………. – ೧೦ Posted on ನವೆಂಬರ್ 17, 2023ಏಪ್ರಿಲ್ 28, 2023 by ಮಮತ ಜಿ ಸಾಗರ ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ ನವಗ್ರಹಗಳು ನೀರು, ಗಾಳಿ, ಅಗ್ನಿ, ಭೂಮಿ, ಆಕಾಶ, ಮಾರುಕಟ್ಟೆಯ ತುಂಬ ಪಂಚಭೂತಗಳ ಸಂಕ್ಷೇಪ ರೂಪ. *****
ಹನಿಗವನ ರಾತ್ರೆ ಜಯಂತ ಕಾಯ್ಕಿಣಿ ಆಗಷ್ಟ್ 18, 2023 0 ನಾ ರಾತ್ರೆ ತಲೆ ತಿರುಗಿ ಬಿದ್ದ ನಕ್ಷತ್ರ ಹೆಕ್ಕುವೆ ತಿಳಿ ಬೆಳಕು ಗುಡಿಸುವೆ ಹಸನು ಹಸನು ಮಾಡುವೆ ಒಳ ಕತ್ತಲೆ *****
ಹನಿಗವನ ಸಾವು ಜಯಂತ ಕಾಯ್ಕಿಣಿ ಫೆಬ್ರವರಿ 17, 2023 0 ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ ಯಾರೋ ಕರೆದಂತೆ ಪಾಠದ ಮಧ್ಯಕ್ಕೇ ಸಟ್ಟನೆ ಎದ್ದು ಹೊರಗೆ ನಡೆದುಬಿಡುತ್ತಾರೆ *****
ಹನಿಗವನ ಒಂದೇ ಆದರೂ… ನಿಸಾರ್ ಅಹಮದ್ ಕೆ ಎಸ್ ಜನವರಿ 23, 2023 0 ಎರಡೂ ಬಲೆಯೇ: ಹೀಗಿದ್ದರೂ ಜೇಡನ ಬಲೆಯಿಂದ ಮೀನು ಹಿಡಿಯಲಾಗದು; ಮೀನಿನ ಬಲೆಯಿಂದ ನೊಣ ದಕ್ಕಲಾರದು. *****