ಕವಿ-ಲೋಕ

ಲೋಕವೇ, ನಿನಗಂಟಿಕೊಂಡಿರುವನಕ
ನನ್ನ ಚಟುವಟಿಕೆ. ಬೇರ್ಪಟ್ಟೆನೆ? ನಿರರ್ಥಕ:
ಕೆಟ್ಟು ಹೋದ ಬಲ್ಬಿನ ಥರ.
ನಾನಿರಲಿ ಇರದಿರಲಿ ನಿನಗಾವ ಬಾಧಕ?
ನಡೆಯುತ್ತಲೇ ಇರುವೆ ನಿನ್ನಷ್ಟಕ್ಕೆ ಸುಮ್ಮನೆ.
ಆದರಿಷ್ಟೆ: ನಾನಿದ್ದರೆ ನಿನ್ನೊಂದಿಗೆ,
ಮಂದಿಗೆ ನಿನ್ನ ಚಲನವಲನದ ಸೂಚಕ:
ನೀನು ಗಡಿಯಾರ, ನಾನದರ ಲೋಲಕ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.