ಗುಣದ ಗರಿಮೆ

ಹಂಡೆ ಹಾಲಿಗೆ ತೊಟ್ಟು ಹುಳಿ;
ಬಂಡೆಗೆ ಉಳಿ;
ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ,
ಅಂಕುಶದೆದುರು ಜೀತದಾಳು ಸಲಗ.
ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ
ಪರಮಾಣು ಕಣದಲ್ಲಿ;
ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ,
ಆಂತರಿಕ ಗುಣದಲ್ಲಿ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.