ಋತುಸಂಸಾರ

-೧-ಮೂರು ತಿಂಗಳುಬೇಸರವ ನೀಗಿಕೊಳ್ಳಲು ಬಂದು ತಂಗಿದಳುಮಗಳ ಮನೆಯೊಳು ಮುದುಕಿ ಮೋಜುಗಾರ್‍ತಿ.ಮೊದಲೆರಡು ದಿನ ಕ್ಷೇಮಸಮಾಚಾರದ ಸುದ್ದಿ,ಬೇಡವೆಂದರು ಕೂಡ ಕೆಲಸಕ್ಕೆ ಹಾತೊರೆವ ಕೈಹಾಗೆಯೇ ನಾಲ್ಕು ದಿನ ಸೈ ;ಸುರುವಾಯ್ತು ರಗಳೆಅಷ್ಟಿಷ್ಟು ಮಾತಿಗೇ ವಟವಟಾ ಪಿಟಿಪಿಟೀ … …ಲಟಿಕೆ […]

ಚಿಂತನ

೧ ತೆರಳಿದರು ಅತಿಧಿಗಳು ಮರಳಿದರು ಮನೆಗೆ ನನ್ನ ಮನೆ (ಗುಬ್ಬಿ ಹೆರವರ ಮನೆಗೆ ತನ್ನ ಮನೆ ಎಂದಂತೆ) ಬರಿದಾಯ್ತು ಕೊನೆಗೆ! ಎದೆಯೊಲವನರಳಿಸುತ ಕೆರಳಿಸುತ ಬಂದು ಒಂದು ದಿನ ನಿಂದು, ಏನೆಲ್ಲವನು ಒಮ್ಮೆ ಹೊಳಹಿನಲಿತಂದು ಎದೆಯ […]

ಸೊಳ್ಳೆ

೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […]

ವಿರಹಿ-ಸಂಜೆ

ಉರಿದುರಿದು ಹಗಲುಆರಿ ಹೋಗಿಹ ಕೆಂಡವಾಯ್ತು ಮುಗಿಲು!ನೇಸರನಿಗೂ ಬೇಸರಾಗುವದು ಸಹಜನಿಜ- ,ರಜೆಯೆ ಸಿಗದಿರಲು ಅವನಿಗೆಲ್ಲಿಯದು ಮಜ?ಅಂತೆಯೇಅವನೆಂದಿನಂತೆಯೇಕರಿಯ ಮೋಡದ ಬರಿಯ ಕಂಬಳಿಯ ಮುಖಕೆಳೆದುಹೊತ್ತೂಂಟ್ಲೆ ಮಲಗಿದನು ಗಪ್ಪುಗಡದು ! ಮಗುವು ಕಿಟಕಿ ಹಚ್ಚಿ ಕೀಸರಿಟ್ಟಂತೆಮಳೆಯು ಜಿಟಿ ಜಿಟಿ ಹತ್ತಿ […]

ಮಧ್ಯಾಹ್ನದ ಮಜಲು

ಬಾನ ಬೀದಿಗೆ ಜೋಲಿ ಹೊಡೆದು ಉರುಳಿವೆ ಮೋಡಪಡುವಣದ ಪಡಖಾನೆಯಿಂದ ತೂರಿ;ಬೇಕು ಬೇಕಾದತ್ತ ಹೊರಳಿ ಅಸ್ತವ್ಯಸ್ತಸುಸ್ತಾಗಿ ಬಿದ್ದಿಹವು ನೆರಳು ಕಾರಿ! ಹಗಲು ಮೂರ್‍ಛೆಗೆ ಸಂದ ಗಾಳಿ ಇದ್ದೆಡೆಯಿಂದಮೈ ಮುರಿದು ಆಗೀಗ ಆಕಳಿಸಿದೆ-ಆಗ ಬೆಚ್ಚನೆ ಧೂಳಿ ಹುಚ್ಚೆದ್ದು […]

ಮನೆ-ಕಿಟಕಿ

(೧)ಮಗುವನಾಡಿಸುತ ಹೂವಿಗೆ ಹೂವ ಪೋಣಿಸುತಜಾವ ಜಾವಕೆ ಹಾಡಿನೆಳೆಯ ಜಗ್ಗಿದುಂಡುಮಾಲೆಯ ಕನಸ ಕಟ್ಟಿ ಮುಡಿಯುತ್ತಿಹಳುಇರುಳಬಾನಿಗೆ ಚಂದ್ರ ತಾರೆಯಾಗಿ ! ನೀರು ತುಂಬಿದ ಕೆರೆಯ ಹೃದಯಾಂತರಾಳದಲಿಆ ನೀಲಿ ಆ ಮೋಡವೆಲ್ಲ ಮೂಡಿಹೇಳಬಾರದ ಹಿಗ್ಗು-ಬಾಯಿ ಬಿಟ್ಟಿತು ಮೊಗ್ಗುಯಾವುದೋ ಮಾಯೆಯಲಿ […]

ಶ್ರೀ ರಾಮಾಯಣ ದರ್ಶನವನೋದಿ

ಮಲೆನಾಡ ನೀರ್ಝರಿಣಿ ತಡಿಯ ತಳಿರ್ದೊಂಗಲಲಿ ನಲಿವ ಮಂಗಲಪಕ್ಷಿ ನಿಚ್ಚ ಹಸುರಿನ ಒಸಗೆಹಾಡೆ ಈ ನೆಲದ ಮಣ್ಣಿಂದೊಗೆದ ಹಾಲ್ದೆನೆಗೆ, ಸೂರ್ಯಚಂದಿರ ತಾರೆ ನೋಡಿ ಮುಳುಗುವ ನೀಲಿತೇಲಿಸಿತು ನಿನ್ನೆಡೆಗೆ ತನ್ನಮೃತ ಲೀಲೆಯಂ! ಭವ್ಯತೆಯ ಕನಸು ಗರಿಗೆದರಿ ಮರದುದಿಯಿಂದಬಾನಮುಡಿಗೇರಿ […]

ಮಧುರಚೆನ್ನರ ನೆನಪಿಗೆ

ಜಾನಪದ ಜೀವನದ ಸಂಗೀತಕೆದೆಯೋತು ಹೂವು ಹೂವಿನ ಜೇನು ತೊಳೆಯ ಬಿಡಿಸಿ ಹೊಸ ಬೆಳೆಯ ಕಸುವಾಗಿ ಸ್ನೇಹರಸದೊಳು ಮಾಗಿ ಸುಗ್ಗಿ ಮಾಡಿದಿರಂದು ನಾಡನಲಿಸಿ! ಅಂದಿನಿಂದೆನ್ನೆದೆಗೆ ಮೂಡಿಹುದು ಮಳೆಬಿಲ್ಲು ಆಡಿಹವು ನಿಮೂರ ನವಿಲಹೆಜ್ಜೆ! ಕಾಳರಾತ್ರಿಯು ಬೆಳಗು ಬೈಗುಗಳು […]

ಬೇಲಿಯ ಮೇಲಿನ ನೀಲಿಯ ಹೂಗಳು

ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ ಮುಂಜಾವದಲಿ ಬೇಲಿತುಂಬ ನೀಲಿಯ ಹೂವುಜೀವನೋತ್ಸಾಹದಲಿ ಎದೆದುಂಬಿಸುವ ರೂಹು! ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) […]