ಶಿಕಾರಿ – ೧

ಅಧ್ಯಾಯ ಒಂದು :

ಹೇಳದೇ ಕೇಳದೇ ಎಂಬಂತೆ ಉದ್ಭವಿಸಿ, ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತ ಹೋದಹಾಗೆ ನಾಗಪ್ಪನಿಗೆ ತಾನು ಬಹಳ ವರ್ಷಗಳ ಹಿಂದೆ ಓದಿದ ಕಾಫ್ಕಾನ ‘ಟ್ರಾಯಲ್’ ಕಾದಂಬರಿಯ ನಾಯಕ ‘ಕೇ’ ನೆನಪಿಗೆ ಬರಹತ್ತಿದ : ಅವನ ಹಾಗೇ ನನ್ನ ಬಗೆಗೂ ಯಾರೋ ಚಾಡಿ ಹೇಳುತ್ತಿರಬೇಕು. ಇಲ್ಲವಾದರೆ, ಇದ್ದಕ್ಕಿದ್ದಂತೆ ನಿನ್ನೆ ಬೆಳಿಗ್ಗೆ, ಆಫೀಸಿಗೆ ಹೋಗುವ ತಯಾರಿ ಮಾಡುತ್ತಿದ್ದ ಹೊತ್ತಿನಲ್ಲೇ ಕಂಪನಿಯ ಪರ್ಸೊನೆಲ್ ಆಂಡ್ ಎಡ್ಮಿನಿಸ್ಟ್ರೇಶನ್-ಮ್ಯಾನೇಜರರಿಂದ ಆ ದುಷ್ಟ ಆದೇಶ ಬರುತ್ತಿರಲಿಲ್ಲವೇನೋ ಎಂದೆನ್ನಿಸಿದಾಗ ಸಣ್ಣಗೆ ನಡುಗಿದ. ಒಂದು ಗಂಭೀರ ಆಪಾದನೆಯ ಕಾರಣದಿಂದ ನಿಮ್ಮನ್ನು ಕೂಡಲೇ ಕೆಲಸದಿಂದ ಸಸ್ಪೆಂಡ್ ಮಾಡಬೇಕಾಗಿ ಬಂದಿದೆ. ಯಾಕೆ ಎನ್ನುವುದು ಆದಷ್ಟು ಬೇಗ ತಿಳಿಸುತ್ತೇವೆ. ಆವರೆಗೆ ಆಫೀಸಿಗೆ ಬರಕೂಡದು ಎನ್ನುವುದು ಆದೇಶದ ಮಜಕೂರಾಗಿತ್ತು. ಜತೆಗೆ ಒಂದು ಸಲಹೆ ಕೂಡ : ಆರೋಪ ಸುಳ್ಳಾದ ಪಕ್ಷದಲ್ಲಿ ನಿಮಗೆ ಯಾವುದೇ ರೀತಿಯಿಂದ ಹಾನಿಯಾಗಬಾರದು ಎಂಬ ದೃಷ್ಟಿಯಿಂದ ಕೂಡಲೇ ಒಂದು ತಿಂಗಳ ರಜೆಯ ಬಗ್ಗೆ ಅರ್ಜಿ ಮಾಡುವುದು ಒಳ್ಳೆಯದು.
uಟಿಜeಜಿiಟಿeಜ‌ಅರ್ಜಿಯನ್ನೇನೋ ಕಳಿಸಿದ್ದ : ಇದ್ದಕ್ಕಿದ್ದ ಹಾಗೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ತಾನು ಮನೆಯಲ್ಲಿ ಇರಬೇಕಾಗಿ ಬಂದಿದ್ದರ ಹಿಂದಿನ ರಹಸ್ಯವನ್ನು ಕಾಪಾಡಿಕೊಳ್ಳುವ ಬೇರೆ ಉಪಾಯ ತಕ್ಷಣ ಹೊಳೆಯದೆ ಇದ್ದುದರಿಂದ. ಆದರೆ ತನಗೆ ಬೇಡವಾದ ರಜೆಗೆ ಕಾರಣವಾದದ್ದರ ಬಗ್ಗೆ ಎಷ್ಟೆಲ್ಲ ರೀತಿಯಿಂದ ವಿಚಾರಮಾಡಿ ತಲೆ ಕೆಡಿಸಿಕೊಂಡರೂ ಯಾವುದೂ ಬಗೆಹರಿಯಲಿಲ್ಲ. ಈ ವಿಪತ್ತು ಎರಗಿದ್ದು ತನ್ನ ಮೇಲೇ ತಾನೆ ಎನ್ನುವುದರ ಬಗ್ಗೆ ಕೂಡ ಕೂಡಲೇ ವಿಶ್ವಾಸ ಮೂಡಲಿಲ್ಲ. ಯಾಕೆಂದರೆ, ಇನ್ನು ಒಂದೆರಡು ತಿಂಗಳಲ್ಲಷ್ಟೇ, ಹೆಚ್ಚಿನ ತರಬೇತಿಗಾಗಿ ಅಮೆರಿಕೆಗೆ ಹೋಗುವ ಅವನ ಇಷ್ಟು ವರ್ಷಗಳ ಕನಸು ನಿಜವಾಗುವ ಹವಣಿಕೆಯಲ್ಲಿತ್ತು. ಅವನು ಸದ್ಯ ಬಹಳ ಖುಷಿಯಿಂದ ತೊಡಗಿಸಿಕೊಂಡದ್ದೇ ಈ ಪ್ರಯಾಣದ ಸಿದ್ಧತೆಯಲ್ಲಾಗಿತ್ತು. ತನ್ನ ಪ್ರಯಾಣದ ಸಿದ್ಧತೆಯೇ ಈ ಆಪತ್ತಿನ ಕಾರಣವಾಗಿರಲಿಕ್ಕಿಲ್ಲ ತಾನೇ ಎಂದು ಥಟ್ಟನೆ ಹೊಳೆದ ಒಂದು ವಿಚಾರ ಎಡೆಮಾಡಿಕೊಟ್ಟ ಅನುಮಾನ, ಹೊತ್ತು ಹೋದ ಹಾಗೆ ಗಟ್ಟಿಯಾಗಹತ್ತಿತು. ಕೊನೆಗೂ ಫಿರೋಜ್ ತನ್ನ ಬಗೆಗಿನ ವೈರವನ್ನು ಬಿಟ್ಟುಕೊಟ್ಟಿಲ್ಲ ಹಾಗಾದರೆ : ಧೂರ್ತ ರಾಜಕಾರಣಿಯಾದ ಈ ದುಷ್ಟ ಒಂದೂ ಮಗನೇ ಹೂಡಿದ ಒಳಸಂಚಿನ ಅಂಗವಿದು. ಆರೋಪವಾದರೂ ಏನು ಎನ್ನುವದು ಗೊತ್ತಾದರೆ ಎಲ್ಲವೂ ಸ್ಪಷ್ಟವಾಗಬಹುದಿತ್ತು. ಆದರೆ ಅದು ಗೊತ್ತಾಗಲು ಪರ್ಸೊನೆಲ್ ಮ್ಯಾನೇಜರರು ಕಳಿಸುತ್ತೇನೆಂದ ಪತ್ರದ ದಾರಿಯನ್ನು ಕಾಯುವುದು ಬಿಟ್ಟು ಬೇರೆ ಗತಿಯಿರಲಿಲ್ಲ. ಆದರೆ ಕಾಯುವದೇ ಅಸಾಧ್ಯವಾದಾಗ ನಾಗಪ್ಪನಿಗೆ ಯಾವುದೋ ಸೈಕಾಲೋಜೀ ಪುಸ್ತಕವೊಂದರಲ್ಲಿ ಓದಿದ್ದು ನೆನಪಾಗಹತ್ತಿತು : ಔಟಿe oಜಿ ಣhe gಡಿeಚಿಣesಣ ಠಿಡಿobಟems oಜಿ ಣhe humಚಿಟಿ miಟಿಜ is ಣhe sಣಡಿuಛಿಣuಡಿiಟಿg oಜಿ ಣime. ಆಫೀಸಿನ ಕೆಲಸದಲ್ಲಿ ತೊಡಗಿದ್ದಾಗ ಕಾಡಿರದ ಪ್ರಶ್ನೆ ಈಗ ಕೆಲಸವಿಲ್ಲದೇ ರಿಕಾಮಿ ಕುಳಿತವನ ಅರಿವಿನಲ್ಲಿ ಹಠಾತ್ತನೆ ಮೂಡಿಬಂದು ತಲ್ಲಣಗೊಳಿಸಹತ್ತಿತು. ಹಾಗೆಂದೇ, ಈ ಆಯ-ಆಕಾರಗಳಿಲ್ಲದ, ಗೊತ್ತು-ಗುರಿಯಿಲ್ಲದ ಹೊತ್ತಿಗೆ ಶಿಲ್ಪ ಕಡೆಯುವ, ಒಳಗಿನಿಂದ ಎದ್ದೆದ್ದು ಬರುತ್ತಿದ್ದ ವಿದ್ರೂಪ ಭಯಕ್ಕೆ ರೂಪ ಮೂಡಿಸುವ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡ. ಬೆಳಗಿನಿಂದ ರಾತ್ರಿಯ ತನಕ ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತ ನಡೆದ ಮೂಡಿನಲ್ಲಿ ; ಅದು ದಾಖಲೆಯಾಗುತ್ತಿದ್ದ ಮಾತಿನ ಧಾಟಿಯಲ್ಲಿ ಒಳಗಿನ ನಡುಕವನ್ನು ಅಡಗಿಸುವ ಹೋರಾಟದ್ದೇ ಮೇಲುಗೈಯಾದಂತಿತ್ತು :

“ಟಿಪ್ಪಣಿ ಒಂದು : ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ ಎರಡನೇ ದಿನ. ನಸುಕಿನಲ್ಲಿ ಬೆಳಕು ಚಿಳಿ-ಮಿಳಿ ಕಣ್ಣುಬಿಡುತ್ತ ಹೊಸತೇ ಒಂದು ದಿನ ಹುಟ್ಟಿ ಬರುತ್ತಿದ್ದುದನ್ನು ನೋಡುತ್ತಿದ್ದ ಮುಹೂರ್ತದಲ್ಲಿ ಒಡಮೂಡಿದ್ದು : ನಾನು ಹೀಗೇ ವಿಚಾರಮಾಡುತ್ತ ಹೋದಲ್ಲಿ ಒಂದೋ ಹುಚ್ಚರ ಆಸ್ಪತ್ರೆಯಲ್ಲಿ ಇಲ್ಲವೇ ಆತ್ಮಹತ್ಯೆಯಲ್ಲಿ ಕೊನೆಗೊಳ್ಳಬಹುದು. ಇವು ಎರಡೂ ಬದುಕಿಗೆ ಎರೆವಾಗುವ ರೀತಿಗಳೇ. ಬದುಕಿಗೆ ಅರ್ಥವೇನು ಎಂದು ಕೇಳುತ್ತ ಕೂಡ್ರುವುದು ಏನು ಹುಡುಗಾಟದ ಲಕ್ಷಣವೊ, ಇಲ್ಲ, ಬದುಕಿನಲ್ಲಿ ವಿಶ್ವಾಸ ಕಳಕೊಂಡದ್ದರ ಲಕ್ಷಣವೋ ? ತುಂಬ ಲವಲವಿಕೆಯಿಂದ, ಆನಂದದಿಂದ, ಆಸ್ಥೆಯಿಂದ ಬದುಕುವದು, ಬದುಕಬೇಕು ಅನ್ನಿಸುವುದು ಎಲ್ಲ ಜೀವಕ್ರಿಯೆಯ ಗುಣಧರ್ಮ ಅಲ್ಲವೆ ? ಜೀವಿಸುವುದರಲ್ಲೇ ಅದಮ್ಯ ಉತ್ಸಾಹ ಇಟ್ಟುಕೊಂಡ ಉಳಿದ ಜೀವಕೋಟಿಗಳಲ್ಲಿ ಏಳದ ಪ್ರಶ್ನೆ ನನ್ನ ಬದುಕಿನಲ್ಲೇ ಏಳುವುದಕ್ಕೆ ಮುಖ್ಯ ಕಾರಣ ನಾನು ಇಷ್ಟು ದಿನ ಜಂಭ ಕೊಚ್ಚಿಕೊಂಡಂತೆ ನನ್ನ ದಾರ್ಶನಿಕ ದೃಷ್ಟಿಯಾಗಿರದೆ, ಬದುಕಿಗೆ, ಜೀವಕ್ರಿಯೆಗೆ ಮೂಲ ಸೆಲೆಯಾದ ಉತ್ಸಾಹದ ಅಭಾವವಾಗಿರಬಹುದು. ಬದುಕಿನಲ್ಲಿ ಅರ್ಥ ಹುಡುಕುವದೇ ತಪ್ಪೇನೋ. ಅರ್ಥ ಇದ್ದರಲ್ಲವೇ ಹುಡುಕುವದು ? ಅದು ನಾವು ಹುಟ್ಟಿಸಿಕೊಂಡದ್ದು. ಉತ್ಸಾಹವೇ ಇಲ್ಲದಿದ್ದಲ್ಲಿ ಸೃಜನಶೀಲತೆ ಹೇಗೆ ಸಾಧ್ಯ ? ಸೃಷ್ಟಿಕಾರ್ಯ ಹೇಗೆ ಸಾಧ್ಯ ? ಅರ್ಥ ಹೇಗೆ ಹುಟ್ಟಬೇಕು….”

“ಟಿಪ್ಪಣಿ ಎರಡು : ಬೆಳಗಿನ ಉಪಾಹಾರ ಮುಗಿಸಿಬಂದು ಆರಾಮ ಕುರ್ಚಿಯಲ್ಲಿ ಮೈ ಚೆಲ್ಲಿ ವಿರಮಿಸುವಾಗ ಹೊಳೆದದ್ದು : ಜೀವಶಕ್ತಿಯ ಮೂಲ ಸೆಲೆಗಳಲ್ಲಿ ಕಾಮಕ್ಕಿಂತ ಹೆಚ್ಚು ಬಲಶಾಲಿಯಾದದ್ದು, ತನ್ನ ಪ್ರಭುತ್ವಕ್ಕೆ ಅಧೀನವಾದ ಒಂದು ಭೌಗೋಲಿಕ ಪ್ರದೇಶದ ಅವಶ್ಯಕತೆಯೆಂದು ನಿಸರ್ಗ-ವಿಜ್ಞಾನಿಗಳಿಂದ ಈಗ ಗೊತ್ತಾಗಿದೆ. ಎಲ್ಲ ಪ್ರಾಣಿವರ್ಗಗಳಲ್ಲಿ_ಪಶು, ಪಕ್ಷಿ ಜಲಚರಗಳಲ್ಲಿ ಕೂಡ- ಈ ‘ಪ್ರದೇಶ-ಪ್ರವೃತ್ತಿ’ ಸ್ಪಷ್ಟವಾಗಿ ಕಂಡುಬಂದಿದೆಯಂತೆ. ಮಾನವನಲ್ಲೂ ಈ ಮೂಲಪ್ರವೃತ್ತಿಯೇ ಆಸ್ತಿಯ ಪ್ರೀತಿಯಾಗಿ, ಪ್ರಾಂತ-ದೇಹಗಳ ಪ್ರೀತಿಯಾಗಿ ವ್ಯಕ್ತಗೊಂಡಿದೆ ಎಂದು ಈ ತಜ್ಞರ ಊಹೆ. ಇರಬಹುದೇನೋ. ಆದರೆ ನನ್ನ ಈವರೆಗಿನ ಆಯುಷ್ಯದಲ್ಲಿ ಬಂದ ಅನುಭವಗಳನ್ನೇ ನಂಬಿ ಹೇಳುವುದಾದರೆ ಆಸ್ತಿಗಿಂತ ಹೆಚ್ಚು ಪ್ರಭಾವಶಾಲಿಯಾದ ಪ್ರೇರಕಶಕ್ತಿಯೆಂದರೆ, ಪ್ರತಿಯೊಬ್ಬ ವ್ಯಕ್ತಿಗೆ ತನ್ನಲ್ಲಿಯ ಕರ್ತೃತ್ವಶಕ್ತಿಯ, ಪುರುಷಾರ್ಥದ ಅಭಿವ್ಯಕ್ತಿಗೆ ಬೇಕೆನ್ನಿಸುವ ಕಾರ್ಯಕ್ಷೇತ್ರವೇ _ ಜಿieಟಜ oಜಿ ಚಿಛಿಣioಟಿ, ಈ ಕಾರ್ಯಕ್ಷೇತ್ರದಲ್ಲಿ, ಅದು ಎಷ್ಟೇ ಸೀಮಿತವಾದದ್ದಿರಲೊಲ್ಲದೇಕೆ. ತನ್ನ ಪ್ರತಿಭೆಯಿಂದ ಬೆಳಕು ಬೀರುವ, ಬೆಳಗಿ ನಿಲ್ಲುವ, ಪ್ರಭುತ್ವ ಪಡೆಯುವ ಅಭಿಲಾಷೆ. ಇದುವೇ ಮಾನವನ ಎಲ್ಲ ಚಟುವಟಿಕೆಗಳ ಹಿಂದಿನ ಮೂಲ ಪ್ರವೃತ್ತಿಯ ಬಲವಿದ್ದ ಪ್ರೇರಣೆಯೆಂದು ನಾನು ನಂಬುತ್ತೇನೆ….”

“ಟಿಪ್ಪಣಿ ಮೂರು : ಮಧ್ಯಾಹ್ನದ ಊಟದ ನಂತರ ಸಣ್ಣ ನಿದ್ದೆಯಾದ ಮೇಲೆ ಚಹದ ದಾರಿ ಕಾಯುತ್ತಾ ಕೂತಿದ್ದಾಗ ಅನ್ನಿಸಿದ್ದು : ನನ್ನೆಲ್ಲ ಕರ್ತೃತ್ವ ಶಕ್ತಿಯನ್ನು ನಾನು ಸದ್ಯ ಕೆಲಸ ಮಾಡುತ್ತಿದ್ದ ಈ ಕಂಪನಿಯನ್ನು ಕಟ್ಟುವುದರಲ್ಲಿ ತೊಡಗಿಸದೇ ಇದ್ದಲ್ಲಿ, ಇಲ್ಲವೇ ಹಾಗೇ ಕಟ್ಟಿ ಅದನ್ನು ಇಂದಿನ ಭರಭರಾಟೆಯ ಸ್ಥಿತಿಗೆ ತರುವುದರಲ್ಲಿ ನಾನು ಬಹುದೊಡ್ಡ ಭಾಗವಹಿಸಿದ್ದೇನೆ ಎಂಬ ಭ್ರಮೆಯನ್ನು ನಾನು ಮೊದಲಿನಿಂದಲೂ ಇಟ್ಟುಕೊಳ್ಳದೇ ಇದ್ದಲ್ಲಿ, ಇಂದಿನ ಈ ದುಃಖದಾಯಕ ಸ್ಥಿತಿಗೆ ಬರುತ್ತಿರಲಿಲ್ಲವೇನೋ…. ಈ ರೀತಿಯ ವಿಚಾರಕ್ಕೆ ಕೊನೆಯೆಲ್ಲಿ ? ಮನುಷ್ಯ, ದಾರಿಗಳ ಕೂಟಸ್ಥಾನದಲ್ಲಿ ನಿಂತಾಗ ಇದಿರು ತೆರೆದು ನಿಂತವುಗಳಲ್ಲಿ ಯಾವುದನ್ನು ಬೇಕಾದರೂ ಹಿಡಿದು ನಡೆಯುವ ಆಯ್ಕೆ ತನಗಿದೆ, ಆಯ್ಕೆಯ ಸ್ವಾತಂತ್ರ್ಯ ತನಗಿದೆ ಎಂಬ ಭಾವನೆಯನ್ನು ಆಂತರ್ಯದಲ್ಲಿ ಹುಟ್ಟಿಸಿಕೊಂಡಿರುವಾಗಲೂ ಕೊನೆಯಲ್ಲಿ ಅವನು ಹಿಡಿಯುವುದು, ಹಾಗೆ ಹಿಡಿಯುವ ಸಾಧ್ಯತೆ ಅವನಿಗಿರುವದು, ಒಂದೇ ಒಂದನ್ನು ಮಾತ್ರ. ಮತ್ತು ಹಾಗೆ ಪ್ರತ್ಯಕ್ಷವಾಗಿ ಹಿಡಿಯುವ ಕ್ರಿಯೆಯೇ ಅವನ ವ್ಯಕ್ತಿತ್ವವನ್ನೂ ನಿಶ್ಚಯಿಸುತ್ತದೆ. ನಮ್ಮ ಆಯ್ಕೆ ಬಾಹ್ಯ-ಪ್ರೇರಣೆಗೆ ನಾವು ಕೊಟ್ಟ ಜವಾಬು ಅಲ್ಲ. ತದ್ವಿರುದ್ಧವಾಗಿ, ನಾವು ಕೊಟ್ಟ ಜವಾಬು ನಮಗಾದ ಪ್ರೇರಣೆಗೆ, ತನ್ಮೂಲಕ ನಮ್ಮ ವ್ಯಕ್ತಿತ್ವದ ಸಾಧ್ಯತೆಗಳಿಗೆ ಆಕಾರ ಕೊಡುತ್ತದೆ ಎನ್ನಬೇಕು. ಟಾಲ್ಸ್ಟಾಯ್ ಅವರ ‘ಆeಚಿಣh oಜಿ ಟvಚಿಟಿ ಟಟಥಿಛಿh’ ಎಂಬ ಕತೆಯಲ್ಲಿ ಕ್ಯಾನ್ಸರ್ ಆಗಿ ಬದುಕುವ ಭರವಸೆ ಇಲ್ಲದೇ ಹಾಸಿಗೆ ಹಿಡಿದ ಇಲ್ಲಿಶ್ ತನ್ನ ಈವರೆಗಿನ ಆಯುಷ್ಯವನ್ನು ವಿಮರ್ಶಿಸಿಕೊಂಡಾಗ ಅದನ್ನು ಬೇರೊಂದು ರೀತಿಯಲ್ಲಿ ತಾನು ಬದುಕಬಹುದಾಗಿತ್ತಲ್ಲ ಎಂಬ ಹಳಹಳಿ ತುಂಬಿದ ನಿಲುಗಡೆಗೆ ಬರುತ್ತಾನೆ. ಕ್ಯಾನ್ಸರಿನಿಂದಾಗಿ ನಿಶ್ಚಿತವಾಗಿ ಬರಲಿದ್ದ ಸಾವಿಗಿಂತ ಹೀಗೆ ಆಯುಷ್ಯದ ಕೊನೆಯ ಗಳಿಗೆಯಲ್ಲಿ ಹುಟ್ಟುವ ಇಂತಹ ಭಾವನೆ ಹೆಚ್ಚು ದಾರುಣವಾದದ್ದೆಂದು ಟಾಲ್ಸ್ಟಾಯ್ ಅವರಿಗೆ ಸೂಚಿಸುವುದಿತ್ತೆಂಬಂತೆ ನೆನಪು….”

“ಟಿಪ್ಪಣಿ ನಾಲ್ಕು : ಮೂರುಸಂಜೆಯಲ್ಲಿ ಮಬ್ಬುಗತ್ತಲೆ ಕವಿಯುತ್ತಿರುವಾಗ ಅಮ್ಮನ ನೆನಪಿನಿಂದ ತುಂಬಿಬರುತ್ತಿದ್ದ ಕಣ್ಣುಗಳಿಂದ ಕಂಡದ್ದು : ಪ್ರತಿ ಕ್ಷಣ ಇಟ್ಟ ಹೆಜ್ಜೆಯನ್ನು ಹಿಂತೆಗೆದುಕೊಳ್ಳುವುದು ಶಕ್ಯವಿಲ್ಲದ ರೀತಿಯಲ್ಲೇ ಬಾಳಿನ ಹಾದಿಯನ್ನು ಸವೆಸುತ್ತೇವೆ. ಬಾಳಿನ ಹಾದಿ ಎಂದೆಂದೂ ಒಮ್ಮುಖವಾದದ್ದೇ ? ಒಮ್ಮೊಮ್ಮೆ ಹೀಗೂ ಅನ್ನಿಸಿದ್ದುಂಟು : ನಾವು ದಾರಿಗಳ ಕೂಟಸ್ಥಾನಕ್ಕೆ ಬರುವ ಮೊದಲೇ ನಮ್ಮನ್ನು ಪಥಿಕರನ್ನಾಗಿ ಸ್ವೀಕರಿಸಿದ ದಾರಿ ನಮ್ಮ ಬರವಿನ ಹಾದಿಯನ್ನೇ ಕಾಯುತ್ತಿರುತ್ತದೆ. ನಾನು ಈಗಿನ ಕಂಪನಿಯನ್ನು ಬಿಟ್ಟು ಬೇರೆ ಕಂಪನಿಯಲ್ಲಿ ಕೆಲಸ ಹಿಡಿದಿದ್ದರೆ ? ಇಲ್ಲ, ಕಂಪನಿಯ ಕೆಲಸವನ್ನು ಬಿಟ್ಟು ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದರೆ ? ಈ ದೇಶದಲ್ಲೇ ಹುಟ್ಟಿರದಿದ್ದರೆ ? ಒಬ್ಬಂಟಿಗನಾಗಿರುವ ಬದಲು ಮದುವೆಯಾಗಿ ಸಂಸಾರ ಹೂಡಿ ಮಕ್ಕಳನ್ನು ಹಡೆದಿದ್ದರೆ ? ಅಥವಾ, ನನ್ನಂತೆ ನನ್ನ ಅಪ್ಪನಾದವನೇ ಮದುವೆಯಾಗಿರದಿದ್ದರೆ ? ಅಥವಾ, ನಾನು ಈಗಿನ ಅಪ್ಪ-ಅಮ್ಮಂದಿರ ಬದಲು ಬೇರೆ ತಂದೆತಾಯಿಗಳ ಮಗನಾಗಿ ಹುಟ್ಟಿದ್ದರೆ ?…..ಹಾಸ್ಯಾಸ್ಪದ ವಿಚಾರವಲ್ಲವೆ ? ಈಗ ಅಪ್ಪನಾದವನಿಗೆ ಬೇರೆ ಹೆಣ್ಣು ಹೆಂಡತಿಯಾಗಬಹುದಿತ್ತು. ಹಾಗೇ ಈಗ ನನ್ನ ಅಮ್ಮನಾಗಿದ್ದವಳಿಗೆ ಬೇರೆ ಗಂಡು ಗಂಡನಾಗಬಹುದಿತ್ತು. ಆದರೆ ನನ್ನ ಹುಟ್ಟು ಮಾತ್ರ ಈ ಅಪ್ಪ ಈ ಅಮ್ಮ ಮದುವೆಯಾದುದರಿಂದಲೇ ಸಾಧ್ಯವಾಯಿತು ಎನ್ನುವುದು ಗಮನಿಸಿದಾಗ ; ಅಷ್ಟೇ ಏಕೆ, ನನ್ನ ಹುಟ್ಟಿಗೆ ಕಾರಣವಾದ ಗರ್ಭಧಾರಣೆಯ ಕ್ಷಣ ಕೂಡ ಒಂದು ತಪ್ಪಿ ಇನ್ನೊಂದಾಗಿದ್ದರೆ ನನ್ನ ಪಿಂಡವನ್ನು ನಿಶ್ಚಯಿಸಿದ ಬೀಜಾಣುಗಳೇ ಬೇರೆಯಾಗಿ ನನ್ನ ಬದಲು ಬೇರೆಯೇ ಒಂದು ಜೀವ ಹುಟ್ಟಬಹುದಿತ್ತಲ್ಲ ಎಂಬುದನ್ನು ನೆನೆದರೆ ಆಯ್ಕೆಯ ಮುಕ್ತತೆಯಲ್ಲಿದ್ದ ನಂಬುಗೆ ಸಡಿಲವಾಗಿ ಉಸಿರುಗಟ್ಟಿದಂತಾಗುತ್ತದೆ : ಕೋಟ್ಯಾನುಕೋಟಿ ಪುರುಷ-ರೇತಾಣುಗಳಲ್ಲಿ ಒಂದೇ ಒಂದು ಹಾಗೂ ಒಂದೇ ಒಂದು ಸ್ತ್ರೀ-ಅಂಡಾಣು, ಒಂದೆಡೆ ಬಂದ ದಿವ್ಯ ಕ್ಷಣದಲ್ಲೇ ನಿಶ್ಚಿತವಾಯಿತಲ್ಲವೇ, ಉತ್ಕ್ರಾಂತಿಕ್ರಮದಲ್ಲಿ ಬದುಕುವ ರೀತಿಗಳೊಂದಿಗೆ ನಿಸರ್ಗ ನಡೆಸುವ ಅಬ್ಜ ಅಬ್ಜ ಪ್ರಯೋಗಗಳಲ್ಲಿ ಒಂದು ಅನನ್ಯ ಪ್ರಯೋಗದ ಪ್ರತಿನಿಧಿಯಾಗಿ ನನ್ನ ಬದುಕಿನ ಆಯ್ಕೆ? ಆದ್ದರಿಂದಲೇ_ಕೌಂಡಿಣ್ಯಗೋತ್ರೋತ್ಪನ್ನ ಕೃಷ್ಣಶರ್ಮಣಃ ಜ್ಯೇಷ್ಟಪುತ್ರ ಸಾಂತಯ್ಯಶರ್ಮಣಃ ದ್ವಿತೀಯ ಪುತ್ರನಾದ ಈ ದಿವ್ಯ ಪಿಂಡ ನಾಗಪ್ಪನ ಹುಟ್ಟಿನ ಆಯ್ಕೆ ? ವಿಜ್ಞಾನದ ವಿದ್ಯಾರ್ಥಿಯಾದದ್ದಕ್ಕೆ ಸಾರ್ಥಕವಾಯಿತೋ ನಾಗಪ್ಪಾ. ನಿನ್ನ ಆ ದಿವ್ಯ-ಭವ್ಯ ವಿಕಾಸವಾದಕ್ಕೇ ಇನ್ನು ಜಯವಾಗಲಿ…..ನಗುವುದನ್ನು ಕಲಿಯೋ ಬೋಳೀಮಗನೇ_ಯಾವಾಗಲೂ ಮುಖಕ್ಕೆ ಗಂಟಿಕ್ಕೇ ಕೂಡ್ರಬೇಡ. ಅಂತಹ ಮಹಾ ಅನಾಹುತವೇನೂ ಘಟಿಸಿಲ್ಲ ಈಗ. ನಿನ್ನ ಆ ಮಹಾಮ್ಮಾಯೀ ನಿಸರ್ಗ ನಡೆಸುವ ಅಬ್ಜ ಅಬ್ಜ ಪ್ರಯೋಗಗಳಲ್ಲಿ ಕೆಲವಾದರೂ ವಿಫಲವಾಗದೇ, ಸೋಲದೇ ಉಳಿದಾವೇ !….”

“ಟಿಪ್ಪಣಿ ಐದು : ರಾತ್ರಿ ಹಾಸಿಗೆ ಸೇರುವ ಮೊದಲು ಕಣ್ಣುಗಳು ನಿದ್ದೆಯಿಂದ ಬಾಡುತ್ತಿದ್ದಾಗ ಧೇನಿಸಿದ್ದು : ವಿಷ್ಣುಸಹಸ್ರನಾಮಗಳನ್ನು ದಿನವೂ ಪಠಿಸುತ್ತಿದ್ದ ಅಪ್ಪ ಎಲ್ಲ ಬಿಟ್ಟು ಈ ಹೆಸರನ್ನೇ ನನಗಾಗಿ ಹೇಗೆ ಆರಿಸಿದನೋ. ಸ್ವತಃ ಅವನ ಹೆಸರಾದರೂ ಏನು ಮತ್ತೆ ! ಈ ಸಂಗತಿಯೂ ನನ್ನ ನೋವಿನ ಇತಿಹಾಸದಲ್ಲಿ ವಹಿಸಿದ ಪಾತ್ರವನ್ನು ನೆನೆದರೆ…

‘ಎಂತಹ ಕ್ಷುಲ್ಲಕ ಸಂಗತಿಗಳೂ ನನ್ನ ಜೀವನದ ಎಂತಹ ಮಹತ್ವದ ಘಟನೆಗಳಿಗೆ ಕಾರಣಗಳಾಗಿವೆ ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ. ಹತ್ತು ವರ್ಷಗಳ ಹಿಂದೆಯೇ ಒಮ್ಮೆ ಕಂಪನಿಯ ಕೆಲಸವನ್ನು ಬಿಟ್ಟು ಇಲ್ಲಿಯದೇ ಕಾಲೇಜೊಂದರಲ್ಲಿ ಪ್ರಾಧ್ಯಾಪಕನ ಕೆಲಸ ಹಿಡಿಯಬೇಕೆಂದು ಮಾಡಿದ ನಿಶ್ಚಯವನ್ನು ಗೆಳೆಯನೊಬ್ಬನ ಇದಿರು ಆಡಿತೋರಿಸಿದಾಗ ಗೆಳೆಯನ ಹೆಂಡತಿ ಗಬಕ್ಕನೆ ಬಾಯಿಹಾಕಿ, ‘ಯಾಕೆ? ಮ್ಯಾನೇಜರ್ ಆಗುವ ಛಾನ್ಸ್ ತಪ್ಪಿತೆ ?’ ಎಂದು ಕೇಳಿದ ಪ್ರಶ್ನೆ, ಪ್ರಶ್ನೆಗಿಂತ ಹೆಚ್ಚಾಗಿ ಅದನ್ನು ಕೇಳಿದ ರೀತಿ ಮುಂದಿನದೆಲ್ಲವನ್ನೂ ನಿಶ್ಚಯಿಸಿಬಿಟ್ಟಿತ್ತು. ಪ್ರೊಫೆಸರ್ ಆಗುವ ನಿರ್ಧಾರವನ್ನು ಬಿಟ್ಟು ಕೊಟ್ಟಿದ್ದೆ. (ಪ್ರೊಫೆಸರ್ ಎಂಬ ಉಪ-ಪದವಿ ನನ್ನ ಕೊರಳಿಗೆ ಗಂಟುಬಿದ್ದದ್ದು ಮಾತ್ರ ಆಗಿನಿಂದಲೇ ಎಂಬಂತೆ ನೆನಪು.)

“ಆಶ್ಚರ್ಯ : ಯಾವುದು ಯಾವುದನ್ನು ನಿಶ್ಚಯಿಸಿತ್ತು ? ಗೆಳೆಯನ ಹೆಂಡತಿಯ ಮಾತುಗಳಲ್ಲಿ, ಮಾತುಗಳಿಗಿಂತ ಹೆಚ್ಚಾಗಿ ಕಣ್ಣುಗಳಲ್ಲಿ, ಕಣ್ಣುಗಳಿಗಿಂತ ಹೆಚ್ಚಾಗಿ, ತುಟಿಗಳ ಮೂಲೆಯಲ್ಲಿ, ತುಟಿಗಳಿಗಿಂತ ಹೆಚ್ಚಾಗಿ, ಕೊರಳಿನ ಕೊಂಕಿನಲ್ಲಿ ವ್ಯಕ್ತವಾದ ‘ಏನೋ’ ನನ್ನ ಕೃತಿಗೆ ಕಾರಣವಾಗಿತ್ತೋ ? ಅಥವಾ ನನ್ನ ವ್ಯಕ್ತಿತ್ವದ್ದೇ ಆಪ್ತ ಅಂಗವಾದ ನಿರ್ಧಾರವನ್ನು ಗೆಳೆಯನ ಹೆಂಡತಿಯ ಮಾತುಗಳಿಂದ ಅರ್ಥಮಾಡಿಕೊಂಡಿದ್ದೇನೋ ? ಯಾವಯಾವುದೋ ಕಾರಣಗಳಿಗಾಗಿ ನಮ್ಮ ಕೈಯಿಂದ ಒದಗುವ ಕೃತಿಗಳ ನಡುವಿನ ಅವಕಾಶದಲ್ಲಿ ಜರಗುವುದು ಅರ್ಥದ ಹೆಸರಿನಲ್ಲಿ. ಅರ್ಥಪೂರ್ಣತೆಯ ಹೆಸರಿನಲ್ಲಿ ನಡೆಯುವ ಶಾಬ್ದಿಕವಾದ ಹಲುಬು. ಇದಕ್ಕೇ ಅಲ್ಲವೇ ನಾವು ಕೊಟ್ಟ ದೊಡ್ಡ ಹೆಸರು _ ಜೀವನದರ್ಶನ ! ನಮ್ಮ ನಮ್ಮ ಕೃತಿಗಳನ್ನು ನಾವೇ ಸಮರ್ಥಿಸಿಕೊಂಡ ನಾಗರಿಕ ರೀತಿ ! ಪ್ರೊಫೆಸರ್ ನಾಗನಾಥ್-ಜಿಂದಾಬಾದ್ ! ಹೇಳಲು ಮರೆತೆ : ಕಂಪನಿಯನ್ನು ಸೇರಿದ ಬಳಿಕ ನನ್ನನ್ನು ತನ್ನ ಕಣ್ಣುಗಳ ಹೊಳಪಿನಿಂದ, ಕಿಲಕಿಲ ನಗುವಿನಿಂದ, ಸೊಂಟದ ಕುಣಿತದಿಂದ ಮರುಳುಮಾಡಲು ಪಣ ತೊಟ್ಟಂತಿದ್ದ _ ಎಂ.ಡೀ. ಅವರ ಸೆಕ್ರೆಟರಿಯಾದ_ಮೇರಿಯ ಸಲಹೆಯ ಮೇರೆಗೆ ನನ್ನ ಹೆಸರನ್ನು ಬದಲಿಸಿಕೊಂಡಿದ್ದೆ. ಎಲ್ಲರ ಬಾಯಲ್ಲಿ ನಿಂತ ಹೆಸರು ಮಾತ್ರ ಪ್ರೊಫೆಸರ್ ನಾಗ್….ಪರಮಾಶ್ಚರ್‍ಯ : ನನ್ನ ಬದುಕಿನಲ್ಲಿ ಎಷ್ಟೆಲ್ಲ ಕ್ರಾಂತಿಕಾರಕ ಘಟನೆಗಳು ನಡೆದಿರುವಾಗ ಎಲ್ಲ ಬಿಟ್ಟು ಇದೇ ಥಟ್ಟನೆ ನೆನಪಿನಲ್ಲಿ ನಿಂತದ್ದೇಕೆ ? ವಿಚಾರಮಾಡಬೇಕು….”

“ಟಿಪ್ಪಣಿ ಆರು : ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಪರಮ ಮಾಸ್ತರರು ಹಾಜರಿಯ ಹೊತ್ತಿಗೆ ಹೆಸರು ಕರೆಯುವ ರೀತಿಯಲ್ಲಿ ಹೇಳುವುದಾದರೆ ನನ್ನ ಹೆಸರು ನಾಗಪ್ಪಾ ಸಾಂತಯ್ಯಾಽಽ. ನಾನು ಹುಟ್ಟಿದ್ದು ಉತ್ತರ ಕನ್ನಡದ ಹನೇಹಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ. ಸುಮಾರು ನಲವತ್ತು ವರ್ಷಗಳ ಕೆಳಗೆ. ಬೆಳೆದದ್ದು ಕೋಳೀಗಿರಿಯಣ್ಣನ ಕೇರಿಯಲ್ಲಿ. ನನ್ನ ಬಾಯಲ್ಲಿ ಕಾಯಂ ನಿಂತಿರುವ ಹತ್ತೆಂಟು ಬೈಗುಳಗಳು ಈ ಕೋಳೀಗಿರಿಯಣ್ಣನಿಂದಲೇ ಕೇಳಿ ಕಲಿತವುಗಳು. ಸಂದರ್ಭಕ್ಕೆ ತಕ್ಕಂತೆ ಚೆಂಗನೆ ಬಾಯಲ್ಲಿ ಪುಟಿಯುವ ಇವೆಲ್ಲವುಗಳಲ್ಲಿ ಬೋಳೀಮಗ, ಸೂಳೇಮಗ, ಇವು ನನಗೆ ಪ್ರಿಯವಾದವುಗಳು: ಸಿಟ್ಟು ಮಸ್ತಕಕ್ಕೆ ಏರಿದಾಗ ರಂಡೇಮಗನೇ, ಹಾದರಕ್ಕೆ ಹುಟ್ಟಿದವನೇ ಎನ್ನುವುದೂ ಉಂಟು. ನನ್ನಷ್ಟಕ್ಕೇ – ಎಲ್ಲರ ಮುಂದಲ್ಲ. ಸಿಟ್ಟು ಮಸ್ತಕಕ್ಕೇರುವ ಸಂದರ್ಭಗಳು ಇತ್ತಿತ್ತ ಹೆಚ್ಚಾಗುತ್ತಿವೆಯಾದ್ದರಿಂದ ಈ ಬೈಗಳಿಗೆ ಸಂಖ್ಯೆಗಳ ಖಾಸಗೀ ಭಾಷೆಯೊಂದನ್ನು ನಿರ್ಮಿಸಿಕೊಂಡಿದ್ದೇನೆ. ಉದಾ : ಒಂದು ಮಗನೇ ಅಂದರೆ ಬೋಳೀಮಗನೇ, ಎರಡೂ ಮಗನೇ ಅಂದರೆ ಸೂಳೇಮಗನೇ ಇತ್ಯಾದಿಯಾಗಿ ಹತ್ತೂ ಮಗನೇ ತನಕ. ಇವುಗಳಿಗೆ ನಾನು ‘ಸಾಂಖ್ಯದ ಸುಭಾಷಿತಗಳು’ ಎಂಬ ಹೆಸರೂ ಕೊಟ್ಟಿದ್ದೇನೆ ಆಗೀಗ ಭಾವನೆಗಳು ಉಕ್ಕಿಬಂದ ಕ್ಷಣಗಳಲ್ಲಿ ಈ ಸಂಕೇತ ಭಾಷೆ ಕುಸಿದು ಒಳಗಿನ ವಾಸ್ತವದ ದರ್ಶನವಾಗುವುದೂ ಉಂಟು ! ಆಫೀಸಿನ ಕೆಲಸ ಬಿಟ್ಟರೆ ನನಗೆ ಬಹಳ ಪ್ರಿಯವಾದದ್ದು ಸಾಹಿತ್ಯ. ವಿದ್ಯಾರ್ಥಿ ದೆಸೆಯಿಂದ ಕಲಿತದ್ದು ಮಾತ್ರ ವಿಜ್ಞಾನ. ಅಲ್ಲೂ ಕೂಡ ರಸಾಯನಶಾಸ್ತ್ರದ ವಿದ್ಯಾರ್ಥಿಯಾಗಿಯೂ ಆಸ್ಥೆಯಿದ್ದದ್ದು ಡಾರ್ವಿನ್ನನ ವಿಕಾಸವಾದದಲ್ಲಿ; ಫ್ರಾಯ್ಡ್, ಯುಂಗರ ಮನೋವಿಶ್ಲೇಷಣೆಯಲ್ಲಿ, ಮಾರ್ಕ್ಸ್, ರಾಯ್ ಅವರ ಬರವಣಿಗೆಯಲ್ಲಿ. ಲಂಗೋಟೀ ಗೆಳೆಯರನ್ನು ಎಷ್ಟರಮಟ್ಟಿಗೆ ಭಾವನಾತ್ಮಕವಾಗಿ ಹತ್ತಿರವಾದವರು ಇವರೆಲ್ಲ. ಸದ್ಯ, ಕೊನ್ರಾಡ್, ಲಾರೆಂಝ್, ಎರಿಕ್ ಬರ್ನ್ ಕೂಡ ಹತ್ತಿರವಾಗುತ್ತಿದ್ದಾರೆ. ನಾನು ಬದುಕಿನಲ್ಲಿ ಬಹಳಷ್ಟಕ್ಕೆ ಆಸೆಪಟ್ಟವನಲ್ಲ. ಹೆದರಿಕೊಂಡವನೂ ಅಲ್ಲ. ಹೆದರಿಕೆಯಾಗುತ್ತಿದ್ದದ್ದು ಮೂರಕ್ಕೆ : ಕಾಯದೆ; ಪೋಲೀಸು; ಬೆಂಕಿಯ ಅಪಘಾತಗಳಿಗೆ : ಅವು ಸಂಕೇತಿಸುವ ನಿಗೂಢ ವಾಸ್ತವಕ್ಕೆ ; ಅದರ ಅರ್ಥವಾಗದ ರಹಸ್ಯಮಯವಾದ ನುಡಿಕಟ್ಟಿಗೆ. ಯಾಕೆ ನಾನು ಹೆದರುತ್ತೇನೆ ಎನ್ನುವುದು ಗೊತ್ತಿದೆ, ಗೊತ್ತಿಲ್ಲ. ಬಹಳ ಭಾವುಕನಾಗಿ ಕಣ್ಣು ತುಂಬಿಬರುವದು : ನನ್ನ ಅಮ್ಮನನ್ನು ನೆನೆದಾಗ ; ಹನೇಹಳ್ಳಿಯ ಮಣ್ಣಿನ ವಾಸನೆ ಮೂಗನ್ನು ಅಡರಿದಾಗ ; ಅಲ್ಲಿಯ ಬೇಲಿ, ಗದ್ದೆಗಳ ಹಸಿರು, ಸಂಜೆ-ಮುಂಜಾವುಗಳ ಅರಿಸಿಣ ಬಣ್ಣದ ಬಿಸಿಲು ಕಣ್ಣು ಪರದೆಯ ಮೇಲೆ ಮೂಡಿ ನಿಂತಾಗ ; ಕಟ್ಟೆಯ ಅಶ್ವತ್ಥದ ಮೇಲೆ, ಗದ್ದೆಯಂಚಿನಲ್ಲಿ ಕೆಂಪಗೆ ಹೂತು ನಿಂತ ಹಂಗರಕದ ಮೇಲೆ ಕಾಗೆಗಳು ಕಲರವ ಎಬ್ಬಿಸಿದ್ದು ಕಿವಿಗಳಲ್ಲಿ ಮೊಳಗಿದಾಗ ; ಇನ್ನೂ ಕಂಡಿರದ ಅಣ್ಣ, ಕಳೆದುಹೋದ ತಂಗಿ ಅಚಾನಕವಾಗಿ ಬಂದು ಮನೆಯ ಕದ ತಟ್ಟುತ್ತಿದ್ದಾರೆ ಎಂದು ಭಾಸವಾದಾಗ, ನನಗೇ ಅರಿವಾಗದ ಹಾಗೆ ಅವುಡು ಕಚ್ಚಿದ ರಭಸಕ್ಕೆ ತುಟಿಗಳಿಂದ ರಕ್ತ ಚಿಮ್ಮುವ ಭಯವಾಗುವಷ್ಟರ ಮಟ್ಟಿಗೆ ಸಿಟ್ಟುಬರುತ್ತಿದ್ದುದು ಅಪ್ಪನ ಹೇಡಿತನವನ್ನು ನೆನೆದಾಗ…”

ಅರ್ಧಕ್ಕೇ ಏಕೆ ತಡೆದೆಯೋ ಎರಡೂ ಮಗನೇ ? ಅಪ್ಪ ಹೇಡಿಯಾಗಿದ್ದ ಎನ್ನುವುದನ್ನು ಒಪ್ಪಿಕೊಳ್ಳಲು ಇನ್ನೂ ನಿನಗೆ ಧೈರ್ಯವಾಗುತ್ತಿಲ್ಲವೇನೋ ? ನಿದ್ದೆ ಬಂತೇನೋ ? ಮಲಗಿಕೋ ಮಗೂ, ನಾಳೆ ಪರ್ಸೊನೆಲ್ ಮ್ಯಾನೇಜರರ ಪತ್ರ ಕಂಡಾಗ ನಿನ್ನ ನೀರಿನ ನಿಜವಾದ ಗುಣ ಗೊತ್ತಾದೀತು ಕಾದಿರು.
uಟಿಜeಜಿiಟಿeಜ- ಅಧ್ಯಾಯ ಎರಡು –

ನಾಗಪ್ಪ ಹೀಗೆಲ್ಲ ಯೋಚಿಸುತ್ತ, ಆಗೀಗ ಮನಸ್ಸು ಬಂದರೆ ಟಿಪ್ಪಣಿ ಮಾಡುತ್ತ ಕೂತದ್ದು ಚಿಕ್ಕಂದಿನಿಂದಲೂ ತನ್ನ ಪ್ರತಿಸ್ಪರ್ಧಿಯಾಗಿದ್ದ ಶ್ರೀನಿವಾಸನ_ಈಗ ಶ್ರೀನಿವಾಸರಾವ್ ಆದವನ_ಶಿವಾಜೀ ಪಾರ್ಕಿನ ಮನೆಯಲ್ಲಿ. ನಾಲ್ಕು ಬೆಡ್‌ರೂಮುಗಳುಳ್ಳ ದೊಡ್ಡ ಫ್ಲ್ಯಾಟಿನಲ್ಲಿ ಅವನಿಗಾಗಿಯೇ ವ್ಯವಸ್ಥೆ ಮಾಡಿಕೊಟ್ಟ ಕೋಣೆಯಲ್ಲಿ. ಬೆಳಿಗ್ಗೆ ಎದ್ದವನೇ ನಿನ್ನೆ ತಾನು ಬರೆದದ್ದನ್ನು ಓದಿ ನೋಡಿದ. ವ್ಯಂಗ್ಯವಾಗಿ ಮುಗುಳುನಗುತ್ತ ಈ ಒಂದೂ ಮಗ ಬಹಳಷ್ಟಕ್ಕೆ ಹೆದರಿಕೊಂಡವನಲ್ಲವಂತೆ ಎಂದುಕೊಳ್ಳುತ್ತ ತನ್ನ ವಹಿ ಮುಚ್ಚಿ ಕಿಡಕಿಗೆ ಬಂದ. ಇದಿರಿಗೇ ಸಮುದ್ರ. ದಂಡೆಯಲ್ಲಿ, ಮನೆಯ ಕಾಂಪೌಂಡಿನಲ್ಲಿ ಊರಿನ ನೆನಪು ತರುತ್ತಿದ್ದ ಗಾಳಿ-ಮರಗಳು ; ಸಬದೂಲಿ, ಗೊಂಡೆ-ಹೂವಿನ ಗಿಡಗಳು ; ಬಸಲೆಯ ಹಂದರ, ಬಾಳೆಯ ಹಿಂಡು, ಒಂದೆರಡು ಅಡಕೆಯ ಸಸಿಗಳು. ಹೋದಲ್ಲೆಲ್ಲ ಹಳ್ಳಿಯನ್ನೇ ಎಬ್ಬಿಸಿ ನಿಲ್ಲಿಸುತ್ತಾನೆ. ಎರಡೂ ಮಗ. ದಿನವೂ ಪ್ರೆಸ್ಸಿಗೆ ಹೋಗುವ ಮೊದಲು ಗಂಜೀ ಊಟ ಮಾಡಿಯೇ ಹೋಗುತ್ತೇನೆಂದು ಅಭಿಮಾನದಿಂದಲೇ ಹೇಳುತ್ತಾನೆ ಮತ್ತೆ !

ಎಲ್ಲರನ್ನು ಬಿಟ್ಟು ಶ್ರೀನಿವಾಸನ ಮನೆಯಲ್ಲಿ ತಳವೂರಿದ್ದು ಸ್ವತಃ ನಾಗಪ್ಪನಿಗೇ ಆಶ್ಚರ್ಯ_ಕಳೆದ ಇಪ್ಪತ್ತು ವರ್ಷಗಳಿಗೂ ಮಿಕ್ಕಿದ ಕಾಲದಿಂದ ಅವನ ಬಗ್ಗೆ ತಳೆಯುತ್ತ ಬಂದ, ದ್ವೇಷಕ್ಕೆ ಹತ್ತಿರವಾದ, ಅಸಡ್ಡೆಯನ್ನೂ ಮರೆತು : ‘ನಿನ್ನ ಅಫೀಸು-ಗೀಫೀಸು ಎಲ್ಲಾ ಮರೆತುಬಿಟ್ಟು, ಸುಖವಾಗಿ ಇಲ್ಲಿ ಬಂದು ಒಂದು ತಿಂಗಳು ಇದ್ದು ಬಿಡು. ಹೇಗಾದರೂ ರಜೆ ತೆಗೆದುಕೊಂಡಿದ್ದೀಯಲ್ಲ. ಮಹಾಬಲೇಶ್ವರ್, ಮಾಥೇರಾನ್ ಅಲ್ಲದಿದ್ದರೂ ಮುಂಬಯಿಯ ಸೆಖೆ ನಿನ್ನನ್ನು ಇಲ್ಲಿ ಬಾಧಿಸದು. ಹೊಸ ಕಾದಂಬರಿಯನ್ನೇನೋ ಬರೆಯಲು ಹಿಡಿದಿದ್ದೀಯಂತಲ್ಲ_ನನ್ನ ಬಗ್ಗೆ. ಬರೆ ಬರೆ. ಎಂತಹ ಭಿಡೆಯೂ ಬೇಡ. ಅಮ್ಮನ ಬಗ್ಗೆ ನೀನು ಬರೆದದ್ದನ್ನು ಓದಿದೆ_ನೀನೇ ಅದರ ಪತ್ತೆ ಹತ್ತಗೊಡದಿದ್ದರೂ, ಅಡ್ಡಿಯಿಲ್ಲ. ಬರೆಯುವ ಕಲೆ ನಿನಗಿದೆ. ನಾವೇನಪ್ಪ ಸಾಹಿತ್ಯದ ಗಂಧಗಾಳಿಯಿಲ್ಲದ ದಡ್ಡರು. ಬೇರೆಯವರು ಬರೆದದ್ದನ್ನು ಛಾಪಿಸುವಷ್ಟರ ಮಟ್ಟಿಗೇ ಶಬ್ದಗಳ ಸಂಬಂಧ. ಕನ್ನಡ ಕಲಿತದ್ದು ಮೆಟ್ರಿಕ್‌ವರೆಗಾದರೂ ಈಗ ಅದಕ್ಕೆ ಜಂಗುಹಿಡಿದಿದೆ. ನಮ್ಮಲ್ಲಿ ಕನ್ನಡ ಟೈಪ್ಸ್‌ಗಳಿದ್ದರೆ ನಿನ್ನ ಪುಸ್ತಕವನ್ನು ನಮ್ಮಲೇ ಛಾಪಿಸಬಹುದಿತ್ತು. ಏನಿಲ್ಲದಿದ್ದರೂ ನಿನ್ನ ಪುಸ್ತಕದ ಜ್ಯಾಕೆಟ್ಟನ್ನಾದರೂ ನಮ್ಮಲ್ಲೇ ಮಾಡಿಸೋಣ. ನಾಲ್ಕು ನಾಲ್ಕು ಬಣ್ಣಗಳಲ್ಲಿ ಮುದ್ರಿಸುವ ಬೇಕಾದರೆ, ಅದಕ್ಕೇನಂತೆ….’ ಇದರಲ್ಲಿ ಶ್ರೀನಿವಾಸನಿಗೆ ಪ್ರಾಮಾಣಿಕವಾಗಿ ಅನ್ನಿಸಿದ್ದೆಷ್ಟು. ನನ್ನನ್ನು ಕೆಣಕಲೆಂದೇ ಆಡಿದ್ದೆಷ್ಟು ಎಂದು ನಾಗಪ್ಪನಿಗೆ ಖಚಿತವಾಗಿ ತಿಳಿಯಲಿಲ್ಲ. ಅವನ ಅಮ್ಮನ ಬಗ್ಗೆ ತಾನು ಬರೆದ ಕತೆ ಓದಿದ ದಿನ ಸಿಟ್ಟಿನಿಂದ ಧಿಮಿಧಿಮಿ ಕುಣಿದುಬಿಟ್ಟಿದ್ದನೆಂದು ಸೀತಾರಾಮನಿಂದ ತಿಳಿದಿತ್ತು. ಬಹುಶಃ ಕಾದಂಬರಿಯ ವಿಷಯವನ್ನು ಸೀತಾರಾಮನೇ ಇವನಿಗೆ ಹೇಳಿರಬೇಕು. ಇಂಥ ಕಿಡಿಗೇಡಿತನದಲ್ಲಿ ಅವನು ನಿಷ್ಣಾತ !

ಶ್ರೀನಿವಾಸ ಕಾದಂಬರಿ ಬರೆ ಎಂದು ಹೇಳಿದ್ದರಲ್ಲಿ ಪ್ರೋತ್ಸಾಹಕ್ಕಿಂತ ಹೆಚ್ಚಾಗಿ ತನ್ನ ಬಾಯನ್ನು ಮುಚ್ಚಿಸುವ ಹಿಕ್ಮತಿಯೇ ಅಡಗಿರಲಿಕ್ಕಿಲ್ಲ ತಾನೇ ಎಂಬ ಶಂಕೆಯೂ ಮೂಡಿತ್ತು, ನಾಗಪ್ಪನಲ್ಲಿ. ಆದರೂ ತಲೆ ತಿನ್ನುತ್ತಿದ್ದ. ತನ್ನ ಸೃಜನಶೀಲತೆಯನ್ನು ಹಿಂಡಿಹಾಕುತ್ತಿದ್ದ ಆಫೀಸಿನ ಸದ್ಯದ ರಾಜಕಾರಣದಿಂದ ಕೆಲವು ದಿನ ದೂರ ಉಳಿಯುವುದು, ದೂರ ಉಳಿದು ಕಂಪನಿಯ ಕೆಲಸಕ್ಕೆ ತನ್ನ ತಾತ್ವಿಕ ನಿಲುವು ಏನೆನ್ನುವುದನ್ನು ನಿಶ್ಚಯಿಸಿಕೊಳ್ಳುವುದು ಅವಶ್ಯವೆನಿಸಿದ ತನಗೆ ಅನಿರೀಕ್ಷಿತವಾಗಿ ಬಂದ ಈ ಆಹ್ವಾನವನ್ನು ನಿರಾಕರಿಸಬೇಕೆನ್ನಿಸಲಿಲ್ಲ. ಅಷ್ಟೇಕೆ_ಇಷ್ಟು ವರ್ಷ ಶ್ರೀನಿವಾಸನನ್ನು ನೇರವಾಗಿ ಸಂಧಿಸುವುದನ್ನು ತಪ್ಪಿಸುತ್ತ ಬಂದ ತಾನು_ಈಗ ಅವನು ಕರೆಯುವುದನ್ನೇ ಕಾಯುತ್ತ ಕುಳಿತವನ ಹಾಗೆ, ತುಂಬ ಹುರುಪಿನಿಂದಲೇ ಅವನ ಜತೆ ಹೋಗಲು ಒಪ್ಪಿಕೊಂಡಾಗ ಆಶ್ಚರ್ಯದಂತೆ ಸಂತೋಷವೂ ಆಗಿತ್ತು. ಸಹಜ ಸ್ಪೂರ್ತಿಯಿಂದ ನಡೆದ ಈ ಸ್ವೀಕಾರದ ಹಿಂದಿನ ಪ್ರೇರಣೆಯನ್ನು ಹುಡುಕುವ ಆತುರ ಕೂಡ ಅವನಿಗೆ ಆಗಲಿಲ್ಲ. ಮಹತ್ವದ ಸಂಗತಿಯೆಂದರೆ ಅವನಿಗೆ ಸದ್ಯ ಬರೆಯಬೇಕಾದದ್ದು ಶ್ರೀನಿವಾಸನನ್ನು ಅಂದರೆ ಶ್ರೀನಿವಾಸ ಹಾಗೂ ತನ್ನ ಸಂಬಂಧವನ್ನು ಕುರಿತು ಅವನು ಬಹಳ ಹಿಂದೆ ಯೋಚಿಸಿದ ಕಾದಂಬರಿಯಾಗಿರಲೇ ಇಲ್ಲ. ಈಗ ಬರೆಯಬೇಕಾದದ್ದು ತನ್ನ ಆಫೀಸನ್ನು ಕುರಿತೇ, ತನ್ನನ್ನು ಕುರಿತೇ : ಈ ರಾಜಕಾರಣದಿಂದಾಗಿ ಇಷ್ಟೊಂದು ಯಾತನೆಯನ್ನು ಯಾಕೆ ಅನುಭವಿಸುತ್ತಿದ್ದೇನೆ ? ಯಾತನೆಯ ಬೇರುಗಳವರೆಗೆ ಇಳಿದು ನೋಡಬೇಕು…..

ಅವನಿಗೆ ಅರಿಯಬೇಕಾದದ್ದು ತನ್ನ ಆಫೀಸಿನ ಕೆಲವು ವ್ಯಕ್ತಿಗಳೊಡನೆಯ ಸಂಬಂಧಗಳನ್ನು, ಮುಖ್ಯವಾಗಿ ಫಿರೋಜ್ ಬಂದೂಕವಾಲಾನೊಡನೆಯ ಸಂಬಂಧವನ್ನು. ಈ ಅಂತರ್ವೈಯಕ್ತಿಕ ಸಂಬಂಧಗಳಲ್ಲಿ ಪ್ರತಿಸಲ ತೆರೆದುಕೊಳ್ಳುತ್ತಿದ್ದುದು ತನ್ನ ವ್ಯಕ್ತಿತ್ವ ರೂಪಗೊಂಡದ್ದರ ಇತಿಹಾಸವೇ ? ಎಂಬ ಸಂಶಯ ಇತ್ತೀಚೆ ಬಲವಾಗಹತ್ತಿದೆ_ಮುಖ್ಯತಃ ಎರಿಕ್ ಬರ್ನನ್ ‘ಟ್ರೆನ್ಸೆಕ್ಷನಲ್’ ಎನೆಲಿಸಿಸ್ ಅಭ್ಯಾಸ ಮಾಡಿದಂದಿನಿಂದ : ನೀನು ತಲೆ ಉಬ್ಬಿಸಿಕೊಳ್ಳಬೇಡವೋ ಎರಿಕ್. ಇದು ಬರೀ ನನ್ನೊಳಗಿನ ಪ್ರೊಫೆಸರ್ ಮಾತನಾಡುವ ರೀತಿ ಅಷ್ಟೇ. ನನ್ನ ಅನುಭವದಲ್ಲಿ ಹುಟ್ಟಿದ್ದನ್ನೇ ನಿನ್ನ ಶಬ್ದಗಳಲ್ಲಿ ಎರಕ ಹೊಯ್ದೆನಷ್ಟೇ. ನಿನ್ನ ಲಂಗೋಟೀ ಗೆಳೆಯನೆಂಬಂತೆ ಮಾತನಾಡುತ್ತಿದ್ದೀನಲ್ಲವೆ ? ನನ್ನನ್ನು ದೂರಬೇಡ, ದೂರು ಈ ಸಮುದ್ರವನ್ನು, ಎಲ್ಲ ನೋವನ್ನೂ ಕ್ಷುಲ್ಲಕಗೊಳಿಸುವ ಅದರ ಉಲ್ಲಾಸದ ಉದ್ಘೋಷವನ್ನು….

ಫಿರೋಜ್ ಮನಸ್ಸು ತುಂಬಿದ್ದರಿಂದಲೋ ಏನೋ ಶ್ರೀನಿವಾಸನಲ್ಲಿಯೂ ಅವನಲ್ಲಿಯೂ ಇದ್ದ ದೈಹಿಕ ಹೋಲಿಕೆ ಲಕ್ಷ್ಯಕ್ಕೆ ಬಂದು ನಾಗಪ್ಪ ಅಸ್ವಸ್ಥನಾದ. ಎಲ್ಲರೂ ಒಪ್ಪಿಕೊಳ್ಳುವಂತಹ ಹೋಲಿಕೆಯಲ್ಲ; ತನಗಷ್ಟೇ ಒಂದು ಅನಪೇಕ್ಷಿತ ರೀತಿಯಲ್ಲಿ. ಅನಪೇಕ್ಷಿತ ಕ್ಷಣದಲ್ಲಿ ಥಟ್ಟನೆ ಹೊಳೆದುಬಿಟ್ಟದ್ದು : ಯಾವುದೋ ಸಿನಿಮಾದಲ್ಲೋ, ನಾಟಕದಲ್ಲೋ ನೋಡಿದಂತಿದ್ದ ಕೊಲೆಯ ಆರೋಪಿಯ ನೆನಪು ತರುವಂತಹದ್ದೇನನ್ನೋ ಕಂಡಂತೆ ಆಗಿ ಮೈ ಜುಮ್ ಎಂದಿತ್ತು. ಈ ಅನ್ನಿಸಿಕೆ ಯಾರಿಂದಾಗಿ ಹುಟ್ಟಿ ಯಾರನ್ನು ಒಳಗೊಂಡಿತ್ತು ಎನ್ನುವುದು ಈಗ ಖಚಿತವಾಗಿ ಗೊತ್ತುಹಿಡಿಯುವುದು ಕಠಿಣವಾಗಿ ತೋರಿದರೂ ಫಿರೋಜನೇ ಇದಕ್ಕೆ ಮೂಲವಿರಬಹುದು ಎಂಬ ಸಂಶಯ ಮನಸ್ಸಿಗೆ ಹೆಚ್ಚು ಸಮಾಧಾನಕರವಾಗಿ ತೋರಿತು : ಬರೆಯಬೇಕು, ದಿನವೂ ಇಷ್ಟಿಷ್ಟನ್ನು. ಆದರೆ ಯಾರನ್ನೂ ನಿಂದೆಗಾಗಲೀ ಆರೋಪಕ್ಕಾಗಲೀ ಗುರಿಪಡಿಸಲಲ್ಲ. ಇವರೊಡನೆಯ ಸಂಬಂಧಗಳನ್ನು ಅರಿಯುವುದರ ಮೂಲಕ ನನ್ನನ್ನು ನಾನು ಅರಿತುಕೊಳ್ಳಲು.

“ಟಿಪ್ಪಣು ಏಳು : ನಿನ್ನೆ ಒಂದು ಮೋಜಿನ ಸಂಗತಿ ನಡೆಯಿತು….”

ತನ್ನನ್ನು ತಾನೇ ಅರಿತುಕೊಳ್ಳಬೇಕೆಂದು ಬರೆಯಲು ಹಿಡಿದ ಈ ಅಂತರ್ ವೈಯಕ್ತಿಕ ಸಂಬಂಧಗಳ ಇತಿಹಾಸದಲ್ಲಿ ಮೂಲಯೋಜನೆಯ ಪ್ರಕಾರ ನಿನ್ನೆ ಮೊನ್ನೆಯ ಘಟನೆಗಳಿಗೆ ಆಸ್ಪದವಿರಲಿಲ್ಲ. ಆದರೆ ತನಗೇ ಗೊತ್ತಾಗದಂತೆ ಯೋಜನೆಯಲ್ಲಿ ಆದ ಬದಲಿನ ಅರಿವು ನಾಗಪ್ಪನಿಗೆ ಬಂದದ್ದು ಇಂದು ಬರೆಯಲು ಆರಂಭಿಸಿದಮೇಲೇ. ಏಕೋ ನಿನ್ನೆಯ ಅನುಭವಗಳನ್ನು ಕುರಿತು ಬರೆಯುವ ಕುತೂಹಲ ಈಗ ಅನಾವರಣವಾಗಹತ್ತಿತ್ತು : ಯಾರು ಬಲ್ಲರು ? ಈ ಅನುಭವಗಳನ್ನು ನಿರ್ದಿಷ್ಟ ಕಾಲಖಂಡಗಳಲ್ಲಿ ವಿಂಗಡಿಸುವುದೇ ತಪ್ಪೇನೋ. ಸದ್ಯದ ಅನುಭವವೂ ನಾನು ಅನುಭವವನ್ನು ಸ್ವೀಕರಿಸುತ್ತ ಬಂದ ರೀತಿಯ ಮೇಲೆ ಬೆಳಕು ಚೆಲ್ಲಬಹುದೇನೋ_ಆದ್ದರಿಂದ ನಾನು ಇನ್ನು ಮುಂದೆ ಹಿಡಿಯಬೇಕಾದ ಹಾದಿಯ ಮೇಲೂ ಕೂಡ. ಬದುಕಿಗೆ ವಿಮುಖನಾಗುವದು ಹೇಡಿತನ, ಉತ್ಕ್ರಾಂತಿಕ್ರಮ ನನ್ನ ಬದುಕಿನ ರೀತಿಯ ಮುಖಾಂತರ ನಡೆಸುತ್ತಿದ್ದ ಪ್ರಯೋಗವನ್ನು ವಿಫಲಗೊಳ್ಳಲು ಬಿಡಲಾರೆ…. ದೇವರೇ, ಇದೇಕೆ ನಾನು ಹೀಗೆ ನಡುಗುತ್ತಿದ್ದೇನೆ ? ನಾವು ಬೇಡಿಬಂದವರ ಹುಟ್ಟು-ಸಾವುಗಳ ನಡುವಿನ ಬದುಕು ಮಾತ್ರ ನಮ್ಮ ವೈಯಕ್ತಿಕ ಜವಾಬ್ದಾರಿಯದು ಎಂಬ ಅರಿವಿಗೇ ಮೂಲಭೂತವಾದ ಭಯವೇ ಇದು ?

ಶಿವಾಜೀ ಪಾರ್ಕಿನ ಸಮುದ್ರತೀರ. ಓದಿ ಬೇಸರ ಬಂದದ್ದರಿಂದ ಮಳಲುದಂಡೆಯ ಮೇಲೆ ಬಂದು ಕುಳಿತಿದ್ದೆ. ನಿನ್ನೆ_ನಾನೊಬ್ಬನೇ. ಸದ್ಯ ಓದಲು ಹಿಡಿದ ಕೊನ್ರಾಡ್ ಲಾರೆಂಝ್ ತಲೆ ತುಂಬಿದ್ದ. (We ಜo ಟಿoಣ ಞಟಿoತಿ oಜಿ ಚಿ siಟಿgಟಚಿ ಚಿಟಿimಚಿಟ ತಿhiಛಿh is ಛಿಚಿಠಿಚಿbಟಚಿ oಜಿ ಠಿeಡಿsoಟಿಚಿಟ ಜಿಡಿieಟಿಜshiಠಿ ಚಿಟಿಜ ತಿhiಛಿh ಟಚಿಛಿಞs ಚಿggಡಿessioಟಿ.) ಓದುವಾಗ ಮಾತ್ರ ಫಿರೋಜ್ ಹಾಗೂ ಶ್ರೀನಿವಾಸ ತಿರುತಿರುಗಿ ಓದಿಗೆ ಅಡ್ಡಬಂದದ್ದು ನೆನಪಿಗೆ ಬಂದು ಕಿರಿಕಿರಿಯಾಗುತ್ತದೆ. ಶ್ರೀನಿವಾಸನ ಹೆಂಡತಿ ಇಷ್ಟೊಂದು ಸುಂದರಳೆಂಬ ಕಲ್ಪನೆಯೇ ನನಗಿರಲಿಲ್ಲ ಎಂಬ ವಿಚಾರ ಮನಸ್ಸನ್ನು ತಟ್ಟಿಹೋಗುತ್ತದೆ. ಸುಖಪುರುಷ ಬೋಳೀಮಗ ಅನ್ನಿಸಿತು. ಶ್ರೀನಿವಾಸನ ಇಡೀ ಇತಿಹಾಸವನ್ನು ಸ್ವಲ್ಪದರಲ್ಲಿ ಹಿಡಿಯುವುದಾದರೆ ಚಿಕ್ಕಂದಿನಿಂದ ಬಡತನದಿಂದಾಗಿ ಪಟ್ಟ ಅವಮಾನಗಳನ್ನೆಲ್ಲ ಮರೆಯಲು ಮಾಡಿದ ಪ್ರಚಂಡ ಹೋರಾಟ. ಅದೊಂದು ದೊಡ್ಡ ಸಾಹಸದ ಕತೆ. ಎಲ್ಲೋ ಒಂದು ಗೊತ್ತಾಗದ ಜಾಗದಲ್ಲಿ, ಗೊತ್ತಾಗದ ರೀತಿಯಲ್ಲಿ ಆತ ನನ್ನನ್ನು ಆಹ್ವಾನಿಸುತ್ತಾನೆ.

ದಂಡೆಯ ಮೇಲೆ ಕುಳಿತ, ನಿಂತ, ಓಡಾಡುತ್ತಿದ್ದ ಅಪರಿಚಿತ ಜನರಲ್ಲಿ ಒಬ್ಬ ಮುದುಕ ಅಥವಾ ಮುದುಕನಂತೆ ಕಾಣುವ ಒಬ್ಬ ವ್ಯಕ್ತಿ ನನ್ನ ಲಕ್ಶ್ಯ ಸೆಳೆದಿದ್ದ. ಧೋತರ, ನಿರಿಗೆಗಟ್ಟಿದ ಅಂಗಿ, ಮನೆಯಲ್ಲೇ ಒಗೆದು ಇಸ್ತ್ರಿ ಮಾಡುವ ಮೊದಲೇ ಹಾಕಿಕೊಂಡಿದ್ದ ಹತ್ತಿಬಟ್ಟೆಯ ಕೋಟು, ತಲೆಯ ಮೇಲೆ ಕರಿಯ ಟೊಪ್ಪಿಗೆ, ಕಾಣದಿದ್ದರೂ ಟೊಪ್ಪಿಗೆಯ ಒಳಗೆ ಚೆಂಡಿಕೆ ಇದ್ದೀತು ಎಂಬ ಅನುಮಾನದಿಂದಲೇ ಇರಬೇಕು, ಮುದುಕನನ್ನು ನೋಡ ನೋಡುತ್ತ ನನಗೆ ಅರಿವಾಗುವ ಮೊದಲೇ ನನ್ನ ಮೋರೆಯ ಮೇಲೆ ಮುಗುಳುನಗೆ ಮೂಡಿತ್ತು. ಹಾಗೆ ಮೂಡಿದ್ದರ ಅರಿವು ನನಗೆ ಬಂದದ್ದು ನನ್ನನ್ನೇ ನೋಡುತ್ತಿದ್ದ ಮುದುಕ ಏಕಾ‌ಏಕಿ ಗಲಿಬಿಲಿಗೊಂಡಾಗ. ಅದನ್ನು ಕಂಡು ನಾನು ನನ್ನ ಮೋರೆಯನ್ನು ಇನ್ನೊಂದೆಡೆ ತಿರುವಿದ್ದೇ ಸಕ್ಕನೆ ಹೊಳೆದುಹೋಗಿತ್ತು : ಅರೆ ! ನಾನು ಈ ವ್ಯಕ್ತಿಯನ್ನು ಈ ಮೊದಲು ಎಲ್ಲಿಯೋ ಕಂಡಿದ್ದೇನೆ ಎನ್ನುವುದು. ಎಲಾ ಇದರ. ಶ್ರೀನಿವಾಸನ ಮನೆಯಲ್ಲೇ ? ಇದೀಗ ಇಲ್ಲಿ ಬರುವಾಗ ಯಾರೋ ಹಿಂಬಾಲಿಸಿತ್ತಿದ್ದಾರೆ ಎಂಬ ಅನುಮಾನ ಬಂದು ಹಿಂದಿರುಗಿ ನೋಡಿದಾಗ ಕಳ್ಳತನದಿಂದ ನನ್ನತ್ತ ಬೆನ್ನುತಿರುವಿ ನಿಂತ ವ್ಯಕ್ತಿ ಇವನೇ ಇದ್ದಿರಬಹುದೇ ? ಧೋತರ ಉಟ್ಟಿದ್ದನೇ ? ಕೋಟು ಟೊಪ್ಪಿಗೆ ಹಾಕಿಕೊಂಡಿದ್ದನೇ ? ಯಾವುದೂ ನೆನಪಿಲ್ಲ. ನನ್ನ ಜಗತ್ತಿನಲ್ಲೇ ಮಗ್ನನಾದ ನಾನು ಯಾವುದನ್ನೂ ಸರಿಯಾಗಿ ಲಕ್ಷ್ಯಕ್ಕೆ ತಂದುಕೊಂಡಂತಿರಲಿಲ್ಲ. ಹೊರಗೆ ಹೋಗಬೇಕು ಅನ್ನಿಸಿತು.

ಮರುಗಳಿಗೆ ವೋಮೂನ ನೆನಪಾಯಿತು. ಚೋಟುದ್ದದ ಹುಡುಗ. ಬಂಡಾಯಗಾರ. ಅದು ಅವನ ವಯಸ್ಸಿನ ಗುಣ. ನನಗೆ ತುಂಬಾ ಮೆಚ್ಚುಗೆಯಾದದ್ದು ಅವನ ಆರೋಗ್ಯ. ಬರೆಯಬೇಕು ಒಂದು ದಿನ ವೋಮೂನ ಬಗ್ಗೆ. “ಸರ್,” ಎಂದಿದ್ದ ಒಂದು ದಿನ. “ನಿಮ್ಮ ಮೋರೆ ನೋಡಿದರೇನೇ ಗೊತ್ತಾಗಿಬಿಡುತ್ತದೆ_ನೀವು ಯಾವಾಗಲೂ ನಿಮ್ಮ ಬಗ್ಗೇ ವಿಚಾರ ಮಾಡ್ತಾ ಇರುತ್ತೀರಿ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ.” ಎಲಾ ಒಂದೂ ಮಗನೇ ಅಂದುಕೊಂಡೆ. ಪರಿಚಯವಾಗಿ ಹತ್ತು ದಿನಗಳೂ ಆಗಿರಲಿಲ್ಲ. ಆಗ ವೋಮೂಗೆ ತನ್ನ ಮರಾಠಿ ಭಾಷೆಯ ಬಗ್ಗೆ ತುಂಬ ಅಭಿಮಾನವಿದ್ದಂತಿತ್ತು. ನಿಜ ಒಪ್ಪಿಕೊಳ್ಳಲೇ ? ನನಗೆ ಆ ಮಾತುಗಳಿಂದ ಬಹಳ ಸುಖವೆನ್ನಿಸಿತ್ತು. ಅದೇ ಭೇಟಿಯಲ್ಲೇ ಎಂದು ತೋರುತ್ತದೆ. “ವೋಮೂ ನಿನ್ನ ಹೆಸರನ್ನೇಕೆ ನೀನು ಬದಲಿಸಿಕೊಳ್ಳಬಾರದು ?” ಎಂದು ಕೇಳುವ ಹುಚ್ಚುತನದ ಉಪದ್ವ್ಯಾಪ ಮಾಡಿದ್ದೆ. “ಯಾಕೆ ? ಈಗ ಇದ್ದ ಹೆಸರು ನನ್ನನ್ನು ಕರೆಯಲು ಸಾಲದೆ ?” ಎಂದಿದ್ದ. ವೋಮೂನ ಉತ್ತರದಲ್ಲಿ ಸಿಟ್ಟಿಗಿಂತ ಹೆಚ್ಚಾಗಿ ಆತ್ಮ ವಿಶ್ವಾಸವಿತ್ತು ಎಂಬುದು ಈಗಿನ ಅನ್ನಿಸಿಕೆ. ಅಗ, ನಮ್ಮ ಪರಿಚಯವಾದ ಮೊದಲಲ್ಲಿ ಮಾತ್ರ ಐತಿಹಾಸಿಕ ಪರಿಸ್ಥಿತಿಯ ಜೋರಿನ ಮೇಲೆ ಮಾತನಾಡುತ್ತಿದ್ದಾನೆ ಒಂದೂ ಮಗ ಅನ್ನಿಸಿತ್ತು. ನಾಳೆ ಅವನ ಆಫೀಸಿಗೆ ಫೋನ್ ಮಾಡಿ ಕರೆಯಬೇಕು. ವೋಮೂ ಹರಿಜನರ ಹುಡುಗ ಎಂದು ಗೊತ್ತಾದಾಗ ಈ ಮನೆಯವರ ಪ್ರತಿಕ್ರಿಯೆ ಏನಾಗುತ್ತದೋ ನೋಡಬೇಕು….

ತಿರುಗಿ ಮುದುಕನಿದ್ದ ಜಾಗದ ಕಡೆ ನೋಡಿದಾಗ ಅದೃಶ್ಯನಾಗಿದ್ದ : ನನ್ನ ಸಂಶಯ ಗಟ್ಟಿಯಾಯಿತು. ಅವನನ್ನು ಶ್ರೀನಿವಾಸನಲ್ಲೇ ನೋಡಿರಬೇಕು. ನನ್ನನ್ನು ಬೇಕೆಂದೇ ಹಿಂಬಾಲಿಸಿರಬೇಕು. ರಾತ್ರಿ ಶ್ರೀನಿವಾಸನನ್ನು ಕೇಳಬೇಕು. ಎಂದುಕೊಂಡು ಸಮುದ್ರದತ್ತ ಕಣ್ಣು ಹಾಯಿಸಿದೆ. ಸೂರ್ಯಾಸ್ತವನ್ನು ಇದೇ ಮೊದಲೊಮ್ಮೆ ನೋಡುತ್ತಿದ್ದೇನೆ ಎನ್ನುವ ರೀತಿಯಲ್ಲಿ ಪುಳಕಿತನಾಗಿ ಕಣ್ಣರಳಿಸಿದೆ. ಮರುಕ್ಷಣ, ಮತ್ತೆ ಆ ಮುದುಕ ಮನಸ್ಸಿನಲ್ಲಿ, ಎಂತಹದೋ ಅಸ್ಪಷ್ಟ ಭಯಕ್ಕೆ ಕಾರಣನಾಗುತ್ತಿದ್ದಾನೆ ಎನ್ನುವ ಅನ್ನಿಸಿಕೆಯಿಂದ ಅಸ್ವಸ್ಥನಾಗಿ ನನಗರಿವಾಗುವ ಮೊದಲೇ ಧಡಕ್ಕನೆ ಕುಳಿತಲ್ಲಿಂದ ಎದ್ದೇ ನಿಂತೆ. ಮುಟ್ಟಿ ನೋಡಿದರೆ, ಕಡಲು-ತೀರದ ತಂಪುಗಾಳಿಯಲ್ಲೂ ಶರ್ಟಿನ ಕಾಲರ್ ಒದ್ದೆಯಾಗುತ್ತಿದ್ದ ಭಾವನೆ ಬಂತು. ಯಾವುದನ್ನೂ ಸಹಜಸ್ಪೂರ್ತಿಯಿಂದ ಅನುಭವಿಸಿ ಸಂತೋಷಿಸುವ ಸಾಮರ್ಥ್ಯವನ್ನೇ ಕಳೆದುಕೊಂಡೆನೆ ?_ಅದೇ ಏಳುತ್ತಿದ್ದ ಅನ್ನಿಸಿಕೆಯನ್ನು ಹತ್ತಿಕ್ಕಿ ಆ ಮುದುಕ ಯಾರು ಎನ್ನುವುದನ್ನು ಈಗಿಂದೀಗ ಪತ್ತೆಹಚ್ಚಲೇಬೇಕು ಎನ್ನುವ ಜರೂರಿಯಿಂದ ಅಲ್ಲಿಂದ ಹೊರಟು ಸೀದ ಶ್ರೀನಿವಾಸನ ಮನೆಯತ್ತ ಹೆಜ್ಜೆ ಇಡಹತ್ತಿದೆ. ದೃಷ್ಟಿಗೆ ಬಿದ್ದ ಪ್ರತಿ ಹೊಸ ವಸ್ತು. ಸಂಧಿಸಿದ ಪ್ರತಿ ಹೊಸ ವ್ಯಕ್ತಿ ಹೀಗೇಕೆ ಒಮ್ಮಿಂದೊಮ್ಮೆಲೇ ಭಯಕ್ಕೆ ಕಾರಣವಾಗುತ್ತಿದೆ ಅನ್ನಿಸಿ ಕೊರಳ ಮೇಲಿನ ಬೆವರನ್ನೊರೆಸಿಕೊಂಡೆ : ನಾಲ್ಕು ದಿನ ಕ್ಷೌರ ಕಂಡಿರದ ಗಡ್ಡ. ಬಾಯಿ ತೆರೆದಾಗ ತಪ್ಪದೇ ಜಗ್ ಎಂದು ಕಣ್ಣಿಗೆ ಬಿದ್ದ ಕಪ್ಪುಗಟ್ಟಿದ ಹಲ್ಲು ಉಳಿದ ಹಲ್ಲುಗಳಿಂದ ತುಸು ಹೊರಗೆ ಚಾಚಿತ್ತು.ಕನ್ನಡಕದ ಹಿಂದೆ ಗುಳಿಬಿದ್ದ ಕಣ್ಣುಗಳು. ಅವಸರ ಅವಸರವಾಗಿ ಶ್ರೀನಿವಾಸನ ಮನೆಯತ್ತ ಹೆಜ್ಜೆ ಇಡಹತ್ತಿದೆ. ಆ ಮುದುಕನೇ ನನ್ನ ಬೆನ್ನು ಹತ್ತಿದ್ದಾನೆ, ನಾನು ಅವನಿಂದ ತಪ್ಪಿಸಿಕೊಳ್ಳುತ್ತಿದ್ದೇನೆ ಎನ್ನುವ ಹಾಗೆ ಎದೆ ಡವಗುಟ್ಟುತ್ತಿತ್ತು. ಸಮುದ್ರದಂಡೆಯನ್ನು ಬಿಟ್ಟು ಟಾರ್-ರಸ್ತೆಗೆ ಬಂದು ಶ್ರೀನಿವಾಸನ ಮನೆಯತ್ತ ಹೊರಳುವ ಓಣಿಯವರೆಗೂ ಕಣ್ಣುಹಾಯಿಸಿದೆ. ಮುದುಕ ಕಾಣಲಿಲ್ಲ. ಇದೀಗ ಓಣಿಯನ್ನು ಹೊಕ್ಕು ಕಣ್ಮರೆಯಾದವನು ಅವನೇ ಎಂಬ ಭರವಸೆಯಿಂದ ಫುಟ್-ಪಾಥಿನ ಮೇಲಿನ ಜನರ ಪರವೆ ಇಲ್ಲದೆ ಓಡೋಡಿಯೇ ಓಣಿಯನ್ನು ತಲುಪಿ, ಓಣಿಯ ಆ ತುದಿಯ ಮೇಲೆ ದೃಷ್ಟಿ ಚೆಲ್ಲುವಷ್ಟರಲ್ಲಿ, ಅದೇ ಆ ಕ್ಷಣದಲ್ಲಿ ಅವನು ಮತ್ತೆ ಅಡ್ಡಬೀದಿಯನ್ನು ಸೇರಿದನೆಂದು ಅನುಮಾನ ಬಂದಾಗ ಯಾವ ಭಿಡೆಯೂ ಇಲ್ಲದೇ ಓಡಹತ್ತಿದೆ. ಮುದುಕ ಕೊನೆಗೂ ಭೆಟ್ಟಿಯಾಗಲೇ ಇಲ್ಲ. ನಾನು ಓಡೋಡಿ ಬರುತ್ತಿದ್ದುದನ್ನು ಶ್ರೀನಿವಾಸನ ಮನೆಯಿದ್ದ ಆರು ಮಜಲೆಯ ಕಟ್ಟಡದಲ್ಲಿಯ ಅನೇಕ ಜನರು ಕಂಡದ್ದು ಲಕ್ಷ್ಯಕ್ಕೆ ಬಂದಾಗ ಗೊಂದಲಿಸಿ ಕಳ್ಳನಂತೆ ಕಾಂಪೌಂಡಿನ ಗೇಟು ನೂಕಿ ಒಳಹೊಕ್ಕೆ. ಕೋಣೆ ಸೇರಿದಾಗ ಧಾರಾಳವಾಗಿ ಬೆವತಿದ್ದೆ. ದಣಿದು ಮಂಚದ ಮೇಲೆ ಅಡ್ಡವಾದಲ್ಲೇ ಬೆಳಿಗ್ಗೆ ಬರೆಯಲು ಕೂತಾಗ ಬಾವಿಯಲ್ಲಿ ಮುಳುಗಿಸಿದ ಕೊಡಪಾನ ಎಬ್ಬಿಸುವ ನೀರಗುಳ್ಳೆಯಂತೆ ಗುಳು ಗುಳು ಸದ್ದುಮಾಡಿದ ಪ್ರಶ್ನೆ ಹಠಾತ್ತನೆ ಎದ್ದು ಬಂತು : ನಾನು ಯಾತರಿಂದ ಓಡುತ್ತಿದ್ದೇನೆ ? ಪರಾರಿಯಾಗುತ್ತಿದ್ದೇನೆ ? ಶ್ರೀನಿವಾಸನ ಇತಿಹಾಸವನ್ನು ಸಂಕ್ಷಿಪ್ತಗೊಳಿಸಿ ಹೇಳಿದಂತೆ ನನ್ನದನ್ನೂ ಹೇಳಬಹುದೇ ? ಯಾಕೆ ಧೈರ್ಯವಾಗುವದಿಲ್ಲ ?

ಯಾರೋ ಕದದ ಮೇಲೆ ಬಡೆದ ಸದ್ದು ಕೇಳಿ ಹಾಸಿಗೆಯಿಂದ ಎದ್ದು ದೀಪಹಾಕಿ ಕದ ತೆರೆದರೆ ಸ್ವಲ್ಪ ಹಲ್ಲು ತೋರಿಸಿ, ಒಂದು ಗಲ್ಲದಲ್ಲಿ ಗುಳಿ ಮೂಡಿಸಿ ಮೋಹಕವಾಗಿ ನಗುತ್ತ ನಿಂತ ಶ್ರೀನಿವಾಸನ ಎರಡನೆಯ ಮಗಳು-ಚೇತನಾ ! ಕಂಡ ಕೂಡಲೇ ತುಂಬ ತುಂಬ ಹರ್ಷಿತನಾದೆ. ಕೆಲಹೊತ್ತಿನ ಮೊದಲಷ್ಟೇ ಕಳಕೊಂಡ ಪ್ರಬುದ್ಧತೆಯನ್ನು ತಿರುಗಿ ಪಡೆದವನ ಹಾಗೆ ಸುಖವಾಗಿ ನಗುತ್ತ “ಬಾ ಚೇತನಾ, ಬಾ” ಎಂದು ಅವಳನ್ನು ಒಳಗೆ ಕರೆದು ಕುರ್ಚಿ ಕೊಟ್ಟೆ. ಬಚ್ಚಲುಮನೆಗೆ ಹೋಗಿ ತಣ್ಣಗಿನ ನೀರಿನಿಂದ ಮೋರೆ ತೊರೆದು ಹೊರಗೆ ಬಂದು ಚೇತನಳ ಇದಿರಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ನಾನು ಬೇರೆಯೇ ವ್ಯಕ್ತಿಯಾಗಿದ್ದೆ : ಈಗ ಅರಿವಿಗೆ ಬಂತು : ಗಾಳಿವಿಹಾರಕ್ಕೆಂದು ಹೊರಡುವ ಮೊದಲಷ್ಟೇ ಫಿರೋಜ್ ಬಹಳ ವರ್ಷಗಳ ಹಿಂದೆ ಕೇಳಿದ_ನನ್ನನ್ನು ಮತ್ತೆ ಮತ್ತೆ ಕೆಣಕಿದ_ಪ್ರಶ್ನೆಯೊಂದರ ನೆನಪಿನಿಂದ ನನ್ನೊಳಗೆ ಎಚ್ಚೆತ್ತ ಕೋಳಿಗಿರಿಯಣ್ಣನ ಕೇರಿಯ ನಾಗಪ್ಪ ನಿದ್ದೆಹೋಗಿ, ಪ್ರೊ. ನಾಗನಾಥ ತಿರುಗಿ ಎಚ್ಚರವಾಗಿದ್ದ. ನಗುತ್ತ ಕೆಲಹೊತ್ತಿನ ಮೊದಲಷ್ಟೆ ನಡೆದ ಘಟನೆಯನ್ನು ಚೇತನಳಿಗೆ ಹೇಳಿದೆ, ಅದನ್ನು ಕೇಳಲೆಂದೇ ಅವಳು ಬಂದಿದ್ದಳೆಂಬ ಖಾತ್ರಿಯಿಂದ. ಚೇತನಾ ಬಿದ್ದು ಬಿದ್ದು ನಕ್ಕಳು. ಬದಿಯ ಕೋಣೆಯ ಬಾಲ್ಕನಿಯಿಂದ ಅವಳೂ ನೋಡಿದ್ದಳಂತೆ. ನಾನು ಓಡೋಡಿ ಬರುತ್ತಿದ್ದುದನ್ನು ಅವಳ ಮುಕ್ತ ಮನಸ್ಸಿನ ನಗುವಿನೊಂದಿಗೆ ನಾನೂ ಒಂದಾಗಿ ನಗುತ್ತಿರುವಾಗ ಚೇತನಾ ಅಂದಳು : “ಕಾಕಾ, ಅವನು ನಮ್ಮ ಅಡಿಗೆಯವನು. ರಜೆಯ ಮೇಲೆ ಊರಿಗೆ ಹೋದವನು ನಿನ್ನೆ ಸಂಜೆಗಷ್ಟೆ ತಿರುಗಿ ಬಂದಿದ್ದಾನೆ.”

ನಿನ್ನೆ ನಡೆದ ಈ ಮೋಜಿನ ಸಂಗತಿಯನ್ನು ಕುರಿತು ಬರೆಯಬೇಕೆಂದುಕೊಂಡದ್ದು ವಹಿಯ ಮೇಲೆ ಮೂಡಿರಲೇ ಇಲ್ಲ ಎಂಬುದು ಲಕ್ಷ್ಯಕ್ಕೆ ಬಂದು, ನಾಗಪ್ಪ ತನ್ನಷ್ಟಕ್ಕೇ ನಕ್ಕ. ತೆರೆದಿಟ್ಟ ವಹಿ ತೆರೆದೇ ಇತ್ತು. ನೆನಪಿಗೆ ಮೂಲ ಪ್ರಚೋದನೆಯಾದ ಈ ಮೊದಲಿನ ಟಿಪ್ಪಣಿಯನ್ನು ಇನ್ನೊಮ್ಮೆ ಓದಿ ನೋಡೋಣವೆಂದರೆ ವಹಿಯ ಮೇಲೆ ಮೂಡಿದ್ದು ಒಂಟಿ ಸಾಲಾಗಿತ್ತು ! ಇದನ್ನು ಯಾವಾಗ ಬರೆದೆ ಎಂದು ಚಕಿತನಾದವನ ಹಾಗೆ ಕಣ್ಣರಳಿಸಿದ. ಬರೆದ :

“ಟಿಪ್ಪಣಿ ಎಂಟು : ಹೊರಗೆ ಬರಲು ಯತ್ನಿಸಿದಷ್ಟೂ ಒಳಗೇ ಜಗ್ಗುತ್ತವೆ ಹಾಳು ನೆನಪುಗಳು. ಬೆನ್ನ ಹಿಂದೆ ಗುಟ್ಟಾಗಿ ಬೀಳುತ್ತಿದ್ದ ಹೆಜ್ಜೆಗಳ ಸುತ್ತ ಎದ್ದು ನಿಲ್ಲುತ್ತವೆ ನಿಗೂಢವಾದ ಪುರಾಣಗಳು : ನಾನೇನು ಹೆದರಿ ಓಡುತ್ತಿದ್ದೇನೊ ? ಏನು, ಓಡುತ್ತಿದ್ದುದರಿಂದಲೇ ಹೆದರಿಕೆಯಾಗುತ್ತದೆಯೋ ?…. ವಿಲ್ಯಮ್ ಜೇಮ್ಸ್‌ನನ್ನು ಇನ್ನೊಮ್ಮೆ ಓದಬೇಕು….”
uಟಿಜeಜಿiಟಿeಜ
– ಅಧ್ಯಾಯ ಮೂರು –

ಅರ್ಥವಾಗದ, ಒಂದು ತರದ ಅಪರಾಧಭಾವವನ್ನು ಹೋಲುವ ಹಳಹಳಿಯ ಕರಿ ನೆರಳು ಮನಸ್ಸನ್ನು ಕವಿದಾಗಲೂ ಖುಶಿಯ ಗೆರೆಗಳಲ್ಲಿ ಝಗಝಗಿಸಿ ಸುಖ ಕೊಡುವ ಕೆಲವು ಕ್ಷಣಗಳೂ ನಾಗಪ್ಪನ ಬದುಕಿನಲ್ಲಿವೆ. ಆಗೊಮ್ಮೆ ಈಗೊಮ್ಮೆ ಯಾವ ಕಾರಣವೂ ಇಲ್ಲದೇನೆ ಮೂಡಿಬಂದಾಗ ಕರುಳಿನ ಒಳ ಮೈಯಲ್ಲ ಬೆಚ್ಚಗಾದ ಭಾವನೆ. ಇವೊತ್ತು ಬೆಳಿಗ್ಗೆ ಹಾಸಿಗೆಯಿಂದ ಏಳುವ ಸಿದ್ಧತೆಯಲ್ಲಿದ್ದಾಗಲೇ ಅಮ್ಮನ ನೆನಪು :

ಅಮ್ಮ ಸತ್ತು ಈಗ, ಎಷ್ಟು, ಮೂವತ್ತು ವರ್ಷಗಳೇ ಆಗಿರಬೇಕು. ಇತ್ತೀಚೆ, ಬಹಳ ದಿನಗಳಿಂದ ಬಂದಿರದ ನೆನಪು ಇಂದೇ ಏಕೆ ಬಂದಿತೋ ! ಅಜ್ಜನ ಮನೆಯದೆಂದು ತೋರುವ ಅಂಗಳದಂಚಿನಲ್ಲಿಯ ಹತ್ತು ಪೂಟು ಎತ್ತರದ ಪಾಗಾರ, ಹೆಬ್ಬಾಗಿಲಲ್ಲಿ ಸೊಂಟದೆತ್ತರದ ಕಬ್ಬಿಣದ ಸರಳಿನ ಕಟಕಟೆ. ಒಂದು ಕೈಯಲ್ಲಿ ತೆಂಗಿನಕಾಯಿ, ಹೊಸರೆ, ವೀಳ್ಯದೆಲೆ, ಹೂಬತ್ತಿಗಳನ್ನು ಹೊತ್ತ ಹರಿವಾಣವನ್ನೂ ಇನ್ನೊಂದು ಕೈಯಲ್ಲಿ ನಾಲ್ಕು ವರ್ಷದ ತನ್ನ ಕೈಯನ್ನೂ ಹಿಡಿದು ದಾಟುತ್ತಿದ್ದ ಅಮ್ಮನ ಚಿತ್ರ. ಜಾಜೀಹೂವಿನ ಸರದ ವಾಸನೆ ಈಗ ಮತ್ತೆ ಮೂಗಿನಲ್ಲಿ ನಿಂತ ಭಾವನೆ. ಇದಿರಿನ ಮಠದಲ್ಲಿಯ ರಾಮದೇವರಿಗೆ ಆರತಿ ಕೊಡಲು ಹೋಗುತ್ತಿರಬೇಕು. ರಸ್ತೆಯಿಂದಲೇ ಕಾಣುವ ಗರ್ಭಗುಡಿಯಲ್ಲಿ ಹಣತೆ, ತೂಗು-ದೀಪಗಳ ಬೆಳಕಿನಲ್ಲಿ ಬೆಳಗಿ ನಿಂತ ಕಪ್ಪು ಶಿಲೆಯ ರಾಮ-ಸೀತೆಯರ ಈಗಲೂ ಕಣ್ಣಿಗೆ ಕಟ್ಟಿದಂತಹ ಸುಂದರ ಮೂರ್ತಿಗಳು.

ಅಮ್ಮನ ನೆನಪಿನೊಂದಿಗೆ ಈ ದೇವರ ಮೂರ್ತಿಗಳ ನೆನಪೂ ಮೂಡಿ ನಿಂತದ್ದು ಇದೇ ಮೊದಲೇನೋ. ಮಲಗಿದ್ದಲ್ಲಿಂದ ಏಳಬೇಕೆನ್ನಿಸಲಿಲ್ಲ. ಹಾಗೇ ಬಿದ್ದಿರೋಣ ಅನ್ನಿಸಿತು. ಮನಸ್ಸು ಬಹಳ ಖುಶಿಯಲ್ಲಿತ್ತು. ಈ ಖುಶಿಯ ಬೇರುಗಳಿಂದ ಹುಟ್ಟಿದೂರಿನ ಬಗ್ಗೆ ಬರೆಯಬೇಕು ಅನ್ನಿಸಿತು : ಹೌದು ಎಲ್ಲವನ್ನೂ ಅಲ್ಲಿಂದಲೇ ಆರಂಭಿಸಬೇಕು. ಬೇರುಗಳಿಂದ, ಬೇರಿಳಿದ ಮಣ್ಣಿನಿಂದ, ಚಿಕ್ಕಂದಿನ ಗೆಳೆಯರಿಂದ, ಗೆಳತಿಯರಿಂದ, ನನ್ನ ಆರೋಗ್ಯದ ಆಕರಗಳಾದ ಗಿರಿಯಣ್ಣ, ಹೊನ್ನಪ್ಪ, ಶೇಖ, ಫರೀದ, ಉತ್ತಮಿ, ಪಾರು, ದಾಮು, ಎಂಕು, ಮುರ್ಕುಂಡಿ, ದಿನ್ನಿ, ಬಸ್ತ್ಯಾಂವ್, ಕಾಣೀಗೌಡರಿಂದ ಫಿರೋಜ್, ಶ್ರೀನಿವಾಸರಿಂದ ದೂರವಾದ ಹಳ್ಳಿಯ ಕೊಂಪೆಯಿಂದ, ಶ್ರೀನಿವಾಸನ ಮನೆಯಲ್ಲೇ ಕುಳಿತು ಬರೆಯಬೇಕು….

ಬಿದ್ದಲ್ಲೇ ಹೊಳೆಯಿತು : ನಾನು ಇಲ್ಲಿಗೆ ಬಂದು ಎರಡು ದಿನಗಳಾಗುತ್ತ ಬಂದರೂ ಈ ಮನೆಯಲ್ಲಿ ಶ್ರೀನಿವಾಸ, ಚೇತನರಿಬ್ಬರನ್ನು ಬಿಟ್ಟು ಯಾರ ಒಡನೆಯೂ ಮಾತನಾಡಿಲ್ಲ. ಮನೆಯಲ್ಲಿ ಯಾರು ಯಾರು ಇದ್ದಾರೆ ಎಂಬುದೂ ಸರಿಯಾಗಿ ಗೊತ್ತಿಲ್ಲ. ಶ್ರೀನಿವಾಸನಿಗೆ ಮೂರು ಮಕ್ಕಳು ಎಂದು ಗೊತ್ತಾದದ್ದೇ ನಿನ್ನೆ ಚೇತನಾ ಬಂದಾಗ. ಈಗ ಸ್ಕೂಲು ಕಾಲೇಜುಗಳಿಗೆ ರಜೆಯಾದ್ದರಿಂದ ಹಿರಿಯ ಮಗಳು ಹಾಗೂ ಕಿರಿಯ ಹುಡುಗ ಇಬ್ಬರೂ ಕುಮಟೆಗೆ ಸೋದರತ್ತೆಯ ಮನೆಗೆ ಹೋಗಿದ್ದಾರಂತೆ. ಶ್ರೀನಿವಾಸ ತಾನಾಗಿಯೇ ಇವರಾರ ಬಗ್ಗೆ ಏನೂ ಹೇಳಿರಲಿಲ್ಲ. ಆಶ್ಚರ್ಯವೆಂದರೆ ತಾನೂ ಏನನ್ನೂ ಕೇಳಿರಲಿಲ್ಲ. ಶ್ರೀನಿವಾಸನ ತಾಯಿ ಇನ್ನೂ ಬದುಕಿದ್ದಾಳೆಯೆ ? ಎಲ್ಲಿರುತ್ತಾಳೆ ? ಗೋಕರ್ಣದಲ್ಲೆ ? ಶ್ರೀನಿವಾಸನ ಆಗ್ರಹಕ್ಕೆ ಒಪ್ಪಿ ಇಲ್ಲಿಗೆ ಬಂದ ದಿನ ಕಟ್ಟಡದಲ್ಲಿಯ ಅನೇಕರ ಕುತೂಹಲಕ್ಕೆ ಕಾರಣನಾಗಿದ್ದೆ. ಒಂದು ಸೂಟ್‌ಕೇಸ್‌ನಲ್ಲಿ ಕೆಲವು ಪುಸ್ತಕಗಳನ್ನು, ಏಳು ದಿನಗಳ ಮಟ್ಟಿಗೆ ಸಾಕಾಗಬಹುದಾದಷ್ಟು ಬಟ್ಟೆಗಳನ್ನು ತಂದಿದ್ದೇನೆ. ಶ್ರೀನಿವಾಸನ ಆಕ್ರಮಣಶೀಲ ಒತ್ತಾಯಕ್ಕೆ ಒಪ್ಪದೇ ಇರುವದು ಸಾಧ್ಯವೇ ಆಗದೆ ಹೊರಟುಬಂದಿದ್ದರೂ ಎಂಟು ದಿನಗಳಿಂದ ಹೆಚ್ಚಿನ ಕಾಲ ಇಲ್ಲಿರುವ ಮನಸ್ಸಿಲ್ಲ….

ಎಂಟು ದಿನಗಳ ಮಾತಿಗೆ ಬಂದದ್ದರಿಂದಲೇ ಇಲ್ಲಿಯ ಯಾರಲ್ಲೂ ತೊಡಗಿಸಿಕೊಳ್ಳುವ ಮನಸ್ಸಾಗಿಲ್ಲವೇನೊ ಎಂದು ಒಂದು ಕ್ಷಣ ತನ್ನ ನಿರಾಸಕ್ತಿಯನ್ನು ಸಮರ್ಥಿಸಿಕೊಂಡ, ನಾಗಪ್ಪ_ಎಂದಿನಂತೆಯೇ, ಅಪರಿಚಿತರ ಬಗ್ಗೆ ತನ್ನ ಸ್ವಭಾವ_ಶಿಲ್ಪದಲ್ಲೇ ನೆಲೆನಿಂತ ಭಯಕ್ಕೆ ಸಮೀಪವಾದ ಮುಜುಗುರ, ಸಂಕೋಚಗಳಿಂದಾಗಿ ಹೊಸಬರೊಂದಿಗೆ ಬೆರೆಯುವದೆಂದರೇನೆ ಹಿಂದೆಗೆಯುತ್ತಾನೆ. ಹಾಗೆ ನೋಡಿದರೆ ತನ್ನ ಈ ಸದ್ಯದ ನೌಕರಿ ತನ್ನ ಮೂಲಪ್ರಕೃತಿಗೆ ಒಗ್ಗುವಂತಹದಲ್ಲವೆಂದು ಗೊತ್ತಿದ್ದೂ ಅದಕ್ಕೆ ಅಂಟಿಕೊಂಡಿದ್ದೇನೆ ಎಂಬುದರ ಅರಿವು ನಾಗಪ್ಪನಿಗಿದೆ. ಶ್ರೀನಿವಾಸನ ಮನೆಯವರನ್ನು ಕುರಿತು ಆರಂಭವಾದ ವಿಚಾರ ತನ್ನ ನೌಕರಿಗೆ ಬಂದು ಮುಟ್ಟುವ ಭಯವಾಗಿ ಹಾಸಿಗೆಯಲ್ಲಿ ಎದ್ದೇ ಕುಳಿತ. ಅಡಿಗೆಯವನು ಮಾತ್ರ ತಿರುಗಿ ಕಣ್ಣಿಗೆ ಬಿದ್ದಿರಲೇ ಇಲ್ಲ ಎಂಬುದನ್ನು ನೆನೆದುಕೊಂಡ. ಪಾಪ ! ನಿನ್ನೆ ತಾನು ಅವನ ಹಿಂದೆ ಓಡೋಡಿ ಬಂದದ್ದನ್ನು ಕಂಡಿದ್ದರೆ ಅಥವಾ ಹಾಗೆಂದು ಚೇತನಳಿಂದ ಗೊತ್ತಾಗಿದ್ದರೆ ತನ್ನ ಬಗ್ಗೆ ಏನೆಲ್ಲ ಅವನು ಬಗೆಯುತ್ತಾನೊ ! ಶ್ರೀನಿವಾಸನ ಹೆಂಡತಿ ತನ್ನನ್ನು ಈವರೆಗೆ ಮಾತನಾಡಿಸಿಲ್ಲ. ಆದರೆ ಮೋರೆ ನೋಡಿದರೆ ತನ್ನ ಬಗ್ಗೆ ಶ್ರೀನಿವಾಸನಿಂದ ಬಹಳಷ್ಟು ತಿಳಿದಿದ್ದಾಳೆ ಎಂಬ ಸಂಶಯ, ಶ್ರೀನಿವಾಸನ ಮದುವೆಗೆ ತಾನು ಹೋಗಿರಲಿಲ್ಲ. ಊರಲ್ಲಿದ್ದೂ. ಶ್ರೀನಿವಾಸ ತನ್ನ ಬಗ್ಗೆ ಏನೇನು ಹೇಳಿರಬಹುದು ? ಚೇತನಳ ಕಣ್ಣುಗಳಲ್ಲೂ ಗೊತ್ತಿದೆ ಎಂಬಂತಹ ತುಂಟತನದ ಹೊಳಪಿರಲಿಲ್ಲವೆ ? ಮದುವೆಯಾಗದೇ ನೇಪಾಳೀ ಹೆಣ್ಣೊಬ್ಬಳನ್ನು ಇಟ್ಟುಕೊಂಡ ಈ ಬ್ರಹ್ಮಚಾರಿಯ ಬಗ್ಗೆ ಇವರಿಗೆಲ್ಲ ಇದ್ದಿರಬಹುದಾದ ಕುತೂಹಲದಲ್ಲಿ ತಾತ್ಸಾರವೂ ಅಡಗಿರಬಹುದೆ ?….

ಹಾಸಿಗೆಯಿಂದ ಎದ್ದು ಕಿಟಕಿಗೆ ಬಂದಾಗ ‘ಆಹಾ !’ ಎನ್ನಿಸಿತು. ಚುಮುಚುಮು ಬೆಳಕಿನಲ್ಲಿ ತಂಪಾಗಿ ಕಣ್ಣುಬಿಡುತ್ತಿದ್ದ ಪರಿಸರ : ಸರಿಯಾಗಿ ಕಾಣದಿದ್ದರೂ ಸದ್ದಿನಿಂದಲೇ ತನ್ನ ಇರುವನ್ನು ಸ್ಪಷ್ಟಗೊಳಿಸುತ್ತಿದ್ದ ಸಮುದ್ರದ ನೀರು. ಊರಿನ ನೆನಪು ತರುತ್ತಿದ್ದ ಮಳಲು-ದಂಡೆ. ಹಿತ್ತಲು. ಕದ ಬಡೆದ ಸದ್ದು ಕೇಳಿಸಿದ್ದರಿಂದ ಹೋಗಿ ಬಾಗಿಲು ತೆರೆದೆ. ಚಹದ ಕಪ್ಪನ್ನು ಚಿಕ್ಕ ಟ್ರೇದಲ್ಲಿ ಹಿಡಿದು ನಿಂತ ಅಡಿಗೆಯವನು ಒಳಗೆ ಬಂದು ಟ್ರೇಯನ್ನು ಟೇಬಲ್ಲಿನ ಮೇಲಿಟ್ಟು ಮಾತನಾಡುವ ಕುತೂಹಲವನ್ನು ಕೂಡ ತೋರಿಸದೆ ಹಾಗೇ ಹೊರಟೇಬಿಟ್ಟ. ಗಿಡ್ಡ ಪಂಚೆ, ಬನೀನು, ಹೆಗಲ ಮೇಲೊಂದು ಹಳತಾದರೂ ಸ್ವಚ್ಛವಾದ ನೆಪ್‌ಕಿನ್. ತಲೆಗೆ ಚೆಂಡಿಕೆಯಿರಲಿಲ್ಲ ಎಂಬುದು ಚಹ ಕುಡಿಯುವಾಗ ಲಕ್ಷ್ಯಕ್ಕೆ ಬಂದು ಮನಸ್ಸಿನಲ್ಲೇ ನಕ್ಕ…..

ಊರಿನ ಬಗ್ಗೆ ಬರೆಯಬೇಕೆಂದು ನಿಶ್ಚಯಿಸಿಕೊಂಡು ಬರೆಯಲು ಕೂತರೆ ಕಾಗದದ ಮೇಲೆ ಮೂಡಹತ್ತಿದ್ದು ತನ್ನ ಮತ್ತು ಫಿರೋಜನ ಮೊದಲ ಭೇಟಿಯ ನೆನಪೇ: ಕಳೆದ ಹದಿನೆಂಟು ವರ್ಷಗಳಿಂದಲೂ ಶನಿಯ ಹಾಗೆ ಕಾಡುತ್ತ ಬಂದ ಈ ವ್ಯಕ್ತಿ ತನ್ನ ಬಗ್ಗೆ ತೋರಿದ ನಿಷ್ಕಾರಣವಾದ ಕ್ರೌರ್ಯಕ್ಕೆ, ನಿಷ್ಟುರವಾದ ತಾತ್ಸಾರಕ್ಕೆ ಕಾರಣ ಹುಡುಕುತ್ತ ಹೋದರೆ ಈ ಮೊದಲ ಭೇಟಿಗೇ ಬಂದು ಮುಟ್ಟಬೇಕೇನೋ. ಹಾಗಾದರೆ ಈಗ ಇದರ ಬಗೆಗೇ ಬರೆಯಲು ಆರಂಭಿಸಿದ್ದಕ್ಕೆ ತನಗರಿವಿಲ್ಲದೇನೇ ತಾನು ತೊಡಗಿಸಿಕೊಂಡ ಈ ಮೂಲದ ಶೋಧವೇ ಕಾರಣವೆ ? ಮನುಷ್ಯ ಮೂಲದ ಶೋಧನೆಗೆ ತೊಡಗಿದಾಗ ಅಂತರ್ಮುಖನಾಗುತ್ತಾನೋ ಅಥವಾ ಅಂತರ್ಮುಖನಾದಾಗಲೇ ಮೂಲದ ಶೋಧನೆಗೆ ತೊಡಗುತ್ತಾನೋ ? ಇದೋ ಮತ್ತೆ ವಿಲ್ಯಮ್ ಜೇಮ್ಸ್ !….

“ಟಿಪ್ಪಣಿ ಒಂಭತ್ತು : ನನ್ನೆಲ್ಲ ನೋವಿಗೆ ಫಿರೋಜನೇ ಕಾರಣನೆಂದು ತಿಳಿಯುವುದರಲ್ಲೇ ನಾನು ಸಮಾಧಾನಪಡುತ್ತಿಲ್ಲವಷ್ಟೆ ? ಯಾಕೋ ಫಿರೋಜನ ಬಗ್ಗೆ ಮಾತೆತ್ತಿದಾಗೆಲ್ಲ ಎಲ್ಲ ನನ್ನದೆ ತಪ್ಪು ಎಂಬ ನಿಲುಗಡೆಗೆ ಬರುತ್ತೇನೆ, ಫಿರೋಜನ ಹಾಗೆ ಮೋರೆಯ ಮೇಲೆ ಯಾವ ಭಾವನೆಗಳನ್ನೂ ಪ್ರಕಟಿಸದೇ. ಉಳಿದವರನ್ನೇ ಮಾತನಾಡಲು ಹಚ್ಚಿ ನಾನು ಮಾತ್ರ ಆಸ್ಥೆಯಿಂದ ಕೇಳುತ್ತಿದ್ದರೂ ನಿರ್ಲಿಪ್ತನಂತೆ ತೋರಿಸಿಕೊಳ್ಳುವ, ಆಗೊಮ್ಮೆ ಈಗೊಮ್ಮೆ ಮಾತನಾಡಿದ್ದೇ ಆದರೆ ಅತ್ಯಂತ ಆಳದಿಂದ ಬಂದ ಜ್ಞಾನವೇ ಹೆಪ್ಪುಗಟ್ಟಿ ಸಿದ್ದವಾದ ಮುತ್ತುಗಳನ್ನೇ ಉದುರಿಸುತ್ತಾನೋ ಎನ್ನುವ ಮೋಡಿಯಲ್ಲಿ ಮಹದ್‌ಗಾಂಭೀರ್ಯದಲ್ಲಿ ಒಂದೋ ಎರಡೋ ಮಾತುಗಳನ್ನಾಡುವ ತಾನು ಇದೀಗ ಮಾತನಾಡಿದ್ದನ್ನು ಮರುಗಳಿಗೆಯಲ್ಲೇ ಅಲ್ಲಗಳೆದು ಉಳಿದವರನ್ನು ಗೊಂದಲಗೆಡವಿ ತಾನು ಸದಾ ಅನೂಹ್ಯನಾಗೇ ಉಳಿಯುವ ಈ ನಾಗರಿಕ ಪ್ರಾಣಿಯನ್ನು ಹೊಟ್ಟೆಯೊಳಗಿಂದ ದ್ವೇಷಿಸುತ್ತೇನೆ.

“ಫಿರೋಜನ ವ್ಯಕ್ತಿತ್ವದ ವೈಖರಿಯೆಲ್ಲ ಪ್ರಕಟವಾಗುತ್ತಿದ್ದುದು ಅವನು ಸೇದುವ ಛಿoಡಿಡಿeಛಿಣioಟಿ ಮುಖಾಂತರ. ಎಲ್ಲವನ್ನು ಮುಚ್ಚಿಟ್ಟುಕೊಂಡೂ ಎಷ್ಟೆಲ್ಲವನ್ನು ಬಿಚ್ಚಿದೆನೆಂಬ ಭ್ರಮೆ ಹುಟ್ಟಿಸುವಲ್ಲಿ ಇವನಿಗೆ ಪೈಪ್ ಬಹಳ ದೊಡ್ಡ ಸಾಧನ. ಬಹಳ ಖೋಟಾ-ಮನುಷ್ಯ ಸೂಳೇಮಗ. ತಂಬಾಕಿನ ಡಬ್ಬಿಯನ್ನು ತೆರೆಯುವ ಠೀವಿಯೇನು ! ತಾನು ಸೇದುತ್ತಿದ್ದುದು ಪರದೇಶದಿಂದ ತರಿಸಿದ್ದ ಖಿhಡಿee ಓuಟಿs ಎಂಬ ಪ್ರಖ್ಯಾತ ಹೊಗೇಸೊಪ್ಪೇ ಎಂಬುದನ್ನು ಪ್ರದರ್ಶಿಸುವ ಆಢ್ಯ ಶೈಲಿಯೇನು ! ಪೈಪಿನ ಸೇದುವ ಕೊಳವೆಯಲ್ಲಿ ದಬ್ಬಣದಂತಹ ಉದ್ದ ಕಡ್ಡಿಯನ್ನು ಹಾಕಿ ಹಿಂದಕ್ಕೆ ಮುಂದಕ್ಕೆ ಜಗ್ಗಿ (ಹಲ್ಕಟ್ ಸೂಳೇಮಗ!) ಕೊಳವೆಯ ತುದಿಯನ್ನು ತುಟಿಗಳಲ್ಲಿ ಹಿಡಿದು ಗಾಳಿ ಊದಿ ಸ್ವಚ್ಛ ಮಾಡುವಾಗ ಮೂಗಿನ ಹೊರಳೆಗಳನ್ನು ಅರಳಿಸುತ್ತ, ಕಣ್ಣು ಮಿಟುಕಿಸುತ್ತ, ಈಗ ಸ್ವಚ್ಛವಾಯಿತು ಎಂಬ ಸಮಾಧಾನ ಪ್ರಕಟಿಸಿ ಕಾಜಿನ ‘ಆಶ್ ಟ್ರೇ’ದ ಅಂಚಿನ ಮೇಲೆ ಕುಟ್ಟಿ, ತಿರುಗಿ ತುಟಿಗಳಲ್ಲಿ ಹಿಡಿದು ಊದಿ, ಪೈಪಿನ ಬಾಯಲ್ಲಿ ತಂಬಾಕನ್ನು ತುಂಬಿ ಹೆಬ್ಬೆರಳನ್ನು ಹೆಟ್ಟಿ ಅದುಮುವ ಪರಿಯೇನು ! ಈ ಎಲ್ಲ ಸಂಭ್ರಮ ನಡೆಯುತ್ತಿರುವಾಗ ನಾವು ಈ ಒಂದೂ ಮಗನ ಚಂದ ಮೂತಿಯನ್ನು ನೋಡುತ್ತ ಕೂಡ್ರಬೇಕು. ಸ್ವತಃ ತಾನೇ ಸಂಪೂರ್ಣ ಮೌನ ಧರಿಸಿರುವಾಗೂ ತನ್ನ ವ್ಯಕ್ತಿತ್ವವೇ ತನ್ನ ಜೊತೆ ಮಾತನಾಡಲು ಬಂದವರ ಮೇಲೆ ಮೋಹಿನೀಪ್ರಭಾವವನ್ನು ಬೀರುತ್ತಿದೆಯೆಂಬ ರಮ್ಯಕಲ್ಪನೆಯೊಂದಿಗೆ ಸುಂದಾಡುತ್ತ_‘ನೀನು ಮಾತಾಡಲ್ಲ,’ ಎಂದು ಆಹ್ವಾನಿಸುವಂತೆ ತನ್ನ ಕಣ್ಣ ಮೂಲೆಯಿಂದ ನೋಡುತ್ತಾನೆ. ಯಾಕೋ ಮಾತನಾಡುವ ಮನುಷ್ಯ ನನ್ನನ್ನು ಹೆದರಿಸುತ್ತಾನೆ. ಫಿರೋಜ್ ಕೂಡ ಅಂದು ನನ್ನಲ್ಲಿ ಹೊಕ್ಕುಳ ಸುತ್ತಲೂ ನಿಷ್ಕಾರಣವಾಗಿ ಭಯದ ಅಲೆಗಳನ್ನು ಎಬ್ಬಿಸುತ್ತಿದ್ದ : ನಾನು ತನ್ನ ಪ್ರತಿಸ್ಪರ್ಧಿಯೆಂಬಂತೆ ನನ್ನ ಆಳ-ಅಗಲಗಳನ್ನು ಅಳೆಯುತ್ತ, ಕಾಡು-ಪ್ರಾಣಿಯೊಂದು ತನಗಿದಿರಾದ ಬೇಟೆಯ ಕಣ್ಣುಗಳಲ್ಲೇ ದೃಷ್ಟಿ ನೆಟ್ಟು ಅದು ಮಾಡಲಿದ್ದ ತಪ್ಪು ಚಾಲನೆಯ ಹಾದಿ ಕಾಯುವ ಗತ್ತಿನಲ್ಲಿ ಪ್ರಶ್ನೆ ಕೇಳಿದ. ನನ್ನ ಅಪ್ಪನನ್ನು ಕುರಿತು. ಅವನ ವೃತ್ತಿಯನ್ನು ಕುರಿತು : ಈಗ ಹಿಂದಿರುಗಿ ನೋಡಿದಾಗ ಅದು ಈಗಿನ ಕಂಪನಿಯಲ್ಲಿ ನನ್ನ ಇಡೀ ಭವಿಷ್ಯವನ್ನೇ ನಿರ್ಧರಿಸಿದ ಆತಂಕ-ಪ್ರಶ್ನೆಯೆಂದು ತೋರುತ್ತದೆ,”

ನನ್ನ ಹುಟ್ಟಿಗೆ ಕೈ ಹಾಕಬೇಡವೋ ಬೋಳೀಮಗನೇ. ಈ ಕಂಪನಿ ನನ್ನನ್ನು ಕೆಲಸಕ್ಕೆ ಸೇರಿಸಿಕೊಂಡದ್ದು ನನ್ನ ತೋಗ್ಯತೆಗಳನ್ನು ಗಮನಿಸಿಯೇ ಹೊರತು ಅಪ್ಪನ ಇತಿಹಾಸವನ್ನಲ್ಲ. ನನ್ನ ಚೆರಿತ್ರೆಗೆ ಕೈ ಹಾಕಿದರೆ ಭೂಗೋಳ ಶಾಸ್ತ್ರವೂ ಒಳಗೊಳ್ಳಬೇಕಾಗುತ್ತದೆಯೋ ಭೆಂಛೋದ್. ಗೊತ್ತಿಲ್ಲವೇನೋ ನಿನ್ನ ಉದ್ದ ಮೂಗಿನ ರಮ್ಯ ಪ್ರವಾಸಕಥನ. ಬಾ. ಪ್ರಸ್ತುತಕ್ಕೆ ಬಾ. ವರ್ತಮಾನಕ್ಕೆ ಬಾ. ಕುಸ್ತಿ ಆಡುವದೇ ಇದ್ದಲ್ಲಿ ಇಲ್ಲಿ ಆಡೋಣ_ಬಿಸಿಲು ಬಿದ್ದ ಈ ಅಂಗಳದಲ್ಲಿ. ಕತ್ತಲೆ ತುಂಬಿದ ಗುಹಗಳಲ್ಲಿ ಬೇಡ…..ಇದೇಕೆ ತಾನು ಫಿರೋಜನನ್ನು ಹೀಗೆ ಕಲ್ಪನೆಯಲ್ಲಿ ಆಹ್ವಾನಿಸುತ್ತ ಅವನು ಮಾಡಲಿರುವ ಚಾಲನೆಗಳನ್ನು ಊಹಿಸಿಕೊಳ್ಳುವುದರಲ್ಲೇ ತನ್ನ ಆಯುಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದೇನೆ ಎನ್ನುವುದು ಗೊತ್ತಾಗದೇ ದಣಿವು ಬಂದಂತೆನಿಸಿ ನಾಗಪ್ಪ ಕುರ್ಚಿ ಬಿಟ್ಟು ಎದ್ದ. ಕೋಣೆಯಲ್ಲಿ ಶತಪಥ ಹಾಕುತ್ತಿರುವಾಗ ಫಿರೋಜನ ಬಗ್ಗೆ ವ್ಯಕ್ತವಾದ ದ್ವೇಷಕ್ಕೆ ಪ್ರತಿಕ್ರಿಯೆ ಶುರುವಾಗಿ ಮನಸ್ಸಿನಲ್ಲಿತಪ್ಪು ಮಾಡಿದ ಭಾವನೆ : ಇದರಡಿಯಲ್ಲಿದ್ದುದು ನನ್ನ ಪುಕ್ಕಲುತನವೇ ?_ಅಪ್ಪನನ್ನು ಇದಿರಿಸುವ ಪುಕ್ಕಲುತನವೇ ? ಶ್ರೀನಿವಾಸನ ಮನೆಯ ಅಡುಗೆಯವನನ್ನು ನೋಡಿದಾಗ ಅನುಭವದ ಆಳದಲ್ಲಿ ಕಣ್ಣುಬಿಟ್ಟದ್ದು ಅಪ್ಪನ ನೆನಪೇ ?

ಎಂದೋ ಓದಿದ್ದರ ನೆನಪು : ಅಬ್ಜ ವರ್ಷಗಳ ವಿಕಾಸಕ್ರಮದ ಪರಂಪರೆಯಲ್ಲಿ ಬೆಳೆದುಬಂದ ದೇಹ ಹಾಗೂ ಗರ್ಭಾವಸ್ಥೆಯಲ್ಲಿ, ಅನಂತರದ ದೀರ್ಘಕಾಲದ ಶೈಶವದಲ್ಲಿ ಬದುಕಿನ ಬಗ್ಗೆ ಸುತ್ತಲಿನ ಪರಿಸರದ ಬಗ್ಗೆ ಕನಸುಗಳನ್ನು ಕಂಡ ಮನಸ್ಸು_ಇವುಗಳೊಂದಿಗೆ ಸುಸಜ್ಜಿತವಾದ ವ್ಯಕ್ತಿ ಜೀವಂತವಾದ ಒಂದು ಸಮಾಜದಲ್ಲಿ ಕಾಲಿರಿಸುತ್ತದೆ. ಮಾನವನಾಗಿ ಅರಳುತ್ತಾನೋ ಕಾಯಂ ಆಗಿ ಮುರುಟಿಹೋಗುತ್ತಾನೋ ಎನ್ನುವುದು ಕೊನೆಯಲ್ಲಿ ಈ ಸಾಮಾಜಿಕ ಸನ್ನಿವೇಶವನ್ನೇ ಅವಲಂಭಿಸಿದ್ದು : ಮಾನವನ ಮೂಲಸ್ವಭಾವದಲ್ಲೇ ಇದ್ದ ಯಾವ ಒಂದು ಮೂಲಭೂತ ಶಕ್ತಿಯನ್ನು ಇದಿರಿಸಬೇಕಾಗುತ್ತದೆ ಎನ್ನುವುದರ ಮೇಲೆ ನಿಂತದ್ದು. ಜೀವೋತ್ಕರ್ಷಿಯಾದ ಪ್ರೀತಿಯನ್ನೋ ? ಸಾವಿನ ಪ್ರತಿನಿಧಿಯಾದ ದ್ವೇಷವನ್ನೋ ?

ಮಾನವನ ಸಾಮಾಜಿಕ ಇತಿಹಾಸವನ್ನು ಈ ದೃಷ್ಟಿಕೋನದಿಂದ ಅಭ್ಯಾಸ ಮಾಡುವುದು ಶಕ್ಯವಿದೆ. ಆದರೆ ಸದ್ಯ ನಾನು ಅರಿಯಬೇಕಾದದ್ದು : ಶ್ರೀನಿವಾಸ ಹಾಗೂ ಫಿರೋಜ್ ಇವರು ನನ್ನನ್ನು ಇಷ್ಟೊಂದು ದ್ವೇಷಿಸಲು ಕಾರಣವೇನು ? ಹುಡುಕಬೇಕು.
uಟಿಜeಜಿiಟಿeಜ
– ಅಧ್ಯಾಯ ನಾಲ್ಕು –

ವಿಶಾಲವಾದ ಶಿವಾಜೀ ಪಾರ್ಕ್ ಮೈದಾನಿನ ಅಂಚಿನಲ್ಲಿ ತೆಂಗಿನ ಮರಗಳು ಒತ್ತಾಗಿ ಬೆಳೆದ ಹಿತ್ತಲೊಂದರಿಂದ ಹೊರಗೆ ಬಿದ್ದ ನಾಗಪ್ಪ ಆ ಹಿತ್ತಲು ಹೋಗುವುದರ ಮೊದಲಿಗಿಂತ ಹೆಚ್ಚು ಗಂಭೀರನಾಗಿದ್ದನಷ್ಟೇ ಅಲ್ಲ. ಅವನ ಮೋರೆಯ ಮೇಲಿನ ಗಾಂಭೀರ್ಯದಲ್ಲಿ ಈಗ ಒಂದು ಬಗೆಯ ಮ್ಲಾನತೆ, ಭಯ, ಕಾತರಗಳೂ ಸೇರಿಕೊಂಡಿದ್ದವು. ವಿಚಾರಗಳ ಗುಂಗಿನಲ್ಲಿದ್ದಾಗಲೇ ಅವನು ಮೈದಾನಿನ ಪಶ್ಚಿಮಕ್ಕಿದ್ದ ಕೆಡೆಲ್-ರೋಡಿಗೆ ಒಂದು ರಸ್ತೆಯನ್ನು ದಾಟುವ ಅವಕಾಶಕ್ಕಾಗಿ ಕಾಯಹತ್ತಿದ : ಎಡೆಬಿಡದೆ, ಇದಕ್ಕೆ ಕೊನೆಯೇ ಇಲ್ಲ ಎಂಬಂತೆ ಸಾಗಿದ ವಾಹನಗಳ ಓಡಾಟವನ್ನು ಗಮನಿಸಿಯೂ ಅದರ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯ ತೋರಿಸಲಿಲ್ಲ. ಪುರಸೊತ್ತು ಸಿಕ್ಕ ಕೂಡಲೇ ಯಾಂತ್ರಿಕವಾಗಿ ಪೆಡೆಸ್ಟ್ರಿಯನ್-ಕ್ರಾಸಿಂಗಿನ ಝೀಬ್ರಾ-ಗೆರೆಗಳ ಮೇಲೆ ಹೆಜ್ಜೆ ಇಡುತ್ತಿದ್ದಾಗ ಅವನ ಗುರುತು ಹಿಡಿದ ವ್ಯಕ್ತಿಯೊಂದು_ “ಹಲ್ಲೋ ಹಲ್ಲೋ, ನೀವು ? ಇಲ್ಲಿ ಮುಂಬಯಿಯಲ್ಲಿ ಹೇಗೆ ? ನೀವು ಮೊದಲು ಹೈದ್ರಾಬಾದಿನಲ್ಲೋ ಇನ್ನೆಲ್ಲೋ ಕೆಲಸಕ್ಕಿದ್ದಿರಲಿಲ್ಲವೇ ? ಈಗ ನೀವು ಕಾಮತ್ ವಕೀಲರ ಕಾಂಪೌಂಡಿನೊಳಗಿಂದ ಹೊರಬೀಳುವಾಗಲೇ ನೋಡಿದ್ದೆ. ಹೌದೋ ಅಲ್ಲವೋ ಎಂದು ಅನುಮಾನ ಬಂತು,” ಎಂದಿತು. ರಸ್ತೆಯನ್ನು ದಾಟುವ ಅವಸರದ ವೇಗಕ್ಕೆ ಅನುಗುಣವಾಗಿ ಆಡಿದ ವ್ಯಕ್ತಿಯ ಮಾತು ಮುಗಿಯುವುದರಲ್ಲಿ ಇಬ್ಬರೂ ರಸ್ತೆಯ ಇನ್ನೊಂದು ಅಂಚಿಗೆ ಬಂದು ತಲುಪಿದ್ದರು. ಆಕಸ್ಮಾತ್ತಾಗಿ ಭೆಟ್ಟಿಯಾದವನ ಪರಿಚಯ ಸರಿಯಾಗಿ ಸಿಗದಿದ್ದರೂ ಎಲ್ಲೋ ನೋಡಿದ ಮೋರೆ ಎನ್ನುವದಷ್ಟು ಹೊಳೆದು ಇಲ್ಲದ ಅನುಮಾನಕ್ಕೆ ಬಿದ್ದ. “ನಾನು ದೋಶಿ, ನೆನಪಿದೆಯೆ ? ನೀವು ವಡಾಳಾದಲ್ಲಿ ಹೊನ್ನಾವರರ ಮನೆಯಲ್ಲಿ…..ಟ್ಯೂಶನ್ ಕೊಡಲು ಬರುತ್ತಿದ್ದಾಗ….”

“ಓಹೋಹೋ….ದೋಶೀದೋಶೀ… ಇನ್‌ಕಮ್-ಟ್ಯಾಕ್ಸ್ ಆಫೀಸರ್….ಈಗ ತುಂಬ ಬದಲಾಗಿದ್ದೀರಿ…”

“ಹೌದು, ತುಂಬ ದಪ್ಪನಾಗಿದ್ದೇನೆ ಅಲ್ಲವೆ ? ಮದುವೆಯಾದದ್ದರ ಪರಿಣಾಮ. ಕೆಲವು ದಿನಗಳ ಹಿಂದೆ ಚೌಪಾಟಿಯ ಕೈವಲ್ಯಧಾಮವನ್ನು ಸೇರಿದ್ದೇನೆ, ಯೋಗಾಸನ ಕಲಿಯಲು. ಇನ್ನೊಂದು ಮಾತು : ನಾನೀಗ ಸರ್ಕಾರೀ ನೌಕರಿಯಲ್ಲಿಲ್ಲ. ಆದರೆ ದಂಧೆ ಅದೇ. ಈಗ ಇನ್‌ಕಮ್-ಟ್ಯಾಕ್ಸ್ ಪ್ರೆಕ್ಟೀಶನರ್.” ದೋಶಿಯವರ ಮಾತುಗಳಲ್ಲಿ ಉಮೇದು ಉತ್ಸಾಹಗಳು ತುಂಬಿದ್ದವು. ಗೊತ್ತಾಗುವ ಮೊದಲೇ ನಾಗಪ್ಪ ಬಹಿರ್ಮುಖನಾಗಹತ್ತಿದ.

“ಈಗ ಹೊರಟಿದ್ದೆಲ್ಲಿಗೆ… ನಾನು ಹೀಗೇ ಗಾಳಿ-ವಿಹಾರಕ್ಕೆಂದೇ ದಾದರ್ ನಿಂದ ನಡೆಯುತ್ತ ಬಂದೆ. ಮನೆಯಲ್ಲೊಬ್ಬನೇ. ಮನೆಯವರೆಲ್ಲ ಊರಿಗೆ ಹೋಗಿದ್ದಾರೆ. ನಿಮ್ಮದು ಬೇರೆ ಏನೂ ಕಾರ್ಯಕ್ರಮ ಇಲ್ಲದಿದ್ದರೆ ಸಮುದ್ರ ದಂಡೆಗೆ ಹೋಗಬಹುದಿತ್ತು, ಬರುತ್ತೀರಾ ?” ಎಂದು ಕೇಳಿದರು, ದೋಶಿ.

“ಹೋಹೋ, ಹೋಗೋಣವಲ್ಲ, ಅದಕ್ಕೇನು. ಎಷ್ಟು ವರ್ಷಗಳ ಮೇಲೆ ಭೆಟ್ಟಿಯಾಗಿದ್ದೀರಿ,” ನಾಗಪ್ಪನಲ್ಲೂ ಉತ್ಸಾಹ ಸೇರಿಕೊಂಡಿತು. ಇಬ್ಬರೂ ಸಮುದ್ರ ದಂಡೆಗೆ ಬಂದರು. ನಾಗಪ್ಪ ಮೊನ್ನೆ ಕೂತ ತಾಣವಲ್ಲವಿದು. ಕಡಲತೀರದ ಸ್ಮಶಾನದಿಂದ ದೂರವಾದ, ಗಾಳಿ-ಮರಗಳಿಂದಾಗಿ ಊರಿನ ನೆನಪನ್ನು ಕೆದಕುವ ಹೊಸ ಜಾಗವಾಗಿತ್ತು. ತಮ್ಮ ಪರಿಚಯವಾದ ಮೊದಲು ದಿನಗಳ ನೆನಪುಗಳನ್ನು ಮೆಲುಕಾಡಿಸಿದಾಗ ಅನೇಕ ಸಂಗತಿಗಳು ಮಾತಿನಲ್ಲಿ ಪುನಃ ಸೃಷ್ಟಿಯಾಗಹತ್ತಿದವು. ಅನಿವಾರ್ಯವಾಗಿಯೇ ಮಾತು ನಾಗಪ್ಪನ ನೌಕರಿಯತ್ತ ತಿರುಗಿತು. ಆಗಿನಿಂದಲೂ ಉಲ್ಲಸಿತನಾಗಿದ್ದ ನಾಗಪ್ಪ ಕೂಡಲೆ ಮ್ಲಾನಗೊಂಡ : ಇಬ್ಬರೂ ಒಮ್ಮೆಲೇ ಮಾತು ನಿಲ್ಲಿಸಿದರು. ಅನಿರೀಕ್ಷಿತವಾದ ಈ ಮೌನದಿಂದ ಪ್ರಶ್ನೆ ಕೇಳಿದ ದೋಶಿಯವರಿಗೇ ಮುಜುಗರವಾಯಿತು. ನಾಗಪ್ಪನ ಕರ್ರಿಯರ್ ಬಗ್ಗೆ, ವಿಖ್ಯಾತವಾದ ಇಂಗ್ಲಿಷ್ ಅಥವಾ ಅಮೇರಿಕನ್ ಮ್ಯಾನೇಜ್‌ಮೆಂಟ್ ಇದ್ದ ದೊಡ್ಡ ಕಂಪನಿಯೊಂದರಲ್ಲಿ ಅವನಿಗಿದ್ದ ನೌಕರಿಯ ಬಗ್ಗೆ ಕೇಳಿ ಅರಿತಿದ್ದ ದೋಶಿಯವರಿಗೆ ನಾಗಪ್ಪನ ಮೇಲೆ ತುಂಬ ಅಭಿಮಾನವಿತ್ತು. ಅಂತಹ ಅಭಿಮಾನದ ಭಾವನೆಯಿಂದಲೇ ಅವರು ಪ್ರಶ್ನೆ ಕೇಳಿದ್ದರು. ಆದರೆ ಅತಿ ಸಹಜವಾದ ಈ ಪ್ರಶ್ನೆಗೆ ಕೂಡಲೇ ಉತ್ತರ ಕೊಡುವುದು ಅಸಾಧ್ಯವಾಗಿ ತೋರಿದ ನಾಗಪ್ಪನಿಂದ ಯಾವ ಮಾತೂ ಹೊರಡದಾಯಿತು. ಆದರೂ ದೋಶಿ ತನ್ನ ಮೌನವನ್ನು ತಪ್ಪು ತಿಳಿದಾರು ಎಂಬ ಆತಂಕದಿಂದ_“ಎಲ್ಲ ಸರಿಯಾಗಿದ್ದರೆ ಇನ್ನೊಂದು ತಿಂಗಳಲ್ಲಿ ನಾನು ಹೆಚ್ಚಿನ ತರಬೇತಿಗಾಗಿ ಅಮೇರಿಕಾಕ್ಕೆ ತೆರಳಬೇಕಾಗಿತ್ತು. ಆದರೆ ನಮ್ಮ ಕಂಪನಿಯ ಒಬ್ಬ ಪಾರ್ಸೀ ಡೈರೆಕ್ಟರರ ಗಲೀಜು ಪೊಲಿಟಿಕ್ಸ್….”ನಾಗಪ್ಪನ ಮಾತು ಅರ್ಧಕ್ಕೇ ನಿಂತಿತ್ತು. ದೂರ ನೀರಂಚಿನಲ್ಲಿ ಸೂರ್ಯ ಕೆಂಪಿನ ಉಂಡೆಯಾಗಿ ಪ್ರಜ್ವಲಿಸುತ್ತ ಅಸ್ತಕ್ಕೆ ಸಾಗಿದ್ದ. ಆ ದಿವ್ಯ ಮುಹೂರ್ತಕ್ಕೆ ಕಾದು ನಿಂತ ರೀತಿ ಸಮುದ್ರ ತೆರೆಗಳನ್ನೆಬ್ಬಿಸುವುದನ್ನು ಕೂಡ ಮರೆತು ಸ್ತಬ್ಧವಾಗಿತ್ತು. ದಂಡೆಯ ಮೇಲೂ, ರಜೆಯ ದಿನ ಅಲ್ಲವಾಗಿದ್ದರಿಂದ, ಜನರ ಗದ್ದಲವಿರಲಿಲ್ಲ. ಸುತ್ತಲಿನ ಈ ನೀರವತೆಗೆ ಶ್ರುತಿ ಹಿಡಿಯುವಂತೆ ನಾಗಪ್ಪ ಅತ್ಯಂತ ತಗ್ಗಿದ ದನಿಯಲ್ಲಿ “I ಚಿm ಚಿ viಛಿಣim oಜಿ ಜiಡಿಣಥಿ ಠಿoಟiಣiಛಿs,” ಎಂದ. ದೋಶಿ, ಸಹಾನುಭೂತಿಯ ಧಾಟಿಯಲ್ಲಿ, “ನನಗೆಲ್ಲ ಅರ್ಥವಾಗುತ್ತದೆ. ನನಗಿದೇನೂ ಹೊಸತಲ್ಲ ಬಿಡಿ. ಇದು ಈ ಮನುಷ್ಯ-ಪ್ರಾಣಿ ಎಂಬುದು ಇದ್ದಲ್ಲೆಲ್ಲ ಇರುವುದೇ. ನಾನೂ ನನ್ನ ನೌಕರಿಯನ್ನು ಬಿಟ್ಟುಕೊಟ್ಟದ್ದು ಇಂತಹ ಒಂದು ಪರಿಸ್ಥಿತಿಯಲ್ಲೇ. ಇನ್ನೊಮ್ಮೆ ಭೆಟ್ಟಿಯಾದಾಗ ಎಲ್ಲ ಮಾತನಾಡೋಣ. ಧೈರ್ಯ ಬಿಡಬೇಡಿ. ಎಲ್ಲ ಸರಿಯಾಗುತ್ತದೆ ” ಎಂದರು. ನಾಗಪ್ಪನಿಗೂ ಆ ಮಾತುಗಳಿಂದ ಅಸಾಧಾರಣ ಧೈರ್ಯವೆನಿಸಿತು. ತುಂಬಾ ಭಾವನಾವಶನಾದವನ ಹಾಗೆ “ಥ್ಯಾಂಕ್ಯು” ಎಂದ. ಹೆಚ್ಚಿನದೇನೋ ಹೇಳಬೇಕೆಂದುಕೊಂಡದ್ದು ತನ್ನ ಈಗಿನ ಸ್ಥಿತಿಯಲ್ಲಿ ಸಾಧ್ಯವಿಲ್ಲವೆನಿಸಿತು. ಕಡಲುತೀರವನ್ನು ಬಿಟ್ಟು ಹೊರಡುವುದಾದಮೇಲೆ. “ಒಮ್ಮೆ ನಾನೇ ನಿಮ್ಮ ಮನೆಗೆ ಬಂದು ಭೆಟ್ಟಿಯಾಗುತ್ತೇನೆ. ನೀವು ಅಷ್ಟೊಂದು ಆತ್ಮೀಯತೆಯಿಂದ ಮಾತನಾಡಿಸಿ ತುಂಬ ಧೈರ್ಯ ಕುದುರಿಸಿದ್ದೀರಿ,” ಎಂದು ಹೇಳಿ ದೋಶಿಯವರಿಂದ ಅವರ ಹಿಂದೂ-ಕಾಲೊನಿಯೊಳಗಿನ ಮನೆಯ ಪತ್ತೆ ತೆಗೆದುಕೊಂಡ. ತಾನು ಸದ್ಯ ಒಂದು ಕಾದಂಬರಿಯನ್ನು ಬರೆಯುವ ಉದ್ದೇಶದಿಂದ ಎರಡು ತಿಂಗಳ ರಜೆಯನ್ನು ಪಡೆದಿದ್ದೇನೆಂದೂ, ಗೆಳೆಯರೊಬ್ಬರ ಮನೆಯಲ್ಲಿ ಒಂದು ವಾರ ಕಳೆಯಲಿದ್ದೇನೆಂದೂ, ಹೇಳುತ್ತ ಶ್ರೀನಿವಾಸನ ಹೆಸರು ಹೇಳಿದ್ದೇ, ದೋಶಿಯವರು “ಓಹ್!” ಎನ್ನುತ್ತ ತಮಗೆ ಶ್ರೀನಿವಾಸನ ಪರಿಚಯ ಚೆನ್ನಾಗಿದೆ, ಆದರೆ ಎಲ್ಲರನ್ನು ಬಿಟ್ಟು ಅವನಲ್ಲೇಕೆ ಎಂಬ ಭಾವವನ್ನು ಮೋರೆಯಮೇಲೆ ಪ್ರಕಟಿಸಿದರು. ಹಾಗೂ, “ಕಾದಂಬರಿಯೆ ? ಸಂತೋಷ ಸಂತೋಷ. ಅಂತೂ ನೀವು ಬರೆಯುವ ಹವ್ಯಾಸ ಬಿಟ್ಟಿಲ್ಲ. ‘ಕೆನರೀಸ್’ ಭಾಷೆಯಲ್ಲಿ ತಾನೇ ? ನಿಜ ಹೇಳಲೇ ? ಈ ಮನುಷ್ಯನ ವ್ಯಾವಹಾರಿಕ ಜಗತ್ತಿನ ಅಸಹ್ಯವಾದ ಅಂದಗೇಡಿತನದಿಂದ ಮನಸ್ಸು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಇಂತಹದೇನಾದರೂ ದೇವರು ಕೊಟ್ಟಿದ್ದಿರಬೇಕು…. ಸಭ್ಯತೆಯ ಮುಖವಾಡದ ಹಿಂದೆಯೇ ಎಂತಹ ಕ್ರೌರ್‍ಯದ ಹಲ್ಲುಮಸೆತ ನೋಡಿ… ಕಾಡಿನಲ್ಲಿ ನಮ್ಮ ಪೂರ್ವಜರು ನಾಲ್ಕು ಕಾಲುಗಳ ಮೇಲೆ ಆಡಿತ್ತಿದ್ದದ್ದನ್ನೇ ಇಲ್ಲಿ ಎರಡು ಕಾಲುಗಳ ಮೇಲೆ ಆಡುತ್ತಿದ್ದೇವೆ.” ದೋಶಿಯವರಲ್ಲೂ ತನ್ನೊಡನೆ ಹಂಚಿಕೊಳ್ಳಲು ಹಾತೊರೆಯುವಂತಹ ಪ್ರಚಂಡ ಅನುಭವವಿದ್ದಂತೆ ತೋರಿತು : ಇದ್ದಕ್ಕಿದ್ದಂತೆ ಅವರು ತುಂಬ ಹತ್ತಿರದವರಾಗಿ ಕಂಡರು. ಹೊರಡುವ ಸಿದ್ಧತೆಯಲ್ಲಿ ಎದ್ದುನಿಂತವರು ತಾವಿನ್ನೂ ಮರಳು-ದಂಡೆಯಲ್ಲಿ ನಿಂತೇ ಇದ್ದದ್ದು ಲಕ್ಷ್ಯಕ್ಕೆ ಬಂದಾಗ ಇಬ್ಬರೂ ನಕ್ಕರು. ಹೀಗೆ ಆಕಸ್ಮಿಕವಾಗಿಯೇ ಆಗಲೊಲ್ಲದೇಕೆ_ಅನೇಕ ವರ್ಷಗಳ ಮೇಲೆ ಆದ ಈ ಭೇಟಿಯನ್ನು ವ್ಯರ್ಥವಾಗಲು ಬಿಡಬಾರದು. ತಾವಿಬ್ಬರೂ ತಿರುಗಿ ಬೆಟ್ಟಿಯಾಗಬೇಕು_ನಾಳೆಗೇ, ಇದೇ ತಾಣದಲ್ಲಿ ಎಂದು ದೋಶಿಯವರು ಮಾಡಿದ ಸೂಚನೆಗೆ ಒಪ್ಪಿಕೊಂಡು, ರಾಜರಸ್ತೆಗೆ ಬಂದವರೇ ಒಬ್ಬರನ್ನೊಬ್ಬರು ಬೀಳ್ಕೊಂಡು ತಮ್ಮತಮ್ಮ ಮನೆಯ ಹಾದಿ ಹಿಡಿದರು.

ದೋಶಿ ಕಣ್ಮರೆಯಾದ ಕೂಡಲೇ, ಅವರು ಅಷ್ಟೆಲ್ಲ ಆತ್ಮೀಯತೆಯಿಂದ ಮಾತನಾಡುತ್ತಿದ್ದಾಗ ತಾನು ಮಾತ್ರ ಅವರೊಡನೆ ಸುಳ್ಳಾಡಿದೆನಲ್ಲ ಎಂಬ ಅರಿವಿನಿಂದ ನಾಗಪ್ಪನ ಮನಸ್ಸು ಕಳವಳಕ್ಕೊಳಗಾಯಿತು : ಒಂದು ತಿಂಗಳ ರಜೆಯ ಮೇಲೆ ಇದ್ದದ್ದು ನಿಜ. ಆದರೆ ಕಾದಂಬರಿ ಬರೆಯಲೆಂದು ರಜೆ ಪಡೆದದ್ದಲ್ಲ. ಹಾಗೆ ನೋಡಿದರೆ ಈ ರಜೆಯನ್ನು ತಾನು ಪಡೆದದ್ದೇ ಅಲ್ಲ. ತನಗವರು ಕೊಟ್ಟದ್ದು. ಇದರ ನೆನಪಿನಿಂದಲೇ ನಾಗಪ್ಪನಿಗೆ ಕೊರಳು ಬಿಗಿದುಕೊಳ್ಳಹತ್ತಿದಾಗ ಮೊನ್ನೆ ಶ್ರೀನಿವಾಸ ಅಚಾನಕವಾಗಿ ‘ಸಂತೋಷಭವನ’ದಲ್ಲಿ ತನ್ನನ್ನು ಕಂಡು ಮಾತನಾಡಿಸಿದಾಗ ಥಟ್ಟನೆ ಹೊಳೆದ ಸುಳ್ಳನ್ನೇ ಈಗ ದೋಶಿಯವರ ಇದಿರೂ ಆಡಿದ್ದ… ‘ಕಾಡಿನಲ್ಲಿ ನಾಲ್ಕು ಕಾಲುಗಳ ಮೇಲೆ ಆಡುತ್ತಿದ್ದುದನ್ನೇ ಇಲ್ಲಿ ಎರಡು ಕಾಲುಗಳ ಮೇಲೆ ಆಡುತ್ತಿದ್ದೇವೆ’ : ಅರೆ! ದೋಶಿಯವರೂ ಕೂಡ ಕೊನ್ರಾಡ್ ಲಾರೆಂಝನನ್ನು ಓದಿರಬಹುದೆ ? ಅಥವಾ ಖುದ್ದು ಜೀವನದಲ್ಲಿ ಬಂದ ಅನುಭವವೇ ಹಾಗೆ ಆಡಲು ಹಚ್ಚಿರಬಹುದೇ ?… ಫಿರೋಜ್ ನಾಲ್ಕು ಕಾಲುಗಳ ಮೇಲೆ ನಿಂತು ಮೈಕೊಡವಿ ಹೂಂಕರಿಸುವ ಚಿತ್ರ ಕಣ್ಣ ಮುಂದೆ ನಿಂತೊಡನೆ ತಾನಿನ್ನೂ ರಾಜಬೀದಿಯ ಮೇಲೆ ಇದ್ದೇನೆ ಎನ್ನುವುದನ್ನೂ ಮರೆತು_ಥೂ ಕಾಡುಹಂದಿಯೇ ಎಂದು ಉಗುಳಿದ. ಮರುಗಳಿಗೆ, ತನ್ನ ಕೃತ್ಯದ ಬಗ್ಗೆ ತನಗೇ ಮುಜುಗರವಾಯಿತು. ತ್ವರಿತವಾಗಿ ಮನೆಯತ್ತ ಹೆಜ್ಜೆ ಹಾಕಹತ್ತಿದ. ಮನೆ ತಲುಪಿ ಕೋಣೆ ಹೊಕ್ಕು ಹುಶ್ ಎಂದು ಮಂಚದ ಮೇಲೆ ಒರಗಿದ ಕೂಡಲೇ ಸತ್ಯಸಂಗತಿಯನ್ನು ದೋಶಿಯವರಿಗೆ ನಾಳೆ ತಿಳಿಸಬೇಕೇ ? ಎಂಬ ಪ್ರಶ್ನೆ ಇದಿರಾಯಿತು. ಮನುಷ್ಯ ಹ್ಯಾಗೆ ಎನ್ನುವದು ಈಗಲೇ ಹೇಗೆ ಗೊತ್ತಾಗಬೇಕು ? ಈವರೆಗಿನ ಅನುಭವ ಕಲಿಸಿದ್ದೇನು ? ಮೋರೆಯಮೇಲೆ ಗೆಳೆಯನೆಂದು ತೋರಿಸಿಕೊಳ್ಳುತ್ತಿರುವಾಗಲೇ ಬೆನ್ನಲ್ಲಿ …ಬೇಡ.ಜನರ ಬಗ್ಗೆ ತನಗೆ ಸಹಜಸ್ಪೂರ್ತಿಯಿಂದ ಅನ್ನಿಸುತ್ತಿದ್ದ ಪ್ರೀತಿ-ವಿಸ್ವಾಸಗಳನ್ನು ಇಷ್ಟೊಂದು ಬೇಗ ಕಳೆದುಕೊಳ್ಳಬಾರದು. ಸದ್ಯಕ್ಕಂತೂ ದೋಶಿಯವರೆಂತಹರ ಗರಜು ಎಲ್ಲಕ್ಕಿಂತ ಹೆಚ್ಚಾಗಿ ತನಗೇ ಇದೆ…

ಗುಜರಾಥೀ ಮಾತೃಭಾಷೆಯವರಾದ ದೋಶಿ ಯಾವ ಭಿಡೆಯೂ ಇಲ್ಲದೇನೆ ‘ಹೊಡೆದು ಹೋಗುವ’ ಕೆಟ್ಟ ಉಚ್ಛಾರಗಳ ಇಂಗ್ಲೀಷು, ಅದಕ್ಕಿಂತ ಹೆಚ್ಚಾಗಿ ನಡುನಡುವೆ ಸೇರಿಸುತ್ತಿದ್ದ ‘ಝಾಲಾ-ಮೇಲಾ-ಸಾಲಾ’ ಪ್ರಧಾನವಾದ_ದೋಶಿ ಇದು ಮರಾಠೀ ಎಂದು ತಪ್ಪು ತಿಳಿದ_ವಿಚಿತ್ರಭಾಷೆ ಕೂಡ ಹಿಂದಿನಂತೆ ಮೈಮೇಲೆ ಮುಳ್ಳು ನಿಲ್ಲಿಸಲಿಲ್ಲ ಎಂಬುದು ಈಗ ಗಮನಕ್ಕೆ ಬಂದವನಂತೆ ಸುಖವಾಗಿ ನಕ್ಕ.” ಚೇತನಾ ಹೇಗೆ ಇನ್ನೂ ಬಂದಿಲ್ಲ ಎಂದುಕೊಳ್ಳುವಷ್ಟರಲ್ಲಿ ಚೇತನಾ ಹಾಜರ್ : ಅಗಳಿ ಹಾಕಿರದ ಕದ ದೂಡಿ ಒಳಗೆ ಬಂದವಳೇ ಮುತ್ತಿನಂತಹ ಹಲ್ಲುಗಳನ್ನು ಬೆಳಗಿಸುತ್ತ, ಗಲ್ಲದಲ್ಲಿ ಗುಳಿ ಮೂಡಿಸುತ್ತ, ಕಣ್ಣಿನಲ್ಲಿ ಹೊಳಪು ಮಿಂಚಿಸುತ್ತ ಕೇಳಿದಳು : “ಕಾಕಾ, ನೀವು ಅಪ್ಪನ ಬಗ್ಗೆ ಕಾದಂಬರಿ ಬರೆಯುತ್ತೀರಂತೆ ಹೌದೆ ? ಯಾಕೆ ?” ತುಸು ತಡೆದು, “ಅಮ್ಮ ಹೇಳಿದಳು,” ಎಂದಳು. ಸರಳ ಮನಸ್ಸಿನ ಮುಗ್ಧತೆಯ ಮೇಲೂ ಬಿದ್ದಂತಿದ್ದ ಹಿರಿಯರ ಧಾಟಿಯ ಛಾಯೆಯಲ್ಲಿ ಅಡಗಿದ್ದದ್ದು ಆತಂಕವೋ ? ಕುತೂಹಲವೋ ? ನಾಗಪ್ಪ ಕೂಡಲೇ ಉತ್ತರ ಕೊಡಲಿಲ್ಲ. ಸುಮ್ಮನೆ ನಕ್ಕ.
uಟಿಜeಜಿiಟಿeಜ
– ಅಧ್ಯಾಯ ಐದು –

“ಟಿಪ್ಪಣಿ ಹತ್ತು : ದೇವರೇ, ಈ ಯಾತನೆಗೆ ಕೊನೆಯೇ ಇಲ್ಲವೆ ? ಇದೇಕೆ ನೋವು ತಿಂದ ಜಾಗದಲ್ಲೇ ತಿರುತಿರುಗಿ ಪೆಟ್ಟು ಬೀಳುತ್ತದೆ ? ಅಪ್ಪ ಹಿಡಿದ ದಾರಿಯೊಂದೇ ನನಗಾಗಿಯೂ ತೆರೆದದ್ದೇ ?… ಇಲ್ಲ, ಇಷ್ಟೊಂದು ಸುಲಭವಾಗಿ ಧೈರ್ಯಗುಂದಬಾರದು. ದೋಶಿ ಅನ್ನಲಿಲ್ಲವೇ ?”

ನೋವು ತಿಂದ ಜಾಗದ ಉಲ್ಲೇಖದಿಂದ ಆರಂಭವಾದ ಬರವಣಿಗೆ ಗೊತ್ತಾಗುವ ಮೊದಲೇ ತಡೆದಿತ್ತು : ನೋವಿಗೆ ಕಾರಣವಾದದ್ದನ್ನು ನೆನಪಿಗೆ ತರುವ ಧೈರ್ಯ ತಕ್ಷಣ ಹುಟ್ಟಲಿಲ್ಲ. ಲಕ್ಷ್ಯವನ್ನು ಬೇಕೆಂದೇ ಬೇರೆ ಕಡೆಗೆ ಹರಿಯಿಸಲು ಪ್ರಯತ್ನಿಸಿದೆ. ಸಂಜೆ, ದೋಶಿಯವರು ಅಂದ ಒಂದು ಮಾತು ನೆನಪಾದಾಗ ಈ ಶ್ರೀನಿವಾಸ, ಫಿರೋಜರ ನೆನಪಿನಿಂದ ಕಾಡಿನಲ್ಲಿಯ ನಿಷ್ಪಾಪ ಪ್ರಾಣಿಗಳ ಹೆಸರನ್ನೂ ಕೆಡಿಸಿದೆನಲ್ಲ ಎಂದುಕೊಂಡು ತನ್ನಷ್ಟಕ್ಕೇ ಸುಖವಾಗಿ ನಕ್ಕ : ತಮ್ಮ ತಮ್ಮ ನಿಸರ್ಗದತ್ತ ಸ್ವಭಾವಗಳನ್ನು ದಾಟುವ ತಾಖತ್ತು ಅವುಗಳಿಗಿದೆಯೆ ? ಅದೇ ಮನುಷ್ಯನಿಗೆ ? ಅವನೂ ಬರೀ ಪ್ರವೃತ್ತಿಗಳ ಪಾತಳಿಯಲ್ಲೇ ಬದುಕುವವನೆ ? ಮನುಷ್ಯ ಜೀವನದ ಎಳೆತಗಳು ಅವುಗಳಿಗಿಂತ ಪುರಾತನವಾದ ಪಶುಪ್ರವೃತ್ತಿಗಳಿಂದಲೇ ವಿಕಾಸ ಹೊಂದಿರಬಹುದಾದರೂ ಮಾನವ ಕೋಟೆಗೇ ವಿಶಿಷ್ಟವಾದ ಎಳೆತಗಳೂ ಈ ವಿಕಾಸಕ್ರಮದಲ್ಲಿ ಹುಟ್ಟಿಕೊಂಡಿಲ್ಲವೇ ? ಪ್ರೀತಿ, ಆದರ, ಕಾಳಜಿ, ನಿಃಸ್ವಾರ್ಥ, ಇವೇ ಮೊದಲಾದ ಮಾನವೀಯ ಭಾವನೆಗಳಿಗೆ ಅರ್ಥವೇ ಇಲ್ಲವೆ ? ಅವನ ವಿವೇಕಕ್ಕೆ ? ನ್ಯಾಯಬುದ್ದಿಗೆ ? ನೀತಿಗೆ?

ಇಂತಹ ಮಾತುಗಳಿಗೆ ಗಿಲ್ಬರ್ಟ ಡಿಸೋಝಾ ಅರ್ಥವಿಲ್ಲದ ಸದ್ದಿನ ಆಡಂಬರವೆಂದು ದೊಡ್ಡದಾಗಿ ನಕ್ಕುಬಿಡುತ್ತಿದ್ದ. ಅuಣ ಣhಚಿಣ siಟಟಥಿ seಟಿಣಥಿmeಟಿಣಚಿಟiಣಥಿ ouಣ, ಎಂದು ಗದರಿಸಿಬಿಡುತ್ತಿದ್ದ. ಇದ್ದಕ್ಕಿದ್ದಂತೆ ಎಲ್ಲಾ ಬಿಟ್ಟು ಗಿಲ್ಬರ್ಟನ ಗದರಿಕೆಯ ಆಣಿಮುತ್ತುಗಳನ್ನು ಆಯ್ದು ಬರೆದಿಡುವ ಹುಕ್ಕಿ ಬಂದಿತು ನಾಗಪ್ಪನಿಗೆ. ತನ್ನ ಸದ್ಯದ ಮೂಡು ಎಡೆಮಾಡಿಕೊಟ್ಟ ಭಾಷೆಯಲ್ಲಿ. ಮುಗುಳುನಗುತ್ತ ಪೆನ್ನು ಕೈಗೆತ್ತಿಕೊಂಡ. ಗೆಳೆಯನ ಮೋರೆಯನ್ನು ಕಣ್ಣು ಮುಂದೆ ನಿಲ್ಲಿಸಿಕೊಳ್ಳಲು ಪ್ರಯತ್ನಿಸಿದಾಗ ಒಡಮೂಡಿದ್ದು ಹುರಿ ಹಾಕಿದಂತಿದ್ದ ಅವನ ಗೇಣುದ್ದ ಮೀಸೆಗಳು; ಕುಡಿಗಳಲ್ಲಿ ಆಗೀಗ ಮಿನುಗುತ್ತಿದ್ದ ತುಂಟತನದ ನಗು; ಕಣ್ಣುಗಳಲ್ಲಿ ಅದಕ್ಕೆ ಒಪ್ಪಹಾಕುವ ಹೊಳಪು.

“ಟಿಪ್ಪಣಿ ಹನ್ನೊಂದು : ಗಿಲ್ಬರ್ಟ ಉವಾಚ : (೧) ನೀನು ಈ ಮಾನವ-ಪ್ರಾಣಿಯ ಸಾಧ್ಯತೆಗಳ ಬಗ್ಗೆ ಅವಾಸ್ತವವಾದ ಕಲ್ಪನೆ ಮಾಡಿಕೊಂಡಿರುವಿ. ಬದುಕಿನ ನಿಜವಾದ ಹೋರಾಟದ ಬಿಸಿ ನಿನಗೆ ತಾಕಲೇ ಇಲ್ಲ. ಎಲ್ಲವೂ ಆಯತ ಹೊತ್ತಿಗೆ ಕೈಗೆ ಬಂದ ‘ಆಯ್ತೋಬಾ’ ನೀನು. ಈ ಗಿಲ್ಬರ್ಟ ಕಳೆದ ಹತ್ತು ವರ್ಷಗಳ ತನ್ನ ಅನುಭವದಲ್ಲಿ ಕಂಡ ಮನುಷ್ಯನನ್ನು ಚಿತ್ರಿಸುವ ತಾಖತ್ತು ನಿನ್ನ ಪೆನ್ನಿಗಿದ್ದುದಾದರೆ ಬರೆಬರೆಯುವಾಗಲೇ ನೀನು ಗಟ್ಟಿಗನಾಗಬಹುದಿತ್ತು. ಮನುಷ್ಯಸ್ವಭಾವದ ನಿಷ್ಠುರ ಸತ್ಯವನ್ನು ಕಾಣುವ, ಕಂಡರೂ ಒಪ್ಪುವ ಧೈರ್ಯವೇ ನಿನ್ನಲ್ಲಿಲ್ಲ. (೨) ನಮ್ಮ ಎಲ್ಲ ವ್ಯವಹಾರಗಳ ಅಡಿಗೆ, ಸಾಮಾಜಿಕ ನಡವಳಿಕೆಯ ಕೆಳಗೆ ಕೆಲಸ ಮಾಡುವ ಶಕ್ತಿಯೊಂದೇ : ಸ್ವಾರ್ಥ. ತನ್ನೊಬ್ಬನ ಹಿತವನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಉಳಿದವರನ್ನು ಬಲಿಕೊಡಲು ಹಿಂದೆಗೆಯದ ಸ್ವಾರ್ಥ. (೩) ಮಾನವ-ಸಮಾಜದಲ್ಲಿಯ ಅಸಮಾನತೆ ನಿಮ್ಮ ಮಾರ್ಕ್ಸ್‌ವಾದಿಗಳು ತಿಳಕೊಂಡಂತೆ ಬರಿಯ ಪ್ರಾಪರ್ಟಿಯ ಹಂಚಿಕೆಯ, ಜೀವನೋಪಾಯಗಳ ಹಂಚಿಕೆಯ ಅಸಮಾನತೆಯಲ್ಲಿಲ್ಲ. ಕೀರ್ತಿಯ ಹೆಸರಿನ ಗಳಿಕೆಯ ಅಸಮಾನತೆಯಲ್ಲೂ ಇದೆ. ಸತ್ತೆಯ ಅಸಮಾನತೆಯಲ್ಲೂ ಇದೆ. ವಿಚಾರಮಾಡಿ ನೋಡು. ಸಮಾಜ ಹುಟ್ಟಿಸುವ ಸರ್ಪ್ಲಸ್ಸು ಬರಿಯ ವಿತ್ತಕ್ಕೆ ಸೀಮಿತವಾದದ್ದೇ ? ಅದರ ಮೂಲಭೂತವಾದ ಮಹತ್ವ ಬರಿಯ ಆರ್ಥಿಕವಾದದ್ದೇ ? ಒಬ್ಬ ಇನ್ನೊಬ್ಬನ ನೋವಿಗೆ ಕಾರಣವಾಗುವದಕ್ಕೆ ಬರೀ ಆಸ್ತಿಯೇ ಕಾರಣವೆ ? (೪) ಅಪಾ ತಮ್ಮಾ, ನನ್ನ, ನನ್ನವರ ದುಃಖದಂತಹ ದುಃಖವೇ ಇಲ್ಲ. ಯಾತನೆಯಂತಹ ಯಾತನೆಯೇ ಇಲ್ಲ ಎಂದು ತಿಳಿಯುವದೂ ಒಂದು ರೋಗವೇ. ನೋವಿನಂತಹ ನೋವನ್ನೂ ನಮ್ಮ ಅಹಂಕಾರದ ಅವಿರ್ಭಾವಕ್ಕೆ ಕಾರಣವಾಗಲು ಬಿಡಬಾರದು. (೫) ನಮ್ಮ ನಮ್ಮ ಅನುಭವದ ಅಳವಿಗೆ ಬಂದ ಸಾಮಾನ್ಯ ವ್ಯಕ್ತಿಗಳ ನೋವನ್ನು ನಮಗೆ ಶಕ್ಯವಿದ್ದ ರೀತಿಯಲ್ಲಿ ಕಡಿಮೆ ಮಾಡುವ ಬಯಕೆಯಿಂದ ಕಾರ್ಯಪ್ರವೃತ್ತರಾಗುವುದು ಶಕ್ಯವಿದ್ದರೆ… ಬಾ, ಅಂತಹ ಒಂದು_ಸುದ್ದಿಯಾಗದೇ, ಸದ್ದಿಲ್ಲದೇ ನಡೆಯುತ್ತಿದ್ದ ಒಂದು_ಸಣ್ಣ ಸಂಸ್ಥೆಯ ಕೆಲಸವನ್ನು ನಿನಗೆ ತೋರಿಸುತ್ತೇನೆ. ಅಲ್ಲಿ ಕಂಡವರ ನೋವನ್ನು, ಅದನ್ನು ಇದಿರಿಸುವಲ್ಲಿ ಅವರು ತೋರಿಸಿದ ಎದೆಗಾರಿಕೆಯನ್ನು ಚಿತ್ರಿಸುವ ತಾಖತ್ತು ನಿನಗೆ ಬಂದಾಗ ಬರೆ_ಕಾದಂಬರಿಯನ್ನೋ, ಕತೆಯನ್ನೋ. ಕನ್ನಡ ಸಾಹಿತ್ಯ ಚೆರಿತ್ರೆಯಲ್ಲಿ ನಿನ್ನ ಹೆಸರನ್ನುಳಿಸಲಿಲ್ಲ. ಸಾವನ್ನು ಗೆಲ್ಲಲು ಅವರು ನಡೆಸಿದ ಆರೋಗ್ಯವಂತ ಹೋರಾಟವನ್ನು ಉಳಿದವರಿಗೆ ತಿಳಿಸಲು, ಇಂತಹ ಒಂದು ಕೆಲಸ ಮುಂಬಯಿಯಂತಹ ಈ ಮಹಾನಗರಿಯಲ್ಲಿಯೇ ನಡೆಯುತ್ತಿದೆ ಎನ್ನುವುದನ್ನರಿಯುವ ಕುತೂಹಲವೆನ್ನಿಸಿದಾಗ ತಿಳಿಸು. ನಾನೇ ನಿನ್ನನ್ನಲ್ಲಿ ಕರೆದೊಯ್ಯುತ್ತೇನೆ…. ಯಾವಾಗಲೂ ಬದುಕಿನತ್ತ ಮುಖ ಮಾಡಿದ ಮನುಷ್ಯನ ನಡವಳಿಕೆಯೇ ಬೇರೆಯಾಗುತ್ತದೆಯೋ, ನಾಗಪ್ಪ,”

ಹಾಸಿಗೆಯಲ್ಲಿ ಬಿದ್ದಲ್ಲೇ ಅನ್ನಿಸಿತು: ಗಿಲ್ಬರ್ಟ ಇಂದು ಮುಂಬಯಿಯಲ್ಲಿರಬೇಕಾಗಿತ್ತು, ಅಂದರೆ ತನ್ನೆಲ್ಲ ದುಗುಡಗಳನ್ನು ಅವನಲ್ಲಿ ತೋಡಿಕೊಳ್ಳಲು ಬರುತ್ತಿತ್ತು. ಹಾಗೆ ನೋಡಿದಲ್ಲಿ ತನಗೆ ಎಷ್ಟೆಲ್ಲ ಜನ ಗೆಳೆಯರಿದ್ದಾರೆ ಅನ್ನಿಸಿದರೂ ಒಬ್ಬೊಬ್ಬರದೇ ಮೋರೆಯನ್ನು ಕಣ್ಣಮುಂದೆ ನಿಲ್ಲಸಿ ಯೋಚಿಸಿದರೆ ಯಾರೂ ಇಲ್ಲವೆಂದು ತೋರಿ ತಾನು ತೀರ ಒಬ್ಬೊಂಟಿ ಎಂಬ ಭಾವನೆ ಹುಟ್ಟುತ್ತಿತ್ತು. ಮೊನ್ನೆ ಆಫೀಸಿನಿಂದ ಫೋನ್ ಬಂದ ದಿನ ಹೀಗೇ ಆಗಿತ್ತು. ಹತ್ತಿರದವನೆಂದು ತಿಳಿದ ಸೀತಾರಾಮ ಕೂಡ: ಜೊತೆಯಾಗಿ ತಿನ್ನಲು ಕುಡಿಯಲು ಅಡ್ಡಿಯಿಲ್ಲ. ವೈಚಾರಿಕವಾಗಿ, ಭಾವಾತ್ಮಕವಾಗಿ ಹತ್ತಿರವಾದವರೆಲ್ಲ ತಾನು ಬರೆಯುವುದನ್ನು ನಿಲ್ಲಿಸಿದಂದಿನಿಂದ ದೂರವಾಗಿದ್ದಾರೆ. ಅಲ್ಲ, ಅವರೆಲ್ಲ ದೂರವಾಗಿದ್ದರಿಂದಲೇ ತಾನು ಬರೆಯುವದನ್ನು ನಿಲ್ಲಿಸಿದ್ದೇನೆ. ಗಿಲ್ಬರ್ಟ ಯಾರನ್ನೂ ಹೆಚ್ಚಾಗಿ ಹಚ್ಚಿಕೊಂಡವನಲ್ಲ. ಹಾಗಿದ್ದೂ, ಅಥವಾ ಹಾಗೆಂದೇ ಇರಬೇಕು, ಅನೇಕರಿಗೆ ಬೇಕಾದವನಾಗಿದ್ದ. ಅನೇಕ ವಿಷಯಗಳಲ್ಲಿ ತನಗೆ ತೀರ ವಿರುದ್ಧವಾದ ಪ್ರಕೃತಿಯವನು. ಕೆಥೋಲಿಕ್ ಪಂಥದವನಾದ ಇವನಿಗೆ ಪ್ರಾರ್ಥನೆ ಮಾನಸಿಕ ಸ್ಥೈರ್ಯಕ್ಕೆ ಬಲವಾದ ಆಧಾರ. ಟಾಯಿಮ್ಸ್ ಪತ್ರಿಕೆಯ ವಾರ್ತಾಹರನೆಂದು ಕೆಲಸ. ಸೀತಾರಮನ ಮುಖಾಂತರವೇ ಪರಿಚಯವಾಗಿತ್ತಾದರೂ ಸೀತಾರಾಮನಿಗಿಂತ ಹೆಚ್ಚು ಹತ್ತಿರದವನಾಗಿದ್ದ. ಮುಂಬಯಿಯ ಅಂಧೇರಿಯಲ್ಲಿ ಅಪಾಂಗರ ಸಲುವಾಗಿ ತೆರೆದ ‘ಚೆಶಾಯರ್ ಹೋಮ್’ ಸಂಸ್ಥೆ ಇವನ ಆಸ್ಥೆಯ ಕಾರ್ಯಕ್ಷೇತ್ರ. ಸದ್ಯ ರಾಣಿಯ ತವರುದೇಶವಾದ ನೇಪಾಳದ ಕಾಠಮಂಡೂಕ್ಕೆ ಬದಲಿಯಾಗಿದೆ. ಕೆಲವು ತಿಂಗಳ ಹಿಂದೆ ಏಕಾ‌ಏಕೀ ತನ್ನನ್ನು ಆರ್ ಆಂಡ್ ಡೀ ಮ್ಯಾನೇಜರ್ ಸ್ಥಾನದಿಂದ ವಜಾಮಾಡಿ ಮುಂಬಯಿಗೆ ವರ್ಗಮಾಡಿದ ಅವಸರದಲ್ಲಿ ತನ್ನ ಮನಸ್ಸಿನ ನೋವನ್ನು ತೋಡಿಕೊಂಡಾಗ Sಣoಠಿ ಣhಚಿಣ immಚಿಣuಡಿe ಟಿoಟಿseಟಿse ಎಂದು ಗದರಿದ ರೀತಿಗೆ ತಾನು ಥಕ್ಕಾಗಿ ನೋಡುತ್ತಿದ್ದಾಗ, ಅಷ್ಟೇ ನಿಷ್ಟುರವಾಗಿ, Iಣ ಜoes ಟಿoಣ go ತಿiಣh ಥಿouಡಿ ಚಿge, ಎಂದಿದ್ದ. ಬಂದ ನೆನಪಿನಿಂದ ನಾಗಪ್ಪನಿಗೆ ತನ್ನ ಅಂದಿನ ನಡತೆಯ ಬಗ್ಗೆ ಈಗ ಮುಜುಗರವಾಯಿತು. ದೋಶಿಗೂ ಈ ಸಂಸ್ಥೆಯನ್ನು ನೋಡುವ ಕುತೂಹಲವಿದ್ದರೆ ಅವರನ್ನೂ ಕರೆದೊಯ್ಯಬಹುದು. ಇನ್‌ಕಮ್ ಟ್ಯಾಕ್ಸ್ ಪ್ರೆಕ್ಟೀಶನರ್ ಎಂದಮೇಲೆ ಕಾರು ಇರಲಿಕ್ಕೇಬೇಕು. ನಾಳೆ ಕೇಳಿ ನೋಡಬೇಕು.
uಟಿಜeಜಿiಟಿeಜ
– ಅಧ್ಯಾಯ ಆರು –

“ಟಿಪ್ಪಣೆ ಹನ್ನೆರಡು : ಇಂದು ಬೆಳಿಗ್ಗೆ ನಾಲ್ಕು ಗಂಟೆಗೇ ಎಚ್ಚರವಾದದ್ದರಿಂದ ಎದ್ದು ಬರೆಯಲು ಕುಳಿತಿದ್ದೇನೆ. ಮನುಷ್ಯನ ನಡವಳಿಕೆಯ ಹಿಂದೆ ಕೆಲಸ ಮಾಡುತ್ತಿದ್ದ ಶಕ್ತಿಗಳು ಗಿಲ್ಬರ್ಟ ಹೇಳುವಷ್ಟು ಸರಳವಾಗಿವೆಯೇ ? ಗಿಲ್ಬರ್ಟ ನನ್ನ ಬಗ್ಗೆ ಮಾಡಿಕೊಂಡ ಕಲ್ಪನೆ ಕೂಡ ಬಹಳ ಸರಳವಾದದ್ದೇ. ನನ್ನೆಲ್ಲ ಯಾತನೆಗಳಿಗೆ ಕಾರಣವಾದದ್ದನ್ನು ಅಪ್ಪನ ತಲೆಗೆ ಸುತ್ತಿ ಪಾರಾಗಬಹುದಿತ್ತು. ಆದರೆ ಹಾಗೆ ಮಾಡಿ ಸಾಧಿಸಿದ್ದೇನು ?_ ಭೂತಕಾಲದಿಂದ ಪಲಾಯನ ! ಅಪ್ಪ ನನ್ನೊಂದಿಗೆ ನಡಕೊಂಡ ರೀತಿಗೇ ಆತನೇ ಸಂಪೂರ್ಣವಾಗಿ ಜವಾಬ್ದಾರನೇ ? ಇದರಲ್ಲೆಲ್ಲ ಪೂರ್ವಸಂಚಿತವಾದದ್ದೆಷ್ಟು ? ಸಂಕಲ್ಪದ ಬಲವನ್ನವಲಂಬಿಸಿದ್ದೆಷ್ಟು ? ಎದೆಗವುಚಿಕೊಂಡಲ್ಲೆ ಸುಡುತ್ತ ನನ್ನ ಬದುಕುವ ಇಚ್ಛಾಬಲವನ್ನೇ ಕುಗ್ಗಿಸಿಬಿಡುವ, ಯಾರೊಡನೆಯೂ ಹಂಚಿಕೊಳ್ಳಲಾಗದ, ಗುಟ್ಟಿನಂತಹ ಈ ದುಷ್ಟ ಸಂಶಯದಿಂದ ಮುಕ್ತನಾಗುವ ಬಗೆ ಗೊತ್ತಿದ್ದರೆ ! ಉಳಿದವರೊಡನೆ ನಡಕೊಳ್ಳುವ ಮತ್ತು ಅನುಭವವನ್ನು ಸ್ವೀಕರಿಸುವ ನನ್ನ ಸಂವೇದನಾಕ್ರಮವನ್ನೇ ನಿರ್ಧರಿಸಿಬಿಟ್ಟ ನನ್ನ ಬಾಲ್ಯದ ಅನುಭವವನ್ನು ಧೈರ್ಯವಾಗಿ ಇದಿರಿಸುವ ಗಟ್ಟಿತನ ನನ್ನಲ್ಲಿದ್ದಿದ್ದರೆ !… ಗಿಲ್ಬರ್ಟ ತಿಳಿದಂತೆ ನನ್ನಲ್ಲಿ ಇಲ್ಲದಿದ್ದದ್ದು ಮನುಷ್ಯಸ್ವಭಾವದ ನಿಷ್ಟುರಸತ್ಯವನ್ನು ಇದಿರಿಸುವ ಧೈರ್ಯವಲ್ಲ. ನನ್ನ ಹುಟ್ಟಿನ ಗಾಗು ನನ್ನ ಬಾಲ್ಯದ ಕಠೋರನಿಜವನ್ನು ಇದಿರಿಸಲು ಬೇಕಾದ ಧೈರ್ಯ…

“ಗಿಲ್ಬರ್ಟ ಬಹಳ ದಿನಗಳ ಹಿಂದೆ ಹೇಳಿದ ಮಾತುಗಳು ಸದ್ಯದ ಮನಃಸ್ಥಿತಿಯಲ್ಲಿ ವಿಚಿತ್ರರೀತಿಯಿಂದ ಪರಿಣಾಮಕಾರಿಯಾಗಿ ಕಾಡುತ್ತಿವೆ. ನನಗಿಂತ ಹೆಚ್ಚು ದುಃಖಿಗಳಾದ ಜನ ಜಗತ್ತಿನಲ್ಲಿಲ್ಲ ಎಂದು ತಿಳಿಯುವುದು ಹಾಸ್ಯಾಸ್ಪದವಾದೀತು. ನೋವನ್ನು ಆ ರೀತಿ ನೋಡುವದೇ ಅಸಹಜವಾದದ್ದೇನೋ. ಏಕೋ ಈ ಹೊತ್ತು ಎದ್ದದ್ದೇ ಹಿಂದೆ ಎಂದೂ ಅನ್ನಿಸಿರದಷ್ಟು ನಿಚ್ಚಳವಾಗಿ ಖಾತ್ರಿಯಾಗುತ್ತದೆ ; ಅಲ್ಲ ಹಿಂದೆ ಮತ್ತೆ ಮತ್ತೆ ಖಾತ್ರಿಯಾದದ್ದನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳುವ ಧೈರ್ಯವಾಗುತ್ತದೆ; ನನ್ನ ಅಂಗಿಗೆ ಆ ದಿನ ರಾತ್ರಿ, ಗಾಢನಿದ್ದೆಯಲ್ಲಿದ್ದಾಗ, ಬೆಂಕಿ ಹತ್ತಿದ್ದು ಆಕಸ್ಮಿಕವಾಗಿ ಅಲ್ಲವೇ ಅಲ್ಲ. ಅಪ್ಪ ನನ್ನನ್ನು ಕೊಲ್ಲಲೆಂದೇ ಹಚ್ಚಿದ್ದ. ಇದಾದ ಹತ್ತೇ ದಿನಗಳಲ್ಲಿ ಅಪ್ಪ ಬಾವಿಯಲ್ಲಿ ಹಾರಿ ಜೀವ ತೆಗೆದುಕೊಳ್ಳುವ ಮೊದಲ ಪ್ರಯತ್ನ ಮಾಡಿದ. ಆಗ ನನಗೇ ಬರೇ ಎಂಟು ವರ್ಷಗಳು. ಅಪ್ಪ ನನ್ನನ್ನೇಕೆ ಕೊಲ್ಲಲು ಬಯಸಿದ ? ನನ್ನನ್ನು ಕೊಂದು ತನ್ನನ್ನೂ ಕೊಂದುಕೊಳ್ಳುವ ಈ ಹಂಚಿಕೆಯ ಹಿಂದಿನ ಪ್ರೇರಣೆ ಯಾವುದಿರಬಹುದು ? ನನಗಿಂತ ಒಂದೇ ವರ್ಷದಿಂದ ಹಿರಿಯವಳಾದ ನನ್ನ ತಂಗಿ ಕಲ್ಯಾಣಿ ಮುಂಬಯಿಯ ಹೇಳಹೆಸರಿಲ್ಲದ ಜನಜಂಗುಳಿಯಲ್ಲಿ ಕಾಣೆಯಾಗಿ ಹೋದದ್ದೂ ಈ ಆತ್ಮಘಾತದ ಸಂಚಿನದೇ ಅಂಗವಾಗಿತ್ತೇ ? ಇದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ ಎಂದಿಗೂ ಆಗಲಾರದೇನೋ. ಅಣ್ಣನಿಗೆ ಗೊತ್ತಿರಬಹುದೆ ?…ನಿದ್ದೆ ಎಚ್ಚರಗಳಲ್ಲಿ ಧುತ್ ಎಂದು ಇದಿರಾದಾಗಲೆಲ್ಲ ತತ್ತರಿಸಲು ಹಚ್ಚಿದ, ಯಾರೊಡನಾದರೂ ಹಂಚಿಕೊಳ್ಳೋಣವೆಂದರೆ ಬಾಯಿ ತೆರೆಯಲೂ ಬಿಡದ ಭೀತಿಗೆ ಆಕಾರ ಕೊಡಲು ಕತೆಗಳನ್ನು ಬರೆದದ್ದು ಸಾಹಿತ್ಯದಲ್ಲಿ ಸ್ಥಾನ ಪಡೆಯುವುದಕ್ಕಲ್ಲ. ಅಷ್ಟು ದೊಡ್ಡ ಮಹತ್ವಾಕಾಂಕ್ಷೆ ಅವುಗಳಿಗೆ ಇಲ್ಲವೇ ಇಲ್ಲ. ನನಗೆ ಆಗಿನ ಕ್ಷಣಗಳಲ್ಲಿ ಅಪ್ಪ ಹಿಡಿದ ಹಾದಿಯಿಂದ ತಪ್ಪಿಸಿಕೊಳ್ಳುವುದೇ ಮುಖ್ಯವಾಗಿತ್ತು. ಬದುಕಿ ಉಳಿಯುವದೇ ಮುಖ್ಯವಾಗಿತ್ತು. ಯಾವುದೇ ರೀತಿಯ ಸಾಮಾಜಿಕ ಕಾಳಜಿ ಇಲ್ಲದ, ನಿಷ್ಟೆ ಇಲ್ಲದ ಇಂತಹ ಚಂದದ ಅರೆಗೊಡ್ಡು ಕತೆಗಳನ್ನು ಪತ್ರಿಕೆಗಳು ಬಹಿಷ್ಕರಿಸಬೇಕು ಇಲ್ಲವಾದರೆ ಹಾಗೆ ಪ್ರಕಟಿಸುವ ಪತ್ರಿಕೆಗಳನ್ನು ಓದುಗರೇ ಬಹಿಷ್ಕರಿಸುವಂತೆ ಚಳುವಳಿ ಎಬ್ಬಿಸಬೇಕಾದೀತು ಎಂಬ ಆಶಯದ ಸಂಪಾದಕೀಯ ಬರೆದ ಹುಬ್ಬಳ್ಳಿಯ ಒಂದು ಸಣ್ಣ ಪತ್ರಿಕೆಯ ಸಂಪಾದಕ ನನ್ನ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸಿದ್ದ, ನನ್ನ ಬಹಳಷ್ಟು ಮಹತ್ವದ ಕತೆಗಳು ಪ್ರಕಟವಾದದ್ದೇ ತನ್ನ ಪತ್ರಿಕೆಯಲ್ಲಿ ಎಂಬುದನ್ನು ಮರೆತು. ಈ ಮೊದಲೇ ಕಳಿಸಿದ ಎರಡುಕತೆಗಳನ್ನು ಎರಡು ಬೇರೆ ಬೇರೆ ಪತ್ರಿಕೆಗಳ ಸಂಪಾದಕರು ಯಾವ ಕಾರಣವನ್ನೂ ಕೊಡದೆ ಹಿಂದೆ ಕಳಿಸಿದ್ದರು. ಆದರೂ ನನಗೆ ಕೆಡಕೆನಿಸಲಿಲ್ಲ. ಒಂದಕ್ಕೆ ಮಾತ್ರ ಮನಸ್ಸು ಇನ್ನೂ ಸಿದ್ಧವಾಗುವದಿಲ್ಲ : ಅವನ್ನು ಸುಟ್ಟು ಹಾಕಿಬಿಡಬೇಕು ಎನ್ನುವ ಬಲವಾದ ಅನ್ನಿಸಿಕೆಯನ್ನು ಆಚರಣೆಯಲ್ಲಿ ತರಲು ಕೇಳುವವರಿಲ್ಲದಾಗಲೂ ಬರಿಯ ನಮ್ಮ ಮನಸ್ಸಿನ ಸಮಾಧಾನಕ್ಕಾಗಿಯೇ ಹಾಡಿಕೊಳ್ಳಬಲ್ಲೆವು. ತಿಂಗಳುಗಟ್ಟಲೆ ಕಾಲ ಹಾಕಿ ಸುಂದರ ಚಿತ್ರ ಬರೆದು ಯಾರಿಗೂ ತೋರಿಸದೇನೇ ಹರಿದೊಗೆಯಬಲ್ಲೆವು ಎಂದೂ ಅನ್ನಿಸುತ್ತದೆ. ಆದರೆ ಶಬ್ದಗಳಲ್ಲಿ ಹಿಡಿದ ಅನುಭವ ಮಾತ್ರ ಇನ್ನೊಬ್ಬನಿಗೆ ಮುಟ್ಟಿದ ಹೊರತು ಮನಸ್ಸಿಗೇಕೆ ಸಮಾಧಾನವೆನ್ನಿಸುವದಿಲ್ಲ ? ಕತೆ ಬರೆಯುವುದರ ಮೂಲಕ ಅಲ್ಲದೇನೆ ಬೇರೆ ಯಾವುದೇ ರೀತಿಯಿಂದ ಉಳಿದವರೊಡನೆ ಮಾತನಾಡುವ ಕಲೆಯೇ ಗೊತ್ತಿರದ ನನ್ನ ಬಾಯನ್ನು ಮುಚ್ಚಿದ ಈ ಹಿಂಸೆಯ ಅರ್ಥ ನನಗಾಗುತ್ತಿಲ್ಲ. ಆದರೂ ಒಂದಿಲ್ಲ ಒಂದುದಿನ ಯಾರಾದರೂ ಓದಿ ಯಾರು ಎಂಬ ಭ್ರಮೆಯಿಂದಲೇ ಹತ್ತಾರು ಕತೆಗಳನ್ನು ಬರೆದು ಟ್ರಂಕಿನಲ್ಲಿ ಇಟ್ಟಿದ್ದೇನೆ. ಇಷ್ಟೊಂದನ್ನು ಧೈರ್ಯವಾಗಿ ಹೇಳಬಲ್ಲೆ : ಈ ಮೂರ್ಖ ಸಂಪಾದಕ ತಿಳಿದಂತೆ ನನ್ನ ಕತೆಗಳಲ್ಲಿ ಪ್ರಕಟವಾದ ಮೃತ್ಯುಪ್ರಜ್ಞೆಗೆ ನಾನು ಬ್ರಾಹ್ಮಣನಾಗಿ ಹುಟ್ಟಿದ್ದು ಕಾರಣವಲ್ಲ. ಸತ್ಯ ಅಷ್ಟೊಂದು ಸರಳವಾಗಿದ್ದರೆ ಬಹುಶಃ ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲವೇನೋ. ನಮ್ಮ ಹುಟ್ಟೇ ನಮ್ಮ ಸಾವಿಗೆ ಕಾರಣವಾಗುತ್ತಿದ್ದದ್ದು ಈ ಪ್ರದೇಶದಲ್ಲಿ ಮಾತ್ರವೇನೋ.”

ಈ ಬರವಣಿಗೆಯ ಧಾಟಿಯನ್ನು ಕೂಡ ಗಿಲ್ಬರ್ಟ Siಟಟಥಿ seಟಿಣimeಟಿಣಚಿಟiಣಥಿ ಎಂದೋ , ಇಲ್ಲ ‘immಚಿಣuಡಿe ಟಿoಟಿseಟಿse ಎಂದೋ ಕರೆಯುತ್ತಿದ್ದನೇನೋ ಎಂಬುದರ ಅರಿವು ಬಂದ ಕೂಡಲೇ ಬರೆಯುವ ಕೈ ತಂತಾನೆ ತಡೆದಿತ್ತು. ತನ್ನ ಬಗ್ಗೆ ತನಗೇ ಅನ್ನಿಸತೊಡಗಿದ ತೀವ್ರವಾದ ಅಸಮಾಧಾನದಿಂದ ತಡೆಫಡಿಸುತ್ತ ಕುಳಿತಲ್ಲಿಂದ ಎದ್ದು ಕಿಡಕಿಗೆ ಬಂದ : ನಾನು ಇದ್ದದ್ದೇ ಹಾಗೆ_seಟಿಣimeಟಿಣಚಿಟ ! ನಾನು ಇದ್ದದ್ದೇ ಹಾಗೆ_ immಚಿಣuಡಿe ! ಕಿಡಕಿಯ ಕಟ್ಟಿಗೆಯ ದಡಿಯ ಮೇಲೆ ಮುಚ್ಚಿದ ಮುಷ್ಟಿಯಿಂದ ಗುದ್ದುತ್ತ_I ಛಿಚಿಡಿe ಚಿ ಜಚಿmಟಿ, ಎಂದ. ಮರುಗಳಿಗೆ, ಈ ಸಿಟ್ಟಿಗೆ ಕಾರಣವಾದದ್ದು ಮನಸ್ಸಿನ ಮೂಲೆಯೊಂದರಲ್ಲಿ ಮೈಮುರಿದೆದ್ದ ಫಿರೋಜನ ನೆನಪೆಂದು ತಿಳಿದಾಗ ಇನ್ನಷ್ಟು ಕೆರಳಿ_ಥತ್ ಶನಿಯೇ ಎಂದುಕೊಂಡ. ಸಿಯ್ಟ್ಟನ್ನು ಕಳೆದುಕೊಳ್ಳುವ ಉಪಾಯವೆಂಬಂತೆ ಈಗಷ್ಟೇ ಕಣ್ಣುಬಿಡುವ ಸಿದ್ಧತೆಯಲ್ಲಿದ್ದಂತಿದ್ದ ಬೆಳಗುಜಾವದಲ್ಲಿ ತಂಪಾಗಿ ಬೀಸುತ್ತಿದ್ದ ಗಾಳಿಗೆ ಮೋರೆಯೊಡ್ಡಿದ.

ಅಪ್ಪ, ಅಮ್ಮರ ಬೆಗೆಗಿನ ಅನೇಕ ಸಂಗತಿಗಳು ನಾಗಪ್ಪನಿಗಿನ್ನೂ ಒಗಟಾಗಿಯೇ ಉಳಿದಿವೆ. ಗೊತ್ತಾದವುಗಳು ಕೂಡ, ಬೇರೆ ಬೇರೆ ಸಂಧರ್ಭಗಳಲ್ಲಿ ಇಷ್ಟಿಷ್ಟಾಗಿಯೇ ಗೊತ್ತಾದವುಗಳು. ಒಂದೊಂದೇ ಹೊಸ ಸಂಗತಿ ಬೆಳಕಿಗೆ ಬಂದಾಗ ಈ ಮೊದಲು ಅನುಭವಿಸಿದ ಸಂಕಟಗಳೆಲ್ಲ ಹೊಸ ರೂಪದಲ್ಲಿ ಹುಟ್ಟಿಬಂದು ನೋವು ಗೋಪುರ ಕಟ್ಟುತ್ತಿತ್ತು. ಫಿರೋಜ್ ಅತ್ಯಂತ ಸಹಜವಾಗಿ ಎಂಬಂತೆ (ಆ ಸಹಜತೆ ನಟಿಸಿದ್ದಾಗಿತ್ತು ಎಂದು ಗೊತ್ತಾದದ್ದು ತೀರ ತಡವಾಗಿ) ಅವನ ಅಪ್ಪನ ವೃತ್ತಿಯನ್ನು ಕುರಿತು ಪ್ರಶ್ನೆ ಕೇಳಿದಾಗಲೂ ಹೀಗೇ ಆಗಿತ್ತು. ಪ್ರಶ್ನೆಯ ಪ್ರಸ್ತುತತೆ ಕೂಡಲೇ ಹೊಳೆಯಲಿಲ್ಲ. ಬಾಯಿಂದ ಉತ್ತರ ಹೊರಡದೇ ಗೊಂದಲಕ್ಕೆ ಬಿದ್ದುದನ್ನು ಅಪಾರ್ಥ ಮಾಡಿಕೊಂಡು_“ನನ್ನ ಪ್ರಶ್ನೆಗೆ ಉತ್ತರ ಕೊಡುವದು ಕಷ್ಟವಾಗುತ್ತಿದ್ದರೆ ಬಿಟ್ಟುಬಿಡು. ಅದೇನು ಅಷ್ಟು ಮಹತ್ವದ ಸಂಗತಿಯಲ್ಲ. ಹೀಗೇ ಸಹಜ ಕೇಳಿದ್ದು,” ಎನ್ನುತ್ತ ಅವನತ್ತ ಲಕ್ಷ್ಯ ಕೊಡದೇ ಅದೇ ಆರಲು ಬಂದ ಪಾಯಿಪನ್ನು ಗಾಳಿ ಊದಿ ಹೊತ್ತಿಸುವುದರಲ್ಲಿ ಗರ್ಕನಾಗಿದ್ದ. ಅವನ ಈ ಉಪೇಕ್ಷೆಯಿಂದ ಕೆಣಕಲ್ಪಟ್ಟ ನಾಗಪ್ಪ, “ಅವನದು ಸಣ್ಣ ಚಹದಂಗಡಿಯಿತ್ತು, ನಮ್ಮ ಹಳ್ಳಿಯಲ್ಲಿ,” ಎಂದಿದ್ದ. ಫಿರೋಜ್ ಪಾಯಿಪನ್ನು ಸರಕ್ಕನೆ ಬಾಯಿಂದ ತೆಗೆದು ‘ಓಹ್’ ಎಂದು ಚಕಿತನಾದವನಂತೆ ಒಂದೇ ಕ್ಷಣದ ಮಟ್ಟಿಗೆ ತನ್ನತ್ತ ನೋಡಿ ತಿರುಗಿ ಪಾಯಿಪನ್ನು ತುಟಿಗಳ ನಡುವೆ ಹಿಡಿದಾಗ ಅವನ ತುಟಿಗಳ ಮೂಲೆಯಲ್ಲೆಲ್ಲೋ ತನ್ನ ಬಗ್ಗೆ ತಾತ್ಸಾರ ಮೂಡಿತ್ತು ಎನ್ನುವುದರ ನೆನಪಿನಿಂದಲೇ ನಾಗಪ್ಪ ಈಗ ಮತ್ತೆ ಕೆರಳಿ, ‘ಬೋಳೀಮಗನೇ, ನಿನ್ನ ಅಪ್ಪ, ಅಜ್ಜ ಗಳಿಸಿಟ್ಟ ಹಣದ ಮೇಲಾಗಲೀ, ನಿಮ್ಮ ಜಾತಿಯವರು ಕಟ್ಟಿಸಿಟ್ಟ ದೊಡ್ಡ ದೊಡ್ಡ ಧರ್ಮಾತ್ಮ ಸಂಸ್ಥೆಗಳ ಬಿಟ್ಟೀ ಹಣದಿಂದಾಗಲೀ ಕಲಿತನಲ್ಲವೋ : ಸಂತ ಮೆಹನತ್ತಿನಿಂದ. ಅಪ್ಪ ಬಡವನಾಗಿದ್ದರೂ ತುಂಬಾ ಸ್ವಾಭಿಮಾನಿಯಾಗಿದ್ದನೋ. ಯಾರ ಮುಂದೆಯೂ ದೀನನಾದವನಲ್ಲ,’ ಎಂದುಕೊಳ್ಳುತ್ತ ಹಲ್ಲುಕಡಿದ. ಈ ಸಿಟ್ಟು ಮೊದಲಿನಿಂದಲೂ ಇನ್ನಾವುದಕ್ಕೋ ತಳುಕು ಹಾಕಿಕೊಂಡಿತ್ತೆಂಬಂತೆ_ಒಂದುಕಾಲಕ್ಕೆ ತನ್ನ ಸಾಹಿತ್ಯದ ಹಿಂದಿನ ದೊಡ್ಡ ಪ್ರೋತ್ಸಾಹವಾಗಿದ್ದ ಆತ್ಮೀಯ ಗೆಳೆಯನೇ ಇಂದು ಅದರ ಬಾಯಿ ಮುಚ್ಚಿಸಿದ ಕ್ರೌರ್ಯಕ್ಕೆ ಬೆಂಬಲವಾದದ್ದು ನೆನಪಿಗೆ ಬಂದಾಗ ಕೊರಳ ಸೆರೆಗಳು ಉಬ್ಬಿಕೊಂಡವು : ಹುಬ್ಬಳ್ಳಿಯ ಸಣ್ಣ ಪತ್ರಿಕೆಯ ಹೆಸರಾಗಲೀ ಅದರ ಸಂಪಾದಕನ ಹೆಸರಾಗಲೀ ಬಾಯಲ್ಲಿ ಹುಟ್ಟಲಿಲ್ಲ. ಬೈದು ಬಿಡಬೇಕೆಂದರೆ ಸರಿಯಾದ ಬೈಗುಳ ಸಹ ತೋಚಲಿಲ್ಲ. ಗಿಲ್ಬರ್ಟನಿಗೆ ಪ್ರಾರ್ಥನೆ ಒದಗಿಸುತ್ತಿದ್ದದ್ದೇ ಸೃಷ್ಟಿಕಾರ್‍ಯ ತನಗೆ ಒದಗಿಸುತ್ತಿತ್ತೇನೋ. ಗಾಳಿಯೊಳಗಿನ ತಂಪು ಒಮ್ಮೆಲೇ ಕಡಿಮೆಯಾಯಿತೇ ?

ನಾಗಪ್ಪ ಕಿಡಕಿಯನ್ನು ಬಿಟ್ಟು ಈಚೆಗೆ ಬಂದ.
uಟಿಜeಜಿiಟಿeಜ
– ಅಧ್ಯಾಯ ಏಳು –

ಅಪ್ಪ ಬಡವನಾಗಿದ್ದರೂ ತುಂಬ ಸ್ವಾಭಿಮಾನಿಯಾಗಿದ್ದ ಎನ್ನುವುದರ ಬಗ್ಗೆಯೇ ಸಂಶಯ ಹುಟ್ಟಿತು ನಾಗಪ್ಪನಲ್ಲಿ.

ಅವನ ಪೂರ್ವಜರು ಮೂಲತಃ ಗೋವೆಯವರಂತೆ. ನಾಗಪ್ಪನ ತಂದೆಯೇ ಗೋವೆಯಿಂದ ಹೊರಬಿದ್ದು ಹನೇಹಳ್ಳಿಯಲ್ಲಿ ತಳವೂರಿದ ಮೊದಲಿಗ. ಗೋವೆಯಿಂದ ಹೊರಬಿದ್ದು ಹನೇಹಳ್ಳಿಗೆ ಬರಲು ಏನು ಕಾರಣವಾಯಿತು ? ಗೋವೆಯಲ್ಲಿ ತನ್ನವರು ಯಾರುಯಾರುದ್ದಾರೆ ? ಅಪ್ಪನಿಗೂ ಹನೇಹಳ್ಳಿಯ ತಮ್ಮ ಮನೆಯ ಮಾಲೀಕರಿಗೂ (ಇವರೂ ಗೋವೆಯವರೇ ಅಂತೆ) ಏನು ಸಂಬಂಧ_ಇವೇ ಮೊದಲಾದ ತನ್ನ ಮೂಲವನ್ನು ಕುರಿತ ಮೂಲಭೂತವಾದ ಪ್ರಶ್ನೆಗಳ ಬಗ್ಗೆ ನಾಗಪ್ಪ ಇಂದಿಗೂ ಬಹಳಷ್ಟು ಅರಿತವನಲ್ಲ. ಅರಿಯುವುದರ ಬಗೆಗಿನ ಅನಾಸ್ಥೆಯಲ್ಲಿ ಕುತೂಹಲದ ಅಭಾವಕ್ಕಿಂತ ಅವನಿಗೇ ಗೊತ್ತಿರದ ಒಂದು ಬಗೆಯ ಅಳುಕೇ ಹೆಚ್ಚಾಗಿದ್ದಂತಿತ್ತು. ಹನೇಹಳ್ಳಿ ದೊಡ್ಡ ಊರಲ್ಲವಾದರೂ ಹಳ್ಳಿಯ ಪ್ರತಿಷ್ಠಿತ ವರ್ಗದವರೊಡನೆ ಸಂಪರ್ಕ ಕಡಿಮೆಯಾಗಿತ್ತಷ್ಟೇ ಅಲ್ಲ, ಅವರಿಗೆ ತಮ್ಮ ಬಗ್ಗೆ ಒಂದು ರೀತಿಯ ಅನಾದರವಿತ್ತು ಎಂಬಂತಹ ಅಸ್ಪಷ್ಟ ಭಾವನೆಯೊಂದು ನಾಗಪ್ಪನಲ್ಲಿ ಚಿಕ್ಕಂದಿನಲ್ಲೇ ಬೇರೂರಿ ನಿಂತಿತ್ತು. ಅಪ್ಪ, ಅಮ್ಮ, ಅಪ್ಪನ ವಿಧವೆ ತಂಗಿ ಇವರೆಲ್ಲರ ಮುಖದ ಮೇಲೂ ಯಾರಿಗೋ ಹೆದರಿಕೊಂಡಂತಹ ಭಾವ ಕಂಡಂತೆ ನೆನಪು. ಈಗಲೂ ಹಿಂದಿನದಕ್ಕೆ ನೆನಪು ಕೈಚಾಚಿದಾಗ ನಿಲುಕುತ್ತಿದ್ದ ವಾಸ್ತವತೆ_ಕತ್ತಲಲ್ಲಿ ಇಷ್ಟಗಲ ತೆರೆದು ನಿಂತು ಬೆದರಿಸುವ ಎರಡು ದೊಡ್ಡ ಕಣ್ಣುಗಳಂತಹದು. ಇದಾವುದರೊಡನೆಯೂ ಸಂಬಂಧ ಹಚ್ಚಿಕೊಳ್ಳಲು ಅಸಮರ್ಥನಾದ ನಾಗಪ್ಪನಿಗೆ ತನ್ನ ಭೂತಕಾಲ ಒಡೆಯದ ಒಗಟಿಗಿಂತ ಹೆಚ್ಚಾಗಿ ಬೆನ್ನಟ್ಟಿಬರುವ ಕಾಡುಪ್ರಾಣಿಯ ತರಹದ ಕಪ್ಪುಶಕ್ತಿಯಾಗಿ ಪರಿಣಮಿಸಿದೆ ಎನ್ನುವುದನ್ನು ಅರಿತೂ ಅರಿಯದವನಂತಾಗಿದ್ದಾನೆ. ಮಸಕುಮಸಕಾಗಿ ತಿಳಿದ ಚೂರುಚೂರು ಸಂಗತಿಗಳೇ, ಸದ್ಯದ ವಿಚಿತ್ರ ಮನಃಸ್ಥಿತಿಯನ್ನು ಒಂದರೊಳಗೊಂದು ಹೆಣೆದುಕೊಳ್ಳುತ್ತ ನಿರ್ಮಿಸಿದ ಕನಸಿನಂತಹ ವಾತಾವರಣವೊಂದು ಫಿರೋಜ್ ಕೇಳಿದ ಪ್ರಶ್ನೆಯಿಂದಾದ ನೋವನ್ನು ನೂರುಪಟ್ಟು ಹೆಚ್ಚಿಸುತ್ತಿತ್ತು. ಬೇರೊಂದು ಕಾಲದಲ್ಲಿ ತಾನು ತುಂಬ ಅಭಿಮಾನಪಟ್ಟುಕೊಂಡ ತನ್ನ ಬಾಲ್ಯದ ಬಗ್ಗೆ, ಅಪ್ಪ_ಅಮ್ಮ, ಬರಿಯ ಕೇಳಿ ಗೊತ್ತಿದ್ದ ಅಣ್ಣ, ಕಾಣೆಯಾದ ತಂಗಿ_ಇವರೆಲ್ಲರ ಬಗ್ಗೆ ಈಗ ತೀವ್ರವಾದ ಅಸಮಧಾನ ಹುಟ್ಟುತ್ತಿತ್ತು. ಸಿಟ್ಟಿನ ಗಳಿಗೆಯಲ್ಲಿ ಅಪ್ಪನ ವೃತ್ತಿಯ ಬಗ್ಗೆ ಮುಚ್ಚುಮರೆಯಿಲ್ಲದೆಯೇ ಹೇಳಿಬಿಟ್ಟ ತನ್ನ ನೈತಿಕ ಧೈರ್ಯದ ಬಗ್ಗೆ ಆಗ ಅಭಿಮಾನ ಅನ್ನಿಸಿದರೂ ಫಿರೋಜ್ ಅದನ್ನು ತನ್ನನ್ನು ಹಣಿಯಲು ಉಪಯೋಗಿಸಿಕೊಂಡ ರೀತಿಯನ್ನು ಅರಿತಾಗ ಅದೆಲ್ಲದರ ಬಗ್ಗೆ ಜಿಗುಪ್ಸೆ ಹುಟ್ಟಿ ಸಿಡಿದುಬೀಳುತ್ತಾನೆ.

ತನ್ನ ಹುಟ್ಟಿನ ಬಗ್ಗೆ, ಅಪ್ಪ_ಅಮ್ಮರನ್ನು ಕುರಿತು ಹನೇಹಳ್ಳಿಯವರ ನಿಲುವಿನ ಬಗ್ಗೆ ನಾಗಪ್ಪನಿಗೆ ಮೊತ್ತಮೊದಲು ಸಂಶಯ ಹುಟ್ಟಿದ್ದು ಹಳ್ಳಿಯನ್ನು ಬಿಟ್ಟು ಕಮಟೆಗೆ ಹೋದಮೇಲೆ. ಹನೇಹಳ್ಳಿಯಲ್ಲಾಗ ಹಾಯಿಸ್ಕೂಲು ಇರಲಿಲ್ಲ. ಮೂರನೆ ಇಯತ್ತೆವರೆಗೆ ಕಲಿಸುವ ಆಂಗ್ಲೋ ವ್ಹರ್ನ್ಯಾಕ್ಯುಲರ್ ಸ್ಕೂಲ್ ಒಂದು ಮಗ್ಗುಲ ಹಳ್ಳಿಯಾದ ಬಂಕೀಕೊಡ್ಲದಲ್ಲಿತ್ತು. ಅಲ್ಲೇ ನಾಗಪ್ಪ ತನ್ನ ಇಂಗ್ಲಿಷ್ ಸಾಲೆಯ ಮೊದಲ ಮೂರು ವರ್ಷಗಳ ಶಿಕ್ಷಣವನ್ನು ಪಡೆದಿದ್ದ. ದತ್ತಮಾಸ್ತರರ ಬೆತ್ತದ ಬೆದರಿಕೆ ತಲೆಯ ಮೇಲೆ ಕಾಯಂ ನಿಂತಿದ್ದರೂ ಒಟ್ಟಿನಲ್ಲಿ ಆ ದಿನಗಳು ಅತ್ಯಂತ ಸುಖದ ದಿನಗಳೆಂದು ನೆನಪು ಮಾಡುವಂತಹವುಗಳಾಗಿದ್ದವು. ತಾನು ಅನುಭವವನ್ನು ಸ್ವೀಕರಿಸುವ ಒಟ್ಟೂ ರೀತಿಯನ್ನು ನಿರ್ಧರಿಸಿದ್ದೇ ತಾನು ಹನೇಹಳ್ಳಿಯಲ್ಲಿ ಕಳೆದ ಬಾಲ್ಯದ ದಿನಗಳೆಂದು ನಾಗಪ್ಪನಿಗೆ ಅನ್ನಿಸುತ್ತದೆ. ಇದೆಲ್ಲದರ ಮೇಲೆ ಕಪ್ಪು ನೆರಳು ಚಾಚಿದ ಘಟನೆಗಳು ಒಂದೊಂದಾಗಿ ನಡೆದದ್ದು ಕುಮಟೆಯ ಸಾಲೆಯ ಹಾಸ್ಟೆಲಿನಲ್ಲಿ ಇದ್ದಾಗ. ಶ್ರೀನಿವಾಸನ ತಮ್ಮನಾದ ಮಾಧವನ ಪರಿಚಯವಾದದ್ದೂ ಆ ದಿನಗಳಲ್ಲೇ. ಈಗ ನೆನಪು ಮಾಡಿದರೆ ಮಾಧವ ಹಾಗೂ ಅವನ ಗೆಳೆಯನಾದ ಗಜಾನನ ಇಬ್ಬರೂ ಕೂಡಿ ತನ್ನನ್ನು ಸತಾಯಿಸಿದ್ದು ಅವರುಮೊತ್ತಮೊದಲು ಕೇಳಿದಪ್ರಶ್ನೆಯಿಂದಲೇ ಎಂಬ ಅನ್ನಿಸಿಕೆ: ಅನೇಕ ವಂಶಗಳ ನಂತರ ಫಿರೋಜ್ ಕೇಳಿದ ಪ್ರಶ್ನೆಯ ಜಾತೀಯದೇ. ಮಾಧವ ಹಾಗು ಗಜಾನನ ತನಗಿಂತ ಮೂರು ಕ್ಲಾಸುಗಳಿಂದ ದೊಡ್ಡವರು. ತಾನು ನಾಲ್ಕನೇ ಇಯತ್ತೆಯಲ್ಲಿದ್ದಾಗ ಅವರು ಮೆಟ್ರಿಕ್‌ನಲ್ಲಿ. ಆ ಪ್ರಶ್ನೆ ತನ್ನ ತಾಯ ಜಾತಿಗೆ ಸಂಬಂಧಪಟ್ಟಿದ್ದಾಗಿತ್ತು. ತನ್ನ ತಾಯಿ ತಾನು ಇಷ್ಟುದಿನ ತಿಳಕೊಂಡಂತೆ ಬ್ರಾಹ್ಮಣ ಹೆಂಗಸಾಗಿರದೇ ಕಲಾವಂತರವಳಾಗಿದ್ದಳು ಎಂಬ ಸಂಶಯ ತನ್ನ ತಲೆಯಲ್ಲಿ ಹಾಕಿದವರು ಇವರೇ ! ಅವಳು ಸತ್ತು ಅದಾಗಲೇ ಐದು ವರ್ಷಗಳ ಮೇಲಾಗಿರಬೇಕು, ಆಗ. ಅವಳು ಯಾವ ಜಾತಿಯವಳಾಗಿದ್ದಳು ಎನ್ನುವುದಕ್ಕಿಂತ ಹೆಚ್ಚಾಗಿ ಅದನ್ನೆಲ್ಲ ಹೇಳಿ ತನ್ನನ್ನು ನೋಯಿಸುವುದರಲ್ಲಿ ಅವರು ಪಡುತ್ತಿದ್ದ ಸಂತೋಷದ ನೆನಪಿನಿಂದ ನಾಗಪ್ಪ ದಿಗ್ಭ್ರಮೆಗೊಳ್ಳುತ್ತಾನೆ : ಸಂತೋಷಕ್ಕಿಂತ ಹೆಚ್ಚಾಗಿ ಅದನ್ನು ವ್ಯಕ್ತಪಡಿಸುವ ಹೇಸಿಗೆ ತರುವ ರೀತಿಯಿಂದ : ಕೈಬೆರಳುಗಳಿಂದ ಸಂಭೋಗಕ್ರಿಯೆಯ ಸನ್ನೆಮಾಡುತ್ತ ಇಷ್ಟಗಲ ಹಲ್ಲುಕಿಸಿದು ಹಲ್ಕಟ್ಟಾಗಿ ನಗುತ್ತಿದ್ದರು. ಗಜಾನನ ಮಣಕಿಯ ಶ್ರೀಮಂತ ಜಮೀನುದಾರನ ಮಗ. ತಾನು ಶ್ರೀಮಂತ, ಜಿಲ್ಲೆಯಲ್ಲೇ ಪ್ರಖ್ಯಾತವಾವದ ಕುಟುಂಬದವನೆಂಬ ಜಂಭವೊಂದು ಅವನ ಪ್ರತಿಮಾತಿನಲ್ಲಿ, ಗತ್ತಿನಲ್ಲಿ ವ್ಯಕ್ತವಾಗುತ್ತಿತ್ತು. ನಾಗಪ್ಪ ಮುಗ್ಧ ಸರಳತೆಯನ್ನು ಹಾಗೂ ಮೆತ್ತಗಿನ ಸ್ವಭಾವವನ್ನರಿತ ಮೇಲಂತೂ ಅವರ ದುಷ್ಟಪ್ರವೃತ್ತಿ ಇನ್ನಷ್ಟು ಕ್ರೂರ ರೂಪ ತಾಳುತ್ತಿತ್ತು. ಮನೆಯಲ್ಲಿ ಅತ್ಯಂತ ಬಡವನಾಗಿದ್ದ ಮಾಧವನ ಗೆಳೆತನವನ್ನು ಗಜಾನನ ಕಟ್ಟಿಕೊಂಡದ್ದು ಎಲ್ಲರಿಗೂ ಆಶ್ಚರ್ಯ ಉಂಟುಮಾಡಿತ್ತು. ಆದರೆ ಈ ಮೈತ್ರಿಗೆ ತನ್ನನ್ನು ಹೀಗೆ ಕ್ರೂರವಾಗಿ ಛಳಿಸುವದೇ ಮೂಲಸ್ಪೂರ್ತಿಯಾಗಿತ್ತೇನೋ ಎಂಬ ಸಂಶಯ ನಾಗಪ್ಪನಿಗೆ.

ಹಾಸಿಗೆಯಲ್ಲಿ ಬಿದ್ದಲ್ಲೇ ಹಿಂದಿನ ನೆನಪುಗಳು ಮರುಕಳಿಸಹತ್ತಿದಾಗ ಮನಸ್ಸಿಗೆ ಬೇಜಾರಾಗಿ ಎದ್ದೇ ಕುಳಿತ. ಬಚ್ಚಲಮನೆಗೆ ಹೋಗಿ ಮೋರೆ ತೊಳೆದುಕೊಂಡು ಬಂದು ‘ಬೆಡ್-ಟೀ’ದ ಹಾದಿ ಕಾಯುತ್ತಿರುವಾಗ ಆದಿನ ಟೆಲಿಫೋನಿನ ಮೇಲೆ ಬಂದ ಆದೇಶದ ಮೇಲೇ ರಜೆಗೆ ಅರ್ಜಿಮಾಡಿ ಮನೆಯಲ್ಲಿ ಕುಳಿತುಬಿಟ್ಟಿದ್ದೇನಲ್ಲ ! ಇದೂ ಒಂದು ಫಿರೋಜನ ಪಿತೂರಿಯಾಗಿರಲಿಕ್ಕಿಲ್ಲವಲ್ಲ ! ಅನ್ನಿಸಿತು : ಯಾಕೆ ಎನ್ನುವುದನ್ನು ಬರೆದು ತಿಳಿಸುತ್ತೇನೆ ಎಂದು ಹೇಳಿದ್ದರೂ ನೆನ್ನೆಯವರೆಗಂತೂ ಪತ್ರ ಬಂದಿರಲಿಲ್ಲ. ನಿನ್ನೆ ಮಧ್ಯಾಹ್ನ ತಾನೇ ಖೇತವಾಡಿಗೆ ಹೋಗಿ ನೋಡಿಬಂದಿದ್ದ. ಆಜುಬಾಜಿನ ಮನೆಗಳ ಹೆಂಗಸರು ಕೆಲವರು ತನ್ನತ್ತ ವಿಚಿತ್ರ ರೀತಿಯಿಂದ ನೋಡಿದ್ದರೇ ಹೊರತು ಯಾರೂ ಮಾತನಾಡಿಸಿರಲಿಲ್ಲ. ಗಂಡಸರಾರೂ ಮನೆಯಲ್ಲಿಲ್ಲದ ವೇಳೆಯಾದ್ದರಿಂದ ಸಂಕೋಚಪಟ್ಟಿರಬೇಕು. ಅಥವಾ ತಾನು ಈ ವೇಳೆಯಲ್ಲಿ ಬರಬಹುದೆಂದು ಊಹಿಸಿರದ ಅವರಿಗೆ ಏನು ಕೇಳಬೇಕೆಂದು ಹೊಳೆಯದಿರಬಹುದು ಅನ್ನಿಸಿತು. ತಾನು ಕಳೆದ ಮೂರು ದಿನಗಳಿಂದ ಬರದೇ ಇದ್ದುದಕ್ಕೆ ಏನೆಲ್ಲ ಅರ್ಥ ಮಾಡಿಕೊಂಡಿದ್ದರೋ ಎಂದೂ ಅನ್ನಿಸಿತು.

ವರ್ಷದಲ್ಲಿ ಒಂದು ತಿಂಗಳು, ಕಂಪನಿಯ ನಿಯಮಗಳಿಗನುಸಾರವಾಗಿ, ಸಿಗುತ್ತಿದ್ದ ರಜೆಯನ್ನು ಕೂಡ ವರ್ಷ ವರ್ಷಕ್ಕೆ ತೆಗೆದುಕೊಂಡವನಲ್ಲ, ನಾಗಪ್ಪ. ಕಂಪನಿಯ ಕೆಲಸಕ್ಕೆ ತನ್ನನ್ನು ಸಂಪೂರ್ಣವಾಗಿ ಒಪ್ಪಿಸಿಕೊಂಡವನಿಗೆ ಈಗ ತಾನು ಕೇಳದೇ ಸಿಕ್ಕ ರಜೆಯಿಂದ ಮನಸ್ಸಿಗೆ ಹೇಗೋ ಹೇಗೋ ಆಗಹತ್ತಿತು. ಕೆಲಸವಿಲ್ಲದವನ ಮನಸ್ಸು, ಕಂಡದ್ದಕ್ಕೆಲ್ಲ ಅರ್ಥಹಚ್ಚಿ ಹೆದರುತ್ತಿತ್ತು : ಕೆಲವೇ ನಿಮಿಷಗಳ ಮೊದಲು ಅಸ್ಪಷ್ಟ ಅನುಮಾನವಾಗಿ ಹೊಳೆದದ್ದು ಈಗ, ಅಲ್ಲಗಳೆಯಲು ಆಗದಷ್ಟು, ಗಟ್ಟಿಮುಟ್ಟಾದ ವಾಸ್ತವತೆಯಾಗಿ ಕಣ್ಣಮುಂದೆ ನಿಂತಿತ್ತು : ಅರೆ ! ನಾನೇ ನನ್ನ ಭೋಳೇತನದಿಂದ ಕಂಪನಿಯ ಪರ್ಸೋನೆಲ್ ಮ್ಯಾನೇಜರ್ ಫೋನ್ ಮೇಲೆ ಹೇಳಿದ್ದನ್ನೇ ನಂಬಿ ಫಿರೋಜ್ ಹಾಗೂ ಅವನ ಬೇಹುಗಾರರು ರಚಿಸಿದ ಬೋನಿನಲ್ಲಿ ನನ್ನನ್ನು ಸಿಕ್ಕಿಕೊಂಡಿಲ್ಲವಷ್ಟೇ ! ಬಾಸ್‌ಗೆ ಕೂಡಾ ಫೋನ್ ಮಾಡಿಲ್ಲ. ಸಹೋದ್ಯೋಗಿಗಳೆಲ್ಲ ಏನೆಂದು ತಿಳಿಯುತ್ತಾರೋ….ನಾಸ್ತಾ ಮುಗಿಸಿದ್ದೇ ಆಫೀಸಿಗೆ ಫೋನ್ ಮಾಡಬೇಕೆಂದು ನಿಶ್ಚಯಿಸಿಕೊಂಡ.

ಕದ ಬಡೆದ ಸದ್ದು ಕೇಳಿಸಿದಾಗ ಅಡಿಗೆಯವನಿರಬೇಕೆಂದು ಬಗೆದು ದಡಬಡಿಸಿ ಎದ್ದು ಅಂಗಿಯ ಗುಂಡಿಗಳನ್ನೆಲ್ಲ ಸರಿಯಾಗಿ ಹಾಕಿಕೊಂಡು ಕದ ತೆರೆದರೆ ಕಣ್ಣಮುಂದೆ ನಿಂತವನು ಶ್ರೀನಿವಾಸನಾಗಿದ್ದ ! ನಿಷ್ಕಾರಣವಾಗಿ ಹಲ್ಲುಗಳನ್ನು ತೋರಿಸಿ ನಗುತ್ತ ಒಳಗೆ ಬಂದ. ಮೈಯಲ್ಲಿ ಖಾಕಿ ಬಣ್ಣದ ಚಡ್ಡಿಮಾತ್ರ. ಕೂದಲಿಲ್ಲದೇ ಬೋಳುಬೋಳಾದ, ಮೊಲೆಬಿಟ್ಟಂತೆ ಕಾಣುವ ಎದೆ ; ಹೊಂಡಬಿದ್ದ ಹೊಕ್ಕುಳವನ್ನು ಇನ್ನಷ್ಟು ಅಗಲವಾಗಿ ತೋರಿಸುವ ಅಸಹ್ಯವಾದ ಬೊಜ್ಜು ಬೆಳೆದ ಹೊಟ್ಟೆ. ದಿನವೂ ಅಡಿಗೆಯವನು ಮಾಡುತ್ತಿದ್ದ ಕೆಲಸವನ್ನು ಇಂದು ತಾನೇ ವಹಿಸಿಕೊಂಡಂತಿತ್ತು : ಕೈಯಲ್ಲಿ ಚಹದ ಕಪ್ಪನ್ನು ಹಿಡಿದು ಬಂದಿದ್ದ. ಒಳಗೆ ಬಂದವನೇ, “ ಇಂಥಾ ಸೆಖೆಯಲ್ಲೂ ಹೇಗಪ್ಪ ನೀನು ಯಾವಾಗಲೂ ಅಂಗಿ ಹಾಕಿಕೊಂಡೇ ಇರುತ್ತೀ,” ಎಂದ. ನಾಗಪ್ಪನಿಗೆ ಎದೆ ಧಸ್ ಎನ್ನಲಿಲ್ಲ. ‘ಇವನಿಗೂ ಗೊತ್ತಾಗಿಬಿಟ್ಟಿದೆಯೇ ನಾನು ಎದೆಗವಚಿ ಹಿಡಿದಲ್ಲೇ ನನ್ನನ್ನು ಸುಡುತ್ತಿದ್ದ ಗುಟ್ಟು ?’ ಎಂಬ ಅನುಮಾನ ಕೂಡ ಹುಟ್ಟಲಿಲ್ಲ. ಇಂತಹ ಪ್ರಶ್ನೆಯನ್ನು ಅವನು ಕೇಳಿದ್ದು ಇದೇ ಮೊದಲ ಸಲವಾಗಿರಲಿಲ್ಲ ! ಆದ್ದರಿಂದ ಹಿಂದೆ ಎಷ್ಟೊಂದು ಸಲ ಕೊಟ್ಟ ಜವಾಬನ್ನೇ ಯಾವ ಬೇಸರವಿಲ್ಲದೆ ಕೊಟ್ಟ : “ನನಗೆ ಚಿಕ್ಕಂದಿನಿಂದಲೂ ಅಂಟಿಕೊಂಡ ರೋಗವಿದು_ ಅoಟಿgeಟಿiಣಚಿಟ bಡಿoಟಿಛಿhiಚಿಟ ಣಡಿoubಟe, ತುಸು exಠಿose ಆದರೂ ಎದೆ ತುಂಬಿಬರುತ್ತದೆ. “ಇದೇಕೆ ಇವತ್ತು ನೀನೇ ಚಹ ತಗೊಂಡು ಬಂದೆ ?” ಎಂದು ಕೇಳಿದ ಪ್ರಶ್ನೆಗೆ ಶ್ರೀನಿವಾಸ.“ಅದೊಂದು ದೊಡ್ಡ ಕತೆಯೇ ಇದೆ. ಆಮೇಲೆ ಕೇಳುವಿಯಂತೆ.” ಎನ್ನುತ್ತ ವಿಚಿತ್ರವಾಗಿ ನಕ್ಕ. ನಾಗಪ್ಪನಿಗೆ ಆ ನಗು ಸೇರಲಿಲ್ಲ. ಚಹ ಕುಡಿಯುತ್ತ ಶ್ರೀನಿವಾಸನ ಮೋರೆಯನ್ನು ನೋಡುತ್ತಿರುವಾಗ, ಶ್ರೀನಿವಾಸ ತಾಲೀಮು ಮಾಡಿಕೊಂಡೇ ಬಂದಂತಿದ್ದ ಪ್ರಶ್ನೆಯನ್ನು ನಾಟಕೀಯವಾಗಿ ಕೇಳಿದ, “ನೀನು ಅಮೇರಿಕೆಗೆ ಹೋಗುವ ತಯಾರಿ ಎಲ್ಲಿಯವರೆಗೆ ಬಂತು ?” ಈಗ ಮಾತ್ರ ತನಗಾದ ಆಶ್ಚರ್ಯವನ್ನು ಮುಚ್ಚಿಕೊಳ್ಳುವುದು ನಾಗಪ್ಪನಿಗೆ ಸಾಧ್ಯವಾಗಲಿಲ್ಲ. ಬಾಲ್ಯದಿಂದಲೂ ಬಂದ ಅನುಭವ ಈಗ ಮತ್ತೆ ಚೀರಿ ಹೇಳಿತು : ನಿರ್ದೋಷಿಗಳ ಬಲಿ ಇಲ್ಲಿ ! ಬದುಕಿನಿಂದ ಬಹಳಷ್ಟನ್ನು ಬಯಸಿದವನಲ್ಲ, ದೇವರೇ ಅಮೇರಿಕೆಗೆ ಹೋಗುವ ಕನಸು ಉಳಿಯಲಿ. ನನ್ನವರೆನ್ನುವವರಲ್ಲಿ ತಲೆಯೆತ್ತಿ ನೋಡಲಾಗದಂತಹ ಪ್ರಸಂಗ ಮಾತ್ರ ತರಬೇಡ. ಶ್ರೀನಿವಾಸನಿಗೆ ಇದೆಲ್ಲ ಹೇಗೆ ಗೊತ್ತಾಯಿತು ?

“ನನಗೆ ಹ್ಯಾಗೆ ತಿಳಿಯಿತು ಎಂದು ನಿನಗೆ ಕುತೂಹಲ ಅಲ್ಲವೇ ? ನಿನ್ನೆ ನಿನ್ನ ಆಫೀಸಿಗೆ ಹೋಗಿದ್ದೆ. ದೊಡ್ಡದೊಂದು ಆರ್ಡರ್ ಬರುವುದಿತ್ತು. ಆದ್ದರಿಂದ ಸ್ವತಃ ನಾನೇ ಹೋಗಿದ್ದೆ. ಈ ಹೊತ್ತು ‘ಮಹಾರಾಷ್ಟ್ರ ದಿನ’ ದ ನಿಮಿತ್ತ ಪ್ರೆಸ್ಸಿಗೆ ರಜೆ. ಈ ಒಂದು ದಿನ ನಿನ್ನ ಕಾದಂಬರಿಗೆ ವಿರಾಮ ಕೊಡು. ಹೀಗೇ ಠಾಣಾದ ತನಕ ಹೋಗಿಬರೋಣ. ಪ್ರಿಂಟಿಂಗ್ ಮೆಶಿನರೀ ತಯಾರಿಸುವ ನಮ್ಮ ಹೊಸ ಕಾರಖಾನೆಯ ಬಿಲ್ಡಿಂಗ್ ಸಿದ್ಧವಾಗುತ್ತ ಇದೆ” ನಾಗಪ್ಪನಿಂದ ಉತ್ತರ ಬರುವ ಹಾದಿಯನ್ನೂ ಕಾಯದೇ “ಸ್ನಾನ ಮುಗಿಸಿದ್ದೇ ಹಾಲ್‌ಗೆ ಬಾ, ”ಎಂದ. ಹೋಗುಹೋಗುವಾಗ, “ನಿನ್ನ ಕಾದಂಬರಿಯ ವಹಿಯನ್ನು ಹಾಗೇ ಟೇಬಲ್ಲಿನ ಮೇಲೇ ಇಟ್ಟು ಹೋಗಬೇಡ. ಡ್ರಾ‌ಆರ್‍ದಲ್ಲಿಟ್ಟು ಬೀಗ ಹಾಕು. ಕೀಲಿಕೈ ಅಲ್ಲೇ ಇದೆ ನೋಡು” ಎಂದ.

ನಾಗಪ್ಪನಿಗೆ ಬೆನ್ನ ಹುರಿಯಲ್ಲೇ ತಣ್ಣಗಿನದೇನೋ ಹರಿದ ಅನುಭವ : ಇಲ್ಲ, ಇಡೀ ದಿನ ನನ್ನ ಬಗ್ಗೇ ವಿಚಾರಮಾಡುತ್ತ ಇದ್ದದ್ದಕ್ಕೇ ಇರಬೇಕು ಹೊರಗಿನಿಂದ ಬಂದ ಕ್ಷುಲ್ಲಕ ಇಷಾರೆಗಳಿಗೂ ಸಲ್ಲದ ಅರ್ಥಗಳು ಹುಟ್ಟುತ್ತವೆ. ನನ್ನ ಮನಸ್ಸೇ ಸರಿಯಾಗಿಲ್ಲ. ಶ್ರೀನಿವಾಸ ನಿನ್ನೆ ಆಫೀಸಿಗೆ ಹೋಗಿದ್ದ ಎಂದ ಮೇಲೆ ಯಾರಾದರೂ ಅವನಿಗೆ ಹೇಳಿರಬಹುದೇ ಇನ್ನೂ ನನಗೇ ಗೊತ್ತಾಗದೇ ಇದ್ದದ್ದನ್ನು ? ಕೇಳಿ ನೋಡೋಣವೇ ?_ನಾಗಪ್ಪನಿಗೆ ಧೈರ್ಯವಾಗಲಿಲ್ಲ.

ಬರವಣಿಗೆಯ ವಹಿಯನ್ನು ಸೂಟ್‌ಕೇಸಿನಲ್ಲಿಟ್ಟು ಬೀಗ ಹಾಕುತ್ತಿದ್ದಾಗ ತಟ್ಟನೆ ಒಂದು ವಿಚಾರ ಬಂತು : ನಾನು ಬರೆಯುತ್ತಿದ್ದುದ್ದು ಕಾದಂಬರಿ ಎಂಬುದನ್ನೇ ದೃಢವಾಗಿ ನಂಬಿದಂತಿದೆ, ಶ್ರೀನಿವಾಸ. ಬಹುಶಃ ನನ್ನ ಕಾದಂಬರಿಯ ಬಗ್ಗೆ ಹೇಳಿದ ಸೀತಾರಾಮನೇ ಅಮೇರಿಕೆಯ ಯೋಜನೆಯ ಬಗೆಗೂ ಹೇಳಿರಲಿಕ್ಕಿಲ್ಲವಷ್ಟೇ. ಆಫೀಸಿನ ಹೆಸರು ಹೇಳಿ ಥಾಪು ಹೊಡೆಯುತ್ತಿರಬೇಕು ಬೋಳೀಮಗ. ಏನಿಲ್ಲ, ಹೀಗೆ ಇಡೀ ದಿನ ನನ್ನ ಬಗ್ಗೇ ವಿಚಾರ ಮಾಡುತ್ತ ಕೂಡ್ರಬಾರದು. ಸಂಜೆ ದೋಶಿ ಭೆಟ್ಟಿಯಾದಾಗ ಅವರಿಗೆ ಸದ್ಯದ ಯಾತನೆಯನ್ನು ಬಿಚ್ಚಿ ಹೇಳಬೇಕು. ವೋಮೂನನ್ನು ಕಾಣದೇ ಬಹಳ ದಿನಗಳಾದವು. ಅವನ ಬಗ್ಗೆ ಬರೆಯಬೇಕೆಂದುಕೊಂಡದ್ದನ್ನು ಇಂದು ರಾತ್ರಿ ತಪ್ಪದೇ ಬರೆಯಬೇಕು. ನಾಳೆ ಸೀತಾರಾಮನಿಗೆ ಫೋನ್ ಮಾಡಿ ಗಿಲ್ಬರ್ಟನ ವಿಳಾಸ ಪಡೆದು ಪತ್ರ ಬರೆಯಬೇಕು. ಅವನು ಹೇಳೆದ ಚೆಶಾಯರ್ ಹೋಮನ್ನೂ ನೋಡಿ ಬರಬೇಕು, ಎಂದು ನಿಶ್ಚಯಿಸಿಕೊಂಡ. ತನ್ನ ಸದ್ಯದ ಮನಃಸ್ಥಿತಿಯಲ್ಲಿ ಈವರೆಗೆ ರಾಣಿಯ ನೆನಪೇ ಆಗದೇ ಇದ್ದದ್ದು ಲಕ್ಷ್ಯಕ್ಕೆ ಬಂದಾಗ ಒಂದು ಕ್ಷಣದ ಮಟ್ಟಿಗೆ ಕೆಡಕೆನಿಸಿತು. ಮರುಗಳಿಗೆ, ಬರಿಯ ದೇಹದ ಗರಜಿಗೆ ಹುಟ್ಟಿಸಿಕೊಂಡ ಸಂಬಂಧವಿದು ಎಂದು ತನ್ನ ಔದಾಸ್ಯವನ್ನು ಸಮರ್ಥಿಸಿಕೊಂಡ. ಅಫೀಸಿನಲ್ಲಿ ಬಾಸ್‌ನ ಸೆಕ್ರೆಟರಿಯಾದ ಮೇರಿ ತನ್ನಲ್ಲಿ ವಿಶೇಷ ಆಸ್ಥೆ ತೋರಿಸುತ್ತಿದ್ದಾಳೆ. ತನಗೆ ಮಾತ್ರ ಎಲ್ಲಿಲ್ಲದ ಸಂಕೋಚ, ಭಯ. ಹತ್ತಿರ ಬರುವುದೆಂದರೆ ಮೆಲ್ಲಗೆ ಬಿಚ್ಚಿಕೊಳ್ಳುವ ಕ್ರಿಯೆ. ತನ್ನಲ್ಲೋ ಬಿಚ್ಚುವ ಬದಲು ಮುಚ್ಚಿಕೊಳ್ಳುವಂತಹದೇ ಹೆಚ್ಚಾಗಿದೆ…ಹೊಸ ಸಂಬಂಧವೆಂದರೇನೇ ಹಿಂದೆಗೆಯುವ ತನಗೆ, ಮೇರಿಗೆ ತನ್ನ ಮೇಲೆ ಪ್ರೀತಿ ಇದೆ ಎನ್ನುವುದನ್ನು ನೆನೆಯಲೂ ಹೆದರಿಕೆ, ಇತ್ತಿತ್ತ. ನಾಳೆ ಮೇರಿಗೆ ಫೋನ್ ಮಾಡಿದರೆ ಹೇಗೆ ? ಆಫೀಸಿನ ಎಲ್ಲ ಹಕೀಕತ್ತು ತಿಳಿಯುತ್ತಿತ್ತು. ಹುಡುಗಿ ಅಪಾರ್ಥ ಮಾಡಿಯಾಳೆ ? ಮಾಡಿದರೆ ಮಾಡಲಿ. ಎಷ್ಟೊಂದಕ್ಕೆ ಹೆದರಿಕೊಂಡಿರಲಿ ? ಹೌದು. ಬಾಸ್‌ಗೆ ಫೋನ್ ಮಾಡುವ ಬದಲು ಮೇರಿಗೆ ಫೋನ್ ಮಾಡಬೇಕು.

ಬಚ್ಚಲುಮನೆಯಲ್ಲಿ ತಣ್ಣೀರಿನ ಶಾವರ್ ಕೆಳಗೆ ನಿಂತಾಗ ಎಲ್ಲರನ್ನೂ ಬಿಟ್ಟು ಮೇರಿ ತನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿಸಲು ಕಾರಣವೇನು ? ಹುಚ್ಚು ಹುಡುಗಿ ಎಂದುಕೊಂಡು ತನ್ನಷ್ಟಕ್ಕೆ ನಕ್ಕ. ಎಂದಿನಂತೆ, ಎದೆಗೆ ಹೊಟ್ಟೆಗೆ ಸಾಬೂನು ತಿಕ್ಕಿಕೊಳ್ಳುವಾಗ ಆ ಭಾಗಗಳನ್ನು ನೋಡುವ ಮನಸ್ಸಾಗದೇ ಛಾವಣಿಯ ಕೆಳಗೆ ದೃಷ್ಟಿ ತಿರುವಿದ : ಸುಟ್ಟ ಜಾಗದ, ನುಣುಪಾಗಿಯೂ, ಗಂಟು ಗಂಟಾದ ಚರ್ಮದ ಸ್ಪರ್ಶಕ್ಕೆ ಮನಸ್ಸು ಬಾಡಹತ್ತಿದಾಗ ಮೇರಿಯ ಸುಂದರ ಮೋರೆಯನ್ನು ಮುಂದೆ ನಿಲ್ಲಿಸಿಕೊಂಡ. ಕಣ್ಣುಗಳು ಹನಿಗೂಡುವ ಮೊದಲೇ ಷಾವರಿನ ನೀರನ್ನು ಮೋರೆಯ ಮೇಲೆ ಧಾರೆಯಾಗಿಸಿಕೊಂಡ. ದಿನಕ್ಕಿಂತ ಹೆಚ್ಚೇ ಹೊತ್ತು ನೀರಡಿಗೆ ನಿಂತ.
uಟಿಜeಜಿiಟಿeಜ
– ಅಧ್ಯಾಯ ಎಂಟು –

ಬ್ರೇಕ್‌ಫಾಸ್ಟಿಗೆಂದು ಹಾಲ್‌ಗೆ ಹೋದಾಗ ನಾಗಪ್ಪನಿಗೆ ಆಶ್ಚರ್ಯ ಕಾದಿತ್ತು : ಶ್ರೀನಿವಾಸ, ಶ್ರೀನಿವಾಸನ ಹೆಂಡತಿ, ಚೇತನಾ ಹಾಗು ಅಡಿಗೆಯವನು ಎಲ್ಲರೂ ಒಳ್ಳೆಯ ಉಡುಪನ್ನು ಧರಿಸಿ ಠಾಣಾಕ್ಕೆ ಹೋಗಲು ಸಿದ್ಧರಾಗಿ ನಿಂತಿದ್ದರು. ಪಿಕ್ನಿಕ್ಕಿಗೆ ಹೊರಟ ತರಹ ಬಹಳ ಖುಶಿಯಲ್ಲಿದ್ದರು. ನಾಗಪ್ಪ ತಬ್ಬಿಬ್ಬಾದ. ಇವರೆಲ್ಲರ ಜೊತೆಗೆ ಹೋಗುವುದರ ಕಲ್ಪನೆಯಿಂದಲೇ ಮನಸ್ಸು ಅಧೀರಗೊಂಡಿತು. ಶ್ರೀನಿವಾಸನ ಹೆಂಡತಿಯ ಕಣ್ಣುತುಂಬುವ ರೂಪಕ್ಕೂ ತನ್ನ ಅಧೀರತೆಗೂ ಸಂಬಂಧವಿರಬಹುದೆಂಬ ಅನ್ನಿಸಿಕೆಯನ್ನು ತಳ್ಳಿಹಾಕಲು ಯತ್ನಿಸಿದ. ಹದಿನೆಂಟು ವರ್ಷಗಳಿಂದ ಮಾಡುತ್ತಾ ಬಂದ ನೌಕರಿ ಒಂದು ಸುಖದಾಯಕ ಹಂತಕ್ಕೆ ಬರುತ್ತಿದ್ದಾಗ ಒದಗಿದ ಈ ದುರ್ಧರಪ್ರಸಂಗದಿಂದ ಮನಸ್ಸು ಗಾಸಿಗೊಂಡಾಗ ಈ ಪಿಕ್ನಿಕ್ ! ಹೇಗಾದರೂ ಇದರಿಂದ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸುತ್ತಿರುವಾಗ ಶ್ರೀನಿವಾಸನೇ ಇವನ ಮನಸ್ಸನ್ನು ಓದಿಕೊಂಡವನ ಹಾಗೆ, “ನಡೆ, ಹೊರಡುವ. ಬೆಳಿಗ್ಗೆ ಎದ್ದಕೂಡಲೇ ನಮ್ಮ ಶಾರದೆಗೆ (ಶ್ರೀನಿವಾಸನ ಹೆಂಡತಿಯ ಈ ಹೆಸರನ್ನು ತಾನು ಕೇಳುತ್ತಿದ್ದದ್ದು ಇದೇ ಮೊದಲೋ ಅಥವಾ ಈ ಮೊದಲು ಕೇಳಿದ್ದೆನೊ ? ಸರಿಯಾಗಿ ನೆನಪಿಲ್ಲ) ಹುಕ್ಕಿ ಬಂದುಬಿಟ್ಟಿತು. ‘ಠಾಣಾಕ್ಕೆ ಹೋಗುವುದಾದರೆ ಎಲ್ಲರೂ ಕೂಡಿಯೇ ಹೋಗೋಣವಲ್ಲ. ಬ್ರೇಕ್‌ಫಾಸ್ಟಿಗೆ ಮಾಡಿದ ಇಡ್ಲಿ_ಚಟ್ಣಿ ಎಲ್ಲವನ್ನು ಕಟ್ಟಿಕೊಂಡು ಹೋಗಿ ಅಲ್ಲಿಯೇ ತಿನ್ನೋಣ. ಒಂದು ಸಣ್ಣ ಪಿಕ್ನಿಕ್ ಆದೀತು,’ ಎಂದಳು. ದೊಡ್ಡ ಥರ್ಮೊಸಿನಲ್ಲಿ ಬಿಸಿಬಿಸಿ ಕಾಫಿ ! ನಮ್ಮ ಅಚ್ಯುತನೂ ಎಷ್ಟು ಖುಷಿಯಲ್ಲಿದ್ದಾನೆ ನೋಡು,” ಎಂದ. ನಾಗಪ್ಪ ಆ ಗಳಿಗೆಯಲ್ಲಿ ನಿರಾಕರಿಸುವದು ಶಕ್ಯವಿರಲಿಲ್ಲ. ಶ್ರೀನಿವಾಸ ಅವನನ್ನು ಹೆಚ್ಚುಕಡಿಮೆ ಎಳದೇ ಒಯ್ಯುವವನಂತೆ ಒಯ್ದು ಕಾರಿನತ್ತ ದೂಡಿ ಮುಂದಿನ ಸೀಟಿನಲ್ಲಿ ಕೂಡ್ರಿಸಿದ. ಶಾರದೆ, ಚೇತನಾ ಹಾಗು ಅಚ್ಯುತ ಹಿಂದಿನ ಸೀಟಿನಲ್ಲಿ. ತಿಂಡಿಯ ಸರಂಜಾಮನ್ನು ಮೊದಲೇ ಡಿಕ್ಕಿಯಲ್ಲಿ ಇಟ್ಟಾಗಿತ್ತು. ಕಾಫಿ ತುಂಬಿದ ಹಂಡೆಯ ಆಕಾರದ ದೊಡ್ಡ ಥರ್ಮೊಸನ್ನು ಅಚ್ಯುತ ತನ್ನ ಕಾಲಬಳಿ ಇಟ್ಟಿಕೊಂಡಿದ್ದ. ಅಚ್ಯುತನನ್ನು ನೋಡುನೋಡುವಾಗ ತಾನು ಈವರೆಗೂ ನೋಡಿಯೇ ಇರದ ಅಣ್ಣನ ವಿಚಾರ ಮನಸ್ಸಿನಲ್ಲಿ ಹಾದುಹೋಗಿ ಮೈ ನವಿರಿಗೊಳಗಾಯಿತು.

ಕಾರು, ಟಿಳಕ, ಬ್ರಿಡ್ಜ್, ದಾದರ ಟ್ರ್ಯಾಮ್_ಟರ್ಮಿನಸ್, ಕಿಂಗ್ಸ್ ಸರ್ಕಲ್, ಸಾಯನ್‌ಗಳನ್ನು ದಾಟಿ ಪೂನಾಕ್ಕೆ ಹೋಗುವ ಹಾಯ್ವೇದ ಮೇಲೆ ಓಡುತ್ತಿತ್ತು. ಕಾರಿನ ತೀವ್ರಗತಿಗೆ ಅನುಗುಣವಾಗಿ ಕಾರಿನಿಂದ ಕಂಡ ಸುತ್ತಲಿನ ಭೂಪಟದ ವಿವರಗಳು ಒಂದೊಂದಾಗಿ ಕಣ್ಣ ಪರದೆಯ ಮೇಲೆ ಮೂಡುತ್ತಿದ್ದವು : ಮಾಸುತ್ತಿದ್ದವು ; ಮತ್ತೆ ಹೊಸ ವಿವರಗಳಿಗೆ ಎಡೆಮಾಡಿಕೊಡುತ್ತಿದ್ದವು : ಸಾಯನ್ನಿನ ಬೆಟ್ಟ ; ಬೆಟ್ಟದ ನೆತ್ತಿಯಲ್ಲಿ ನಿಂತ ಹಳೇಕೋಟೆಯ ಭಗ್ನ ಅವಶೇಷಗಳು ; ರಸ್ತೆಯ ಬಲಗಡೆಯಲ್ಲಿ ದೃಷ್ಟಿ ಹಾಯುವವರೆಗೂ ಹಬ್ಬಿಕೊಂಡ ದುರ್ಗಂಧ ಸೂಸುವ ಖಾಡಿ ; ಖಾಡಿಯ ಅಂಚಿನಲ್ಲಿಯ ಗುಡ್ಡಗಳ ಸಾಲು : ಮಗ್ಗಲಲ್ಲೇ ರಾಸಾಯನಿಕ ತಂತ್ರವಿಜ್ಞಾನದ ದೊಡ್ಡ ಪ್ರತೀಕಗಳಾಗಿ ಮೆರೆಯುವ ಪೆಟ್ರೋಲಿಯಂ ರಿಫೈನರಿ ; ಫರ್ಟಿಲೈಜರ್ಸ್, ಪೆಟ್ರೋಕೆಮಿಕಲ್ಸ್ ಉತ್ಪಾದಿಸುವ ಕಾರಖಾನೆಗಳು : ಅಡ್ಡತಿಡ್ಡವಾದ, ಅಂಕುಡೊಂಕಾದ ಸ್ಟೀಲ್ ಪೈಪುಗಳ ಕಪ್ಪು, ಕಂದುಬಣ್ಣಗಳ ಅಂದಗೇಡಿಯಾದ ರಾಶಿಯಂತೆ ತೋರುತ್ತ ತಮ್ಮ ಎತ್ತರದಲ್ಲಿ ಬದಿಯ ಗುಡ್ಡಗಳೊಡನೆ ಸ್ಪರ್ಧಿಸುತ್ತಿದ್ದವು. ಈ ಕಪ್ಪು ಗುಪ್ಪೆಯಿಂದ ಚೆಂಗನೆ ನೆಗೆದ ಉದ್ದೋ ಉದ್ದವಾದ ಹೊಗೆ_ಕೊಳವೆಗಳ ಹಾಗೆ ಕಪ್ಪಾಗಿ ಸೆಟೆದು ನಿಂತವುಗಳ ತುದಿಯಿಂದ ಹೊಮ್ಮುತ್ತಿದ್ದ ಬೆಂಕಿಯ ಜ್ವಾಲೆ ; ಹೊಗೆಯರಾಶಿ. ಅಲ್ಲಲ್ಲಿ ಭುಸ್ ಎಂದು ಹೊರಬರುವಾಗಲೇ ಮಂಜಾಗುತ್ತಿದ್ದ ಉಗಿ : ಮುಂಜಾವಿನ ಗಾಳಿಯಲ್ಲೂ ಗಂಧಕದ, ಗಂಧಕಾಮ್ಲದ ವಾಸನೆ ಹರಡಿತ್ತು. ಮೇಲೆ ಬಾಗಿ ನಿಂತ ಆಕಾಶದ ಬಣ್ಣವನ್ನು ಗುರುತಿಸುವುದೂ ಕಠಿಣವಾಗಿತ್ತು. ಹೈವೇದ ಎಡಬಲಗಳಲ್ಲೂ ಹಸಿರು ಗಿಜಿಗಿಜಿಸುವ ಖಾಡಿ, ನಡುನಡುವೆಯೇ ಊರ ನೆನಪು ತರುತ್ತಿದ್ದ ಉಪ್ಪಿನ ಆಗರಗಳು : ಮೂಡುವಷ್ಟರಲ್ಲಿ ಮುಳುಗುತ್ತಿದ್ದ ಪ್ರತಿಬಿಂಬಗಳೊಳಗಿಂದಲೇ ಹುಟ್ಟಿಬಂದಿತ್ತು ಸತತವಾಗಿ ಕೊರೆಯುತ್ತಿದ್ದ ಅರಿವು : ಇದರಲ್ಲೇನೋ ಬೇತು ಇದೆ. ಈ ಒಂದೂ ಮಗ ಹೇಳಿದಷ್ಟು ಸಹಜವಾದ ಪಿಕ್ನಿಕ್ ಅಲ್ಲವಿದು. ಬೆಳಿಗ್ಗೆ ಎದ್ದ ಕೂಡಲೇ ಹೆಂಡತಿಗೆ ಹುಕ್ಕಿ ಬಂದುಬಿಟ್ಟಿತಂತೆ. ಇವನ ಬೊಜ್ಜಿನಲ್ಲಿ ಎಂದಾದರೂ ಹುಟ್ಟುತ್ತಿರಬಹುದೇ ಇಂಹತ ಹುಕ್ಕಿ ? ಆಗಿನಿಂದಲೂ ವಟವಟ ಮಾತು ನಡೆಸಿದ್ದಾನೆ, ಹಿಂದಿನ ಸೀಟಿನಲ್ಲಿ ಕೂತ ಹೆಂಡತಿ ಮಗಳೊಡನೆ, ನಾನು ಮಗ್ಗಲಲ್ಲಿ ಕೂತಿರುವಾಗಲೂ : ಕಟ್ಟಿಗೆಯ ಬಾಯಾಗಿದ್ದರೆ ಒಡೆದೇ ಹೋಗುತ್ತಿತ್ತೇನೋ !

ಶ್ರೀನಿವಾಸನ ಭರಭರಾಟೆಯಿಂದ ನಡೆದ ಛಾಪಖಾನೆಯ ದಂಧೆಯ ಬಗ್ಗೆ ಕೇಳಿ ತಿಳಿದ ನಾಗಪ್ಪನಿಗೆ ಅವನ ಪ್ರತಿಮಾತಿನಲ್ಲಿ, ಮಾತನಾಡುವ ರೀತಿಯಲ್ಲಿ ತುಂಬಿತುಳುಕುವ ಪ್ರಚಂಡ ಆತ್ಮವಿಶ್ವಾಸದಿಂದ ಮಾತ್ರ ಆಶ್ಚರ್ಯವಾಗದೇ ಉಳಿಯಲಿಲ್ಲ. ಇಪ್ಪತ್ತು ವರ್ಷಗಳ ಹಿಂದೆ ತಾನು ನೋಡಿದ ಶ್ರೀನಿವಾಸನೆಲ್ಲಿ, ಲಕ್ಷಗಟ್ಟಲೇ ಹಣ ಶೇಖರಿಸಿದ್ದಾನೆಂಬ ಪ್ರತೀತಿ ಗಳಿಸಿದ ಈಗಿನ ಶ್ರೀನಿವಾಸರಾವ್ ಎಲ್ಲಿ ! ಹೆಂಡತಿಯಲ್ಲಿ ಮಗಳಲ್ಲಿ ವ್ಯಕ್ತವಾಗುತ್ತಿದ್ದುದ್ದು ಕೂಡ ಇದೇ ಆತ್ಮವಿಶ್ವಾಸ. ತನ್ನಲ್ಲಿ ಅದು ಸದ್ಯಕ್ಕೆ ಇಲ್ಲದ್ದಕ್ಕೋ ಏನೋ ಆತ್ಮವಿಶ್ವಾಸವೇ ದೊಡ್ಡ ಮೌಲ್ಯವಾಗಿ ಪ್ರಕೃತಭಾವನೆಗಳ ಹರಹಿನ ಕೇಂದ್ರಸ್ಥಾನದಲ್ಲಿ ನಿಂತಿತು. ಗಿಲ್ಬರ್ಟ ಹಿಂದೊಂದು ದಿವಸ ಹರಿಜನರ ಬಗ್ಗೆ ಮಾತನಾಡುತ್ತಿದ್ದಾಗ ಅಂದಿದ್ದ : ಸಾವಿರಾರು ವರ್ಷಗಳಿಂದ ಈ ಜನರ ಮೇಲೆ ನಡೆಸುತ್ತ ಬಂದ ಅನ್ಯಾಯದ ಅತ್ಯಂತ ಕ್ರೂರ ಪರಿಣಾಮವೆಂದರೆ ನಾವು ಇವರ ಆತ್ಮವಿಶ್ವಾಸವನ್ನೇ ಕೊಂದುಬಿಟ್ಟದ್ದು. ಮಾತಿನ ಸಂದರ್ಭ ಮರೆತಿತ್ತು. ಆದರೆ ಆ ಮಾತು ಹಿಂದೆಂದೂ ಅನ್ನಿಸಿರದಷ್ಟು ಪರಿಣಾಮಕಾರಿಯಾಗಿ ಈಗ ಕಿವಿತುಂಬಿ ನಿಂತಿತು.

ಶ್ರೀನಿವಾಸನನ್ನು ತಾನು ಮುಂಬಯಿಯಲ್ಲಿ ಮೊತ್ತಮೊದಲು ಭೆಟ್ಟಿಯಾದ ಸಂದರ್ಭ ನೆನಪಿನಲ್ಲಿ ಮರುಕಳಿಸಹತ್ತಿತು. ಜೊತೆಗೆ ಇಷ್ಟು ದಿನ ನೆನೆಯಲು ಬಯಸಿರದ ಅನೇಕ ಸಂಗತಿಗಳೂ ಹೊರಗೆ ಬರಲು ಹವಣಿಸಿದಾಗ ಅಸ್ವಸ್ಥನಾದ…

ಅಪ್ಪ ಕೊನೆಗೂ ಬಾವಿಯಲ್ಲಿ ಹಾರಿಯೇ ಪ್ರಾಣ ಕಳೆದುಕೊಂಡಾಗ ನಾಗಪ್ಪನಿಗೆ ಹದಿಮೂರು ವರ್ಷ ಪ್ರಾಯ. ಕುಮಟೆಯ ಹೈಸ್ಕೂಲಿನಲ್ಲಿ ನಾಲ್ಕನೇ ಇಯತ್ತೆಯನ್ನು ಅದೇ ಮುಗಿಸಿದ್ದ. ಇನ್ನು ಮೂರುವರ್ಷ ಕಳೆದರೆ ಮೆಟ್ರಿಕ್. ಕ್ಲಾಸಿನಲ್ಲಿ ಅವನೇ ಮೊದಲಿಗ. ಸಾಲೆಯ ಹೆಡ್‌ಮಾಸ್ತರರು ವರ್ಗದ ಟೀಚರರು ಆಗಲೇ ಮೆಟ್ರಿಕ್ಕಿನಲ್ಲಿ ರ್‍ಯಾಂಕು ಗಳಿಸಿ ಸಾಲೆಗೆ ಕೀರ್ತಿ ತರುವ_ಅವನಿಗೇ ಇಲ್ಲದ_ಕನಸುಗಳನ್ನು ಕಾಣುತ್ತಿದ್ದರು. ಇನ್ನಾವುದೇ ರೀತಿಯಿಂದ ಉಳಿದವರಿಂದ ಬೇರೆಯಾಗಿ ನಿಲ್ಲುವ ತಾಖತ್ತಿಲ್ಲದ ಅವನಿಗೆ ತನ್ನ ಬುದ್ಧಿಶಕ್ತಿಯೊಂದೇ ಆತ್ಮವಿಶ್ವಾಸದ ಸೆಲೆಯಾದಂತಿತ್ತು. ರೂಪದಲ್ಲಾಗಲೀ ಮೈಕಟ್ಟಿನಲ್ಲಾಗಲೀ ಯಾವುದೇ ಬಗೆಯ ಆಕರ್ಷಕತೆ ಇಲ್ಲದವನಿಗೆ ಎದೆ ಹೊಟ್ಟೆಗಳ ಮೇಲಿನ ಸುಟ್ಟ ಕಲೆಯೊಂದು ಇನ್ನಷ್ಟು ಊನಗಂಡಕ್ಕೆ, ಉಳಿದವರಿಂದ ದೂರ ಉಳಿದು ಅಂತರ್ಮುಖಿಯಾಗುವುದಕ್ಕೆ ಕಾರಣವಾಯಿತು. ಬಿಚ್ಚುವುದಕ್ಕಿಂತ ಮುಚ್ಚಿಕೊಳ್ಳುವುದೇ ಒಂದು ಒದ್ಯೋಗವಾಗಿ, ಯಾರಾದರೂ ಕಂಡುಹಿಡಿದಾರೆ ? ಎಂಬಂತಹ ಭಯದ ಚಿಹ್ನೆಯೊಂದು ಮೋರೆಯಮೇಲೆ, ಕಣ್ಣುಗಳಲ್ಲಿ ನೆಲೆಸಹತ್ತಿತು. ಮುಚ್ಚಿಟ್ಟುಕೊಂಡಷ್ಟೂ ಹೆಚ್ಚು ಹೆಚ್ಚು ಬೆಚ್ಚಿಸುವುದಕ್ಕೇ ಶುರುಮಾಡಿತು. ಉಳಿದವರೊಂದಿಗೆ ಸಂಬಂಧ ಬೆಳೆಸಿಕೊಳ್ಳುವ ರೀತಿಯ ಮೇಲೆ ಕಾಯಂ ಮುದ್ರೆಯೊತ್ತಿ ನಿಂತ ಈ ಸಂಗತಿ ಅವನನ್ನು ಚಿಕ್ಕಂದಿನಿಂದಲೇ ಒಂಟಿ, ಜೀವಿಯನ್ನಾಗಿಸಿತು : ವಾಸ್ತವದಲ್ಲಿ ಮಾಡಲಾಗದ್ದನ್ನು ಬರೇ ಹಗಲುಗನಸುಗಳಲ್ಲಿ ಕಟ್ಟಹತ್ತಿದ. ಆ ದಿನಗಳಲ್ಲಿ ಹುಟ್ಟಿಕೊಂಡ ಅಭ್ಯಾಸವೊಂದು ಇಂದಿಗೂ ಬಿಡಿಸಿಕೊಳ್ಳಲಾಗದ ಚಟದಂತೆ ಜೀವಕ್ಕೆ ಅಂಟಿಕೊಂಡು ನಿಂತಿತು : ಸಾಲೆಯ ಅಭ್ಯಾಸ ಹೋಮ್‌ವರ್ಕ ಎಲ್ಲ ಮುಗಿದಮೇಲೆ ಉಳಿದ ಹುಡುಗರು ಮಣಕೀ_ಗ್ರೌಂಡಿಗೆ ಆಡಲು ಹೋದರೆ ಇವನೊಬ್ಬನೇ ಯಾವುದಾದರೂ ಪುಸ್ತಕ ಓದುವ ನೆಪದಲ್ಲಿ ಕಾಟಿನ ಮೇಲೆ ಅಂಗತ್ತ ಮಲಗಿ ಎದೆಯವರೆಗೂ ಹೊದಿಕೆಯನ್ನೆಳೆದುಕೊಂಡಾಗ ತೆರೆದೇ ಇದ್ದ ಕಣ್ಣುಗಳಲ್ಲಿ ಸಾಧ್ಯವಾಗದ ಕನಸುಗಳು ! ಸಾಧ್ಯವಾಗಿರದ ಸಂಬಂಧಗಳು…..! ಸ್ಟೇಜಿನ ಮೇಲೆ, ಎಂಥ ಭಯವೂ ಇಲ್ಲದೇ, ಸ್ವತಃ ತಾನೇ ಬರೆದು ಕೊಟ್ಟ ಭಾಷಣಗಳನ್ನು ಬಾಯಿಪಾಠ ಮಾಡಿ ವಾಕ್‌ಸ್ಪರ್ಧೆಗಳಲ್ಲಿ ಮೊದಲನೇ ನಂಬರ ಗಿಟ್ಟಿಸುತ್ತಿದ್ದ ಬಾಬ್ಬೂಟೀ ಪೈ ; ನಾಟಕಗಳಲ್ಲಿ ಹೀರೋನ ಪಾತ್ರವನ್ನಾಡುತ್ತಿದ್ದ ರಮೇಶ ಶೆಟ್ಟಿ ; ಆಟಪಂದ್ಯಗಳಲ್ಲಿ ಭಾಗವಹಿಸುತ್ತಿದ್ದ ಕಣ್ಣುತುಂಬುವ ಆರೋಗ್ಯವುಳ್ಳ ವಾಸುದೇವ ಕಿಣಿ ; ಅಂತೋನೀ ಫರ್ನಾಂಡಿಸ್… ಎಷ್ಟೊಂದು ಸುಲಭವಾಗಿ ಇವರೆಲ್ಲ ಉಳಿದವರೊಂದಿಗೆ ಬೆರೆಯಬಲ್ಲರು ! ಮುಖ್ಯವಾಗಿ ಸಾಲೆಯ ಸುಂದರ ಹುಡುಗಿಯರ ಮೇಲೆ ಛಾಪು ಹಾಕಬಲ್ಲರು ! ಬಂಗಾರಪಟ್ಟೆಯೆ ಕುಮಟೇಕರ್ ಸುಮನ ಗಜಾನನಿಗೆ ಒಲಿದದ್ದೇ ಅವನ ಝಗಝಗಿಸುವ ಮಾತಿನ ವೈಖರಿಗೆ ; ಅದಕ್ಕಿಂತ ಹೆಚ್ಚಾಗಿ ಹಾಗೆ ಮಾತನಾಡುವ ಅವನ ಧೈರ್ಯಕ್ಕೆ. ಕುಮಟೇಕರ್ ಸುಮನಳ ಒಯ್ಯಾರ ತುಂಬಿದ ಲಾವಣ್ಯ (ಅವಳೂ ಕಲಾವಂತ ಮನೆತನದವಳೇ ಅಂತೆ) ಹಾಗೂ ಅವಳೊಡನೆ ಆಗಲೀ, ಸಾಲೆಯ ಇನ್ನಾವ ಹುಡುಗಿಯರೊಡನೆ ಆಗಲೀ ಕೊನೆಗೂ ಮಾತನಾಡಲು ಆಗದ ಧೈರ್ಯ_ಎರಡೂ ಕೈಗೆ ಎಟುಕದ ವಾಸ್ತವತೆಯ ಸಂಕೇತವಾಗಿ ನಾಗಪ್ಪನ ಒಳಮನಸ್ಸಿನಲ್ಲಿ ಬಹಳ ಆಳಕ್ಕೆ ಬೇರು ಚಾಚಿದ್ದವು. ಜೊತೆಜೊತೆಗೇ ಆ ವಾಸ್ತವತೆಯ ಒಂದು ಭಾಗ ನೆನಪಿನಲ್ಲಿ ಸ್ಪಷ್ಟವಾಗಿ ಮೂಡಲು ನಿರಾಕರಿಸುತ್ತ ಹುಟ್ಟಿಸಿದ ಭಯ ಕೂಡ. ದಿನ ಕಳೆದಂತೆ ಕೈಗೆ ಎಟುಕದ ಕೈಹಾಕಿದರೆ ಹೆದರಿಸುವ ವಾಸ್ತವ ಜಗತ್ತಿಗಿಂತ ಹಗಲುಗನಸುಗಳಲ್ಲಿ ಹುಟ್ಟಿಬರುತ್ತಿದ್ದ ಜಗತ್ತು ಹೆಚ್ಚು ಪ್ರಿಯವಾಗಹತ್ತಿತು. ಹಿಂತಿರುಗಿ ನೋಡಿದಾಗ, ತನ್ನ ಬರೆಯುವ ಹವ್ಯಾಸ ಹುಟ್ಟಿದ್ದೇ ಈ ಹಗಲುಗನಸುಗಳನ್ನು ಮಾತಿನಲ್ಲಿ ಹಿಡಿದಿಡಲು ಹೊರಟಾಗ ; ಪ್ರತ್ಯಕ್ಷ ಬದುಕಿನಲ್ಲಿ ಸಾದ್ಯವಾಗಿರದ ಸಂಬಂಧಗಳನ್ನು ಹೀಗೆ ಬರೆಯುವುದರ ಮೂಲಕ ಸಾಧಿಸಲು ಹೊರಟಾಗ_ಎಂಬ ಅನುಮಾನ ನಾಗಪ್ಪನಿಗೆ. ಸಮಾಜದ ಆಶೋತ್ತರಗಳಿಗೆ ನಾಲಿಗೆ ಒದಗಿಸಲು, ಉಳಿದವರನ್ನು ತಿದ್ದಲು, ಕ್ರಾಂತಿ ಎಬ್ಬಿಸಲು ಇಂದಿನ ಸಾಹಿತ್ಯ ಸಿದ್ಧವಾಗಬೇಕು ಎಂಬಂತಹ ವೀರಾವೇಶದ ಮಾತುಗಳನ್ನಾಡುವ ಇಂದಿನ, ಇನ್ನೂ ಮೀಸೆಯ ಗೆರೆಯೂ ಮೂಡಿರದ, ಎಳೆ ವಿಮರ್ಷಕರ (ಹಾಗೆಂದು ಕರೆದುಕೊಳ್ಳುವವರ) ಮಾತುಗಳು ತನಗೆ ಅರ್ಥವಾಗದೇ ಇದ್ದುದಕ್ಕೆ ಬಹುಶಃ ಇದೇ ಕಾರಣವಿರಬೇಕೆ ಅನ್ನಿಸಿತು. ಉಳಿದವರನ್ನು ತಿದ್ದಲು ಹೊರಟ ಬರವಣಿಗೆಯೇ ಅಲ್ಲ ತನ್ನದು. ‘ನೀನು ಇಲ್ಲವೇ ಇಲ್ಲ’ ಎನ್ನುವಷ್ಟರ ಮಟ್ಟಿಗೆ ತನ್ನ ಹುಟ್ಟಿಗೆ, ತನ್ನ ಅಸ್ತಿತ್ವಕ್ಕೆ ನಿರಾಸಕ್ತವಾದ ;‘ನೀನು ಇದ್ದರೂ ಒಂದೇ, ಸತ್ತರೂ ಒಂದೇ’ ಎನ್ನುವ ರೀತಿಯಲ್ಲಿ ತನ್ನತ್ತ ಬೆನ್ನು ತಿರುವಿ ಮೂಕವಾಗಿ ನಿಂತ ಈ ವಿಶಾಲ ವಿಶ್ವಕ್ರಮದಲ್ಲಿ, ಹತ್ತಿರದ ಈ ಸಮಾಜದಲ್ಲಿ ತನ್ನ ಇರವಿಗೆ ಪ್ರಸುತತೆಯೇನು ಎಂದು ಕಂಡುಕೊಳ್ಳುವದೇ ತನಗೆ ಮುಖ್ಯವಾಗಿದೆ. ತನಗೀಗ ಮಹತ್ವದ್ದೆನ್ನಿಸುತ್ತಿದ್ದದ್ದು ತನ್ನ ಸಾಹಿತ್ಯದ ಸಾಮಾಜಿಕ ಪ್ರಸ್ತುತತೆಯಲ್ಲ. ಸಮಾಜದಲ್ಲಿಯ ತನ್ನ ಪ್ರಸ್ತುತತೆ_ ತನ್ನ ಹುಟ್ಟಿನ, ತನ್ನ ಇರವಿನ ಪ್ರಸ್ತುತತೆ_ನಾಗಪ್ಪನಿಗೆ ಆಶ್ಚರ್ಯ : ಯಾವ ಪ್ರಸ್ತುತತೆಯೂ ಇಲ್ಲಾವೆಂಬ ಮಾನಸಿಕ ನಿಲುಗಡೆಯನ್ನು ಈ ಮನಸ್ಸನ್ನು ಹೊತ್ತು ನಿಂತ ದೇಹ ಮಾತ್ರ ಅಲ್ಲಗಳೆಯುವಂತಿತ್ತು. ಅಂಗಿಗೆ ಬೆಂಕಿ ಹತ್ತಿದಾಗ ನೋವಿನಿಂದ ವಿಲಿವಿಲಿ ಒದ್ದಾಡಿದ ದೇಹದ ‘ಸಾಯಬಾರದು’ ಎಂಬ ಸಂಕಲ್ಪದ ಹಿಂದೆ ಕೋಟಿ ವರ್ಷಗಳ ಇತಿಹಾಸವಿದ್ದರೆ ‘ಯಾಕೆ ಬದುಕಿರಬೇಕು ?’ ಎಂದು ಕೇಳಿಕೊಳ್ಳುವ, ಅರಿಯಬೇಕೆನ್ನುವ, ವಿವೇಕಪ್ರಜ್ಞೆ ತೀರ ಇತ್ತೀಚಿನದು, ಅಲ್ಲವೆ ? ಆದರೂ ತನ್ನನ್ನು ಇಂದು ಕಾಡುತ್ತಿದ್ದದ್ದು ತನ್ನ ದೇಹ ಅಂದು ಅನುಭವಿಸಿದ ಯಾತನೆಯ ನೆನಪಲ್ಲ. ತನ್ನ ಅಸ್ತಿತ್ವಕ್ಕೆ_ಅದನ್ನು ಅಳಿಸಿಯೇಬಿಡುತ್ತೇನೆ ಎನ್ನುವಷ್ಟರ ಮಟ್ಟಿಗೆ_ನಿಷ್ಟುರ ತಾತ್ಸಾರವನ್ನು ವ್ಯಕ್ತಪಡಿಸಿದ ಅಪ್ಪನ ಕೃತ್ಯದ ಹಿಂದಿನ ಪ್ರೇರಣೆ ಏನಿರಬಹುದು ? ಎಂಬ ಪ್ರಶ್ನೆ. ತನ್ನ ಬರವಣಿಗೆಯಲ್ಲೆಲ್ಲ ವ್ಯಕ್ತವಾದದ್ದು ಈ ಪ್ರೇರಣೆಯ ಹುಡುಕಾಟವೇ ಎಂದು ತನಗೆ ಇತ್ತಿತ್ತ ಅನ್ನಿಸಹತ್ತಿದೆ. ನೀನು ಸಾಯ್ ಸಾಯ್ ಸಾಯ್ ಎಂದು ತಿರುತಿರುಗಿ ಅಪ್ಪಣೆ ಕೊಡುವ ನೆನಪಿನ ವಿರುದ್ಧ ಹೋರಾಡುತ್ತ…ನಾಗಪ್ಪಾ ನಾಗಪ್ಪಾ ಬೋಳಿಮಗನೇ, ಬಂದು ಮುಟ್ಟಿದೆಯಲ್ಲೋ ತಿರುಗಿ ನಿನ್ನ ಮೂಲ ಪಾಠಕ್ಕೇ. ನಡುಗುತ್ತಿದ್ದೀಯಲ್ಲೋ ಅಂಜುಬುರುಕ. ಓಡ್ತಾ ಇದ್ದೀಯಲ್ಲೋ ಫಿರೋಜನ ಕ್ರೂರ ಹಲ್ಲುಮಸೆತಕ್ಕೆ ಹೆದರಿ…‘

“ನಿನ್ನೆ ನಿಮ್ಮ ಹೆಡ್‌ಆಫೀಸಿಗೆ ಹೋದಾಗ ನಿಮ್ಮ ಡೆಪ್ಯುಟೀಮ್ಯಾನೇಜಿಂಗ್ ಡೈರೆಕ್ಟರ್ ರ ಪರಿಚಯವಾಯಿತು. ಪಾರ್ಸೀ ಅಲ್ಲವೆ ? ಹೈದ್ರಾಬಾದಿನಿಂದ ಬಂದಿದ್ದಾರಂತೆ. ತುಂಬ ಒಳ್ಳೆಯ ಮನುಷ್ಯ. ಇಷ್ಟು ದೊಡ್ಡ ಸ್ಥಾನದಲ್ಲಿದ್ದೂ ಎಳ್ಳಷ್ಟೂ ಗರ್ವವಿಲ್ಲ, ಅಲ್ಲವೆ ? ಎಂದು ಕೇಳಿದ ರೀತಿಗೆ. ಇದೀಗ ತನ್ನ ಮನಸ್ಸಿನಲ್ಲಿ ಫಿರೋಜ್ ತುಂಬಿರುವ ಹೊತ್ತಿಗೇ ಶ್ರೀನಿವಾಸನಿಗೆ ಈ ಪ್ರಶ್ನೆ ಹೊಳೆದದ್ದು ಹೇಗೆ ? ಈ ಆಕಸ್ಮಿಕ ಹೊಂದಾಣಿಕೆಗಿಂಗ ಹೆಚ್ಚಾಗಿ ಕಾಡಹತ್ತಿದ್ದು_‘ಫಿರೋಜ್ ಈಗ ಮುಂಬಯಿಯಲ್ಲಿ ಹೇಗೆ ?’ ಎಂಬ ಪ್ರಶ್ನೆ. ತಾನೀಗ ಮನೆಯಲ್ಲಿ ಕೂಡ್ರಲು ಕಾರಣವಾದದ್ದಕ್ಕೂ ಫಿರೋಜ್ ಮುಂಬಯಿಗೆ ಬಂದದ್ದಕ್ಕೂ ಸಂಬಂಧ ಇದ್ದಿರಬಹುದಲ್ಲವೆ ? ಸಂಶಯ ಹುಟ್ಟಿದೊಡನೆಯೇ ಎದೆಯ ಭಾಗ ಬೆವರಹತ್ತಿದ ಭಾಸವಾಗಹತ್ತಿತು…

ಹಾಯ್‌ವೇದ ಮೇಲೆ ವಾಹನಗಳು ವಿರಲವಾದ ಮುಂಜಾವಿನ ಹೊತ್ತಿನಲ್ಲಿ ವೇಗವಾಗಿ ಓಡುತ್ತಿದ್ದ ಕಾರಿನಲ್ಲಿಯ ಎಲ್ಲರೂ ಈಗ ಮಾತನ್ನು ಒಮ್ಮೆಲೇ ನಿಲ್ಲಿಸಿದ್ದರು. ಶ್ರೀನಿವಾಸನಿಗೂ ಈಗ ತನ್ನ ಡ್ರಾಯ್‌ವಿಂಗ್ ಪ್ರಾವೀಣ್ಯ ಪ್ರದರ್ಶಿಸುವ ಹುರುಪು ಬಂತೆಂದು ತೋರುತ್ತದೆ. ಗಾಡಿಯ ವೇಗ , ಅದರಿಂದ ಉಂಟಾಗಬಹುದಾದ ಗಂಡಾಂತರ ಇವುಗಳಿಗೆ ಹೆದರಿಯೂ ಆ ಹೆದರಿಕೆಯನ್ನೇ ಆನಂದಿಸುವವರ ಹಾಗೆ, ಕಾರು ಠಾಣಾದ ಕಡೆ ಹೊರಳುವ ರಸ್ತೆಯ ಮುರಕಿಗೆ ಬರುವ ಅಪೇಕ್ಷಿತ ಕ್ಷಣಕ್ಕಾಗಿ ಬ್ರೇಕ್ ಹಚ್ಚಲು ತುಸು ತಡವಾದ್ದರಿಂದ ಬ್ರೇಕ್ ಹಚ್ಚಿದ ರಭಸ ಬೇಕಾದದ್ದಕ್ಕಿಂತ ಹೆಚ್ಚಾಗಿ, ಎಲ್ಲರೂ ತಮ್ಮ ತಮ್ಮ ಮುಂದಿನ ಜಾಗಕ್ಕೆ ಅಪ್ಪಳಿಸುವ ಸ್ಥಿತಿ ಉಂಟಾಯಿತು. ಶ್ರೀನಿವಾಸನ ಹೆಂಡತಿ ಮುಂದಿನ ಸೀಟಿಗೆ ಅಪ್ಪಳಿಸಬಾರದೆನ್ನುವ ಹಾಗೆ ಚಾಚಿದ ಎರಡೂ ಕೈಗಳು ನಾಗಪ್ಪನ ಭುಜಗಳಲ್ಲಿ ಬಂದು ಊರಿದವು. ಎಲ್ಲರೂ ತಮ್ಮನ್ನು ಸಾವರಿಸಿಕೊಂಡು ಕೂತಮೇಲೆ ಕಾರು ಮುಂದೆ ಸಾಗುವ ಸಿದ್ಧತೆ ಮಾಡುತ್ತಿದ್ದಾಗ ಎಲ್ಲರೂ ಒಮ್ಮೆ ಖೋಽಽ ಎಂದು ನಕ್ಕು ಮತ್ತೆ ಮೌನ ಧರಿಸಿದ್ದರು. ಫಿರೋಜನ ಬಗ್ಗೆ ಶ್ರೀನಿವಾಸ ಆಡಿದ ನೆನಪುಗಳನ್ನು ನೆನಸುತ್ತ, ಭೆಂಛೋದ್ ಯಾವಾಗಲೂ ಬೇರೆಯವರ ಮೇಲೆ ಛಾಪು ಹೊಡೆಯುವುದರಲ್ಲಿ ಎತ್ತಿದ ಕೈ ಎಂದು ನಾಗಪ್ಪ ತಿರುಗಿ ಸಿಟ್ಟಾಗುವ ಹೊತ್ತಿಗೆ ಶ್ರೀನಿವಾಸ ತಾನು ಆಡುತ್ತಿದ್ದದ್ದು ತುಂಬ ಗುಟ್ಟಿನ ಮಾತು ; ಹಿಂದಿನ ಸೀಟಿನಲ್ಲಿ ಕುಳಿತವರಿಗೆ ಕೇಳಿಸದಿರಲಿ ಎನ್ನುವ ರೀತಿ ದನಿ ತಗ್ಗಿಸಿ, “ನಿನ್ನೆ, ನೀನು ರಜೆಯ ಮೇಲಿರುವ ಕಾರಣ ತಿಳಿಯಿತು. ನೀನೇಕೆ ನನಗೇನೂ ಹೇಳಲಿಲ್ಲ ? ಕಾಮತರಿಗಿಂತ ಒಳ್ಳೆಯ ವಕೀಲರ ಗರಜು ನಿನಗಿದೆ,” ಎಂದ. ನಾಗಪ್ಪನಿಗೆ ಏನೊಂದೂ ಅರ್ಥವಾಗಲಿಲ್ಲ. ದಿಗ್ಭ್ರಾಂತನಾಗಿ ಶ್ರೀನಿವಾಸನ ಮೋರೆಯನ್ನೇ ನೋಡುತ್ತಿದ್ದಾಗ ಶ್ರೀನಿವಾಸನೇ ಮುಂದುವರಿಸುತ್ತ, “ನಿನ್ನ ಮನಸ್ಸಿಗಾಗುತ್ತಿದ್ದ ನೋವಿನ ಕಲ್ಪನೆಯನ್ನು ನಾನು ಮಾಡಿಕೊಳ್ಳಬಲ್ಲೆ. ಹಾಗೆಂದೇ ಈ ಪಿಕ್ನಿಕ್ಕಿನ ಯೋಜನೆ, ” ಎಂದ. ನಾಗಪ್ಪ ಇದನ್ನೆಲ್ಲ ಗ್ರಹಿಸುವ ಸ್ಥಿತಿಯಲ್ಲೇ ಇರಲಿಲ್ಲ. ಶಬ್ದಗಳು ಗಾಳಿಯಲ್ಲಿ ತೂರಿಬಂದು ಕಿವಿ ಹೋಗುತ್ತಿದ್ದವು, ಅಷ್ಟೇ. ತನ್ನ ಅಳವಿನಾಚೆಯ ಶಕ್ತಿಗಳು ಬೆನ್ನ ಹಿಂದೆ ನಿಗೂಢ ಸಂಚು ನಡೆಸಿವೆ ಎಂಬಂತಹ ಅನ್ನಿಸಿಕೆಯಿಂದ ಕೂತಲ್ಲೇ ತಾನು ಸಣ್ಣಗೆ ನಡುಗುತ್ತಿದ್ದುದರ ಅರಿವಾದಾಗ ನಡುಕವನ್ನು ತಡೆಯಲು ಸೀಟಿನ ಬೆನ್ನಿಗೆ ಕೈ ಹಾಕಲು ಪ್ರಯತ್ನಿಸಿದಾಗ ಅಚ್ಯುತನ ದೃಷ್ಟಿ ತನ್ನ ಮೇಲೇ ಊರಿದ್ದು ಲಕ್ಷ್ಯಕ್ಕೆ ಬಂದು ವಿಚಲಿತನಾದ.
uಟಿಜeಜಿiಟಿeಜ
– ಅಧ್ಯಾಯ ಒಂಬತ್ತು –

ನಾಳೆ ಮತ್ತೆ ಸಮುದ್ರದಂಡೆಯ ಮೇಲೇ ಭೆಟ್ಟಿಯಾಗೋಣ ಎಂದ ದೋಶಿಯವರು ಸಂಜೆ ಅಲ್ಲಿ ಹೋದಾಗ ಭೇಟಿಯಾಗಿರಲಿಲ್ಲ. ತನ್ನ ಭಯಗಳನ್ನು ಯಾರಲ್ಲಾದರೂ ತೋಡಿಕೊಳ್ಳಬೇಕು ಅನ್ನಿಸಿ ನಾಗಪ್ಪ ಮನಸ್ಸಿನಲ್ಲಿ ಚಡಪಡಿಸಿದ : ಬೆಳಿಗ್ಗೆ ಠಾಣಾಕ್ಕೆ ಹೋದಾಗ ಶ್ರೀನಿವಾಸ ಮಾತನಾಡಿಯೇ ಮಾತನಾಡಿದ. ಲೆಕ್ಕವಿಲ್ಲದಷ್ಟು ಹಣ ಮಾಡಿದಂತಿದೆ. ನಮ್ಮ ಕಂಪನಿಯಲ್ಲಿ ಹಲವರ ಪರಿಚಯವಿದ್ದಂತಿದೆ. ಅಷ್ಟೇ ಅಲ್ಲ. ಕೆಲವು ದೊಡ್ಡ ಅಧಿಕಾರಿಗಳ ಮೇಲೆ ದುಷ್ಟ ಹಿಡಿತವೂ ಇದ್ದಂತಿದೆ. ಅಥವಾ ನನಗೇ ಇಲ್ಲದ ಸಂಶಯವೋ ? ಇವನನ್ನು ನಂಬಬಹುದೆ ? ಬರೆಯುವ ವಹಿಯನ್ನು ಮೇಜಿನ ಖಣದಲ್ಲಿ‌ಇಡಲು ಹೇಳಿದ. ಯಾರಾದರೂ ಓದುತ್ತಾರೆಂಬ ಗುಮಾನಿಯೇ ? ಯಾರು ? ಚೇತನಾಳಿಗೆ ಕನ್ನಡ ಬರುವುದಿಲ್ಲ. ಅಚ್ಯುತ ? ಅವನಿಗೆ ಓದುಬರಹ ಬರುತ್ತದೆಯೇ ? ಅಥವಾ ಶಾರದೆ ? ಅವಳೂ ಕನ್ನಡ ಕಲಿತವಳಲ್ಲ. ಮೇಲಾಗಿ ನನ್ನ ಕೋಣೆಗೆ ಅವಳೇಕೆ ಬಂದಾಳು ? ಅಥವಾ ಸ್ವತಃ ಶ್ರೀನಿವಾಸನೇ ಓದಿರಬಹುದೆ ? ಇರಲಿಕ್ಕಿಲ್ಲ. ಓದಿದ್ದರೆ ನಾನು ಬರೆಯುತ್ತಿದ್ದದ್ದು ಕಾದಂಬರಿ ಅಲ್ಲ ಎನ್ನುವದು ಗೊತ್ತಾಗುತ್ತಿತ್ತು. ಥತ್ತೇರಿ ! ಈಗ ಹೊಳೆಯುತ್ತದೆ : ಇದು ತನ್ನ ಬಗ್ಗೆ ನಾನು ಬರೆಯುತ್ತಿದ್ದ ಕಾದಂಬರಿಯೆಂದು ತಿಳಿದೇ ಹೆದರಿದ್ದಾನೆ_ನಾಡೂ ಮಾಸ್ಕೇರಿಯ ಪದ್ಮನಾಭ ಕೇಣಿಗಳ ಜ್ಯೇಷ್ಠ ಚಿರಂಜೀವನಾದ ಶ್ರೀನಿವಾಸ ! ರೋಮ ವಿರಲವಾದ ಮೈಯಲ್ಲಿ ಬೊಜ್ಜೇ ತುಂಬಿ ; ಗಡ್ಡಮೀಸೆಗಳು ಕೂಡ ಸರಿಯಾಗಿ ಬೆಳೆಯದೇ ನುಣುಪು ನುಣುಪಾಗಿ ತಕತಕಿಸುವ ಈ ಅಂಜುಬುರುಕಾ ನನ್ನ ಬರವಣಿಗೆಯ ವಹಿಯನ್ನು ನೋಡಲೂ ಹೆದರಿಕೊಂಡಿದ್ದಾನೆ. ಇನ್ನಷ್ಟು ಹೆದರಿಸಬೇಕು ಪುರ್ ಪುರ್ ಪುರ್ ! ಎಷ್ಟು ದಿನವೆಂದು ಈತನ ಮನೆಯಲ್ಲಿ ಝಾಂಡ ಹಾಕಿರುವದು ? ಖೇತವಾಡಿಗೇ ಮರಳಿದರೆ ಹೇಗೆ ? ಇಲ್ಲಿದ್ದ ಮೂರು ದಿನಗಳಲ್ಲಿ ಒಂದು ಬಗೆಯ ಧೈರ್ಯವೆನ್ನಿಸಿದ್ದು ನಿಜ : ಮುಖ್ಯವಾಗಿ ಚೇತನಾಳ ಚೈತನ್ಯ ತುಂಬಿದ ಸಾನ್ನಿಧ್ಯದಲ್ಲಿ. ಅಚ್ಯುತನ ವರ್ತನೆ ಹೆಚ್ಚು ಹೆಚ್ಚು ಕುತೂಹಲಕ್ಕೆ ಕಾರಣವಾಗುತ್ತಿದೆ. ನನ್ನ ಹತ್ತಿರ ಏನನ್ನೋ ಮಾತನಾಡಲು ದಾರಿ ಕಾಯುವವನ ಹಾಗೆ ಕಾಣುತ್ತಾನೆ. ಶಾರದೆಯನ್ನು ಮಾತನಾಡಿಸುವ ಧೈರ್ಯ ಮಾತ್ರ ಇನ್ನೂ ಆಗುತ್ತಿಲ್ಲ. ಮಾತನಾಡಿಸದ್ದಕ್ಕೇ ಇರಬೇಕು ಅವಳು ಇನ್ನಷ್ಟು ಆಕರ್ಷಕವಾಗಿ ತೋರುತ್ತಿದ್ದಾಳೆ. ಅಣ್ಣನ ಬಗ್ಗೆ, ತಂಗಿಯ ಬಗ್ಗೆ ಬರೆಯಬೇಕೆಂದು ಕೂತರೆ ಏನೂ ತೋಚದೆ ಮನಸ್ಸೇ ಖಾಲಿಯಾದಂತೆನ್ನಿಸಿ ತೆರೆದಿಟ್ಟ ವಹಿ ತೆರೆದೇ ಉಳಿಯುತ್ತದೆ.

ಶ್ರೀನಿವಾಸನ ಮನೆಯ ಮಗ್ಗುಲಲ್ಲಿ ಕಾರು ಟ್ರಕ್ಕುಗಳನ್ನು ರಿಪೇರಿ ಮಾಡುವ ಗರಾಜು ಇದೆ. ಕಳೆದ ಹತ್ತು ಹನ್ನೆರಡು ವರ್ಷಗಳಿಂದಲೂ ನಡೆಯುತ್ತಿದ್ದ ಈ ಗರಾಜು ಇದ್ದದ್ದು ಇಂದೋ ನಾಳೆಯೋ ಯಾರಾದರೂ ಬಂದು ಕೆಡವಬಹುದೆಂಬ ಖಾಯಂ ಭಯದ ಮೇಲೆ ನಿಂತ ಹಂಗಾಮೀ ಚಪ್ಪರದಲ್ಲಿ. ಈ ಗರಾಜಿನಲ್ಲಿ ಕೆಲಸಮಾಡುವ ನಾಲ್ಕೈದು ಕುಟುಂಬಗಳು ವಾಸಿಸುತ್ತಿದ್ದ ಝೋಪಡಪಟ್ಟಿಗಳು ಶ್ರೀನಿವಾಸನ ಮನೆ ಮಗ್ಗುಲಲ್ಲೇ ಇದೆ. ಕಳ್ಳಭಟ್ಟಿಯ ಅಡ್ಡೆಯೂ ಅಲ್ಲಿದೆಯಂತೆ, ಹಾಗೆಂದೇ ಇರಬೇಕು ಅಲ್ಲಿಯ ಹೆಂಗಸರ, ಮುದುಕರ ಮಕ್ಕಳ ಮೋರೆಗಳ ಮೇಲೆಲ್ಲ ಬಡತನದ ದೈನ್ಯದೊಡನೆ ಏನನ್ನೋ ಬಚ್ಚಿಟ್ಟಂತಹ ಆತಂಕದ ಕಳೆ. ಜೊತೆಗೇ, ಆ ಝೋಪಡಪಟ್ಟಿಗಳು ಸಂಕೇತಿಸುವ ಹಂಗಾಮಿತನ ಅವುಗಳಲ್ಲಿಯ ನಿವಾಸಿಗಳ ಮೋರೆಗಳಿಗೂ ಮೆತ್ತಿಕೊಂಡಂತಿದೆ. ಅಲ್ಲಿಯ ಹನ್ನೆರಡು ಹದಿಮೂರು ವರ್ಷ ವಯಸ್ಸಿನ ಒಬ್ಬ ಚಿಕ್ಕ ಹುಡುಗಿ ನನ್ನ ಲಕ್ಷ್ಯ ಸೆಳೆದಿದ್ದಾಳೆ. ನಾನು ಬರುಹೋಗುವಾಗೆಲ್ಲ ನನ್ನನ್ನೇ ಎವೆಯಿಕ್ಕದೇ ನೋಡುತ್ತಾಳೆ : ಎಣ್ಣೆ ಕಾಣದ, ನೀರು ಕಾಣದ, ಕೆದರಿದ ಕೂದಲು. ಗರಾಜಿನ ಎಣ್ಣೆ ಕೂಡಿದ ಕಪ್ಪು ಬಳಿದ ಮೋರೆ. ರವಕೀ ಖಣದ ಚಿಂದಿಯಾದ ಪರಕರ. ಇಷ್ಟು ದೊಡ್ಡ ಕಣ್ಣುಗಳಲ್ಲಿ ಮಾತ್ರ ಎಲ್ಲಿಲ್ಲದ ಹೊಳಪು, ದೈನ್ಯ, ಭಯ, ಆಸೆ. ಕಳ್ಳಸರಾಯಿ ಮಾರುವುದರಲ್ಲಿ ಇವಳನ್ನೂ ಉಪಯೋಗಿಸುತ್ತಿರಬಹುದೇ ಎಂಬ ಸಂಶಯ. ಸಂಜೆ ಕಡಲು ತೀರದಿಂದ ಮನೆಗೆ ಹಿಂದಿರುಗುವಾದ ಕೆಡ್‌ಬರೀ ಚಾಕಲೇಟಿನ ಒಂದು ಪೆಕೆಟ್ ಕೊಡುವ ಹುಕ್ಕಿ ಬಂದಿತು. ಕೊಡುತ್ತ ಹೆಸರು ಕೇಳಿದಾಗ ‘ಸರಸ್ವತಿ’ ಎಂದಳು. ಚಾಕಲೇಟ್ ಸಿಕ್ಕ ಬಗ್ಗೆ ಸಂತೋಷ, ಕೃತಜ್ಞತೆ ಅಥವ ಒಳಗೆ ಓಡಿಹೋಗಿ ತಿನ್ನಬೇಕೆಂಬ ಹಪಾಪಿತನಾದ ಅವಸರ_ಇಂತಹ ಯಾವ ಭಾವನೆಯನ್ನೂ ಅದು ವ್ಯಕ್ತಪಡಿಸದೇ ನನ್ನ ಕಡೆಗೆ ಇಷ್ಟು ದಿನ ನೋಡುತ್ತಿದ್ದ ಕಣ್ಣುಗಳಿಂದ ನೋಡುತ್ತ ನಿಂತಳು : ಯಾಕೋ ಹಾಗೆ ಹತ್ತಿರದಿಂದ ನೋಡುವ ಕಣ್ಣುಗಳನ್ನು ನೋಡಿದಾಗ ಪೂರ್ವಜನ್ಮದಲ್ಲಿ ನಂಬಿಕೆ ಹುಟ್ಟಿ ನನ್ನಷ್ಟಕ್ಕೇ ನಗುತ್ತೇನೆ. ಆಗ ತಂಗಿಯ ಬಗ್ಗೆ ಬರೆಯಬೇಕು ಅನ್ನಿಸಿದ್ದಕ್ಕೆ ಬಹುಶಃ ಸರಸ್ವತಿಯೇ ಕಾರಣವಾಗಿರಬೇಕೆ. ನನ್ನ ತಂಗಿಯೂ ಹೀಗೇ ಝೋಪಡೀಪಟ್ಟಿಗಳಲ್ಲೋ, ಸೂಳೆಯರ ಕೇರಿಗಳಲ್ಲೋ, ತೀರ ಬಡತನದಲ್ಲಿ ಜೀವನ ನಡೆಸುತ್ತಿರಬಹುದೇ ಎಂಬ ಜೀವ ಹಿಂಡುವ ಸಂಶಯವೊಂದು ನನ್ನನ್ನು ಬಹಳ ವರ್ಷಗಳಿಂದ ಕಾಡುತ್ತ ಬಂದಿದೆ. ಅಪ್ಪ ಅದೆಂತಹ ಹೇಡಿತನದ ಕೆಲಸ ಮಾಡಿದ ! ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನೇ ದಾರಿಹೋಕರ ಪಾಲುಮಾಡುವಂತಹ ಹೀನ ಕೆಲಸಕ್ಕೆ ಕೈ ಹಾಕಬೇಕಾದ ಪರಿಸ್ಥಿತಿ ಯಾವುದಿತ್ತು ? ಇದೆಲ್ಲ ನನ್ನ ಕಲ್ಪನೆಯ ಆಚೆಯ ಸತ್ಯವಾಗಿಯೇ ಉಳಿದಿದೆ. ಅಪ್ಪನಿಗೆ ಕಲ್ಯಾಣಿ ಅಂದರೆ ಬಹಳ ಮುದ್ದಿನ ಮಗುವಾಗಿದ್ದಳು. ಅಮ್ಮನದೇ ಸುಂದರ ರೂಪ. ನಾನು ಮಾತ್ರ ಅಪ್ಪನ ಹಾಗೆ ! ಅಪ್ಪನ ಹಾಗೇ ಆತ್ಮಘಾತದ ವಿಚಾರಮಾಡಿದ್ದು ಎಷ್ಟು ಸರತಿ ! ಆದರೆ ಪ್ರತಿಸಾರೆ ತನಗಿನ್ನೂ ಅರ್ಥವಾಗಿರದ ಪ್ರಭಲವಾದ ಶಕ್ತಿಯೊಂದು ಬರೇ ಬೌದ್ಧಿಕವಾದ ಸಂಕಲ್ಪವನ್ನು ಮೆಟ್ಟಿನಿಂತು. ಬದುಕಿನತ್ತ ಮುಖಮಾಡಿ ನಿಲ್ಲುವಂತೆ ನಿಲ್ಲುವಂತೆ ಮಾಡುತ್ತದೆ ಎಂಬಂಥ ಅನುಭವ ಮತ್ತೆಮತ್ತೆ ಬಂದಿದೆ. ತಂಗಿಯ ನೆನಪಿನಿಂದ ಸರಸ್ವತಿ ನನಗೆ ಅಷ್ಟು ಪ್ರಿಯವಾಗುತ್ತಿದ್ದಾಳೆಯೇ ? ಅಥವಾ ಸರಸ್ವತಿಯ ಕಣ್ಣುಗಳಲ್ಲೂ ಮಾತಿಗೆ ನಿಲುಕದ ರೀತಿಯಲ್ಲಿ ಗೂಡು ಕಟ್ಟಿದ ಮ್ಲಾನತೆಯಿಂದಾಗಿಯೇ ತಂಗಿಯ ನೆನಪು ಮರುಕಳಿಸುತ್ತಿದೆಯೆ ? ಮುಂಬಯಿಯ ಗಿರ್ಗಾಂವದ ಸುತ್ತಲಿನ ಝೋಪಡಪಟ್ಟಿಗಳನ್ನು ಹೊಲಸು-ಊರುಕೇರಿಗಳನ್ನು ಲೆಕ್ಕವಿಲ್ಲದಷ್ಟು ಸರತಿ ಸುತ್ತಾಡಿಬಂದಿದ್ದೇನೆ. ಮುವ್ವತ್ತು ವರ್ಷಗಳ ಹಿಂದೆ ಕಳೆದುಹೋದ ತಂಗಿ ಫಕ್ಕನೆ ಕಣ್ಣಿಗೆ ಬಿದ್ದರೆ ! ಬಿದ್ದರೂ ಗುರುತು ಹೇಗೆ ಸಿಗಬೇಕು ? ಈಗಾಗಲೇ ಅವಳನ್ನು ಕಂಡರೂ ಕಂಡಿರಬಹುದು. ಆದರೆ ಅವಳನ್ನು ಕಂಡಿದ್ದೇನೆ ಎಂಬುದಕ್ಕೆ ಯಾವ ಇಷಾರೆಯೂ ಸಿಕ್ಕಿಲ್ಲ. ಒಂದು ದಿನ ಸಿಕ್ಕರೂ ಸಿಕ್ಕೀತು ಎಂಬ ವಿವೇಕಶೂನ್ಯವಾದ ಆಸೆಯೊಂದು ಮನಸ್ಸಿನ ಮೂಲೆಯೊಂದರಲ್ಲಿ ಮೈಮುದುಡಿ ಮಲಗಿದ್ದರ ಅಸ್ಪಷ್ಟ ಅರಿವು ನನಗಿದೆ. ಒಂದನ್ನೊಪ್ಪಿಕೊಳ್ಳಲೆ ? ನನ್ನನ್ನು ಆಗೀಗ ಎವೆಯಿಕ್ಕದ ಕಣ್ಣುಗಳಿಂದ ನೋಡುವ ಅಚ್ಯುತ ನನ್ನ ಅಣ್ಣನಿರಬಹುದೇ ಎಂಬ ಸಂಶಯ ನನ್ನಷ್ಟಕ್ಕೇ ನಗುವಂತೆ ಮಾಡಿದೆ. ‘ಸರಸ್ವತೀ ನಿಮ್ಮಮ್ಮನೆಲ್ಲಿ?’ ಎಂದು ಕೇಳಬೇಕೆಂದು ನಾಲಗೆಯ ತುದಿಯವರೆಗೆ ಬಂದ ಪ್ರಶ್ನೆಯನ್ನು ಅಪಾರ್ಥಮಾಡಿಕೊಂಡಾಳೆಂಬ ಭಯದಿಂದ ಕೇಳದೇ ನಿಗ್ರಹಿಸಿಕೊಂಡಿದ್ದೇನೆ_ಭಾರತೀಯ ಸಿನೇಮಾಗಳಲ್ಲಿ ಕೂಡ ಇಂತಹವುಗಳು ಜರುಗಲಾರವು ಎಂಬುದನ್ನು ಅರಿತೂ ಅಣ್ಣತಂಗಿಯರನ್ನು ಹುಡುಕಿ ತೆಗೆಯಲೆಂದೇ ಬದುಕಿರಬೇಕು ಎಂಬ ನನ್ನ ಅನ್ನಿಸಿಕೆಗೆ ಪುರಾವೆಗಳಿದ್ದರೂ ಬದುಕಿರುವಾಗೊಮ್ಮೆ ಅವರನ್ನು ಕಾಣಲೇಬೇಕೆಂಬ ನನ್ನ ಬಲವಾದ ಬಯಕೆಗೆ ಮಾತ್ರ ಪುರಾವೆಗಳೇ ಬೇಡವೇನೋ !

ತಂಗಿ ಬದುಕಿ ಇದ್ದದ್ದೇ ಹೌದಾದರೆ ಅವಳು ಮುಂಬಯಿಯಲ್ಲೇ ಇದ್ದಾಳೆ_ಗಿರ್ಗಾಂವದ ಆಸುಪಾಸಿನ ಕೇರಿಗಳಲ್ಲೇ_ಎಂದು ನನಗನ್ನಿಸುವುದರ ಕಾರಣ ಅಪ್ಪ ಅವಳನ್ನು ಕಳೆದುಕೊಂಡದ್ದು ಈ ಭಾಗದ ಜನಸಂಧಣಿಯಲ್ಲಿ ಎಂಬುದೇ ಇರಬೇಕು. ಆದರೆ ಅವಳು ತುಂಬಾ ಬಡತನದಲ್ಲಿದ್ದಾಳೆಂದು ಯಾಕೆ ಅನ್ನಿಸುತ್ತದೆಯೋ ಗೊತ್ತಿಲ್ಲ. ಅಂಗಿಗೆ ಬೆಂಕಿ ಹಚ್ಚಿ ನನ್ನನ್ನು ಕೊಲ್ಲಲು ಮನಸ್ಸು ಗಟ್ಟಿಮಾಡಿದಂತೆ ತಂಗಿಯನ್ನೂ ಕೊಲ್ಲಲು ಮನಸ್ಸು ಆಗದೇ ಇರುವುದಕ್ಕೆ ಏನು ಕಾರಣ ? ನನಗಿಂತ ಹೆಚ್ಚು ಮುದ್ದಿನವಳೆಂದೆ ? ಅಮ್ಮನನ್ನು ಹೋಲುತ್ತಿದ್ದಳೆಂದೇ ? ಅಮ್ಮನನ್ನು ಪ್ರೀತಿಸಿದಷ್ಟು ಅಪ್ಪ ಇನ್ನಾರನ್ನೂ ಪ್ರೀತಿಸಿದ್ದಿಲ್ಲ. ಅವಳು ಸತ್ತದ್ದೇ ಅಪ್ಪನಿಗೆ ಯಾತರಲ್ಲೂ ಆಸ್ಥೆಯೇ ಉಳಿಯಲಿಲ್ಲ. ಅದೆಲ್ಲದರ ಬಗ್ಗೆ ಈಗ ವಿಚಾರಮಾಡಿದಾಗ ಒಂದೊಂದೇ ಸಂಗತಿ ಸರಿಯಾದ ಬೆಳಕಿನಲ್ಲಿ ನಿಂತು ತನ್ನ ನಿಜ ಸ್ವರೂಪವನ್ನು ತೆರೆದು ತೋರಿಸುತ್ತಿದೆ ಎನ್ನುವ ಅನುಭವ : ಅಪ್ಪ ಹೊರಗಿನಿಂದ ಮಾತ್ರ ಮುಂಚಿನ ಹಾಗೇ ತೋರುತ್ತಿದ್ದರು. ಒಳಗಿನಿಂದ ಅವರು ಬೇರೆಯೇ ವ್ಯಕ್ತಿಯಾಗುತ್ತ ಹೋಗಿದ್ದರು ಎಂದು ಈಗ ತೋರುತ್ತದೆ. ಅಂಗಿಗೆ ಬೆಂಕಿ ಹತ್ತಿದ್ದರಿಂದ ಆದ ಪರಿಣಾಮವೆಂದರೆ ನನ್ನ ಹೊಟ್ಟೆ ಎದೆಗಳ ಮೇಲಿನ ಚರ್ಮ ಸುಟ್ಟ ಕಲೆಗಳು ಮಾತ್ರವೆ ? ಗಿಲ್ಬರ್ಟ ಹೇಳಿದ ಸಂಸ್ಥೆಗೆ ಒಮ್ಮೆ ಹೋಗಿಬರಬೇಕು. ಅವರು ತಮ್ಮತಮ್ಮ ದೈಹಿಕ ದುರ್ಭಾಗ್ಯವನ್ನು ಇದಿರಿಸುವ ಧೈರ್ಯವನ್ನು ಕುರಿತು ಗಿಲ್ಬರ್ಟನಿಗಿರುವ ದೊಡ್ಡ ಆದರದ ಬಗ್ಗೆ. ಸಹಾನುಭೂತಿಯ ಬಗ್ಗೆ ನನಗೆ ಸಂಶಯವೇ ಇಲ್ಲ. ಕೇಳಬೇಕಾದದ್ದಿಷ್ಟೇ: ಮನುಷ್ಯನ ಅಪಾಂಗತ್ವ ಬರಿಯ ದೈಹಿಕವಾದದ್ದೇ ? ತೋರಿಕೆಗೆ ಶಾರೀರಿಕವಾಗಿ ಸದೃಢನಾಗಿರುವ ವ್ಯಕ್ತಿಯ ಭಾವನಾಲೋಕದ ಅಂತಃಸ್ರಾವ ಕಣ್ಣಿಗೆ ಕಾಣುವದಿಲ್ಲವೆಂದ ಮಾತ್ರಕ್ಕೆ ಇಲ್ಲವೆಂದೆ ? ರೆಡಿಮೇಡ್ ಶರ್ಟ್, ಸೂಟು ಬೂಟುಗಳನ್ನು ಧರಿಸಿ ಎಲ್ಲರಂತೆ ‘ಕಾಣುವ’ ವ್ಯಕ್ತಿ ತನ್ನ ಅಂತರಂಗದ ಯಾತನೆಗಳಲ್ಲಿ ಉಳಿದವರಿಂದ ತೀರ ವಿಭಿನ್ನ…

ಬಹಳಷ್ಟು ಸಲ ಆದಂತೆ ಬರೆದಿಡಬೇಕೆಂದುಕೊಂಡ ಒಂದು ಮಾತೂ ಟಿಪ್ಪಣಿಯಾಗಿ ಮೂಡಿರಲಿಲ್ಲ. ಮೇಜಿನ ಖಣದಲ್ಲಿಟ್ಟ ವಹಿಯನ್ನು ಹೊರಗೇ ತೆಗೆದಿರಲಿಲ್ಲ ಎಂಬುದು ನಾಗಪ್ಪನ ಲಕ್ಷ್ಯಕ್ಕೆ ಬಂದದ್ದೂ ತೀರ ತಡವಾಗಿ !
uಟಿಜeಜಿiಟಿeಜ
– ಅಧ್ಯಾಯ ಹತ್ತು –

ಕೊನೆಗೊಮ್ಮೆ, ನಾಗಪ್ಪ ದಾರಿಕಾಯುತ್ತಿದ್ದ ಅವನ ಕಂಪನಿಯವರ ಪತ್ರವನ್ನು ಶ್ರೀನಿವಾಸನೇ ರಾತ್ರಿ ಮನೆಗೆ ಬರುವಾಗ ತಂದ. ಅವನ ಪ್ರೆಸ್ಸಿನ ಕೆಲಸದ ಸಲುವಾಗಿ ತನ್ನ ಆಫೀಸಿಗೆ ಹೋದಾಗ ಪರ್ಸೊನೆಲ್ ಮ್ಯಾನೇಜರ್‍ನೇ ಕೊಟ್ಟನಂತೆ. ಈ ಬೋಳೀಮಗ ಆಜ್ಞಾಧಾರಕ ಬಾಲಕನಾಗಿ ತಗೊಂಡು ಬಂದನಂತೆ ! ಈ ಎಲ್ಲ ಪಿತೂರಿಯಲ್ಲಿ ಶ್ರೀನಿವಾಸನ ಕೈ ಇದ್ದದ್ದು ನಿರ್ವಿವಾದ ಹಾಗಾದರೆ ಎಂದೆನಿಸಿ, ಪತ್ರವನ್ನು ಕೈಗೆ ತೆಗೆದುಕೊಳ್ಳುವಾಗ ಸಿಟ್ಟು ಮಸ್ತಕಕ್ಕೇರಿ, ಕೋಳೀಗಿರಿಯಣ್ಣ ಮಂತ್ರಿಸಿಕೊಟ್ಟ ಎಲ್ಲ ಅಕ್ಷತೆಗಳನ್ನೂ ಶ್ರೀನಿವಾಸನ ತಲೆಯ ಮೇಲೆ ಸೇಸೆಯಿಕ್ಕಿದ. ಪತ್ರದೊಂದಿಗೆ ಕೋಣೆಗೆ ನಡೆದು ಕದವಿಕ್ಕಿ ಅಗಳಿ ಹಾಕಿದ. ಪತ್ರ ತೆರೆದು ಓದಿದ. ಓದಿದ್ದರ ಅರ್ಥವೇ ಆಗುವದಿಲ್ಲ ಎನ್ನುವವನ ಹಾಗೆ ಮತ್ತೆ ಮತ್ತೆ ಓದಿದ : “ಂ ಜeಠಿಚಿಡಿಣmeಟಿಣಚಿಟ eಟಿquiಡಿಥಿ is iಟಿsಣiಣuಣeಜ ಣo iಟಿvesಣigಚಿಣe ಚಿ ಛಿomಠಿಟಚಿiಟಿಣ iಟಿsiಟಿuಚಿಣiಟಿg ಥಿouಡಿ ಟಿಚಿme iಟಿ ಚಿ ಡಿeಛಿeಟಿಣ ಚಿಛಿಛಿiಜeಟಿಣ ಚಿಣ ಣhಚಿ ಜಿಚಿಛಿಣoಡಿಥಿ iಟಿ ತಿhiಛಿh ಣhಡಿee ತಿoಡಿಞeಡಿs ಟosಣ ಣheiಡಿ ಟives. ಖಿhe ಆ‌ಒ‌ಆ ತಿiಟಟ ಠಿeಡಿsoಟಿಚಿಟಟಥಿ ಛಿoಟಿಜuಛಿಣ ಣhis eಟಿquiಡಿಥಿ. Pಟeಚಿse geಣ ಡಿeಚಿಜಥಿ ಣo ಠಿಡಿoಛಿeeಜ ಣo ಊಥಿಜeಡಿಚಿbಚಿಜ ಚಿs ಥಿou geಣ ಣhe ಚಿiಡಿ-ಣiಛಿಞeಣ, ತಿhiಛಿh is beiಟಿg ಚಿಡಿಡಿಚಿಟಿgeಜ.”

ನಾಗಪ್ಪ, ಪ್ರತಿ ಶಬ್ದವೂ ಬಾಯಿಪಾಠವಾಗುವವರೆಗೆ, ಆ ಸಣ್ಣ ಪತ್ರವನ್ನು ಓದಿದ. ಓದಿದ್ದರ ಅರ್ಥವಾಗತೊಡಗಿದೊಡನೆ, ಎಂದಿನ ಪುಕ್ಕಲುತನದಿಂದ ಬೆವರೊಡೆಯುವುದನ್ನು ಕೂಡ ಮರೆತು, ಈವರೆಗೂ ತನಗೇ ಅರಿವಾಗಿರದ ಆಳದಿಂದ ಪುಟಿದೆದ್ದ ಪಾಶವೀ ಧೈರ್ಯದಿಂದ, ಮೈ ಸೆಟೆದುಕೊಂಡಿತು. ಫಿರೋಜ್ ತನಗಾಗಿ ಸಿದ್ಧಪಡಿಸಿದ ಈ ಬೋನು ಈ ಜನ್ಮದ್ದೇ ಅಲ್ಲ; ಆದರೆ ಮೂಲೆಮೂಲೆಗಳನ್ನು ತಾನು ಚೆನ್ನಾಗಿ ಬಲ್ಲೆನೆನ್ನುವ ಹಾಗೆ ಅದರ ಬಗೆಗಿನ ಭಯ ದೂರವಾಗಹತ್ತಿತು. ಬದುಕು ಸಾವುಗಳ ನಡುವಿನ ಆಯ್ಕೆಯ ನಿರ್ಣಾಯಕ ಕ್ಷಣಕ್ಕೆ ಸಿದ್ಧವಾಗಿಸುವಂತೆ ಒದಗಿಬಂದ ಸನ್ನಿವೇಶ ಅಚ್ಚರಿಯಾಗುವಷ್ಟು ಸಮಾಧಾನವನ್ನೊದಗಿಸಿತ್ತು; ದ್ವೇಷ, ರೋಷ, ಭಯ ಇವೇ ಮೊದಲಾದ ವಿಕಾರಗಳಿಂದ ಮನಸ್ಸು ವಿಚಲವಾಗಲಿಲ್ಲ. ಫಿರೋಜ್, ನೀನು ನನ್ನ ಕರಿಯರದ ಮೊದಲಿನಿಂದಲೂ ನನ್ನ ಬಗ್ಗೆ ತೋರಿಸುತ್ತ ಬಂದ ಕ್ರೌರ್ಯಕ್ಕೆ ಈಗ ಸೋಕ್ಷಮೋಕ್ಷವಾಗಿಬಿಡಲಿ. ಇದೋ ನಾನೂ ಸಿದ್ಧನಾಗಿ ನಿಂತಿದ್ದೇನೆ. ನಿನ್ನ ಈ ಡಿಪಾರ್ಟ್‌ಮೆಂಟಲ್ ಇನ್ಕ್ವಾಯರಿಯ ಹಿಂದಿನ ಬೇತು ನನಗೀಗ ಸಂಪೂರ್ಣವಾಗಿ ಗೊತ್ತಾಗಿದೆ. ಇದು ನನ್ನ ಕರಿಯರನ, ಆದ್ದರಿಂದ ಸಾವು-ಇರವಿನ, ಪ್ರಶ್ನೆ. ನಿನಗೋ ಅದೊಂದು ದುಷ್ಟ ಆಟ. ನಾನೇ ಸೋಲಬಹುದೋ ಭೆಂಛೋದ್ ! ಆದರೆ ನಿನ್ನ ಗೆಲುವಿನ ಹಿಂದಿನ ಕ್ರೌರ್ಯವನ್ನು ಎಲ್ಲರಿಗೂ ಜಾಹೀರುಪಡಿಸದೇ ಸಾಯಲಾರೆ. ಹೌದು. ಈ ಕೊನೆಯದಕ್ಕೂ ಸಿದ್ಧನಾಗಿದ್ದರಿಂದಲೇ ನಿನ್ನನ್ನು ಹೋರಲು ಹಿಂದೆ ಎಂದೂ ಅನ್ನಿಸದಷ್ಟು ಧೈರ್ಯ ಬಂದಿದೆ.

ಕುರ್ಚಿಯಲ್ಲಿ ಕುಳಿತದ್ದೇ ನಾಗಪ್ಪ ಎದೆ ಉಬ್ಬಿಸಿಕೊಂಡ. ಮತ್ತೆ ಮತ್ತೆ ತನಗೆ ಇಷ್ಟೊಂದು ಧೈರ್ಯ ಒಮ್ಮೆಗೆಲೇ ಎಲ್ಲಿಂದ ಬಂತು ? ತನ್ನ ಮನಸ್ಸು ಇಷ್ಟೊಂದು ಉಲ್ಲಾಸಗೊಂಡದ್ದೇಕೆ ಎಂದು ತನ್ನನ್ನೇ ಕೇಳಿಕೊಂಡ. ಜನ್ಮಾಂತರಗಳ ಪ್ರಾಣಿಬಲವೊಂದು ಮನಸ್ಸಿನ ಆಳದಲ್ಲೆಲ್ಲೋ ಸೆಲೆಯೊಡೆದಿರಬೇಕು_ಈ ನಿರ್ಣಾಯಕವಾದ ಮುಖಾಮುಖಿಗೆ ತನ್ನನ್ನು ಅಣಿಗೊಳಿಸಲೆಂದೇ ಎಂದುಕೊಂಡು, ಎದ್ದು ಕೋಣೆಯಲ್ಲಿ ಕುಣಿದುಬಿಡಬೇಕು ಎನ್ನುವಷ್ಟು ಖುಶಿಪಟ್ಟ. ಖುಶಿಯಿಂದ, ಧೈರ್ಯದಿಂದ, ಬುದ್ದಿ ಮನಸ್ಸುಗಳು ಸ್ವಚ್ಛಗೊಂಡು ಹರಿತವಾಗಿದ್ದವು. ಫಿರೋಜನನ್ನು ಇದಿರಿಸಲು ತಾನು ಏನು ಮಾಡಬೇಕು ಎನ್ನುವುದು ಮಾತ್ರ ಇವುಗಳನ್ನು ಮೀರಿದ, ಪ್ರವೃತ್ತಿಯ ನೆಲೆಯಲ್ಲೇ ನಿಚ್ಛಳವಾಗಹತ್ತಿತು : I eಟಿರಿoಥಿ ಣhis,ಠಿhiಡಿoz, I eಟಿರಿoಥಿ ಣhis ಣhoಡಿoughಟಥಿ_ ಎನ್ನುತ್ತ ಒಂದು ಬಗೆಯ ಉನ್ಮಾದದಿಂದೆಂಬಂತೆ ಪುಲಕಿತನಾಗಿ ಬಲತೊಡೆಯಮೇಲೆ ಅಂಗೈಯಿಂದ ಬಡಿದುಕೊಂಡ. ಸಂಶಯವೇ ಇಲ್ಲ. ಶ್ರೀನಿವಾಸನದೂ ಈ ಪಿತೂರಿಯಲ್ಲಿ ಕೈಯಿದೆ ಎಂದೆನ್ನಿಸಿದಾಗ ಒಂದೇ ಕ್ಷಣದ ಮಟ್ಟಿಗೆ ವಿಚಲಿತನಾದ. ಆದರೆ ಯಾವುದೇ ರೀತಿಯ ಭಯದಿಂದಲ್ಲ. ಪ್ರತಿ ಸಲ. ತಾನು ಜನರನ್ನು ಸುಲಭವಾಗಿ ನಂಬಿಬಿಡುತ್ತೇನಲ್ಲ ಎಂಬ ಅರಿವಿನಿಂದ : ಯಾವ ಒಂದು ಸಹಜಸ್ಫೂರ್ತಿಯಿಂದ ಇಂದಿನದೆಲ್ಲವನ್ನು ಮರೆತು, ಎಲ್ಲರನ್ನು ಬಿಟ್ಟು, ನಾನು ಈ ಶ್ರೀನಿವಾಸನಲ್ಲಿಗೆ ಬಂದೆ. ಆದರೆ ಈ ಒಂದೂ ಸಂಚಿನದೇ ಅಂಗವಾದಂತಿದೆ. ಆದಂತಿದೆ ಯಾಕೆ ?_ಆಗಿದೆ. ಈಗ ಎಲ್ಲ ಸ್ಪಷ್ಟವಾಗುತ್ತಿದೆ : ಆ ದಿವದ ಸಂತೋಷಭವನದಲ್ಲಿ ಕಾಫಿ ಕುಡಿಯುತ್ತಿರುವಾಗ ನನ್ನನ್ನು ಭೆಟ್ಟಿಯಾದದ್ದು ಆಕಸ್ಮಿಕವಾಗಿ ಅಲ್ಲವೇ ಅಲ್ಲ. ನನ್ನನ್ನು ಮನೆಗೆ ಕರೆದೊಯ್ಯುವುದನ್ನು ನಿಶ್ಚಯಿಸಿಯೇ ಬಂದಿರಬೇಕೆ. ಪರ್ಸೊನೆಲ್ ಮ್ಯಾನೇಜರನ ಫೋನ್ ಬಂದ ದಿನದ ಸಂಜೆಗೇ ಅದು.

ಅರರೇ ! ಶ್ರೀನಿವಾಸ ಆ ಹೊತ್ತೇ ಹೇಗೆ ತನ್ನನ್ನು ಭೆಟ್ಟಿಯಾಗಿ ಕರೆಯಲು ಬಂದ ಎಂಬುದರ ಬಗ್ಗೆ ತಾನು ಇಷ್ಟು ದಿವಸ ವಿಚಾರಮಾಡಲೇ ಇಲ್ಲವಲ್ಲ. ನಾಗಪ್ಪ ತನ್ನ ಧಡ್ಡತನವನ್ನು ಶಪಿಸಿಕೊಂಡ : ಅಡ್ಡಿಯಿಲ್ಲ. ನಾಡೂ ಮಾಸ್ಕೇರಿಯ ಶ್ರೀನಿವಾಸ, ಇಪ್ಪತ್ತು ವರ್ಷಗಳ ಹಿಂದಿನ ಆ ಘಟನೆಯನ್ನು ನೀನು ಇನ್ನೂ ಮರೆತಿಲ್ಲ ಎಂಬುದನ್ನು ಬಲ್ಲೆ. ಅದರಿಂದಾಗಿ ನೀನು ನನ್ನ ಬಗ್ಗೆ ತಳೆಯುತ್ತ ಬಂದ ದ್ವೇಷವನ್ನು ನಾನೂ ಮರೆತಿಲ್ಲವೊ_ಈ ಕೋಳೀಗಿರಿಯಣ್ಣನ ಕೇರಿಯ ‘ಭುಸ್’ ನಾಗಪ್ಪನೂ ಮರೆತಿಲ್ಲ. ನಿನ್ನನ್ನು ಕ್ಷಮಿಸಿಯೂ ಇಲ್ಲ. ಇದು ಇಂದು ನಮ್ಮಿಬ್ಬರಿಗೂ ಮತ್ತೆ ಸ್ಪಷ್ಟವಾದದ್ದು ಒಳ್ಳೆಯದೇ ಆಯಿತು.

ಶ್ರೀನಿವಾಸನಿಗೆ ಹಾವಿನಂತೆ ಹಗೆ ಕಾಯುವ ಛಲದ ಗುಣ ಅವನ ತಾಯಿಯಿಂದ ಬಂದದ್ದು. ನಾಗಪ್ಪ ಅವನ ತಾಯಿಯನ್ನು ಕುರಿತು ಬರೆದ ಕತೆ ಈ ಛಲವನ್ನು ಅರಿಯುವುದರ ಸಲುವಾಗಿಯೇ ಬರೆದದ್ದಾಗಿತ್ತು: ಶ್ರೀನಿವಾಸ ಇಂದು ಮುಂಬಯಿಯಲ್ಲಿ ತಮ್ಮ ಜಾತಿಯವರ ಸಮಾಜದಲ್ಲಿ ಗಳಿಸಿದ ಅವಾಸ್ತವವಾದ ಪ್ರತಿಷ್ಟೆ, ಅದನ್ನು ಗಳಿಸಲು ಅವನು ನಡೆಸಿದ ಪ್ರಚಂಡ ಹೋರಾಟ ಇವೆಲ್ಲವನ್ನು ಚೆನ್ನಾಗಿ ಬಲ್ಲ ನಾಗಪ್ಪನಿಗೆ ಝಗ್ಗನೆ ಹೊಳೆದು ಹೋದಂತಾಯಿತು : ಇದನ್ನೆಲ್ಲ ಅನುಭೋಗಿಸುವಾಗ ಶ್ರೀನಿವಾಸನನ್ನು ತನಗೇ ಗೊತ್ತಾಗದ ರೀತಿಯಲ್ಲಿ, ನನ್ನ ಬಗೆಗಿನ ಭಯ ಕಾಡುತ್ತಿರಬೇಕು. ಶ್ರೀನಿವಾಸ ನನ್ನ ಬಗ್ಗೆ ತಿಳಿಯುತ್ತ ಬಂದ ದ್ವೇಷ ಆಳವಾದ ಭಯದ ಮೇಲೆ ನಿಂತಿರಬೇಕು. ನೇತ್ರಾವತಿಯ ಆತ್ಮಹತ್ಯೆಗೆ ಕಾರಣವಾದ ಆ ದುರ್ಘಟನೆ, ಕೊರೋನರ್ಸ್ ಕೋರ್ಟಲ್ಲಿ ನಾನಿತ್ತ ಸಾಕ್ಷಿ : ಶ್ರೀನಿವಾಸನ ಭಯವನ್ನು ನಾನು ಮೊದಲಿನಿಂದಲೂ ಬಲ್ಲೆ. ನಾನು ಬರೆದ ಕತೆಗಳನ್ನು ಚಾಚೂ ತಪ್ಪದೆ ಯಾಕೆ ಓದುತ್ತಾನೆ ಎಂಬುದನ್ನೂ ಬಲ್ಲೆ… ಫಿರೋಜ್ ನನ್ನ ಬಗ್ಗೆ ವ್ಯಕ್ತಪಡಿಸುತ್ತ ಬಂದ ದ್ವೇಷದ ಅಡಿಗೂ ಇಂತಹ ಭಯವೇ ಅಡಗಿರಬಹುದೇ ? ಎಂತಹ ಭಯ ? ಫಿರೋಜನಿಗೆ ನಮ್ಮ ಕಂಪನಿಯ ಟೆಕ್ನಾಲಾಜಿಯನ್ನು ಕುರಿತಿರುವ ನಂಬಲಾಗದಷ್ಟು ಅಜ್ಞಾನ ನನಗೊಬ್ಬನಿಗೇ ಗೊತ್ತು. ಆದರೂ ಹಲವು ವರ್ಷ ಈತ ಟೆಕ್ನಿಕಲ್ ಡಾಯಿರೆಕ್ಟರ್ ! ಈಗ ಡೆಪ್ಯುಟೀ ಮ್ಯಾನೇಜಿಂಗ್ ಡಾಯಿರೆಕ್ಟರ್ ! ಧಡ್ಡ ಎರಡೂ ಮಗ. ಮೇಲಕ್ಕೇರಿದ್ದು ಬರೇ ರಾಜಕಾರಣಿಯ ಧೂರ್ತ ಕಪಟದಿಂದ. ಆದರೆ ತಮ್ಮ ತಮ್ಮ ಭಯಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದ ಈ ಇಬ್ಬರು ಧೂರ್ತರು ಒಂದೆಡೆಯಲ್ಲಿ ಬಂದದ್ದು ಹೇಗೆ ? ನಾನು ಅಮೇರಿಕೆಗೆ ಹೋಗುವ ಕನಸು ನನಸಾಗಲಿದ್ದ ಮುಹೂರ್ತದಲ್ಲೇ ಹೇಗೆ ? ಅಥವಾ ಮುಹೂರ್ತವೇ ಈ ಇಬ್ಬರೂ ಒಂದೂ ಮಕ್ಕಳ ಗುಪ್ತ ಸಮಾಗಮಕ್ಕೆ ಸ್ಫೂರ್ತಿಯಾಗಿರಬಹುದೆ ?

ನಾಗಪ್ಪನಿಗೆ ಇದೆಲ್ಲ ಒಗಟಾಗಿಯೇ ಉಳಿಯಿತು.

ಆದರೆ ಇಬ್ಬರನ್ನೂ ಹೋರುವ ತನ್ನ ನಿರ್ಧಾರದ ಬಗ್ಗೆ ಮಾತ್ರ ಯಾವ ಸಂಶಯವೂ ಉಳಿಯಲಿಲ್ಲ. ಆ ನಿರ್ಧಾರ ಅವನ ಆಗಿನ ಮೂಡಿನಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಅದು ಹುಟ್ಟಿಸಿದ ಹೊಸ ಧೈರ್ಯದಿಂದಲೇ ಊಟಕ್ಕೆ ಕೂತಾಗ ನಾಳೆ ಬೆಳಗ್ಗೆ ನಾಸ್ತಾ ಮುಗಿಸಿದ್ದೇ ಖೇತವಾಡಿಯ ಮನೆಗೆ ಹೋಗುವ ತನ್ನ ನಿಶ್ಚಯವನ್ನು ಶ್ರೀನಿವಾಸನಿಗೆ ತಿಳಿಸಿದ. ಅವನ ಅಪ್ಪಣೆ ಪಡೆದು ಕಂಪನಿಯ ಪರ್ಸೊನೆಲ್ ಮ್ಯಾನೇಜರ್ ನೋಶೀರ್ ಖಂಬಾಟನಿಗೆ ಅವನ ಮನೆಯ ನಂಬರಿಗೆ ಫೋನ್ ಮಾಡಿ, ಗಟ್ಟಿಯಾದ ಆತ್ಮವಿಶ್ವಾಸ ತುಂಬಿದ ದನಿಯಲ್ಲಿ ಹೈದ್ರಾಬಾದಿಗೆ ಹೋಗಲು ತಾನೂ ಸಿದ್ಧನಾಗಿದ್ದೇನೆಂದೂ, ವಿಮಾನದ ಟಿಕೆಟ್ಟನ್ನು ಖೇತವಾಡಿಯ ವಿಳಾಸಕ್ಕೇ ಕಳಿಸಬೇಕೆಂದೂ ತಿಳಿಸಿದ. ‘ನೀವೆಲ್ಲ ನನ್ನ ಸಲುವಾಗಿ ಮಾಡುತ್ತಿದ್ದುದರ ಬಗ್ಗೆ ತುಂಬ ಅಭಾರಿಯಾಗಿದ್ದೇನೆ,’ ಎಂದಾಗ ಖಂಬಾಟಾ ದಡಬಡಿಸಿದ್ದು ಕೇಳಿಸಿ, “ Iಣ is ಚಿಟಟ ಡಿighಣ, ಓಚಿushiಡಿ. I ಟooಞ ಜಿoಡಿತಿಚಿಡಿಜ ಣo ಣhis ಣಡಿiಠಿ ಣo ಊಥಿಜeಡಿಚಿbಚಿಜ. I ತಿiಟಟ eಟಿರಿoಥಿ iಣ” ಎಂದು ಹೇಳಿ ಟೆಲಿಫೋನ್ ಕೆಳಗಿಟ್ಟ. ತನ್ನ ದನಿಯಲ್ಲಿಯ ವ್ಯಂಗ್ಯಕ್ಕೆ ತಾನೇ ಖುಶಿಪಟ್ಟ.

ಮರಿದುನ ಬೆಳಿಗ್ಗೆ, ಟ್ಯಾಕ್ಸಿಯಲ್ಲಿ ಕುಳಿತು ಖೇತವಾಡಿಯ ಹಾದಿ ಹಿಡಿದಾಗ ಲಕ್ಷ್ಯಕ್ಕೆ ಬಂದಿತು, ಬೀಳ್ಕೊಳ್ಳುವಾಗ ಶ್ರೀನಿವಾಸನ ಹೆಂಡತಿಗೆ ‘ಬರುತ್ತೇನೆ’ ಎಂದು ಹೇಳಿದ್ದೇ ಅವಳನ್ನು ಮಾತನಾಡಿಸಿದ ಮೊದಲ ಸಂದರ್ಭವಾಗಿತ್ತು, ಎಂದು. ಆಮೇಲೆ, ವಿಷಾದ ತುಂಬಿದ ಅವಳ ಕಣ್ಣುಗಳು ; ಗಲ್ಲ ಚಿವುಟಿದಾಗ ಕಣ್ಣುಗಳಲ್ಲಿ ಹೊಳಪು ಮಿಂಚಿಸುತ್ತ ನಕ್ಕ ಚೇತನಾಳ ನಗು ; ಕೊನೆವರೆಗೂ ಬರೇ ನೋಡುತ್ತಲೇ ನಿಂತುಬಿಟ್ಟ ಅಚ್ಯುತನ ನಿಗೂಢ ಮೌನ ನೆನಪಿನಲ್ಲಿ ಮೂಡಿ ನಿಂತು ಬಹಳ ಅಂತರದವರೆಗೆ ಹಿಂಬಾಲಿಸಿದುವು. ಖೇತವಾಡಿಯನ್ನು ತಲುಪಿದಮೇಲೆ ಟ್ಯಾಕ್ಸಿಯವನನ್ನು ಬೀಳ್ಕೊಡುವಾಗ, ಮನೆಯಿದ್ದ ಖೇಮರಾಜ ಭವನದ ಮೂರು ಮಜಲುಗಳ ಕಟ್ಟಿಗೆಯ ಪಾವಟಿಗೆಗಳನ್ನು ಏರಿ ಹೋಗುವಾಗ : ಸಂಧಿಸಿದ ನೆರೆಹೊರೆಯವರನ್ನು ಕಣ್ಣುಗಳಿಂದಲೇ ವಂದಿಸುವಾಗ ತನ್ನೊಳಗೆ ಸ್ಥಾಯಿಯಾಗಿ ನಿಂತ ಆತ್ಮವಿಶ್ವಾಸದಿಂದ ತಾನೇ ಪುಳಕಿತನಾದ. ಅತ್ಯಂತ ಖುಷಿಯಿಂದ ಮನೆಯ ಬೀಗ ತೆರದು, ಕದ ದೂಡಿ ಒಳಗೆ ಕಾಲಿರಿಸಿದ.
uಟಿಜeಜಿiಟಿeಜ
– ಭಾಗ : ಎರಡು –
– ಅಧ್ಯಾಯ ಹನ್ನೊಂದು –

ಮನೆ ಹೊಕ್ಕವನೇ, ನಾಗಪ್ಪ, ಅದನ್ನು ಇದೇ ಮೊದಲ ಸಲ ನೋಡುತ್ತಿರುವವನ ಹಾಗೆ ಹೊಚ್ಚಹೊಸ ಆಸ್ಥೆಯಿಂದ, ಪ್ರೀತಿಯಿಂದ ನೋಡಿದ. ರಸ್ತೆಯ ಇನ್ನೊಂದು ಮಗ್ಗುಲಲ್ಲಿ ನಿಂತ ಚಾಳಿನಲ್ಲಿಯ ಜನರ ಕಡೆಗೆ ಒಮ್ಮೆ ದೃಷ್ಟಿ ಹಾಯಿಸಿದ. ಅಪೂರ್ವ ಸಂಗತಿಯೊಂದು ತನ್ನ ಹೊಸ ಮೂಡಿಗೆ ಕಾರಣವಾಗಿದೆಯೆಂಬ ಅಸ್ಪಷ್ಟ ಅರಿವು ಇದ್ದೂ, ಆ ಕಾರಣದ ಬಗ್ಗೆ ವಿಚಾರಮಾಡುವ ಕುತೂಹಲವನ್ನು ಹತ್ತಿಕ್ಕಿ, ಕೆಲಹೊತ್ತು ಕೋಣೆಯಲ್ಲಿಯ ಪುಸ್ತಕಗಳ ಮೇಲೆ ದೃಷ್ಟಿ ನೆಟ್ಟು ಕುಳಿತ. ಮನಸ್ಸು ಯಾವುದೇ ಒಂದು ನಿರ್ಧಿಷ್ಟ ಸಂಗತಿಯ ಬಗ್ಗೆ ವಿಚಾರಮಾಡಲು ನಿರಾಕರಿಸುತ್ತ ಸುನ್ನವಾಗಿತ್ತು. ನಡುವೆಯೇ ಏನೋ ಹೊಳೆದಂತಾಗಿ, ಕೂತಲ್ಲಿಂದ ಎದ್ದು ಸೂಟ್‌ಕೇಸಿನೊಳಗಿಂದ ಟಿಪ್ಪಣಿಗಳ ವಹಿಯನ್ನು ಹೊರತೆಗೆದ : ಹೌದು. ಹೈದ್ರಾಬಾದಿಗೆ ಹೋಗುವ ಮೊದಲು ಅವಕಾಶವಿದ್ದ ಕೆಲವು ದಿನಗಳಲ್ಲಿ ಬರೆದು ತೆಗೆಯಬೇಕು : ಫಿರೋಜ ಹಾಗೂ ಶ್ರೀನಿವಾಸ ಕೂಡಿ ಹೂಡಿದ ಈ ಸಂಚಿನ ಒಳಮರ್ಮವನ್ನು ; ಗೂಢಪ್ರೇರಣೆಯನ್ನು ಕುರಿತು ಹೊಳೆದದ್ದನ್ನೆಲ್ಲ ಟಿಪ್ಪಣಿ ಮಾಡಬೇಕು. ಯಾಕಂದರೆ ಈ ಒಳಗುಟ್ಟನ್ನು ಅರಿತಾಗಲೇ ನಾನು ಇದನ್ನೆಲ್ಲ ಇದಿರಿಸುವ ಹಾದಿ ಯಾವುದು ? ಕೈಕೊಳ್ಳಬೇಕಾದ ಉಪಾಯವೇನು ? ಎನ್ನುವದು ನಿಚ್ಚಳವಾದೀತು. ಮೊನ್ನೆ ಒಂದು ಪ್ರಕ್ಷುಬ್ಧ ಗಳಿಗೆಯಲ್ಲಿ ಹುಟ್ಟಿದ ಅಸ್ಪಷ್ಟ ಗುಮಾನಿ ಈಗ ಮೆಲ್ಲಗೆ ಹರಳುಗುಟ್ಟುತ್ತಿದ್ದ ಅನ್ನಿಸಿಕೆ : ಫಿರೋಜ್ ಶ್ರೀನಿವಾಸ ಇವರಿಬ್ಬರೂ ನನಗೆ ಯಾವುದೋ ಕಾರಣಕ್ಕಾಗಿ ಹೆದರಿಕೊಂಡಿದ್ದಾರೆ ಎಂಬುದೂ ಸುಳ್ಳಲ್ಲ….

ತನ್ನ ಭಯವನ್ನು ಮರೆತು ಇವರಿಬ್ಬರ ಭಯದ ಮೂಲವನ್ನು ಅರಿಯುವ ಕುತೂಹಲ ಸುಖದಾಯಕವೆನಿಸಿತು, ನಾಗಪ್ಪನಿಗೆ : ನಾಳೆ ಬೆಳಿಗ್ಗೆ ಎದ್ದಕೂಡಲೇ ಬರೆಯಲು ಕೂಡ್ರಬೇಕು. ನಸುಕಿನ ಮಬ್ಬು ಹಾಗೂ ತಂಪು ಎರಡೂ ಬರವಣಿಗೆಗೆ ಸ್ಫೂರ್ತಿ ನೀಡುವಂತವುಗಳು. ರಾತ್ರಿ, ರಾಣಿಯನ್ನು ಕಂಡು ಬರಬೇಕು. ಅವಳನ್ನು ಕಾಣದೇ ಈಗ ಎಂಟು ದಿನಗಳ ಮೇಲೆ ಆಯಿತು. ಎಷ್ಟೊಂದು ನೊಂದುಕೊಂಡಿದ್ದಾಳೋ ಹುಡುಗಿ….ರಾಣಿಯ ನೆನಪಿನಿಂದ ಮೈ ಬೆಚ್ಚಗಾಗುತ್ತಿದ್ದಂತೆನಿತು : ಚಪ್ಪಟೆ ಮೂಗು, ನಗುವಾಗ ಕುಳಿ ಬೀಳುತ್ತಿದ್ದ ಗಲ್ಲಗಳು (ಚೇತನಾಳ ಗಲ್ಲಗಳಲ್ಲೂ ಕುಳಿಗಳಲ್ಲವೇ)! ಸಪೂರಾದ ತುಟಿಗಳಿದ್ದ ಸಣ್ಣ ಬಾಯಿ, ಮೊಲೆ, ತೊಡೆಗಳು ಮಾತ್ರ ಹುಚ್ಚು ಹಿಡಿಸುವಂತಹವುಗಳು. ಎಲ್ಲರನ್ನು ಬಿಟ್ಟು ಈ ನೇಪಾಳೀ ಹೆಣ್ಣಿನ ಮೋಹಕ್ಕೆ ಬಲಿಯಾದದ್ದರ ಕಾರಣ ಮಾತ್ರ ಬೇರೆಯೇ ಆಗಿತ್ತು : ಗೊತ್ತಿದ್ದೂ ಸ್ಪಷ್ಟವಾಗಿ ಪ್ರಜ್ಞೆಯ ನೆಲೆಯಲ್ಲಿ ಒಪ್ಪಿಕೊಂಡಿರಲಿಲ್ಲ. ಅಷ್ಟೇ : ತನ್ನ ತಂಗಿ ಹೀಗೇ ಎಲ್ಲಾದರೂ ವೇಶ್ಯೆಯಾಗಿ ಬದುಕುತ್ತಿರಬಹುದೇ ? ಎನ್ನುವ ಅನುಮಾನ ದಿನ ಹೋದಂತೆ ಒಂದು ರೋಗದ ಲಕ್ಷಣ ತಳೆದು ಕಾಡಹತ್ತಿತ್ತು. ನಾಗಪ್ಪ ಅಸ್ವಸ್ಥನಾದ. ಕುರ್ಚಿಯಿಂದ ಎದ್ದು ರಸ್ತೆಯ ಬದಿಯ ಸರಳುಗಳಿಲ್ಲದ ಬೋಳುಕಿಡಕಿಗೆ ಬಂದು ನಿಂತ. ಮೂರನೇ ಮಜಲೆಯ ಆ ಕಿಡಕಿಯಿಂದ ಕೆಳಗಿನ ರಸ್ತೆಯನ್ನು ನೋಡುತ್ತಿರುವಾಗ ದೂರದ ನೆನಪೊಂದು ಮನಸ್ಸಿನ ಆಳದಲ್ಲೆಲ್ಲೋ ಮೈ ಕೊಡವುತ್ತಿದ್ದದ್ದು ಅರಿವಿಗೆ ಬರುವಷ್ಟರಲ್ಲಿ ಮೂಲೆಯ ಮನೆಯ ಅರ್ಜುನ್‌ರಾವ್ ಅಗಳಿ ಹಾಕಿರದ ಕದಗಳನ್ನು ದೂಡಿ ಒಳಗೆ ಬಂದ.

ಜ್ಯೋತಿಷ್ಯಚೂಡಾಮಣಿ ಮಾಪಣಕರರ ವಾರಭವಿಷ್ಯವೊಂದರಿಂದಾಗಿಯೇ ಸಾವಿರಾರು ಪ್ರತಿಗಳು ಒಂದೇ ದಿನದಲ್ಲಿ ಮಾರಿಹೋಗುವ ‘ವಜ್ರಧಾರಿ’ ವಾರಪತ್ರಿಕೆಯ ಸಂಪಾದಕನಾದ ಇವನು ತಾನೊಬ್ಬ ದೊಡ್ಡಬುದ್ದಿಜೀವಿ ಎಂದು ತಿಳಿದುಕೊಂಡಿದ್ದಾನೆ. ಭೆಟ್ಟಿಯಾದಾಗೊಮ್ಮೆ ಕಮ್ಯುನಿಜಮ್, ಎಂ,ಎನ್, ರಾಯ್ ಅವರ ರೆಡಿಕಲ್ ಹ್ಯುಮೆನಿಸಮ್ ಇವೆಲ್ಲವುಗಳ ಬಗ್ಗೆ ನಿಲ್ಲಿಸದೇ ಮಾತನಾಡುವ ಈತ ಖಟ್ಟ ಹಿಂದೂಮಹಾಸಭಾವಾದಿ. ಸಮಾಜದ ಬಗ್ಗೆ ಇವನು ಕಳಕಳಿಯನ್ನು ವ್ಯಕ್ತಪಡಿಸುವಾಗಿನ ಶಬ್ದಪ್ರಭುತ್ವ ದಂಗುಬಡಿಸುವಂಥದ್ದು. ಇವನೊಡನೆ ಮಾತನಾಡುವ ಮೂಡಿನಲ್ಲಿರಲಿಲ್ಲ. ನಾಗಪ್ಪ ಈಗಾಗಲೇ ಹತ್ತುಗಂಟೆ. ಇನ್ನೂ ಹೇಗೆ ಪ್ರೆಸ್ಸಿಗೆ ಹೋಗಿಲ್ಲವೆಂದು ಕೇಳಿದಾಗ ಮನೆಯಲ್ಲಿಂದು ಸತ್ಯನಾರಾಯಣ ಪೂಜೆ. ಆ ಕಾರಣ ಒಂದು ದಿನದ ರಜೆ ಪಡೆದಿದ್ದೇನೆ ಎಂದ. ಬೇರೆ ಯಾರಲ್ಲೂ ಬರುತ್ತೇನೆಂದು ಈಗಾಗಲೇ ಹೇಳಿರದಿದ್ದರೆ ತಮ್ಮಲ್ಲೇ ಊಟಕ್ಕೆ ಬರಬೇಕೆಂದು ಕೇಳಿಕೊಂಡ. ನಾಗಪ್ಪನಿಗೆ ಒಳಗೊಳಗೇ ನಗು. ಊಟದ ಆಮಂತ್ರಣವನ್ನು ಸ್ವೀಕರಿಸುವಾಗ ತುಟಿಗಳ ಮೂಲೆಯಲ್ಲಿ ಮೂಡಿದ ತುಂಟತನದ ಮುಗುಳುನಗೆಯನ್ನು ಕಂಡವನ ಹಾಗೆ, ತನಗೆ ಇದಾವುದರಲ್ಲೂ ವಿಶ್ವಾಸವಿಲ್ಲ. ಆದರೂ ಹೆಂಡತಿಯ ಮನಸ್ಸು ನೋಯಿಸುವ ಮನಸ್ಸಿಲ್ಲ ಎನ್ನುತ್ತ ಹಲ್ಲುಕಿಸಿದ, ಅರ್ಜುನ್‌ರಾವ್. ನಾಗಪ್ಪನಿಗೆ ಮೋಜೆನಿಸಿತು. ಅರ್ಜುನ್‌ರಾವ್ ಬರಿಯ ಔತಣವೀಯಲಷ್ಟೇ ಬಂದಂತೆ ತೋರಲಿಲ್ಲ. ಕುರ್ಚಿಯೊಂದರಲ್ಲಿ ಕುಂಡೆಯೂರುತ್ತ, ಸದ್ಯ ರಜೆಯ ಮೇಲೆ ಇದ್ದಂತಿದೆಯಲ್ಲವೆ ? ಎಂದು ಅತ್ಯಂತ ಸಹಜವಾದ ಕುತೂಹಲದಿಂದ ಕೇಳಿದಂತಿದ್ದ, ಪ್ರಶ್ನೆಯಲ್ಲಿಯ ಅಧಿಕಪ್ರಸಂಗ ನಾಗಪ್ಪನನ್ನು ತಟ್ಟದೇಹೋಗಲಿಲ್ಲ. ಆದರೂ ತಲೆಕೆಡಿಸಿಕೊಳ್ಳದೇ, ಹೌದು ಒಂದು ತಿಂಗಳು ರಜೆ ಪಡೆದದ್ದು ನಿಜ-ಎನ್ನುತ್ತಿರುವಾಗಲೇ, ಕಾದಂಬರಿಯನ್ನೂ ಬರೆಯಲು ಹಿಡಿದಿದ್ದೀರಂತೆ ಎಂದಾಗ ನಾಗಪ್ಪ ಚೆಕಿತನಾಗಿ ಕಣ್ಣರಳಿಸಿದ್ದನ್ನು ನೋಡಿ, “ಶ್ರೀನಿವಾಸರಾವ್ ಭೆಟ್ಟಿಯಾಗಿದ್ದ ಮೊನ್ನೆ ಪ್ರೆಸ್ಸಿನಲ್ಲಿ, ನೀವು ಅವನ ಮನೆಯಲ್ಲೇ ಕೂತು ಕಾದಂಬರಿ ಬರೆಯುತ್ತೀದ್ದೀರಂತೆ.” ಎಂದಾಗ ಮಾತ್ರ ನಾಗಪ್ಪನಿಗೆ ತನ್ನ ಅಸಮಾಧಾನವನ್ನು ತಡೆಯುವುದಾಗಲಿಲ್ಲ : “ಹೌದು. ಹೋದ ನಾಲ್ಕು ದಿನ ಅವನಲ್ಲೇ ಇದ್ದೆ. ಈಗ ಇಲ್ಲೇ ಕೂತು ಬರೆಯಬೇಕೆಂದುಕೊಂಡಿದ್ದೇನೆ. ನಿಮಗೆ ಕನ್ನಡ ಬರುತ್ತಿದ್ದರೆ ಓದಿ ತೋರಿಸುತ್ತಿದ್ದೆ. ಅಂದರೆ ಅದರಲ್ಲಿ ಬರುವ ಪಾತ್ರಗಳ ಗುರುತು ನಿಮಗೆ ಸಿಗಬಹುದಿತ್ತು. ಅದರಲ್ಲಿ ನೀವೂ ಬರುತ್ತೀರಿ ಎಂಬುದನ್ನು ಮೊದಲೇ ಹೇಳಿಬಿಡುತ್ತೇನೆ. ಯಾಕೆಂದರೆ ಕಾದಂಬರಿಗೆ ಮೂಲ ಪ್ರಚೋದನೆಯಾದ ಘಟನೆ : ಇದೇ ಮನೆಯಲ್ಲಿ ನಡೆದ ನೇತ್ರಾವತಿಯ ಆತ್ಮಘಾತ ! ಯಾವ ಒಂದು ಪಾತ್ರದ ಹೆಸರನ್ನೂ ಬದಲಿಸದೇ ಎಲ್ಲವನ್ನೂ ನಡೆದಂತೆಯೇ ಬರೆಯುತ್ತಿದ್ದದ್ದು ಕಾದಂಬರಿಯ ವೈಶಿಷ್ಟ್ಯ. ಶ್ರೀನಿವಾಸ, ಶ್ರೀನಿವಾಸ ಎಂದೇ ಬಂದಿದ್ದಾನೆ. ಅರ್ಜುನ್‌ರಾವ್ ಅರ್ಜುನ್‌ರಾವ್ ಎಂದೇ ಖೇತವಾಡಿಯ ಈ ಖೇಮರಾಜಭವನದ ಮೂರನೇ ಮಜಲೆಯ ಮೇಲಿನ ಮನೆ ನಂಬರು ೫೩ರಲ್ಲಿ ವಾಸಿಸುವ ಸದ್ಗೃಹಸ್ಥನಾಗಿ, ‘ವಜ್ರಧಾರಿ’ ಪತ್ರಿಕೆಯ ಸಂಪಾದಕರಾಗಿ ನೀವು ಅದರಲ್ಲಿ ಮೆರೆಯುತ್ತೀರಿ. ಯಥಾರ್ಥನಿರೂಪಣೆಯಲ್ಲಿ ಇದೊಂದು ಹೊಸ ಪ್ರಯೋಗ. ಇದನ್ನು ಬರೆಯಲು ಶ್ರೀನಿವಾಸನ ಮನೆ ಸರಿಯಾದ ಜಾಗವಲ್ಲ ಎನ್ನುವುದು ಅನುಭವಕ್ಕೆ ಬಂದದ್ದರಿಂದಲೇ ಇಲ್ಲಿಗೆ ತಿರುಗಿ ಬಂದೆ.” ಎಂದಾಗಿನ ತನ್ನ ಮಾತಿನಲ್ಲಿಯ ನಿಷ್ಠುರತೆಯ ಬಗ್ಗೆ, ಅದು ಅರ್ಜುನ್‌ರಾವನ ಮೇಲೆ ಮಾಡುತ್ತಿದ್ದ ಪರಿಣಾಮದ ಬಗ್ಗೆ ತಾನೇ ಖುಷಿಪಟ್ಟ.

ಕಾದಂಬರಿಯಲ್ಲಿ ತನ್ನ ಪಾತ್ರವೂ ಇದೆ ಎಂದು ಕೇಳಿದ ಅರ್ಜುನ್‌ರಾವ್ ತಬ್ಬಿಬ್ಬಾದ. ಕುರಿಯ ಪೆದ್ದು ತನದಿಂದ ಬೇ ಎಂದ. ಹೆಗ್ಗೋಡಗನ ಹಾಗೆ ಖೆಕ್ ಎಂದು ಹಲ್ಲುಕಿಸಿದ : “ಎಲ್ಲರನ್ನು ಬಿಟ್ಟು ನನ್ನನ್ನು ಯಾಕೆ ? ಅಂತೂ ಇಪ್ಪತ್ತು ವರ್ಷಗಳ ಹಿಂದಿನ ಆ ದುರ್ಘಟನೆಯನ್ನು ನೀವು ಮರೆತಿಲ್ಲವೆಂದಾಯಿತು. ನಾನಾದರೂ ಎಲ್ಲಿ ಮರೆತಿದ್ದೇನೆ ಶ್ರೀನಿವಾಸರಾವ್ ಗಟ್ಟಿ ಕುಳ ನೋಡಿ, ಎಲ್ಲವನ್ನೂ ಸುರಳೀತ ಮರೆತು ಮದುವೆಯಾಗಿ ಮಕ್ಕಳನ್ನು ಪಡೆದು ಸುಖರೂಪದಲ್ಲಿ ಇದ್ದಾನೆ. ಲಕ್ಷಗಟ್ಟಲೆ ಹಣ ಮಾಡಿದ್ದಾನಂತೆ. ಈಗ ಮ್ಯುನಿಸಿಪಲ್ ಇಲೆಕ್ಷನ್ನಿಗೆ ನಿಲ್ಲುತ್ತಾನಂತೆ. ಅದಕ್ಕೇ ಬಂದಿದ್ದ_ಪೋಸ್ಟರುಗಳನ್ನು, ಅಪೀಲುಗಳನ್ನು ನಮ್ಮಲ್ಲಿ ಛಾಪಿಸಲು. ಸ್ವಂತದ ಪ್ರೆಸ್ಸು ಇದ್ದರೂ ಇಂಥದ್ದನ್ನು ಛಾಪಿಸಲು ವ್ಯವಧಾನ ಇಲ್ಲವಂತೆ. ದಂಧೆ ಅಷ್ಟೊಂದು ಭರಭರಾಟೆಯಿಂದ ನಡೆದಿದೆಯಂತೆ. ನೋಡಿ ಒಬ್ಬೊಬ್ಬರ ಭಾಗ್ಯೋದಯದ ರೀತಿಯನ್ನು, ಇದೇ ಮನೆಯಲ್ಲಿ ನಿಮ್ಮ ಜೊತೆಯಲ್ಲಿರುವಾಗ ಚರ್ನೀರೋಡಿನ ಸರ್ಕಾರಿ ಛಾಪಖಾನೆಯಲ್ಲಿ ಒಬ್ಬ ಕ್ಲಾರ್ಕು, ಈಗ ?…ಏಕೋ, ಇದ್ದಕ್ಕಿದ್ದಂತೆ ಬೆಳಿಗ್ಗೆ ಇಲ್ಲಿಗೆ ಬರುವಾಗ ಇದ್ದ ತನಗೇ ಸಂಪೂರ್ಣ ಅರ್ಥವಾಗಿರದ ಗಟ್ಟಿಯಾದ ಆತ್ಮವಿಶ್ವಾಸ ಈಗ ಅರ್ಜುನ್‌ರಾವನ ಮಾತು ಕೇಳುತ್ತಿರುವಾಗ ಸಡಿಲವಾಗುತ್ತಿದೆ ಎಂಬ ಅನ್ನಿಸಿಕೆಯಿಂದ ಅಸ್ವಸ್ಥಗೊಂಡ : “ಈವತ್ತು ನಿಮ್ಮಲ್ಲಿ ಪೂಜೆಯೆಂದಮೇಲೆ ನಿಮಗೆ ಮನೆಯಲ್ಲಿ ಸಾಕಷ್ಟು ಕೆಲಸಗಳಿರಬೇಕು….”

ತನಗೀಗ ಸ್ನಾನಗೀನ ಮುಗಿಸಿ ಹೊರಗೆ ಹೋಗಬೇಕಾಗಿದೆ ಎಂದು ಹೇಳಿ ಅರ್ಜುನ್‌ರಾವನನ್ನು ಅಲ್ಲಿಂದ ಓಡಿಸುವ ಯೋಜನೆ ನಾಗಪ್ಪನದಾಗಿತ್ತು. ಆದರೆ ಅರ್ಜುನ್‌ರಾವ್ ಅವನ ಮಾತನ್ನು ಪೂರ್ತಿಯಾಗಲು ಬಿಟ್ಟರಲ್ಲವೆ ! “ಛೇ ಛೇ ಛೇ. ನನ್ನ ಇಬ್ಬರು ತಮ್ಮಂದಿರೂ ಅವರ ಹೆಂಡಂದಿರೂ ಬಂದಿದ್ದಾರೆ. ಪುರೋಹಿತರಂತೂ ಹನ್ನೆರಡರ ಮೊದಲು ಬರುವದಿಲ್ಲ. ನನಗೇನು ಕೆಲಸ ? ಬೆಳಿಗ್ಗೆ ಎದ್ದಕೂಡಲೇ ಯಾರಾದರೂ ಹರಟೆ ಹೊಡೆಯಲು ಸಿಕ್ಕರೆ ಎಷ್ಟು ಚೆನ್ನಾಗಿತ್ತು ಅನ್ನಿಸಿತ್ತು. ನೀವು ಸಿಕ್ಕಿರಿ. ಐನ ಪೂಜೆಯ ದಿನವೇ ವಾಪಸು ಬಂದಿರಿ. ನಿಮ್ಮ ನಾಸ್ತಾ ಆಗಿರದಿದ್ದರೆ… ಶ್ರೀನಿವಾಸನಲ್ಲೇ ಮುಗಿಸಿ ಬಂದಿದ್ದೇನೆ” ಎಂದು ನಾಗಪ್ಪ ಹೇಳಿದನಷ್ಟೇ: “ಹಾಗಾದರೆ ಒಂದೊಂದು ಕಪ್ಪು ಚಹಾ ತರಿಸುತ್ತೇನೆ. ನಿಮ್ಮ ನೆಪದಿಂದ ನನಗೂ ಸಿಕ್ಕೀತು,” ಎಂದು ಅಲ್ಲಿಂದಲೇ ತನ್ನ ಮಗಳ ಹೆಸರನ್ನು ಹಿಡಿದು ಕೂಗಿದಾಗ ಬಾಗಿಲಲ್ಲಿ ಬಂದು ನಿಂತ ತಮ್ಮನ ಹೆಂಡತಿಗೆ ಚಹ ಕಳಿಸಿಕೊಡುವಂತೆ ಕೇಳಿಕೊಂಡ. ಬಾಗಿಲಲ್ಲಿ ನಿಂತು ತನ್ನತ್ತಲೇ ನೋಡುತ್ತಿದ್ದಾಗ ಅವಳ ಮೋರೆಯ ಮೇಲೆ ಮೂಡಿದ ಭಾವಕ್ಕೆ ಅರ್ಥ ಹಚ್ಚುವ ಮನಸ್ಸಾಗಲಿಲ್ಲ ನಾಗಪ್ಪನಿಗೆ. ತುದಿಬುಡವಿಲ್ಲದೆ ಮಾತನಾಡುವ ಅರ್ಜುನರಾವನೊಡನೆ ಹರಟುವ ಉತ್ಸಾಹವಂತೂ ಅವನಿಗೆ ಎಳ್ಳಷ್ಟೂ ಇರಲಿಲ್ಲ. ಬರಿಯ ಬಾಯ್ತಿಂಡಿಯನ್ನು ತೀರಿಸಲೆಂದೇ ಮಾತನಾಡುವ ಈ ಸದ್ಗೃಹಸ್ಥನ ಆಸ್ಥೆಗಳೆಲ್ಲ ಮೇಲುಮೇಲಿನವು. ಆಳಕ್ಕೆ ಇಳಿದವನೇ ಅಲ್ಲ. ಈ ಮೂರೂ ಮಗ ! ಆದ್ದರಿಂದಲೇ ನಿರುಪದ್ರವಿ. ಯಾರೊಬ್ಬರ ಒಳಿತಿಗಾಗಿ ಶ್ರಮಿಸಿರಲಿಕ್ಕಿಲ್ಲ. ಆದರೆ ಕೆಡುಕನ್ನೂ ಇಚ್ಛಿಸಿದವನಲ್ಲ. ಮನಸ್ಸಿಲ್ಲದ ಮನಸ್ಸಿನಿಂದ, ಅದೇ ಬಂದು ತಲುಪಿದ ಬಿಸಿಬಿಸೀ ಚಹಕ್ಕೆ ತುಟಿ ಹಚ್ಚುತ್ತ ಅರ್ಜುನ್‌ರಾವನೊಡನೆ ಹರಟೆಹೊಡೆಯುವ ವಿಧಿಗೆ ತಲೆ ಒಡ್ಡಲು ಸಿದ್ಧನಾದ. ಕೆಲವೇ ಕ್ಷಣಗಳ ಮೊದಲು ನಿಷ್ಕಾರಣವಾಗಿ ತಲೆದೋರಿದ ಅಸ್ವಸ್ಥತೆ ಮಾಯವಾಗಿ ಬಿಗಿಗೊಂಡ ನರಗಳು ಸಡಿಲಾದಾಗ ಜೀವಕ್ಕೆ ಹಿತವೆನಿಸಹತ್ತಿತು. ಬಹುಶಃ ತನ್ನ ನರಗಳ ಆರೋಗ್ಯಕ್ಕೆ ಇಂಥ ಸಹವಾಸವೂ ಅಗತ್ಯವಾದದ್ದೇನೋ ಅನ್ನಿಸಿತು.

ಕೊನೆಗೊಮ್ಮೆ ಅರ್ಜುನ್‌ರಾವ ತನ್ನ ಮಾತಿನ ತಲಬನ್ನು ತೃಪ್ತಿಪಡಿಸಿಯೇ ಹೊರಟುಹೋದಮೇಲೆ ಬಟ್ಟೆ ಬದಲಿಸಿ ಬರೆಯಲು ಕೂತ. ವಹಿಯನ್ನು ತೆರೆಯುತ್ತಿರುವಾಗ ಇವರೆಲ್ಲ ಇದನ್ನು ನಾನು ಬರೆಯುತ್ತಿದ್ದ ಕಾದಂಬರಿ ಎಂದು ತಿಳಿದಿದ್ದಾರೆ ಎನ್ನುವದು ಲಕ್ಷ್ಯಕ್ಕೆ ಬಂದು, ‘ಎಲೈ ಒಂಬತ್ತಕ್ಕೆಹುಟ್ಟಿದ ನೀನೇ,’ ಎಂದು ಸಾಂಖ್ಯಭಾಷೆಯಲ್ಲಿ ವಹಿಯನ್ನೇ ಬೈದು, ನಕ್ಕ.

“ಟಿಪ್ಪಣಿ ಹದಿಮೂರು : ನನಗನ್ನಿಸುತ್ತದೆ : ಮನುಷ್ಯನ ಭಯದ ಹಲವಾರು ಮೂಲಗಳಲ್ಲಿ ಇದ್ದದ್ದನ್ನು ಕಳೆದುಕೊಳ್ಳುವ ಸಾಧ್ಯತೆಯೂ ಒಂದೇನೋ ಹನೇಹಳ್ಳೀಯ ಒಂದು ತೀರ ಬಡ ಕುಟುಂಬದಲ್ಲಿ ಹುಟ್ಟಿದ ನಾನು ಬದುಕಿನಲ್ಲಿ ಮುಂದೆ ಬರಬೇಕು ಎಂದು ನಡೆಸಿದ ಹೋರಾಟದ ಹುಮ್ಮಸ್ಸು ನೆನೆದರೇ ಮೈ ಜುಮ್ ಎನ್ನಿಸುವಂತಹದು. ಆದರೆ ಇಂದು, ಗಳಿಸಿದ ಸ್ಥಾನದಿಂದ ಕೆಳಗೆ ಇಳಿಯುವುದರ ಕಲ್ಪನೆಯೂ ನಡುಕ ಹುಟ್ಟಿಸುತ್ತದೆ. ನಮ್ಮ ನಮ್ಮ ಕ್ರಾಂತಿಕಾರಕತೆಯ ಬಿಸಿ ಕ್ರಮೇಣ ಕಡಿಮೆಯಾಗುವುದರ ಕಾರಣ ಕೂಡ ಇದೇ ಇರಬಹುದೇ ? ನನ್ನನ್ನು ಕಾಡುತ್ತಿದ್ದದ್ದು ನೌಕರಿಯನ್ನು ಕಳಕೊಳ್ಳುವ ಭಯವಲ್ಲ. ಯಾಕೆಂದರೆ ಹೊಟ್ಟೆಹೊರಕೊಳ್ಳಲು. ಉಪಜೀವಿಸಲು ಏನಾದರೊಂದನ್ನು ಮಾಡಿಕೊಂಡಿರುವ ಧೈರ್ಯ ನನಗಿದೆ. ಧೈಹಿಕ ಶ್ರಮಕ್ಕೆ ನಾನು ಎಂದೂ ಹಿಂದೆಗೆದವನಲ್ಲ, ಹಾಗಾದರೆ ನೌಕರಿಯ ಬಗ್ಗೆ ವಿಚಾರಮಾಡಿದಾಗಲೆಲ್ಲ ಕರುಳಲ್ಲಿ ಹುಟ್ಟುವ ನಡುಕಕ್ಕೆ ಅರ್ಥವೇನು ? ಸಮಾಜದ ಕಣ್ಣಿನಲ್ಲಿ ಕೆಳಗಿಳಿಯುವ ಭಯವೇ ? ಮನುಷ್ಯನ ಮನಸ್ಸಿನ ಸ್ವಾಸ್ಥ್ಯಕ್ಕೆ ಅವಶ್ಯಕವಾದ ಹಲವು ಸಂಗತಿಗಳಲ್ಲಿ ನಾವು ನಮಗರಿವಿಲ್ಲದೇನೇ ಬಯಸುವ ಸಾಮಾಜಿಕ ಮನ್ನಣೆಯೂ ಒಂದಾಗಿರಬಹುದೇ ? ಆಶ್ಚರ್‍ಯ : ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿಯ ಒಬ್ಬೊಬ್ಬರನ್ನೇ ನೆನೆದರೆ ಅಥವಾ ಈ ಚಾಳಿನವರನ್ನು, ನಮ್ಮ ಜಾತಿಯವರನ್ನು_ಉದಾಹರಣೆಗೆ ಈ ಅರ್ಜುನ್‌ರಾವನನ್ನು ಇಲ್ಲ ಶ್ರೀನಿವಾಸನನ್ನು ಕಣ್ಣಮುಂದೆ ನಿಲ್ಲಿಸಿಕೊಂಡರೆ ಇವರು ನನ್ನ ಬಗ್ಗೆ ಮಾಡಿಕೊಂಡಿರಬಹುದಾದ ಕಲ್ಪನೆಗಳಿಗೆ ನಾನು ದಾದು ಕೊಡಲಾರೆನೆನ್ನುವ ಧೈರ್ಯ ನನಗಿದೆ. ಆದರೆ ಹೀಗೆ ಕಣ್ಣಮುಂದೆ ಬಿಡಿಬಿಡಿಯಾಗಿ ನಿಂತ ಜೀವಂತ ವ್ಯಕ್ತಿಗಳನ್ನೇ ಮೀರಿನಿಂತ ಅಮೂರ್ತವಾದ ಶಕ್ತಿಯೊಂದು ನನ್ನನ್ನು ನಡುಗಿಸುತ್ತದೆ ಎನ್ನುವದು ಮಾತ್ರ ನಿಜ. ಫಿರೋಜ್, ಶ್ರೀನಿವಾಸರ ಭಯದ ಸ್ವರೂಪ ಕೂಡ ಇಂತಹದೇ ಆಗಿರಬೇಕು. ಅದಕ್ಕೆ ನಾನು ಮೂಲವಾಗಿರಬೇಕು. ಅಂತೆಯೇ ಈ ನಿರ್ಮೂಲನದ ಸಂಚು.”

ಫ್ರೊ, ನಾಗನಾಥ್ ಜಿಂದಾಬಾದ್ ! ನಾಗಪ್ಪಾ, ಒಂದೂ ಮಗನೇ, ಹೇಡಿತನವನ್ನು ಇಷ್ಟೊಂದು ನಯನಾಜೂಕಿನಿಂದ ಸಮರ್‍ಥಿಸಿಕೊಳ್ಳುವುದನ್ನು ಯಾರಿಂದ ಕಲಿತೆಯೋ, ನಿನ್ನ ಬೂರ್ಜ್ವಾ ಮನೋಧರ್ಮದ ಅಪ್ಪಟ ದಾಖಲೆಯಲ್ಲವೋ ಇದು : ಕಳಕೊಳ್ಳುವ ಭಯ ! ಹೆದರ್ಪುಕ್ಕಾ, ಬರೇ ಅವಿತುಕೊಳ್ಳುವ ತಾಣ ಹುಡುಕುತ್ತ ಓಡುತ್ತಿರಬೇಡ. ಎಲ್ಲ ಪರಾರಿಗೂ ಕೊನೆಯೆಂಬುದಿರಬೇಕು. ಒಮ್ಮೆಯಾದರೂ ಸ್ವಸ್ಥಾನಕ್ಕೆ ಮರಳುವ ಧೈರ್ಯ ಮಾಡಬೇಕಪ್ಪಾ, ನಾಗಪ್ಪಾ, ರಾತ್ರಿ ಮಾಡಿಕೊಂಡ ನಿರ್ಧಾರವನ್ನು ದಿನಬೆಳಗಾಗುವುದರಲ್ಲಿ ಹೀಗೆ ಸಡಿಲುಗೊಳ್ಳಲು ಬಿಡಬಾರದು. ಬಿಗಿ ಹಿಡಿ ಬಿಗಿಯಾಗು. ಗಟ್ಟಿಯಾಗು. ಕವಚಕುಂಡಲಗಳನ್ನು ಕಳಚು. ನೀನೇ ನಿನ್ನ ಸುತ್ತ ಬೆಳೆಯಿಸಿಕೊಂಡ ಚಿಪ್ಪನೊಡೆದು ಹೊರಕ್ಕೆ ಬರಬೇಕು. ತೆರೆ. ತೆರೆದುಕೋ…
uಟಿಜeಜಿiಟಿeಜ
– ಅಧ್ಯಾಯ ಹನ್ನೆರಡು –

ನಸುಕಿನಲ್ಲಿ, ಬೆಳಕು ಹರಿಯುವ ಮೊದಲೇ ನಾಗಪ್ಪ ಬರೆಯಲು ಕೂತಿದ್ದ. ಬೆಳನ ಜಾವದ ಈ ಮುಹೂರ್ತವೊಂದೇ ತನ್ನ ಸೃಜನಶೀಲತೆಗೆ ಅತ್ಯಂತ ಉತ್ತೇಜಕವಾದದ್ದು ಎನ್ನುವ ಅನುಭವ ನಾಗಪ್ಪನಿಗೆ ಅನೇಕ ಸರತಿ ಬಂದಿದೆ. ನಿತ್ಯವ್ಯವಹಾರಗಳಲ್ಲಿ, ಅವುಗಳಿಂದಾಗಿ ಹುಟ್ಟುವ ರಾಗದ್ವೇಷಗಳಲ್ಲಿ, ಆತಂಕ_ದುಗುಡಗಳಲ್ಲಿ ತೊಡಕಿಕೊಂಡಿರದ ಮನಸ್ಸಿನ ಯಾವುದೋ ಆಳದ ಭಾಗ ತನ್ನ ಮಟ್ಟಿಗಂತೂ ಇಂತಹ ಹೊತ್ತಿನಲ್ಲಿ ಜಾಗೃತವಾಗಿರುತ್ತದೆಯೆಂದು ಮತ್ತೆ ಮತ್ತೆ ಅನ್ನಿಸಿದೆ. ಸೃಷ್ಟಿಕಾರ್ಯದಲ್ಲಿ ತೊಡಗಿರುವ ಮನಸ್ಸಿನ ಅಂಶ ನಿತ್ಯ ವ್ಯವಹಾರದಲ್ಲಿ ತೊಡಗಿರುವ ಮನಸ್ಸಿನಿಂದ ತೀರ ಬೇರೆಯಾದದ್ದು ಎನ್ನುವ ಅನ್ನಿಸಿಕೆ ಸ್ವಂತ ಅನುಭವದಲ್ಲೇ ಹುಟ್ಟಿದ್ದು : ಕಾರ್ಲ ಯುಂಗನನ್ನು ಓದಿಕೊಂಡದ್ದರಿಂದಷ್ಟೇ ಅಲ್ಲ. ಬರವಣಿಗೆಯಂತೆ ಓದು ಕೂಡ ಸೃಷ್ಠ್ಯಾತ್ಮಕ ಕ್ರಿಯೆಯೇ. ಅದೇನೇ ಇದ್ದರೂ ಮನುಷ್ಯನಿಗೆ ತನ್ನ ಮನಸ್ಸಿನ ಆರೋಗ್ಯಕ್ಕೆ, ತನ್ಮೂಲಕ ಹುಟ್ಟುವ ಅವನ ಕ್ರಿಯೆಯ ಆರೋಗ್ಯಕ್ಕೆ ಮನಸ್ಸಿನ ಈ ಕೇಂದ್ರದ ಸಂಪರ್ಕ ಅತ್ಯಾವಶ್ಯಕ ಎಂಬ ಅನ್ನಿಸಿಕೆ ಕೂಡ ನಾಗಪ್ಪನ ಅನುಭವದಲ್ಲೇ ಹುಟ್ಟಿದ್ದು :

“ಟಿಪ್ಪಣೆ ಹದಿನಾಲ್ಕು : ಮನಸ್ಸಿನ ಈ ಕೇಂದ್ರಕ್ಕೆ ಜೀವವಿಕಾಸದ ದೀರ್ಘಕಾಲದ ಇತಿಹಾಸದಲ್ಲಿ ಹುಟ್ಟಿಕೊಂಡ ಪ್ರವೃತ್ತಿ-ಬಲವಿದೆ. ಹಗೆಯ ವಿರುದ್ಧ ಹೋರಾಡುವ, ಜೀವ ರಕ್ಷಿಸಿಕೊಳ್ಳುವ ಪ್ರಾಣಿಗಳ ನೈಸರ್ಗಿಕ ಜಾಣತನದಂತೆಯೇ ಮನುಷ್ಯನಿಗೇ ವಿಶಿಷ್ಟವಾದ ಸೃಜನಶೀಲತೆ, ನೈತಿಕತೆ ಇವು ಕೂಡ ಈ ಕೇಂದ್ರದಲ್ಲೇ ಜನಿಸಿದವುಗಳು. ಮನುಷ್ಯನ ಸಾಮಾಜಿಕ ಜೀವನದಲ್ಲಿಯ ಇಂದಿನ ಅಧೋಗತಿಗೆ ಮುಖ್ಯ ಕಾರಣ ಇದೇ ಎಂದು ನನ್ನ ನಂಬಿಕೆ : ಈ ಸೃಷ್ಟಿಗೆ ಮೂಲವಾದ, ನೀತಿಗೆ ಮೂಲವಾದ ಈ ಪ್ರವೃತ್ತಿ-ಬಲವಿದ್ದ ಮನಸ್ಸಿನ ಕೇಂದ್ರದ ಸಂಪರ್ಕ ಕಳಕೊಂಡದ್ದು. ಇಂದಿನ ರಾಜಕಾರಣಿ ಈ ದುರಂತಕ್ಕೆ ಒಳ್ಳೆಯ ದೃಷ್ಟಾಂತ : ರಾಜಕಾರಣದ ಭ್ರಷ್ಟಾಚಾರದ ಮೂಲ ಹುಡುಕಬೇಕಾದರೆ ಆಧುನಿಕ ಔದ್ಯೋಗೀಕರಣದಿಂದಾಗಿ ಒದಗಿದ ಸೃಜನಶೀಲತೆಯ, ಆದ್ದರಿಂದಲೇ ನೈತಿಕತೆಯ, ನಷ್ಟಕ್ಕೇ ಬರಬೇಕು. ಒಂದು ದಿನ ಇದೆಲ್ಲವನ್ನು ಕುರಿತು ಒಂದು ದೀರ್ಘಲೇಖನ ಬರೆಯಬೇಕು. ಹುಬ್ಬಳ್ಳಿಯ ಸಣ್ಣ ಪತ್ರಿಕೆಯ ಸಂಪಾದಕನ ಸಣ್ಣ ಮನಸ್ಸಿನ ಬರವಣಿಗೆಗೆ ಸಮರ್ಪಕವಾದ ಉತ್ತರವಾದೀತು.”

ರಸ್ತೆಯ ಬದಿಯ ಬೋಳು-ಕಿಡಕಿಯಿಂದ ಕಾಣುವ ದೃಶ್ಯ ನಿತ್ಯ ಪರಿಚಯ ಆದರೂ ಹೊತ್ತಾರೆ ಅದೇ ಕಣ್ಣು ಬಿಡುತ್ತಿದ್ದ ತಂಪು ಬೆಳಕಿನಲ್ಲಿ ಪ್ರತಿ ಸರತಿ ಹೊಸದಾಗಿಯೇ ಕಂಡಿದೆ. ಹೊಸತನ ಬರೇ ಹೊರಗಿನ ದೃಶ್ಯದ್ದಲ್ಲ ತಾನೆ ! ತನ್ನ ಮಟ್ಟಿಗಂತೂ ನೋಡುವ ದೃಷ್ಟಿಗೂ ಈ ನಸುಕಿನ ಬೆಳಕು ತಂಪುಗಳಿಗೂ ಅನ್ಯೋನ್ಯ ಸಂಬಂಧವಿದೆ : ಇದಿರಿನಲ್ಲೇ ನಾಲ್ಕು ಮಜಲುಗಳ ಚಾಳು. ಅದರಲ್ಲಿ ಪಾರಿವಾಳದ ಗೂಡುಗಳಂತಹ ಎರಡೆರಡು ಕೋಣೆಗಳ ಮನೆಗಳು. (ಕಿಡಕಿಯ ಬಳಿ ನಿಂತರೆ ಕಿವಿತುಂಬುವ ಪಾರಿವಾಳಗಳ ಗುಟುರು : ಮೂಗನ್ನಡರುವ ಅವುಗಳ ಹೇಲಿನ ವಾಸನೆ ಇವುಗಳಿಂದಾಗಿಯೇ ಪಾರಿವಾಳಗಳ ಗೂಡು ನೆನಪಿಗೆ ಬಂದಿರಬಹುದೆ ?) ಅವುಗಳಲ್ಲಿ ಗಿಜಿಗುಡುವ ಜನಸಮುದಾಯ : ಆಗೀಗ ಕಿಡಕಿಯ ಹತ್ತಿರ ಬಂದು ಫಕ್ ಎಂದು ಪರಿಚಯದ ನಗು ಮೂಡಿಸುವ ಮುಖಗಳು : ನಗುವಾಗ ಹೊಳಪು ಮಿಂಚಿಸುವ ಹೆಣ್ಣು ಕಣ್ಣುಗಳು ! ತಳ ಮಜಲೆಯಲ್ಲಿ ಭೈಯಾನ ಹಾಲು ಮಾರುವ ಅಂಗಡಿ ; ತೆರೆದಷ್ಟೇ ಶೇಗಡಿಯ ಉರಿಯುವ ಕೆಂಡಗಳ ಮೇಲೆ ಕಾವಲಿಗೆಯಲ್ಲಿ ಕಾಯುತ್ತ ಕೆನೆಗಟ್ಟುವ ಹಾಲು. ಬದಿಯ ಅಂಗಡಿಯಲ್ಲಿ ಗೆಜ್ಜೆ ಗಿಲಿಗಿಲಿಸುತ್ತ, ಹಾಡುತ್ತ ಬೆವರು ಸುರಿಸುತ್ತ, ಕಬ್ಬಿನ ಹಾಲು ಅರೆಯುವ ಮರಾಠಾ ಗಾಣಿಗ. ಇವೆಲ್ಲವುಗಳ ಆಚೆ, ನೋಡಿದ ಪ್ರತಿಸಲ ತನಗೇ ಅರ್ಥವಾಗಿರದ ಮಾಂತ್ರಿಕಬಲದಿಂದ ಕಾಡಿದ_ಕಮ್ಮಾರನ ಶೆಡ್ಡಿನಲ್ಲಿ_ಧಗಧಗ ಕಾದ ಕಬ್ಬಿಣದ ಕಿಡಿ ಕಾರುವ ಕೆಂಪು ಜ್ವಾಲೆ : ನಾಗಪ್ಪನ ದೃಷ್ಟಿ ಅರಿವಾಗುವ ಮೊದಲೇ, ಧಗಧಗನೆ ಕಾಯುವ, ಮೆತ್ತಗಾಗುವ ಲೋಹದ ಮೇಲೇ ಊರಿದಾಗ ಜೀವದ ಆಳದಲ್ಲಿ ಮಾತಿಗೆ ನಿಲುಕದ ಭಾವನೆಗಳು ಹುಟ್ಟುತ್ತಿದ್ದವು. ಮುಂದಿನ ನೋಟಕ್ಕೆ ಹಳ್ಳಿಯ ಮೆರಗು ತಂದ ಅಶ್ವತ್ಥದ ಗಿಡವೊಂದೇ ಮಾನವ ನಿರ್ಮಿತ ನಿರ್ಜೀವ ಅವ್ಯವಸ್ಥೆಯ ನಡುವೆ ತಲೆ ಎತ್ತಿ ನಿಂತ ಜೀವಕಳೆಯ ಕುರುಹಾಗಿತ್ತು. ನೇಸರು ಮೇಲೆ ಬಂದೊಡನೆ ಅದರ ಎಳೆಬಿಸಿಲಲ್ಲಿ ತನ್ನ ಆಂತರ್ಯದ ಹಸಿರನ್ನೆಲ್ಲ ಹೊರಚೆಲ್ಲುವ ಅಲೌಕಿಕ ಮುಹೂರ್ತನನ್ನೇ ಕಾಯುತ್ತ, ಈಗ, ಕಪ್ಪು ಮೌನದಲ್ಲಿ ನಿಂತ ಆ ಗಿಡ ನಾಗಪ್ಪನಿಗೆ ಬಹಳ ಪ್ರಿಯವಾದದ್ದು. ಮರವನ್ನೇ ನೋಡುತ್ತ ನಿಂತಾಗ ಮನಸ್ಸಿನ ಮೂಲೆಯಲ್ಲಿ ಟಿಪ್ಪಣೆಯೊಂದು ಮೂಡಹತ್ತಿತು : ಆಮೇಲೆ ಬರೆದಿಡಬೇಕು ಎಂದುಕೊಂಡ : ‘ಊರೇ ಉರಿಯುತ್ತಿರುವಾಗ ಗುಲಾಬಿ ಗಿಡದ ಮೇಲೆ ಕವಿತೆ ಬರೆಯುವುದು ಮೂರ್ಖತನವೇನೋ (ಹಾಗೆ ನೋಡಿದರೆ ಕವಿತೆ ಬರೆಯುವುದೇ !) ಆದರೆ ಊರಿಗೆ ಬೆಂಕಿ ಏಕೆ ಹತ್ತಿತು ಎಂಬ ಮೂಲಭೂತ ಪ್ರಶ್ನೆಗೆ ಬಂದಾಗ ಮಾತ್ರ ಗುಲಾಬಿ ಗಿಡವನ್ನು ಮನುಷ್ಯ ಪ್ರೀತಿಸುವುದನ್ನೇ ಮರೆತದ್ದರಿಂದ ಎಂದು ಹೊಳೆಯದೇ ಇರದು,’ ಮನುಷ್ಯ ನಿಸರ್ಗವನ್ನು ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳಲು ಹತ್ತಿದ ರೀತಿಯಿಂದಾಗಿ ಕಳೆದ ನಾಲ್ಕು ಶತಮಾನಗಳಲ್ಲಿ ನಾವು ನಮ್ಮನ್ನೇ ನೋಡುವ ದೃಷ್ಟಿ ಕೂಡ : ಮುಂಬಯಿಯಂಥ ನಗರಗಳಲ್ಲಂತೂ ದೇವರು ಹುಟ್ಟಿಸಿದ ಸೃಷ್ಟಿ ಕಣ್ಣಿಗೆ ಬೀಳುವುದೇ ಕಷ್ಟವಾಗಿದೆ. ಎಲ್ಲೆಲ್ಲೂ ಇಂದಿನ ಮಾನವ, ತಾನೇ ತನ್ನ ಅಹಂಕಾರದ ಮೇಲೆ, ಸ್ವಾರ್ಥದ ಮೇಲೆ, ನಿಲ್ಲಿಸಿದ ನಿರ್ಜೀವ ವಸ್ತುಗಳಿಂದಲೇ ಸುತ್ತುವರಿಯಲ್ಪಟ್ಟಿದ್ದಾನೆ. ಆದ್ದರಿಂದಲೇ ತನ್ನೊಬ್ಬನ ಸ್ವಾರ್ಥಕ್ಕಾಗಿ ಉಳಿದವರನ್ನೂ_ಅವರೂ ನಿರ್ಜೀವ ವಸ್ತುಗಳೆ ಎನ್ನುವ ಹಾಗೆ_ಉಪಯೋಗಿಸಿಕೊಳ್ಳಲು ತೊಡಗಿದ್ದಾನೆ…

ಬರೆಯುವ ಮೂಡಿಗೆ ಬರುವ ಉದ್ದೇಶದಿಂದ ಕಿಡಕಿಯ ಹತ್ತಿರ ಬಂದು ನಿಂತರೆ ತನಗೇ ಅರಿವಾಗದಂತೆ ಮನಸ್ಸಿನ ಆಜ್ಞಾತಕೇಂದ್ರವೊಂದು ಫಿರೋಜ್ ನಡೆಸಲಿದ್ದ ವಿಚಾರಣೆಯನ್ನು ಕುರಿತೇ ಧೇನಿಸುತ್ತಿದ್ದಂತಿತ್ತು : ತನಗೂ ಕಾರಖಾನೆಯಲ್ಲಿ ನಡೆದ ಅಪಘಾತಕ್ಕೂ ಸಂಬಂಧ ! ನಂಬುವ ಮಾತೆ ? ಅದು ಘಟಿಸಿದಾಗ ತಾನು ಹೈದ್ರಾಬಾದಿನಲ್ಲೇ ಇದ್ದಿರಲಿಲ್ಲ. ಮುಂಬಯಿಯ ಮುಖ್ಯ ಕಚೇರಿಗೆ ವರ್ಗವಾಗಿ ಆಗಲೇ ಮೂರು ತಿಂಗಳ ಮೇಲಾಗಿತ್ತು. ನಾಗಪ್ಪನ ಮೋರೆಯ ಮೇಲೆ ಅಪನಂಬಿಕೆಯ ಮುಗುಳುನಗೆ ಮೂಡಿತು. ಅದರ ಗರ್ಭದಲ್ಲೇ ಬಿಗಿದ ಮುಷ್ಟಿಯನ್ನು ಬಿಚ್ಚಿದ ಆತಂಕ : ಎಲ್ಲ ಬಿಟ್ಟು ಈ ಅಪಘಾತದಲ್ಲೇ ತನ್ನನ್ನು ಸಿಲುಕಿಸುವ ಉದ್ದೇಶವೇನು ? ಅದೂ ಈಗ ? ಸರಕಾರೀ ವಿಚಾರಣೆ ಮುಗಿದು ಮೃತರ ಕುಟುಂಬಗಳಿಗೆ ತಮ್ಮ ಕಂಪನಿಯಿಂದ, ಇನ್ಶೂರೆನ್ಸ್ ಕಂಪನಿಯಿಂದ ಸಿಗಬೇಕಾದ ಕಾಂಪನ್ಸೇಶನ್ ಕೂಡ ಕೊಡಿಸಿಯಾದ ಮೇಲೆ ! ಈ ಅಪಘಾತದಲ್ಲಿ ಯಾವುದೇ ದುಷ್ಟ ಒಳಸಂಚಾಗಲೀ, ಕಂಪನಿಯವರ ಅಜಾಗರೂಕತೆಯಾಗಲೀ, ಇರಲಿಲ್ಲ ಎಂಬಂತೆ ಫ್ಯಾಕ್ಟರಿ ಇನ್ಸ್ಪೆಕ್ಟರರೇ ಕೊಟ್ಟ ಹೇಳಿಕೆ ಪತ್ರಿಕೆಗಳಲ್ಲಿ ಪ್ರಕಟವಾದ ಮೇಲೆ ! ಅಪಘಾತಕ್ಕೆ ಕಾರಣವಾದದ್ದರಲ್ಲಿ ಕಂಪನಿಯವರ ಅಜಾಗರೂಕತೆಯ ಸಮಾವೇಶವಿಲ್ಲ ಎನ್ನುವುದರಲ್ಲಿ ನಾಗಪ್ಪನಿಗೆ ಮಾತ್ರ ಎಳ್ಳಷ್ಟೂ ವಿಶ್ವಾಸವಿರಲಿಲ್ಲ ; ವಿಶ್ವಾಸ ಇರಲಿಲ್ಲ ಎನ್ನುವುದು ಕಂಪನಿಯಲ್ಲಿ ಅನೇಕರಿಗೆ ಗೊತ್ತಿತ್ತು.

ಮಿಥಾಯ್ಲ್ ಇಥಾಯ್ಲ್ ಕೀಟೋನ್‌ನಿಂದ ಪೆರೋಕ್ಸಾಯ್ಡ್ ತಯಾರಿಸುವ ವಿಭಾಗದಲ್ಲಿ ನಡೆದ ಅನಾಹುತವಿದು.ಈ ಪೆರೋಕ್ಸಾಯ್ಡ್‌ದ ಉತ್ಪಾದನೆ ಇರಲಿ ಅದರ ಶೇಖರಣೆ ಹಾಗು ಸಾಗಾಟ ಕೂಡ ತುಂಬ ಗಂಡಾಂತರದ್ದು. ಯಾಕೆಂದರೆ, ಇದರ ಆಸ್ಪೋಟನಕ್ಕೆ ಬೆಂಕಿಯ ಸ್ಪರ್ಶವೇ ಬೇಕೆಂದಿಲ್ಲ. ಘರ್ಷಣೆಯಿಂದ ಇಲ್ಲವೇ ಒಮ್ಮೆಲೇ ಆದ ಅಪಘಾತದಿಂದ ತನ್ನಷಕ್ಕೇ ಸ್ಪೋಟಗೊಳ್ಳಬಹುದು. ಇದು ಈ ವಿಭಾಗದ ತಾಂತ್ರಿಕ ಅಧಿಕಾರಿಗಳಿಗೆ ಗೊತ್ತಿದ್ದೂ ಅಲ್ಲಿಯ ಕೆಲಸಗಾರರಿಗೆ ಈ ವಿಷಯದಲ್ಲಿ ಸಾಕಾಷ್ಟು ತರಬೇತಿಯನ್ನು ಕೊಟ್ಟಿರಲಿಲ್ಲ. ಪೆರೋಕ್ಸಾಯ್ಡ್ ಯಾವ ಒಂದು ಉಪಯೋಗಕ್ಕಾಗಿ ಮಾರಾಟವಾಗುತ್ತಿತ್ತೋ ಆ ಉಪಯೋಗಕ್ಕೆ ಸಾಕಷ್ಟು ನಿರುಪದ್ರವಿಯಾಗುವ ಹಾಗೆ ಥೆಲೇಟ್ ಪ್ಲೆಸ್ಟಿಸೈಝರಿನೊಂದಿಗೆ ಬೆರೆಸಿ, ಸ್ಪೋಟದ ಭಯ ಆದಷ್ಟು ಕಡಿಮೆಯಾಗಲೆಂದು ಪೋಲೀ‌ಎಥಿಲೀನದ ಬಾಟಲಿಗಳಲ್ಲಿ, ಕಾರ್‍ಬೊಯ್ಸ್‌ಗಳಲ್ಲಿತುಂಬಿಡುತ್ತಿದ್ದರು. ಪ್ಲೆಸ್ಟೀಸೈಝರಿನಿಂದ ಕ್ರಮೇಣ ಮುಕ್ತವಾದ ಪೆರೋಕ್ಸಾಯ್ಡ್ ವಾಯುವಿನ ಒತ್ತಡ ಒಳಗೆ ಬೆಳೆಯದ ಹಾಗೆ ಈ ಬಾಟಲಿ ರಚನೆ ಇರುತ್ತದೆ. ಹೀಗೆ ತುಂಬಿದ ಕಾರ್‍ಬೊಯ್ಸ್ ಹಾಗೂ ದೊಡ್ಡ ಬಾಟಲಿಗಳನ್ನು ಕಾರಖಾನೆ ಮುಖ್ಯ ಕಟ್ಟಡಗಳಿಂದ ದೂರವಾದ ಒಂದು ಜಾಗದಲ್ಲಿ ಸಿಮೆಂಟ್ ಕಾಂಕ್ರೀಟಿನಲ್ಲಿ ಕಟ್ಟಿಸಿದ ನೆಲಮನೆಯಲ್ಲಿ ಶೇಖರಿಸಿಡುತ್ತಾರೆ. ಗ್ರಾಹಕರಿಂದ ಆರ್ಡರ್ ಬಂದಾಗ ಅವು ಈ ನೆಲಮನೆಯಿಂದಲೇ ರವಾನೆಯಾಗುತ್ತವೆ. ಈ ವಿಷಯದಲ್ಲಿ ಕಾರಖಾನೆಯ ಅ ಟೆಕ್‌ನಿಕಲ್ ಮ್ಯಾನೇಜರ್ ಹಾಗೂ ಫ್ಯಾಕ್ಟರೀ ಮ್ಯಾನೇಜರರು ಸಾಕಷ್ಟು ಜಾಗರೂಕತೆಯನ್ನು ತೆಗೆದುಕೊಂಡಿದ್ದರು. ಆದರೆ ಈ ಜಾಗರೂಕತೆ ಹೆಚ್ಚಾಗಿ ಕಾರಖಾನೆಯ ಆಸ್ತಿಯನ್ನು ರಕ್ಷಿಸುವುದರ ಬಗ್ಗೆ ಆಗಿತ್ತೇ ಹೊರತು ಆ ವಿಭಾಗದಲ್ಲಿ ಕೆಲಸ ಮಾಡುವ ಕಾರ್‍ಮಿಕರ ಆರೋಗ್ಯ ಹಾಗೂ ಜೀವರಕ್ಷಣೆಯ ಬಗ್ಗೆ ಆಗಿರಲಿಲ್ಲ. ನಾಗಪ್ಪ ತನ್ನ ದುಗುಡ, ಅಸಮಧಾನಗಳನ್ನು ಅನೇಕ ಸಂದರ್ಭಗಳಲ್ಲಿ ತನ್ನ ಸಹೋದ್ಯೋಗಿಗಳ ಇದಿರು ವ್ಯಕ್ತಪಡಿಸಿದ್ದ : ಸಂಬಂಧಪಟ್ಟ ಮೇಲಾಧಿಕಾರಿಗಳು ಇವನ ಅಸಮಾಧಾನವನ್ನು ಕಿವಿಯಲ್ಲಿ ಹಾಕಿಕೊಳ್ಳುವ ಬದಲು ಇವನ ಬಾಯನ್ನೇ ಮುಚ್ಚುವ ಪ್ರಯತ್ನ ಮಾಡಿದ್ದರು. ಪ್ರಕರಣ ಡಿ.ಎಮ್.ಡಿ.ಅವರ ತನಕ ಹೋದಾಗ ನಿನಗೆ ಸಂಬಂಧವಿಲ್ಲದ ವಿಷಯಗಳಲ್ಲಿ ನಿನ್ನ ಹೊಲಸು ಬಾಯಿ ತೆರೆಯಬೇಡ ಎಂದು ಇವನನ್ನೇ ಗದರಿಸಿದ್ದರು.

ತಂತ್ರ ವಿಜ್ಞಾನದ ಪ್ರಾವೀಣ್ಯದಲ್ಲಿ ನಾಗಪ್ಪನನ್ನು ಸರಿಗಟ್ಟುವ ಇನ್ನೊಬ್ಬ ಇಡೀ ಕಾರಖಾನೆಯಲ್ಲೇ ಇಲ್ಲ ಎನ್ನುವ ಪ್ರತೀತಿ ಇದ್ದರೂನೂ ಈತ ತುಂಬಾ ಭಾವನಾಪ್ರಧಾನಿಯಾದವನು. ವ್ಯವಹಾರಜ್ಞಾನವಿಲ್ಲದವನು ಎನ್ನುವ ಅಭಿಪ್ರಾಯವೊಂದು ಮೇಲಿನ ಅಧಿಕಾರಿಗಳಲ್ಲಿ ನೆಲೆಗೊಂಡಿತ್ತು. ಇವನು ವ್ಯಕ್ತಪಡಿಸಿದ ಭಯಗಳು ಕಾರ್ಮಿಕರ ಸಂಘದ ಪದಾಧಿಕಾರಿಗಳ ಕಿವಿಗೆ ಮುಟ್ಟಿದರಂತೂ ಅವರಿಂದಾಗಿ ಉದ್ಭವಿಸಬಹುದಾದ ತೊಂದೆರಗಳ ಕಲ್ಪನೆಯಿದ್ದ ಮ್ಯಾನೇಜ್‌ಮೆಂಟ್‌ಗೆ ಇವನ ‘ಧಡ್ಡತನದ ಅಧಿಕಪ್ರಸಂಗ’ ಸೇರದೇ ಇದ್ದದ್ದು ಸಹಜವಿತ್ತು. ಆದರೆ ನಾಗಪ್ಪನ ದೃಷ್ಟಿಯಲ್ಲಿ ಕಾರ್ಮಿಕರ ಜೀವಕ್ಕೆ ಅಪಾಯ ತರುವಂತೆ ಕೆಲಸ ಮಾಡುವ ರೀತಿ ಅನಿವಾರ್ಯವಾಗಿದ್ದಾಗಿರದೆ ಡಿ. ಎಮ್. ಡಿ ಹಾಗೂ ಅವರ ಚೇಲಾರ ತಿಳಿಗೇಡಿತನದ ಮೇಲೆ ನಿಂತದ್ದಾಗಿತ್ತು. ಇಂಗ್ಲೆಂಡ್, ಜರ್ಮನಿ ಹಾಗೂ ಅಮೇರಿಕೆಗಳಲ್ಲಿ ಇಂತಹ ಪೆರೋಕ್ಸಾಯಿಡ್ ವಿಷಯದಲ್ಲಿ ವಹಿಸಬೇಕಾದ ಎಚ್ಚರಿಕೆಯ ಉಪಾಯಗಳ ಬಗ್ಗೆ ಬರೆದ ಮೆನ್ಯು‌ಅಲ್ಸ್‌ಗಳನ್ನು ತರಿಸಿ ಅವುಗಳನ್ನು ಡಿ. ಎಮ್. ಡಿ. ಹಾಗೂ ಎಮ್. ಡಿ. ಇಬ್ಬರಿಗೂ ಕಳಿಸಿದ್ದ, ಕಳಿಸಿದ್ದನಷ್ಟೇ ಅಲ್ಲ. ಹಾಗೆ ಕಳಿಸಿದ್ದೇನೆ ಎನ್ನುವುದನ್ನು ನಮೂದಿಸಿ ಟಾಯಿಪ್ ಮಾಡಿದ ಮೆಮೋಗಳ ಜೆತೆ ಕಳಿಸಿದ್ದ. ಅದು ಕೈಗೆ ಸಿಕ್ಕ ದಿನ ಡಿ. ಎಮ್. ಡಿ. ಯವರ ಅವತಾರ ನೋಡುವ ಹಾಗಿತ್ತು : ತನ್ನನ್ನು ತಮ್ಮ ಕೆಬಿನ್ನಿಗೆ ಕರೆದು ಸಿಟ್ಟಿನಿಂದ ಬೈದ ರೀತಿಯನ್ನು ನೆನೆಯಲೂ ನಾಗಪ್ಪ ಹಿಂದೆಗೆಯುತ್ತಾನೆ. ತನ್ನ ಮೆಮೋ ನೇರವಾಗಿ ಎಂ. ಡಿ. ಅವರಿಗೇ ಬರೆದದ್ದಾಗಿತ್ತು. ಎನ್ನುವುದು ಆ‌ಒ‌ಆ ಅವರ ಸಿಟ್ಟಿಗೆ ಕಾರಣವಾದಂತಿತ್ತು : “ಆoಟಿ’ಣ ಣಡಿಥಿ ಣo be ಣoo smಚಿಡಿಣ. ಙou ಡಿeಠಿoಡಿಣ ಣo me ಚಿಟಿಜ ಟಿoಣ ಣo ಣhe ಒ‌ಆ. ಖemembeಡಿ ಣhಚಿಣ.”_ ಫಿರೋಜ್ ಗರ್ಜಿಸಿದ್ದ. ಆದರೆ ಪ್ರಕರಣ ಅಷ್ಟಕ್ಕೇ ಮುಗಿಯಲಿಲ್ಲ. ಫಿರೋಜ್ ಈತನನ್ನು ಬೈದು ಕಳಿಸಿದ್ದರ ಸುದ್ದಿ ಕಾರಖಾನೆಯ ತುಂಬ ಹರಡಿತು. ಅದು ಮೊದಲೇ ಸಿದ್ದವಾದ ಪಿತೂರಿಯ ಅಂಗವಾಗಿತ್ತು. ಸ್ವತಃ ಫ್ಯಾಕ್ಟರಿ ಮ್ಯಾನೇಜರರೇ ಈ ಸುದ್ದಿಗೆ ಕಾರಣವಾಗಿದ್ದರು ಎನ್ನುವದು ನಾಗಪ್ಪನಿಗೆ ತಿಳಿದದ್ದು ತೀರ ತಡವಾಗಿ. ತುಂಬ ನೊಂದುಕೊಂಡ : ಕಾರಖಾನೆಯ ಆಫೀಸರರಿಂದ ಹಿಡಿದು ಚೌಕೀದಾರ, ಪೇದೆಗಳು, ಎಲ್ಲ ತರಗತಿಯ ಕಾಮಗಾರರವರೆಗೆ ಖ&ಆ ಮ್ಯಾನೇಜರರು ಆ‌ಒ‌ಆ ಯವರಿಂದ ಚೆನ್ನಾಗಿ ಗದರಿಕೊಂಡರಂತೆ ಎನ್ನುವಂತಹ ಸುದ್ದಿ ಹರಡಿದ ಕೆಲವು ದಿನ ಫ್ಯಾಕ್ಟರಿಯಲ್ಲಿ ತಲೆ ಎತ್ತಿ ನಡೆಯುವುದೇ ಕಷ್ಟವಾಯಿತು. ನಾಗಪ್ಪನ ಸೂಕ್ಷ್ಮಮತಿಗೆ ಪೆಟ್ಟು ತಗಲಿದ್ದು ತನ್ನ ಬಗ್ಗೆ ಇವರೆಲ್ಲರಿಗೆ ತುಂಬ ಆದರ ಅಭಿಮಾನಗಳಿವೆ ಎಂದು ಬಗೆದ ಎಡ್ಮಿನಿಸ್ಟ್ರೇಟಿವ್ ಆಫೀಸಿನೊಳಗಿನ ಹುಡುಗಿಯರು ಕೂಡ ತನ್ನತ್ತ ವಿಚಿತ್ರವಾಗಿ ನೋಡಿ ಒಳಗೊಳಗೇ ನಗುತ್ತಾರೆ ಎಂಬ ಭಾವನೆ ಹುಟ್ಟಿದಾಗ ಟೆಲಿಫೋನ್ ಆಪರೇಟರ್ ರೀನಾ ಒಬ್ಬಳು ಮಾತ್ರ ಇದಕ್ಕೆಲ್ಲ ಅಪವಾದವಾಗಿದ್ದಳು : ಒಂದು ದಿನ ಬೆಳಿಗ್ಗೆ ಇಂಟರ್‍ಕಾಮಿನ ಮೇಲೆ : ‘ಆoಟಿ’ಣ ತಿoಡಿಡಿಥಿ ಞeeಠಿ ಥಿouಡಿ ಛಿooಟ ಚಿಟಿಜ ಞeeಠಿ smiಟಟiಟಿg. ಇveಡಿಥಿಣhiಟಿg ತಿiಟಟ be ಚಿಟಟ ಡಿighಣ” ಎಂದಿದ್ದಳು. ತೀರ ಅನಿರೀಕ್ಷಿತವಾಗಿ ಬಂದ ಈ ಆತ್ಮೀಯ ಮಾತುಗಳಿಂದ ನಾಗಪ್ಪನ ಕಣ್ಣು ತೇವಗೊಂದು ದನಿ ಗದ್ಗದಿತವಾಗಿತ್ತು. ಇದಿರಿನ ಕುರ್ಚಿಯಲ್ಲಿ ಅದೇ ಬಂದು ಕುಳಿತ ಜಲಾಲ್ ಹುಸೇನ ತನ್ನನ್ನೇ ನೋಡುತ್ತಿದ್ದಾನೆ ಎಂಬುದರ ಪರಿವೆ ಮಾಡದೇನೇ : “ಖಿhಚಿಟಿಞ ಥಿou, ಖiಟಿಚಿ. ಖಿhಚಿಟಿಞ ಥಿou so muಛಿh. Iಣ is so sತಿeeಣ oಜಿ ಥಿou ಚಿಟಿಜ I ಟಿeeಜ ಥಿouಡಿ….” I ಟಿeeಜ ಥಿouಡಿ gooಜ ತಿishes ಎನ್ನುವುದರಲ್ಲಿದ್ದ ನಾಗಪ್ಪನ ವಾಕ್ಯ ಅರ್ಧಕ್ಕೇ ಉಳಿದಿತ್ತು. ಬಹುಶಃ ಅದೇ ಆಗ ಆ‌ಒ‌ಆ ಆಫೀಸು ಹೊಕ್ಕಿರಬೇಕು ಇಲ್ಲ ಟೆಲಿಫೋನ್ ಕರೆ ಬಂದಿರಬೇಕು : ರೀನಾ ಇಂಟರ್‍ಕಾಮ್ ಕೆಳಗೆ ಇಟ್ಟುಬಿಟ್ಟಿದ್ದಳು. ನಾಗಪ್ಪನಿಗೂ ರಿಸೀವರ್ ಕೆಳಗಿಡುವಾಗ ತನ್ನ ವಾಕ್ಯ ಪೂರ್ತಿಯಾಗದೇ ಉಳಿದದ್ದಕ್ಕೆ ಕೆಡುಕೆನಿಸಿದರೂ ಒಂದು ಬಗೆಯ ಉತ್ಸಾಹ ಅವನ ಮೋರೆಯ ಮೇಲೆ ಸ್ಪಷ್ಟವಾಗಿ ಮೂಡಿತ್ತು. ಜಲಾಲನಿಂದ ಬಂದ ಪ್ರಶ್ನೆಯಲ್ಲಿಯ ಕೊಂಕು ಕೂಡ ಅಷ್ಟೇ ಸ್ಪಷ್ಟವಾಗಿತ್ತು : “ಬೆಳಗಾಗುತ್ತಲೇ ಸಿಹಿ ಬೇಡುವ …”ನಾಗಪ್ಪ ನೋವು ತುಂಬಿದ ದನಿಯಲ್ಲಿ, “ಜಲಾಲ್, ಪ್ಲೀಜ್, ಪ್ರತಿಯೊಂದಕ್ಕೂ ಅಪಾರ್ಥ ಹಚ್ಚಬೇಡ. ಕಳೆದ ಕೆಲವು ದಿನಗಳಿಂದ ನಾನು ಪಡುತ್ತಿದ್ದ ಮಾನಸಿಕ ಯಾತನೆ ನನಗೊಬ್ಬನೆಗೇ ಗೊತ್ತು. ಇಂದೇ ಮೊದಲೊಮ್ಮೆ ದಿನದ ಆರಂಭದಲ್ಲಿಯೇ ಸಹಾನುಭೂತಿಯ ಮಾತುಗಳನ್ನು ಕೇಳಿದ್ದು,” ಅಂದ. ತನ್ನ ದನಿಯಲ್ಲಿಯ ಮಾರ್ದವತೆಗೆ ತಾನೇ ಮುಜುಗರ ಪಟ್ಟ. ಜಲಾಲ್ ಹಿಂದೆಗೆಯಲಿಲ್ಲ : “ಮೇಲಾಗಿ ರೀನಾ ಬಹಳೇ ಸಿಹಿಯಾದ ಹುಡುಗಿ…”

ಜಲಾಲನ ಅಸೂಯೆ ತುಂಬಿದ ಈ ಮಾತುಗಳಿಂದ ತೆಲೆಕೆಡಿಸಿಕೊಳ್ಳುವ ಮನಸ್ಸಾಗದೇ ನಾಗಪ್ಪ ಕುರ್ಚಿಯಿಂದ ಎದ್ದು ಕ್ಯಾಬಿನ್ನಿನ ಕಿಡಕಿಗೆ ಬಂದ. ಹೊತ್ತಿಗೆ ಮೊದಲೇ ಬಂದ ನಾಗಪ್ಪ ದಿನದ ಕೆಲಸದತ್ತ ಲಕ್ಷ್ಯ ಹರಿಸಲು ಇನ್ನೂ ಮೂರು ಮಿನಿಟುಗಳಾದರೂ ಇದ್ದವು. ಅದಾಗಲೇ ಅವಸರ ಅವಸರವಾಗಿ ಲೆಬೋರೇಟರಿಯನ್ನು ಹೋಗುತ್ತಿದ್ದ ಸಹೋದ್ಯೋಗಿಗಳತ್ತ ನೋಡುತ್ತ ಸುಖವಾಗಿ ಮುಗುಳುನಕ್ಕ. ಕಿಡಕಿಯ ಕೆಳಗಿನ ದಾಸಾಳದ ಗಿಡದಲ್ಲಿ ಕೆಂಪಗೆ ಬಾಯಿ ತೆರೆದು ನಿಂತ ಹೂಗಳನ್ನು ಇದೇ ಮೊದಲಬಾರಿ ನೋಡುತ್ತಿದ್ದವನ ಹಾಗೆ ನೋಡುತ್ತ ನಿಂತ. ನಸುಕಿನಲ್ಲಿ ಮಾಣಿ ಹಾಕಿದ ನೀರಿನಿಂದ ಗಿಡ ಒದ್ದೆಯಾಗಿತ್ತು. ಸ್ವಚ್ಛವಾಗಿತ್ತು. ಬೆಳಗಿನ ಟಪಾಲು ತಂದ ಪೇದೆ ಕ್ಯಾಬಿನ್ ಹೊಕ್ಕ ಸದ್ದು ಕೇಳಿಸಿ ಈಚೆಗೆ ಬಂದ. ಟೇಬಲ್ಲಿನ ಮೇಲೆ ಕಾಗದ-ಪತ್ರಗಳ ದೊಡ್ಡ ರಾಶಿಯನ್ನೇ ಇಡುತ್ತ, ಅನೇಕ ದಿನಗಳ ಮೇಲೆ, ಪ್ರಥಮ ಬಾರಿ ಎನ್ನುವಂತೆ, ಅವನಿಗೆ ಸಲಾಮು ಹೊಡೆದು ಆದರ ವ್ಯಕ್ತಪಡಿಸುತ್ತ ಮುಗುಳುನಕ್ಕ. ರಾಶಿಯೊಳಗಿನ ಒಂದು ಪತ್ರವನ್ನು, ಅವನ ಲಕ್ಷ್ಯ ಸೆಳೆಯುವ ಹಾಗೆ ಎಲ್ಲಕ್ಕೂ ಮೇಲಿಡುತ್ತ ಅದರ ಮೇಲೆ ದಿನದ ಅಭ್ಯಾಸದಿಂದ ಪೇಪರ್‍ವೇಟ್ ಇಡುವಷ್ಟರಲ್ಲಿ_ಜಲಾಲ್ ಆ ದಪ್ಪವಾದ ಲಕ್ಕೋಟೆಯ ಮೇಲಿನ ಇಲೆಕ್ಟ್ರಿಕ್ ಟೈಪ್‌ರೈಟರ್ ಮೇಲೆ ಟೈಪ್ ಮಾಡಿದ ವಿಳಾಸದಿಂದಲೇ ಅದು ಒ‌ಆ ಯವರು ಹೆಡ್ ಆಫೀಸಿನಿಂದ ಬರೆದದ್ದು ಎಂದು ಗುರುತಿಸಿ_“ಓಹ್ !ಒ‌ಆ ಯವರ ಪತ್ರ Peಡಿsoಟಿಚಿಟ & ಛಿoಟಿಜಿiಜeಟಿಣiಚಿಟ ’ ಎಂಬ ಶರಾ ಬೇರೆ ಇದೆ.” ಎಂದ, ಪೇದೆಯ ಮೋರೆಯ ಮೇಲಿನ ಆದರಕ್ಕೆ ಇದೇ ಕಾರಣವಾಗಿರಬಹುದೆ ? ರೀನಾ ಅನಿರೀಕ್ಷಿತವಾಗಿ ಮಾತನಾಡಿಸಿದ್ದಕ್ಕೂ… ? ನಾಗಪ್ಪಾ ಸಾಶಂಕನಾದ>

ಒ‌ಆ ಯವರು ನಾಗಪ್ಪನ ಬಗ್ಗೆ ಇಟ್ಟುಕೊಂಡ ವಿಶೇಷ ಆಸ್ಥೆ ಫ್ಯಾಕ್ಟರಿಯಲ್ಲೆಲ್ಲ ಜನಜನಿತವಾಗಿತ್ತು. ಇದೇ ಕಾರಣವಾಗಿತ್ತು. ಪತ್ರದಲ್ಲಿ ಎಂತಹ ಸುದ್ದಿಯಿರಬಹುದೋ ! ಅನೇಕರ_ ಆ‌ಒ‌ಆ ಯವರನ್ನೂ ಹೊರತುಪಡಿಸದೇ_ಅಸೂಯೆಗೆ ಕಾರಣವಾಗಿತ್ತು. ಪತ್ರದಲ್ಲಿ ಎಂತಹ ಸುದ್ದಿಯಿರಬಹುದೋ ! ಇಲ್ಲಿಯ ಪ್ರಕರಣ ಅವರ ಕಿವಿಗೂ ಮುಟ್ಟಿರಬಹುದೆ ? ಅಥವಾ….ನಾಗಪ್ಪನ ಮೋರೆಯ ಮೇಲೆ ದುಗುಡದ ಭಾವನೆ ಪ್ರಕಟವಾಗುವ ಹೊತ್ತಿಗೆ ಪೇದೆ ಕೋಣೆಯಿಂದ ಹೊರಟು ಹೋಗಿದ್ದ. ಜಲಾಲನ ಲಕ್ಷ್ಯ ಮಾತ್ರ ಇನ್ನೂ ಆ ಪತ್ರದ ಮೇಲೇ ಇತ್ತು. ನಾಗಪ್ಪ ಆತಂಕ ತುಂಬಿದ ಉತ್ಸುಕತೆಯಿಂದ ಲಕ್ಕೋಟೆಯ ಬಾಯಿ ಹರಿದು ಪತ್ರವನ್ನೂ ಹೊರತೆಗೆದು ಓದಹತ್ತಿದ. ಓದುತ್ತ ಹೋದ ಹಾಗೆ ಅವನ ಮೋರೆಯ ಮೇಲೆ ಸಂತೋಷ ಅರಳುತ್ತಹೋಯಿತು. ಓದಿ ಮುಗಿಸಿದ ಕೂಡಲೇ ಜಲಾಲನು ಅಪ್ಪಿಬಿಡುವವನ ಹಾಗೆ ಅವನ ಹತ್ತಿರ ಹೋಗಿ_“ಗೆಳೆಯಾ, ಕೊನೆಗೊಮ್ಮೆ ನಾನು ದಾರಿಕಾಯುತ್ತಿದ್ದ ಖುಶಿಯಸುದ್ದಿ_ I ಚಿm goiಟಿg ಣo ಣhe U. S. ಜಿoಡಿ ಣಡಿಚಿiಟಿiಟಿg. ಅಷ್ಟೇ ಅಲ್ಲ, ಈ ವರ್ಷ ಹವಾಯಿಯಲ್ಲಿ ನಡೆಯುವ ಟೆಕ್ನಾಲಾಜಿ ಕಾನ್ಫರೆನ್ಸಿಗೆ ಹಿಂದುಸ್ಥಾನದ ಈ ಕಂಪನಿಯಿಂದ ನನ್ನನ್ನು ಆರಿಸಿದ್ದಾರೆ.” ಎಂದ. “ Woಟಿಜeಡಿಜಿuಟ, ಅoಟಿgಡಿಚಿಣs. ನೋಡೋಣ. ನಾನೂ ಓದಲೇ ?” ಜಲಾಲ ಪತ್ರಕ್ಕಾಗಿ ಕೈ ಮುಂದೆ ಮಾಡಿದ.

ನಾಗಪ್ಪನ ದುರ್ದೈವದ ಕತೆ ಇಲ್ಲೇ ಆರಂಭವಾಗಿತ್ತು. ಆನಂದಾತಿಶಯದ ಭರದಲ್ಲಿ, ಹಿಂದುಮುಂದಿನ ವಿಚಾರ ಮಾಡುವ ಮೊದಲೇ, ಆ ಪತ್ರವನ್ನು ಜಲಾಲನ ಕೈಯಲ್ಲಿತಾನಾಗಿಯೇ ಇರಿಸಿಬಿಟ್ಟ_ಲಕ್ಕೋಟೆಯ ಮೇಲೆ ‘Peಡಿsoಟಿಚಿಟ & ಅoಟಿಜಿiಜeಟಿಣiಚಿಟ’ ಎಂದು ಬರೆದದ್ದನ್ನೂ ಮರೆತು. ಇದಾದ ಕೆಲವು ವಾರಗಳಲ್ಲೆ ಖ&ಆ ಕೆಲಸದಿಂದ ಮುಂಬಯಿಯ ಹೆಡ್‌ಆಫೀಸಿಗೆ ಬದಲಿಯಾಗಿತ್ತು_‘ಒಚಿಟಿಚಿgeಡಿ, Sಠಿeಛಿiಚಿಟ ಂssigಟಿmeಟಿಣ’ ಎಂಬ, ತನಗಾಗಿಯೇ ಹುಟ್ಟಿಸಿದಂತಿದ್ದ, ಹೊಸ ಸ್ಥಾನಕ್ಕೆ, ಖುದ್ದು ಒ‌ಆ ಯವರ ಕೈಕೆಳಗೆ ಕಲಸ ಮಾಡುವ ಅನುವು ಒಂದೇ ಅಮಾಧಾನಕ್ಕೆ ಕಾರಣವಾಗಿತ್ತು. ಆದರೆ ಇಲ್ಲಿ ಬಂದಂದಿನಿಂದ ಒ‌ಆ ಯವರಿಗೆ ತನ್ನ ಬಗೆಗಿನ ಆಸ್ಥೆ ಕಡಿಮೆಯಾಗಿದೆಯೆ ? ಅಮೇರಿಕೆಯ ಯೋಜನೆ ಮುಂದೆ ಬೀಳುತ್ತಿದ್ದುದಕ್ಕೆ ಇದೇ ಕಾರಣವಿರಬಹುದೇ ?

ನಾಗಪ್ಪನಿಗೆ ಎಲ್ಲವೂ ಅಸ್ಪಷ್ಟ.
uಟಿಜeಜಿiಟಿeಜ
– ಅಧ್ಯಾಯ ಹದಿಮೂರು –

ಖೇತವಾಡಿಯ ಮುಂಜಾವಿನ ಚಟುವಟಿಕೆಗಳು ಆಗಲೇ ಆರಂಭವಾಗಿದ್ದವು. ಮನೆಮನೆಗೆ ಎಲ್ಯುಮಿನಿಯಮ್ ಹಂಡೆಗಳಲ್ಲಿ ಹಾಲನ್ನು ಹೊತ್ತು ಎಲ್ಯುಮಿನಿಯಮ್ಮಿನದೇ ಅಳತೆ-ಪಾತ್ರೆಯಿಂದ ಮಾರುವ ಬೈಯಾ ಜನ; ನ್ಯೂಸ್ ಪೇಪರ್ ಮಾರುವ ಹುಡುಗರು; ಖೇತರಾಜಭವನದ ತಳಮಜಲೆಯ ಉಡುಪಿ ಬ್ರಾಹ್ಮಣರ ಉಪಹಾರಗೃಹ; ಗಲ್ಲಿಯ ಬಾಯಲ್ಲಿ ನಿಂತ ಕಮ್ಯುನಿಸ್ಟ್ ಪಕ್ಷದ ಪ್ರಿಂಟಿಂಗ್ ಪ್ರೆಸ್ಸ್; ಇದಿರಿನ ಮನೆಯಲ್ಲಿ ದತ್ತಾತ್ರೇಯನ ಆಳೆತ್ತರದ ಚಿತ್ರದ ಇದಿರು ಕೂತು ಚಾಳಿಗೆ ಚಾಳನ್ನೇ ಎಚ್ಚರಿಸುವ ಭಜನೆಯ ತಯಾರಿಕೆಗೆ ತೊಡಗಿದ ಮುದುಕ; ನಿತ್ಯಪರಿಚಯದ ಅತಿ ನಸುಕಿನ ಸದ್ದು ಗದ್ದಲಗಳು. ನಾಗಪ್ಪನ ಮನಸ್ಸಿನ ಆಳದಲ್ಲಿನ್ನೂ ಜಲಾಲನಿಗೆ ಆ ಪತ್ರ ಕೊಟ್ಟ ಪ್ರಮಾದದ ನೆನಪು : ಕೊನೆಗೂ ತಾನು ವ್ಯವಹಾರ ಎಂಬುದನ್ನು ಕಲಿಯಲೇ ಇಲ್ಲ. ಈ ಜಗತ್ತಿನಲ್ಲಿ ಪ್ರತಿಭೆಯಿದ್ದರಷ್ಟೇ ಸಾಲದು. ಅದನ್ನು ತನಗೇ ಅನ್ಯಾಯವಾಗದಂತೆ ಪ್ರಕಟಿಸುವ ಚಾತುರ್‍ಯವೂ ಬೇಕು. ದಕ್ಷತೆಯೂ ಬೇಕು. ಇವೆರಡೂ ಅವನಲ್ಲಿರಲಿಲ್ಲ. ಆದ್ದರಿಂದಲೇ ಅವನ ಯೋಗ್ಯತೆಯ ಅರ್ಧದಷ್ಟೂ ಯೋಗ್ಯತೆ ಇರದ ಜಲಾಲನಂತವರೇ ಇಂದು ಕಾರಖಾನೆಯ ಉಚ್ಛಪದಾಧಿಕಾರಕ್ಕೆ ಏರಿಕೂತಿದ್ದಾರೆ. ಹಲವು ಸಾರೆ ಹೊಸ ಖ&ಆ ಕಲ್ಪನೆಯೊಂದು ಮನಸ್ಸಿನಲ್ಲಿ ಮೂಡಿದ್ದೇ ತಡ ಸೃಷ್ಟಿಶೀಲ ಕಲಾಕಾರನ ಉತ್ಸಾಹದಿಂದ ಸರೀಕರ ಇದಿರು ವಿವರಿಸಿಬಿಡುತ್ತಿದ್ದ_ಹೀಗೆ ವಿವರಿಸುವುದರ ವ್ಯಾವಹಾರಿಕಪರಿಣಾಮ ಏನಾಗಬಹುದೆಂಬುದರ ವಿಚಾರಮಾಡದೇನೇ. ಇಂತಹ ‘ಬ್ರಿಲ್ಲಿಯಂಟ್’ ಎನ್ನಬಹುದಾದ ಕಲ್ಪನೆಗಳು ಅವನಿಗಿಂತ ಬಹಳ ಮುಂಚಿತವಾಗಿ ಆ‌ಒ‌ಆ ಯವರಿಗೆ ಲೇಖೀರೂಪದಲ್ಲಿ ಮುಟ್ಟಿರುತ್ತಿದ್ದವು. ಸರಿಯಾದ ಅನುವು ಸಿಕ್ಕಾಗ ತಾನೇ ಅವುಗಳನ್ನು ಫಿರೋಜನಿಗೆ ಹೇಳಹೊರಟಾಗ ಉಳಿದವರ ಕಲ್ಪನೆಗಳನ್ನು ಕಳವು ಮಾಡಿದ ಆರೋಪಕ್ಕೆ ಗುರಿಯಾಗಿ ನೋವು ಉಂಡದ್ದರ ನೆನಪೂ ಈಗ ನಾಗಪ್ಪನಿಗೆ ಸಿಟ್ಟು ತರಿಸುವಂಥದ್ದು. ಎಲ್ಲಕ್ಕೂ ಮಿಗಿಲಾಗಿ ಫಿರೋಜ ತನ್ನನ್ನು ಚುಚ್ಚಿ ಮಾತನಾಡುವಾಗ ಪಡುತ್ತಿದ್ದ ವಿವೇಕಶೂನ್ಯವಾದ ಸುಖ ಮಾತ್ರ ಅವನಿಗಿನ್ನೂ ಅರ್ಥವಾಗಿಲ್ಲ : ಯಾಕೆಂದು ತನ್ನ ಬಗ್ಗೆ ಇವನಿಗೆ ಇಷ್ಟೊಂದು ದ್ವೇಷ….?

ತನ್ನ ಆನಂದಕ್ಕೆ ಸೃಷ್ಟಿಶೀಲತೆಯೊಂದೇ ನಿಜವಾದ ಮೂಲಸೆಲೆಯೆಂಬ ಅನುಭವ ನಾಗಪ್ಪನಿಗೆ ಮತ್ತೆ ಮತ್ತೆ ಬಂದಿದೆ. ಹಾಗೆಯೆ, ಅದರ ಫಲವಾಗಿ ಹುಟ್ಟಿಬಂದ ಕೃತಿಯ ಮೇಲೆ ತನ್ನ ಹೆಸರಿನ ಅಂಕಿತ ಬಿದ್ದಾಗಲೆ ಅದರ ಮೂಲಪ್ರೇರಣೆಯಿಂದ ತನ್ನ ಬಿಡುಗಡೆಯಾಗುತ್ತದೆ ಎಂಬ ಅರಿವೂ ಕೂಡ : ಜೀವನದ ಅರ್ಥಪೂರ್ಣತೆಯ ಹುಡುಕಾಟದಲ್ಲಿ, ಎಲ್ಲಕ್ಕೂ ಮಿಗಿಲಾಗಿ, ಈ ಸೃಷ್ಟಿಕ್ರಮದಲ್ಲೇ ತನ್ನ ಸ್ಥಾನವೇನು ? ಪ್ರಸ್ತುತತೆಯೇನು ? _ ಎನ್ನುವುದರ ಪ್ರಸ್ಥಾಪನೆಗೆ ಮಹತ್ವ ಇದೆಯಷ್ಟೇ ಅಲ್ಲ. ಇಂಥ ಪ್ರಸ್ಥಾಪನೆಗೆ ಸ್ವ-ಅಂಕಿತದ ಅಗತ್ಯವೂ ಇದೆಯೇನೋ ಎಂಬ ಅನುಮಾನ ಕೂಡ ಆಗೀಗ ಬಂದಿದೆ. ಆದರೆ ಅಂಥ ಅಂಕಿತದ ಮುದ್ರೆ ಬೀಳುವ ಅವಕಾಶ ತಪ್ಪಿದಾಗ ಅದಕ್ಕೆ ಹೊಣೆಯಾದ ಅನ್ಯಾಯದ ವಿರುದ್ಧ ಪ್ರತಿಭಟಿಸದೇ ಇರುವುದಕ್ಕೆ ಕಾರಣ ಮಾತ್ರ ಕೀರ್ತಿಯ ಬಗೆಗಿನ ನಿರಾಸಕ್ತಿಯಾಗಿರದೆ ಪ್ರತಿಭಟನೆಗೆ ಬೇಕಾದ ಪ್ರಭಲವಾದ ನೈತಿಕ ಧೈರ್ಯವೇ ತನ್ನ ಸ್ವಭಾವರಚನೆಯಲ್ಲಿ ಇಲ್ಲದ್ದಾಗಿರಬಹುದು ಎಂಬುದರ ಬಗ್ಗೆ ನಾಗಪ್ಪ ವಿಚಾರಮಾಡಿದವನಲ್ಲ.

ಖೇತವಾಡಿಯ ಅನ್ಯೋನ್ಯ ಅಂಗವಾದ ಗದ್ದಲ ಆಗಲೇ ಕಿವಿ ನೋಯಿಸುವ ಮಟ್ಟಕ್ಕೆ ಏರಿತ್ತು. ದತ್ತಭಕ್ತನ ಭಜನೆಯಂತೂ ಎಂತಹ ಕುಂಭಕರ್ಣನನ್ನೂ ಬಡಿದೆಬ್ಬಿಸುವಂತಹದು. ಇದಕ್ಕೆಲ್ಲ ಕಿವುಡನಾಗಿದ್ದ ನಾಗಪ್ಪನ ಮನಸ್ಸು ಒಂದನ್ನೇ ಕುರಿತು ಧೇನಿಸುತ್ತಿತ್ತು-ತಾನು ಅಂದು ಒ‌ಆ ಯವರಿಂದ ಬಂದ ಛಿoಟಿಜಿiಜeಟಿಣiಚಿಟ ಪತ್ರವನ್ನು ಜಲಾಲನಿಗೆ ಕೊಟ್ಟಿದ್ದನ್ನು ಕುರಿತು. ತನ್ನ ಮೋಹಕವಾದ ವ್ಯಕ್ತಿತ್ವ, ಅದಕ್ಕಿಂತ ಹೆಚ್ಚಾಗಿ ಯಾರನ್ನೂ ಮರುಳುಗೊಳಿಸುವ ಮೋಹಕವಾದ ಮುಗುಳುನಗೆ-ಇವುಗಳ ಹಿಂದೆ ಜಲಾಲ ಮೊದಲಿನಿಂದಲೂ ತನ್ನ ಭವಿಷ್ಯತ್ತಿಗೆ ಮಾರಕವಾದ ಅಸೂಯೆಯನ್ನೇ ಬೆಳೆಸಿಕೊಂಡು ಬಂದಿದ್ದ ಎಂಬುದರ ಮೇಲೆ ಝಗ್ಗನೆ ಬೆಳಕು ಬಿದ್ದಾಗ, ದೇವರೇ ಎಂದುಕೊಂಡ. ಜಲಾಲನಂತಹ ಸಹೋದ್ಯೋಗಿಯನ್ನು ಕೂಡ ನಂಬುವದು ತಪ್ಪಾದರೆ ಬದುಕಿನಲ್ಲಿ ಯಾವುದನ್ನು ನಂಬಬೇಕು ? ಪ್ರತಿಯೊಬ್ಬನನ್ನೂ ಅಪನಂಬಿಕೆಯಿಂದ ನೋಡುವದೇ ಜಾಣತನವಾದರೆ ಬದುಕಿರಬೇಕು ಎನ್ನುವ ಅಭೀಪ್ಸೆಗೆ ಅರ್ಥವಾದರೂ ಏನು ? ಎಂದೂ ಅನ್ನಿಸಿತು. ಅಂತಃಸ್ಪೂರ್ತಿಯನ್ನು ಕಳಕೊಂಡ ಭಾವನೆಗಳ ಅರ್ಥವೇ ನಾಗಪ್ಪನಿಗೆ ಆಗುತ್ತಿರಲಿಲ್ಲ. ಬರೇ ಸ್ವಾರ್ಥವೇ ಮೊದಲಾದ ಭಾವನೆಗಳು ತಟ್ಟುತ್ತಿರಲಿಲ್ಲ. ತನ್ನ ಖ&ಆ ಕಲ್ಪನೆಗಳನ್ನು ಉಳಿದವರು ಕಳವು ಮಾಡಿದ್ದಾರೆಂಬುದರ ಬಗ್ಗೆ ಸಿಕ್ಕ ಪುರಾವೆಗಳ ಬಗೆಗಿನ ಉದಾಸೀನತೆಗೆ ಇದೂ ಒಂದು ಕಾರಣ-ಆ ಕೃತ್ಯದ ಅರ್ಥಹೀನತೆ ! ಸುತ್ತಲಿನ ಸದ್ದುಗದ್ದಲವನ್ನು ಕೇಳಿಯೂ ಕೇಳದವನ ಹಾಗೆ ಅಂತರ್ಮುಖಿಯಾದಾಗ ಹುಟ್ಟಿದ ಒಂದು ವಿಚಾರದಿಂದ ತಲ್ಲಣಗೊಂಡ : ಫಿರೋಜ್ ತನ್ನ ಬಗ್ಗೆ ತೋರಿಸುತ್ತ ಬಂದ ದ್ವೇಷಕ್ಕೆ ಜಲಾಲ ಸ್ಪೂರ್ತಿಯಾಗಿರಬಹುದೆ ? ಹಾಗಾದರೆ ಈ ಎಲ್ಲ ಹೊಸ ನಾಟಕಕ್ಕೆ ?

ಜಲಾಲನ ಬಗ್ಗೆ ಇಂತಹ ಸಂಶಯ ಈ ಮೊದಲು ಬಂದಿರಲಿಲ್ಲವೆಂದಲ್ಲ. ಆದರೆ ಅದು ಬಂದದ್ದು ಜಲಾಲ ಕಣ್ಣೆದುರಿಗೆ ಇಲ್ಲದಿದ್ದಾಗ ಮಾತ್ರ. ಯಾವಾಗಲೂ ಹಸನ್ಮುಖಿಯಾದ ಜಲಾಲನ ಮೋರೆ ಕಣ್ಣೆದುರಿಗೆ ಬಂದ ಕೂಡಲೇ ತನ್ನ ಸಂಶಯದಿಂದ ತನಗೇ ಮುಜುಗರವಾಗುತ್ತಿತ್ತು. ಏನಿದ್ದರೂ ಫಿರೋಜನ ಕ್ರೌರ್ಯದ ಹಿಂದಿನ ಪ್ರೇರಣೆಯನ್ನು ಅರಸುವಾಗ ಅದರಲ್ಲಿ ಜಲಾಲನ ಪಾತ್ರವೇನು ಎಂಬುದನ್ನರಿಯುವದೂ ಮಹತ್ವದ್ದೆಂದು ತೋರಿತು. ತನ್ನ ಹತ್ತಿರದ ಗೆಳೆಯನೆಂಬಂತೆ ನಡಕೊಳ್ಳುತ್ತಿರುವಾಗಲೂ ಒಳಗೊಳಗೇ ತನ್ನ ಭವಿಷ್ಯದ ವಿರುದ್ಧ ಹೂಡಿದ ಪಿತೂರಿಗೆ ಕಾರಣವಾದದ್ದು ಮಾತ್ರ ಆತ್ಮ ಸಂರಕ್ಷಣೆಯ ಪಶು-ಪ್ರವೃತ್ತಿಯ ನೆಲೆಯಲ್ಲಿ ಹುಟ್ಟಿದ್ದೆಂಬ ಅರಿವು ಬಂದಾಗ ಜಲಾಲನ ಬಗೆಗೂ ಮೊತ್ತಮೊದಲಿಗೆ ಜಿಗುಪ್ಸೆ ಹುಟ್ಟಿತು : ಖ&ಆ -ತನಗೆ ಅತ್ಯಂತ ಪ್ರಿಯವಾದ ಈ ಕಾರ್ಯಕ್ಷೇತ್ರದಲ್ಲಿ ಬೆಳಗಿನ ತನ್ನ ಪ್ರತಿಭೆ ಒಂದು ಆದರಣೀಯವಾದ ಘನತೆಯನ್ನು ಪಡೆಯುವುದರಲ್ಲಿದ್ದಾಗ ಒಮ್ಮೆಲೇ ಎರಗಿದ ಅನಾಹುತದಿಂದಾಗಿ ಹೈದರಾಬಾದವನ್ನು ಬಿಟ್ಟು ಮುಂಬಯಿಗೆ ಬರಬೇಕಾದ ಪ್ರಸಂಗ ! ಆದರೂ ಎದೆಗುಂದದೇ, ಇಲ್ಲಿ ಬಂದು ಆರು ತಿಂಗಳೊಳಗಾಗಿ, ತನಗೆ ವಹಿಸಿಕೊಟ್ಟ ಹೊಸ ಕ್ಷೇತ್ರದಲ್ಲಿ ತಾನು ತೋರಿಸಿದ ಉತ್ಸಾಹ, ಕರ್ತಬುಗಾರಿಗಳಿಂದಾಗಿ ಇಲ್ಲಿಯ ಸಹೋದ್ಯೋಗಿಗಳಿಂದ, ಡೈರೆಕ್ಟರರಿಂದ, ಕಂಪನಿಯ ಗ್ರಾಹಕರಿಂದ, ಪಡೆದ ಗೌರವದ ಬಗೆಗೂ ಫಿರೋಜ್ ತೋರಿಸುತ್ತ ಬಂದ ತಿರಸ್ಕಾರಕ್ಕೆ ಕಾರಣ ತಿಳಿಯದಾಗಿದೆ. ಎಲ್ಲ ಕಡೆಯಿಂದಲೂ ತನ್ನನ್ನು ಸುತ್ತುವರಿಯುತ್ತಿದ್ದ ಶಿಕಾರಿಯವರ ತಂಡದಲ್ಲಿ‌ಈಗ ಶ್ರೀನಿವಾಸನೂ ಸೇರಿಕೊಂಡಂತಿದೆ. ಫಿರೋಜ್, ಜಲಾಲ ಹಾಗೂಶ್ರೀನಿವಾಸ ಈ ಮೂವರ ಕ್ರೌರ್ಯಕ್ಕೆ ತನ್ನಂತಹ ನಿರುಪದ್ರವಿಯಾದವನು ಕಾರಣವಾಗಬೇಕಾದರೆ ಈ ಮೂವರನ್ನೂ ಒಟ್ಟಿಗೆ ತಂದ ಯಾವುದೋ ದುಷ್ಟ ಸಂಚಿಗೆ ತಾನು ತನಗೇ ಗೊತ್ತಿಲ್ಲದ ರೀತಿಯಲ್ಲಿ ಅಡ್ಡಗಾಲು ಹಾಕಿರಬಹುದೆ ? ಮೇರಿಗೆ ಫೋನ್ ಮಾಡಿ ಸಿನೇಮಾಕ್ಕೆ, ರಾತ್ರಿಯ ಊಟಕ್ಕೆ ಕರೆದರೆ ಹೇಗೆ ? ತನ್ನ ಬಗ್ಗೆ ಆದರ ಪ್ರೀತಿ ತೋರಿಸುತ್ತ ಬಂದ ಈ ಹುಡುಗಿ ಇಂತಹ ‘ಡೇಟಿ’ನ ಸೂಚನೆಯನ್ನು ಎಷ್ಟೊಂದು ಸರತಿ ಮಾಡಿದ್ದರೂ ತಾನೇ ಅದಕ್ಕೆ ಇನ್ನೂ ಧೈರ್ಯ ಮಾಡಿರಲಿಲ್ಲ. ಒಮ್ಮೆಯಂತೂ ಅವಳ ಈ ಸೂಚನೆಯ ಅರ್ಥ ತನಗಾಗುತ್ತಿಲ್ಲ ಎಂದು ನಟಿಸಿದಾಗ_ sತಿeeಣ iಟಿಟಿoಛಿeಟಿಣ ಎಂದು ಕಣ್ಣು ಮಿಟುಕಿಸುತ್ತ ನಕ್ಕಿದ್ದಳು.

ಸಂಕೋಚ-ಪ್ರವೃತ್ತಿಯವನಾದ ನಾಗಪ್ಪನಿಗೆ, ಡೇಟಿಂಗಿನಂಥ ನಿಷ್ಪಾಪವಾದ ಚಟುವಟಿಕೆ ಕೂಡ ದೊಡ್ಡ ಸಾಹಸವೆಂಬ ತಿಳುವಳಿಕೆಯಿಂದಾಗಿ, ಮೇರಿಗೆ ಫೋನ್ ಮಾಡುವ ಕಲ್ಪನೆಯಿಂದಲೇ ಎರಡೂ ಕಿವಗಳು ಬೆಚ್ಚಗಾದವು. ಸದ್ಯ. ಹೊಟ್ಟೆ ಚೆನ್ನಾಗಿ ಹಸಿದಿದೆ ; ಒಳ್ಳೇ ನಾಸ್ತಾದ ಗರಜಿದೆ ಎಂಬುದರ ಅರಿವು ಬಂದು ಬೆನ್‌ಹ್ಯಾಮ್-ಹಾಲ್ ಲೇನಿನಲ್ಲಿಯ ‘ಸಂತೋಷಭವನ’ಕ್ಕೆ ಹೋಗುವ ತಯಾರಿ ಮಾಡಹತ್ತಿದ. ಉತ್ತಪ್ಪ, ವಡೆಗಳ ನೆನಪಿನಿಂದಲೇ ಬಾಯಲ್ಲಿ ನೀರೂರಿತು. ‘ಸಂತೋಷಭನ’ಕ್ಕೆ ಹೋದಾಗ ಹತ್ತಿರದ ಸಾರ್ವಜನಿಕ ಟೆಲಿಫೋನ್ ಬೂಥಿನಿಂದಲೇ ಮೇರಿಗೆ ಫೋನ್ ಮಾಡಿದರಾಯಿತು ಎಂದುಕೊಂಡ. ಅರ್ಜುನ್‌ರಾವರ ಮನೆಯಲ್ಲಿ ಫೋನ್ ಇದ್ದರೂ ಅಲ್ಲಿಂದ ಎಂದೂ ಫೋನ್ ಮಾಡಿದವನಲ್ಲ. ಗರಜು ಬಿದ್ದಾಗ ಕೆಲವು ಗೆಳೆಯರು, ಆಫೀಸಿನವರು ಆಗೀಗ ಆ ನಂಬರಿಗೆ ಫೋನ್ ಮಾಡುತ್ತಿದ್ದರು. ಅಷ್ಟೇ. ತನ್ನ ಈಗಿನ ಸ್ಥಾನಬದ್ಧತೆಗೆ ಕಾರಣವಾದ ದುಷ್ಟ ಆದೇಶ ಬಂದದ್ದೇ ಅರ್ಜುನ್‌ರಾವರ ಫೋನಿನ ಮೇಲೆ ಎಂಬುದರ ಅಪ್ರಿಯವಾದ ನೆನಪು ಮರುಕಳಿಸುವ ಮೊದಲೇ ಹೊರಗೆ ಬೀಳುವ ತ್ವರೆಯಲ್ಲಿದ್ದವನ ಹಾಗೆ ಲಗುಬಗೆಯಿಂದ ಹೊಸಲು ದಾಟಿ ಕೋಣೆಯ ಕದವಿಕ್ಕಿ ಬೀಗ ಹಾಕಿದ.
uಟಿಜeಜಿiಟಿeಜ
– ಅಧ್ಯಾಯ ಹದಿನಾಲ್ಕು –

‘ಸಂತೋಷಭವನ’ವನ್ನು ಸಮೀಪಿಸುತ್ತಿದ್ದ ಹಾಗೆ ನಾಗಪ್ಪನ ಮನಸ್ಸು ನಿಷ್ಕಾರಣವಾಗಿ ಕಳವಳಕ್ಕೊಳಗಾಯಿತು. ಪ್ರತಿಸಲ ಖೇಮರಾಜಭವನದಿಂದ ಹೊರಬಿದ್ದು ಪ್ರಾರ್ಥನಾಸಮಾಜಕ್ಕೆ ಹೋಗುವ ಖೇತವಾಡಿ ಮೇನ್‌ರೋಡ್ ಸೇರಬೇಕಾದರೆ ಆರನೇ ಗಲ್ಲಿಯಿಂದ ಹೋಗುತ್ತಿದ್ದನಾದರೂ ಇವತ್ತು ಏಳನೇ ಗಲ್ಲಿಯಿಂದ ನಡೆದ. ಏಳನೇ ಗಲ್ಲಿಯ ತುದಿಯಲ್ಲೇ ಕಮ್ಯುನಿಸ್ಟ್ ಪಕ್ಷದ ಮುಖಪತ್ರವಾದ ‘ಪೀಪಲ್ಸ್ ಏಜ್’ ಎಂಬ ಪತ್ರಿಕೆಯನ್ನು ಛಾಪಿಸುತ್ತಿದ್ದ ಮುದ್ರಣಾಲಯ ಹಾಗೂ ಪಕ್ಷದ ಗಿರ್ಗಾಂವ್ ಶಾಲೆಯ ಆಫೀಸು ಇದೆ. ಹೈದರಾಬಾದಿನ ಕಾರಖಾನೆಯ ಕಾಮಗಾರರ ಆರೋಗ್ಯಕ್ಕಿರುವ ಅಪಾಯವನ್ನು ಪರ್ಯಾಯವಾಗಿ ಅಲ್ಲಿಯ ಕಾಮಗಾರ ಯೂನಿಯನ್ನಿನ ಸಂಚಾಲಕತ್ವ ವಹಿಸಿದ ಕಮ್ಯುನಿಸ್ಟರ ಲಕ್ಷ್ಯಕ್ಕೆ ತರಬೇಕೆಂದು ಎಂದೋ ಮಾಡಿಕೊಂಡ ಹುಂಬಗಾರಿಕೆಯ ವಿಚಾರ ಈಗ ಪ್ರಜ್ಞೆಯ ಆಳದಲ್ಲೆಲ್ಲೋ ತಲೆಯೆತ್ತಿರಬೇಕು : ಪಾರ್ಟಿಯ ಆಫೀಸನ್ನು ದಾಟುವಾಗ ಎದೆ ಡವಗುಟ್ಟಿದ ರೀತಿಗೆ ತಾನೇ ಆಶ್ಚರ್ಯಪಟ್ಟ. ನಡಿಗೆಯ ವೇಗವನ್ನು ಹೆಚ್ಚಿಸಿ ಮೇನ್‌ರೋಡ್ ಸೇರಿ ಪ್ರಾರ್ಥನಾಸಮಾಜದ ಕಡೆ ಹೊರಳಿದ. ತಾನು ಇಡಿಗ ಅನುಭವಿಸಿದ ಎದೆಗುದಿಗೆ ಕಾರಣ ಮೇರಿಗೆ ಫೋನ್ ಮಾಡುವ ಆತಂಕವಾಗಿರಲೂ ಬಹುದು ಎಂದೆನಿಸಿತು. ಏಕೆಂದರೆ ಕಮ್ಯುನಿಸ್ಟರ ಆಫೀಸಿನ ಹೊರಗೇ ಸಾರ್ವಜನಿಕ ಟೆಲಿಫೋನ್ ಬೂಥ್ ಇದೆ. ಇಷ್ಟು ತಿಂಗಳು ಅವಳ ಬಗ್ಗೆ ಒಂದು ರೀತಿಯಿಂದ ನಿರಾಸಕ್ತಿ ತೋರಿಸುತ್ತ ಬಂದ ತಾನು ಈಗ ಅವಳನ್ನು ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುವುದು ಸರಿಯೇ ? ನಾಗಪ್ಪ, ಕೊನೆಗೂ ಮೇರಿಗೆ ಫೋನ್ ಮಾಡುವ ವಿಚಾರವನ್ನು ಬಿಟ್ಟುಕೊಟ್ಟ ; ಆದರೆ ಅವನು ಇದೀಗ ಸರ್ಥಿಸಿಕೊಂಡ ಕಾರಣಕ್ಕಾಗಿಯಲ್ಲ. ನಾನಾ ಚೌಕಿನತ್ತ ಹೋಗುವ ಬಸ್ಸು ದೂರದಲ್ಲಿ ಕಂಡಂತಾದೊಡನೆ ರಾಣಿ ಮನಸ್ಸು ತುಂಬ ಹತ್ತಿದ್ದಳು.ಆದರೆ ತನಗೇ ಇನ್ನೂ ಸ್ಪಷ್ಟವಾಗಿ ಅರಿವಿಗೆ ಬಂದಿರದ ಆತಂಕವೊಂದು ಇಂತಹ ಯಾವ ಒಂದು ಬಯಕೆಗೆ ಆಸ್ಪದ ಕೊಡದಾಯಿತು. ತಾನಿನ್ನು ಹೆದರಿಕೊಂಡಿದ್ದೇನೆ ಎಂಬಂತಹ ಭಾವನೆ ಇನ್ನಷ್ಟು ಕಳವಳಕ್ಕೆ ಕಾರಣವಾಯಿತು. ಪ್ರಾರ್ಥನಾಸಮಾಜದ ನಾಲ್ಕು ರಸ್ತೆಗಳ ಕೂಟಸ್ಥಾನಕ್ಕೆ ಬಂದವನೇ ನಾಗಪ್ಪ ಶೂನ್ಯ ಮನಸ್ಕನಾಗಿ ನಿಂತೇಬಿಟ್ಟ. ಮುಂದಿನ ಗಿರ್ಗಾಂವ್ ರೋಡ್ ದಾಟಿದರೆ ಬೆನ್‌ಹ್ಯಾಮ್-ಹಾಲ್-ಲೇನ್ ಐದೇ ಮಿನಿಟಿನ ಹಾದಿ. ಉತ್ತಪ್ಪ ವಡೆಗಳ ನೆನಪಿನಿಂದ ನೀರೊಡೆಯುವದು ಬಿಟ್ಟು ಬಾಯಿ ತನ್ನ ರುಚಿಯನ್ನೇ ಕಳಕೊಂಡುಬಿಟ್ಟಿದೆ ಅನ್ನಿಸಿತು. ಮುರಕಿಯಲ್ಲಿಯ ನ್ಯೂಸ್ ಪೇಪರ್ ಅಂಗಡಿಗೆ ಹೋಗಿ ಟೈಮ್ಸ್ ಅಫ಼್ ಇಂಡಿಯಾದ ಪತ್ರಿಕೆಯೊಂದನ್ನು ಕೊಂಡುಕೊಂಡ ; ದಿನವೂ ಬೆಳಿಗ್ಗೆ ಸಂತೋಷಭವನಕ್ಕೆ ನಾಸ್ತಾಕ್ಕೆ ಹೋಗುವಾಗಿನ ಪರಿಪಾಠ ವಿದು, ಪರಿಚಯದ ಹುಡುಗ. “ಐದಾರು ದಿನಗಳಾದವು. ರಾಯರನ್ನು ಕಾಣಲೇ ಇಲ್ಲ.” ಎಂದು ಪ್ರೀತಿಯಿಂದ ಮಾತನಾಡಿಸಿದ. ಈ ಆತ್ಮೀಯತೆ ತುಂಬಿದ ಸರಳ ಮಾತುಗಳು ಅನಿರೀಕ್ಷಿತ ರೀತಿಯಲ್ಲಿ ತಟ್ಟಿ ನಾಗಪ್ಪನನ್ನು ಅಲ್ಲಾಡಿಸಿಬಿಟ್ಟವು. ಹಣ ಕೊಡಲು ಪಾಕೀಟಿಗೆ ಕೈ ಹಾಕಿದಾಗ ಏನಾದರೂ ಹೇಳಬೇಕೆಂದರೆ ಬಾಯಿಂದ ಮಾತೇ ಹೊರಡದಾಯಿತು. ಕೊನೆಗೆ “ಮೈಯ್ಯಲ್ಲಿ ಚೆನ್ನಾಗಿರಲಿಲ್ಲ.” ಎಂದಿಷ್ಟೇ ಹೇಳಿ ಅಲ್ಲಿಂದ ಹೊರಟು ರಸ್ತೆ ದಾಟಿದ. ಈ ಪ್ರಕರಣದಲ್ಲಿ ತನ್ನ ನೌಕರಿಗೇನಾದರೂ ಸಂಚಕಾರ ಬಂದರೆ ಖೇತವಾಡಿಯ ಯಾವುದಾದರೊಂದು ಮೂಲೆಯಲ್ಲಿ ಹೀಗೆ ಪತ್ರಿಕೆ ಮಾರುವ ಇಲ್ಲ ಬರೀ ರದ್ದೀ ಮಾರುವ ಅಂಗಡಿಯನ್ನು ತೆರೆದು ಕೂತರಾಯಿತು ಎಂದುಕೊಂಡ. ಬರೆಯೆ ಚೇಷ್ಟೆಗೆ ಅಂದುಕೊಂಡ ಮಾತುಗಳೆಂದು ಅವು ಮನಸ್ಸಿನಲ್ಲಿ ಹುಟ್ಟಿದ ಕ್ಷಣದಲ್ಲಿ ಅನ್ನಿಸಿದರೂ, ಹೊತ್ತು ಹೋದ ಹಾಗೆ, ಅವು ಬರೆಯೇ ಚೇಷ್ಟೆಯ ಮಾತುಗಳಲ್ಲವೇ ಅಲ್ಲ ; ಅಷ್ಟೇಕೆ ಅವು ತನ್ನ ಮಾತುಗಳೇ ಅಲ್ಲ_ಯಾರೋ ಬಜಾಯಿಸಿದ ‘ಹುಕುಮ್’ ಎಂದೆನ್ನಿಸಹತ್ತಿದಾಗ ಗಂಭೀರನಾದ. ನಕ್ಕುಬಿಡಬೇಕೆಂದು ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗದಾಯಿತು.

ಬೆನ್‌ಹ್ಯಾಮ್-ಹಾಲ್-ಲೇನಿನ ಇಬ್ಬದಿಗಳಲ್ಲೂ ಸಾಲುಗಯ್ಟ್ಟಿ ಕುಳಿತು ಕಾಯಿಪಲ್ಲೆ, ಹಣ್ಣು ಹೂಗಳನ್ನು ಮಾರುವ ಮರಾಠೀ ಹೆಣ್ಣುಗಳು. ಕೆಂಪು ಟೋಪಿಯ ‘ವಸಯೀವಾಲೇ’ ಗಂಡಸರು ತಾವು ತಾವು ಮಾರುತ್ತಿದ್ದ ಸರಕಿನ ಹೆಸರು, ಧಾರಣೆಗಳನ್ನು ಒದರಿ ಹೇಳುತ್ತ ಆ ರಸ್ತೆಯಿಂದ ಹೋಗುವವರೆಲ್ಲ ತಮ್ಮ ಗಿರಾಕಿಗಳೇ ಎಂಬ ಸಂಭ್ರಮದಿಂದ ಅವರ ಲಕ್ಷ್ಯವನ್ನು ತಮ್ಮ ಕಡೆ ಸೆಳೆಯುತ್ತಿದ್ದರು. ಮಲ್ಲಿಗೆಜಡೆಗಳನ್ನು ಮಾರುತ್ತಿದ್ದ, ಕಿರಗಣೆ ಉಟ್ಟ, ಚಿಕ್ಕ ಹುಡುಗಿ ‘ದಾದಾ ದಾದಾ’ ಎಂದು ಇವನನ್ನು ಕರೆದಾಗ ಅವಳತ್ತ ದೃಷ್ಟಿ ಹರಿಯಿಸಿದ. ಸರಸ್ವತಿಯ ನೆನಪು ಬಂದು ವಿಚಾರಮಾಡುವ ಮೊದಲೇ ಜಡೆಯೊಂದನ್ನು ಕೊಂಡ. ಹಸಿ ಎಲೆಯೊಂದರಲ್ಲಿ ಕಟ್ಟಿಕೊಟ್ಟ ಚಿಕ್ಕ ಪೊಟ್ಟಣವನ್ನು ಕೈಯಲ್ಲಿ ಹಿಡಿದಮೇಲೇ ತನ್ನ ಕೃತ್ಯದ ಅರ್ಥವಾಯಿತೆನ್ನುವ ಹಾಗೆ ಈ ಮೊದಲಿನ ಕಳವಳವನ್ನು ಮರೆತು ಸುಖವಾಗಿ ಮುಗುಳುನಕ್ಕ. ಹೂವಿನ ಮಾದಕವಾದ ಕಂಪನ್ನು ಸೇವಿಸುತ್ತ ‘ಸಂತೋಷಭವನ’ ಹತ್ತಿರವಾಗುತ್ತಲೇ ಪುಡಿಕೆಯನ್ನು ಪ್ಯಾಂಟಿನ ಕಿಸೆಯಲ್ಲಿ ಹಾಕಿ ರೆಸ್ಟೋರಂಟ್ ಹೊಕ್ಕ…

‘ಸಂತೋಷಭವನ’ದ ಮಾಲಿಕನಾದ ಅಪ್ಪಾನಾಯಕನು ನಾಗಪ್ಪನ ಪರಿಚಯದವನು. ಅವನ ಜಿಲ್ಲೆಯವನೇ. ನಾಗಪ್ಪನನ್ನು ಕಂಡದ್ದೇ ತಡ ಕವಳ ತಿಂದ ಕೆಂಪುಬಾಯನ್ನು, ಎಲ್ಲ ಹಲ್ಲುಗಳನ್ನೂ ತೋರಿಸುವಂತೆ, ಕಿಸಿದು, ತಲೆಯಮೇಲಿನ ಗಾಂಧೀಟೋಪಿಯನ್ನೊಮ್ಮೆ ವಿನಾ ಕಾರಣ ತೆಗೆದು ತಿರುಗಿ ತಲೆಯಲ್ಲಿ ತೊಟ್ಟು : “ಐದಾರು ದಿನ ಇತ್ತಕಡೆ ಬರಲೇ ಇಲ್ಲ. ನಿನ್ನೆ ಶ್ರೀನಿವಾಸರಾವ್ ಭೇಟಿಯಾದಲೇ ತಿಳಿಯಿತು. ಒಂದು ತಿಂಗಳ ಕಾಲ ನೀನು ಅವನ ಮನೆಯಲ್ಲೇ ಇರುವವನಿದ್ದಿಯಂತೆ. ಆದರೆ ಅಕಸ್ಮಾತ್ ಹೈದರಾಬಾದಿಗೆ ಹೋಗಬೇಕಾಗಿ….” ನಾಗಪ್ಪನ ಮೋರೆ ಬಣ್ಣ ಕಳಕೊಳ್ಳಹತ್ತಿದ್ದನ್ನು ನೋಡಿ, ‘ಹೀಗೇ ಸಹಜವಾಗಿ ನಿನ್ನ ಬಗ್ಗೆ ಮಾತು ಬಂದಾಗ…ನೀನು ಟೇಬಲ್ ಹಿಡಿ_ತಿಂಡಿಗೆ ಆರ್ಡರ್ ಕೊಡು. ಅಲ್ಲಿಗೇ ಬರುತ್ತೇನೆ. ಮತ್ತು ಇದು ನೋಡು. ನಿನ್ನನ್ನು ಹುಡುಕಿಕೊಂಡು ಒಬ್ಬ ಹುಡುಗ ಬಂದಿದ್ದ. ಎರಡು ಸರತಿ ಬಂದು ಹೋದ_ನಿನ್ನೆ ಸಂಜೆ ಒಮ್ಮೆ, ಇಂದು ಬೆಳಿಗ್ಗೆ ಒಮ್ಮೆ.” ಎನ್ನುತ್ತ ಅಂಟು ಹಚ್ಚಿ ಬಾಯಿ ಮುಚ್ಚಿದ ಸಣ್ಣ ಲಕ್ಕೋಟೆಯನ್ನು ನಾಗಪ್ಪನ ಕೈಗೆ ಕೊಟ್ಟ. ನಾಗಪ್ಪ, ಕೆಲಹೊತ್ತು ಒಬ್ಬನೇ ಕೂಡ್ರುವ ಮನಸ್ಸಾಗಿ, ಕೆಳಗೆ ಅನೇಕ ಜಾಗಗಳು ಖಾಲಿ ಇದ್ದರೂ ನಿಚ್ಚಣಿಕೆಯ ಮೆಟ್ಟಿಲುಗಳನ್ನು ಹತ್ತಿ ಮೇಲಿನ ಫ್ಯಾಮಿಲೀ ರೂಮು ಒಂದನ್ನು ಹೊಕ್ಕ. ಹೊಟೆಲಿನಲ್ಲಾಗ ವಿಶೇಷ ಗದ್ದಲವಿರಲಿಲ್ಲ. ಮೇಲಾಗಿ ಮಾಣಿಗಳೆಲ್ಲ ಪರಿಚಯದವರಾಗಿದ್ದರಿಂದ ಯಾರೂ ಇದಕ್ಕೆ ತಕರಾರು ಮಾಡಲಿಲ್ಲ. ತನ್ನ ಕರಿಯರ್‍ನಲ್ಲಿ ಒದಗಿದ ಈ ದುರ್ದರ ಪ್ರಸಂಗವನ್ನು ಶ್ರೀನಿವಾಸ ತನ್ನ ಪರಿಚಯದವರಿಗೆಲ್ಲ ಹೇಳುತ್ತ ಹೊರಟಿರಬಹುದೆ ? ಎಂಬ ಗುಮಾನಿಗೆ ಒಳಗಿನ ನಿರ್ಧಾರ ಕುಸಿಯಹತ್ತಿದ ಭಾವನೆ. ಆರ್ಡರ್ ತೆಗೆದುಕೊಳ್ಳಲು ಬಂದ ಮಾಣಿಗೆ ಉತ್ತಪ್ಪ ಕಾಫಿಗಳ ಆರ್ಡರ್ ಕೊಟ್ಟು ಅವನು ರೂಮಿನಿಂದ ಹೊರಟುಹೋದ ಕೂಡಲೇ ನಾಯಕ ಕೊಟ್ಟ ಲಕ್ಕೋಟೆಯ ಬಾಯಿ ತೆರೆಯಹತ್ತಿದ. ಎರಡೆರಡು ಸರತಿ ಬಂದೂ ಹೆಸರು ಕೊಡದೇ ಹೋದ ಈತ ಯಾರಿರಬಹುದು ? ಎಂದು ಆತಂಕಪಟ್ಟ. ಲಿಫಾಫೆ ತೆರೆದಾಗ ಎರಡು ಇಂಚು ಉದ್ದ, ಅಷ್ಟೇ ಅಗಲದ ಬಿಳಿಯ ಕಾಗದದ ಚೂರಿನಲ್ಲಿ ಟೈಪ್ ಮಾಡಿದ ಸಂದೇಶ : “ ಖಿhis is ಜಿಡಿom ಚಿ ಜಿಡಿieಟಿಜ ಚಿಟಿಜ ಚಿ ತಿeಟಟ-ತಿisheಡಿ. Pಟeಚಿse ಠಿhoಟಿe ಣoಜಚಿಥಿ ಚಿಜಿಣeಡಿ ೮ ಠಿ.m.oಟಿ ಓo.೫೪೮೭೯ ಜಿoಡಿ ಚಿಟಿ imಠಿoಡಿಣಚಿಟಿಣ messಚಿge.”

ಟೆಲಿಫೋನ್ ನಂಬರು ನೋಡಿದರೆ ಬಾಂದ್ರಾ, ಖಾರ್ ಅತ್ತಕಡೆಯದು. ಮೇರಿಯದಿರಬಹುದೆ ? ಅವಳು ಇರುತ್ತಿದ್ದದ್ದು ಎಲ್ಲಿ ಎಂಬುದನ್ನು ತಿಳಿಯುವಷ್ಟರಮಟ್ಟಿಗೆ ಕೂಡ ಅವನು ಅವಳ ಬಗ್ಗೆ ಆಸ್ಥೆ ತೋರಿಸಿರಲಿಲ್ಲ. ಬಾಂದ್ರಾದಲ್ಲೋ ತನ್ನ ಜಾತಿಯವರ ಕುಟುಂಬವೊಂದರಲ್ಲಿ ಪೇಯಿಂಗ್‌ಗೆಸ್ಟ್ ಆಗಿ ಇದ್ದಾಳೆ ಎಂಬಂತೆ ನೆನಪು. ಹಾಗೆ ನೋಡಿದರೆ ಅವನ ಅವಳ ಪರಿಚಯ ಎಷ್ಟು ದಿನದ್ದು ? ಏಳೆಂಟು ತಿಂಗಳಷ್ಟೇ. ಅದಕ್ಕಿಂತ ಮೊದಲು ಆಗೀಗ ಹೆಡ್ ಆಫೀಸಿಗೆ ಬಂದಾಗ ಒ‌ಆ ಯವರನ್ನು ಕಾಣಲು ಹೋದಾಗ ಆದರದಿಂದ ಮಾತನಾಡಿಸಿದ್ದ. ಅವಳ ಒಳ್ಳೇತನದ ಬಗ್ಗೆ, ವೇಷಭೂಷಣದ ಬಗ್ಗೆ, ಮಾತನಾಡಿ ನಗಿಸಿದ್ದ. ಒಂದು ಸಾರೆ ಮಾತ್ರ_ಮುಂಬಯಿಗೆ ವರ್ಗವಾಗಿ ಬಂದ ಕೆಲವು ದಿನಗಳಲ್ಲೇ ಇರಬೇಕು_ಇಂತಹ ಸುಂದರ ಕಣ್ಣುಗಳನ್ನು ಇನ್ನಾವ ಹುಡುಗಿಯಲ್ಲೂ ನೋಡಿಲ್ಲ ಎಂದಿದ್ದ. ಅದು ಬರಿಯ ಹೊಗಳಿಕೆಯ ಮಾತಾಗಿರಲಿಲ್ಲ. ಅವಳ ಮೇಲೆ ಛಾಪು ಹೊಡೆಯಬೇಕು ಎನ್ನುವ ವಿಶೇಷ ಉದ್ದೇಶವೂ ಅದರಲ್ಲಿರಲಿಲ್ಲ. ಮನಸ್ಸು ಆರ್ದ್ರವಾದ ಒಂದು ಕ್ಷಣದಲ್ಲಿ ಅವಳ ಸಾನ್ನಿಧ್ಯದಲ್ಲಿ ನಿಂತಾಗ ಸಹಜ ಸ್ಪೂರ್ತಿಯಿಂದ ಅನ್ನಿಸಿದ್ದನ್ನು ಹೇಳಿದ್ದು ಹುಡುಗಿಯ ಮೇಲೆ ತಾನೇ ಎಣಿಸಿರದ ಪರಿಣಾಮ ಮಾಡಿರಬೇಕು. ಆಗ ಹೊಗಳಲು ಧೈರ್ಯವಾಗಿರದ ಅವಳ ಸುಂದರ ತುಟಿಗಳ ಸುತ್ತ ಮುಗುಳು ನಗೆ ಅರಳಿದ್ದು, ಥಿou ಜಿಟಚಿಣಣeಡಿeಡಿ ಎಂದು ತುಂಟತನದಿಂದ ಕಣ್ಣು ಮಿಟುಕಿಸಿದ್ದು ನೆನಪಾಯಿತು. ಆ ನೆನಪಿನಿಂದಲೆ ಮನಸ್ಸು ಗೆಲುವಾಗಹತ್ತಿತು. ಮಾಣಿ, ಉತ್ತಪ್ಪ ಚೆಟ್ಣಿ ತಂದ. “ಕಾಫಿ ಈಗಲೇ ತರಲೇ ? ತುಸು ತಡೆದು ತರಲೆ ಸರ್ ?” ಎಂದು ಕೇಳಿದ. ‘ನಿಮ್ಮ ಮೆಚ್ಚಿಕೆಯ ವಡೆ ಬಿಸಿಬಿಸಿ ಇದೆ. ಒಂದು ಪ್ಲೇಟ್ ತರಲೇ ಸರ್ ?” ಎಂದು ಕೇಳಿದ. ನಾಗಪ್ಪನ ಗೆಲುವು ಅವನನ್ನೂ ತಟ್ಟಿರಬೇಕು. ನಾಗಪ್ಪ ಖುಷಿಯಿಂದ, “ಹೌದು, ವಡೆ ಹಾಗೂ ಕಾಫಿ ಒಟ್ಟಿಗೇ ತಾ.” ಎಂದ. ಮಾಣಿ ಹೊರಟುಹೋದ ಮೇಲೆ ಹುಟ್ಟಿದ ಸಂಶಯವೊಂದು ಹೊಸ ದುಗುಡಕ್ಕೆ ಕಾರಣವಾಯಿತು : ಆ ಚೀಟಿ ಮೇರಿಯದಾಗಿರದೆ ಇನ್ನೊಬ್ಬರದಾಗಿದ್ದರೆ ? ಮೇರಿಯದೇ ಆಗಿದ್ದರೆ ಅವಳಿಗೆ ಇಷ್ಟೊಂದು ತರಾತುರಿಯಲ್ಲಿ ನನಗೆ ಮುಟ್ಟಿಸಬೇಕಾದ ಸಮಾಚಾರ ಅದೇನಿರಬಹುದು ಚೀಟಿಯಲ್ಲಿ ತನ್ನ ಹೆಸರನ್ನು ತಿಳಿಸದೇ ಇರುವುದಕ್ಕೆ ಕಾರಣವೇನು ? ಇನ್ನೊಬ್ಬನ ಬಗ್ಗೆ ಚಿಂತೆ ವ್ಯಕ್ತಪಡಿಸುವಾಗಲೂ ತಾನು ಮಾತ್ರ ಈ ಉಪದ್ವ್ಯಾಪದಲ್ಲಿ ಸಿಕ್ಕಿಬೀಳದಿರುವಂತೆ ವಹಿಸಿದ ಎಚ್ಚರವೇ ? ದೇವರೇ ! ನಾವೆಲ್ಲ ಯಾರೂ ಯಾರನ್ನೂ ನಂಬರಾಗದಂಥ ಸ್ಥಿತಿಗೆ ಬರುತ್ತಿದ್ದೇವೆಯೇ ? ನಮ್ಮ ನಮ್ಮ ತಲೆ ಉಳಿಸಿಕೊಳ್ಳುವುದರಲ್ಲೇ ನಮ್ಮ ಕ್ರಿಯಾಶಕ್ತಿ ತನ್ನ ಸ್ಪೂರ್ತಿಯನ್ನೇ ಕಳಕೊಳ್ಳುತ್ತಿಲ್ಲವಷ್ಟೇ ? ಈ ಚೀಟಿ ಮೇರಿಯದೇ ಆಗಿದ್ದರೆ ನನ್ನ ಬಗ್ಗೆ ಇಷ್ಟೊಂದು ಕಾತರ ಇದ್ದೂ ತನ್ನ ಹೆಸರನ್ನು ತಿಳಿಸದೇ ಇರುವಂತಹ ಸಂದರ್ಭವೇನಿರಬಹುದು ? ಚೀಟಿಯನ್ನು ತನ್ನ ಕೋಣೆಗೆ ಕಳಿಸದೇ ಹೀಗೆ ಹೊಟೆಲ್ಲಿಗೆ ಕಳಿಸುವ ಉದ್ದೇಶವೇನು ? ಎಂಟು ಗಂಟೆಯ ನಂತರವೇ ಫೋನ್ ಮಾಡಲು ಹೇಳಿದ್ದು ಮನೆಯಲ್ಲಿ ತಾನು ನಿಶ್ಚಿತವಾಗಿ ಇರುವ ಹೊತ್ತಿಗೇ ಫೋನ್ ಬರಲಿ ಎಂಬ ಉದ್ದೇಶದಿಂದಿರಬೇಕು.

ಮಾಣಿ ವಡೆ, ಕಾಫಿ ತಂದಿಟ್ಟು ಹೋಗುವಷ್ಟರಲ್ಲಿ ಹೊಟೆಲ್ ಮಾಲಿಕ ನಾಯಕ ಒಳಗೆ ಬಂದ. ಕಿವಿಯ ಸಂದಿಯಲ್ಲಿ ಅತ್ತರ್ ಹಚ್ಚಿದ ಹತ್ತಿಯ ತುಂಡೊಂದನ್ನು ಸಿಕ್ಕಿಸಿಕೊಂಡಿದ್ದ. ತಲೆನೋವು ತರಿಸುವಂತಹ ಅದರ ವಾಸನೆಯಿಂದ ನಾಗಪ್ಪನಿಗೆ ಕಾಫಿಯ ರುಚಿಯೇ ತಿಳಿಯದಾಯಿತು. ರಂಗೇಲ ಎರಡೂ ಮಗ. ಹೊಟೆಲ್ಲಿನ ಗಲ್ಲೆಯಲ್ಲಿ ಕೂತು ಬರಹೋಗುವವರ ಮೋರೆಗಳನ್ನು ನೋಡುತ್ತ, ಗಿರಾಕಿಗಳಿಂದ ಬಿಲ್ಲು ಪಡೆದು ಹಣ ವಸೂಲು ಮಾಡಿ, ಚಿಲ್ಲರೆ ಹಣ ವಾಪಸ್ಸು ಕೊಟ್ಟು ಬಿಲ್ಲನ್ನು ನೆಟ್ಟಗೆ ನಿಂತ ದಬ್ಬಣವೊಂದಕ್ಕೆ ಚುಚ್ಚುತ್ತ ಕೂಡ್ರುವ ಈತನ ತಲೆಯಲ್ಲಿ ದುಡ್ಡಿನ ಪೆಟ್ಟಿಗೆಯಲ್ಲಿ ಶೇಖರಿಸುತ್ತಿದ್ದ ಹಣ, ಅದರಿಂದ ಕೊಂಡುಕೊಳ್ಳಬಹುದಾದ ಭೋಗವಸ್ತು_ಇವುಗಳನ್ನು ಬಿಟ್ಟು ಬೇರೆ ಯಾವುದಾದರೂ ವಿಚಾರ ತುಂಬಿರುವುದು ಶಕ್ಯವಿದೆಯೇ ? ನಾಗಪ್ಪನಿಗೆ ಸಂಶಯ. “ಚೀಟಿ ಕೊಟ್ಟ ಹುಡುಗನನ್ನು ನಾನು ಇತ್ತಕಡೆ ನೋಡಿದಂತಿಲ್ಲ. ಕ್ರಿಶ್ಚನ್ನನಿದ್ದಂತೆ ತೋರಿತು. ಚೀಟಿ ಯಾರು ಕಳಿಸಿದ್ದಾರೆ ಎಂದು ಕೇಳಿದಾಗ ನನಗೆ ಕೊಡಲು ಹಿಂದು ಮುಂದು ನೋಡುತ್ತ ‘ಇಲ್ಲ’ ಇನ್ನೊಮ್ಮೆ ಬರುತ್ತೇನೆ’ಂದ. ನಿನ್ನ ಪರಿಚಯವೂ ಅವನಿಗೆ ಇದ್ದಂತೆ ಇಲ್ಲ. ಯಾಕೆಂದರ ನಾನು ಹಾಕಿಕೊಟ್ಟ ಕುರ್ಚಿಯಲ್ಲಿ ಕುಳಿತು ಗಿರಾಕಿಗಳು ಒಬ್ಬೊಬ್ಬರೇ ಬಂದಂತೆ_‘ಅವರು ಬಂದರೆ ?’ ಎಂದು ಕೇಳುತ್ತಿದ್ದ, ನೇರವಾಗಿ. ‘ನಿನಗೆ ಅವರ ಪರಿಚಯವಿಲ್ಲವೇ ? ’ ಎಂದು ಕೇಳಿದಾಗ ಬಹಳ ಚಾಲಾಕಿನ ಉತ್ತರ_‘ಚೀಟಿ ಕೊಟ್ಟವರು ಅವರನ್ನು ಚೆನ್ನಾಗಿ ಬಲ್ಲರು.”

ಎರಡೂ ಮಗನೇ, ನಿನ್ನ ತಲೆಯ ಮೇಲೆ ಜಪ್ಪಿಬಿಡಬೇಕು ಅನ್ನಿಸುತ್ತದೆಯಲ್ಲವೊ ಎನ್ನುವಷ್ಟು ಬಂದ ಸಿಟ್ಟನ್ನು ನಾಗಪ್ಪ ಪ್ರಯತ್ನಪೂರ್ವಕವಾಗಿ ನುಂಗಿಕೊಂಡ. (ಇಷ್ಟು ಸಣ್ಣ ಚೂರು ಸಂಗತಿಯನ್ನೇ ದೋಸೇ ಹಿಟ್ಟಿನ ಹಾಗೆ ವಿಸ್ತರಿಸುವ ನೀನು ಹೊಟೆಲ್ ಮಾಲಿಕನಾಗಿ ಶೋಭಿಸುತ್ತೀ, ಬಿಡು !) ಚೀಟಿ ಬರೆದವಳು ಮೇರಿಯೇ ಇರಬೇಕು ಎಂಬ ಅನ್ನಿಸಿಕೆ ಗಟ್ಟಿಯಾಗುತ್ತಿರುವಾಗಲೇ ನಾಯಕ ಸಣ್ಣ ಬಾಂಬನ್ನೇ ಎಸೆದ : “ಶ್ರೀನಿವಾಸನ ಬಗ್ಗೆ ನೀನೇನೋ ಕಾದಂಬರಿ ಬರೆಯಲು ಹಿಡಿದಿದ್ದೀಯಂತೆ. ನಿನ್ನ ಗೆಳೆಯ ಸೀತಾರಾಮ ಎಲ್ಲ ಕಡೆಯಲ್ಲಿ ಸುದ್ದಿ ಹಬ್ಬಿಸಿದ್ದಾನೆ. ಶ್ರೀನಿವಾಸನಿಗೆ ಇದು ಗೊತ್ತಾಗಿದೆ. ಆದರೆ ಅದಕ್ಕೆ ಅವನು ಹೆದರಿಕೊಂಡಿಲ್ಲ. ‘ಬರೆಯಲಿ, ಯಾವ ಭಿಡೆಯೂ ಬೇಡ. ನನ್ನ ಮನೆಯಲ್ಲೇ ಕೂತು ಬರೆ’ ಎಂದು ಅವನೇ ನಿನಗೆ ಸೂಚಿಸಿದ್ದನಂತೆ ಹೌದೆ ? ಶ್ರೀನಿವಾಸನೇ ಹೇಳಿದ್ದು…” ಬಾಯಲ್ಲಿ ತುಂಬಿಕೊಂಡ ಕವಳದ ಎಂಜಲವನ್ನು ಸಿಂಕಿನಲ್ಲಿ ಉಗುಳಿ ಬರುವಷ್ಟರಲ್ಲಿ ನಾಗಪ್ಪ ಸಿಟ್ಟಿನಿಂದ ಹೊತ್ತಿಕೊಂಡಿದ್ದ. ಆದರೆ ಆ ಸಿಟ್ಟಿನ ಗುರಿ ಯಾರೆಂಬುದು ಸ್ಪಷ್ಟವಾಗಲಿಲ್ಲ : ಕಾದಂಬರಿಯ ಬಗ್ಗೆ ಸುದ್ದಿ ಹರಡುತ್ತ ನಡೆದ ಸೀತಾರಾಮನೋ ? ಆ ಸುದ್ದಿಗೆ ಹೆದರಿಲ್ಲವೆಂದು ನಟಿಸುವ ಅಂಜುಗುಳಿ ಶ್ರೀನಿವಾಸನೋ ? ಇಲ್ಲ, ಇಲ್ಲದ ಕಿತಾಪತಿಗೆ ಬಾಯಿ ಕಿಸಿಯುವ ಈ ಡೊಳ್ಳುಹೊಟ್ಟೆಯ ನಾಯಕನೋ ? ನಾಯಕ ಬಾಯಿ ಖಾಲಿ ಮಾಡಿಕೊಂಡು ಬಂದಿದ್ದರ ಉದ್ದೇಶ ಬಾಯಿ ಬಿಚ್ಚಹತ್ತಿತು : “ಶ್ರೀನಿವಾಸನ ಜತೆ ಹಗೆ ಕಟ್ಟಿಕೊಳ್ಳಬೇಡ. ತನ್ನ ವಿರುದ್ಧ ನಿಂತವರನ್ನು ಹಣಿಯಲು ಅವನು ಏನು ಮಾಡಲೂ ಹೇಸುವವನಲ್ಲ.” ಎಂದ ಕೆಲಹೊತ್ತಿನ ಮೇಲೆ :“ನನಗಿದಾವುದರಲ್ಲೂ ವಿಶ್ವಾಸವಿಲ್ಲ, ಮಾರಾಯಾ, ಹೇಳುತ್ತೇನೆಂದು ಸಿಟ್ಟಾಗಬೇಡ. ನಿನ್ನ ಬಗ್ಗೆ ಇದ್ದ ಅಭಿಮಾನದಿಂದಲೇ ಒಂದು ಮಾತು ಹೇಳಿಬಿಡುತ್ತೇನೆ : ಶ್ರೀನಿವಾಸ ಬರೇ ಹಣದ ಬಲದ ಮೇಲೇ ಆಗಲೊಲ್ಲದೇಕೆ_ಮುಂಬಯಿಯ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ಒಂದು ಬಲಾಢ್ಯ ಸ್ಥಾನ ಗಳಿಸಿಕೊಂಡಿದ್ದಾನೆ. ಮಠದ ಸ್ವಾಮಿಗಳ ಮೇಲೆ, ಅವನ ಹತ್ತಿರದವರ ಮೇಲೆಲ್ಲ ಪ್ರಚಂಡ ವರ್ಚಸ್ಸು ಇವನದು. ವಡಾಳಾದ ಗಣೇಶೋತ್ಸವದ ಎಲ್ಲ ಜವಾಬ್ದಾರಿ‌ಈ ವರ್ಷ ತಾನೇ ಹೊತ್ತುಕೊಂಡಿದ್ದಾನೆ….ಹೇಳುವ ಉದ್ದೇಶ ಇಷ್ಟೇ : ಕಳೆದ ಕೆಲವು ದಿನಗಳಿಂದ ನಮ್ಮ ಸಮಾಜದ ವರ್ಚಸ್ಸುಳ್ಳ ಹಿರಿಯರಲ್ಲೆಲ್ಲ ನಿನ್ನ ಪೂರ್‍ವಜರನ್ನು ಕುರಿತು ಸಂಶಯ ಹುಟ್ಟಿಸುವಂತಹ ಒಂದು ವಿಚಿತ್ರ ಸುದ್ದಿ …”ನಾಗಪ್ಪನ ಮೋರೆ ಸಿಟ್ಟಿನಿಂದ ಕಪ್ಪಾಗುತ್ತಿದ್ದುದನ್ನು ನೋಡಿಯೂ ಹಿಂದೆಗೆಯದೇ ಒಂದು ಬಗೆಯ ಫಾಜೀಲ ಹಠದಿಂದ_“ನಿನ್ನ ಅಮ್ಮ, ಅಪ್ಪ ನಮ್ಮ ಜಾತಿಯವರೇ ಅಲ್ಲ ಎನ್ನುವಂತಹ…”

ನಾಗಪ್ಪ ಮುಂದೆ ಕೇಳುವ ಮನಸ್ಸಿಲ್ಲದೇ ಕಾಫಿ ಮುಗಿಸುವ ಮೊದಲೇ ಧಡಕ್ಕನೆ ಎದ್ದೇ ನಿಂತ. ಇದು ಉದ್ಧಟತನವೆಂದು ಬಗೆದು ಪ್ರಕ್ಷುಬ್ಧನಾದ ನಾಯಕ, “ಶ್ರೀನಿವಾಸರಾವ್ ನಮ್ಮೆಲ್ಲರ ಮುಂದೆ ಇದನ್ನೆಲ್ಲ ಪುರಾವೆ ಸಹಿತ ಸಿದ್ಧಪಡಿಸುವ ಪಣ ತೊಟ್ಟು ನಾಳೆಗೇ ಗೋವೆಗೆ ಹೋಗುವವನಿದ್ದಾನೆ….ಇದನ್ನೆಲ್ಲ ಹೇಳುತ್ತಿರುವುದು ನಿನ್ನ ಒಳಿತಿಗಾಗಿಯೇ…” ಎನ್ನುತ್ತಿರುವಾಗಲೇ ನಾಗಪ್ಪ, “ನೀವು, ನಿಮ್ಮ ದರಿದ್ರ ಎಸ್. ಬೀ. ಸಮಾಜ_ಅದಕ್ಕೂ ನನಗೂ ಯಾವ ಸಂಬಂಧವೂ ಇಲ್ಲವೋ ನಾಯಕಾ. ನಿಮ್ಮ ಜಾತಿಯವನಾಗಿಹುಟ್ಟಿದ್ದರ ಬಗ್ಗೆ ನನಗೆ ಯಾವ ಅಭಿಮಾನವೂ ಇಲ್ಲ. ಈ ಕಾರಣಕ್ಕಾಗಿಯೇ ಸಮಾಜದ ಯಾವ ಒಂದು ಕಾರ್ಯಕ್ರಮದಲ್ಲಿಯೂ ನಾನು ಈವರೆಗೆ ಭಾಗವಹಿಸಿಲ್ಲ. ನಡೆಸಲಿ_ಶ್ರೀನಿವಾಸ, ನನ್ನ ಪೂರ್ವಜರನ್ನು ಕುರಿತು ಸಂಶೋಧನೆ. ಅದಕ್ಕೆಲ್ಲ ನಾನು ಹೆದರಿಕೊಂಡಿಲ್ಲ. ಬದಲು, ಶ್ರೀನಿವಾಸ ಹುಡುಕಿ ತೆಗೆದದ್ದನ್ನು ತಿಳಿಯಲು ಕುತೂಹಲವುಂಟಾಗಿದೆ. ಭೆಟ್ಟಿಯಾದಾಗ ನೀನೇ ಹೇಳಿಬಿಡು. ನಾನು ಹೀಗೆ ಅಂದೆನಂತ. ಇಷ್ಟೇ, ನನ್ನ ಕಾದಂಬರಿಯಲ್ಲಿ ಬರುವ ಅವನ ಪೂರ್ವೇತಿಹಾಸವನ್ನು ಇದಿರಿಸಲು ಮಾತ್ರ ಬೆನ್ನೆಲುಬಿಗೆ ತಾಕತ್ತು ಬರಲು ದಿನವೂ ಚಂಪೀ ಮಾಡಿಕೊಳ್ಳಲು ಹೇಳು .”ನಾಗಪ್ಪನ ಮಾತಿನಲ್ಲಿ ಅವನೇ ಬಯಸಿರದ ನಿಷ್ಠುರ ಸೇರಿಕೊಂಡಿತ್ತು. ನಾಯಕನ ಕಣ್ಣುಗಳು ಮತ್ತೆ ಫಾಜೀಲ ಕುತೂಹಲದಿಂದ ದೊಡ್ಡದಾದವು. ಯಾಕೆ ? ಅಂತಹದೇನಾದರೂ ಇದೆಯೇ ? ಎಂದು ಕೇಳುವ ರೀತಿಯಲ್ಲಿ ತುಟಿ ತೆರೆದು ಕುಳಿತದ್ದನ್ನು ನೋಡಿ ಹೇಸಿಗೆಪಟ್ಟು : “ಇನ್ನೊಂದು ಮಾತನ್ನು ಹೇಳಿಡುತ್ತೇನೆ ನಾಯಕಾ, ಈ ಕಾದಂಬರಿ ಬರೇ ಶ್ರೀನಿವಾಸನ ಬಗ್ಗೆ ಮಾತ್ರವಲ್ಲ. ಅವನ ಹೀನ ಕರಾಮತಿಗಳಿಗೆ ಬೆಂಬಲವಿತ್ತ ನಿಮ್ಮೆಲ್ಲರ ಬಗೆಗೂ ಇದೆ. ನಿಮ್ಮ ಎಸ್. ಬೀ. (ಎಸ್. ಓ. ಬೀ !) ಸಮಾಜದ ಬಗೆಗೂ ಇದೆ. ಮಠದ ಸ್ವಾಮಿಗಳ ಬಗೆಗೂ ಇದೆ….ನನ್ನ ಬಗ್ಗೆ ನೀನು ತೋರುತ್ತಾ ಬಂದ ಅಭಿಮಾನಕ್ಕೆ ತುಂಬ ಋಣಿಯಾಗಿದ್ದೇನೆ.” ಎಂದವನೇ ಮಾಣಿ ಮೊದಲೇ ತಂದಿಟ್ಟ ಬಿಲ್ಲನ್ನು ಎತ್ತಿಕೊಂಡು ನಾಯಕನನ್ನು ಕುರ್ಚಿಯಲ್ಲಿ ಕುಳಿತಲ್ಲೇ ಬಿಟ್ಟು ಕೆಳಗೆ ನಡೆದೇಬಿಟ್ಟ. ನಿಚ್ಚಣಿಕೆಯ ಮೆಟ್ಟಿಲ ಮೇಲೆ ಹೆಜ್ಜೆಗಳು ಬಯಸಿದ್ದಕ್ಕಿಂತ ಹೆಚ್ಚು ಸದ್ದು ಮಾಡಿದವು. ಕೌಂಟರಿನಲ್ಲಿ ಹಣ ತೆತ್ತು ಹೊಟೆಲ್ಲಿನಿಂದ ಹೊರಗೆ ಬಿದ್ದಾಗ ‘ಸಂತೋಷಭವನ’ದೊಂದಿಗಿನ ಸಂಬಂಧ ಇಲ್ಲಿಗೇ ಕಡಿಯಿತೇನೋ ಎಂದುಕೊಂಡ.
uಟಿಜeಜಿiಟಿeಜ
– ಅಧ್ಯಾಯ ಹದಿನೈದು –

ತನ್ನ ಹಲವಾರು ದುಃಖಗಳಿಗೆ ತನ್ನ ಸ್ವಭಾವರಚನೆಯಲ್ಲೇ ಬೆಳೆದುಬಂದ ಒಂದು ದಾರುಣವಾದ ಒಂಟಿತನ ಕಾರಣವಾಗಿದೆ ಎಂಬ ಅರಿವು ನಾಗಪ್ಪನಿಗೆ ಇದೆಯಾದರೂ ಅದರ ಬಗ್ಗೆ ಏನೂ ಮಾಡಲು ಆಗದವನಾಗಿದ್ದಾನೆ. ತನ್ನ ಬಾಲ್ಯದ ಬಗ್ಗೆ, ಅಪ್ಪ-ಅಮ್ಮರ ಬಗ್ಗೆ, ಜಾತಿಯ ಬಗ್ಗೆ, ಎದೆಯ ಹತ್ತಿರ ಅವುಚಿ ಹಿಡಿದಲ್ಲೇ ಸುಡುವ ಗುಟ್ಟಿನ ಬಗ್ಗೆ, ಅಣ್ಣ-ತಂಗಿಯರ ಬಗ್ಗೆ, ಪರ್‍ಯಾಯವಾಗಿ ಮಾತು ಬಂದರೂ, ಹಾಗೆ ಮಾತು ಬರಲು ಕಾರಣವಾದವರೊಂದಿಗಿನ ಸಂಬಂಧ ಕಡಿಯುತ್ತ ಬಂದಿದ್ದಾನೆ. ‘ಸಂತೋಷಭವನ’ದೊಡನೆಯ ಸಂಬಂಧವನ್ನು ಕಡಿಯುವ ನಿರ್ಧಾರ ಇಂತಹ ಅನೇಕ ನಿರ್ಧಾರಗಳ ಸಾಲಿನಲ್ಲಿ ಇತ್ತೀಚಿನದು., ಅಷ್ಟೇ. ಹಾಗೆ ನೋಡಿದರೆ, ನಾಗಪ್ಪನಿಗೆ ಗೆಳೆಯರೆಂದರೆ ಪ್ರಾಣ. ಅದರ ಸಲುವಾಗಿ ಏನನ್ನು ಮಾಡಲೂ ಸಿದ್ಧ : ಅಂತಹ ಉತ್ಕಟತೆ ನಾಗಪ್ಪನ ಭಾವನೆಗಳಿಗಿದೆ. ಆದರೆ ಅದಕ್ಕೆ ಪ್ರತಿಸ್ಪಂದಿಯಾಗುವಂತಹ ಭಾವನೆ ತಾನು ವಿಶ್ವಾಸವಿಟ್ಟವರಿಂದ ಪ್ರಕಟವಾಗದೆ ಇದ್ದಾಗ, ತನ್ನನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳಲು ಅಷ್ಟೇ ಈ ಗೆಳೆತನದ ನಟನೆ ಎಂಬ ನಿಲುಗಡೆಗೆ ಬಂದು ವಿಷಾದಪಟ್ಟಿದ್ದಾನೆ. ಇದು ಬರಿಯೆ ತನ್ನೊಬ್ಬನದೇ ಅನುಭವ ಎಂಬಂತೆ ಒಳಗೊಳಗೇ ಅತ್ತಿದ್ದಾನೆ. ಈ ಶ್ರೀನಿವಾಸನೇ ! ಐದೇ ದಿನಗಳ ಹಿಂದೆ ಅವನು ತನ್ನನ್ನು ಭೆಟ್ಟಿಯಾದಾಗ, ರಜೆಯ ದಿನಗಳನ್ನು ತಮ್ಮಲ್ಲೇ ಕಳೆಯುವಂತೆ ಕೇಳಿಕೊಂಡಾಗ ಅವನ ಮೋರೆಯ ಮೇಲೆ ಮೂಡಿದ ಪ್ರಾಮಾಣಿಕತೆಯನ್ನು ನೆನೆದರೇ ನನ್ನ ಕಣ್ಣು ಆರ್ದ್ರವಾಗುವ ಅನ್ನಿಸಿಕೆ ನಾಗಪ್ಪನಿಗೆ. ಅವನ ಆ ಪ್ರಾಮಾಣಿಕತೆಯನ್ನು ನಂಬಿಯೇ ಹಿಂದಿನದೆಲ್ಲವನ್ನೂ ಮರೆತವನ ಹಾಗೆ ಯಾವ ಒಂದು ಅಡೆತಡೆಯಿಲ್ಲದೇನೆ ಅವನಲ್ಲಿ ಹೋಗಲು ಒಪ್ಪಿಕೊಂಡಿದ್ದ. ಆದರೆ ಅವನ ಆಗಿನ ಮುಖಚರ್ಯೆ ಕೂಡ ಮೋಸದ್ದಾಗಿತ್ತು ಎಂಬುದು ತಿಳಿದಾಗ ನಾಗಪ್ಪನಿಗೆ ತನ್ನ ಬಗ್ಗೆ ತನಗೇ ಕೆಡುಕೆನಿಸಿತು. ಜನರ ನಿಜ ಸ್ವಭಾವವನ್ನು ಅರಿಯುವ ತಾಕತ್ತೇ ತನಗಿಲ್ಲ. ಎಲ್ಲರನ್ನೂ ಸುಲಭವಾಗಿ ನಂಬಿಬಿಡುತ್ತೇನೆ, ಎಂದುಕೊಂಡ. ಇದೀಗಿನ ಸ್ಥಿತಿಯಲ್ಲಿ ಯಾರಲ್ಲಾದರೂ ಹೋಗಬೇಕು ಅನ್ನಿಸಿತು. ಮೇರಿಗೆ ಫೋನ್ ಮಾಡಲೇ ? ಕನಿಷ್ಠ ಅವಳ ದನಿಯನ್ನಾದರೂ ಕೇಳಿದರೆ ಮನಸ್ಸಿಗೆ ಸಮಾಧಾನವಾದೀತು ಅನ್ನಿಸಿತು. ಮರುಗಳಿಗೆ, ಚೀಟಿ ಕಳಿಸಿದವಳು ಮೇರಿಯೇ ಹೌದಾದರೆ. ಎಂಟು ಗಂಟೆಯ ನಂತರವೇ ಫೋನ್ ಮಾಡಲು ಹೇಳಿದ್ದಕ್ಕೆ ಕಾರಣವಿರಬೇಕು. ಆಫೀಸಿನ ಫೋನಿನ ಮೇಲೆ ಕೊಡಲು ಆಗದಂತಹ ಸುದ್ದಿಯೇನಾದರೂ ಇರಬೇಕು : ಮನೆಯ ಹಾದಿ ಹಿಡಿದ ನಾಗಪ್ಪನ ಮನಸ್ಸನ್ನು ಮೇರಿ ತುಂಬಹತ್ತಿದ್ದಳು : ಹಿಂದೊಮ್ಮೆ ಮೇರಿಗೇ ಹೇಳಿದಂತೆ ತನ್ನ ಲಕ್ಷ್ಯವನ್ನು ಮೊತ್ತಮೊದಲು ಸೆರೆಹಿಡಿದದ್ದೇ ಅವಳ ಮೋಹಕವಾದ ಕಣ್ಣುಗಳಾಗಿದ್ದವು_ಮುಖ್ಯವಾಗಿ ಅವುಗಳ ಆರ್ದ್ರವಾದ ಹೊಳಪು ಆಗಿತ್ತು. ಕಣ್ಣುಗಳ ಜೊತೆ ಅವಳ ಹೆಗಲ ಮೇಲೆ ಹರಡಿ ಬೀಳುವ ಲಕಲಕಿಸುವ ಕಪ್ಪು ಕೇಶರಾಶಿಯೂ ಈಗ ಸೇರಿಕೊಂಡಿತು. ಆದರೆ ಹುಡುಗಿಯರ ರೂಪಕ್ಕಷ್ಟೇ ಮರುಳಾಗುವ ವ್ಯಕ್ತಿತ್ವವೇ ಅಲ್ಲ ನಾಗಪ್ಪನದು. ಮನಸ್ಸಿಗೆ ತುಂಬ ಸುಖ ಕೊಡುವ ಮೇರಿಯ ರೂಪಕ್ಕಿಂತ ಹೆಚ್ಚಾಗಿ ನಾಗಪ್ಪನನ್ನು ಇದೀಗ ಪುಲಕಗೊಳಿಸಿದ್ದು ಅವಳು ತನ್ನ ಬಗ್ಗೆ ತೋರಿದ ಕಾಳಜಿಯೇ. ಅವಳ ಬಗೆಗಿನ ಈ ಪ್ರೀತಿಯ ಭಾವನೆಯಲ್ಲಿ (ನಾಗಪ್ಪನ ಮೈಮೇಲೆ ಮುಳ್ಳು ನಿಂತಾಗ ತಾನೇ ಆಶ್ಚರ್ಯಪಟ್ಟ.) ಕೃತಜ್ಞತೆಯ ಭಾವವೇ ದೊಡ್ಡದಾಗಿತ್ತು. ರಾತ್ರಿಯ ಎಂಟು ಗಂಟೆಯವರೆಗೆ ದಾರಿ ಕಾಯುವದನ್ನು ಬಿಟ್ಟು ಬೇರೆ ಏನು ಮಾಡಲೂ ತೋಚದೇ, ಯಾರಾದರೂ ಗೆಳೆಯರಲ್ಲಿ ಹೋದರೆ ಹೇಗೆ ಎಂಬ ವಿಚಾರ ಬಂದಾಗ ತನಗೆ ನಿಜವಾದ ಗೆಳೆಯರೇ ಇಲ್ಲ ಎಂಬ ಅರಿವಿನಿಂದ ಮನಸ್ಸು ಮುದುಡಿಕೊಂಡಿತು. ಹಲವಾರು ಹೆಸರುಗಳು, ಹಲವಾರು ಹೆಸರಿಲ್ಲದ ರೂಪಗಳು ಕಣ್ಣಿದಿರಿನಿಂದ ಹಾದುಹೋದವು. ರಾಣಿ ಕೂಡ. ಯಾರೂ ಬೇಡ ಎನ್ನಿಸಿತು. ಬದುಕು ಸಾವುಗಳ ನಿರ್ಣಯವಾಗುತ್ತಿರುವ ಗಳಿಗೆಯಲ್ಲಿ ಸಹವಾಸದ ಕಲ್ಪನೆಯೇ ದುಸ್ಸಹವಾಗಹತ್ತಿತು.

ವಿಚಾರಮಾಡುತ್ತಿರುವಾಗಲೇ ನಾಗಪ್ಪ ಪ್ರಾರ್ಥನಾಸಮಾಜಕ್ಕೆ ಬಂದು ತಲುಪಿದ್ದ. ಮುಖ್ಯ ರಸ್ತೆ ದಾಟಿ ಆ ಬದಿಯ ಫೂಟ್‌ಪಾಥ್ ಸೇರಿದ್ದೇ ತಡ : ನ್ಯೂಸ್‌ಪೇಪರ್ ಏಜೆಂಟಿನ ಅಂಗಡಿ ! ‘ಸಂತೋಷಭನ’ಕ್ಕೆ ಹೋಗುವ ಮೊದಲು ಇಲ್ಲಿ ಬಂದಾಗ ತನ್ನಲ್ಲಿ ಮೊಳೆತ ವಿಚಾರಕ್ಕೆ ನಾಗಪ್ಪನಿಗೆ ಈಗ ನಗು ಬಂತು. ಅಂಗಡಿ ತಲುಪುತ್ತಲೇ ಇದಿರಿನಲೇ ಇದ್ದ ಖಾಲಿ ಸ್ಟೂಲೊಂದರ ಮೇಲೆ ಕುಳಿತು ಅಂಗಡಿಯ ಮಾಲೀಕನಾದ ತುಕಾರಾಮನೊಡನೆ ಹರಟೆ ಹೊಡೆಯಲು ಉತ್ಸುಕನಾದ. ನಾಗಪ್ಪ ತನ್ನ ಅಂಗಡಿಯ ಬಾಗಿಲಲ್ಲಿ ಬಂದು ಕೂತದ್ದರ ನಿರಾಡಂಬರತೆಯಿಂದಲೇ ಹಿಗ್ಗಿದ ತುಕಾರಾಮ ಬಹಳ ಖುಶಿಯಿಂದ ಚಹ ತರಿಸಲೇ ಎಂದು ಕೇಳಿದ. ಬೇಡ, ಇದೀಗ ನಾಯಕರ ಚಹಾ ದುಕಾನಿನಲ್ಲಿ (ಸಂತೋಷದಭನ’ದ ಹೆಸರು ನೆನೆಯುವ ಮನಸ್ಸಾಗಲಿಲ್ಲ. ನಾಗಪ್ಪನಿಗೆ) ನಾಸ್ತಾ ಆಯಿತು ಎಂದು ಆಗ ಕೊಂಡುಕೊಂಡ ಪತ್ರಿಕೆಯನ್ನು ಓದಲೆಂಬಂತೆ ಬಿಚ್ಚಹತ್ತಿದ. “ಎಳೆನೀರಾದರೂ ?” ಎಂದು ತುಕಾರಾಮಾ ಕೇಳಿದಾಗ ಬೇಡವೆನ್ನುವ ಮನಸ್ಸಾಗದೇ “ಗ್ಲಾಸುಗಳಲ್ಲೇ ತರಿಸಿ, ಇಬ್ಬರೂ ಹಂಚಿ ಕುಡಿಯೋಣ.” ಎಂದು ಸೂಚಿಸಿದ. ಸಹಾಯದ ಹುಡುಗನಿಗೆ ಎರಡು ಸೀಯಾಳಗಳನ್ನು ತರುವಂತೆ ಕೈಸನ್ನೆಮಾಡಿ ಹಣ ಕೊಟ್ಟು ಅಲ್ಲಿಂದ ಓಡಿಸಿದ ತುಕಾರಾಮ. ಸೀಯಾಳ ತರಲು ಬೆನ್‌ಹ್ಯಾಮ್-ಹಾಲ್-ಲೇನಿಗೇ ಓಡಬೇಕು.

ಮೆಟ್ರಿಕ ಅನಂತರದ ವಿದ್ಯಾರ್ಥಿದೆಸೆಯ ದಿನಗಳನ್ನು ನಾಗಪ್ಪ ಖೇತವಾಡಿಯ ಎರಡು ಕೋಣೆಗಳ ಮನೆಯಲ್ಲೇ ಕಳೆದಿದ್ದ. ಕೆಮಿಕಲ್ ಟೆಕ್ನಾಲಾಜಿಯ ಕೊನೆಯ ಪರಿಕ್ಷೆ ಪಾಸಾದನಂತರ ನೌಕರಿಗಾಗಿ ಅಲೆದಾಡಿದ್ದ. ಶ್ರೀನಿವಾಸನೇ ಆಗಿನ ದಿನಗಳಲ್ಲಿ ಹತ್ತಿರದ ಗೆಳೆಯ. ಈ ನ್ಯೂಸ್‌ಪೇಪೆರ್ ಅಂಗಡಿ, ‘ಸಂತೋಷಭವನಗಳ ಪರಿಚಯ ಆಗಿನಿಂದಲೇ. ‘ಶೇರ್-ಏ-ಪಂಜಾಬ್’ ಮಾಂಸಾಹಾರಿ ಹೋಟೆಲ್ಲು, ಅದರ ಮಗ್ಗುಲಿನ ‘ಲೈಟ್ ಅಫ಼್ ಏಶಿಯಾ ಹೆರ್-ಕಟಿಂಗ್-ಸೆಲೂನು’ ಇವುಗಳ ಪರಿಚಯ ಕೂಡ. ಈ ಪರಿಸರದ ಅನೇಕರು ಆಗಿನ ದಿನಗಳಲ್ಲಿ ಶ್ರೀನಿವಾಸನ ಜಿಗರೀದೋಸ್ತರು. ಯಾವ ಒಂದು ಸಂಕೋಚ, ಆತ್ಮಪ್ರಜ್ಞೆಗಳ ಲವಲೇಶವೂ ಇಲ್ಲದೇ ಇವರ ಕೈಯಲ್ಲಿ ಕೈಯಿಟ್ಟು ಒಮ್ಮೊಮ್ಮೆ ಹೆಗಲ ಮೇಲೆ ಕೈಯಿಟ್ಟು ಮನಮೋಕಳೇ ಮಾತನಾಡುವ ರೀತಿಯನ್ನು ನಾಗಪ್ಪ ಥಕ್ಕಾಗಿ ನೋಡುತ್ತಿದ್ದ. ಶ್ರೀನಿವಾಸನಂತೆ ನಾಗಪ್ಪನೂ ಹಳ್ಳಿಯವನೇ. ಈಗಲೂ ಖೇತವಾಡಿಯ ಗಲ್ಲಿಗಲ್ಲಿಗಳು, ಪ್ರಾರ್ಥನಾಸಮಾಜ, ಠಾಕೂರದ್ವಾರ, ಗ್ರೆಂಟ್ ರೋಡ್, ಚರ್ನೀ ರೋಡ್, ಚೌಪಾಟೀ, ಧೋಬೀ-ತಲಾವ್ ಇವುಗಳೆಲ್ಲ ನಾಗಪ್ಪನ ಮಾನಸಿಕ ಪ್ರಪಂಚದ ಆತ್ಮೀಯ ಅಂಶಗಳು. ನಾಗಪ್ಪನಿಗೂ ಈ ತುಕಾರಾಮನಂತಹರೊಡನೆ ಮನಬಿಚ್ಚಿ ಮಾತನಾಡುವ ಆಸೆ. ಆದರೆ ಒಳಗೆಲ್ಲೋ ನಾಲಗೆಯನ್ನು ಬಿಗಿದು ಹಿಡಿಯುವ ಸಂಕೋಚ. ಮಾತಿನಿಂದ ಸಂಬಂಧ ಬೆಳೆಸುವ ಪ್ರಕೃತಿಯೇ ಅಲ್ಲ ತನ್ನದು.ಇವರೆಲ್ಲರ ಬಗೆಗೆ ಅನ್ನಿಸುತ್ತಿದ್ದ ಪ್ರೀತಿ ಪರ್ಯಾಯವಾಗಿ ತನ್ನ ಸಾಹಿತ್ಯದಲ್ಲಿ ಎಂದಾದರೂ ಮೂಡಿಬಂದೀತೇ ಹೊರತು ಪ್ರತ್ಯಕ್ಷ ಮುಖಾಮುಖಿಯಲ್ಲಿ ಪ್ರಕಟವಾಗುವಂತಹದಲ್ಲ. ಮೇಲಾಗಿ ಭಾಷೆಯೂ ಒಂದು ತೊಡಕಾಗಿತ್ತು. ಶ್ರೀನಿವಾಸನ ಮರಾಠೀ ಭಾಷೆ ತನ್ನದಕ್ಕಿಂತ ಕಚ್ಚಾ ಆಗಿದ್ದರೂ ಕೂಡ ಯಾವ ಒಂದು ಭಿಡೆಯಿಲ್ಲದೇನೇ ಕೊಂಕಣಿ ಶಬ್ದಗಳನ್ನು, ಕೆಲವೊಂದು ಸರತಿ ಕನ್ನಡ ಶಬ್ದಗಳನ್ನೂ ಬೆರಸಿ, ಕೇಳುವವರಿಗೆ ಮಾತ್ರ ತಾನು ಆಡುತ್ತಿದ್ದದ್ದು ಮರಾಠಿಯೇ ಎನ್ನುವ ಭ್ರಮೆ ಹುಟ್ಟಿಸುವಂತೆ ಮಾತನಾಡುವ ರೀತಿಯೇ ಬಲು ಮೋಜಿನದಾಗಿತ್ತು. ಮುಖ್ಯವಾಗಿ, ಮಾತನಾಡುವಾಗ ತನ್ನಿಂದ ತಪ್ಪುಗಳಾದಾವು ಎಂಬುದರ ಪರಿವೆ ಇಲ್ಲದ್ದೇ ತನಗೆ ಚೆನ್ನಾಗಿ ಬರದ ಭಾಷೆಯಲ್ಲಿ ಮಾತನಾಡುವಾಗಿನ ಧೈರ್ಯದ ಮೂಲವಾಗಿರಬೇಕು. ತನ್ನ ಮಾತಿನ ಮುಖಾಂತರ. ಮಾತಿನಲ್ಲಿ ವ್ಯಕ್ತವಾಗುವ ಅಸಾಧಾರಣ ಧೈರ್ಯದ ಮುಖಾಂತರ ಎಲ್ಲರ ಮೇಲೆ ಛಾಪು ಹೊಡೆಯುತ್ತಿದ್ದ. ಬಾಯ ಬಡಾಯಿಯೇ ದೊಡ್ಡದಾಗಿತ್ತಾದರೂ ಆಡಿದ್ದರ ಬಹುಭಾಗವನ್ನು ಮಾಡಿ ತೋರಿಸುವ ಎದೆಗಾರಿಕೆಯೂ ಅಷ್ಟೇ ದೊಡ್ಡದಾಗಿತ್ತು : ಯಾರನ್ನು ಮರೆಯಲು ತಾನು ಇಲ್ಲಿಗೆ ಬಂದು ಕುಳಿತಿದ್ದೆನೋ ಅವನ ಬಗ್ಗೆಯೇ ತಾನು ಇದೀಗ ವಿಚಾರಮಾಡುತ್ತಿದ್ದುದರ ಅರಿವು ಬಂದು ನಾಗಪ್ಪ ಬೇಚೈನುಗೊಂಡ. ತನ್ನ ಪ್ರೌಢಾವಸ್ಥೆಯ ಮಹತ್ವದ ಭಾಗವನ್ನು ಕಳೆದ ಈ ಖೇತವಾಡಿ, ಗಿರ್ಗಾಂವ್ ಇವೆಲ್ಲವುಗಳನ್ನು ಕುರಿತು ಒಂದು ದಿನ ಬರೆಯಬೇಕು. ಯಾಕೆ ಹಾಗೆ ಅನ್ನಿಸುತ್ತದೆಯೋ ಗೊತ್ತಿಲ್ಲ. ಬಹುಶಃ ಇವೆಲ್ಲವುಗಳ ಬಗ್ಗೆ ಇಲ್ಲಿ ಕೂತ ಈ ಕ್ಷಣದಲ್ಲಿ ಅನ್ನಿಸುತ್ತಿದ್ದ_ಬೇರೆ ಯಾವ ಹೆಸರೂ ತಿಳಿಯದ್ದರಿಂದ ಪ್ರೀತಿಯೆಂದು ಕರೆಯಬಹುದಾದ_ಭಾವನೆಯನ್ನು ಯಾರ ಮುಂದೆಯೂ ‘ಆಡಿತೋರಿಸಲು’ ಆಗದ್ದಕ್ಕೇ ಇರಬೇಕು…

ಸೀಯಾಳಗಳನ್ನು ತಂದ ಹುಡುಗ ಒಂದನ್ನು ನಾಗಪ್ಪನ ಕೈಯಲ್ಲೂ ಇನ್ನೊಂದನ್ನು ತುಕಾರಾಮನ ಕೈಯಲ್ಲೂ ಕೊಟ್ಟು ಕುಡಿಯುವವರಿಗೆ ಸಂಕೋಚವಾಗದಿರಲಿ ಎಂಬಂತೆ ಬದಿಯ ಅಂಗಡಿಯಲ್ಲಿ ಚಹ ಕುಡಿದು ಬರುವ ನೆಪ ಹೇಳಿ ಅಲ್ಲಿಂದ ಹೊರಟುಹೋದ. ನಾಗಪ್ಪ, ತನ್ನ ಕೊಂಕಣಿ ಧಾಟಿಯ ಮರಾಠಿಯಲ್ಲಿ ತುಕಾರಾಮನ ದಂಧೆಯ ವಿಷಯ ಮಾತನಾಡಹತ್ತಿದ. ಬೆಳಿಗ್ಗೆ, ಬರೆಯೆ ಒಂದು ಜೋಕು ಆಗಿ ತೋರಿದ್ದು ಈಗ ನಿಜಕ್ಕೂ ಒಂದು ಗಂಭೀರ ನಿರ್ಧಾರದ ರೂಪ ತಾಳುತ್ತ ಬಂದಂತಿತ್ತು. ತುಕಾರಾಮನಿಂದ ಬೀಳ್ಕೊಂಡು ಮನೆಯ ಹಾದಿ ಹಿಡಿದಾಗ : ಹೌದು, ಈ ಪ್ರಕರಣದಲ್ಲಿ ತನ್ನ ನೌಕರಿಗೆ ಏನಾದರೂ ಸಂಚಕಾರ ಬಂದರೆ ಈ ಖೇತವಾಡಿಯ ಲೆಕ್ಕವಿಲ್ಲದ ಗಲ್ಲಿಗಳ ಮೂಲೆಯೊಂದರಲ್ಲಿ ಹೀಗೆ ನ್ಯೂಸ್ ಪೇಪರ್ ಮಾರುವ ಅಂಗಡಿಯನ್ನೋ ಸರ್ಕ್ಯುಲೇಟಿಂಗ್ ಲೈಬ್ರರಿಯನ್ನೋ ತೆರೆಯುತ್ತೇನೆ. ಹುಟ್ಟಿನ ಬಲದಿಂದ, ಹಣದ ಬಲದಿಂದ, ಅಷ್ಟೇಕೆ_ವಿದ್ವತ್ತಿನ ಬಲದ ಮೇಲೆ, ಪ್ರತಿಭೆಯ ಬಲದ ಮೇಲೆ ಸಮಾಜದಲ್ಲಿ ಗಳಿಸಿದ ಪ್ರತಿಷ್ಠೆಯನ್ನು ಕಳೆದುಕೊಳ್ಳುವ ಭಯವಿಲ್ಲದೇನೇ ‘ಯಾರೂ ಅಲ್ಲ’ವಾಗಿ ಬದುಕುವುದನ್ನು ಕಲಿಯುತ್ತೇನೆ.

ಮನೆ ತಲುಪಿ ಕೋಣೆಯ ಕದ ಮುಚ್ಚಿ ಆರಾಮ-ಕುರ್ಚಿಯಲ್ಲಿ ಒರಗಿದಲ್ಲೆ ಹೊತ್ತುಹೋದ ಹಾಗೆ ಈ ವಿಚಾರ ಎಷ್ಟೊಂದು ಭಾವನಾತ್ಮಕ ವಿಕೋಪಕ್ಕೆ ಹೋಯಿತೆಂದರೆ ಒಂದೇ ಒಂದು ಕ್ಷಣದ ಮಟ್ಟಿಗಾದರೂ ಅನ್ನಿಸಿಬಿಟ್ಟಿತು : ಹಾಳುಬಿದ್ದ ಈ ನೌಕರಿಯನ್ನು ನಾನಾಗಿಯೇ ಬಿಟ್ಟುಕೊಟ್ಟರೆ ಹೇಗೆ ? ಹೈದರಾಬಾದಿಗೆ ಹೋಗುವ ವಿಮಾನದ ಟಿಕೆಟ್ಟು ಬರುವ ಮೊದಲೇ ನನ್ನ ರಾಜೀನಾಮೆಯ ಪತ್ರ ಕಳಿಸಿದರೆ ಹೇಗೆ ? ಈಗಿನ ಒ‌ಆ ನಿವೃತ್ತರಾದ ಮೇಲೆ ಫಿರೋಜನೇ ಹೇಗಾದರೂ ಒ‌ಆ ಆಗುತ್ತಾನೆ. ಕರಿಯರದ ಕೊನೆಯವರೆಗೆ ಅವನೊಡನೆ ಹಗೆ ಕಟ್ಟಿ ಕೆಲಸ ಮಾಡುವುದಂತೂ ಶಕ್ಯವೇ ಇಲ್ಲ. ಆಳವನ್ನು ಅಲ್ಲಾಡಿಸಿಬಿಟ್ಟ ಭಯದ ಕ್ಷಣದಲ್ಲಿ ನ್ಯೂಸ್‌ಪೇಪರ್ ಅಂಗಡಿಯ ವಿಚಾರ ಮಾಡಿದ್ದೆನಾದರೂ ಅಂತಹ ಅತಿರೇಕಕ್ಕೆ ಕೈಹಾಕುವ ಗರಜಿಲ್ಲವೇನೋ. ಬೇರೆ ಕಂಪನಿಗಳಿಲ್ಲವೆ ? ಎಂದೂ ಅನ್ನಿಸಿತು. ಅಂತೂ ಈ ಎಲ್ಲ ಯಾತನೆಯಿಂದ ಮುಕ್ತನಾಗುವ ಉಪಾಯ ಕೊನೆಗೂ ತನ್ನ ಕೈಯಲ್ಲೇ ಇದೆ ಎಂಬ ಅರಿವಿನಿಂದಲೇ ಮನಸ್ಸಿಗೆ ನೆಮ್ಮದಿ ಅನ್ನಿಸಹತ್ತಿತು. ಆದರೂ ಅದು ಬಹಳ ಹೊತ್ತು ಬಾಳುವ ಜಾತಿಯದಾಗಿರಲಿಲ್ಲವೇನೋ : ಮನಸ್ಸು ಮತ್ತೆ ದುಗುಡಕ್ಕೊಳಗಾಯಿತು. ಈಗಿನ ಕಂಪನಿಯಲ್ಲಿ ಇಷ್ಟೊಂದು ವರ್ಷ ಕೆಲಸ ಮಾಡಿದ ಮೇಲೆ ತಾನು ಆಯ್ಕೆ ಮಾಡಿದ ಒಂದು ಕ್ಷೇತ್ರದಲ್ಲಿ ಗಳಿಸಿದ ಮನ್ನಣೆಯನ್ನು ಒಮ್ಮೆಲೆ ಬಿಟ್ಟುಕೊಟ್ಟು ಇನ್ನೊಂದು ಕಂಪನಿಯನ್ನು ಸೇರಲು ಯಾವ ಕಾರಣ ಕೊಡಲೀ ? ಕಾರಣ ಕೊಡಲೇಬೇಕೆ ? ಕಾರಣ ಕೊಡುವ ಅವಶ್ಯಕತೆಯೆಂದರೇನೆ ವ್ಯಕ್ತಿ ತನಗರಿವಿಲ್ಲದೇನೆ ತನ್ನ ಇಚ್ಛಾಶಕ್ತಿಯನ್ನು ಮೀರಿದ ಯಾವುದಕ್ಕೋ ಹೆದರಿಕೊಂಡಿದ್ದರ ಲಕ್ಷಣ ಅಲ್ಲವೆ ? ಮೇಲಾಗಿ, ಒಮ್ಮೆಲೇ ಎಲ್ಲವನ್ನೂ ತೊರೆದುಬಿಡುವ ನಿರ್ಧಾರ ಮೂಲತಃ ಇನ್ನಾವುದನ್ನೋ ಇದಿರಿಸುವಾಗ ಹುಟ್ಟಿದ ಭಯದಲ್ಲಿ ಹುಟ್ಟಿದ್ದು. ತಾನು ಬೇಡಿ ಬಂದಿರದ ಬದುಕಿನಲ್ಲಿ ಮನುಷ್ಯನ ಕೈಯಿಂದ ಒದಗಬಹುದಾದ ಒಂದೇ ಒಂದು ಸಾರ್ಥಕವಾದ ಕ್ರಿಯೆಯೆಂದರೆ ಇದೊಂದೇಯೇನೋ : ತಾನು ಬದುಕಿದ್ದ ಸಮಾಜದ ಎಲ್ಲ ಒತ್ತಡಗಳಿಗೆ ತನ್ನನ್ನು ಒಡ್ಡಿಕೊಂಡಾಗಲೂ ತಾನು ತಾನೇ ಆಗುವದು. ಫಿರೋಜ್-ಶ್ರೀನಿವಾಸ ಹಾಕಿದ ಸವಾಲಿಗೆ ಹೆದರಿ ಫಲಾಯನ ಹೇಳಲೇ ? ಹೇಡಿಯಾಗಲೇ ? ಈ ದುಷ್ಟಶಕ್ತಿಗಳಿತ್ತ ಆಹ್ವಾನವನ್ನು ನಿರಾಕರಿಸಿ ಸಂಕಲ್ಪ-ಬಲವಿಲ್ಲದ ತರಕಾರಿಯಾಗಲೇ ? ಇದೇ ಖೇತವಾಡಿಯ ಗಲ್ಲಿಯೊಂದರಲ್ಲಿ ಎಲ್ಲ ಭಿಡೆ ಬಿಟ್ಟು ದಿನಪತ್ರಿಕೆಗಳನ್ನು ಇಲ್ಲ ಬರೀ ರದ್ದಿ ಮಾರುವ ಅಂಗಡಿಯನ್ನು ತೆರೆದೇನು. ಆದರೆ ಫಿರೋಜ ಒಡ್ಡಿದ ಆಹ್ವಾನಕ್ಕೆ ತನ್ನ ಉತ್ತರ ಕೊಟ್ಟ ಮೇಲೆಯೇ. ನಾನೇ ಸೋಲಬಹುದು. ಆದರೆ ಕಾದುವುದನ್ನು ಬಿಟ್ಟುಕೊಟ್ಟಿಲ್ಲ. ಇಲ್ಲ. ರಾಜೀನಾಮೆಯ ಪ್ರಶ್ನೆಯೇ ಇಲ್ಲ. ಬಹುಶಃ ಮಾನಸಿಕ ಒತ್ತಡ ತರುವ ಈ ಎಲ್ಲ ಕುತಂತ್ರದ ಹಿಂದಿನ ಉದ್ದೇಶವೂ ಇದೇ ಇರಬಹುದೇನೋ. ನನ್ನ ಬದಲು ತನ್ನ ಚೇಲಾ ಜಲಾಲನನ್ನು ಅಮೇರಿಕೆಗೆ ಕಳಿಸುವ ಹಂಚಿಕೆಯೇನೋ.

ಮಧ್ಯಾಹ್ನದ ಊಟ ಮಾಡಿ ಬಂದದ್ದೇ ಆ ಬೆಂಕಿಯ ಅನಾಹುತದ ಎಲ್ಲ ವಿಚಾರಗಳನ್ನೂ ಬರೆದು ತೆಗೆಯಬೇಕು. ತನಿಖೆಯ ಹೊತ್ತಿಗೆ ಉಪಯೋಗಕ್ಕೆ ಬಂದೀತು. ಎಂದುಕೊಂಡವನೇ ನಾಗಪ್ಪ ಸ್ನಾನದ ತಯಾರಿಗೆ ನಡೆದ. ಇಂದಿನಿಂದ ಸಂತೋಷಭವನ ತನ್ನ ಪಾಲಿಗೆ ವಜಾ. ಸದ್ಯದ ಉಟಕ್ಕಂತೂ ಶೇರ್-ಏ-ಪಂಜಾಬಿಗೇ ಹೋದರಾಯಿತು. ಊಟ ಮುಗಿಸಿ ಬಂದ ನಂತರ ಗಡದ್ದಾಗಿ ಒಂದು ನಿದ್ದೆ ಮಾಡಬೇಕು. ಎದ್ದ ನಂತರ ಮೇರಿಗೆ ಫೋನ್ ಮಾಡುವ ಹೊತ್ತಿನ ತನಕ ಏನಾದರೂ ಬರೆಯಬೇಕು. ಇಂದು ರಾತ್ರಿ ರಾಣಿ ಮನೆಗೆ ಹೋದರೆ ಹೇಗೆ ಎಂಬ ವಿಚಾರ ಬಂದಾಗ ಯಾಕೋ ದೈಹಿಕ ಸುಖದ ಬಯಕೆಯೇ ಬತ್ತಿ ಹೋದಂತೆನಿಸಿತು. ಈಗ ಯಾವುದೂ ಬೇಡ. ಎಲ್ಲ, ಹೈದರಾಬಾದಿನಿಂದ ಬಂದಮೇಲೆಯೇ, ಎಲ್ಲದರ ಸೋಕ್ಷಮೋಕ್ಷವಾದ ಮೇಲೆಯೇ.

– ಅಧ್ಯಾಯ ಹದಿನೈದು –

ಖೇತವಾಡಿಯ ಈ ಅರವತ್ತು ವರ್ಷಗಳ ಮುದಿಮನೆ ಅಂದರೆ-ಕೂಡ್ರುವ ಕೋಣೆ, ಮಲಗುವ ಕೋಣೆ, ಹಾಗೂ ಸಣ್ಣ ಅಡಿಗೆಮನೆ. ಮಲಗುವ ಕೋಣೆ ಒಂದು ಮೂಲೆಯಲ್ಲಿಯ ಸಣ್ಣ ಮೋರಿಯೇ ಸಮಯಕ್ಕೆ ತಕ್ಕಂತೆ ನಾಣಿಗೆ ಮನೆಯೂ ಆಗುತ್ತಿತ್ತು. ನಾಗಪ್ಪನ ಹುದ್ದೆಯ ಅಂತಸ್ತಿನ ಪ್ರಕಾರ ಕನಿಷ್ಠ ಎರಡು ಮಲಗುವ ಕೋಣೆಗಳಿದ್ದ ಫ್ಲ್ಯಾಟು ಹಾಗೂ ಕಾರು ಎರಡೂ ಅವನಿಗೆ ದೊರಕಬೇಕಾಗಿದ್ದವು. ಫ್ಲ್ಯಾಟ್ ಸಿಗುವ ತನಕ ಮೊದಲ ಮೂರು ತಿಂಗಳಕಾಲ ಮುಂಬಯಿಯ ಹೊಟೆಲ್ಲೊಂದರಲ್ಲಿ ಉಳಕೊಳ್ಳುವ ಹಕ್ಕೂ ಇತ್ತು. ಆದರೆ ನಾಗಪ್ಪ ತನ್ನ ಎಂದಿನ ಸರಳತನದಿಂದ ಖೇತವಾಡಿಯ ಈ ಹಳೇ ಗೂಡಿಗೇ ಬಂದಿದ್ದ. ಹಾಗೆ ಬರುವಾಗ ಮಾತ್ರ ಈ ವರ್ಗಾವಣೆ ಏನೆಂದರೂ ತಾತ್ಪೂರ್ತಿಕವಾದದ್ದು ; ಫಿರೋಜನಿಗೆ ತನ್ನ ಬಗೆಗಿನ ಸಿಟ್ಟು ಕಡಿಮೆಯಾದದ್ದೇ, ಒಂದಲ್ಲ ಒಂದು ದಿನ, ಅವನು ತಿರುಗಿ ತನ್ನನ್ನು ಫೆಕ್ಟರಿಗೆ ಕರೆಯಿಸದಿರಲಾರನೆಂಬ ಆಸೆಯೊಂದು ಮನಸ್ಸಿನಲ್ಲಿ ಇಲ್ಲದಿರಲಿಲ್ಲ. ಅಂತಹ ಆಸೆಗೆ_ತನ್ನ ಹೊರತು ಆರ್ ಎಂಡ್ ಡೀ ಮ್ಯಾನೇಜರನ ಹುದ್ದೆಗೆ ಯೋಗ್ಯನಾದ ಇನ್ನೊಬ್ಬ ಕಂಪನಿಯಲ್ಲಿ ಇಲ್ಲವೇ ಇಲ್ಲವೆಂಬ ಅಹಂಭಾವ ಕಾರಣವಾಗಿತ್ತೆಂಬ ಅರಿವೂ ನಾಗಪ್ಪನಿಗೆ ಇಲ್ಲದಿಲ್ಲ. ಅದಕ್ಕೆ ಪೆಟ್ಟು ಬಿದ್ದಾಗ ಆಗೀಗ ತುಂಬ ಖಿನ್ನನಾಗಿದ್ದುಂಟು.

ತಿಂಗಳಿಗೆ ಕೇವಲ ಮುವ್ವತ್ತುರೂಪಾಯಿ ಬಾಡಿಗೆಯಿದ್ದ ಆ ಕೋಣೆಗಳನ್ನು ಕಳೆದ ಹಲವು ವರ್ಷಗಳಿಂದ ಶೇಖರಿಸುತ್ತ ಬಂದ ವಿರಲವಾದ ಪುಸ್ತಕಗಳ ಲಾಯಬ್ರರಿಯನ್ನಾಗಿ ಪರಿವರ್ತಿಸಿದ್ದ. ಹಳೆಯ ಗ್ರಂಥಗಳನ್ನು ಸಂಗ್ರಹಿಸುವ ಚಟ ನಾಗಪ್ಪನಿಗೆ ನೌಕರಿ ಹತ್ತಿದ ಮೊದಲಿನಿಂದಲೂ ಅಂಟಿದ್ದು. ಗ್ರೆಂಟ ರೋಡ್, ಮಹಮ್ಮದಲಿ ರೋಡ್, ಧೋಬಿತಲಾವ್‌ಗಳಲ್ಲಿಯ ಹಳೇ ಪುಸ್ತಕಗಳ ವ್ಯಾಪಾರಿಗಳಿಗೆಲ್ಲ ನಾಗಪ್ಪ ಹಳೆಯ ಗೆಳೆಯ. ಆಫೀಸಿನ ಕೆಲಸದ ಮೇಲೆ ಮುಂಬಯಿಗೆ ಬಂದ ಪ್ರತಿ ಸಾರೆ ನೂರಿನ್ನೂರು ರೂಪಾಯಿಗಳ ಪುಸ್ತಕಗಳನ್ನು ಕೊಂಡು ಬಾಂಬೂಗಳನ್ನು ಕತ್ತರಿಸಿ ತಾನೇ ರಚಿಸಿದ ತೀರ ಸರಳವಾದ ‘ಕಪಾಟು’ಗಳಲ್ಲಿ ಓರಣವಾಗಿ ಹಚ್ಚಿಟ್ಟಿದ್ದ. ಕಪಾಟಿನ ಹತ್ತಿರ ಎತ್ತರವಾದ ಒಂದು ಸ್ಟೂಲು. ಅದರ ಮೇಲೆ ಕೂತು ಹೊಸದಾಗಿ ತಂದ ಪುಸ್ತಕಗಳನ್ನು ಒಂದೊಂದಾಗಿ ಅರಿವೆಯ ಚಿಂದಿಯೊಂದರಿಂದ ಸ್ವಚ್ಛಮಾಡಿ, ಹಾಳೆಗಳ ವಾಸನೆ ನೋಡಿ ಜಾಗವಿದ್ದಲ್ಲಿ ಚಂದವಾಗಿ ಜೋಡಿಸಿ ಇಡುತ್ತಿದ್ದ. ಹಳೇ ಪುಸ್ತಕಗಳನ್ನು ಮೂಸಿನೋಡುವುದು ನಾಗಪ್ಪನಿಗೆ ಅತ್ಯಂತ ರೋಮಾಂಚಕಾರಿಯಾದ ಅನುಭವ : ಪ್ರತಿಯೊಬ್ಬ ವ್ಯಕ್ತಿಗೆ ಯಾವುದೇ ವಿವೇಕಪೂರ್ಣವಾದ ಕಾರಣ ಕೊಡಲು ಶಕ್ಯವಿಲ್ಲದ ಇಂತಹ ಚಟಗಳಿರುತ್ತವೆಯೇನೋ ಅಂದುಕೊಂಡು ತನ್ನಷ್ಟಕ್ಕೇ ನಗುತ್ತಿದ್ದ. ಈಗಲೂ ಸ್ನಾನಕ್ಕೆಂದು ಹೊರಟು ನಿಂತವನು, ವಿಚಾರಮಾಡುವ ಮೊದಲೇ ಸ್ಟೂಲನ್ನು ಹತ್ತಿ ಕೂತು ಕೈಗೆ ಎತ್ತಿಕೊಂಡ ಪುಸ್ತಕವೊಂದನ್ನು ಮೂಸಿ ನೋಡುತ್ತಿದ್ದಂತೆ ಅದರ ಹಳೆತ ವಾಸನೆ ಮಸ್ತಕಕ್ಕೇರಿದ್ದೇ ತಡ ನಾಗಪ್ಪ ಕೂತಲ್ಲೇ ಝಲ್ಲೆಂದು ನಡುಗಿದ : ಶ್ರೀನಿವಾಸ, ತಾನು ಯಾವುದರ ಬಗೆಗೆ ಕಾದಂಬರಿಯೊಂದನ್ನು ಬರೆಯುತ್ತಿದ್ದೇನೆಂದು ತಿಳಿದೇ ಹೆದರಿಕೊಂಡಿದ್ದನೋ ಆ ನೇತ್ರಾವತಿಯ ದುರ್ಮರಣ ಕಣ್ಣಮುಂದೆ ನಿಂತಂತಾಗಿ ಅವಸರ ಅವಸರವಾಗಿ ಸ್ಟೂಲಿನಿಂದ ಇಳಿದವನೇ ವಿರಾಮ-ಕುರ್ಚಿಯಲ್ಲಿ ಕುಸಿದು ಗಟ್ಟಿಯಾಗಿ ಕಣ್ಣು ಮುಚ್ಚಿದ :

ನೇತ್ರಾವತಿ : ಇಪ್ಪತ್ತೊಂದು ವರುಷದ ಹರೆಯದ ಹುಡುಗಿ. ಸುಂದರಳಲ್ಲ. ಹರೆಯ ತುಂಬಿ ಮುಸುಗುಡುವ ಮೈಯ ಮಾಟ. ನೋಡುವವರ ಕಣ್ಣುಗಳನ್ನು ತತ್‌ಕ್ಷಣ ಸೆರೆಹಿಡಿದು ನಿಲ್ಲಿಸುವ ಕಣ್ಣುಗಳಲ್ಲಿಯ ಮಾದಕ ಹೊಳಪು. ಮೇಲ್ದುಟಿಯಗುಂಟ ತೆಳ್ಳಗಿನ_ಹೆಣ್ಣಿಗೆ ಶೋಭಿಸದ_ರೋಮದ ಸಾಲು. ತುಟಿಗಳು ಮಾತ್ರ ಭಿಡೆ ತೊರೆದು ನೇರವಾಗಿ ಕಾಮಕೆರಳಿಸುವಂತಹವುಗಳು. ಮೊದಲ ಪರಿಚಯದಲ್ಲಿ ನೇತ್ರಾವತಿ ತನಗೆ ಎಳ್ಳಷ್ಟೂ ಸೇರಿರಲಿಲ್ಲ. ಬಹುಶಃ ಅವಳ ಅಕ್ಕನ ಬಗ್ಗೆ ಕೇಳಿ ತಿಳಿದಂತಹ ಸಂಗತಿಗಳಿಂದಾಗಿರಬೇಕು ; ಅವಳು ಮುಂಬಯಿಯ ಒಬ್ಬ ಶ್ರೀಮಂತ ವ್ಯಾಪಾರಿಯೊಬ್ಬನನ್ನು ಇಟ್ಟಿಕೊಂಡಿದ್ದು ಎಲ್ಲರಿಗೂ ‘ಉಘಡಾ-ಉಘಡೀ’ ತಿಳಿದ ಮಾತಾಗಿತ್ತು. ನೇತ್ರಾವತಿಯಲ್ಲಿ ಅನುರಾಗ ಹುಟ್ಟಿ ಶ್ರೀನಿವಾಸ ಅವಳನ್ನು ಮದುವೆಯಾಗುವ ಉದ್ದೇಶವನ್ನು ಜಾಹೀರುಪಡಿಸಿ ರಾಜಾರೋಷವಾಗಿ ಅವಳೊಡನೆ ತಿರುಗಾಡಹತ್ತಿದಮೇಲೆ ; ವೇಳೆ ಅವೇಳೆಯಲ್ಲಿ ರೂಮಿಗೂ ತರಹತ್ತಿದಮೇಲೆ ; ಚಾಳಿನಲ್ಲಿಯ ಎಲ್ಲರಿಗೂ ಅವಳ ಪರಿಚಯ ಮಾಡಿಕೊಡುತ್ತ ಅವಳನ್ನು ಹೊಗಳಹತ್ತಿದಮೇಲೆ ; ಗೆಳೆಯನೊಬ್ಬನ ಪ್ರೇಯಸಿ, ಅದಕ್ಕಿಂತ ಹೆಚ್ಚಾಗಿ ಅವನ ಅಗಲಿದ್ದ ಹೆಂಡತಿಯೆಂಬುದು ಸ್ಪಷ್ಟವಾಗುತ್ತ ಹೋದಹಾಗೆ ನೇತ್ರಾವತಿಯ ಬಗ್ಗೆ ತನ್ನ ಮನಸ್ಸು ಕ್ರಮೇಣ ಮಿದುವಾಗಹತ್ತಿತು. ಶ್ರೀನಿವಾಸನ ಜತೆಯಲ್ಲಿ ಗೋಲ ಪೀಠಾದಲ್ಲಿಯ ಅವರ ಮನೆಗೆ ಒಂದೆರಡು ಸರತಿ ತಾನೂ ಹೋಗಿದ್ದ. ನೇತ್ರಾವತಿಯ ಅಕ್ಕನ ಮಿಂಡನನ್ನು ಕಣ್ಣಾರೆ ಕಂಡಿದ್ದ. ನೇತ್ರಾವತಿಯನ್ನು ಮದುವೆಯಾಗಲು ಹೊರಟದ್ದು ಎಷ್ಟು ದೊಡ್ಡ ಸಾಹಸ ; ಅದನ್ನು ಕೈಕೊಂಡ ತಾನು ಎಷ್ಟು ದೊಡ್ಡ ಮನಸ್ಸಿನ ‘ಹೀರೋ’ ಎಂಬುದನ್ನು ಬಣ್ಣಿಸಿದ ಶ್ರೀನಿವಾಸನಿಂದಲೇ ತಿಳಿದ ವಿವರಗಳಿಷ್ಟು : ನೇತ್ರಾವತಿಯ ಅಕ್ಕ ಅನಸೂಯಾ (ಇವರು ಮೂಲತಃ ಉತ್ತರ-ಕನ್ನಡದ ಸಣ್ಣ ಹಳ್ಳಿಯಾದ ಧಾರೇಶ್ವರದವರು. ತಮ್ಮ ಜಾತಿಯವರೇ, ಅಂದರೆ ಸಾರಸ್ವತ ಬ್ರಾಹ್ಮಣರು.) ತನಗೆ ಒಪ್ಪಿಗೆಯಾಗಿರದ ಒಬ್ಬ ವಯಸ್ಸಾದ ಗಂಡಸಿನೊಡನೆ ಮದುವೆ ಮಾಡಿಸಲು ಹೊರಟ ತಂದೆ ತಾಯಿಗಳ ವಿರುದ್ಧ ಬಂಡೆದ್ದು ಮದುವೆಯ ಚಪ್ಪರದಿಂದಲೇ ಓಡಿಹೋದಳಂತೆ. ಆಗ ಅವಳಿಗೆ ಬರೇ ಹದಿನೆಂಟು ವರ್ಷ ಪ್ರಾಯ. ಮುಂದಿನದೆಲ್ಲ ದಿನನಿತ್ಯ ಪೇಪರುಗಳಲ್ಲಿ ಓದುವ ಸುದ್ದಿಗಳಂತಹದೇ ಕತೆ : ಓಡಿ ಬಂದದ್ದು ಮುಂಬಯಿಗೆ. ಸಿಕ್ಕಿಬಿದ್ದದ್ದು ಇಂತಹ ಹುಡುಗಿಯರನ್ನು ಸೂಳೇತನಕ್ಕೆ ಹಚ್ಚುವತಲೆಹಿಡುಕರ ಕೈಗೆ. ಅವರ ಕೈಯಿಂದ ತಪ್ಪಿಸಿಕೊಂಡ ಮೇಲೆ ‘ಗೆಳೆತನ’ ಬೆಳೆದದ್ದು ಸಜಾತೀಯನಾದ ಈ ಶ್ರೀಮಂತ ವ್ಯಾಪಾರಿಯೊಂದಿಗೆ. ಅವನ ಹೆಂಡತಿ ಟೀಬೀಯಿಂದಲೋ ಇನ್ನಾವುದೋ ಗುಣವಾಗದ ರೋಗದಿಂದಲೋ ಕಾಯಮ್ ಹಾಸಿಗೆ ಹಿಡಿದು ಬಿದ್ದವಳು, ಅನಸೂಯಾಗೆ ತಾನೇ ಬೇರೊಂದು ಮನೆ ಮಾಡಿಕೊಟ್ಟ. ಕಾಯದೆಯೊಂದು ಅಡ್ಡಬಂದದ್ದರಿಂದ ಅನಸೂಯಾ ಹೆಂಡತಿಯಾಗುವದು ಶಕ್ಯವಿರಲಿಲ್ಲ. ಆದರೂ ತನ್ನ ಹೆಂಡತಿಗೆ ಕಡಿಮೆಯಾದವಳಲ್ಲ ಎಂಬ ಭಾವನೆಯನ್ನು ಅವಳಲ್ಲಿ ಮೊಳೆಯಿಸಿದ ಈ ‘ಸದ್ಗೃಹಸ್ಥ’ ಅನಸೂಯಾಳ ಜೋಡಿಗೆ ಕೂತು ಮಾಡಿದ ಸತ್ಯನಾರಾಯಣ ಪೂಜೆಗೆ ಜಾತಿಯ ಬ್ರಾಹ್ಮಣ ಸುವಾಸಿನಿಯರನ್ನು ಕರೆಯಿಸಿ ಭೂರಿಭೋಜನ ಕೂಡ ಮಾಡಿಸಿದ್ದ. ಅನಸೂಯಾಳ ಮೈಮೇಲಿನ ಮಣಭಾರದ ಬಂಗಾರದ ದಾಗಿನೆಗಳಿಂದ ಎಷ್ಟೋ ಸುವಾಸಿನಿಯರ ಅಸೂಯೆ ಕೆರಳಿಸಿದ್ದ. ಮದುವೆಯಾಗಿರದ ಒಂದೇ ಒಂದು ಕಾರಣದಿಂದಲೇ ‘ಇಟ್ಟುಕೊಂಡವಳು’ಎಂಬ ಪದವಿಯನ್ನು ಆಗದವರ ಕೈಯಿಂದ ಪಡೆದ ಅನಸೂಯಾಳ ಒಂದೇ ಒಂದು ಹಂಬಲವೆಂದರೆ ನೇತ್ರಾವತಿಯ ಮದುವೆಯನ್ನಾದರೂ ಒಳ್ಳೆಯ ಹುಡುಗನೊಂದಿಗೆ ಮಾಡುವದಾಗಿತ್ತು. ಹಾಗೆಂದೇ ನೇತ್ರಾವತಿಯನ್ನು ಊರಿನಿಂದ ಕರೆಯಿಸಿ ಇನ್ನೂ ಮಕ್ಕಳಾಗಿರದ ತಾನು ಅವಳನ್ನು ಅಕ್ಕ ಎನ್ನುವುದಕ್ಕಿಂತ ಹೆಚ್ಚಾಗಿ ತಾಯಿ ಎಂಬಂತೆ ತೈನಾತಿ ಮಾಡಿದ್ದಳು. ಮುಂಬಯಿಯಲ್ಲೇ ತಮ್ಮ ಸಮಾಜದ ಎಲ್ಲ ಗಣ್ಯ ವ್ಯಕ್ತಿಗಳ ಇದಿರಿಗೇ ತಾನು, ತನ್ನೊಡನೆ ‘ಮದುವೆಯಾಗಿರದ’ ಗಂಡ ಕೂಡಿ ಧಾರೆಯೆರೆದು ಕೊಡುವ ಹಂಬಲ ಅವಳದಾಗಿತ್ತು. ಇತ್ಯಾದಿ ಇತ್ಯಾದಿ.

ಅಂತಹ ಹಂಬಲ ನಿಜವಾಗಿಸಲು ಮುಂದಾದ ಶ್ರೀನಿವಾಸ ಆಗ ತಮ್ಮೆಲ್ಲರ ಕಣ್ಣಲ್ಲಿ ದೊಡ್ಡ ಹೀರೋ. ಅವನ ಸಾಹಸದ ಸಾಮಾಜಿಕ ಮಹತ್ವವನ್ನು ಯಾರೂ ಅಲ್ಲಗಳೆಯುವಂತಿರಲಿಲ್ಲ. ಇಂಥ ಶ್ರೀನಿವಾಸ, ಮದುವೆಗೆ ಇನ್ನೂ ಬರೀ ಮೂರು ತಿಂಗಳಿದೆ ಎನ್ನುವಾಗ ನೇತ್ರಾವತಿಗೆ ತಾನಿತ್ತ ಮದುವೆಯ ಭರವಸೆ, ಆ ಭರವಸೆಯೊಂದರ ಮೇಲೇ ಕಳೆದ ಒಂಭತ್ತು ತಿಂಗಳ ಕಾಲ ನಡೆಸಿದ ಮೇರೆಯರಿಯದ ಚೆಲ್ಲಾಟ ಇವೆಲ್ಲವುಗಳನ್ನೂ_ಇಂಥದ್ದು ನಡೆದಿರಲೇ ಇಲ್ಲ ಎನುವಷ್ಟರ ಮಟ್ಟಿಗೆ_ಮರೆತೇಬಿಟ್ಟು, ಅವಳ ದುರ್ಮರಣಕ್ಕೆ ಕಾರಣವಾದದ್ದು ಹೇಗೆ ?

ನಾಗಪ್ಪನಿಗೆ ಆ ಮುಂಜಾವು ನಿಚ್ಚಳವಾಗಿ ನೆನಪಿದೆ : ಈಗ ಲಾಯಬ್ರರಿ ಮಾಡಿದ ಈ ಕೋಣೆಯಲ್ಲೇ, ಅವನ ರೂಮಿನ ಇನ್ನೊಬ್ಬ ಪಾರ್ಟ್ನರ್ ಆಗಿದ್ದ ಗೋಪಾಲ ಇಬ್ಬರೂ ಅಭ್ಯಾಸದಲ್ಲಿ ತೊಡಗಿದ್ದರು. ಶ್ರೀನಿವಾಸ ನೇತ್ರಾವತಿಯನ್ನು ಮದುವೆಯಾಗುವ ಭರವಸೆಯಿಂದ ಹಿಂದೆಗೆಯಹತ್ತಿ ಅದಾಗಲೇ ಕೆಲವು ವಾರಗಳೇ ಕಳೆದಿದ್ದವು. ಕದ ತಟ್ಟಿದ ಸದ್ದು ಕೇಳಿಸಿದಾಗ ಗೋಪಾಲ ಎದ್ದು ಕದ ತೆರೆದರೆ : ನೇತ್ರಾವತಿ ! ಕೋಣೆಯಲ್ಲಿ ಕಾಲಿರಿಸಿದಾಗಿನ ಮೋರೆ ಯಾವ ಒಳಗುದಿಯನ್ನೂ ವ್ಯಕ್ತಪಡಿಸದೇ ನಿರ್ಭಾವವಾಗಿತ್ತು. ಇಷ್ಟೇ. ತಮ್ಮಿಬ್ಬರತ್ತ ನೋಡಿ ಒಂದೇ ಒಂದು ಕ್ಷಣದ ಮಟ್ಟಿಗೆ ಮಂದವಾಗಿ ಮುಗುಳುನಕ್ಕಿದ್ದಳು ಎಂಬಂತಹ ನೆನಪಿನಿಂದಲೇ ನಾಗಪ್ಪನಿಗೆ ಈಗ ಮೈ ಮೇಲೆ ಮುಳ್ಳು ನಿಂತವು : ಅವಳು ನಕ್ಕದ್ದು ಹೌದೇ ಆದರೆ ಅದೇ ಅವಳ ಕೊನೆಯ ನಗುವಾಗಿತ್ತು. ಶ್ರೀನಿವಾಸ ಒಳಗಿನ ಕೋಣೆಯಲ್ಲಿ ಇದ್ದೇ ಇದ್ದಾನೆ ಎನ್ನುವ ಭರವಸೆಯಿಂದಲೇ ಎಂಬಂತೆ ನೇತ್ರಾವತಿ ಅವನ ಬಗ್ಗೆ ಚಕಾರ ಮಾತೆತ್ತದೇ ನೇರವಾಗಿ ಅತ್ತಕಡೆ ನಡೆದಳು. ಎಂದಿನಂತೆ ಕದವನ್ನು ಮಾತ್ರ ಅಡ್ಡ ಮಾಡಿಕೊಳ್ಳಲಿಲ್ಲ. ಅವಳು ಆ ಕೋಣೆಯನ್ನು ಹೊಗುವಾಗಿನ ಕ್ಷಣದಲ್ಲಿ ಅವಳುಟ್ಟ ಸೀರೆ ಅಚ್ಚ ನೀಲಿ ಬಣ್ಣದ್ದಾಗಿತ್ತು ಎಂದು ಲಕ್ಷ್ಯಕ್ಕೆ ಬಂದದ್ದು ಈಗ ನೆನಪಿನಲ್ಲಿ ಫಕ್ಕನೆ ಮೂಡಿತು : ತೆಳುವಾದ ಜಾರ್ಜೆಟ್ ಸೀರೆ ! ನೇತ್ರಾವತಿ ಆ ಸೀರೆಯನ್ನು ಹಿಂದೆ ಎಂದೂ ಉಟ್ಟಿದ್ದು ನೆನಪಿರಲಿಲ್ಲ. ಎಂದಿಗಿಂತ ಹೆಚ್ಚು ಸುಂದರಳಾಗಿ ಕಂಡದ್ದಕ್ಕೇ ಇರಬೇಕು….ಅಲ್ಲ, ಯಾವ ಸ್ಪಷ್ಟ ಕಾರಣವೂ ಇಲ್ಲದೇನೇ ಅವಳು ಬಸುರಿಯಾಗಿರಬಹುದೇ ಎಂಬಂತಹ ಸಂಶಯ ಮನಸ್ಸಿನಲ್ಲಿ ಹಾದು ಹೋದದ್ದೂ ನೆನಪಾಯಿತು : ಅವಳ ಮೈಯ ಸಹಜ ಮಾದಕತೆಗೆ ಈಗ ಬೇರೆಯೇ ಒಂದು ಮೆರುಗು ಬಂದದ್ದನ್ನು ಒಳಮನಸ್ಸೆಲ್ಲೋ ನಮೂದಿಸಿರಬೇಕು. ಒಳಕೋಣೆಯಲ್ಲಿ ನಡೆಯುತ್ತಿದ್ದುದರ ಕಲ್ಪನೆ ತನಗಾಗಲೀ ಗೋಪಾಲನಿಗಾಗಲೀ ಬರುವುದು ಶಕ್ಯವಿರಲಿಲ್ಲ. ನೇತ್ರಾವತಿಯ ಈ ಆಗಮನ ಮಾತ್ರ ಎಂದಿನಂತಹದಲ್ಲ ಎಂಬ ಕಳವಳದ ಭಾವನೆ ಮಾತ್ರ ತಮ್ಮಿಬ್ಬರನ್ನೂ ಕಾಡದೆ ಇರಲಿಲ್ಲ. ಶ್ರೀನಿವಾಸ ಮೋರಿಯಲ್ಲಿ ನಿಂತು ಸ್ನಾನಮಾಡುತ್ತಿರಬೇಕು. ನೀರಿನ ಸದ್ದು ಎಂದಿಗಿಂತ ದೊಡ್ಡದಾಗಿಯೇ ಕೇಳಿಸುತ್ತಿತ್ತು. ಅದು ಉದ್ದೇಶಪೂರ್ವಕವಾದದ್ದಿರಬೇಕು. ನೇತ್ರಾವತಿ ಅವನು ಸ್ನಾನಮಾಡುತ್ತಿರುವಾಗಲೇ ಅವನೊಂದಿಗೆ ಮಾತನಾಡುತ್ತಿರಬೇಕು. ನೀರಿನ ಸದ್ದು ಕೇಳಿಸಹತ್ತಿ ಐದು ಮಿನಿಟುಗಳೂ ಕಳೆದಿರಲಿಕ್ಕಿಲ್ಲ ; ನೇತ್ರಾವತಿ ನಡುಬಾಗಿಲಲ್ಲಿ ಕಾಣಿಸಿಕೊಂಡಳು. ಅವಳ ಮತ್ತು ಶ್ರೀನಿವಾಸರ ನಡುವೆ ಅದೇನು ಮಾತುಕತೆಯಾಗಿತ್ತೋ. ಅವನನ್ನು ಮಾತನಾಡಿಸುವುದಕ್ಕಿಂತ ಹೆಚ್ಚಾಗಿ ಏನನ್ನೋ ಹೇಳಿ ಹೋಗಲೆಂದೇ ಬಂದಿರಬೇಕು : ಗೋಪಾಲ ಹಾಗೂ ತನ್ನನ್ನುದ್ದೇಶಿಸಿ : ನಿಮ್ಮ ನಿಮ್ಮ ತಂಗಿಯರ ಕಾಳಜಿಯನ್ನು ತೆಗೆದುಕೊಳ್ಳಿ. ಇಂತಹ ನೀಚ ಮನುಷ್ಯನ ನೆರಳು ಕೂಡ ಅವರ ಮೇಲೆ ಬೀಳದಿರಲಿ ಎಂದವಳೇ ತಿರುಗಿ ಒಳಗೆ ಹೋದಳು. ಹಾಗೆ ಹೋದದ್ದೇ ತಡ, ಮುಂದಿನ ಚಾಳಿನಿಂದ ಬೊಬ್ಬೆ : ನೇತ್ರಾವತಿ ಮೂರನೇ ಮಜಲೆಯ ಸರಳುಗಳಿಲ್ಲದ ಬೋಳುಕಿಡಕಿಯಿಂದ ಕೆಳಗೆ ಹಾರಿಕೊಂಡಿದ್ದಳು. ಬಂದ ನೆನಪಿನಿಂದ ನಾಗಪ್ಪ ಬೆವರಹತ್ತಿದ. ಹಳೆಯ ಪುಸ್ತಕವೊಂದನ್ನು ಮೂಸಿದ್ದೇ ಈ ನೆನಪಿಗೆ ಮೂಲವೇ ? ಅಥವಾ ಅದು ಮನಸ್ಸಿನಲ್ಲಿಯ ಇನ್ನಾವುದಕ್ಕೋ ಗಂಟುಹಾಕಿಕೊಳ್ಳುತ್ತಿದ್ದ ಕ್ಷಣಕ್ಕೆ ಪುಸ್ತಕದ ವಾಸನೆ ಆಕಸ್ಮಿಕ ನೆನಪಾಯಿತೇ ? ನಾಗಪ್ಪನಿಗೆ ತಿಳಿಯಲಿಲ್ಲ. ಎರಡು ಸಂಗತಿಗಳನ್ನು ಮಾತ್ರ ನಾಗಪ್ಪನಿಗೆ ನೆನಪಿನಿಂದ ತಳ್ಳಿಹಾಕುವುದು ಸಾಧ್ಯವಾಗಲಿಲ್ಲ : ಯಾವುದೋ ಉನ್ಮಾದದ ಭರದಲ್ಲಿ ಕೆಳಗೆ ಹಾರಿಕೊಂಡ ಆ ಮುಗ್ಧ ಜೀವ ಮುದ್ದೆಯಾಗಿ ಬಿದ್ದು ಪ್ರಾಣ ಹಾರಿಹೋಗುವ ಕೊನೆಯ ಕ್ಷಣದಲ್ಲಿ ಕೈಕಾಲು ಬಡೆದದ್ದು ಹಾಗೂ ಶ್ರೀನಿವಾಸ ಸ್ನಾನದ ನೀರಿನಿಂದ ಒದ್ದೆಯಾದ ಮೈಯಲೇ, ಸೊಂಟದಲ್ಲಿ ಟವೆಲೊಂದನ್ನು ಸುತ್ತಿಕೊಂಡು ಓಡೋಡಿಹೋಗಿ ಅರ್ಜುನ್‌ರಾವರ ಮನೆಯಿಂದ ಪೋಲೀಸರಿಗೆ ಫೋನ್ ಮಾಡಿದ್ದು….ಆಸ್ಪತ್ರೆ ಸೇರಿಸುವ ಮೊದಲೇ ನೇತ್ರಾವತಿ ಕೊನೆಯುಸಿರನ್ನೆಳೆದಿದ್ದಳು…. ಮುಂದೆ ಕೋರೋನರರ ಕೋರ್ಟಿನಲ್ಲಿ ತನ್ನದೇ ಪ್ರಮುಖ ಸಾಕ್ಷಿ : ನೇತ್ರಾವತಿಯ ಪ್ರಕ್ಷುಬ್ದಗೊಂಡ ಸಂಬಂಧಿಕರೆಲ್ಲ ಶ್ರೀನಿವಾಸನೇ ಅವಳನ್ನು ಹೊರಗೆ ದೂಡಿದ ಎಂದು ಆಡಿಕೊಂಡದ್ದು ತನ್ನ ಸಾಕ್ಷಿಯ ಮೇಲೆ ಪರಿಣಾಮ ಮಾಡುವದು ಶಕ್ಯವಿರಲಿಲ್ಲ. ನೇತ್ರಾವತಿ ಕಿಡಕಿಯ ದಡಿಯನ್ನೇರಿ ಕೆಳಗೆ ಹಾರಿಕೊಂಡದ್ದನ್ನು ಇದಿರು ಚಾಳಿನ ಇಬ್ಬರು ಹೆಂಗಸರು ಕಣ್ಣಾರೆ ನೋಡಿದ್ದರು. ಆದರೆ ತಾನು ಆತ್ಮಹತ್ಯೆಯ ನಿಶ್ಚಯ ಮಾಡಿಯೇ ಬಂದಿದ್ದೇನೆ ಎಂಬುದನ್ನು ನೇತ್ರಾವತಿ ಶ್ರೀನಿವಾಸನಿಗೆ ಹೇಳಿರಬೇಕು. ಅದನ್ನು ಆ ಕ್ಷಣದ ಮಟ್ಟಿಗಾದರೂ ತಪ್ಪಿಸುವುದು ಶ್ರೀನಿವಾಸನಿಗೆ ಶಕ್ಯವಿತ್ತು. ಆದರೆ ಶ್ರೀನಿವಾಸನ ಆ ದಿನದ ಹಲವು ಕೃತ್ಯಗಳನ್ನು ನೆನೆದರೆ ಅವಳು ಆತ್ಮಹತ್ಯೆ ಮಾಡುವುದೇ ಅವನಿಗೆ ಬೇಕಿತ್ತು ಎನ್ನುವುದು ಸ್ಪಷ್ಟವಾಗುತ್ತಿತ್ತು. ಆದ್ದರಿಂದಲೇ ಅದನ್ನು ತಪ್ಪಿಸುವಂತಹ ಯಾವ ಮುನ್ನೆಚ್ಚರಿಕೆಯನ್ನೂ ಅವನು ವಹಿಸಲಿಲ್ಲ. ಅವಳು ಹಾರಿಕೊಂಡಾಗ ಅವನ ಕೈಯಿಂದ ನಡೆದ ಮೊದಲನೇ ಕೃತ್ಯ : ತನ್ನ ಕೋಣೆಯಿಂದ ಹಾರಿ ಯಾರೋ ಜೀವ ತೆದುಕೊಂಡಿದ್ದಾರೆ ಎಂಬ ಸುದ್ದಿ ಕೊಡುತ್ತ ಪೋಲೀಸರಿಗೆ ಫೋನ್ ಮಾಡಿದ್ದು. ಇದು ಆತ್ಮಹತ್ಯೆ : ಕೊಲೆಯಲ್ಲ ಎಂಬುದನ್ನು ಸಿದ್ದಪಡಿಸುವುದೇ ಶ್ರೀನಿವಾಸನ ತತ್‌ಕ್ಷಣದ ಕಾಳಜಿಯಾಗಿತ್ತು. ನಾಗಪ್ಪನ ಸಾಕ್ಷಿಯ ಮುಖ್ಯ ಒತ್ತು ಈ ಒಂದು ಸಂಗತಿಯ ಮೇಲಿತ್ತು. ಕಾಯದೆಯ ದೃಷ್ಟಿಯಿಂದ ಇದು ಆತ್ಮಹತ್ಯೆಯಾಗಿ ತೋರಬಹುದಾದರೂ ನೈತಿಕವಾಗಿ ಶ್ರೀನಿವಾಸ ಇದಕ್ಕೆ ಸಂಪೂರ್ಣವಾಗಿ ಜವಾಬ್ದಾರನಾಗಿದ್ದಾನೆ ಎಂಬುದನ್ನು ಅಳು ತುಂಬಿದ ಉನ್ಮಾದದಿಂದ ಹೇಳುತ್ತಿರುವಾಗ ಸಾಕ್ಷಿಯ ಸ್ಥಾನದಲ್ಲಿ ನಾಗಪ್ಪ ಗಡಗಡ ನಡುಗುತ್ತಿದ್ದ. ಕೋರ್ಟಿನಲ್ಲಿ ನೆರೆದವರ ಮೇಲೆ ಇದರ ಪರಿಣಾಮವಾಗದೇ ಇರಲಿಲ್ಲ. ನಿರ್ವಿಕಾರವಾಗಿ ಕುಳಿತವರೆಂದರೆ ಇಂತಹ ಕೇಸುಗಳನ್ನು ಕೇಳಿ ಕೇಳಿ ಭಾವನೆಗಳಿಗೆ ಜೊಮ್ಮು ಹಿಡಿದವರಂತೆ ತೋರುತ್ತಿದ್ದ ಕೊರೋನರ್ ಹಾಗೂ ಶ್ರೀನಿವಾಸ, ನಾಗಪ್ಪನ ಸಾಕ್ಷಿಯ ಮುಂದಿನ ಮಾತುಗಳು ಆಡಿದ ನಾಗಪ್ಪನಿಗೇ ಆಶ್ಚರ್ಯವನ್ನುಂಟುಮಾಡಿದ್ದವು. ಯಾವ ಒಂದು ಪೂರ್ವ ಯೋಚನೆಯೂ ಇಲ್ಲದೇ_ಸಾಕ್ಷಿಯ ಸ್ಥಾನದಲ್ಲಿ ನಿಂತದ್ದಕ್ಕೇ ಒಳಗಿನಿಂದ ತಮ್ಮಿಂದ ತಾವೇ_ಹುಟ್ಟಿಬಂದಂತಿದ್ದ ಮಾತುಗಳನ್ನು ಕೇಳುವಾಗ ಎಲ್ಲರ ಹುಬ್ಬುಗಳೂ ಮೇಲಕ್ಕೇರಿದ್ದವು. ಶ್ರೀನಿವಾಸ ಕೊರೋನರರನ್ನೂ ಒಳಗೊಂಡು :

“ಶ್ರೀನಿವಾಸ ನೇತ್ರಾವತಿಯನ್ನು ಪ್ರೀತಿಸುತ್ತಾನೆ ಎನ್ನುವುದರ ಬಗ್ಗೆ ನನಗೆ ಮೊದಲಿನಿಂದಲೂ ಸಂಶಯವಿತ್ತು. ಈ ಸಂಶಯ ಹುಟ್ಟಿದ್ದರೆ ಮೊದಲಲ್ಲಿ ಯಾಕೆಂದು ತಿಳಿದಿರಲಿಲ್ಲ. ಸಂಶಯ ಗಟ್ಟಿಯಾಗುತ್ತಿದ್ದಂತೆ ಒಂದು ದಿನ ಫಕ್ಕನೆಂಬಂತೆ ಹೊಳೆದುಹೋಗಿತ್ತು. (ಅಂತೆಯೆ ಇರಬೇಕು ಅವಳು ಸಾಯುವ ಮೊದಲು ಗರ್ಭವತಿಯೆಂಬ ಸಂಶಯ ಬಂದದ್ದು. ಶ್ರೀನಿವಾಸ ಅವಳೊಡನೆ ಗೆಳೆತನ ಬೆಳೆಸಿದಂದಿನಿಂದ ತನಗರಿವಿಲ್ಲದೇನೇ ಅವಳ ಅಂಗಾಂಗಗಳನ್ನು ಬೇರೆಯ ಒಂದು ದೃಷ್ಟಿಯಿಂದ ತಾನು ನೋಡುತ್ತಿರಬೇಕು !), ಇವಳೊಡನೆಯ ಅವನ ಸಂಬಂಧಕ್ಕೆ ಎಂತಹುದೋ ಭೀತಿ ಕಾರಣವಾಗಿದೆಯೆಂದು_ಪ್ರೀತಿಯಲ್ಲ. ತನ್ನ ಸಂಭೋಗಶಕ್ತಿಯ ಬಗ್ಗೆ ಶ್ರೀನಿವಾಸನಿಗೆ ಮೊದಲಿನಿಂದಲೂ ಒಂದು ಬಗೆಯ ಅಧೈರ್ಯವಿತ್ತು. ಇಂತಹ ಒಂದು ಭಾವನೆಯನ್ನು ನನ್ನ ಹತ್ತಿರ ಅತ್ಯಂತ ಸೂಕ್ಷ್ಮವಾದ ರೀತಿಯಲ್ಲೊಮ್ಮೆ ಪ್ರಕಟಿಸಿದ್ದ. ಅವನು ಓದುತ್ತಿದ್ದ ಪುಸ್ತಕಗಳಿಂದಲೂ ಹಾಗೇ ಅನ್ನಿಸಿತ್ತು. ಚರ್ನೀರೋಡ್ ಹತ್ತಿರದ ಇಂತಹ ಗುಪ್ತ ಪ್ರಶ್ನೆಗಳಿಗೆ ಉತ್ತರ ಕೊಡುವ ಡಾಕ್ಟರರನ್ನು ಕಂಡಿದ್ದು ನೆನಪಿದೆ. ತನ್ನ ಪೌರುಷವನ್ನು ಪಣಕ್ಕೆ ಹಚ್ಚಿ ನೋಡುವ ಅವನ ಗುಂಗು ಎಷ್ಟೊಂದು ವಿಕೋಪಕ್ಕೆ ಹೋಗಿತ್ತೆಂದರೆ ಸೂಳೆಯ ಮನೆಗೆ ಹೋಗುವ ವಿಚಾರವನ್ನೂ ಮಾಡಿದ್ದ ಎಂಬುದು ನನಗೆ ಗೊತ್ತಿದೆ. ರೋಗದ ಭಯವೊಂದೇ ತಡೆಹಾಕಿತ್ತು….(ದೇವರೇ ಈಗ ನಿಚ್ಚಳವಾಗುತ್ತಿದೆಯಲ್ಲ !) ಶ್ರೀನಿವಾಸ ನೇತ್ರಾವತಿಯನ್ನು ಬರಿಯೆ ತನ್ನ ಈ ಭಯದ ನಿವಾರಣೆಗಾಗಿಯೇ ಉಪಯೋಗಿಸಿಕೊಂಡಿರಬೇಕು. ಮದುವೆಯ ಉದ್ದೇಶ ಅವನಿಗಿರಲಿಲ್ಲ. ಇಂತಹ ಅಪರಾಧಕ್ಕೆ ತಕ್ಕ ಶಿಕ್ಷೆಯಾಗದೇ ಹೋಗಬಾರದು…” ಮಾತು ಮುಗಿಸಿದಾಗ ನಾಗಪ್ಪನಿಗೆ ಕಣ್ಣಿಗೆ ಕತ್ತಲೆ ಕವಿದಂತಾಗಿತ್ತು. ಮುಂದಿನದೆಲ್ಲ ಮಾಮೂಲು ವ್ಯವಹಾರ. ಪೋಸ್ಟ್‌ಮಾರ್ಟಮ್ ರಿಪೋರ್ಟಿನಲ್ಲಿ ನೇತ್ರಾವತಿ ಮೂರು ತಿಂಗಳ ಗರ್ಭಿಣಿಯಿದ್ದುದರ ಉಲ್ಲೇಖವಿತ್ತು. ಶ್ರೀನಿವಾಸ ಅವಳೊಡನೆ ಸಂಭೋಗಮಾಡಿದ್ದ ಎಂಬುದಕ್ಕಿಂತ ಪುರಾವೆಯಮೇಲೆ ನಾಗಪ್ಪನ ಸಾಕ್ಷಿ ಹೊಸ ಬೆಳಕನ್ನು ಚೆಲ್ಲುವಂತಾದರೂ ಕಾಯದೆ ಶ್ರೀನಿವಾಸನೆಗೆ ಶಿಕ್ಷೆ ವಿಧಿಸುವುದರಲ್ಲಿ ಷಂಢವಾಗಿದೆ. ಕೋರ್ಟಿನ ಮುಂದಿದ್ದ ಪ್ರಶ್ನೆಯೊಂದೇ : ಇದು ಆತ್ಮಘಾತವೋ ಅಥವಾ ಕೊಲೆಯೋ ? ಆತ್ಮಘಾತವೆಂಬುದಕ್ಕೆ ಕಣ್ಣಾರೆ ಕಂಡವರದೇ ನಿರ್ವಿವಾದ ಸಾಕ್ಷಿಯಿದೆ. ಈ ದುರಂತಕ್ಕೆ ಕಾರಣವಾದ ಸಂಗತಿಗಳಿಗೆ ಸಮಾಜವೇ ತಕ್ಕ ಉಪಾಯಗಳನ್ನು ಯೋಜಿಸಬೇಕೇ ಹೊರತು ಈ ಕೋರ್ಟು ಏನು ಮಾಡಲೂ ನಿರುಪಾಯವಾಗಿದೆಯೆಂಬ ಉದ್ಗಾರಗಳೊಂದಿಗೆ, ಈ ಸಾವು ಆತ್ಮಹತ್ಯೆಯದು : ಶ್ರೀನಿವಾಸ ನಿರ್ದೋಷಿ ಎಂಬ ನಿಲುಗಡೆಯ ರಿಪೋರ್ಟಿನ ಮೇಲೆ ಸಹಿ ಮಾಡಿ ಕೆರೋನರ್ ಮುಂದಿನ ಕೇಸಿನ ತಯಾರಿಗೆ ತೊಡಗಿದಾಗ ಶ್ರೀನಿವಾಸ ಕೋರ್ಟಿನಿಂದ ಪಲಾಯನ ಹೇಳಿದ್ದ….

ಶ್ರೀನಿವಾಸನ ಈ ದುಷ್ಟ ಕೃತ್ಯಕ್ಕೆ ಸಮಾಜ ವಿಧಿಸಿದ ಶಿಕ್ಷೆಯೆಂದರೆ ಈ ದುರ್ಘಟನೆ ನಡೆದ ಆರೇ ತಿಂಗಳಲ್ಲಿ ಮುಂಬಯಿಯ ನಾಲ್ಕು ಸಣ್ಣ ಹೊಟೆಲ್ಲುಗಳ ಮಾಲೀಕರಾದ ಶೇಷ ಕಾಮತರು ತಮ್ಮ ಏಳನೇ ಸುಕನ್ಯೆಯಾದ ಕಲ್ಯಾಣಿಯನ್ನು (ಮದುವೆಯ ಹೊತ್ತಿಗೆ ಶ್ರೀನಿವಾಸನಿಂದ ಶಾರದೆ ಎಂಬ ಹೆಸರು ಪಡೆದವಳನ್ನು) ಕೊಟ್ಟು ಭವ್ಯ ಹಾಲೊಂದರಲ್ಲಿ ಭರ್ಜರಿಯಾದ ರೀತಿಯಲ್ಲಿ ಕಲ್ಯಾಣಮಾಡಿ ಅವನ ಭರಭರಾಟೆಯ ದಿನಗಳಿಗೆ ಬುನಾದಿ ಹಾಕಿಕೊಟ್ಟದ್ದು. ದಾದರಿನ ಹಿಂದೂ ಕಾಲೋನಿಯಲ್ಲಿ ಆಗ ಮಾವನೇ ಕೊಂಡು ಕೊಟ್ಟ ಪ್ಲ್ಯಾಟು : ಮದುವೆಯಾದಮೇಲೆ ಶ್ರೀನಿವಾಸ ಖೇತವಾಡಿ ಬಿಟ್ಟಿದ್ದ. ಮಾವನೇ ತೆಗೆಸಿಕೊಟ್ಟ ಸಣ್ಣ ಪ್ರಿಂಟಿಂಗ್ ಪ್ರೆಸ್ : ಸರಕಾರೀ ನೌಕರಿಗೆ ರಾಜೀನಾಮೆ. ಎಲ್ಲರನ್ನು ಬಿಟ್ಟು ಶ್ರೀನಿವಾಸನನ್ನೇ ಅಳಿಯನನ್ನಾಗಿ ಮಾಡಿಕೊಂಡಿದ್ದರ ಹಿಂದಿನ ಗುಟ್ಟಿನ ಕತೆಯೂ ಪಕ್ಕ ಮೂಡಿಸಿಕೊಂಡು ಅಲ್ಲಲ್ಲಿ ಹಾರಿದ್ದು ನೆನಪಿಗೆ ಬಂದಾಗ_ಶಾರದೆಯ ಮುಗ್ಧ ಸೌಂದರ್ಯಕ್ಕೆ ಮಾರುಹೋದ ನಾಗಪ್ಪ ಅದನ್ನು ಮನಸ್ಸಿನಿಂದ ತೊಡೆದುಹಾಕುವಂತೆ ತಲೆ ಗಲಗಲ ಅಲ್ಲಾಡಿಸಿದ : ವಯಸ್ಸಿನ ಹದಿನೇಳನೇ ವರುಷದಲ್ಲೇ ಮೈಯಲ್ಲಿ ಹರೆಯದ ಸೊಕ್ಕು ತುಂಬಿ ತುಳುಕಾಡುತ್ತಿದ್ದ ಕಲ್ಯಾಣಿಯ ಮೇಲೆ ನೆರೆಮನೆಯ ತರುಣನೊಬ್ಬ ಶ್ರೀನಿವಾಸ ನೇತ್ರಾವತಿಯ ಮೇಲೆ ಮಾಡಿದಂತಹ ಪ್ರಯೋಗವನ್ನೇ ಮಾಡಿದ್ದನಂತೆ ! ಶ್ರೀನಿವಾಸನ ಮೊದಲ ಮಗಳು ಮದುವೆಯಾದ ಎಂಟನೇ ತಿಂಗಳಲ್ಲಿ ಹುಟ್ಟಿದ್ದರೂ ಸರಿಯಾಗಿ ಬೆಳೆದ ಮಗುವಾಗಿತ್ತಂತೆ. ಶಾರದೆಯ ಮೋರೆ ಇನ್ನೊಮ್ಮೆ ಕಣ್ಣುಮುಂದೆ ನಿಂತಾಗ ಈ ಕಂತೆ ಪುರಾಣದ ಬಗ್ಗೆ ಎಷ್ಟೊಂದು ಸಿಟ್ಟು ಬಂದಿತೆಂದರೆ ನಾಗಪ್ಪ ಕುರ್ಚಿಯಿಂದ ಎದ್ದವನೇ ನೇರವಾಗಿ ಮೋರಿಗೆ ಹೋಗಿ ಥೂ ಎಂದು ಬಲವಾಗಿ ಉಗುಳಿದ. ಇನ್ನು ಇಲ್ಲಿ ಬಹಳ ಹೊತ್ತು ಕೂಡ್ರದೆ ಸ್ನಾನ ಮುಗಿಸುತ್ತಲೇ ಹೊರಗೆ ಹೋಗಿ ಊಟಮಾಡಿ ಬರಬೇಕು ಎಂದುಕೊಂಡ. ಕ್ಷೌರಕ್ಕಾಗಿ ಗಡ್ಡದ ಮೇಲೆ ಸಾಬೂನಿನ ನೊರೆ ಎಬ್ಬಿಸುತ್ತಿದ್ದಾಗ, ಶ್ರೀನಿವಾಸನ ‘ಬಿಝಿನೆಸ್ಸು’ ಊರ್ಜಿತಾವಸ್ಥೆಗೆ ಬಂದು ಸಮಾಜದಲ್ಲಿ ಅವನ ವರ್ಚಸ್ಸು ಹೆಚ್ಚುತ್ತ ಹೋದಂತೆಲ್ಲ ನೇತ್ರಾವತಿಯ ಪ್ರಕರಣ ಒಂದು ದಂತಕತೆಯ ರೂಪ ಧರಿಸಿದ್ದು, ಶ್ರೀನಿವಾಸ ದೊಡ್ಡ ಹೀರೋ ಆಗಿ ಮೆರೆದದ್ದು ನೆನಪಿಗೆ ಬರಹತ್ತಿತು : ಶ್ರೀನಿವಾಸನೇ ಒಂದು ದಿನ ತನ್ನ ವರ್ತನೆಗೆ ಬಾಯಿ ಬಿಟ್ಟು ಹೇಳಿದ ಕಾರಣ ಇಷ್ಟು : ಈ ಇಡೀ ಸಂಬಂಧ ಒಂದು ಮೋಸದ ಮೇಲೆ ನಿಂತದ್ದೆಂದು ಗೊತ್ತಾದಾಗ ನೇತ್ರಾವತಿಗಿಂತ ಮೊದಲು ತಾನೇ ಆತ್ಮಹತ್ಯೆ ಮಾಡಿಕೊಳ್ಳುವವನಿದ್ದನಂತೆ. ಆದರೆ ಈ ಯಃಕಶ್ಚಿತ ಜನರ ಸಲುವಾಗಿ ಇಂತಹ ವಿಕೋಪಕ್ಕೆ ಹೋಗುವ ಮನಸ್ಸಾಗದೇ ಪ್ರಭಾದೇವಿಯ ಸಿದ್ಧಿವಿನಾಯಕನ ಮೊರೆಹೊಕ್ಕನಂತೆ_ಮನಃಶಾಂತಿಗಾಗಿ !ನಡೆದ ಮೋಸ ಇದು_ಅನಸೂಯಾಳನ್ನು ಇಟ್ಟುಕೊಂಡವನು ತಮ್ಮ ಜಾತಿಯವನಾಗಿರದೇ ಅಂಕೋಲೆಯ ಕ್ಷೌರಿಕರ ಮನೆತನಕ್ಕೆ ಸೇರಿದವನಂತೆ. ಅವನು ಶ್ರೀಮಂತನಾದದ್ದು ಸ್ಮಗಲ್ ಮಾಡಿದ ಪರದೇಶದ ಸಾರಾಯಿಯ ಮಾರಾಟದಿಂದಂತೆ. ಇದು ತಿಳಿದಾಗಲೇ ಈ ಮದುವೆಯ ಸಂಬಂಧದ ಬಗ್ಗೆ ಮನಸ್ಸು ಮುರಿದಿತ್ತಂತೆ. ಆದರೆ ನೇತ್ರಾವತಿಯ ಮುಖವನ್ನು ನಂಬಿ, ಅವಳಿಗಿತ್ತ ಭರವಸೆಯನ್ನು ನಂಬಿ ಮನಸ್ಸು ಗಟ್ಟಿ ಮಾಡಿದ್ದನಂತೆ. ಆದರೆ ಮೇ ತಿಂಗಳಲ್ಲಿ ಆಗಲಿದ್ದ ಮದುವೆ ಮಾರ್ಚಿನಲ್ಲೇ ಆಗಬೇಕೆಂದು ಉತಾವಳಿ ಮಾಡಿದಾಗ…..ಎಂದು ಮುಂತಾಗಿ ಶ್ರೀನಿವಾಸ ನೇತ್ರಾವತಿಯ ಹೊಟ್ಟೆಯೊಳಗಿನ ಪಿಂಡದ ಜವಾಬ್ದಾರಿಯನ್ನು ಅನಸೂಯಾಳ ಮಿಂಡನ ಮೇಲೆ ಹೊರಿಸಿದ್ದ ! ಜನ ಈ ಹೊಸ ಕತೆಯನ್ನೂ ಬಾಯಿ ಚಪ್ಪರಿಸಿ ಕೇಳಿತ್ತು. ಜನ ನಂಬುವಂತೆ ಕತೆ ಕಟ್ಟುವುದರಿಂದಲೇ ವ್ಯಕ್ತಿ ತನ್ನ ಕೃತ್ಯದ ನೈತಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಹುದಾದರೆ….

ನಡುವೆಯೇ ನಾಗಪ್ಪ ಮತ್ತೆ ನಡುಗಿದ :

ಹಳೆಯ ಪುಸ್ತಕವೊಂದನ್ನು ಮೂಸಿ ನೋಡಿದ ಒಂದು ಆಕಸ್ಮಿಕ ಘಟನೆಯೊಂದರಿಂದ ಹುಟ್ಟಿದ ನೆನಪು ತನ್ನನ್ನು ಇನ್ನಾವುದಕ್ಕೋ ಸಿದ್ಧಗೊಳಿಸಲೆಂದೇ ಹುಟ್ಟಿರಬೇಕು. ಮೊದಲಿನಿಂದಲೂ ಅದನ್ನು ಗಂಟು ಹಾಕಿಕೊಂಡೇ ಮೇಲೆ ಬಂದಿರಬೇಕು : ‘ಸಂತೋಷಭವನ’ದ ನಾಯಕ ಹೇಳಿದ ಮಾತು ಹಠಾತ್ತನೆ ಮೂಡಿಬಂದು ಇದಕ್ಕೆಲ್ಲ ಅರ್ಥ ಸೂಚಿಸಿತು : ‘ನಿನ್ನ ಅಪ್ಪ ಅಮ್ಮ ತಾವು ಇಂತಹ ಜಾತಿಯವರೆಂದು ಹೇಳಿ ಎಂತಹುದೋ ಮೋಸ ಮಾಡಿದ್ದಾರೆ ಎನ್ನುವ ಧಾಟಿಯ ಆರೋಪ. ನೇತ್ರಾವತಿಯ ಭಾವನ ಮೇಲೆ ಶ್ರೀನಿವಾಸ ಹೊರಿಸಿದ ಆರೋಪ ಇದಕ್ಕೆ ಕೊಂಡಿ ಹಾಕಿಕೊಂಡು ಆಗಿನಿಂದಲೂ ಹೊಳೆಯದೇ ಇದ್ದುದನ್ನು ಈಗ ಹೊಳೆಯಿಸಿ ಅದನ್ನು ಇದಿರಿಸುವಂತೆ ತನ್ನನ್ನು ಆಹ್ವಾನಿಸಿರಬೇಕು.

ನಾಗಪ್ಪ ಮೋರಿಯಲ್ಲಿ ನಿಂತು ತಂಬಿಗೆ ತುಂಬಿ ತುಂಬಿ ತಂಪುನೀರನ್ನು ತೆಲೆಯಮೇಲೆ ಸುರಿದುಕೊಳ್ಳುತ್ತ ನಿಂತ : ಅಂತೂ ತನ್ನ ವ್ಯಕ್ತಿತ್ವದ ನಿಜವಾದ ಸತ್ವ ತನಗೇ ಗೊತ್ತಾಗುವ ಮುಹೂರ್ತ ಒದಗಿಬರುತ್ತಿದೆ. ಬರಲಿ ಎಂದುಕೊಂಡ.
uಟಿಜeಜಿiಟಿeಜ
– ಅಧ್ಯಾಯ ಹದಿನೇಳು –

ಸ್ನಾನಕ್ಕೆ ನಿಂತಲ್ಲೇ, ಶ್ರೀನಿವಾಸನೂ ಈ ಪಿತೂರಿಯಲ್ಲಿ ಸಾಮೀಲಾದದ್ದರ ಕಾರಣಕ್ಕೆ ಅರ್ಥ ಹೊಳೆಯುತ್ತಿದೆ ಎನ್ನುವ ಅನ್ನಿಸಿಕೆ : ಕೊರೋನರರ ಕೋರ್ಟಿನಲ್ಲಿ ತಾನು ಆಡಿದ ಮಾತುಗಳಿಂದ ಅಭಿಮಾನಕ್ಕೆ ಬಿದ್ದ ಜಖಮ್ ಶಿಕಾರಿಯಾಡುವ ಶ್ವಾಪದ-ಪ್ರವೃತ್ತಿಯ ನೆಲೆಯಲ್ಲಿ ಸತ್ವ ಪಡೆಯುತ್ತ ಜೀವಂತವಾಗಿದ್ದಿರಬೇಕು. ಮಾನವನ ಆಕ್ರಮಣಶೀಲತೆ ಬೇರು ಬಿಟ್ಟದ್ದು ತನ್ನ ಪೂರ್ವಜರ ಬೇಟೆಯಾಡುವ ಅವಶ್ಯಕತೆಯಲ್ಲೇ. ಸ್ವತಃ ಅವನೂ ಕೂಡ ತನ್ನ ಇತಿಹಾಸದ ಆರಂಭದಲ್ಲಿ ಬೇಟೆಯಾಡಿಯೇ ಉಪಜೀವಿಸುತ್ತಿದ್ದ : ಇಷ್ಟೇ. ಆ ಬೇಟೆಯ ಉದ್ದೇಶ ಹೊಟ್ಟೆಪಾಡಾಗಿತ್ತು. ಆದರೆ ಶ್ರೀನಿವಾಸನ ಹಾಗೂ ಫಿರೋಜರ ಪಿತೂರಿಯ ಹಿಂದಿನ ಪ್ರೇರಣೆಗೆ ಉತ್ಕ್ರಾಂತಿ-ಕ್ರಮದಲ್ಲಿ ಯಾವ ಸ್ಥಾನವಿದೆ ? ಇಪ್ಪತ್ತು ವರ್ಷಗಳ ಹಿಂದೆ ನಾನು ಅವನ ಬಗ್ಗೆ ವ್ಯಕ್ತಪಡಿಸಿದ ಒಂದು ನಿಲುವಿನ ಕಾರಣದಿಂದ ನನ್ನನ್ನು ಮುಗಿಸಿಯೇಬಿಡುತ್ತೇನೆಂಬಂತಹ ಈ ಛಲಕ್ಕೆ ಸಮಾನವಾದ ಭಾವನೆ ಮಾನವಪೂರ್ವ ವಿಕಾಸಸ್ಥಿತಿಯಲ್ಲಿಲ್ಲ. ಇನ್ನೊಬ್ಬನನ್ನು ಧ್ವಂಸಗೊಳಿಸುವುದರಲ್ಲೇ ಸುಖ ಕಾಣುವ ಪ್ರಾಣಿ ತನ್ನ ಮೆದುಳಿನ ಬೃಹದಾಕಾರದ ಬಗ್ಗೆ ದುರಭಿಮಾನ ತಾಳುವ ಮನುಷ್ಯನೊಬ್ಬನೇ ಎಂದು ತೋರುತ್ತದೆ.ನನ್ನ ಕರಿಯರದ ಅಭ್ಯುದಯದ ಸಲುವಾಗಿ ಏನನ್ನೂ ಮಾಡಿರದ ಫಿರೋಜ್ ಅದನ್ನಿಂದು ಹಾಳುಮಾಡುವದರಲ್ಲಿ ಪಡುವ ಸುಖಕ್ಕೆ ಏನು ಅರ್ಥ ? ಒಬ್ಬ ಇನ್ನೊಬ್ಬನ ವಿನಾಶಕ್ಕೆ ಕಾರಣಗಾಗದ ಹಾಗೆ_ಬೇಟೆಯ ದಿನಗಳಲ್ಲಿ ಬೆಳೆಸಿಕೊಳ್ಳಬೇಕಾದ_ಆಕ್ರಮಣಶೀಲತೆಯನ್ನು ಹತ್ತಿಕ್ಕುವ ಉಪಾಯಗಳು ಮಾನವನಿಗೆ ವ್ಯಕ್ತಿಗತವಾಗಿ ಸಾಧಿಸಿಲ್ಲ. ಪ್ರಾಣಿವರ್ಗಕ್ಕೆ ಇವು ಸಾಧಿಸಿವೆಯಂತೆ. ಮನುಷ್ಯ ಮನುಷನದೇ ಧ್ವಂಸಕ್ಕೆ ಕಾರಣವಾಗುವ ದುಷ್ಟಶಕ್ತಿಯ ದಮನ ಸಾಮಾಜಿಕವಾಗಿ ಮಾತ್ರ ಸಾಧ್ಯವೆಂದು ತೋರುತ್ತದೆ. ಆದರೆ ಮಾನವ ಸಮಾಜ ಇನ್ನೂ ಆ ರೀತಿಯಿಂದ ವಿಕಾಸವಾಗುತ್ತಿಲ್ಲ….

ಮತ್ತೆ ಇಂತಹ ಬರಿಯೆ ಮಿದುಳಿನಲ್ಲಿ ಹುಟ್ಟಿದ ವಿಚಾರಗಳಿಂದ ದೇಹದ ಇನ್ನಾವುದೋ ಕೇಂದ್ರದಲ್ಲಿ ತನ್ನನ್ನೂ ನಡುಗಿಸುತ್ತಿದ್ದ ಭಯವನ್ನು ಕಳಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂಬುದರ ಅರಿವು ನಾಗಪ್ಪನಿಗೆ ಬರದಿರಲಿಲ್ಲ. ಆ ಅರಿವು ಬಂದಕೂಡಲೇ ತನ್ನ ಪುಕ್ಕಲುತನದ ಬಗ್ಗೆ ತನಗೇ ಸಿಟ್ಟು ಬಂದಿತು : ಸೀತಾರಾಮನನ್ನು ಕಾಣಲು ಹೋಗಬೇಕು, ಎಷ್ಟು ದಿನವಾಯಿತು ಅವನನ್ನು ಕಾಣದೇನೆ. ಇಲ್ಲ, ಮೊದಲ ಭೇಟಿಯಲ್ಲೇ ಅಷ್ಟೊಂದು ಆತ್ಮೀಯತೆಯಿಂದ ಮಾತನಾಡಿಸಿದ ದೋಶಿಯವರನ್ನಾದರೂ ಕಂಡು ಬರಬೇಕು ಎಂಬ ವಿಚಾರವನ್ನು ಕೂಡ ಬಿಟ್ಟುಕೊಟ್ಟ. ಬೇಡ. ಮಾತನಾಡಿ ಪ್ರತಿಯೊಂದನ್ನೂ ಕೆಟ್ಟ ವಿಜ್ಞಾನವನ್ನಾಗಿ ಮಾಡಿ ಒಳಗಿನ ಭಯವನ್ನು ಕಳೆದುಕೊಳ್ಳುವ ಈ ದುರಭ್ಯಾಸ ಇನ್ನು ಬೇಡ. ಬಹುಶಃ ಮನುಷ್ಯತ್ವದ ಅಂತಿಮ ಲಕ್ಷಣವೊಂದೇ ಎಂದು ತೋರುತ್ತದೆ : ಅನ್ಯಾಯಕ್ಕೆ ಒಗ್ಗದೇ ಇರುವುದು; ಅದರ ವಿರುದ್ಧ ಹೋರಾಡುವುದು. ಸತ್ತರೂ ಅಡ್ಡಿಯಿಲ್ಲ; ಸೋಲನ್ನೊಪ್ಪಲಾರೆ….

ತನ್ನ ನಿರ್ಧಾರದ ಅಭಿವ್ಯಕ್ತಿಗೀಗ ಮಂತ್ರೋಚ್ಛಾರದ ಧಾಟಿ ಬಂದದ್ದು ನೋಡಿ ಮುಜುಗರವಾಯಿತು.

ಸ್ನಾನ ಮುಗಿಸಿ ಬಟ್ಟೆ ಹಾಕಿಕೊಂಡವನೇ ಊಟಕ್ಕೆಂದು ಸೀದಾ ‘ಶೇರ್-ಏ-ಪಂಜಾಬ್’ ರೆಸ್ಟೋರಂಟಿಗೇ ಹೋದ. ಕೌಂಟರಿನ ಮೇಲೆ ಕೂತ ಶೇಖ ಅನ್ವರ್ ಎಂದಿನ ಗೆಳೆತನದ ನಗೆ ನಗುತ್ತ, “ಬಹಳ ದಿನಗಳಾದವು ಸಾಹೇಬರು ಇತ್ತ ಬರದೇ. ನೋಡಿ, ನಿನ್ನೆ ಸಂಜೆ ಒಬ್ಬ ಹುಡುಗ ನಿಮಗೊಂದು ಚೀಟಿ ಕೊಟ್ಟು ಹೋಗಿದ್ದಾನೆ. ಬಹಳ ಹೊತ್ತು ಹಾದಿ ನೋಡಿದ. ನೀವು ದಿನವೂ ಊಟಕ್ಕೆ ಇಲ್ಲೇ ಬರುತ್ತೀರಿ ಎಂದು ಯಾರೋ ಹೇಳಿದ್ದರಿಂದ ಇಲ್ಲಿ ಬಂದನಂತೆ. ಹೆಸರು ಹೇಳಲಿಲ್ಲ” ಎಂದ. ನಾಗಪ್ಪನ ಮನಸ್ಸು ತಿರುಗಿ ಕಳವಳಕ್ಕೊಳಗಾಯಿತು. ಮೂಲೆಯ ಒಂದು ಟೇಬಲ್ ಇದಿರು ಕೂಡುತ್ತಲೇ ಇದಿರು ಬಂದು ನಿಂತ ವೇಟರ್‍ಗೆ ಊಟದ ಆರ್ಡರ್ ಕೊಟ್ಟು ಲಿಫಾಫೆಯ ಬಾಯಿತೆರೆದು ಒಳಗಿನ ಚೀಟಿಯನ್ನು ಹೊರತೆಗೆದ. ಮುಂಜಾನೆ ‘ಸಂತೋಷಭವನ’ದಲ್ಲಿ ನೋಡಿದ ಚೀಟಿಯದೇ ಕಾರ್ಬನ್ ಪ್ರತಿ. ಇದು ಮೇರಿಯದೇ ಕೆಲಸ. ಚೀಟಿಯ ಮುಖಾಂತರ ತನ್ನನ್ನು ತಲುಪುವುದರಲ್ಲಿ ತೋರಿಸಿದ ಕಾಳಜಿಯಿಂದ ಕಣ್ಣು ತೇವಗೊಳ್ಳುತ್ತಿರುವಷ್ಟರಲ್ಲಿ ಇಷ್ಟೊಂದು ತರಾತುರಿಯಲ್ಲಿ ತನಗೆ ಮುಟ್ಟಿಸಲು ಬಯಸಿದ ಸಂದೇಶ ಅದೆಂತಹದಿರಬಹುದಪ್ಪ. ಎಂಬ ಆತಂಕಕ್ಕೊಳಗಾದ. ರಾತ್ರಿಯ ಎಂಟು ಗಂಟೆಯವರೆಗೆ ಕಾಯಬೇಕಾದ ಅವಶ್ಯಕತೆಯ ಒತ್ತಡ ತಡೆಯುವುದು ಅಸಾಧ್ಯವೆನಿಸಿತು. ಊಟದ ಬಿಲ್ಲು ತೆತ್ತು ಹೊಟೆಲಿನ ಹೊರಗೆ ಬಿದ್ದು ನಡೆಯುತ್ತ ಮನೆಯ ದಾರಿ ಹಿಡಿದಾಗ ಏನೇನು ಉಂಡೆ ಎಂಬುದೇ ನೆನಪಿಗೆ ಬರದಾಯಿತು. ಚಿರಪರಿಚಿತವಾದ ಲೆಮಿಂಗ್ಟನ್ ರೋಡ್ ಗುಂಟ ನಡೆಯುವಾಗ ಕಾಡಿದಷ್ಟು ತೀವ್ರವಾಗಿ ತನ್ನ ಒಂಟಿತನ ನಾಗಪ್ಪನನ್ನು ಹಿಂದೆಂದೂ ಕಾಡಿರಲಿಲ್ಲ. ಹಠಾತ್ತನೆ ಬಂದ ಒಂದು ವಿಚಾರಕ್ಕೆ ನಾಗಪ್ಪ ಫುಟ್‌ಪಾಥಿನ ಮೇಲೆ ಥಕ್ಕಾಗಿ ನಿಂತೇಬಿಟ್ಟ : ತಾನು ಆಫೀಸಿಗೇ ಹೋಗದೇ ಆರು ದಿನಗಳಾಗುತ್ತ ಬಂದರೂ ತನ್ನ ಬಗ್ಗೆ ಎಷ್ಟೊಂದು ಅಭಿಮಾನ. ಪ್ರೀತಿ ಇಟ್ಟುಕೊಂಡವರೆಂದು ತಾನು ತಿಳಿದ ಸಹೋದ್ಯೋಗಿಗಳು, ತನ್ನ ಕೈಕೆಳಗಿನ ಸಹಾಯಕರು ಇವರಲ್ಲೊಬ್ಬರೂ ತನಗೆ ಭೆಟ್ಟಿಯಾಗಲೂ ಈವರೆಗೆ ಬಂದಿರಲಿಲ್ಲ. ಅವರೆಲ್ಲ ತನ್ನ ಬಗ್ಗೆ ತೋರುತ್ತ ಬಂದ ಭಾವನೆಗಳು ಕೂಡ ಬರಿಯ ಸ್ವಾರ್ಥದ ಮೇಲೆ ನಿಂತವುಗಳಾಗಿದ್ದುವೇ ? ಬಂದ ಸಂಶಯದಿಂದ ಉಂಡದ್ದೆಲ್ಲ ಹೊರಬರುವ ಭಯವಾಯಿತು, ನಾಗಪ್ಪನಿಗೆ. ತಾನಿನ್ನೂ ಫುಟ್‌ಪಾಥಿನ ಮೇಲೆ ಇದ್ದೇನೆ ಎನ್ನುವುದರ ಅರಿವು ಬಂದು ತನ್ನನ್ನು ಸಾವರಿಸಿಕೊಳ್ಳುತ್ತ ಬದಿಯ ಎಲೆಯ ಅಂಗಡಿಗೆ ಹೋಗಿ, ‘ಬನಾರಸೀ ಮಸಾಲಾ ಪಾನ್’ ಕೊಂಡು ಬಾಯಲ್ಲಿಟ್ಟು ಅಗಿಯುತ್ತ ವೇಗವೇಗವಾಗಿ ಮನೆಯ ಕಡೆಗೆ ಹೆಜ್ಜೆ ಇಡಹತ್ತಿದ. ಇಲ್ಲ ಯಾರಾದರೂ ಬಂದಿರಬೇಕು. ತಾನು ಶ್ರೀನಿವಾಸನ ಮನೆಗೆ ಹೋದಾಗ ಬಾಗಿಲ ಬೀಗವನ್ನು ಕಂಡು ಹಿಂತಿರುಗಿ ಹೋಗಿರಬೇಕು. ನೆರೆಮನೆಯವರು ತನಗೆ ಹೇಳಲು ಮರೆತಿರಬೇಕು….ನಾಗಪ್ಪನ ಮನಸ್ಸು ಸತ್ಯಸಂಗತಿಯನ್ನು ಇದಿರಿಸಲು ಹಿಂದೆಗೆಯಹತ್ತಿತು; ಈಗಾಗಲೇ ತನ್ನನ್ನು ಸಸ್ಪೆಂಡ್ ಮಾಡಿದ್ದರ ಸುದ್ದಿ ಆಫೀಸಿನಲ್ಲೆಲ್ಲ ಹರಡಿರಬೇಕು. ಅದರ ಕಾರಣ ಕೂಡ. ಈ ವಿಚಾರ ನಾಗಪ್ಪನಿಗೆ ಹೊಳೆದೂ ಅದನ್ನು ಕೂಡಲೇ ಒಪ್ಪಲು ಸಿದ್ಧನಿರಲಿಲ್ಲ. ‘ಶೇರ್-ಏ-ಪಂಜಾಬ್’, ‘ಸಂತೋಷಭವನ’ಗಳಲ್ಲಿ ಊಟಕ್ಕೆ ಹೋಗುತ್ತಿದ್ದ ಸಮಾಚಾರ ಮೇರಿಗೆ ತನ್ನ ಸಹೋದ್ಯೋಗಿಗಳಿಂದಲೇ ತಿಳಿದಿರಬೇಕು….

ಮಾಳಿಗೆಯ ಮೆಟ್ಟಿಲುಗಳನ್ನು ಹತ್ತಿ ಕೋಣೆಯತ್ತ ಸಾಗುವಾಗ, ಎಲ್ಲ ಗಂಡಸರು ಆಫೀಸಿನಲ್ಲಿ ಇರುವ ವೇಳೆಗೆ ತಾನೊಬ್ಬನೇ ಮನೆಯಲ್ಲಿರುತ್ತಿದ್ದುದನ್ನು ಕಂಡು ಚಾಳಿನ ಹೆಂಗಸರು ತನ್ನತ್ತ ಬೀರಿದ ದೃಷ್ಟಿಯಲ್ಲಿ ಮೂಡಿದ ಕುತೂಹಲದಲ್ಲಿ ಇಷ್ಟು ದಿನ ಆತ್ಮೀಯನಾದವನು ಈಗ ಒಬ್ಬ ಯಃಕಶ್ಚಿತನಾಗಿ ತಾನು ಅನುಭವಿಸುತ್ತಿದ್ದ ಯಾತನೆಯನ್ನು ಕುರಿತು ಒಂದು ಬಗೆಯ ಫಾಜೀಲವಾದ ಆಸ್ಥೆಯಿಂದ ಗುಮಾನಿ ಬಂದು ಮನಸ್ಸು ಹೇಸಿತು. ಇಂದಿನ ಯಾಂತ್ರಿಕ ಜೀವನದಿಂದಾಗಿ ದಡ್ಡು ಬಿದ್ದ ತಮ್ಮ ಸಂವೇದನೆಗಳನ್ನು ಚುರುಕುಗೊಳಿಸಲು ಇವರು ಇತರರ ದುಃಖವನ್ನು ಕೂಡ ಉಪಯೋಗಿಸಿಕೊಳ್ಳಬಲ್ಲರೇನೋ : ಉಳಿದವರ ಯಾತನೆ ಕೂಡ ಇವರಿಗೆ ಮನರಂಜನನೆಯ ವಿಷಯವಾಗಬಲ್ಲುದೇನೋ. ಕೋಣೆಯ ಬೀಗ ತೆಗೆಯುವ ಹೊತ್ತಿಗೆ ಮಗ್ಗುಲ ಮನೆಯ ಹೆಂಗಸು ‘ಮೈಯಲ್ಲಿ ಹುಷರಿಲ್ಲವೆ ?’ ಎಂದು ಕೇಳಿದ್ದರಲ್ಲಿ ತನ್ನ ಆರೋಗ್ಯದ ಬಗೆಗಿನ ಕಾಳಜಿಗಿಂತ, ನೀನು ಯಾಕೆ ಆಫೀಸಿಗೆ ಹೋಗದೇ ಮನೆಯಲ್ಲೇ ಕೂತಿದ್ದೀ ಎನ್ನುವುದರ ಸುಳುಹು ನಮಗೆ ಹತ್ತಿದೆ ಎಂಬ ಸೂಚನೆಯೊಳಗಿನ ವ್ಯಂಗ್ಯ. ಅದರಿಂದಾಗಿ ತನಗಾಗುತ್ತಿದ್ದ ನೋವಿನಿಂದ ಅವಳು ಸುಖಪಡುವ ರೀತಿ_ಇವುಗಳಿಂದಾಗಿ ಜಿಗುಪ್ಸೆ ಹುಟ್ಟಿತು. ತನ್ನ ತಿರಸ್ಕಾರವನ್ನು ಮುಚ್ಚುವ ಪ್ರಯತ್ನ ಮಾಡದೇ_‘ಹೌದು, ಆದರೆ ಅದಕ್ಕೆ ಬೇಕಾದ ಔಷಧಿ ನಿಮ್ಮ ಹತ್ತಿರ ಇಲ್ಲ,” ಎಂದವನೇ ಕದ ತೆರೆದು ಒಳಗೆ ಹೋದ. ಈಗ ಗಡದ್ದಾಗಿ ನಿದ್ದೆ ಮಾಡಬೇಕು ಎಂಬ ವಿಚಾರದಿಂದ ಕದ ಮುಚ್ಚಿ, ಬಟ್ಟೆ ಬದಲಿಸಿ, ಕಾಟಿನ ಮೇಲೆ ಅಡ್ಡವಾದದ್ದೇ ಆ ಹೆಂಗಸಿನ ಪೆಚ್ಚುಬಿದ್ದ ಮೋರೆ ಕಣ್ಣಮುಂದೆ ಬಂದು, ಹಾಗೆ ಚುಚ್ಚಿ ಮಾತನಾಡಿ ಅವಳ ಬಾಯನ್ನು ಮುಚ್ಚಿಸಿದ ತನ್ನ ಧೈರ್ಯದ ಬಗ್ಗೆ ತಾನೇ ಖುಶಿಪಟ್ಟ. ಅವಳ ಪೇಚನ್ನು ಕಂಡು ಬದಿಯ ಮನೆಗಳ ಇನ್ನಿಬ್ಬರು ಹೆಂಗಸರು ಗುಸುಗುಸು ನಗುತ್ತ ಒಳಗೆ ಹೋದದ್ದೂ ನೆನಪಿಗೆ ಬಂದು ಇನ್ನಷ್ಟು ಖುಶಿಯಾಯಿತು. ಅರೆ ! ಇದೆಂತಹ ಖುಶಿಪಡುವ ರೀತಿ ಎಂದು ತನ್ನ ಬಗ್ಗೆ ತಾನೇ ಅಚ್ಚರಿಪಟ್ಟ.

ನಿದ್ದೆಯಿಂದ ಎಚ್ಚರವಾದಾಗ ಒಂದು ವಿಚಿತ್ರ ಸದ್ದಿನಿಂದ ತನಗೆ ಎಚ್ಚರವಾದದ್ದು ಎನ್ನುವದಷ್ಟೇ ನಾಗಪ್ಪನಿಗೆ ನೆನಪಿಗೆ ಬಂತು. ಕಣ್ಣು ತಿಕ್ಕಿಕೊಳ್ಳುತ್ತ ಗಡಿಯಾರ ನೋಡಿಕೊಂಡಾಗ ಬರೇ ಮೂರು ಗಂಟೆ. ಮೇರಿಗೆ ಫೋನ್ ಮಾಡಲು‌ಇನ್ನೂ ಐದು ಗಂಟೆಯ ಕಾಲ ಹಾದಿ ಕಾಯಬೇಕು. ಹಾಸಿಗೆಯಿಂದ ಎದ್ದು, ಮೋರೆ ತೊಳೆದು ಚಹಮಾಡಲು ಸ್ಟೋವ್ ಹೊತ್ತಿಸುವ ಮನಸ್ಸಾಗದೇ ಕೆಳಗೆ ಹೋಗಿ ಶ್ರೀಕೃಷ್ಣವಿಲಾಸದಲ್ಲೇ ಚಹ ಕುಡಿದು ಬಂದರಾಯಿತು ಎಂದುಕೊಂಡು ಉಡುಪು ತೊಡಹತ್ತಿದ. ಕನ್ನಡಿಯ ಇದಿರು ನಿಂತು ಕೂದಲು ಬಾಚಿಕೊಳ್ಳುತ್ತಿರುವಾಗ ಯಾವ ಸ್ಪಷ್ಟ ಕಾರಣವೂ ಇಲ್ಲದೇನೆ ಬಂದ ವಿಚಾರಕ್ಕೆ ದಿಗಿಲಾಯಿತು. ಬಹುಶಃ ನೇತ್ರಾವತಿಯ ಆತ್ಮಘಾತದ ನೆನಪು ಪ್ರಜ್ಞೆಯ ತಳದಲ್ಲಿ ಮೈ ಹೊರಳಿಸಿರಬೇಕು ; ಬದುಕುವ ಶೈಲಿಯಲ್ಲಿ ಆತ್ಮಹತ್ಯೆಯ ರೀತಿ ಕೂಡ ವ್ಯಕ್ತಿಯ ಅಂತರಂಗವನ್ನು ಪ್ರಕಟಿಸುತ್ತದೆಯೇನೋ ! ನೇತ್ರಾವತಿ ಮೂರು ಮಜಲು ಎತ್ತರದಿಂದ ಕೆಳಕ್ಕೆ ಹಾರಿಕೊಂಡದ್ದು, ಅಪ್ಪ ಬಾವಿಯಲ್ಲಿ ಮುಳುಗಿದ್ದು….ಯಾತನೆ ಪಡುವ ಮನಸ್ಸಿನ ಸಾಯುವ ಸಂಕಲ್ಪಕ್ಕೆ ದೇಹ ಪ್ರತಿಸ್ಪಂದಿಯಾಗುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದದ್ದೇ ? ಇಲ್ಲವಾದರೆ ಆತ್ಮಘಾತದ ಕ್ರಮದಲ್ಲಿ ಇಷ್ಟೊಂದು ಪರಿಗಳು ಏಕೆ ಇರುತ್ತಿದ್ದವು. ತಾನೇ ಆತ್ಮಹತ್ಯಗೆ ಮನಸ್ಸು ಮಾಡಿದ್ದೇ ಆದರೆ (ನಾಗಪ್ಪನ ಮೈಮೇಲಿನ ಕೂದಲು ನೆಟ್ಟಗೆ ನಿಂತವು) ಎರಡು ರೀತಿಗಳನ್ನು ಸರ್ವಥಾ ಆಯ್ಕೆ ಮಾಡುತ್ತಿರಲಿಲ್ಲ: ಒಂದು, ಕೊರಳಿಗೆ ನೇಣುಹಾಕಿಕೊಳ್ಳುವುದು ; ಇನ್ನೊಂದು ಮೈಗೆ ಬೆಂಕಿ….ನಾಗಪ್ಪನಿಗೆ ಈ ವಿಚಾರವನ್ನು ಪೂರ್ತಿಗೊಳಿಸುವದಾಗಲಿಲ್ಲ. ತಾನು ಸಾಯಲು ಬಯಸಿದ್ದೇ ಆದರೆ ನಿದ್ದೆಗುಳಿಗೆಗಳನ್ನು ತಿಂದೇ ತನ್ನ ಯಾತನೆಯನ್ನು ಕೊನೆಗೊಳಿಸಬಹುದು. ಈ ಅನಾರೋಗ್ಯಕರ ವಿಚಾರಗಳಿಂದ ತನ್ನನ್ನು ಬಿಡಿಸಿಕೊಳ್ಳಲೆಂಬಂತೆ, ಅವಸರ ಅವಸರವಾಗಿ, ಹೊರಗೆ ಹೋಗಬೇಕೆಂದು ಕದ ತೆರೆಯುತ್ತಿದ್ದಾಗ ಯುನಿಫಾರ್ಮ್ ಧರಿಸಿದ ಕಂಪನಿಯ ಪ್ಯೂನ್_ತನ್ನ ಬಗ್ಗೆ ತುಂಬ ಆದರ ಇಟ್ಟುಕೊಂಡ_ಪ್ರಭಾಕರ ಬಾಗಿಲಲ್ಲಿ ಬಂದು ಹಾಜರಾಗಿದ್ದ. ಎಂದಿನಂತೆ ಸೌಜನ್ಯ ತೋರಿಸಿ ನಮಸ್ಕರಿಸಿ ಕೈಯಲ್ಲಿ ತಂದ ಲಕ್ಕೋಟೆಯನ್ನು ನಾಗಪ್ಪನ ಕೈಯಲ್ಲಿ ಕೊಟ್ಟವನು ಅಲ್ಲಿಂದ ಕಾಲುಕೀಳುವ ತ್ವರೆಯಲ್ಲಿದ್ದಂತೆ ಕಂಡ. ಲಕ್ಕೋಟೆಯಲ್ಲಿದ್ದದ್ದು ಹೈದರಾಬಾದಿಗೆ ಹೋಗುವ ಟಿಕೆಟ್ಟೇ ಇರಬೇಕೆಂಬುದರ ಬಗ್ಗೆ ಯಾವ ಸಂಶಯವೂ ಇಲ್ಲದವನಂತೆ ನಾಗಪ್ಪ, ಅದನ್ನು ಪುಸ್ತಕದ ಕಪಾಟಿನಲ್ಲಿ ಒಂದೆಡೆ ಇಡುತ್ತ, “ತಡೆ ಪ್ರಭಾಕರ್, ನಾನು ಇದೀಗ ಚಹ ಕುಡಿಯಲಿಕ್ಕೆಂದು ಕೆಳಗೆ ಹೋಗುವವನಿದ್ದೆ. ಕೂಡಿಯೇ ಹೋಗೋಣ. ಜೊತೆಗೆ ಯಾರೂ ಇಲ್ಲದೇ ಬೇಸರ ಬಂದಿತ್ತು. ಆಯತ ಹೊತ್ತಿಗೇ ಬಂದಿ. ಬಾ. ಒಂದೊಂದು ಕಪ್ಪು ಚಹ ಕುಡಿಯೋಣ”ಎನ್ನುತ್ತ ಕದ ಮುಚ್ಚಿ ಬೀಗ ಹಾಕಿದ. ಈ ಅನಿರೀಕ್ಷಿತ ಆತ್ಮೀಯ ಆಹ್ವಾನದಿಂದ ಪ್ರಭಾಕರ ಸಂಕೋಚದಿಂದ ಮುದುಡಿ ಮುದ್ದೆಯಾದ. ಕಾರ್ರಿಡಾರಿನಲ್ಲಿ ನಡೆಯುವಾಗ, “ನೀನು ತಂದದ್ದು ಹೈದರಾಬಾದಿಗೆ ಹೋಗುವ ಟಿಕೆಟ್ ಇರಬೇಕು ಅಲ್ಲವೆ ? ಯಾವ ತಾರೀಖಿನದಂತೆ ?” ಎಂದು ಕೇಳಿದ ನಾಗಪ್ಪ. ಪ್ರಭಾಕರ ತನಗೆ ಗೊತ್ತಿದೆ ಎನ್ನುವುದನ್ನು ತೋರಿಸಬೇಕೋ ಬಾರದೋ ಎಂದು ಅನುಮಾನಿಸುತ್ತಿರುವಾಗ ನಾಗಪ್ಪನೇ, “ನಾಳೆಯದಿರಬೇಕು ಅಲ್ಲವೇ ?” ಎಂದು ಕೇಳಿದ. ಆಗ ಪ್ರಭಾಕರ ಬಾಯಿಬಿಟ್ಟು, “ನಾಳೆ ಸಂಜೆಯದಿರಬೇಕು. ಮಿಸ್ ಡಿಸೋಝಾ ಹಾಗಂದಂತೆ ಕೇಳಿಸಿತ್ತು,” ಎಂದ. ಮಿಸ್ ಡಿಸೋಝಾ ಪರ್ಸೊನಲ್ ಮ್ಯಾನೇಜರನ ಸೆಕ್ರೆಟರಿ, ಅವನ ಬಗ್ಗೆ ನಿಷ್ಕಾರಣವಾಗಿ ಅಸಡ್ಡೆ ತೋರುತ್ತ ಬಂದವಳು. ಇಬ್ಬರೂ ಕೆಲಹೊತ್ತು ಏನೂ ಮಾತನಾಡಲಿಲ್ಲ.

ಪ್ರಭಾಕರ್, ಸಾಹೇಬರ ಹಿಂದೆ, ಒಂದು ಮಾರಿನ ಅಂತರ ಇಟ್ಟುಕೊಂಡು ತಲೆ ಬಗ್ಗಿಸಿ ನಡೆಯಹತ್ತಿದ. ಮಾಳಿಗೆಯ ಮೆಟ್ಟಿಲುಗಳನ್ನು ಇಳಿಯುವಾಗ ಮೇರಿಯ ಬಗ್ಗೆ ಕೇಳಬೇಕೆಂದುಕೊಂಡು ನಾಲಗೆಯ ತುದಿಯವರೆಗೆ ಬಂದ ಪ್ರಶ್ನೆಯನ್ನು ನಾಗಪ್ಪ ತಡೆಹಿಡಿದ. ಪ್ರಭಾಕರ ತಾನಾಗಿಯೇ ಏನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಸಾಹೇಬರ ಜೊತೆ ಚಹಾ ಕುಡಿಯುವ ಕಲ್ಪನೆಯಿಂದಲೇ ನಾಲಗೆ ಒಣಗಿತ್ತು. ಸಾಹೇಬರ ಬಗ್ಗೆ ಅಫೀಸು ತುಂಬ ಹರಡಿದ ಸುದ್ದಿಯಿಂದ ; ಅದಕ್ಕಿಂತ ಹೆಚ್ಚಾಗಿ ನಿನ್ನೆ ಮೊನ್ನೆಯವರೆಗೆ ಅವರ ಬಗ್ಗೆ ತುಂಬ ಆದರವಿದೆ ಎಂದು ತೋರಿಸಿಕೊಂಡವರೇ ಈಗ ಒಮ್ಮೆಗೆಲೇ ಅವರ ಮೇಲೆ ಎರಗಿ ಬಂದ ಈ ಪೇಚು ಪ್ರಸಂಗದ ಬಗ್ಗೆ ಮಾತನಾಡುತ್ತ ಬಾಯಿ ಚಪ್ಪರಿಸುವುದನ್ನು ಕಂಡು ಪ್ರಭಾಕರ ರೋಸಿದ್ದ. ‘ಶ್ರೀಕೃಷ್ಣವಿಲಾಸ’ವನ್ನು ಹೊಕ್ಕು ತಾನು ಕೂತ ಟೇಬಲ್ಲಿಗೇ ಪ್ರಭಾಕರನನ್ನು ಕರೆದಾಗ ಅವನ ಸರಳ ಸ್ವಭಾವಕ್ಕೆ ಮನಸೋತ ಪ್ರಭಾಕರ_“ಸರ್, ಏನೂ ಹೆದರಬೇಡಿ. ದೊಡ್ಡ ಸಾಹೇಬರು ಊರಿನಲ್ಲಿದ್ದರೆ ಇದೆಲ್ಲ ಆಗುತ್ತಿರಲೇ‌ಇಲ್ಲ. ಹೈದರಾಬಾದಿನ ಪಾರ್ಸೀ ಸಾಹೇಬರು ಹಾಗೂ ಅವರ ಚೇಲಾ ಖಂಬಾಟಾ ಕೂಡಿ ಏನೋ ಪಿತೂರಿ ಮಾಡಿದ್ದಾರೆ.” ಎಂದ. ನಾಗಪ್ಪನಿಗೆ ಆಶ್ಚರ್ಯವಾಯಿತು. ಮ್ಯಾನೇಜಿಂಗ್ ಡೈರೆಕ್ಟರರು ಊರಲ್ಲಿಲ್ಲದ ಸುದ್ದಿಯನ್ನು ಮೊದಲ ಬಾರಿಗೇ ಕೇಳುತ್ತಿದ್ದ. ತಿನ್ನಲಿಕ್ಕೆ ಏನಾದರೂ ಬೇಕೋ ಎಂದು ಕೇಳಿದಾಗ ಪ್ರಭಾಕರ ಬೇಡ ಎಂದ. ಎರಡು ಕಪ್ಪು ಚಹಕ್ಕೆ ಆರ್ಡರ್ ಕೊಟ್ಟು_ದೊಡ್ಡ ಸಾಹೇಬರು ಎಲ್ಲಿಗೆ ಹೋಗಿದ್ದಾರೆ ಎಂದು ಕೇಳಿದಾಗ ಪ್ರಭಾಕರ ಆಶ್ಚರ್ಯ ವ್ಯಕ್ತಪಡಿಸಿದ. “ಅವರು ಅಮೇರಿಕೆಗೆ ಹೋದದ್ದು ತಮಗೆ ಗೊತ್ತೇ ಇಲ್ಲವೆ ? ಆಕಸ್ಮಾತ್ತಾಗಿ ಹೋಗಬೇಕಾಗಿ ಬಂತಂತೆ. ಈಗ ಮೂರು ದಿನಗಳಾದವು. ನಿಮ್ಮ ವಿರುದ್ಧ ನಡೆದ ಪಿತೂರಿಯ ಸುಳಿವು ಅವರಿಗೂ ಹತ್ತಿದೆ. ಆದರೆ ತುರ್ತು ಯಾವುದರಲ್ಲೂ ಸಿಲುಕಿಕೊಳ್ಳುವ ಮನಸ್ಸಿರಲಿಲ್ಲ ಅವರಿಗೆ. ಆದರೆ ನೀವು ಹೆದರುವ ಕಾರಣ ಏನೂ ಇಲ್ಲವೆಂದು ಸೆಕ್ರೆಟರಿಗೆ ಹೇಳಿ ಹೋಗಿದ್ದಾರಂತೆ.” ಇದೆಲ್ಲ ಇವನಿಗೆ ಹೇಗೆ ಗೊತ್ತು ಎಂಬಂತೆ ಹುಬ್ಬೇರಿಸಿದಾಗ, ಪ್ರಭಾಕರನೇ ಹೇಳಿದ_“ಆಗ ಕೊಟ್ಟ ಕವರಿನಲ್ಲಿ ನಿಮಗೊಂದು ಚೀಟಿಯಿದೆ, ಅದರ ಮೇಲೆ ಅವಳು ಸಹಿ ಮಾಡಿಲ್ಲ. ಯಾರಿಗೂ ಸಂಶಯ ಬರದಿರಲಿ ಎಂಬ ಉದ್ದೇಶದಿಂದ. ಆದರೆ ನನಗಷ್ಟೇ ಗೊತ್ತು. ನಾನೇ ಈ ಟಿಕೆಟ್ಟನ್ನು ಇಲ್ಲಿಗೆ ತರುವಂತೆ ಮಾಡಿದ ಖುಬಿ ಅವಳದೇ” ಎನ್ನುವಾಗ ಮೇರಿ ನಾಗಪ್ಪನ ಬಗ್ಗೆ ವ್ಯಕ್ತಪಡಿಸಿದ ಭಾವನೆಗಳಿಂದ ಪ್ರಭಾಕರ ತಾನೇ ಲಜ್ಜಿತನಾದ.

ನಾಗಪ್ಪನಿಗೆ ಕೂಡಲೇ ಮೇಲೆ ಹೋಗಿ ಮೇರಿ ಬರೆದ ಚೀಟಿ ಓದುವ ಕುತೂಹಲವಾಯಿತು. ಆಫೀಸಿನಲ್ಲಿ ಸದ್ಯ ಏನೇನು ನಡೆದಿದೆ ಎನ್ನುವುದನ್ನು ಅರಿಯುವ ಉದ್ದೇಶದಿಂದಲೇ ಪ್ರಭಾಕರನನ್ನು ಚಹಕ್ಕೆ ಕರೆದದ್ದು ಎಂಬುದನ್ನು ಕೂಡ ಮರೆತು ಚಹ ಕುಡಿದು ಮುಗಿಸುತ್ತಲೇ ಚಹದ ಹಣ ಕೊಟ್ಟು, ಟಿಕೆಟ್ಟು ತಂದು ಮುಟ್ಟಿಸಿದ್ದರ ಬಗ್ಗೆ ಆಭಾರ ಮನ್ನಿಸಿ, ಪ್ರಭಾಕರನನ್ನು ಬೀಳ್ಕೊಟ್ಟು ಲಗುಬಗೆಯಿಂದ ಕೋಣೆ ಸೇರಿ ಪ್ರಭಾಕರ ತಂದ ಲಕ್ಕೋಟೆಯ ಬಾಯಿ ತೆರೆದ. ಟಿಕೆಟ್ಟಿನೊಂದಿಗೆ ಇಟ್ಟಿದ್ದಾಳೆಂದ ಚೀಟಿಯನ್ನು ಹೊರತೆಗೆಯುವ ತವಕದಿಂದ ಟಿಕೆಟ್ಟನ್ನು ಹೊರತೆಗೆದ. ಅದರ ಜೊತೆ ಇಟ್ಟ ಸಣ್ಣ ಲಕ್ಕೋಟೆಯನ್ನು ಅತ್ಯಂತ ಪ್ರೀತಿಯಿಂದ ಕೈಗೆತ್ತಿಕೊಂಡು ಕಾಳಜಿಪೂರ್ವಕ ಅದನ್ನೂ ತೆರೆದ. ಕೈಗೆ ಬಂದ ಸಣ್ಣ ಚೀಟಿ ಬೆಳಿಗ್ಗೆ ಹಾಗೂ ಮಧ್ಯಾಹ್ನ ಸಿಕ್ಕ ಸಹಿ ಇಲ್ಲದ ಚೀಟಿಗಳದೇ ಇನ್ನೊಂದು ಪ್ರತಿಯಾಗಿತ್ತು ! ಆದರೆ ಈ ಚೀಟಿಯ ಕೊನೆಯಲ್ಲಿ ಟove- ಎಂಬುದನ್ನಷ್ಟೇ ಇಂಕ್‌ನಲ್ಲಿ ಬರೆದಿತ್ತು. ನಾಗಪ್ಪನಿಗೆ ಈ ಮೊದಲಿನ_ಎದೆಯನ್ನು ಡವಗುಟ್ಟಿಸುವ_ಕುತೂಹಲಕ್ಕೆ ಕಾರಣವಾದುದಕ್ಕೆ ವಿಪರ್ಯಸ್ತವಾದ ವಸ್ತುಸ್ಥಿತಿಯನ್ನು ನೋಡಿ ದೊಡ್ಡಕ್ಕೆ ನಕ್ಕುಬಿಡಬೇಕೆನ್ನಿಸಿತು. ಆರಾಮಕುರ್ಚಿಯಲ್ಲಿ ಕೂತು ಮುಂದಿನ ಸ್ಟೂಲಿನ ಮೇಲೆ ನಿಡಿದಾಗಿ ಕಾಲು ಚಾಚಿ ಮೂರೇ ಸಾಲುಗಳಿದ್ದ ಆ ಚೀಟಿಯನ್ನು ಇನ್ನೊಮ್ಮೆ ಓದಿ ಮೇರಿಯ ಬಗ್ಗೆ ಹಿಂದೆ ಎಂದೂ ಅನ್ನಿಸಿರದಷ್ಟು ಪ್ರೀತಿಯಿಂದ ಮಶಿಯಲ್ಲಿ ಬರೆದ ಅಕ್ಷರಗಳಿಗೆ ತುಟಿ ಹಚ್ಚಿದ. ತನಗೆ ಗೊತ್ತಾಗುವ ಮೊದಲೇ ಕಣ್ಣುಗಳು ಒದ್ದೆಯಾಗಿದ್ದವು. ತನ್ನವರೇ ಎನ್ನುವ ಆತ್ಮೀಯ ಜನವೇ ತನಗಿಲ್ಲ ಎಂಬಂಥ ನಿಲುಗಡೆಗೆ ಬಂದು ತಲುಪಿದ ಹೊತ್ತಿಗೇ ಮೇರಿ ತನ್ನ ಬಗ್ಗೆ ತೋರಿದ ಭಾವನೆಯಿಂದ ಮತ್ತೆ, ಬದುಕು ಬದುಕಲರ್ಹವೆನ್ನಿಸಹತ್ತಿತ್ತು. ನೇತ್ರಾವತಿಯ ದುರ್ಮರಣದ ನೆನಕೆಯ ನೆಪದಲ್ಲಿ ಮನಸ್ಸು ಇನ್ನಾವುದಕ್ಕೋ ಸಿದ್ಧವಾಗುತ್ತಿರುವ ಗಳಿಗೆಯಲ್ಲಿ ಬಂದು ಈ ಚೀಟಿ ತನ್ನ ಹೇಡಿತನದ ಬಗ್ಗೆ ತಾನೇ ಜಿಗುಪ್ಸೆ ಪಡುವಂತೆ ಮಾಡಿತು. ಇಲ್ಲ, ಬದುಕಿಗೆ ವಿಮುಖನಾಗಲಾರೆ. ಹೋರಾಟ ಬೇಡುವ ಸನ್ನಿವೇಶದಿಂದ ಪಲಾಯನ ಹೇಳಲಾರೆ….ಟಿಕೆಟ್ಟಿನ ಮೇಲಿನ ತಾರೀಖನ್ನೇ ನೋಡಿಲ್ಲ ಎನ್ನುವದು ನೆನಪಿಗೆ ಬಂದು ಎದ್ದು ಟಿಕೆಟ್ಟನ್ನು ತೆರೆದು ನೋಡಿದ. ಪ್ರಭಾಕರ ಹೇಳಿದಂತೆ ನಾಳೆ ಸಂಜೆಯದಾಗಿತ್ತು. ಇಂದು ರಾತ್ರಿ, ನಾಳೆ ಇಡೀ ದಿನ ಕೂತು ಬೆಂಕಿಯ ಅಪಘಾತವನ್ನು ಕುರಿತು ಬರೆಯಬೇಕು. ಇದೂ ಕೂಡ ಫಿರೋಜನೊಡನೆಯ ಮುಖಾಮುಖಿಯಲ್ಲಿ ಸಹಾಯ ಮಾಡೀತು, ಎಂದುಕೊಂಡ_ನೂರಾ ಒಂದನೇ ಸರತಿ.
uಟಿಜeಜಿiಟಿeಜ
– ಅಧ್ಯಾಯ ಹದಿನೆಂಟು –

ಕೊನೆಗೊಮ್ಮೆ, ಬೆಳಗ್ಗಿನಿಂದಲೂ ಕಾಯುತ್ತಿದ್ದ ಎಂಟು ಗಂಟೆಯ ಮುಹೂರ್ತ ಹತ್ತಿರವಾಗುತ್ತಿದ್ದ ಹಾಗೆ ಮನಸ್ಸು ತಿರುಗಿ ಕಳವಳಕ್ಕೆ ಒಳಗಾಯಿತು. ಕೆಳಗಿನ ರೆಸ್ಟೋರಂಟಿನಿಂದಲೇ ಫೋನ್ ಮಾಡಿದರಾಯಿತು ಎಂದುಕೊಂಡು ಹೊರಗೆ ಹೋಗುವ ಸಿದ್ಧತೆಗೆ ತೊಡಗಿದಾಗ ಮನಸ್ಸು ಸಲ್ಲದ ಸಂಶಯಕ್ಕೆ ಎಡೆಮಾಡಹತ್ತಿತು : ಮೇರಿಯನ್ನಾದರೂ ನಂಬಬಹುದಲ್ಲವೇ ? ದೇವರೇ . ಇದೇಕೆ ಹೀಗೆ ಮನುಷ್ಯನಲ್ಲಿಯ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದೇನೆ. ಮೇರಿ ನನ್ನ ಬಗ್ಗೆ ಪ್ರಕಟಿಸಿದ ಆತಂಕವನ್ನು ಕೂಡ ಅಪನಂಬಿಕೆಯಿಂದ ನೋಡುತ್ತಿದ್ದೇನಲ್ಲ…

ರೆಸ್ಟೋರಂಟಿಗೆ ಬಂದಾಗ ಅವನಿಗಿಂತ ಮೊದಲೇ ಬಂದ ಹುಡುಗಿಯೊಬ್ಬಳು ಮಾತನಾಡುತ್ತಿದ್ದಳು. ಸಿಂಧಿಯಿರಬೇಕು. ತುಂಬಾಲಾವಣ್ಯವತಿಯಾದ ಹುಡುಗಿ. ಅವಳು ಉಟ್ಟ ಅಚ್ಚ ನೀಲಿ ಬಣ್ಣದ ಜಾರ್ಜೆಟ್ ಸೀರೆ ಲಕ್ಷ್ಯಕ್ಕೆ ಬರದಿರಲಿಲ್ಲ. ಅದರೊಳಗಿಂದ ಕಾಣುವ ಹರೆಯ ಹೊರಸೂಸುವ ಬೆಳ್ಳಗಿನ ಮೈಯ ಮಾಟ. ಮೇರಿಯ ಮೈಕಟ್ಟೂ ಕೂಡ ತುಂಬ ಮಾದಕವಾದದ್ದು. ಗಂಡುಮೋರೆಗೆ ಶೋಭಿಸುವಂತಹ ಹರವಾದ ಮೂಗೊಂದೇ ಮೋರೆಯ ಅಂದವನ್ನು ತುಸು ಕೆಡಿಸಿತ್ತು. ಮೇರಿಯ ದೈಹಿಕ ಸೌಂದರ್ಯದ ಬಗ್ಗೆ ತಾನು ಹೀಗೆ ವಿಚಾರ ಮಾಡುತ್ತಿದ್ದದ್ದು ಇದೇ ಮೊದಲ ಸಾರಿಯೇನೋ ಎಂಬ ಅರಿವು ಮೂಡುತ್ತಿರುವ ಹೊತ್ತಿಗೆ ಹುಡುಗಿ ತನ್ನ ಮಾತನ್ನು ಮುಗಿಸಿದ್ದಳು. ಟೆಲಿಫೋನ್ ಬಿಟ್ಟುಕೊಡುವಾಗ_soಡಿಡಿಥಿ ಣo hಚಿve ಞeಠಿಣ ಥಿou ತಿಚಿiಣiಟಿg so ಟoಟಿg. ಎಂದು ಚಂದವಾಗಿ ನಕ್ಕು ಅಲ್ಲಿಂದ ಹೊರಬಿದ್ದಳು. ಟೆಲಿಫೋನ್ ಯಂತ್ರದ ತೂತಿನಲ್ಲಿ ಹಾಕಬೇಕಾದ ನಾಣ್ಯಗಳನ್ನು ಕೈಯಲ್ಲಿ ಸಿದ್ಧವಾಗಿ ಇರಿಸಿಕೊಂಡು, ಮೇರಿ ಕೊಟ್ಟ ನಂಬರನ್ನು ತಿರುಗಿಸುವಾಗ ಎದೆ ಡವಗುಟ್ಟುತ್ತಿತ್ತು. ಆ ಬದಿಯಿಂದ ‘ಹಲ್ಲೋ’ ಎಂದ ಹೆಣ್ಣುದನಿ ಕೇಳಿಸುತ್ತಲೇ ನಾಣ್ಯಗಳನ್ನು ಹಾಕಿ ನಡುಗುವ ಗೊಗ್ಗರುದನಿಯಲ್ಲಿ, ‘ಹಲ್ಲೋ ಮೇರಿ.’ ಎಂದ. ಆ ಬದಿಯಿಂದ ಹೆಲ್ಲೋ ಎಂದ ದನಿ ಮೇರಿಯದೇ ಎಂಬುದನ್ನು ಗ್ರಹೀತ ಹಿಡಿದೇ, ನಾಗಪ್ಪನ ಆಗಿನ ದನಿಯನ್ನು ಮೇರಿ ಕೇಳಿದ್ದೇ ಆಗಿದ್ದರೆ ಅವಳಿಗೆ ಈ ದನಿಯ ಗುರುತು ಸಿಗುತ್ತಿರಲಿಲ್ಲವೇನೋ. ಪುಣ್ಯಕ್ಕೆ ಫೋನ ಕರೆಗೆ ಉತ್ತರ ಕೊಟ್ಟವಳು ಮೇರಿಯ ಗೆಳತಿಯಾಗಿದ್ದಳು. ಮೇರಿ ಫೋನಿನ ಮೇಲೆ ಬರುತ್ತಲೇ, ಫೋನ್ ಮೇಲೆ ಕೇಳಿಸಿದ್ದು ಗಂಡುದನಿಯೆಂದು ತಿಳಿದೇ, “Is ಣhಚಿಣ ಓಚಿgಟಿಚಿಣh ?” ಎಂದು ಕೇಳಿದಳು. ನಾಗನಾಥ್ ಹೌದು ಎನ್ನುವಾಗ ದನಿಯಲ್ಲಿನ್ನೂ ಕಂಪನವಿತ್ತು. “ನಾಗನಾಥ್, ಒ‌ಆ ಯವರು ಅಮೇರಿಕೆಗೆ ಹೋಗುವಾಗ ತಾನು ಹಿಂತಿರುಗಿ ಬರುವ ತನಕ ಬಂದೂಕವಾಲಾರ ಮಾತಿಗೆ ಕೆರಳದೇ ನೀವು ಸ್ವಲ್ಪ ಸಮಾಧಾನದಿಂದ ನಡೆದುಕೊಳ್ಳಬೇಕು ಎಂದು ನಿಮಗೆ ತಿಳಿಸುವಂತೆ ಹೇಳಿ ಹೋಗಿದ್ದರು. ಎಲ್ಲ ಸರಿಹೋಗುತ್ತದೆ. ನಿಮ್ಮ ಮನಸ್ಸಿಗೆ ಆಗುತ್ತಿದ್ದ ನೋವಿನ ಕಲ್ಪನೆ ನನಗೆ ಸಂಪೂರ್ಣವಾಗಿ ಇದೆ. ಆದರೆ ಎದೆಗುಂದಬೇಡಿ.”ನಾಗಪ್ಪನಿಗೆ ಈ ಆತ್ಮೀಯ ಮಾತುಗಳಿಂದ ಎಷ್ಟೊಂದು ಹೃದಯ ತುಂಬಿತೆಂದರೆ ತನ್ನ ಬಾಯಿಂದ ಹಿಂದೆಂದೂ ಬಂದಿರದ ಶಬ್ದಗಳಲ್ಲಿ_“ ಖಿhಚಿಟಿಞ ಥಿou ಜಚಿಡಿಟiಟಿg.” ಎಂದು ಮೂಡಿದ ಉದ್ಗಾರಕ್ಕೆ ತಾನೇ ಮೊದಲು ಥಕ್ಕಾದ. ಮೇರಿ ಕೂಡ ಕೆಲ ಹೊತ್ತು ತನ್ನ ಕಿವಿಗಳನ್ನು ನಂಬದಾದಳು. ನಾಗಪ್ಪನ ಸದ್ಯದ ಮನಃಸ್ಥಿತಿಯ ಅರಿವು ಇದ್ದ ಅವಳೂ ಕೂಡ ಅದೇ ಆತ್ಮೀಯತೆಯಿಂದ, ಆದರೂ ಭಾವಪರವಶಳಾಗದೆ, “ಐisಣeಟಿ mಥಿ ಜeಚಿಡಿ ಜಿಡಿieಟಿಜ, ಒ‌ಆ ಇಲ್ಲಿಂದ ಹೊರಟುಹೋದ ಮೇಲೆ ಮಾತ್ರ ಪರಿಸ್ಥಿತಿ ಒಮ್ಮೆಲೇ ಬದಲಿಬಿಟ್ಟಿದೆ. ನನ್ನನ್ನು ಕೇಳಿದರೆ, ಒ‌ಆ ಅವರು ಅಮೇರಿಕಾಕ್ಕೆ ಹೋದದ್ದು ನಮಗೆ ತೋರಿದಷ್ಟು ಆಕಸ್ಮಿಕವಾದದ್ದಲ್ಲ ಅನ್ನಿಸುತ್ತದೆ. ಅದರ ಬಗ್ಗೆ ನಡೆದ ಪೂರ್ವ ತಯಾರಿ ಆ‌ಒ‌ಆ ಯವರಿಗೆ ಗೊತ್ತಿರಬೇಕು. ಇಲ್ಲಿ ಹಬ್ಬಿದ ಸುದ್ದಿ ಏನೆಂದರೆ ಒ‌ಆ ಯವರಿಗೆ ದೊಡ್ಡ ಬಡತಿಯ ಮೇಲೆ ನ್ಯೂಯಾರ್ಕ್ ಇಲ್ಲ ಹೊಂಕೊಂಗಿಗೆ ಬದಲಿಯಾಗಲಿದೆಯಂತೆ. ಅದಕ್ಕೆಂದೇ ಅವರನ್ನು ಹೀಗೆ ಗುಟ್ಟಾಗಿ ನ್ಯೂಯಾರ್ಕಿಗೆ ಕರೆದದ್ದು. ಬಂದೂಕವಾಲಾ ಅವರೇ ಮುಂಬಯಿಗೆ ಒ‌ಆ ಆಗಿ ಬರಬಹುದಿತ್ತು. ಆದರೆ ಎಂತಹುದೋ ದೊಡ್ಡ ಲಫಡಾದಲ್ಲಿ‌ಅವರ ಹೆಸರು ಸಿಕ್ಕಿಕೊಂಡಿದೆಯಂತೆ. ಅದಕ್ಕೇ, ಬೇರೆ ಯಾರನ್ನಾದರೂ sಛಿಚಿಠಿegosಣ ಮಾಡುವ ಹಂಚಿಕೆಯೆಂದು ತೋರುತ್ತದೆ. ಹಾಗೆಂದೇ ನಿಮ್ಮನ್ನು ಕುರಿತ ಈ ತನಿಖೆಯ ನಾಟಕ. ಅಸಿಸ್ಟೆಂಟ್ ಎಡ್ಮಿನಿಸ್ಟ್ರೇಶನ್ ಮ್ಯಾನೇಜರರೇ ಇದನ್ನು ನಿಮಗೆ ತಿಳಿಸೆಂದು ನನಗೆ ಸೂಚಿಸಿದ್ದು. ಒಳ್ಳೆಯ ಹುಡುಗ, ಗೊತ್ತಿದೆಯಲ್ಲ_ಖಂಬಾಟಾಗೂ ಅವನಿಗೂ ಹಾವು ಮುಂಗುಸಿ. ಯಾರು ಯಾರೆಲ್ಲ ಈ ಪಿತೂರಿಯಲ್ಲಿ ಸಾಮೀಲಾಗಿದ್ದಾರೆ. ಯಾರಿಗೂ ಗೊತ್ತಿಲ್ಲ. ಲಕ್ಷಗಟ್ಟಲೆ ರೂಪಾಯಿಗಳ ವ್ಯವಹಾರದಲ್ಲಿ ಏನೋ ಗೋಲ್‌ಮಾಲ್ ಆಗಿದೆಯಂತೆ. ಬಂದೂಕವಾಲಾ ಹಿಡಿದೆ‌ಉ ಅವರ ಅನೇಕ ಚೇಲಾರ ಕೈ ಇದರಲ್ಲಿದ್ದರೂ ಅದನ್ನು ಹೊರಗೆಳೆಯುವ ಧೈರ್ಯ ಒಬ್ಬರಿಗೂ ಇಲ್ಲ. ಎಲ್ಲರೂ ತಮ್ಮ ತಮ್ಮ ಚರ್ಮವನ್ನು ರಕ್ಷಿಸಿಕೊಳ್ಳುವವರೇ. ನಿಮ್ಮ ಬಗ್ಗೆ ಅನೇಕರಿಗೆ ಒಲ್ಲೇ ಮತವಿದ್ದರೂ ಒಬ್ಬರೂ ಧೈರ್ಯವಾಗಿ ನಿಮ್ಮ ರಕ್ಷಣೆಗೆ ಬರಲಾರರು. ಸ್ವತಃ, ಅಸಿಸ್ಟೆಂಟ್ ಎಡ್ಮಿನಿಸ್ಟ್ರೇಶನ್ ಮ್ಯಾನೇಜರ್ ಕೂಡ. ಇಷ್ಟೇ ಅಲ್ಲ, ಸನ್ನಿವೇಶದ ದುರ್ಲಾಭ ಪಡೆಯಲು ಹಾತೊರೆದವರೇ ಹೆಚ್ಚುಮಂದಿ. ಖುದ್ದು ನಿಮ್ಮ ಡಿಪಾರ್ಟ್‌ಮೆಂಟಿನವರ ನಡತೆಯೂ ಹೇಸಿಗೆ ತರಿಸುವಂತಹದು.” ನಾಗಪ್ಪನ ಬಾಯಿಂದ ನೋವು ತುಂಬಿದ ವಿಚಿತ್ರ ಸದ್ದು ಹೊರಬಿದ್ದದ್ದು ಕೇಳಿಸಿ “ಂಡಿe ಥಿou ಚಿಟಟ ಡಿighಣ, sತಿeeಣheಚಿಡಿಣ ? ಖಿಚಿಞe iಣ eಚಿsಥಿ. ನಿಮ್ಮನ್ನು ಸ್ವತಃ ಕಂಡು ಮಾತನಾಡಿಸುವದಿತ್ತು. ನಿಜ ಒಪ್ಪಿಕೊಳ್ಳುವುದೆಂದರೆ ನನಗೂ ಆ ಧೈರ್ಯವಿಲ್ಲ. ಬಂದೂಕವಾಲಾ ಎಂತಹ ಮನುಷ್ಯ ಎನ್ನುವದು ನಮಗೆಲ್ಲ ಗೊತ್ತೇ ಇದೆ. ಸ್ವಲ್ಪ ಸಂಶಯ ಬಂದರೂ ಹಗೆ ಕಾಯುವ ಪ್ರಾಣಿ. ಎಂತಹ ಲಫಡಾ ಪ್ರಕರಣವೋ ಯಾರಿಗೆ ಗೊತ್ತು. ಒ‌ಆ ಇಲ್ಲದ ಸಮಯವನ್ನು ಸಾಧಿಸಿ ಕಿತಾಪತಿ ನಡೆಸಿದ್ದಾನೆ. ನೀವು ಆದಷ್ಟು ಜಾಗರೂಕರಾಗಿರುವುದು ಒಳ್ಳೆಯದು. ಈ ತನಿಖೆ ಅಷ್ಟು ಸರಳವಾದದ್ದೆಂದು….”ಮೇರಿ ಒಮ್ಮೆಗೇ ತಡೆದಳು. ಬಾಗಿಲ ಗಂಟೆ ಬಾರಿಸಿದ್ದು ಫೋನ್ ಮೇಲೆ ನಾಗಪ್ಪನಿಗೂ ಕೇಳಿಸಿತು. ಊoಟಜ oಟಿ ಎಂದು ಅತಿ ಮೆಲ್ಲಕ್ಕೆ ಅಂದದ್ದೂ ಕೇಳಿಸಿತು. ಮೇರಿಯ ಗೆಳತಿ ಎದ್ದು ಹೋಗಿ ಕದ ತೆರೆದಿರಬೇಕು. ಬಂದದ್ದು ಯಾರೆಂದು ತಿಳಿಯದೇ ಮೇರಿಗೆ ಮುಂದೆ ಮಾತನಾಡುವ ಮನಸ್ಸಿರಲಿಲ್ಲವೆಂದು ತೋರುತ್ತದೆ….ಟೆಲಿಫೋನ್ ರಿಸೀವರ್ ಕೈಯಲ್ಲಿ ಹಿಡಿದೇ ಬಂದ ವ್ಯಕ್ತಿಗೆ_“ಔh ! iಣ is ಥಿou_gooಜ eveಟಿiಟಿg, ಒಡಿ, ಏhಚಿmbಚಿಚಿಣಣಚಿ. Whಚಿಣ ಚಿ ಠಿಟeಚಿsಚಿಟಿಣ suಡಿಠಿಡಿise” _ಎಂದು ನಾಗಪ್ಪನಿಗೆ ಸರಿಯಾಗಿ ಕೇಳಿಸುವಂತೆ ಅಂದು, ಇನ್ನೊಂದು ಕೊನೆಯಲ್ಲಿದ್ದವರು ಯಾರು ಎಂಬುದು ಖಂಬಾಟಾಗೆ ಗೊತ್ತಾಗದಿರಲಿ ಎನ್ನುವಂತೆ_“ಭ್ಯೆ ಆನ್ನೆತ್ತೆ. ಠನ್ಕ್ಸ್ ಫ಼ೊರ್ ಚಲ್ಲಿನ್ಗ್. ಆಲ್ಲ್ ಥೆ ಬೆಸ್ತ್,” ಎಂದವಳೇ ಟೆಲಿಫೋನ್ ಕೆಳಗಿರಿಸಿಬಿಟ್ಟಳು.

ಟೆಲಿಫೋನ್ ಬಿಟ್ಟು ದೂರ ಸರಿಯುವಾಗ ನಾಗಪ್ಪ ಧಾರಾಳವಾಗಿ ಬೆವೆತಿದ್ದನಾದರೂ ಒಳಗಿನ ಭಯವನ್ನು ಅರಿವಿಗೆ ತಂದುಕೊಳ್ಳುವ ಧೈರ್ಯ ಕೂಡಲೇ ಆಗಲಿಲ್ಲ. ಹೊಟೆಲ್ಲಿನಿಂದ ಹೊರಗೆ ಬಂದಾಗ ಕಾಲುಗಳು ಸೋತು, ನಡೆಯುವುದೇ ಅಸಾಧ್ಯವಾದಾಗ ಎಲ್ಲಾದರೂ ಕೂಡ್ರಬೇಕು ಅನ್ನಿಸಿ ರಸ್ತೆಯ ಇನ್ನೊಂದು ಮಗ್ಗುಲಲ್ಲಿಯೇ ಇರಾಣೀ ಚಹದಂಗಡಿಯನ್ನು ಹೊಕ್ಕು ಸ್ಪೆಶಲ್ ಚಹ ತರಿಸಿದ. ತನ್ನನ್ನು ಎನ್ನೆಟ್ ಎಂದು ಕರೆದ ಮೇರಿಯ ಜಾಣತನದ ನೆನಪಾಗಿ ನಗಬೇಕೆನಿಸಿದರೂ ಖಂಬಾಟಾ ಈ ಹೊತ್ತಿಗೆ ಮೇರಿಯ ಮನೆಯಲ್ಲಿ ಹೇಗೆ ಎಂಬ ಆತಂಕ ನಗಲು ಬಿಡಲಿಲ್ಲ. ಮೇರಿ ಎಲ್ಲಿರುತ್ತಾಳೆಂದು ಅರಿಯುವ ಪ್ರಯತ್ನ ಕೂಡ ತಾನು ಈವರೆಗೂ ಮಾಡಿಲ್ಲ. ಮೇರಿಯ ಬಗ್ಗೆ ವಿಚಾರ ಮಾಡುತ್ತ ತನ್ನನ್ನು ನಡುಗಿಸುತ್ತಿದ್ದುದನ್ನು ಮರೆಯುವ ಪ್ರಯತ್ನದಲ್ಲಿ ನಾಗಪ್ಪ ಸಫಲನಾಗಲಿಲ್ಲ : ತನ್ನ ಹೆಸರು ಸಿಕ್ಕಿಕೊಂಡ ಲಫಡಾದಲ್ಲಿ ನನ್ನನ್ನು ಸಿಕ್ಕಿಸುವ ಸಂಚು, ದೇವರೆ, ಎಲ್ಲರನ್ನು ಬಿಟ್ಟು ನನ್ನನ್ನು ಯಾಕೆ ?_ಲಫಡಾ ಎಂದರೇನೆ ಹೆದರುವ ನನ್ನನ್ನು ? ಇವನ ಒ‌ಆ ಆಗುವ ಮಹತ್ವಾಕಾಂಕ್ಷೆಗೆ ಅಡ್ಡ ಬರುವಂತಹ ಇದಿರಾಳಿ ನಾನಲ್ಲ. ಈ ನನ್ನ ನೌಕರಿಯಿಂದ ನಾನು ಬಹಳಷ್ಟನ್ನು ಬಯಸಿದವನಲ್ಲ. ಬಯಸಿದ್ದಾದರೂ ಏನೆನ್ನುವದು ನನಗೇ ಗೊತ್ತಿಲ್ಲವಾದರೂ ಈಗಿನದಕ್ಕಿಂತ ಮೇಲೆನ ಸ್ಥಾನಕ್ಕೆ ಏರಬೇಕೆನ್ನುವ ಹಂಬಲವಂತೂ ನನಗಿಲ್ಲ….‘ಇದು ತೀರ ಸಾದಾ ತನಿಖೆಯೆಂದು ತಿಳಿಯಬೇಡ. ಆದಷ್ಟು ಜಾಗರೂಕನಾಗಿರು’ ಎಂದು ಮೇರಿ ಇತ್ತ ಇಷಾರೆ ಇರಾಣೀ ಅಂಗಡಿಯ ಖಡಕ್ ಚಹಾದ ಬಿಸಿಯನ್ನೂ ಲೆಕ್ಕಿಸದೇ ಕರುಳಲ್ಲೇ ಚಳಿ ಹುಟ್ಟಿಸಿತು : ಇಂತಹದನ್ನೆಲ್ಲ ಗ್ರಹಿಸುವ ತಾಖತ್ತು ತನ್ನ ತೀರ ಸರಳವಾದ ಮನಸ್ಸಿಗೆ ಇಲ್ಲವೇ ಇಲ್ಲ.

ಊಟ ಮಾಡುವ ಮನಸ್ಸು ಆಗದೇ ಇರಾಣೀ ಅಂಗಡಿಯಿಂದ ಹೊಬಿದ್ದವನೇ ನಾಗಪ್ಪ ಖೇತವಾಡಿಯ ಗಲ್ಲಿಯೊಂದನ್ನು ಹಿಡಿದು ದಿಕ್ಕುದಿವಾಣ ಅರಿಯದೇ ಅಲೆಯಹತ್ತಿದ. ಆಗಲೇ ರಾತ್ರಿಯ ೮-೩೦ ಮೀರಿದ್ದರಿಂದ ಇಬ್ಬದಿಯ ಅಂಗಡಿಗಳೆಲ್ಲ ಮುಚ್ಚಿಕೊಳ್ಳತೊಡಗಿದ್ದವು. ಇಡೀ ಖೇತವಾಡಿಗೆ ಮೆತ್ತಿಕೊಂಡಂಥ ವರ್ಣಿಸಲಸಾಧ್ಯವಾದ ಗಬ್ಬುವಾಸನೆ. ಮ್ಯುನಿಸಿಪಾಲಿಟಿಯ ಕುರುಡು ದೀಪಗಳ ಬೆಳಕಿನಲ್ಲಿ ಕಣ್ಣಿಗೆ ಬೀಳದಿದ್ದರೂ ಕಾಲಡಿಗೆ ಇದೆ ಎಂದು ಎಚ್ಚರಿಸುವ ಹೊಲಸು ರಾಡಿ, ಹೆಂಗಸರ ಮಕ್ಕಳ ಗಜಬಜಾಟ ಕೇಳಿಸುತ್ತಿದ್ದ ಇಬ್ಬದಿಯ ಚಾಳುಗಳು : ತನ್ನ ಮನಸ್ಸಿನ ಯಾತನೆಯನ್ನು ಮರೆಯಲೆಂದೇ ಇವಲ್ಲವುಗಳ ಕಡೆ ಲಕ್ಷ್ಯ ಹರಿಯಿಸಲು ಎಷ್ಟೊಂದು ಪ್ರಯತ್ನಿಸಿದರೂ ಫಿರೋಜನ ಪಿತೂರಿಯಲ್ಲಿ ಅವೂ ಸಾಮೀಲಾಗಿವೆ ಎಂಬ ಭಾವನೆಯಿಂದ ಅವುಗಳ ಬಗ್ಗೆ ಬೇಸರಪಟ್ಟ. ಗಲ್ಲಿಯ ಕೊನೆಗೆ ಬರುತ್ತಿದ್ದಂತೆ ಹೊಳೆಯಿತು : ತುಸು ಮುಂದಕ್ಕೆ ಹೋಗಿ ಬಲಕ್ಕೆ ಹೊರಳಿದರೆ ತಾನು ‘ಗ್ರೆಂಟ್ ರೋಡ್ ಕೊರ್ನರ್’ಗೆ ಬರುತ್ತೇನೆ ಎನ್ನುವುದು. ಅಲ್ಲೇ ‘ಬಾನಾವಳೀ ಮೆಡಿಕಲ್ ಸ್ಟೋರ್ಸ್.’ ಅದರ ಮಾಲೀಕ ತನ್ನ ಪರಿಚಯದವ. ಡಾಕ್ಟರರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೂಡ ಔಷಧ ಕೊಡಬಹುದೇನೋ, ನೇರವಾಗಿ ಅಂಗಡಿಗೆ ಬಂದವನೇ ಕೌಂಟರಿನ ಮೇಲಿನ ಕಾಗದದ ತುಂಡಿನ ಮೇಲೆ ತನಗೆ ಬೇಕಾದ ಔಷಧದ ಹೆಸರನ್ನು ಬರೆದು ಬಾನಾವಳಿಯ ಕೈಯಲ್ಲಿಡುತ್ತ_“Iಣ is veಡಿಥಿ ಟಚಿಣe ಣo go ಣo ಣhe ಆoಛಿಣoಡಿ. ಠಿಟeಚಿse obಟige,” ಎಂದ. “ಬಹಳ ದಿನಗಳಾದವು ನಿಮ್ಮನ್ನು ನೋಡದೇ ! ಮೈಯಲ್ಲಿ ಹುಷಾರಿಲ್ಲವೆ ? ತುಂಬಾ ಇಳಿದು ಹೋಗಿದ್ದೀರಿ.” ಎನ್ನುತ್ತ ಚೀಟಿ ತೆರೆದು ಓದಿ ಹುಬ್ಬೇರಿಸಿದ. ಮರುಕ್ಷಣ ಏನೋ ಅರ್ಥವಾದವನ ಹಾಗೆ ಒಳಗೆ ಹೋಗಿ ನಾಗಪ್ಪ ಬೇಡಿದ ಔಷಧದ ಬಾಟಲಿಯೊಂದನ್ನು ಕಾಗದದಲ್ಲಿ ಹೊಂದಿಸಿ ಅವನ ಕೈಯಲ್ಲಿಡುತ್ತ_“ಖಿಚಿಞe iಣ eಚಿsಥಿ. ಮೊನ್ನೆ ಶ್ರೀನಿವಾಸರಾವ್ ಬಂದಾಗ ಹೇಳಿದರು. ಒಥಿ sಥಿmಠಿಚಿಣhies. ಇದನ್ನು ಕೇಳಿ ನಾಗಪ್ಪ ಎಷ್ಟೊಂದು ಗೊಂದಲಕ್ಕೊಳಗಾದನೆಂದರೆ ಹಣ ಕೊಡುವ ಮೊದಲೇ ಅಲ್ಲಿಂದ ಓಡುವವನು : ಐನ್‌ಹೊತ್ತಿಗೆ ಬಾನಾವಳಿ, “ಆದರ ಕಿಮ್ಮತ್ತು ಹತ್ತು ರೂಪಾಯಿ. ಬಿಲ್ ಕೊಡಲು ಸಾಧ್ಯವಿಲ್ಲ.” ಎಂದಾಗ ಹಣ ಕೊಟ್ಟು ಹೊರಗೆ ಬಿದ್ದ ನಾಗಪ್ಪನ ತಲೆಯಲ್ಲಿ ಒಂದೇ ಭಯದ ವಿಚಾರ ; ಇಡೀ ಬಾಟಲಿಯನ್ನು ಒಂದೇ ಪೆಟ್ಟಿಗೆ ಖಾಲಿ ಮಾಡುವ ಚಲ ಹುಟ್ಟದಿರಲಿ ದೇವರೇ….

ಕೈಯಲ್ಲಿ ಹಿಡಿದದ್ದು ಬಾರ್ಬಿಚ್ಯುರೇಟ್ ನಿದ್ದೆಗುಳಿಗೆಗಳ ಬಾಟಲಿಯಾಗಿತ್ತು. ಯಾವುದೇ ರೀತಿಯಿಂದ ಅಡ್ಡಿಮಾಡದೇ, ಕೇಳಿದ ಬಾಟಲಿಯನ್ನು ತನ್ನ ಕೈಯಲ್ಲಿಡುತ್ತ,ಖಿಚಿಞಚಿ iಣ eಚಿsಥಿ ; ಶ್ರೀನಿವಾಸರಾವ್ ಎಲ್ಲ ಹೇಳಿದ್ದಾರೆ ಎನ್ನುವಾಗ ಬಾನಾವಳಿಗೆ ತನ್ನ ಬಗ್ಗೆ ಇರುವ ಭಾವನೆಯಲ್ಲಿ ಕಾಳಜಿಗಿಂತ ಹೆಚ್ಚಾಗಿ ಒಂದು ಬಗೆಯ ಕ್ರೂರ ಆನಂದವಿತ್ತೇ ಎಂಬ ಗುಮಾನಿ ಬಂದಾಗಂತೂ ಖೇಮರಾಜಭವನದ ಆ ಮನೆಯಲ್ಲಿ ಒಬ್ಬನೇ ಮಲಗುವದು ಅಸಾಧ್ಯವಾಗಿ ತೋರಿತು. ಕೈಯಲ್ಲಿ ಹಿಡಿದ ಬಾಟಲಿಯೊಂದೇ ಅವನಿಗರಿವಿಲ್ಲದೇನೇ ಮನೆಯತ್ತವೇ ಅವನನ್ನು ಎಳೆದೊಯ್ಯುತ್ತಿದ್ದ ಧೈರ್ಯಕ್ಕೆ ಕಾರಣವಾದಂತಿತ್ತು….

ಖೇಮರಾಜಭವನವನ್ನು ಸಮೀಪಿಸುವಾಗ ವಿಲಕ್ಷಣ ಅನುಭವ : ನಡೆದ ದಣಿವಿಗೋ, ಅರಿವು ಇಲ್ಲದಿದ್ದರೂ ಹೊಟ್ಟೆ ಹಸಿದದ್ದಕ್ಕೋ, ಕಿಸೆಯಲ್ಲಿ ಹೊತ್ತುತಂದ ಬಾಟಲಿ ಎಬ್ಬಿಸುತ್ತಿದ್ದ ಕಳವಳಕ್ಕೋ ಅಥವಾ ಸ್ಪಷ್ಟವಾಗಿ ಒಪ್ಪಿಕೊಂಡಿರದಿದ್ದರೂ, ಮೇರಿ, ಖಂಬಾಟಾ, ಈಗ ಬಾನಾವಳಿ_ಇವರೆಲ್ಲರಿಂದಾಗಿ ಹುಟ್ಟಿದ, ಹೊಟ್ಟೆ ಹೊರಳಿಸುವ ಭಯಕ್ಕೋ_ಅಷ್ಟೊಂದು ಜನರಸದ್ದುಗದ್ದಲದಿಂದ ತುಂಬಿದ ಖೇತವಾಡಿಯ ಅಂದಗೇಡಿಯಾದ ಚಾಳುಗಳೆಲ್ಲ ನಿರ್ಜನವಾಗಿ ನಿಂತಂತೆ ತೋರಿತು. ಖೇಮರಾಜಭವನದ ಕಟ್ಟಿಗೆಯ ಪಾವಟಿಗೆಗಳುಳ್ಳ ನಿಚ್ಚಣಿಕೆಯನ್ನು ಏರುವಾಗಂತೂ ಯಾವುದೋ, ಪ್ಲೇಗಿನಂತಹ ರೋಗದ ಹಾವಳಿಯಿಂದ ಜನರೆಲ್ಲ ಮನೆಗಳನ್ನು ಖಾಲಿಮಾಡಿ ಆಗಲೇ ಓಡಿಹೋಗಿದ್ದಾರೆ ; ತಾನೊಬ್ಬನೇ ಹಿಂದೆ ಉಳಿದುಬಿಟ್ಟಿದ್ದೇನೆ ಎಂಬಂತಹ ಭಾಸವಾದಾಗ ತನ್ನಲ್ಲಿ ಹುಟ್ಟಿದ ಭಾವನೆಗೆ ನಾಗಪ್ಪನಿಗೆ ಹೆಸರು ಹೊಳೆಯಲಿಲ್ಲ. ಇಷ್ಟೇ. ಆ ಭಾವನೆಯ ಗುಂಗಿನಲ್ಲಿದ್ದಾಗಲೇ ಹಿಂದೆ ಎಂದೂ ಮಾಡಿರದ ಒಂದು ಬಾಲಿಶವಾದ ಚಟುವಟಿಕೆಯಲ್ಲಿ ತೊಡಗಿದವನಾಗಿ ಏರುತ್ತಿದ್ದ ನಿಚ್ಚಣಿಕೆಯ ಮೆಟ್ಟಿಲುಗಳನ್ನು ಒಂದೊಂದಾಗಿ ಎಣಿಸಹತ್ತಿದ : ಮೊದಲ ಮಜಲೆಯ ಕೊನೆಯ ಮೆಟ್ಟಿಲಿಗೆ ಬಂದೊಡನೆ, ತನಗಷ್ಟೇ ಕೇಳಿಸುವಷ್ಟು ದೊಡ್ಡ ದನಿಯಲ್ಲಿ “ಹದಿಮೂರೂ,” ಎಂದೂ, ಎರಡನೇ ಮಜಲೆಯ ಕೊನೆಗೆ ಬಂದೊಡನೆ “ಇಪ್ಪತ್ತಾರೂ,” ಎಂದೂ ಅಂದವನು ಮೂರನೇ ಮಜಲೆಯನ್ನು ತಲುಪಿದೊಡನೆ “ಮೂವತ್ತೊಂಬತ್ತೂಽಽ” ಎಂದ. ಹಾಗೆ ಅಂದಾಗಿನ ದನಿ ಎಷ್ಟು ದೊಡ್ಡದಾಗಿತ್ತೆಂದರೆ ನಿಚ್ಚಣಿಕೆಯ ಇಬ್ಬದಿಯ ಮನೆಗಳ ಜನಕ್ಕೂ ಅದು ಸ್ಪಷ್ಟವಾಗಿ ಕೇಳಿಸಿರಬೇಕು. ಪುಣ್ಯಕ್ಕೆ, ಹಾಗೆ ಒದರಿದವರು ಯಾರು ಎಂಬುದನ್ನು ತಿಳಿಯಲು ಹೊರಗೆ ಬರುವಷ್ಟು ಕುತೂಹಲ ಮಾತ್ರ ಯಾರಿಗೂ ಆಗಲಿಲ್ಲ. ಇಷ್ಟೆಲ್ಲ ಜನ ತುಂಬಿದ ಚಾಳಿನಲ್ಲಿ ಇಂತಹ ವೈಚಿತ್ರ್ಯಗಳು ದಿನವೂ ನಡೆಯುವದೇ ! ಮೂಲೆಯ ಮನೆಯ ಅರ್ಜುನರಾವ್ ಮಾತ್ರ ಇವನನ್ನು ಸಂಧಿಸದೇ ಉಳಿಯಲಿಲ್ಲ. ಇವನ ಬರವಿನ ಹಾದಿಯನ್ನೇ ಕಾಯುತ್ತಿದ್ದವನ ಹಾಗೆ ಬಾಗಿಲಲ್ಲೇ ನಿಂತಿದ್ದ ; ಇವನ ಮೋರೆಯನ್ನು ನೋಡಿದ್ದೇ ತಡ ತಾನು ಅವನ ಹಾದಿಯನ್ನು ಕಾಯುತ್ತಿದ್ದುದಾದರೂ ಯಾಕೆ ಎಂಬುದನ್ನೂ ಕೂಡ ಮರೆತೇಬಿಟ್ಟವನ ಹಾಗೆ “ನಾಳೆ ಹೈದರಾಬಾದಿಗೆ ಹೋಗುತ್ತೀರಂತೆ….ಹೆಹೆಹೆ….” ಎಂದು ಹಲ್ಲು ಕಿಸಿದಾಗ ನಾಗಪ್ಪನೇ ಅವನ ಮುಂದಿನ ಮಾತುಗಳನ್ನು ಪೂರ್ತಿಗೊಳಿಸಿದ_ “ಬೆಳಿಗ್ಗೆ ಶ್ರೀನಿವಾಸರಾವ್ ಭೆಟ್ಟಿಯಾಗಿದ್ದ. ಅವನೇ ಹೇಳಿದ.” ಇದನ್ನು ಹೇಳುವಾಗ ನಾಗಪ್ಪ ಅರ್ಜುನ್‌ರಾವನ ಇದಿರು ನಿಂತಿರಲಿಲ್ಲ ; ತನ್ನಷ್ಟಕ್ಕೇ ಮಾತನಾಡುತ್ತ ತನ್ನ ಕೋಣೆಯ ಕಡೆಗೆ ಹೆಜ್ಜೆ ಇಡುತ್ತ ಸಾಗಿದ್ದ. ಕದ ತೆರೆದು ಕೋಣೆ ಸೇರಿದವನೇ ಬಟ್ಟೆ ಬದಲಿಸುವ ಮೊದಲೇ ಹಾಸಿಗೆಯಲ್ಲಿ ಅಡ್ಡವಾಗಿದ್ದ.

ಬೆಳಿಗ್ಗೆ ಎಚ್ಚರವಾದದ್ದು ಹನ್ನೊಂದು ಗಂಟೆಯ ನಂತರ. ಎದ್ದ ಕೂಡಲೇ ಹೊಟ್ಟೆಗೆ ಹಸಿವೆಯಾಗಿದೆ ಎಂಬ ಅರಿವು ಬಂದು ಹಾಸಿಗೆಯಲ್ಲಿ ಎದ್ದು ಕೂಡ್ರೋಣವೆಂದರೆ ಇನ್ನೂ ನಿದ್ದೆಯಿಂದ ಎಚ್ಚರವಾಗಿಲ್ಲ ಎಂಬಂತಹ ಅನ್ನಿಸಿಕೆ. ಹಾಗೇ ಕೆಲಹೊತ್ತು ಬಿದ್ದಿರೋಣ ಎನ್ನುವ ಮನಸ್ಸಾಗಿ ತಿರುಗಿ ಹಾಸಿಗೆಯಲ್ಲಿ ಅಡ್ಡವಾದ. ಹೊತ್ತು ಹೋದಂತೆ ನೆನಪಿಗೆ ಬರಹತ್ತಿತು : ಬಾನಾವಳಿಯ ಅಂಗಡಿಯಿಂದ ಹೊರಬಿದ್ದಮೇಲೆ ಬಾಟಲಿಯನ್ನು ರಸ್ತೆಯಲ್ಲಿ ನಿಂತಲ್ಲೇ ತೆರೆದು ಐದು ಗುಳಿಗೆಗಳನ್ನು ಎಣಿಸಿ ನುಂಗಿದ್ದ_ಆ ಡೋಜು ದೊಡ್ಡದೆಂದು ಗೊತ್ತಿದ್ದೂ, ಈಗ ಸಂಶಯ : ನುಂಗಿದ್ದ ಗುಳಿಗೆಗಳು ಐದೇ ಆಗಿದ್ದವೋ ತಪ್ಪಿ ಇನ್ನೂ ಹೆಚ್ಚು ಆಗಿದ್ದುವೋ ! ತನ್ನ ಯಾತನೆಗೆ ಮೂಲ ಕಾರಣ ಯಾತನೆಯ ತೀವ್ರ ಅರಿವೇ ಆಗಿದ್ದರೆ ಆ ಅರಿವನ್ನೇ ನಾಶಮಾಡುವ ಈ ನಿದ್ದೆಯಂತಹ ಸಾವಿನಿಂದಲೇ ಅದಕ್ಕೆ ಕೊನೆಯೇನೋ. ನೇತ್ರಾವತಿ ಕೆಳಗೆ ಬಿದ್ದು ಸಾಯಲು ಬಯಸಿದ್ದಕ್ಕೆ ಅವಳ ನೈತಿಕ ‘ಪತನವೇ’ ಕಾರಣವಾಗಿರಬಹುದೆ ? ನಾಗಪ್ಪನಿಗೆ ಬಿದ್ದಲ್ಲೇ ತಿರುಗಿ ನಿದ್ದೆ ಹತ್ತಿತು. ಎಚ್ಚರವಾದಾಗ ಹಠಾತ್ತನೆ ನೆನಪಿನಲ್ಲಿ ನಿಂತದ್ದು ಯಾರಿಗೋ ತಾನು ತನ್ನ ವಯಸ್ಸನ್ನು ಕೂಗಿ ಹೇಳಿದ್ದು : “ಮುವ್ವತ್ತೊಂಬತ್ತೂಽಽ.” ಹೇಳಿದ್ದು ಮೇರಿಗೊ ? ಮೇರಿಗೆ ವಯಸ್ಸೆಷ್ಟು _ಇಪ್ಪತಾರು ? ಇಪ್ಪತ್ತೇಳು ? ಕೇಳಿ ನೋಡಬೇಕು. ಅಪ್ಪ ಸತ್ತಾಗ ತನಗೆ ವಯಸ್ಸು ಹದಿಮೂರು ! ತಾನು ಎಣಿಸಿದ್ದು ನಿಚ್ಚಣಿಕೆಯ ಮೆಟ್ಟಿಲುಗಳನ್ನು ಅಲ್ಲವೇ ಅಲ್ಲವಾಗಿತ್ತೇನೊ. ಕೆಳಗೆ ಹೋಗುವಾಗ ಇನ್ನೊಮ್ಮೆ ಎಣಿಸಿ ನೋಡಬೇಕು. ಹುಚ್ಚು ಕಲ್ಪನೆ ಎಂದು ನಕ್ಕುಬಿಡಬೇಕು. ಅನ್ನಿಸಿದರೂ ಈ ವಿವೇಕ ಶೂನ್ಯವಾದ ‘ಆಕಸ್ಮಿಕ’ ನಾಗಪ್ಪನ ಮನಸ್ಸಿನ ಮೇಲೆ ಎಷ್ಟೊಂದು ಪ್ರಬಲವಾದ ಪರಿಣಾಮ ಮಾಡಿತ್ತೆಂದರೆ, ಲೆಕ್ಕ ತಪ್ಪಿ ತೆಗೆದುಕೊಂಡ ಬಾರ್ಬಿಚ್ಯುರೇಟ್ ಗುಳಿಗೆಗಳ ದೊಡ್ಡ ಡೋಜಿನ ಪರಿಣಾಮವನ್ನೂ ಕ್ಷುಲ್ಲಕಗೊಳಿಸಿ ನಾಗಪ್ಪ ಸಂಪೂರ್ಣವಾಗಿ ಎಚ್ಚರವಾಗಿದ್ದ. ಸಂಜೆ ತಾನು ಕೈಗೊಳ್ಳಲಿದ್ದ ಪ್ರವಾಸದ ನೆನಪೂ ಬಂದು ಅದರ ಸಿದ್ಧತೆಗೆ ತೊಡಗುವುದಕ್ಕೆ ಮನಸ್ಸನ್ನು ಗಟ್ಟಿಮಾಡಿ ಹಾಸಿಗೆ ಬಿಟ್ಟು ಎದ್ದ.
uಟಿಜeಜಿiಟಿeಜ
– ಭಾಗ ಮೂರು –
– ಅಧ್ಯಾಯ ಹತ್ತೊಂಬತ್ತು –

ತನ್ನ ಸುತ್ತಲೂ ಬಿಗಿಗೊಳ್ಳುತ್ತಿದ್ದ ರಾಜಕೀಯದ ಮೊದಲ ಸುಸ್ಪಷ್ಟವಾದ ಕುರುಹು ಅನುಭವಕ್ಕೆ ಬಂದದ್ದು ಹೈದರಾಬಾದ್ ವಿಮಾನ-ನಿಲ್ದಾಣದಲ್ಲಿ ಇಳಿದಾಗಲೇ….

ಅಂದು ರವಿವಾರ. ‘ಶೇರ್-ಏ-ಪಂಜಾಬ್’ ರೆಸ್ಟೋರಂಟಿನಲ್ಲಿ ಲೆಕ್ಕವಿಲ್ಲದಷ್ಟು ಸಂದಣಿ. ಪರಿಚಯದ ಜನ ಭೆಟ್ಟಿಯಾದರೂ ಆದರೇ. ತನ್ನ ಆಫೀಸಿನ ಜನ ಕೂಡ ಅಲ್ಲಿ ಬರುತ್ತಾರೆ. ಅಲ್ಲಿಯ ಚಿಕನ್-ಬಿರ್ಯಾಣಿ ಗಿರ್ಗಾಂವದ ಆ ಭಾಗದಲ್ಲೇ ಪ್ರಖ್ಯಾತ. ಅದರಲ್ಲೂ ಇತ್ತೀಚೆ ತಂಪು ಬಿಯರ್ ಬೇರೆ ಮಾರಲು ಶುರುಮಾಡಿದ್ದಾರೆ. ನಾಗಪ್ಪನಿಗೋ ಇಂದು ಯಾರನ್ನೂ ಭೇಟಿಯಾಗುವುದಿರಲಿಲ್ಲ. ಎಂತಲೇ, ಗ್ರೆಂಟ್ ರೋಡ್ ಮೂಲೆಯಲ್ಲಿಯ ‘ದರ್ಬಾರ್’ ಹೊಟೆಲ್ಲಿಗೇ ಹೋಗಿದ್ದ.‘ದರ್ಬಾರ್’ ಹೊಟೆಲ್ ಇದಿರಿಗೇ ಬಾನಾವಳೀ ಮೆಡಿಕಲ್ ಸ್ಟೋರ್ಸ್ : ರವಿವಾರವಾದ್ದರಿಂದ ಮುಚ್ಚಿತ್ತು.ಆದರೆ ಅದು ಕೆರಳಿಸಿದ ನೆನಪಿನಿಂದ ನಿನ್ನೆಯ ತನ್ನ ನಡೆತೆಯ ಬಗ್ಗೆ ತನಗೇ ನಾಚಿಕೆ ಎನ್ನಿಸಿತು : ಎಲ್ಲೋ ಆಳದಲ್ಲಿ, ಸತ್ವಪರೀಕ್ಷೆಯ ಸೋಲಿಗೆ ಹೆದರಿಕೊಂಡ ಮನಸ್ಸು ಸತ್ವಪರೀಕ್ಷೆಯ ಕ್ಷೇತ್ರದಿಂದಲೇ ಫಲಾಯನ ಹೇಳುವ ಸಿದ್ಧತೆಯಲ್ಲಿದ್ದಂತಿತ್ತು ಎನ್ನುವುದರ ಅಸ್ಪಸ್ಟ ಅರಿವು ನಾಗಪ್ಪನಿಗಿತ್ತು : ಬಾರ್ಬಿಚ್ಯುರೇಟ್ ಗುಳಿಗೆಗಳಿಗೆ ಶರಣುಹೋಗಬೇಕಾದ ಅವಶ್ಯಕತೆಯ ಅರ್ಥ ಹೊಳೆದಿತ್ತು, ಊಟಕ್ಕೆ ಕೂತಾಗ. ತನ್ನ ಬುದ್ದಿಶಕ್ತಿಗೆ ಈಗ ಎಂದಿಗಿಂತ ಹೆಚ್ಚಾಗಿ ತನ್ನ ಚುರುಕುತನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ತನ್ನನ್ನು ತಾನೇ ಎಚ್ಚರಿಸಿಕೊಂಡ. ಫಿರೋಜ್-ಶ್ರೀನಿವಾಸ-ಜಲಾಲರ ಗುಂಪಿಗಿರುವ ಬಲಾಢ್ಯವಾದ ರಾಜಕೀಯ ಸತ್ತೆಯ ವಿರುದ್ಧ ಹೋರಾಡಲು ಬೇಕಾದ ರಾಜಕೀಯ ಕುತಂತ್ರ ತನ್ನ ವ್ಯಕ್ತಿತ್ವದ ಅಳವಿನಾಚೆಯದಾದರೂ ಸತ್ಯ ತನ್ನ ಬದಿಗಿದೆ ಎಂಬ ಒಂದೇ ಒಂದು ಧೈರ್ಯ ನಾಗಪ್ಪನು ತನ್ನ ಊಟದ ರುಚಿಯನ್ನು ಕಳಕೊಳ್ಳದಂತೆ ಮಾಡಿತ್ತು. ಮಧ್ಯದಲ್ಲೇ, ತನ್ನ ಬಗ್ಗೆ ಪ್ರೀತಿಯುಳ್ಳ ಒ‌ಆ ಯವರೇ ಊರಲ್ಲಿಲ್ಲ ಎನ್ನುವುದರ ನೆನಪು, ಹಾಗೂ ಅವರನ್ನು ಬಿಟ್ಟರೆ ತನ್ನ ಪರವಾಗಿ ಮಾತನಾಡುವ ಧೈರ್ಯವಾಗಲೀ ಆಸ್ಥೆಯಾಗಲೀ ಇದ್ದವರು ಕಂಪನಿಯಲ್ಲಿ ಇನ್ನೊಬ್ಬರಿದ್ದಾರೆಯೆ ಎಂಬುದರ ಬಗ್ಗೆ ಹುಟ್ಟಿದ ಸಂಶಯ_ಇವುಗಳಿಂದಾಗಿ ಮನಸ್ಸು ಕುಗ್ಗುತ್ತದೆ : ಬೇಡಬೇಡವೆಂದರೂ, ಉಪಜೀವಿಕೆಯ ಕ್ಷೇತ್ರದಲ್ಲಿ ಮನುಷ್ಯ ಹೋರಾಡುವುದು ಸತ್ಯಕ್ಕಾಗಿರದೇ ಬರಿಯ ತಮ್ಮ ತಮ್ಮ ಸ್ಥಾನಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿಯೇ ಎಂಬ ತೀರ್ಮಾನಕ್ಕೆ ಬಂದು ಮುಟ್ಟಿದ. ಅರಿತೋ, ಅರಿಯದೆಯೋ, ಎಲ್ಲರೂ, ಫಿರೋಜ್ ಹೂಡಿದ ಸಂಚಿನಲ್ಲಿ ಸೇರಿ, ತನ್ನನ್ನು ಸುತ್ತುವರಿದು ತಮ್ಮಟೆ, ಜಾಗಟೆಗಳನ್ನು ಬಾರಿಸುತ್ತ ತನ್ನನ್ನು ನೇರವಾಗಿ ಫಿರೋಜ್ ಗುರಿ ಹಿಡಿದು ಕುಳಿತ ಕೋವಿಯ ಇದಿರಿಗೇ ಬರುವ ಪಶುವನ್ನಾಗಿ ಮಾಡುತ್ತಿದ್ದಾರೆ ಅನ್ನಿಸಹತ್ತಿತು : ಈ ಚಿತ್ರ ಕಣ್ಣುಮುಂದೆ ನಿಂತದ್ದೇ ನಾಗಪ್ಪನ ಕಣ್ಣುಗಳು ಮತ್ತೆ ಆರ್ದ್ರಗೊಂಡಿದ್ದುವು: ವಿಮಾನ-ಪರಿಚಾರಿಕೆ ಇವನ ಹತ್ತಿರ ಬಂದು_ಖಿeಚಿ oಡಿ ಛಿoಜಿಜಿee ಠಿಟeಚಿse ? ಎಂದು ಕೇಳಿದಾಗ, ತನ್ನ ವಿಚಾರಗಳ ಗುಂಗಿನಿಂದ ಹೊರಬಂದು ಕಣ್ಣಿನಲ್ಲಿ ಕಲೆತ ನೀರಿನ ಪರದೆಯೊಳಗಿಂದ, ಮುಂದೆ ನಿಂತ ಸುಂದರ ಮೋರೆಯ ಪರಿಚಯ ಹಿಡಿದು_ಖಿeಚಿ ಠಿಟeಚಿse ಎಂದು ಹೇಳಲು ನಾಗಪ್ಪನಿಗೆ ಕೆಲವು ನಿಮಿಷಗಳೇ ಬೇಕಾದವು. ಮುಂದಿಟ್ಟ ಕಪ್ಪಿನಲ್ಲಿ ಚಹ-ಹಾಲು ಸುರಿಯುತ್ತಿರುವಾಗ, “ಚಹ ಮುಗಿಸಿ ಹಿಂದಿನ ಸೀಟಿಗೆ ಬನ್ನಿ, ಮಾತನಾಡೋಣ.”ಎಂದು ಗುಟ್ಟಿನಲ್ಲಿ ಹೇಳುವವಳಂತೆ ಹೇಳಿ, ಬಹಳ ಚಂದವಾಗಿ ನಕ್ಕು ಹಿಂದಿನ ಸಾಲಿಗೆ ಚಹ ಕೊಡಲು ಹೊರಟುಹೋದಳು. ನಾಗಪ್ಪ ತನ್ನ ಕಿವಿಗಳನ್ನು ತಾನೇ ನಂಬದಾದ : ಇಪ್ಪತ್ತು ವರ್ಷಗಳಲ್ಲಿ ನಡೆಯದೇ ಇದ್ದಷ್ಟು ಸಂಗತಿಗಳು ಈಗ ಒಮ್ಮೆಲೇ ಇಪ್ಪತ್ತೇ ದಿನಗಳಲ್ಲಿ ನಡೆಯುವ ಹೊಂಚು ಹಾಕಿ ಕೂತಿವೆಯೇನೋ, ಅನ್ನಿಸಿತು. ಇವಳು ಯಾರು ? ಇಷ್ಟೆಲ್ಲ ಪ್ರವಾಸಿಗಳು ಇರುವಾಗ ತನ್ನೊಡನೆಯೇ ಮಾತನಾಡುವ ಆತುರ ಇವಳಿಗೇಕೆ ? ನಾಗಪ್ಪ ಚಹ ಮುಗಿಸಿದ್ದೇ ಹಿಂತಿರುಗಿ ನೋಡಿದ : ಹುಡುಗಿ ಇನ್ನೂ ಉಳಿದ ಪ್ರಯಾಣಿಕರಿಗೆ ಚಹ ಕೊಡುವುದರಲ್ಲಿ ಮಗ್ನಳಾಗಿದ್ದಳು : ಬಹಳ ಆಕರ್ಷಕವಾದ ಮೈಕಟ್ಟು, ಬಣ್ಣ, ನಿಲುವು, ಉಟ್ಟ ಸೀರೆ ಮೈಸೂರ ಸಿಲ್ಕಿನದು. ಪರಿಚಾರಿಕೆಯರಿಗೆ ಇಂಡಿಯನ್ ಏರ್‍ಲೈನ್ಸ್ ಒದಗಿಸಿದ ಊನಿಫಾರ್ಮ್ ಸೀರೆಯಾಗಿದ್ದರೂ ಅವಳ ಗೌರವರ್ಣಕ್ಕೆ ಎದ್ದುಕಾಣುತ್ತಿತ್ತು. ಪೀಕಾಕ್ ಬ್ಲ್ಯೂ ಬಣ್ಣದ್ದು. ಮುಡಿ ಕಟ್ಟಿದ ಕೂದಲಿನ ಮುಚ್ಚುಮರೆಯಿಲ್ಲದ ಮೋಹಕತೆ ಮೇರಿಯ ಕೂದಲನ್ನು ನೆನಪಿಗೆ ತಂದಿತು.

ನಾಗಪ್ಪನ ಲಕ್ಷ್ಯ ಅತಿ ಹಿಂದಿನ ಸೀಟುಗಳತ್ತ ಹೋಯಿತು : ಕೊನೆಯ ಎರಡು ಸಾಲುಗಳು ಖಾಲಿಯಿದ್ದವು. ನಾಗಪ್ಪನಲ್ಲಿ ಅದೆಂತಹ ಖುಶಿ ತುಂಬಿದ ಧೈರ್ಯದ ಸಂಚಾರವಾಯಿತೋ : ತನ್ನ ಸೀಟಿನಿಂದ ಎದ್ದವನೇ ನೇರವಾಗಿ ಹಿಂದಿನ ಸೀಟಿನತ್ತ ನಡೆಯಹತ್ತಿದ. ಅರ್ಧಕ್ಕೇ ತಡೆದು ಏನೋ ನೆನಪಾದವನ ಹಾಗೆ ಮೊದಲು ಕೂತ ಜಾಗಕ್ಕೇ ಹಿಂತಿರುಗಿ ಬಂದು ಬ್ರೀಫ್‌ಕೇಸ್ ತೆರೆದು ಅದರೊಳಗಿಂದ, ಮನಸ್ಸು ಬಂದಾಗ ಟಿಪ್ಪಣಿಗಳನ್ನು ಬರೆದಿಡುತ್ತಿದ್ದ ನೋಟ್ ಬುಕ್ ತೆಗೆದುಕೊಂಡ. ಎಲ್ಲಕ್ಕೂ ಹಿಂದಿನ ಸೀಟೊಂದರಲ್ಲಿ ಕುಳಿತುಕೊಳ್ಳುವಹೊತ್ತಿಗೆ, ಪರಿಚಾರಿಕೆ ತನ್ನ ಪಾಲಿನ ಎಲ್ಲ ಪ್ರವಾಸಿಗರಿಗೂ ಚಹ ಕೊಟ್ಟು ಮುಗಿಸಿದ್ದಳು. ಬಗ್ಗಿ ನಡೆಯುತ್ತ ಚಹ ಸುರಿಯುತ್ತಿದ್ದವಳು ತನ್ನ ಕೆಲಸದಿಂದ ಬಿಡುವು ಪಡೆದು ನೆಟ್ಟಗೆ ನಿಂತದ್ದೇ ನಾಗಪ್ಪ ಕಣ್ಣಿಗೆ ಬಿದ್ದಾಗ, ಮೋಹಕವಾಗಿ ಮುಗುಳುನಗುತ್ತ ಹತ್ತಿರ ಬಂದು_“ಅಚಿಡಿe ಜಿoಡಿ ಚಿಟಿoಣheಡಿ ಛಿuಠಿ oಜಿ ಣeಚಿ ?” ಎಂದು ಕೇಳಿದಳು. “ಓo ಣhಚಿಟಿಞs” ಎಂದು ನಾಗಪ್ಪ ಉತ್ತರಿಸಿದಾಗ_“I ಚಿm ಚಿ ಜಿಡಿieಟಿಜ oಜಿಜಿ ಒಚಿಡಿಥಿ. I ತಿiಟಟ ರಿoiಟಿ ಥಿou sooಟಿ,” ಎಂದು ಅವಳು ಚಹದ ಪಾತ್ರೆಯೊಂದಿಗೆ ಕೆಬಿನ್ ಕಡೆಗೆ ಹೊರಟಾಗ ಆಗಿನಿಂದಲೂ ಕಾಡುತ್ತಿದ್ದ ರಹಸ್ಯ ಒಡೆದಂತಾಗಿ ಮನಸ್ಸಿಗೆ ನಿರಂಬಳತೆ ಎನಿಸಿತು : ಮರುಗಳಿಗೆ ತಾನು ಯಾರೆಂದು ಅವಳಿಗೆ ತಿಳಿದ ಬಗೆ ಹೇಗೆ ಎಂಬುದರ ಬಗ್ಗೆ ಕುತೂಹಲ ಹುಟ್ಟದೇ ಇರಲಿಲ್ಲ. ತನ್ನ ಹತ್ತಿರ ಬಂದು ಅವಳು ಕೂತಾಗ ಮಾತನ್ನು ಆರಂಭಿಸಲು ಒಂದು ಪ್ರಶ್ನೆಯಾದರೂ ಸಿಕ್ಕಿತು ಎಂದು ಸಂತೋಷವಾಯಿತು : ಪರಿಚಯವಿಲ್ಲದ ಹುಡುಗಿಯರೆಂದರೆ ನಾಗಪ್ಪನಿಗೆ ಬಹಳ ಸಂಕೋಚ. ಪರಿಚಾರಿಕೆ ತನ್ನ ಸದ್ಯದ ಕೆಲಸ-ಬೊಗಸೆಗಳಿಂದ ಬಿಡುವು ಸಿಕ್ಕಿದ್ದೇ, ಇವನ ಕಡೆಗೇ ಬರಹತ್ತಿದ್ದಳು : ದೂರದಿಂದಲೇ, ಇವನನ್ನು ಕಂಡ ಕೂಡಲೇ, ಸಿಹಿಯಾಗಿ ಮುಗುಳುನಗುತ್ತ ಸಮೀಪಿಸಿ_ಒಚಿಙ I ? ಎಂದು ಕೇಳಿ ಇವನ ಬದಿಯ ಕುರ್ಚಿಯಲ್ಲಿ ಕೂಡ್ರುತ್ತ : “I ಚಿm hಚಿಠಿಠಿಥಿ ಣo meeಣ ಥಿou, ಒಡಿ.ಓಚಿgಟಿಚಿಣh, ” ಎಂದಳು. “ನನ್ನ ಹೆಸರು ಡಾಯನಾ ಡ್ರಾಯ್ವರ್. ಮೇರಿಯ ಮಗ್ಗಲು-ಮನೆಯಲ್ಲಿರುತ್ತೇನೆ.” ಎಂದು ಇನ್ನೊಮ್ಮೆ ಚಂದವಾಗಿ ನಕ್ಕಳು. ಅವಳು ಹಾಗೆ ನಕ್ಕಾಗ, ವಿಮಾನ-ಪರಿಚಾರಿಕೆಯರ ಬಗ್ಗೆ ತಾನು ಯಾವಾಗಲೂ ಮಾಡುತ್ತಿದ್ದ ಜೋಕ್ ಹೇಳುವ ಕುತೂಹಲವಾಯಿತು.ಆದರೆ ಅದನ್ನು ಸದ್ಯ ತಡೆಹಿಡಿದು, “ಕ್ಷಮಿಸಿ ಮಿಸ್ ಡ್ರಾಯ್ವರ್…” “ಅಚಿಟಟ me ಆiಚಿಟಿಚಿ”“ಓಕೇ ಡಾಯನ್ನ್, ನಿನಗೆ ನಾನೇ ನಾಗನಾಥನೆಂದು ತಿಳಿದದ್ದು ಹೇಗೆ ?” ಎಂದು ಕೇಳಿದ. “ ಙouಡಿ sಚಿಜ sತಿeeಣ ಜಿಚಿಛಿe,” ಎಂದು ಡಾಯನಾ ನಕ್ಕಾಗ ನಾಗಪ್ಪ ಇನ್ನಷ್ಟು ಗೊಂದಲಕ್ಕೆ ಬಿದ್ದ. ಇದನ್ನು ಕಂಡು, “ಇಲ್ಲ, ನಿನ್ನೆ ನೀವು ಮೇರಿಗೆ ಫೋನ್ ಮಾಡಿದಾಗ ನಾನು ಅಲ್ಲೇ ಇದ್ದೆ. ಮೊದಲು ಫೋನ್ ತೆಗೆದುಕೊಂಡದ್ದೇ ನಾನು. ನೀವು ಈ ಫ್ಲ್ಯಾಟ್ ಮೇಲೆ ಇದ್ದೀರಿ ಎನ್ನುವುದು ತಿಳಿದು ನಿಮ್ಮ ಬಗ್ಗೆ ಕೇಳಿದಾಗ, ನಿಮ್ಮ ಬಗ್ಗೆ ಹೇಳುತ್ತ ನಿಮ್ಮ ವರ್ಣನೆ ಕೂಡ ಮಾಡಿದ್ದಳು.” ನಾಗಪ್ಪನಿಗೆ ಆಶ್ಚರ್ಯ : ಮೇರಿ ಬಾಯಿಂದ ಮಾಡಿದ ವರ್ಣನೆಯಿಂದಲೇ ನನ್ನ ಗುರುತು ಹಿಡಿಯುವಂತಹ ವೈಶಿಷ್ಟ್ಯ ತನ್ನಲ್ಲೇನಿದೆ ಎಂಬಂತಹ ಪ್ರಶ್ನೆಗೆ ನಾಗಪ್ಪ ಶಬ್ದಗಳನ್ನು ಹುಡುಕುತ್ತಿರುವಾಗ ಡಾಯನಾ ತಾನೇ ಹೇಳಿದಳು. “ಮೇರಿ ನಿಮ್ಮ ದೈಹಿಕ ವರ್ಣನೆ ಮಾಡುತ್ತ ಒಂದು ವಿಶೇಷ ಲಕ್ಷಣವನ್ನು ತೋರಿಸಿಕೊಟ್ಟಿದ್ದಳು : ನೀವು ನಡೆಯುವಾಗ ಆಗಾಗ ಎಡಗೈಯಿಂದ ಛಾತಿಯ ಬಲಭಾಗವನ್ನು ಮುಟ್ಟಿನೋಡ್ದುತ್ತೀರಿ.” ನಾಗಪ್ಪನಿಗೆ, ತನ್ನ ಅರಿವಿಗೆ ಬಂದಿರದ ಈ ಸಂಗತಿಯಿಂದ ಎಷ್ಟೊಂದು ಆಶ್ಚರ್ಯದ ಧಕ್ಕೆ ತಗಲಿತೆಂದರೆ ಅವನ ಬಾಯಿಂದ ಬಂದ ‘ಓo’ ಎಂಬ ಉದ್ಗಾರ ಬಯಸಿದ್ದಕ್ಕಿಂತ ದೊಡ್ಡದಾಯಿತು. ಡಾಯನಾ ‘ಸ್ವಲ್ಪ ಮೆಲ್ಲಗೆ’ ಎಂದು ಸೂಚಿಸುವವಳ ಹಾಗೆ ಕುರ್ಚಿಯ ಕೈಯ ಮೇಲೆ ಊರಿದ ನಾಗಪ್ಪನ ಹಸ್ತವನ್ನು ಮೃದುವಾಗಿ ಅಮುಕಿ, ತಾನು ಹೇಳುತ್ತಿದ್ದದ್ದು ದೊಡ್ಡ ಗುಟ್ಟಿನ ಸುದ್ದಿಯೆಂಬಂತೆ ಸನಿಯನ್ನು ತಗ್ಗಿಸಿ, “ನಿಮ್ಮನ್ನೆಲ್ಲ ಸ್ವಾಗತಿಸಲು ಬಾಗಿಲಲ್ಲಿ ನಿಂತಲ್ಲಿಂದಲೇ ಸಾಲುಗಟ್ಟಿ ಬರುತ್ತಿದ್ದ ಪ್ರಯಾಣಿಕರಲ್ಲಿ ನಿಮ್ಮನ್ನು ತಪ್ಪದೇ ಗುರುತಿಸಿದ್ದೆ : ವಿಮಾನವನ್ನು ಪ್ರವೇಶಿಸುವ ಮೊದಲು ಮೂರು ಸರತಿಯಾದರೂ ನೀವು ಛಾತಿಯನ್ನು ಮುಟ್ಟಿ ನೋಡಿರಬೇಕು. ನಿಜ ಹೇಳಲೇ ? ನಾನು ಮಾತ್ರ, ನೀವು ನೀವೇ ಎಂದು ಪತ್ತೆಹಚ್ಚಿದ್ದು ಮೇರಿ ಬಹಳವಾಗಿ ಮೆಚ್ಚಿಕೊಂಡಂತಿದ್ದ ನಿಮ್ಮ ಕಣ್ಣೊಳಗಿನ ಬುದ್ದಿಮತ್ತೆಯ ಹೊಳಪು ಹಾಗೂ ಅದರ ಆಳದಲ್ಲಿಂದ ಹೊರಸೂಸುವ ಮ್ಲಾನತೆಗಳಿಂದ. ನಾನೂ ಮೆಚ್ಚಿಕೊಂಡದ್ದು ಅವುಗಳನ್ನೇ,”ಎನ್ನುತ್ತ ಕುರ್ಚಿಯ ಮೇಲೆ ಇನ್ನೂ ಊರಿಯೇ ಇದ್ದ ನಾಗಪ್ಪನ ಕೈಯನ್ನು ಗಟ್ಟಿಯಾಗಿ ಅದುಮಿ ಹಿಡಿದಳು. ಕ್ಷಣದಲ್ಲಿ ಬಿಟ್ಟಳು : ಇದೆಲ್ಲ ಮೇರಿಯದೇ ಕೈವಾಡವೇ ? ನನ್ನ ಮನಃಸ್ಥಿತಿಯ ಅರಿವು ಇದ್ದ ಈ ಹುಡುಗಿ ತನ್ನ ಗೆಳತಿಯ ಮುಖಾಂತರ ನನ್ನನ್ನು ಖುಶಿಯಲ್ಲಿಡುವ ಪ್ರಯತ್ನ ಮಾಡುತ್ತಿದ್ದಳೆಯೆ ? ದೇವರೇ, ಯಾವ ಜನ್ಮದ ಋಣಾನುಬಂಧವಿದು ! ನನ್ನವರೆನ್ನುವವರೇ ನನ್ನನ್ನು ಹಣಿಯಲು ಸಿದ್ಧರಾಗಿದ್ದಾಗ….ನಾಗಪ್ಪ ಒಮ್ಮೆಲೇ ಅಂತರ್ಮುಖಿಯಾದದ್ದನ್ನು ನೋಡಿ “ಯಾವಾಗಲೂ ಚಿಂತೆ ಮಾಡುತ್ತ ಕೂಡ್ರಬೇಡಿ, ನಾಗನಾಥ್.” ಎಂದಳು ಡಾಯನಾ. ಅವಳ ಆತ್ಮೀಯತೆಗೆ ಪುಲಕಿತನಾದ ನಾಗಪ್ಪ ಹೊರಬರಲು ಪ್ರಯತ್ನಿಸುತ್ತ, “ಥೆಂಕ್ಸ್ ಡಾಯನಾ. ಒಂದು ಹೇಳಲೆ ?_ಏರ್ ಹೊಸ್ಟೆಸ್ ಕುರಿತು ನಾನು ಬಹಳಷ್ಟು ಸಲ ಮಾಡಿದ ಜೋಕಿಗೆ ನೀನು ದೊಡ್ಡ ಅಪವಾದ.” ಎಂದು ತನ್ನ ಜೋಕನ್ನು ಹೇಳಿದ : I useಜ ಣo ಛಿಚಿಟಟ ಥಿou ಂiಡಿ-hosಣesses ಚಿs ಂiಡಿ-hosಣiಟes ಎಂಬುದಕ್ಕೆ ಡಾಯನಾಳಿಗೆ ದೊಡ್ಡಕ್ಕೆ ನಕ್ಕುಬಿಡಬೇಕು ಅನ್ನಿಸಿದ್ದರೂ ತಾವು ಇದ್ದ ಸನ್ನಿವೇಶವನ್ನು ನೆನೆದು, “ನೀವು ತುಂಬ ತುಂಟರಿದ್ದೀರಿ.” ಎನ್ನುವಷ್ಟರಲ್ಲಿ ಕೊಕ್‌ಪಿಟ್ಟಿನಿಂದ ಕರೆ ಬಂದದ್ದರಿಂದ ಇxಛಿuse me ಎಂದವಳೇ ಅಲ್ಲಿಂದ ಹೊರಟುಹೋದಳು.

ನಾಗಪ್ಪ ತನ್ನ ನೋಟ್ ಬುಕ್ ತೆರೆದು ಬರೆಯಹತ್ತಿದ : ಮೇರಿ ಹಾಗೂ ಡಾಯನಾ ನನ್ನ ಬಗ್ಗೆ ಮಾಡುತ್ತಿದ್ದುದನ್ನು ನೋಡಿ ಮಾನವತೆಯಲ್ಲಿ ನನಗಿದ್ದ ಭರವಸೆಗೆ ಮತ್ತೆ ಚಿಗುರು ಮೂಡುತ್ತಿದ್ದ ಭಾವನೆ. ಡಾಯನಾಳೊಡನೆ ಮಾತನಾಡುವಾಗಂತೂ ಹೈದರಾಬಾದಿನಲ್ಲಿ ನಡೆಯಲಿದ್ದದ್ದು ನನ್ನ ಕಲ್ಪನೆಯಲ್ಲಿ ಹುಟ್ಟಿದ್ದೆನ್ನುವಂತಹ ಭಾಸ….”

ಶ್ರೀನಿವಾಸ ಮತ್ತು ಫಿರೋಜ್ ಒಂದೆಡೆಯಲ್ಲಿ ಬಂದದ್ದಾದರೂ ಹೇಗೆ ? ಇದು ಇನ್ನೂ ಬಿಡಿಸಲಾಗದ ಒಗಟಾಗಿಯೇ ಉಳಿದಿದೆ….

ನಾಗಪ್ಪ ಬರೆಯುವುದನ್ನು ಎಂದೋ ನಿಲ್ಲಿಸಿದ್ದ. ತೆರೆದೇ ಇದ್ದ ವಹಿ, ತೆರೆದೇ ಇದ್ದ ಪೆನ್ನು, ತೆರೆದೇ ಇದ್ದ ಕಣ್ಣುಗಳ ಇದಿರಿನಲ್ಲಿ ಮಾತಿನಲ್ಲಿ ಹಿಡಿಯಲಾಗದ ಚಿತ್ರಗಳು : ಹನೇಹಳ್ಳಿ, ಕುಮಟೆಯ ಹಾಸ್ಟೆಲ್ಲು. ಅಪ್ಪ ಹಾರಿದ ಬಾವಿ, ಶ್ರೀನಿವಾಸನ ಮನೆಯ ಹತ್ತಿರದ, ಝೋಪಡಪಟ್ಟಿಗಳು. ಹೆದರಿದ ಕಣ್ಣುಗಳಿಂದ ನೋಡುವ ಸರಸ್ವತಿ. ವೋಮೂ, ಸೀತಾರಾಮು. ಒಂದೇ ಒಂದು ಸಂಜೆಯ ಮಟ್ಟಿಗೆ ಭೆಟ್ಟಿಯಾಗಿ ಆತ್ಮೀಯ ಮಾತುಗಳನ್ನಾಡಿದ ದೋಶಿ. ಗಲ್ಲದಲ್ಲಿ ಕುಳಿ ಮೂಡಿಸಿ ನಗುವ ಮುದ್ದಿನ ಚೇತನಾ. ಇನ್ನೂ ಕಂಡಿರದ ಅಣ್ಣನಿರಬಹುದೇ ಎಂದು ಗುಮಾನಿ ಹುಟ್ಟಿಸಿದ ಶ್ರೀನಿವಾಸನ ಮನೆಯಲ್ಲಿಯ ಅಚ್ಯುತ. ಚಿಕ್ಕಂದಿನಲ್ಲೇ ಕಳೆದುಹೋದ ತಂಗಿ. ಮನೆ ಬಿಡುವ ಕೊನೆ ಗಳಿಗೆಯಲ್ಲಿ ಅರ್ಥವಾಗದ ರೀತಿಯಲ್ಲಿ ತನ್ನನ್ನು ಬಲವಾಗಿ ತಟ್ಟಿದ ಶ್ರೀನಿವಾಸನ ಹೆಂಡತಿ ಶಾರದೆ. ಜನ್ಮಾಂತರದಲ್ಲಿ ನಂಬಿಕೆ ಮೂಡಿಸುವ ಮೇರಿ. ಇದೀಗ ಇಷ್ಟೊಂದು ಅಕ್ಕರೆಯಿಂದ ಮಾತನಾಡಿಸಿದ ಡಾಯನಾ….

“ಅದೆಂತಹ ಹಗಲುಗನಸಿನಲ್ಲಿ ಮುಳುಗಿದ್ದೀರಪ್ಪ !” ಡಾಯನಾಳ ಪ್ರಿಯವಾದ ಧ್ವನಿ ಕೇಳಿಸಿದ್ದೇ ನಾಗಪ್ಪ ವಾಸ್ತವ ಜಗತ್ತಿಗೆ ಇಳಿದಿದ್ದ. ಹೈದರಾಬಾದ್ ವಿಮಾನ-ನಿಲ್ದಾಣವನ್ನು ತಾವು ಸಮೀಪಿಸುತ್ತಿದ್ದೇವೆಂದೂ, ಕುರ್ಚಿಯ ಸೇಫ್‌ಟೀ ಬೆಲ್ಟುಗಳನ್ನು ಕಟ್ಟಿಕೊಳ್ಳಬೇಕೆಂದೂ ಮೈಕ್ ಮೇಲೆ ಬಂದದ್ದು ಡಾಯನಾಳ ಸಂಗಾತಿಯ ಧ್ವನಿಯಾಗಿತ್ತು. ನಾಗಪ್ಪನ ಮಗ್ಗಲ ಕುರ್ಚಿಯಲ್ಲಿ ತಾನೂ ಬೆಲ್ಟ್ ಕಟ್ಟಿಕೊಂಡು ಕುಳಿತ ಡಾಯನಾ ಒಮ್ಮೆಲೇ ಭಾವಪರವಶಳಾದವಳ ಹಾಗೆ “ಹೆದರಬೇಡಿ. ಮೇರಿ ನನಗೆ ಎಲ್ಲ ಹೇಳಿದ್ದಾಳೆ. ಯಾವಾಗಲೂ ನಿಮ್ಮ ಬಗ್ಗೆ ಮಾತನಾಡುತ್ತಿರುತ್ತಾಳೆ. ನಿಮ್ಮ ಬಗ್ಗೆ ಬಹಳ ಆದರವಿದೆ ಅವಳಿಗೆ….She ಟoves ಥಿou….” ಎನ್ನುತ್ತಿರುವಾಗ ವಿಮಾನ ನೆಲವನ್ನು ಮುಟ್ಟಿತ್ತು. “ಇನ್ನು ನಾನು ನನ್ನ ಡ್ಯೂಟಿಗೆ ಹೋಗಬೇಕು. ಇನ್ನೊಮ್ಮೆ ಭೆಟ್ಟಿಯಾಗುವ ಹೊತ್ತಿಗೆ ನೀವು ನಿಮಗೆ ಸಲ್ಲಬೇಕಾದ ಸ್ಥಾನಕ್ಕೆ ಬಂದು ಹಸನ್ಮುಖಿಗಳಾಗಿರುತ್ತೀರಿ ಎಂದು ಆಶಿಸುತ್ತೇನೆ…ಅಲ್ಲಿಯವರೆಗೆ….” ಎನ್ನುತ್ತ, ಪ್ರೀತಿ ಉಕ್ಕಿಬಂದವಳ ಹಾಗೆ ನಾಗಪ್ಪನ ಅಂಗೈಯನ್ನು ಒತ್ತಿ ತನ್ನ ಕೆಲಸಕ್ಕೆ ಹೊರಟುಹೋದಳು….

ವಿಮಾನದ ಬಾಲದ ಕಡೆಯ ಬಾಗಿಲಲ್ಲಿ ಡಾಯನಾಳ ಸಂಗಾತಿ ನಿಂತಿದ್ದಳು. ನಾಗಪ್ಪ ತಾನು ಮೊದಲು ಕೂತ ಸೀಟಿಗೆ ಹೋಗಿ, ಬ್ರೀಫ್‌ಕೇಸನ್ನು ಕೈಗೆತ್ತಿಕೊಂಡು, ಡಾಯನಾ ನಿಂತ ಮುಂದಿನ ಬಾಗಿಲಿನಿಂದಲೇ ಹೊರಗೆ ಹೋಗುವದನ್ನು ನಿಶ್ಚಯಿಸಿ ಆ ಕಡೆಗೆ ನಡೆಯ ಹತ್ತಿದ : ಡಾಯನಾ ಕೈ ಮುಗಿದು ನಿಂತು ‘ಗುಡ್‌ಬಾಯ್’ ಎನ್ನುತ್ತ ಪಯಣಿಗರನ್ನು ಬೀಳ್ಕೊಡುತ್ತಿದ್ದಳು. ನಾಗಪ್ಪ ತನ್ನ ಸರದಿ ಬಂದದ್ದೇ, “ಗುಡ್‌ಬಾಯ್ ಡಾಯನಾ, ಈ ಸಂಜೆಯನ್ನು ನಾನೆಂದೂ ಮರೆಯಲಾರೆ.” ಎಂದು ಚಂದವಾಗಿ ನಕ್ಕು ಅವಳಿಂದ ಬೀಳ್ಕೊಂಡ. ನಿಚ್ಚಣಿಕೆಯ ಮೆಟ್ಟಿಲುಗಳನ್ನು ಇಳಿಯುವಾಗ, ಕಳೆದ ಏಳು ದಿನಗಳಲ್ಲಿ ತಾನು ಇಷ್ಟೊಂದು ಸುಖವಾಗಿ ನಕ್ಕದ್ದು ಇದೇ ಮೊದಲ ಸಲವೇನೋ ಎಂದು ಅನ್ನಿಸದೇ ಇರಲಿಲ್ಲ. ಆದರೆ ಕೊನೆಯ ಮೆಟ್ಟಿಲನ್ನು ಬಿಟ್ಟು ನೆಲಕ್ಕೆ ಕಾಲಿರಿಸಿದ್ದೇ, ಬೆನ್ನಹುರಿಯಲ್ಲಿ ಬರ್ಫಿನಂತಹದೇನೋ ಹರಿದ ಅನುಭವ : ತಾನು ಹೈದರಾಬಾದಿಗೆ ಬಂದ ಪ್ರತಿಸಲ ಪರ್ಸೊನೆಲ್ ಡಿಪಾರ್ಟ್‌ಮೆಂಟಿನ ಜನ ಯಾರಾದರೂ ಕಾರಿನೊಂದಿಗೆ ವಿಮಾನ-ನಿಲ್ದಾಣದಲ್ಲಿ ತನ್ನನ್ನು ಕಾಣಲು ಬಂದೇ ಬರುತ್ತಿದ್ದರು. ಈ‌ಅಲೂ ಯಾರಾದರೂ ಬಂದಿರಬಹುದಲ್ಲವೇ ? ಯಾಕೋ ಹಠಾತ್ತನೆ ಬಂದ ಈ ಸಂಶಯದಿಂದ ಕಾಲೇ ಸೋತುಬಂದವು : ಇಲ್ಲ, ವಿಮಾನ-ನಿಲ್ದಾಣದಲ್ಲಿ ಅವನನ್ನುಸ್ವಾಗತಿಸಲು ಕಂಪನಿಯಿಂದ ಯಾರೂ ಬಂದಿರಲಿಲ್ಲ. ತನ್ನ ಬಗ್ಗೆ ತುಂಬ್ ಆದರ ಇಟ್ಟುಕೊಂಡ ಸರ್ಕಾರ ಡ್ರೈವರ್ ಕಾರನ್ನಾದರೂ ತಂದಿರಬಹುದೆಂಬ ಎಣಿಕೆಯೂ ತಪ್ಪಾಯಿತು : ಕಂಪನಿಯವರು ಕಾರನ್ನು ಕೂಡ ಕಳಿಸಿರಲಿಲ್ಲ : ಫಿರೋಜ್ ಸಾರಿದ ಯುದ್ಧದ ಮೊದಲ ಕಹಳೆ ಸ್ಪಷ್ಟವಾಗಿ ಕೇಳಿಸಿತ್ತು. ಇವನು ಕಾರಿನ ಹಾದಿ ಕಾಯುತ್ತ ನಿಂತಾಗ ನಿಲ್ದಾಣದಲ್ಲಿದ್ದ ಐದಾರು ಟೆಕ್ಸಿಗಳೂ ಆಗಲೇ ಹೊರಠೋಗಿದ್ದುವು. ಈಗ ಒಟೋರಿಕ್ಷಾಗಳು ಮಾತ್ರ. ಒಟೋರಿಕ್ಷಾ ಒಂದನ್ನು ಕರೆದು ಒಳಗೆ ಕೂಡ್ರುವುದಕ್ಕೂ, ಇಂಡಿಯನ್ ಏರ್‍ಲೈನ್ಸ್‌ದ ಸ್ಟೇಶನ್ ವ್ಯಾಗನ್ನಿನಲ್ಲಿಡಾಯನಾ ಹತ್ತುವುದಕ್ಕೂ ಸರಿಯಾಯಿತು. ಡಾಯನಾ ಇವನು ರಿಕ್ಷಾ ಹತ್ತುವುದನ್ನು ಕಂಡಿದ್ದಳು. ಆದರೆ, ಕಂಡೂ ಕಾಣದವಳಂತೆ ಮುಖ ತಿರುವಿಸಿ ಸ್ಟೇಶನ್ ವ್ಯಾಗನ್ ಹತ್ತಿ ಕೂತಿದ್ದಳು : ರಿಕ್ಷಾದವನಿಗೆ ಕಂಪನಿಯ ಗೆಸ್ಟ್‌ಹೌಸಿನ ವಿಳಾಸ ಕೊಟ್ಟು ವಾಹನವನ್ನು ಓಡಿಸಲು ಹೇಳಿದ್ದೇ, ಅವನು ವಾಹನವನ್ನು ಸ್ಟಾರ್ಟ್ ಮಾಡಿ, ವಿನಾಕಾರಣ ಬಾರಿಸಿದ ಹಾರ್ನಿನ ಸದ್ದಿನಲ್ಲಿ ಬೇರೆ ಏನೋ ಕೇಳಿಸಿದಂತಾಗಿ ಮೈಮೇಲೆ ಮುಳ್ಳು ನಿಂತವು.
uಟಿಜeಜಿiಟಿeಜ
– ಅಧ್ಯಾಯ ಇಪ್ಪತ್ತು –

ಬಂಜಾರಾ ಹಿಲ್ಲಿನ ನೆತ್ತಿಯಲ್ಲಿ ನಿಂತ, ನಾಲ್ಕು ಮಲಗುವ ಕೋಣೆಗಳುಳ್ಳ ಒಂದು ಬಂಗಲೆಯನ್ನು ಕಂಪನಿಯ ಗೆಸ್ಟ್‌ಹೌಸ್ ಆಗಿ ಉಪಯೋಗಿಸಲಾಗುತ್ತಿತ್ತು. ಬಂಗಲೆಗೆ ಹೋಗುವ ರಸ್ತೆಯ ಇಬ್ಬದಿಯಲ್ಲಿ ಬೃಹದಾಕಾರದ ಬಂಡೆಗಳು, ಮಳೆಗಾಳಿಗಳಿಂದ ಉರುಟುರುಟಾಗಿ, ಬೋಳುಬೋಳಾದ, ಅಂತಹ ಬಂಡೆಗಳನ್ನು ನಾಗಪ್ಪ ಇನ್ನೆಲ್ಲೂ ನೋಡಿರಲಿಲ್ಲ. ಹೈದರಾಬಾದಿನ ವೈಶಿಷ್ಟ್ಯಗಳಲ್ಲೊಂದಾದ ಆ ಬಂಡೆಗಳಿಂದಲೇ ಗೆಸ್ಟ್‌ಹೌಸ್ ನಾಗಪ್ಪನಿಗೆ ಬಹಳ ಪ್ರಿಯವಾಗಿತ್ತು. ಮುಂಬಯಿಗೆ ವರ್ಗವಾದ ಕಳೆದ ಎಂಟು ತಿಂಗಳಲ್ಲಿ ನಾಲ್ಕು ಸಲವಾದರೂ ಹೈದರಾಬಾದಿಗೆ ಬಂದಿದ್ದ, ಬಂದ ಪ್ರತಿ ಸರತಿ ಅಲ್ಲಿದ್ದ ಎರಡು ಮೂರು ದಿನಗಳನ್ನು ಅತ್ಯಂತ ಸುಖದಲ್ಲಿ ಕಳೆದಿದ್ದ. ಬಂಗಲೆಯ ಕಾಂಪೌಂಡಿನ ಬೇಲಿಯಲ್ಲಿ ಕೆಂಪು ಗುಲಾಬಿ ಹಾಗೂ ಬಿಳಿ ಹೀಗೆ ಮೂರು ಮೂರು ಬಣ್ಣಗಳ ಹೂವುಗಳನ್ನು ಮೈತುಂಬ ಅರಳಿಸಿ ನಿಂತ ಆಳೆತ್ತರದ ಬೋಗನ್‌ವಿಲ್ಲಾ ಗಿಡಗಳು, ಸಂಪಿಗೆಯ ಮರಗಳು, ಬಾಗಿಲಲ್ಲೇ, ಚಪ್ಪರದ ಹಾಗೆ ಟೊಂಗೆಗಳನ್ನು ಹರಡಿ ನಿಂತ ದೇವದಾರು ಗಿಡ, ಬಂಗಲೆಯ ಹಿಂದೆ ಸಣ್ಣ ಹಳ್ಳ, ಕಣಿವೆಯ ಆಳದಲ್ಲಿ ಪ್ರಕಟಿಸುತ್ತ ಹರಿಯುತ್ತಿತ್ತು. ಕಣಿವೆಯ ಆಚೆಯ ಮೈ ಮತ್ತೆ ಬೋಳು ಬೋಳಾದ ದೊಡ್ಡ ಬಂಡೆಗಳಿಂದ ಆಚ್ಛಾದಿತವಾದ ಗುಡ್ಡವಾಗಿತ್ತು. ಹಿಂಬದಿಯ ಅಂಗಳದಷ್ಟು ಗಚ್ಚಿಯಲ್ಲಿ ಬೆತ್ತದ ಕುರ್ಚಿಯನ್ನು ಹಾಕಿಸಿ, ಟೀಪಾಯಿಯ ಮೇಲೆ ನಿಡಿದಾಗಿ ಕಾಲುಚಾಚಿ ತಂಪಾದ ಬಿಯರ್ ಕುಡಿಯುತ್ತ ಆಕಾಶದಲ್ಲಿಯ ಚಿಕ್ಕೆಗಳನ್ನು ನೋಡುತ್ತ ವಿರಮಿಸುವ ಕನಸು ಕಾಣುತ್ತ, ವಿಮಾನ-ನಿಲ್ದಾಣದಲ್ಲಾದ_ಅಪಮಾನಕ್ಕೆ ಕಡಿಮೆಯಿಲ್ಲದ_‘ಸ್ವಾಗತ’ವನ್ನು ಕೂಡ ಮರೆತು ತನ್ನಷ್ಟಕ್ಕೆ ಖುಶಿಯಲ್ಲಿದ್ದ ನಾಗಪ್ಪನ ಮನಸ್ಸು ಬಂಜಾರಾ ಹಿಲ್ಸ್ ಸಮೀಪಿಸುತ್ತಿದ್ದಂತೆ ಥಟ್ಟನೆ ಹುಟ್ಟಿದ ವಿಚಾರಕ್ಕೆ ಈಗ ಮತ್ತೆ ಕಳವಳಕ್ಕೊಳಗಾಯಿತು : ಗೆಸ್ಟ್‌ಹೌಸಿಗಾದರೂ ತಾನಿಂದು ಬರುವ ಸುದ್ದಿ ತಿಳಿಸಿರಬಹುದಲ್ಲವೆ ? ಕೃಷ್ಣ ಹಾಗೂ ಅವನ ಕೈಕೆಳಗಿನ ಮುತ್ತೂಸ್ವಾಮಿ ಗೆಸ್ಟ್‌ಹೌಸಿನ ದೇಖರೇಖೀ ನೋಡಿಕೊಳ್ಳುತ್ತಿದ್ದರು. ಮುತ್ತೂಸ್ವಾಮಿ ಒಳ್ಳೆಯ ಅಡಿಗೆ ಭಟ್ಟ ಕೂಡ. ಎರಡು ದಿನಗಳ ಮಾತಿಗೆ ಬಂದಾಗ ಕೂಡ ಪ್ರತಿ ಒಬ್ಬನಿಗೆ ಐದೈದು ರೂಪಾಯಿ ಭಕ್ಷೀಸು ಕೊಡದೇ ಹೋದವನಲ್ಲ ನಾಗಪ್ಪ : ಇಬ್ಬರಿಗೂ ಅವನ ಮೇಲೆ ತುಂಬಾ ಖುಶಿ. ವಿಸ್ಕೀ ಬಾಟಲಿಯನ್ನು ತರಿಸಿದಾಗಂತೂ ಒಂದೊಂದು ಪೆಗ್ಗನ್ನಾದರೂ ಕದ್ದು ಕುಡಿಯದೇ ಇರುತ್ತಿರಲಿಲ್ಲ ಎರಡೂ ಮಕ್ಕಳು. ಕೃಷ್ಣ ತುಂಬಾ ಹಲ್ಕಟ್ ಎರಡೂ ಮಗ. ತಾನು ಮೊದಲ ಬಾರಿ ಬಂದಾಗಲೇ ಹುಡಿಗಿಯರ ಬಗ್ಗೆ ವಿಚಾರಿಸಿದ್ದ. ಬಂಗಲೆಯಲ್ಲಿ ಇರಲು ತಾನೊಬ್ಬನೇ ಆಗ, ತಾನು ಪ್ರಕಟಿಸಿದ ಸಿಟ್ಟಿಗೆ ಮುಂದೆ ಆ ವಿಷಯದಲ್ಲಿ ತಿರುಗಿ ಚಕಾರ ಮಾತೆತ್ತಿರಲಿಲ್ಲ. ಆ ಸಂದರ್ಭ ನೆನಪಿಗೆ ಬಂದಾಗ ತನ್ನ ಕಳವಳದ ಮನಃಸ್ಥಿತಿಯಲ್ಲೂ ನಾಗಪ್ಪನಿಗೆ ನಗು ಬಂತು. ಗೆಸ್ಟ್‌ಹೌಸಿನತ್ತ ಹೊರಳುವ ಸಣ್ಣ ರಸ್ತೆಗೆ ಬಂದದ್ದೇ ರಿಕ್ಷಾದವನು ತಾನು ಸರಿಯಾದ ರಸ್ತೆಗೆ ಹೊರಳುತ್ತಿದ್ದೇನೆ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಲೆಂಬಂತೆ_ಎಂಟನೇ ರಸ್ತೆ ಇದೇ ಅಲ್ಲವೇ ಸರ್ ಎಂದು ಕೇಳಿದ. ನಾಗಪ್ಪನಿಗೂ ಖಾತ್ರಿಯಿರಲಿಲ್ಲ. ಹಿಂದೆ ಬಂದ ಪ್ರತಿಸಲ ಕಂಪನಿಯ ಕಾರು ಇರುತ್ತಿತ್ತು. “ನಿನಗೆ ಖಾತ್ರಿಯಿಲ್ಲದಿದ್ದರೆ ಮುರಕಿಯಲ್ಲಿಯ ಪೆಟ್ರೋಲ್-ಪಂಪಿನಲ್ಲಿ ವಿಚಾರಿಸಿಕೊಂಡು ಬಾ.” ಎಂದ. ಅವನು ಹಾಗೇ ಮಾಡಿ ಬಂದ. ಅವರು ಹಿಡಿಯಲಿದ್ದ ರಸ್ತೆ ಸರಿಯಾಗಿತ್ತು. ಮುಂದಿನ ಐದೇ ಮಿನಿಟುಗಳಲ್ಲಿ ಗೆಸ್ಟ್‌ಹೌಸಿನ ಕಾಂಪೌಂಡನ್ನು ಒಟೋರಿಕ್ಷಾ ಹೊಕ್ಕಿತ್ತು. ಅದರ ಕಿವಿಗೆ ಅಪ್ಪಳಿಸುವ ಸದ್ದಿಗೆ ಬದಿಯ ಬಂಗಲೆಯೊಳಗಿನ ದೊಡ್ಡ ನಾಯಿಯೊಂದು ಸುತ್ತಲಿನ ಬಂಡೆಗಲ್ಲುಗಳಿಂದ ಮಾರ್ದನಿ ಎಬ್ಬಿಸುವಂತೆ ಗುಲ್ಲೆಬ್ಬಿಸಿತು. ಗೆಸ್ಟ್‌ಹೌಸಿನ ಬಾಗಿಲೂ ತೆರೆಯಿತು. ಕೃಷ್ಣನೂ ಹಲ್ಲುಕಿಸಿಯುತ್ತ, ಕೈ ಮುಗಿಯುತ್ತ ಹೊರಗೆ ಬಂದ. ನಾಗಪ್ಪನ ಸಂಶಯವೇ ನಿಜವಾಗಿತ್ತು : ಕೃಷ್ಣನಿಗೆ ನಾಗಪ್ಪ ಬರುವದರ ಸುದ್ದಿಯನ್ನು ಯಾರೂ ತಿಳಿಸಿರಲಿಲ್ಲ. ಗೆಸ್ಟ್‌ಹೌಸಿನಲ್ಲಿ ಸದ್ಯ ಯಾರೂ ಇಲ್ಲದ್ದರಿಂದ ಅಡಿಗೆಯ ಮುತ್ತೂಸ್ವಾಮಿಯೂ ಆ ದಿನ ರಜೆ ಪಡೆದಿದ್ದ. ನಾಗಪ್ಪನಿಗೆ ತನಗೆ ಬಂದ ಸಿಟ್ಟನ್ನು ತಡೆಯಲಾಗಲಿಲ್ಲ.

ರಿಕ್ಷಾದಿಂದ ತನ್ನ ಸಾಮಾನನ್ನು ಇಳಿಸಲು ಕೃಷ್ಣನಿಗೆ ಹೇಳಿದವನೇ, ರಿಕ್ಷಾದವನಿಗೆ ಹಣ ಕೊಡುವ ಮೊದಲೇ ಸೀದಾ ಒಳಗಿನ ಹಾಲಿಗೆ ನಡೆದು ಪರ್ಸೊನೆಲ್ ಆಫೀಸರನಿಗೆ ಫೋನ್ ಮಾಡೆಲೆಂದು ಡಿರೆಕ್ಟರಿಯಲ್ಲಿ ಅದರ ನಂಬರನ್ನು ಹುಡುಕಹತ್ತಿದ. ನಂಬರ್ ಸಿಕ್ಕು, ಫೋನ್ ಮಾಡಿದಾಗ ಫೋನ್ ಮೇಲೆ ಬಂದ ಹೆಣ್ಣಿಗೆ, ರಾಮಕೃಷ್ಣ ಮನೆಯಲ್ಲಿದ್ದಾರೆಯೇ ? ಎಂದು ಕೇಳಿದ. ಟೆಲಿಫೋನ್ ಮೇಲೆ ಹೆಣ್ಣು ದನಿ ಕೇಳಿಯೇ ನಾಗಪ್ಪ ತುಸು ಮೆತ್ತಗಾಗಿದ್ದ. ಫೋನಿನ ಇನ್ನೊಂದು ತುದಿಯಿಂದ ಬಂದ ಮಾತುಗಳನ್ನು ಕೇಳಿದ ಮೇಲಂತೂ ಸಿಟ್ಟಿನ ಜಾಗದಲ್ಲಿ ಬೇರೆಯೇ ಒಂದು ಭಾವನೆ ನೆಲೆಸಹತ್ತಿತು. ಇಲ್ಲ, ರಾಮಕೃಷ್ಣ ಊರಲ್ಲಿರಲಿಲ್ಲ. ಬಂದೂಕವಾಲರ ಜೊತೆ ಅಂದೇ ಸಂಜೆಯ ಪ್ಲೇನಿಗೆ ಮುಂಬಯಿಗೆ ಹೋಗಿದ್ದ. ಬರಲು ಮೂರು ದಿನಗಳಾದರೂ ಹಿಡಿದಾವು. ನಾಗಪ್ಪ ಸಂಪೂರ್ಣವಾಗಿ ಗೊಂದಲಿಸಿಹೋದ : ಸಂಜೆಯ ಪ್ಲೇನು ಎಂದರೆ ತಾನು ಇದೀಗ ಮುಂಬಯಿಯಿಂದ ಬಂದದ್ದೇ. ಅದೇ ತಿರುಗಿ ಮುಂಬಯಿಗೆ ಹೋಗುತ್ತದೆ.
*****
ಮುಂದುವರೆಯುವುದು