ಅಂತರ್ಜಾಲದಲ್ಲಿ ಕನ್ನಡಕ್ಕಿರುವ ಸಂಕಟ

ಜಗತ್ತಿನ ನಕಾಶೆಯಲ್ಲಿ ಬೆಂಗಳೂರು ಇಂದು ಮಾಹಿತಿ ತಂತ್ರಜ್ಞಾನದ ಗಮನ ಸೆಳೆಯುತ್ತಿದೆ. ಕನ್ನಡಿಗರೇ ಆದ ನಾರಾಯಣಮೂರ್ತಿಗಳಿದ್ದಾರೆ, ಜಗದೀಶ್ ಇದ್ದಾರೆ, ಗುರುರಾಜ್‌ರವರಿದ್ದಾರೆ – ಬಹುಶಃ ಈ ಹೆಸರಿನ ಪಟ್ಟಿಗೆ ಇನ್ನೂ ಅನೇಕ ಗಣ್ಯರನ್ನು ಹುಡುಕುವುದು ಸುಲಭವಾದೀತು. ಆದರೆ ಅಂತರ್ಜಾಲದಲ್ಲಿ ಕನ್ನಡ? ಹುಡುಕಿ ನೋಡಿದರೆ ದೊಡ್ಡ ಸಂಸ್ಥೆಗಳ ಬಂಡವಾಳದ ಬಲವಿರುವ ಒಂದೆರಡು ತಾಣಗಳನ್ನು ಬಿಟ್ಟರೆ ಅಲ್ಲಲ್ಲಿ ವೈಯಕ್ತಿಕ ಅರೆಬರೆ ಪ್ರಯತ್ನಗಳಷ್ಟೆ ಕಾಣುವುದು. ಈ ಅರೆಬರೆ ಪ್ರಯತ್ನಗಳೂ ಸಹ ಎಷ್ಟು ಗಂಭೀರ ಎಂದು ಹೇಳುವುದು ಕಷ್ಟ. ಎಷ್ಟು ಗಟ್ಟಿ ಎಂದು ಹೇಳುವುದೂ ಸಹ ಅಷ್ಟೆ ಕಷ್ಟ . ಏಕೆ ಹೀಗೆ? ಅಂತರ್ಜಾಲದಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲವೆ? ವೈಯಕ್ತಿಕ ಪ್ರಯತ್ನಗಳಿಗೆ ಮಿತಿಗಳಿರುತ್ತವೆ.

ಅಂತರ್ಜಾಲದ ಪುಟಗಳನ್ನು ತೆಗೆಯುತ್ತಾ ಹೋದರೆ ಕನ್ನಡವೂ ಕಾಣಿಸಿಕೊಳ್ಳುತ್ತದೆ. ಇಲ್ಲವೆಂದೇನೂ ಇಲ್ಲ. ಬಹುಶಃ ಕೈಬೇರೆಳೆಣಿಕೆಯಷ್ಟಿರುವ ಈ ಪುಟಗಳು ಕನ್ನಡವನ್ನು ಅಂತರ್ಜಾಲದಲ್ಲಿ ಕನ್ನಡವನ್ನು ಪ್ರತಿನಿಧಿಸುವಷ್ಟು ಶಕ್ತಿ ಹೊಂದಿದೆಯೆ? ಪ್ರಮುಖ ಪತ್ರಿಕೆಗಳ ಒಂದೆರಡು ಪ್ರಯತ್ನಗಳನ್ನು ಬಿಟ್ಟರೆ ಉಳಿದಂತೆ ಬಿಡಿ ಬಿಡಿಯಾಗಿ ಬಿಡಿ ಬಿಡಿ ವ್ಯಕ್ತಿಗಳ ಪ್ರಯತ್ನದಲ್ಲಿ ಕನ್ನಡ ತೀರಾ ಜಾಳು ಜಾಳಾದ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.

ಇದರ ಜೊತೆಗೆ ಕನ್ನಡ ಪುಟಗಳನ್ನು ಅಂತರ್ಜಾಲಕ್ಕೆ ತರಲು ಅನೇಕ ತಾಂತ್ರಿಕ ಅಡಚಣೆಗಳು. ಡೈನಾಮಿಕ್ ಫಾಂಟ್ಸ್‌ಗಳನ್ನು ಸಪೋರ್ಟ್ ಮಾಡುವ ನೆಟ್‌ಸ್ಕೇಪ್‌ನಲ್ಲಿ ಕನ್ನಡ ಮುದ್ದಾದ ಅಕ್ಷರಗಳಲ್ಲಿ ಕಾಣಿಸಿಕೊಂಡರೆ ಅದೇ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಅಕ್ಷರಗಳು-ಪದಗಳು=ಸಾಲುಗಳು ಒಡೆದು ಓದಲು ತ್ರಾಸಗುತ್ತದೆ. ಅಲೈನ್‌ಮೆಂಟ್ ಬಳಸದ ಹೋದರೆ ಕನ್ನಡ ಸಾಲುಗಳು ಒಂದೇ ಸಮನೆ ಜಾಗವನ್ನು ಬಳಸದೆ ಅದು ತೀರಾ ಜಾಳ ಜಾಳಾಗಿ ಕಾಣಿಸಿಕೊಳ್ಳುತ್ತದೆ.

ಬರಹ ಒಂದು ಬಿಟ್ಟರೆ ಉಳಿದ ತಂತ್ರಾಂಶಗಳು ಕೈಗೆಟುಕುವ ಬೆಲೆಯಲ್ಲಿ ಇಲ್ಲ. ಸಿಡ್ಯಾಕ್‌ನವರ , ಅದೂ ವಿ‌ಎಸ್‌ಎನ್‌ಎಲ್ ಸಂಪರ್ಕವಿದ್ದರೆ ರೂ. ೫೦೦ ರಲ್ಲಿ ಸಿಗುತ್ತದೆ. ಫಾಂಟ್ಸ್‌ಗಳಲ್ಲಿ ವೈವಿಧ್ಯವಿಲ್ಲ.

ಈ ಎಲ್ಲದರ ಮಧ್ಯೆ ನಾವು ಕನ್ನಡಸಾಹಿತ್ಯ.ಕಾಂ ತರುತ್ತಿದ್ದೇವೆ. ನಮ್ಮ ಕಷ್ಟಗಳು ಇನ್ನೂ ಇವೆ. ಅವುಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ಶೇಖರ್‌ಪೂರ್ಣ
ಎಂ.ಆರ್.ರಕ್ಷಿತ್.
೨೯-೦೩-೨೦೦೧

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.