಕಷ್ಟೇ ಸುಲಭ ಪಂಚೆ ಶಲ್ಯಕ್ಕೆ ಮೈಯಾಗುವುದು. ಒಮ್ಮೊಮ್ಮೆ ನಮ್ಮಷ್ಟು ಉಸಾಬರಿಯಿರುವ ಮಂದಿಯೇ ಇಲ್ಲ ಅನುಭವ ಹಾಗೆ… We ಜoಟಿಣ ಟಿeeಜ ಟಿo eಜuಛಿಚಿಣioಟಿ; We ಜoಟಿಣ ಟಿeeಜ ಟಿo seಟಜಿಛಿoಟಿಣಡಿoಟ- ಅಂತ ಓದು ದಿಕ್ಕರಿಸಿದರೂ ಪಿಂಕ್ ಪ್ಲಾಯ್ಡ್ ಮನಸ್ಸಿಗೇ ಮೂಗು ಹಿಡಿದು ಪ್ರಣವಸ್ಯ ಪರಬ್ರಹ್ಮ ಋಷಿ ಅಂತ ದೇಸೀ ಸಂಕಲ್ಪ! ಬರುಗುವ ಬಿಯರು ಉಕ್ಕಿ ಗಾಜಿನ ಅಂಚು ಮೀರಿದರೆ ಗುಟುಕು ಗುಟುಕಿನ ನಡುವೆ ಯೋನಿ ಚಕ್ರದ ವಿವರ! ಕಾಫೀ ಷಾಪಿನ ಟಿಷ್ಯೂ ಚೌಕದ ಮೇಲೆ ಗೀಚಿದ್ದೂ ವಿನ್ಯಾಸ. ಎಂಥದೋ ಪ್ರಣಾಳಿ ಅಂತೆಲ್ಲ ಅರ್ಥ. ಬಿಯರು ಮಗ್ಗಿನ ಭರ್ತಿ ಭಗವದ್ಗೀತೆಯ ನಿಷ್ಕರ್ಷೆ. ಬರೆದ ಗೆರೆಯೆಲ್ಲ ಬ್ರಹ್ಮ. ಬರೆಸಿಕೊಂಡ ಚೌಕ ಪರಬ್ರಹ್ಮದ ತುಣುಕು. ಬತ್ತಲಾದಾಗ ಕಾಂಡೋಮ್ ತೊಡಿಕೆ. ಅದೇ ಬ್ರಹ್ಮ ಸಾಕ್ಷಾತ್ಕಾರ. ಕೆಲವೊಮ್ಮೆ ಅಷ್ಟೇ ಸಲೀಸು ಮಾತು… ಮೊಹರುಗಳಿಲ್ಲದೆಯೆ…

ತಾಮರಸ ಜಲದಂತೆ- ಅಂತ ಅಮ್ಮ ಯಾವುದೋ ದಾಸಯ್ಯನ ಮಾತನ್ನು ದೇವವಾಣಿ ಅಂತ ನಂಬಿ ಬದುಕಿದ್ದಿದೆ. ಈಗಲೂ ಬದುಕುತ್ತಿದ್ದಾಳೆ. ಆವಳಿಗೆ ಹಾಗೆ ಮಾಡದೆ ಬೇರೆ ವಿಧಿಯೇ ಇರಲಿಲ್ಲ. ಆ ಮಾತು ಬೇರೆ. ಸೋಕಿದ್ದೂ ಸೋಕಿರದ ಹಾಗೆ ಬದುಕುವುದಿದೆಯಲ್ಲ- ಅದನ್ನೆ ನಾನು ಲಗತ್ತುಗಳಿಲ್ಲದೆಯೆ ಅನ್ನುವುದು. ಕಾಂಡೋಮ್ ಸಹಿತದ ಮೈಥುನವಿದ್ದ ಹಾಗೆ. ನನ್ನ ಹೆಸರಿನೊಟ್ಟಿಗಿರುವ ಈ ಕಡಿದಾಳ್ ಎಂಬ ಬಾಲವನ್ನು ನೋಡಿ. ಏನನ್ನಬೇಕು? ಕೆಲವೊಮ್ಮೆ ಅದು ಹೊರೆ ಅನಿಸಿಬಿಟ್ಟಿದೆ. ಈ ನಾಗರಿಕತೆಯಲ್ಲಿ ಅದು ಸದ್ಯಕ್ಕಂತೂ ಅನಿವಾರ್ಯದ ಅಳವಡಿಕೆ. ನನ್ನ ಆರ್ಕಿಟೆಕ್ಚರಿನ ಓದಿನ ದಿನಗಳಲ್ಲಿ ಮೊಟುಕುಗೊಂಡು ಒಂದು ನಮೂನೆಯ ಅಡ್ಡ ಹೆಸರಾಗಿ ಅದು ಮತ್ತಷ್ಟು ಜಗ್ಗಿಕೊಂಡಿದೆ. ನನ್ನ ಓರಗೆಯ ಗೆಳೆಯರೆಲ್ಲ ನನ್ನನ್ನು ‘ಕಡೀ’ ಅಂತಲೇ ಕರೆಯುವುದು. ಇನ್ನು ಅಮ್ಮ ಇಟ್ಟ ಹೆಸರೇನು? ನಾನು ಅವಳ ಬದುಕಿನ ಒಟ್ಟಾರೆ ಅಭೀಪ್ಸೆ ಅಂತ ಇಟ್ಟಿದ್ದು. ಈ ಔದ್ಯೋಗಿಕ ನಾಗರಿಕತೆಯಲ್ಲಿ, ಎರಡೂವರೆ ಬೆರಳಗಲದ ಬಿಸಿನೆಸ್ ಕಾರ್ಡಿನಲ್ಲಿ ನಾನು ಅಭೀಪ್ಸಾ ಕಡಿದಾಳ್!! ಕೆಲವರು ನನ್ನನ್ನು ಬಿಪ್ಸ್ ಎಂದೂ ಕರೆಯುವುದಿದೆ. ಅದೇನೇ ಇರಲಿ, ಈಗ ನನ್ನ ದಾವೆಯೇನಿದ್ದರೂ ನನ್ನ ಬೆನ್ನಿನಲ್ಲಿರುವ ಈ ಕಡಿದಾಳ್ ಎಂಬುದರ ಲೆಗೆಸಿಯನ್ನು ಕುರಿತು.

ತೊಂಬತ್ತೈದರ ಡಿಸೆಂಬರ್, ಸ್ಕೂಲ್ ಆಫ್ ಪ್ಲ್ಯಾನಿಂಗ್ ಎಂಡ್ ಆರ್ಕಿಟೆಕ್ಚರಿನಲ್ಲಿ ದಾಖಲಾದ ಸಂದರ್ಭ. ಪೀಯೂಸಿ ಮುಗಿಸಿದ್ದ ನನ್ನನ್ನು ಅಮ್ಮ ಡೀನ್ ಅನಂತಕೃಷ್ಣ ಅವರನ್ನು ಭೇಟಿಯಾಗಲು ಕರೆತಂದಿದ್ದಳು. ನನ್ನ ಮೇಲೆ ಎಷ್ಟೆಲ್ಲ ಭರವಸೆಯಿತ್ತು ಅವಳಿಗೆ. ನನ್ನ ಹೆಸರು ಓದಿದ ಡೀನ್, ‘ಅಕ್ಷೋಭ್ಯ ಕಡಿದಾಳ್ ಅಂತ ಒಬ್ಬರು ಆರ್ಕಿಟೆಕ್ಟ್ ಇದ್ದರು. ಅವರು ನನಗೆ ಚೆನ್ನಾಗಿ ಗೊತ್ತು. ಜೆ.ಜೆ. ಸ್ಕೂಲಿನಲ್ಲಿ ನನಗೆ ಕೆಲಕಾಲ ಮೇಷ್‌ಟ್ರರಾಗಿದ್ದರು. ನಿಮಗೆ ಗೊತ್ತೆ?- ಅಂತ ಕೇಳಿದ್ದರು. ಅಮ್ಮನಲ್ಲಿ ಕಸಿವಿಸಿ ತೊಟ್ಟಿಕ್ಕಿತ್ತು. ’ಅವರು ಇವನಿಗೆ ತಂದೆಯಾಗ…‘ ನಾಲಗೆಯಲ್ಲೇನೋ ಬೇವಾರಸಿ ತೊಡರು. ನನ್ನೊಳಗೂ ಮೂಕ ತಲ್ಲಣ. ’ಏನ್ರೀ ಹೀಗಂತೀರಿ? ನನಗೆ ಗೊತ್ತಿರೋ ಹಾಗೆ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದವು. ಈಗ ಅಮೆರಿಕಾದಲ್ಲೆಲ್ಲೋ ಇದ್ದಾರೆ ಅಂತ ಕೇಳಿದ್ದೀನಿ…’ ಅಮ್ಮನಿಗೆ ಆಗ ಮಾತು ಹೊರಳಿರಲಿಲ್ಲ. ಊe ತಿಚಿs ಚಿ gಡಿeಚಿಣ mಚಿಟಿ. ಂಟಿಥಿತಿಚಿಥಿs, iಜಿ ಥಿouಡಿ soಟಿ ಜಿಚಿಡಿes ತಿeಟಟ iಟಿ eಟಿಣಡಿಚಿಟಿಛಿe ಣesಣ ತಿe shಚಿಟಟ ಛಿeಡಿಣಚಿiಟಿಟಥಿ ಣuಡಿಟಿ him iಟಿ!! ಡೀನ್‌ಗೆ ಎಂಥದೋ ಅನುಮಾನ, ಗುಮಾನಿ. ಹುರುಳಿಲ್ಲದ್ದೇನಲ್ಲ. ಅಮ್ಮ ಅವಮಾನದಿಂದ ತೊಪ್ಪೆಯಾಗಿದ್ದಳು. ಹೊಸತೇನಲ್ಲವಲ್ಲ. ಅವಳು ಬದುಕಿಗೆ ಹೆದರಿದ್ದಿದ್ದರೆ ನಾನು ಈ ಹಂತವನ್ನು ತಲುಪುತ್ತಲೇ ಇರಲಿಲ್ಲ. ‘ಕಂದ! ಇನ್ನೆಲ್ಲ ನಿನ್ನ ಕೈಯಲ್ಲಿದೆ. ನೀನು ನಿನ್ನ ವಾರಸಿಕೆಗೆ ಪುರಾವೆಯಾಗಬೇಕು.’ ಮನೆಗೆ ಬಂದಾಗ ಸಂಜೆ ಕರೆಯುತ್ತಿತ್ತು. ಮದರಾಸಿನ ಸೈಕ್ಲೋನ್ ಸುರಿತ. ಕತ್ತಲು ಜಿಟಿಪಿಟಿಸುತ್ತಿತ್ತು. ‘ಮಾಮ್! ಅವರೇಕೆ ನಮ್ಮ ಜತೆ ಇರಲೇ ಇಲ್ಲ?’ ಅದೇ ರೇಜಿಗೆಯ ಜಿಟಿಪಿಟಿ. ತನಿಖೆ. ‘ಅವರ ಹೆಂಡತಿ ಅವರಿಗೆ ಡಿವೋರ್ಸ್ ಕೊಡಲೇ ಇಲ್ಲವಲ್ಲ, ಅಭೀ…!!’ ಅವಳದ್ದು ವಾರಸು ಇರದ ನೋವು.

ಹಳೆಯ ತಲೆಮಾರಿನವರು ಅವರಿವರು ನನಗೆ ಸಿಕ್ಕಾಗ ಎಂಥದೋ ಶಂಕೆಯಿಂದ ‘ಹಿಂದೊಮ್ಮೆ ಕಡಿದಾಳ್ ಮಂಜಪ್ಪ ಅಂತ ಚೀಫ್ ಮಿನಿಸ್ಟರ್ ಆಗಿದ್ದರು. ಅವರೇನಾದರೂ…’ ಅಂತ ಸುರು ಹಚ್ಚಿದರೆ ಅವರ ಮಾತಿಗೆ ನಾನು ಎಡೆ ಕೊಡುವುದು ಕಡಿಮೆ. ‘ಹಾಗಂತ ನಾನೂ ಕೇಳಿದ್ದೇನೆ. ನನ್ನ ತಂದೆ ಅದೇ ಊರಿನವರಂತೆ.’ ಹಿಂದೆಯೇ ಮತ್ತೊಂದು ವರಸೆ. ‘ನಿಮ್ಮನು? ನೋಡಿದರೆ ಕನ್ನಡದವರು ಅಂತ ಅನಿ?ಸೋದೇ ಇಲ್ಲ…?’ ನನ್ನದೋ ?ವಾರಸಿ ಚರ್ಯೆ. ಪಂಜಾಬಿನ ಅಮ್ಮನನೆ? ಹೆಚ್ಚು ಹೊತ್ತುಕೊಂಡವ. ತಪ್ಪು ನನ್ನದಲ್ಲ. ಅಮ್ಮನೋ- ನನ್ನೊಳಗೆ ಈ ನೆಲದ ಕಸುವು ಹೂಡುವಲ್ಲಿ ಮಾಡದ ಪ್ರಯತ?ವೇ ಇಲ್ಲ. ಮಣ್ಣಿನ ವಾಸನೆ, ಮಾತು ಮನುಷ್ಯನಿಗೆ ಮುಖ್ಯ ಅಂತ ಅಪ್ಪ ಹೇಳುತ್ತಿದ್ದರಂತೆ. ‘ಎಷ್ಟು ಚಂದ ಕನ್ನಡ ಬರೀತೀಯೋ?’ ಅವರಿದ್ದಿದ್ದರೆ ಖುಷಿ ಪಡ್ತಾ ಇದ್ದರು… ಏನೇ ಆದರೂ ಸಂಧ್ಯಾವಂದನೆಯನ್ನು ಮಾತ್ರ ತಪ್ಪಿಸಬೇಡ…’ ಈಗ ಈ ಊರಿನಲ್ಲಿ ನನ್ನದೇ ಆದ ಉದ್ಧಿಮೆಯಿದೆ. ಅಕ್ಷ ಕಾನ್‌ಫ್ಲುಯೆನ್ಸ್! ಇದು ಅಮ್ಮನೇ ಕೊಟ್ಟ ಹೆಸರು. ‘ಅವರ ನೆನಪಾಗಿಯೂ ಇರುತ್ತೆ!!’ ತನ್ನ ಪ್ರೀತಿಗೆ ಬಹಿರಂಗದ ವಾರಸಿಕೆಯನ್ನು ಕೊಡದ ವ್ಯಕ್ತಿಯ ಮೇಲೆ ಅದೆಷ್ಟು ವಾಂಛೆ ಗೊತ್ತೆ ಅವಳಿಗೆ? ನನಗೆ ಸುತರಾಂ ಒಗ್ಗದಂಥದ್ದು. ಪ್ರೀತಿಯನ್ನು ಆ ಹೆಸರಿನಿಂದ ಗುರುತಿಸಲೂ ನನಗೆ ಸರಿ ಅನಿಸುವುದಿಲ್ಲ. ಒಮ್ಮೆಮ್ಮೆ ವಾರುಣಿಯನ್ನೂ ಇಂಥದೇ ಪ್ರೀತಿಯ ಗದ್ಗದ ಭಾವುಕಳನಾಗಿಸುತ್ತದೆ. I hಚಿಣe ಣhose ಜಿouಡಿ ಟeಣಣeಡಿs, mಚಿಟಿ. ಙou ಛಿಚಿಟಟ ಣhಚಿಣ ಚಿಟಿಥಿಣhiಟಿg, buಣ ಟove!! ನಗೆ ಯಾವ ಲಗತ್ತುಗಳೂ ಸರಿಯೆನಿಸುವುದಿಲ್ಲ. ಚಡಪಡಿಕೆಗೆ ಹೆಸರು ಮೊಹರು ಬೇಕಿಲ್ಲ.
ತಹತಹ ವಿರಹವಲ್ಲ.
*
*
*
(೧೮ನೇ ಅಕ್ಟೋಬರ್ ೨೦೦೧)
ಕೆಲವು ತಿರುವುಗಳು ಬದುಕಿನ ಮೂಲಭೂತ ನಂಬಿಕೆಗಳನ್ನೆ ಅಲುಗಿಸಿಬಿಡಬಹುದು – ಈವರೆಗಿನದೆಲ್ಲ ಪೊಳ್ಳು ಅನಿಸಿಬಿಡುವಷ್ಟು. ಬದುಕಿದ್ದೇ ಸುಳ್ಳು ಅನಿಸುವಷ್ಟು. ಈ ತನಕದ ಸತ್ಯವನು? ತತ್ಕಾಲದ ಸತ್ಯ ಕೊಚ್ಚಿ ತೊಳೆದುಬಿಡಬಹುದು. ನ್ಯೂಟನ್ನನ್ನು ಐನ್‌ಸ್ಟೀನ್, ಐನ್‌ಸ್ಟೀನ್‌ನನ್ನು ಹಾಕಿನ್ಸ್, ಡಾರ್ವಿನ್‌ನನ್ನು? ಮತ್ತೊ? …. ಹೀಗೆ. ಭೌತವಿಜ್ಞಾನ ತನ್ನ ನೆಲಗಟ್ಟನ್ನು ಪುನರ್ವಿಮರ್ಶಿಸಿಕೊಂಡಾಗಲೆಲ್ಲ ತತ್ತ್ವಜ್ಞಾನವೂ ತನ್ನ ನೆಲೆಯನ್ನು ಮತ್ತೊಮ್ಮೆ ರೂಪಿಸಿಕೊಳ್ಳುತ್ತದೆಯಂತೆ. ಹಾಗೆಯೇ ಸಾಮಾಜಿಕ ನೆಲೆಗಳೂ… Phಥಿsiಛಿs ಚಿಟಿಜ Phiಟosoಠಿhಥಿ ಚಿಡಿe iಟಿಣeಡಿಜeಠಿeಟಿಜeಟಿಣ. So is ಂಡಿಛಿhiಣeಛಿಣuಡಿe – ಣhಚಿಣ ಜeಠಿeಟಿಜs oಟಿ boಣh. ಮೊನ್ನೆ ಸ್ಕೂಲಿನಲ್ಲಿ ಇದೇ ಚರ್ಚೆಯಲ್ಲಿ ಹುಡುಗರನ್ನು ತೊಡಗಿಸಿದ್ದೆ. ನಮ್ಮ ಪ್ರಸಕ್ತ ನಾಗರಿಕತೆಯ ಎರಡು ಮುಖ್ಯ ಅಂಶಗಳಾದ ಮಾಹಿತಿ ಮತ್ತು ವೇಗಗಳನ್ನು ಕುರಿತಾಗಿ ಮಾತು. ನಮ್ಮನ್ನು ನಮಗರಿವಿಲ್ಲದೆಯೆ ತನ್ನಲ್ಲಿ ಅದ್ದಿಕೊಂಡಿರುವ ಅಪಾರ ಮಾಹಿತಿ ಮತ್ತು ವೇಗಾಂಶಗಳನ್ನು ಹೊಂದಿರುವ ಧಾತುವಿದೆಯಲ್ಲ – ಅದನ್ನು ಏನೆಂದು ಕರೆಯುವುದು? ಅದು ಆಕಾಶ ತತ್ವವಿದ್ದ ಹಾಗೆ. ಈ ಶತಮಾನದ ನಾಗರಿಕತೆ ನಮಗೆ ಕೊಟ್ಟಿರುವ ತತ್ವ. ಹೊಸ ಮಾಹಿತಿಯನ್ನು ದಕ್ಕಿಸಿಕೊಂಡಾಗ. ಮೈ-ಮನಸ್ಸಿಗೆ ವೇಗಸ್ಪರ್ಶವುಂಟಾದಾಗ ಪ್ರಪಂಚವನ್ನು ನೋಡುವ ಸಾಧಾರಣ ಕಣ್ಣಿಗಿರುವ ವೇಗ, ಒದಗುವ ಮಾಹಿತಿ ಅದೆಂಥದ್ದಿರಬಹುದು? ಹಿಮಾಂಶು ಅಂತ ನನ್ನ ಸ್ಟೂಡೆಂಟ್ ಒಬ್ಬನಿದ್ದಾನೆ. ಎಷ್ಟು ಚೆನ್ನಾಗಿ ವಾದಿಸಿದ ಗೊತ್ತೆ? Uಟಿಛಿಟಚಿimeಜ ಟiಟಿes – ಅಂತ ಕೊಲಾಜೊಂದನ್ನು ಡಿಸೈನ್ ಕ್ಲಾಸಿನಲ್ಲಿ ನಮ್ಮ ಮುಂದಿಟ್ಟಿದ್ದ. ಆಗಲೇ ನನ್ನ ನೋಟ್‌ಪ್ಯಾಡಿನಲ್ಲಿ ‘ಈ ಗೆರೆಗೆ ವಾರಸುಗಳಿಲ್ಲ.’ ಅಂತ ಗೀಚಿಕೊಂಡಿದ್ದೆ. ಅ?! ಎಂತಹ ಮೆಟಫರು ಅದು. ತಲೆಕೆಳಗಾಗಿ ನಿಂತು ಪ್ರಪಂಚವನ್ನು ನಿಟ್ಟಿಸಿದರೆ ಭೂಮಿ ಮೇಲೆ ಆಕಾಶ ಕೆಳಗೆ – ಅಂತ ಹೇಳಿ ಹೊಸನಿಟ್ಟಿನಲ್ಲಿ ನೋಡಿದಾಗ ಅರ್ಥವೆಲ್ಲ ಅನರ್ಥ ಅಂದ. ನಾನು ಈವರೆಗಿನ ಅರ್ಥವೆಲ್ಲ ಈಗ ಅನರ್ಥ ಅಂತ ತಿದ್ದುಪಡಿ ಮಾಡಿದೆ. ನಮ್ಮ ಕಾಲದ ತಂತ್ರಜ್ಞಾನ ರೂಢಿಸಿರುವ ಕಾಳಜಿಗಳೆ ಇಂಥವು. ಈವರೆಗಿನ ಓರೆಯೆಲ್ಲ ಸದ್ಯಕ್ಕಂತೂ ನೇರ. ನಿಖರವಾಗಿ ಸತ್ಯ ಅಂತ ಯಾವುದೂ ಇಲ್ಲ. ಎಲ್ಲವೂ ತಾತ್ಕಾಲಿಕ. ಸುಳ್ಳೇ ಪರಮಾರ್ಥ.

ಅಂದು ಎರಡರ ಸುಮಾರಿಗೆ ಸ್ಕೂಲಿನಿಂದ ‘ಅಕ್ಷ’ಗೆ ಬಂದೆ. ಮೇಜಿನ ಮೇಲೆ ಸ್ಪೆಕ್‌ಟ್ರಮ್ ಫೌಂಡೇಷನಿ?ನ ಟಪಾಲೊಂದು ಇತ್ತು. ಅದು ನನ್ನ ಜೀವಿತದ ನಂಬಿಕೆಗಳನ್ನು ಬುಡಮೇಲು ಮಾಡ ಬಹುದೆಂದು ಅಂದುಕೊಂಡಿರಲಿಲ್ಲ. ಅಥವಾ ಅದು ತಾತ್ಕಾಲಿಕ ಸತ್ಯದ ಸೆಳಕಷ್ಟೆಯೆ? ಲಕೋಟೆಯನ್ನು ಒಡೆಯುತ್ತಿರುವಾಗಲೇ ಸೌಮಿತ್ರೋ ಫೋನು ಬಂತು. ‘ಕಂಗ್ರಾಚುಲೇಷನ್ಸ್ ಬಿಪ್ಸ್! ನನಗೆ ತುಂಬ ಖುಷಿಯಾಗಿದೆ. ಗಿeಡಿಥಿ ಜeseಡಿviಟಿg ಛಿhoiಛಿe! ನಾನು ಫೌಂಡೇಷನ್ನಿನ ಮೂರು ಪುಟದ ವರದಿಯಲ್ಲಿ ಎದ್ದು ಕಾಣುವಂತೆ ‘ಅಕ್ಷ ಕಾನ್‌ಫ್ಲುಯೆನ್ಸ್’ನ ಹೆಸರು ನೋಡಿದಾಗಲೇ ನನಗೆ ಅರ್ಥವಾದದ್ದು – ನನಗೆ ಅಂದರೆ ನಮ್ಮ ಡಿಸೈನ್ ಪ್ರ್ಯಾಕ್ಟೀಸಿಗೆ ಒಂದು ರಾಷ್ಟ್ರೀಯ ಪುರಸ್ಕಾರ ಬಂದಿದೆಯೆಂದು! ಆ ಬಳಿಕ ಹತ್ತಾರು ಓರಗೆಯವರ ಕರೆಗಳು. ಖುಷಿಯ ಹಂಚಿಕೆ. ಸಂಜೆ ಐದರ ಸುಮಾರಿಗೆ ಅನೂಪ ಮೊದಲಿಗೆ ಕರೆದಾಗ ಮತ್ತೊಂದು ಅನಿರೀಕ್ಷಿತ ಕಾದಿತ್ತು. ‘ಅಕ್ಷೋಭ್ಯ ಕಡಿದಾಳ್ ಅಂತ ಒಬ್ಬರಿಗೆ ಪಾಸ್ಥ್ಯುಮಸ್ ಲೈಫ್‌ಟೈಮ್ ಅವಾರ್ಡ್ ಕೊಟ್ಟಿದ್ದಾರೆ. ಅವರು ನಿನಗೆ ಗೊತ್ತಾ?’ ನಾನು ನಿಂತಲ್ಲಿಯೇ ಹೆಪ್ಪಿಬಿಟ್ಟೆ. ನನ್ನನ್ನು ಫಲಿಸಿದ ವೀರ್ಯವಂತನಿಗೆ ಮರಣೋತ್ತರ ಪ್ರಶಸ್ತಿ! ಸಮಗ್ರ ಜೀವಿತ ಸಾಧನೆಯನು? ಪರಿಗಣಿಸಿ!! ಅಮ್ಮನಿಗೆ ಕೂಡಲೇ ಫೋನಿಸಿದೆ. ಅವಳ ಸಂತೋಷದ ಎಣೆಯೊಳಗೆ ನಾನಿದ್ದೇನೆಯೆ ಅಂತ ಕೊಂಚ ಗುಮಾನಿಯಾಯಿತು.

– ೪ –
‘ಅಭೀ! ನನಗೆ ಇವೊತ್ತು ತುಂಬ ಖುಷಿಯಾಗಿದೆ ಗೊತ್ತಾ? ಅವರಿದ್ದಾಗ ಅವರಿಗೆ ಹೀಗೆಲ್ಲ ರೆಕಗ್ನಿಷನ್ ಬರಲೇ ಇಲ್ಲ. ಅದಕ್ಕಂತ ಅವರು ಹಪಹಪಿಸಿದವರೂ ಅಲ್ಲ. ಅವರಿದ್ದಿದ್ದರೆ ನಿನ್ನ ಬಗ್ಗೇನೂ ತುಂಬ ಹೆಮ್ಮೆ ಪಡುತ್ತಾ ಇದ್ದರು.’ ರಾತ್ರಿ ಊಟಕ್ಕೆ ಕುಳಿತಾಗ ಅಮ್ಮನೇ ಮಾತು ಹೆಕ್ಕಿದ್ದಳು. ‘ಯಾಕಿಷ್ಟು ಬೇಜಾರಿನಲ್ಲಿದ್ದೀ? ಖುಷಿಯಲ್ಲಿರಬೇಕು ನೀನು!‘ ನಾನು ಮಾತನಾಡಲಿಲ್ಲ. ’ಅವರನ್ನೆ ಹೊತ್ತುಕೊಂಡುಬಿಟ್ಟಿದ್ದೀ ಸ್ವಭಾವದಲ್ಲಿ. ತಿಂಗಳಿಗೊಮ್ಮೆ ಬರುತ್ತಿದ್ದರು. ಬರುವಾಗ ಜತೆಗೆ ಒಂದಷ್ಟು ಬೇಸರ ಹೊತ್ತು ತರುತ್ತಿದ್ದರು. ಕೊನೆ ಕೊನೆಗಂತೂ ಏನೂ ರುಚಿಸುತ್ತಿರಲಿಲ್ಲ ಅವರಿಗೆ.’ ನಾನು ಅಸಹನೆ ಸಿಡಿಸಿದೆ. ಔh ಒom! Wiಟಟ ಥಿou sಣoಠಿ iಣ ಠಿಟeಚಿse?! ಅಮ್ಮ ಮೇಜಿನ ಮೂಲೆಗೆ ಮುಖವನ್ನಾತುಕೊಂಡು ಮುಸುಮುಸುವಿನಲ್ಲಿ ತೊಡಗಿದಳು. ನಾನು ಅವಳನ್ನು ಸಮಾಧಾನಪಡಿಸಲಿಲ್ಲ. ವಾಸ್ತವದಲ್ಲಿ ನನ್ನ ಅಸಮಾಧಾನಕ್ಕೆ ನನ್ನಲ್ಲಿ ಯಾವ ಕಾರಣವೂ ಇರಲಿಲ್ಲ.

ಆ ರಾತ್ರಿಯ ಆಳದವರೆಗೆ ಇಂಟರ್‌ನೆಟ್‌ನಲ್ಲಿ ಹುದುಗಿದ್ದೆ. ಒಂದೂವರೆಯ ಸುಮಾರಿಗೆ ಶಶಾಂಕ ಕೆಲಿಫೋರ್ನಿಯಾದಿಂದ ಮೆಸೇಜ್ ಮಾಡಿ ಕೂಡಲೇ ಮೇಯ್ಲ್ ಚೆಕ್ ಮಾಡುವಂತೆ ಹೇಳಿದ. ಅವನ ಅಂಚೆಯೊಟ್ಟಿಗೆ ಮೂರು ಪುಟದ ಲಗತ್ತು ಇತ್ತು. ಅದು ಅಕ್ಷೋಭ್ಯ ಕಡಿದಾಳ್ ಬಗೆಗಿನ ಬರೆಹ. ಅದರಲ್ಲಿ ಸಿಕ್ಕ ಕೆಲವು ಮಾಹಿತಿ ಸುತ್ತಲಿನ ಉದಾಸದ ಕೋಶವನ್ನು ಹರಿದುಬಿಟ್ಟಿತು. ಹತ್ತೊಂಭತ್ತು ನೂರ ಐವತ್ತರ ಸುಮಾರಿನಲ್ಲಿ ದೇಶವಿನ್ನೂ ಆಧುನಿಕತೆಯ ಗಾಳಿಗೆ ಒಡ್ಡಿಕೊಳ್ಳುತ್ತಿದ್ದಂತಹ ಸಂದರ್ಭ. ಕಾಂಕ್ರೀಟ್ ತಂತ್ರಜ್ಞಾನವನ್ನು ಅದರ ನೇರ ರೂಪದಲ್ಲಿ ದುಡಿಸಿಕೊಂಡ ಪ್ರಪಂಚದ ಕೆಲವೇ ವಿನ್ಯಾಸಕಾರರಲ್ಲಿ ಒಬ್ಬರು. ಪಶ್ಚಿಮ ಭಾರತದ ಮುಂಬಯಿಯ ಆಸುಪಾಸಿನಲ್ಲಿ ಕೆಲವಷ್ಟು ವಿನ್ಯಾಸಗಳ ರಚನೆ. ಗೋಲ್ಕೋನ್ ಹೆಸರಿನ ವಿದ್ಯಾರ್ಥಿ ವಸತಿಯ ವಿನ್ಯಾಸ ಸಂಪೂರ್ಣ ಕಾಂಕ್ರೀಟಿನಿಂದ ಮಾಡಲಾಗಿದ್ದು ಐವತ್ತು ವರ್ಷಗಳ ಬಳಿಕವೂ ಕಾಲಾತೀತವೆನಿಸುವಂತಹ ರಚನೆ. Iಣ is ಣimeಟess! ಊe ತಿಚಿs ಚಿ ಣಡಿue mಚಿsಣeಡಿ oಜಿ soಡಿಣs iಟಿ ಣhe subಛಿoಟಿಣiಟಿeಟಿಣ.. ಈತನ ಬಗ್ಗೆ ಈವರೆಗೆ ಲಭ್ಯವಿರುವ ಮಾಹಿತಿಗಳೂ ಕಡಿಮೆ… ಮತ್ತಿತರೆ, ಮತ್ತಿತರೆ… ಒಕ್ಕಣೆಯ ಕೊನೆಯಲ್ಲಿ ಒಂದು ಚಿಕ್ಕ ಅಡಿಬರೆಹ. ಸ್ಪೆಕ್‌ಟ್ರಂ ಫೌಂಡೇಷನ್ ಇವರ ಸಾಧನೆಯನ್ನು ಒಟ್ಟಾರೆ ಪರಿಗಣಿಸಿ ಅವರ ಎಲ್ಲ ಕೃತಿಗಳ ದಾಖಲಾಗಬೇಕೆಂದು ಒತ್ತು ಕೊಡುತ್ತದೆ. ನನಗೋ ಒಂದು ನಮೂನೆ ನವಿರೆದ್ದಂತಾಯಿತು. ಗೊತ್ತಿಲ್ಲದೆ ಕಣ್ಣುಕ್ಕಿದ್ದವು. ಅಟ್ಯಾಚ್‌ಮೆಂಟನ್ನು ಡೌನ್‌ಲೋಡ್ ಮಾಡಿ ಅದರ ಪ್ರಿಂಟ್ ತೆಗೆದುಕೊಂಡು ಮತ್ತೆ ಮತ್ತೆ ಓದಿದೆ.

ಈ ನಾಗರಿಕತೆಯ ಗಂಟಲಿನ ಹುಮ್ಮಸ್ಸನ್ನು ನೋಡಿ. ನಾಗಾಲೋಟದ ಭರದಲ್ಲಿ ತನ್ನನ್ನು ರೂಪಿಸಿದವರನ್ನೆಲ್ಲ ನುಂಗಿಬಿಡುತ್ತದೆ. ನೆನಪಿಗೆಂದೂ ತೇಗುವುದಿಲ್ಲ ಕೆಲವೊಮ್ಮೆ. ಅದೃಷ್ಟವಿದ್ದಲ್ಲಿ ಕೆಲವರು ತಮ್ಮ ಜೀವಿತದಲ್ಲಿಯೇ ದಂತಕತೆಯಾಗುತ್ತಾರೆ. ಕೆಲವರು ಸತ್ತ ಇಪ್ಪತ್ತು ವರ್ಷಗಳ ಬಳಿಕ ಅಚಾನಕ್ಕು ಬೆಳಕಿಗೆ ಬರುತ್ತಾರೆ. ಕೆಲವು ಗೆರೆಗಳಿಗೆ ವಾರಸುಗಳಿಲ್ಲ. ಅವು ಕಟ್ಟುವ ಆವರಣಕ್ಕೂ, ಅವುಗಳಾಚೆಗಿನ ಅರ್ಥಕ್ಕೂ… ಐiಟಿes- uಟಿಛಿಟಚಿimeಜ ಹಿಮಾಂಶುವಿನ ಸಾಲುಗಳು ನೆನಪಾದವು.
*
*
*
(೨೨ನೇ ಅಕ್ಟೋ?ರ್ ೨೦೦೧)
ಈ ಅಕ್ಷೋಭ್ಯ ಕಡಿದಾಳ್ ಎಂಬ ವ್ಯಕ್ತಿ ಎಲ್ಲಿಯವನು ಅಂತ ಎಷ್ಟೋ ಮಂದಿಗೆ ಗೊತ್ತಿರಲಿಲ್ಲವಂತೆ. ಮಾತು ಕಡಿಮೆ. ಎಷ್ಟು ಬೇಕೋ ಅಷ್ಟು. ತನ್ನ ಬಗ್ಗೆ ಯಾರೊಟ್ಟಿಗೂ ಹೇಳಿಕೊಂಡಿರದ ವ್ಯಕ್ತಿ. ಅಮ್ಮನಿಗೂ…. ಅಮ್ಮನ ಅಪ್ಪ ಸುಖ್‌ವೀರ್ ಸಿಂಗ್ ಬಾದಲ್ ದಿಲ್ಲಿಯಲ್ಲಿ ಹೆಸರಾಂತ ಉದ್ದಿಮೆದಾರನಿದ್ದಂತೆ. ತಾನು ಕಟ್ಟಲಿಕ್ಕಿದ್ದ ಹೊಸಮನೆಯ ವಿನ್ಯಾಸಕ್ಕೆ ದಕ್ಷಿಣದ ಆಕ್ಷೋಭ್ಯ ಕಡಿದಾಳ್‌ನನ್ನು ಅಪಾಯಿಂಟ್ ಮಾಡಿಕೊಂಡಿದ್ದು ನನ್ನ ಬದುಕಿನ ಕಥನಕ್ಕೆ ಪೀಠಿಕೆ. ಹತ್ತು ಸಾವಿರದ ಮುಂಗಡಕ್ಕೆ ರಸೀತಿಯನ್ನೂ ಕೊಡದೆ ಕಡಿದಾಳ್ ಆರು ತಿಂಗಳು ಸತಾಯಿಸಿದನಂತೆ. ಒಮ್ಮೆ ಒಳಗೊಳಗೇ ಆಗುತ್ತಿದ್ದ ಹಿಂಸೆಯನ್ನು ತಡೆಯಲಾರದೆ ಲೋನಾವಲಾಕ್ಕೆ ಫೋನು ಹಚ್ಚುತ್ತಿರುವಾಗ ಕಿಟಕಿಯಾಚೆಗಿನ ಅಂಗಳದ ಮೂಲೆಯಲ್ಲಿ ಅಕ್ಷೋಭ್ಯ ಒಬ್ಬನೇ ಕುಳಿತು ಏನೋ ಮಾಡುತ್ತಿರುವುದು ಕಣ್ಣಿಗೆ ಬಿತ್ತಂತೆ. ಸುಖ್‌ವೀರ್ ಆಚೆಗೆ ಬಂದವನೇ ಬಾಯಿಗೆ ಬಂದಂತೆ ಅಬ್ಬರಿಸಿದನಂತೆ. ಎರಡು ಮೂಟೆಗಳಷ್ಟು ಕಪ್ಪೆಚಿಪ್ಪನ್ನು ಸುರುವಿಕೊಂಡು ಕೈಕೆಲಸದಲ್ಲಿ ತೊಡಗಿದ್ದವನು ಇವನತ್ತ ಸುಮ್ಮನೆ ಒಮ್ಮೆ ಕೆಕ್ಕರಿಸಿಕೊಂಡು ನೋಡಿದ್ದಷ್ಟೆ. ಮರುಮಾತೇ ಇಲ್ಲ. ಎರಡು ಹಗಲು ಮೂರು ರಾತ್ರಿಗಳಲ್ಲಿ ಎಡೆಬಿಡದೆ ಕೈಗೂಡಿಸಿ ನಾಲ್ಕನೆಯ ಮುಂಜಾವಿನಲ್ಲಿ ತನ್ನ ಗಿರಾಕಿಯನ್ನು ಭೆಟ್ಟಿ ಮಾಡಿ ಕಪ್ಪೆಚಿಪ್ಪಿನಿಂದ ತೆಗೆದ ಅದ್ಭುತ ಕಲಾಕೃತಿಯನ್ನು ಕೊಟ್ಟು- ‘ಇಗೋ! ಇದಿನ್ನೂ ಶುರುವಾತು’ ಅಂತ ಕೈಕಟ್ಟಿ ನಿಂತಾಗ ಸುಖ್‌ವೀರ್‌ಗೆ ಮಾತೇ ಹೊರಳಲಿಲ್ಲವಂತೆ. ಇನ್ನೂ ಇಪ್ಪತ್ತೆರಡರ ಸುಮಾರಿನಲ್ಲಿದ್ದ ಜಸ್ ಪ್ರೀತ್ – ಸುಖ್‌ವೀರನ ಮಗಳಿಗೆ ಅಕ್ಷೋಭ್ಯನ ಕಲಾವಂತಿಕೆಗೆ ದಂಗುಬಡಿದಂತಾಯಿತಂತೆ.

ಓoಛಿಣiಟuಛಿಚಿ — ಶಂಖುವಿನ ಆಕೃತಿಯ ಅದರಲ್ಲಿ ಬೆಳಕು ಇಳಿಬಿಟ್ಟಿದ್ದೇ ಅದರ ರಂಧ್ರಗಳಿಂದ ಸೋರುವ ನೆಳಲಿನ ಚಿತ್ತಾರದಲ್ಲಿಯೇ ತನ್ನ ಭವಿಷ್ಯದ ಟಿಸಿಲುಗಳನು? ಕಂಡುಕೊಂಡಿದ್ದಳಂತೆ.

ಇವೆಲ್ಲ ನಡೆದದ್ದು ಮೂವ್ವತ್ತು ವರ್ಷಗಳ ಹಿಂದೆ ಅಂತ ಅಮ್ಮ ಸ್ಮೃತಿಯ ಹಂದರದಲ್ಲಿ ಆಗಾಗ್ಗೆ ಜೀಕುತ್ತಿರುತ್ತಾಳೆ. ನಮ್ಮ ಮನೆಯ ಹಜಾರದ ?ಳುಗೋಡೆಯ ಮೇಲೆ ಆ ದೀಪಶೃಂಖಲೆಯ ಆಳೆತ್ತರದ ಪಟವಿದೆ. ಅದು ಅಪ್ಪನೇ ತೆಗೆದ ಚಿತ್ರವಂತೆ. ಕಪ್ಪುಬಿಳುಪಿನ ಪಟ. ಒಳಗಿನಿಂದ ಒಡೆದ ಬೆಳಕಿನ ಚೆಲ್ಲಾಪಿಲ್ಲಿಯ ನೆರಳುಗಳಾಗಿ ಕಟ್ಟುವ ಸಂಯೋಜನೆ ಬೆರಗಿನದ್ದು. ಅಷ್ಟೇ ಜಟಿಲ ಸಹ. ‘ಅಕ್ಷೋಭ್ಯ ಈ ಬೆಳಕಿನ ಗುಡ್ಡೆ. ಇಲ್ಲಿನ ಛಾಯೆಯೆಲ್ಲ ನಾನು!’ ಅಮ್ಮ ಹೇಳುವಾಗ ಅವಳ ಕಣ್ಣುಗಳಲ್ಲಿ ಅದೇ ಬೆಳಗಿನ ತುಳುಕು. ಅದೇ ನೆಳಲ ಚಿತ್ತಾರ. ಅಷ್ಟೇ ಜಟಿಲವಾದದ್ದು. ಹಾಗೆ ನೋಡಿದರೆ ಅವಳ ಪ್ರೀತಿಯ ಜಾಡೂ ಅಷ್ಟೆ. ಮರದ ನೆರಳಿನ ಹಾಗೆ ಅಸ್ಪಷ್ಟ. ‘ನೆರಳಿದ್ದರಷ್ಟೆ ಬೆಳಕಿಗೆ ಬೆಲೆ, ಅಭೀ!’ ಎಂದು ತನ್ನ ಬದುಕೂ – ನೆರಳು ಬೆಳಕಿನ ಸರಣಿ ಅಂತ ಮತ್ತೆ ಮತ್ತೆ ಕಣ್ಣು ತುಂಬಿಕೊಳ್ಳುತ್ತಾಳೆ. ಒom, ಣheಡಿe is ಟಿo ಛಿಟಚಿimಚಿಟಿಣ ಜಿoಡಿ ಥಿouಡಿ ಟove – ಒom! Iಣs ಟiಞe ಚಿ bಚಿggಚಿge ಟeಜಿಣ behiಟಿಜ ಚಿಣ ಚಿ ಡಿಚಿiಟ sಣಚಿಣioಟಿ ಚಿಟಿಜ eಣeಡಿಟಿಚಿಟಟಥಿ uಟಿಛಿಟಚಿimeಜ!! ನಿನ್ನ ಪ್ರೀತಿಗೆ ವಾರಸೇ ಇಲ್ಲವಲ್ಲಮ್ಮಾ? ನನ್ನ ಹುಟ್ಟಿಗೂ ಸಹ…!!’ ನಾನು ಬಿಕ್ಕಿದ್ದಿದೆ. ಹಾಗಂದಾಗಲೆಲ್ಲ ಅಮ್ಮ ಜಟಿಲವಾದ ನೆಳಲು ಚೆಲ್ಲುತ್ತಾಳೆ. ತನ್ನ ಡಯರಿಯಲ್ಲಿ ಅವರು ಬರೆದು ಕೊಟ್ಟ ಪದ್ಯವೊಂದನು? ಮುಂದಕ್ಕೆ ಹಿಡಿಯುತ್ತಾಳೆ. ‘ಎಲೆಯ ವಂದರಿಯಲ್ಲಿ ಬಿಸಿಲಿನ ಜರಡಿ. ನುಣ್ಣನೆ ಬೆಳಕು ಮಣ್ಣಾಗುವ ಮೊದಲು ಸೆರಗೊಡ್ಡಿ ಕಟ್ಟಿಕೋ ತುಂಬ ಉಡಿಯಷ್ಟು. ಅದೋ ಕೊಬ್ಬಿದ ಮೋಡ ಬಿಸಿಲು ಮಾಚಿದರಂತೂ ನಿನ್ನ ಜೋಳಿಗೆ ತುಂಬ ನಾನು ಮಬ್ಬಿದ ಹಗಲು…’ ಹಾಳೆಯ ಮೇಲೆ ನನ್ನ ವಯಸ್ಸನ್ನೂ ಮೀರಿದ ಮಾಸಲು. ಸುಂದರ ಕೈ ಬರೆಹ. ಕೊನೆಗೆ ಅಕ್ಕಿ – ಎಂದು ಸಹಿ. ಸಹಿಯಲ್ಲಿ ಎಂಥದೋ ಉದಾಸ. ‘ಅವರಿಲ್ಲ ರುಜು ಮಾಡಿದ್ದು ಒಲ್ಲದ ಮನಸ್ಸಿನಿಂದ. ನನ್ನ ಒತ್ತಾಯಕ್ಕೆ. ಅವರ ಪದ್ಯ, his ತಿoಡಿಞ oಜಿ ಚಿಡಿಣ… ಕೊನೆಗೆ eveಟಿ his ಚಿಡಿಛಿhiಣeಛಿಣuಡಿe ಎಲ್ಲ ದಾಖಲನ್ನು ಮೀರಬೇಕು ಅಂತಲೇ ಅವರಿಗೆ ಇಷ್ಟ. ಪದ್ಯ ಬರೆಸಿಕೊಳ್ಳುವವರೆಗೆ ಮಾತ್ರ ನನ್ನದು. ಆಮೇಲೆ ನನ್ನದಲ್ಲ ಅಂತಾ ಇದ್ರು. ಅವರ ಕಟ್ಟಡಗಳ ದಾಖಲೆಯೇ ಅವರ ಹತ್ತಿರ ಇರಲಿಲ್ಲ. ಅವರ ಸಾವಿಗೂ ಅವರದ್ದೇ ಅಂತ ಪುರಾವೆಯಿರಲಿಲ್ಲ ಗೊತ್ತಾ?’ ವಿಚಿತ್ರವಲ್ಲವೆ? ನನ್ನ ಹುಟ್ಟಿಗೂ ನಾನು ಅವರಿಂದ ಅನ್ನುವ ಪುರಾವೆಯಿಲ್ಲ.

ನಾನು ಹುಟ್ಟುವಾಗ ಅಮ್ಮನಿಗೆ ಇಪ್ಪತ್ತೈದಾಗಿತ್ತಂತೆ. ಅವರಿಗೆ ಅರವತ್ತೆರಡು. ಹುಬ್ಬೇರಿತಲ್ಲವೆ? ನಾನು ಹುಟ್ಟಿದಾಗ ಅಮ್ಮನನು? ಆರೈಸುತ್ತಿದ್ದ ಮಿಷನರಿಯ ನನ್? ಅಮ್ಮನ ಜತೆಗಿದ್ದ ಅವರ ಚಿತ್ರವನು? ನೋಡಿ ನಕ್ಕಿದ್ದಳಂತೆ. ಔh! ಊe musಣ be ಚಿ ಡಿeಚಿಟ mಚಿಟಿ!! ಬಿನ್ನಿಸ್ಟನ್ ಗಾರ್ಡನ್ನಿನ ಬಲಮೂಲೆಯ ಚಿಕ್ಕ ಬಂಗಲೆಯಲ್ಲಿ ನಮ್ಮ ಆಗಿನ ಮನೆ. ನಾನು ಅಪ್ಪನನ್ನು ನೋಡಿದ್ದೇ ಕಡಿಮೆ. ತಿಂಗಳಿಗೊಮ್ಮೆ ಬಂದರೂ ಒಂದೋ ಎರಡು ದಿನಗಳ ಜತೆ ಅಷ್ಟೆ. ‘ಇರೋಣ ಅಂತಾನೇ ಬಂದದ್ದು. ಕೆಲಸದ ಒತ್ತಡ. ಲೋನಾವಾಲಕ್ಕೂ ಹೋಗಿ ಎಷ್ಟು ದಿನ ಆಯಿತು ಗೊತ್ತೆ? ಸರಿತೆಯೂ ಈಗೀಗ ನನ್ನನ್ನು ತುಂಬ ಹಚ್ಚಿಕೊಂಡು ಬಿಟ್ಟಿದ್ದಾಳೆ. ಉiಡಿಟs hಚಿve ಣo be mಚಿಡಿಡಿieಜ -ಅಂತ ಒಂದೇ ಸಮ ದುಂಬಾಲು. ಏನೋ ಜವಾಬ್ದಾರಿಯೆಲ್ಲ ಮುಗಿದ ಮೇಲೆ ನಿನ್ನ ಜತೆಯೇ ಉಳಿದ ಬದುಕು…’ ಆ ಬಾರಿ ಬಂದಾಗ ಅವರಂದದ್ದು ಮಸುಕಾಗಿ ನೆನಪು. ನನಗೆ ಆಗ ಹತ್ತು ವಯಸ್ಸು. ಅವರು ಹೊರಟು ನಿಂತಾಗ ನಾನು ಹಾಳೆಯ ಮೇಲೆ ಏನನ್ನೊ ಗೀಚುತ್ತಿದ್ದೆನಂತೆ. ಅವರು ಅದನ್ನು ನೋಡಿ ಏನನ್ನಿಸಿತೋ – ‘ಜಸ್! ನಿನ? ಮಗ ನನ್ನನ್ನೂ ಮೀರಿ ಬೆಳೆಯುತ್ತಾನೆ’ ಅಂತ ನನ?ನು? ಮುದ್ದಿಸಿ ಕಾಗದದ ಹಾಳೆಯನು? ಮಡಿಚಿ ಕೋಟಿನಲ್ಲಿ ಹಾಕಿಕೊಂಡಿದ್ದರಂತೆ. ನನಗೋ ಎಲ್ಲ ಮಸುಕು ಮಸುಕು. ನನ್ನ ವಯಸ್ಸು ಆಗ ಹತ್ತು ಇದ್ದಿರಬೇಕು….
*
*
*
(೨೬ ಅಕ್ಟೋಬರ್ ೨೦೦೧)
ನಾನು ಡಯರಿನಲ್ಲಿ ಇವುಗಳನ್ನು ಬರೆದುಕೊಳ್ಳುವುದು ನನಗಾಗಿ ಅಷ್ಟೆ. ಇವೆಲ್ಲ ನಾನು ನನ್ನೊಟ್ಟಿಗೆ ನಡೆಸಿಕೊಳ್ಳುವ ತನಿಖೆ. ಕೆಲವಷ್ಟು ಉತ್ಖನನ. ಒಳಗಿನ ಆಳ ತಿಳಿಯಲು ಒಂದು ದಾರಿ. ಕೊರೆದಷ್ಟೂ ಆಳ. ಸಿಗುತ್ತಿಲ್ಲ. ಹಾಗಾಗಿ ತಳವಿಲ್ಲ. ಇದು ಯಾರಿಗಾದರೂ ಓದಸಿಕ್ಕಿದರೆ ಅಲ್ಲಿ ನನ್ನ ಯಜಮಾನಿಕೆಯಿಲ್ಲ.
ಅಮ್ಮ ಬೆಳಿಗ್ಗೆ ಅಪ್ಪನ ಸಾವಿನ ಬಗ್ಗೆ ಹೇಳಿದಳು. ಒಂದು ನಮೂನೆ ಝಿಲ್ಲೆಂದಿತು ಮನಸ್ಸು. ಅವರ ಬಗ್ಗೆ ಮೊದಲ ಸಲ ಮೌನ ಸೆಳಕಿತು. ಎಂಭತ್ತಮೂರರ ಏಪ್ರಿಲ್ಲಿನ ಆ ಭಾನುವಾರ. ಹೌರಾ ಸ್ಟೇಶನ್ನಿನ ಬೋಗಿಯೊಂದರಲ್ಲಿ ಒಂದು ಶವ ಸಿಕ್ಕಿತಂತೆ. ಸೂಟುಬೂಟು ಹಾಕಿಕೊಂಡಿದ್ದ ದೇಹ. ಸತ್ತು ನಾಲ್ಕು ದಿನವಾಗಿರಬೇಕು ಅಂತ ತಪಾಸಣೆಯ ವರದಿ. ಗುರುತಿಗೆ ಯಾವ ಸುಳಿವೂ ಇರಲಿಲ್ಲವಂತೆ. ಕೋಟಿನ ಮುಂಗಿಸೆಯಲ್ಲಿ ಒಂದು ಮಡಿಚಿದ ಕಾಗದದ ಚೌಕ ಸಿಕ್ಕಿತಂತೆ. ಅದರ ಮೇಲೆ ಟiಟಿe is ಟಿeveಡಿ oತಿಟಿeಜ – ಅಂತ ಕೈಬರೆಹ. ಅದರ ನಕಲುಗಳನ್ನು ಎಲ್ಲ ರೈಲ್ವೆ ಸ್ಟೇಷನ್ನುಗಳಲ್ಲಿ ಹಾಕಲಾಯಿತಂತೆ. ಜೇಜೇ ಸ್ಕೂಲಿನ ಸುದೀಪ್ತೋ ಮುಖರ್ಜಿ ಬೊರಿವಿಲ್ಲಿ ಸ್ಟೇಷನ್ನಿನಲ್ಲಿ ಅದರಲ್ಲಿನ ಬರೆವಣಿಗೆಯನ್ನು ನೋಡಿ – ಅಕ್ಷೋಭ್ಯ ಕಡಿದಾಳ್ ಅಂತ ಗುರುತು ಹಚ್ಚಿದರಂತೆ. ಒಂದು ತಿಂಗಳಿನ ಬಳಿಕ.
ನನ್ನೊಳಗಿನಿಂದ ಉಕ್ಕಿದ ಅಳಲನ್ನು ಹತ್ತಿಕಲಾಗಿಲ್ಲ. ಅಮ್ಮನನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ.
ಗೆರೆಗೆ ವಾರಸುಗಳಿಲ್ಲ. ನೋವಿಗೂ…
*
*
*
(೨೮ನೇ ನವೆಂಬರ್ ೨೦೦೧)
ಪ್ರಶಸ್ತಿ ಪ್ರದಾನ ಸಭೆಯಲ್ಲಿ ಡೀನ್ ಸಿಕ್ಕಿದ್ದರು. ನನನ್ನು? ನೋಡಿದವರೇ ಅಪ್ಪಿಕೊಂಡರು. ಅವರ ಕಣ್ಣುಗಳು ಮಬ್ಬಾಗಿದ್ದವು. ಙou ಚಿಡಿe ಣಡಿuಟಥಿ his ಟegಚಿಛಿಥಿ, mಚಿಟಿ!!’- ಲೈಫ್‌ಟೈಂ ಅಚೀವ್‌ಮೆಂಟ್ ಅವಾರ್ಡಿನ ಮರಣೋತ್ತರ ಪ್ರಕಟಣೆಯನ್ನು ಮಾಡಿದಾಗ ಶ್ರೀಮತಿ ಸರಿತಾ ಕಡಿದಾಳ್ ವೇದಿಕೆಗೆ ಹೋದರು. ಏನೋ ಮಾತನಾಡಿದರು. ಮಾತಿನ ತುಂಬ ಗದ್ಗದ. ಅದರಲ್ಲೂ ವಾರಸಿಕೆ. ಅಮ್ಮನ ಕಣ್ಣು ತುಂಬಿದ್ದವು. ಯಂಗ್ ಅಚೀವರ್ಸ್ ಅವಾರ್ಡಿನ ಸೈಟೇಷನ್ ಓದಿದಾಗ ಸಭೆ ನನ್ನ ಹೆಸರಿನ ಬಲವನ್ನು ಅಕ್ಷೋಭ್ಯ ಕಡಿದಾಳ್‌ರೊಟ್ಟಿಗೆ ತಾಳೆ ಹಾಕುತ್ತಿರಬಹುದೆ ಎಂಬ ಸಂದೇಹ. ಚಪ್ಪಾಳೆ ಎಲ್ಲವನ್ನೂ ಒತ್ತರಿಸಿ ಬಿಟ್ಟಿತ್ತು. ಙou ಚಿಡಿe ಣಡಿuಟಥಿ his ಟegಚಿಛಿಥಿ, mಚಿಟಿ!!’ ಅಂತ ಪ್ರಶಸ್ತಿಯನ್ನು ಪಡೆದ ಬಳಿಕ ಮೈಕಿನಲ್ಲಿ ಹೇಳಿದೆ. ಗೆರೆಗಳಿಗೆ ನೋಡಿ ಯಜಮಾನಿಕೆಯಿಲ್ಲ.
ಗೆರೆಗೆ ವಾರಸುಗಳು ಬೇಡ. ಹಾಗೇ ಈ ಟಿಪ್ಪಣಿಗೂ.
*****
ಕೃಪೆ: ಕನ್ನಡಪ್ರಭ-೨೨-೦೧-೨೦೦೬

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.