ಹಿತ್ತಲಿನ ಗಿಡ

ಹಿತ್ತಲಿನ ಹಿಪ್ಪೆ ನೇರಳೆಯ ಗಿಡ ಅದೆಷ್ಟು ಸೌಮ್ಯ? ಸ್ವಂತ ಮಹಿಮೆಯನ್ನರಿಯದ ಮುಗ್ಧ ತಾನು; ತಿಳಿದಿಲ್ಲವದು ತನ್ನ ಎಲೆಯ ಮರೆಯಲ್ಲಿ ಅಡಗಿರುವ ನವಿರು ವಸ್ತ್ರದಸಂಖ್ಯ ಥಾನು ಥಾನು. *****

ಗುಣದ ಗರಿಮೆ

ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****

ಕವಿ ಪತ್ನಿ

ಪದ್ಯ ಗಿದ್ಯ ಎಂದು ಮೈ ಮರೆತು ಸ್ಕೂಟರ್ ಕೊಳ್ಳಲಿಲ್ಲ, ಸ್ವಂತ ಮನೆ ಮಾಡಿಕೊಳ್ಳಲಿಲ್ಲ, ನಿಮ್ಮ ಕಟ್ಟಿಕೊಂಡು ನಾನು ಕೆಟ್ಟೆ ಎಂದೇನೇನೋ ಗೊಣಗುತ್ತಿದ್ದವಳು – ಸರ್ಕಸ್ಸಿನ ಒಂಟೆಯ ಬಳಿ ತಂದೆಗೆ ಕುತೂಹಲದ ಪ್ರಶ್ನೆ ಕೇಳುತ್ತಿದ್ದ ಕುರುಡು […]

ಕವಿ-ಲೋಕ

ಲೋಕವೇ, ನಿನಗಂಟಿಕೊಂಡಿರುವನಕ ನನ್ನ ಚಟುವಟಿಕೆ. ಬೇರ್ಪಟ್ಟೆನೆ? ನಿರರ್ಥಕ: ಕೆಟ್ಟು ಹೋದ ಬಲ್ಬಿನ ಥರ. ನಾನಿರಲಿ ಇರದಿರಲಿ ನಿನಗಾವ ಬಾಧಕ? ನಡೆಯುತ್ತಲೇ ಇರುವೆ ನಿನ್ನಷ್ಟಕ್ಕೆ ಸುಮ್ಮನೆ. ಆದರಿಷ್ಟೆ: ನಾನಿದ್ದರೆ ನಿನ್ನೊಂದಿಗೆ, ಮಂದಿಗೆ ನಿನ್ನ ಚಲನವಲನದ ಸೂಚಕ: […]

ವಾಕ್ ಹೋಗಿ

ವಾಕ್ ಹೋಗಿ ಬದುಕು ಕಲೆಯಂತೆ ಸಮಾನಾಂತರ ಸಾಗಿದ ದೀಪದ ತಂತಿಗಳಲ್ಲೊಂದರಿಂದ ಯಾವುದೋ ಅಪ್ರಖ್ಯಾತ ಪಕ್ಷಿಯ ಅರ್ಧ ಮೀಟರಿನ ಶಬ್ದ ಕಿವಿ ಹೊಕ್ಕು ಕುತೂಹಲಕ್ಕೆ ಕತ್ತೆತ್ತಿ ನೋಡಿದರೆ ಬರೀ ಅನಾಥ ಸಂಜೆ. *****

ಅಮ್ಮ, ಆಚಾರ, ನಾನು

ನನ್ನ ಮದುವೆಗೆ ಮುಂಚೆ ಹತ್ತಾರು ಹೆಣ್ಣುಗಳ ನೋಡಿ ನಮ್ಮಮ್ಮ ಒಬ್ಬೊಬ್ಬರನೂ ತನ್ನ ಒಪ್ಪಿಗೆಯಲ್ಲಿ ಒರೆಯಲ್ಲಿ ಅರೆದು ಅವಳು ಹಾಗೆ ಅವಳು ಹೀಗೆ ಆಕೆಗಿಂತ ವಾಸಿ ಕಾಗೆ ಈಕೆ ಎಲ್ಲ ಸರಿ ಆದರೆ ಉದ್ದ ನಾಲಗೆ […]

ಕವಿತೆ

ಒಮ್ಮೊಮ್ಮೆ ಏನೂ ಹೊಳೆಯುವುದಿಲ್ಲ ಸಂಕಲ್ಪವೊಂದೇ ಮೋಡ; ಶಾಖ ಮರೆ, ಬರೆದರೆ ಬರೀ ಅಕ್ಷರಗಳ ಹೊರೆ; ಕಾಡು ಹೂವೊಂದರ ಮೈಲಿಗಳ ಯಾಂತ್ರಿಕತನ. ಕೂತರೆ ಅಡ್ಡಾಡಿಸಿ, ಅಡ್ಡಾಡಿದರೆ ಒರಗಿಸಿ ಒರಗಿದರೆ ಬರೆಯಿಸುವ ಅದೃಢತೆ; ಹೊರಗಾಗುವುದು ಕವಿತೆ. ಒಮ್ಮೊಮ್ಮೆ […]

ಸ್ವಯಂಸೇವೆಯ ಗಿಳಿಗಳು

– ೧ – ಕಲಾಕ್ಷೇತ್ರದ ಕೌಂಟರು, ಗೇಟಿನಲ್ಲಿ ಪ್ರೇಕ್ಷಕರ ತಕ್ಕ ಸೀಟಿನಲ್ಲಿ ಪ್ರತಿಷ್ಠಾಪಿಸುವ ಲಗುಬಗೆಯಲ್ಲಿ ಬೆಂಗಳೂರನ್ನೇ ಹೊತ್ತ ಸೋಗಿನಿಂದ, ಕಾಲ್ಗೆಟಿಸಿದ ನಗೆಯಿಂದ, ಆತ್ಮೀಯರಾಗುತ್ತಾರೆ – ಸ್ವಯಂಸೇವಕ ಸಂವೇದಕ ಗಿಳಿಗಳು; ಸ್ವದೇಶಿ ನಾಲಗೆಯ ವಿದೇಶಿ ಉಚ್ಚಾರಣೆಯ […]