ಇನ್ನೂ ಒಂದು

ತಟಕ್ಕನೆ ಯಾವುದೇ ಕೃತಿಯನ್ನಾಗಲಿ, ಬರವಣಿಗೆಯನ್ನಾಗಲಿ ಒಪ್ಪಿಕೊಳ್ಳದ ಮೊಂಡಾಟದ ಹಠವಾದಿ ಓದುಗ ನನ್ನಲ್ಲಿ ಸದಾ ಜಾಗರೂಕನಾಗಿರುತ್ತಾನೆ. ಸುತ್ತಮುತ್ತಲಿನವರಿಗೆಲ್ಲ ಒಮ್ಮೊಮ್ಮೆ ಕಿರಿಕಿರಿಯೆನ್ನಿಸಬಹುದಾದಷ್ಟು – ಕೃತಿಯೊಂದಿಗೆ, ಪಾತ್ರಗಳೊಂದಿಗೆ, ವಿವರಗಳೊಂದಿಗೆ ಹೊಡೆದಾಡುತ್ತಲೇ, ಜಗಳ ಮಾಡುತ್ತಲೇ ಸಾಗುತ್ತ ಹೋಗುವ ಅವನ ಎಲ್ಲ ಅಭಿಪ್ರಾಯಗಳನ್ನು ಬದಿಗೊತ್ತಿ ವಿವೇಕ್ ಶಾನಭಾಗರ ‘ಇನ್ನೂ ಒಂದು’ ಕಾದಂಬರಿಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಕೃತಿಯ ಲೋಪಗಳನ್ನು ತೋರಿಸುವ ವಿಮರ್ಶಕ ಪ್ರವೃತ್ತಿ ನನ್ನದಲ್ಲ, ಓದುಗನಾಗಿ ಈ ಕಾದಂಬರಿ ಎತ್ತಿರುವ ಅನೇಕ ಮಹತ್ವದ ಪ್ರಶ್ನೆಗಳನ್ನು ಗುರುತಿಸುವ ಮೂಲಕ ಈ ಕೃತಿ ಒಡ್ದುವ ಸಂವಾದಕ್ಕೆ ಕನ್ನಡಸಾಹಿತ್ಯ.ಕಾಂ ತೆರೆದುಕೊಳ್ಳಲಿ ಎಂಬ ಸದುದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ಅನಂತಮೂರ್ತಿಯವರ ‘ದಿವ್ಯ’ ದಂತೆಯೆ ಈ ಕಾದಂಬರಿಯನ್ನೂ ಸಂಕ್ಷಿಪ್ತಗೊಳಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಕೃತಿಯ ಇಡೀ ಪಠ್ಯವನ್ನು ನೀಡಿ ಮಾರಾಟಕ್ಕೆ ಧಕ್ಕೆ ತರಬಾರದೆಂಬದು ಎಂಬ ನಂಬಿಕೆಯನ್ನು ಪ್ರತಿಪಾದಿಸುತ್ತ ನೂರ ಹನ್ನೊಂದು ಪುಟದ ಈ ಕೃತಿಯನ್ನು ಪ್ರಕಟಣೆ: ಅಕ್ಷರ ಪ್ರಕಾಶನ, (ಸಾಗರ) ,ಕರ್ನಾಟಕ. ಬೆಲೆ ರೂ: ೫೦.೦೦. ಅನೇಕ ಮಹತ್ವದ ಪ್ರಶ್ನೆಗಳನ್ನು ಎತ್ತಿ ತಳಮಳಕ್ಕೀಡುಮಾಡಿಬಿಡುವ ಈ ಕೃತಿಯನ್ನು ಓದಿ ಪ್ರತಿಕ್ರಿಯಿಸಿದರೆ, ಉತ್ತಮ ಚರ್ಚೆಯೊಂದಕ್ಕೆ ದಾರಿಯಾಗುತ್ತದೆ ಎಂಬ ವಿಶ್ವಾಸವಿದೆ.


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.