ಶಿಕಾರಿ – ೩

ನಾಗಪ್ಪ ತುಂಬ ಮೆತ್ತಗಾದ :”ನಿಮಗೆ ತೊಂದರೆಯಿಲ್ಲ ತಾನೇ ?”
ಇದನ್ನು ಬಾಗಿಲಲ್ಲೇ ನಿಂತ ಧಂಡೋಬಾನ ಹೆಂಡತಿ ಕೇಳಿರಬೇಕು. ಅವಳು, “ತೊಂದರೆಯೇನು ಬಂತು ! ನಮಗಾಗಿ ಮಾಡಿದ್ದರಲ್ಲೇ ಸ್ವಲ್ಪ ತಿನ್ನುವಿರಂತೆ, ಬನ್ನಿ” ಎಂದಳು. ಅವಳ ದನಿಯಷ್ಟೇ ನಾಗಪ್ಪನಿಗೆ ಕೇಳಿಸುತ್ತಿತ್ತು. ಅವರ ಕರೆಗೆ ಒಪ್ಪಿ, “ಇದೀಗ ಬರುತ್ತೇನೆ, ನೀವು ಕೂತುಕೊಳ್ಳಿ.” ಎಂದು ಒಳಗೆ ಹೋಗಿ, ಪ್ಯಾಂಟು, ಅಂಗಿ ಕಳಚಿ ತನ್ನ ಪ್ರೀತಿಯ ಪೈಜಾಮಾ, ಕುರ್ತಾ ಧರಿಸಿ ಮಗ್ಗುಲುಮನೆಯವರಲ್ಲಿ ಊಟಕ್ಕೆ ಹೋದ.

ಊಟಕ್ಕೆ ಕೂತಾಗ, ಇವಳನ್ನು ಮೊದಲ ಬಾರಿಗೇ ನೋಡುವವನ ಹಾಗೆ ನೋಡುತ್ತಿದ್ದಾಗ ಒಂದೆರಡು ಬಾರಿ ತನ್ನ ಕಣ್ಣುಗಳನ್ನು ಸಂಧಿಸಿದ ಅವಳ ಕಣ್ಣುಗಳಲ್ಲಿಯ ಮಾದಕತೆಗೆ ಸಣ್ಣಗೆ ಕಂಪಿಸಿದ. ‘ನನಗೆ ಬೇಕಾದ ಔಷಧ ನಿನ್ನ ಹತ್ತಿರವಿಲ್ಲ’ ಎಂದ ತನ್ನ ಉದ್ಧಟತನ ನೆನಪಾಗಿ, ಇವಳು ಆ ಕಾರಣಕ್ಕಾಗಿಯೇ ಈಗ ತನ್ನನ್ನು ಕೆಣಕುತ್ತಿಲ್ಲ ತಾನೆ ? ಅಥವಾ….ಆ ದಿನ ಕೂಡ ತನ್ನನ್ನು ಮಾತನಾಡಿಸಿದ್ದರಲ್ಲಿ ತನ್ನ ಲಕ್ಷ್ಯ ಸೆಳೆಯುವ ಉದ್ದೇಶವೇ ಇರಲಿಲ್ಲ ತಾನೆ ?….ಅವಳ ಪ್ರತಿಯೊಂದು ಭಂಗಿಯಲ್ಲಿ ಕಾಮುಕತೆ ಸ್ಪಷ್ಟವಾಗಿ ವ್ಯಕ್ತವಾಗಿತ್ತು : ಈ ದರ್ಜಿಯಿಂದ ತೃಪ್ತಳಾಗುವ ಹೆಣ್ಣಲ್ಲ ಇವಲು ಎಂಬ ಅನ್ನಿಸಿಕೆಯ ಹಿನ್ನೆಲೆಯಲ್ಲಿ ಅವಳು ಹಿಂದೆ ಕೇಳಿದ ಪ್ರಶ್ನೆಗೆ ಈಗ ಬೇರೆಯೇ ಅರ್ಥ ಹೊಳೆದು ತಾನು ಜಾಗರೂಕನಾಗಿರುವುದು ಒಳ್ಲೆಯದು ಎಂದುಕೊಂಡ. ಊಟ ಮುಗಿಯುತ್ತಲೇ ಅವಳ ಅಡಿಗೆಯನ್ನು ಬಾಯಿತುಂಬ ಹೊಗಳಿ, ಆ ಭಾರ ಮನ್ನಿಸಿ, ತನ್ನ ಕೋಣೆಗೆ ಹೊರಟಾಗ, “ಬನ್ನಿ ಇನ್ನೊಮ್ಮೆ, ಈವತ್ತಿನ ಊಟ ತೀರ ಸಾದಾ ಆಯಿತು. ನಿಮಾಗಾಗಿಯೇ ಏನೂ ವಿಶೇಷ ಮಾಡಿರಲಿಲ್ಲ.” ಎನ್ನುತ್ತ ಅವಳು ತನ್ನತ್ತ ನೋಡಿ ಕಣ್ಣು ಹೊಡೆದ ರೀತಿಗೆ ನಾಗಪ್ಪನಿಗೆ ಸಂಶಯ ಉಳಿಯಲಿಲ್ಲ. ಕಳೆದ ಆರೆಂಟು ತಿಂಗಳಿಂದ ಆಗೀಗ ದೃಷ್ಟಿಗೆ ಬೀಳುತ್ತಿದ್ದಳಾದರೂ ಈಗ ನೋಡಿದ ಹಾಗೆ ನೋಡಿಯೇ ಇರಲಿಲ್ಲ ಎಂಬುದೂ ಲಕ್ಷ್ಯಕ್ಕೆ ಬರದಿರಲಿಲ್ಲ : ಎಂದೆಂದಿಗೂ ಒಳಗೆ ಜಗ್ಗುವ ಹಾಳು ನೆನಪುಗಳಿಂದ ಸುತ್ತಲಿನದೆಲ್ಲ ನೋಡುವ ತನ್ನ ದೃಷ್ಟಿಯೇ ಬದಲಿಸಿಬಿಟ್ಟಿದೆಯೇ….

uಟಿಜeಜಿiಟಿeಜ
ರೂಮಿಗೆ ಬಂದು ಹಾಸಿಗೆಯಲ್ಲಿ ಅಡ್ಡವಾದವನ ಮನಸ್ಸಿನ ಮೇಲೆ ಮಗ್ಗುಲುಮನೆಯ ಹೆಣ್ಣು ಇತ್ತ ಕಾಮಕೇಳಿಯ ಇಷಾರೆಗಿಂತ ಊಟಕ್ಕೆ ಹೋಗುವ ಮೊದಲಷ್ಟೆ ತನ್ನನ್ನು ಬಾಲ್ಯಾವಸ್ಥೆಗೆ ಎಳೆದುಬಿಟ್ಟ ಅಪ್ಪ_ಅಮ್ಮರ ಮೋರೆಗಳ ಮೇಲಿನ ನಿಗೂಢ ಯಾತನೆಯ ಹಿಡಿತವೇ ಪ್ರಭಲವಾಗಿತ್ತು ; ಹಿಂದೆ ಎಷ್ಟೊಂದು ಸಾರೆ ಬಾಲ್ಯದ ನೆನಪುಗಳು ಬೆನ್ನಟ್ಟಿ ಬಂದಿದ್ದರೂ ಹೀಗೆ, ಚಿಕ್ಕ ಮಗುವಿನಂತೆ ಅತ್ತುಬಿಡುವಷ್ಟರ ಮಟ್ಟಿಗೆ, ತನ್ನನ್ನು ಅಲ್ಲಾಡಿಸಿರಲಿಲ್ಲ. ಇದೆಲ್ಲ ಆ ಬಾರ್ಬಿಚ್ಯುರೇಟ್ ಗುಳಿಗೆಗಳ ಪ್ರತಾಪ_ಮನಸ್ಸಿನ ಪ್ರಭುದ್ಧತೆಯನ್ನೇ ನಾಶಮಾಡಿಬಿಡುತ್ತದೆ ಹಾಳಾದವುಗಳು. ಹಾಸಿಗೆಯಿಂದ ಎದ್ದವನೇ ಕಪಾಟಿನೊಳಗಿಂದ ಬಾಟಲಿಯನ್ನು ಹೊರತೆಗೆದು ಅದರ ಮುಚ್ಚಳವನ್ನು ತೆರೆದು ಇಡೀ ಬಾಟಲಿಗೆ ಬಾಟಲಿಯನ್ನೇ ರಸ್ತೆಯ ಮೇಲೆ ಖಾಲಿ ಮಾಡಿದ. ಗುಳಿಗೆಗಳೆಲ್ಲ ರಸ್ತೆಯಂಚಿನ ಕೆಸರಿನಲ್ಲಿ ಚಲ್ಲಾಪಿಲ್ಲಿಯಾಗಿ ಹರಡಿಹೋದವು. ಖಾಲಿಯಾದ ಸೀಸೆ ಕಚರಾಬುಟ್ಟಿಯನ್ನು ಸೇರಿತು. ಇನ್ನು ಮುಂದೆ ಇಂತಹ ಮರೆಯುವ ಯುಕ್ತಿಗಳಾವವೂ ಬೇಡ ಎಂದುಕೊಂಡ : ಬಂದ ನೆನಪುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವುದನ್ನು ಕಲಿಯಬೇಕು ಯಾತನೆಯನ್ನು ನೋವು ಕಳೆಯುವ ಅಮಲಿನಲ್ಲಿ ಮುಳುಗಿಸುವುದು ಬೇಡ. ಅನುಭವಿಸುವ ದೈರ್ಯವನ್ನು ತಂದುಕೊಳ್ಳಬೇಕು….ಹೌದು. ನನಗೆ ಸ್ಪಷ್ಟ ಅರಿವು ಇದೆ ; ಮೇರಿಗೆ ನನ್ನ ಬಗ್ಗೆ ಇದ್ದ ಭಾವನೆ ಕೂಡ ಸುಳ್ಳಾದದ್ದು. ಅವಳು ಹೋದದ್ದು ಫಿರೋಜನ ಪಾರ್ಟಿಗೇ ಇರಬೇಕು ಎಂಬ ಸಂಶಯದಿಂದಲೇ ಹುಟ್ಟಿದ ಅಸೂಯೆ ಎಷ್ಟೊಂದು ಪ್ರಭಲವಾಗಿತ್ತೆಂದರೆ ಅದರಿಂದಾಗಿ ಹುಟ್ಟಿದ ನೋವಿನಲ್ಲಿ ಇಂದು ನಡೆಯಲಿದ್ದ ತನಿಖೆಯನ್ನು ಕೂಡ, ಪೂರ್ತಿಯಾಗಿ ಮರೆತೇ ಕೂತಂತೆ ಕೂತುಬಿಟ್ಟಿದ್ದೇನೆ ! ಫಿರೋಜ್ ಇಲ್ಲಿ ಬಂದ ಎರಡೇ ದಿನಗಳಲ್ಲಿ ಅವಳನ್ನು ಪಾರ್ಟಿಗೆ ಕರೆಯುವಷ್ಟರ ಮಟ್ಟಿಗೆ ಸಲುಗೆ ಬೆಳೆಸಿರಬೇಕಾದರೆ…! ಬೋಳೀಮಗನಿಗೆ ಯಾರ ಮೇಲೂ ಭೇಟಿಯಾದ ಒಂದೇ ಗಳಿಗೆಯಲ್ಲಿ ಛಾಪು ಹಾಕುವ ಮಾತಿನ ಕಲೆಯಿದೆ. ಜೊತೆಗೆ, ಮಾತುಗಳು ಉಂಟುಮಾಡುವ ಪರಿಣಾಮವನ್ನು ಎತ್ತಿಹಿಡಿಯುವಂಥ_ಯಾರನ್ನೂ ಮರುಳುಗೊಳಿಸಿಬಿಡುವಂಥ_ಮೋರೆ, ಕಣ್ಣು, ಕೂದಲು, ಆರೋಗ್ಯ !….

ಫಿರೋಜನ ಮೋರೆ ಹಿಂದೆಂದೂ ಕಂಡಿರದಷ್ಟು ಸ್ಫುಟವಾಗಿ ಕಣ್ಣ ಮುಂದೆ ನಿಂತಾಗ ಮೂಗಿನ ಹೊರಳೆಗಳು ಉಬ್ಬಿಕೊಂಡವು : ಕೊರಳಸೆರೆಗಳು ಬಿಗಿಯಾದವು. ಸ್ವಾಸೋಚ್ಛಾಸ ಕೂಡ ಕಷ್ಟಕರವಾಯಿತು ; ಸಮಾಜ ಕೂಡಲೇ ಮನ್ನಿಸುವದು ಇದನ್ನೇ_ಹೊರಗಿನಿಂದ ಕಾಣುವ ಮನುಷ್ಯನನ್ನೇ ! ಒಳಗೆ ಇದ್ದವನನ್ನಲ್ಲ.

ಒಳಗೆ ಇದ್ದವನ ವಿಚಾರ ಬಂದದ್ದೇ, ನಾಗಪ್ಪ ಮತ್ತೆ ವ್ಯಾಕುಲನಾದ. ಒಳಗಿನಿಂದ ಎದ್ದುಬರುವುದನ್ನು ಪ್ರತಿರೋಧಿಸುವದು ಅಸಾಧ್ಯವಾದಾಗ ಕುರ್ಚಿಯಿಂದ ಎದ್ದು ಕೋಣೆಯಲ್ಲಿ ರಭಸದಿಂದ ಶತಪಥ ಹಾಕಹತ್ತಿದ : ಒ‌ಆ ಯವರೋ ಇನ್ನಾರೋ ಹಿಂದೊಮ್ಮೆ ಆದಂತೆ ತನ್ನದು oಟಿe-ಣಡಿಚಿಛಿಞ miಟಿಜ ಎಂದುಕೊಂಡ : ಮೇರಿ, ಡಾಯನಾ, ಥ್ರೀಟೀ, ಇವರೆಲ್ಲ ಒಂದು ಅನನ್ಯ ಸನ್ನಿವೇಶದಲ್ಲಿ ತನ್ನಲ್ಲಿ ಹುಟ್ಟಿಸಿದ ಆತ್ಮವಿಶ್ವಾಸದ ಹಿಡಿತದಲ್ಲಿದ್ದಾಗ ನೌಕರಿಯನ್ನೇ ಬಿಟ್ಟುಕೊಡುವ ಧೈರ್ಯಮಾಡಿ ಖಂಬಾಟಾನೊಡನೆ ಖಂಡತುಂಡವಾಗಿ, ಒಂದು ಬಗೆಯ ಮೊಂಡುತನದಿಂದ, ಮಾತನಾಡಿದ ನಾನು ಈಗ_ಆ ಧೈರ್ಯಕ್ಕೆ ಮೂಲವಾದ ಒಂದು ಭಾವನೆಗೇ ಪೆಟ್ಟುಬಿದ್ದಾಗ_ಈವರೆಗೆ ಅನುಭವಕ್ಕೆ ಬಂದಿರದ ಒಂದು ವಿಶೇಷ ಜಾತಿಯ ಭಯ ತನ್ನನ್ನು ಆವರಿಸಹತ್ತಿದ ಅನ್ನಿಸಿಕೆಯಿಂದ ತತ್ತರಿಸಿದ್ದೇನೆ, ಎನ್ನಿಸಿತು : ಕೊನೆಗೂ, ತನಗೆ ಈ ನೌಕರಿಯ ಅವಶ್ಯಕತೆ ಇದೆಯೇನೋ ! ಬದುಕಿನಲ್ಲಿ, ಯಾವುದಾದರೂ ಒಂದು ನಿಶ್ಚಿತವಾದ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತಾಗ ಮಾತ್ರ….ಕದದ ಮೇಲೆ ಯಾರೋ ಮೆಲ್ಲಗೆ ತಟ್ಟಿದ ಸದ್ದಲ್ಲವೇ ?….ತೆರೆದು ನೋಡಿದ : ಮಗ್ಗುಲು ಮನೆಯ ಹೆಂಗಸು ! ಚಹದ ಕಪ್ಪನ್ನು ಕೈಯಲ್ಲಿ ಹಿಡಿದು ನಿಂತವಳು, ಕಪ್ಪನ್ನು ಕೈಗೆ ಕೊಡುವಂತೆ ಮುಂದೆ ಚಾಚಿದಳು. ವಿಚಾರಮಾಡುವ ಮೊದಲೇ ಅವನು ಕಪ್ಪನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾಗ ಪುಟಿದೆದ್ದು ಕಾಣುತ್ತಿದ್ದ ಬಲಬದಿಯ ಮೊಲೆಯಿಂದ ಜಾರಿದ ಸೆರಗನ್ನು ಸರಿಪಡಿಸಿಕೊಳ್ಳುವ ನೆಪದಲ್ಲಿ ಅದರತ್ತ ಲಕ್ಷ್ಯ ಸೆಳೆಯುತ್ತ, ಅರ್ಧ ಕ್ಷಣದ ಮಟ್ಟಿಗೆ ಇವನತ್ತ ನೋಡಿ ಕಣ್ಣುಗಳನ್ನು ಅರಳಿಸಿ ಅಲ್ಲಿಂದ ಮಾಯವಾದಳು. ಕುರ್ಚಿಯಲ್ಲಿ ಕೂತು ಚಹ ಕುಡಿಯುವಾಗ ಬಾರ್ಬಿಚ್ಯುರೇಟ್ ಗುಳಿಗೆಗಳ ಅಮಲು ಸಂಪೂರ್ಣವಾಗಿ ಕಳೆದಿತ್ತು. ದರ್ಜಿಯ ಹೆಂಡತಿಯ ಹುಚ್ಚುತನಕ್ಕೆ ಮಗುಳುನಕ್ಕ : ಯಾವುದೇ ಬಗೆಯ ಅಸಡ್ಡೆ ಭಾವನೆಗೆ ಎಡೆಕೊಡದೇ ಈ ಪ್ರಕರಣ ಮುಂದುವರಿಯದ ಹಾಗೆ ತಾನೇ ತುಸು ಕಾಳಜಿ ವಹಿಸಬೇಕು, ಅಷ್ಟೇ. ಹುಡುಗಿ ಇನ್ನೂ ಸಣ್ಣವಳು….

ಕುರ್ಚಿಯಿಂದ ಎದ್ದು ಮಾಡಲು ಬಯಸಿದ ಮೊದಲನೇ ಕೆಲಸವೆಂದರೆ ಕ್ಷೌರ ಹಾಗೂ ಸ್ನಾನ. ಕ್ಷೌರ ಮುಗಿಸಿ ಸ್ನಾನಕ್ಕೆ ನಿಂತಾಗ ಅನ್ನಿಸಿತು : ಮೇರಿಯನ್ನು ಸಂಶಯ ದೃಷ್ಟಿಯಿಂದ ನೋಡುವುದಕ್ಕೆ ಕಾರಣ ಬಹುಶಃ ಫಿರೋಜನ ಬಗೆಗಿರುವ ಅಸೂಯೆಯೇ ಇರಬಹುದು. ಆದರೂ ಇದರ ಸೋಕ್ಷಮೋಕ್ಷವಾಗಲೇಬೇಕು : ಕಳೆದ ಎಂಟು ದಿನಗಳ ಅನುಭವದಿಂದ ತಾನು ಪಡೆದ ಪ್ರಬುದ್ಧತೆಯನ್ನು ಈಗ ಒಮ್ಮೆಲೇ ಬಿಟ್ಟುಕೊಡಬಾರದು. ಸಂಜೆ ಮೇರಿಗೆ ಫೋನ್ ಮಾಡಿ ಕೇಳಿದರಾಯಿತು. ಅವಳು ನಿನ್ನೆ ಹೋದದ್ದು ಫಿರೋಜನ ಪಾರ್ಟಿಗೇ ಎನ್ನುವದು ಹೌದಾದರೆ ಯಾವುದೇ ಬಗೆಯ ಭ್ರಮೆಯ ಮೋಹಕ್ಕೆ ಒಳಗಾಗದೇ ಈ ಸಂಬಂಧವನ್ನು ಕೂಡ ಕಡಿಯಬೇಕು….ತಲೆಯ ಮೇಲೆ ಸುರಿಯುತ್ತಿದ್ದ ನೀರಡಿಗೆ ಕಣ್ಣುಗಳು ತುಂಬಿಕೊಳ್ಳುತ್ತಿದ್ದವು : ಜನ್ಮಾಂತರದಲ್ಲಿ ಭರವಸೆಯನ್ನು ಹುಟ್ಟಿಸಿದ ಮೇರಿ, ಫಿರೋಜನೊಡನೆ ವ್ಯವಹರಿಸುವಾಗ ಹುಷಾರಾಗಿರುವಂತೆ ಹೇಳಿದ ಮೇರಿ_ಈಗ ಇದ್ದಕ್ಕಿದ್ದಂತೆ ಫಿರೋಜನ ಪಾರ್ಟಿಗೆ ಹೋಗುವಷ್ಟು ಬದಲಿಸಿಹೋದಳೆ ?… ಛಾತಿಯ ಮೇಲೆ ಸಾಬೂನು ತಿಕ್ಕಿಕೊಳ್ಳುವಾಗ ಮೇರಿಯ ಮಗ್ಗುಲಲ್ಲಿ, ಡಾಯನಾಳ ಮಗ್ಗುಲಲ್ಲಿ, ಮನುಷ್ಯ ಸಂಬಂಧಗಳ ಕ್ಷಣಭಂಗುರತೆಯ ಮೇಲೆ ಉಪನ್ಯಾಸ ಮಾಡಿದ ಗಂಭೀರ ಮುಖಮುದ್ರೆಯ ಥ್ರೀಟೀಯ ಮಗ್ಗುಲಲ್ಲಿ ಫಿರೋಜನನ್ನು ನಿಲ್ಲಿಸಿ ನೋಡುತ್ತ ತನ್ನ ಬಗ್ಗೆ ತಾನೇ ಜಿಗುಪ್ಸೆಪಟ್ಟು ಕುಗ್ಗಿದ. ಮೊನ್ನೆ ಹೈದರಾಬಾದ್ ಏರ್‍ಪೋರ್ಟಿನಲ್ಲಿ ರೆಡ್ಡಿಯೊಡನೆ ಮಾತನಾಡುವಾಗ ಕೂಡ ಇಂತಹದೇ ಒಂದು ಚಿತ್ರ ಕಣ್ಣಮುಂದೆ ನಿಂತಾಗ ತುಂಬ ತುಂಬ ಕುಗ್ಗಿದ್ದ : ತುಟಿ ಪಿಟ್ಟೆನ್ನದೇ ಕೂತಿರುವಾಗ ಬರಿಯ ತನ್ನ ಸಾನ್ನಿಧ್ಯದಿಂದಲೇ ಇದಿರಿನ ಹೆಣ್ಣಿನ ಮೈಯ ಕಣಕಣವನ್ನೂ ಅಲ್ಲಾಡಿಸಬಲ್ಲ ಮಾಟವುಳ್ಳ ವ್ಯಕ್ತಿತ್ವವಿದು : ಎದೆ ಸೆಟೆದು, ಭುಜ ಹರಹಿ ಮಾತನಾಡುವ ಮೋಡಿಯಂತೂ ಆಡಿದ ಪ್ರತಿ ಮಾತಿಗೆ, ಮಾತಿನ ಅರ್ಥವಾಗುವ ಮೊದಲೇ, ಸೈ ಎನ್ನಿಸುವಂಥದ್ದು. ವಿಮಾನದಿಂದ ಇಳಿಯುವ ಮೊದಲು ರೆಡ್ಡಿಯಿತ್ತ ಪತ್ರವನ್ನು ಓದುವ ಮೊದಲೇ ಹರಿದೊಗೆದದ್ದಕ್ಕೆ ಕಾರಣವಾದ ಪ್ರೇರಣೆಯಲ್ಲಿ ಈ ಅಸೂಯೆಯೂ ಸೇರಿಕೊಂಡಿತ್ತು ಎಂಬ ಅನುಮಾನ ಈಗ ಮತ್ತೆ ಬಂದಿತು : ಥ್ರೀಟಿಯ ಕೈಯನ್ನು ಬಿಡುವಾಗ_ಅದನ್ನು ಹಿಡಿದ ಕೈ ರೆಡ್ಡಿಯದಾಗಿದ್ದರೆ ಎಂಬ ವಿಚಾರದ ಹಿಂದೆಯೇ ಬಂದಿತ್ತು ರೆಡ್ಡಿಯ ಪತ್ರವನ್ನು ಹರಿದೊಗೆಯುವ ವಿಚಾರ ! ಪಾರ್ಟಿಯಲ್ಲಿ ಮೇರಿ, ಡಾಯನಾ ಫಿರೋಜನೊಡನೆ ನಡೆಸಿರಬಹುದಾದ ಚೆಲ್ಲಾಟವನ್ನು ಊಹಿಸಿಯೇ ಇನ್ನಷ್ಟು ಮುದುರಿದ : ಐವತ್ತು ದಾಟಿದರೂ ಹುಡುಗಿಯರನ್ನು ಲಲ್ಲೆಯಿಸುವ ಚಟ ಬಿಟ್ಟಿಲ್ಲ_ಭೆಂಛೋದ್ !…ಇದನ್ನು ನೆನೆಯುವಾಗ ತನಗೆ ಸಿಟ್ಟು ಬಂದದ್ದು ಅಪ್ಪನ ಮೇಲೇ. ಸ್ನಾನದ ನೀರನ್ನು ಟವೆಲ್ಲಿನಿಂದ ಒರೆಸಿಕೊಳ್ಳುವಾಗ ಹೊಟ್ಟೆ ಛಾತಿಗಳನ್ನು ನೋಡಿಕೊಳ್ಳುತ್ತ ಸಿಡಿಮಿಡಿಗೊಂಡ : ಅಪ್ಪನಿಂದಲೇ ಪಡೆದ ಬಳುವಳಿಯಿದು, ಜತೆಗೆ_‘ಸಾಯ್’ ಎಂಬ ಆಶೀರ್ವಾದ. ಸಿಟ್ಟಿನ ಹಿಂದೆಯೇ ಬಂದ ಹುಚ್ಚು-ವಿಚಾರಕ್ಕೆ ಕ್ಷಣಕಾಲ ಅಪ್ರತಿಭನಾದ : ಧೋಂಡೋಬಾ ಶಿಂಫಿಯ ಹೆಂಡತಿಗೊಮ್ಮೆ (ಇನ್ನೊಮ್ಮೆ ಸಿಕ್ಕಾಗ ಅವಳ ಹೆಸರನ್ನು ಕೇಳಬೇಕು) ಬನಿಯನ್, ಅಂಗಿ ತೊಟ್ಟಿರದ ಬರಿಮೈಯನ್ನು ತೋರಿಸಿ ನೋಡಬೇಕು_ಪರಿಣಾಮ ಏನಾಗುತ್ತದೆಯೋ ಎಂದು ! ಬಂದ ವಿಚಾರಕ್ಕೇ ನಕ್ಕುಬಿಡಬೇಕು ಎಂದೆನ್ನಿಸಿದರೂ ಬನಿಯನ್ ಅಂಗಿ ಕಳಚಿ ನಿಂತಾಗ ಇದಿರು ನಿಂತವಳು ಮೇರಿ ಇಲ್ಲವೆ ಡಾಯನಾ ಇಲ್ಲವೆ ಥ್ರೀಟೀ ಆಗಿದ್ದರೆ ಎಂಬ ವಿಚಾರ ಬಂದಾಗ ನಗುವದು ಸಾಧ್ಯವಾಗಲಿಲ್ಲ….ತಾನು ಇಷ್ಟು ದಿನ ಎಷ್ಟೊಂದು ಧೈರ್ಯದಿಂದ ಇದಿರಿಸಲು ಪ್ರಯತ್ನಿಸಿದ ತನ್ನ ಇತಿಹಾಸ ಕೂಡ ಇಂದು ಏಕಾ‌ಏಕೀ ತನ್ನನ್ನು ಶಿಕಾರಿಯಾಡುವ ಫಿರೋಜನ ತಂಡವನ್ನು ಸೇರಿಬಿಟ್ಟಿದೆ ಎಂಬಂತಹ ಅನ್ನಿಸಿಕೆಯಿಂದ ಮೈ ಬಿಸಿಯಾಗಿ ಇನ್ನೊಮ್ಮೆ ಸ್ನಾನ ಮಾಡುವ ಮನಸ್ಸಾಯಿತು. ಆದರೆ ಸ್ನಾನಕ್ಕೆಂದು ಶೇಖರಿಸಿಟ್ಟ ನೀರು ತೀರಿಹೋಗಿತ್ತು. ಮೇರಿಯೊಡನೆಯಾಗಲೀ, ಡಾಯನಾ ಥ್ರೀಟಿಯರೊಡನೆಯಾಗಲೀ, ದೀರ್ಘಕಾಲದ ಗೆಳೆತನ ಬೆಳೆಸುವ ಯೋಗ್ಯತೆ ತನಗಿಲ್ಲ. ಅನ್ನಿಸಿತು : ಹೀಗೇ_ಆಕಸ್ಮಿಕವಾಗಿ ವಿಮಾನದಲ್ಲಿ ಭೆಟ್ಟಿಯಾದಾಗ ಇಲ್ಲ, ಒ‌ಆ ಯವರ ಕೋಣೆಗೆ ಹೋಗುವಾಗ ಕಣ್ಣಿಗೆ ಬಿದ್ದಾಗ ಊeಟಟo ಎಂದು ತನ್ನ sತಿeeಣ sಚಿಜ ಜಿಚಿಛಿe ಬಗ್ಗೆ ಅನುಕಂಪ ತೋರಿಸಿ ಮುದ್ದಾಡುವ ಈ ಣಡಿಚಿಟಿsieಟಿಣ ಜಿಡಿieಟಿಜshiಠಿ ಅಷ್ಟೇ ತನ್ನ ಪಾಲಿನ ಭಾಗ್ಯ…. ರಾಣಿ ಒಬ್ಬಳು ಮಾತ್ರ ತನ್ನ ಇಡೀ ದೇಹವನ್ನು ನೋಡಿಯೂ ಒಮ್ಮೆಯೂ ಜಿಗುಪ್ಸೆಪಟ್ಟವಳಲ್ಲ. ಅವಳನ್ನು ನೋಡಬೇಕು ಎಂದು ಎಷ್ಟು ಸರತಿ ಅನ್ನಿಸಿದರೂ ಕೊನೆಯ ಗಳಿಗೆಯಲ್ಲಿ ತನಗೆ ಅರ್ಥವಾಗದ್ದೇನೋ ಅಡ್ಡ ಬರುತ್ತಿದೆ….ನಾಳೆ ಅವಳಿಗೆ ಇನ್ನೂರು ರೂಪಾಯಿ ಒ.ಔ. ದಿಂದ ಕಳಿಸಬೇಕು….

ಹೀಗೇ ಚೌಪಾಟಿಯವರೆಗೆ ಹೋಗಿಬರಬೇಕು ಎಂದುಕೊಂಡು ಹೊರಗೆ ಹೋಗುವ ತಯಾರಿಗೆ ತೊಡಗಿದ. ನಾಳೆ ರಾಣಿಗೆ ಒ.ಔ. ಮಾಡಲು ಹೋದಾಗ ಬ್ಯಾಂಕಿಗೆ ಹೋಗಿ ತನ್ನ ಪಾಸ್‌ಬುಕ್ ಹೊಂದಿಸಿಕೊಂಡು ಬರಬೇಕು : ಖಾತೆಯಲ್ಲಿ ಎಷ್ಟು ಹಣವಿದೆಯೆನ್ನುವುದು ಗೊತ್ತಾದೀತು. ನಾಳೆ ಫೈನಾನ್ಸ್ ಡಿಪಾರ್ಟ್‌ಮೆಂಟಿಗೆ ಫೋನ್ ಮಾಡಿ ತನ್ನ ಖಾತೆಗೆ ಜಮಾ ಆದ ಪ್ರಾವಿಡೆಂಟ್ ಫಂಡಿನ ಅಂಕೆ ಎಷ್ಟೆಂಬುದು ಕೇಳಿ ತಿಳಿಯಬೇಕು. ಹದಿನೆಂಟು ವರ್ಷಗಳ ನೌಕರಿಯೆಂದಮೇಲೆ ಗ್ರೆಚ್ಯುಯಿಟಿ ಕೂಡ ಸಿಗಬೇಕು….ಮಧ್ಯದಲ್ಲೇ ತನ್ನ ವಿಚಾರಣೆಗೆ ಹರಿದ ದಿಕ್ಕಿನ ಅರಿವು ಬಂದದ್ದೇ ತನ್ನ ಬಗ್ಗೆ ತನಗೇ ಅನುಕಂಪ ಹುಟ್ಟಿ ತಡೆದ : ಖಂಬಾಟಾ ಕಾರು, ಪತ್ರ ಕಳಿಸದೇ ಇದ್ದುದರ ಅರ್ಥವೊಂದೇ : ಫಿರೋಜನ ಅಹಂಕಾರದ ನಿರ್ಣಯ : “೧೮ ವರ್ಷಗಳ ದೀರ್ಘ ಕಾಲಾವಧಿಯಲ್ಲಿ ಅನನ್ಯವಾದ ನಿಷ್ಠೆಯಿಂದ, ಧೀಶಕ್ತಿಯಿಂದ ಕಾರಖಾನೆಯನ್ನು ಇಂದಿನ ಭರಭರಾಟೆಯ ಸ್ಥಿತಿಗೆ ತಂದ ಅಸಾಧಾರಣ ಸೃಷ್ಟಿಶೀಲ ಪ್ರತಿಭೆಯ ನಾಗಪ್ಪ ಅಲಿಯಾಸ್ ನಾಗನಾಥ ಸಾಂತಯ್ಯ ಮಾಸ್ಪೇಕರ್_ವಯಸ್ಸು ೩೯. ಕಂಪನಿ ಸೇರಿದ್ದು ೧೯೫೦ರಲ್ಲಿ. ಆಗಿನ ಡೆಸಿಗ್ನೇಷನ್ : ಖeseಚಿಡಿಛಿh ಅhemisಣ. ಇವನನ್ನು ಇಂದಿನಿಂದ ಕೆಲಸದ ಮೇಲಿಂದ ತೆಗೆದುಹಾಕಲಾಗಿದೆ. ಕಾರಣ. ತನ್ನ ಪ್ರತಿಭೆಯ ಲಾಭವನ್ನು ಪಡೆಯುವ_ಎಲ್ಲ ಪ್ರೊಫೆಶನಲ್‌ಗಳಲ್ಲಿ ಇರಲೇಬೇಕಾದ_ಚಾಲಾಕು ಇವನಲ್ಲಿ ಎಳ್ಳಷ್ಟೂ ಇಲ್ಲದ್ದು”_ಸಹಿ ಮಾಡಿದವರು : ಫಿರೋಜ್ ಸೋರಾಬ್ಜೀ ಬಂದೂಕವಾಲಾ, ಆಕ್ಟಿಂಗ್-ಮ್ಯಾನೇಜಿಂಗ್ ಡೈರೆಕ್ಟರ್_ತಾರೀಖು….”

ಒಂದು ವಿಚಿತ್ರ ಗಳಿಗೆಯಲ್ಲಿ ಹುಟ್ಟಿಬಂದ ಈ ನೋಟೀಸು ಹೊತ್ತು ಹೋದಹಾಗೆ ಎಷ್ಟೊಂದು ವಾಸ್ತವತೆಯ ಸತ್ವ ಪಡೆಯಿತೆಂದರೆ, ತಾನು ಕಳೆದ ಎಂಟು ದಿನಗಳಿಂದ ಆಫೀಸಿಗೆ ಹೋಗದೇ ಹೀಗೆ ಮನೆಯಲ್ಲಿ ಮೂಲೆಗುಂಪಾಗಿ ಕೂತದ್ದು ನೌಕರಿಯನ್ನು ಕಳೆದುಕೊಂಡದ್ದಕ್ಕಾಗಿಯೇ ಎಂಬ ವಿಚಾರವನ್ನು ತಲೆಯಿಂದ ತೆಗೆದುಹಾಕುವದು ಅಸಾಧ್ಯವಾಯಿತು. ನೌಕರಿ ಹೋಗಿ ಎಂಟು ದಿನಗಳಾದರೂ ತಾನಿನ್ನೂ ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ವಿಚಾರವನ್ನೇ ಮಾಡಿಲ್ಲವಲ್ಲ ಎಂಬಂತಹ ಕಾತರದ ಭಾವನೆಯೊಂದು ಮನಸ್ಸಿನಲ್ಲಿ ನೆಲೆಸಹತ್ತಿತು : ಇನ್ನೊಂದು ಕಂಪನಿಯಲ್ಲಿ ನೌಕರಿಗಾಗಿ ಪ್ರಯತ್ನಿಸಲೇ ? ಕಷ್ಟವಾಗಲಿಕ್ಕಿಲ್ಲ. ಈಗಾಗಲೇ ತಾನು ಕಂಪನಿಯಲ್ಲಿ ಸಾಧಿಸಿದ್ದು ಕಂಪನಿಯ ಛಿomಠಿeಣiಣoಡಿs ಹಾಗೂ ಗ್ರಾಹಕರಿಗೆಲ್ಲ ಗೊತ್ತಾಗಿದೆ. ಅನೇಕ ಸೆಮಿನಾರುಗಳಲ್ಲಿ ತಾನು ಓದಿದ ಪೇಪರುಗಳ ಮೂಲಕ ಕೆಮಿಕಲ್ ಇಂಡಸ್ಟ್ರಿಯಲ್ಲಿ ತನ್ನ ಹೆಸರು ಪ್ರಸಿದ್ಧವಿದೆ, ಎನ್ನಿಸಿತು. ಎಲ್ಲಕ್ಕಿಂತ ಹೆಚ್ಚಾಗಿ ಅವನು ತುಂಬ ಸಮಾಧಾನ ಹಾಗೂ ಅಭಿಮಾನಪಟ್ಟ ಸಂಗತಿಯೆಂದರೆ ಅವನ ಹೆಸರಿನಲ್ಲಿ ದಾಖಲೆಯಾಗಿರುವ ಆರು ಪೇಟೆಂಟುಗಳು : ಅವನ ದೃಷ್ಟಿಯಲ್ಲಿ ಈ ಪೇಟೆಂಟುಗಳು ಸಾಮಾನ್ಯವಾದವುಗಳಾಗಿರಲಿಲ್ಲ. ಅವು ಒಳಗೊಂಡ ಶೋಧಗಳು ಉಚ್ಚದರ್ಜೆಯವಾಗಿದ್ದವು. ಒಂದು ಶೋಧವಂತೂ ‘ನ್ಯಾಶನಲ್ ಇನ್‌ವೆನ್ಯನ್ ಅವಾರ್ಡ್’ ಸಲುವಾಗಿ ಸ್ವತಃ ಒ‌ಆ ಅವರೇ ಸಹಿ ಮಾಡಿದ ಅರ್ಜಿಯ ಮುಖಾಂತರ ದಾಖಲೆಯಾಗಿತ್ತು. ಇನ್ನೊಂದು ಸಂತೋಷದ ಸಂಗತಿಯೆಂದರೆ _ಕಂಪನಿಯ ಜiveಡಿsiಜಿiಛಿಚಿಣioಟಿ ಕಾರ್ಯಕ್ರಮದಲ್ಲಿ ತಾನು ವಹಿಸಿದ್ದ ದೊಡ್ಡ ಪಾತ್ರ….ಆದರೆ ಇಷ್ಟು ಇದ್ದೂ ಎಲ್ಲ ಕಂಪನಿಗಳೂ ಒಂದೇ ! ಯಾಕೆಂದರೆ ಮನುಷ್ಯರೆಲ್ಲ ಒಂದೇ. ಇಲ್ಲ, ಕೆಲಸದ ದೃಷ್ಟಿಯಿಂದ ಈಗಿನ ಕಂಪನಿಗಿಂತ ಒಳ್ಳೆಯದಾದ ಕಂಪನಿಯಿರಲಾರದು. ಫಿರೋಜ್ ಯಾವ ಕಾರಣವೂ ಇಲ್ಲದೇನೇ ಹೀಗೆ ಹಗೆ ಕಾದದ್ದು ತನ್ನ ದುರದೃಷ್ಟ ! ಪುಸ್ತಕದ ಅಂಗಡಿ ? ಮೊದಲು ಸಿಗಬೇಕಲ್ಲ ! ಮುಂಬಯಿಯಂಥ ನಗರದಲ್ಲಿ ಪಾಗಡಿ ಕೊಟ್ಟಹೊರತು ಯಾವುದೂ ಸಾಧ್ಯವಿಲ್ಲ. ಸಾಹಿತ್ಯದ ಮೇಲೇ ಬದುಕಬಹುದೇ ? ಸ್ಟ್ರ್ಯಾಂಡ್ ಬುಕ್ ಸ್ಟಾಲಿನಲ್ಲಿ ಸೇಲ್ಸ್‌ಮನ್ ಆಗಿ ಕೆಲಸ ಮಾಡಿ ಬಿಡುವಿನ ವೇಳೆಯನ್ನು ಯಾವುದಾದರೂ ರಾಜಕೀಯ ಪಕ್ಷದ ಇಲ್ಲವೇ ಸಾಮಾಜಿಕ ಸಂಸ್ಥೆ ಸಂಘಗಳ ಕಾರ್ಯದಲ್ಲಿ ಹಾಕಿದರೆ ಹೇಗೆ ?… ನಾಗಪ್ಪನ ಮೋರೆಯ ಮೇಲೆ ವಿಷಾದ ತುಂಬಿದ ನಗು ಮೂಡಿತು : ರಾಜಕಾರಣ ತನ್ನ ಮನೋಧರ್ಮಕ್ಕೆ ಒಗ್ಗಿದ್ದೇ ಅಲ್ಲ. ಗಿಲ್ಬರ್ಟ ಅಷ್ಟಾಗಿ ಹೇಳಿದ ಚೆಶಾಯರ್ ಹೋಮ್‌ಗೆ ಹೋಗಿ ಅಲ್ಲಿಯ ರೋಗಿಗಳ ಅಪಂಗತ್ವವನ್ನು ನೋಡುವ ಧೈರ್ಯ ಕೊನೆಗೂ ಆಗದೇ ಇದ್ದಾಗ ೫೦೦ ರೂಪಾಯಿ ವಂತಿಗೆಯ ಚೆಕ್ ಕಳಿಸಿದ್ದ. ಅಷ್ಟೇ ! ತನ್ನ ಚೈತನ್ಯದ ಬೀಸೇ ದೊಡ್ಡದಲ್ಲ. ತನ್ನ ಸೀಮಿತ ಪ್ರತಿಭೆಗೆ ಸಾಧ್ಯವಾದ, ಸೀಮಿತ ಚೈತನ್ಯಕ್ಕೆ ದಕ್ಕಿದ ಒಂದೇ ಒಂದು ಕೆಲಸವೆಂದರೆ ಲೆಬೋರೇಟರಿಯಲ್ಲಿ ರಾಸಾಯನಿಕ ಶೋಧ. ಬಿಟ್ಟರೆ ಆಗೀಗ ಸಾಹಿತ್ಯ….

ಏನೋ ನೆನಪಾದವನ ಹಾಗೆ ತಲೆ ಕೊಡವಿ ಎದ್ದ : ಇಂತಹ ನೀರಿಲ್ಲದ ಹಳವಂಡಕ್ಕೆ ಎಡೆ ಕೊಡಬಾರದು. ನಾಳೆಯನ್ನು ಕುರಿತು ವಿಚಾರ ಮಾಡಲೇಕೂಡದು. ನಿನ್ನೆ ಖಂಬಾಟಾನ ಜೊತೆ ಮಾತನಾಡಿದ್ದು ಒಣ ಜಂಭವಾಗಲು ಬಿಡಬಾರದು. ಇಷ್ಟು ದೀರ್ಘಕಾಲ ಕೆಲಸಮಾಡಿದ ಒಬ್ಬ ನಿಷ್ಠಾವಂತ ಮ್ಯಾನೇಜರನನ್ನು ಕೆಲಸದಿಂದ ತೆಗೆದುಹಾಕುವದು ಸಣ್ಣ ಕೆಲಸವಲ್ಲ. ಅದರಲ್ಲೂ ಒ‌ಆ ಅವರು ತನ್ನ ಬೆನ್ನಿಗಿದ್ದಾಗ, ಈವತ್ತು ಖಂಬಾಟಾ ಬರದಿರಲಿಕ್ಕೆ ಬೇರೆಯೇ ಏನಾದರೂ ಕಾರಣವಿರಬಹುದು. ಅದರ ಬಗ್ಗೆ ಈಗ ವಿಚಾರಮಾಡುವದೇ ಬೇಡ, ಸದ್ಯ. ಎಲ್ಲಾದರೂ ಸುತ್ತಾಡಿಬರುವದು ಆರೋಗ್ಯಕರ. ಇಡೀ ದಿನ ನನ್ನ ಬಗೆಗೇ ವಿಚಾರಮಾಡಿ ತಲೆ ಸುನ್ನವಾಗಿದೆ. ಈಗ ಚೌಪಾಟಿಗೆ ಹೋಗಬೇಕು_ಕಾಲ್ನಡಿಗೆಯಲ್ಲೇ. ಎಂಟು ಗಂಟೆಗೆ ಸರಿಯಾಗಿ ಮೇರಿಗೆ ಫೋನ್ ಮಾಡುವದು. ಊಟಕ್ಕೆ ಚರ್ಚ್ ಗೇಟಿನ ‘ಗೇಲಾರ್ಡ್’ಗೇ ಹೋಗಬೇಕು. ಬಿಯರ್ ಕುಡಿಯಬೇಕು.

ಕನ್ನಡಿಯ ಮುಂದೆ ನಿಂತು ಕೂದಲು ಬಾಚಿಕೊಳ್ಳುತ್ತಿರುವಾಗ ಮೋರಿಯ ದಡಿಯ ಮೇಲಿಟ್ಟ ಚಹದ ಕಪ್ಪು-ಬಶಿ ಕಣ್ಣಿಗೆ ಬಿದ್ದವು. ಅವು ಶಿಂಪಿಯವರವಾಗಿದ್ದವು. ಹೊರಗೆ ಹೋಗುವಾಗ ಹಿಂದಿರುಗಿಸಿದರಾಯಿತು ಎಂದುಕೊಂಡು ಮೈಮೇಲೆ ನೀರು ಸಿಡಿಯದಂತೆ ಕಾಳಜಿ ವಹಿಸಿ ನಲ್ಲಿಯ ನೀರಿನಿಂದ ತೊಳೆದ. ಕೊನೆಯ ಗಳಿಗೆಯಲ್ಲಿ, ಈಗ ಬೇಡ, ಅವಳ ಗಂಡ ಅಂಗಡಿಯಿಂದ ಬಂದ ಮೇಲೇ ಕೊಟ್ಟಾರಾಯಿತು ಎಂದುಕೊಂಡು ತಿರುಗಿ ದಡಿಯ ಮೇಲೆ ಇಡಲು ಹೋದಾಗ ಕಪ್ಪು-ಬಶಿ ಸದ್ದುಮಾಡಿದವು. ಕದ ತೆರೆದು ಹೊರಗೆ ಕಾಲಿಡುವಾಗ ಬದಿಯ ಹೆಂಗಸು, ಬಾಗಿಲಲ್ಲಿ, ಇವನು ಹೊರಗೆ ಬರುವುದರ ಹಾದಿ ಕಾಯುತ್ತ ನಿಂತವಳ ಹಾಗೆ, ನಿಂತವಳು_ಅತಿ ತಗ್ಗಿದ ದನಿಯಲ್ಲಿ_”ಕಪ್ಪು-ಬಶಿ,” ಎಂದಳು. “ಇದೀಗ ತಂದೆ,” ಎಂದವನೇ ಒಳಗೆ ಹೋದ. ಕಪ್ಪು-ಬಶಿ ಸದ್ದು ಮಾಡಿದ್ದು ಅವಳಿಗೇ ಕೇಳಿಸಿರಬೇಕು ಎಂದುಕೊಳ್ಳುತ್ತ ಅವನ್ನು ಹಿಂದಿರುಗಿಸುವಾಗ ಮೋರೆಯ ಮೇಲೆ ತೆಳುವಾದ ಮುಗುಳುನಗೆ ಮೂಡಿತ್ತು. ಕಪ್ಪು-ಬಶಿ ಕೈಗೆ ತೆಗೆದುಕೊಳ್ಳುವಾಗ ಅವಳ ಬೆರಳುಗಳು ತನ್ನ ಬೆರಳುಗಳಿಗೆ ತಾಕಿದ್ದು ಆಕಸ್ಮಿಕವಲ್ಲವೇನೋ ಎಂದು ಗೊಂದಲಿಸಿದ. ಕೋಣೆಯ ಕದಗಳನ್ನು ಇಕ್ಕುವಾಗ ಇನ್ನೂ, ಬಾಗಿಲಲ್ಲಿ_ತುಸು ಓರೆ ಮಾಡಿಕೊಂಡು ಕದದ ಮರೆಗೆ_ನಿಂತವಳು. ಇವನು ಬೀಗ ಹಾಕಿ ಕಾರಿಡಾರಿನಲ್ಲಿ ತಿರುಗಿದ್ದೇ, ಕಣ್ಣುಗಳನ್ನು ಇಷ್ಟಗಲ ಅರಳಿಸುತ್ತ “ತಿರುಗಾಡಲು ಹೊರಟಿರಾ ?” ಎಂದು ಕೇಳಿದಳು. ಕೇಳಿದ್ದು ತನಗೆ ತಾನೇ ಅನುಮಾನಿಸುತ್ತ, “ಹೌದು” ಎಂದ. ನಿರುಪಾಯನಾದವನಂತೆ ಕೆಲಹೊತ್ತು ನಿಂತ. ಚಾಳಿನ ಉಳಿದೆಲ್ಲ ಮನೆಗಳ ಈ ಬದಿಯ ಕದಗಳು ಮುಚ್ಚಿಕೊಂಡಿದ್ದವು. ಮನೆಯಲ್ಲಿ ಇನ್ನಾರೂ ಇಲ್ಲದ್ದಕ್ಕೆ ಬೇಸರ ಬಂದಿರಬೇಕು. ಊಟ, ಚಹ ಕೊಟ್ಟ ಹೆಣ್ಣನ್ನು ಮಾತನಾಡಿಸದೇ ಹೋಗುವದು ಸೌಜನ್ಯವಲ್ಲ : “ಒಬ್ಬರಿಗೇ ಬೇಸರವೇನೋ ಅಲ್ಲವೆ ?” ಎಂದು ಕೇಳಿದಾಗ, “ಇವರಿಗೆ ರಾತ್ರೆ ಬರಲು ಹತ್ತು ಗಂಟೆ. ಕುಲಾಬಾ ದಿಂದ ಬರಬೇಕಂತೆ.” ಎನ್ನುತ್ತ ಇನ್ನೊಮ್ಮೆ ಕಣ್ಣರಳಿಸಿದಳು. ಅವುಗಳಲ್ಲಿಯ ಬೆಳಕಿಗೆ ಮಂತ್ರಮುಗ್ಧನಾದವನ ಹಾಗೆ_”ನಿಮ್ಮ ಹೆಸರನ್ನು ತಿಳಿಯಬಹುದೆ ?” ಎಂದು ಕೇಳಿದ. ಅವನ ದನಿ ಗೊಗ್ಗರಿಸಿದ್ದನ್ನು ಗಮನಿಸುತ್ತ,”ಜಾನಕೀ” ಎಂದಳು. ಖುಕ್ ಎಂದು ತಮಾಶಾದ ಹೆಣ್ಣಿನ ಹಾಗೆ ನಕ್ಕು ಬೆರಳು ಕಚ್ಚಿಕೊಂಡಳು. ಅರ್ಜುನ್‌ರಾವರ ಮನೆಯ ಕದ ತೆರೆಯುತ್ತಿದ್ದ ಸದ್ದು ಕೇಳಿಸಿ, “ಹೀಗೇ ಹೊರಗೆ ಹೋಗಿ ಬರುತ್ತೇನೆ,” ಎಂದವನೇ ಅಲ್ಲಿಂದ ಹೊರಟ. ‘ಬೇಗ ಬನ್ನಿ’ ಎಂದಂತೆ ಕೇಳಿಸಿತೆ ? ಎಂದು ಅನುಮಾನಿಸುತ್ತ ನಿಚ್ಚಣಿಕೆಯ ದಿಸೆಯಲ್ಲಿ ಹೆಜ್ಜೆ ಹಾಕಹತ್ತಿದ. ಹೊಸತೇ ಒಂದು ಸಂಬಂಧ, ಅನಪೇಕ್ಷಿತ ಗಳಿಗೆಯಲ್ಲಿ, ಅನೂಹ್ಯ ರೀತಿಯಲ್ಲಿ ಅಂಕುರಿಸಹತ್ತಿತ್ತು. ಮಾಳಿಗೆಯ ಮೆಟ್ಟಿಲ ಮೇಲೆ ಹೆಜ್ಜೆ ಎಡವಿದಾಗ ಸಾವರಿಸಿಕೊಳ್ಳಲು ನಿಚ್ಚಣಿಕೆಯ ರೇಲಿಂಗಿಗೆ ಕೈಯೊಡ್ಡಿದ : ನೇರವಾಗಿ ಹತ್ತಿರ ಕರೆಯುವ ಸಂಬಂಧವಿದು_ಮಾತೇ ಇಲ್ಲದ್ದು, ಮೆದುಳೇ ಇಲ್ಲದ್ದು. uಟಿಜeಜಿiಟಿeಜ
– ಅಧ್ಯಾಯ ಇಪ್ಪತ್ತೇಳು –

ಚೌಪಾಟಿಯ ಸಮುದ್ರವನ್ನು ಕಂಡು ಎಷ್ಟು ವರ್ಷಗಳಾದವು ?_ನಾಗಪ್ಪನಿಗೆ ನೆನಪಿಲ್ಲ. ದಂಡೆಯ ಉಸುಕಿನಲ್ಲಿ ಕೂತು ಸಮುದ್ರದ ನೀರನ್ನೂ, ಸುತ್ತಲೂ ನೆರೆಯಹತ್ತಿದ ಜನಸಮುದಾಯವನ್ನೂ ನೋಡುವಾಗಲೂ ಎಂಟೂದಿನ ಸತತವಾಗಿ ಅಂತರ್ಮುಖವಾದ ಮನಸ್ಸು ಹೊರಗೆ ಬರಲಿಕ್ಕೇ ನಿರಾಕರಿಸುತ್ತಿತ್ತು : ಏಕೋ ಈ ಕೊನೆಯಿಲ್ಲದ ಪ್ರತೀಕ್ಷೆಯೇ ತನ್ನನ್ನು ಮಾನಸಿಕವಾಗಿ ಮುರಿಯುತ್ತಿದೆ ಎನ್ನಿಸಿತು. ಇದೆಲ್ಲ ಯಾಕೆ ? ಎಲ್ಲರನ್ನು ಬಿಟ್ಟು ನಿರುಪದ್ರವಿಯಾದ ತನಗೇ ಯಾಕೆ ? ಎಲ್ಲ ಬಿಟ್ಟು ಈಗ ಯಾಕೆ ? ಇದೆಲ್ಲದರ ಸೋಕ್ಷಮೋಕ್ಷ ಯಾವಾಗ ? ಈ ಎಂಟು ದಿನಗಳಲ್ಲಿ ಒಬ್ಬರೂ ತನ್ನನ್ನು ಭೆಟ್ಟಿಯಾಗಲು ಬಂದಿಲ್ಲ_ಒಂದೂಮಗ ಖಂಬಾಟಾನನ್ನು ಬಿಟ್ಟು, ಮೇರಿಯ ಕೂಡ ಮಾತನಾಡಿದ್ದೆ_ಬರೇ ಫೋನಿನ ಮೇಲೆ ಹೀಗೆ ಜನಸಂಪರ್ಕವನ್ನು ಕಳಕೊಂಡ ಮನಸ್ಸು ಒಂದೋ ನೋವು ತುಂಬಿದ ಭೂತಕಾಲಕ್ಕೆ ಇಲ್ಲ. ಹೆದರಿಸುವ ಭವಿಷ್ಯತ್ತಿಗೆ ಕೈಚಾಚಿ ದಣಿಯುತ್ತದೆ….

ಧೋಂಡೋಬಾನ ಹೆಂಡತಿ ಜಾನಕಿ ನೆನಪಿಗೆ ಬರಹತ್ತಿದಳು. ಹಿಂದುಮುಂದಿನ ವಿಚಾರವಿಲ್ಲದೇ ಇದೀಗಿನ ಗರಜಿನಲ್ಲಷ್ಟೇ ಹುಟ್ಟುವ ಸಂಬಂಧವಿದು : ಅಳೆಯುವ ಮಾನದಂಡಗಳು ಎರಡೇ_ತೃಪ್ತಿ, ಅತೃಪ್ತಿ. ಇದಾಗಲೇ ಪಡೆದ ಕೀರ್ತಿಯ ಸುತ್ತ, sತಿeeಣ, sಚಿಜ, buಣ bಡಿiಟಟiಚಿಟಿಣ ಕಣ್ಣುಗಳ ಸುತ್ತ, ಮಾತನಾಡುವ ಕಲೆಯ ಸುತ್ತ ಹುಟ್ಟಿಕೊಳ್ಳುವ ಸುಳ್ಳಿನ ಕಂತೆಪುರಾಣಗಳು ಇಲ್ಲಿ ಹುಟ್ಟಲಾರವು. ಜೀವವಿಕಾಸದ ಆದಿಯಿಂದಲೇ ಹುಟ್ಟಿಕೊಂಡ ಈ ಎಳೆತದ ಪರಿಧಿಯಲ್ಲಿ “ಯಾಕೆ ?” ಎಂಬ ಪ್ರಶ್ನೆ ಕೂಡ ಏಳಲಾರದು : ಪ್ರಶ್ನಾತೀತವಾದದ್ದಿದು. ತನ್ನ ಸಮಸ್ಯಯೋ ಮೂಲಭೂತವಾದ ಪ್ರಶ್ನೆಯಲ್ಲೇ ಹುಟ್ಟಿದ್ದು : ಯಾಕೆ ಬದುಕಿರಬೇಕು ? ಯಾಕಾದರೂ ಬದುಕಿರಬೇಕು ? ಅಪ್ಪ ಹುಡುಕಿಕೊಂಡ ದಾರಿ ಯಾಕೆ ಕೆಟ್ಟದ್ದು ? ಎಂದು ಕೇಳುವ ವಿವೇಕ ಕೂಡ ಆ ಕೊನೆಯ ಗಳಿಗೆಯ ಈಚೆಯದು ; ಈಚೆ ನಿಂತವರು ತಮ್ಮ ಸ್ಥಾನಿಕ ಮಾನದಂಡಗಳಿಂದ ಅಳೆದದ್ದು. ಆಲ್ಬರ್ಟ ಕಮೂ ಹೇಳಿದಂತೆ ನಿಜವಾದ ತಾತ್ವಿಕ ಪ್ರಶ್ನೆಯೊಂದೇ : ಆತ್ಮಹತ್ಯೆ, ತನ್ನ ಮಟ್ಟಿಗಂತೂ ! ಸಾಯುವ ಆದೇಶವನ್ನು ಹೊತ್ತೇ ಬೆಳೆದ ಮಗು ತಾನು. ತಾನು ಮಾಡಲಿದ್ದುದರ ಪ್ರಸ್ತುತತೆ ಒಂದರಿಂದಲೇ ನಿಶ್ಚಿತವಾಗಬೇಕು_ತನ್ನ ವೈಯಕ್ತಿಕ ಇರವಿನ ಪ್ರಸ್ತುತತೆಯಿಂದ, ಇದಿರು ಕುಳಿತ ಈ ವಿಶಾಲ ನೀರಿನ ಹೊಟ್ಟೆಯನ್ನು ಸೇರಿ ಎಲ್ಲ ಯಾತನೆಯನ್ನೂ ಮುಗಿಸಿಬಿಡಬಹುದು. ಯಾರಿಗೂ ಯಾವ ಹಾನಿಯೂ ಆಗಲಾರದು. ಈ ವಿಚಾರ ಕೂಡ ಸಾವಿನ ಈಚೆಯ ಸರಹದ್ದಿನದು.ತನ್ನ ಯಾತನೆಯ ಮೂಲವೇ ಇಲ್ಲಿದೆ ಅನ್ನಿಸಿತು : ಮೂಲಭೂತವಾದ ಪ್ರಶ್ನೆಗಳನ್ನು ಕೇಳುವ ಈ ಪ್ರಜ್ಞೆಯಲ್ಲಿ ! ಜಾನಕಿಗೆ ಇಲ್ಲವೇ ಇಲ್ಲ ಈ ಪ್ರಶ್ನೆಗಳ ಜಂಜಾಟ, ಬದುಕಿನಿಂದ ಬೇಡುತ್ತಿದ್ದದ್ದು ಉತ್ತರಗಳನ್ನಷ್ಟೇ. ಖೇಮರಾಜಭವನದ ಆಯ ಆಕಾರಗಳಿಲ್ಲದ ಜನಜಂಗುಳಿಗೆ ದಾದುಮಾಡುವ ಹೆಣ್ಣೇ ಅಲ್ಲವಿದು : ತನಗೇ ಅರಿವಿಲ್ಲದೇ ಆತ್ಮಘಾತದ ವಿಚಾರದಲ್ಲಿ ತೊಡಗಿದ ನಾಗಪ್ಪನನ್ನು ಬದುಕಿನ ಸರಹದ್ದನ್ನು ದಾಟದಂತೆ ತಡೆಹಿಡಿಯುವ ಶಕ್ತಿಯ ಪ್ರತೀಕಗಳ ಹಾಗೆ_ಅಡ್ಡವಾದ ಕದದ ಮರೆಯಿಂದ ತನ್ನನ್ನೇ ನೋಡುತ್ತಿದ್ದ_ಜಾನಕಿಯ ಇಷ್ಟಗಲವಾದ ಕಣ್ಣುಗಳು ನಾಗಪ್ಪನ ಇದಿರು ನಿಂತವು. ಅವು ವ್ಯಕ್ತಪಡಿಸುತ್ತಿದ್ದುದನ್ನು ಹಿಡಿಯುವ ಶಬ್ದ ಮಾನವಭಾಷೆಯಲ್ಲಿ ಹುಟ್ಟಿಲ್ಲವೇನೋ ! ಶಬ್ದಗಳಲ್ಲಿ ಹಿಡಿಯಲು ಹೋಗಿ ಅದನ್ನು ಕೆಡಿಸಬಾರದು ಎಂದುಕೊಂಡು ಸುಮ್ಮನಾದ. ಇದಿರಿನ ಪುರಾತನ ನೀರಿನ ರಾಶಿಯನ್ನು ನೋಡುತ್ತ ಕುಳಿತ_ಯಾವ ಆಸೆ ಆಕಾಂಕ್ಷೆಗಳಿಲ್ಲದೇನೆ. ಈ ಸಮಾಧಿಯಿಂದ ಎಚ್ಚರವಾದದ್ದು ದೂರದ ಕ್ಲಾಕ್‌ಟವರಿನ ದೊಡ್ಡ ಗಡಿಯಾರ ಎಂಟು ಗಂಟೆಯ ದನಿ ಮೊಳಗಿಸಿದಾಗ.

ಕಡಲತೀರದ ಇಷ್ಟೆಲ್ಲ ಗೌಜು ಗುಲ್ಲಿನಲ್ಲಿ ಕೂಡ ಗಡಿಯಾರದ ಗಂಟೆಯೇ ಏಕೆ ಕೇಳಿಸಿತು ? ಎಂದು ಆಶ್ಚರ್ಯಪಡುತ್ತಿರುವಾಗಲೇ ಭಡಕ್ಕನೆ ಎದ್ದು ಇದಿರಿನ ಇರಾಣೀ ಅಂಗಡಿಯಲ್ಲಿ ಟೆಲಿಫೋನ್ ಇರಬಹುದಲ್ಲವೇ ಎಂದುಕೊಂಡು ಅತ್ತ ನಡೆಯಹತ್ತಿದ. ಎಂದಿನಂತೆ ಎದೆ ಡವಗುಟ್ಟಲಿಲ್ಲ. ಮೇರಿ ಏನು ಹೇಳಬಹುದು ? ತಾನು ಏನು ಕೇಳಬಹುದು ? ಮೇರಿ ಮನೆಯಲ್ಲಿರಬಹುದೇ ?_ಯಾವುದರ ಬಗೆಗೂ ಊಹಾಪೋಹ ನಡೆಯಲಿಲ್ಲ. ಇರಾಣೀ ಅಂಗಡಿಯಲ್ಲಿ ಟೆಲಿಫೋನ್ ಇತ್ತು. ಆದರೆ ತನಗಿಂತ ಮೊದಲೇ ಬಂದ ಮೂವರು ಕ್ಯೂದಲ್ಲಿ ನಿಂತಿದ್ದರು. ಎಲ್ಲರೂ ಕಾಲೇಜ್ ಹುಡುಗರಂತೆ ಕಂಡರು. ಗಲ್ಲೆಯಲ್ಲಿ ಕೂತ ಇರಾಣಿಯ ದೊಡ್ಡ ಮೂಗನ್ನು ನೋಡುತ್ತಿದ್ದಂತೆ ಫಿರೋಜನ ಮೂಗಿನ ರಮ್ಯ ಪ್ರವಾಸಕಥನದ ನೆನಪಾಗಿ ಮೋರೆಯ ಮೇಲೆ ನಗು ಮೂಡಿತು. ತನ್ನನ್ನು ಕಂಡು ನಕ್ಕ ಎಂದು ತಪ್ಪು ತಿಳಿದ ಇರಾಣಿ ತಾನೂ ನಕ್ಕ. ಅವನೊಡನೆ ಗೆಳೆತನ ಬೆಳೆಸುವ ಇರಾದೆಯಿಂದೆಂಬಂತೆ ಇಲ್ಲಿ ಟೆಲಿಫೋನ್ ಚಾರ್ಜು ಎಷ್ಟು ಎಂದು ಕೇಳಿದಾಗ_ಎಂಟಾಣೆ ಎಂದ. ಈ ಇರಾಣಿಗಳು ಎಲ್ಲ ಬಿಟ್ಟು ಈ ದೇಶದಲ್ಲಿ ಚಹದಂಗಡಿಗಳನ್ನು ಹೇಗೆ ತೆರೆದರೋ : ಮಾರ್ಬಲ್ಲಿನ ಗೋಲಾಕಾರದ ಟೇಬಲ್ ಟಾಪ್ಸ್. ಉರುಟುರುಟಾದ ಕೈಗಳುಳ್ಳ, ಕಪ್ಪುಬಣ್ಣದ ಕುರ್ಚಿಗಳು, ಆಳೆತ್ತರ ಕನ್ನಡಿಗಳನ್ನು ಹಚ್ಚಿದ ಕಂಬಗಳು, ಗೋಡೆಗಳಿಗೆ ಹಚ್ಚಿದ ಕಾಚಿನ ಕದಗಳುಳ್ಳ ಕಪಾಟುಗಳಲ್ಲಿ_ಇವು ಯಾವಾಗಲಾದರೂ ಮಾರಿಹೋದಾವೋ ಅನ್ನಿಸಹಚ್ಚುವ_ಬಿಸ್ಕೀಟು, ಟಾಫೀ, ಸಿಗರೇಟು-ಡಬ್ಬಿಗಳು : ಬ್ರಿಲ್‌ಕ್ರೀಮ್, ಹೆರಾಯ್ಲ್ ಬಾಟಲಿಗಳು, ರೆಸ್ಟೋರೆಂಟಿನಲ್ಲಿ ಬಹಳ ಜನರಿದ್ದಿರಲಿಲ್ಲ. ಕೂತವರಲ್ಲಿ ಹಲವರು ಬರೇ ಚಹಾ ಕುಡಿಯುತ್ತಿದ್ದರೆ ಕೆಲವರ ಮುಂದಿನ ಬಶಿಗಳಲ್ಲಿ ಖಾರೀಬಿಸ್ಕೀಟುಗಳಿದ್ದವು. ಪ್ರತಿಯೊಂದು ಟೇಬಲ್ ಮೇಲೆ ಕಾಚಿನ ಭರಣಿಗಳಲ್ಲಿ ಬಿಸ್ಕೀಟುಗಳನ್ನು ತುಂಬಿಟ್ಟಿದ್ದರು. ಗಿರಾಕಿ ಬೇಡಿದವುಗಳನ್ನು ಇದಿರಿನ ಭರಣಿಯಿಂದಲೇ ತೆಗೆದು ಗಿರಾಕಿಯ ಬಶಿಯಲ್ಲಿಡುತ್ತಿದ್ದ ವೇಟರ್ ! ಪಠಾಣೀ ಶೈಲಿಯ ಸುರುವಾಲ್, ಉದ್ದ ಬಿಳಿಯ ಅಂಗಿ, ದೊಡ್ಡ ಮೀಸೆ, ಇವುಗಳಿಂದ ಕಣ್ಣುತುಂಬುವ ಒಬ್ಬನೇ ಒಬ್ಬ ವೇಟರ್ ಎಲ್ಲ ಗಿರಾಕಿಗಳ ದೇಖರೇಖಿ ನೋಡುತ್ತಿದ್ದ. ಜರೂರಿ ಬಿದ್ದಾಗ ಗಲ್ಲೆಯಲ್ಲಿ ಕೂತ ಯಜಮಾನ ಇರಾಣಿ ತಾನೇ ಹೋಗಿ ವಿಚಾರಿಸುತ್ತಿದ್ದ. ಗಿರಾಕಿಗಳಲ್ಲಿ ಒಬ್ಬರೂ ತನ್ನ ಪರಿಚಯದವರಿರಲಿಲ್ಲ….

ಟೆಲಿಫೋನ್ ಮಾಡುವ ಸರದಿ ಬಂದಾಗ ಗಲ್ಲೆಯಲ್ಲಿಯ ಇರಾಣಿ ಎಚ್ಚರಿಸಿದ. ಟೆಲಿಫೋನ್ ರಿಸೀವರನ್ನು ಕೈಗೆತ್ತಿಕೊಂಡಾಗ ತನ್ನ ಹಿಂದೆ ಕ್ಯೂ ಇಲ್ಲದ್ದನ್ನು ನೋಡಿ ಸಮಾಧಾನವೆನಿಸಿತು. ನಂಬರ್ ಡಾಯಲ್ ಮಾಡಿದಾಗ ಫೋನ್ ಮೇಲೆ ಬಂದವಳಿಗೆ_Is ಣhಚಿಣ Zಚಿಡಿiಟಿ ?” ಎಂದು ಕೇಳಿದ. “ಔh ! gooಜ eveಟಿiಟಿg, ಒಡಿ. ಓಚಿgಟಿಚಿಣh. ಠಿಟeಚಿse ತಿಚಿiಣ, I ತಿiಟಟ ಛಿಚಿಟಟ ಒಚಿಡಿಥಿ.” ಎಂದವಳೇ ಅವಳು ಮೇರಿಯ ಹೆಸರನ್ನು ಹಿಡಿದು ಕೂಗಿದ್ದು, ನಾಗನಾಥ್ ಫೋನ್ ಮೇಲೆ ಬಂದಿದ್ದಾರೆ ಎಂದು ಹೇಳಿದ್ದು ನಾಗಪ್ಪನಿಗೆ ಸ್ಪಷ್ಟವಾಗಿ ಕೇಳಿಸಿತು. ಮೇರಿ ಫೋನ್ ಮೇಲೆ ಬರುವುದರ ಹಾದಿ ಕಾಯುವಾಗ ತನ್ನ ಮನಸ್ಸಿನಲ್ಲಿ ಯಾವುದೇ ಬಗೆಯ ಕ್ಷೋಭೆ ಇಲ್ಲದ್ದಕ್ಕೆ ಆಶ್ಚರ್ಯವಾಗಲಿಲ್ಲ ; ಅವಳು ನಿನ್ನೆ ಹೋದದ್ದು ತನ್ನ ವೈರಿಯಾದ ಫಿರೋಜನ ಪಾರ್ಟಿಗೇ. ಈಗ ಫೋನ್ ಮಾಡುತ್ತಿದ್ದದ್ದು ಸಂಶಯನಿವಾರಣೆಗಾಗಿ_ಅಷ್ಟೇ. ಮೇರಿ ಫೋನ್ ಎತ್ತಿಕೊಂಡಳು :

“ಹಲೋ ನಾಗ್, ಹ್ಯಾಗೆ ಇದ್ದೀಯಾ ? ನಿನ್ನೆ ನೀನು ಫೋನ್ ಮಾಡಿದ್ದು ಝರೀನಳಿಂದ ತಿಳಿಯಿತು. ಈವತ್ತು ಆಫೀಸಿಗೆ ಹೋಗಲಿಲ್ಲ. ಒಂದು ದಿನದ ರಜೆ ಪಡೆದು ಮನೆಯಲ್ಲೇ ಇದ್ದೇನೆ. ಇಡೀ ದಿನ ನಿನ್ನ ಫೋನಿನ ಹಾದಿ ಕಾದೆ. ಝರೀನ್ ಹೇಳಿರಬೇಕು ನಾವು ಪಾರ್ಟಿಗೆ ಹೋದದ್ದು. ಆo ಥಿou ಞಟಿoತಿ ತಿhಚಿಣ ಣime ತಿe ಡಿeಣuಡಿಟಿeಜ ? ಒಚಿಞe ಚಿ guess_ ಬೆಳಗಿನ ಒಂದು ಗಂಟೆಗೆ ! ಫಿರೋಜ್ ತುಂಬ ತುಂಬ ಖುಶಿಯ ಮೂಡಿನಲ್ಲಿದ್ದ. ಸ್ವತಃ ತನ್ನ ಕಾರಿನಲ್ಲೇ ನಮ್ಮ ಜೊತೆಗೆ ಮನೆತನಕ ಬಂದು ಬಿಟ್ಟು ಹೋದ. ಊe ತಿಚಿs so sತಿeeಣ ಣo us giಡಿಟs ಣhಡಿoughouಣ ಣhe eveಟಿiಟಿg. ಪಾರ್ಟಿ ತಾಜಮಹಲಿನ ಕ್ರಿಸ್ಟಲ್‌ರೂಮಿನಲ್ಲಿತ್ತು. ನಾಲ್ವತ್ತಕ್ಕೂ ಮಿಕ್ಕಿ ಜನ ಇತ್ತು_ಗಂಡು ಹೆಣ್ಣುಗಳು ಕೂಡಿ.ಎಲ್ಲ ಫಿರೋಜನ ಗೆಳೆಯರೇ ಅಂತೆ. ಕೆಲವು ಕಸ್ಟಮರರೂ ಇದ್ದರು. ಒಂದಿಬ್ಬರು ನಿನ್ನ ಬಗ್ಗೆ ಕೇಳಿದರು. ಂಟಟ veಡಿಥಿ soಠಿhisಣiಛಿಚಿಣeಜ ಛಿಡಿoತಿಜ, ಥಿou see…. ಈ ಫಿರೋಜನಿಗೆ ಮುಂಬಯಿಯಲ್ಲಿ ಇಷ್ಟೊಂದು ಜನ ಗೆಳೆಯರಿದ್ದದ್ದು ಗೊತ್ತೇ ಇರಲಿಲ್ಲ ನೋಡು. ಂಟಿಜ ತಿhಚಿಣ ಛಿhಚಿಡಿmiಟಿg hosಣ ! ನಾನು ಸ್ವತಃ ಒ‌ಆ ಯವರ ಸೆಕ್ರೆಟರಿಯಾಗಿದ್ದರೂ ಇಂತಹ ಒಂದು ಪಾರ್ಟಿಗೂ ಕರೆದಿರಲಿಲ್ಲ. I ಜಿeಟಣ veಡಿಥಿ ಚಿಟಿgಡಿಥಿ ತಿiಣh him. ಆಫೀಸಿನಿಂದ_ಅಂದರೆ ಮುಂಬಯಿಯ ಆಫೀಸಿನಿಂದ ನಾನೊಬ್ಬಳೇ_ನಂಬುವೆಯಾ ? ಆoಟಿ’ಣ ಜಿeeಟ ರಿeಚಿಟous_I ಚಿಟmosಣ ಜಿeeಟ iಟಿ ಟove ತಿiಣh him ಜಿoಡಿ ಣhe mosಣ eಟಿಛಿhಚಿಟಿಣiಟಿg ತಿಚಿಥಿ iಟಿ ತಿhiಛಿh he iಟಿviಣeಜ me. ಹೇಳಲು ಮರೆತೆ : ನಾನೊಬ್ಬಳೇ ಅಂದರೆ ಜ್ಯೂನಿಯರ್ ಸ್ಟಾಫಿನಲ್ಲಿ ಮಾತ್ರ. ಯಾಕೆಂದರೆ ಖಂಬಾಟ ಹಾಗೂ ಅವನ ಹೆಂಡತಿ ಕೂಡ ಬಂದಿದ್ದರು. ಶಿರೀನ್ ಎಂದಿನಂತೆಯೇ ತಿಚಿs ಚಿ sತಿeeಣ souಟ…. She eಟಿquiಡಿeಜ ಚಿbouಣ ಥಿou bಥಿ ಣhe ತಿಚಿಥಿ…. ರಾಮಕೃಷ್ಣ_ಣhಚಿಣ ಜiಡಿಣಥಿ ಡಿogue ! ಅವನ ನಡತೆಯನ್ನು ಎಂದೂ ಕ್ಷಮಿಸಲಾರೆ. ಕುಡಿದಿರಬೇಕು….ಣhಚಿಣ ಟಿಚಿsಣಥಿ guಡಿಥಿ…. ಹೌದು, ಪಾರ್ಟಿಗೆ ಕೊಕ್‌ಟೇಲ್ಸ್ ಆಂಡ್ ಡಿನ್ನರ್. ನಮ್ಮ ಒ‌ಆ ಯವರ ಮಾತುಗಳನ್ನು ಕೇಳಿಯೇ ನಾನು ಫಿರೋಜನ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡಿದ್ದೆ. ಆದರೆ ನಿನ್ನೆಯ ಪಾರ್ಟಿ ಅವನ ಬಗೆಗಿನ ವಿಚಾರಗಳನ್ನು ಸಂಪೂರ್ಣವಾಗಿ ಬದಲಿಸಿಬಿಟ್ಟಿತು, ನೋಡು. I ಛಿಚಿಟಿ’ಣ beಟieve he is ಜಿiಜಿಣಥಿ ಥಿeಚಿಡಿs…. ನಿನ್ನೆ ಅವನು ತೊಟ್ಟ ಕ್ರೀಮ್-ಕಲರ್ ಟ್ರೌಜರ್ ಹಾಗೂ ಅಚ್ಚನೀಲೀ ಬಣ್ಣದ ಬುಶ್‌ಶರ್ಟಿನಲ್ಲಂತೂ ಎಷ್ಟೊಂದು ಆಕರ್ಷಕನಾಗಿ ಕಂಡನಂತೀ_ಡಾಯನಾ ಅಂತೂ ಅವನನ್ನು ಇಡೀ ದಿನ ಹೊಗಳಿದೇ ಹೊಗಳಿದ್ದು. She ಜಿeeಟ ಜಿoಡಿ him heಚಿಜ oveಡಿ heeಟs_ಥಿou see ತಿhಚಿಣ I meಚಿಟಿ ! ನಂಬುತ್ತೀಯಾ ? ನಾನು ಮತ್ತು ಡಾಯನಾ ಇದ್ದಲ್ಲಿ ಒಮ್ಮೆ ಬಂದು_Whಚಿಣ ಚಿಡಿe ಥಿou suಛಿh ಛಿhಚಿಡಿmiಟಿg giಡಿಟs ಜoiಟಿg heಡಿe ? ಠಿಟeಚಿse go ಚಿಟಿಜ meeಣ ಣhe oಣheಡಿs. ಖಿheಡಿe ಚಿಡಿe so mಚಿಟಿಥಿ ಥಿouಟಿg meಟಿ ಎನ್ನುತ್ತ ನನ್ನ ಎರಡು ಕೈಗಳನ್ನೂ ತನ್ನ ಕೈಗಳಲ್ಲಿ ತೆಗೆದುಕೊಳ್ಳುತ್ತ_ಚಿಟಿಜ he hಚಿs suಛಿh big hಚಿಟಿಜs ! ಊಚಿve ಥಿou mಚಿಡಿಞeಜ ?_‘ಅಚಿಚಿಟಟ me Phiಡಿoz, boಣh oಜಿ ಥಿou giಡಿಟs, ತಿiಟಟ ಥಿou ? ಮಿಸ್ಟರ್ ಬಂದೂಕವಾಲಾ ಎಂದು ಕರೆದರೆ ನನಗೆ ಅಪಮಾನ ಮಾಡಿದಂತೆ….’ ಎಂದ. ನಿನ್ನೆ ನೀನೂ ಇರಬೇಕಾಗಿತ್ತು. ನಿನ್ನೆಯ ಪಾರ್ಟಿಯಲ್ಲಿ ಕಂಡ ಫಿರೋಜನನ್ನು ನೋಡಿ ನೀನೂ ನನ್ನ ವಿಚಾರಗಳನ್ನು ಬದಲಿಸುತ್ತಿದ್ದೆ. ಔuಡಿ ಒ‌ಆ ಟಚಿಛಿಞs ಣhese ಠಿeಡಿsoಟಿಚಿಟ ಛಿhಚಿಡಿms…. ಇಂಥ ದೊಡ್ಡ ಹುದ್ದೆಗೆ ಇಂಥ ಗುಣಗಳೂ ಬೇಕು ಅನ್ನಿಸುವುದಿಲ್ಲವೇ ? ಬರೇ ಬುದ್ದಿಯಲ್ಲಿ….ಹೆಲ್ಲೋ ಹೆಲ್ಲೋ ನಾಗ್….ಂಡಿe ಥಿou ಟisಣeಟಿiಟಿg….”

ನಾಗಪ್ಪ ಕೇಳುವದನ್ನು ಎಂದೋ ನಿಲ್ಲಸಿದ್ದ. ಟೆಲಿಫೋನ್ ರಿಸೀವರ್ ಕೈಯಿಂದ ಜಾರಿ ಬಿತ್ತೋ ತಾನೇ ಇರಿಸಿದನೋ_ನೆನಪಿಲ್ಲ ! “ಸಾಹೇಬ್, ಯಾವುದಾದರೂ ಕೆಟ್ಟಸುದ್ದಿ ಕೇಳಿದರಾ ?” ಎಂದು ಇರಾಣೀ ಮಾಲೀಕ ಕೇಳಿದಾಗ ತನ್ನ ಕಣ್ಣುಗಳಲ್ಲಿ ನೀರು ತುಂಬಿದ್ದರ ಅರಿವು ಬಂದು ದಡಬಡಿಸಿ ಕಿಸೆಯಲ್ಲಿಯ ಕೈವಸ್ತ್ರಕ್ಕೆ ಕೈಹಾಕಿದ. ಟೆಲಿಫೋನ ಕ್ಯೂದಲ್ಲಿ ನಿಂತ ಇನ್ನಿಬ್ಬರ ಮೋರೆಯ ಮೇಲೂ ಸಹಾನುಭೂತಿ ಮೂಡಿ ನಿಂತಿತ್ತು. ಸುಮಾರು ಹತ್ತು ಮಿನಿಟುಗಳವರೆಗೆ, ಒಂದು ಚಕಾರ ಶಬ್ದವನ್ನೆತ್ತದೆ, ಅ ತುದಿಯಿಂದ ಬರುತ್ತಿದ್ದ ಮಾತುಗಳನ್ನು ಕೇಳುತ್ತಿದ್ದಾಗ ಅವನ ಮೋರೆಯ ಮೇಲೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಲೇ ಹೋದ ನೋವನ್ನು ಗಮನಿಸಿಯೇ ಹೊಟೆಲ್ ಮಾಲೀಕನಾಗಲೀ ಕ್ಯೂದಲ್ಲಿ ನಿಂತವರಾಗಲೀ ತಾಳ್ಮೆಗೆಡದೇ ಇದ್ದದ್ದು, ಕೌಂಟರಿನ ಮೇಲೆ ಒಂದು ರೂಪಾಯಿಯ ನೋಟು ಇಡುತ್ತ ಥ್ಯಾಂಕ್ಸ್ ಎನ್ನುವಾಗ ಕೊರಳು ಬಿಗಿದುಕೊಂಡಿತು. ಮೂಲೆಯಲ್ಲಿಯ ಟೇಬಲ್ಲಿಗೆ ನಡೆದು ಕುರ್ಚಿಯೊಂದರಲ್ಲಿ ಕುಕ್ಕರಿಸಿ ಯಾವುದೇ ಬಗೆಯ ಭಾವೋದ್ವೇಗದ ಪ್ರದರ್ಶನಕ್ಕೆ ಯೋಗ್ಯವಾದ ಜಾಗವಲ್ಲ ಇದು ಎಂಬುದನ್ನು ಅರಿವಿಗೆ ತಂದುಕೊಳ್ಳುತ್ತ ತನ್ನನ್ನು ಸಾವರಿಸಿಕೊಂಡ. ವೇಟರ್ ಬಂದಾಗ, ಕೆಳದನಿಯಲ್ಲಿ_ಇಲ್ಲಿ ಬಿಯರ್ ಸಿಗಬಹುದೇ ? ಎಂದು ಕೇಳಿದ. ವೇಟರ್ ಮಾಲೀಕನತ್ತ ನೋಡಿದಾಗ ಅವನೇ ಬಂದು ಇವನಿಗೆ ಕೊಡಬೇಕಾದ್ದೇನು ಎನ್ನುವುದನ್ನು ತಿಳಿದು_ನಮಗೆ ಪರ್ಮಿಟ್ ಇಲ್ಲ. ನೀವು ಈ ಪರದೆಯ ಆಚೆಯ ರೂಮಿಗೆ ಬನ್ನಿ ಎಂದು ಅವನನ್ನು ಆ ಕಡೆಗೆ ಕರೆದೊಯ್ದ. ಹಸಿರು ಬಣ್ಣದ ಪರದೆಯ ಆಚೆ ಕೋಣೆಯಿದೆ ಎಂಬ ಕಲ್ಪನೆಯೇ ನಾಗಪ್ಪನಿಗಿರಲಿಲ್ಲ. ಕೋಣೆಯಲ್ಲಿ ನಾಲ್ಕೈದು ಟೇಬಲ್ಲುಗಳಿದ್ದರೂ ಸದ್ಯ ಎಲ್ಲವೂ ಖಾಲಿಯಿದ್ದವು. ಬಿಯರ್ ಜೊತೆ ಒಮ್ಲೆಟ್ ಹಾಗೂ ಪಾಪು-ಬೆಣ್ಣೆ ತರಲು ಹೇಳಿದ. ಇಂದಿನ ಊಟ ಇಲ್ಲೇ ಮಾಡಿದರಾಯಿತು ಎಂದುಕೊಂಡು ಬಿಯರಿನ ಹಾದಿ ಕಾಯಹತ್ತಿದ. uಟಿಜeಜಿiಟಿeಜ
– ಅದ್ಯಾಯ ಇಪ್ಪತ್ತೆಂಟು –

ಮರಿದಿನ ಬೆಳಿಗ್ಗೆ, ನಸುಕಿನಲ್ಲೇ ಎದ್ದು ಬರೆಯಲು ಕೂತಿದ್ದ_ನಾಗಪ್ಪ. ನಿನ್ನೆ ಚೌಪಾಟಿಯ ಇರಾಣೀ ಅಂಗಡಿಯನ್ನು ಬಿಟ್ಟಾಗಿನಿಂದ ತನ್ನ ಕೋಣೆಯನ್ನು ಸೇರುವ ತನಕದ ಅನೇಕ ವಿದ್ಯಮಾನಗಳು ನೆನಪಿನಲ್ಲಿ ಇಣುಕುವ ಹವಣಿಕೆಯಲ್ಲಿದ್ದುದರ ಅಸ್ಪಷ್ಟ ಅರಿವು ಇದ್ದರೂ ಯಾವುದೇ ಬಗೆಯ ಭಾವುಕತೆಗೆ ಈಗ ಎಡೆಕೊಡಬಾರದೆಂದು ಧೃಡನಿಶ್ಚಯ ಮಾಡಿಯೇ ಕೂತಂತೆ ಕೂತಿದ್ದ : ಎಲ್ಲರನ್ನು ಬಿಟ್ಟು ಕೋಳೀಗಿರಿಯಣ್ಣನ ಬಗ್ಗೆ ಏಕೆ ಬರೆಯುತ್ತಿದ್ದೇನೆ ಎಂಬುದರ ಬಗ್ಗೆ ಕ್ಷಣಕಾಲ ಆಶ್ಚರ್ಯಪಟ್ಟರೂ ಮರುಕ್ಷಣ ಆ ವಿಚಾರವನ್ನು ಕೂಡ ತೊಡೆದುಹಾಕಿದ : ಯಾಕೆ ಬದುಕಿರಬೇಕು ಎಂಬ ಪ್ರಶ್ನೆಯ ಬಗೆಗೇ ನಿಶ್ಚಿತ ನಿಲುಗಡೆಗೆ ಬರಲು ಸಾಧ್ಯವಾಗದೇ ಇದ್ದಾಗ ಈ ಪ್ರಶ್ನೆಯೇನು ಮಹಾ ! ಕೋಳೀಗಿರಿಯಣ್ಣನ ಮನೆ ಅವರ ಮಗ್ಗುಲ_ಹಿತ್ತಲಲ್ಲೇ ಇತ್ತು. ಅದರಾಚೆಯ ಹಿತ್ತಲಲ್ಲಿ ಮಾಸ್ತೀ ಹೊನ್ನಪ್ಪನ ಮನೆ. ಹೊನ್ನಪ್ಪನ ಹೆಂಡತಿ ಪರಮೇಶ್ವರಿಗೂ ಗಿರಿಯಣ್ಣನ ಹೆಂಡತಿ ದೇವಿಗೂ ಆಗುತ್ತಿರಲಿಲ್ಲ. ಇಬ್ಬರೂ ನಾಡ್ಕರ್ಣಿ ಅಪ್ಪೂರಾಯರ ಒಕ್ಕಲು. ಪರಮೇಶ್ವರಿಯ ಮೂವರೂ ಹುಡುಗಿಯರು ಕಪ್ಪು ಬಣ್ಣದವು_ಹೊನ್ನಪ್ಪನ ಹಾಗೆ. ಗಿರಿಯಣ್ಣನಿಗೆ ಎರಡು ಮಕ್ಕಳು_ಒಂದು ಹೆಣ್ಣು. ಒಂದು ಗಂಡು. ಇಬ್ಬರೂ ಬೆಳ್ಳಗೆ. ದಿನವೂ ಸಂಜೆ, ಯಾವುದಾದರೂ ಸಣ್ಣಪುಟ್ಟ ಕಾರಣಗಳಿಗಾಗಿ ದೇವಿಗೂ ಪರಮೇಶ್ವರಿಗೂ ಝಟಾಪಟೀ : ಬೇಲಿಯ ಆಚೆ ಈಚೆ ನಿಂತು ಜಗಳಾಡುವ ಭರದಲ್ಲಿ ಒಮ್ಮೊಮ್ಮೆ ಮೈಮೇಲಿನ ಭಾನ ತಪ್ಪಿದವರ ಹಾಗೆ ಅತ್ಯಂತ ಅವಾಚ್ಯವಾದ ಬೈಗುಳಗಳ ಜೊತೆಗೆ ಬೀಭತ್ಸವಾದ ಹಾವಭಾವಗಳು. ಎಲ್ಲ ಬೈಗಳು. ಹಾವಭಾವಗಳು ತಮ್ಮ ಲೈಂಗಿಕ ಜೀವನಕ್ಕೆ ಸಂಬಂಧಪಟ್ಟವುಗಳು. ಒಮ್ಮೊಮ್ಮೆ ಪರಿಸ್ಥಿತಿ ಎಷ್ಟೊಂದು ವಿಕೋಪಕ್ಕೆ ಹೋಗುತ್ತಿತ್ತೆಂದರೆ ಇಬ್ಬರೂ ತಮ್ಮ ಸೀರೆಗಳನ್ನು ಎತ್ತಿ ತೊಡೆ ತೋರಿಸುತ್ತ_ ರಂಡೇ ರಂಡೇ ರಂಡೇ ! ನಿನ್ನ ಗಂಡನ ತೀಟೆ ತೀರಿಸುವದು ನಿನ್ನ ಕೈಯಲ್ಲಿ ಸಾಧ್ಯವಿಲ್ಲದಿದ್ದರೆ ಕಳಿಸೇ ಅವನನ್ನು ನನ್ನ ಕಡೆ ಎನ್ನುವಂತಹ ಮಾತಿನತನಕ ಮುಟ್ಟುತ್ತಿತ್ತು ! ಇದೆಲ್ಲ ನಡೆಯುವಾಗ, ಇದನ್ನೆಲ್ಲ ಕೇಳಿಯೂ ಕೇಳದವನ ಹಾಗೆ ನಿರ್ಲಿಪ್ತನಾದ ಗಿರಿಯಣ್ಣ_ಕೆಂಪು ಮಣ್ಣಿನ ಗಾರೆ ಮೆತ್ತಿ, ನುಣುಪುನುಣುಪಾಗಿ ತಿಕ್ಕಿ ಹೊಳೆಯುವಂತೆ ಮಾಡಿದ ಜಗಲಿಯ ತಂಪು ನೆಲದ ಮೇಲೆ ಅಂಗತ್ತ ಮಲಗಿ. ಕಾಲುಗಳನ್ನೆತ್ತಿ, ಮೊಮ್ಮಗಳನ್ನು ಪಾದಗಳ ಮೇಲೆ ಕವುಚಿ ಮಲಗಿಸಿ_ “ಭೋರ್ ಭೋರ್ ಭಂಗೀ ಬಂಗಾರಕ್ಕನ ತಂಗೀ” ಎಂದು ಹಾಡುವುದರಲ್ಲಿ ಗರ್ಕನಾಗಿರುತ್ತಿದ್ದ. ಇವರ ಜಗಳದ ಗದ್ದಲ ಕೇಳುವುದು ತೀರ ಅಸಾಧ್ಯವಾದಾಗೊಮ್ಮೆ ಬಾಯಿಮಾಡುತ್ತಿದ್ದ _ “ಸಾಕುಮಾಡಿರೇ ನಿಮ್ಮ ಬಾಯಿಪರ್ತಾಪ…ಬರೇ ಬಾಯಿಮಾತಿನಿಂದಲೇ ತೆವಲು ತೆಗೆದುಕೊಳ್ಳುತ್ತೀರೇನರೇ….”

ನಾಗಪ್ಪನ ಮೋರೆಯ ಮೇಲೆ ನಗು ಮೂಡಿತು. ಮರುಗಳಿಗೆ ಬರೆಯುವ ಕೈ ತಂತಾನೇ ನಿಂತಿತು. ಇನ್ನೂ ಹೆಚ್ಚು ಕಾಲ ಗಿರಿಯಣ್ಣನ ಬಗ್ಗೆ ಬರೆಯುತ್ತ ಕೂತರೆ ಅಪ್ಪ-ಅಮ್ಮ, ಅಣ್ಣ-ತಂಗಿಯರೂ ಮೂಡಿಬಂದಾರು ಎಂದು ಭಯವಾಯಿತು. ಎಷ್ಟೊಂದು ಸರತಿ ಪ್ರಯತ್ನ ಮಾಡಿದರೂ ಅಂಗಿಗೆ ಬೆಂಕಿ ಹತ್ತಿದ ಸನ್ನಿವೇಶ ನೆನಪಾಗುವ ಭಯವಾದೊಡನೆ ಮನಸ್ಸು ಭೂತಕಾಲದಿಂದ ಪಲಾಯನ ಹೇಳುತ್ತಿತ್ತು. ಮೇಲಾಗಿ, ಬಾಲ್ಯದ ಅನೇಕ ಸಂಗತಿಗಳನ್ನು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟವಾಗಿ ನೆನೆಯಬಲ್ಲನಾದರೂ ತನ್ನ ಅನುಭವದಲ್ಲಿಯ ಒಂದು ವಿಶೇಷ ಜಾಗ ಮಾತ್ರ ಬೆಳಕಿಗೆ ಬರಲು ನಿರಾಕರಿಸುತ್ತ ಕತ್ತಲೆಯಲ್ಲೇ ಮುಳುಗಿದ್ದುದರ ಅರಿವು ನಾಗಪ್ಪನಿಗೆ ಇದೆ. ಬೆಂಕಿಯ ಪ್ರಕರಣದ ಬಗ್ಗೆ ಸ್ಪಷ್ಟವಾಗಿ ಬರೆಯುವ ಇಲ್ಲವೇ ಇನ್ನೊಬ್ಬರ ಮುಂದೆ ಹೇಳಿಕೊಳ್ಳುವ ಧೈರ್ಯ ತನಗೆ ಬಂದಿದ್ದರೆ….ಯಾರ ಮುಂದೆ ? ಜಾನಕಿಯ ಮುಂದೆ ? ಸರಕ್ಕನೆ ನೆನಪಾಯಿತು : ಜಾನಕಿಗೆ ಹೆದರಿಯೇ ತಾನು ನಿನ್ನೆ ರಾತ್ರಿ ಹತ್ತುಗಂಟೆಯ ನಂತರವೇ ಮನೆ ಸೇರಿದ್ದು. ಅಷ್ಟು ಹೊತ್ತಿಗೆ ಗಂಡ ಮನೆ ಸೇರಿರಬೇಕು_ಕದ ಮುಚ್ಚಿತ್ತು.

ಬರೆಯುವದು ಅಸಾಧ್ಯವೆನಿಸಿತು. ವಹಿಯನ್ನು ಮುಚ್ಚಿಟ್ಟು ಕಿಡಕಿಗೆ ಬಂದ. ನಸುಕಿನ ತಂಪುಗಾಳಿ ಮೋರೆಗೆ ಬಡಿದಾಗ ಸುಖವೆನಿಸಿತು. ಪ್ರೀತಿಯ ಅಶ್ವಥ್ಥ ಇನ್ನೂ ಕಣ್ಣುತೆರೆದಿರಲಿಲ್ಲ. ಮುಂದಿನ ಮನೆಯ ದತ್ತಭಕ್ತನಿಗೂ ಎಚ್ಚರವಾಗಿರಲಿಲ್ಲ. ದೇವರ ಮುಂದೆ ರಾತ್ರಿಯಿಂದಲೂ ಉರಿಯುತ್ತಿದ್ದ ನಂದಾದೀಪದ ಬೆಳಕು, ಮಬ್ಬುಗತ್ತಲೆ ತುಂಬಿದ ಪರಿಸರದಲ್ಲಿ, ತನ್ನ ಒಂಟಿತನದ ಅರಿವನ್ನು ಇನ್ನಷ್ಟು ತೀವ್ರಗೊಳಿಸಲು ಕಾರಣವಾಯಿತು. ಕೆಳಗೆ ನೋಡಿದ : ರಸ್ತೆಯಂಚಿನಲ್ಲಿ ಚಾರಪಾಯಿಗಳ ಮೇಲೆ ತಲೆಯವರೆಗೆ ಬಿಳಿಯ ಧೋತರದ ಮುಸುಕೆಳೆದು ಗಾಢನಿದ್ದೆ ಸೇರಿದ ಹಾಲಿನಂಗಡಿಯ ಭೈಯಾ: ಇದ್ದಲು ಅಂಗಡಿಯ ಕೋಳಶೆವಾಲಾ ; ಕಬ್ಬಿನ ಗಾಣದ ಮರಾಠಾ, ಚಾರಪಾಯಿಗಳಕೆಳಗಡೆ ಒಂದೆಡೆಯಲ್ಲಿ ನಾಯಿ_ಬಹುಶಃ ಭೈಯಾನದಿರಬೇಕು. ಅದೂ ಮೈಮುದುಡಿ ನಿದ್ದೆಹೋಗಿತ್ತು. ಆ ದೃಶ್ಯ ನೋಡಿ ನಾಗಪ್ಪನಿಗೆ ಅಸೂಯೆಯಾಯಿತು : ಹಾಗೆ ನಿದ್ದೆ ಮಾಡಲು ಬೇಕಾದ ಮನಸ್ಸು ತನಗೂ ಇದ್ದಿದ್ದರೆ ! ಸಾಲೆ ಕಾಲೇಜುಗಳಿಗೆ ಹೋಗಿರದೇ ಹನೇಹಳ್ಳಿಯಲ್ಲಿ ಗದ್ದೆ ಉಳುತ್ತ ಇದ್ದುಬಿಟ್ಟಿದ್ದರೆ…. ಗಿರಿಯಣ್ಣನ ಮಗಳಂತಹಳನ್ನು ಇಲ್ಲ. ಮೈಯಲ್ಲಿ ಸೊಕ್ಕೇರಿದಾಗ ಭಿಡೆ ಬಿಯ್ಟ್ಟು ಗಂಡುಮೈಯನ್ನು ನೇರವಾಗಿ ಹತ್ತಿರ ಕರೆಯುವ ಎದೆಗಾರಿಕೆಯ ಜಾನಕಿಯಂತಹಳನ್ನು ಮದುವೆಯಾಗಿ ಅಪ್ಪನ ಚಾಕೊಂಪೆಯನ್ನೇ ಮುಂದುವರಿಸಿಕೊಂಡು ಹೋಗಿದ್ದರೆ….

ರುಷಕ್ಕೆರಡು ಸೀರೆಗಳನ್ನು ಕೊಳ್ಳುತ್ತಿದ್ದ ಅಮ್ಮ, ಗಿಡ್ಡಪಂಚೆಯೊಂದನ್ನು ಬಿಟ್ಟರೆ ಬರಿ ಮೈಯಲ್ಲೇ ಅಂಗಡಿಯಲ್ಲಿ ಕೂಡ್ರುತ್ತಿದ್ದ ಅಪ್ಪ, ‘ಇತ್ತು’ ಅನ್ನುವುದಕ್ಕೆ ಎದೆಯಲ್ಲಿ ದಪ್ಪ ಜನಿವಾರವಿತ್ತು. ಹೆಗಲ ಮೇಲೆ ಒಂದು ಪಂಚೆಯ ತುಂಡು. ತನಗೋ ಸಾಲೆಗೆ ಹೋಗುವಾಗಷ್ಟೇ ಗಿಡ್ಡ ಚೆಡ್ಡಿ, ಅಂಗಿ. ತಲೆಗೆ ಒಂದು ಬಿಳಿಯ ಟೋಪಿ. ಕಾಲಿಗೆ ಚಪ್ಪಲಿ ಬಂದದ್ದು ಹಾಯ್‌ಸ್ಕೂಲು ಬಿಟ್ಟ ನಂತರವೇ. ತನ್ನ ಕೇರಿಯ ಕ್ರಿಶ್ಚನ್ ಹಾಗೂ ಶೂದ್ರ ಮಕ್ಕಳೊಡನೆ ಆಡುವಾಗ ಅವರಂತೆಯೇ ತಾನು ಕಚ್ಚೆ ಉಟ್ಟು ಓಡಾಡುತ್ತಿದ್ದ : ಫಿರೋಜ್ ಅಪ್ಪನ ವೃತ್ತಿಯನ್ನು ಕುರಿತು ಕೇಳಿದ ಪ್ರಶ್ನೆಗೆ ಉತ್ತರ ಕೊಡಲು, ನಾನು ಹಿಂದೆ ಮುಂದೆ ನೋಡಿದ್ದು. ಉತ್ತರ ಕೊಟ್ಟ ಮೇಲೆ ಫಿರೋಜ್ ಓ ! ಎಂದು ತಾತ್ಸಾರ ತೋರಿಸಿದ್ದು ಮತ್ತೊಮ್ಮೆ ನೆನಪಿಗೆ ಬಂತು. ಅವನ ತಾತ್ಸಾರಕ್ಕೆ ಸವಾಲಾಗಿಯೇ ಎಂಬಂತೆ ಇನ್ನೊಮ್ಮೆ ಹನೇಹಳ್ಳಿಯಲ್ಲಿ ಬೇರುಬಿಟ್ಟ ತನ್ನ ವ್ಯಕ್ತಿತ್ವದ ರೂಪವನ್ನು ನಿರ್ಧರಿಸಿದ ಬಾಲ್ಯವನ್ನು ನೆನೆದುಕೊಂಡ : ಗಿರಿಯಣ್ಣ, ಹೊನ್ನಪ್ಪ, ಅಗೇರ ಎಂಕೂ, ಮಾರ್ಕುಂಡೀ ; ಮುಂದಿನ ಕೇರಿಯ ಕಲಾಯಿಕಾರ ಶೇಖ್ ಫರೀದ್ ; ಎಣ್ಣೆಯ ಗಾಣದ ಸಾವೇರ ; ಮಿಠಾಯಿ ಅಂಗಡಿಯ ಗಣಪಯ್ಯ ಶೆಟ್ಟಿ : ಚಮ್ಮಾರ ದೇವೂ ; ಮಡಿವಾಳ ಮಾದೇವ ; ಸೂಲಗಿತ್ತಿ ಸಂತಾನ ; ನಾಯಿಂದ ಈರ ; ಸೊನ್ನಾರ ರಾಯ್‌ಶೆಟ್ಟಿ ; ಸೂಳೆಯರಾದ ಉತ್ತಮಿ, ಬೀರಮ್ಮ, ನಾಗಮ್ಮ ; ಬೇಲಿಗಳು ; ಗದ್ದೆ, ಬೆಲ್ಲಗಡ್ಡೆ, ಕಲ್ಲಂಗಡಿಯ ಓಳುಗಳು : ಬೇಣ, ಕರಡುಹುಲ್ಲು, ಮೊಗೆಕಾಯಿ ಬಳ್ಳಿಗಳು ; ಗೇರುಹಕ್ಕಲುಗಳು ; ಗುಮ್ಟೆಪಾಂಗುಗಳು ; ಬಣ್ಣಬಣ್ಣದ ಪತಾಕೆಗಳಿಂದ ಲಕಲಕಿಸುವ ತೇರು ; ಬಂಡೀ ಹಬ್ಬಗಳು ; ಬದುಕಿಗೆ ತೀರ ಹತ್ತಿರ ತಂದು ಸುಖ ಕೊಟ್ಟ ಅಲ್ಲಿಯ ಓಣಿಗಳು; ಧೂಳಿ ತುಂಬಿದ ರಸ್ತೆಗಳು ; ನಡುವೆಯೇ ! ಈವರೆಗೂ ನೆನಪಿಗೆ ಬಂದಿರದ ಒಂದು ಚಿತ್ರ ; ಶ್ರಾವಣಮಾಸದಲ್ಲಿ ರವಿವಾರ ದಿನ ಅಮ್ಮ ಸೂರ್ಯನನ್ನು ಪೂಜಿಸುತ್ತಿದ್ದುದರ ನೆನಪು : ಪೂಜೆಗಾಗಿ ಅನೇಕ ತರದ ಹೂವು, ದೂರ್ವೆಯ ಗರಿಕೆ, ಇವುಗಳ ಜೊತೆ ಓಣಿಯ ಪಾಗಾರದ ಮೇಲೆ ಮಳೆಗಾಲದಲ್ಲಷ್ಟೇ ಬೆಳೆಯುವ ಹಲವು ಜಾತಿಯ ಗಿಡಗಳ ಎಲೆಗಳನ್ನು (ಅಕ್ಕಾರಕ್ಕೆ ತಕ್ಕಂತೆ ಹೆಸರುಗಳು : ಹುಲಿಯ ಪಂಜ ; ಆಕಳ ಕಿವಿ ; ಬೆಕ್ಕಿನ ತರಡು’ ಕುದುರಯ ಖುರ ಇತ್ಯಾದಿ) ಕಿತ್ತು ತರುವಾಗ ಕಚ್ಚೆ ಉಟ್ಟು ಮಳೆಯಲ್ಲಿ ನೆನೆಯುತ್ತ ಓಣಿಯಲ್ಲಿ ಮೊಣಕಾಲಿನವರೆಗೆ ತುಂಬಿದ ನೀರಿನಲ್ಲಿ ಆಡುತ್ತ ಕೇರಿಯ ಹುಡುಗ ಹುಡುಗಿಯರೊದಿಗೆ ಕೇಕೆ ಹಾಕಿದ ದಿನಗಳು : ಬಂದ ನೆನಪಿಗೆ ಸಿಟ್ಟುಬಂದು ಮೂಗಿನ ಹೊರಳೆಗಳು ಅರಳಿದವು. ಂಟಟ veಡಿಥಿ soಠಿhisಣiಛಿಚಿಣeಜ ಛಿಡಿoತಿಜ, ಥಿou see” _ಮೇರಿಯ ಮಾತುಗಳು ನೆನಪಿಗೆ ಬಂದವು. ಃuಟಟ-shiಣ….ಖಿo heಟಟ ತಿiಣh ಥಿou ಚಿಟಿಜ ಥಿouಡಿ soಠಿhisಣiಛಿಚಿಣioಟಿ, ಫಿರೋಜ್ ಹಾಗೂ ಮೇರೀ, ಹಾಗೂ ಡಾಯನಾ ಹಾಗೂ ಥ್ರೀಟೀ ಹಾಗೂ….ಈ ವ್ಯವಸಾಯದ ಜಗತ್ತೇ ತನ್ನ ಪ್ರೀತಿಯ ಹನೇಹಳ್ಳಿಯನ್ನು ಹೀಯಾಳಿಸಿ ನಗುತ್ತದೆ ಎಂಬ ಕಲ್ಪನೆಯಿಂದ ಕ್ಷೋಭೆಗೊಂಡು ಕಿಡಕಿಯನ್ನು ಬಿಟ್ಟು ನಿಂತ. ತನ್ನ ವ್ಯಕ್ತಿತ್ವಕ್ಕೆ ಒಗ್ಗಿದ ಜಗತ್ತೇ ಅಲ್ಲವಿದು. ಆದರೂ ತನಗೆ ಪ್ರಿಯವಾದ ಜಗತ್ತಿಗೆ ಹಿಂದಿರುಗುವದೂ ಅಸಾಧ್ಯವಾಗಿತ್ತು ; ಪಂಜರದಲ್ಲಿ ಸಿಕ್ಕಿಬಿದ್ದ ಇಲಿಯ ಹಾಗೇ ವಿಲಿವಿಲಿ ಒದ್ದಾಡುವ ಭಾವನೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವಾಯಿತು.

ಪ್ರಾತರ್ವಿಧಿಗಳನ್ನು ಮುಗಿಸುತ್ತಲೇ ಎಲ್ಲಾದರೂ ದೂರ ತಿರುಗಾಡಿ ಬರೋಣ, ಅನ್ನಿಸಿತು : ಬರುವಾಗ ಉಪಾಹಾರಕ್ಕೆ ಯಾವುದಾದರೂ ಉಡುಪಿ ರೆಸ್ಟೋರೆಂಟಿಗೆ ಹೋದರಾಯಿತು. ಹಾಗೇ, ಪೋಸ್ಟಾಫೀಸಿಗೆ ಹೋಗಿ ರಾಣಿಗೆ ಮನಿ-ಆರ್ಡರ್ ಮಾಡಬೇಕು. ಮತ್ತು ಬ್ಯಾಂಕಿಗೆ ಹೋಗಿ ಖಾತೆ ಪುಸ್ತಕವನ್ನು ಹೊಂದಿಸಿಕೊಂಡು ಬರಬೇಕು. ಅಂದರೆ, ಕ್ಷೌರ, ಸ್ನಾನ ಮುಗಿಸಿಕೊಂಡೇ ಹೋದರೆ ಒಳ್ಳೆಯದು ಈವತ್ತು ಶುಕ್ರವಾರ. ಇಂದೂ ಖಂಬಾಟಾನಿಂದ ಚೀಟಿ ಬರದಿದ್ದರೆ ಮತ್ತೆ ಅವನಿಂದ ಕೇಳುವದು ಸೋಮವಾರವೇ. ಸಾಧ್ಯವಾದರೆ ಶನಿವಾರ. ಹಾಗೂ ರವಿವಾರ ತಾನಾಗಿಯೇ ತನ್ನ ಹಿಂದಿನ ಕೆಲವು ಗೆಳೆಯರನ್ನು ಕಂಡುಬರಬೇಕು : ಮುಖ್ಯವಾಗಿ ಸೀತಾರಾಮ ಹಾಗೂ ವೋಮೂ ಇವರನ್ನು, ಸೀತಾರಾಮನ ಜೊತೆಗೆ ಗಿಲ್ಬರ್ಟ ಅಷ್ಟಾಗಿ ಹೇಳಿದ ಚೆಶಾಯರ್ ಹೋಮಿಗೂ ಹೋಗಬೇಕು. ‘ಸ್ಟ್ರ್ಯಾಂಡ್-ಬುಕ್-ಸ್ಟಾಲಿ’ನ ಶಾನಭಾಗರನ್ನೂ ಕಂಡುಬರಬೇಕು. ಒಂದು ಐನೂರು ರೂಪಾಯಿಯ ಸೇಲ್ಸಮನ್ನನ ಕೆಲಸ ಕೊಡದೇ ಇರಲಿಕ್ಕಿಲ್ಲ. ೧೮ ವರ್ಷಗಳ ಹಿಂದೆ ನೌಕರಿ ಸಿಕ್ಕಾಗಿನ ಆರಂಭದ ಸಂಬಳವಿದು. ತನಗೀಗ ಅದರ ಐದು ಪಟ್ಟಿಗಿಂತ ಹೆಚ್ಚಿನ ಸಂಬಳ. ಆದರೂ ಬೇಡ_ಈ ಸ್ಪರ್ಧೆ ! ಈ ಹಗೆ ! ಸುಳ್ಳು-ಅಮಿಷಗಳ ಹಿಂದೆ ಓಡಿ ಸುಳ್ಳಾಗುವ ಈ ಜಂಜಾಟದ ಬದುಕು….

ನಾಗಪ್ಪ ಬೆಳಿಗ್ಗೆ ನಿಶ್ಚಯಿಸಿಕೊಂಡ ಕಾರ್ಯಕ್ರಮವನ್ನು ಮುಗಿಸಿ ಮತ್ತೆ ಮನೆ ಸೇರುವ ಹೊತ್ತಿಗೆ ೧೦-೩೦. ಆಗಲೇ ಚಾಳಿನ ಗಂಡಸರೆಲ್ಲ ತಮ್ಮ ತಮ್ಮ ಆಫೀಸುಗಳಿಗೆ ಹೋಗಿಯಾಗಿತ್ತು. ಮಗ್ಗುಲಮನೆಯ ಕದಕ್ಕೆ ಬೀಗವಿತ್ತು. ಮನೆಯ ಕದ ತೆರೆಯುವಾಗ ಅನ್ನಿಸಿದ ಒಂದು ಬಗೆಯ ನಿರಂಬಳತೆಗೆ ನಾಗಪ್ಪನಿಗೆ ನಗು ಬಂತು : ಪಾಪ, ಜಾನಕಿಯ ಪ್ರಾಯ ತುಂಬಿ ತುಳುಕಾಡುವ ದೇಹ ಸೌಷ್ಠವಕ್ಕೆ ಹೆದರಿಕೊಂಡ ತಾನೇ ಅವಳ ಹಾವಭಾವಕ್ಕೆ ಇಲ್ಲದ ಅರ್ಥ ಹಚ್ಚುತ್ತಿರಬಹುದು….

ಕದ ತೆರೆದರೆ ಎರಡು ಪತ್ರಗಳು : ಎರಡೂ ಯಾರೂ ಖುದ್ದು ಬಂದು ಕದದ ಕೆಳಗಿನ ಕಿಂಡಿಯೊಳಗಿಂದ ತೂರಿ ಹೋದವುಗಳು. ಒಂದು ಆಫೀಸಿನದು_ಬಹುಶಃ ಪ್ರಭಾಕರ ಬಂದಿರಬೇಕು. ಇಲ್ಲ, ಖಂಬಾಟಾನ ಡ್ರೈವರ್. ಇನ್ನೊಂದು ಯಾರದೆಂಬುದು ತಿಳಿಯಲಿಲ್ಲ. ಒಡೆದು ಅದನ್ನೇ ಮೊದಲು ಓದಿದ_ಶ್ರೀನಿವಾಸ ಅವನ ಪ್ರೆಸ್ಸಿನ ಆಳಿನೊಂದಿಗೆ ಕಳಿಸಿದ ಸಣ್ಣ ಚೀಟಿ : “ನಾಳೆ ಪ್ರೆಸ್ಸಿಗೆ ಸೂಟಿ, ಮನೆಯಲ್ಲೇ ಇರುತ್ತೇನೆ. ಮಧ್ಯಾಹ್ನದ ಊಟಕ್ಕೆ ನಮ್ಮಲ್ಲೇ ಬಾ. ಒಂದು ಮಹತ್ವದ ವಿಷಯ ನಿನ್ನ ಹತ್ತಿರ ಮಾತನಾಡುವದಿದೆ.” ತನ್ನ ಹತ್ತಿರ ಮಾತನಾಡುವ ವಿಷಯ ಯಾವುದಿರಬಹುದು ಎಂದು ಆಶ್ಚರ್ಯ ಪಡುತ್ತಿರುವಾಗಲೇ ‘ಸಂತೋಷಭವನ’ದ ನಾಯಕ ಹೇಳಿದ ಮಾತು ನೆನಪಾಯಿತು : ಅಂತೂ ಫಿರೋಜನ ತನಿಖೆಗೆ ಮೊದಲು ಈ ಒಂದೂ ಮಗನ ತನಿಖೆಗೆ ಆರಂಭವಾಗುತ್ತದೆಯೇನೋ, ಆಗಲಿ. ತನ್ನ ಪೂರ್ವಜರ ಮೂಲಕ್ಕೆ ಕೈಹಾಕುವ ಇವರ ನೀರನ್ನಾದರೂ ನೋಡೋಣ. ಎಂದುಕೊಂಡ. ಆದರೆ ನಾಗಪ್ಪನಿಗೆ ಅರ್ಥವಾಗದ ಸಂಗತಿಯೆಂದರೆ_ಇದೆಲ್ಲ ಹೀಗೇ ಒಂದೇ ಕಾಲಕ್ಕೆ ಕೂಡಿಬರುತ್ತಿದ್ದುದಾದರೂ ಹ್ಯಾಗೆ ಎನ್ನುವದು. ನಾಗಪ್ಪನಿಗೆ ಮೊದಲ ಬಾರಿ ಜನ್ಮಕುಂಡಲಿಯಲ್ಲಿ ವಿಶ್ವಾಸ ಮೂಡುತ್ತಿರುವುದು ಭಯವಾಯಿತು. ಇದೇ ವಿಷಯದ ಮೇಲೆ ಅರ್ಜುನ್‌ರಾವನೊಡನೆ ವಾದಿಸಿ ಜಗಳವಾಡಿದ್ದ…..

ತಾನು ಇನ್ನೊಂದು ಪತ್ರವನ್ನು ತೆರೆಯಲು ಹಿಂಜರಿಯುತ್ತಿದ್ದೇನೆಯೇ ? ಎಂದು ಅನುಮಾನಿಸುತ್ತ ಅದನ್ನು ತೆರೆದ : ಪತ್ರ ಖಂಬಾಟಾನದಾಗಿತ್ತು : “ತನಿಖೆ ಕಾರಣಾಂತರದಿಂದ ಸೋಮವಾರದ ತನಕ ಮುಂದೂಡಲಾಗಿದೆ. ನೀನು ಬಯಸಿದ ಹಾಗೆ ಆ ದಿನ ಬೆಳಿಗ್ಗೆ ಸರಿಯಾಗಿ ೯-೩೦ಕ್ಕೆ ಕಾರನ್ನು ಕಳಿಸುತ್ತೇನೆ. ಡ್ರೈವರ್ ಅಬ್ದುಲ್ ಬಂದು ನಿನ್ನನ್ನು ಕಾಣುತ್ತಾನೆ. ನೀನು ಅಷ್ಟು ಹೊತ್ತಿಗೆ ತಯಾರಾಗಬೇಕೆಂದು ಕೇಳಿಕೊಳ್ಳುತ್ತೇನೆ. ತನಿಖೆ ತಾಜಮಹಲ್ ಹೊಟೆಲ್ಲಿನಲ್ಲಿ ನಡೆಯುತ್ತದೆ. ರೂಮ್ ನಂಬರ್ ೭೧೭ ರಲ್ಲಿ. ಸರಿಯಾಗಿ ೧೦-೩೦ ಗಂಟೆಗೆ. ತನಿಖೆಯ ಆಯೋಗದಲ್ಲಿ ಆ‌ಒ‌ಆ ಯವರ ಹೊರತಾಗಿ ಇನ್ನಿಬ್ಬರು ಡೈರೆಕ್ಟರರು ಇರುತ್ತಾರೆ. ಅವರ ಹೆಸರುಗಳು ತನಿಖೆಯ ವೇಳೆಗೆ ಅವರಿಂದಲೇ ನಿನಗೆ ತಿಳಿಯುತ್ತದೆ. ನಿನಗೆ ನಿಷ್ಕಾರಣವಾಗಿ ಹಾನಿ ತಯ್ಟ್ಟಬಾರದು ಎಂಬ ಉದ್ದೇಶದಿಂದ ಶಕ್ಯವಿದ್ದ ಎಲ್ಲ ಜಾಗ್ರತೆ ತೆಗೆದುಕೊಳ್ಳಲಾಗಿದೆ : ತನಿಖೆಯ ಮುಖ್ಯ ಉದ್ದೇಶ ನಿನ್ನಿಂದ ಕೆಲ ಮಾಹಿತಿಯನ್ನು ದೊರಕಿಸುವದೇ ಆಗಿದೆಯೇ ಹೊರತು ಯಾವುದೇ ಬಗೆಯ ಮಾನಸಿಕ ಒತ್ತಡಕ್ಕೆ ನಿನ್ನನ್ನು ಗುರಿಪಡುಸುವುದಾಗಿಲ್ಲ ಎಂದು ನಿನಗೆ ತಿಳಿಸುವಂತೆ ಆ‌ಒ‌ಆ ಯವರು ಮುದ್ಧಾಮ್ ಕೇಳಿಕೊಂಡಿದ್ದಾರೆ….”ಪತ್ರದಲ್ಲಿ ಒಥಿ ಜeಚಿಡಿ ಓಚಿgಟಿಚಿಣh ಎಂಬ ಆರಂಭ ಹಾಗೂ ತಿiಣh ಞiಟಿಜesಣ ಡಿegಚಿಡಿಜs ಎಂಬ ಕೊನೆ ಹಾಗೂ ಖಂಬಾಟಾನ ಲಂಬಾಜೌಡಾ ಸಹಿ ಇವಷ್ಟೇ ಪೆನ್ನಿನಲ್ಲಿ ಬರೆದ ಅಕ್ಷರಗಳಾಗಿದ್ದವು. ಉಳಿದದ್ದೆಲ್ಲ ಟ್ಯಾಪ್ ಮಾಡಿದ್ದಾಗಿತ್ತು. ಪತ್ರದ ಒಟ್ಟೂ ಧಾಟಿ ನೋಡಿದರೆ, ತಾನು ಖಂಬಾಟಾಗೆ ಆಡಿದ ಕಟ್ಟುನಿಟ್ಟಿನ ಮಾತುಗಳು ವ್ಯರ್ಥ ಹೋಗಿಲ್ಲ ಎಂಬುದು ಸ್ಪಷ್ಟವಿತ್ತು. ಒ‌ಆ ಯವರ ಮನಸ್ಸಿನ ವಿರುದ್ಧ ಕೈಗೊಂಡ ತನಿಖೆ ತನ್ನ ವಿರುದ್ಧ ಹೋಗುವ ಭಯ ಫಿರೋಜನಿಗಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ ! ಪತ್ರದ ಪ್ರತಿಯೊಂದನ್ನು ಇಟ್ಟುಕೊಂಡಿರಬೇಕು. ಖಂಬಾಟಾ, ಇಟ್ಟುಕೊಳ್ಳಲಿ, ತನಿಖೆ ಮುಗಿದ ಮೇಲೆ ಬೇಕಾದರೆ ಜೇನುತುಪ್ಪ ಹಚ್ಚಿ ಚೆನ್ನಾಗಿ ನೆಕ್ಕಲಿ_ತನಗೇನಂತೆ ! ರೆಡ್ಡಿ ಕೊಟ್ಟ ಪತ್ರವನ್ನು ಓದುವ ಮೊದಲೇ ಹರಿದೊಗೆಯಬಾರದಿತ್ತು. ಅದರಲ್ಲಿ ಉಲ್ಲೇಖಿಸಿದ ಫಿರೋಜನ ಲಫಡಾಗಳಾದರೂ ಏನೇನು ಎನ್ನುವದು ಗೊತ್ತಾಗುತ್ತಿತ್ತು….

ಆದರೂ ನಾಗಪ್ಪ ತನ್ನಷ್ಟಕ್ಕೇ ಖುಶಿಯಾಗಿದ್ದ. ಅಂತೂ ಇನ್ನೆರಡು ದಿನಗಳಲ್ಲೇ ಇದೆಲ್ಲದರ ಇತ್ಯರ್ಥವಾಗುತ್ತದೆಯಲ್ಲ_ಕೊನೆಗೊಮ್ಮೆ, ಎಂಬ ವಿಚಾರದಿಂದಲೋ, ತನಿಖೆಯ ಮುಖ್ಯ ಉದ್ದೇಶ ತನ್ನಿಂದ ಮಾಹಿತಿಯನ್ನು ದೊರಕಿಸಿಕೊಳ್ಳುವುದೇ ಆಗಿದೆ ಎಂದು ಆ‌ಒ‌ಆ ಯವರು ಕೊಟ್ಟ ಭರವಸೆಯಿಂದಲೋ_ಕಳಕೊಂಡ ಗೆಲುವನ್ನು ತಿರುಗಿ ಪಡೆದಿದ್ದ : ಮಧ್ಯಾಹ್ನದ ಊಟಕ್ಕೆ ‘ಶೇರ್-ಏ-ಪಂಜಾಬಿ’ಗೇ ಹೋಗಬೇಕು. ಚಿಕನ್ ಬಿರ್ಯಾಣಿಯ ಜೊತೆಗೆ ಬಿಯರ್ ಕುಡಿಯಬೇಕು. ತಿರುಗಿ ಬಂದ ಮೇಲೆ ಗಡದ್ದಾಗಿ ನಿದ್ದೆ ಮಾಡಬೇಕು. ಈವತ್ತೂ ಜಾನಕಿ ರಾತ್ರಿಯ ಊಟಕ್ಕೆ ತಮ್ಮಲ್ಲೇ ಬಾ ಎಂದರೆ ಹೋಗಬೇಕು….. uಟಿಜeಜಿiಟಿeಜ
– ಅಧ್ಯಾಯ ಇಪ್ಪತ್ತೊಂಬತ್ತು –

ಬಿಯರಿನ ಸುಖದಾಯಕ ಅಮಲಿನಲ್ಲಿ ಗಡದ್ಧಾಗಿ ನಿದ್ದೆ ಮಾಡಿ ಏಳುವ ಹೊತ್ತಿಗೆ ಮಧ್ಯಾಹ್ನದ ನಾಲ್ಕು ಗಂಟೆ. ತುಂಬ ಪ್ರಸನ್ನ ಮನಃಸ್ಥಿತಿಯಲ್ಲಿರುವಾಗಲೇ ಎಚ್ಚರಗೊಂಡು ಹಾಸಿಗೆಯಲ್ಲಿ ಕೂತವನು, ಚಾಳಿನ ತುಂಬ ಹರಡಿಕೊಂಡ ನಿಶ್ಯಬ್ದ ಕಿವಿಗೆ ಬಡಿದಂತಾಗಿ, ಅರೆ ! ಎಂದುಕೊಂಡ. ಗಂಡಸರೆಲ್ಲ ಕೆಲಸಕ್ಕೆ ಹೋಗಿದ್ದರಿಂದ ಚಾಳುಗಳಲ್ಲಿ ಹೆಂಗಸರಷ್ಟೇ. ಮಕ್ಕಳು ಕೂಡ ಸಾಲೆ ಕಾಲೇಜುಗಳಿಗೆ ಹೋಗಿರಬೇಕು. ತಾನೊಬ್ಬನು ಮಾತ್ರ ಕಾಯಿಲೆಯಾದವನ ಹಾಗೆ ಇಡೀ ದಿನ ಮನೆಯಲ್ಲಿರಬೇಕಾದ ಪರಿಸ್ಥಿತಿಯ ನೆನಪು ಮತ್ತೆಲ್ಲಿ ತನ್ನ ಇದೀಗಿನ ಖುಶಿಯ ಮೂಡನ್ನು ಕೆಡಿಸೀತೋ ಎನ್ನುವ ಭಯವಾಗಿ ಹಾಸಿಗೆ ಬಿಟ್ಟು ಎದ್ದವನೇ ಮೋರಿಗೆ ಹೋಗಿ ಐದು ಮಿನಿಟುಗಳವರೆಗೆ ನಲ್ಲಿಯ ನೀರನ್ನು ಒಂದೇ ಸಮನೆ ಮೋರಿಗೆ ತೋಕುತ್ತ ನಿಂತ. ಬಿಯರಿನ ಅಮಲು ಸಂಪೂರ್ಣವಾಗಿ ಇಳಿದು ಕಣ್ಣು ಮನಸ್ಸುಗಳೆರಡೂ ಈಗ ತಿಳಿಯಾಗಿವೆ ಎಂದೆನ್ನಿಸುವ ಹೊತ್ತಿಗೆ ಚಹ ಕುಡಿಯುವ ತಲಬು ಬಂದಿತು. ಅದರ ಜೊತೆಗೇ ಜಾನಕಿಯ ನೆನಪು. ಅಂದಹಾಗೆ ಜಾನಕಿ, ತನ್ನ ಮನಸ್ಸಿನ ಮೇಲೆ ತಾನು ತಿಳಿದದ್ದಕ್ಕಿಂತ ಹೆಚ್ಚು ಪ್ರಭಲವಾದ ಪ್ರಭಾವ ಬೀರಿರಬಹುದೇ ? ನಿನ್ನೆ ರಾತ್ರಿಯಿಂದಲೂ ಅವಳ ನೆನಪು ಆಗೀಗ ಕಾಡುತ್ತಲೇ ಇದೆ. ತುಂಬ ಕಾಮುಕಳಾದ ಹೆಣ್ಣು. ನಿನ್ನೆ ಸಂಜೆಯಿಂದ ತಿರುಗಿ ಕಣ್ಣಿಗೆ ಬೀಳಲೇ ಇಲ್ಲವಲ್ಲ. ಮನೆಯಲ್ಲೇ ಇದ್ದಂತಿಲ್ಲ. ಮಧ್ಯಾಹ್ನ ಊಟಮಾಡಿ ಬರುವಾಗಲೂ ಕದಕ್ಕೆ ಬೀಗವಿದ್ದಹಾಗಿತ್ತು. ಚಹಕ್ಕೆ ಕೆಳಗಿನ ರೆಸ್ಟೋರೆಂಟಿಗೇ ಹೋದರಾಯಿತು. ಸ್ಟೋವ್ ಹೊತ್ತಿಸುವುದೆಂದರೆ ಬೇಸರವೆನಿಸುತ್ತದೆ. ಆಫೀಸಿಗೆ ಹೋಗುವುದನ್ನು ನಿಲ್ಲಿಸಿದಂದಿನಿಂದ ತಾನು ಸೋಮಾರಿಯಾಗುತ್ತಿದ್ದೇನೆಯೇ ? ಮದುವೆಯಾದರೆ ಹೇಗೆ ? ಈಗಿನ ನೌಕರಿಯನ್ನು ಬಿಡಬೇಕಾಗಿ ಬಂದರೆ ಹಳ್ಳಿಯ ಹೆಣ್ಣನ್ನೇ ಮದುವೆಯಾಗುತ್ತೇನೆ_ಜಾನಕಿಯಂತವಳನ್ನು ! ರಾಣಿಯನ್ನೇ ಮದುವೆಯಾದರೆ ಹೇಗೆ ?…ತನ್ನಷ್ಟಕ್ಕೇ ಖುಶಿಯಿಂದ ನಕ್ಕ. ತಾನು ಪಡುತ್ತಿದ್ದ ಚಿತ್ರಹಿಂಸೆಯಿಂದ ತಪ್ಪಿಸಿಕೊಳ್ಲಲು ಇಂತಹದನ್ನೆಲ್ಲ ಯೋಚಿಸುತ್ತಿದ್ದೇನೆ ಎಂಬ ಅರಿವು ಬಂದು_ಏ ಬೋಳೀಮಗನೇ ಎಂದು ಬಹಳ ಖುಶಿಯಿಂದ ತನ್ನನ್ನು ತಾನೇ ಬೈದುಕೊಂಡ.

ಈಗ ಕೆಳಗೆ ಹೋಗುತ್ತಿದ್ದದ್ದು ಬರಿಯೆ ಚಹ ಕುಡಿಯುವುದಕ್ಕಾದರೂ ಟ್ರಂಕಿನೊಳಗಿಂದ ತನ್ನ ಪ್ರೀತಿಯ ನೀಲೀಬಣ್ಣದ ಬುಶ್-ಶರ್ಟ್ ಹಾಗೂ ಕ್ರೀಮ್-ಕಲರ್ ಟೆರ್ರೀಕಾಟ್ ಪ್ಯಾಂಟ್ ತೆಗೆದ. ಅವನ್ನು ಹಾಕಿಕೊಳ್ಳುವಾಗ_‘ಇದು ನಿನ್ನೆ ಮೇರಿ ಫೋನ್ ಮೇಲೆ ಫಿರೋಜನ ಉಡುಪನ್ನು ಬಣ್ಣಿಸಿದ ರೀತಿಗೆ ಪ್ರತಿಕ್ರಿಯೆಯಲ್ಲವೇನೋ ?’ ಎಂದು ಒಳಗಿನಿಂದ ಎದ್ದ ಆಕ್ಷೇಪಣೆಯನ್ನು ಲಕ್ಷ್ಯಕ್ಕೆ ತಂದುಕೊಳ್ಳದೇ, ಯಾರಿಗೆ ಗೊತ್ತು_ಇದರಲ್ಲಿ ಜಾನಕಿಯ ಮೇಲೆ ಛಾಪು ಹಾಕುವ ಉದ್ದೇಶವಿದ್ದರೂ ಇದ್ದೀತು ಎಂದುಕೊಂಡ. ಕನ್ನಡಿಯ ಎದುರು ನಿಂತು ತನ್ನನ್ನು ತಾನೇ ಮೆಚ್ಚಿಕೊಳ್ಳುತ್ತಿರುವಾಗ ಹಿಂದೊಮ್ಮೆ ಮೇರಿ ಇದೇ ಡ್ರೆಸ್ಸನ್ನು ಮೆಚ್ಚುತ್ತ_Iಣ goes so ತಿeಟಟ oಟಿ ಥಿou ಎಂದದ್ದು ನೆನಪಾಗಿ ನಾಲಗೆಯ ತುದಿಯವರೆಗೆ ಬಂದ ಬಯ್ಗಳನ್ನು ಪ್ರಯತ್ನಪೂರ್ವಕವಾಗಿ ತಡೆದುಕೊಂಡ : ಮೇರಿ ತಾನು ತೊಟ್ಟ ಬುಶ್-ಶರ್ಟನ್ನು ಹೊಗಳುತ್ತ ಅಂದಿದ್ದಳು_‘ಬುಶ್-ಶರ್ಟನ್ನು ಹಾಕಿಕೊಂಡಾಗ ಎಲ್ಲಕ್ಕೂ ಮೇಲಿನ ಎರಡು ಗುಂಡಿಗಳನ್ನು ಹಾಕಬಾರದು. ಮೇಲಾಗಿ_‘ಙou hಚಿve suಛಿh ಚಿ bಡಿoಚಿಜ ಛಿhesಣ ಚಿಟಿಜ ಣhiಛಿಞ ಟಿeಛಿಞ…. ಆoಟಿ’ಣ ಥಿou ಞಟಿoತಿ giಡಿಟs ಟiಞe ಣhe hಚಿiಡಿಥಿ ಛಿhesಣ ಣhಚಿಣ ಠಿeeಠಿs ಣhಡಿough ಣhe oಠಿeಟಿ ಛಿಚಿಟಟಚಿಡಿ….?’ ಆಗ ಯಾವ ರೀತಿಯಿಂದ ಪ್ರತಿಕ್ರಿಯಿಸಿದ್ದೆನೋ ಎನ್ನುವುದು ಅವನಿಗೆ ನೆನಪಿಲ್ಲ. ಆದರೆ ಈಗ ಬಂದ ನೆನಪಿನಿಂದ ಮಾತ್ರ_ಬುಶ್-ಶರ್ಟಿನ ಎಲ್ಲ ಗುಂಡಿಗಳನ್ನೂ ಭದ್ರವಾಗಿ ಸಿಕ್ಕಿಸಿಕೊಳ್ಳುವಾಗ, ತುಸು ಮ್ಲಾನಗೊಂಡ : ಣhe hಚಿiಡಿಥಿ ಛಿhesಣ_mಥಿ ಜಿooಣ ಎಂದುಕೊಳ್ಳುತ್ತ ಕದದ ಸಮೀಪದ ಸ್ಟೂಲಿನ ಮೇಲೆ ಕೂತಾಗ ಬೂಟು ಹಾಕಿಕೊಳ್ಳುವ ಹುಕ್ಕಿ ಬಂದಿತು. ಬೂಟುಗಳನ್ನು ಅರಿವೆಯ ಚಿಂದಿಯಿಂದ ಚೆನ್ನಾಗಿ ಉಜ್ಜಿ ಲಕಲಕಿಸುವಂತೆ ಮಾಡಿ ಒಂದು ಕಾಲಿನ ಚೀಲ ಹಾಗೂ ಬೂಟು ಹಾಕಿಕೊಂಡು ಇನ್ನೊಂದು ಕಾಲಿನ ಚೀಲವನ್ನು ಹಾಕಿಕೊಳ್ಳಬೇಕು ಎಂದು ಕೈಗೆ ಎತ್ತಿಕೊಂಡಿದ್ದನಷ್ಟೇ_ನಡುವೆಯೇ ಬಂದ ಒಂದು ಹುಚ್ಚು_ವಿಕಾರಕ್ಕೆ ಸ್ಟೂಲಿನಿಂದ ಎದ್ದು ಕದ ತೆರೆದು ಮಗ್ಗುಲುಮನೆಯ ಕದಕ್ಕೆ ಇನ್ನೂ ಬೀಗವೆದೆಯೇ ಎಂದು ನೋಡುವುದಕ್ಕೂ ಅರ್ಜುನ್‌ರಾವರ ಮುದಿ ತಾಯಿ ಸಂಡಾಸಿಗೆ ಹೋಗಿ ಹಿಂತಿರುಗಿ ಬರುವುದಕ್ಕೂ ಸರಿಯಾಯಿತು :

‘ಯಾರು_ಜಾನಕಿ ಬೇಕಿತ್ತೇ ? ಅವರು ಯಾರೂ ಇಲ್ಲ. ಬೆಳಿಗ್ಗೇ ತವರು ಮನೆಗೆ ಹೋಗಿದ್ದಾಳೆ_ಕಲ್ಯಾಣಕ್ಕೆ. ಗಂಡನೇ ಕಳಿಸಿಕೊಟ್ಟ.’ ಎಂದ ಮುದುಕಿಯ ಮೋರೆಯ ಮೇಲೆ ವ್ಯಕ್ತವಾದ_ಜಿಗುಪ್ಸೆಗೆ ಹತ್ತಿರವಾದ_ಭಾವನೆಯ ಅರ್ಥ ಹೊಳೆಯದೇ ನಾಗಪ್ಪ ಗೊಂದಲಿಸಿದ. ತತತ ಪತತ ಮಾಡುತ್ತ ಹಲ್ಲು ಕಿಸಿದು ನಕ್ಕ, ಮುದುಕಿ ಇನ್ನೂ ಬಾಗಿಲಲ್ಲೇ ನಿಂತು : “ಎಲ್ಲಿ ಸಿನೇಮಾಕ್ಕೆ ಹೊರಟೆಯಾ ? ಇನ್ನೂ ಎಷ್ಟು ದಿನ ರಜೆ ನಿನ್ನದು ?” ಎಂದು ಕೇಳಿದ ಧಾಟಿ ಸೇರಲಿಲ್ಲ. ಬೇರೆ ಯಾವಾಗಲಾದರೆ ಈ ಇಲ್ಲದ ಉಪದ್ವ್ಯಾಪದ ಮುದುಕಿಗೆ ಸರಿಯಾಗಿ ಜವಾಬು ಕೊಡದೇ ಇರುತ್ತಿರಲಿಲ್ಲ. ಆದರೆ ಈಗ ಅವಳು ತನ್ನನ್ನು ತೀರ ತಪ್ಪು ಸನ್ನಿವೇಶದಲ್ಲಿ ಸಂಧಿಸಿದ್ದರಿಂದ ಹುಟ್ಟಿದ ಅಪರಾಧಭಾವನೆ ಬಾಯಿ ಬಿಗಿಹಿಡಿಯುವಂತೆ ಮಾಡಿತ್ತು. ಆದರೂ ತನ್ನ ತೋಲವನ್ನು ಕಾಯುತ್ತ_”ನಿನ್ನೆ ಮಧ್ಯಾಹ್ನ ಊಟ ಚಹ ಅವರಲ್ಲೇ ಆಗಿತ್ತು. ಬೆಳಗಿನಿಂದ ಕದಕ್ಕೆ ಬೀಗವಿದ್ದದ್ದು ನೋಡಿ ಕಾಳಜಿಯಾಯಿತು….ಮಂಗಳವಾರದಿಂದ ತಿರುಗಿ ಆಫೀಸಿಗೆ ಹೋಗಲು ಶುರುಮಾಡುತ್ತೇನೆ. ನನಗೂ ಬೇಸರ ಬಂದುಹೋಯಿತು…..ಕಾದಂಬರಿಯೂ ಮುಗಿಯುತ್ತ ಬಂದಿದೆ.” ಎಂದ. ಮುದುಕಿಗೆ ಸಮಾಧಾನವಾದಂತೆ ತೋರಲಿಲ್ಲ. ಸಮಾಧಾನ ಪಡುವ ಹೆಣ್ಣೇ ಅಲ್ಲ ಇವಳು. ತುಂಬ ಪಿರಿಪಿರಿಯ ಮುದುಕಿ : ಅವಳಿನ್ನೂ ಅಲ್ಲಿ ನಿಂತಿರುವಾಗಲೇ ಇನ್ನೊಂದು ಕಾಲಿಗೆ ಬೂಟು ಹಾಕಿಕೊಳ್ಳಹತ್ತಿದ. ಮುದುಕಿ ತನ್ನ ಎಂದಿನ ಅಧಿಕಪ್ರಸಂಗದ ಕುತೂಹಲದಿಂದ ಕೋಣೆಯ ಸುತ್ತ ಕಣ್ಣಾಡಿಸಿ ಮುಖ ಸಿಂಡರಿಸಿಕೊಂಡು ಹೊರಟುಹೋದಳು. ನಾಗಪ್ಪನ ಚಹ ಕುಡಿಯುವ ಉತ್ಸಾಹವೇ ಕುಗ್ಗಿಹೋಯಿತು. ತನ್ನ ಉಡುಪಿನ ಬಗೆಗಿನ ಉತ್ಸಾಹ ಕೂಡಾ. ಆದರೂ ಪ್ರತಿಸಲ ಪರಿಸರವನ್ನೇ ಮೇಲುಗೈಯಾಗಲು ಬಿಡಬಾರದು ಎಂದುಕೊಂಡ : ಹರೆಯದಲ್ಲೇ ಗಂಡ ಸತ್ತು ಬೋಳಿಯಾದ ಈ ಮುದುಕಿಗೆ ಪ್ರತಿಯೊಂದು ಗಂಡು-ಹೆಣ್ಣಿನ ಸಂಬಂಧದಲ್ಲಿ ದರಿದ್ರ ಕುತೂಹಲ. ಇಷ್ಟೇ : ತನ್ನಿಂದಾಗಿ ಪಾಪ, ಜಾನಕಿಗೆ ತೊಂದರೆ ಬರದಿದ್ದರೆ ಸಾಕು. ಅವಳು ತನ್ನ ಬಗ್ಗೆ ತೋರಿದ ಆಸಕ್ತಿಯ ಬಗ್ಗೆ ಗಂಡನಿಗೇನಾದರೂ ಗುಮಾನಿ ಬಂದಿರಬಹುದೇ ? ….ಹಾಗಾದರೆ ತಾನೇ ಜಾಗ್ರತೆ ವಹಿಸುವದೊಳ್ಳೆಯದು…..

ಮುದುಕಿಯ ಫಾಜೀಲ ಉಪದ್ವ್ಯಾಪದ ಪರಿಣಾಮವೆಂದರೆ ಕೆಳಗಿನ ‘ಕೃಷ್ಣವಿಲಾಸ’ಕ್ಕೆ ಹೋಗುವದನ್ನು ಬಿಟ್ಟು ನೇರವಾಗಿ_ ಇನ್ನೆಂದೂ ಇಲ್ಲಿ ಕಾಲಿಡಲಾರೆನೆಂದು ಆಣೆಮಾಡಿಕೊಂಡ_‘ಸಂತೋಷಭವನ’ಕ್ಕೇ ಬಂದದ್ದು. ಬೆನ್-ಹ್ಯಾಮ್-ಹಾಲ್-ಲೇನ್ ಒಳಗಿನಿಂದ ಹಾದುಹೋಗುವಾಗ ಬೇಕೆಂದೇ ಹೆಜ್ಜೆಗಳ ವೇಗವನ್ನು ತಗ್ಗಿಸಿದ : ತಾಜಾತನದಿಂದ ಲಕಲಕಿಸುವ ಕಾಯಿಪಲ್ಲೆ. ಹೂವು, ಹಣ್ಣುಹಂಪಲುಗಳಿಂದಾಗಿ ಪ್ರತಿಸಲದಂತೆ ಹನೇಹಳ್ಳಿ ಮನಸ್ಸನ್ನು ಮುತ್ತಿಕೊಂಡಿತು. ಜಾಜೀಹೂಗಳ ವಾಸನೆಯಂತೂ ತಮ್ಮ ಮನೆಯಕತ್ತಲೆ ತುಂಬಿದ ದೇವರ ಕೋಣೆಯ ನೆನಪು ಬಂದಿತು. ಜೊತೆಗೇ, ಭಾಷೆಯ ಮೇಲಿನ್ನೂ ಪ್ರಭುತ್ವ ಬಂದಿರದ ಬಾಲ್ಯದಲ್ಲಿಯ ಅನುಭವ-ಚಿತ್ರವೊಂದು ಈಗ ಮಾತಿನಲ್ಲಿ ಪುನರವತರಿಸಲು ಹವಣಿಸುತ್ತಿದೆ ಎನ್ನುವಂತಹ ಅನ್ನಿಸಿಕೆಯಿಂದಲೇ ಮನಸ್ಸು ಪುಲಕಿತವಾಯಿತು. ಎರಡು ದಿನಗಳ ಹಿಂದೆ ತನ್ನನ್ನು ದಾದಾ ಎಂದು ಕರೆದು ಹೂಜಡೆಯನ್ನು ಮಾರಿದ ಚಿಕ್ಕ ಹುಡುಗಿ ಕಣ್ಣಿಗೆ ಬೀಳುತ್ತಾಳೋ ಎಂದು ಅತ್ತಿತ್ತ ನೋಡಿದ. ಅವಳು ಬಂದಿರಲಿಲ್ಲವೆಂದು ತೋರಿತು. ಹೂವನ್ನು ಕೊಳ್ಳುವ ತವಕವನ್ನೂ (ಹೇಳದೇ ಕೇಳದೇ ಬಂದ ಜಾನಕಿಯ ನೆನಪನ್ನೂ) ಹತ್ತಿಕ್ಕಿ ಸೀದ ಹೊಟೆಲ್ಲಿನತ್ತ ಹೆಜ್ಜೆ ಹಾಕಹತ್ತಿದ.

ಹೊಟೆಲ್ಲಿನಲ್ಲಂದು ನಾಯಕನಿರಲಿಲ್ಲ. ಕೌಂಟರಿನಲ್ಲಿ ಅವನ ಶ್ರೀಧರ ಕಾಮತ ಕೂತಿದ್ದ.ನಾಯಕನದೇ ಯೂನಿಫಾರ್ಮು : ಅದೇ ಬಣ್ಣದ ಕುರ್ತಾ : ತಲೆಗೆ ಗಾಂಧೀ ಟೊಪ್ಪಿಗೆ. ಎರಡೂ ಕೈಗಳ ಬೆರಳುಗಳಿಗೆ ಮೂರು ಮೂರು ಉಂಗುರಗಳು. ಕವಳ ತಿಂದು ಕೆಂಪಾದ ತುಟಿಗಳು : ಎಲ್ಲ ಹೊಟೆಲ್ಲು ಮಾಲೀಕರೇ ರಂಗೇಲ ಸೂಳೇಮಕ್ಕಳು ಅನ್ನಿಸಿತು :ಕೌಂಟರಿನ ಮೇಲೆ, ಬೆಳ್ಳಿಯ ವಾಟಿಯಿಂದ ತುಂಬಿದ ಅಕ್ಕಿಕಾಳಿನಲ್ಲಿ ಕೆಂಪು ಕಾಲುಗಳನ್ನು ಹುಗಿದು ಬಾಯಿಂದ ಮಾದಕವಾದ ಹೊಗೆ ಬಿಡುತ್ತ, ಬೂದಿ ಉಗುಳುತ್ತ ನಿಂತ ಆರು ಊದಿನಕಡ್ಡಿಗಳು. ಕೇಳಿದರೆ ಮೈಸೂರಿನಿಂದಲೇ ತರಿಸಿದವುಗಳೆಂದು ಹೇಳದೇ ಇರಲಾರ. ಊದಿನಕಡ್ಡಿಗಳ ಮಗ್ಗುಲ ಹರಿವಾಣದಲ್ಲಿ ಚಿಗುರೆಲೆಗಳ ಬೀಡಾಗಳು_ಓರಣವಾಗಿ ಒಟ್ಟಿಟ್ಟ ರಾಶಿಯಲ್ಲಿ ಶಿಸ್ತಿನಿಂದ ಕುಳಿತಿದ್ದವು. ಬೆನ್ನ ಹಿಂದಿನ ಕಂಬದ ಮೇಲೆ ಲಕ್ಷ್ಮೀ,ಸರಸ್ವತೀ ಹಾಗೂ ಗಣಪತಿಗಳ ಗಾಜು ಹಾಕಿ ಫ್ರೇಮ್ ಮಾಡಿಸಿದ ಚಿತ್ರಗಳು. ಮೂರಕ್ಕೂ ಜಾಜೀಹೂಗಳ ಸರಗಳು. ಗಲ್ಲೆಯ ಮೇಲೇ ಇರಿಸಿದ ದೊಡ್ಡ ಚಿತ್ರ ಸ್ವಾಮಿಗಳದಿರಬೇಕು. ಅವರನ್ನು ತಾನೆಂದಿಗೂ ನೋಡಿಯೇ ಇರಲಿಲ್ಲ. ಅವರ ಚಿತ್ರಕ್ಕೂ ತುಳಸಿ, ಹೂಗಳ ದೊಡ್ಡ ಹಾರ-ಇದಿರುಗಡೆ, ಹಣೆಗೆ ಕುಂಕುಮ ಹಚ್ಚಿಕೊಂಡ ಸಣ್ಣಗೆ ಉರಿಯುವ ನೀಲಾಂಜನದ ದೀಪ. ಶ್ರೀಧರ ಇವನನ್ನು ಕಂಡದ್ದೇ ತಡ ತನ್ನ ಪೇಟೆಂಟ್ ನಗುವನ್ನು ಈ ಕಿವಿಯಿಂದ ಆ ಕಿವಿಯತನಕ ಹರಡುವಂತೆ ಬೆಳಗಿಸಿದ : ‘ಓಹೋಹೋ….ಪ್ರೊಫೆಸರರ ಸವಾರಿ ನಮ್ಮ ಕಡೆ ಬಹಳ ದಿನಗಳ ಮೇಲೆ ದಯಮಾಡಿಸಿತು. ಬನ್ನಿ ಬನ್ನಿ ಬನ್ನಿ….” ಎಂದು ಇವನ ಬರುವಿನಿಂದ ಬಹಳ ಸಂತೋಷವಾಯಿತೆನ್ನುವಂತೆ ಹರ್ಷೋದ್ಗಾರ ಮಾಡಿದ. “ಮೊನ್ನೆ ಬಂದಾಗ ನೀನಿರಲಿಲ್ಲ.” ಎನ್ನುತ್ತ ಅವನತ್ತ ಹೆಚ್ಚು ಲಕ್ಷ್ಯ ಕೊಡದೇ ಸೀದ ಒಳಗೆ ಹೋಗಿ ತಾನು ಹಿಂದಿನ ಸರತಿ ಬಂದಾಗ ಕೂತ ಮೇಲಿನ ರೂಮಿಗೇ ಹೋದ. ಮಾಣಿ ಬಂದ ಮೇಲೆ ಉತ್ತಪ್ಪ ಕಾಫಿಗಳಿಗೆ ಆರ್ಡರ್ ಕೊಟ್ಟ. ವಡೆ ಬಿಸಿಬಿಸಿಯಾಗಿವೆ ಎಂದು ಹೇಳಿ ಮಾಣಿ ಬಾಯಲ್ಲಿ ನೀರೂರುವಂತೆ ಮಾಡಿದಾಗ, ಒಂದು ಪ್ಲೇಟು ವಡೆಯನ್ನೂ ತರುವಂತೆ ಹೇಳಿ ಕನ್ನಡ ಪತ್ರಿಕೆ ಯಾವುದಾದರೂ ಇದ್ದರೆ ತಾ ಎಂದ. ಅವನು ಸಂಯುಕ್ತ ಕರ್ನಾಟಕ ಹಾಗೂ ಪ್ರಜಾಮತಗಳನ್ನು ತಂದು ಕೊಟ್ಟ.

ಪತ್ರಿಕೆಗಳನ್ನು ಓದದೇ ಎಷ್ಟು ದಿನಗಳಾದವು ! ಹಾಗೆ ನೋಡಿದರೆ_ ಏನನ್ನೂ ಓದದೇ ! ಕೈಗೆ ತೆಗೆದುಕೊಂಡ ಪತ್ರಿಕೆಯ ಪುಟಗಳನ್ನು ತಿರುವಿ ಹಾಕುತ್ತಿರುವಾಗ ಯಾವ ಸುದ್ದಿಯೂ ಮನಸ್ಸಿನ ಮೇಲೆ ನಾಟುತ್ತಿರಲೇ ಇಲ್ಲ. ಗುಪ್ತ-ರೋಗಗಳನ್ನು ಗುಣಪಡಿಸುವ ಗ್ಯಾರಂಟೀ ಕೊಡುವ ಡಾಕ್ಟರನೊಬ್ಬನ ಜಾಹೀರಾತು ; ಜೊತೆಗೇ ನಿಮ್ಮ ಭವಿಷ್ಯವನ್ನು ಈಗಲೇ ತಿಳಿಯಿರಿ ಎಂದು ಕೂಗುವ ಜ್ಯೋತಿಷಿಯ ಜಾಹೀರಾತು_ಎರಡರ ಮೇಲೂ ಆಸ್ಥೆ ಇಲ್ಲದೇ ಕಣ್ಣುಹಾಯಿಸಿದ. ಥಟ್ಟನೆ ಪ್ರಜಾಮತ ಕೂಡ ವಾರಭವಿಷ್ಯ ಪ್ರಕಟಿಸುತ್ತದೆ ಎಂಬುದು ನೆನಪಾಗಿ ಬರಿಯೆ ಕುತೂಹಲಕ್ಕಾಗಿ ಓದಿದರೇನಂತೆ ಎಂದುಕೊಂಡು ಅದರ ಪುಟ ಮಗುಚಿ ನೋಡಿದ : “ಸಿಂಹರಾಶಿ : ಆಗದವರ ಪಿತೂರಿಗೆ ಬಲಿ ಬೀಳಬಹುದು. ಸಹೋದ್ಯೋಗಿಗಳೊಂದಿಗೆ, ಬಂಧುಗಳೆಂದು ತೋರಿಸಿಕೊಳ್ಳುವವರೊಂದಿಗೆ ವ್ಯವಹರಿಸುವಾಗ ಜಾಗ್ರತೆ ವಹಿಸಿರಿ. ತಾ. ೫. ೬ ಅಶುಭ ; ೮. ೯. ೧೦ ಶುಭ.” ಅಷ್ಟು ಹೊತ್ತಿಗೆ, ಮಾಣಿ ಉತ್ತಪ್ಪ, ವಡೆಗಳನ್ನು ತಂದಿದ್ದ. ಇದು ಬರೇ ಆಕಸ್ಮಿಕ ! ಯಾವುದಕ್ಕೆ ಹೆದರಿಕೊಂಡಿರುವನೋ ಅದೇ ಕಣ್ಣಿಗೆ ಬಿದ್ದಾಗ ಮನಸ್ಸಿಗೆ ನಾಟಿತು_ಅಷ್ಟೇ. ಎಂದುಕೊಳ್ಳುತ್ತ ತಿನಿಸುಗಳ ಕಡೆಗೆ ಲಕ್ಷ್ಯ ಹರಿಯಿಸಲು ಯತ್ನಿಸಿದ. ವಿಜ್ಞಾನದಲ್ಲಿ ವಿಶ್ವಾಸವಿದ್ದ ತಾನು ಇಂಥದ್ದಕ್ಕೆಲ್ಲ ಗಮನ ಕೊಡಬಾರದು….

ಕಾಫಿ ಕುಡಿದು ಬಿಲ್ಲಿನ ಹಣವನ್ನು ಮಾಣಿಯ ಕೈಗೆ ಕೊಟ್ಟು ಬಾಕಿ ಹಣದ ಹಾದಿ ಕಾಯಹತ್ತಿದ. ಅದು ಬಂದ ಮೇಲೆ ಒಂದು ರೂಪಾಯಿ ನೋಟನ್ನು ಮಾಣಿಯ ಕೈಲಿಟ್ಟು, ನಿಚ್ಚಣಿಕೆಯ ಮೆಟ್ಟಿಲುಗಳನ್ನಿಳಿದು ಕೌಂಟರಿನತ್ತ ಹೊರಳಿ ಕೂಡ ನೋಡದೇ ಸೀದ ರಸ್ತೆ ಸೇರಿದ. ಪೋರ್ಚುಗೀಜ್ ಚರ್ಚಿನ ಕಡೆಗೆ ಹೊರಳಿ ಅಪೆರಾ_ಹೌಸ್ ಕಡೆ ರಸ್ತೆ ಹಿಡಿದ. ಟ್ರಾಮುಗಳನ್ನು ರದ್ದುಗೊಳಿಸಿ ಬಸ್ಸುಗಳೇ ಓಡಾಡುವಂತೆ ಮಾಡಿದ್ದರೂ ರಸ್ತೆಯ ನಡುವಿನ ಟ್ರಾಮ್ ಹಳಿಗಳನ್ನಿನ್ನೂ ತೆಗೆದಿರಲಿಲ್ಲ. ತೆಗೆಯುವದೂ ಇರಲಿಲ್ಲ. ಹೇಗೂ ರಸ್ತೆಗೆ ಹೊಸದಾಗಿ ಖಡಿ ಡಾಂಬರುಗಳನ್ನು ಹಾಕುವಾಗ ಇವೂ ಅವುಗಳ ಅಡಿಗೆ ಮುಚ್ಚಿಹೋಗುವವಲ್ಲ ! ತಾನು ಪೇಟೆಂಟ್ ಮಾಡಿದ ಒಂದು ಶೋಧ ರಸ್ತೆಗಳ ರಿಪೇರಿಗೇ ಸಂಬಂಧಪಟ್ಟದ್ದಾಗಿದೆ ಎಂಬುದನ್ನು ನೆನೆದ : ಆ ಶೋಧ ಕಾರ್ಯರೂಪಕ್ಕೆ ಬಂದರೆ ಮುನಿಸಿಪಾಲಿಟಿಯವರಿಗೆ ಲಕ್ಷಗಟ್ಟಲೆ ರೂಪಾಯಿಗಳ ಉಳಿತಾಯವಾಗಬಹುದು. ಕಂಪನಿಯವರಿಗೂ ದೊಡ್ಡ ಲಾಭ. ಲ್ಯಾಬೋರೇಟರಿಯ ಸಂಪರ್ಕ ತಪ್ಪಿ ಈಗ ವರ್ಷವಾಗುತ್ತ ಬಂದಿತಲ್ಲವೆ….?

ಕಣ್ಣು ಇದಿರಿಗೇ ಬೃಹದಾಕಾರದ ಸಿನೇಮಾ ಪೋಸ್ಟರುಗಳು. ಚೌಪಾಟಿಗೆ ಹೋಗುವ ಸೆಂಢರ್ಸ್ಟ್ ರೋಡಿಗೆ ಅಡ್ಡವಾಗಿ ಹರಿದ ದೊಡ್ಡ ರಸ್ತೆಯೇ ಕೆನಡೀ ಬ್ರಿಜ್. ಅದರ ನಟ್ಟನಡುವಿನ ಸೇತುವೆಯ ಕೆಳಗಿಂದ ಹೋಗುವ ರಸ್ತೆಗೆ ಇಳಿದದ್ದೇ ಹತ್ತುವ ಚಾಳೊಂದರಲ್ಲಿ ತನ್ನ ರಾಣೀ : ಎಷ್ಟೊಂದು ಬೇಸರ ಪಟ್ಟಿರುವಳೋ ಹುಡುಗಿ ! ಪರಿಚಯವಾದ ಕಳೆದ ನಾಲ್ಕು ತಿಂಗಳಲ್ಲಿ ತನ್ನನ್ನು ತುಂಬ ಹಚ್ಚಿಕೊಂಡಿದ್ದಾಳೆ. ಆಫೀಸು ಇದ್ದ ಕಟ್ಟಡದ ವೊಚ್‌ಮನ್ ನಿಂದಲೇ ಸಂಪರ್ಕ_ಅವನ ದೂರದ ತಂಗಿಯಂತೆ ! ಮೇರಿಯ ಪರಿಚಯವಾದಂದಿನಿಂದ, ತಮ್ಮ ಅಫೀಸಿನ ಮಗ್ಗುಲ ಆಫೀಸುಗಳಲ್ಲಿಯ ಹುಡುಗಿಯರ ಕೂಡ ಆಗೀಗ ಮಾತನಾಡುವ ಅವಕಾಶ ಸಿಕ್ಕಂದಿನಿಂದ ರಾಣಿ ತನ್ನ ಭಾವನೆಗಳ ಪರಿಧಿಯಲ್ಲಿ ತೆಳುವಾಗುತ್ತಿದ್ದಾಳೆಯೇ ? ಎನ್ನುವಂತಹ ಗುಮಾನಿ : ಭಾಷೆಯೇ ಇಲ್ಲದ ಸಂಬಂಧ ಇದೂ ಕೂಡ, ಹರಕು-ಮುರುಕು ಹಿಂದಿಯಲ್ಲಿ ರಾಣಿ, ಮಾತನಾಡುವುದಕ್ಕಿಂತ ಕಿಲಕಿಲ ನಗುವುದೇ ಹೆಚ್ಚು. ನಾನು ನಿನ್ನೊಬ್ಬನ ಹುಡುಗಿ ಮಾತ್ರ ಎನ್ನುವುದನ್ನು, ಒಂದು ದಿನ ಅತ್ಯಂತ ಖುಶಿಯ ಮೂಡಿನಲ್ಲಿದ್ದಾಗ, ಹಾವಭಾವಗಳಿಂದಲೇ ತಿಳಿಸುತ್ತ ಸುಖದ ಶಿಖರಕ್ಕೆ ಒಯ್ದಿದ್ದಳು.

ನಾಗಪ್ಪ ಸೆಂಢರ್ಸ್ಟ್ ರೋಡ್, ಕ್ವೀನ್ಸ್ ರೋಡ್, ಗಿರ್ಗಾಂವ್ ರೋಡ್‌ಗಳ ಕೂಟಸ್ಥಾನದಲ್ಲಿ ನಿಂತಿದ್ದ. ರಸ್ತೆಗಳ ಪ್ರತಿ ಮೂಲೆಯಲ್ಲಿ ದೊಡ್ಡದೊಡ್ಡ ಸಿನೇಮಾ ಪೋಸ್ಟರುಗಳು ತನ್ನತ್ತಲೇ ಕಣ್ಣುಬಿಟ್ಟು ನಿಂತಂತೆ ನಿಂತಿದ್ದರೂ ಯಾವುದೂ ಅರ್ಥವಾಗುತ್ತಿರಲಿಲ್ಲ. ಮನಸ್ಸು ಕೂಡ ಕೂಟಸ್ಥಾನದಲ್ಲಿ ನಿಂತ ರೀತಿ ಹೊಯ್ದಾಡುತ್ತಿತ್ತು. ಫುಟ್‌ಪಾಥಿನ ಮೇಲೆ ಚಪ್ಪಲಿ ರಿಪೇರಿಯ ಸರಂಜಾಮನ್ನು ಪಸರಿಸಿ ಕೂತ ಮೋಚಿ ಇವನು ತನ್ನ ಧಂದೆಗೆ ಅಡ್ಡಬರುವಂತೆ ನಿಂತಿದ್ದರಿಂದ_”ಸಾಬ್…. ಜರಾ ಬಾಜೂ,” ಎಂದು ಪ್ರಾರ್ಥಿಸಿದಾಗ ಥಟ್ಟನೆ ಒಂದು ನಿಶ್ಚಯಕ್ಕೆ ಬಂದವನ ಹಾಗೆ, ಅಪೆರಾ-ಹೌಸ್ ಬಸ್‌ಸ್ಟಾಪಿನಲ್ಲಿ ಅದೇ ಬಂದು ನಿಂತ ಒಂದು ಬಸ್ಸಿಗಾಗಿ ಓಡೋಡಿ ರಸ್ತೆದಾಟಿ ಹತ್ತಿದೆ. ಬಸ್ಸು ಸಿಕ್ಕಿತು. ಮೇಲಿನ ಡೆಕ್ಕಿಗೆ ಹೋಗಿ ಕೂತುಕೊಳ್ಳುವಾಗ ತನಗೆ ಬೇಡವಾದುದರಿಂದ ಬಿಡಿಸಿಕೊಂಡಂತಹ ಸುಖವಾಗಿತ್ತು. ಕಂಡಕ್ಟರ್ ಬಂದಾಗ, ವರ್ಲಿಯ ಬೆಂಗಾಲ್-ಕೆಮಿಕಲ್ಸ್-ಸ್ಟಾಪಿಗೆ ಟಿಕೆಟ್ ಬೇಡಿ ಹಣ ಕೊಟ್ಟ ಮೇಲೆಯೇ ತಾನು ಹೊರಟದ್ದು ಸೀತಾರಾಮನ ಮನೆಗೆ ಎಂಬುದು ಗೊತ್ತಾಯಿತು. ರಾಣೀ ಮನೆಗೆ ಹೋಗೋಣವೇ ಎಂದು ನಡೆದ ಹೊಯ್ದಾಟದಿಂದ ಗೆದ್ದೆ ಎಂಬ ಸಂತೋಷದ ಜೊತೆಗೇ ಹುಟ್ಟಿದ_ಅವಳನ್ನು ನಾನು ದೂರ ಮಾಡತೊಡಗಿದ್ದೇನೆಯೇ ? ಎಂಬ ವಿಚಾರದಿಂದ ಅಸ್ವಸ್ಥನಾದ. ಕೆಲ ಹೊತ್ತಿನ ಮೇಲೆ-ತಾನು ಅವಳಲ್ಲಿ ದಿನವೂ ಏನು ಹೋಗುತ್ತಿರಲಿಲ್ಲ. ಈಗಂತೂ ತಾನು ಆಫೀಸಿಗೆ ಕೂಡ ಬರದೇ ಇದ್ದದ್ದು ಅಣ್ಣನಿಂದಲೇ ಗೊತ್ತಾಗಿರಬೇಕು. ಊರಲ್ಲಿಲ್ಲವೇನೋ ಎಂದು ತಿಳಿದಾಳು….ಎಂದುಕೊಂಡ.
ಕಳಕೊಂಡ ನೆಮ್ಮದಿಯನ್ನು ಮಾತ್ರ ಮನಸ್ಸು ಬಹಳ ಹೊತ್ತಿನ ತನಕ ತಿರುಗಿ ಪಡೆಯಲೇ ಇಲ್ಲ. uಟಿಜeಜಿiಟಿeಜ
-ಅಧ್ಯಾಯ ಮೂವತ್ತು –

ಈ ಹೊತ್ತು ಶನಿವಾರ. ಶ್ರೀನಿವಾಸನಲ್ಲಿ ಊಟಕ್ಕೆ ಕರೆದಿದ್ದಾರೆ ಎಂಬುದನ್ನು ನೆನಪಿಟ್ಟುಕೊಂಡೇ ನಾಗಪ್ಪ ಹಾಸಿಗೆಯಿಂದ ಎದ್ದಿದ್ದ. ಅನೇಕ ರೀತಿಯ ಮುನ್‌ಸೂಚನೆಗಳಿಂದ ಮನಸ್ಸು ಒಂದಕ್ಕೊಂದು ವಿರುದ್ಧವಾದ ಭಾವನೆಗಳ ಎಳೆತಕ್ಕೆ ಸಿಕ್ಕಿಕೊಂಡಿತ್ತು. ನಿನ್ನೆ ಅಷ್ಟೆಲ್ಲ ಕಷ್ಟಪಟ್ಟು ಬಸ್ ಹಿಡಿದು ಸೀತಾರಾಮನಲ್ಲಿ ಹೋದರೆ ಮನೆಗೆ ದೊಡ್ಡ ಬೀಗ. ಥತ್ ಎರಡೂ ಮಗನೇ ಎಂದು ಬೈದು ಬೀಗಕ್ಕೊಂದು ಚೀಟಿ ಸಿಕ್ಕಿಸಿ ಬಂದಿದ್ದ._ಮಂಗಳವಾರ ಮುಂಜಾನೆ ಅವನ ಆಫೀಸಿನಲ್ಲೇ ಬಂದು ಭೆಟ್ಟಿಯಾಗುತ್ತೇನೆ ಎಂಬುದಾಗಿ. ಬಸ್ಸಿನಿಂದಲೇ ತಿರುಗಿ ಅಪೇರಾ-ಹೌಸ್ ಕಡೆ ಪ್ರಯಾಣ ಬೆಳೆಸಿದಾಗ ಬಸ್ಸಿನಿಂದ ಕಾಣುತ್ತಿದ್ದ ಪರಿಸರ ಅನೇಕ ಆಸೆ-ಆಕಾಂಕ್ಷೆಗಳ ಜೊತೆಗೆ ಆತಂಕಕ್ಕೂ ಕಾರಣವಾಯಿತು. ದಿನವೂ ಆಫೀಸಿಗೆ ಹೋಗುವಾಗ ಕಾಣುತ್ತಿದ್ದ ದೃಶ್ಯಗಳು ಮೈಮೇಲೆ ಮುಳ್ಳು ನಿಲ್ಲಿಸುತ್ತಿದ್ದಾಗಲೇ, ಇಷ್ಟು ದಿನ ತನಗೆ ಅತ್ಯಂತ ಪ್ರಿಯವಾದ ಪರಿಸರ ಪರಿಚಯ ಹಿಡಿಯಲು ನಿರಾಕರಿಸುವ ಗೆಳೆಯನಂತೆ ಕಂಡು ಮನಸ್ಸು ಭಾರವಾಗಿತ್ತು. ಕೆಲವು ತಿಂಗಳ ಹಿಂದೆ ಮುಂಬಯಿಯ ಪ್ರಖ್ಯಾತ ಇಂಗ್ಲಿಷ್ ವಾರಪತ್ರಿಕೆಯಲ್ಲಿ ಪ್ರಕಟವಾದ_ಕನ್ನಡ ಸಣ್ಣ ಕತೆಗಳ ಪರಿಚಯವನ್ನು ಮಾಡಿಕೊಡುವ ಉದ್ದೇಶದಿಂದ ತನ್ನ ಗೆಳೆಯನೇ ಬರೆದ_ಲೇಖನದಲ್ಲಿ ತನ್ನ ಹೆಸರಿನ ಉಲ್ಲೇಖ ಕೂಡ ಇರಲಿಲ್ಲ. ಓದಿದಾಗ ತುಂಬ ವೇದನೆಯಾಗಿತ್ತು. ಮುಂದೆ ಕೆಲವು ವಾರಗಳವರೆಗೆ ಪ್ರತಿ ವಾರಪತ್ರಿಕೆಯನ್ನು ಕೊಂಡು ಓದಿದ್ದ_ತನ್ನ ಸಣ್ಣ ಕತೆಗಳ ಬಗ್ಗೆ ಅಭಿಮಾನ ಇಟ್ಟುಕೊಂಡವರು ಯಾರಾದರೂ ಪ್ರತಿಕ್ರಿಯಿಸುತ್ತಾರೋ ಎಂದು ನೋಡಲು. ಇಲ್ಲ, ಯಾರಿಂದಲೂ ಪ್ರತಿಕ್ರಿಯೆಯಿಲ್ಲ ! ತನ್ನ ಆಫೀಸಿನಲ್ಲಿಯ ಕೆಲ ಸಹೋದ್ಯೋಗಿಗಳು ಮಾತ್ರ ಆ ಲೇಖನದ ಬಗ್ಗೆ ಚ್ಚುಚ್ಚಿ ಕೇಳಿದ್ದರು. ಕನ್ನಡ ಸಾಹಿತ್ಯದ ಮಟ್ಟಿಗೆ ತಾನು ಸತ್ತು ಈಗಾಗಲೇ ಮೂರು ವರುಷಗಳೇ ಸಂದಿವೆ.

ಗ್ಲ್ಯಾಸ್ಕೋ ಲ್ಯಾಬೋರೇಟರಿಯ ದೊಡ್ಡ ಕಟ್ಟಡಗಳ ಸಾಲು. ಪೋದಾರ ಹಾಸ್ಪಿಟಲ್. ಜಪಾನೀ ಬುದ್ದ-ಮಂದಿರ. ದೂರ ಹಾಜೀ ಅಲ್ಲೀಯ ಆಚೆಯ ಪೋರ್ಜೆಟ್ ಹಿಲ್ ಗುಡ್ಡಗಳಲ್ಲಿ ತಲೆಯೆತ್ತಿ ನಿಂತ ಹೊಚ್ಚಹೊಸ ಸ್ಕಾಯ್‌ಸ್ಕ್ರೇಪರಗಳು….ಎಲ್ಲ ಎಲ್ಲ ತನ್ನ ಅಸ್ತಿತ್ವಕ್ಕೇ ನಿರಾಸಕ್ತವಾಗಿ ಬೆನ್ನು ತಿರುವಿ ನಿಂತುಬಿಟ್ಟಿವೆ ಎಂಬಂತಹ_ಸಾವನ್ನು ಹೋಲುವ_ಭಾವನೆಯನ್ನು ಹೊತ್ತೇ ಫ್ಲೋರಾ ಫೌಂಟನ್ ಸ್ಟಾಪಿನಲ್ಲಿ ಇಳಿದಿದ್ದ. ಚೌಕದಲ್ಲಿಯ_ಆಳೆತ್ತರ ನೀರು ಪುಟಿಸುತ್ತಿದ್ದ_ಕಾರಂಜಿಯು ಕೂಡ ಕಳೆದುಹೋದ ಉತ್ಸಾಹವನ್ನು ತಿರುಗಿ ಕೊಡಲು ಆಮರ್ಥವಾಯಿತು. ಯಾಂತ್ರಿಕವಾಗಿಯೇ ಚರ್ಚ್‌ಗೇಟು ಸ್ಟೇಶನ್ ಕಡೆ ನಡೆಯುತ್ತಿದ್ದ ಜನಸ್ತೋಮದಲ್ಲಿ ಒಂದಾಗಿ ಕಳೆದ ಎರಡು ದಿನಗಳಿಂದ ಬರಬೇಕೆಂದು ನಿಶ್ಚಯಿಸಿದ ಏಶಿಯಾಟಿಕ್ ರೆಸ್ಟೋರೆಂಟಿಗೆ ನಡೆದಿದ್ದ. ರಾತ್ರಿಯ ಊಟವನ್ನು ಅಲ್ಲಿ ಮುಗಿಸಿ ಮನೆಗೆ ಹಿಂತಿರುಗುವಾಗ ಅರ್ಜುನ್‌ರಾವ್ ತನ್ನ ಹಾದಿಯನ್ನೇ ಕಾಯುತ್ತ ನಿಂತಹಾಗಿತ್ತು ; “ನಿಮಗೆ ನಿದ್ದೆ ಬಂದಿರದಿದ್ದರೆ….” ಎಂದು ಬಾಗಿಲಲ್ಲಿ ನಿಂತು ಆರಂಭಿಸಿದಾಗ_”ತುಂಬ ನಿದ್ದೆ ಬಂದಿದೆ. ಬೆಳಿಗ್ಗೆ ಮಾತನಾಡೋಣ. ಆಗದೇ ? ಏಕೋ ಇತ್ತಿತ್ತ ನಿಮ್ಮ ವಾರಭವಿಷ್ಯದಲ್ಲಿ ವಿಶ್ವಾಸ ಮೂಡಲು ಹತ್ತಿದೆ ನೋಡಿ…” ಎಂದು ಹೇಳಿ ರೂಮಿನ ಕಡೆ ಹೋಗಲನುವಾದಾಗ ಅಷ್ಟರಲ್ಲೇ ಸಮಾಧಾನಪಟ್ಟುಕೊಂಡವರ ಹಾಗೆ_”ಬೆಳಿಗ್ಗೆ ಚಹಕ್ಕೆ ನಮ್ಮಲ್ಲೇ ಬನ್ನಿ,” ಎಂದಿದ್ದರು. ನಾಗಪ್ಪನಿಗೆ ಈಗ ನೆನಪಿಗೆ ಬಂತು. ಎದ್ದು ಸಿದ್ಧತೆ ಮಾಡತೊಡಗಿದ…..

ನಿರೀಕ್ಷಿಸಿದಂತೆ ೮-೩೦ ಕ್ಕೆ ಸರಿಯಾಗಿ ಅರ್ಜುನ್‌ರಾವ್ ಕದ ತಟ್ಟಿದರು. ಚಹದ ಜೊತೆಗೆ ಮರಾಠೀ ಬ್ರಾಹ್ಮಣರಲ್ಲಿ ಜನಪ್ರಿಯವಾದ ಬಟಾಟೇ ಪೋವೇ. ಮನೆಯಲ್ಲಿ ಹೆಂಡತಿ ಮಕ್ಕಳು ಮಾತ್ರ. ಮುದುಕಿ ಎಲ್ಲೂ ಕಾಣಲಿಲ್ಲ. “ಅಮ್ಮ ನಿನ್ನೆ ಸಂಜೆಗಷ್ಟೇ ದಾದರ್-ಹಿಂದೂ ಕೊಲೋನಿಯ ತಮ್ಮನ ಮನೆಗೆ ಹೋಗಿದ್ದಾಳೆ.” ಎಂಬ ವಿವರಣೆಯಿಂದ ನಾಗಪ್ಪನಿಗೆ ಬಹಳ ನಿರಂಬಳವಾಯಿತು. ಅವಲಕ್ಕಿಯನ್ನು ಪ್ರಶಂಸಿಸಿ ಇನ್ನೊಂದು ಪ್ಲೇಟು ಹೊಡೆದ. ಅರ್ಜುನ್‌ರಾವರ ಹೆಂಡತಿ ಖುಶಿಯಾದಳು : ಇನ್ನೆಷ್ಟು ದಿನ ರಜೆ ನಿಮ್ಮದು ? ಎಂದು ಕೇಳುತ್ತಿರುವಾಗ ಅರ್ಜುನ್‌ರಾವ್ ನಡುವೆಯೇ ಬಾಯಿಹಾಕಿ_ಕಾದಂಬರಿ ಎಲ್ಲಿಯವರೆಗೆ ಬಂದಿದೆ ? ಎಂದು ಕೇಳಿದರು. ಗಂಡ-ಹೆಂಡತಿ ಇಬ್ಬರ ಪ್ರಶ್ನೆಗಳಿಗೂ ಒಂದೇ ಉತ್ತರ ಆಗುವ ಹಾಗೆ : ಕಾದಂಬರಿ ಇನ್ನೂ ಬರೆಯಲು ಶುರುಮಾಡಿಲ್ಲ. ನನ್ನ ಆಫೀಸಿನದೇ ಒಂದು ಕಾದಂಬರಿಯಾಗಿ ಕುಳಿತಿದೆ. ಅದನ್ನು ಮೊದಲು ನಿಭಾಯಿಸಬೇಕು. ಬಹುಶಃ ಇನ್ನೆರಡು ದಿನಗಳಲ್ಲೇ ನಾನು ಆಫೀಸಿಗೆ ಹೋಗಲು ಶುರುಮಾಡಬಹುದು_ಎನ್ನಬೇಕೆಂದುಕೊಂಡದ್ದನ್ನು ಪ್ರಯತ್ನಪೂರ್ವಕವಾಗಿ ತಡೆಹಿಡಿದ. ನಾಸ್ತಾದ ಈ ಔತಣ ವಾಗಲಿ ಗಂಡ-ಹೆಂಡಿರಿಬ್ಬರೂ ಒಂದೇ ಕಾಲಕ್ಕೆ ಕೇಳಿದ ಪ್ರಶ್ನೆಗಳಾಗಲಿ ತೋರುವಷ್ಟು ನಿರ್ಹೇತುಕವಾದವುಗಳಲ್ಲ ಎಂಬುದನ್ನು ಲಕ್ಷ್ಯಕ್ಕೆ ತಂದುಕೊಂಡವನಂತೆ_”ನೋಡಬೇಕು. ಕಾದಂಬರಿಯಂತೂ ನಾನು ಮೊದಲು ಯೋಜಿಸಿದ್ದರ ದುಪ್ಪಟ್ಟು ದೊಡ್ಡದಾಗಿ ಬೆಳೆಯಬಹುದೇನೋ ಎಂಬ ಭಯ. ಹಾಗಾದರೆ ಮಾತ್ರ ರಜೆಯ ಅವಧಿಯನ್ನು ಬೆಳೆಸಬೇಕಾಗುತ್ತದೆಯೇನೊ….”

ಅರ್ಜುನ್‌ರಾವರ ಮನೆಯಿಂದ ಹಿಂತಿರುಗಿ ಬಂದವನೇ ಶ್ರೀನಿವಾಸನ ಮನೆಗೆ ಹೋಗುವ ತಯಾರಿಗೆ ತೊಡಗಿದ. ಕ್ಷೌರ ಮಾಡಿಕೊಳ್ಳುವಾಗ ಶಿಂಪಿಯವರ ಮನೆಗೆ ಇನ್ನೂ ಬೀಗವಿದ್ದದ್ದು ಲಕ್ಷ್ಯಕ್ಕೆ ಬರದಿರಲಿಲ್ಲ. ಆದರೂ ಅದಕ್ಕೆ ವಿಶೇಷ ಮಹತ್ವ ಕೊಡಲಿಲ್ಲ. ಸ್ನಾನಕ್ಕೆ ನಿಂತಾಗ ಮೊನ್ನೆ ಹಾಕಿಕೊಂಡ ಕ್ರೀಮ್ ಕಲರ್ ಪ್ಯಾಂಟು ಹಾಗೂ ನೀಲೀ ಬಣ್ಣದ ಬುಶ್-ಶರ್ಟ್ ಧರಿಸುವದನ್ನು ನಿಶ್ಚಯಿಸಿದ. ಹಾಗೆ ನಿಶ್ಚಯಿಸುವಾಗ ಕಣ್ಣಮುಂದೆ ನಿಂತವರು : ಗಲ್ಲದಲ್ಲಿ ಗುಳಿ ಮೂಡಿಸಿ ಸ್ವಚ್ಛ ಹಲ್ಲು ತೋರಿಸಿ ನಕ್ಕು ಭೇಟಿಯಾದ ಮೊದಲ ದಿನವೇ ತನ್ನನ್ನು ಸಂಪೂರ್ಣವಾಗಿ ಗೆದ್ದ ಚೇತನಾ ಹಾಗೂ ಝೋಪಡಪಟ್ಟಿಯೊಳಗಿನ ಸರಸ್ವತಿ ! ಹೋಗುವಾಗ ಎರಡು ಚಾಕಲೇಟ್ ಪ್ಯಾಕೆಟ್ಟುಗಳನ್ನು ಒಯ್ಯಬೇಕು : ಚೇತನಾಳಿಗೊಂದನ್ನು, ಇನ್ನೊಂದನ್ನು ಸಿಕ್ಕರೆ ಸರಸ್ವತಿಗೆ ಕೊಡಬೇಕು…. ಸ್ನಾನ ಮುಗಿಸಿ ಕನ್ನಡಿಯ ಮುಂದೆ ನಿಂತು ಕೂದಲು ಬಾಚಿಕೊಳ್ಳುತ್ತಿರುವಾಗ ಶ್ರೀನಿವಾಸನ ಹೆಂಡತಿ ಶಾರದ ನೆನಪಿಗೆ ಬಂದಳು : ಥಟ್ಟನೆ ಹೊಳೆಯಿತು_ಡಾಯನಾ ತನ್ನನ್ನು ವರ್ಣಿಸಿದ ರೀತಿ ತನಗಿಂತ ಹೆಚ್ಚಾಗಿ ಶೋಭಿಸುತ್ತದೆ ಎನ್ನುವುದು : Sತಿeeಣ sಚಿಜ ಜಿಚಿಛಿe ! ತನ್ನ ಕಣ್ಣುಗಳನ್ನು ಆಗೀಗ ಸಂಧಿಸಿದ ಕಣ್ಣುಗಳಲ್ಲಿ ಒಂದು ಬಗೆಯ ವಿಷಾದ ನೆಲಸಿದ್ದು ಈಗ ಅರಿವಿಗೆ ಬಂದಿತು. ಕನ್ನಡಿಯ ಇದಿರು ನಿಲ್ಲುವ ಮೊದಲೇ ರಟ್ಟೆಯಿದ್ದ ಬನಿಯನ್ ಹಾಕಿಕೊಂಡು ಅದರ ಮೇಲೆ ಬುಶ್-ಶರ್ಟ್ ತೊಟ್ಟೇ ನಿಂತಿದ್ದ. ಸೊಂಟದ ಸುತ್ತ ಮಾತ್ರ ಬಾಥ್‌ಟಾವೆಲ್ಲು. ಕನ್ನಡಿಯಲ್ಲಿ ತನ್ನ ಛಾತಿ ನೋಡಿಕೊಳ್ಳುವ ಛಾತಿಯಿನ್ನೂ ಬಂದಿರಲಿಲ್ಲ….

ಪ್ಯಾಂಟು ಏರಿಸಿ ಬೂಟು ಹಾಕಿಕೊಳ್ಳುವ ಹೊತ್ತಿಗೆ_ಇನ್ನೂ ಹತ್ತು ಗಂಟೆಯೂ ಆಗಿಲ್ಲ. ಹೊರಡಲು ಇನ್ನೂ ಒಂದು ತಾಸಾದರೂ ಇದೆ. ಅಲ್ಲಿಯವರೆಗೆ ಏನು ಮಾಡುವದೆಂದು ಗೊತ್ತಾಗದೇ ಕಪಾಟಿನೊಳಗಿಂದ ಒಂದು ಪುಸ್ತಕವನ್ನೆತ್ತಿಕೊಂಡ. ಕೈಗೆ ಬಂದದ್ದು ಬರ್ನಾರ್ಡ್ ಮಾಲ್ಮೂಡ್ ಅವನ ಕಾದಂಬರಿ_‘ಫಿಕ್ಸರ್’. ಬಹಳ ಹಿಂದೆಯೇ ಓದಿ ಮುಗಿಸಿದ ಕಾದಂಬರಿ. ಯಾಕೋವ್ ಬೋಕ್ : ತನ್ನಂತೆಯೇ ನಿಷ್ಕಾರಣವಾಗಿ ಯಾತನೆಗೆ ಗುರಿಯಾದ ಬಡಪಾಯಿ ! ಎಲ್ಲ ಬಿಟ್ಟು ಇದೇ ಪುಸ್ತಕ ಕೈಗೆ ಬಂದದ್ದು ಹೇಗೆ ಎಂದು ದಿಗಿಲುಗೊಂಡ : ಶುರುಮಾಡಿದೆಯೇನೋ ನಾಗಪ್ಪಾಽಽ, ಒಂದೂ ಮಗನೇ. ವಿಜ್ಞಾನದ ವಿದ್ಯಾರ್ಥೀಽಽ. ವಿಕಾಸವಾದದಲ್ಲಿ ದೃಢವಾದ ನಂಬಿಕೆಯುಳ್ಳವನೇ. ಹೆದರಿಕೊಂಡಿದ್ದೀಯಾ ಅಂಜುಬುರುಕಾಽಽ. ಕಂಡದ್ದಕ್ಕೆಲ್ಲ ಇಲ್ಲದ ಅರ್ಥ ಹಚ್ಚಿ ಇನ್ನಷ್ಟು ಹೆದರುತ್ತೀಯಾ….

ನಾಗಪ್ಪನಿಗೆ ಈ ಭಾವಸರಣಿ ಸೇರಲಿಲ್ಲ. ಇಷ್ಟು ದಿವಸ ತಾನು ಹಾದಿ ಕಾಯುತ್ತಿದ್ದ ಕೊನೆಯ ಗಳಿಗೆಯನ್ನು ಇದಿರಿಸಲು ಆತುರಪಟ್ಟವನ ಹಾಗೆ_ತುಸು ಮೊದಲೇ ಹೋದರೇನಂತೆ, ಇಂತಿಷ್ಟೇ ಹೊತ್ತಿಗೆ ಬಾ, ಎಂದೇನು ತಿಳಿಸಿಲ್ಲವಲ್ಲ ! ಎಂದುಕೊಂಡವನೇ ಕೈಗೆತ್ತಿಕೊಂಡ ಪುಸ್ತಕವನ್ನು ತಿರುಗಿ ಕಪಾಟಿನಲ್ಲಿಟ್ಟು ಹೊರಟೇಬಿಟ್ಟ, ಕೆಳಗಿಳಿದು ಹೋಗುವ ರೀತಿಯಲ್ಲಿ ಒಂದು ಬಗೆಯ ನಿರ್ಧಾರ ಒಡೆದು ಕಾಣುತ್ತಿತ್ತು.

ರೂಮಿನಿಂದ ಹೊರಗೆ ಬಿದ್ದಾಗ ಅಪೇರಾ-ಹೌಸಿಗೆ ಹೋಗಿ ಬಸ್ಸಿನಿಂದಲೇ ಹೋಗುವ ವಿಚಾರವಿತ್ತು. ಆದರೆ ಖೇತವಾಡಿಯ ಮೇನ್ ರೋಡಿಗೆ ಬಂದಕೂಡಲೇ ಮೊದಲಿನ ವಿಚಾರ ಬದಲುಗೊಂಡು ರಸ್ತೆಯ ಮುರುಕಿನಲ್ಲಿ ನಿಂತ ಟ್ಯಾಕ್ಸಿಗೆ ಸನ್ನೆ ಮಾಡಿದ. ಟ್ಯಾಕ್ಸಿಯಲ್ಲಿ ಕೂತು, ಕೆಡೆಲ್ ರೋಡ್, ಶಿವಾಜೀ ಪಾರ್ಕ್, ಎಂದ. ಟ್ಯಾಕ್ಸಿ ಹೊರಟಾಗ ಮನಸ್ಸನ್ನು ಅಂತರ್ಮುಖವಾಗಲು ಬಿಡದ ನಿರ್ಧಾರಮಾಡಿ ಕೂತವನ ಹಾಗೆ ಕಣ್ಣುಗಳನ್ನು ಸುತ್ತಲಿನ ಪರಿಸರದ ಮೇಲೇ ಊರಿ ಕೂತ. “ನಾನಾ ಚೌಕಿನಿಂದ ಹೋಗೋಣವೇ ? ಅಥವಾ ಕೆಂಪ್ಸ್-ಕಾರ್ನರ್ ಮೇಲಿಂದ ? ಟ್ಯಾಕ್ಸಿವಾಲಾ ಕೇಳಿದ. ಸವಾರಿ ಮುಂಬಯಿಗೆ ಹೊಸತೋ ಎಂದು ಗೊತ್ತು ಮಾಡುವ ಹಿಕಮತ್ತಿದು. ನಾನಾ-ಚೌಕಿನ ದಾರಿ ಸಮೀಪದ್ದು. ಆದರೆ ಆ ದಾರಿಯಲ್ಲೇ ರಾಣಿಯ ಮನೆ ಕಾಣಿಸುವ ಕೆನಡೀ ಬ್ರಿಜ್ ಇದೆ. ಆದ್ದರಿಂದಲೇ ಕೆಂಪ್ಸ್-ಕಾರ್ನರ್ ರಸ್ತೆಯಿಂದಲೇ ಟ್ಯಾಕ್ಸಿ ಓಡಿಸಲು ಹೇಳಿದ : ಪ್ರಾರ್ಥನಾ-ಸಮಾಜ, ಅಪೇರಾ-ಹೌಸ್, ಸೆಂಡರ್ಸ್ಟ್-ಬ್ರಿಜ್‌ಗಳನ್ನು ದಾಟಿ ಟ್ಯಾಕ್ಸಿ ಪೆಡ್ಡರ್ ರೋಡ್ ಕಡೆಗೆ ಹೊರಳಿತು. ಇಕ್ಕೆಲಗಳಲ್ಲಿ ಶ್ರೀಮಂತರ ಮನೆಗಳಿದ್ದ ವಸತಿ. ಎಡಕ್ಕೆ ಎತ್ತರದಲ್ಲಿ ಮಲ್ಬಾರ್ ಹಿಲ್-ಗುಲ್ಮೊಹರದ ಗಿಡಗಳು. ಕೆಂಪ್ಸ್-ಕಾರ್ನರ್_(ಕಾಲ್‌ಗರ್ಲ್ಸ್ !) ಕ್ಯಾಡ್‌ಬರೀ ಪ್ರಾಯ್, ಹಾಜೀ ಹಾಲೀ ದರ್ಗಾ. ಎಡಕ್ಕೆ ಸಮುದ್ರ. ನೀರಿನೊಳಗೆ ಅರ್ಧ ಮುಳುಗಿದಹಾಜೀ ಹಾಲೀ ದರ್ಗಾಕ್ಕೆ ಹೋಗುವ, ಇಕ್ಕಟ್ಟಿನ ದಾರಿ ; ಶ್ರೀನಿವಾಸನ ಮನೆ ಹತ್ತಿರವಾಗುವ ತನಕವೂ ಆ ನೀರು, ಆ ಕಿರಿದಾದ ದಾರಿ ; ದೂರದಲ್ಲಿ ಕಾಣುವ ದರ್ಗಾ ಇದೇ ಮನಸ್ಸನ್ನು ಆವರಿಸಿ ನಿಂತವು : ಒಂದು ದಿನ ಹೋಗಬೇಕು, ದರ್ಗಾ ನೋಡಲು. ಭರತಿಯ ಹೊತ್ತಿಗೆ ದರ್ಗಾಕ್ಕೆ ಹೋಗುವ ದಾರಿ ನೀರಿನಲ್ಲಿ ಪೂರ್ತಿಯಾಗಿ ಮುಳುಗಿ ಹೋಗುತ್ತದೆ….ಅಂಥ ಹೊತ್ತಿನಲ್ಲೇ ಅಲ್ಲಿ ಹೋಗುವ ಸಾಹಸ ಮಾಡಿದ ಒಂದಿಬ್ಬರು ನೀರಿನಲ್ಲಿ ಕಾಲು ಜಾರಿ ಮುಳುಗಿ ಸತ್ತ ಸುದ್ದಿ ಕೇಳಿದ್ದ…. ಟ್ಯಾಕ್ಸಿ ಕೆಡೆಲ್-ರೋಡ್ ಕೊನೆಯನ್ನು ಸಮೀಪಿಸುತ್ತಿರುವಾಗ ಟ್ಯಾಕ್ಸಿಯವನು ಕೇಳಿದ ಪ್ರಶ್ನೆಗೆ ಹಾಜಿ‌ಅಲೀ ದರ್ಗಾ ಮನಸ್ಸಿನಿಂದ ಆ ಕ್ಷಣದ ಮಟ್ಟಿಗಾದರೂ ಕಳಚಿಬಿದ್ದಿತು : ತುಸು ಮುಂದೆ ಹೋದಮೇಲೆ ಎಡಕ್ಕೆ ಹರಿಯುವ ರಸ್ತೆಗೆ ಹೊರಳಿಸುವಂತೆ ಆದೇಶ ಕೊಟ್ಟು ಟ್ಯಾಕ್ಸಿ ಝೋಪಡಪಟ್ಟಿಗಳಿದ್ದ ಜಾಗಕ್ಕೆ ಬಂದದ್ದೇ, ನಿಲ್ಲಿಸಲು ಹೇಳಿದ.

ಟ್ಯಾಕ್ಸಿಯಿಂದ ಇಳಿಯುವಾಗ ಅಘಾತದ ಬಲದಿಂದ ಅರಿವಿನಲ್ಲಿ ಮೂಡಿ ನಿಂತದ್ದು_ಝೋಪಡಪಟ್ಟಿಗಳೆಲ್ಲ ಮಟಾಮಾಯವಾಗಿರುವ ದುರಂತ ಸಂಗತಿ ! ಗರಾಜಿನವರಿಗೆ ಕೇಳಿದ. ಅವರು ಇವನ ಕಡೆಗೆ ವಿಚಿತ್ರ ಸಂಶಯದಿಂದ ನೋಡಿದರು. ‘ನಿಮಗೆ ಬೇಕಾದರೆ ನಾನು ವ್ಯವಸ್ಥೆ ಮಾಡುತ್ತೇನೆ, ಸಾಬ್ ವಿಳಾಸ ಕೊಡಿ,” ಎಂದ. ಅಲ್ಲಿಯ ಒಬ್ಬ ಮಿಕ್ಯಾನಿಕ್ : ಮೈಯಲ್ಲ ಕಪ್ಪು ಗ್ರೀಸ್ ಮೆತ್ತಿಕೊಂಡು ಜಿಗಿಜಿಗಿಯಾಗಿತ್ತು : ಬೆಳಿಗ್ಗೆ ಎದ್ದ ಕೂಡಲೇ ಕಳ್ಳ ಸರಾಯಿಗಾಗಿ ಬಂದಿದ್ದೇನೆಂದು ತಪ್ಪು ತಿಳಿದ ಆತನ ಮುಸುಡಿಗೆ ಹೊಡೆಯುವಷ್ಟು ಸಿಟ್ಟು ಬಂದಿತ್ತು. ಆದರೂ ತುಟಿ ಪಿಟ್ಟೆನ್ನದೇ ಅಲ್ಲಿಂದ ಹೆಜ್ಜೆ ಕಿತ್ತ. ಸರಸ್ವತಿಯನ್ನು ಕಾಣಲಾಗದ್ದಕ್ಕೆ ಮನಸ್ಸು ಖಿನ್ನವಾಗಿತ್ತು. ಝೋಪಡಪಟ್ಟಿಗಳು ನಿಂತ ಜಾಗದಲ್ಲಿ ಒಲೆ ಉರಿದ ಗುರುತುಗಳು ವಿಚಿತ್ರಭಾವನೆಗಳಿಗೆ ಕಾರಣವಾಗಹತ್ತಿದವು.

ಶ್ರೀನಿವಾಸನ ಮನೆ ತಲುಪಿದಾಗ ಕದ ತೆರೆದ ಹುಡುಗಿಯ ಪರಿಚಯ ಸಿಗದೇ ಗೊಂದಲಿಸಿದ. “ಶ್ರೀನಿವಾಸರಾವ್ ಅವರ ಮನೆ….?” ಎಂದು ಕೇಳುತ್ತಿದ್ದಾಗ ಚೇತನಾ ನಗು ಮಿಂಚುತ್ತ ಬಂದಳು: “ಬನ್ನಿ ಬನ್ನಿ, ಕಾಕಾ. ಇವಳು ನನ್ನ ಅಕ್ಕ_ಆಶಾ. ಹಾಗೂ ಈ ತುಂಟ ನನ್ನ ತಮ್ಮ_ಕಿರಣ. ಊರಿನಿಂದ ನಿನ್ನೆಯಷ್ಟೇ ಬಂದಿದ್ದಾರೆ.” ನಾಗಪ್ಪ ತನ್ನ ಕಣ್ಣುಗಳನ್ನು ನಂಬದಾದ. ಆಶಾ : ೧೬/೧೭ ರ ಹರೆಯದ ಹುಡುಗಿ. ಸೀರೆಯುಟ್ಟು ನಿಂತಿದ್ದಳು. ತಾಯಿಯದೇ ರೂಪ. ಗೌರವರ್ಣ. ಅಚ್ಚಹಸಿರು ಬಣ್ಣದ ನೈಲಾನ್ ಸೀರೆ, ಸ್ಲೀವ್‌ಲೆಸ್ ಮ್ಯಾಚಿಂಗ್ ಬ್ಲೌಸ್ : ಎಲ್ಲ ಭಾವನೆಗಳನ್ನು ಸೆರೆ ಹಿಡಿದು ನಿಂತಿದ್ದು ಅವಳ ಉದ್ದ ಕೇಶರಾಶಿ : ಶ್ಯಾಂಪೂ ಹಚ್ಚಿ ತಲೆಯ ಮೇಲೆ ಮಿಂದಿರಬೇಕು. ಇನ್ನೂ ಬಾಚಿಕೊಂಡಿರಲಿಲ್ಲ. ನೀರು ಒಣಗಲೆಂಬಂತೆ ಹಾಗೇ ಬೆನ್ನಮೇಲೆ ನೀಳವಾಗಿ ಹರಹಿಬಿಟ್ಟಿದ್ದಳು. ತಾನು ನೋಡುತ್ತಿದ್ದ ರೀತಿಗೆ ಆಶಾಳ ಗಲ್ಲಗಳು ಕೆಂಪಗಾದ ರೀತಿಯಿಂದ ಎಚ್ಚರಗೊಂಡವನ ಹಾಗೆ_”ಹೆಲ್ಲೋ ಆಶಾ, ಹೆಲ್ಲೋ ಕಿರಣ್,” ಎಂದು ತುಂಬ ಉಲ್ಲಸಿತನಾದ. ಇಬ್ಬರ ಗಲ್ಲಗಳನ್ನೂ ಪ್ರೀತಿಯಿಂದ ಚಿವುಟುತ್ತ ಚೇತನಾಳತ್ತ ತಿರುಗಿ_” ನೀನು ಹ್ಯಾಗಿದ್ದೀಯಾ ತುಂಟ ಹುಡುಗೀ.” ಎಂದು ಕೇಳಿದ. ಕಿಸೆಯೊಳಗಿಂದ ಚಾಕ್‌ಲೇಟ್ ಪ್ಯಾಕೆಟ್‌ಗಳನ್ನು ಹೊರತೆಗೆದು ಅವಳ ಕೈಗೆ ಕೊಟ್ಟು, “ಎಲ್ಲರಿಗೂ,” ಎನ್ನುತ್ತ ದಿವಾಣಖಾನೆಗೆ ಬಂದ.

ಸೋಫಾ ಒಂದರಲ್ಲಿ ಕೂಡುತ್ತಿರುವಾಗ_”ಅಪ್ಪ ಸ್ನಾನಕ್ಕೆ ಹೋಗಿದ್ದಾರೆ. ಊರಿಂದ ನಮ್ಮ ಅಜ್ಜಿ ಬಂದಿದ್ದಾಳೆ.”ಎಂದು ಚೇತನಾ ಸುದ್ದಿ ಕೊಟ್ಟಳು. ಅಜ್ಜಿ ! ತನ್ನ ಕತೆಯೊಳಗಿನ ಪದ್ದಕ್ಕ ! ಶ್ರೀನಿವಾಸ ಈ ಕಾರಣಕ್ಕಾಗಿಯೇ ಊಟಕ್ಕೆ ಕರೆದಿಲ್ಲ ತಾನೇ. ಶ್ರೀನಿವಾಸನ ಹೆಂಡತಿ ಒಮ್ಮೆ ಬಾಗಿಲಲ್ಲಿ ಪ್ರಕಟವಾಗಿ ಮುಗುಳುನಗೆ ಬೀರಿ ಒಳಗೆ ಹೋದಳು. ಮೂವರೂ ಮಕ್ಕಳು ತನಗೆ ಪ್ರೀತಿಯಿಂದ ಅಂಟಿಕೊಂಡ ರೀತಿಗೆ ನಾಗಪ್ಪ ತುಂಬ ಖುಶಿಯಾದ. ಶ್ರೀನಿವಾಸ ಇವರಾರ ಮುಂದೆಯೂ ತನ್ನ ಬಗ್ಗೆ ಡೊಂಕಾದದ್ದನ್ನೇನೋ ಮಾತನಾಡಿರಲಿಕ್ಕಿಲ್ಲ ಅನ್ನಿಸಿತು.

ಇವನು ಬಂದದ್ದರ ಸುಳಿವು ಹತ್ತಿದ ಶ್ರೀನಿವಾಸ, ಚೇತನಾಳನ್ನು ಕರೆದು ಬಚ್ಚಲುಮನೆಯಿಂದಲೇ ಆದೇಶವಿತ್ತ : “ಕಾಕಾಗೆ ಆಗ ಹೇಳಿದ ರೂಮು ತೋರಿಸು. ಡ್ರೆಸ್ಸು ಬದಲಿಸಲು ಹೇಳು. ಲುಂಗಿ ಕೊಡು.”

ಚೇತನಾ ಹಾಗೇ ಮಾಡಿದಳು. ಹಾಗೂ ಇವನು ತನಗಾಗಿ ಮೊದಲೇ ಸಿದ್ದಮಾಡಿ ಇಟ್ಟಂತಿದ್ದ ಕೋಣೆಗೆ ಹೋಗುವಾಗ_ಕಾಕಾ, ನೀವು ಈ ಡ್ರೆಸ್ಸಿನಲ್ಲಿ ತುಂಬ ಚಂದ ಕಾಣುತ್ತೀರಿ ಎಂದು ಮೋಹಕವಾಗಿ ನಕ್ಕಳು. ಇನ್ನೊಮ್ಮೆ ಅವಳ ಗಲ್ಲವನ್ನು ಚಿವುಟುತ್ತ_”ಹೌದೇ ? ಹಾಗಾದರೆ ಇಡೀ ದಿನ ಇದರಲ್ಲೇ ಇದ್ದುಬಿಡುತ್ತೇನೆ, ಎಂದ. ಲುಂಗಿ ಉಡುತ್ತಿದ್ದಾಗ_ಬುಶ್-ಶರ್ಟ್ ತೆಗೆಯುವದು ಬೇಡವೇನೋ, ಅಷ್ಟಾಗಿ ಶ್ರೀನಿವಾಸ ಒತ್ತಾಯಪಡಿಸಿದರೆ ಹೇಗಾದರೂ ಒಳಗೆ ಉದ್ದ ತೋಳಿನ ಬನಿಯನ್ ಇದ್ದೇ ಇದೆ_ಎಂದು ಸಮಾಧಾನ ಮಾಡಿಕೊಂಡ. ತೋಳಿಲ್ಲದ ಬನಿಯನ್ ತಾನು ಈವರೆಗೂ ತೊಟ್ಟಿರಲೇ ಇಲ್ಲ….ಶ್ರೀನಿವಾಸನ ಹರಟೆಯೋ ಇಂತಹ ಚಿಲ್ಲರೆ ವಿಷಯಗಳಿಂದಲೇ ಆರಂಭವಾಗಬೇಕು : ಡ್ರೆಸ್ಸು, ಅಡಿಗೆ, ಫರ್ನಿಚರ್_ಇಂತಹ ವಿಷಯಗಳನ್ನು ಬಿಟ್ಟರೆ ಮಾತನಾಡಲು ಬೇರೆ ವಿಷಯಗಳೆ ಇಲ್ಲ ಒಂದೂ ಮಗನ ಹತ್ತಿರ. ಹೆಂಗಸರ ಸೀರೆ ದಾಗೀನೆಗಳ ಮೇಲಂತೂ ನಿಷ್ಣಾತನಂತೆ ಗಂಟೆಗಟ್ಟಲೆ ಮಾತನಾಡಬಲ್ಲನೀತ_ಒಂದು ಬಗೆಯ ಸ್ವಾಪದ ಚೈತನ್ಯದಿಂದ…..ಸಂಬಾರ ಅವಲಕ್ಕಿ, ಬಿಸ್ಕೂಟಂಬೊಡೆಗಳ ಮೇಲೆ ಮಾತನಾಡುವಾಗ ನೋಡಬೇಕು : ನೀರೂರಿಸುತ್ತಿದ್ದ_ಬರೇ ಕೇಳುವವರ ಬಾಯಲ್ಲಷ್ಟೇ ಅಲ್ಲ ; ಸ್ವತಃ ತನ್ನ ಬಾಯಲ್ಲೂ ಜೊಲ್ಲು ಒಟ್ಟಾಗುತ್ತಿತ್ತು. ಶುದ್ಧ ದನ ! ಅಸಹ್ಯ ರೀತಿಯಲ್ಲಿ ಬಾಯಿ ಚಪ್ಪರಿಸುತ್ತ ಅಡಿಗೆಯ ವರ್ಣನೆ ಮಾಡುತ್ತಾನೆ. ಅವನ ಗಿಡ್ಡ ದೇಹಕ್ಕೆ ಶೋಭಿಸದ ಡೊಳ್ಳುಹೊಟ್ಟೆ. ಗುಂಡುಗುಂಡಾದ ದೇಹದ ಶಿಖರದಲ್ಲಿ ದೊಡ್ಡ ತಲೆ. ಹರೆವಾದ ಮೂಗು. ದಪ್ಪದಪ್ಪ ತುಟಿಗಳು. ಆಗೀಗ ಹುಕ್ಕಿ ಬಂದಾಗೊಮ್ಮೆ ಸಣ್ಣ ಚೆಂಡಿಕೆಬಿಟ್ಟು ತಲೆಯನ್ನು ತಕತಕ ಹೊಳೆಯುವಂತೆ ಬೋಳಿಸಿಕೊಂಡು ಬರುತ್ತಿದ್ದ. ಸದ್ಯ ತಿರುಗಿ ಕೂದಲು ಬೆಳೆಸಿದ್ದಾನೆ. ಖಾಕೀಬಣ್ಣದ ಚಡ್ಡಿ. ತೀರ ಹಳೇ ನಮೂನೆಯ ಅಂಗಿ. ಮನಸ್ಸು ಬಂದರೆ ಅತ್ಯಾಧುನಿಕ ಫ್ಯಾಶನ್ನಿನ ಬಟ್ಟೆಗಳನ್ನು ಧರಿಸಿದರೂ ಧರಿಸಿದನೇ. ಆದರದು ಕ್ವಚಿತ್ತ…..

ಚೇತನಾ ಈಗ ತೋರಿಸಿ ಹೋದ ಕೋಣೆ ಈ ಮೊದಲು ತಾನು ನಿಲ್ಲಲು ಬಂದ ಕೋಣೆಯಿಂದ ಬೇರೆಯಾಗಿತ್ತು. ಇಲ್ಲಿಂದ ಸಮುದ್ರ ಕಾಣಿಸುತ್ತಿರಲಿಲ್ಲ. ಬದಲು, ಝೋಪಡಪಟ್ಟಿಗಳ ಮಗ್ಗುಲಲ್ಲಿಯ ಗರಾಜು ಕಾಣುತ್ತಿತ್ತು. ಮೊದಲು ಝೋಪಡಪಟ್ಟಿಗಳಿದ್ದ ಜಾಗದಲ್ಲೀಗ ಇನ್ನೊಂದು ಹೊಸ ಕಟ್ಟಡ ಬರುತ್ತಿದ್ದಂತೆ ತೋರಿತು : ಅಲ್ಲಲ್ಲಿ ನೆಲದಲ್ಲಿ ಹೊಂಡ ತೋಡಿದ ಗುರುತುಗಳು. ಎಂಟೇ ದಿನಗಳಲ್ಲಿ ಎಷ್ಟೊಂದು ಮಾರ್ಪಾಡು ! ಸರಸ್ವತಿಯನ್ನು ಇನ್ನೆಂದೂ ಕಾಣಲಾರೆನೇನೋ : ನೆಟ್ಟ ದೃಷ್ಟಿಯಿಂದ ತನ್ನನ್ನು ನೋಡುತ್ತಿದ್ದಾಗ ಅವಳ ಕಣ್ಣುಗಳಲ್ಲಿ ಕೂಡ ಭಯದ ನೆನಪಾಗಿ ತಲ್ಲಣಗೊಂಡ. ಈ ನೆನಪಿನ ಹಿಂದೆಯೇ ಬಂದ ಒಂದು ವಿಚಾರಕ್ಕೆ ನಾಗಪ್ಪ ಸ್ಥಂಭಿತನಾದ : ಆಶಾ ಶ್ರೀನಿವಾಸನ ಚೊಚ್ಚಲ ಮಗಳಲ್ಲ. ಇರಲಾರಳು. ಶ್ರೀನಿವಾಸ ಮದುವೆಯಾಗಿ ಈಗ ಇಪ್ಪತ್ತು ವರುಷಗಳಾಗುತ್ತ ಬಂದವು. ಶಾರದೆಯ ವಿವಾಹ_ಪೂರ್ವ-ಚೆರಿತ್ರೆಯ ಬಗ್ಗೆ ಕೇಳಿದ ಕಂತೆ-ಪುರಾಣದ ಪಿಂಡ ಇವಳಿರಲಾರಳು. ಹಾಗಾದರೆ ಅವಳೇನಾದಳು ? ಅವಳು ಹುಟ್ಟಿದ್ದಾದರೂ ಹೌದೇ ? ಹುಟ್ಟಿದ ಕೆಲವೇ ತಿಂಗಳಲ್ಲಿ ಸತ್ತುಹೋದಳೆಂದು ಕೇಳಿರಲಿಲ್ಲವೇ ? ಕೇಳಿದ್ದೇನೇ ? ಯಾಕೆ ಇಷ್ಟೊಂದು ಅರೆವುಮರೆವು ? ಶಾರದೆಯ ಕಣ್ಣುಗಳಲ್ಲಿಯ ವ್ಯಾಕುಲತೆ, ಅವಳ ಮುಗ್ಧ ಸೌಂದರ್ಯಕ್ಕೆ ಮಾರುಹೋದ ತನ್ನ ಮರೆವಿಗೆ ಕಾರಣವಾಗುತ್ತಿರಬಹುದೇ ? ದೇವರೇ, ಎಷ್ಟೊಂದಕ್ಕೆ ಹೆದರಿಕೊಂಡು, ಎಷ್ಟೊಂದಕ್ಕೆ ಕಟ್ಟುಬಿದ್ದು, ನೆನಪಿನ ಕದಗಳನ್ನು ಒಂದೊಂದಾಗಿ ಮುಚ್ಚಿಕೊಳ್ಳುತ್ತಿದ್ದೇನೆ !

ತಾನು ಅದೆಷ್ಟು ಹೊತ್ತು ಹೀಗೇ ವಿಚಾರಮಾಡುತ್ತ ಕಿಡಕಿಯ ಬಳಿ ನಿಂತಿದ್ದೆನೋ, ನಾಗಪ್ಪನಿಗೆ ತಿಳಿಯಲಿಲ್ಲ. ಅಡ್ಡ ಮಾಡಿದ ಕೋಣೆಯ ಕದ ದೂಡಿ ಶ್ರೀನಿವಾಸ ಒಳಗೆ ಬಂದ. ಬಂದವನೇ ಇವನ ಹೆಗಲ ಮೇಲೆ ಧೊಪ್ ಎಂದು ಕೈಯಿಟ್ಟು : “ಅದೇನು ನೋಡುವುದರಲ್ಲಿ ತಲ್ಲೀನನಾಗಿಬಿಟ್ಟೆ,” ಎನ್ನುತ್ತ ನಿಷ್ಕಾರಣವಾಗಿ ಹಹಹ ಎಂದು ನಕ್ಕ. ನಗುವಿನಲ್ಲಿಯ ಪೊಳ್ಳು ನಟನೆ ಸ್ಪಷ್ಟವಾಗಿತ್ತು :

“ನೀನು ಹೋದ ಸಾರೆ ಬಂದಾಗ ಇಲ್ಲಿ ಝೋಪಡಪಟ್ಟಿಗಳಿದ್ದವು. ಒಬ್ಬೊಬ್ಬರಿಗೆ ಐದೈದು ಸಾವಿರ ಕೊಟ್ಟು ಓಡಿಸಿಬಿಟ್ಟೆವು. ಒಟ್ಟೂ ಐವತ್ತು ಸಾವಿರ ಖರ್ಚು. ಇದೇ ಕೋ‌ಓಪರೆಟಿವ್-ಸೊಸೈಟಿಯ ಐದು ಮಜೆಲೆಯ ಇನ್ನೊಂದು ಕಟ್ಟಡ ಅಲ್ಲಿ ಬರುತ್ತದೆ. ಇನ್ನು ಆರು ತಿಂಗಳಲ್ಲಿ ನೀನಿಲ್ಲಿ ಬಂದರೆ ಈ ಜಾಗದ ಗುರುತೇ ನಿನಗೆ ಸಿಗಲಾರದು. ಮ್ಯಾನೇಜಿಂಗ್ ಕಮಿಟಿಯ ಪ್ರೆಸಿಡೆಂಟ್ ನಾನೇ. ಕಮಿಟಿಯ ಸದಸ್ಯ ಬೋಳೀಮಕ್ಕಳನ್ನು ಪುಸಲಾಯಿಸುವುದರಲ್ಲೇ ಆರು ತಿಂಗಳು ಕಳೆದುಹೋದವು. ಇಲ್ಲವಾದರೆ ಇಷ್ಟರಲ್ಲೇ ಕಟ್ಟಡ ಇಲ್ಲಿ ಎದ್ದು ನಿಲ್ಲುತ್ತಿತ್ತು. ಅಂದಹಾಗೆ, ನಿಮ್ಮ ಕಂಪನಿಯವರೇ ಈ ಹೊಸ ಕಟ್ಟಡದಲ್ಲಿ ಮೂರು ದೊಡ್ಡದೊಡ್ಡ ಫ್ಲ್ಯಾಟ್ಸ್ ಬುಕ್ ಮಾಡಿದ್ದಾರೆ. ಅದೆಲ್ಲ ಈಗ ಯಾಕೆ ? ಆಮೇಲೆ ಮಾತನಾಡೋಣವಂತೆ. ನಿಮ್ಮ ಕಂಪನಿಗೂ ನನಗೂ ಈಗ ಬಿಝಿನೆಸ್ ರಿಲೇಶನ್ಸ್ ಕೂಡ. ನಿಮ್ಮ ಬಂದೂಕವಾಲಾ_ಅವನಂತಹ ದೊಡ್ಡ ಜಂಟಲ್ಮನ್ನನನ್ನು ಇನ್ನೊಬ್ಬನನ್ನು ನೋಡಿಲ್ಲ ನೋಡು ! ಬಹಳ ದೊಡ್ಡ ಮನಸ್ಸಿನ ಮನುಷ್ಯ. ಚೊಕ್ಕತನದ ವ್ಯವಹಾರ….ಆಮೇಲೆ ಎಲ್ಲ ಹೇಳುತ್ತೇನೆ….ಮೊದಲು ಕೆಳಗೆ ಹೋಗೋಣ. ಊಟಕ್ಕಿನ್ನೂ ತಡವಿದೆ. ಅಮ್ಮ ಬಂದಿದ್ದಾಳೆ. ಇಲ್ಲವಾದರೆ ಫಸ್ಟ್‌ಕ್ಲಾಸಾಗಿ ಬಿಯರ್ ಕುಡಿಯಬಹುದಾಗಿತ್ತು. ನೀನು ಹೋದ ಸರತಿ ಬಂದಾಗ ನಮ್ಮ ಅಂಗಡಿಗೆ ಅಚ್ಯುತ ಇದ್ದ. ವಿಚಿತ್ರ ಪ್ರಾಣಿ. ಅವನಿದ್ದಷ್ಟು ದಿನ ಮನೆಯಲ್ಲಿ ಕುಡಿಯುವದು ಶಕ್ಯವೇ ಇರಲಿಲ್ಲ. ನಮ್ಮೆಲ್ಲರ ಮೇಲೆ ವಿಚಿತ್ರ ಸ್ವಭಾವ ಬೀರಿದ್ದ ನೋಡು ಅವನು ಇಲ್ಲಿ ಇದ್ದಷ್ಟೂ ತಿಂಗಳು. ಈಗ ಬಿಟ್ಟು ಹೋಗಿದ್ದಾನೆ. ಏನಾಯಿತೋ, ನೀನು ಇಲ್ಲಿಂದ ಹೋದಿಯಲ್ಲ, ಅದರ ಮರುದಿನವೇ ! ಮುಂಜಾನೆ ನಸುಕಿನಲ್ಲಿ ಎದ್ದವನೇ ಹೊರಟುಹೋಗಿರಬೇಕು. ಎಲ್ಲೂ ಮೂರು ತಿಂಗಳಿಂದ ಹೆಚ್ಚುಕಾಲ ನಿಂತವನಲ್ಲವಂತೆ. ಹೀದುಸ್ಥಾನದ ಮೂಲೆಮೂಲೆಯಲ್ಲೆಲ್ಲ ಸುತ್ತಾಡಿಬಂದಿದ್ದಾನಂತೆ. ನಿನ್ನನ್ನು ತುಂಬ ಹಚ್ಚಿಕೊಂಡಿದ್ದನೆಂದು ತೋರುತ್ತದೆ. ನೀನು ಹೊರಟುಹೋದ ದಿನ ಪದೇಪದೇ ನಿನ್ನ ಬಗ್ಗೆ ಕೇಳಿದ್ದೇ ಕೇಳಿದ್ದು. ಓದು ಬರಹ ಬಲ್ಲವನಂತೆ ಕಾಣಲಿಲ್ಲ….ಬಾ, ಕೆಳಗೆ ಹೋಗೋಣ. ಅಮ್ಮನಿಗೆ ನಿನ್ನನ್ನು ನೋಡುವ ಕುತೂಹಲ. ಬಿಸಿಬಿಸಿ ಚಹ ಕುಡಿಯೋಣ. ಇವಳು ಉದ್ದಿನ ಆಂಬೋಡೆ ಮಾಡಿದ್ದಾಳೆ. ನನ್ನ ಎಲ್ಲ ಮಕ್ಕಳೂ ಈವತ್ತು ಮನೆಯಲ್ಲೇ ಇದ್ದಾರೆ_”

ಇಷ್ಟೊಂದು ಚಂದವಾಗಿ, ಉತ್ಸಾಹದಿಂದ, ತನ್ನ ಬಗೆಗಿನ ಕಳಕಳಿಯಿಂದ ಮಾತನಾಡುವ ವ್ಯಕ್ತಿ ಒಳಗೊಳಗೇ, ಈಗ ವ್ಯಕ್ತವಾದ ಭಾವನೆಗಳಿಗೆ ವ್ಯತಿರಿಕ್ತವಾದ, ಬೇರೆಯೇ ಒಂದು ಕ್ರಿಯೆಗಾಗಿ ಹೊಂಚುಹಾಕುತ್ತಿರುವುದು ಶಕ್ಯವಿದೆಯೇ ? ನಾಗಪ್ಪ ಯಾವುದೇ ಒಂದು ನಿಲುಗಡೆಗೆ ಬರುವ ಸ್ಥಿತಿಯಲ್ಲಿ ಇದ್ದಂತಿರಲಿಲ್ಲ ; ಮನಸ್ಸು ಅದಾಗಲೇ ಅಚ್ಯುತನನ್ನು ಕುರಿತು ಧೇನಿಸುತ್ತಿತ್ತು. ಮೊದಲೊಮ್ಮೆ ಆದ ಸಂಶಯ ತಿರುಗಿ ಗಟ್ಟಿಯಾಗಹತ್ತಿತ್ತು. ಶ್ರೀನಿವಾಸನಿಗೆ ಏನೋ ಕೇಳಲು ಹೊರಟು ಬೇಡವೆಂದು ತೋರಿ ಸುಮ್ಮನಾದ. ಮರುಗಳಿಗೆ, ತಾನು ಪದ್ದಕ್ಕನನ್ನು ಕಾಣಲು ಉತ್ಸುಕನಾದವನ ಹಾಗೆ_”ಬಾ, ಅಮ್ಮನನ್ನು ನೋಡುವಾ,” ಎಂದ. “ಸೆಖೆಯಾಗುವದಿಲ್ಲವೆ ? ಬುಶ್‌ಕೋಟ್ ತೆಗೆ. ಬೇಕಾದರೆ ಕುರ್ತಾ ಇದೆ.” ಎಂದು ಶ್ರೀನಿವಾಸ ಸೂಚಿಸಿದಾಗ, “ಬೇಡ, ಚೇತನಾಗೆ ಈ ಬುಶ್-ಶರ್ಟಿನಲ್ಲಿ ಬಹಳ ಚಂದ ಕಂಡೆನಂತೆ,” ಎಂದು ನಕ್ಕ. ಇಬ್ಬರೂ ಕೋಣೆ ಬಿಟ್ಟು ಹಾಲಿಗೆ ಬಂದರು.

ನಾಗಪ್ಪನ ಹಾದಿಯನ್ನೇ ಕಾಯುತ್ತಿದ್ದ ಚೇತನಾ, ಕಿರಣರಿಬ್ಬರೂ_”ಕಾಕಾ ಕಾಕಾ, ಹಿತ್ತಲಿಗೆ ಹೋಗೋಣವೇ ? ನೋಡಿ ನಮ್ಮ ಗುಲಾಬಿ ಗಿಡದಲ್ಲಿ….”ಎನ್ನುತ್ತಿರುವಾಗ ಶ್ರೀನಿವಾಸ ಅವರ ಉತ್ಸಾಹಕ್ಕೆ ತಡೆ ಹಾಕಿದ; “ಕಾಕಾ ಮೊದಲು ಚಹ ಕುಡಿಯಲಿ. ಆಮೇಲೆ ನೋಡೋಣ, ಎಂದ ಹಿರಿಯ ಹುಡುಗಿ ಅಡುಗೆಮನೆಯಲ್ಲಿ ತಾಯಿಗೆ ನೆರವು ಕೊಡುತ್ತಿರಬೇಕೆ. ಆದರೆ ಪದ್ದಕ್ಕನೆಲ್ಲಿ ? ಅವಳನ್ನು ಕಾಣುವ ಉತ್ಸಾಹದ ಜಾಗದಲ್ಲೀಗ ಒಂದು ಬಗೆಯ ಕಾತರ ಮೆಲ್ಲನೆ ನೆಲಸಹತ್ತಿತ್ತು. ಚಹದ ಮಾತು ತೆಗೆಯುತ್ತಲೇ ಮಕ್ಕಳಿಬ್ಬರೂ ಅಡುಗೆಯ ಮನೆಯತ್ತ ಓಡಿದ್ದರು. ಮೊದಲೇ ತಾಲೀಮು ಮಾಡಿದ ನಾಟಕದ ದೃಶ್ಯದ ಹಾಗೆ. ಶ್ರೀನಿವಾಸ “ಕೂಡ್ರು” ಎನ್ನುತ್ತ ಸೋಫಾ ತೋರಿಸಿದ. ನಾಗಪ್ಪ ಕೂತುಕೊಂಡ ಕೂಡಲೇ ಅವನ ಕೈಗೆ ಕೆಲವು ಮೆಗೆಝಿನ್‌ಗಳನ್ನು ಕೊಡುತ್ತ, “ಓದು, ಚಹ ಬರುವಷ್ಟರಲ್ಲಿ ದೇವರ ತಲೆಗೆ ನಾಲ್ಕು ಹೂವುಗಳನ್ನೇರಿಸಿ ಬರುತ್ತೇನೆ,” ಎಂದು ಹೇಳಿ ಅವನೂ ಒಳಗೆ ಹೋದ. ಹಾಲಿನಲ್ಲಿ ನಾಗಪ್ಪನೊಬ್ಬನೇ. ತಲೆಯ ಮೇಲಿನ ಪಂಖ ತುಂಬು ವೇಗದಲ್ಲಿತ್ತು. ಎದ್ದು ಇನ್ನೊಂದು ಸೋಫಾಕ್ಕೆ ನಡೆದ.

ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಿದ ಆ ದಿವಾಣಖಾಣೆಯ ಸುತ್ತಲೂ ಕಣ್ಣುಹಾಯಿಸುವಾಗ_ಇದೇಕೆ ಮನಸ್ಸು ಹೀಗೆ ತಲ್ಲಣಗೊಳ್ಳುತ್ತಿದೆ ಎನ್ನುವದು ತಿಳಿಯದೇ ಕಳವಳಪಟ್ಟ. ವಿಶೇಷ ಎಚ್ಚರವಿಲ್ಲದೇನೆ ಶ್ರೀನಿವಾಸ ಕೊಟ್ಟುಹೋದ ಪತ್ರಿಕೆಗಳೊಳಗಿಂದ ಒಂದನ್ನು ಕೈಗೆತ್ತಿಕೊಂಡು ಪುಟ ತಿರುವಹತ್ತಿದ-ಅದು ಯಾವ ಭಾಷೆಯದು ಎಂಬುದು ಲಕ್ಷ್ಯಕ್ಕೆ ಬರುವ ಮೊದಲೇ ತನ್ನ ಬೆನ್ನ ಹಿಂದಿನ ಕೋಣೆಯೊಂದರ ಕದ ತೆರೆದ ಸದ್ದು ಕೇಳಿಸಿ, ಆಗಿನಿಂದಲೂ ಅತ್ತ ನೋಡದೆಯೂ ಕೂಡ ಆ ಕದ ತೆರೆಯುವದನ್ನೇ ತಾನು ಕಾಯುತ್ತಿದ್ದೆ ಎಂಬಂತಹ ಭಾವನೆಯಿಂದ ಹಿಂತಿರುಗಿ ನೋಡಿದ: “ಯಾರು, ನಾಗಪ್ಪನೇನೊ ?”ಎಂದು ದನಿ ಹುಟ್ಟಿಸಿದ ಆಕೃತಿ ಕಣ್ಣಮುಂದೆ ಮೂಡಿ ಅರಿವನ್ನು ತಟ್ಟಿದ್ದೇ ತಡ, ಧಡಕ್ಕನೆ ಎದ್ದು ನಿಂತ. ಮೈಮೇಲೆ ಮುಳ್ಳುನಿಂತು, ನಿಂತಲ್ಲೇ ಸಣ್ಣಗೆ ನಡುಗಿದ. “ಪದ್ದಕ್ಕನಲ್ಲವೆ ? ” ಎಂದು ಕೇಳಬೇಕೆಂದರೆ ಬಾಯಿಂದ ದನಿಯೇ ಹೊರಡದಾಯಿತು. ಬಾಗಿಲ ಪರದೆ ಸರಿಸಿ ಹೊರಗೆ ಬಂದದ್ದು ಮನುಷ್ಯಾಕೃತಿಯೇ ? ಎಂಬುದನ್ನು ಕೂಡ ನಂಬಲಾಗದವನ ಹಾಗೆ ಕಣ್ಣರಳಿಸಿ ನಿಂತ : ಈವರೆಗೂ ಅನುಭವಕ್ಕೆ ಬಂದಿರದ, ವಿಕಾಸವಾದದ ವಿದ್ಯಾರ್ಥಿಯಾಗಿಯೂ ಈವರೆಗೂ ಓದಿ ಕೂಡ ಗೊತ್ತಿರದ ಒಂದು ವಿಚಿತ್ರ ಪ್ರಾಣಿ ಧುತ್ ಎಂದು ಕಣ್ಣಮುಂದೆ ನಿಂತುಬಿಟ್ಟಿದೆ ಎಂಬಂತಹ ಅನ್ನಿಸಿಕೆಗೆ ನಾಗಪ್ಪ ಹೆದರಲಿಲ್ಲ. ಹೆದರಿದ್ದು_ಈ ಬಗೆಯಾಗಿ ತೋರುವ ಈ ಆಕೃತಿ ಪದ್ದಕ್ಕನದೇ ಎಂದು ಖಾತರಿಯಾದದ್ದಕ್ಕೆ : ಕೆಂಪುಸೀರೆ ಸುತ್ತಿಕೊಂಡ ದೇಹ ಮುದುಡಿ ಮುದ್ದೆಯಾಗಿ ಎರಡು ಕೈಗಳಂತಹ, ಎರಡು ಕಾಲುಗಳಂತಹ ಆವಯವಗಳು ಸೀರೆಯಿಂದ ಹೊರಗೆ ಚಾಚಿದ ಕಾರಣದಿಂದಲೇ ಇದು ಮನುಷ್ಯದೇಹವಿರಬಹುದೆಂಬ ಸಂದೇಹ ಹುಟ್ಟಿಸುವಂತಿತ್ತು. ತಲೆಯಿರುವ ಜಾಗದಲ್ಲಿಯ ಬೋಳುಬೋಳಾದ ಗೋಲಾಕೃತಿಯನ್ನು ಸೀರೆಯ ಸೆರಗು ಸಂಪೂರ್‍ಣವಾಗಿ ಮುಚ್ಚಿತ್ತು. ಮುಂದಿನ ತೆರವಿದ್ದ ಜಾಗದಲ್ಲಿ ಒಂದು ಹೆಣ್ಣಿನ ಮೂಗು ಆಗಿರಬಹುದಾದ, ಕಣ್ಣುಗಳಾಗಿರಬಹುದಾದ ಆವಯವಗಳ ಅವಶೇಷಗಳಂತಹ ಕುರುಹುಗಳು, ಬಾಯಿಯಂತಹ ದೊಡ್ಡ ತೂತಿನಲ್ಲಿ ಹಲ್ಲುಗಳಂತೆ ತೋರುವ ನಾಲ್ಕೈದು ಕಪ್ಪುಗಟ್ಟಿದ ತುಂಡುಗಳು, ಆ ವಿಚಿತ್ರ ತೂತಿನೊಳಗಿಂದಲೇ ಮತ್ತೆ ಸದ್ದು ಹೊರಟಿತು : “ನನ್ನ ಗುರುತು ಹತ್ತಿತೇನೋ. ಕೂತುಕೋ. ಶ್ರೀನಿವಾಸನಿಗೆ ನಾನೇ ಹೇಳಿದೆ- ನಿನ್ನನ್ನು ಕರೆಸು, ನೋಡದೇ ಎಷ್ಟು ವರ್ಷಗಳಾದವೂಽಽಽ ಎಂದು.”

ನಾಗಪ್ಪ ಕೂತುಕೊಂಡ_ನಿಂತುಕೊಂಡಿರುವದು ಶಕ್ಯವೇ ಇರಲಿಲ್ಲವಾದ್ದರಿಂದ ! ಮನುಷ್ಯನ ಸಹಜ ಸಂವೇದನೆಯ ಆಚೆ ಉಳಿದೂ ತೀರ ಸ್ಪಷ್ಟವಾಗಿ ದೃಷ್ಟಿ ಗೋಚರವಾದುದರ ಈ ಬೀಭತ್ಸ ವಾಸ್ತವತೆಯಿಂದ ಅರ್ಜುನ್‌ರಾವರ ಮನೆಯಲ್ಲಿ ನಾಸ್ತಾ ಮಾಡಿದ್ದೆಲ್ಲ ಹೊರಗೆ ಬರುವ ಭಯ : ಕಣ್ಣೆದಿರಿನ ಕೈಕಾಲುಗಳಿದ್ದ ಕೆಂಪುಮುದ್ದೆ ಮೆಲ್ಲಗೆ, ಅವನ ಇದಿರಿಗೇ, ನೆಲಕ್ಕೆ ಹಾಸಿದ ರತ್ನಗಂಬಳಿಯ ಮೂಲೆಯೊಂದರಲ್ಲಿ ಕುಸಿಯಿತು. ಎವೆ ಪಟಪಟಿಸುವ ಕಣ್ಣುಗಳಿಂದ_ಅಥವಾ ಹಾಗೇ ತೋರುವ ಇಂದ್ರಿಯಗಳಿಂದ ಅವನನ್ನು ಪಿಳಿಪಿಳಿ ನೋಡುತ್ತ ಕುಳಿತಿತ್ತು. ಬೊಚ್ಚಬಾಯಲ್ಲಿ ಉಳಿದುಕೊಂಡ ಹಲ್ಲುಗಳು ತುಟಿಗಳಲ್ಲಿ ಊರಿ ಅಸಹ್ಯವಾಗಿ ಕಂಡವು. “ನಮ್ಮ ಶ್ರೀನಿವಾಸಾಽಽ ಅರಮನೆಯಂಥಾಽಽ ಮನೆ ಕಟ್ಟಿಸಿದ್ದಾನೇ ಎಂದು ಗೋಕರ್ಣದಲ್ಲೆಲ್ಲಾಽಽ ಸುದ್ದಿ. ಸಾಯುವ ಮೊದಲೂಽಽನೋಡಿ ಹೋಗೋಣಾಽಽ ಅಂತ ಬಂದೆ.” ಹಲ್ಲಿಲ್ಲದ ಬಾಯಿಂದ ಬೊಚಬೊಚ ಎನ್ನುತ್ತ ಹೊರಟ ಆ ಶಬ್ದಗಳು ನಾಗಪ್ಪನ ಮೇಲೆ ವಿಚಿತ್ರ ಪರಿಣಾಮ ಮಾಡುತ್ತಿದ್ದವು….

ತಮ್ಮಿಬ್ಬರನ್ನೇ ಹೀಗೆ ಒಂದೆಡೆಯಲ್ಲಿ ಬಿಟ್ಟುಹೋದದ್ದು ಆಕಸ್ಮಿಕವೋ ಅಥವಾ ಮೊದಲೇ ಯೋಜಿಸಿಕೊಂಡ ಹಿಕಮತ್ತೋ ಎಂದುಕೊಳ್ಳುವಷ್ಟರಲ್ಲಿ ಶ್ರೀನಿವಾಸನ ಹುಡುಗಿಯರಿಬ್ಬರೂ ಚಹದ ಸರಂಜಾಮನ್ನು ಅಲ್ಲಿ ತಂದು ಡೈನಿಂಗ್ ಟೇಬಲ್ ಮೇಲೆ ವ್ಯವಸ್ಥಿತವಾಗಿ ಇಡಹತ್ತಿದರು. “ಕಾಕಾ, ಆಂಬೋಡೆ ಬಿಸಿಬಿಸಿ ಇದ್ದಾಗಲೇ ತಿನ್ನುವಿರಂತೆ, ಬನ್ನಿ. ಅಪ್ಪ ಈಗ ಬರುತ್ತಾರೆ”_ ಹಿರಿಯ ಹುಡುಗಿ ಆಶಾ ತನ್ನೊಡನೆ ಮಾತನಾಡಿದ್ದು ಇದೇ ಮೊದಲಾಗಿತ್ತು. ಬಹಳ ಸಿಹಿಯಾದ ಕಂಠ. ಮಾತನಾಡುವಾಗ ನಗುವ ಮೋಡಿ, ಕಣ್ಣುಗಳಲ್ಲಿ ಮೂಡುವ ಹೊಳಪು. ಈ ಎಲ್ಲದಕ್ಕೂ ಕಳೆತರುವ ಮುತ್ತಿನಂತಹ ಹಲ್ಲುಗಳ ಸಾಲು _ ಇವುಗಳಲ್ಲಿ ಆಶಾ ಚೇತನಾಳನ್ನೇ ಹೋಲುತ್ತಿದ್ದಳು. ಆದರೆ ಅದೇ ವಯಸ್ಸಿಗೆ ಬರುತ್ತಿದ್ದ ಹುಡುಗಿ ತನ್ನ ಮೋಹಕತೆಯ ಬಗ್ಗೆ ತನಗೇ ಇದ್ದ ಅರಿವಿನಿಂದಾಗಿ ಚೇತನಾಳಿಗಿಂತ ಹೆಚ್ಚು ಆಕರ್ಷಕಳಾಗಿದ್ದಳು. ಚೇತನಾ ಕೂಡ ತನ್ನ ಅಕ್ಕನ ಕೋರಿಕೆಗೆ ದನಿಗೂಡಿಸಿದಳು. ಮುದುಕಿಯೂ ಹಿಂದೆ ಬೀಳಲಿಲ್ಲ: “ಹೋಗು ಹೋಗು ಶ್ರೀನಿವಾಸಾ ದೇವರ ಕೋಣೆಯಲ್ಲಿರಬೇಕು. ಇದೀಗ ಬರುವುದಾಯಿತು.”

ನಾಗಪ್ಪ ಎದ್ದು ಟೇಬಲ್ಲಿಗೆ ನಡೆದ. ಚೇತನಾ ತೋರಿಸಿದ ಕುರ್ಚಿಯಲ್ಲಿ ಕೂತರೆ ಮುದುಕಿ ಕಣ್ಣಿಗೆ ಬೀಳದಿರುವುದು ಅಸಾಧ್ಯವಾಗಿತ್ತು. ಆದರೆ ಬೇರೆಡೆಯಲ್ಲಿ ಕೂಡ್ರೋಣವೆಂದರೆ ಒಂದು ಕುರ್ಚಿಯ ಹತ್ತಿರ ಚೇತನಾ, ಇನ್ನೊಂದರ ಹತ್ತಿರ ಆಶಾ ನಿಂತಿದ್ದರು. ನಿರುಪಾಯನಾಗಿಯೇ ನಾಗಪ್ಪ ತನಗೆ ತೋರಿಸಿದ ಕುರ್ಚಿಯಲ್ಲೇ ಆಸನಾರೂಢನಾದ. ಮುದುಕಿಯ ಕಣ್ಣುಗಳು ಇನ್ನೂ ತನ್ನ ಮೇಲೇ ಊರಿದ್ದು ಲಕ್ಷ್ಯಕ್ಕೆ ಬಂದಾಗ ಆಂಬೋಡೆಗೆ ಕೈ ಹಚ್ಚುವುದೇ ದುಸ್ತರವಾಯಿತು. ಪುಣ್ಯಕ್ಕೆ ಅಷ್ಟು ಹೊತ್ತಿಗೆ ಶ್ರೀನಿವಾಸ ಬಂದ. ಇದಿರಿನ ಕುರ್ಚಿಯಲ್ಲಿ ಕೂತದ್ದರಿಂದ ತುಸು ನಿರಂಬಳವೆನಿಸಿತು : ಕೆಲವು ಕ್ಷಣಗಳ ಮಟ್ಟಿಗಾದರೂ ಶ್ರೀನಿವಾಸ ಮುದುಕಿಯ ದೃಷ್ಟಿಗೆ ಅಡ್ಡ ಬಂದಿದ್ದ ! ಆದರೂ ಆಂಬೋಡೆ ತಿನ್ನುವಾಗ, ಅವುಗಳ ರುಚಿಯನ್ನು ತನ್ನ ಕಡೆಗೆ ತುಂಬ ಸಲುಗೆಯಿಂದ ನೋಡುತ್ತ ನಿಂತ ಹುಡುಗಿಯರಿಬ್ಬರ ಮುಂದೆ ಪ್ರಶಂಸಿಸುವಾಗ, ಚಹ ಕುಡಿಯುವಾಗ ಮನಸ್ಸು ಕೆಲವೇ ಕಾಲದ ಮೊದಲು ಅನುಭವಿಸದ್ದನ್ನೇ ಮೆಲುಕು ಹಾಕುವುದರಲ್ಲಿ ಮಗ್ನವಾಗಿತ್ತು.

‘ಅಮ್ಮನನ್ನು ನೀನು ನೋಡದೇ, ಈಗ, ಎಷ್ಟು ಕಾಲವಾಯಿತೋ !” ಶ್ರೀನಿವಾಸ ಮಾತಿಗೆ ಆರಂಭಿಸಿದ್ದ. ಹಾಲಿನಲ್ಲಿಯ ಫ್ಯಾನು ತೀವ್ರಗತಿಯಲ್ಲಿ ತಿರುಗುವಾಗ ಬೇಡವಾದದ್ದನ್ನೇ ತಿರುತಿರುಗಿ ನೆನಪಿಗೆ ತರುವ ಕಿರಿಕಿರಿ ಮಾತಿನ ಹಾಗೆ ಸದ್ದು ಮಾಡುತ್ತಿತ್ತು. ಗರಾಜಿನಲ್ಲಿ ಕಬ್ಬಿಣದ ತುಂಡಿನ ಮೇಲೆ ಬೀಳುತ್ತಿದ್ದ ಸುತ್ತಿಗೆಯ ಪೆಟ್ಟು ಬೇಸರಕ್ಕೇ ಪುಟಕೊಡುತ್ತಿತ್ತು. ಸುತ್ತಲ ಕೇರಿಯ ಚಟುವಟಿಕೆಯ ಸದ್ದು ಸಮುದ್ರದ ನೀರಿನ ಸದ್ದನ್ನು ಸಂಪೂರ್ಣವಾಗಿ ಅಡಗಿಸಿತ್ತು. ಚಹದ ಬಿಸಿಗೋ ಆಂಬೋಡೆಯ ಜತೆಗಿರಿಸಿದ ಚಟ್ನಿಯ ಖಾರಕ್ಕೋ ಬನಿಯನ್ನಿನ ಕೆಳಗೆ ಬೆವರೊಡೆಯುತ್ತಿದ್ದ ಭಾಸ. ಕುತ್ತಿಗೆಯ ಮೇಲೆ ಕೂಡ. ತನಗೆ ಆಗ ಡ್ರೆಸ್ಸು ಬದಲಿಸುವಾಗ ಕೊಟ್ಟ ನ್ಯಾಪ್‌ಕಿನ್ನಿನಿಂದ ಕುತ್ತಿಗೆಯ ಮೇಲಿನ ಬೆವರೊರೆಸಿಕೊಳ್ಳುತ್ತಿರುವಾಗ_”ಕಾಕಾ, ಸೆಖೆಯಾಗುತ್ತಿದ್ದರೆ ಬುಶ್‌ಕೋಟ್ ಯಾಕೆ ತೆಗೆಯುವದಿಲ್ಲ ? ನಮ್ಮ ಅಕ್ಕ ಆಗ ನಿಮ್ಮ ಹರವಾದ ಛಾತಿಯ ತಾರೀಪು ಮಾಡುತ್ತಿದ್ದಳು.” ಎಂದಳು ಚೇತನಾ. ಆಶಾ ಸಿಟ್ಟು ನಟಿಸುತ್ತ ಚೇತನಾಳ ಕಿವಿ ಹಿಂಡಿದಳು. ನಾಗಪ್ಪ, ಮನಸ್ಸಿನ ತೋಲವನ್ನು ಕಳೆದುಕೊಳ್ಳದೇ_”ಹೌದೆ ? ಆದರೆ ನಿನಗೆ ನಾನು ಈ ಬುಶ್‌ಕೋಟು ಹಾಕಿಕೊಂಡದ್ದು ಸೇರುತ್ತದೆಯೆಂದು ತೊಟ್ಟೇ ಕುಳಿತಿದ್ದೇನೆ,” ಎಂದ. ಶ್ರೀನಿವಾಸ ನಡುವೆಯೇ ಬಾಯಿಹಾಕಿದ : “ಮೇಲಾಗಿ ಕಾಕಾನಿಗೆ ಛಾತಿ ತೆರೆದು ಫ್ಯಾನಿನ ಕೆಳಗೆ ಕೂತರೆ ಆರೋಗ್ಯಕ್ಕೆ ಸರಿಯಲ್ಲವೆಂದು ಡಾಕ್ಟರರೇ ಹೇಳಿದ್ದಾರಂತೆ.” ಹಿಂದೆ ಒಂದು ಸಂದರ್ಭದಲ್ಲಿ ತಾನು ಕೊಟ್ಟ ವಿವರಣೆಯನ್ನು ಶ್ರೀನಿವಾಸ ಈಗ ಪುನರುಚ್ಚರಿಸಿದ್ದರ ಉದ್ದೇಶ ನಾಗಪ್ಪನಿಗೆ ತಿಳಿಯಲಿಲ್ಲ. ಟೇಬಲ್ಲಿನಿಂದ ಏಳುವಾಗ ಮನಸ್ಸು ಒಂದನ್ನೇ ಕುರಿತು ಪ್ರಾರ್ಥಿಸುತ್ತಿತ್ತು : ಪದ್ದಕ್ಕನ ಮುದ್ದೆಯ ಮುಂದೆ ಕೂಡ್ರುವ ಪ್ರಸಂಗ ಮಾತ್ರ ಮತ್ತೆ ಬರದಿರಲಿ ! ಅದಾಗ ಶ್ರೀನಿವಾಸ ಅಂದ : “ಮಕ್ಕಳಿಬ್ಬರೂ ನಿನ್ನ ಕೂಡ ರಮ್ಮಿ ಆಡುವ ಪ್ಲ್ಯಾನ್ ಮಾಡಿ ಕುಳಿತಿದ್ದಾರೆ. ಊಟವಾದ ಮೇಲೆ ಆಡೋಣ. ಈಗ ಅಮ್ಮನೊಡನೆ ಮಾತನಾಡು. ಅಮ್ಮನಿಗೆ ನಿನ್ನೆಯಿಂದಲೂ ನಿನ್ನದೇ ಧ್ಯಾನ. ಬಾ. ನಿನ್ನ ಸಾಹಿತ್ಯಕ್ಕೂ ಸಾಮಗ್ರಿ ದೊರಕೀತು. ಅಮ್ಮನ ನೆನಪಿನಲ್ಲಿ ಏನೆಲ್ಲ ಎಷ್ಟೆಲ್ಲ ಭದ್ರವಾಗಿ ಕುಳಿತುಬಿಟ್ಟಿದೆ, ನೋಡು.”

ಹುಡುಗಿಯರಿಬ್ಬರಿಗೂ ನಿರಾಶೆಯಾಯಿತು. ಆದರೂ ಅದನ್ನು ತೋರಗೊಡದೆ ಖಾಲಿಯಾದ ಕಪ್ಪು-ಬಶಿಗಳನ್ನು, ಪ್ಲೇಟುಗಳನ್ನು ಒಳಗೆ ಒಯ್ಯಹತ್ತಿದರು. ಶ್ರೀನಿವಾಸನ ಹೆಂಡತಿ ಒಮ್ಮೆ ಬಾಗಿಲಲ್ಲಿ ಕಾಣಿಸಿಕೊಂಡು_”ಕಿರಣನೆಲ್ಲಿ ? ಇನ್ನೂ ಸ್ನಾನ ಮುಗಿಯಲಿಲ್ಲವೆ ?” ಎಂದು ಕೇಳಿದಳು. ಹೆಚ್ಚು ಹೊತ್ತು ಅಲ್ಲಿ ನಿಲ್ಲದೇ ತಿರುಗಿ ಅಡುಗೆಯ ಮನೆಯ ಕಡೆಗೆ ನಡೆದಳು. ಕಿರಣನೊಂದು ನೆಪವಾಗಿದ್ದ ; ಅವಳು ಬಂದದ್ದು ತನ್ನನ್ನು ನೋಡಿ ಹೋಗಲೆಂದೇ ಎಂದನ್ನಿಸಿತು ನಾಗಪ್ಪನಿಗೆ. ಕುರ್ಚಿಯಿಂದ ಏಳುವಾಗ, ಅವಳ ಕಣ್ಣುಗಳಲ್ಲಿ ಕಂಡಂತೆ ಭಾಸವಾದ ಆತಂಕದಿಂದ ಅಸ್ವಸ್ಥನಾದ. ಶ್ರೀನಿವಾಸ ನೇರವಾಗಿ ಸೋಫಾದ ಕಡೆಗೇ ನೋಡಹತ್ತಿದ್ದ. ಪದ್ದಕ್ಕನಿಗೆ ತೀರ ಹತ್ತಿರವಾದ ಸೋಫಾದ ಕಡೆಗೆ ಬೆರಳುಮಾಡಿ_”ಕೂಡ್ರು. ಅಮ್ಮನ ದೃಷ್ಟಿ ಇನ್ನು ಸ್ವಚ್ಛವಾಗಿದೆ ನೋಡು. ಆದರೆ ಕಿವಿ ಸ್ವಲ್ಪ ದೂರ….ಅಮ್ಮಾ, ನಾಗಪ್ಪನ ಹತ್ತಿರ ಮಾತನಾಡುವದು ಬಹಳವಿದೆ ಎಂದಿದ್ದೆಯಲ್ಲ. ನೋಡು, ಬಂದದ್ದಾನೆ. ನೀವಿಬ್ಬರೂ ಮಾತನಾಡಿಕೊಳ್ಳಿ. ನಾನು ಈ ಲೆಕ್ಕಪತ್ರಗಳನ್ನಷ್ಟು ನೋಡಿ ಮುಗಿಸುತ್ತೇನೆ,” ಎಂದು ಮೊದಲೇ ತಂದಿರಿಸಿದಂತಿದ್ದ ಫೈಲುಗಳನ್ನು ತೊಡೆಗಳ ಮೇಲಿರಿಸಿ, ಪರಿಶೀಲಿಸಹತ್ತಿದ.

ನಾಗಪ್ಪನಿಗೆ ಸಂಶಯ ಉಳಿಯಲಿಲ್ಲ ; ಈ ಮುಖಾಮುಖಿ ತೋರುವಷ್ಟು ಸರಳವಾದದ್ದಲ್ಲ. ಪದ್ದಕ್ಕ ತಾನಾಗಿಯೇ ಮುಂಬಯಿಗೆ ಬಂದದ್ದು ಸುಳ್ಳು, ಪೂರ್ವನಿಶ್ಚಿತ ಉದ್ದೇಶದಿಂದಲೇ ಅವಳನ್ನು ಕರೆಯಿಸಿರಬೇಕು. ತಾನು ಇಷ್ಟುದಿನ ಯಾವುದರಿಂದ ಪರಾರಿಯಾಗಿದ್ದೆನೋ ಆ ತನ್ನ ಭೂತಕಾಲ ಈಗ ಇವಳ ಮುಖಾಂತರ_ಇಂದೋ ನಾಳೆಯೋ ಸಾಯಲು ಹೊರಟ ಈ ಮುದಿ ಮುದ್ದೆಯ ಮುಖಾಂತರ ತನಗೆ ಇದಿರಾಗಲಿದೆ ! ಸಾಯಲು ಹೊರಟವಳಲ್ಲಿಯೂ ಕೊಲ್ಲುವ ಛಲದ ಪ್ರವೃತ್ತಿ ಇನ್ನೂ ಜೀವಂತವಾಗಿರಬಹುದೆಂಬ ಗುಮಾನಿಯಿಂದ ದಿಗ್ಭ್ರಮೆಗೊಂಡ.
uಟಿಜeಜಿiಟಿeಜ
– ಅಧ್ಯಾಯ ಮೂವತ್ತೊಂದು –

ನಾಗಪ್ಪ ಎಲ್ಲದಕ್ಕೂ ಸಿದ್ಧನಾಗಿ ಕೂತಂತೆ ಕೂತಿದ್ದ. ಹಾಲಿನಲ್ಲಿ ತುಸುಹೊತ್ತು ಯಾರೂ ಮಾತನಾಡಲಿಲ್ಲ. ಶ್ರೀನಿವಾಸ ತಾನು ಕೈಯಲ್ಲಿ ಹಿಡಿದದ್ದು ಅತ್ಯಂತ ತರಾತುರಿಯ ಕೆಲಸವೆಂಬಂತೆ ಅದರಲ್ಲಿ ಕೂಡಲೇ ಸಂಪೂರ್ಣವಾಗಿ ಮಗ್ನನಾದಂತೆ ತೋರಿಸಿಕೊಂಡ. ಮುದುಕಿ ಕೂಡ ಮಾತನಾಡದೇ ತದೇಕಚಿತ್ತದಿಂದ ನಾಗಪ್ಪನನ್ನೇ ನೋಡುತ್ತಿತ್ತು : ಅದು ನೋಡುವ ರೀತಿಗೆ, ತನ್ನನ್ನು ನೋಡುತ್ತಿದ್ದದ್ದು, ಇನ್ನೊಂದು ಮನುಷ್ಯ-ವ್ಯಕ್ತಿ ಎಂಬ ಭಾವನೆಯನ್ನು ಹುಟ್ಟಿಸಿಕೊಳ್ಳುವದು ಎಷ್ಟೊಂದು ಪ್ರಯತ್ನಪಟ್ಟರೂ ನಾಗಪ್ಪನಿಗೆ ಸಾಧ್ಯವಾಗಲಿಲ್ಲ. ಆ ಭಾವನೆ ಸಾಧ್ಯವಾಗದೇ ಇದ್ದುದ್ದಕ್ಕೋ ಏನೋ ತನ್ನ ಪ್ರಜ್ಞೆಗೆ ಸುಲಭವಾಗಿ ಗ್ರಹಿಸಲಾಗದ ಒಂದು ನೋಟ ತನ್ನ ಆಂತರ್ಯವನ್ನು ಹೊಕ್ಕು ಬೇರುಗಳವರೆಗೂ ತನ್ನನ್ನು ವೀಕ್ಷಿಸುತ್ತಿದೆ ಎಂಬಂತಹ ವಿಲಕ್ಷಣ ಅನುಭವವಾಗಿ ಕೈಗಳೆರಡನ್ನೂ ಎದೆಯ ಸುತ್ತ_ಗಟ್ಟಿಯಾಗಿ ಬಳಸಿ ಹಿಡಿಯುವಂತೆ_ಸುತ್ತಿಕೊಂಡಾಗ “ಚಳಿಯಾಗುತ್ತಿದ್ದರೆ ಆ ಪಂಖಾಽಽ ಏಕೆ ಬಂದುಮಾಡುವದಿಲ್ಲ ?” ಎಂದು ಮುದುಕಿಯ ಕಡೆಯಿಂದ ಬಂದ ಮಾತಿಗೆ ನಾಗಪ್ಪ ಅಕ್ಷರಶಃ ಸೋಫಾದಲ್ಲಿ ಜಿಗಿದುಬಿದ್ದ. ಶ್ರೀನಿವಾಸ ಕೂಡಲೇ ತನ್ನ ಫೈಲುಗಳೊಳಗಿಂದ ಲಕ್ಷ್ಯ ಹೊರತೆಗೆದವನ ಹಾಗೆ_ “ಅರೆ ! ನನ್ನ ಲಕ್ಷ್ಯಕ್ಕೇ ಬರಲಿಲ್ಲವಲ್ಲ. ಸಮುದ್ರ ದಂಡೆಯ ಮೇಲಿನ ಮನೆಯಾದರೂ ಬೆಳಗಿನ ಹೊತ್ತಿಗೆ ಇಲ್ಲಿ ಗಾಳಿಯೇ ಇಲ್ಲ ನೋಡು. ಆದರೆ ನಿನಗೆ ಪಂಖದ ಗಾಳಿ ಆಗುವದಿಲ್ಲ ಎನ್ನುವದು ಮರೆತೇಹೋಯಿತು,” ಎಂದು ಎದ್ದು ಪಂಖದ ವೇಗವನ್ನು ಕಡಿಮೆಮಾಡಿ ಬಂದವನೇ ತಿರುಗಿ ತನ್ನ ಕೆಲಸದಲ್ಲಿ ತಲ್ಲೀನನಾದ.
ನಾಗಪ್ಪನೇ ಸಹಿಸಲಸಾಧ್ಯವಾದ ಮೌನ ಮುರಿಯಲು ನಿಶ್ಚಯಿಸಿದ :

“ಪದ್ದಕ್ಕನಿಗೀಗ ಎಷ್ಟು ವಯಸ್ಸು ? ೭೦ ದಾಟಿರಬೇಕು, ಅಲ್ಲವೆ ?” ಎಂದು ಕೇಳಿದ ತನ್ನ ದನಿಯಲ್ಲಿ ನಡುಕವಿದ್ದದ್ದು ಲಕ್ಷ್ಯಕ್ಕೆ ಬಂದು ಮುಜುಗರವಾಯಿತು. ಆ ಒಂದು ಪ್ರಶ್ನೆಯ ಹಾದಿಯನ್ನೇ ಕಾಯುತ್ತಿದ್ದವಳ ಹಾಗೆ ಮುದುಕಿ ಬಾಯಿ ತೆರೆದದ್ದೇ ತಡ. ಮಾತು ಬೊಚಬೊಚ ಸದ್ದು ಮಾಡುತ್ತ ಹೊರಡಹತ್ತಿತ್ತು : ನಾಗಪ್ಪ ಬಿಸಿಲು ಕಾದ ಹಾಗೆ ಹೆಚ್ಚಾಗಹತ್ತಿದ ಸೆಖೆಯಲ್ಲಿ ಕೂಡ ಚಳಿ ಹತ್ತಿದವರ ಹಾಗೆ ನಡುಗುತ್ತ ಕೇಳಹತ್ತಿದ :
“ಎಪ್ಪತ್ತರ ವಯಸ್ಸಿನವಳ ಹಾಗೆ ಕಾಣುತ್ತೇನೆಯೇ ? ಚೇಷ್ಟೆ ಮಾಡುತ್ತೀಯಾ ?” ಎನ್ನುತ್ತಿರುವಾಗ ಶ್ರೀನಿವಾಸ_”ಅಮ್ಮನಿಗೀಗ ತೊಂಭತ್ತರ ಸಮೀಪ,” ಎಂದ. (ಬೋಳೀಮಗ, ಕಿವಿ ಇತ್ತವೇ ಇದ್ದೂ, ಓದುವ ನಟನೆ ಮಾಡುತ್ತಿರಬೇಕು !)

“ಇನ್ನು ೬ ತಿಂಗಳಿಗೆ ನನಗೆ ತೊಂಬತ್ತು ಮುಗಿದು ತೊಂಬತ್ತೊಂದಕ್ಕೆ ….ನನ್ನ ವಯಸ್ಸೇನು ಕೇಳಿತ್ತೀ ಬಿಡು. ನಾನು ನಿನ್ನ ಬಗ್ಗೆ ಯೋಚಿಸುತ್ತಾ ಇದ್ದೆ. ಯಾಕೆ, ಮದುವೆ ಮಾಡಿಕೊಳ್ಳುವ ವಿಚಾರ ಇಲ್ಲವೆ ? ನಿಮ್ಮ ಜಾತಿಯವರಲ್ಲೇನು ಚಂದ ಹುಡುಗಿಯರಿಗೆ ಕಡಿಮೆಯೆ ?”

ಹಿಂಸ್ರಪಶುವಿನ ಈ ಹಲ್ಲುಮಸೆತ ಕೇಳಿ ತನಗೆ ಆಶ್ಚರ್ಯವಾಗುತ್ತಿಲ್ಲವಲ್ಲ ಎಂಬ ಅರಿವಿನಿಂದ ನಾಗಪ್ಪನಿಗೆ ಸಂತೋಷವೇ ಆಯಿತು. ಅಂತೂ ತನ್ನ ಮೊದಲಿನ ಸಂಶಯವೇ ಗಟ್ಟಿಯಾಗುತ್ತಿದೆ. ಮುದುಕಿಗೆ ಉತ್ತರ ಕೊಡಬೇಕು ಎನ್ನುವಷ್ಟರಲ್ಲಿ ಶ್ರೀನಿವಾಸ ಗಾಬರಿ ಹಾಗೂ ಅಸಮಾಧಾನ ತುಂಬಿದ ದನಿಯಲ್ಲಿ_”ಅಮ್ಮಾ ! ಅದೆಲ್ಲ ಈ ಹೊತ್ತೇ ಬೇಕೆ ? ಊಟಕ್ಕೆ ಬಾ ಎಂದು ಕರೆಸಿದವನ ಇದಿರು ಈ ಜಾತಿ-ಪಾತಿಯ ಮಾತೇಕೆ ? ಇಂದಿನ ದಿನಗಳಲ್ಲಿ ಯಾರಿಗೆ ಅದರಲ್ಲೆಲ್ಲ ನಂಬಿಕೆ ಇದೆಯೆಂದಾಗಬೇಡವೆ ?” ಎಂದ.

ನಾಗಪ್ಪನಿಗೆ ಕೂಡಲೇ ಸಿಟ್ಟು ತರಿಸಿದ್ದು ಅವನ ಮಾತುಗಳಿಗಿಂತ ಹೆಚ್ಚಾಗಿ ಅವುಗಳಲ್ಲಿಯ ಢೋಂಗಿತನವನ್ನು ಮುಚ್ಚಲು ಅಸಮರ್ಥವಾದ ಅವನ ಗೊಗ್ಗರು ದನಿ. ತನಗೆ ಬಂದ ಸಿಟ್ಟನ್ನು ಅಡಗಿಸಿಕೊಳ್ಳುವ ಪ್ರಯತ್ನವನ್ನು ಎಳ್ಳಷ್ಟೂ ಮಾಡದೇ ಕೇಳಿದ :

“ನಿನ್ನ ಗಂಟಲು ಇದ್ದಕ್ಕಿದ್ದಂತೆ ಹಾಗೇಕಾಯಿತೋ (ಥತ್ ಸೂಳೇಮಗನೇ). ಚೇತನಾಗೆ ಹೇಳಿ ನೀರು ತರಿಸಲೇ ? ಆಂಬೋಡೆಯ ಜತೆಗಿನ ಚಟ್ಣಿಯ ಖಾರ ಎಲ್ಲಾದರೂ ಅಡಗಿರಬೇಕು ನೋಡು.”

ನಾಗಪ್ಪನ ಈ ಉದ್ಧಟತನದ ಆಹ್ವಾನ ನೇರವಾಗಿ ಮರ್ಮಸ್ಥಾನವನ್ನು ಕೆಣಕಿರಬೇಕು : ಕೈಯಲ್ಲಿ ಹಿಡಿದ ಫೈಲುಗಳನ್ನೆಲ್ಲ ಧೊಪ್ ಎಂದು ನೆಲಕ್ಕೆ ಒಗೆದ ರಭಸಕ್ಕೆ ತೆರೆದೇ ಇದ್ದ ಪೆನ್ನು ಕೂಡ ನೆಲಕ್ಕೆ ಅಪ್ಪಳಿಸಿ ಮಾರುದ್ದ ದೂರ ಸಿಡಿದುಬಿದ್ದಿತು. ಈ ಮುಖಾ-ಮುಖಿಯ ಪೂರ್ವಸೂಚನೆ ಮೊದಲೇ ಇದ್ದಂತಿದ್ದ ಮಕ್ಕಳೆಲ್ಲ ಎಲ್ಲೋ ಮಾಯವಾಗಿದ್ದರು : “ಚೇತನಾಽಽ,” ಎಂದು ಬಾಯಿಂದ ಹೊರಟ ಚೀತ್ಕಾರ ಗಂಟಲಲ್ಲಿಯ ಗೊಗ್ಗರು-ದನಿಯಲ್ಲಿ ಉಸಿರುಗಟ್ಟಿದರೂ ಅದಕ್ಕೆ ಕಾರಣವಾದ ಸಿಟ್ಟು ಮಾತ್ರ ಅಡುಗೆಯ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದು ಕಿವಿಗಳನ್ನು ಇತ್ತವೇ ಇರಿಸಿಕೊಂಡಿದ್ದ ಶಾರದೆಗೆ ಮುಟ್ಟುವುದರಲ್ಲಿ ಎಷ್ಟೂ ತಪ್ಪಲಿಲ್ಲ. ಅವಳು ಓಡೋಡಿ ಬಂದು ಬಾಗಿಲಲ್ಲಿ ನಿಲ್ಲುವ ಹೊತ್ತಿಗೆ ಶ್ರೀನಿವಾಸ ಸೋಫಾದಿಂದ ಎದ್ದು ಹಾಲಿನಲ್ಲಿ ಶತಪಥ ಹಾಕಹತ್ತಿದ. ಅವಳು ದೃಷ್ಟಿಗೆ ಬಿದ್ದದ್ದೇ_ನೀರು ತರಿಸುವುದಕ್ಕಾಗಿ ನಾನು ಚೇತನಾಳನ್ನ ಕರೆದಿದ್ದೆ ಎಂಬುದನ್ನು ಕೂಡ ಮರೆತು, “ನೀನ್ಯಾಕೆ ಬಂದೆ ಇಲ್ಲಿ_ನಿನ್ನ ದರಿದ್ರ ಮುಸುಡಿ ತಗೊಂಡು ?” ಎಂದು ಒದರಿದ. ಇದ್ದಕ್ಕಿದ್ದಂತೆ ಶ್ರೀನಿವಾಸನ ಗಂಟಲು ಬಿದ್ದುಹೋಗಿತ್ತು: ನಾಲ್ಕು ಕೇರಿ ಒಂದುಮಾಡುವಷ್ಟು ಎತ್ತರದ ದನಿಯಲ್ಲಿ ಆಡಿದ ಸಿಟ್ಟಿನ ಮಾತುಗಳಾದರೂ ಕಿವಿಯಲ್ಲಿ ಆಡಿದ ಮಾತುಗಳ ಹಾಗೆ ಪಿಸುಗುಟ್ಟಿದವು. ದಂಡನ ಅವತಾರ ನೋಡಿ ಕಂಗಾಲಾದ ಶಾರದೆ ಕೂಡಲೇ ಅಲ್ಲಿಂದ ಕಾಲು ಕಿತ್ತಳು. ಆಗ ಅವಳ ಮೋರೆಯ ಮೇಲೆ ಕಂಡ ನೋವು ನಾಗಪ್ಪನನ್ನು ತಟ್ಟದೇ ಇರಲಿಲ್ಲ : ಆ ನೋವೇ ಮುಂದಿನ ಕೆಲವುಕ್ಷಣಗಳ ಮಟ್ಟಿಗಾದರೂ ಇದೆಲ್ಲದರ ಸೋಕ್ಷಮೋಕ್ಷ ಆಗಲೇಬೇಕೆಂಬ ನಿರ್ಧಾರಕ್ಕೇ ಬಂದ ನಾಗಪ್ಪನ ಸಿಟ್ಟಿಗೆ ತಡೆ ಹಾಕಿತು. ಶ್ರೀನಿವಾಸ ಶತಪಥ ಹಾಕುತ್ತಲೇ ಉಳಿದ : ಯಾವುದೋ ಪಾಶವೀ ತಳದಿಂದ ಚಿಮ್ಮಿದ ಕ್ರೂರ ಸಿಟ್ಟು ಮಾನವಭಾಷೆಯ ತೆಕ್ಕೆಗೆ ಒಳಗಾಗಲು ಕೂಡಲೇ ಒಪ್ಪುತ್ತಿರಲಿಲ್ಲವೇನೋ !

ಇತ್ತ, ಆಗಿನಿಂದಲೂ ತನ್ನ ಕ್ರೋಧವನ್ನೆಲ್ಲ ಕಣ್ಣಿನಲ್ಲಿ ಒಟ್ಟುಗೂಡಿಸಿ ಕೂತವಳ ಹಾಗೆ ಕೂತ ಪದ್ದಕ್ಕನೂ ಸಹ ಗುಡುಗುಡು ನಡುಗುತ್ತಿದ್ದಳು. ಆ ಅಸಹ್ಯ ದೃಷ್ಯವನ್ನು ನೋಡಿ ನಾಗಪ್ಪನಿಗೆ ದೊಡ್ಡಕ್ಕೆ ನಕ್ಕುಬಿಡಬೇಕೆನಿಸಿತು. ಹಾಲಿನಲ್ಲಿ ನಡೆಯುತ್ತಿದ್ದುದನ್ನು ನೋಡುತ್ತ ಕುಳಿತುಬಿಟ್ಟರೆ ನಗದೇ ಇರುವುದು ಅಸಾಧ್ಯವಾಗಿ ತೋರಿದಾಗ, ತಾನು ಏನು ಮಾಡುತ್ತಿದ್ದೇನೆ ಎನ್ನುವುದರ ಅರಿವು ಬರುವ ಮೊದಲೇ ಕೂತಲ್ಲಿಂದ ಎದ್ದು ಸೀದಾ ಅಡುಗೆಮನೆಯತ್ತ ನಡೆದೇಬಿಟ್ಟ. ಅಡುಗೆಯ ಮನೆಯಲ್ಲಿ ಶಾರದೆ ಒಬ್ಬಳೇ ಇದ್ದಳು. ಅವಳನ್ನು ತಾನು ಹೀಗೆ ಸಂಧಿಸುತ್ತಿದ್ದುದು ಇದೇ ಮೊದಲು ಎಂಬುದು ಲಕ್ಷ್ಯಕ್ಕೆ ಬಂದದ್ದು ಅವಳ ಭಯಗ್ರಸ್ಥ ಕಣ್ಣುಗಳು ತನ್ನ ಕಣ್ಣುಗಳನ್ನು ಸಂಧಿಸಿದಾಗಲೇ. ಅವಳೇ ಮೊದಲು ಮಾತನಾಡಿದಳು_”ಮಕ್ಕಳೆಲ್ಲ ಕೆಳಗಿನ ಮನೆಗೆ ಹೋಗಿದ್ದಾರೆ.” “ಶ್ರೀನಿವಾಸನಿಗೆ ಕುಡಿಯಲಿಕ್ಕೆ ನೀರು ಬೇಕೆಂದು ಕಾಣುತ್ತದೆ,” ಎಂದಾಗ ಸ್ಟೇನ್‌ಲೆಸ್ ತಂಬಿಗೆಯೊಂದರಲ್ಲಿ ರೆಫ್ರಿಜರೇಟರಿನಲ್ಲಿಟ್ಟ ಬಾಟಲಿಯೊಳಗಿನ ನೀರನ್ನು ಸುರಿಯುತ್ತ_”ಊಟಕ್ಕೆ ಇನ್ನರ್ಧ ಗಂಟೆಯಲ್ಲಿ ಕೂಡ್ರಬಹುದು.” ಎಂದಳು. ತಂಬಿಗೆ ಹಾಗೂ ಜೊತೆಗೆ ಕೊಟ್ಟ ಲೋಟಾಗಳೊಂದಿಗೆ ಹೊರಗೆ ಬಂದ ಶ್ರೀನಿವಾಸ ಶತಪಥ ಹಾಕುವದನ್ನು ನಿಲ್ಲಿಸಿ ಸೋಫಾದಲ್ಲಿ ಕುಸಿದಿದ್ದ. ನೀರಿನ ತಂಬಿಗೆಯನ್ನು ಹತ್ತಿರದ ಟೀಪಾಯಿಯೊಂದರ ಮೇಲಿಡುತ್ತ, “ನೀರು ಕುಡಿ, ಸಮಾಧಾನವಾದೀತು,” ಎಂದ ನಾಗಪ್ಪ. ನೆಲದ ಮೇಲೆ ಬಿದ್ದ ಪೆನ್ನು ಇನ್ನೂ ಬಿದ್ದಲ್ಲೇ ಇದ್ದುದನ್ನು ಕಂಡು ಅದನ್ನೆತ್ತಿ ಶ್ರೀನಿವಾಸನ ಕೈಗೆ ಕೊಡುತ್ತ, “ನನ್ನನ್ನು ಈ ಹೊತ್ತು ಕರೆದದ್ದು ಬರೇ ಊಟಕ್ಕಾಗಲೀ ಪದ್ದಕ್ಕನೊಡನೆ ಮಾತನಾಡುವುದಕ್ಕಾಗಲೀ ಅಲ್ಲ ಎಂಬುದನ್ನು ಬಲ್ಲೆ. ನಿನಗೆ ನನ್ನ ಬಗ್ಗೆ ಇಷ್ಟೊಂದು ದ್ವೇಷವೇಕೋ ಅರಿಯೆ. ನಿನ್ನ ಹಿತಾಸಕ್ತಿಗಳಿಗೆ ಅಡ್ಡಬರುವಂಥದ್ದೇನೂ ಮಾಡಿಲ್ಲ. ಆದರೂ ಎಲ್ಲದಕ್ಕೂ ಸಿದ್ಧನಾಗಿಯೇ ಬಂದಿದ್ದೇನೆ.” ಎಂದ. ಹಾಗೂ ಪದ್ದಕ್ಕನತ್ತ ತಿರುಗಿ : “ಆಗ ನನ್ನ ಜಾತಿಯ ಬಗ್ಗೆ ಮಾತು ಎತ್ತಿದೆಯಲ್ಲ….”

ಅವನ ವಾಕ್ಯ ಪೂರ್ತಿಯಾಗುವ ಮೊದಲೇ ಶ್ರೀನಿವಾಸನ ಮೂಗಿನ ಹೊರಳೆಗಳು ಅರಳಹತ್ತಿದವು. ಆದರೆ ಬಾಯಿ ತೆರೆಯೋಣವೆಂದರೆ ಗಂಟಲಲ್ಲಿ ದನಿ ಮೂಡಬಹುದೆಂಬ ಭರವಸೆ ತೋರದೆ ಕೆಲಹೊತ್ತು ಸುಮ್ಮಗೆ ಉಳಿದ. ಆಮೇಲೆ, ಇನ್ನು ಸುಮ್ಮಗುಳಿಯುವುದು ಸಾಧ್ಯವಿಲ್ಲ. ಎನ್ನುವ ಹಾಗೆ “ಉಳಿದವರ ಚಾರಿತ್ರ್ಯದ ಬಗ್ಗೆ ಮಾತನಾಡುವ ಮೊದಲು ನಿನ್ನ ಚಾರಿತ್ರ್ಯವನ್ನಷ್ಟು ನೋಡಿಕೋ….ಎಂದ. ವಾಕ್ಯದ ಧಾಟಿ ನೋಡಿದರೆ, ಅದು “ಸಿಟ್ಟುಮೋರೆಯವನೇ,” ಇಲ್ಲವೇ ಇಂತಹದೇ ಬೈಗುಳವೊಂದರಲ್ಲಿ ಕೊನೆಗೊಳ್ಳುವಹಾಗಿತ್ತು. ದನಿ ಇನ್ನೂ ಗೊಗ್ಗರುಗೊಗ್ಗರಾಗಿತ್ತು.
“ನನ್ನ ಚಾರಿತ್ರ್ಯದ ಕಾಳಜಿ ನನಗೆ ಬಿಡು, ಆದರೆ ನಿನ್ನ…”
ನಿನ್ನ ಚಾರಿತ್ರ್ಯದ ಕತೆ ನಿನಗೇ ಗೊತ್ತಿದ್ದರಲ್ಲವೇ ಸೂಳೇಮಗನೇ….ಅಮ್ಮನನ್ನು ಕೇಳು….” ಶ್ರೀನಿವಾಸನ ಸಿಟ್ಟು ಮಸ್ತಕಕ್ಕೇರಿತ್ತು.
“ಕೇಳಿಯೇ ಕೇಳುತ್ತೇನೆ. ಅದಕ್ಕೇ ಬಂದಿದ್ದೇನೆ. ನಿನ್ನ ಮಿಷ್ಟಾನ್ನಭೋಜನಕ್ಕಲ್ಲ. ಆದರೆ ಜೋಕೆ ! ಬೈಗುಳಕ್ಕೆ ಇಳಿದೆಯೋ ಹಲ್ಲು ಉದುರಿಸುತ್ತೇನೆ. ಇದು ಬರೀ ಮಸ್ಕರಿಗೆಂದು ತಿಳಿಯಬೇಡ. ಎಲ್ಲದಕ್ಕೂ ಸಿದ್ಧನಾಗಿಯೇ ಬಂದಿದ್ದೇನೆಂದು ಹೇಳಿದೆನಲ್ಲ. ನನ್ನ ಕಂಪನಿಯವರು ಹೂಡಿದ ಪಿತೂರಿಯಲ್ಲಿ ನೀನು ಸಾಮೀಲಾದದ್ದು ನನಗೆ ಗೊತ್ತಿಲ್ಲವೆಂದು ತಿಳಿಯಬೇಡ. ಎಲ್ಲವನ್ನೂ ಸ್ಪಷ್ಟಮಾಡಿಕೊಳ್ಳಲು ನಾನೇ ಬರುವವನಿದ್ದೆ, ನೀನಾಗಿ ಕರೆದೆಯಲ್ಲ_ಉತ್ತಮ ಆಯಿತು.”
ಶ್ರೀನಿವಾಸನ ಮೋರೆ ಬಣ್ಣಗೆಡಹತ್ತಿತು.
“ಹಲ್ಲು ಉದುರಿಸುವ ಧಮಕಿ ಹಾಕ್ತೀಯೇನೋ ಅವನಿಗೆ ? ಆ ನೀರಿದೆಯೇನೋ ನಿನ್ನೊಳಗೆ ? ತನ್ನ ಸ್ವಂತ ಮೆಹನತ್ತಿನಿಂದ ಅವನು ಮೇಲೆ ಬಂದದ್ದು ಇಂದು ನಮ್ಮ ಜಾತಿಯವರ ಸಮಾಜದಲ್ಲಿ_ಮುಂಬಯಿಯಲ್ಲೇ ಯಾಕೆ ಪರ್ತಗಾಳಿಯ ಮಠದಲ್ಲಿ, ಗೋಕರ್ಣದ ಮಠದಲ್ಲಿ_ಅವನು ಗಳಿಸಿದ ಪ್ರತಿಷ್ಠೆ ನಿನ್ನಿಂದ ನೋಡಲಾಗುವುದಿಲ್ಲ ಅಲ್ಲವೇನೋ ? ಈ ದೊಡ್ಡ ಮನೆ, ಅವನ ಈಚಿನ ಚಂದವಾದ ಸಂಸಾರ ಕೂಡ ನಿನ್ನ ಕಣ್ಣು ಕುಕ್ಕಿಸುತ್ತಿರಬೇಕು ಅಲ್ಲವೇನೋ ? ಬರೀ ಸೂಳೆಯರ ಸಂಗ ಮಾಡಿ ಬೀದೀ ಬಸವನ ಹಾಗೆ ತಿರುಗುವ ನಿನಗೆ ಎಂಥಾ ಸ್ಥಾನಾ ಮಾನಾ ಇವೆಯೊ ? ನಿನ್ನನ್ನು ದೂರಿ ಏನು ಉಪಯೋಗ ಬಿಡೂ. ಹಲ್ಕಾ ಜನರಿಗೆ ಹುಟ್ಟಿದವನು ನೀನು. ರಕ್ತದ ಗುಣ ಎಲ್ಲಿ ಹೋಗಬೇಕು. ನಿನಗೆ ಗೊತ್ತಿದೆಯೋ ಇಲ್ಲವೋ ನಿನ್ನಮ್ಮ ನಮ್ಮ ಜಾತಿಯವಳಲ್ಲ_ಕಲಾವಂತರವಳು. ಗೋವೆಯ ಮಂಗೇಶೀ ದೇವಾಲಯದಲ್ಲಿ ಕುಣಿತ ಮಾಡುತ್ತಿದ್ದ ಹುಡುಗಿ. ಅವಳು ಅಮ್ಮ, ಅಜ್ಜಿ ಎಲ್ಲ ಕುಣಿತದ ಜೊತೆ ಸೂಳೇತನ ಕೂಡ ಮಾಡ್ತಿದ್ರೂ….”

ಪದ್ದಕ್ಕನಿಂದ ಮಿನಿಟಿಗೆ ಒಂದೊಂದರಂತೆ ಎಂಜಲು ಸಿಡಿಸುತ್ತ ಹೊರಬರುತ್ತಿದ್ದ ಈ ಮಾತುಗಳಿಂದ ನಾಗಪ್ಪನ ಮೋರೆಯ ಮೇಲೆ ಆಗುತ್ತಿರಬಹುದಾದ ಬದಲುಗಳನ್ನು ಊಹಿಸಿಯೇ ಎರಡೂ ಕೈಗಳಿಂದ ಗಟ್ಟಿಗಾಗಿ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತುಬಿಟ್ಟ, ಶ್ರೀನಿವಾಸ. ಆದರೆ ನಾಗಪ್ಪನ ಮೋರೆ ಅವನು ಊಹಿಸಿಕೊಂಡ ರೀತಿಯಲ್ಲಿ ಬದಲಾಗುತ್ತಿರಲೇ ಇಲ್ಲ : ವಿಲಕ್ಷಣ ಆಸ್ಥೆಯಿಂದ ಮುಗುಳುನಗುತ್ತ ಕೇಳುತ್ತಿದ್ದ : ಪದ್ದಕ್ಕಾ, ನಿಲ್ಲಿಸಬೇಡ…. ಕತೆ ಬಹಳ ರಸಭರಿತವಾಗಿದೆ….ಶ್ರೀನಿವಾಸ ನಿನಗೆ ಹೇಳಿರಬೇಕು_ನಾನು ಸದ್ಯ ಒಂದು ದೊಡ್ಡ ಕಾದಂಬರಿ ಬರೆಯುವದರಲ್ಲಿ ಮಗ್ನನಾಗಿದ್ದೇನೆ. ಆಗ ನೀನು ಹೊಗಳಿದ ನಮ್ಮ ಸಮಾಜದಲ್ಲಿಯ ದೊಡ್ಡದೊಡ್ಡ(ಕುಂಡೆಗಳುಳ್ಳ) ಪ್ರತಿಷ್ಠಿತರ ಧವಳ ಚೆರಿತೆಗಳ ಬಗ್ಗೆಯೇ ಇದೆ ಕಾದಂಬರಿ. ಈಗ ನೀನು ಹೇಳುತ್ತಿದ್ದ ಕತೆಯನ್ನು ಅದರಲ್ಲೆ ಒಂದು ಅಡ್ಡಕತೆಯಾಗಿ ಸೇರಿಸಿಬಿಡುತ್ತೇನೆ. ಪಂಚಪಕ್ವಾನ್ನದ ಜೊತೆಗೆ ನಂಜಿಕೊಳ್ಳಲಿಕ್ಕೇನಾದರೂ ಬೇಡವೇ ? ಹೇಳು ಹೇಳು….ಇಷ್ಟೇ : ನನ್ನ ಅಮ್ಮನ ಅಮ್ಮ, ಅಮ್ಮನ ಅಜ್ಜಿಯರ ಬಗ್ಗೆ ನಿನಗೆಲ್ಲ ಗೊತ್ತಿರಬೇಕಾದರೆ ನೀನೂ ಕೂಡ ಅವರ ಕೇರಿಯಲ್ಲೇನಾದರೂ….”

“ಮಸ್ಕರಿ ಮಾಡ್ತೀಯೇನೋ ನಿರ್ಲಜ್ಜ. ನಾನು ಹೇಳುತ್ತಿದ್ದದ್ದು ನಿನ್ನ ಮೇಲೆ ಏನೂ ಪರಿಣಾಮ ಮಾಡುತ್ತಿಲ್ಲ ಎಮ್ದು ನಟಿಸಬೇಡ.”

“ಪರಿಣಾಮ ಮಾಡುತ್ತಿಲ್ಲ ಎಂದು ಹೇಗೆ ಹೇಳಲಿ, ಪದ್ದಕ್ಕ (ಪರಿಣಾಮ ಮಾಡಲಿಕ್ಕೆಂದೇ ನೀನು ಈಗ ಹೇಳುತ್ತಿರುವಾಗ) ? ಆದರೆ ನೀನು, ಶ್ರೀನಿವಾಸ ತಿಳಕೊಂಡ ಕಾರಣಕ್ಕಾಗಿ ಅಲ್ಲ ನನ್ನ ಅಮ್ಮ ಕಲಾವಂತ ಹೆಣ್ಣಾಗಿದ್ದಳು.ಅವಳನ್ನು ಮದುವೆಯಾದ ಅಪ್ಪ ಕೂಡ ಹನೇಹಳ್ಲಿಯ ಸಾರಸ್ವತ ಸಮಾಜದ ಸಂಭಾವಿತರು ಅನೇಕ ವರ್ಷಗಳವರೆಗೆ ತಿಳಕೊಂಡಂತೆ ಬ್ರಾಹ್ಮಣನಾಗಿರದೇ ಯಾವುದೋ ಜಾತಿಯವನಾಗಿದ್ದ…”

“ನಿನಗಿದು ಗೊತ್ತಿತ್ತೇನೋ ?” ಶ್ರೀನಿವಾಸ ಬಾಯಿಬಿಟ್ಟ. ಗಂಟಲು ಸಡಿಲಿಸಿತ್ತು.

“ಗೊತ್ತಿರಲಿಲ್ಲ. ನೀನೇ ಇಂತಹ ಅಗಾಧ ಶೋಧವೊಂದರಲ್ಲಿ ತೊಡಗಿದ್ದೀ ಎನ್ನುವದು ‘ಸಂತೋಷಭವನ”ದನಾಯಕನಿಂದ ತಿಳಿಯಿತು.” ಎಂದ. ಶ್ರೀನಿವಾಸ ಹಾಗೂ ಪದ್ದಕ್ಕ ತನ್ನನ್ನೇ ಮಿಕಿಮಿಕಿ ನೋಡುತ್ತ ಕೂತದ್ದನ್ನು ನೋಡಿ ತನ್ನಷ್ಟಕ್ಕೇ, ‘ನನಗೆ ಮುಖ್ಯವೆಂದು ತೋರಿದ್ದು ನನ್ನ ಅಪ್ಪ-ಅಮ್ಮ ಯಾವ ಜಾತಿಯವರು ಎನ್ನುವದಲ್ಲ. ಈ ವಯಸ್ಸಿನಲ್ಲಂತೂ ಅದರ ಬಗ್ಗೆ ನನಗೆ ಏನೂ ಅನ್ನಿಸುವದಿಲ್ಲ. ಆದರೆ ನನಗಿನ್ನೂ ಅರ್ಥವಾಗದೇ ಇದ್ದದ್ದು _ ಇದನ್ನೆಲ್ಲ ಉಪಯೋಗಿಸಿ ನೀವು ನನ್ನನ್ನು ಹಣಿಯಲು ಹೊರಟಿದ್ದರ ಉದ್ದೇಶ ; ಇದ್ದಕ್ಕಿದ್ದಂತೆ ನಾವು ಮನುಷ್ಯಜಾತಿಯಿಂದ ಕೆಳಗಿಳಿಯುತ್ತಿದ್ದರ ಕಾರಣ. ಆದರೆ ಇಷ್ಟು ದಿನ ಯಾವುದನ್ನು ತಿಳಿಯಲು ನಾನು ಹೆದರಿದ್ದೇನೆ ಎಂದು ಅನ್ನಿಸಿತ್ತೋ ಅದೆಲ್ಲ ಈಗ ತೀರ ಹಾಸ್ಯಾಸ್ಪದವೆನ್ನಿಸಹತ್ತಿದೆಯಲ್ಲ. ಇಂತಹ ಯಾವ ಒಂದು ಭಾವನೆಯೂ ನಿಜವೆನ್ನಿಸುವದಿಲ್ಲವಲ್ಲ,” ಎಂದುಕೊಳ್ಳುತ್ತಿರುವಾಗ ಮೂವರೂ ಒಮ್ಮೆಲೇ ಮೌನ ತಳೆದದ್ದು ಲಕ್ಷ್ಯಕ್ಕೆ ಬಂದು: ‘ಪದ್ದಕ್ಕಾ, ನಮ್ಮಮ್ಮ ಇಂತಹದೇ ಮನೆತನದವಳು, ಅಪ್ಪ ಇಂತಹದೇ ಜಾತಿಯವನು ಎಂದು ನಿನಗೆ ಯಾವಾಗ ಗೊತ್ತಾಯಿತು ? ಹೇಗೆ ಗೊತ್ತಾಯಿತು ? ಅದಕ್ಕಿಂತ ಹೆಚ್ಚಾಗಿ ಇದನ್ನೆಲ್ಲ ನಿನ್ನಿಂದ ಹೇಳಿಸಲೆಂದೇ ನಿನ್ನನ್ನು ಇಲ್ಲಗೆ ಕರೆಸಿದ್ದರ ಹಿಂದಿನ ಹೇತು ಯಾವುದು ? ಇಂತಹ ಮುದಿವಯಸ್ಸಿನಲ್ಲಿ ನನಗಿದನ್ನೆಲ್ಲ ಹೇಳಿ ನನ್ನ ಮನಸ್ಸನ್ನು ನೋಯಿಸುವ ಚಪಲ ನಿನಗೆ ಯಾಕೆ ? ಹೇಳಿದೆನಲ್ಲ : ನನಗೀಗ ಇವೆಲ್ಲ ಬರೀ ಕುತೂಹಲದ ವಿಷಯಗಳಾಗೇ ಉಳಿದಿವೆ. ಆದರೂ….” ಇಲ್ಲ, ನಾಗಪ್ಪ ಈ ಯಾವ ಪ್ರಶ್ನೆಗಳನ್ನೂ ಕೇಳಲಿಲ್ಲ. ಕೇಳುವ ಗರಜೇ ತೋರಲಿಲ್ಲ. ಇದ್ದಕ್ಕಿದ್ದಂತೆ ಒಂದು ಬಗೆಯ ಅನಾಸಕ್ತಿ ಬಂದುಬಿಟ್ಟಿದೆ ಎಂಬ ಅನ್ನಿಸಿಕೆಯಿಂದ ತಾನೇ ಚಕಿತನಾದ : ಇದಾವುದರಲ್ಲೂ ತನಗೆ ನಂಬಿಕೆಯೇ ಇದ್ದಿರದಿದ್ದರೆ, ಶ್ರೀನಿವಾಸನೊಡನೆ ತಾನು ಇಷ್ಟು ದಿನ ಕಾದ, ಒಂದು ರೀತಿಯ ದ್ವೇಷಕ್ಕೆ ಅರ್ಥವೇನು ? ಇದೀಗಿನ ತನ್ನ ಔದಾಸಿನ್ಯಕ್ಕೆ ತಾನು ಇಷ್ಟು ದಿನ ಅನುಭವಿಸಿದ್ದು, ಅದರಿಂದಾಗಿ ಹುಟ್ಟಿರಬಹುದಾದ ಸುಸ್ತು ಇದೇ ಕಾರಣಗಳಿಗಾಗಿರಬಹುದೆ ? ಅಥವಾ ಅಪ್ಪ-ಅಮ್ಮರ ಜಾತಿಗಿಂತ (ಇವೂ ಈಗ ತನ್ನನ್ನು ಬಾಧಿಸುತ್ತಿಲ್ಲ ಎನ್ನುವದು ನಿರ್ವಿವಾದ) ತನ್ನನ್ನು ಕಾಡುತ್ತಿದ್ದ ಭಯದ ಜಾಗ ಫಕ್ಕನೆ ಈ ಮುದುಕಿಯ ಮಾತಿನಿಂದ ಪ್ರಕಟವಾದೀತೆಂದು ದಿಗಿಲುಗೊಂಡಿರುವೆನೆ ? ಇವಳಿಗೆ ಗೊತ್ತಿರಬಹುದೇ_ತನ್ನ ಅಂಗಿಗೆ ಬೆಂಕಿ ಬಿದ್ದ ಪ್ರಕರಣ ? ತಂಗಿ ಕಳೆದುಹೋದ ಪ್ರಸಂಗ ? ತನಗೆ ಒಬ್ಬ ಅಣ್ಣನಿದ್ದ ಎಂದು ಕೇಳಿದ್ದೆ_ಮುಂದೇನಾದ ? ಇವಳನ್ನು ಕೆಣಕಿದರೆ ಫಕ್ಕನೆ ಹೇಳಿಬಿಟ್ಟಾಳೆ ?….

ಬಾಯಿಂದ ಹೊರಟ ಮಾತು ಮಾತ್ರ ಮನಸ್ಸಿನಲ್ಲಿ ಹೊಳಹು ಹಾಕಿದ್ದಕ್ಕೆ ತೀರ ವ್ಯತಿರಿಕ್ತವಾಗಿತ್ತು ; ಅದನ್ನು ಆಡುವಾಗ ಆಡುತ್ತಿದ್ದವನು ತನ್ನ ಅರಿವಿಗೆ ಈವರೆಗೂ ಬಂದಿರದ ಇನ್ನೊಬ್ಬನೇ ನಾಗಪ್ಪ ಎಂಬಂತಹ ಧಾಟಿ ಮೂಡಿತ್ತು : “ನೋಡು ಶ್ರೀನಿವಾಸ, ನನಗೂ ಕೂಡ ನಿನ್ನ ಹಾಗೇ_ನೀನೇ ಕೆಲಹೊತ್ತಿನ ಮೊದಲು ಅಂದಹಾಗೇ_ಜಾತಿ-ಪಾತಿಯಲ್ಲಿ ನಂಬಿಕೆ ಇಲ್ಲ. ಆದರೂ ಅಪ್ಪನ ದೃಷ್ಟಿಯಿಂದ ನೋಡಿದಾಗ ; ಅವನು ಬದುಕಿದ್ದ ಕಾಲದ ದೃಷ್ಟಿಯಿಂದ, ಹನೇಹಳ್ಳಿಯಂಥ ಸಣ್ಣ ಹಳ್ಳಿಯ ಸಮಾಜದ ದೃಷ್ಟಿಯಿಂದ ವಿಚಾರಮಾಡಿದಾಗ ನನಗೆ ಅವನ ಬಗ್ಗೆ ಅಪಾರ ಅಭಿಮಾನವೇ ಅನ್ನಿಸುತ್ತದೆ ನೋಡು : ಬ್ರಾಹ್ಮಣನಾಗಿಯೂ ಆ ಕಾಲದಲ್ಲಿ ಒಬ್ಬ ಕಲಾವಂತ ಹುಡುಗಿಯನ್ನು ಮದುವೆಯಾಗುವದೆಂದರೆ ನಿಜಕ್ಕೂ ದೊಡ್ಡ ಧೈರ್ಯದ ಕೆಲಸ ಎನ್ನಬೇಕು, ಇಲ್ಲವಾದರೆ, ಒಬ್ಬ ಹುಡುಗಿಗೆ ಲಗ್ನವಾಗುವ ಭರವಸೆ ಕೊಟ್ಟು, ಹೊಟ್ಟೆ ತರಿಸಿ ಅವಳ ಭಾವನೋ ಅಕ್ಕನ ಮಿಂಡನೋ ಯಾರೋ…..

ನಾಗಪ್ಪನ ಈ ವಾಕ್ಯ ಪೂರ್ಣಗೊಳ್ಳುವ ಮೊದಲೇ ಶ್ರೀನಿವಾಸ ಭಾರ ಬಂದವನ ಹಾಗೆ ಗಡಗಡ ನಡುಗಹತ್ತಿದ. ಸಿಟ್ಟಿನಿಂದ ಮೋರೆ ಕಪ್ಪುಗಟ್ಟಹತ್ತಿತ್ತು. ಕೊರಳ ಸೆರೆಗಳು ಉಬ್ಬಿಕೊಳ್ಳತೊಡಗಿದ್ದವು. ಬಾಯಿಂದ ಮಾತು ಹೊರಡುವದೇ ಕಠಿಣವಾಗಿ ಮೂಗಿನ ಹೊರಳೆಗಳಿಂದ ಕೆರಳಿದ ಗೂಳಿಯ ಹಾಗೆ ಹೂಂಕಾರದ ಗಾಳಿ ಬಿಡಹತ್ತಿದ : ಸಮಯ ಬಂದರೆ ತನಗೂ ಹೀಗೆ ಶಿಕಾರಿಯಾಡುವ ಹುಕ್ಕಿ ಬರುವದು ಸಾಧ್ಯವಿದೆ ಎಂಬ ಅರಿವಿನಿಂದ ನಾಗಪ್ಪನಿಗೆ ಮೋಜೆನಿಸಿತು. ಶ್ರೀನಿವಾಸನ ಹೂಂಕಾರ ಕೊನೆಗೊಮ್ಮೆ ಮಾತು ಕಂಡಿತು :
*****
ಮುಂದುವರೆಯುವುದು