ಮುನ್ನೂರು ಗಳಿಗೆಗಳ ಆಚೆಗೊಂದು ಲಂಘನ

ಈ ಊರಿನಲ್ಲಿ ಬಳಕೆಗೊಳ್ಳುವ ಎಷ್ಟೊಂದಕ್ಕೆ ನೋಡಿ – ನಮ್ಮಲ್ಲಿ ಪರಿಭಾಷೆಗಳು ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಆಮದುಗೊಂಡ ಸರಕುಗಳಂತೆ ಇಲ್ಲಿ ತಲೆಯೆತ್ತಿ ಹೊಸ ಸಹಸ್ರಮಾನದ ರೂಪಕಗಳಂತೆ ಕೂಡಿಕೊಂಡಿರುವ mಚಿಟಟ, mಚಿಡಿಣ, soಜಿಣತಿಚಿಡಿe ಠಿಚಿಡಿಞ, ಜಿಟಥಿoveಡಿ, subತಿಚಿಥಿ, gಡಿಚಿಜe seಠಿಚಿಡಿಚಿಣoಡಿ. . . – ಹೀಗಿತರೆಗಳು ಒಡ್ಡಿರುವ ಛಿuಡಿಣಚಿiಟಿ gಟಚಿziಟಿg, ಚಿಟuಛಿo ಠಿಚಿಟಿeಟ, ಠಿoಟಥಿಛಿಚಿಡಿboಟಿಚಿಣe, ಛಿuಟಣuಡಿeಜ mಚಿಡಿbಟe, exಠಿoseಜ ಛಿoಟಿಛಿಡಿeಣe…- ಈ ತರಹೆಗಳ ನಾಜೂಕಿನ ತೋರಿಕೆಗಳನ್ನು ತನ್ನೊಳಗೆ ಅಳವಡಿಸಿಕೊಂಡು ಒಟ್ಟು ಭೌತರೂಪದಲ್ಲೇ ಮಾರ್ಪಾಟು ಹೊಂದಿದಂತಿರುವ ಊರಿನ qಟಚಿಟಿಜsಛಿಚಿಠಿe, sಞಥಿಟiಟಿe, moಜeಡಿಟಿ, ಟಿeo-ಚಿಡಿisಣoಛಿಡಿಚಿಣ, uಡಿbಚಿಟಿ, uಡಿbಚಿಟಿiಣಥಿ, iಜeಟಿಣiಣಥಿ. . . – ಇಂತಹ ಲಗತ್ತುಗಳನ್ನು ನಮ್ಮ ಆಡುನುಡಿ ತನ್ನದಾಗಿಸಿಕೊಂಡು ದುಡಿಸಿಕೊಳ್ಳಲಿಕ್ಕೆ ಎಷ್ಟೊಂದು ಮಾತು ಖರ್ಚು ಮಾಡಬೇಕು ನೋಡಿ. ಹಾಗೆ ಮಾಡಿಕೊಂಡದ್ದು ನುಡಿಗಟ್ಟಾಗುವ ಹೊತ್ತಿಗೆ ಇನ್ನಷ್ಟು ಹೊಸ ಹೊಸ ವಸ್ತುವಿಷಯಗಳನ್ನು ಊರು ಚಪ್ಪರಿಸಿ ಇವೆಲ್ಲ ಉಪಯೋಗಕ್ಕೆ ಬರದಷ್ಟು ಸವಕಲಾಗಿರಬಹುದು. ಮೊನ್ನೆ ನಮ್ಮ ಸಂಪಂಗಿ ರಾಮ ಉರುಫ್ ಸ್ಯಾಂರ್‍ಯಾಮ್ ಜೊತೆ ಐ-ಬಾರಿನಲ್ಲಿ ನಡೂರಾತ್ರಿಯವರೆಗೆ ತೊನೆದಾಡಿದವಳು ಬಳಿಕ ಅವನೊಟ್ಟಿಗೆ ಬತ್ತಲಾದಾಗ – ಕನ್ನಡದಲ್ಲಿ ಪ್ರೀತಿ ಮಾಡಬಾರದೆ? – ಅಂದದ್ದಕ್ಕೆ oಡಿgಚಿsm-ಗೆ ಪರಿಭಾಷೆ ಹುಡುಕುತ್ತಾ ಅವನೆಲ್ಲೋ ಕಳೆದುಹೋದನಂತೆ! ಆ ಮಾತು ಬೇರೆ ಬಿಡಿ. ಸೊಂಟದ ಕೆಳಕ್ಕೆ ತೊಡಲಾಗುವ ಟoತಿ ತಿಚಿisಣ-ಗಳು ತೊಗಲಿನದೇ ಭಾಗವೇನೋ ಎನ್ನುವಷ್ಟು ಅಂಟಿಕೊಂಡರೆ, ಹಾಗೆ ಮೈದೋರುವ ಹಣಾಹಣಿಯಲ್ಲಿ ಆಚಿಟಿgeಡಿousಟಥಿ ಟoತಿ-ಎಂಬ ಪಂಚ್‌ಲೈನ್ ಒಂದು ನಮೂನೆ ಕೌತುಕವನ್ನು ಹುಟ್ಟಿಸದಿದ್ದರೆ ಹೇಳಿ. ಐess is moಡಿe -ಎನ್ನಲಾಗುವ ಮತ್ತೊಂದು ಉದ್ಘೋಷದಲ್ಲಿ ಎದೆ ತೋಳುಗಳನ್ನು ‘ಮೈ’ಲಾಗುವಷ್ಟು ತೋರುತ್ತಾರೆ ಈ ಶತಮಾನದ ವಾರಸುಗಳಂತಿರುವ ಗಂಡು ಹೆಣ್ಣುಗಳು. ಅವರನ್ನು ಮುಡಿಯಿಂದ ಅಡಿಯವರೆಗಿರಲಿ, ನಡುಮಟ್ಟಕ್ಕೆ ಬರುವಷ್ಟರಲ್ಲಿ ಹೊಕ್ಕಳ ಕೆಳಗಿನ ಪ್ರಪಾತದ ಊಹೆಯಲ್ಲಿ ಮನಸ್ಸು ಮರೆತು ಹೋಗದಿದ್ದರೆ ಹೇಳಿ. ಬ್ರಿಗೇಡ್ ರೋಡ್, ಕಮರ್ಷಿಯಲ್ ಸ್ಟ್ರೀಟ್‌ಗಳ ಸಾಯಂಫೇರಿಯಲ್ಲಿ, ಕಾಫೀ ಡೇಯ ಅನುದಿನದ ಫೇರಿನಲ್ಲಿ ಒದಗುವ ಸಪೂರ ಮೈಗಳ ನಳನಳವನ್ನು ನೋಡಿದರೆ ಆ ವಯಸ್ಸಿನವರ ಧಿಮಾಕು ಹಿಡಿ ಹಿಡಿ ಅಸೂಯೆ ಹುಟ್ಟಿಸಬಹುದು. ಎಡಗಿವಿಯಲ್ಲಿ ನಕ್ಷತ್ರದ ಕಿಡಿ ತೊಟ್ಟು ಒತ್ತು ಕೂದಲಿನ ಜೊಂಪೆ ಇಳಿಬಿಟ್ಟಿರುವ ಸಂಪಂಗಿ ಈ ನಮೂನೆಯಲ್ಲೊಂದು ನೇರ ತಳಿಯೇ ಸರಿ. ಅವನ ಕೊರಳಿನ ದಪ್ಪನೆ ಕರಿ ಎಳೆಯಲ್ಲಿ ಬೆಳ್ಳಿ ಚೇಳಿನ ಪದಕ ತೂಗಿರುತ್ತದೆ. ಅದರ ನಿರ್ವಿಷದ ಕೊಂಡಿ ಹದದ ಎದೆಯಲ್ಲಿಳಿದು ಪುಟಿಯುವಲ್ಲೆಲ್ಲ ಪಾಚಿ ಹಸಿರಿನ ನಾಡಿ ಎಳೆ ರೇಖಿಸಿದಂತಿದೆ.

ರೆಸಿಡೆನ್ಸೀ ರಸ್ತೆಯ ಸೇಂಟ್ ಮಾರ್ಕ್ಸ್ ಜಂಕ್ಷನ್ನಿನ ಮೂಲೆಯಲ್ಲಿ ಥಳ ಥಳ ಗಾಜು ಮಿರಿ ಮಿರಿ ಗ್ರನೈಟು ಹೊದ್ದಿರುವ ನಾಲ್ಕಂತಸ್ತಿನ ಕಟ್ಟಡದ ಎರಡನೇ ಮಹಡಿಯ ಐದು ಸಾವಿರ ಚದರಡಿಗಳ ಆಕ್ಸಿಸ್ ಟೆಕ್ನಾಲಜೀಸ್ ಎಂಬ ಕಾಲ್ ಸೆಂಟರೊಂದಿದೆ. ಇಲ್ಲೇ ಇಪ್ಪತ್ತೊಂಬತ್ತು ವಯಸ್ಸಿನ ಸಂಪಂಗಿ ರಾಮಚಂದ್ರ ವೈಕುಂಠಂ ಕೆಲಸಕ್ಕಿದ್ದಾನೆ. ಹಳೆಯ ಮದರಾಸು ರಸ್ತೆ ಅಲಸೂರು ಕೆರೆಯನ್ನು ಬಳಸಿ ಸಾಗಿ ಮುಂದೆ ಸಿಗುವ ಕೃಷ್ಣರಾಜಪುರದ ತೂಗುಸೇತುವೆ ಬಲ ದಟ್ಟಣೆಯ ಉದಯನಗರದಲ್ಲಿ ಅವನ ಮನೆ. ಅವನ ಓರಗೆಯವರಿರಲಿ, ಅವನಿಗಿಂತ ಐದು ವರ್ಷ ಕಿರಿಯರೆಲ್ಲ ಮದುವೆಯಾಗಿದ್ದರೂ ಇವನಿನ್ನೂ ಅವಿವಾಹಿತನುಳಿದಿದ್ದಾನೆ. ಬೆನ್ನಿನಲ್ಲಿ ಅವಳಿ ಸೋದರರಿದ್ದು ಒಟ್ಟು ಐದು ಮಂದಿಯಿರುವ ಎಂಟು ಚದರದ ಮನೆಯಲ್ಲಿ ಇವನೊಬ್ಬನೇ ಗ್ರಾಜುಯೇಟೆಂಬ ಹೆಮ್ಮೆ. ಪ್ರತಿಷ್ಠಿತ ಎಮ್ ಜೀ ರಸ್ತೆಯ ಆಜುಬಾಜೂ ಕೆಲಸದ ದೆಸೆಯಿಂದ ದಟ್ಟ ನಾಗರಿಕತೆಯ ರಿವಾಜುಗಳನ್ನು ಹೊದ್ದಿರುವುದರಿಂದ ಈಗಲೇ ಮದುವೆಯಲ್ಲಿ ಆಸ್ಥೆಯಿಲ್ಲ. ಅವನೆಲ್ಲೋ ಓದಿಕೊಂಡ ಇಂಟರ್‌ನೆಟ್ ವರದಿಯ ಪ್ರಕಾರ ವಿದ್ಯಾಭ್ಯಾಸವಿರುವವರಿಗೆ ಸೆಕ್ಸ್‌ನಲ್ಲಿ ಆಸಕ್ತಿ ಕಡಿಮೆ ಅಂತಿದ್ದುದನ್ನು ತನ್ನಂತಹವರ ಧ್ಯೇಯವಾಕ್ಯವೆಂಬಂತೆ ಸದ್ಯಕ್ಕಂತೂ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ – ಮದುವೆಯಿಲ್ಲದೆ ಹೆಂಗೆಳೆಯರಿರುವುದು ಒಂದು ಫ್ಯಾಷನ್ ಸ್ಟೇಟ್‌ಮೆಂಟೆಂದೇ ಗಟ್ಟಿ ನಂಬಿಬಿಟ್ಟಿದ್ದಾನೆ. ದೂರದ ತಿರುಪತಿಯ ಆಸುಪಾಸಿನಿಂದ ನಲವತ್ತು ವರ್ಷಗಳ ಹಿಂದೆ ವಲಸೆ ಬಂದ ಮೂರು ಮಕ್ಕಳ ವರದರಾಜ ವೈಕುಂಠಮ್ ಮತ್ತು ಪೆರಿನಾಯಕಿಯರ ಕುಟುಂಬದಲ್ಲಿ ಈಗ ಅವನ ಮದುವೆಯೊಂದೇ ಸಮಸ್ಯೆಯಾಗಿಬಿಟ್ಟಿದೆ. ಹಾಗೆ ನೋಡಿದರೆ ಸಮಸ್ಯೆಯಿರುವುದು ಅವನು ಮದುವೆಯನ್ನು ಸಕಾರಣವಿಲ್ಲದೆ ಮುಂದೂಡುತ್ತಿದ್ದಾನೆ ಅಂತಲ್ಲ. ಸಮಸ್ಯೆಯಾಗಿರುವುದು ಮದುವೆಗೆಂದು ತುದಿಗಾಲಿನಲ್ಲಿ ನಿಂತಿರುವ ಅವನ ನಾಲ್ಕು ವರ್ಷ ಕಿರಿಯ ತಮ್ಮ ಶ್ರೀನಿವಾಸನ ಕಿರಿಕಿರಿಯಲ್ಲಿ. ತನ್ನ ಚಡ್ಡಿಯ ದಿನಗಳ ಒಡನಾಟದವರಿಗೆಲ್ಲ ಮದುವೆಯೆನ್ನುವುದು ಇದೀಗ ಸಂತತಿಗೆ ಸಜ್ಜಾಗುವಷ್ಟು ಹಳೆಯದಾಗಿರುವಾಗ ಎಸ್ಸೆಸ್ಸೆಲ್ಸೀ ನಪಾಸಿನ ಓದಿದ್ದರೂ ಸ್ವಂತ ಉದ್ದಿಮೆಯ ನೆರಳಿರುವ ಶ್ರೀನಿವಾಸನಿಗೆ ತನ್ನ ಬಲಿತ ಮೈ ಒಳಗೊಳಗೇ ನಡೆಸುವ ಪಿತೂರಿಯನ್ನು ಹತ್ತಿಕ್ಕಲಾಗುತ್ತಿಲ್ಲ. ಹಾಗಾಗಿ ಕಳೆದ ಎರಡು ವರ್ಷಗಳಿಂದ ಮದುವೆಗೆಂದು ದುಂಬಾಲು ಬಿದ್ದಿದ್ದಾನೆ. ಪೆರಿನಾಯಕಿಯೋ ಅಣ್ಣನ ಮದುವೆಯಾಗಲಿ ಅಂತ ಸಬೂಬು ಹೇಳಿ ಅವನನ್ನು ಸಮಾಧಾನ ಪಡಿಸುತ್ತಲೇ ಇದ್ದಾಳೆ.

ಚಿಕ್ಕವ ವೆಂಕಟೇಶ ಈಗ ಎಳವೆಯಿಂದ ಆಡಿ ಬೆಳೆದ ಉದಯನಗರದ ಆ ಮನೆಯೊಟ್ಟಿಗಿನ ಇಪ್ಪತ್ತು ವರ್ಷಗಳ ಉದ್ದದ ಎಲ್ಲ ಕೊಂಡಿಗಳನ್ನು ಪೂರ್ತಾ ಕಳಚಿಕೊಂಡಿದ್ದು ಇಂದು ಅದರ ದಾಖಲೆಯ ಮೇಲೆ ಠಸ್ಸೆಯೊತ್ತುವ ವಿಚಿತ್ರ ತರಾತುರಿಯಲ್ಲಿದ್ದಾನೆ. ಕಳೆದ ಎರಡು ತಾಸುಗಳಿಂದ ನಾರಾಯಣ ಪಿಳ್ಳೈ ಬೀದಿಯಲ್ಲಿ ಹಚ್ಚೆ ಹಾಕುವನೊಬ್ಬನನ್ನು ಹುಡುಕಿಕೊಂಡು ಬೈಕಿನಲ್ಲಿ ಗಸ್ತಿಗೆ ತೊಡಗಿದ್ದಾನೆ. ಅವನಿಗೆ ಎರಡು ವರ್ಷಗಳ ಹಿಂದೆ ತಂಜಾವೂರಿನ ಈ ಹಚ್ಚೆಗಾರನನ್ನು ಇಲ್ಲೇ ಒಂದು ಮನೆಯ ಬಿಸಿಲು ಮಚ್ಚಿನ ಬಾಡಿಗೆ ಕೊಠಡಿಯೊಂದರಲ್ಲಿ ಭೆಟ್ಟಿ ಮಾಡಿದ ನೆನಪು. ಕಮರ್ಷಿಯಲ್ ಸ್ಟ್ರೀಟಿಗೆ ಮಗ್ಗುಲಿನ ಈ ಬೀದಿಯಲ್ಲಿ ಈಚೆಗೆ ಅಲ್ಲಿನ ವಾಣಿಜ್ಯ ವಹಿವಾಟೆಲ್ಲ ಇಲ್ಲಿ ವಿಸ್ತರಿಸಿಕೊಂಡಿರುವುದರಿಂದ ಜಂಗುಳಿಯಲ್ಲಿ ವಿಳಾಸವಿಲ್ಲದೆ ಒಬ್ಬನನ್ನು ಹುಡುಕುವುದು ದುಸ್ತರವೆಂಬ ಪರಿವೆ ಇದ್ದಂತಿಲ್ಲ. ಹಚ್ಚೆಯವನನ್ನು ಪರಿಚಯಿಸಿದ ಲಿಯೋ – ಇವನೊಟ್ಟಿಗೆ ಸೊಮಾಟಿಕ್ಸ್ ಫಿಟ್‌ನೆಸ್ ಪ್ಲಾನೆಟ್ಟಿನಲ್ಲಿ ಕೆಲಸ ಮಾಡುತ್ತಿದ್ದವನು, ಈಗ ಮಲೇಷಿಯಾದಲ್ಲೆಲ್ಲೋ ವಲಸೆ ಹೋಗಿರುವುದರಿಂದ ಆ ತ್ಯಾಂಜೋರ್ ಸಾಮಿಯ ಗೊತ್ತುಗುರಿಯ ಖಚಿತ ಗುರುತಿಲ್ಲ. ಜಿಮ್ಮಿನಲ್ಲಿ ದುಡಿ ದುಡಿಸಿ ಕಸುವು ತೆಗೆದ ಎಡತೋಳಿನ ಹೊರಬದಿಯಲ್ಲಿ ಶರಭದ ಮಾದರಿಯಲ್ಲಿ ಬರೆಯಲಾಗುವ ತಮಿಳಿನ ಸಾಂಪ್ರಾದಾಯಿಕ ನಕಲು ಹೊಯ್ಯಿಸಿಕೊಳ್ಳುವುದು ಇವನಿಗೆ ಈಗ ಎಲ್ಲಿಲ್ಲದ ತುರ್ತು. ಜಿಮ್ಮಿನಲ್ಲಿ ಕೆಲಸ ಮಾಡುತ್ತಿದ್ದ ಇವನ ಮಾಜಿ ಗರ್ಲ್‌ಫ್ರೆಂಡ್ ಜಯಶಾಂತಿ ಹಚ್ಚೆಗೆ ಕುಮ್ಮಕ್ಕು ಕೊಟ್ಟಂದೇ ಮಧ್ಯಾಹ್ನ ಲಿಯೋ ಜತೆಯಲ್ಲಿ ಕ್ಯಾಷುವಲ್ ಲೀವ್ ತೆಗೆದು ಇಲ್ಲಿ ಬಂದದ್ದು. ಪೆರಿನಾಯಕಿಗೆ ಈ ವಿಷಯ ಅದೇ ಸಂಜೆಗೆ ತಿಳಿದದ್ದೇ ಕೆಂಡಾಮಂಡಲಗೊಂಡು ನೆಲ ಮುಗಿಲು ಸೇರಿಸಿಬಿಟ್ಟಿದ್ದಳು. ಇನ್ನು ಇದು ಮನೆಯಲ್ಲಿ ಅಸಾಧ್ಯ ಪಿರಿಪಿರಿ ಹುಟ್ಟಿಸಬಹುದೆಂದು ವೆಂಕಿ ಹಚ್ಚೆಯ ಯೋಚನೆಯನ್ನು ಕೈ ಬಿಟ್ಟಿದ್ದ. ಈಗ ಜನವರಿ ಹದಿನಾಲ್ಕರ ಇಪ್ಪತ್ತಾರನೇ ಬರ್ತ್‌ಡೇ ಹೊತ್ತಿಗೆ ಹಳೆಯ ಎಲ್ಲ ಅಂಟುನಂಟುಗಳನ್ನು ಕೊಡವಿಕೊಳ್ಳುವ ವಿಲಕ್ಷಣ ಹುಮ್ಮಸ್ಸಷ್ಟೇ ರೂಪಿಸಿರುವ ತನ್ನದೇ ಒಂದು ಅಜೆಂಡಾದಲ್ಲಿ ತನಗೊಂದು ಹೊಸ ವಿಭಿನ್ನ ಇಮೇಜನ್ನು ಕಟೆದುಕೊಳ್ಳುವುದು ಅವನಿಗೆ ಮೊದಲ ಅಂಶವಾಗಿಬಿಟ್ಟಿದೆ. ಕಳೆದ ಒಂದು ವಾರದ ಅಂತರ್ಮುಖತೆಯಲ್ಲಿ ನಿಯೋಜನೆಗೊಂಡ ಆ ಅಜೆಂಡಾದಲ್ಲಿ ತನ್ನ ಅವಳಿ ಅಣ್ಣ ಶ್ರೀನಿಯೊಟ್ಟಿಗಿನ ಎಲ್ಲ ಹೋಲಿಕೆಯನ್ನು ಕಳಚಿಬಿಡುವ ಹುನ್ನಾರವಿದೆ.

ಈವರೆಗಿನ ಆರು ಖಾಸಗೀ ಕತ್ತಲುಗಳಲ್ಲಿ ತನ್ನನ್ನು, ತನ್ನ ಭವಿತವ್ಯದ ನಿಟ್ಟುಗಳನ್ನು ಬೇರೊಂದು ಕೋನದಿಂದ ನೋಡಿ ಆಮೂಲಾಗ್ರವೆನ್ನುವಂತೆ ವೆಂಕಿ ತಡಕಿಕೊಂಡಿದ್ದಾನೆ. ಅವನ ಅಂತರ್ಮುಖತೆಯಲ್ಲಿ ಅತೀವ ಸ್ವಕೀಯವೆನ್ನುವ ಹಮ್ಮಿದೆ. ತನಗಿನ್ನು ತಾನೇ ಎನ್ನುವ ಪರಮಾಪ್ತತೆಯಿದೆ. ತಾನಿನ್ನು ಪ್ರಶ್ನಾತೀತನೆನ್ನುವ ಸಡ್ಡಿದೆ. ಜಿಮ್ಮುಗನ್ನಡಿಯ ದೊಡ್ಡ ದೊಡ್ಡ ಹರಹುಗಳಲ್ಲಿ ತೋರುವ ಹತ್ತಾರು ಚಹರೆ ಚರ್ಯೆಗಳಲ್ಲಿ ತನ್ನೊಬ್ಬನದೇ ಬಿಂಬವಷ್ಟೇ ಫೋಕಸ್‌ಗೊಂಡು ಪ್ರಧಾನವೆನಿಸುತ್ತದೆ. ಹಗಲುಗಳಲ್ಲಿ ಕನ್ನಡಿ ಅದನ್ನೇ ಪಿಸುಗುಟ್ಟುತ್ತದೆ. ಕತ್ತಲು ಆ ಕನಸಿನ ಸಾಕಾರದತ್ತ ತುಣುಕು ತುಣುಕಿಗೆ ಕನ್ನಡಿ ಹಿಡಿಯುತ್ತದೆ. ‘ಏಥಿ ಟಿx ಛಿ ಜಣಡಿಣಿqeಥಿeq ಜಿಟಿಞಞeತಿeuಥಿ ದಿಟಿe ಣಿಣಟಿuಥಿ’ – ಎಂದು ಮತ್ತೆ ಮತ್ತೆ ತನಗೆ ತಾನೇ ಹೇಳಿಕೊಳ್ಳುತ್ತಾನೆ. ಕಳೆದ ಮಂಗಳವಾರ ಸಂಜೆ ಇತ್ತ ರೂಮೂ ಅಲ್ಲದ ಅತ್ತ ಮನೆಯೂ ಅಲ್ಲದ ತನ್ನ ಹೊಸತಾಗಿ ಬಾಡಿಗೆ ಹಿಡಿದ ಬೆನ್ಸನ್ ಟೌನಿನ ಮೂಲೆಯ ವಸತಿಗೆ ಬಂದವನೇ ಟ್ರ್ಯಾಕ್ಸು ಟೀಷರಟು ಕಳಚಿ ಬ್ರೀಫಿನಲ್ಲಷ್ಟೇ ಕನ್ನಡಿಯ ಮುಂದೆ ನಿಂತವನು ಎಂತೆಂಥದೋ ಪೋಸಿಗೆ ತೊಡಗಿಬಿಟ್ಟಿದ್ದ. ಹತ್ತಾರು ಕಾಲದಲ್ಲಿ ದಿನಾಲೂ ಬೆವರಿಳಿಸಿ ಸೊಕ್ಕಿಸಿದ ಖಂಡ ಖಂಡವನ್ನೂ, ಧಮನಿ ಧಮನಿಯನ್ನೂ ಮಸೂರಗಣ್ಣಿನಿಂದ ದಿಟ್ಟಿಸಿ ನೋಡಿದ್ದ. ಬಲಗಿವಿಯ ಕೆಳನೇರದ ಕೊರಳಿನಲ್ಲಿರುವ ಮಚ್ಚೆಯ ಹರವು ಇನ್ನಷ್ಟು ದೊಡ್ಡದಿರಬಾರದಿತ್ತೆ ಅಂತ ಕೆಲವು ಕ್ಷಣ ಅವನಿಗೆ ಅನಿಸಿತ್ತು. ಸಿನೆಮಾಗಳಲ್ಲಿ ತೋರಿಸುವಂತೆ ಅವರಿಬ್ಬರ ಅವಳಿ ಚರ್ಯೆಗಳಲ್ಲಿ ಶ್ರೀನಿಯಿಂದ ತಾನು ಬೇರೆ ಅನ್ನಿಸಿಕೊಳ್ಳಲಿಕ್ಕೆ ಅದೊಂದೇ ಗುರುತಷ್ಟೆ. ಹಾಗಾಗಿ ಅದು ಇನ್ನಷ್ಟು ಪ್ರಧಾನವಾಗಿ ತೋರುವಂತಿದ್ದಿದ್ದರೆ ಚೆನ್ನಿತ್ತಲ್ಲವೆ? ಉಳಿದ ಒಡಲನ್ನು ಹೊರತುಗೊಳಿಸಿ ಮುಖದ ಮೇಲೆ ನೋಟ ನೆಟ್ಟಾಗ ಅದನ್ನು ಶ್ರೀನಿಯದಕ್ಕಿಂತ ಹೇಗೆ ವಿಭಿನ್ನಗೊಳಿಸಬಹುದೆಂಬ ಲೆಕ್ಕಾಚಾರದಲ್ಲಿ ವೆಂಕಿ ಕಳೆದುಹೋಗಿದ್ದ. ತನ್ನ ಮುಡಿಯ ಗುಂಗುರನ್ನು ನೇರಗೊಳಿಸಿ, ಕೂದಲನ್ನು ಉದ್ದಗೊಳಿಸಿದರೆ ಹೇಗೆ? ಇನ್ನೂ ಸಾಕಷ್ಟು ಬಲಿಯದ ಕೆನ್ನೆ ಗಲ್ಲ ಗದ್ದಗಳ ಮೇಲಿನ ಕಳೆಯನ್ನು ಹುಲುಸುಗೊಳಿಸುವುದು ಹೇಗೆ? ಇಬ್ಬರಲ್ಲೂ ಅಷ್ಟೇನೂ ಒತ್ತಾಗಿರದ ಹುಬ್ಬಿನ ರಚನೆಯನ್ನು ತಾನೊಬ್ಬನೇ ಗಾಢಗೊಳಿಸಿದರೆ ಹೇಗೆ? ಎರಡೂ ಕಿವಿಗಳಲ್ಲಿ ಇನ್ನೂ ಮುಚ್ಚಿರದ ರಂಧ್ರಗಳಲ್ಲಿ ಸಂಪಂಗಿಯಂತೆ ನಕ್ಷತ್ರಗಳ ಕಿಡಿ ತೊಟ್ಟರೆ ಹೇಗೆ? ಹೀಗೆ ಕನ್ನಡಿಯಲ್ಲಿ ತನ್ನ ಮುಖದ, ಮುಂಡದ ವಿವರಗಳನ್ನು ತಡಕುತ್ತ ಹೋದಂತೆ ಒಂದು ಸೂಕ್ಷ್ಮ ಸ್ತರದಲ್ಲಿ ಕೆಲವು ಶ್ರೀನಿಯದೆ ಅನ್ನಿಸಿ – ಥತ್! ತಾನು ತಾನಾಗಿಯೇ ಇರಬಾರದಿತ್ತೆ!! – ಅಂತ ಸಶಬ್ದ ಹೇಳಿಕೊಂಡು, ಮತ್ತೆ ದೇಹದ ಖಾಸಗೀ ಪರಾಮರ್ಶೆಯಲ್ಲಿ ತೊಡಗಿಕೊಂಡಿದ್ದ. ನಡೆದಾಗ ಒಂದು ಭಂಗಿಯಲ್ಲಿ ತಾನು ಅವನಂತೆ ಅನ್ನಿಸಬಹುದೆಂದು ಅಗತ್ಯಕ್ಕಿಂತ ಹೆಚ್ಚು ಎದೆ ಸೆಟೆಸಿ ಕೆಲವು ಹೊಸ ನಡಿಗೆಯ ಮಾದರಿಗಳನ್ನು ರೂಢಿಕೊಂಡ. ಮರುನಸುಕಿನಲ್ಲಿ ಎಂದಿನಂತೆ ಐದಕ್ಕೇ ಎದ್ದು ಮತ್ತೆ ಕನ್ನಡಿಯಲ್ಲಿ ಇಳಿದು – ಅರೆ! ಇದು ಅವನೇ! – ಅನ್ನಿಸಿ ಬಿಂಬದ ಆಳಕ್ಕಿಳಿದಂತೆ ಮನಸ್ಸು ಅಸಂಗತ ಸುಳಿಗೆ ಸಿಕ್ಕಿ ಗಿರಿಗಿರಿ ಸುರುಳಿ, ಕೊನೆಗೆ ಆರರ ಕೆಲಸಕ್ಕೆ ಅರ್ಧ ತಾಸು ತಡವಾಗಿ ಹೋಗಿ ಬಯ್ಯಿಸಿಕೊಂಡೂ ಇದ್ದ.

‘ಕ್ಯಾ ಬೋಲ್ತೀ?’ ಎಂದು ವಯಸ್ಸಾದ ಮುಸಲ್ಮಾನ ಎದ್ದು ಹತ್ತಿರ ಬಂದಾಗ ವೆಂಕಿ ಬೈಕಿನಿಂದ ಇಳಿದು ಹಚ್ಚೆಯವನನ್ನು ಕುರಿತು ಕೇಳುತ್ತಾನೆ. ‘ಸಾಮೀ! ಈ ಜಗಾಹ್‌ದಲ್ಲಿ ಅಡ್ರೆಸ್ಸ್ ಇಲ್ದೇ ಏನು ಖೋಜ್ ಮಾಡ್ತೀ?’ ಅನ್ನುತ್ತ ಅವನು ದಟ್ಟ ಶಿವಾಜಿನಗರಿಯಲ್ಲಿ ಗಡ್ಡ ತುರಿಸಿಕೊಳ್ಳುತ್ತಾನೆ. ವೆಂಕಿ ಮತ್ತೆ ಬೈಕು ಕುಟುಕುಟಿಸಿ ಮತ್ತೊಂದು ಸುತ್ತಿಗೆ ಅಣಿಯಾಗುತ್ತಾನೆ. ಹಗಲು ತನ್ನ ಕೊನೆಯ ಪಾಳಿಯತ್ತ ಹೊರಳುತ್ತದೆ. ವಿಳಾಸವಿಲ್ಲದೆ ಒಬ್ಬನನ್ನು ಹುಡುಕುವ ತನ್ನ ಸಾಹಸದ ಬಗ್ಗೆ ಅವನಿಗೆ ನಗೆ ಬರುತ್ತದೆ. ಆದರೆ ಆ ಕುರಿತು ಅವನಿಗೆ ಕೊಂಚವೂ ಹತಾಶೆಯಿಲ್ಲ. ಅವನ ಮನಸ್ಸಿನ ತುಂಬಾ ಹಚ್ಚೆಯ ಚಿತ್ತಾರ ತುಂಬಿಕೊಂಡಿದೆ. ಅಸಂಗತ ದೂರದಲ್ಲಿ ಶರಭವನ್ನು ಹೋಲಿಸುವ ಒಟ್ಟಾರೆ ನಾಜೂಕಿನ ಹಸಿರು ಎಳೆಗಳು. ಕಾವಿನ ಮೊನಚು ಮೈಗೆ ಚುಚ್ಚಿದರೆ ಅಸಾಧ್ಯ ಯಾತನೆಯಾಗುವುದಿಲ್ಲವೆ? ಬುದ್ಧಿ ಬಂದಾಗಿನಿಂದ ಶ್ರೀನಿಯತ್ತಲೇ ಎಲ್ಲ ರೀತಿಯಲ್ಲೂ ತುಸು ವಾಲಿ ಅವನ ಪರ ವಹಿಸಿ ಚುಚ್ಚುವ ಮನೆಯವರ ತಿವಿಯುವಂತಹ ಮಾತುಗಳಿಗಿಂತ ಕೆಂಪಗೆ ಕಾದ ಕಡ್ಡಿ ತೊಗಲಿನಾಳಕ್ಕಿಳಿದು ನೆತ್ತರನ್ನು ಸೀಯಿಸಿದರೆ ನೋವಾಗದೇನೋ. ನೋವಾದರೂ ಅದನ್ನು ತಡೆಯಬಲ್ಲೆನೆಂಬ ವಿಚಿತ್ರ ನಂಬಿಕೆ ಅವನದ್ದು. ‘ಚಿಕ್ಕವನಿರುವಾಗಿನಿಂದ ಇಬ್ಬರೂ ಹೀಗೇನೇ. ನಮ್ಮ ವೆಂಕಿಗೆ ಏನು ಬೇಕೋ ಅದೇ ಶ್ರೀನಿಗೂ ಬೇಕು. ಇವನು ಎಲ್ಲಾದರಲ್ಲೂ ಸೋತು ಬಿಟ್ಟುಬಿಡ್ತಾನೆ. ಸೋತು ಗೆಲ್ಲೋದರಲ್ಲೇ ಖುಷಿ ಇದೆ ಅಂತ ನಾವು ಇವನಿಗೆ ಹೇಳ್ತಾ ಇರ್‍ತೀವಿ. ಅಷ್ಟಕ್ಕೂ ಇವನು ಜೀವನದಲ್ಲಿ ಅದೇನು ಸಾಧಿಸಿದ್ದಾನೆ ಹೇಳಿ? ಇವನು ಮನೆಗೆ ಅಂತ ಒಂದು ಎರಡು ಸಾವಿರ ಕೊಟ್ಟರೆ ಈ ಕಾಲದಲ್ಲಿ ಏನು ಸಾಕಾಗುತ್ತೆ ಹೇಳಿ. ಶ್ರೀನಿ ತನ್ನದೆ ಅಂತ ಈ ಅಂಗಡಿ ಹಾಕ್ಕೊಂಡ ಮೇಲೆ ನಾವೂ ಅಷ್ಟೋ ಇಷ್ಟೋ ಚೆನ್ನಾಗಿದ್ದೀವಿ. ಇವರಿಬ್ಬರದ್ದು ಏನು ಓದಾ? ಬರಾನಾ? ನಾನಂತೂ ಇವನ ಕೈ ಬಿಟ್ಟುಬಿಟ್ಟಿದ್ದೀನಿ. . . . ಸಂಪಂಗಿ ತನ್ನ ಪಾಡಿಗೆ ತಾನು, ತಾನಾಯಿತು ತನ್ನ ಕೆಲ್ಸ ಆಯಿತು ಅಂತ ಇದ್ದಾನೆ. ಈ ವೆಂಕಿಗೊಂದು ಒಂದು ನೆಲೆ ಕೊಡಬೇಕು ಅಂತ ನಾವೆಲ್ಲ ಎಷ್ಟು ಮಾಡಿದ್ದೀವಿ. ಒಂದು ಕಡೆ ಸರಿಯಾಗಿ ನಿಲ್ಲೋಲ್ಲ. ಮೂರು ವರ್ಷದಲ್ಲಿ ನಾಲಕ್ಕು ಕೆಲಸ ಬದಲಾಯಿಸಿದ್ದಾನೆ. ಹೋಗಲಿ ಹೇಗೋ ಶ್ರೀನಿ ಜೊತೆನೇ ಅಡ್ಜಸ್ಟ್ ಮಾಡ್ಕೊಂಡು ಇರೋ ಅಂದರೆ ಇಬ್ಬರೂ ಕೋಳಿಗಳ ಥರಾ ಕಿತ್ತಾಡ್ತಾರೆ. . . ನನಗಂತೂ ಸಾಕು ಸಾಕಾಗಿ ಹೋಗಿದೆ. ಈಗ ಬೇರೆ ಮನೆ ಮಾಡ್ಕೊಂಡು ಹೋಗು ಅಂತ ನಾನೇ ಹೇಳಿದ್ದೀನಿ. . . . . ’ – ಎಂದು ಅಮ್ಮ ತನ್ನನ್ನು ಹುಡುಕಿಕೊಂಡು ಬಂದ ಪ್ರಕಾಶನಿಗೆ ಹೇಳಿದ್ದಳಂತೆ. ತನ್ನನ್ನು ಹೀಗೆ ಒಬ್ಬನೇ ಇರುವಂತೆ ಹೇಳಲು ಶ್ರೀನಿಯದೇ ಪ್ರೇರೇಪಣೆ. ಎಷ್ಟಾದರೂ ಅವನಿಗೆ ತಾನು ಕಣ್ಣು ಹಾಕಿದ್ದನ್ನೆಲ್ಲ ಗಿಟ್ಟಿಸಿಕೊಳ್ಳುವ ಬುದ್ಧಿ. ಅಜ್ಜಿ ಅಮ್ಮನಿಗೆಂದು ಕೊಟ್ಟ ಮೈಕೆಲ್ ಪಾಳ್ಯದ ಸೈಟಿನಲ್ಲಿ ಅಚ್ಚುಕಟ್ಟಾದ ನಾಲ್ಕು ರೂಮುಗಳ ಮನೆಯನ್ನು ಮೂವರೂ ದುಡಿದು ಕಟ್ಟೋಣವೆಂದು ಎಷ್ಟೆಲ್ಲ ಪ್ಲ್ಯಾನು ತೆಗೆದದ್ದಾಗಿತ್ತು? ಒಂದೇ ಮಾತಿನಲ್ಲಿ ತಾನಿದ್ದರೆ ಅವನು ಇರುವುದಿಲ್ಲವೆಂದು ಎಷ್ಟು ಸುಲಭವಾಗಿ ಹೇಳಿಬಿಟ್ಟ! ಈ ಅಮ್ಮನದ್ದೂ ಎಷ್ಟಾದರೂ ಅವನನ್ನು ಕಂಡರೆ ಪ್ರೀತಿಯಲ್ಲಿ ಒಂದು ಕೊಸರು ಹೆಚ್ಚೇ. ಊಟ ಬಡಿಸುವಾಗಲೂ ಅವನಿಗೇ ಒಂದೆರಡು ತುತ್ತು ಹೆಚ್ಚು. ತಾನು ಯಾವುದರಲ್ಲೂ ಹೇಗೋ ಅಡ್ಜಸ್ಟ್ ಮಾಡಿಕೊಳ್ಳುತ್ತೇನೆ ಅಂತ. . . . ಕೊನೆಗೆ ಇವನು ತನ್ನ ಬದುಕಿನ ಮೇಲೆ ಚಪ್ಪಡಿಯೆಳೆಯಬಲ್ಲ. . . .

ಹೊಸತಾಗಿ ಸೆಕೆಂಡ್ ಫ್ಲೋರನ್ನು ತಳೆದು ಫೇಸ್‌ಲಿಫ್ಟ್ ಮಾಡಿಸಿಕೊಂಡಿದ್ದರೂ ನೂರಾರು ಕಾಲದ ಹಳೆಯ ಕೊಂಡಿಯಂತೆ ಅಂಟಿಕೊಂಡು ಬೀದಿಗುಂಟ ಚಾಚಿಕೊಂಡಿರುವ ಜಗುಲಿಯ ಮೇಲೆ ಕುಳಿತಿದ್ದ ವೃದ್ಧ ಟ್ಯಾಟೂ ಅಂದದ್ದನ್ನು ಕೇಳಿ ಕಣ್ಣು ಪಿಳಿ ಪಿಳಿಸುತ್ತಾನೆ. ವೆಂಕಿ ಕೂಡಲೆ ತಮಿಳಿನಲ್ಲೊಮ್ಮೆ, ಕನ್ನಡದಲ್ಲೊಮ್ಮೆ ಹಚ್ಚೆಯವನನ್ನು ಕುರಿತು ಹೇಳುತ್ತಾನೆ. ವಯಸ್ಸಾದವನ ದಪ್ಪ ಗಾಜಿನಲ್ಲಿ ಧೂಳಿನ ಮಬ್ಬು ನೆನಪನ್ನೂ ಮಾಸಿಬಿಟ್ಟಿದೆ ಅನಿಸುತ್ತದೆ. ಒಳಗಿನಿಂದ ಬಂದ ಎರಡನೇ ತಲೆಮಾರಿನ ನಡುವಯಸ್ಕ ವೆಂಕಿಯನ್ನೊಮ್ಮೆ ಮುದುಕನನ್ನೊಮ್ಮೆ ಸೂಕ್ಷ್ಮವಾಗಿ ನೋಡಿ ಏನೂ ಹೇಳದೆ ಅಲ್ಲಿದ್ದ ಹೀರೋ ಹೊಂಡ ಕಿಕ್ಕಿಸಿ ಮೊದಲ ತಿರುವಿನಲ್ಲಿ ಎಡಕ್ಕೆ ಸರಿಯುತ್ತಾನೆ. ಏನೂ ತೋಚದೆ ನಿಂತವನಲ್ಲಿ ಶರಭದ ಗೆರೆಗಳು ಗಾಢಯಿಸುತ್ತವೆ.

ಮನೆಯ ಮಗ್ಗುಲಿನ ಕಿರಿಯ ಓಣಿಯಲ್ಲಿ ಬೀದಿಗೆ ಹತ್ತಿರವಿದ್ದ ವೆಂಕಿಯ ಸ್ಪ್ಲೆಂಡರನ್ನು ಹೇಳದೆ ಕೇಳದೆ ಒಂದು ಭಾನುವಾರ ಶ್ರೀನಿ ಒಯ್ದಿದ್ದ. ಹಿಂದಿನ ವಾರವಷ್ಟೇ ಎರಡು ಸಾವಿರ ಸುರಿದು ಕಂಡೀಷನ್ ಮಾಡಿಸಿದ್ದುದು ವಾಪಸು ಬಂದಾಗ ಫುಯೆಲ್ ಟ್ಯಾಂಕ್ ಎಗ್ಗಿ ಹೋಗಿತ್ತು. ಕೇಳಿದ್ದಕ್ಕೆ ಅದು ಹಾಗೆಯೇ ಇತ್ತೆಂದು ಅವನು ವಾದಿಸಿದ್ದ. ಮನೆಯ ಮುಂದಿನ ಕಡಿದು ಗಲ್ಲಿಯೆಲ್ಲ ನೆರೆಯುವ ಹಾಗೆ ರಂಪವಾದಾಗ ಪೆರಿನಾಯಕಿ ವೆಂಕಿಯನ್ನು ಒತ್ತಾಯದಿಂದ ರಟ್ಟೆ ಹಿಡಿದು ಒಳಕ್ಕೆ ಕರೆದೊಯ್ದು ರಪರಪ ಜಡಿದಿದ್ದಳು. ‘ನೀನು ಚಿಕ್ಕವನಲ್ಲವೇನೋ? ಮನೆಗೆ ಅಂತ ನೀನೇನು ಮಾಡ್ತಾ ಇದ್ದೀ ಹೇಳು? ಅವನ ಗಾಡಿ ಪಂಚರ್ ಆಗಿತ್ತು ಅಂತ ನಿನ್ನದನ್ನು ಎತ್ತಿದ್ದಾನೆ. ಅದರಲ್ಲಿ ಏನು ತಪ್ಪು ಹೇಳು? ಚಿಕ್ಕವನು – ಅಡ್ಜಸ್ಟ್ ಮಾಡಿಕೋ ಬೇಕು!!’ ನಾರಯಣ ಪಿಳ್ಳೈ ಬೀದಿಯ ಕೊನೆಯಲ್ಲಿ ಎಡಕ್ಕೆ ತಿರುಗುವಾಗ ವೆಂಕಿ ಗೇರು ಬದಲಿಸುತ್ತಾ – ನಾನು ಚಿಕ್ಕವನು! – ಎಂದು ಜೋರಾಗಿ ಹೇಳಿಕೊಳ್ಳುತ್ತಾನೆ. ನೆನಪಿರುವಂದಿನಿಂದ ಐದು ನಿಮಿಷಗಳ ಹಿರೀತನವಿರುವ ತನ್ನದೇ ರೂಹುಗಳ ನಕಲಿನಂತಿರುವ ಇವನೊಟ್ಟಿಗೆ ಈ ಬದುಕೇ ಅಡ್ಜಸ್ಟ್ ಆಗಿಬಿಟ್ಟಿದೆ. ಐದು ನಿಮಿಷದ ತರುವಾಯದಲ್ಲಿ ತಾನು ಅವನಿಗಿಂತ ತುಸು ಬೆಳ್ಳಗೋ, ಇನ್ನಷ್ಟು ಕಪ್ಪಾಗಿಯೋ ಹುಟ್ಟಬಾರದಿತ್ತೆ? ಮುನ್ನೂರು ಸೆಕೆಂಡುಗಳ ವಾಯಿದೆಯಲ್ಲಿ ಎಷ್ಟೆಲ್ಲ ಪವಾಡಗಳು ನಡೆಯಬಹುದಂತೆ. . . ಮನೆಯಿಂದ ಮೇಯಿನ್ ರೋಡಿಗೆ ನಡೆಯಬಲ್ಲ, ದಿನಾಲೂ ಕಕ್ಕಸಿಗೆ ವ್ಯಯಿಸುವ ಗಡುವಷ್ಟರ ಆ ಕಾಲಮಾನದಲ್ಲಿ ಅವನಿಗೆ ತನಗಿಂತ ದೊಡ್ಡವನೆಂಬ ಅಹಂಭಾವ! ಅವನ ಪಿಳಿಪಿಳಿ, ಕೀರಲು, ಆಕಳಿಕೆ, ಉಸಿರು, ಎದೆ ಬಡಿತ, ಕೊನೆಗೆ ಮೀಸೆ ಚಿಗುರಿದಾಗಿನ ಮೊದಲ ಪುಳಕವೂ ತನಗಿಂತ ಐದು ನಿಮಿಷ ಮೊದಲಂತೆ. ಹಾಗಾಗಿಯೇ ಅವನು ನೋಡಲು ತನ್ನ ಹಾಗೆ ಅನ್ನುವುದಕ್ಕಿಂತ ತಾನು ಅವನ ಹಾಗಂತೆ. . . ಎಲ್ಲದರಲ್ಲೂ ಅವನು ಅಗ್ರ!! ಮತ್ತೊಂದು ತಿರುವಿನಲ್ಲಿ ವೇಗ ಹೆಚ್ಚಿಸುವಾಗ ಅಮ್ಮನ ಗರ್ಭದಲ್ಲಿರುವಾಗ ತನ್ನ ಕೈಯಲ್ಲಿ ಈ ಗೇರು ಎಕ್ಸೆಲರೇಟರ್ ಇರಬಾರದಿತ್ತೆ ಅನ್ನಿಸುತ್ತದೆ ವೆಂಕಿಗೆ.

ಕಮರ್ಷಿಯಲ್ ಸ್ಟ್ರೀಟಿನ ಒಮ್ಮುಖ ಹರಿವಿನಲ್ಲಿ ಎಡಕ್ಕೆ ಕವಲೊಡೆಯುವ ಮೂರನೆಯ ಓಣಿಯಲ್ಲಿ ಬೈಕಿಗೆ ಸ್ಟ್ಯಾಂಡು ಜಡಿದು ಲಿಯೋನಿಂದ ವಿಳಾಸ ತೆಗೆದುಕೊಂಡೇ ಪುನಃ ಹಚ್ಚೆಗಾಗಿ ಬರಬೇಕೆಂದುಕೊಂಡು ವೆಂಕಿ ನಿಲ್ಲುತ್ತಾನೆ. ಬೆನ್ಸನ್ ಟೌನಿನ ಬಾಡಿಗೆ ಮನೆಗೆ ಬಂದು ಇಂದಿಗೆ ಎರಡು ವಾರಗಳು ಕಳೆದಿವೆ. ವಾರದಿಂದ ಅಮ್ಮನಿಗೂ ಅವನ ಉಸಾಬರಿಯಿಲ್ಲ. ಇನ್ನು ಮುಂದಕ್ಕೆ ತನ್ನ ಕೆಲಸವಷ್ಟೇ ತನಗೆ ಎಲ್ಲ ಅನ್ನುವ ಹಾಗೆ ಇದ್ದುಬಿಟ್ಟಿದ್ದಾನೆ ಅವನು. ಹದಿನೆಂಟರ ಆ ಶನಿವಾರದ ಘಟನೆಯಂತೂ ಅವನಿಗೆ ಬದುಕಿನಲ್ಲಿ ಇದ್ದ ನಂಬಿಕೆಯನ್ನೂ, ಮನೆಯವರ ಮೇಲಿನ ವಾಂಛೆಯನ್ನೂ ಪೂರ್ತಾ ಬುಡ ಸಮೇತ ಕಿತ್ತೊಗೆದಿತ್ತು. ಐದು ನಿಮಿಷಗಳ ಹಿರೀಕನೆನಿಸಿರುವ ಅವನದೇ ಪಡಿಯಚ್ಚು ಅವನ ಮೇಲೆ ಎಂತಹ ಹಿರಿತನವನ್ನು ಜಡಿದಿತ್ತು ಅಂದರೆ ಅವನ ಇರವೇ ಘಾಸಿಗೊಂಡಿತ್ತು. ಆ ಘಾಸಿಯಲ್ಲಿ ಶ್ರೀನಿಯ ಹಿರಿತನ ಒತ್ತಿದ ಕುಟಿಲ ಮೊಹರು. ಅಂದು ವೆಂಕಿಯ ಪ್ರಪಂಚದ ಎಲ್ಲ ಹಿಸ್ಸೆಗಳು ಟೊಳ್ಳೆನಿಸಿದ್ದವು. ಹಾಗೂ ಹೀಗೂ ಗಟ್ಟಿ ಅಂತನಿಸಿದವೆಲ್ಲ ಮೋಸ ಅನ್ನಿಸಿತ್ತು.

ಹತ್ತು ನಿಮಿಷಗಳ ಬಳಿಕ ಮಗ್ಗುಲಿನ ಇಮಿಟೇಷನ್ ಜುಯೆಲ್ಲರಿ ಮಳಿಗೆಯೊಳಕ್ಕೆ ಮೆಲ್ಲನೆ ಬರುತ್ತಾನೆ. ಒಳಗೆ ಮೇಲಿನ ಮೆಜನೈನಿಗೆ ಮೆಟ್ಟಿಲು ಏರುವಾಗ ಎದುರಿನ ಕನ್ನಡಿಯಲ್ಲಿ ಫಕ್ಕನೆ ತನ್ನ ನೆರಳು ಕಂಡು ಅದು ಶ್ರೀನಿಯೇ ಎಂದು ಒಮ್ಮೆ ಹುಬ್ಬೇರಿಸಿ ಹಿಂದಕ್ಕೆ ಬಂದು ಮತ್ತೆ ಅಭ್ಯಾಸ ಮಾಡಿದ ಹೊಸ ಭಂಗಿ ಹೊತ್ತ ನಡಿಗೆಯಲ್ಲಿ ಮೇಲೇರುತ್ತಾನೆ. ಕನ್ನಡಿಯೊಳಕ್ಕೆ ಇನ್ನೇನು ಹುದುಗಿಯೇ ಬಿಡಬಹುದು ಎನ್ನುವಷ್ಟು ಹತ್ತಿರವಾದಾಗ ಹುಬ್ಬೇರಿಸಿ ಕೊಂಕನೆ ನಕ್ಕು – ‘Iಣ is me – ಣhe oಟಿe ಚಿಟಿಜ oಟಿಟಥಿ – ಗಿeಟಿಞಚಿಣesh ಗಿಚಿiಞuಟಿಣಚಿm’ ಗಟ್ಟಿಯಾಗಿ ಹೇಳಿಕೊಂಡು ಲ್ಯಾಂಡಿಂಗ್‌ನಲ್ಲಿ ತಿರುವಿ ಮುನ್ನಡೆಯುವಾಗ ಗಿeಟಿಞಥಿ, ಥಿou ಚಿಡಿe ಜiಜಿಜಿeಡಿeಟಿಣ ಚಿಟಿಜ uಟಿique!! ಎಂದು ಸಾರುವಂತೆ ಎದೆ ಸೆಟೆಸುತ್ತಾನೆ. ಎದುರಿನ ಗಾಜುಗದ ಜೀಕುತ್ತ ಆಚೆ ಬಂದ ಸಪೂರದ ಹುಡುಗಿ ಊi Shಡಿeeಟಿi! ಊoತಿ ಛಿome heಡಿe?’ ಎಂದು ತೊನೆಯುತ್ತಿದ್ದಂತೆ ಅವನ ಹುಮ್ಮಸ್ಸೆಲ್ಲ ಠುಸ್ಸೆಂದು ಬಿಡುತ್ತದೆ. ತಾನು ಅವನಲ್ಲವೆಂದು ಹೇಳಿಕೊಳ್ಳುವ ಮೊದಲೇ ‘ಊoತಿ ಛಿome ಚಿಟoಟಿe? ಶರೋಣ್ ಎಲ್ಲಿ?’ ಎಂದು ಮತ್ತೊಂದು ಮದ್ದೆಸಗುತ್ತಾಳೆ. ವೆಂಕಿಗೆ ಅದೇನನ್ನಿಸಿತೋ ಅವಳತ್ತ ಮುಸುಡಿ ಕೊಂಕಿಸಿ ಕದ ಜೀಕಿ ಬೆಳ್ಳಿಯ ಸ್ಟಡ್‌ಗಳಿರುವ ವಿಭಾಗಕ್ಕೆ ಬರುತ್ತಾನೆ. ಅಯ್ಯೋ ಬದುಕೆ! ಈ ಸಾಮ್ಯದ ವಿಡಂಬನೆಗೂ ಒಂದು ಮಿತಿ ಬೇಡವೆ? ವೆಂಕಿಗೆ ಈಗ ತನ್ನ ರೂಪದ ಮೇಲೆ ಇನ್ನಷ್ಟು ಹೆಚ್ಚು ಮುನಿಸು ಬರುತ್ತದೆ. ಶರೋಣ್‌ಳ ಹೆಸರನ್ನು ಕೇಳಿದ ಕೂಡಲೇ ಮುನಿಸು ಕೆಂಡದಲ್ಲಿ ಹೊರಳಿ ಪುಟಗೊಳ್ಳುತ್ತದೆ. ನೂರಾರು ಬೆಳ್ಳಿಯ ಸುತ್ತುಗಳಿರುವ ಕರ್ಣಕುಂಡಲಗಳ ಷೋ-ವಿಂಡೋದ ಹಿನ್ನೆಲೆಯಲ್ಲಿ ಅವನ ಮುಖದ ಕೋಪ ತೋರಿಕೊಳ್ಳುತ್ತದೆ. ಅಲ್ಲೆಲ್ಲ ಒಂದು ನಮೂನೆ ಕೆಂಡದ ನಿಗಿನಿಗಿ.

ಸೇಲ್ಸ್‌ಮನ್ ಗಾಜಿನ ಮೇಲ್ಮೈಯುಳ್ಳ ಮೇಜಿನಿಂದ ಕಿವಿಯ ನಕ್ಷತ್ರಗಳನ್ನು ತೆಗೆಯುವಾಗ ವೆಂಕಿಯಲ್ಲಿ ಒಂದು ಮಾದರಿಯ ನಿರ್ಭಾವುಕತೆ ಮಡುಗಟ್ಟಿದೆ. ಉದಾಸದಿಂದಲೇ ಆ ಟ್ರೇಯಿಂದ ಕೆಲವನ್ನು ಹೆಕ್ಕಿ ಕಿವಿಯಲ್ಲಿ ತೊಟ್ಟು ಕನ್ನಡಿಗೆ ಮುಖವೊಡ್ಡುತ್ತಾನೆ. ಕನ್ನಡಿಯಲ್ಲಿ ಅವನ ಮುಖವನ್ನು ಹಾಯುವಂತೆ ಅವಳು ಈಸಿದ್ದಾಳೆ. ಕೆನ್ನೆ ಗಲ್ಲಗಳಲ್ಲಿ ಬೆರಳ ಮೊನೆಯಾಡಿಸುತ್ತಾಳೆ. ಮೂರು ವರ್ಷಗಳಿಂದ ತನಗೆ ದುಂಬಾಲು ಬಿದ್ದು ಸ್ನೇಹದ ನೆವದಲ್ಲಿ ತನ್ನೊಟ್ಟಿಗೇ ಏನೆಲ್ಲ ನಡೆಸಿದವಳು! ಅವನ ಕಣ್ಣುಗಳು ತದೇಕಚಿತ್ತಗೊಂಡು ಕಿವಿ ಕಿಡಿಯಲ್ಲಿ ನೆಡುವಾಗ ಮಂಪರುಗೊಳ್ಳುವಂತೆ ಉಕ್ಕಿವೆ. ಒಮ್ಮೆಲೇ ಕಿವಿಯಿಂದ ಕಿಡಿ ತೆಗೆದು ಸೇಲ್ಸ್‌ಮನ್‌ಗೆ ವಾಪಸಿತ್ತು – ‘ಖಿhಚಿಟಿಞ ಥಿou. I ತಿiಟಟ ರಿusಣ be bಚಿಛಿಞ..’ – ಎಂದು ಮಳಿಗೆಯಿಂದ ಬೀದಿಗೆ ಬರುತ್ತಾನೆ. ಕ್ರಿಸ್‌ಮಸ್ ಸಂದರ್ಭ ಬೀದಿಗೆ ಝಗಮಗ ಜಿಗಿಜಿಗಿ ಆವಾಹಿಸಿದಂತಿದೆ. ನಕ್ಷತ್ರ ದೀಪಗಳು, ಸೀರಿಯಲ್ ಲೈಟುಗಳು, ಮೆರ್ರಿ ಕ್ರಿಸ್ಮಸ್ ಹೋರ್ಡಿಂಗುಗಳು ಗಜಿಬಿಜಿಯ ಘಟಕಗಳಾಗಿವೆ. ಅದೋ – ಆ ಮೂಲೆಯ ಎತ್ತರದ ನೆತ್ತಿಯಲ್ಲಿ ಸಾಂತಾನ ಚಿತ್ರದ ಮೇಲೆ ಬೆಳ್ಳನೆ ಬೆಳಕು. ಅಲ್ಲಿಯೇ ನಿಂತು ಕಣ್ಣು ಮುಚ್ಚಿ ಒಮ್ಮೆ, ಆಕಾಶದ ಗೋಣಿನಲ್ಲೊಮ್ಮೆ ಮೂಕವಾಗಿ ಮೊರೆಯಿಡುತ್ತಾನೆ.

ಅವಳು ಕ್ರಿಸ್‌ಮಸ್‌ಗೆಂದು ಊರಿಗೆ ಹೋಗುವ ಮೊದಲಿನ ಎರಡು ದಿನ ಅವನೊಟ್ಟಿಗೆಂದು ತಿಂಗಳುಗಳ ಹಿಂದೆಯೇ ಯೋಜನೆಯಾಗಿತ್ತು. ಐeಣ us go ouಣ ಗಿeಟಿಞಥಿ ಚಿಟಿಜ shಚಿಡಿe some iಟಿಣimಚಿಣe ಣime!! ಅದು ನಿನಗೆ ಕ್ರಿಸ್‌ಮಸ್ ಗಿಫ್ಟ್!’ – ಎಂದು ಆ ಸಂಜೆ ಕೆರೆಯಂಚಿನಿಂದ ಹಾಯಿದೋಣಿಯವರೆಗೆ ಮಾತು ಕಟ್ಟಿದ್ದಳು. ಸಂಜೆ ಹಾಸ್ಟೆಲ್ ಬಳಿ ಬೈಕಿನಿಂದ ಇಳಿಯುವಾಗ ಮುಂಗೈ ಮುದ್ದಿಸಿ ಕಣ್ಣು ಮಿಟುಕಿಸಿದ್ದಳು. ‘ಈ ವಾರ ನನ್ನ ಪರೀಕ್ಷೆ ಮುಗೀತಿದ್ದ ಹಾಗೆ ಕ್ರಿಸ್ಮಸ್ ರಜೆ. ನೆನಪಿರಲಿ!!’ ವೆಂಕಿ ಕಣ್ಣಿನಿಂದ ತೊಟ್ಟಿಕ್ಕಿದ ಬಿಂದುವನ್ನು ಅಂಗೈಯಲ್ಲಿ ಹಿಡಿದು ನಿಟ್ಟಿಸುತ್ತಾನೆ. ಅದರಲ್ಲಿ ತುಳುಕಿದ ಬಣ್ಣ ಬಣ್ಣದ ಬೆಳಕು ನಿಯಾನಿನದೆ ಅಥವಾ ಸೋಡಿಯಮ್ಮಿನ ಕಾಮಾಲೆ ಕಣ್ಣಿನದೆ? ಥತ್!! ಯಾವುದಾದರೇನು? ಕಳೆದ ಶನಿವಾರವ – ಹದಿನೆಂಟರಂದು ಸಂಪಂಗಿ ಯಾವುದಕ್ಕೋ ಫೋನು ಮಾಡಿದ ದೇಶಾವರಿಯಲ್ಲಿ ಶ್ರೀನಿ ಎರಡು ದಿನಗಳಿಂದ ಮನೆಯಲ್ಲಿಲ್ಲವೆಂಬ ಸುದ್ದಿ ಹೇಳಿದ್ದ. ಅದರ ಹಿಂದಿನ ಮೂರು ದಿನಗಳಿಂದ ಅವಳ ಮೊಬೈಲಿಗೆ ಕಾಯುತ್ತಿದ್ದವನು ಅವಳು ಮಾತಿಗೆ ಸಿಗಲಿಲ್ಲವೆಂದು ಒಮ್ಮೆ ಅವಳ ಹಾಸ್ಟೆಲ್‌ಗೆ ಹೋಗಿ ವೆಂಕಿ ವಿಚಾರಿಸಿದ್ದ. ‘ಇಲ್ಲ ವೆಂಕಿ! ನಾನು ಪರೀಕ್ಷೆ ಮುಗಿದ ಕೂಡಲೆ ಊರಿಗೆ ಹೋಗಬೇಕು. ಮಮ್ಮಿ ಕೂಡಲೆ ಬರಹೇಳಿದ್ದಾರೆ.’ – ಅನ್ನುವಾಗಲೇ ಅವನನ್ನು ಏನೋ ಶಂಕೆ ತಡಕಿತ್ತು. ಸಂಪಂಗಿಯಿಂದ ಶ್ರೀನಿಯ ಸುದ್ದಿ ತಿಳಿದದ್ದೇ ವೆಂಕಿ ಇಬ್ಬರ ಮೊಬೈಲುಗಳಿಗೆ ಫೋನು ಹಚ್ಚಿದ್ದ. ಒಮ್ಮೆಯೂ ಇಬ್ಬರಿಂದಲೂ ಉತ್ತರವಿಲ್ಲ. ಏರ್‌ಟೆಲ್‌ನಲ್ಲಿರುವ ಪರಿಚಯದ ಓರಗೆಯವನೊಬ್ಬನಿಗೆ ಇಬ್ಬರ ನಂಬರುಗಳನ್ನು ಕೊಟ್ಟು ಅವರೆಲ್ಲಿರಬಹುದೆಂದು ವಿಚಾರಿಸಿಕೊಂಡ. ಉತ್ತರವಾಗಿ ಮಡಿಕೇರಿಯ ರಾಜಾಸೀಟ್ ಮೇಲಿರುವ ಏರ್‌ಟೆಲ್ ಟವರಿನ ಸುಳಿವು ಸಿಕ್ಕಿತ್ತು. ಕಣ್ಣುಗಳೇ ತೂಗದ ಆ ರಾತ್ರಿ ಘೋರವೆನಿಸಿತ್ತು. ಕತ್ತಲ ನೆರಳಿನಲ್ಲೂ ಅವಿಶ್ವಾಸದ ಹೊಂಚಿತ್ತು. ಹನ್ನೆರಡರ ಸುಮಾರಿಗೆ ಅಮ್ಮನಿಗೆ ಫೋನಿಸಿದಾಗ ಧ್ವನಿ ತೂಗುತ್ತಿತ್ತು. ಪೆರಿನಾಯಕಿಗೆ ಮಗ ಕಂಡಾಪಟ್ಟೆ ಇಳಿಸಿದ್ದರ ಮತ್ತು ಪರಿವೆಗೆ ಬಂದಿರಲಿಲ್ಲ. ‘ಅವನೆಲ್ಲಿದ್ದರೆ ನಿನಗೇನೋ? ಅವನು ಆ ಮಂಗಳೂರು ಹುಡುಗಿ ಜೊತೆ ಹೋಗಿದ್ದರೂ ತಪ್ಪಿಲ್ಲ ಬಿಡು. ಎಷ್ಟಾದರೂ ನಿನಗಿಂತ ದೊಡ್ಡವನು!! ನನಗೂ ಆ ಶರಣ್ಣು ಕ್ರಿಸ್ತೀನಾದರೂ ಶ್ರೀನಿಗೆ ಸರಿ ಅನ್ನಿಸುತ್ತೆ!!’ ಅಂದಿನ ಮಂಪರು ಮರುದಿನ ಜಿಮ್ಮಿನ ಕನ್ನಡಿಗಳಲ್ಲೂ ಮಬ್ಬಡರಿಸಿತ್ತು. ಸಂಜೆಯ ವೇಳೆಗೆ ಎಂಥದೋ ಖಚಿತ ನಿಲುವು ತಳೆದವನ ಹಾಗೆ ಮನಸ್ಸು ನಿಲೆಗೊಂಡಿತ್ತು. ಬಯೋಟೆಕ್ನಾಲಜಿ ಜೀವದ ನಕಲನ್ನು ಮಕ್ಕಿ ಕಾ ಮಕ್ಕಿ ತೆಗೆಯುವುದಾದರೆ ತಾನು ಅದೇನೂ ಇಲ್ಲದೆ ತನ್ನ ನಕಲಿತನವನ್ನು ಕಳಚಿ ಡೀ-ಕ್ಲೋನ್ – ಜಿeಜqಣue ಆಗಬೇಕು. ಈ ಒಂದು ನಿರ್ಧಾರದಿಂದಷ್ಟೇ ಅವನಿಗೆ ವಯಸ್ಸು ಐದು ನಿಮಿಷ ಹೆಚ್ಚಿದಂತಾಗಿ ಮನಸ್ಸು ಗಟ್ಟಿಗೊಂಡಿತ್ತು.

ಸಾಂತಾನನ್ನು ನೋಡುತ್ತ ಎಷ್ಟೋ ಹೊತ್ತು ನಿಂತ ಕೊನೆಗೆ ವಾಸ್ತವಕ್ಕಿಳಿದು ವೆಂಕಿ ಹೆಜ್ಜೆಗಳನ್ನು ಭಾರದಿಂದ ತೂಗುತ್ತ ಬೈಕಿನತ್ತ ಬರುತ್ತಾನೆ. ತನಗೆ ನೆನಪಿರುವ ಹಾಗೆ ಬೆಳವಣಿಗೆಯ ಹೆಸರಿನಲ್ಲಿ ಹತ್ತು ವರ್ಷಗಳಲ್ಲಿ ಹಾಗೆ ತನ್ನೊಳಗೆ ಗಿಲೀಟಿನ ಜಡ್ಡು ಕೂಡಿಕೊಳ್ಳುತ್ತಿರುವ ಊರು ತನ್ನ ಮೇಲೂ ಅದನ್ನೇ ಹೇರಿಬಿಟ್ಟಿದೆ ಅನಿಸುತ್ತದೆ. ಈ ಥಳುಕಿನ ಅಡವಿಯಲ್ಲಿ ಎಲ್ಲರೂ ಗಿಲೀಟಿನ ಹೂವುಗಳೇ ಸರಿ. . . ಇದ್ದಕ್ಕಿದ್ದಂತೆ ಅವನಲ್ಲಿ ಎಂಥದೋ ಸಾಕ್ಷಾತ್ಕಾರವಾದ ಅನುಭವವಾಗಿ ಎದೆ ಹಗುರವೆನಿಸುತ್ತದೆ. ಬೈಕು ಕಿಕ್ಕಿಸಿ ಆ ಜಂಗುಳಿಯನ್ನು ದಾಟುತ್ತಿರುವಾಗ ಅಲ್ಲೇ ವುಡೀಸ್‌ನ ಎದುರು ಸಂಪಂಗಿ ಇಬ್ಬರು ಹುಡುಗಿರೊಟ್ಟಿಗೆ ನಡುವೆ ಕೈ ಕೈ ಹಿಡಿದು ನಡೆಯುತ್ತಿರುವುದು ಕಾಣುತ್ತದೆ. ಓಹೋಹೋ!! – ಅಂತ ನಿರ್ವಿಣ್ಣವಿದ್ದರೂ ನಿರ್ಲಿಪ್ತತೆ ಕೆನೆಯುತ್ತದೆ. ತಾನಿನ್ನು ಬದುಕಿನಲ್ಲಿ ಪ್ರತಿ ಐದು ನಿಮಿಷವನ್ನು ಉಳಿದವರಿಗಿಂತ ಮೊದಲು ಕ್ರಮಿಸಬೇಕೆಂಬ ಅದಮ್ಯ ಒತ್ತಾಸೆ, ಉತ್ಸಾಹದಿಂದ ಎಕ್ಸೆಲರೇಟರ್ ತಿರುವಿ ಗೇರು ಬದಲಿಸುತ್ತಾನೆ. ಎಂಥದೋ ವೇಗೋತ್ಕರ್ಷವನ್ನು ಸ್ಪ್ಲೆಂಡರಿನ ಗಾಲಿಗಳು ಗಿರಿಗಿರಿಸುತ್ತವೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.