ಕ್ಲಿಪ್ ಜಾಯಿಂಟ್

“ಜೀವನಕ್ಕೊಂದು ಉದ್ದೇಶವಿರಬೇಕು” ಎಂದು ಪೈಪನ್ನು ಎಳೆದು, ಯೋಚಿಸಿ, ಮಾತಿಗೆ ಹುಡುಕಿ, “ನನ್ನ ಜೀವನದಲ್ಲಿ ಅದು ಇಲ್ಲ” ಎನ್ನುವಾಗ ಸ್ಟೂ‌ಅರ್ಟ್‌ನ ನೀಲಿ ಕಣ್ಣುಗಳು ಚಿಂತಾಕ್ರಾಂತವಾಗಿ ತೀವ್ರವಾಗುವುದರಲ್ಲಿ ಸೋಗೆಷ್ಟು? ನಿಜವೆಷ್ಟು? ಇವನೂ ಮೋಸವೆ? ನನ್ನಂತೆ?

ಕೇಶವ ಕೆಳಗೆ ನೋಡಿದ : ವಿದ್ಯುತ್ತಿನಿಂದ ತುಂಬಿ ತಂಪಾಗಿ ಕಾಣಿಸುವ ಟ್ಯೂಬ್ ಸ್ಟೇಶನ್ನಿನ ರೈಲ್ವೆ ಹಳಿಗಳು. ಧುಮುಕಿದರೆ-
“ಧುಮುಕಿದರೆ ಒಂದು ಕ್ಷಣದಲ್ಲಿ ಸಾವು” ಎಂದು ಸ್ಟೂ‌ಅರ್ಟ್ ಗಡ್ಡವನ್ನು ಕೆರೆದು, ಆಕಳಿಸಿ, “exಛಿuse me” ಎಂದ.
ಓದಿದ್ದರ ನೆನಪು : ಎಲ್ಲ ಅನುಭವದ ಪರಾಕಾಷ್ಠಸ್ಥಿತಿ ಸಾವಿನಂತಿರುತ್ತದೆ.
“ಎರಡನೆಯ ಟ್ರೈನ್ ನಮ್ಮದು.”

ಆರಿದ ಪೈಪನ್ನು ಜೇಬಿನಲ್ಲಿಟ್ಟು ಸ್ಟೂ‌ಅರ್ಟ್ ಕಾದು ಕರೆಕರೆಯಾದ ಧ್ವನಿಯಲ್ಲಿ ಶಪಿಸಿದ. ಪಬ್ಲಿಕ್ ಸ್ಕೂಲಿನಿಂದ ಓದಿ ಬಂದ ಥೇಟು ಅರಿಸ್ಟೋಕ್ರಟಿಕ್ ಲಿಬರಲ್ ಇವ ಅಂಚು ಹೊಲೆಯದೆಹೊಲಿಯದ ಉಲ್ಲನ್ ಟೈ, ಮಾಸಿದ ಗ್ರೇ ಪ್ಯಾನಲ್ ಬ್ಯಾಗ್ಸ್, ಹ್ಯಾರಿಸ್ ಟ್ವೀಡ್ ಜಾಕೆಟ್, ಪೈಪ್, ಉದ್ದಗೆ ಬೆಳೆಸಿದ ಎಣ್ಣೆ ಹಚ್ಚದ ಕ್ರಾಪ್, ಗಡ್ಡ, ನೀಳವಾದ ಶರೀರ ಆದರೆ ತನ್ನದು ತೋರವಾದ ಮಂದವಾದ ಸ್ವರೂಪ. ಬೆತ್ತಲೆ ಸ್ನಾನ ಮಾಡುವಾಗ ಯೂನಿವರ್ಸಿಟಿ ಜಿಮ್‌ನಲ್ಲಿ ನೋಡಿದ್ದಾನೆ: ಭಾರತೀಯ ಯುವಕರಿಗೆಲ್ಲ ಸಾಮಾನ್ಯ ಸೊಂಟದ ಸುತ್ತ ಬೊಜ್ಜು.

ಕೇಶವ ಪ್ಯಾಡಿಂಗ್‌ಟನ್ ಸ್ಟೇಶನ್ನಿನ ಪ್ಲಾಟ್‌ಫಾರಂನ ಮೇಲೆ ಅಡ್ಡಾಡಿದ. ಎಲ್ಲಿ? ಪೌಂಡಿನ ಪಕ್ಕದಲ್ಲೆ?- ಆ ಎರಡು ಸಾಲಿನ ಪದ್ಯ- ಮಂಜು ಮುಸುಕಿದ ಕಂದು ಬೆಳಕಿನಲ್ಲಿ ಈ ಮುಖಗಳು ಒಣಗಿದ ಕೊಂಬೆಗೆ ಬೀಸಿದ ಹೂವಿನ ಪಕಳೆಗಳಂತೆ-ಸ್ಟೂ‌ಅರ್ಟನ್ನ ಕೇಳಿದರೆ ಗೇಲಿ ಮಾಡುತ್ತಾನೆ : ಕೇಶವ್, ನೀವು ಭಾರತೀಯರು ಕಾವ್ಯದಲ್ಲಿ ಓದಿದ್ದನ್ನು ಇಲ್ಲಿ ಖುದ್ದು ಕಾಣಲು, ಹೋಲಿಸಿ ನೋಡಲು ಬರುತ್ತೀರಿ ಇಂಗ್ಲೆಂಡಿಗೆ. ನಿಜ. ಯೂನಿವರ್ಸಿಟಿಗೆ ಹೋಗಿಬರುವಾಗಲೆಲ್ಲ ದಿನವಹಿ ನೋಡುತ್ತಿದ್ದ ಹೂವು ಡಫೊಡಿಲ್ಸ್ ಎಂದು ತಿಳಿದ ಮೇಲೆ ಮಾತ್ರ ವರ್ಡ್ಸ್‌ವರ್ಥ್ ಎಂದು ಮನಸ್ಸಿನಲ್ಲಿ ಬೆಲ್ಲು ಹೊಡೆಯಿತು. ಕೈಕಟ್ಟಿ ನಡೆಯುತ್ತ ಪ್ಲಾಟ್‌ಫಾರಂ ಸುತ್ತ ಕುತೂಹಲದಿಂದ ನೋಡಿದ : ಬೆಂಚು; ಅಡ್ವರ್ಟೈಜ್‌ಮೆಂಟ್ ಪೋರ್ಟರು; ಸಿಗರೇಟಿನ , ಚಾಕಲೇಟಿನ, ಹಾಲು, ಹಣ್ಣಿನ ರಸದ, ಬಿಸಿ ಬಿಸಿ ಕಾಫಿಯ, ಸ್ಲಾಟ್‌ಮೆಶಿನ್; ಬೆಂಚು ಕಾರ್ಪೆಟ್‌ಗಳನ್ನು ಅಡ್ವಟೈಜ್ ಮಾಡುವ ಅರೆಬೆತ್ತಲೆ ಹೆಣ್ಣಿನ ದೇಹದ ಮೇಲೆ ಪೆನ್ಸಿಲ್‌ಗೆರೆಗಳ ವ್ಯಭಿಚಾರ. ಟಟಿಣeಡಿesಣiಟಿg. ಇಂಡಿಯಾದ ಕಾಲೇಜಿನ ಕಕ್ಕಸ್ಸಿನ ಗೋಡೆಗಳು. ಭಾರತೀಯ ಕಾಲೇಜು ವಿದ್ಯಾರ್ಥಿಗಳಷ್ಟು ಅತೃಪ್ತ ತಪ್ತ ಕಾಮಿಗಳು ಜಗತ್ತಿನಲ್ಲಿ ಎಲ್ಲೂ ಇಲ್ಲ. ನನ್ನ ಹಾಗೆ. ಕಾಜೇಜಲ್ಲಿ ಯಾರಾದರೊಬ್ಬ ಹುಡುಗ ಒಂದು ಹುಡುಗಿಯ ಜೊತೆ ಮರದ ಕೆಳಗೆ ಎದುರುಬದುರಾಗಿ ನಿಲ್ಲುವಷ್ಟು ಧೈರ್ಯ ತೋರಿಸಿದನೆಂದರೆ ಸಾಕು : ಅಪ್ರಬದ್ಧಅಪ್ರಬುದ್ಧ ಹುಡುಗರಿದ್ದಿರಲಿ ಎಷ್ಟೊಂದು ಪ್ರಬುದ್ಧ ಲೆಕ್ಚರರುಗಳ ಕಣ್ಣು ಅವನ ಮೇಲೆ. ನನ್ನ ತಮ್ಮ ಪಕ್ಕದ ಮನೆಯ ಹುಡುಗಿಯ ಜೊತೆ ಕಿಟಿಕಿಯ ಮೂಲಕ ಕಣ್ಣಿನ ಸರಸ ನಡೆಸಿದ್ದಾನೆಂದು ತಿಳಿದು ನಾನು ಎಷ್ಟು ರೇಗಿದೆ, ರಂಪ ಮಾಡಿದೆ.
ತೇಗಿದರೆ ಕ್ಷಮಿಸು ಎನ್ನುವ ಈ ಜನ, ಸಾರ್ವಜನಿಕ ಸ್ಥಳಗಳಲ್ಲಿ ಬೆಂಚುಗಳ ಮೇಲೆ- ಆ ಕಡೆಯೇ ನಡೆದ…

ಬೆಂಚೊಂದರ ಮೇಲೆ ಬೀಟಲ್ಸ್ ಕ್ರಾಪಿನ ಒಬ್ಬ ಹುಡುಗ ಕೆಂಪು ಉಡುಪು ತೊಟ್ಟ ಹುಡುಗಿಯೊಬ್ಬಳನ್ನು ಅವಚಿಕೊಂಡು ಅವಳ ಕಿವಿಗಳನ್ನು ಕಡಿಯುತ್ತ ಪಿಸುಗುಟ್ಟುತ್ತಿದ್ದ. ಕೇಶವ ನಿಂತ ಅವಳು ನರಳುತ್ತ ಅವನ ಸೆಟರ್ಸ್ವೆಟರ್ ಒಳಗೆ ಕೈಹಾಕಿ ತಡವಾಡಿದಳುತಡಕಾಡಿದಳು. ಕೇಶವ ಅಲ್ಲಿಂದ ಕಣ್ಣು ಕೀಳಲಾರದೆ ನಿಂತ. ಕನ್ಯಾಮಾಸದಲ್ಲಿ ನಾಯಿಗಳು ಮಾತ್ರ ಹೀಗೆ….ಹುಡುಗಿಯ ಮುಚ್ಚಿದ ಕಣ್ಣುಗಳನ್ನು ಬೆರಳಿನಿಂದ ಅರಳಿಸಿ ನಾಲಗೆಯ ತುದಿಯಿಂದ…..ಕಿಲಕಿಲ ನಕ್ಕು ತಳ್ಳಿದಳು. ಕೇಶವ ಮುಖ ತಿರುಗಿಸಿದ. ಕದ್ದು ನೋಡಿದ. ಕತ್ತರಿಸಿದ ಹಲ್ಲಿಯ ಬಾಲದಂತೊಂದು ವಿಲವಿಲ ಒದ್ದಾಡಿ ನಿಶ್ಚೇಷ್ಟಿತವಾದ ಹಾಗೆ, ಒಳಗಿನಿಂದ ಕಲಸಿದ ಹಾಗೆ.
‘ಖಿhis is ಟಿo ಛಿouಟಿಣಡಿಥಿ ಜಿoಡಿ oಟಜ meಟಿ.’
” ನನಗೀಗ ವಯಸ್ಸು ಮುವ್ವತ್ತೆರಡು ಸ್ಟೂ‌ಅರ್ಟ್. ತಲೆಗೂದಲು ಹಣ್ಣಾಗುತ್ತಿದೆ. ಯೌವ್ವನದಲ್ಲಿ ಬಾಲ್ಯದಲ್ಲಿ ಇದ್ದ ಬೆರಗು ಉತ್ಸಾಹ ಮಾಯವಾಗುತ್ತಿದೆ. ಒಂದು ಹುಡುಗಿಯ ಕೈಯನ್ನು ಕೂಡ ನಾನು ಮುಟ್ಟಿಲ್ಲ- ಇನ್ನೂ. ಅದಕ್ಕೆ ಏನೆನ್ನುತ್ತಿ?”-ಕೇಶವ ಸ್ಟೂ‌ಅರ್ಟ್‌ಗೆ ಪ್ಯಾಕಿನಿಂದ ಸಿಗರೇಟ್ ಹಿಡಿದ.
“ಥ್ಯಾಂಕ್ಸ್. ಬೇಡ. ನಾನು ಪೈಪನ್ನೇ ಸೇದುತ್ತೇನೆ. ನೀನು ಹೇಳೋದು ನನಗೆ ವಿಚಿತ್ರವೆನ್ನಿಸುತ್ತೆ…..” ಎಂದು ಪೈಪನ್ನು ಹಚ್ಚಿ ಕೇಶವನ ಸಿಗರೇಟು ಹತ್ತಿಸಿ, ನಂತರ ತನ್ನ ಪೈಪನ್ನು ಹೊತ್ತಿಸಿ, ಹೊಗೆಯೆಳೆದು,
“ನೀನು ತುಂಬ ಸಿಗರೇಟ್ ಸೇದುತ್ತಿ ಕೇಶವ” ಎಂದ. ಅವರಿಬ್ಬರ ಐದಾರು ತಿಂಗಳಿನ ಸ್ನೇಹದಲ್ಲಿ ಇದು ಸ್ಟೂ‌ಅರ್ಟ್‌ನ ಮೊದಲನೆ ವೈಯಕ್ತಿಕ ಪ್ರತಿಕ್ರಿಯೆಯಾಗಿತ್ತು.
“ನಾಲಗೆ ಯಾವಾಗಲೂ ಏನನ್ನಾದರೂ ರುಚಿಸುತ್ತಲೇ ಇರಬೇಕು-ಸುಮ್ಮನೆ ಅರ್ಧ ಗಂಟೆ ಕಳೆಯಲಾರೆ; ಯಾರ ಸಂಗದಲ್ಲಾದರೂ ಸದಾ ಇರಬೇಕು-ಒಂಟಿಯಾಗಿ ಏನನ್ನೂ ಮಾಡದೆ, ಸೇದಲು ಸಿಗರೇಟಿಲ್ಲದೆ, ಒಂದು ದಿನ ಕಳೆಯಬೇಕಾಗಿ ಬಂದರೆ ಬಹುಶಃ ನಾನು ಅತ್ಮಹತ್ಯೆಆತ್ಮಹತ್ಯೆ ಮಾಡಿಕೊಳ್ಳುತ್ತೇನೆ.” ಕೆಂಪು ಉಡುಪಿನ ಹುಡುಗಿ ಅವಳ ಗೆಳೆಯನ ಮುಖವನ್ನು ಕೈಯಿಂದ ಎತ್ತಿ ಆರಾಧಿಸುವ ಕಣ್ಣುಗಳಿಂದ ನೋಡಿದಳು.

“ಯಾಕೆ”
“ಗೊತ್ತಿಲ್ಲ. ಭಯ-ಒಂದು ರೀತಿಯ ವಿಚಿತ್ರ ದಿಗಿಲು.”
ಧಾವಿಸಿ ಬಂದ ಟ್ರೈನನ್ನು ಹತ್ತಲು ಹೋದ ಕೇಶವನನ್ನು ತಡೆದು “ನಮ್ಮದು ಎರಡನೇ ಟ್ರೈನ್, ಇದಲ್ಲ” ಎಂದ ಸ್ಟೂ‌ಅರ್ಟ್. “ಇದು ನನ್ನ ಮೊದಲಿನ ಟ್ಯೂಬ್ ಪ್ರಯಾಣ” ಎಂದ ಕೇಶವ.
“ಜೀವನದಲ್ಲೊಂದು ಉದ್ದೇಶ ಬೇಕೂಂತ ಅದಕ್ಕೇ ಹೇಳಿದೆ. ಉದ್ದೇಶವಿಲ್ಲದಿದ್ದರೆ…”
“ನನಗೆ ಉದ್ದೇಶದಲ್ಲೂ ನಂಬಿಕೆಯಿಲ್ಲ, ಉದ್ದೇಶಪೂರ್ವಕತೆಯಲ್ಲೂ ನಂಬಿಕೆ ಇಲ್ಲ ಸ್ಟೂ‌ಅರ್ಟ್…”
ಟ್ರೈನಿನ ಬಾಗಿಲುಗಳು ಆಲಿಬಾಬಾನ ಕತೆಯಲ್ಲಿಯಂತೆ ತೆಗೆದುಕೊಂಡವು. ಜನ ಒಳಗೆ ನುಗ್ಗಿದ ಕ್ಷಣ ಮುಚ್ಚಿಕೊಂಡವು. ಸಿಗರೇಟು ಬಿಟ್ಟರೆ ತಿಂಗಳಿಗೆ ಹತ್ತು ಪೌಂಡ್ ದುಡ್ಡನ್ನು ಉಳಿಸಬಹುದು. ಹತ್ತು ಪೌಂಡ್ ದುಡ್ಡನ್ನು ಕಾಳಸಂತೆಯ ಆ ಪಂಜಾಬಿಗೆ ಕೊಟ್ಟರೆ ಇಂಡಿಯಾದಲ್ಲಿರುವ ತಾಯಿಗೆ ಅವನು ಇನ್ನೂರು ರೂಪಾಯಿ ಕೊಡಿಸುತ್ತಾನೆ. ಒಂದು ತಿಂಗಳ ಜೀವನಕ್ಕೆ ಅದು ಅವರಿಗೆ ಸಾಕಾಗುತ್ತೆ. ಬಡತನ, ರಗಳೆ, ತಂಗಿಯರ ಮದುವೆಯ ಚಿಂತೆ ತೀರಲು ಮೊದಲಿನ ಹೆಜ್ಜೆ-ನಾನು ಸಿಗರೇಟ್ ಬಿಡೋದು. ಆದರೆ ಬಿಡಲಾರೆ. ‘ನಾನು ಸತ್ತಿದ್ದೇನೋ ಬದುಕಿದ್ದೇನೋ ಎಂದು ನೀನು ಚಿಂತಿಸುವುದು ಬೇಡ, ಈ ಮನೆಯನ್ನು ನಾನು ತ್ಯಜಿಸಿದ್ದೇನೆ’ ಎಂದು ಮಾಧು ಬರೆದಿದ್ದಾನೆ. ನನ್ನ ಒಟ್ಟು ಜೀವನದ ಮೇಲೆ ಹೀಗೆ ಅವನು ತೀರ್ಪು ಕೊಟ್ಟಿದ್ದಾನೆ. ಆದರೆ ಇವತ್ತು ಆ ರಗಳೆ ಬೇಡ, ಎಲ್ಲವನ್ನೂ ಮರೆಯಲೆಂದು ಸ್ಟೂ‌ಅರ್ಟ್ ಜೊತೆ ಲಂಡನ್ನಿಗೆ ಬಂದಿದ್ದೇನೆ….
“ಕೊನೆಯ ಪಕ್ಷ ಕ್ಯಾನ್ಸರ್ ಬರುತ್ತದೆಂಬ ಭಯದಿಂದಲಾದರೂ ಸಿಗರೇಟ್ ಬಿಟ್ಟರೆ….” ತನ್ನೊಳಗೇ ಚಿಂತಿಸುತ್ತಿರುವಂತೆ ಸ್ಟೂ‌ಅರ್ಟ್ ಮಾತಾಡಿದ.
“ಹಾಗೆ ನಾವು ಏನನ್ನೂ ಬಿಡಲ್ಲ ಸ್ಟೂ‌ಅರ್ಟ್-ನೀನು ನಿನ್ನ ಕೈಯಲ್ಲಿ ಹಿಡಿದುಕೊಂಡಿರೋದು ಒಂದು ಸರ್ಪ ಅಂತ ಗೊತ್ತಾದರೆ ಏನು ಮಾಡ್ತಿ ಹೇಳು? ರಪ್ ಅಂತ ಅದನ್ನ ಅಲ್ಲೆ ಎಸೆದುಬಿಡ್ತಿ ಅಲ್ವ? ಧರ್ಮಸಂಕಟ, ಒಳತೋಟಿ, ಸರಿ ತಪ್ಪುಗಳ ಹೋರಾಟ ಇತ್ಯಾದಿಗಳ ನಂತರ ಒಂದು ತೀರ್ಮಾನಕ್ಕೆ ಬರೋದಿಲ್ಲ ಅಲ್ವ? ಹಾಗೆ ಬರಬೇಕು ಜ್ಞಾನ, ಆತ್ಮಜ್ಞಾನ.”
“ಆತ್ಮಜ್ಞಾನ, ಆತ್ಮವಿಮರ್ಶೆಯ ಶಕ್ತಿ ತಿಳುವಳಿಕೆಯಿಂದ, ಸಂಸ್ಕೃತಿಯಿಂದ ಬರುತ್ತೇಂತ ನಾನು ತಿಳಿದಿದ್ದೇನೆ ಕೇಶವ್…”
“ತಪ್ಪು. ಇಕೊ ನನಗೆ ಆತ್ಮಜ್ಞಾನ, ಆತ್ಮವಿಮರ್ಶೆಯ ಶಕ್ತಿ ಇದೇಂತ ತಿಳಕೊಂಡಿದೀನಿ. ಆದರೆ ಈ ಆತ್ಮಜ್ಞಾನಾನೂ ನಾನು ಮೊದಲೇ ನಿಶ್ಚಿತ ಮಾಡಿಕೊಂಡ ಆತ್ಮದ ಜ್ಞಾನ. ಮನೇಲಿದ್ದಾಗ ಒಂದೊಂದು ಸಾರಿ ಮನಸ್ಸು ಮಾಡ್ತಾ ಇದ್ದೆ: ಹೀಗೆ ನಾನು ಗೋಗರೆಯೋದು, ಅಮ್ಮನ ಮೇಲೆ, ನನ್ನ ತಮ್ಮಂದಿರ ಮೇಲೆ ಸದಾ ರೇಗ್ತ ಪರಚಿಕೊಂಡಿರೋದು, ನನಗೆ ವಿಪರೀತ seಟಜಿ-ಟove ಇರೋದರಿಂದ, ಇದು ತಪ್ಪು-ನನ್ನ ಜೀವನದ ತುಂಬ ವಿಷಾನ ತುಂಬಿಕೊಳ್ತಿದೀನಿ ಅಂತ. ಅಬ್ಬಬ್ಬ ಅಂದರೆ ಒಂದು ವಾರ ಎಲ್ಲ ಸರಿಯಾಗಿ ನಡೀತಾ ಇತ್ತು. ಆದರೆ ಸ್ವಲ್ಪ ಏನಾದರೂ ಹೆಚ್ಚು ಕಡಿಮೆಯಾದರೆ ಸಾಕು ನನ್ನ ಸ್ವಭಾವ ಮತ್ತೆ ಹೆಡೆಯೆತ್ತಿ ಬುಸ್ ಅಂತಾ ಇತ್ತು. ಅದಕ್ಕೇ ಕೈಯಲ್ಲಿರೋದು ಸರ್ಪ ಅಂತ ತಿಳಿದವನ ಉದಾಹರಣೆ ಕೊಟ್ಟೆ. ಆತ್ಮಜ್ಞಾನ ಗಕ್ಕನೆ ಬರಬೇಕು. ಜೀವ ಮಗುಚಿಕೊಂಡು ಹೊಸದಾಗೋದು ಹಾಗೆ. ಇಲ್ಲದಿದ್ದರೆ ನಾವು ಸದಾ ಪೂರ್ವನಿಶ್ಚಿತವಾದದ್ದರ ಸುತ್ತ ಸುತ್ತುತ್ತಿರುತ್ತೇವೆ. ಆತ್ಮಜ್ಞಾನ ಅನ್ನೋ ಭ್ರಮೇಲಿ ತೊಳಲ್ತಿರ್ತೇವೆ. ಅದಕ್ಕೇ ನನಗೆ ಉದ್ದೇಶದಲ್ಲಿ, ಉದ್ದೇಶಪೂರ್ವಕತೇಲಿ ನಂಬಿಕೆಯಿಲ್ಲಾಂತ ಅಂದೆ. ಎಲ್ಲ ಉದ್ದೇಶಾನೂ ಪೂರ್ವನಿಶ್ಚಿತವಾದದ್ದು….ನನ್ನ ಭಾಷಣಾನ್ನ ಕ್ಷಮಿಸು. ಇಂಡಿಯನ್ನರು ನಿರರ್ಗಳ ಮಾತಿನಲ್ಲಿ ಜಾಣರು”-ಥಟ್ಟನೆ ತೀರಾ ವೈಯಕ್ತಿಕವಾದ ತನ್ನ ಅನುಭವದ ಕಡೆ ಚರ್ಚೆಯನ್ನು ಹರಿಸಿದ್ದಕ್ಕೆ ಸಂಕೋಚ ಸ್ವಭಾವದ ಇಂಗ್ಲಿಷ್‌ಮನ್ ಏನೆಂದುಕೊಂಡಿರಬಹುದೆಂದು ಕುತೂಹಲದಿಂದ ಕೇಶವ ಸ್ಟೂ‌ಅರ್ಟ್‌ನನ್ನು ನೋಡಿದ.
“ಖಿhಚಿಟಿಞs ಜಿoಡಿ ಣhe ಚಿಜviಛಿe” ಎಂದು ಸ್ಟೂ‌ಅರ್ಟ್ ಲಿಟರ್ ಬಾಕ್ಸ್ ಹತ್ತಿರ ಹೋಗಿ ತನ್ನ ಪೈಪನ್ನು ಎಸೆದು ಬಂದು-“ನನ್ನ ನಾಟಕೀಯತೆಯನ್ನು ಕ್ಷಮಿಸು” ಎಂದ.
“ಈಗ ನಿನಗೆ ಪೈಪ್ ಬಗ್ಗೆ ಅನ್ನಿಸಿರೋ ಹಾಗೆ ನನಗೆ ಅನ್ನಿಸಿರೋದನ್ನ ನಾನು ಮಾಡೋದಾದ್ರೆ-ಒಂದೋ ಆ ಕೆಂಪು ಡ್ರೆಸ್ ಹಾಕಿ ಕೂತಿದಾಳಲ್ಲ ಅಲ್ಲಿ ಆ ಹುಡುಗೀನ ಅವಚಿಕೊಂಡು ಮುತ್ತು ಕೊಡಬೇಕು; ಅಥವಾ ಈ ನಗ್ನ ಹಳಿಗಳ ಮೇಲೆ ಧುಮುಕಬೇಕು”
ಎಂದು ಕೇಶವ ನಕ್ಕ. ಇನ್ನೊಂದು ಸಿಗರೇಟನ್ನು ಹಚ್ಚಿ, ಬಹಳ ದಿನದಿಂದ ತಾನು ಯೋಚಿಸಿದ್ದಕ್ಕೆ ಮಾತು ಹುಡುಕುತ್ತ,
“ನನಗೊಬ್ಬ ಚಿಕ್ಕಪ್ಪನಿದ್ದ. ಒಂದು ದಿನ ಅವ ಮನೆ ಮಠ ಎಲ್ಲ ಬಿಟ್ಟು ಬದರಿಕಾಶ್ರಮಕ್ಕೆ ತಪಸ್ಸಿಗೆ ಹೋದ…. ನಿನ್ನ ರೀತಿ ಬೇರೆ; ನೀನು ಇಂಗ್ಲೆಂಡಿನ ಸಭ್ಯ ನಾಗರಿಕತೆಯ ಅತ್ಯುತ್ತಮ ಫಲ-ನನ್ನ ಚಿಕ್ಕಪ್ಪ ಭಾರತೀಯ ನಾಗರಿಕತೆಯ ಅತ್ಯುತ್ತಮ ಫಲವಿದ್ದ ಹಾಗೆ, ಒಬ್ಬ ಸಂತ, ಇನ್ನೊಬ್ಬ ಸಭ್ಯ, ಸಭ್ಯ ತನ್ನ ಜೀವನದ ಓರೆ-ಕೋರೆಗಳನ್ನು ತಿದ್ದಿಕೊಂಡು ಬಾಳನ್ನು ಒಂದು ಹದ್ದಿನಲ್ಲಿ, ಕೌಶಲ್ಯದಲ್ಲಿ ನಡೆಸಿಕೊಂಡು ಹೋಗ್ತಾನೆ….ನಾನು ಹೇಳ್ತಿರೋದು ನನಗೇ ಇನ್ನೂ ತಿಳಿಯಾಗಿಲ್ಲ….ಆದರೂ ಇಷ್ಟು ಅನ್ನಿಸುತ್ತೆ: ನೀನು ಸಭ್ಯ, ಅವನು ಸಂತ, ನಾನು…..”
“ನೀನು?” ಎಂದು ಸ್ಟೂ‌ಅರ್ಟ್ ನಗುತ್ತ “ಔh! I miss mಥಿ ಠಿiಠಿe” ಎಂದ.
“ನಾನು ಜೀವನದಲ್ಲಿ ಯಾವ ಕೌಶಲವೂ ಇರದ, ಸಂಪೂರ್ಣ ಸ್ವಭಾವಗತನಾದ. ಸಭ್ಯನೂ ಆಗಿರಲಾರದ, ಸಂತನೂ ಆಗಿರಲಾರದ, ತಪ್ತ” ಎಂದು ಕೇಶವ ಸಿಗರೇಟನ್ನೆಳೆದು ಹೊಗೆ ಬಿಡುತ್ತ,
“ಒಂದು ಸಿಗರೇಟ್ ತಗೋ”
ಎಂದು ಸ್ಟೂ‌ಅರ್ಟ್‌ಗೆ ಕೊಟ್ಟು, ಕಡ್ಡಿ ಗೀರಿ, ಹತ್ತಿಸಿದ. ಸ್ಟೂ‌ಅರ್ಟ್ ಮೌನವಾಗಿರಲು ಬಯಸುತ್ತಿರಬಹುದೆಂದು ಅವನ ಮುಖದ ಭಾವನೆಯಿಂದ ಅರಿತು ಕೇಶವ ಧುಮುಕಿ ಬರುತ್ತಿದ್ದ ಮಾತುಗಳನ್ನೆಲ್ಲ ನುಂಗಿಕೊಂಡ.
*
*
*
ಅಮ್ಮ ಹೇಳಿದ ಹಾಗೆ ಕೇಳಿ, ಸ್ವಂತ ಅಕ್ಕನ ಮಗಳು ಭಾಗೀರತಿಯನ್ನು ಮದುವೆಯಾಗಿ, ನಾಲ್ಕು ತಂಗಿಯರಿಗೂ ವರ ಹುಡುಕಿ ಮದುವೆ ಮಾಡಿಸಿ, ಆದ ಸಾಲವನ್ನು ಟ್ಯೂಶನ್ನಿನಿಂದ, ಪರೀಕ್ಷೆಯ ಹಣದಿಂದ ತೀರಿಸಿ, ಪ್ರಜಾಯೈ ಗೃಹಮೇಧಿನಾಂ ಎಂದು ಭಾಗೀರತಿಯಿಂದ ಸುಪುತ್ರರನ್ನು ಪಡೆದು- ಥತ್ ಅದು ಜೀವನ ಅಲ್ಲ- ಅಲ್ಲ. ಜೊತೆಗೆ ಅಮ್ಮನ ಮೇಲೆ ರೇಗ್ತ, ತಮ್ಮಂದಿರ ಜೊತೆ ಕಾದಾಡ್ತಾ, ಬೆಳೆದು ನಿಂತ ತಂಗಿಯರು ಬೀದಿ ಕಣ್ಣಿಗೆ ತುತ್ತಾಗ್ತ ಮನೆ ಹಾಳಾಗೋದು- ಅದೂ ಅಲ್ಲ. ಈಗ ಮಾಧು ಹೆಸರಿಸಿದಂತೆಹೆದರಿಸಿದಂತೆ ಆತ್ಮಹತ್ಯೆ ಮಾಡಿಕೊಂಡು, ಅಮ್ಮ ಆ ದುಃಖದಲ್ಲೆ ಸತ್ತು, ನಾನು ಊರಿಗೆ ಮರಳಿದಾಗ ತಂಗಿಯರು ಪೋಲಿ ಪೋಕರಿಗಳ ಸ್ವತ್ತಾಗಿ- ಅಂಗಳ ಸಾರಿಸದೆ, ಹೊಸಲಿಗೆ ರಂಗವಲ್ಲಿ ಇಲ್ಲದೆ, ದೇವರ ಕೋಣೆಯಲ್ಲಿ ದೀಪವಿಲ್ಲದೆ ಸೂತಕದ ಮನೆಯಂತೆ ಬಿಕೊ ಎಂದರೆ….
“ಏನು ಯೋಚಿಸ್ತಿದ್ದೀ ಕೇಶವ್, ಅಷ್ಟೊಂದು ಗಾಢವಾಗಿ? ಇಗೋ ನಮ್ಮ ಟ್ರೈನ್” ಎಂದ ಸ್ಟೂ‌ಅರ್ಟ್. ಬಾಗಿಲುಗಳು ತೆರೆದುಕೊಂಡವು. ಅವರು ನಿಂತಲ್ಲಿನ ಗಾಡಿಯ ಗಾಜಿನ ಕಿಟಕಿಯ ಮೇಲೆ ಕೆಂಪಕ್ಷರದಲ್ಲಿ ‘ಟಿo smoಞiಟಿg’ ಎನ್ನುವ ಬೋರ್ಡ್ ಇದ್ದುದರಿಂದ ಓಡಿ ಇನ್ನೊಂದು ಡಬ್ಬಿಯ ಎದುರು ನಿಂತು ಜನರೆಲ್ಲರೂ ಇಳಿದ ಮೇಲೆ ಹತ್ತಿಕೊಂಡರು. ಬಾಗಿಲು ಮುಚ್ಚಿಕೊಂಡಿತು. ಎರಡು ಕ್ಷಣದಲ್ಲಿ ಕತ್ತಲೆಯ ಬಿಲ ಹೊಕ್ಕರು. ನ್ಯೂಸ್ ಪೇಪರಿಗೆ ಕಣ್ಣು ಹತ್ತಿಸಿ ಕೂತಿದ್ದ. ಆಯಾಸದಿಂದ ಕಣ್ಣು ಮುಚ್ಚಿದ್ದ, ತಮ್ಮ ಉದ್ಯೋಗದಿಂದ ಮರಳುತ್ತಿದ್ದ ಮುಖಗಳನ್ನು ಕೇಶವ ನೋಡಿದ- ಇವರು ಎಲಿಯಟ್ಟನ ಕಾವ್ಯದ ವಸ್ತುಗಳು. ಗಾಡಿಯ ಒಳಗಿದ್ದ ಅಡ್ವರ್ಟೈಜ್‌ಮೆಂಟುಗಳನ್ನೆಲ್ಲಾ ಒಂದು ಕಡೆಯಿಂದ ಓದುತ್ತ ಬಂದ ಈ ಹಣ್ಣಿನ ರಸ ಕುಡಿದು ತೆಳ್ಳಗಾಗು, ವಾಲ್ಸ್ ಸಾಸೇಜುಗಳನ್ನೇ ತಿನ್ನು, ಒಲಿಸಿಕೊಳ್ಳುವ ಗಂಡಸರೆಲ್ಲ ಬರ್ಟನ್‌ನಲ್ಲಿ ತಯಾರಾದ ಸೂಟುಗಳನ್ನು ಹಾಕಿಕೊಳ್ಳುತ್ತಾರೆ….
“ರಷ್ಯಾದಲ್ಲಿ ಈ ರೀತಿಯ ಅಡ್ವರ್ಟೈಸ್‌ಮೆಂಟಿನ ಬದಲು ಕಮ್ಯೂನಿಸಂ ಪ್ರಚಾರದ ಬೋರ್ಡ್‌ಗಳಿರಬಹುದು ಅಲ್ಲವೇ ಸ್ಟೂ‌ಅರ್ಟ್? ಪಾರ್ಟಿ ಸೇರು, ಯುವಕರ ಮುಂದಾಳು ಆಗು, ಚಂದ್ರಲೋಕಕ್ಕೆ ಬಾ….”
“ಉದ್ದೇಶ ಮನುಷ್ಯನಿಗೆ ಮುಖ್ಯಾಂತ ಅದಕ್ಕೇ ಹೇಳಿದೆ ಕೇಶವ್. ಆದರೆ ನಾನು ಹೇಳಿದ್ದನ್ನ ನೀನು ಒಪ್ಪಲ್ಲ. ಕಮ್ಯೂನಿಸಂ ಒಂದು ಉದ್ದೇಶ. ಕ್ಯಾಥಲಿಕ್ ಧರ್ಮ ಇನ್ನೊಂದು ಉದ್ದೇಶ. ನಾನು ಈ ಎರಡನ್ನೂ ಒಪ್ಪಲ್ಲ. ಆದರೆ ಗುರಿಯಿಲ್ಲದೇ ಇರೋಕ್ಕಿಂತ ಈ ಸಾಸೇಜು ತಿಂದು, ಹಣ್ಣಿನ ರಸ ಕುಡಿದು, ಈ ಬರ್ಟನ್ ಸೂಟ್ ಧರಿಸಿ, ಅದಕ್ಕಾಗಿ ದುಡೀತ, ಹೀಗೆ ಪಾತಾಳದಿಂದ ಮೇಲಕ್ಕೆ, ಮೇಲಿನಿಂದ ಪಾತಾಳಕ್ಕೆ ಸಂಚರಿಸ್ತ ಇರೋದಕ್ಕಿಂತ ಯಾವುದಾದರೂ ಒಂದು ಉದ್ದೇಶ ಇರೋದು ಮುಖ್ಯ.”
ಇಲ್ಲಿ ಕೂತಿರೋ ಈ ಜನ ಅಸುಖಿಗಳೂಂತ ನಿಂಗೆ ಹೇಗೆ ಗೊತ್ತು ಹೇಳು? ನೀನು ನಿನ್ನ ದೃಷ್ಟಿಯಿಂದ ಅವರ ಜೀವನ ಸಫಲವೊ ವಿಫಲವೊ ಅಂತ ಹೇಳಬಹುದೇ ಹೊರತು ಅವರಿಗೆ ಅವರ ಜೀವನದಿಂದ ಸುಖ ಸಿಕ್ತೆ ಸಿಗಲಿಲ್ಲವೆ ಅಂತ ಹೇಳೋಕೆ ಆಗಲ್ಲ ಅಲ್ವೆ? ಸುಖ ಅಸುಖ ಅನ್ನೋದು ಈ ಘಳಿಗೇಲಿ ಅನ್ನಿಸೋದು; ಸಫಲ ವಿಫಲ ಅನ್ನೋದು ಭೂತಭವಿಷ್ಯದಿಂದ ಅಳೆದು ನೋಡೋದು. ಭೂತ ಭವಿಷ್ಯಾನ್ನ ಚಿಂತೆ ಮಾಡದವನಿಗೆ ಸುಖ ಅಸುಖ ಮಾತ್ರ ಇದೆ, ಫಲದ ಪ್ರಶ್ನೆ ಇಲ್ಲ. ಇಲ್ಲಿ ಇಷ್ಟು mess ಮಾಡ್ತಿರೋದು ನನ್ನ ನಿನ್ನಂಥವರು.”
“ನೆನಪು, ಕಲ್ಪನೆ ಎನ್ನೋ ಎರಡು ಪ್ರವೃತ್ತಿ ಮನಸ್ಸಿಗೆ ಇರೋವರೆಗೆ, ಕಲ್ಪನೆ ನೆನಪಿನ ಇನ್ನೊಂದು ಬೆಳವಣಿಗೆ ಆಗಿರೋವರೆಗೆ, ಮನುಷ್ಯನಿಗೆ ಭೂತ ಭವಿಷ್ಯದಿಂದ ಬಿಡುಗಡೆಯೇ ಇಲ್ಲ ಕೇಶವ್. ರಕ್ತದ ಬಿಸಿ ಕಡಿಮೆಯಾದಂತೆ ಭೂತ ಭವಿಷ್ಯದಿಂದ ಬಿಡುಗಡೆಯೇ ಇಲ್ಲ ಕೇಶವ್. ರಕ್ತದ ಬಿಸಿ ಕಡಿಮೆಯಾದಂತೆ ಭೂತ ಭವಿಷ್ಯ ಕಾಡಿಯೇ ತೀರತ್ತೆ. ಒಂದು ಸಿಗರೇಟ್ ಕೊಡ್ತೀಯ? ಇಳಿದ ಮೇಲೆ ಕೊಡುತ್ತೇನೆ.”
“ಔh! ಜoಟಿ’ಣ boಣheಡಿ” ಎಂದು ಕೇಶವ ಅವನಿಗೆ ಸಿಗರೇಟನ್ನಿತ್ತು, “ಉದ್ದೇಶಾನ್ನೊದು ಒಲ್ದ್ ಅಗೆ ಗಾಗಿ ಮಾಡುವ ಒಂದು ರೀತಿಯ sಚಿviಟಿgs ಇದ್ದ ಹಾಗೆ ಅನ್ನು. ನನ್ನ ಮಟ್ಟಿಗೆ ಹೇಳೋದಾದ್ರೆ ನನಗೆ ಅನ್ನಿಸೋದೂ ನಿನಗೆ ಅನ್ನಿಸೋ ಹಾಗೇನೆ. ಆದರೆ ನನಗೆ ಅನ್ನಿಸೋದು ಸರೀಂತ ಅನ್ನೊ ನಂಬಿಕೆ ನನಗಿಲ್ಲ.”
ಟ್ರೈನ್ ನಿಂತಿತು. “ನಾವು ಇಲ್ಲಿ ಇಳಿಯೋದಲ್ಲ” ಎಂದು ಸ್ಟೂ‌ಅರ್ಟ್ ಕೇಶವನನ್ನು ತಡೆದ. ಅವರ ಗಾಡಿಗೆ ಜನ ತುಂಬಿದ್ದರಿಂದ ಸೀಟುಗಳೆಲ್ಲ ತುಂಬಿ ಕೆಲವರು ನಿಲ್ಲಬೇಕಾಗಿ ಬಂತು. ಕೇಶವ ಸ್ಟೂ‌ಅರ್ಟ್ ಎದ್ದು ಇಬ್ಬರು ಮುದುಕಿಯರಿಗೆ ತಮ್ಮ ಸೀಟ್ ಬಿಟ್ಟರು. ಎದುರಿಗೆ ನಿಂತ ಹುಡುಗಿಯ ಕೋಳಿ-ಜುಟ್ಟಿನಂತಹ ಕೂದಲಿನ ವೈಖರಿಯನ್ನ ಗಮನಿಸುತ್ತ ಕೇಶವ ನಿಂತ.
ಈ ಹುಡುಗಿಯರು ಸರಿ : ನನ್ನ ತಂಗಿಯರ ಹಾಗಲ್ಲ, ಒಂಟಿಯಾಗಿ ಓಡಾಡ್ತಾರೆ, ಕೆಲಸ ಮಾಡ್ತಾರೆ, ತಮ್ಮ ಹುಡುಗನನ್ನು ತಾವೇ ಆರಿಸಿಕೊಂಡು ಮದುವೆಯಾಗ್ತಾರೆ. ನಮ್ಮ ಹುಡುಗಿಯರೋ?-ಅವರ ನಾಚಿಕೆಯೇನು, ಅವರ ಸೇಳೆಯೇನು, ಮೊಲೆಯಮೇಲೆ ಸೀರೆಯ ಸೆರಗನ್ನು ಎಳೆದುಕೊಳ್ಳುತ್ತ ಅವರ ಬಿಂಕ ಬಡಿವಾರ ವಯ್ಯಾರಗಳೇನು. ಈ ಹುಡುಗಿಯರು ಮೊಲೆಗಳನ್ನು ಧ್ವಜದಂತೆತ್ತಿ ತಮ್ಮ ಮೋಹಕತೆಯನ್ನು ಸಾರುತ್ತಾ ನಡೆಯುತ್ತಾರೆ. ನೇರ, ನಿರ್ಭಯ. ನಮ್ಮ ದೇಶದಲ್ಲಿ ಮಧ್ಯಮ ಶ್ರೀಮಂತ ವರ್ಗದ ಹುಡುಗಿಯರಿಗೆ ಅವರ ಅಂಗಾಂಗಗಳು ಹುದುಗಿಸಿಟ್ಟ ಬ್ರಹ್ಮಾಸ್ತ್ರ. ನನ್ನ ತಂಗಿಯರು ಯಾಕೆ ಮನೆಯವರನ್ನು ಹೀಗೆ ಪೀಡಿಸಬೇಕು, ತಮ್ಮ ಗಂಡನ್ನು ತಾವೇ ಹುಡುಕಿ ಯಾಕೆ ಮದುವೆಯಾಗಬಾರದು ಎನ್ನಿಸಿದ್ದುಂಟು. ಆದರೆ ಅದು ಬರಿ ಅನ್ನಿಸಿಕೆಯಷ್ಟೆ: ಹಾಗೇನಾದರೂ ಅವರು ನಡೆದರೆ ಮೊದಲು ರೇಗುವವನು ತಾನು. ಪ್ರತಿ ಭಾರತೀಯ ಯುವಕನೂ ಮನೆಯಲ್ಲಿ ಸನಾತನಿ, ಮನೆಯ ಹೊರಗೆ ಕ್ರಾಂತಿಜೀವಿ. ಈಗ ಸ್ಟೂ‌ಅರ್ಟ್‌ನ ಜೊತೆ ಆಡುತ್ತಿರುವ ಮಾತುಗಳು: ಒಂದು ರೌರವ ನರಕದ ಮೇಲೆ ಕಟ್ಟುವ ತತ್ವಗಳ ಮನೆ. ಭಾಗೀರಥಿಯನ್ನು ಮದುವೆಯಾಗಿ ನಿಷ್ಕಾಮದಲ್ಲಿ ಮಕ್ಕಳನ್ನು ಹುಟ್ಟಿಸಲೆ? ಅಮ್ಮ ತನ್ನ ಮೊಮ್ಮಗಳನ್ನು ತಾರೀಪು ಮಾಡುತ್ತಾಳೆ: ‘ಅವಳಿಗೆ ಏನಾಗಿದೆಯೋ, ಕಣ್ಣು ಮೂಗು ನೇರವಾಗಿದೆ, ಕೆಂಪಗಿದ್ದಾಳೆ, S.S.ಐ.ಅ ಓದಿದಾಳೆ, ಬೇಕಾದರೆ ಮುಂದಕ್ಕೆ ಓದಿಸಂತೆ. ನಾನೇನು ಬೇಡಾಂತ ಅನ್ನಲ್ಲ. ಮನೆಗೆಲಸ ವೈನಾಗಿ ನೋಡಿಕೊಂಡು ಹೋಗ್ತಾಳೆ. ನನಗೂ ವಯಸ್ಸಾಗ್ತ ಬಂತಪ್ಪ, ಹಿರಿಯಣ್ಣನ ಚಾಳಿ ಮನೆಮಂದಿಗೆಲ್ಲಾಂತ, ನೀನೇ ದಾರಿ ಹಾಕಿ ಕೊಡದಿದ್ದರೆ ಹೇಗೋ?” ಭಾಗೀರಥಿ ಮನೆಗೆ ಬಂದರೆ- ಆರು ಜನ ತಮ್ಮ ತಂಗಿಯರ ಕೂಡ- ನನಗೆ ಸಿಡಿಸಿಡಿ. ಇದಕ್ಕಿಂತ ದೊಡ್ಡ ಪ್ರಶ್ನೆ ನನಗೆ ಸದ್ಯಕ್ಕೆ ನನ್ನ ತಮ್ಮ ಮಾಧುವಿನದ್ದು: ಅವನ ಜೊತೆ ನಾನು ಸರಿಯಾಗಿ ನಡಕೊಂಡೆನೆ? ಅವನಂತೂ ..ಐ.ಅ ಗೆ ವಿದ್ಯೆ ಮುಗಿಸಿ ಹಾಳಾದ. ಕಿರಿಯವ ಸುಧೀಂದ್ರನಾದರೂ ಮುಂದೆ ಬಂದಾನೆಂದರೆ, ಅವನು ಬಿ.ಎಸ್‌ಸಿ.ಯಲ್ಲಿ ಗಸನಿಮಹಮ್ಮದ್ ದಂಡಯಾತ್ರೆ ನಡೆಸಿದ್ದಾನೆ. ಸಾಯಂಕಾಲ ಇಸ್ತ್ರಿ ಮಾಡಿದ ಪ್ಯಾಂಟ್ ಹಾಕಿ, ಕೆಂಪು ಟೈಕಟ್ಟಿ ವಾಕಿಂಗ್; ಹೋಟೆಲಲ್ಲಿ ಬೈಟು ಮಸಾಲೆ, ಬೈಟು ಕಾಫಿ; ಇಸ್ಪೀಟಿನಲ್ಲಿ ಕಾಸಾದರೆ ಸಿನಿಮಾ; ರಾತ್ರೆ ಹತ್ತು ಗಂಟೆಗೆ ಹಿಂದಕ್ಕೆ ಮನೆಗೆ- ಅಮ್ಮ ಸಾರಿಸದೆ, ಮುಸುರೆ ತೊಳೆಯದೆ ಕಾದಿರಬೇಕು… “ಕೆಲಸಕ್ಕೆ ಬಾರದ ಈ ಠೊಣೆಯರಿಗೆ ನೀನು ಯಾಕೆ ಕಾದಿದ್ದು ಬಡಿಸಬೇಕು ಅಮ್ಮ? ನೀನಷ್ಟು ಹೇಳಬಾರ್ದಾ ಅವರಿಗೆ? ಸಾಯಂಕಾಲ ಆಯ್ತೂ ಅಂದ್ರೆ ತಿಂಗ್ಳಿಗೊಂದು ಐವತ್ತು ರೂಪಾಯಿ ಹೆಚ್ಚಿಗೆ ದುಡಿಯೋದಕ್ಕೇಂತ ನಾಲ್ಕು ಬ್ಯಾಚಿಗೆ ನಾನು ಟ್ಯೂಶನ್ ಹೇಳಿ ಇಲ್ಲಿ ಸಾಯಬೇಕು ಯಾಕೆ? ಈ ಅನಿಷ್ಟಗಳ ಹೊಟ್ಟೆ ತುಂಬಿಸೋಕ್ಕ?”
ಅಮ್ಮ ಬಡಿಸುವ ಪಾತ್ರೆಗಳನ್ನ ಎದುರಿಗಿಟ್ಟುಕೊಂಡು ತಲೆಯ ಮೇಲೆ ಕೈಹೊತ್ತು ಮೌನವಾಗಿ ಕೂತಿರುತ್ತಾಳೆ. ಇಬ್ಬರು ತಮ್ಮಂದಿರೂ ಕಲಸಿದ ತುತ್ತನ್ನು ಎತ್ತದೆ ಕತ್ತು ಬಗ್ಗಿಸಿ ಕೂರುತ್ತಾರೆ. ಅವರಿಗೆ ತಾವು ಅಪರಾಧಿಗಳು ಎನ್ನಿಸುವವರೆಗೆ ಕೇಶವನಿಗೆ ಸಮಾಧಾನವಿಲ್ಲ. ಕಣಜದಂತೆ ಮೈಯೆಲ್ಲ ಕೋಪ ಹರಿದು ಉರಿಯಾಗಿ, ಬಿಸಿಯಾಗಿ, ತುರಿಕಜ್ಜಿಯಾಗಿ, ಇನ್ನಷ್ಟು ಮತ್ತಷ್ಟು ಕೋಪ ಕಡುಕೋಪವಶನಾಗಬೇಕೆಂದು ಒಳಗಿನಿಂದ ಹಂಬಲವಾಗಿ; ಕೋಪದ ಮತ್ತು ನೆತ್ತಿಗೇರುವಂತೆ ತಾಯಿ ಏನಾದರೂ ಹೇಳಬಾರದೆ, ಮಾಧು ಎದುರು ಬಿದ್ದು ಮಾತಾಡಬಾರದೆ ಎನ್ನಿಸಿ; ಪ್ರಚೋದಿಸಲು ತನ್ನ ಶಬ್ಧಕೋಶಶಬ್ದಕೋಶದಿಂದ ಅತಿ ಅವಾಚ್ಯವನ್ನು ಹುಡುಕುತ್ತ ಮಾತಾಡುತ್ತಾನೆ. ಅಮ್ಮ ಮಾತಾಡದೆ ನಿಟ್ಟುಸಿರಿಟ್ಟರೆ, ಮಾಧುವಿನ ಕಣ್ಣಲ್ಲಿ ನೀರು ತುಂಬಿ ಅವನು ಊಟದಿಂದ ಎದ್ದರೆ ಅತ್ಯಂತ ನಾಚಿಕೆಯಾಗಿ, ನಿರಾಸೆಯಾಗಿ-ಕೈ ತೊಳೆಯುತ್ತಿರುವ ಮಾಧವನ ಬಳಿಗೆ ಹೋಗಿ- “ನೀನು ಊಟ ಮಾಡಬಾರದ? ಊಟವನ್ನು ಬಿಟ್ಟು ನನ್ನ ಮೇಲೆ ರಚ್ಚು ತೀರಿಸಿಕೊಳ್ಳಬೇಕ?” ಎನ್ನುತ್ತಾನೆ. ಕೋಪ ಆತ್ಮಮರುಕವಾಗಿ, ಸರ್ಪ ಸಿಂಬಳದ ಹುಳುವಾಗಿ, ಕಜ್ಜಿ ಕೀವಾಗುತ್ತದೆ. ಒಮ್ಮೊಮ್ಮೆ ತಾಯಿ : “ಯಾಕೆ ಕೆಟ್ಟ ಮಾತಾಡ್ತೀಯ? ಎಲ್ಲ ಘಳಿಗೇನೂ ಒಂದೇಸಮ ಇ‌ಅರಲ್ಲಇರಲ್ಲ. ಇದು ವಿಷಘಳಿಗೇ ಇರಬಹುದು. ಕೆಟ್ಟದ್ದು ಬಯಸಿ ಮಾತಾಡ್ಬಾರ್ದು. ಒಳಿತು ಎನ್ನು” ಎನ್ನುತ್ತಾಳೆ. ದೇವರಿಗೆ ಕಾಣಿಕೆ ಹಾಕಿ ತುಪ್ಪದ ದೀಪ ಹಚ್ಚುತ್ತಾಳೆ. ಅಥವಾ ಮಾಧವ- “ಆ ಹಾಳು ಫ್ಯಾಕ್ಟರೀಲಿ ನಾನು ಶೂದ್ರ ಮಕ್ಕಳ ಹಾಗೆ ದುಡೀಲಾರೆ ಗೊತ್ತಾಯ್ತ? ನಂಗದು ಒಗ್ಗಲ್ಲ. ನಿಂಗೇನು ಹೇಳು? ಎಂ.ಎ., ಓದಿ ಕಾಲೇಜು ಲೆಕ್ಚರರ್ ಆಗಿದೀಂತ ಕೊಬ್ಬು. ಅಪ್ಪ ನಿಂಗೆ ಮಾಡಿದಷ್ಟು ನಂಗೆ ಮಾಡಲಿಲ್ಲ….ನೀನು ನನ್ನ ಅಣ್ಣಾಂತ ನಿನ್ನ ಮನೇಲಿ ಊಟ ಮಾಡ್ತೀನಿ. ಇಷವಿಲ್ಲದೇಇಷ್ಟವಿಲ್ಲದೇ ಇದ್ರೆ ಹೇಳು….ಹೊರಟು ಹೋಗ್ತೀನಿ” ಎನ್ನುತ್ತಾನೆ.
“ನಾನು ನಾನು ನಾನು…” ಮುಷ್ಟಿ ಕಟ್ಟಿ ಮುಂದೆ ನುಗ್ಗಿ ಮಾತು ಧಾರಾಕಾರವಾಗಿ ಸುರಿಯುತ್ತದೆ. “ನಿಮ್ಮ ಹಾಗೆ ಪೋಲಿ ಅಲೀಲಿಲ್ಲ….ನಾನು ನಿಮಗೆ ಮಾಡಿದಷ್ಟು ಅಪ್ಪ ನಂಗೆ ಮಾಡಲಿಲ್ಲ….ಬಿಟ್ಟಿ ಹಾಸ್ಟಲಲ್ಲಿದ್ದು, ಕಕ್ಕಸ ಬಾಚಿ, ನೆಲ ಒರೆಸಿ ಓದಿ ಮುಂದೆ ಬಂದೆ…”- ಎಲ್ಲ ಕಹಿಯೂ ಹೊರಗೆ ಬರುತ್ತದೆ. ಹೀಗಾದ ದಿನ ಕೇಶವನಿಗೆ ಕೋಪದ ದೀಪಾವಳಿ; ಯಕ್ಷಗಾನದ ರಾವಣನ ಬಣ್ಣ ವೇಷಗಳು ಇಲ್ಲದಿರುವುದೊಂದು ಕೊರತೆಯಷ್ಟೆ. ಒಳಗಿನಿಂದೊಂದು ಆಸೆ- ಕಾಮದಂತಹ ಪ್ರಬಲವಾದ ಆಸೆ-ಸಫಲವಾದಂತಾಗಿ, ಕೊನೆಗೆ ಸುಸ್ತಾಗಿ, ಒಂದು ರೀತಿಯ ಸುಖದಲ್ಲೊ, ಶೂನ್ಯದಲ್ಲೊ ಮತ್ತನಾದಂತೆ ಕೂರುತ್ತಾನೆ. ರೋಷವೊಂದೇ ತನಗೆ ಇತ್ತೀಚೆಗೆ ಪಡೆಯಲು ಸಾಧ್ಯವಾದ ತೀವ್ರ ಭಾವನೆಯೆಂದು ಥಟ್ಟನೆ ಎನ್ನಿಸಿ ದಿಗಿಲಾಗುತ್ತದೆ.
“ನಾವು ಬೇಕರ್‌ಲೂ ಲೈನಲ್ಲಿ ಕೂತಿದ್ದೇವೆ. ಇದು ಬೇಕರ್ ಸ್ಟ್ರೀಟ್ ಸ್ಟೇಶನ್” ಎಂದು ಸ್ಟೂ‌ಅರ್ಟ್ ಹೇಳಿದ. ಗಾಡಿ ಖಾಲಿಯಾದ್ದರಿಂದ ಇಬ್ಬರೂ ತಮ್ಮ ಸೀಟಿಗೆ ಮರಳಿದರು. ಸ್ಟೂ‌ಅರ್ಟ್ ನಿಂತು ಪ್ರಯಾಣ ಮಾಡುತ್ತಿದ್ದಾಗ ತನ್ನ ಯೋಚನೆಯನ್ನು ಮುಂದುವರೆಸುತ್ತಿದ್ದನೆಂದು ಕೇಶವಿಗೆಕೇಶವನಿಗೆ ಅನ್ನಿಸಿತು. ಬಿಟ್ಟ ಜಾಗದಿಂದ ಮತ್ತೆ ಹೊರಟ:
“ನಾನು ಉದ್ದೇಶದ ಮಾತು ಯಾಕೆ ಎತ್ತಿದೇಂದರೆ ಈ ದೇಶದಲ್ಲಿನ ಜನ ತಮ್ಮದೇ ಆದ ಒಂದು ಸ್ವಾರ್ಥದ ಪುಟ್ಟ ಲೋಕದಲ್ಲಿ ಇದ್ದುಬಿಡ್ತಾರೆ. ಸಮಷ್ಟಿ ಕುಟುಂಬಗಳಿರುವ ನಿನ್ನಂತಹ ದೇಶದಲ್ಲಿ ಇನ್ನೂ ವ್ಯಕ್ತಿ ಸಮಾಜಗಳ ನಡುವೆ ರಕ್ತಸಂಬಂಧ ಉಳಿದಿದೆ. ಆದರೆ ನಮ್ಮಲ್ಲಿ ನೋಡು: ಹದಿನಾರನೆ ವರ್ಷಕ್ಕೆ ಒಬ್ಬ ಹುಡುಗ ದುಡಿಯೋಕ್ಕೆ ಪ್ರಾರಂಭಿಸುತ್ತಾನೆ; ಹದಿನೆಂಟಕ್ಕೆ ಮದುವೆಯಾಗ್ತಾನೆ. ಉದ್ಯೋಗ ಸೊರೀದಿದ್ದರೆದೊರೀದಿದ್ದರೆ ಅವನಿಗೆ ನಿರುದ್ಯೋಗ- ವೇತನ ಸಿಗತ್ತೆ. ಮುದುಕರಾದ ಅಪ್ಪ ಅಮ್ಮನ್ನ ನೋಡಿಕೋಬೇಕು, ಯೌವನದಲ್ಲಿ ವೃದ್ಧಾಪ್ಯದ ಅನುಭವದ ಜೊತೆ ಸಂಬಂಧ ಬೇಕು ಅನ್ನಿಸೋ ಒತ್ತಾಯ ಇಲ್ಲ. ಅಪ್ಪ ಅಮ್ಮನನ್ನು ನೋಡಿಕೊಳ್ಳೋ oಟಜ ಠಿeoಠಿಟes home ಇದ್ದಾವೆ- ಒಟ್ಟಿನಲ್ಲಿ ಜೀವನಾನ್ನ ಪಕ್ವಮಾಡುವ ಚಿಂತೆ ಒತ್ತಡ ಇಲ್ಲ. ಹೈರ್ ಪರ್ಚೇಸಿನಲ್ಲಿ ಅವನ ಹೆಂಡತಿ ಮನೆಗೆ ಬೇಕಾದ ಟಿ. ವಿ. ಹೂವರ್ ಮ್ಯಾಟಿಕ್ ಮಾಶಿಂಗ್ ಮಿಶಿನ್, ಪ್ರಿಜಿಡೈರ್ ಕೊಳ್ಳುತ್ತಾಳೆ. ಈತ ಒಂದು ಕಾರ್ ಕೊಳ್ಳುತ್ತಾನೆ. ಸಾಯಂಕಾಲ ತಾವು ನಿತ್ಯ ಹೋಗುವ ಪಬ್ಬಿಗೆ ಹೋಗಿ ಒಂದೆರಡು ಗಂಟೆ ತನ್ನಂತೆ ಬದುಕುವ ಇನ್ನೂ ಕೆಲವರ ಜೊತೆ ಹರಟೆ ಹೊಡೆದು, ಮನೆಗೆ ಬಂದು ಟೆಲಿವಿಜನ್ ನೋಡಿ, ವರ್ಷಕ್ಕೊಮ್ಮೆ ಹಾಲೆಂಡಿಗೆ ಹೋಗಿ ಬೀಚಿನ ಮೇಲೆ ಅರ್ಧನಗ್ನರಾಗಿ ಸಹಸ್ರ ಜನರ ಜೊತೆ ಮಲಗಿ, ಮೈಯನ್ನು ಟ್ಯಾನ್ ಮಾಡಿಕೊಂಡು….ಇದನ್ನ ಜೀವನಾಂತೀಯ? ಇವರಿಗೂ ಇಟ್ಟು ಜೀವನಕ್ಕೂ ಏನು ಸಂಬಂಧ? ನನ್ನ ಜೀವನಾನೂ ಇದಕ್ಕಿಂತ ಬೇರೆಯಲ್ಲ ಕೇಶವ್. ಜೀವನದಲ್ಲಿ ತಿಕ್ಕಾಟ ಬೇಕು, ಬಿರುಸು ಬೇಕು, ಸುಖ ದುಃಖ ಬೇಕು- ಸಲೀಸಾಗಿ ಜಾರಿಬಿಡೋದಿಲ್ಲ. ಔh! I ಚಿm boಡಿeಜ, ಣeಡಿಡಿibಟಥಿ. ಇಂಗ್ಲೇಂಡಿನಲ್ಲಿ ಜೀವವಿಲ್ಲ- ಈ ಸುಖೀ ಸಮಾಜದಲ್ಲಿ ಜೀವನಕ್ಕೊಂದು ಉದ್ದೇಶ ಇಲ್ಲ. ನೀನು ಹೇಳ್ತಿ- ನಿನ್ನ ಜೀವನ ಬಡತನದ ವಿರುದ್ಧ ಹೋರಾಡೋದರಲ್ಲೆ ವ್ಯಯವಾಯಿತು, ಕಾಮದ ಅನುಭವವಿಲ್ಲದೆ ಮುರುಟಿತೂಂತ. ನನ್ನನ್ನೆ ತಗೊ ಕೇಶವ್: ನನಗೆ ಬಡತನದ ಅನುಭವ ಇಲ್ಲ; ಹಸಿವೆಂದರೆ ಏನೂಂತ ಗೊತ್ತಿಲ್ಲ; ಹದಿನಾರನೇ ವರ್ಷದಿಂದ ಈ ವರೆಗೆ ಹೆಣ್ಣು ಬೇಕೂಂತ ಅನ್ನಿಸಿದಾಗೆಲ್ಲ ಹೆಣ್ಣಿನ ಸುಖ ಅಲಭ್ಯ ಅಂತ ಅನ್ನಿಸಿದ್ದಲ್ಲಅನ್ನಿಸಿದ್ದಿಲ್ಲ- ಸಂತಾನನಿರೋಧ ಎಲ್ಲರಿಗೂ ಗೊತ್ತಿರೊ ಈ ದೇಶದಲ್ಲಿ ಹುಡುಗಿಯರ ಜೊತೆ ಮಲಗೋದು ಭಯದ ವಿಷಯವಲ್ಲ. ಎಲ್ಲ ಆಯಿತು- ತಿಂದೆ, ಉಂಡೆ, ಮಲಗಿದೆ, ಸಂಭೋಗಿಸಿದೆ, ಇನ್ನಷ್ಟು ತಿಂದೆ, ಮಲಗಿದೆ, ಸಂಭೋಗಿಸಿದೆ- ಆಮೇಲೆ? ಬದುಕಿನಲ್ಲಿ ಇನ್ನು ಯಾವ ಣhಡಿiಟಟ ಇದೆ?”
“ನಿನ್ನ ಕಂಡರೆ ನನಗೆ ಅಸೂಯೆಯಾಗ್ತಾ ಇದೆ ಸ್ಟೂ‌ಅರ್ಟ್” ಕೇಶವ ನಗುತ್ತ ಹೇಳಿದ.
“ಈ ಗಾಡೀಲಿ ಕೂತಿರೋ ಜನರನ್ನ ನೋಡು. ನಮ್ಮ ಸಮಾಜದ ಒಂದು ಚ್ರೊಸ್ಸ್ ಸೆಚ್ತಿ‌ಒನ್ಕ್ರಾಸ್ ಸೆಕ್ಷನ್ ಇಲ್ಲಿದೆ. ಬೌಲರ್ ಹ್ಯಾಟ್, ಪಿನ್‌ಸ್ಟ್ರೈಪ್ ಕಪ್ಪು ಸೂಟ್ ಹಾಕಿ ‘ಖಿimes’ ಓದ್ತಾ ಕೂತಿರೋ ಆತ ಬ್ಯಾಂಕಿನಲ್ಲೋ ಸರ್ಕಾರಿ ಉದ್ಯಮದಲ್ಲೊ ಇರಬೇಕು. ಅವನು ‘ಇsಣಚಿbishmeಟಿಣ ನ ಸೇರಿದಾತ. ಕ್ರೀಂ ಹಾಕಿ ಕೂದಲನ್ನ ನುಣ್ಣಗೆ ಮೇಲಕ್ಕೇರಿಸಿ ಕಾಲರಿಲ್ಲದ ಜಾಕೆಟ್ ಧರಿಸಿಕೊಂಡು ಕೂತಿರೋ ಆತ ತಿoಡಿಞiಟಿg ಛಿಟಚಿss ನಲ್ಲಿ ಹುಟ್ಟಿದ ಡ್ಯಾಂಡಿ- ಎಲ್ಲೊ ಸೇಲ್ಸ್‌ಮನ್ ಆಗಿದಾನೆ. ಈ ಕಿರಿನಗುವಿನ ಕೂದಲಿಗೆ ಕೆಂಪು ಬಣ್ಣ ಹಾಕಿದ ಹುಡುಗಿ ಬಹುಶಃ Woಟಟತಿoಡಿಣh ನಲ್ಲಿ ಸೇಲ್ಸ್ ಗರ್ಲ್- ಪ್ರಾಯಶಃ ಠಿiಛಿಞ-uಠಿ giಡಿಟ ಆ ಇನ್ನೊಬ್ಬಳ ಮುಖ ನೋಡಿದರೇ ಗೊತ್ತಾಗುತ್ತೆ- ಅವಳು sಣeಟಿo ಣಥಿಠಿisಣ ಅವರು ಉಪಯೋಗಿಸೋ ಸೆಂಟ್‌ನಿಂದ ಹೇಳಬಹುದು- ಯಾವ ವರ್ಗದವಳು, ಯಾವ ರುಚಿಯವಳು, ಅಂತ. ವರಮಾನ, ಸ್ಥಾನ, ನೋಡಿ ಅವಳು ಮದುವೆಯಾಗ್ತಾಳೆ. sಟim ಆಗಿರಲು ನಿತ್ಯ ವ್ಯಾಯಾಮ ಮಾಡ್ತಾಳೆ. ಸಂಜೆ ಫ್ರೆಂಚ್ ಕಲೀತಾಳೆ. ಫೋನ್‌ನಲ್ಲಿ ಅಪಾಯಿಂಟ್‌ಮೆಂಟ್ ಫಿಕ್ಸ್ ಮಾಡಿ hಚಿiಡಿ sಣಥಿಟisಣ ನ ಹತ್ತಿರ ಹೋಗಿ ತನ್ನ ಕೂದಲನ್ನ ಕೂರಿಸಿಕೊಂಡು ಬರುತ್ತಾಳೆ. ಈ ಬೀಟಲ್ಸ್ ಸ್ಟೈಲ್‌ನಲ್ಲಿ ಉದ್ದನೆ ಕೂದಲು ಬೆಳೆಸಿ ಟೈಟ್ ಪ್ಯಾಂಟ್ ಹಾಕಿ ಕೈಯಲ್ಲೊಂದೊಂದು ಟ್ರಾನ್ಸಿಸ್ಟರ್ ಹಿಡಿದು ಕೂತಿರೋ ಎಳೆಯರು ಇನ್ನೇನು ಎರಡು ವರ್ಷದಲ್ಲಿ ಮದುವೆಯಾಗಿ ಹೈರ್‌ಪರ್ಚೇಸಿನಲ್ಲಿ ಕೊಂಡ ಸಾಮಾನುಗಳಿಗೆ ಪ್ರತಿ ವಾರ ಹಣ ತೆರಲು ಪ್ರಾರಂಭಿಸುತ್ತಾರೆ. ನಾನು ಕೂಡ ಇನ್ನೊಂದು ವರ್ಷದಲ್ಲಿ ಯೂನಿವರ್ಸಿಟಿ ಶಿಕ್ಷಣ ಮುಗಿಸಿ ಆ ಬೌಲರ್ ಹ್ಯಾಟ್ ಹಾಕಿದ್ದಾನಲ್ಲ ಅವನ ಎಸ್ಟಾಬ್ಲಿಶ್‌ಮೆಂಟ್‌ನ ಒಂದು ಸಾಮಾನ್ಯ, ಆದರೆ ಮುಖ್ಯ, ವೀಲ್ ಆಗ್ತೇನೆ…..ಎಂತಹ ಕ್ರಾಂತಿಕಾರನಿಗೂ ಇಲ್ಲಿ Peeಡಿ ಪದವಿ ಸಿಕ್ಕು ಎಸ್ಟಾಬ್ಲಿಶ್‌ಮೆಂಟಿನ ಅಂಗವಾಗುತ್ತಾನೆ. Sಚಿಡಿಣಡಿe ಇಂಗ್ಲೀಷಿನಲ್ಲಿ ಬರೆದಿದ್ದರೆ ಅವನು ಇಲ್ಲಿ ಊouse oಜಿ ಐoಡಿಜs ನಲ್ಲಿ ಮೆಂಬರಾಗುತ್ತಿದ್ದ….ಇಲ್ಲ- ಇಂಗ್ಲೆಂಡ್ ತೋರವಾಗಿ, ತನ್ನ ಸೂಕ್ಷ್ಮ ಅಂತಃಕರಣವನ್ನು ಕಳೆದುಕೋತಿದೆ. ಂಟಟ ಂಟಟ oಜಿ us ಟಿeeಜ sಟimmiಟಿg, suಜಿಜಿeಡಿiಟಿg….. ನಮ್ಮ ಂಟಿgಡಿಥಿ ಥಿouಟಿg meಟಿ ಏನಾದರೂ ನೋಡು: ಬಿ. ಬಿ. ಸಿ. ಮತ್ತು ನಮ್ಮ ಪ್ರಮುಖ ಪತ್ರಿಕೆಗಳು ಅವರನ್ನು ಶಕ್ತರೆಂದು ಬೇಗ ಗುರುತಿಸಿ ನಮ್ಮ ಅಪಾರವಾದ ಎಸ್ಟಾಬ್ಲಿಶ್‌ಮೆಂಟಿಗೆ ಸೇರಿಸಿಕೊಂಡರು. ಇಲ್ಲ ನಮಗೆ ಭವಿಷ್ಯವಿಲ್ಲ; ಈ ದೇಶದಲ್ಲಿ ಯಾವ ಹೊಸ ಅನುಭವಾನೂ ಇಲ್ಲ ನಮ್ಮ ಒಳ್ಳೆ ಬರಹಗಾರರೆಲ್ಲ ಅದಕ್ಕೇ ಬೇರೆ ಬೇರೆ ದೇಶಗಳ ಬಗ್ಗೆ ಬರೀತಾರೆ: ಫಾರ್‌ಸ್ಟರ್, ಲಾರೆನ್ಸ್, ಗ್ರೀನ್, ಡರೆಲ್- ಇಂಗ್ಲೆಂಡಲ್ಲಿ ಬರೆಯೋಕ್ಕೆ ಏನಿದೆ? ಟಿoಣhiಟಿg buಣ ouಡಿ sಣuಠಿiಜ sಟಿobbeಡಿಥಿ…. ನನ್ನ ಉದ್ದನೆಯ ಭಾಷಣಾನ್ನ ಕ್ಷಮಿಸು. ನಿರರ್ಗಳ ಮಾತನ್ನ ನೀವು ಭಾರತೀಯರು ನಮ್ಮಿಂದಲೇ ಕಲಿತದ್ದು ತಾನೆ? ಖಿiಣ ಜಿoಡಿ ಖಿಚಿಣ”
ಎಂದು ಸ್ಟೂ‌ಅರ್ಟ್ ನಕ್ಕು ಮಾತು ಮುಗಿಸಿದ. ಕೆಂಪಾದ ಅವನ ಮುಖ ನೋಡಿ ಕೇಶವನಿಗೆ ಅವನು ಭಾವವಶನಾಗಿ ಮಾತಾಡುತ್ತಿದ್ದಾನೆಂದು ತಿಳಿಯಿತು. ಸಮಷ್ಟಿ ಕುಟುಂಬದ ಬಗ್ಗೆ ಅವನಾಡಿದ ಮಾತಿನ ಹಿಂದೆ ನಿರನುಭವವಿದೆ ಎನ್ನಿಸುತ್ತದೆ ಕೇಶವನಿಗೆ. ತನಗಂತೂ ಅದರ ಅನುಭವ ಸಾಕುಸಾಕಾಗಿದೆ. ಪ್ರಾಯಶಃ ಯಾವ ಸಮಾಜ ಸ್ಥಿತಿಯಲ್ಲೂ ಮನುಷ್ಯನಿಗೆ ಸುಖವಿಲ್ಲ; ಚಡಪಡಿಸುತ್ತಿರುವುದು ಮನುಷ್ಯನ ಅನಾದಿ ಅನಂತ ಅವಶ್ಯಕತೆಯಿರಬಹುದು. ನನ್ನ ಜೀವನ, ಕ್ರಿಯಾಶಕ್ತಿ ವ್ಯರ್ಥವಾಗ್ತಿದೆ ಅಂತ ನಾನು ಗೋಳೋ ಎಂದು ಎಂದು ಮನೆಯವರಿಗೆ ಅಭ್ಯಾಸವಾಗಿ ಈಗ ಯಾರೂ ಅದನ್ನ ಗಮನಿಸೋದೇ ಇಲ್ಲ. ನನ್ನ ನಾಲ್ಕು ತಂಗಿಯರು ಅರೆಹೊಟ್ಟೆ ಉಂಡು, ಕಾಟನ್ ಸೀರೆಯುಟ್ಟು, ಬರಿಗಾಲಿನಲ್ಲಿ ನಡೆದರೂ ವಸಂತ ಪ್ರಾಪ್ತವಾದ ಅರಣ್ಯದ ವೃಕ್ಷಗಳಂತೆ ಜೀವ ತುಂಬಿ, ಚಿಂತೆಯಲ್ಲಿ ಸೊರಗುತ್ತಿರುವ ಅಮ್ಮನ ಕಣ್ಣಿಗೆ ಬಾಂಬಿನಂತೆ ಕಾಣುತ್ತಾರೆ. ಮೊಲೆಗಳು ಎದ್ದು ಕಾಣದಂತೆ ಬಟ್ಟೆಯಲ್ಲಿ ಹೊಲೆದ ಬ್ರೇಸಿಯರ್‌ನಿಂದ ಬಿಗಿದು ಕಟ್ಟಿ, ಸೆರಗು ಹೊದ್ದು ಗೂನುಬೆನ್ನು ಮಾಡಿ, ತಲೆ ತಗ್ಗಿಸಿ, ಪುಸ್ತಕ, ಜಾಮಿಟ್ರಿ ಬಾಕ್ಸ್ ಹಿಡಿದು ಅವರು ಕಾಲೇಜು ಸ್ಕೂಲಿನಿಂದ ನಡೆದು ಬರುವುದು ಕಂಡರೆ ಕೇಶವನಿಗೆ ಸಂಕಟವಾಗುತ್ತದೆ. ಬಾಳು ಎಂತಹ ಹೊರೆ ಎನ್ನಿಸುತ್ತದೆ. ಆದರೆ ಸ್ವಕ್ಷೇಮಚಿಂತನೆಯನ್ನ ಹೆಣ್ಣಿಗೆ ಯಾರೂ ಕಲಿಸಬೇಕಾಗಿಲ್ಲ; ರಾತ್ರೆ ಹನ್ನೊಂದೂವರೆಗೆ ಓದಿ, ಬೆಳಿಗ್ಗೆ ಮತ್ತೆ ನಾಲ್ಕು ಗಂಟೆಗೆದ್ದು ಓದಿ, ಮನೆಗೆಲಸದಲ್ಲಿ ತಾಯಿಗಷ್ಟು ಸಹಾಯ ಮಾಡಿ, ಫಸ್ಟ್ ಕ್ಲಾಸಿನಲ್ಲಿ ಪಾಸಾಗಿ, ಫ್ರೀಶಿಪ್ ಪಡೆದು, ಓದುತ್ತಿದ್ದಾರೆ- ತಮ್ಮಂದಿರಿಗೆ ನಾಚಿಕೆಯಾಗುವ ಹಾಗೆ. ಮಾಧುವಿಗಂತೂ ಸ್ವಕ್ಷೇಮಚಿಂತನೆ ಎಳ್ಳಷ್ಟೂ ಇಲ್ಲ. ಬೋನಸ್‌ನಲ್ಲಿ ಅವನಿಗೊಮ್ಮೆ ಅಷ್ಟು ಹಣ ಒಟ್ಟಿಗೇ ಸಿಕ್ಕಿತು. ನಾಲ್ಕು ತಂಗಿಯರಿಗೆ, ತಾಯಿಗೆ- ಸೀರೆ; ತನಗೆ, ಕೇಶವನಿಗೆ, ಸುಧೀಂದ್ರನಿಗೆ- ಪ್ಯಾಂಟಿನ ಬಟ್ಟೆ ಕೊಂಡುತಂದು, ಒಂದು ವಾರ ನಗುತ್ತ, ತಂಗಿಯರಿಗೆ ಸಿನಿಮಾ ತೋರಿಸುತ್ತ ಬಂದ ಹಣವನ್ನು ಪೋಲು ಮಾಡಿದ. ಹಾಗೆ ನೋಡಿದರೆ ಮಾಧು ತನಗಿಂತ ಹೆಚ್ಚು ಬಾಳಿನ ಗೆಲುವಿರುವ, ಯೌವನದಿಂದ ತುಂಬಿದ, ತನ್ನ ಹಾಗೆ ಅಳೆದು ಹೊಯ್ದು ಜವಾಬ್ದಾರಿಯೆಂದು ಚಿಮ್ಮುವ ಪ್ರೇಮವನ್ನು ಕಳೆದುಕೊಳ್ಳದ, ಹುಡುಗ. ಅದಕ್ಕಾಗಿ ಹುಡುಗಿಯರು ಅವನನ್ನೊಲಿದಂತೆ ತನ್ನನ್ನು ಒಲಿಯುವುದಿಲ್ಲ. ಸಂಸಾರವೆಂದು ರಗಳೆ ಮಾಡಿಕೊಂಡು ತಾನು ಒಣಗಿದ್ದೇನೆ, ಬತ್ತಿದ್ದೇನೆ, ಕರ್ತವ್ಯದ ವ್ಯಸನದಲ್ಲಿ ಪ್ರೇಮವನ್ನು ಕಳೆದುಕೊಂಡಿದ್ದೇನೆ. ಕರ್ತವ್ಯದ, ನೀತಿ ನಿಯಮದ ಅಂಕೆಯಿಲ್ಲದ ಮಾಧುವಿನ ಹೃದಯದಲ್ಲಿ ನಿರುಪಗಯೋದವಾದನಿರುಪಗಯೋಗವಾದ, ಅಪೇಕ್ಷೆಯಿಲ್ಲದ ಹುಂಬ ಪ್ರೇಮವಿದೆ. ಈ ನಡುವೆ ತಂಗಿಯರು ಅಸಾಧಾರಣ ಜಾಣರು; ಬಹುಶಃ ಸ್ವಕ್ಷೇಮ ದೃಷ್ಟಿಯಿಂದ- ಮೋಸಗಾರರು. ಈ ಮನೆ ಕೊನೆಯವರೆಗೆ ತಮ್ಮದಲ್ಲವೆಂದು ಅವರಿಗೆ ಗೊತ್ತು. ಇರುವಷ್ಟು ದಿನ ತನಗೆ, ಮಾಧುವಿಗೆ, ತಾಯಿಗೆ ಹೊಂದಿಕೊಂಡಿರಲು ಹೆಣಗುತ್ತಾರೆ. ಮದುವೆಯಾಗಿ ಒಳ್ಳೆ ಗಂಡನ ಮನೆ ಸೇರಿದ ಕ್ಷಣ ಈ ರಗಳೆ ಅವರಿಗೆ ತಪ್ಪುತ್ತದೆ- ಆದ್ದರಿಂದ ಒಳ್ಳೆ ಗಂಡನಿಗೆಂದು ಅವರು ಕಾಯುತ್ತಿದ್ದಾರೆ. ಅವರಿಗೆ ಒಳ್ಳೆ ಗಂಡನನ್ನು ಪಡೆಯಲು ತಾನೊಂದು ಸಾಧನವಾದ್ದರಿಂದ ಅಣ್ಣನ ಜೊತೆ ಪ್ರಿಯವಾಗಿ ನಡೆದುಕೊಳ್ಳುತ್ತಾರೆ. ಲೆಕ್ಚರರ್‌ನ ತಂಗಿಯೆಂದು ಅವರಿಗಷ್ಟು ಹೆಚ್ಚು ಬೆಲೆಯಲ್ಲವೆ? ಅದೂ ಅವರಿಗೆ ಗೊತ್ತು. ಅಪ್ಪ ಸತ್ತ ಮೇಲೆ ಸಾಲ ಇತ್ಯಾದಿ ಕಳೆದು ತೋಟ ಮಾರಿ ಉಳಿದ ಹಣ ಐದುಸಾವಿರ ಇದೆ, ಬ್ಯಾಂಕಿನಲ್ಲಿ. ಇನ್ನೂ ಐದು ಸಾವಿರವಾದರೂ ಬೇಕು, ಆ ಹುಡುಗಿಯರಿಗೆ ತಕ್ಕ ಗಂಡಂದಿರನ್ನು ಕೊಳ್ಳಲು. ಅದಕ್ಕಾಗಿ ತಾನು ದುಡಿಯಬೇಕು- ಮನೆಯನದ ಮನೆತನದ ಮರ್ಯಾದೆಗೆ ತಕ್ಕಂತೆ ಅದ್ಧೂರಿಯಲ್ಲಲ್ಲದೆ ಮದುವೆ ಮಾದಲುಮಾಡಲು ಅಮ್ಮ ಕೇಳಬೇಕೆ?- ತೊಡೆಯ ಮೇಲೆ ಆಡಲು ಮನೇಲಿ ಮೊಮ್ಮಕ್ಕಳಿಲ್ಲದೆ ನೀನಾದರೂ ಮದುವೆಯಾಗೊ ಎನ್ನುತ್ತಾಳೆ ಅಮ್ಮ. ಮೊದಲು ತಂಗಿಯರದ್ದಾಗಲೀ ಎನ್ನುತ್ತೇನೆ. ನಿನ್ನ ಅಕ್ಕನ ಮಗಳೇ ಇದ್ದಾಳಲ್ಲ…..ಶುರುವಾಗುತ್ತದೆ ಹಳೆ ಕತೆ. ಅವರದು ದೊಡ್ಡ ಸಂಸಾರಾಪ್ಪ, ಸ್ವಲ್ಪ ಉಪಕಾರ ಮಾಡಪ್ಪ, ಕನ್ಯಾ- ಹೊರೆ ಇಳಿಸಪ್ಪ…..ನಾನು ರೇಗಿ, ಕೂಗಿ, ಚಪ್ಪಲಿ ಹಾಕಿಕೊಂಡು ಹೊರಗೆ ಹೋಗುತ್ತೇನೆ-‘ಇವತ್ತು ಹುಡುಗರು ಬಂದ್ರೆ ಟ್ಯೂಶನ್ ಇಲ್ಲಾಂತ ಹೇಳು. ಈ ಮನೇಗೆ ದುಡಿದು ದುಡಿದು ಸುಣ್ಣ ಆದೆ!’
ನಂಗೂ ಗೊತ್ತು, ಅಮ್ಮನಿಗೂ ಗೊತ್ತು- ಭಾಗೀರತಿಯಿಲ್ಲದೆ ಬೇರೆ ಹುಡುಗೀನ ನಂಗೆ ಮದುವೆಯಾಗೋದು ಸಾಧ್ಯವಿಲ್ಲಾಂತ. ನಾಲ್ಕು ಜನ ಮದುವೆಯಾಗಬೇಕಾದ ತಂಗಿಯರು. ಇಬ್ಬರು ನಿರುಪಯೋಗಿ ಧಾಂಡಿಗ ತಮ್ಮಂದಿರು ಇರೋ ಮನೆಗೆ ಬೇರೆಯವರ ಮನೆ ಹುಡುಗಿ, ಕಲಿತವಳು, ಬಂದು ಸೇರಿದರೆ ಖಂಡಿತ ಜಗಳವೆಬ್ಬಿಸುತ್ತಾಳೆ. ಗಂಡನನ್ನು ಮನೇವರಿಂದ ಬೇರೆ ಮಾಡಿ ತನ್ನದೇ ಒಂದು ಪುಟ್ಟ ಸಂಸಾರ ಹೂಡಿಕೊಳ್ಳಲು ಪ್ರಯತ್ನಿಸುತ್ತಾಲೆಪ್ರಯತ್ನಿಸುತ್ತಾಳೆ. ಭಾಗೀರತಿಯನ್ನಾದರೆ ಅಮ್ಮ ಗದರಿಸಿ ಹದ್ದಿನಲ್ಲಿಟ್ಟುಕೊಳ್ಳಬಹುದು. ತನ್ನ ತಂಗಿಯರಿಗೂ ಇದು ಗೊತ್ತು. ನನಗೆ ಇಷ್ಟು ಪ್ರಿಯವಾಗಿ ನಡಕೊಳ್ಳೋ ಅವರು ತಮ್ಮ ಕ್ಷೇಮದ ದೃಷ್ಟಿಯಿಂದ, ತಾವು ಒಳ್ಳೇ ಕಡೆ ಸೇರೋ ಆಸೆಯಿಂದ, ಅತ್ಯಂತ ಸೂಕ್ಷ್ಮವಾಗಿ ನಾನು ಅಕ್ಕನ ಮಗಳನ್ನು ಒಲಿಯೋ ಹಾಗೆ ಮಾಡಲು ಒದ್ದಾಡುತ್ತಾರೆ; ಅವಳ ಕೈಲಿ ನಂಗೊಂದು ಸ್ವೆಟರ್ ಹಾಕಿಸೋದು, ಕೆಲಸದ ನೆವ ಹೇಳಿ ಅವಳನ್ನ ನನ್ನ ರೂಮಿನಲ್ಲಿ ಬಿಟ್ಟು ಹೋಗೋದು-ಇತ್ಯಾದಿ. ಇದೊಂದು ದೊಡ್ಡ ಸ್ವಾರ್ಥದ ಜಾಲವೆಂದು ನಾನು ಒಮ್ಮೊಮ್ಮೆ ಬಿಡಿಸಿಕೊಳ್ಳಲು ಹೆಣಗುತ್ತೇನೆ. ಹೇಗೆ…..ಹೇಗೆ…ಅದಕ್ಕೇಂತ ಇಂಗ್ಲೆಂಡಿಗೆ ಬಂದೆ.

ಭಾಗ : ಎರಡು

ಕತ್ತಲಿನಿಂದ ಮತ್ತೆ ಬೆಳಕಿಗೆ. ಬಾಗಿಲುಗಳು ಜಾರಿದವು. ಜನರನ್ನು ಕಕ್ಕಿ ನುಂಗಿ ಮುಚ್ಚಿಕೊಂಡವು. ಮೊಟ್ಟಮೊದಲು- ಈ ಭೂತ, ನಗರದಲ್ಲಿ, ಮನೆಯವರಿಂದ ಐದು ಸಹಸ್ರ ಮೈಲಿ ದೂರದಲ್ಲಿ ಅರಿಯಬೇಕಾದ್ದು: ನನ್ನೊಳಗೆ ಎಲ್ಲ ಸೂಕ್ಷ್ಮವನ್ನೂ ನುಂಗುವ ರಾಕ್ಷಸ ರೋಷ ಕುದಿಯುತ್ತಿದೆ ಎಂದು. ಅದು ನಿರ್ಬಲ ಹೆಣ್ಣಿಗನ ರೋಷ ಎಂದು. ಪ್ರೇಮವನ್ನು ಕೊಡಲಾರದ, ಯಾರಿಂದಲೂ ಪಡೆಯಲಾರದ ಶುಷ್ಕತೆ ಒಳಗಿದೆ. ಕೆಲವು ಹಗಲುಗನಸುಗಳನ್ನು ಆಗಾಗ ಕಾಣುತ್ತಿರುತ್ತೇನೆ: ಒಂದು- ನಾನು ದುಡಿದು ದುಡಿದು ಸತ್ತು ಸುಣ್ಣವಾಗಿ, ಮದುವೆಯಿಲ್ಲದೆ ಬತ್ತಿ ಬೆಂಡಾಗಿ, ಅಮ್ಮ ಮಾಧು ತಂಗಿಯರು ಬಲಿತು ಕೃತಘ್ನರಾಗಿ, ನನ್ನ ಮೇಲೆ ಕತ್ತಿ ಕಟ್ಟಿ, ನಾನು ಇಡೀ ಲೋಕದ ಅಪಾರ ಕರುಣೆಗೆ ಪಾತ್ರನಾಗುವುದು; ಇನ್ನೊಂದು- ಅಕಸ್ಮಾತ್ ತಾಯಿ, ತಮ್ಮಂದಿರು, ತಂಗಿಯರು ಸತ್ತು ತಾನೊಬ್ಬನೇ ಗಾಢವಾದ ದುಃಖದಲ್ಲಿ ಉಳಿಯುವುದು. ರೋಷದಿಂದ ವಿರ್ಬಲನಿರ್ಬಲ, ನಿರ್ಬಲತೆಯಿಂದ ಇನ್ನಷ್ಟು ರೋಷ, ಕಾಮ, ಕ್ರೋಧ, ಸಮ್ಮೋಹ, ಸೃತಿವಿಭ್ರಮ, ಬುದ್ಧಿನಾಶ, ಬುದ್ಧಿನಾಶಾತ್ ಪ್ರಣಶ್ಯತಿ, ಕಲ್ಲು ಕಡೆಯಬೇಕು, ಮಣ್ಣು ಹೊರಬೇಕು, ಆಹಾ ಗರಗಸ ಹಿಡಿದು ಮರದ ದಿಣ್ಣೆಗಳನ್ನು ಕೊಯ್ಯಬೇಕು. ನಿವೃತ್ತಿ. ಎಸ್ಕಲೇಟರ್ ಮೇಲೆ ನಿಂತು ಮೇಲಿನ ಲೋಕಕ್ಕೆ ಮರಳುತ್ತಿದ್ದಂತೆ ಸ್ಟೂ‌ಅರ್ಟ್ ಹೇಳಿದ:
“ನನಗೆ ಇವೆಲ್ಲ ಎಷ್ಟು ವಿಚಿತ್ರ ಅನುಭವ ಎನ್ನುತ್ತಿ? ಹದಿನಾರು ವರ್ಷಗಳಾಗುವ ತನಕ ನಾನು ಟ್ರೈನನ್ನಾಗಲಿ ಎಲೆಕ್ಟ್ರಿಕ್ ದೀಪವನ್ನಾಗಲಿ ಕಂಡಿರಲಿಲ್ಲ. ಹಳ್ಳಿ ಮನೇಂದ ಇನ್ನೊಂದು ದೊಡ್ಡ ಹಳ್ಳೀಲಿದ್ದ ಹೈಸ್ಕೂಲಿಗೆ ಬರಿಗಾಲಲ್ಲಿ ನಡೆದು ಬಂದು ಓದಿದೆ….”
“ನಿನ್ನ ಕಂಡರೆ ನನಗೆ ಅಸೂಯೆಯಾಗ್ತದೆ….”
ರೋಷ. ನನ್ನ ಜೊತೆ ಹೀಗೇ ಹದಿನೈದು ದಿನ ಸ್ಟೂ‌ಅರ್ಟ್ ಇದ್ದರೆ ಪರಸ್ಪರ ಜಿಗುಪ್ಸೆಯಲ್ಲಿ ಈ ಸ್ನೇಹ ಕೊನೆಯಾಗುತ್ತದೆ. ನಾನು ಒಳ ಹೊಕ್ಕು ಮುಟ್ಟಿದ್ದೆಲ್ಲ ಮಣ್ಣು. ನಡೆದಲ್ಲಿ ಮರಳುಗಾಡು. ಒಳಗಿನ ಆಸೆ: ಭಯಂಕರ ಹಿಂಸೆಯನ್ನು ಮಾಡಬೇಕು ಅಥವಾ ಅಂತಹ ಹಿಂಸೆಯನ್ನು ಅನುಭವಿಸಬೇಕು. ವಿಷಕನ್ಯೆಯೊಬ್ಬಳ ನಗ್ನ ಉರಿಗೆ ಬೀಳಬೇಕು. ಅವಳ ತುಟಿ, ಕಟಿ, ಮೊಲೆಗಳ ಬೆಂಕಿಗೆ ಹವಿಸ್ಸಾಗಿ, ಮತ್ತೆ ಅವಳ ಗರ್ಭವನ್ನು ಹೊಕ್ಕು, ಬೆಂದು, ಬಂಗಾರದ ವಿಗ್ರಹವಾಗಿ, ಅವಳ ಹೊಟ್ಟೆ ಸೀಳಿ ಬರಬೇಕು. ಭಾರತದಲ್ಲಿ ಯುದ್ಧವಾಗಬೇಕು; ಅದರಲ್ಲಿ ನಾವೆಲ್ಲ ಸಿಪಾಯಿಗಳಾಗಿ ಸಾಯಬೇಕು, ಸಾಯಬೇಕು; ವೈರಿಯ ನಗರ ಮುತ್ತಿ ಹೆಂಗಸರ ಮಾನಭಂಗ ಮಾಡಿ, ಕೊಳ್ಳೆ ಹೊಡೆದು, ಮೂಸೆ ಬಿಟ್ಟು…..
“ಪರ್ಸನ್ನು ಭದ್ರವಾಗಿ ಹಿಡಿದುಕೊಂಡು ಬಾ” ಎಂದ ಸ್ಟೂ‌ಅರ್ಟ್.’
ಗಂಡು- ಹೆಣ್ಣು ದೇಹಗಳ ಒಂದು ದೊಡ್ಡ ಗುಂಪು ಪರಸ್ಪರ ಉಜ್ಜಿ ತಾಗಿ ತಬ್ಬಿದರೂ ಬೇರೆ ಬೇರೆ ರೋಷಗಳ ಲೋಕಗಳಾಗಿ ಉಳಿದು, ಹೆಜ್ಜೆ ಮೇಲೊಂದು ಹೆಜ್ಜೆ ಸರಿದು, ಹೊರಗೆ ಬಂದದ್ದೆ ತಡ, ಗಾಳಿಗೆ ಹಾರುವ ಪಕಳೆಗಳಂತೆ…..ಪೌಂಡಿನ ಪದ್ಯವನ್ನು ಕೇಶವ ಮತ್ತೆ ನೆನೆದ. ಇಂಗ್ಲೆಂಡಿನ ಜೂನ್ ತಿಂಗಳ ನೀಲಿ ಕಣ್ಣಿನ, ಮೃದುವಾಗಿ ನಗುವ ಹಸಿಗೂಸಿನಂತಹ ಅಪರೂಪದ ಬಿಸಿಲಿನ ಸಂಜೆ. ರಾತ್ರೆ ಒಂಬತ್ತು ಗಂಟೆಯ ತನಕ ಬಿಸಿಲಿನಲ್ಲಿದ್ದು, ಬಿಯರ್ ಕುಡಿದು, ಕಾಲು ಚಾಚಿ ಟೆಲಿವಿಜನ್ ನೋಡಿ, ಕರ್ಟನ್‌ಗಳನ್ನೆಳೆದು ಗೂದ್ ನಿಘ್ತ್ಗುಡ್ ನೈಟ್ ಹೇಳುವ, ಪಾರ್ಕುಗಳಲ್ಲಿ ಪ್ರೇಮವನ್ನು ಅರಳಿಸುವ, ಆಹಾ ಸಂಜೆ. ಸ್ಟೂ‌ಅರ್ಟ್‌ನನ್ನೇ ಹಿಂಬಾಲಿಸಿ ನಡೆದು ಕಿತ್ತಳೆ ಬಣ್ಣದ ಮಿಣುಗುವ ದೀಪಗಳಿದ್ದ ಜೀಬ್ರಾ ಕ್ರಾಸಿಂಗ್‌ನಲ್ಲಿ- ‘ಬಂದ ಹೊಸದರಲ್ಲಿ ಇದು ಗೊತ್ತಿರಲಿಲ್ಲ, ರೋಡಿನಲ್ಲಿ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಅನಾಥಪಕ್ಷಿಯಂತೆ ಹಾರುತ್ತಿದ್ದೆ’-ದಾಟಿದ. ಅವರು ದಾಟಲೆಂದು ನಿಲ್ಲಿಸಿದ ಕಾರಿನ ಡ್ರೈವರ್‌ಗೆ ಸ್ಟೂ‌ಅರ್ಟ್‌ನಂತೆ ತಾನೂ ಅವಸರದ ಕೈಯೆತ್ತಿ ನಮಸ್ಕಾರ ಮಾಡಿದ.
*
*
*
ಇಂಗ್ಲೆಂಡಿಗೆ ಬಂದವನು ಮೂರು ತಿಂಗಳ ತನಕ ಅಸಹ್ಯವಾದ ಒಂಟಿ ಜೀವನ ನಡೆಸಬೇಕಾಯಿತು. ಯೂನಿವರ್ಸಿಟಿಯಿಂದ ಡಿಗ್ಸ್‌ಗೆ, ಡಿಗ್ಸ್‌ನಿಂದ ಯೂನಿವರ್ಸಿಟಿಗೆ. ಕೆಲವೊಂದು ದಿನ ಲ್ಯಾಂಡ್ ಲೇಡಿಯ ಜೊತೆ ‘ಗುಡ್ ಮಾರ್ನಿಂಗ್,’ ‘ಗುಡ್ ಈವೆನಿಂಗ್’ಗಳ ಹೊರತು ಬೇರೆ ಒಂದೂ ಮಾತಾಡದೆ ತನ್ನೊಳಗಿನ ನರಕದಲ್ಲೆ ಬಾಳಬೇಕಾಯಿತು. ಯೂನಿವರ್ಸಿಟಿಯಲ್ಲಿದ್ದ ಕೆಲವೊಂದು ಭಾರತೀಯ ವಿದ್ಯಾರ್ಥಿಗಳ ಪರಿಚಯವಾದರೂ, ಅವರ ಜೊತೆ ಒಡನಾಟ ಅಸಹನೀಯವೆನಿಸಿತ್ತು. ಏನೊಂದು ಹೊಸ ಬಾಳನ್ನು ಹೊಸ ಮೌಲ್ಯಗಳನ್ನು ಆಶಿಸಿ ಇಂಗ್ಲೆಂಡಿಗೆ ಬಂದಿದ್ದನೊ. ಅದು ಅವರಿಂದ ದೊರೆಯಲಾರದೆಂಬುದು ಮನದಟ್ಟಾಯಿತು. ಇಷ್ಟು ದಿನದ ಸ್ನೇಹದ ನಂತರವೂ ಸ್ಟೂ‌ಅರ್ಟ್ ತನ್ನನ್ನು ಕೇಳದ ಪ್ರಶ್ನೆಯನ್ನು ಭಾರತೀಯ ವಿದ್ಯಾರ್ಥಿ ಪರಿಚಯವಾದೊಡನೆ ಕೇಳುತ್ತಿದ್ದ: “ನಿನಗೆ ಎಷ್ಟು ಸ್ಕಾಲರ್‌ಶಿಪ್ ಸಿಗುತ್ತದೆ…..?” “…ಇಷ್ಟು.” “ಅರ್ಧಕ್ಕರ್ಧ ಅದರಲ್ಲಿ ಉಳಿಸಬಹುದು….”ಉಳಿಸಿ? ಹೆಂಡತಿಯನ್ನು ಕಟ್ಟಿಕೊಂಡು ಬಂದ ಪ್ರತಿ ಭಾರತೀಯನಿಗೂ ಇರುವ ಆಸೆ: ಒಂದು ಠಿoಠಿ-uಠಿ ಣoಚಿsಣeಡಿ, ಒಂದು Wಚಿshiಟಿg mಚಿಛಿhiಟಿe, ಒಂದು ಡಿeಜಿಡಿigeಡಿಚಿಣoಡಿ, ಒಂದು ಣಡಿಚಿಟಿsisಣoಡಿ ಅನ್ನು ಏನಕೇನ exಠಿoಡಿಣ – ಜuಣಥಿ ವಂಚಿಸಿ ಊರಿಗೆ ತಗೋಂಡು ಹೋಗೋದು. ಸ್ಟೂ‌ಅರ್ಟ್ ತನ್ನ ಜನದಲ್ಲಿ ಕಾಣುವ ಮೆಟೀರಿಯಲಿಸಂಗಿಂತ ಭಯಂಕರವಾದ ಮೆಟೀರಿಯಲಿಸಮ್ಮನ್ನು ಕೇಶವ ಭಾರತೀಯರಲ್ಲಿ ಕಂಡ. ಇಲ್ಲಿ ಓದುವ ಭಾರತೀಯರು ಸ್ವದೇಶಕ್ಕೆ ಮರಳಿದ ಮೇಲೆ, ಹೇಗೆ ಎಷ್ಟು ಆಸೆಬುರುಕರಾಗಿ ಅಲ್ಲಿ ನಡೆದುಕೊಳ್ಳುತ್ತಾರೆಂದು ಕೇಶವನಿಗೆ ಅನುಭವವಿದೆ. ಆದರೆ ಈ ಭಾರತೀಯರನ್ನು ಬಿಟ್ಟರೆ ಯಾವ ಇಂಗ್ಲಿಷಿನವನ ಸ್ನೇಹವೂ ಕೇಶವನಿಗೆ ಆಗಲಿಲ್ಲ. ವಿದ್ಯಾರ್ಥಿಯರಲ್ಲಿ ಮುಕ್ಕಾಲು ಪಾಲು ಜನ ತಮ್ಮ ಹುಡುಗಿಯರ ಜೊತೆ ವಿರಾಮದ ಕಾಲದಲ್ಲಿ ರೆಫೆಕ್ಟರಿಯ ಬೆಂಚುಗಳ ಮೇಲೆ ಪ್ರಣಯದಲ್ಲಿರುತ್ತಿದ್ದುದರಿಂದ ಒಬ್ಬನ ಜೊತೆಯೂ ಸ್ನೇಹ ಬೆಳೆಸುವುದು ಅಸಾಧ್ಯವಾಯಿತು. ಸಿಟಿಯಲ್ಲಿ, ದಾರಿಗಳ ಮೇಲೆ ಸಿಕ್ಕುವ ಬಿಳಿಯರಂತೂ ತಾನೊಬ್ಬ ಸವರ್ಣೀಯನೆಂದು ಅನುಮಾನದ, ಅದಡ್ಡೆಯಅಸಡ್ಡೆಯ ದೃಷ್ಟಿಯಿಂದ ಕಾಣುವರು.

ಬಂದ ಮೂರು ತಿಂಗಳಾದ ಮೇಲೆ ಯೂನಿವರ್ಸಿಟಿಯ ಆಂಟಿ ಅಪಾರ್ಥೆಡ್ ಗುಂಪಿನ ಸಭೆಯೊಂದರಲ್ಲಿ ಕೇಶವನಿಗೆ ಸ್ಟೂ‌ಅರ್ಟ್‌ನ ಪರಿಚಯವಾಯಿತು. ಎಲ್ಲ ಇಂಗ್ಲಿಷ್ ಜನದಂತೆ, ಈ ಹವ ನಿನಗೆ ಒಪ್ಪುತ್ತದೊ- ಎಂದು ಹವದ ಮಾತಿನಿಂದ ಸಂಭಾಷಣೆ ಪ್ರಾರಂಭವಾಯಿತು. ‘ಓಹ್! ಹೋದ ವರ್ಷ ನೀನು ಇಲ್ಲಿ ಇರಬೇಕಿತ್ತು- ಅಂತಹ ವಿಂಟರನ್ನು ನಾನು ನನ್ನ ಜೀವನದಲ್ಲೆ ಕಂಡಿಲ್ಲ’ ಎಂದು ನಾಟಕೀಯವಾಗಿ ಕೈಗಳನ್ನೆತ್ತಿ ಸ್ಟೂ‌ಅರ್ಟ್ ಮುಖವನ್ನು ಅಲ್ಲಾಡಿಸಿದ್ದ. ಕೇಶವ ಅದಕ್ಕೆ ‘ನನಗೆ ಮಂಜು ಬೀಳುವುದನ್ನು ನೋಡಲು ಇಷ್ಟ. ಕಣ್ಣು ಹರಿಸಿದಲ್ಲೆಲ್ಲ ಹಿಮ ತುಂಬಿ ಬೆಳ್ಳಗಾಗಿರೋದನ್ನ ನೋಡಲು ಕಾಯ್ತಾ ಇದೀನಿ’ ಎಂದಿದ್ದ….ಹೀಗೇ ಮಾತು ಸಾಗಿ ಅವನು ತನ್ನ ಡೈರಿ ತೆಗೆದು ‘ಮುಂದಿನ ಗುರುವಾರ ಸಂಜೆ ನನ್ನ ಡಿಗ್ಸ್‌ಗೆ ಬರುತ್ತೀಯ? ಒಟ್ಟಿಗೆ ಊಟ ಮಾಡೋಣ’ ಎಂದಿದ್ದ. ಸ್ಟೂ‌ಅರ್ಟ್‌ನ ಸ್ನೇಹ ಅವನಿಗೆ ಬೆಳದಿಂಗಳಿನಂತೆ ಹಿತವಾಗಿತ್ತು. ಅತಿ ಆಪ್ತತೆಯಲ್ಲಿ ಆವರಿಸಿಕೊಳ್ಳುವ, ಕಾವು ಕೂರುವ ಸ್ನೇಹವಲ್ಲ ಅದು. ಆಪ್ತತೆಯೆಂದರೆ ಕೇಶವ ಹೆದರುತ್ತಾನೆ- ಆಳದಲ್ಲಿ ಸಂಸರ್ಗಿಸುವುದು ಇನ್ನು ಮುಂದೆ ತನ್ನಿಂದ ಸಾಧ್ಯವಿಲ್ಲ ಎಂದುಕೊಂಡಿದ್ದಾನೆ. ತನ್ನ ಒಳಗಿರುವುದನ್ನು ಅತ್ಯಂತ ಪ್ರಿಯವಾದ, ಆತ್ಮ ಮರುಕದಲ್ಲಿ ನಾರುವ, ಹೂಳದೆ ನೇತುಬಿದ್ದ ಭೂತಕಾಲದ ಶವಗಳು.

ಸೌಜನ್ಯ ಸಭ್ಯತೆ. ಮೇಲು ಮೇಲಿನ ಬದುಕೇ ವಾಸಿ. ಕೇಶವನ ಪರಿಚಯ ಚೆನ್ನಾಗಿ ಆದ ಮೇಲೂ ಅವನನ್ನು ಬಂದು ನೋಡುವ ಮುಂಚೆ, ಸ್ಟೂ‌ಅರ್ಟ್ ‘ಬರಲೆ, ಬಿಡುವಿದೆಯೆ’ ಎಂದು ಕೇಳುತ್ತಾನೆ. ಮಾತು ಸಾಮಾನ್ಯವಾಗಿ ಸ್ಟೂ‌ಅರ್ಟ್‌ಗೆ ಪ್ರಿಯವಾದ ಭಾರತೀಯ ಆಧ್ಯಾತ್ಮ, ಯೋಗ, ಹಿಂದುಳಿದ ದೇಶಗಳಿಗೆ ಆರ್ಥಿಕ ಸಹಾಯ ಇತ್ಯಾದಿಗಳ ಕಡೆ ಹರಿಯುತ್ತದೆ. ಕೇಶವನಿಗೆ ಗೊತ್ತು: ಸ್ಟೂ‌ಅರ್ಟ್ ಮೂಲತಃ ಯುರೋಪಿಯನ್- ಅವನ ಆತ್ಮದ ಬೆಳವಣಿಗೆ ಸಭ್ಯತೆಯ ಹಾದಿಯಲ್ಲೆ ನಡೆಯಬೇಕು. ನಾಜೂಕಾಗಿ, ಬುದ್ಧಿಪೂರ್ವಕವಾಗಿ, ಆರೋಗ್ಯವಾಗಿ ಜೀವನವನ್ನು ನಡೆಸಲು ಪ್ರಯತ್ನಿಸುವ ಅವನ ಅಂತಿಮ ಘಟ್ಟ ಅತ್ಯಂತ ಸಭ್ಯವಾದ, ಮಾನವ ಸಂಬಂಧದಲ್ಲಿ ಅನಿವಾರ್ಯವಾದ ನೋವು, ಕೊಳಕು ಕೊಚ್ಚೆ, ಗಂಜಲವನ್ನು ಸಂಪೂರ್ಣ ತೊಡೆದು ಹಾಕಿದ, ಆಂಟಿ-ಸೆಪ್ಟಿಕ್ ಸಮಾಜ, ಭಾರತದಲ್ಲಿ ಮಾನವ ಸಂಬಂಧ ಗಂಜಲದಲ್ಲಿ ಕೆಸರಿನಲ್ಲಿ ಬೆಳೆಯುತ್ತದೆ- ಕಾಲು ಹೂತು ಹೋಗಲೂಬಹುದು, ಹೂವೂ ಬಿಡಬಹುದು. ಆದ್ದರಿಂದ ಸ್ಟೂ‌ಅರ್ಟ್ ಎಷ್ಟೊಂದು ಅನುಭಾವಪರವಾದ ಭಾರತವನ್ನು ಪ್ರೀತಿಸಿದರೂ, ಅನುಭಾವಕ್ಕೆ ಪೂರ್ವವಾದ ಉಚ್ಚೆ ಕೆಸರಿನ ವಾಸನೆಯಲ್ಲಿ ಬೆಳೆದ ಜೀವನದ ತೀವ್ರತೆಯನ್ನು ಅನುಭವಿಸಲಾರ. ಕೇಶವನಿಗೆ ಗೊತ್ತು: ತಾನು ಕಾಲು ಹೂತವನು. ಆದರೆ ಭಾರತದ ನೆಲದಲ್ಲಿ ಜಿಗಿದವರು ಇದ್ದಾರೆ; ಉರಿಯುವ ಬಂಡೆಯ ಮೇಲೆ ದಾಹದಲ್ಲಿ ಕೂತು ಹುಳ ಹುಪ್ಪಟೆ ಸಹಿತವಾಗಿ ಸಮಸ್ತ ಲೋಕವನ್ನೂ ಪ್ರೇಮದಿಂದ ನೋಡಿ ಮೂಕರಾದವರೂ ಇದ್ದಾರೆ ಎಲ್ಲವನ್ನೂ ನಿಯಂತ್ರಿಸಿದ, ನಿರ್ಮಲವಾದ ಸ್ಟೂ‌ಅರ್ಟ್ ಬೆಳೆದ ಭೂಮಿಯಲ್ಲಿ ಸಂತರು ಹುಟ್ಟುವುದಿಲ್ಲ- ಸಭ್ಯರು, ಮಾನವಹಿತೈಷಿಗಳು ಹುಟ್ಟುತ್ತಾರೆ.

ಸ್ಟೂ‌ಅರ್ಟ್ ತಾನು ಎಷ್ಟು ಅತೃಪ್ತನೆಂದು ಅಂದರೂ ಅವನ ಜೀವನದಲ್ಲೊಂದು ನಿಯತಿಯಿದೆ. ತನ್ನ ಹಾಗೆ ಅವನು ಮಂಕುಬಡಿದು ಒಂದರಮೇಲೊಂದು ಸಿಗರೇಟ್ ಸೇದುತ್ತ ಕಿಂಕರ್ತವ್ಯ ಮೂಢನಾಗಿ ಶಾಪಗ್ರಸ್ತನಂತೆ ಕೂತಿರೊದನ್ನ ಕೇಶವ ಕಂಡಿಲ್ಲ. ತನ್ನ ಜೀವನದ ಪ್ರತಿ ಕ್ಷಣವನ್ನೂ ಡೈರಿಯಲ್ಲಿ ಮುಂಚಿತವಾಗಿ ಬರೆದಿಟ್ಟಂತೆ ವಿವೇಚಿಸಿ ಜೀವಿಸುತ್ತಾನೆ. ಪ್ರತಿವರ್ಷ ಬೇಸಿಗೆ ರಜದಲ್ಲಿ ಯೂರೋಪಿಗೆ ಬೆಟ್ಟಗಳನ್ನು ಹತ್ತಲು ಹೋಗುತ್ತಾನೆ. ಸಭ್ಯನ ಮುಖ್ಯ ಗುರಿ: ತನ್ನಿಂದ ಪರರಿಗೆ ನೋವಾಗಬಾರದು, ಅನ್ಯಾಯವಾಗಬಾರದು; ಹಂಗಿನಲ್ಲೂ ಇರುವುದು ಬೇಡ, ಇಡುವುದೂ ಬೇಡ. ಮೊದಲನೆಯ ಬಿಯರನ್ನು ಕೇಶವ ಕೊಂಡು ತಂದರೆ ಎರಡನೆಯದನ್ನು ಸ್ಟೂ‌ಅರ್ಟ್ ಕೊಳ್ಳುತ್ತಾನೆ. ಊಟಕ್ಕೆ ಕರೆದರೆ ತಿರುಗಿ ಕರೆಯುತ್ತಾನೆ. ಯಾರನ್ನಾದರೂ ದಾಟಿ ಹೋಗಬೇಕಾಗಿ ಬಂದರೆ ‘ಕ್ಷಮಿಸು’ ಎನ್ನುತ್ತಾನೆ. ತೇಗುವುದಿಲ್ಲ, ಗಟ್ಟಿಯಾಗಿ ಮಾತಾಡುವುದಿಲ್ಲ. ಮಾತಿನ ನಡುವೆ ಕೆಮ್ಮಬೇಕಾಗಿ ಬಂದರೆ, ಬಲಾತ್ಕಾರವಾಗಿ ಸೀನಲೇಬೇಕಾದರೆ, ‘ಕ್ಷಮಿಸಿ’ ಎಂದು ಹೇಳುತ್ತಾನೆ. ಸಂಭೂಗದಲ್ಲೂ ಸಂಭೋಗದಲ್ಲೂ ಈ ಜನ ಸಭ್ಯತೆಯ ಗೆರೆ ದಾಟುತ್ತಾರೊ ಇಲ್ಲವೊ. ಸ್ಟೂ‌ಅರ್ಟ್ ಅದಕ್ಕೆ ಕಾರಣ ತಮ್ಮದು ಮರ್ತಕರವರ್ತಕರ ದೇಶವಾದ್ದರಿಂದ ಎನ್ನುತ್ತಾನೆ. ಈ ನಯ, ಈ ಸಭ್ಯತೆ-ಸಲೆಸ್ಮನ್ಶಿಪ್ಸೇಲ್ಸ್‌ಮನ್‌ಶಿಪ್ ಎಂದು ತನ್ನ ದೇಶವನ್ನು ಅಲ್ಲಗಳೆದುಕೊಳ್ಳುತ್ತಾನೆ. ಇವರು ಕೊಚ್ಚಿಕೊಳ್ಳುವುದನ್ನು ಅವನು ಕಂಡಿಲ್ಲ. ಒಂದು ದಿನ ಯೂನಿವರ್ಸಿಟಿಯ ‘ಮರ್‌ಮೈಡ್’ ಬಾರಿನಲ್ಲಿ ಬಿಯರ್ ಕುಡಿಯುತ್ತ ಸ್ಟೂ‌ಅರ್ಟ್ ಹೇಳಿದ್ದ :
“ಅತ್ಮಜ್ಞಾನ ಪರಮಾರ್ಥಗುರಿಯೆಂದು ಜಗತ್ತಿಗೆ ಮೊದಲು ಹೇಳಿದ ದೇಶ ಭಾರತ.”
“ಕೇಶವ ಅದಕ್ಕೆ, “ಆತ್ಮಜ್ಞಾನ-ನಿಜ-ಸಂತರಿಗೆ, ಅನುಭಾವಿಗಳಿಗೆ ಮಾತ್ರ. ಆದರೆ ಸಭ್ಯತೆಗೆ ಅವಶ್ಯವಾದ ಆತ್ಮವಿಮರ್ಶೆ ನಮ್ಮಲ್ಲಿ ಇಲ್ಲ. ಸಮಾಜದ ಹಿತದ ದೃಷ್ಟಿಯಿಂದ ಆತ್ಮಜ್ಞಾನಕ್ಕಿಂತ ಆತ್ಮವಿಮರ್ಶೆ ಮುಖ್ಯ… ನಮ್ಮದು ಜಗತ್ತಿನಲ್ಲಿ ತೊಡಗಿದವರಿಗೆ ಒಂದು ಸತ್ಯವಾದರೆ, ತೊಡಗದವರಿಗೆ ಇನ್ನೊಂದು” ಎಂದಿದ್ದ.
ಮಾತು ಗಾಢವಾದ ವಿಚಾರದ ಸುತ್ತ ಸುತ್ತಿದ್ದರೂ ಒಂದು ಕ್ಷಣ ಡ್ರಾಫ್ಟ್ ಬಿಯರಿನ ಹಿತವಾದ, ದಾಹವನ್ನು ಸಂಪೂರ್ಣ ಹಿಂಗಿಸುವ ತಂಪಿನಲ್ಲಿ ಜೀವಕ್ಕೆ ಸುಖವಾಗಿತ್ತು. ಅಗ್ಗಿಷ್ಟಿಕೆಯಲ್ಲಿ ಕಲ್ಲಿದ್ದಲಿನ ಬೆಂಕಿ. ಕೆಂಪು ಹೂಗಳ ಚಿತ್ರವಿರುವ ಕರ್ಟನ್‌ಗಳನ್ನೆಳೆದ ಮಂದವಾದ ಬೆಳಕಿನ ಪುಟ್ಟ ಬಾರು. ಮೂಲೆಯ ಸೋಫದಲ್ಲಿ ಯುವಕನೊಬ್ಬನ ಎದೆಯ ಮೇಲೆ ತಲೆಯಿಟ್ಟು ಅರ್ಧ ಕಣ್ಣು ಮುಚ್ಚಿ ಸಿಗರೇಟನ್ನು ಸೇದುತ್ತಿರುವ ಹುಡುಗಿಯನ್ನು ಕಂಡರೆ ಆಸೆಯಾಗಲಿ ಅಸೂಯೆಯಾಗಲಿ ಇವತ್ತು ಕೆರಳುವುದಿಲ್ಲ. ಬಾರ್‌ಮನ್ ಬಟ್ಟೆಯಿಂದ ಗಾಜುಗಳನ್ನು ಒರಸುತ್ತ, ಉಜ್ಜುತ್ತ, ಮೃದುವಾಗಿ ಸಿಳ್ಳೆಹಾಕುತ್ತಾನೆ. ಸೀಸೆಗಳಲ್ಲಿ ಶೆರಿ, ವೈನ್‌ಗಳನ್ನು ತುಂಬಿಟ್ಟ, ವಿಸ್ಕಿ, ಜಿನ್, ಬ್ರಾಂಡಿಯ ಸೀಸೆಗಳನ್ನು ತಲೆಕೆಳಗಾಗಿ ನಿಲ್ಲಿಸಿದ ಬಾರಿನಲ್ಲೊಂದು ಮತ್ಸ್ಯದೇಹದ ಕನ್ನಿಕೆಯ ಬೊಂಬೆ ಸೂಕ್ಷ್ಮವಾದ ದಾರದ ತುದಿಯಲ್ಲಿ ಸುತ್ತುತ್ತಿದೆ. ಸ್ಟೂ‌ಅರ್ಟ್ ಎರಡು ಗ್ಲಾಸುಗಳನ್ನೂ ಎತ್ತಿಕೊಂಡು ಹೋಗುತ್ತಾನೆ….ಬಾರ್‌ಮನ್ ಕಣ್ಣುಹೊಡೆಯುತ್ತಾನೆ….ಸ್ಟೂ‌ಅರ್ಟ್ ‘ಎರಡು ಬಿಟ್ಟರ್’ ಎನ್ನುತ್ತಾನೆ…..ಬಾರ್‌ಮನ್ ಪಂಪ್‌ಮಾಡಿ ಬಿಯರನ್ನು ತುಂಬಿಸಿಕೊಡುತ್ತಾನೆ….
ಬಾರಿನಿಂದ ಹೊರಗೆ ಬಂದ ಕ್ಷಣ ಜೀವ ಮತ್ತೆ ಒಣಗುತ್ತದೆ. ಚಳಿ, ಕತ್ತಲೆ, ಫಾಗ್, ಭಾರತದ ದಾರಿಯಲ್ಲಿ ಬೇಡುತ್ತ ನಿಂತ ಭಿಕ್ಷುಕರಂತೆ ಕಾಣುವ, ಕಪ್ಪು ಕಾಷ್ಠಗಳಾಗಿ ಒಣಗಿದ, ಹತಭಾಗ್ಯ ಮರಗಳು- ಬೀದಿಯ ದೀಪದಲ್ಲಿ. ಒದ್ದೆ, ಚಳಿ, ಫಾಗ್, ಕೇಶವ ಗ್ಲೌಸ್ ಧರಿಸಿ ಕೋಟಿನ ಜೇಬಿನಲ್ಲಿ ಕೈಹಾಕಿ ನಡುಗುತ್ತಾನೆ. “ಙou ಚಿಡಿe ಛಿಚಿಣಛಿhiಟಿg uಠಿ ಚಿ ಛಿhiಟಟ, ಃಥಿe-see ಥಿou” ಎಂದು ಸ್ಟೂ‌ಅರ್ಟ್ ತನ್ನ ಡಿಗ್ಸ್‌ಗೆ ವೇಗವಾಗಿ ನಡೆಯುತ್ತಾನೆ. ಕೇಶವನಿಗೆ ತನ್ನ ಮತ್ತು ಅವನ ಜೀವನದ ನಡುವಿನ ವ್ಯತ್ಯಾಸ ಮರುಕಳಿಸಿ ವ್ಯಥೆಯಾಗುತ್ತದೆ. ಕರುಬುವಂತಾಗುತ್ತದೆ. ಈತನ ಶಕ್ತಿ ಸ್ವಮಗ್ನವಾಗಿ ರಗಳೆಯಲ್ಲಿ ವಯ್ಯವಾಗುವುದಿಲ್ಲವ್ಯಯವಾಗುವುದಿಲ್ಲ. ಮನೆಯಲ್ಲಿ ತಾಯಿ ತಂದೆಯ ಜೊತೆಯೂ ಅವನ ನಡೆವಳಿಕೆ ಹೀಗೆಯೇ ಸಭ್ಯವಾಗಿರಬೇಕು. ಬೆಳಿಗ್ಗೆ ಎದ್ದು ಗುಡ್ ಮಾರ್ನಿಂಗ್, ರಾತ್ರೆ ಮಲಗುವಾಗ ಗುಡ್‌ನೈಟ್. ತನ್ನದು ಮನೆಯಲ್ಲಿ ನಿತ್ಯದ ರಗಳೆ, ಜಗಳ. ಕಾಲೇಜಿಗೆ ಹೋದರೂ ಇದು ತಪ್ಪಿದ್ದಲ್ಲ. ಲೆಕ್ಚರರು ಕೂರುವ ಹರಿದ ಸೋಫ. ಮೂರು ಕಾಲಿನ ಕುರ್ಚಿಗಳ ಆ ಸ್ಟ್ಯಾಫ್ಸ್ಟಾಫ್- ರೂಮು ಇನ್ನೊಂದು ನರಕ. ಅಲ್ಲಿ ಲಿಂಗಾಯಿತ, ಬ್ರಾಹ್ಮಣ, ಒಕ್ಕಲಿಗ, ಮತ್ತು ಇತರೆ ಎಂದು ಅಸೂಯೆಯ ಬೆಂಕಿ ಉರಿಯುವ ನಾಲ್ಕು ನರಕಗಳು. ಎಷ್ಟು ಬೇಡವೆಂದರೂ ಪ್ರತಿಯೊಬ್ಬನೂ ಈ ಯಾವಿದಾದರೊಂದುಯಾವುದಾದರೊಂದು ನರಕದಲ್ಲಿ ಬೇಯಲೇಬೇಕು. ಇಬ್ಬರು ಒಟ್ಟಾದರೆ ಮೂರನೆಯವನ ಮೇಲೆ ಏನಾದರೂ ಅಪಪ್ರಚಾರ ನಡೆಯಬೇಕು. ಒಂದು ಗುಂಪಿನಲ್ಲಿ ಮಾತಾಡುತ್ತ ಕೂತಿದ್ದು, ಬಿಟ್ಟೆದ್ದು, ಅಷ್ಟು ದೂರ ಹೋಗೋದರಲ್ಲೆ ತನಗೆ ಗೊತ್ತು-ಯಾರೋ ಬೆನ್ನ ಹಿಂದೆ ತನ್ನ ಬಗ್ಗೆ ಮಾತಾಡ್ತಿದಾರೆ ಅಂತ. ಅದಕ್ಕೇ ತನಗೆ ತಿರುಗಿ ತಿರುಗಿ ನೋಡ್ತಾ ನಡೆಯೋ ಅಭ್ಯಾಸ. ಇಂಗ್ಲೆಂಡಿಗೆ ಬಂದ ಮೇಲೂ ಅದು ಬಿಟ್ಟಿಲ್ಲ. ಗುಂಪಿನಲ್ಲಿದ್ದು ಎದ್ದು ಹೋಗುವಾಗ, ದಾರಿಯಲ್ಲಿ ನಡೆಯುವಾಗ ತನ್ನ ಹಾಗೆ ತಿರುಗಿ ತಿರುಗಿ ನೋಡ್ತಾ ನಡೆಯೋ ಒಬ್ಬನನ್ನೂ ಇಲ್ಲಿ ತಾನು ಕಂಡಿಲ್ಲ. ಮನೆಯಲ್ಲಿ ಮತ್ತು ಕಾಲೇಜಿನಲ್ಲಿ ಅವನೊಂದು ಆತ್ಮ ಮರುಕದ, ಪರಸ್ಪರ ಅಸೂಯೆಯ, ಪರಚಿಕೊಳ್ಳುವ, ಹಲ್ಲು ಮಸೆಯುವ ನರಕದಲ್ಲಿ ಬದುಕುತ್ತಿದ್ದೇನೆಂದು; ಅದರಿಂದ ತಪ್ಪಿಸಿಕೊಳ್ಳಲೆಂದು- ತಪಸ್ಸು ಮಾಡಿ, ಸತತ ಪ್ರಯತ್ನಿಸಿ, ಮನೆಯವರನ್ನು ಅಪಾರವಾದ ಕಷ್ಟಕ್ಕೊಡ್ಡಿ, ಅತ್ಯಂತ ಸ್ವಾರ್ಥದಲ್ಲಿ ಇಂಗ್ಲೆಂಡಿಗೆ ಬಂದಿದ್ದಾನೆ. ‘ಘಟ್ಟ ಹತ್ತಿದರೂ ಹುಟ್ಟಿದ ಗುಣ ಬಿಟ್ಟೀತೆ’, ಎನ್ನುವ ಅಪ್ಪನ ಮಾತು ಆಗಾಗ್ಗೆ ನೆನಪಾಗುತ್ತದೆ.
*
*
*
‘ನಾವೀಗ ಆಕ್ಸ್‌ಫರ್ಡ್ ಸ್ಟ್ರೀಟಿನಲ್ಲಿದ್ದೇವೆ. ಫೇಮಸ್ ಶಾಪಿಂಗ್ ಸೆಂಟರ್’ ಎಂದ ಸ್ಟೂ‌ಅರ್ಟ್. ರೋಡಿನ ಎರಡು ಮಗ್ಗುಲುಗಳಿಗೂ ಸಾಲಾಗಿ ಇದ್ದ ಅಂಗಡಿಗಳ ವೈಭವ ಕೇಶವನ ಮೇಲೆ ಅಷ್ಟೊಂದು ಪರಿಣಾಮ ಮಾಡಲಿಲ್ಲ. ವೆಸ್ಟ್ ಮಿನಿಸ್ಟರ್ ಅಬ್ಬೆ, ಸೆಂಟ್‌ಪಾಲ್ಸ್ ಕಥೆಡ್ರಿಲ್, ಹೈಡ್‌ಪಾರ್ಕ್, ಬ್ಲೂಮ್ಸ್‌ಬರಿ, ಚೆಲ್ಸೀ-ಇಲ್ಲಿ ಎಲ್ಲಾದರೂ ಹೋಗಿದ್ದರೆ ಇಂಗ್ಲಿಷ್ ಸಾಹಿತ್ಯದ ಬೆಲ್ ಹೊಡೆದು ಕಣ್ಣು ಗ್ರಹಿಸುತ್ತಿತ್ತು. ತನ್ನ ಮನಸ್ಸು ಪೂರ್ವನಿಶ್ಚಿತವಾದದ್ದನ್ನು ಮಾತ್ರ ಗ್ರಹಿಸುತ್ತದೆ. ಕಾಣದ ಬಾಗಿಲನ್ನು ತೆರೆದು, ಹೊಸ ಲೋಕ ಕಂಡು ಬೆರಗಾದಂತಹ ಅನುಭವವೇ ಇಲ್ಲ. ಕೊಲಂಬಸ್ ತಾನು ಕಂಡ ಹೊಸ ಲೋಕವನ್ನೂ ತಾನು ಹುಡುಕಿಕೊಂಡು ಹೊರಟ ಇಂಡಿಯಾ ಎಂದು ತಿಳಿಯಲಿಲ್ಲವೆ? ಸ್ಟೂ‌ಅರ್ಟ್‌ಗೆ ಹೇಳಬೇಕು- ಹುಡುಕಿದರೆ ಸಿಗುವುದು ನಾವು ಹುಡುಕಿದ್ದು, ನಮ್ಮ ಮನಸ್ಸಿನಲ್ಲಿ ಪೂರ್ವನಿಶ್ಚಿತವಾದದ್ದು. ನಾವು ಅರಿಯದಿದ್ದುದು, ಕಾಣದಿದ್ದುದು ನಮ್ಮ ಅಂತರಂಗದ ಲೋಕಕ್ಕೆ ಬಂದು ಜಡಿದ ಬಾಗಿಲುಗಳ ತೆರೆದು, ಇನ್ನೊಂದು ಬೆಳಗು, ಇನ್ನೊಂದು ಸಂಜೆಯನ್ನು ನೋಡಿ ಬೆರಗಿನಲ್ಲಿ ತನ್ಮಯವಾಗುವುದು ಬೇರೆ ರೀತಿ. ಅವ್ಯಕ್ತ ಎದುರಾದಾಗಲೂ ನಾವು ನಮಗೆ ಮೊದಲೇ ವ್ಯಕ್ತವಾದದ್ದಷ್ಟನ್ನು ಮಾತ್ರ ಕಾಣುತ್ತೇವೆ. ಅವ್ಯಕ್ತವನ್ನು ಕಾಣುವೆನೆಂದು ನಾನು ಇಂಗ್ಲೆಂಡಿಗೆ ಬಂದೆ-ಆಗಲಿಲ್ಲ. ಕೆಸ್ಲರ್ ಇಂಡಿಯಾಕ್ಕೆ ಬಂದು ಯೋಗಿಯೊಬ್ಬನನ್ನು ಭೆಟ್ಟಿಯಾದಾಗ ಮೂಗು ತೋಡುತ್ತಾ ಕೂತೊಬ್ಬನನ್ನು ಗಮನಿಸಿದ ಹಾಗೆ ಇಲ್ಲಿ ನನಗೆ ಮೈಥುನದ ಚಿತ್ರಗಳು ಮಾತ್ರ ಕಾಣುತ್ತವೆ. ಆಮೆ ತನ್ನ ಚಿಪ್ಪನ್ನು ಹೊತ್ತು ತಿರುಗುವಂತೆ ನನ್ನ ಭೂತದ ಜೊತೆ ನಾನು ಆಕ್ಸ್‌ಫರ್ಡ್ ಸ್ಟ್ರೀಟಿನಲ್ಲಿ ಅಲೆಯುತ್ತಿದ್ದೇನೆ. ಸ್ಟೂ‌ಅರ್ಟ್ ಇಂಡಿಯಾಕ್ಕೆ ಬಂದು ಯೋಗಿಗಳನ್ನು ಸಂಧಿಸಿದರೂ ತನ್ನ ಸಭ್ಯ ಲೋಕದ ಗೆರೆ ದಾಟಲಾರ. ಕೆಸ್ಲರನಂತೆ- ‘ಈ ಭೆಟ್ಟಿಯನ್ನು ನಾನು ಎದ್ದು ಮುಗಿಸಬೇಕೊ, ಯೋಗಿ ತಾನೇ ಎದ್ದು ಇನ್ನು ವೇಳೆಯಾಯಿತೆಂದು ಮುಗಿಸುತ್ತಾನೊ, ಇಲ್ಲಿ ಆತಿಥ್ಯದ ನಿಯಮಗಳೇನೊ’ ಎಂದು ಮಾತಿನ ನಡುವಿನ ಮೌನಗಳಲ್ಲಿ ಚಿಂತಿಸುತ್ತಾ ಕೂರುತ್ತಾನೆ. ಇದು ಟ್ರಾಜಿಡಿ. ನಾನು ಎಲ್ಲಿ ಹೋದರೂ ನನ್ನ ತಮ್ಮನ ಭವಿಷ್ಯ ಸಾವಾಗಲಿ ಉದ್ಧಾರವಾಗಲಿ- ನನ್ನ ಇಡಿಯ ಬಾಳ್ವೆಯ ಮೇಲೆ ತೀರ್ಪಿನಂತೆ ಕಾಡುತ್ತದೆ.

ನಿನ್ನೆ ತಮ್ಮನಿಂದ ಕಾಗದ ಬಂದಮೇಲೆ ನೊಣಚಿತೊಣಚಿ ಹೊಕ್ಕ ಹೋರಿಯಂತೆ ಒದ್ದಾಡುತ್ತಿದ್ದೇನೆ; ಕಣ್ಣು ತೆರೆದು ಈ ಹೊಸ ಸಮಸ್ಯೆಯನ್ನು ಆಳವಾಗಿ ನೋಡಲಾರದೆ ಹೋಗಿದ್ದೇನೆ. ಅದರಿಂದ ತಪ್ಪಿಸಿಕೊಳ್ಳಲೆಂದು ಸ್ಟೂ‌ಅರ್ಟ್ ಜೊತೆ ಲಂಡನ್ನಿಗೆ ಬಂದೆ. ಇಂತಹ ವಿಷಯಗಳನ್ನು ತೋಡಿಕೊಳ್ಳುವ ಆಪ್ತತೆ ನನಗೆ ಸ್ಟೂ‌ಅರ್ಟ್ ಜೊತೆ ಇಲ್ಲ. ಇಂಗ್ಲೆಂಡಿಗೆ ನಾನು ಹೊರಡುವಾಗ ಮಾಧು ಸ್ವಂತ ಇಚ್ಛೆಯ ಮೇಲೆ ಶೂ- ಕಂಪೆನಿ ಒಂದರಲ್ಲಿ ಹೋಗಿ ಸೇಲ್ಸ್‌ಮನ್ ಆಗಿ ಸೇರಿಕೊಂಡ. ತಿಂಗಳಿಗೆ ಸಂಬಳ ಇನ್ನೂರು ರೂಪಾಯಿ. ‘ಶೂ ಅಂಗಡಿಯಲ್ಲಿ ಕೆಲಸಕ್ಕೆ ಸೇರಬೇಕಾಯಿತೆ ನನ್ನ ಮಗ, ಸತ್ಕುಲದಲ್ಲಿ ಹುಟ್ಟಿ ಅವರಿವರ ಕಾಲಿಗೆ ಪಾದರಕ್ಷೆ ಜೋಡಿಸಬೇಕೆ’ ಎಂದು ಅಮ್ಮ ದುಃಖಿತಳಾದಳು. ನಾನು ಅವಳನ್ನು ಗದರಿಸಿದೆ. ದೊಡ್ಡ ತಂಗಿ ಮಿಡ್ಲ್‌ಸ್ಕೂಲಿನಲ್ಲಿ ಉಪಾಧ್ಯಾಯಿನಿಯಾದಳೆಂದು ನನಗಿನ್ನಷ್ಟು ಹರ್ಷವಾಯಿತು. ಇಷ್ಟು ದಿನ ಮುಖ ತೋರಿಸಿದ ಶ್ಯಾಮಕಕ್ಕ ಮನೆಗೆ ಬಂದು ರದ್ಧಾಂತರಾದ್ಧಾಂತ ಮಾಡಿದ: ವೈದಿಕರ ಮನೆತನದಲ್ಲಿ ಹುಟ್ಟಿದ ಹುಡುಗ ಶೂ ಅಂಗಡೀಲಿ ಕೆಲಸ ಮಾಡಕೂಡದು ಅಂತ. ನಾನು ಸಿಟ್ಟನ್ನು ನುಂಗಿ ಸುಮ್ಮನಾದೆ ಇದರಲ್ಲಿ ಎಲ್ಲೂ ನನ್ನ ತಪ್ಪಿಲ್ಲ. ನಾನು ಇಂಗ್ಲೆಂಡಿಗೆ ಹೋಗುತ್ತೇನೆ ಎಂದಾಗ ಅಮ್ಮ ಶ್ಯಾಮಕಕ್ಕ ನಾನು ಸ್ವರ್ಥಿಯೆಂದುಸ್ವಾರ್ಥಿಯೆಂದು ತಿಳಿದಿದ್ದರೆ ಅದು ಅವರ ತಪ್ಪು- ನನ್ನದಲ್ಲ. ಇಷ್ಟು ದಿನ ನಾನು ದುಡಿದೆ. ಈಗ ಮಾಧು ತನ್ನ ಯೋಗ್ಯತೆಗೆ ತಕ್ಕ ಕೆಲಸ ಮಾಡಿ ಮನೆಯವರನ್ನು ನೋಡಿಕೊಳ್ಳೋದರಲ್ಲಿ ಏನು ತಪ್ಪಿದೇಂತ ನನ್ನೊಳಗೇ ವಾದ ಹೂಡಿದೆ. ಅಮ್ಮ ದೇವರ ಮನೆಯ ಕತ್ತಲೆಯ ಮೂಲೆಗಳಲ್ಲಿ ಕೂತು ನಿತ್ಯ ಅತ್ತಳು……… ದೇವರಿಗೆ ನಂದಾದೀಪ ಹಚ್ಚಿ ಮಗನ ಬುದ್ಧಿಯನ್ನು ಸರಿಯಾಗಿ ಕಾಯಪ್ಪ ಎಂದು ಬೇಡಿಕೊಂಡಳು. ಹೋಗುವ ಮುಂಚೆ ಮದುವೆಯಾಗೆಂದು ದುಂಬಾಲು ಬಿದ್ದಳು. ನೀನು ಬರೋವರೆಗೆ ನಾನು ಬದುಕಿರುತ್ತೇನೋ, ಸತ್ತಿರುತ್ತೇನೋ ಎಂದು ಹಲುಬಿದಳು.

ಇಂಗ್ಲೆಂಡಿಗೆ ಬಂದ ಮೇಲೆ ತಿಂಗಳಿಗೆ ಹತ್ತು ಪೌಂಡಿನಂತೆ ಉಳಿಸಿ ಒಬ್ಬ ಕಾಳ ಸಂತೆಯ ಪಂಜಾಬಿಯೊಬ್ಬನನ್ನು ಹಿಡಿದು ಮನೆಗೆ ಇನ್ನೂರು ರೂಪಾಯಿಗಳಂತೆ ಕಳಿಸುತ್ತ ಬಂದೆ. ತಾಯಿ ತಂಗಿಯರಿಗೆ ಇದರಿಂದ ಹರ್ಷವಾಗಿರಬೇಕು. ನನಗೂ ಈ ಹಣ ಕಳಿಸುತ್ತಾ ಬಂದದ್ದರಿಂದ ನನ್ನ ಜವಾಬ್ದಾರಿ ಮುಗೀತು ಎನ್ನುವ ಸಮಾಧಾನ. ಜವಾಬ್ದಾರಿಯುಳ್ಳ ನನ್ನಂಥ ಮನುಷ್ಯ ಇರುವಂತಹ ಸ್ವಾರ್ಥದ ನರಕದಲ್ಲಿ ಪೋಲಿ ಫಟಿಂಗರು ಇರುವುದಿಲ್ಲ.

ಒಂದು ದಿನ ಇದ್ದಕ್ಕಿದ್ದಂತೆ ತಾಯಿಯಿಂದ ಕಾಗದ ಬಂತು. ಮಾಧವ ಕೆಲಸವನ್ನು ಬಿಟ್ಟ ಅಂತ. ನಂತರ ಮಾಧವನಿಂದ ಕಾಗದಬಂತು- ತನಗಿನ್ನು ಮುಂದೆ ಇಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಇಷ್ಟು ದಿನ ಗುಪ್ತವಾಗಿದ್ದ ತನ್ನ ಯೋಗ್ಯತೆ ಬೆಳಕಿಗೆ ಬರುವ ಕಾಲ ಬಂದಿದೆ ಎಂತ. ‘ನೀನು ನಂಬದೇ ಇರಬಹುದು ಅಣ್ಣ ನಾನೊಂದು ಕಾದಂಬರಿ ಬರೆದಿದೀನಿ. ಒಬ್ಬ ಪಬ್ಲಿಶರ್ ಅದನ್ನು ಓದಿ ತುಂಬ ಚೆನ್ನಾಗಿದೆ ಅಂದಿದಾರೆ. ಅದು ಪ್ರಕಟವಾಗಿ ಬಂದ ಹಣವನ್ನು ಅಮ್ಮನಿಗೆ ಕೊಡುತ್ತೇನೆ. ಇನ್ನು ಮುಂದೆ ಹೀಗೆಯೇ ಬರೆದು ದುಡಿಯುತ್ತೇನೆ.’ ಕಾಗದ ಓದಿ ನನಗೆ ವಿಚಿತ್ರವಾದ ಅನುಭವ. ಕಡು ಕೋಪ ಇತ್ಯಾದಿ….. ಆದರೆ ಒಳಗೆ ಅಸೂಯೆಯೂ ಆಗದೆ ಇರಲಿಲ್ಲ. ನನ್ನಲ್ಲಿ ಇಲ್ಲದೇ ಇರುವ ಅವ್ಯಕ್ತವಾದ್ದೊಂದು ಮಾಧುವಿನಲ್ಲಿ ಇರಬಹುದು, ಅವನ ಜೀವನ ನನ್ನದನ್ನು ಅಲ್ಲಗಳೆದು ಜಗತ್ತಿಗೆ ಹೇಯವೆಂದು ಎತ್ತಿತೋರಬಹುದು ಅಂತ. ಸ್ವಲ್ಪ ದಿನಗಳ ಮೇಲೆ ತಂಗಿ ವಿಮಲೆಯಿಂದ ಕಾಗದ ಬಂತು: ‘ಅಣ್ಣಾ- ಮಾಧು ಅಮ್ಮನನ್ನ ಗೋಳಾಡಿಸ್ತ ಇದ್ದಾನೆ. ತೋಟ ಮಾರಿ ಬಂದ ಹಣ ಅಮ್ಮನ ಹೆಸರಲ್ಲಿ ಬ್ಯಾಂಕಲ್ಲಿ ಇದೆಯಲ್ಲ ಆ ಐದು ಸಾವಿರ ಬೇಕೂಂತ. ಅವನ ಇಬ್ಬರು ಸ್ನೇಹಿತರು ಐದು ಐದು ಸಾವಿರ ಕೊಡ್ತಾರಂತೆ. ಮಾಧು ಹದಿನೈದು ಸಾವಿರದಲ್ಲಿ ಒಂದು ಪ್ರೆಸ್ ಕೊಳ್ಳುತ್ತಾನಂತೆ. ಅದರಲ್ಲಿ ದುಡಿದು ಬಂದದ್ದನ್ನೆಲ್ಲ ಮನೆಗೆ ಕೊಡ್ತೇನೆ, ನಿಮ್ಮ ಹಣ ಗಟ್ಟಿಯಾಗಿರುತ್ತೆ, ಬ್ಯಾಂಕಿನಲ್ಲಿ ಹಣ ಕೊಳೆಯೋಕ್ಕಿಂತ ಪ್ರೆಸ್ ಇಟ್ಟರೆ ಲಾಭವಿದೆ ಅಂತ ಪೀಡಿಸ್ತಿದಾನೆ. ಅಮ್ಮ ಏನು ಮಾಡೋದು ತೋಚದೆ, ನಿನಗೆ ಬರೆಯೋಕೆ ಹೆದರಿ ಸುಮ್ಮನೇ ಕೂತಿದಾಳೆ. ಮಾಧುವಿನ ಪ್ಲಾನ್ ತನ್ನ ಕಾದಂಬರಿಗಳನ್ನು ತನ್ನ ಪ್ರೆಸ್ಸಿನಲ್ಲೆ ಅಚ್ಚು ಮಾಡಬಹುದೂಂತ. ಈಗ ಅವನ ಕಾದಂಬರಿ ಅಚ್ಚಾಗಿದೆ. ಈಗ ಅವನಿಗೆ ಜುಬ್ಬ ಪೈಜಾಮ ಹಾಕಿದ ಬರಹಗಾರ ಗೆಳೆಯರು. ಅವರ ಜೊತೆ ಹೋಗಿ ಕುಡೀತಾನೇಂತಲೂ ಒಂದು ಸುದ್ದಿ’….. ಇತ್ಯಾದಿ.

ನಾನು ಧಗಧಗನೆ ಉರಿದು ಅಮ್ಮನಿಗೆ ಬರೆದೆ- ಮಾಧುವಿಗೆ ಕಾಸುಕೊಡಬೇಡ ಅಂತ. ಮಾಧು ಅದಕ್ಕೆ ಬರೆದ: “ನೀನು ಮನೆಯಲ್ಲಿರುವಷ್ಟು ದಿನ ನನ್ನ ಸುಪ್ತ ಶಕ್ತಿ ನಿನ್ನ ವಿಷಪೂರಿತ, ಅನಿಷ್ಠ ವ್ಯಕ್ತಿತ್ವದ ತುಳಿತದಿಂದ ಬಾಡಿತು. ಒಣಗಿತು. ಹುಳದಂತೆ ನಾನು ಬದುಕಿದೆ. ನನಗೆ ಸಲ್ಲದ ಕೆಲಸಗಳನ್ನು ಮಾಡಿಕೊಂಡಿದ್ದೆ. ನೀನು ಹೋದ ಮೇಲೆ ನನ್ನ ಬಾಳು ಚಿಗುರಿತು. ಹೂ ಬಿಟ್ಟಿತು. ನನ್ನ ಇಬ್ಬರು ಗೆಳೆಯರು ನಾನು ಮುಂದೆ ಬಂದು ಅಮ್ಮನಿಗೂ ದುಡಿದು ಹಾಕುವಂತಹ ದಾರಿ ತೋರಿಸಿದರು. ನನ್ನ ಕ್ರಿಯಾಶಕ್ತಿಯೂ ಅರಳಿ ಒಂದು ಕಾದಂಬರಿ ಬರೆದೆ. ನಿನ್ನ ಕರಟಿರುವ ಕಾರ್ಪಣ್ಯದ ಕಠಿಣ ಹೃದಯಕ್ಕೆ ಇದರಿಂದ ಅಪಾರವಾದ ಅಸೂಯೆಯಾಗಿರಬೇಕು. ಜೀವಂತವಾದದ್ದು ಯಾವುದಿದ್ದರೂ ನೀನು ಕೊಲ್ಲುತ್ತಿ; ಪಕ್ಕದ ಮನೆ ಹುಡುಗಿ ನನ್ನಲ್ಲಿ ಅನುರಕ್ತಳಾದಳೆಂದು ನೀನು ಎಬ್ಬಿಸಿದ ಹುಯಿಲನ್ನು ನಾನು ಮರೆತಿಲ್ಲ. ಆದರೆ ನೀನು ಮಹಾ ನಿಸ್ವಾರ್ಥಿಯೆ? ನನಗೆ ತಿಳಿಯದೆಂದು ತಿಳಕೋಬೇಡ: ಮನೆಯವರಿಗೆ ಗೊತ್ತಾಗದಂತೆ ಬ್ಯಾಂಕಿನಲ್ಲಿ ಸ್ವಂತಕ್ಕೆಂದು ನೀನು ಐದುನೂರು ರೂಪಾಯಿಯನ್ನು ಕೂಡಿಸಿಕೊಳ್ಳಲಿಲ್ಲವೆ? ನನಗೆ ನಿನ್ನ ಬುದ್ಧಿಯಿಲ್ಲ. ಬಂದದ್ದೆಲ್ಲವನ್ನೂ ಎಲ್ಲ ಯುವಕರಂತೆ ಪೋಲು ಮಾಡಿದೆ ನಿಜ. ಎಲ್ಲರ ಕಣ್ಣಿಗೆ ನಾನು ಕೆಡುಕು; ನೀನು ಸಭ್ಯ. ಆದರೆ ನಿನಗೊಂದು ಆತ್ಮ ಇದ್ದರೆ ನಿನ್ನನ್ನೇ ನೀನೊಂದು ಪ್ರಶ್ನೆ ಕೇಳಿಕೊ- ನೀನು ಒಡ ಹುಟ್ಟಿದವನ ಜೊತೆ ನಡಕೊಂಡ ರೀತಿ ಸರಿಯೆ ಅಂತ? ಹಾಳಾಗಲಿ. ಇಗೊ ಈ ಕಾಗದ ಸೇರುವ ಒಳಗೆ ನಾನು ಈ ಮನೆಯನ್ನು ತ್ಯಜಿಸಿದ್ದೇನೆ. ನನ್ನ ಜೀವನದ ಬಗ್ಗೆಯಾಗಲಿ, ಸಾವಿನ ಬಗೆಗಾಗಲಿ ನೀನು ಚಿಂತಿಸೋದು ಬೇಡ. ನೀನು ಸುಖವಾಗಿರು. ನಿನ್ನಂತಹ ದೊಡ್ಡ ಮನುಷ್ಯನ ಕೀರ್ತಿಗೆ ಮಸಿ ಬಳಿಯುವಂತಹ ತಮ್ಮನಿದ್ದಾನೆನ್ನುವ ಅಪಕೀರ್ತಿ ನಿನಗೆ ತಟ್ಟದಿರಲಿ…….”
ಅಮ್ಮನಿಂದ ಜೊತೆಗೊಂದು ಕಾಗದ: ಮೊದಲಿನಿಂದ ಕೊನೆಯವರೆಗೆ ಗೊಳೋ….. ಹೆತ್ತ ಕರುಳು….. ಇತ್ಯಾದಿ……

ಘಳಿಗೆ ಈಗ ಪ್ರಾಪ್ತವಾಗಿದೆ. ಒಪ್ಪಿಕೊ, ನನ್ನ ತಮ್ಮ ಮಾಧು ನನ್ನ ಬಗ್ಗೆ ಬರೆದದ್ದು ಸಂಪೂರ್ಣ ನಿಜ. ಆದರೂ ಆ ಐದುನೂರು ರೂಪಾಯಿಯ ಗುಪ್ತಧನದ ವಿಷಯದಲ್ಲಿ ಮಾಧು ನನ್ನ ಬಗ್ಗೆ ನಿಷ್ಕರುಣೆಯಿಂದ ಮಾತಾಡಿದ ಎನ್ನಿಸತ್ತೆ… ಸ್ವಂತ ಸುಖ ಕಾಣದೆ ಮನೆಗೆ ಇಷ್ಟೊಂದು ದುಡಿದು, ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಸಂಚರಿಸಿ ಎಲ್ಲ ದೇವಸ್ಥಾನಗಳನ್ನು ನೋಡಿ ಬರಬೇಕೆಂಬ ಒಂದು ಹಂಬಲಕ್ಕಾಗಿ ಐದುನೂರು ರೂಪಾಯಿಗಳನ್ನು ಮುಚ್ಚಿಟ್ಟೆ- ಆದರೆ ಮಾಧು ಉದ್ಧಾರವಾಗಲಿ ಸಾಯಲಿ ಈ ಐದುನೂರು ರೂಪಾಯಿ ನನ್ನ ಅತ್ಯಂತ ಅಲ್ಪತೆಯ, ಕ್ಷುದ್ರತೆಯ ಕುರುಹೆಂದು ತಿಳಿಯುತ್ತಾನೆ. ನನ್ನ ವ್ಯಕ್ತಿತ್ವ ಭವಿಷ್ಯಕ್ಕೆ ಬಿಡುವ ಘೋರ ಚಿತ್ರಗಳಲ್ಲಿ ಇದೊಂದು ಅತಿ ಹೇಯವಾಗಿ ಉಳಿಯುತ್ತದೆ. ಏನು ಮಾಡಲಿ, ಏನು ಮಾಡಲಿ….

ಕೇಶವ ಕೈ ಹಿಸುಕಿಕೊಂಡ. ತಪ್ತನಿಗೆ ಶಾಂತಿಯಿಲ್ಲ. ತಪ್ತ ಮೊದಲು ತನ್ನ ಸಭ್ಯತೆಯನ್ನು ಕಳೆದುಕೊಳ್ಳುತ್ತನೆ; ನಂತರ ಸಂತನಾಗುವ ಯೋಗ್ಯತೆಯನ್ನು ಕಳೆದುಕೊಳ್ಳುತ್ತಾನೆ. ರಂಪ, ರಗಳೆಗಳಲ್ಲಿ ತಪ್ತನ ಒಳಜೀವನ ಮೊದಲು ತನ್ನ ಸೂಕ್ಷ್ಮತೆಯನ್ನು ಕಳೆದುಕೊಂಡು ಒರಟಾಗುತ್ತದೆ, ಜಡ್ಡುಕಟ್ಟುತ್ತದೆ. ತಪ್ತ ಸ್ವಾರ್ಥಿಯಾಗುತ್ತಾನೆ, ಕೃಪಣನಾಗುತ್ತಾನೆ, ಮನೆಯವರಿಗೆ ಗೊತ್ತಾಗದಂತೆ ಪುಟ್ಟ ಗಂಟು ಮಾಡಿಟ್ಟುಕೊಂಡು ಸ್ವಂತ ಸುಖದ ಕನಸು ಕಾಣುತ್ತಾನೆ. ಮಾಧುವಿಗೆ ಅದು ಪತ್ತೆಯಾಗಿ ನನಗೆ ಬರೆದರೆ ಆ ಬಗ್ಗೆ ಯೋಚಿಸುವಾಗಲೂ ಘೋರವಾದ ಸತ್ಯ ಕಾಣಿಸುವುದಿಲ್ಲ ನನ್ನ ಬಗ್ಗೆ ನನಗಿರುವ ಕರುಣೆ ಕಟುವಾದದ್ದನ್ನೂ ಕಟ್ಟುಹಾಕಿ ಸುಂದರ ಮಾಡಿ ತೋರಿಸುತ್ತದೆ. ಮಾಧು ಈಗ ಮನೆ ಬಿಟ್ಟವನು ಉದ್ಧಾರವಾಗಲಿ, ಸಾಯಲಿ- ನನ್ನ ಸ್ವಭಾವದಿಂದ ನನಗೆ ಬಿಡುಗಡೆ ಪ್ರಾಯಶಃ ಆಗುವುದಿಲ್ಲ. ಅಸೂಯೆಯಾಗಬಹುದು, ದುಃಖವಾಗಬಹುದು-ಆದರೆ ಈ ಎರಡು ಭಾವನೆಯಲ್ಲೂ ಮತ್ತೆ ನಾನು ನನ್ನ ಸುತ್ತಲೇ ಸುತ್ತಿ ಇನ್ನಷ್ಟು ಗೋಜು, ಗಂಟು. ಸುಖದ ದಾರಿ ಅಲ್ಪವೆಂದು ಕಾಣುವ ಸಂತನ ಸೂಕ್ಷ್ಮ ದಿವ್ಯದೃಷ್ಟಿಯನ್ನು ಕಳೆದುಕೊಂಡು, ಸುಖ ಕಾಣದೆ ಯಾವಾಗಲೂ ಸುಖವನ್ನು ಬಯಸುವ, ಒಳತೋಟಿಗಳನ್ನು ಬೆಳೆಸಿಕೊಂಡು ಮೀರಿ ನಿಲ್ಲುವ ಶಕ್ತಿಯನ್ನು ಕಳೆದುಕೊಳ್ಳುವ, ಆತ್ಮಮರುಕದಲ್ಲಿ ತೊಳಲುವ, ಕರುಬುವ, ಕಿರಿಕಿರಿಯೆನ್ನುವ ತನ್ನವರನ್ನು ಹರಿದು ಹರಿದು ತಿನ್ನುವ, ಕೊಡುವ ಪ್ರೇಮವನ್ನು ಕಳೆದುಕೊಂಡ ಸ್ವರತಿಯ ನರಕದಲ್ಲಿ ಬಾಳುತ್ತಾನೆ. ಸಭ್ಯ ಸಂತ ಇಬ್ಬರೂ ಆತ್ಮರತರು, ಆತ್ಮತೃಪ್ತರು. ನನಗೆ ಸ್ವರತಿ ಮಾತ್ರ ಸಾಧ್ಯ: ನಾನು ನನ್ನಲ್ಲೆ ಕೊನೆಯಾಗಿ, ಮೊದಲಾಗಿ, ದಾರಗಳನ್ನು ಸುತ್ತಿಕೊಂಡು ವಿಲವಿಲ ಒದ್ದಾಡಿ, ಒಳಗಿನದನ್ನು ಕತ್ತರಿಸಿ ಹೊರಗೆ ತೆರೆದು ಪರೀಕ್ಷಿಸಿ, ಒಳಗಿಟ್ಟು, ಮತ್ತೆ ಕತ್ತರಿಸಿ ಹೊರಗೆ ತೆಗೆದು ಪರೀಕ್ಷಿಸಿ, ಮತ್ತೆ ಒಳಗಿಟ್ಟು, ಮೊದಲು ಪರೀಕ್ಷಿಸುವ ತನ್ನ ಆತ್ಮವಿಮರ್ಶೆಯ ಶಕ್ತಿಯನ್ನು ಮೆಚ್ಚುತ್ತ, ನಂತರ ಪರೀಕ್ಷಿಸಿದ ವಸ್ತುವನ್ನೇ ಪ್ರೀತಿಸುತ್ತ, ಕೊನೆಗೆ ಹೀಗೆ ಪರೀಕ್ಷಿಸುವುದು ಅಭ್ಯಾಸ ಬಿದ್ದು ಪರೀಕ್ಷಿಸುತ್ತ, ಪರೀಕ್ಷಿಸುತ್ತ, ತನ್ನ ಮಲವನ್ನು ತಾನೇ ಮೆಚ್ಚುವವನಂತಾಗಿ, ಪರೀಕ್ಷಿಸುವ ಮಲವೇ ತಾನಾಗಿ, ಅಮ್ಮ ಹೇಳಿದಂತೆ ಭಾಗೀರತಿಯನ್ನು ಮದುವೆಯಾಗಿ ಗೊಣಗುತ್ತ ಸಂಸಾರ ಮಾಡಿ, ಸದಾ ಆತ್ಮವಿಮರ್ಶೆಯಲ್ಲಿ ಪರೀಕ್ಷಿಸಿಕೊಳ್ಳುತ್ತ, ಹುಟ್ಟಿದ ಮಕ್ಕಳ ಉದ್ಧಾರಕಾಗಿಉದ್ಧಾರಕ್ಕಾಗಿ ಶ್ರಮಿಸುತ್ತ, ಅವರನ್ನು ಶಪಿಸುತ್ತ; ದುಡ್ಡು ಕೂಡಿಸಿ, ಮನೆ ಕಟ್ಟಿ, ಕೆಲಸದಿಂದ ರಿಟೈರ್ಡ್ ಆದಮೇಲೆ ಸರ್ಕಾರಾನ್ನ ಇನ್ನೆರಡು ವರ್ಷದ ಎಕ್ಸ್‌ಟೆನ್‌ಶನ್‌ಗೆ ಅಂಗಲಾಚಿ…..

ಮಾಧು ಸಾಯದಿದ್ದರೆ-ಅವನೊಬ್ಬ ದೊಡ್ಡ ಅಥವಾ ಸಾಮಾನ್ಯ ಕಾದಂಬರಿಕಾರನಾಗಿ, ಊರೂರು ಸುತ್ತಿ, ಹಾದರ ಮಾಡಿ, ಕುಡಿದು, ಜನಪ್ರಿಯ ಲೇಖಕನಾಗಿ, ಅಥವಾ, ಆಗದೆ, ದುಡ್ಡಿಗಾಗಿ ನನ್ನನ್ನ ಸದಾ ಪೀಡಿಸುತ್ತ, ಈಗ ಸತ್ತರೂ ಭೂತವಾಗಿ ಪೀಡಿಸುತ್ತ…

ಸ್ಟೂ‌ಅರ್ಟ್ ಲೇಬರ್ ಪಾರ್ಟ್ಪಾರ್ಟಿ ಸೇರಿ, ಹಿಂದುಳಿದ ದೇಶಗಳ ಉದ್ಧಾರಕ್ಕಾಗಿ ಶ್ರಮಿಸಿ, ಎಂ.ಪಿ. ಯಾಗಿ, ಇಂಡಿಯಾಕ್ಕೆ ಬಂದು ಏರ್‌ಕಂಡೀಶನ್ಡ್ ಹೋಟೆಲಲ್ಲಿ ಇಳಿದು, ಏರ್‌ಕಂಡೀಶನ್ಡ್ ಕಾರಿನಲ್ಲಿ ಸುತ್ತಿ ಸಾಧು-ಸಂತರನ್ನು ನೋಡಿ, ಭಾರತೀಯ ಆಧ್ಯಾತ್ಮ ತನ್ನ ಆತ್ಮದ ಸಂಸ್ಕಾರಕ್ಕೆ ಅವಶ್ಯವಾದ ಒಂದು ಹೊಸ ಅನುಭವವೆಂದು ತಿಳಿದು, ಬುದ್ಧಿಪೂರ್ವಕವಾಗಿ ಯಾವ ತೊಡಕಿಗೂ ಸಿಕ್ಕಿಕೊಳ್ಳದೆ ಅದನ್ನು ಗ್ರಹಿಸಿ, ಆ ಬಗ್ಗೆ ಸುಂದರವಾದ ಒಂದು ಪುಸ್ತಕ ಬರೆದು, ಬಿ. ಬಿ. ಸಿ ಯಲ್ಲಿ ಆ ವಿಷಯ ಮಾತಾಡಿ, ವೃದ್ಧನಾದಾಗಲೂ ಬೊಜ್ಜು ಬೆಳೆಯದೆ ಉದ್ದಕೆ ತೆಳ್ಳಗೆ ನೆಟ್ಟಗೆ ಉಳಿದು…..

“ಇವತ್ತು ಶನಿವಾರ ಆದ್ದರಿಂದ ಆರು ಗಂಟೆಯವರೆಗೆ ಅಂಗಡಿ ಬಾಗಿಲು ತೆರೆದಿರುತ್ತವೆ. ಎಷ್ಟು ಜನಾ ನೋಡು ಶಾಪಿಂಗ್ ಮಾಡ್ತಿರೋರು….” ಎಂದು ಸ್ಟೂ‌ಅರ್ಟ್ ತಾನು ಸ್ಲಾಟ್ ಮಶೀನಿನಲ್ಲಿ ಕೊಂಡ ಪ್ಯಾಕಿನಿಂದ ಮರೆಯದೆ ಕೇಶವನಿಗೊಂದು ಸಿಗರೇಟನ್ನು ಕೊಟ್ಟ. ತನಗಿಂತ ಕಿರಿಯನಾದ ಸ್ಟೂ‌ಅರ್ಟ್ ಬಗ್ಗೆ ಕೇಶವನಿಗೆ ಒಂದು ಕ್ಷಣ ತುಂಬ ಗೌರವ ಮಮತೆ ಅನ್ನಿಸಿತು.

ಭಾಗ : ಮೂರು

ದೊಡ್ಡ ದೊಡ್ಡ ಗಾಜಿನ ಕಿಟಿಕಿಗಳ ಮೂಲಕ ತಮ್ಮ ಬೆಲೆಯ ಚೀಟಿಗಳನ್ನು ಹೊತ್ತು ನಿಂತ ವಸ್ತುಗಳನ್ನು ಜೋಡಿಟ್ಟಜೋಡಿಸಿಟ್ಟ ವೈಖರಿಯನ್ನು ನೋಡುತ್ತ ವಿಂಡೋ ಶಾಪಿಂಗ್ ಮಾಡೋದೆಂದರೆ ಕೇಶವನಿಗೆ ಖುಷಿ. ಈಗ ಬೇಸಿಗೆಯಾದ್ದರಿಂದ ಗಾಜುಗಳ ಮೇಲೆ ಕೆಂಪಕ್ಷರದಲ್ಲಿ ‘Sಂಐ‌ಇS’ ಎಂದು ಎಲ್ಲೆಲ್ಲೂ ಚೀಟಿಗಳನ್ನು ಅಂಟಿಸಿದ್ದಾರೆ. ಉಂಐಂ Sಂಐ‌ಇS ಹದಿನೈದು ಪೌಂಡಿನ ಸೂಟಿಗೆ ಬರೀ ಒಂಬತ್ತು ಪೌಂಡ್, ಹೆಂಗಸರ ಬಟ್ಟೆಗಳನ್ನು ಮಾರುವ ಅಂಗಡಿಯಲ್ಲಿ ಬೆತ್ತಲೆ ನಿಂತ ಬೊಂಬೆಗಳು- ಅವುಗಳಿಗೆ ಮಾರನೇ ದಿನದ ಫ್ಯಾಶನ್ನಿನ ಬಟ್ಟೆಗಳನ್ನು ತೊಡಿಸುತ್ತ ಇನ್ನೊಬ್ಬಳು. ನಿಜ ಯಾವುದು, ಬೊಂಬೆ ಯಾವುದು-ಕ್ಷಣದ ಬೆರಗು, ಆಸೆ, ನಿರಾಸೆ. ‘ಅದು ಸೆಲ್ಫ್ ರಿಜಸ್, ಯೂರೋಪಿನ ದೊಡ್ಡ ಅಂಗಡಿಗಳಲ್ಲೊಂದು’- ಎಂದ ಸ್ಟೂ‌ಅರ್ಟ್. ‘ಬಸ್ಸು ಹತ್ತೋಣವೆ? ನಡೆಯೋಣವೆ?’ ಎಂದದ್ದಕ್ಕೆ ಕೇಶವ ‘ನಡೆಯೋಣ’ ಎಂದ. ಜಾಕೆಟ್ಟಿನ ಜೇಬಲ್ಲಿ ಕೈಯಿಟ್ಟೂ ಹೇಗೆ ನೀಳವಾಗಿ ನೇರವಾಗಿ ಸ್ಟೂ‌ಅರ್ಟ್ ನಡೆಯುತ್ತಾನೆ. ತನ್ನ ಕಾಲುಗಳ ಹಾಗೆ ಅವನದು ಸೊಟ್ಟಗಿಲ್ಲ. ಇವನ ಹಿಂದಕ್ಕೆ ಆಕ್ಸ್‌ಫರ್ಡ್ ಸ್ಟ್ರೀಟಿದೆ, ಸೆಲ್ಫ್ ರಿಜಸ್‌ನಂತಹ ಅಂಗಡಿಯಿದೆ, ಭಾವನೆಯ ಸೂಕ್ಷ್ಮಾತಿಸೂಕ್ಷ್ಮವನ್ನು ತಿಳಿಸಬಲ್ಲ ಇಂಗ್ಲಿಷ್ ಭಾಷೆಯಿದೆ ತಿರುಗಿ ನೋಡದೆ ನೇರವಾಗಿ ಹ್ಯಾರಿಸ್ ಟ್ವೀಡ್ ಜಾಕೆಟ್, ಸ್ಕಾಟಿಶ್ ಟೈ, ಗ್ರೇಪ್ಲಾನಲ್ ಬ್ಯಾಗಿನಲ್ಲಿ ಅಪ್ಪಟ ಇಂಗ್ಲಿಷ್ ಆಗಿ ಭವಿಷ್ಯದ ಕಡೆ ಕಣ್ಣು ಮಾಡಿ ನಡೆಯುತ್ತಾನೆ. ಅಡಿಗೆ ಖಾರವಾದರೆ ಖಾರ ಹೆಚ್ಚಾಯಿತೆಂದು, ಸಪ್ಪೆಯಾದರೆ ಖಾರ ಬೇಕಾಗಿತ್ತೆಂದು ಅಮ್ಮನ ಜೊತೆ ರಗಳೆ ಮಾಡಲು, ಮಾಧುವಿನ ಜೊತೆ ಜಗಳವಾಡಲು ನನಗೆ ಕನ್ನಡ; ಸುಂದರವಾದ ಸೂಕ್ಷ್ಮ ಭಾವನೆಗಳನ್ನು ಚರ್ಚಿಸಲು ಸ್ಟೂ‌ಅರ್ಟ್‌ನ ಕಿವಿಗೆ ಅಸಹನೀಯವಾಗಿ ಕೇಳಿಸುವ ಇಂಗ್ಲಿಷ್. ನಾನು ಎಡಬಿಡಂಗಿ-ಹೊರಗೆ ಭಟ್ಟಂಗಿ, ಆಪ್ತರ ಕಿವಿಯಲ್ಲಿ ಕರ್ಣಪಿಶಾಚಿ. ವರ್ತಮಾನದ ಕೊಚ್ಚೆಯಲ್ಲಿ ನಿಂತು ಪೂರ್ವದ ವೈಭವವನ್ನು ಸ್ಮರಿಸುವ ದ್ವಿಭಾಷಾ ಚತುರ. ನನಗೆ ನನ್ನನ್ನು ಸಂಪೂರ್ಣ ವ್ಯಕ್ತಗೊಳಿಸಬಲ್ಲ ಭಾಷೆಯಿಲ್ಲ-ನೆಲದ ಕಡೆ ಚೂಪು ತುದಿ ಮಾಡಿ ಆಕಾಶದಲ್ಲಿ ಜಟಿಲ ಕಗ್ಗಂಟಾಗಿ ತೊಳಲುವ ಆಲದ ಬಿಳಲು, ಬಿಳಿಯನೂ ಅಲ್ಲ. ಕರಿಯನೂ ಅಲ್ಲ ಕಿಲುಬುಗಟ್ಟಿದ ತಾಮ್ರ.
“ಇಕೊ ಆ ವಿಂಪಿ ಬಾರ್ ಇದೆಯಲ್ಲ- ಅದು ರಾತ್ರೆಯೆಲ್ಲ ತೆರೆದಿರುತ್ತದೆ. ಬೆಳಿಗ್ಗೆ ಎರಡು ಗಂಟೆಗೆ ಇತ್ತ ಬಂದರೆ ನಮ್ಮ ಸಭ್ಯ ಸಮಾಜದ ಅಲ್ಪಸಂಖ್ಯಾತರು ಅಲ್ಲಿ ಸಿಗುತ್ತಾರೆ- ಊome-sexuಚಿಟs ಮತ್ತು ಐesbiಚಿಟಿs”
ಸಣ್ಣಗೊಂದು ತುಂತುರು ಮಳೆ ಬೀಳಲು ಪ್ರಾರಂಭಿಸಿತು. “ಲಂಡನ್ನಿನ ಹಾಳು ಹವ” ಎಂದ ಸ್ಟೂ‌ಅರ್ಟ್.
“ನಮ್ಮ ದೇಶದ ಬಿಸಿಲು ಧೂಳಿಗಿಂತ ಈ ದೇಶದ ಚಳಿ ವಾಸಿ ಎನ್ನಿಸುತ್ತೆ ನನಗೆ” ಎಂದ ಕೇಶವ.
“ಓ ನನಗೆ ಬಿಸಿಲು, ಜೀವನ, ಸೂರ್ಯ ಬೇಕು.”
“ಅನುಭವವಿಲ್ಲದೆ ನೀನು ಮಾತಾಡ್ತಿದಿ ಸ್ಟೂ‌ಅರ್ಟ್, ಸೂರ್ಯ ನೆತ್ತಿಯ ಮೇಲೆ ಉರಿಯೋದೆಂದರೆ ಏನೂಂತ ನಿನಗೆ ಗೊತ್ತಿಲ್ಲ. ನೆತ್ತಿಯ ಮೇಲೆ ಉರಿಯೋ ಸೂರ್ಯ ನನ್ನಿಂದ ಆಡಬಾರದ ಮಾತನ್ನ ಆಡಿಸಿದಾನೆ. ಮಾಡಬಾರದ ಯೋಚನೇನ್ನ ಮಾಡಿಸಿದಾನೆ. ಬಿಸಿಲಲ್ಲಿ ಒಂದು ಥರ ಮೌಢ್ಯ ಬರುತ್ತೆ. ನಮ್ಮದು ವಿರಾಗಿಗೆ ಯೋಗ್ಯವಾದ ಹವ, ಅನುರಾಗಿಗೆ ಅಲ್ಲ. ನನ್ನ ಅಪ್ಪ ಸತ್ತ ದಿನ ಅವರನ್ನ ಸುಡೋಕೆ ಸ್ಮಶಾನಕ್ಕೆ ತೆಗೆದುಕೊಂಡು ಹೋದಾಗ ಬೇಸಗೆ, ಮೇಲೆ ಮಟಮಟ ಮಧ್ಯಾಹ್ನ. ಮೌನದಲ್ಲಿ ಅಲ್ಲೊಂದು ಇಲ್ಲೊಂದು ಕಾಗೆ ಕೂಗಿದ ಸ್ವರ- ಅಷ್ಟೆ. ಸುಡುವ ಮರಳಿನಲ್ಲಿ ಮೂರು ಸೀಳಾಗಿ ಹರಿಯುವ ಬೆಚ್ಚಗಿನ ನೀರಿನ ನದಿಯ ದಂಡೆಯ ಮೇಲೆ ಅಪ್ಪನ ದೇಹಾನ್ನ ಚಟಚಟಾಂತ ಬೆಂಕಿ ಸುಡೋವಾಗ ನನ್ನ ಹಣೇ ಮೇಲಿಂದ ಒಂದು ನರ ಕಿವೀವರೆಗೆ ಪಟಪಟನೆ ಬಡಕೊಂಡು, ಬೆವರು ಇಳಿದು ಕಣ್ಣು ತುಟಿ ಒದ್ದೆಯಾಗಿ, ಸುಖವೊ, ದುಃಖವೊ ನನಗೆ ಯಾವ ಮಾನವ ಭಾವನೇನೂ ಅನ್ನಿಸಲಿಲ್ಲ. ಬಿಸಿಲು ಮುತ್ತಿ, ಆವರಿಸಿ, ಎಲ್ಲ ಭಾವನೇನೊ ನುಂಗಿಬಿಡುತ್ತೆ. ಇಲ್ಲಿ ಶೀತ ದೇಶದಲ್ಲಿ ಬೆಚ್ಚಗೆ ಬೆಂಕೀ ಎದುರು ಕೂತು, ಮುದ್ದಾಗಿ, ಮಾನವೀಯವಾಗಿ, ಸಭ್ಯವಾಗಿ ಜಗತ್ತಿನ ಬಗ್ಗೆ ಚಿಂತಿಸಬಹುದು.”
“ದಾಹವಾಗ್ತಿದೆ ಸ್ವಲ್ಪ ಬಿಯರ್ ಕುಡಿಯೋಣವೆ? ನನಗೆ ಸಾವಿನ ಅಂತಹ ಉತ್ಕಟ ಅನುಭವಾನೇ ಇಲ್ಲ-ಆಂಟಿಸೆಪ್ಟಿಕ್, ಸ್ಪರಿಲೈಸ್‌ಡ್, ಸೆಂಟ್ರಲ್ಲಿ ಹೀಟೆಡ್ ಸಮಾಜ ನಮ್ಮದು.”
ಸಂದಿಯೊಂದರಲ್ಲಿದ್ದ ಕಪ್ಪುಬಿಳಿ ಎಳೆಗಳನ್ನೆಳೆದ ‘ಗನ್‌ಬ್ಯಾರೆಲ್ಸ್’ ಎಂದು ಬೋರ್ಡ್ ಇದ್ದ ಪಬ್ ಕಡೆ ನಡೆದರು; ಬಾಗಿಲು ತೆಗೆದು ಒಳಗೆ ಹೋಗಿ ಕೂರಲು ಒಂದು ಮೂಲೆಯನ್ನು ಕೇಶವ ಹುಡುಕಿದ. ಸಿಗರೇಟ್ ಹೊಗೆ ತುಂಬಿದ ವಿಶಾಲವಾದ ಹಾಲಿನಲ್ಲಿ ಜನ ಕಿಕ್ಕಿರಿದು ಕೂತಿದ್ದರು-ಒರಗುವ ಸದಾ ಬೆಂಚಿನ ಮೇಲೆ, ಗುಂಡನೆಯ ಮೇಜಿನ ಸುತ್ತ ಹಾಕಿದ ದುಂಡನೆಯ ಸ್ಟೂಲ್‌ಗಳ ಮೇಲೆ. ಐದಾರು ಜನ ಯುವಕರು ನಿಂತು ಚೂಪಾದ ಪುಟ್ಟ ಬಾಣಗಳನ್ನು ಬೋರ್ಡಿಗೆ ಎಸೆಯುತ್ತ ಡಾರ್ಟ್ಸ್ ಆಡುತ್ತಿದ್ದರು- ಮುದುಕನೊಬ್ಬ ಸೀಮೆಸುಣ್ಣದಿಂದ ಸ್ಕೋರನ್ನು ಬರೆದುಕೊಳ್ಳುತ್ತ ನಿಂತಿದ್ದ. ಮೂಲೆಯಲ್ಲೊಬ್ಬಳು ಮಧ್ಯವಯಸ್ಸಿನ ತೋರವಾದ ಹೆಂಗಸು ಮಿರುಗುವ ಬಿಗಿಯದಬಿಗಿಯಾದ ಬಟ್ಟೆಯನ್ನು ತೊಟ್ಟು ಪಿಯಾನೊ ಬಾರಿಸುತ್ತಿದ್ದಳು. ಅವಳ ಸುತ್ತ ಪೀಕ್ಯಾಪ್ ಧರಿಸಿ ಕೂತಿದ್ದ ಸುಕ್ಕುಗಟ್ಟಿದ ಮುಖದ, ಕೆಂಪು ಗುಜ್ಜುಮೂಗಿನ ಮುದುಕರು ಹಳೆಯ ಕಾಲದ ಟ್ಯೂನಿಗೆ ಸ್ವರವೆತ್ತಿ ಒಟ್ಟಿಗೇ ಹಾಡುತ್ತ ತಲೆ ತೂಗುತ್ತಿದ್ದರು. ಪಿಯಾನೊ ನಿಂತಿತು. ತೋರವಾದ ಹೆಂಗಸು ಎದ್ದಳು. ಎಲ್ಲರೂ ಚಪ್ಪಳೆ ತಟ್ಟಿದರು. ಅವಳು ಬಾಗಿ ಅದನ್ನು ಸ್ವೀಕರಿಸಿ ತಟ್ಟೆ ಹಿಡಿದು ಹೊರಟಳು. ಅವಳ ತಟ್ಟೆಗೆ ಮೂರು ಪೆನ್ನಿ ಆರು ಪೆನ್ನಿಗಳು ಬಿದ್ದವು. ಕೇಶವ ತನ್ನ ಜೇಬಿನಿಂದ ಒಂದು ಶಿಲಿಂಗ್ ತೆಗೆದು ಹಾಕಿದ. ಙou ಚಿಡಿe beiಟಿg oveಡಿ geಟಿeಡಿous ಎಂದು ಸ್ಟೂ‌ಅರ್ಟ್ ‘ಇಲ್ಲಿ ಗಲಾಟೆ, ಬೇರೆ ರೂಮಿಗೆ ಹೋಗೋಣ’ ಎಂದು ಕರೆದ.
ಇನ್ನೊಂದು ಪುಟ್ಟ ರೂಮು ಯೂನಿವರ್ಸಿಟಿಯ ಮರ್ಮೈಡ್ ಬಾರಿನಂತೆ ಮೆತ್ತನೆಯ ಕುರ್ಚಿಗಳಿಂದ ಹಿತವಾಗಿ ಕಾಣಿಸುತ್ತಿತ್ತು. ಅಲ್ಲಿ ಕೂತಿದ್ದವರ ಸಂಖ್ಯೆಯೂ ಕಡಿಮೆ. ಗಂಡ-ಹೆಂಡಿರು ಟೇಬಲ್ಲುಗಳಲ್ಲಿ ಎದಿರುಬದಿರಾಗಿ ಕೂತು, ಬಿಯರ್ ಕುಡಿಯುತ್ತ ಸಂಜೆಯ ಪೇಪರ್ ಓದೋದರಲ್ಲಿ ಮಗ್ನರಾಗಿದ್ದರು.
“ಪೇಪರ್ ಓದೋಕೆ ಇಲ್ಲಿಗೆ ಬರಬೇಕೆ-ಗಂಡಹೆಂಡಿರು?” ಎಂದ ಕೇಶವ್.
“ಮಧ್ಯಮ-ವರ್ಗದ ಜನ ಈ ರೂಮಿಗೆ ಬರ್ತಾರೆ. ನಾವು ಹೋದ ರೂಮಲ್ಲಿ ಇರೋರು Woಡಿಞiಟಿg ಛಿಟಚಿss ಇಲ್ಲಿ ಬಿಯರ್ ಒಂದು ಪೆನ್ನಿ ಜಾಸ್ತಿ. ಅವರಿಗೆ ಒಂದು ಪೆನ್ನಿ ಹೆಚ್ಚು ಕೊಟ್ಟು ಇಲ್ಲಿ ಬರೋದು ಸಾಧ್ಯವಿಲ್ಲಾಂತ ಅಲ್ಲ. ಬಿಯರ್‌ನಲ್ಲಿ ಉಳಿದ ಪೆನ್ನೀನ ಅವರು ಪಿಯಾನೋ ಬಾರಿಸೋವಳಿಗೆ ಕೊಟ್ಟು ಅವಳಿಗೆ ಕುಡಿಸ್ತಾರೆ. ಇಲ್ಲಿಗೆ ಅವರು ಬರದೇ ಇರೋಕೆ ಕಾರಣ-ಇಲ್ಲಿ ಅವರಿಗೆ ಗೆಲುವಿಲ್ಲ, ತನ್ನ ಜನ ಬರಲ್ಲ. ವರ್ಗಭೇದವನ್ನ ನಮ್ಮ ಜನ ಸಂತೋಷದಿಂದ ಕಹಿಯಿಲ್ಲದೆ ಕಾಯ್ತಾರೆ. ಆದ್ದರಿಂದ ಈ ದೇಶಕ್ಕೆ ಮಾರ್ಕ್ಸಿಸಂ ಕೂಡ ವಿನಾಯತಿ” ಎಂದ ಸ್ಟೂ‌ಅರ್ಟ್.
ಕೇಶವ ಕೌಂಟರಿಗೆ ಹೋಗಿ ಎರಡು ಪೈಂಟ್ ಬಿಟ್ಟರನ್ನು ಕೊಂಡ. “ಆ ಬಾರಿನಲ್ಲಿ ಬಿಯರನ್ನು ಪಂಪ್ ಮಾಡಿಕೊಡಲು ಕಟ್ತುಮಸ್ತಾದ ಒಬ್ಬಳು ಹೆಂಗಸಿದ್ದರೆ, ಇಲ್ಲೊಬ್ಬಳು ತೆಳ್ಳಗಿನ ಹುಡುಗಿಯಿದ್ದಾಳೆ ನೋಡು. ಅವಳು ಹಣ ಪಡೆಯೋವಾಗ ’ಖಿhಚಿಟಿಞ ಥಿou, ಐove’ ಎಂದರೆ, ಇವಳು ’ಖಿhಚಿಟಿಞ ಥಿou siಡಿ’ ಎನ್ನುತ್ತಾಳೆ ಅಲ್ಲವೆ?” ಎಂದು ಸ್ಟೂ‌ಅರ್ಟ್ ನಕ್ಕ.
“ನಾನು Woಡಿಞiಟಿg ಛಿಟಚಿss ನ್ನೆ ಹೆಚ್ಚು ಮೆಚ್ಚುತ್ತೇನೆ” ಎಂದು ಕೇಶವ ಹೇಳಿದ.
“ನಾನೂ ಕೂಡ. ಆದರೆ ಅವರಿಗೆ ಫ್ರೆಜುದಿಚೆಪ್ರೆಜುಡೈಸ್ ತುಂಬಾ ಇದೆ. ನಿನ್ನನ್ನ ಕಂಡರೆ ಅವರು ‘ಕರಿಯ’ ಎಂದು ದೂರವಿಡ್ತಾರೆ. ಆದರೆ ವಿದ್ಯಾವಂತರು….”
“ವಿದ್ಯಾವಂತರು ನನ್ನ ಗೊಡವೆಗೇ ಬರಲ್ಲ. ಎರಡೂ ಒಂದೆ. ಎರಡರಲ್ಲಿ ಡಿಞಟಿ ಛಿಟಚಿ ಏ ಉತ್ತಮ.”
ಇಬ್ಬರೂ ಬಿಯರ್ ಕುಡಿಯುತ್ತ ಮೌನವಾದರು. ಗ್ಲಾಸು ಬರಿದಾದ ಮೇಲೆ ಸ್ಟೂ‌ಅರ್ಟ್ ಎದ್ದು ಹೋಗಿ ಗ್ಲಾಸುಗಳನ್ನು ತುಂಬಿಸಿಕೊಂಡು ಬಂದ. ಎರಡನೇ ಪೈಂಟ್ ಮುಗಿಯುತ್ತಿದ್ದಂತೆ ಡ್ರಾಫ್ಟ್ ಬಿಟ್ಟರಿನ ಪ್ರಭಾವ ಒಳಗಿನಿಂದ ಹಿತವಾಗಿ ಹರಡಿ, ಕೇಶವನ ಮನಸ್ಸು ಸಡಿಲವಾಗತೊಡಗಿತು. ಸ್ಟೂ‌ಅರ್ಟ್ ಜೊತೆ ಆಪ್ತವಾಗಿ ಮಾತಾಡಬೇಕೆನಿಸಿತು:
“ನಿನಗೊಂದು ವಿಷಯ ಹೇಳಬೇಕು ಸ್ಟೂ‌ಅರ್ಟ್. ನನ್ನ ತಂದೆ ಥಟ್ಟನೆ ತೀರಿಕೊಂಡಾಗ ನಾನು ಇಂಟರ್‌ಮೀಡಿಯೆಟ್ ಓದ್ತಾ ಇದ್ದೆ-ಹಳ್ಳಿಯಲ್ಲಿದ್ದ ನಮ್ಮ ಮನೇಂದ ಇನ್ನೂರು ಮೈಲಿ ದೂರದಲ್ಲಿ. ಸಂಸಾರ ನಿರ್ವಹಣೆ ಕಷ್ಟವಾಗಿ ನನ್ನ ತಾಯಿ ‘ನಿನ್ನ ಓದು ಸಾಕು, ಕೆಲಸಕ್ಕೆ ಸೇರು’ ಎಂದಳು. ನಮ್ಮ ದೇಶದ ವಿದ್ಯಾರ್ಥಿಗಳಲ್ಲಿ ಎರಡು ಥರ: ಒಂದು ಪುಸ್ತಕದ ಹುಳ; ಓದಿ ಸಮಾಜದಲ್ಲಿ ಮುಂದೆ ಬರಬೇಕು, ಬಡತನದಿಂದ ಪಾರಾಗಬೇಕೆಂಬ ಹಂಬಲವೇ ಇವರ ಜೀವನದ ಸಾರಸರ್ವಸ್ವ. ಆಟಗಳನ್ನಾಡದೆ, ಒಡನಾಡದೆ, ಬಾಲ್ಯ ಯೌವನದ ಸುಖ ಕಾಣದೆ ಈ ವರ್ಗ ಶ್ರಮಿಸುತ್ತದೆ. ಇನ್ನೊಂದು ರೀತಿಯ ವಿದ್ಯಾರ್ಥಿ-ಅತ್ಯಂತ ಬೇಜವಾಬ್ದಾರಿಯವ-ಸ್ಟ್ರೈಕ್, ಆಟ, ಅಲೆತಾಂತ ಖುಶಿಯಾಗಿ ಕಾಲ ಕಳೀತಾನೆ-ನನ್ನ ತಮ್ಮಂದಿರ ಹಾಗೆ. ಓದುವಾಗ ನಾನು ಮೊದಲನೇ ವರ್ಗಕ್ಕೆ ಸೇರಿದ್ದೆ. ಈiಡಿsಣ ಅಟಚಿss ಗಳಲ್ಲಿ ಪಾಸಾಗೋದೆ ನನ್ನ ಅಂತಿಮ ಗುರಿಯಾಗಿತ್ತು. ಮನೇಂದ ದುಡ್ಡು ಬಾರದಿದ್ದರೂ ಅಂತೂ ಓದಿ ಮುಂದೆ ಬರಬೇಕೂಂತ ಬೆಂಗಳೂರಿಗೆ ಬಂದು ಒಂದು ಫ್ರೀ ಹಾಸ್ಟೆಲ್ಲಿಗೆ ಸೇರಿದೆ. ಅದನ್ನು ನಡೆಸುತ್ತಿದ್ದಾತ ಒಬ್ಬ ಸಮಾಜ ಸೇವಕ-ಅವನ ಕೀರ್ತಿ ಎಲ್ಲ ಕಡೆ ಹರಡಿತ್ತು. ಹೆಗಲಿನ ಮೇಲೆ ಜೋಳಿಗೆ ಹಾಕಿ, ನಿತ್ಯ ಮನೆಮನೆ ಅಲೆದು, ಅಕ್ಕಿ ದುಡ್ಡನ್ನು ಬೇಡಿ ತಂದು, ಹಾಸ್ಟೆಲ್ ನಡೆಸ್ತಿದ್ದ. ನನಗೆ ಅವನ ಮೇಲೆ ಅಪಾರವಾದ ಗೌರವ-ಗಾಂಧೀಜೀಯ ಆದರ್ಶವನ್ನು ಸತತವಾಗಿ ಪಾಲಿಸುತ್ತ ಬಂದವನೂಂತ. ಹಾಸ್ಟೆಲ್ ಕೂಡ ಅತ್ಯಂತ ಸಾತ್ವಿಕವಾದ ರೀತೀಲಿ ನಡೀತ ಇತ್ತು. ನಮಗೆ ಅಡಿಗೆ ಮಾಡಿ ಹಾಕೋರು ಕೂಡ ಸಂಬಳ ತಗೋತಿರಲಿಲ್ಲ. ನಿತ್ಯ ಬೆಳಿಗ್ಗೆ, ಸಂಜೆ ಪ್ರಾರ್ಥನೆ, ಪ್ರಾರ್ಥನೇಲಿ ಸರ್ವಧರ್ಮ ಸಮನ್ವಯ- ಗೀತೆ, ಖೊರಾನ್, ಬೈಬಲ್ ಪಠನ, ಪ್ರಾರ್ಥನೇಗೆ ವಿದ್ಯಾರ್ಥಿಗಳು ಹೋಗದಿದ್ದರೆ ಅವತ್ತು ಅವರಿಗೆ ಊಟವಿಲ್ಲ. ನಿತ್ಯ ವಿದ್ಯಾರ್ಥಿಗಳು ಸರದಿಯ ಮೇಲೆ ಕಕ್ಕಸನ್ನು ಎತ್ತಿ ಹಾಸ್ಟೆಲನ್ನು ತೊಳೆದು ಶುಭ್ರವಾಗಿಡಬೇಕು. ಪ್ರತಿ ಪ್ರಾತಃಕಾಲ ಅನ್ನದಾತ ತಾನೇ ಎದ್ದು ಎರಡು ಹಸುಗಳ ಹಾಲನ್ನು ಕರೆಸಿ ಅವನ್ನು ಕಾಯಿಸಲು ಇಟ್ಟು ಮೊಸರು ಕಡೀತಿದ್ದ….”
“ನೀನು ಹೇಳ್ತಿರೋದು Iಜeಚಿಟ ಆಗಿ ಕಾಣಿಸ್ತಿದೆ….”
ಕೇಶವ ಎದ್ದು ನಿಂತು- “ಇರು ಬಂದೆ. ಮುಂದಕ್ಕೆ ಇನ್ನೂ iಟಿಣeಡಿesಣiಟಿg ಆಗಿ ಇದೆ. ಮೊದಲು ಬಿಯರ್ ತರುತ್ತೇನೆ” ಎಂದು ಎದ್ದು ಹೋಗಿ ಇನ್ನೆರಡು ಪೈಂಟ್‌ಗಳನ್ನು ತುಂಬಿಸಿಕೊಂಡ. ಕೌಂಟರಿನಲ್ಲಿದ್ದ ಹುಡುಗಿ ಅವನ ಕಡೆಗೇ ನೋಡಿ ನಕ್ಕು ಹತ್ತು ಶಿಲಿಂಗಿಗೆ ಚಿಲ್ಲರೆ ಕೊಟ್ಟಳು. ಕೇಶವ ಬಿಯರನ್ನು ತಂದಿಟ್ಟು ಮುಂದಕ್ಕೆ ಹೇಳಿದ:
“ಹಾಸ್ಟೆಲಲ್ಲಿ ಸ್ಥಳ ಕಡಿಮೆಯಾದ್ದರಿಂದ ನಾವು ಮೂರು ನಾಲ್ಕು ಜನ ಒಂದೊಂದು ರೂಮಲ್ಲಿ ಮಲಗುತ್ತಿದ್ದೆವು. ನಾನು ಸೇರಿ ತಿಂಗಳಾದ ಮೇಲೆ ನಮ್ಮ ಅನ್ನದಾತ ‘ಒಂದು ದಿನ ನೀನು ನನ್ನ ರೂಮಲ್ಲಿ ಮಲಗು, ಓದಲು ಬರೆಯಲು ಅನುಕೂಲವಾಗಿದೆ’ ಎಂದ.”
“ಇನ್ನು ಮುಂದೆ ಹೇಳೋದು ಬೇಡ-ಗೊತ್ತಾಯಿತು. ಅವನು ಊomo Sexuಚಿಟ ತಾನೆ?”
ಸ್ಟೂ‌ಅರ್ಟ್‌ನ ಸಾಧಾರಣವಾದ ಧೋರಣೆಯಿಂದ ಕೇಶವನಿಗೆ ನಿರಾಸೆಯಾಯಿತು. ತನ್ನ ಭೂತದ ಬಗ್ಗೆ ತನಗಿರುವ ಜಿಗುಪ್ಸೆಯನ್ನು ಸ್ಟೂ‌ಅರ್ಟ್‌ಗೆ ಅನ್ನಿಸುವಂತೆ ಮಾಡಬೇಕೆಂದಿದ್ದ ತನ್ನ ಆಸೆ ಭಂಗವಾಗಿತ್ತು.
“ನಾನು ಪಬ್ಲಿಕ್ ಸ್ಕೂಲಲ್ಲಿ ಓದಿರೋವ್ನು ಕೇಶವ್, ನಿನಗೆ ಆಶ್ಚರ್ಯವಾಗಬಹುದು, ನಾನು ಅಲ್ಲಿ ಓದ್ತಾ ಇದ್ದಾಗ ನಾನೂ ಊomo Sexuಚಿಟ ಆಗಿದ್ದೆ. ಈಗ ನನಗೆ ಆ ಬಗ್ಗೆ ಜಿಗುಪ್ಸೆಯಿಲ್ಲ. ಅಲ್ಲಿ ನಾನು ಅನುಭವಿಸಿದ ಗೆಳೆತನದ ತೀವ್ರತೆ ನನ್ನ ಉತ್ತಮ ಅನುಭವಗಳಲ್ಲೊಂದೆಂದು ತಿಳಿದಿದ್ದೇನೆ. ಯೂನಿವರ್ಸಿಟಿ ಸೇರಿದ ಮೇಲೆ ಹುಡುಗಿಯರ ಸಂಗದಲ್ಲಿ ನನ್ನ ಹೊಮೊ-ಸೆ‌ಉ‌ಅಲಿತ್ಯ್ಹೋಮೋಸೆಕ್ಷುಯಲಿಟಿ ಕಡಿಮೆಯಾಯಿತು. ಇದು ಕಾಮಜೀವನದ ಆರೋಗ್ಯ, ಅನಾರೋಗ್ಯದ ಪ್ರಶ್ನೆ. ಇದಕ್ಕೆ ಸರಿಯಾದ ಪ್ರತಿಕ್ರಿಯೆ -ಚಿ ಛಿಟiಟಿiಛಿಚಿಟ ಚಿಣಣiಣuಜe ರೋಗಕ್ಕೆ ಸರಿಯಾದ ರೋಗನಿದಾನ ಹುಡುಕಬೇಕು. ನನಗೆ ಕ್ರಿಶ್ಚಿಯನ್ನರಂತೆ ಪಾಪದಲ್ಲಿ ನಂಬಿಕೆಯಿಲ್ಲ. ಜೀವನದಲ್ಲಿ ‘ರೋಗ’-ಆರೋಗ್ಯ’ ಎಂದು ಎರಡು ಸ್ಥಿತಿಯಿದೆ, ಮುಖ್ಯವಾದ್ದು ಜೀವನ ಸಫಲವಾಯಿತೆ, ವಿಫಲವಾಯಿತೆ ಎನ್ನುವ ಪ್ರಶ್ನೆ. ಊomo Sexuಚಿಟiಣಥಿ ಯಿಂದ ಒಬ್ಬನ ಜೀವನ ಸಫಲವಾಗುವುದಾದರೆ ಅಂತಹ ಕಾಮಜೀವನ ರೋಗ ಕೂಡ ಅಲ್ಲ. ವುಲ್ಪೆನ್‌ಡನ್ ರಿಪೋರ್ಟ್ ವಿಷಯ ನೀನು ಕೇಳಿರಬಹುದು. ನನಗೊಂದು ಆಸೆಯಿದೆ- ಯೂನಿವರ್ಸಿಟೀಲಿ ಒಂದು ಚಳುವಳಿ ಪ್ರಾರಂಭಿಸಬೇಕು: ಈಗ ದೇಶದಲ್ಲಿರೊ ಊ-ಚಿಟಣಥಿ ಬಗೆಗಿನ ಕಾನೂನು ಇನ್ನು ಬದಲಾಗಬೇಕೂಂತ. ಅದಕ್ಕೆ ನಿನ್ನ ಸಹಕಾರಾನ ಬೇಡ್ತೀನಿ”
ಎಂದು ಸ್ಟೂ‌ಅರ್ಟ್ ನಕ್ಕ. ಕೇಶವ ಕ್ಷಣ ಸುಮ್ಮನಾಗಿ, ಕುಪಿತನಾಗಿ ಹೇಳಿದ:
“ನಿನಗೆ ಇಲ್ಲಿ ಗೊತ್ತಾಗದೇ ಇರೋದು ನಾನು ಎಷ್ಟು ಅವಮಾನಾನ್ನ ಸಹಿಸಿ ಓದಿದೇಂತ. ಅವನ ಒತ್ತಾಯಕ್ಕೆ ನಾನು ಒಪ್ಪದೇ ಹೋಗಿದ್ದರೆ ಹಾಸ್ಟೆಲನ್ನ ಬಿಡಬೇಕಾಗಿತ್ತು. ಎರಡು ವರ್ಷ ಅಲ್ಲಿ ನರಕವಾಯಿತು ನನಗೆ. ಹುಡುಗರು ಕಕ್ಕಸಿನ ಗೋಡೆಗಳ ಮೇಲೆ ನನ್ನ ಮತ್ತು ಅವನ ಹೆಸರುಗಳನ್ನ ಪ್ಲಸ್ ಹಾಕಿ ಬರೆದರು. ಅಡಿಗೆ ಮಾಡ್ತಾ ಇದ್ದವನೂ ಹೊಮೊ-ಸೆ‌ಉ‌ಅಲ್ಹೋಮೋ ಸೆಕ್ಷುವಲ್ ಆದ್ದರಿಂದ, ಅವನಿಗೂ ನನ್ನ ಅನ್ನದಾತನಿಗೂ ಮೊದಲು ಸಂಬಂಧ ಇದ್ದುದರಿಂದ ಅವನು ಅಸೂಯೆಲೇ ರೇಗಾಡಿದ, ಬಿಟ್ಟು ಹೋಗ್ತೇನೇಂತ ರಂಪ ಮಾಡಿದ. ಎರಡು ದಿನ ಬಿಟ್ಟು ಹೋಗಿ ಮತ್ತೆ ಬಂದು ಅತ್ತ. ನನ್ನ ಸ್ವಮರ್ಯಾದೆ, ಗಂಡಸುತನ, ಅಲ್ಲಿ ನಾಶವಾಯ್ತು ಸ್ಟೂ‌ಅರ್ಟ್. ನೀನು ಮನಶ್ಯಾಸ್ತ್ರ ಓದಿ ಹೇಳೋ ಹಾಗೆ ಇದು ಬರಿ ರೋಗನಿದಾನದ ಪ್ರಶ್ನೆ ಅಲ್ಲ.”
” I ಚಿm soಡಿಡಿಥಿ ಕೇಶವ್. ಒತ್ತಾಯ ಎಲ್ಲಿದ್ದರೂ ನಾನು ಅದನ್ನ ದ್ವೇಷಿಸುತ್ತೇನೆ. ಪಾಪ ಎನ್ನೋದು ಏನಾದರು ಇದ್ದರೆ ಅದು ನಮ್ಮ ಸುಖಕ್ಕೆ ಇನ್ನೊಬ್ಬರನ್ನ ಅಸುಖಿಗಳಾಗಿ ಮಾಡೋದು. ಆ ದೃಷ್ಟಿಯಿಂದ ನೀನು ಅನ್ನೋದನ್ನ ಒಪ್ಪಿದೆ. ಆದರೆ ಹೊಮೊ-ಸೆ‌ಉ‌ಅಲಿತ್ಯ್ ಹೋಮೋಸೆಕ್ಷುಯಲಿಟಿ ಯಕ್ಕೆ ಭಯಂಕರವಾದ ಒಂದು ನರಕ ಇದೇಂತ ನಾನು ಒಪ್ಪಲ್ಲ.”
ಎಂದು ಸ್ಟೂ‌ಅರ್ಟ್ ಸಿಗರೇಟಿನ ಪ್ಯಾಕನ್ನು ಕೇಶವನಿಗೆ ಹಿಡಿದ. ಕೇಶವ ಒಂದು ಸಿಗರೇಟನ್ನು ಹಚ್ಚಿ ನನ್ನ ಜೀವನದ ಯಾವ ಭಯಂಕರ ವಿಷಯಾನ್ನ ಹೇಳಿದರೆ ಸ್ಟೂ‌ಅರ್ಟ್‌ನ ಮನಸ್ಸಿನ ಸ್ಥಿಮಿತಕ್ಕೆ ‘ಶಾಕ್’ ಆದೀತೆಂದು ಚಿಂತಿಸುತ್ತ ಕೂತ.
“ಕೌಂಟರಿನಲ್ಲಿರೋ ಹುಡುಗಿ ಚೆನ್ನಾಗಿದ್ದಾಳೆ” ಎಂದ ಕೇಶವ. ಬಿಯರಿನ ಪ್ರಭಾವ ತಲೆಗೆ ಏರಿ ಹಿತವೆನ್ನಿಸುತ್ತಿತ್ತು.
“ಸಾಮಾನ್ಯ ಇದಾಳೆ. ಃuಣ ಣhಚಿಣ is ಡಿighಣ ಚಿಣಣiಣuಜe ” ಎಂದು ಸ್ಟೂ‌ಅರ್ಟ್ ನಸುನಕ್ಕ.
“ಬಿಳಿಯ ಚರ್ಮ ಸೌಂದರ್ಯದ ಹೆಗ್ಗುರುತು ಅಂತ ತಿಳಿಯೋ ದೇಶದಿಂದ ನಾನು ಬಂದಿದೀನಿಂತ ಮರೆಯಬೇಡ.”
“ಥಿou ಚಿmಚಿze me ”
” ಶ್ರೀಕೃಷ್ಣನ ಎಳೆಯ ಜೀವನದಲ್ಲಿ ರಾಧೆ ಅವನ ಪ್ರಿಯೆ. ರಾಧೆ ಹಾಲಿನಂತಹ ಬಣ್ಣದವಳು. ಆದರೆ ಅವನ ಪಕ್ವ ವಯಸ್ಸಿನಲ್ಲಿ ದ್ರೌಪತಿ ಅವನ ಪ್ರಿಯೆಯಾಗುತ್ತಾಳೆ. ಕಾಮದ ಸೊಂಕಿಲ್ಲದ ಪ್ಲೇಟಾನಿಕ್ ಸಂಬಂಧ ಅದು. ದ್ರೌಪತಿ, ಕೃಷ್ಣೆ-ಕಪ್ಪಗಿದ್ದವಳು. ಬಣ್ಣಕ್ಕೂ ಅನುಭವದ ಪಕ್ವತೆಗೂ ಸಂಬಂಧವಿರಬೇಕು. ನಾನು ಸಧ್ಯ ಬಿಳಿಯ ಚರ್ಮದಿಂದ ಮೋಹಿತನಾದವನು. ನನ್ನ ಜನಾಂಗಕ್ಕೆ ಯೂರೋಪೇ ಕಾಶಿ, ರಾಮೇಶ್ವರ; ಪವಿತ್ರ ಯಾತ್ರಾಸ್ಥಳ. ವಿವೇಕಾನಂದ, ಟಾಗೋರ್‌ಗೆ ನಿಮ್ಮಿಂದ ಸರ್ಟಿಫಿಕೇಟ್ ಸಿಗೋವರೆಗೆ ನಮ್ಮ ದೇಶದಲ್ಲಿ ಬೆಲೆ ಸಿಗಲಿಲ್ಲ.”
“ನನಗೆ ಸೀರೆಯುಟ್ಟ ಭಾರತದ ತಾಮ್ರವರ್ಣದ ಹುಡುಗಿಯರೆಂದರೆ ಇಷ್ಟ…ಕಾಮದ ವಿಷಯದಲ್ಲಿ ನಾನು ನಿನಗಿಂತ ಪಕ್ವ ಹಾಗಾದರೆ…..!”
“ಖಂಡಿತವಾಗಿ….ಹೆಣ್ಣು ನಾನಿನ್ನೂ ಕಾಣದ ಜಗತ್ತು… ನನ್ನ ತಲೆಯೀಗ ನೆರೆತಿದೆ ವಯಸ್ಸು ಮುವತ್ತನ್ನು ದಾಟಿದೆ- ಮರೆಯಬೇಡ.”
“ಇನ್ನೊಂದು ಡ್ರಿಂಕ್” ಎಂದು ಸ್ಟು‌ಅರ್ಟ್ ಕೇಳಿದ.
“ರೈಟ್. ಆದರೆ ಬಿಯರ್ ಬೇಡ. ನಾನಿನ್ನೂ ವೋಡ್ಕಾ ಕುಡಿದಿಲ್ಲ. ಖಿತಿo smಚಿಟಟ voಜಞಚಿs . ಹೊಸ ಅನುಭವಕ್ಕಾಗಿ ನಾನು ಇಂಗ್ಲೆಂಡಿಗೆ ಬಂದಿದೀನಿ” ಎಂದು ಕೇಶವ ನಗುತ್ತ ಟಾಯಿಲೆಟ್‌ಗೆಂದು ಎದ್ದ.
‘ಒix ಮಾಡೋದು ಒಳ್ಳೇದಲ್ಲ. ಂಟಟ ಡಿghಣ… voಜಞಚಿ ಣheಟಿ ” ಎಂದು ಸ್ಟೂ‌ಅರ್ಟ್ ಎದ್ದು ಕೌಂಟರಿಗೆ ಹೋದ.
ಟಾಯಿಲೆಟ್‌ನಲ್ಲಿ ನಿಂತಾಗ ಕೇಶವನಿಗೆ ಎನ್ನಿಸಿತು: ನನ್ನ ಜೀವನದಲ್ಲಿ ಏನನ್ನು ಹೇಳಿದರೆ ಸ್ಟೂ‌ಅರ್ಟ್‌ಗೆ ಶಾಕ್ ಆದೀತು? ಎಲ್ಲವನ್ನೂ ನುಂಗಬಲ್ಲ ಅವನ ಸಮಚಿತ್ತದ ಗುಟ್ಟೇನು? ತಾನು ಯಾರಿಗೂ ಹೇಳದ ಆ ಒಂದು ಕನಸನ್ನು ಸ್ಟೂ‌ಅರ್ಟ್‌ಗೆ ಹೇಳಲೆ? ಆದರೆ ತಾನೇ ಮತ್ತೆ ನೆನಸಲು ಬಯಸದ ಆ ಕನಸನ್ನು ಯಾವ ಮಾತಿನಲ್ಲಿ ಹೇಳಲಿ? ಸ್ಟೂ‌ಅರ್ಟ್ ನಿನಗೆ ಮಾತ್ರ ಇದನ್ನ ಹೇಳ್ತಿದೀನಿ ಇವತ್ತು. ಐದಾರು ವರ್ಷಗಳ ಹಿಂದೆ ನನಗೊಂದು ಕನಸು ಬಿತ್ತು:
ಕನಸಿನಲ್ಲಿ ನಾನು…
…..ಆದರೆ ಹೇಳಲಾರೆ. ಹೇಳಿದರೆ ಸ್ಟೂ‌ಅರ್ಟ್ ಇನ್ನೊಂದು ಮನಸ್ಯಾಸ್ತ್ರದ ಸಿದ್ಧಾಂತದಿಂದ ವಿವರಿಸಬಹುದು. ಹೇಳಿದ ನಂತರ ನನಗೆ ಸ್ಟೂ‌ಅರ್ಟ್‌ನನ್ನು ಕಂಡರೆ ಅತ್ಯಂತ ಜಿಗುಪ್ಸೆ ಅನ್ನಿಸಬಹುದು. ಅತ್ಯಂತ ನನ್ನ ಒಳಗೆ ಯಾರೂ ಬರುವುದು ಬೇಡ; ನಾನೂ ಅಲ್ಲಿ ಹೋಗಲೂ ಬಯಸುವುದಿಲ್ಲ….ಗರ್ಭದೊಳಗಿನ ನಿದ್ದೆಯಲ್ಲಿರುವುದೇ ಕ್ಷೇಮ….
ವೋಡ್ಕಾ ಕುಡಿದ ಮೇಲೆ ‘ಇನ್ನು ಹೋಗೋಣ’ ಎಂದ ಸ್ಟೂ‌ಅರ್ಟ್.
“ಎಲ್ಲಿಗೆ?” ಎಂದ ಕೇಶವ.
“ಎಲ್ಲಿಗಾದರೂ-ಇದು ನಿನ್ನ ಸಂಜೆ-ನೀನೆ ಹೇಳು.”
ಎಂದು ಸ್ಟೂ‌ಅರ್ಟ್ ಬಾಗಿಲನ್ನು ಎಳೆದು ಹಿಡಿದು ‘ ಂಜಿಣeಡಿ ಥಿou ’ ಎಂದ. ಕೇಶವ ‘ ಣhಚಿಟಿಞs ’ ಎಂದು ಹೊರಗಿನ ತಂಪಾದ ಹಾಳಿಗೆಗಾಳಿಗೆ ಬಂದು-
“ಒಂದು ನೈಟ್- ಕ್ಲಬ್ಬಿಗೆ ಹೋಗೋಣ ಸ್ಟೂ‌ಅರ್ಟ್. ನನಗೆ ಹುಡುಗಿಯರನ್ನ ನೋಡ ಬೇಕು- ಸಾಧ್ಯವಾದರೆ….” ಎಂದು ಸೂಚಿಸುವ ಧ್ವನಿಯಲ್ಲಿ ಹೇಳಿದ.
” ಖighಣ . ನಾನು ವರ್ಜಿಲ್, ನೀನು ಡಾಂಟೆ. ಲಂಡನ್ನಿನ ನರಕಗಳನ್ನು ತೋರಿಸುತ್ತೀನಿ ಬಾ.”
ಎಂದು ಸ್ಟೂ‌ಅರ್ಟ್ ನಾಟಕೀಯವಾಗಿ ಏರ್ ಇಂಡಿಯಾದ ಬೊಂಬೆಯಂತೆ ಕೈ ನೀಡಿ ಬಾಗಿದ.

ಭಾಗ: ನಾಲ್ಕು

“ಅನುಭವಾನ್ನ ಹುಡುಕಿಕೊಂಡು ಹೋದರೆ, ಸಿಗೋದು ಪೂರ್ವನಿಶ್ಚಿತವಾದದ್ದು ಅಂತ ನೀನೇ ಹೇಳಿದಿ…”
ಸ್ಟೂ‌ಅರ್ಟ್ ಕೇಶವನನ್ನ ಗೇಲಿ ಮಾಡಿದ.
“ಎಂಬ ಮಾತೂ ನನ್ನ ಅನುಭವಕ್ಕೆ ಬರಬೇಕು. ನಾನು ನಿರನುಭವಿ, ನನ್ನ ಯಾವ ಮಾತಿಗೂ ಬೆಲೆಯಿಲ್ಲ.”
“ಪಿಕಡಿಲಿಯ ಒಂದು ಮೂಲೇಲಿ ಎಲ್ಲೋ ‘ರೋರಿಂಗ್ ಟ್ವಿಂಟೀಸ್’ ಎನ್ನೊ ಕ್ಲಬ್ ಇದೇಂತ ಕೇಳಿದೀನಿ- ಹೋಗೋಣ ಬಾ. ಲಂಡನ್ನಿನ ಪಾತಾಳ ಲೋಕಾನ ನೋಡುವಿಯಂತೆ.”
“ಪಾತಾಳದಲ್ಲಿ ನನ್ನ Iಟಿiಣiಚಿಣioಟಿ ಆಗಬೇಕು. Iಟಿiಣiಚಿಣioಟಿ ಎಂದರೆ ನಮ್ಮಲ್ಲಿ ಉಪನಯನ- ದ್ವಿಜನಾಗೋದು ಹಾಗೆ. ಸತ್ತು ಹೊಸ ಅನುಭವಕ್ಕೆ ಹುಟ್ಟೋದು.”
ನಿಯಾನ್ ದೀಪಗಳ ಹುಚ್ಚಿನಲ್ಲಿ ಜ್ವಲಿಸುವ ಪಿಕಡಿಲಿ ಹತ್ತಿರವಾದಂತೆ ಕೇಶವನ ಮನಸ್ಸು ಕುಣಿಯತೊಡಗಿತು. ಇದು ಯಕ್ಷರ ಲೋಕ, ಇಲ್ಲಿ ಎಲ್ಲ ಸರಿ. ನಾಟ್ಯೋತ್ಸವ ಪದ್ಯ ನೆನಪಾಯಿತು; ‘ತೇಲಿ ಬರುವ ಜಾಸ್ ಗಾನ| ನಮ್ಮ ಕುಣಿತಕಲ್ಲವೇನು?” ಬಿಯರ್ ಕುಡಿದು ಮೇಲೊಂದು ವೋಡ್ಕಾ ಕುಡಿದು ಮತ್ತಾದ ಕಣ್ಣುಗಳು ಪರವಶವಾದುವು. ಇಂಗ್ಲೆಂಡಲ್ಲಿ ಯುವಕರು ತಮ್ಮ ಗೆಳೆಯರ ಕೈ ಹಿಡಿದು, ಹೆಗಲಿನ ಮೇಲೆ ಕೈಹಾಕಿ ನಡೆಯುವುದಿಲ್ಲವೆನ್ನುವುದನ್ನು ಮರೆತು ಸ್ಟೂ‌ಅರ್ಟ್‌ನ ಹೆಗಲಿನ ಮೇಲೆ ಕೈ ಹಾಕಿ ನಡೆದ. ಧರ್ಮಜ- ದ್ರೌಪದಿಯರನ್ನು ಬೆತ್ತಲೆ ನೋಡಿ ಪಾಪಶಮನಕ್ಕೆಂದು ಪರ್ಯಟನ ಹೊರಟ ಅರ್ಜುನನ ಹಾಗೆ ನಾನು- ದಾರಿಯಲ್ಲಿ ಚಿತ್ರಾಂಗದೆ….. ಇತ್ಯಾದಿಯೆಂದು- ತನ್ನ ಊಹೆಗೆ ತಾನೇ ಹಿಗ್ಗಿದ. ಪಿಕಡಿಲಿಯಲ್ಲಿ ಒಬ್ಬ ಒಂದು ಪೋಸ್ಟರನ್ನು ಹಿಡಿದು ದಾರಿಹೋಕರನ್ನುದ್ದೇಶಿಸಿ ಎತ್ತಿದ ಧ್ವನಿಯಲ್ಲಿ ಕೂಗುತ್ತಿದ್ದ: ‘ಇಗೋ ದೇವರ ಅಂತಿಮ ತೀರ್ಮಾನದ ದಿನ ಸಮೀಪಿಸುತ್ತಿದೆ, ಪಾಪಿಗಳೇ, ಎಚ್ಚರವಾಗಿ, ಜೀಸಸ್‌ನನ್ನು ನಂಬಿ ಉದ್ಧಾರವಾಗಿ.’ ‘ ಂ ಛಿಡಿಚಿಟಿಞ ’ ಎಂದು ಸ್ಟೂ‌ಅರ್ಟ್ ನಕ್ಕ. ಮುಂದೆ ನಡೆಯುತ್ತಿದ್ದಂತೆ ಇನ್ನೊಬ್ಬ ಮಿಲಿಟರಿ ಬಟ್ಟೆ ಹಾಕಿದ Sಚಿಟvಚಿಣioಟಿ ಚಿಡಿmಥಿ ಯವನೊಬ್ಬ ಕೈಯಲ್ಲಿ ತೂತಿನ ಡಬ್ಬಿಯೊಂದನ್ನು ಹಿದಿದು ಗಂಭೀರವಾಗಿ ಹಣವನ್ನು ಬೇಡುತ್ತಿದ್ದ. ‘ ಓ‌ಔ ಇ‌ಓಖಿಖಙ ’ ಬೋರ್ಡ್ ಹಾಕಿದ ಅಡ್ಡ ದಾರಿಗಳಲ್ಲಿ ಹಾಟ್ ಡಾಗ್ಸ್, ಹ್ಯಂಬರ್ಗರ್‌ನ್ನು ಗಾಡಿ ಚೈನೀಸ್, ಇಟಾಲಿಯನ್, ಫ್ರೆಂಚ್-ಬಗೆಬಗೆಯ ರೆಸ್ಟೋರೆಂಟ್‌ಗಳು. ಯಾವ ದೇಶದ ರುಚಿ ಬೇಕು, ಯಾವ ರೀತಿಯ ಬಟ್ಟೆ ಬೇಕು, ಯಾವ ಬೆಡಗು ಬಿನ್ನಾಣ ಬೇಕು-ಅಮರಾವತಿ. ಸ್ಟೂ‌ಅರ್ಟ್ ಒಂದು ಮೂಲೆ ಹೊಕ್ಕು ಹೇಳಿದ: “ಈ ಸಂದಿಯಲ್ಲೆಲ್ಲೊ ರೋರಿಂಗ್ ಟ್ವಿಂಟೀಸ್ ಇರುವ ನೆನಪು- ಹುಡುಕೋಣ ಬಾ.”
ಒಂದು ವಿಷಯ ಖಚಿತ: ಆಂಗೀರಸ ಋಷಿಯನ್ನ ಮೂಲಪುರುಷನನ್ನಾಗಿ ಪಡೆದು, ಆಂಗೀರಸ ಅಂಬರೀಷ ಯೌವನಾಶ್ವ ತ್ರಯಾರ್ಷೇಯಪ್ರವರಾನ್ವಿತನಾಗಿ, ಆಶ್ವಲಾಯನಸೂತ್ರನಾಗಿ, ಋಕ್ಷ್ವಾಖಾಧ್ಯಾಯಿಯಾಗಿ, ಒಬ್ಬ ಯೋಗಿಯನ್ನ ಚಿಕ್ಕಪ್ಪನನ್ನಾಗಿ ಪಡೆದು, ಊಟಕ್ಕೊಂದು ಚಮಚ ಒಳ್ಳೆಣ್ಣೆಯಿಲ್ಲದಿದ್ದರೂ ದೇವರಿಗೆ ತುಪ್ಪದ ದೀಪವನ್ನು ಹತ್ತಿಸಲು ಮರೆಯದವಳನ್ನು ತಾಯಿಯನ್ನಾಗಿ ಪಡೆದು ನಾನು ಈಗ ಬಿಳಿಯನೊಬ್ಬನ ಜೊತೆ ಹೊಸ ಅನುಭವಕ್ಕೆಂದು ರೋರಿಂಗ್ ಟ್ವೆಂಟೀಸನ್ನು ಹುಡುಕುತ್ತಿರೋದರ ಅಂತರಾರ್ಥ ನನಗೆ ಬೇರು ಇಲ್ಲ ಅಂತ. ಭಾರತದ ಅಸಂಖ್ಯಾತ ಯುವಕರಂತೆ ನನಗೆ ಬುಡ ಭದ್ರವಿಲ್ಲ ಅಂತ…..
ಸಂತ, ತಪ್ತ, ಸಭ್ಯರ ಬಗ್ಗೆ, ಅನುಭವ, ನಿರನುಭವ, ಪಕ್ವತೆಯ ಬಗೆಗೆ ಯೋಚಿಸಿದ್ದು, ಸ್ಟೂ‌ಅರ್ಟ್ ಜೊತೆ ಉದ್ದೇಶದ ಬಗ್ಗೆ ಚರ್ಚಿಸಿದ್ದು ಮರುಕಳಿಸುತ್ತದೆ. ನನ್ನ ಅಪ್ಪನೂ ನಿರನುಭವಿಯಾಗಿ ತಪ್ತನಾಗಿ ಸತ್ತನೆ? ಸುಬ್ಬಣ್ಣಕಕ್ಕನೂ ನಿರನುಭವಿಯಾಗಿ ತಪ್ತನಾಗಿ ಬದರಿಕಾಶ್ರಮದಲ್ಲಿ ಅಲೆಯುತ್ತಿರಬಹುದೆ? ಸ್ಟೂ‌ಅರ್ಟ್ ಇಡಿಯ ಕತೆಯನ್ನೆ ಹೇಳಿ ಅವನ ಸಭ್ಯ ಲಿಬರಲ್ ಮನಸ್ಸಿಗೆ ಇದೆಲ್ಲ ಹೇಗೆ ತಟ್ಟುತ್ತದೆ ಎಂದು ಕೇಳಬೇಕು.
ನನ್ನ ಅಪ್ಪ ಮನೆಗೆ ಹಿರಿಯನಾಗಿ ಯಾಕೆ ಮನೆತನದ ವಹಿವಾಟನ್ನು ತನ್ನ ತಮ್ಮ ಶ್ಯಾಮಕಕ್ಕನಿಗೆ ವಹಿಸಿದ? ಅಮ್ಮ ಅನ್ನುತ್ತಿರುತ್ತಾಳೆ: ‘ತೋಟದಲ್ಲಿ ಎಷ್ಟು ಅಡಿಕೆ ಬೆಳೆದಿದೆ, ಬೆಟ್ಟೆಯೆಷ್ಟು- ಹಸ ಎಷ್ಟು, ಒಟ್ಟು ಎಷ್ಟು ಸಂಪಾದನೆಯಾಯಿತು ಒಂದನ್ನೂ ಇವರು ತಲೆಗೆ ಹಚ್ಚಿಕೊಂಡಿದ್ದಿಲ್ಲ. ಹಚ್ಚಿಕೊಂಡಿದ್ದರೆ ನೀವು ಯಾಕೆ ಹೀಗೆ ಒದ್ದಾಡಬೇಕಾಗಿ ಬರ್ತಿತ್ತು?
ಸುಖವಾಗಿ ಕಾಲು ಚಾಚಿ ಸಂಸಾರ ಮಾಡಬಹುದಿತ್ತು.’ ಪೂಜೆ, ಪುನಸ್ಕಾರ, ಭಾರತ, ಭಾಗವರಭಾಗವತ ಪಠನ; ರಾಮನವಮಿಯಲ್ಲಿ ದೇವಸ್ಥಾನದ ಕಟ್ಟೆಯ ಮೇಲೆ ಕೂತು ವಾಲ್ಮೀಕಿ ರಾಮಾಯಣವನ್ನು ಓದಿ ಕನ್ನಡದಲ್ಲಿ ವ್ಯಾಖ್ಯಾನ ಮಾಡೋದು: ಊರಿನಲ್ಲಿ ಹುಟ್ಟಿದ ಮಕ್ಕಳಿಗೆಲ್ಲ ಕುಂಡಲಿ ಹಾಕಿ ಕೊಡೋದು; ಉಪಾಕರ್ಮದ ದಿನ ಊರಿನವರಿಗೆಲ್ಲ ಉಪಾಕರ್ಮ ಮಾಡಿಸೋದು; ಗೌರಿಹಬ್ಬದ ದಿನ ಹೆಂಗಸರನ್ನೆಲ್ಲ ಮನೆಗೆ ಕರೆದು ವ್ರತ ಮಾಡಿಸೋದು; ನೆರೆಹೊರೆಯವರ ಮನೆಯ ದನ ತಪ್ಪಿಸಿಕೊಂಡರೆ ಹಲಗೆ ಮಂತ್ರಿಸಿ ಕೊಡೋದು; ಬೇರು ಬಳ್ಳಿಗಳನ್ನು ತಂದು ಖಾಹಿಲೆಯಾದವರಿಗೆ ಮುಟ್ಟಸ ಮಾಡೋದು- ಏನಾದರೂ ಸಮಯ ಉಳಿದರೆ, ಜನಿವಾರ ಮಾಡ್ತ ಕೂರೋದು. ಅಮ್ಮನಿಗೇನಾದರೂ ಸೀರೆ ಬೇಕಾದರೆ ಅಪ್ಪ ತನ್ನ ತಮ್ಮನ ಹತ್ತಿರ ಹೋಗಿ ಅದೂ ಇದೂ ಮಾತಾಡಿ, ಕೆಮ್ಮಿ ‘ಮಾರಾಯ ನೋಡು- ಇವಳಿಗೊಂದು ಸೀರೆ ಬೇಕಂತೆ. ಕೈಯಲ್ಲಿ ದುಡ್ಡಿಲ್ಲದಿದ್ದರೆ ಬ್ಯಾರಿ ಅಂಗಡೀಲಿ ಕಡಾ ಆದರೂ ಬರಿಸಿ ತಗೊಂಬಾ, ಹೆಚ್ಚು ಬೆಲೇದೇನೂ ಬೇಕೂಂತಿಲ್ಲ’ ಎಂದು ಅಳೆದು ಹೊಯ್ದು ಕೇಳುವುದು ನೋಡಿದರೆ ಅಮ್ಮನಿಗೆ ಸಿಡಿಸಿಡಿ ಎನ್ನುತ್ತಿತ್ತಂತೆ. ಅಪ್ಪನದು ಹೀಗೆ ವೈದಿಕವೃತ್ತಿಯಾದರೆ ಶ್ಯಾಮಕಕ್ಕನದು ಸಂಪೂರ್ಣ ಲೌಕಿಕ. ಊರಿನಲ್ಲಿ ಏನು ಗಲಾಟೆಯಾಗಲಿ, ಪಾಲು ಪಂಚಾಯ್ತಿ ನಡೆಯಲಿ ಅಲ್ಲಿ ಶ್ಯಾಮಕಕ್ಕ ಇರಬೇಕು. ಕೋರ್ಟು ಕಚೇರಿಯೆಂದು ಅವ ಯಾವತ್ತೂ ಸಾಗರ ಶಿವಮೊಗ್ಗ ಅಲೆಯುತ್ತಿದ್ದ. ನಮಗಿದ್ದ ಆಸ್ತಿ ಅಷ್ಟರಲ್ಲೆ ಇದ್ದರೂ ಸದಾ ನಾಲ್ಕೈದು ಕೇಸುಗಳು ಸಾಗರದ ಕೋರ್ಟಿನಲ್ಲಿ ಇರುತ್ತಿದ್ದುವು. ಹೀಗಾಗಿ ಹೊರಗೆ ಹೇಗೋ ಹಾಗೆಯೇ ಅಡಿಗೆ ಮನೆ ಒಳಗೆ ಕಾರುಬಾರು ನಡೆಸುವವಳು ಚಿಕ್ಕಮ್ಮ. ಹಿರಿಯಳಾದರೂ ಅಮ್ಮನಿಗೆ ಅಲ್ಲಿ ಮಾತಿಲ್ಲ. ‘ಒಂದಿಷ್ಟು ತುಪ್ಪಕ್ಕೆ, ನಿಮಗಿಷ್ಟು ಹಾಲಿಗೆ ಅವಳನ್ನು ನಾನು ಕೇಳಬೇಕಾಗ್ತಿತ್ತು ಕಣೋ’- ಎನ್ನುತ್ತಾಳೆ ಅಮ್ಮ. ಇದು ಹೆಚ್ಚು ದಿನ ಉಳಿಯಲಿಲ್ಲ- ಅಮ್ಮ ಚಿಕ್ಕಮ್ಮನ ನಡುವೆ ಛಿದ್ರ ದೊಡ್ಡದಾಗಿ ಮನೆ ಪಾಲಾಯಿತು. ಅಪ್ಪ ಅದಕ್ಕೆ ಹೂ ಎನ್ನಲಿಲ್ಲ, ಊಹೂ ಎನ್ನಲಿಲ್ಲ. ಅಪ್ಪನಿಗೆ ಪಾಲಿನ ಜೊತೆ ಚಿಕ್ಕಪ್ಪನ ಅದ್ಧೂರಿ ಕಾರುಬಾರಿನಿಂದಾದ ಸಾಲವೂ ತಲೆಯ ಮೇಲೆ ಬಂತು. ಪಾಲು ಆದ ಮೇಲೂ ಅಪ್ಪ ಶುದ್ಧ ವೈದಿಕನಾಗಿಯೇ ಉಳಿದ. ಅಡಿಕೆ-ವ್ಯಾಪಾರ ಇತ್ಯಾದಿ ಕೆಲಸಕ್ಕೆ ಸಾಗರಕ್ಕೊ ಶಿವಮೊಗ್ಗೆಗೊ ಹೋಗಬೇಕಾಗಿ ಬಂದರೆ- ‘ಪೇಟೇಲಿ ನನಗೆ ಸ್ನಾನ ಸಂಧ್ಯಾವಂದನೆಗೆ ಅಡಚಣೆ ಆಗ್ತದಪ್ಪ. ನಿನ್ನ ಅಡಿಕೇ ಜೊತೇಲಿ ನನ್ನದನ್ನೂ ಅಷ್ಟು ಮಾರಿ ಬಾ’ ಎಂದು ಚಿಕ್ಕಪ್ಪನಿಗೆ ವಹಿಸಿಬಿಡುತ್ತಿದ್ದ.
ಆದರೆ ವಿಚಿತ್ರವೆಂದರೆ ಅಪ್ಪ ಸಾಯುವುದಕ್ಕೆ ಮುಂಚೆ ಅವರ ಇಳಿವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಬದಲಾದದ್ದು. ಸದಾ ಸೌಮ್ಯವಾಗಿರುತ್ತಿದ್ದವನು ಬೆಂಕಿಗೆ ಬಿದ್ದ ಉಪ್ಪಿನಂತೆ ಕಿಡಿಕಿಡಿಯೆನ್ನತೊಡಗಿದ. ವೈದಿಕವೃತ್ತಿಯಲ್ಲಿ ತತ್ಪರವಾದ ಮನಸ್ಸು ಹಣದ ಕಡೆ ತಿರುಗಿತು. ದಪ್ಪ ಗಾಜಿನ ಕನ್ನಡಕ ಹಾಕಿಕೊಂಡು ಹಳೆಯ ಕಡತಗಳನ್ನೆಲ್ಲಾ ಹೊರಗೆ ತೆಗೆದು ಧೂಳು ಹೊಡೆದು ಲೆಖ್ಖವನ್ನೆಲ್ಲಾ ಕೂಡಿಸಲು ಶುರುಮಾಡಿದ. ಶ್ಯಾಮಕಕ್ಕನನ್ನು ಒಂದು ದಿನ ಕರೆದು, ನಿನ್ನಂತಹ ಠಕ್ಕ ಬೇರೊಬ್ಬನಿಲ್ಲೆಂದು ವಾಚಾಮಗೋಚರ ಬೈದ. ಯಾವತ್ತೊ ಯಾರಿಗೊ ಕೊಟ್ಟ ಒಂದಾಣೆ ಎರಡಾಣೆ ಸಾಲವನ್ನೆಲ್ಲ ತಗಾದೆ ಮಾಡಿ ವಸೂಲು ಮಾಡತೊಡಗಿದ. ದೇವರ ಪೂಜೆಯಲ್ಲಿದ್ದಾಗಲೂ ಥಟ್ಟನೆ ಏನೋ ನೆನೆದು, ಅಮ್ಮನನ್ನು ಕರೆದು- ‘ಏನೇ ಅಡಿಕೇ ಸುಲಿಯೋರು ಬಂದರೇನೇ? ಚಪ್ಪರದ ಮೇಲೆ ಒಣಗ್ತಿರೋ ಅಡಿಕೇನ್ನ ಸುಲಿಯೋ ಹೆಂಗಸರು ಮಡಿಲಲ್ಲಷ್ಟು ಕಟ್ಟಿಕೊಂಡು ಹೋದರೂ ಅಷ್ಟು ಬಂಗಾರಾನೇ ಹೋದಂಗೆ- ಸ್ವಲ್ಪ ನಿಗಾ ಇರಲೇ’- ಎಂದು ಸದಾ ರಗಳೆ ಮಾಡಲು ಶುರುಮಾಡಿದ. ಕಣ್ಣಿನದೃಷ್ಟಿ ಮಂದವಾಗುತ್ತಿದ್ದಂತೆ, ಕಿವಿ ಕಿವುಡಾಗುತ್ತಿದ್ದಂತೆ ಲೋದಕಲೋಕದ ಮೇಲಿನ ಆಸಕ್ತಿ ಇನ್ನಷ್ಟು ಬಿಗಿಯಹತ್ತಿತು. ಯಾವ ಹೆಜ್ಜೆ-ಸಪ್ಪಳ ಕೇಳಿದರೂ ‘ಯಾರದು?’ ಎಂದು ತಡವಿಕೊಂಡು ಬಂದಾಯಿತು; ಯಾರು ಏನು ಆಡುತ್ತಿದ್ದರೂ ‘ಏನದು’ ಎಂದು ಕೂಡಲೇ ತಿಳಿಯಬೇಕು; ಹೆಂಡತಿ ಮಕ್ಕಳು ತಾನು ಹಾಕಿದ ಗೆರೆ ಮೀರಕೂಡದು, ತನ್ನನ್ನು ಕೇಳದೆ ಏನೂ ಮಾಡಕೂಡದು- ಸಾಯುವಾಗ ಅಪ್ಪ ಅತ್ಯಂತ ಕರುಣಾಜನಕ ದೃಶ್ಯವಾದ.
ವೈದಿಕಧರ್ಮದಲ್ಲಿ ಬೇರು ಬಿಟ್ಟ ಅಪ್ಪ ಯಾಕೆ ಹೀಗೆ ಬದಲಾದ?- ಅವನ ಜೀವನವನ್ನು ನಡೆಸಿದ ನಂಬಿಕೆ ಎಷ್ಟು ಪೊಳ್ಳು ಎಷ್ಟು ನಿಜ- ತನ್ನ ಹಾಗೆ ಅವನು ತಪ್ತನೆ, ಅಕ್ಕತಂಗಿಯರ ಹಣ್ಣಿನ ಮರದಂತೆ ಅವನು ಒಳಗೆ ಠೊಳ್ಳೆ?ಟೊಳ್ಳೆ?
ಅಪ್ಪನ ಕತೆ ಹೀಗಾದರೆ ಶಾಮಕಕ್ಕನದು ಇನ್ನೊಂದು. ಮೋಸ, ದಗ, ವಂಚನೆ ಮಾಡಿ ದುಡಿದದ್ದನ್ನೆಲ್ಲ ಸೂಳೆಯರ ಮೇಲೆ ಸುರಿದ, ಕೋರ್ಟುಗಳಿಗೆ ಅಲೆದು ಪೋಲು ಮಾಡಿದ. ಅವನ ಕಾಮ ಸೆಗಣಿ ತೆಗೆಯುವ ಹೊಲತಿಯನ್ನೂ ಬಿಡಲಿಲ್ಲ-ಸಿಕ್ಕಿಬಿದ್ದು ಗಲಾಟೆಯಾದರೂ ಅವ ಜಗ್ಗಲಿಲ್ಲ. ಸೀರೆಯುಟ್ಟದ್ದೊಂದು ಕಣ್ಣೆದುರು ಸುಳಿದರೆ ಸಾಕು ಬೆನ್ನುಹತ್ತುವ ಸ್ವಭಾವ ಅದು. ಅವನು ಠಿಕಾಣಿ ಬಿಟ್ಟಲೆಲ್ಲ ಸೂಳೆಯರು-ಶಿವಮೊಗ್ಗೆಯಲ್ಲಿ, ಸಾಗರದಲ್ಲಿ, ಬಸರೂರಿನಲ್ಲಿ, ಹಿತ್ತಿಲಿನಲ್ಲಿ, ಗುಡ್ಡದಲ್ಲಿ, ತೋಟದಲ್ಲಿ. ಆದರೆ ಈಗ ಅವನ ದರ್ಬಾರೆಲ್ಲ ಮಾಯವಾಗಿದೆ; ಕೈಯಲ್ಲಿದ್ದ ಹಣ ಖರ್ಚಾಗಿದೆ; ಡಯಾಬಿಟಿಸ್ ರೋಗದಿಂದ ಜೀರ್ಣನಾಗಿದ್ದಾನೆ; ಮನೆತನದ ಮರ್ಯಾದೆಯೆಂದು ಸದಾ ಜಪಿಸುತ್ತಾನೆ. ದುರ್ಗಾಪೂಜೆ, ಸತ್ಯನಾರಾಯಣವ್ರತ, ತೀರ್ಥಯಾತ್ರೆ-ಹೀಗೇ ಹೇಗೋ ಕಾಲ ಹಾಕುತ್ತಾನೆ.

ಇವರಿಬ್ಬರಿಗಿಂತ ಕೇಶವನಿಗೆ ಅತಿ ವಿಚಿತ್ರವೆನ್ನಿಸುವುದು ಅಪ್ಪನ ಕಿರಿಯ ತಮ್ಮ ಸುಬ್ಬಣ್ಣಕಕ್ಕನದು. ಅವನು ಕಿರಿಯ ವಯಸ್ಸಿನಲ್ಲೆ ಮನೆ ಬಿಟ್ಟು ಊರಿನಲ್ಲಿದ್ದ ಮಠವನ್ನು ಸೇರಿದ. ಅತ್ಯಂತ ನಿಷ್ಠ ಬ್ರಾಹ್ಮಣನಾದ. ದಿನಕ್ಕೊಂದು ಹೊತ್ತು ಮಾತ್ರ ಊಟ. ವರ್ಷಕ್ಕೊಮ್ಮೆ ಬೇಡಿ ಎರಡು ಪಾಣಿಪಂಚೆಯನ್ನು ಪಡೆದು ಒಂದನ್ನು ಒಗೆದು ಹಾಕಿದಾಗ ಇನ್ನೊಂದನ್ನು ಉಡುವುದು. ಒಮ್ಮೆ ಕೇಶವನ ಕಣ್ಣೆದಿರೆ ಯಾವನೋ ಒಬ್ಬ ಹುಚ್ಚ ಬಂದು ಸುಬ್ಬಣ್ಣಕಕ್ಕನ ಹತ್ತಿರ ‘ನನಗೊಂದು ವಸ್ತ್ರವನ್ನುಡಲು ಕೊಡು’ ಎಂದು ಕೇಳಿದ. ‘ಉಟ್ಟದ್ದನ್ನು ಕೊಡಕೂಡದು’ ಎಂದು ಸುಬ್ಬಣ್ಣಕಕ್ಕ. ‘ಪರವಾಗಿಲ್ಲ ಕೊಡು’ ಎಂದು ಹುಚ್ಚ ದುಂಬಾಲು ಬಿದ್ದ. ಸುಬ್ಬಣ್ಣಕಕ್ಕ ಉಟ್ಟ ವಸ್ತ್ರವನ್ನು ಬಿಚ್ಚಿಕೊಟ್ಟು ಬರಿಯ ಕೌಪೀನದಲ್ಲಿ ಉಳಿದ. ಆ ವರ್ಷವೆಲ್ಲ ಇನ್ನೊಂದು ವಸ್ತ್ರವನ್ನು ಅವನು ಬೇಡಲಿಲ್ಲ. ಅವನ ದಿನ ಪ್ರಾತಃಕಾಲ ನಾಲ್ಕು ಗಂಟೆಗೆ ಪ್ರಾರಂಭವಾಗುತ್ತಿತ್ತು. ಹೊಳೆಯಲ್ಲಿ ಸ್ನಾನ ಮಾಡಿ, ಮೂರು ಗಂಟೆಗಳ ಕಾಲ ನಿಂತು ಜಪ ಮಾಡಿ, ನಂತರ ಮತ್ತಷ್ಟು ಓದಿ, ಮಧ್ಯಾಹ್ನ ಮತ್ತೆ ಸ್ನಾನ ಮಾಡಿ, ಸುಡುವ ಬಿಸಿಲಲ್ಲಿ ನಿಂತು ಜಪ ಮಾಡಿ, ಎಲ್ಲರೂ ಊಟಕ್ಕೆ ಕೂತಿದ್ದಾಗ ತನ್ನದೊಂದು ಪುಟ್ಟ ಬಟ್ಟಲನ್ನು ಹಿಡಿದು ‘ಭವತಿ ಭಿಕ್ಷಾಂದೇಹಿ’ ಎಂದು ಎಲ್ಲರಿಗೆ ಒಡ್ಡಿ ಹಿಡಿ ಹಿಡಿ ಅನ್ನವನ್ನು ಪಡೆದು ಅದನ್ನಷ್ಟು ಊಟ ಮಾಡಿ, ಮತ್ತೆ ಓದಲು ಕೂರುವುದು. ಸಂಜೆ ಮತ್ತೆ ಹೊಳೆಯಲ್ಲಿ ಸ್ನಾನ ಮಾಡಿ, ಜಪ. ಜಪ ಮುಗಿದ ಮೇಲೆ ಮಠದ ಗೋಡೆಯ ಕಿಂಡಿಯಲ್ಲಿ ಹತ್ತಿಸಿಟ್ಟ ಹಣತೆಯ ದೀಪದ ಎದುರು ನಿಂತು ಅದು ಆರುವವರೆಗೂ ಅಧ್ಯಯನ. ದೀಪ ಚಿಕ್ಕದಾಗಿ ಉರಿಯುತ್ತಿದ್ದರೆ ಅದನ್ನು ದೊಡ್ಡದಾಗಿ ಉರಿಸಿಕೊಳ್ಳುತ್ತಿರಲಿಲ್ಲ. ಇರುವಷ್ಟು ಬೆಳಕಿನಲ್ಲಿ, ಬೆಳಕು ಇರುವಷ್ಟು ಕಾಲ ಓದಿ, ಅಲ್ಲೆ ನೆಲದ ಮೇಲೆ ಮಲಗಿ, ನಿದ್ದೆ. ದುಡ್ಡನ್ನು ಕೈಯಿಂದ ಮುಟ್ಟುತ್ತಿರಲಿಲ್ಲ. ವರ್ಷಕ್ಕೊಂದು ತಿಂಗಳು ದಿನಕ್ಕೊಂದು ಹೊತ್ತಿನ ಊಟವನ್ನೂ ಬಿಟ್ಟು ಬರಿಯ ದಾಸವಾಳದ ಹೂವನ್ನು ತಿಂದು ಜೀವನ. ಹೊಟ್ಟೆ ಬೆನ್ನಿಗೆ ಅಂಟಿ, ಎದೆ ಎಲುಬು-ಗೂಡಾಗಿ-ಯಜ್ಞಕುಂಡದಲ್ಲಿ ಉರಿಯುವ ಅಶ್ವಥಕಾಷ್ಟದಂತೆ ತಪಸ್ಸಿನಲ್ಲಿ ಉರಿಯುತ್ತಿದ್ದ ಅವನ ಶರೀರದಲ್ಲಿ ಎರಡು ಕಣ್ಣುಗಳು ಪ್ರಶಾಂತ ಜ್ವಾಲೆಗಳಂತಿದ್ದವು.

ತನ್ನ ಅಪ್ಪ ಅಮ್ಮನ ಶ್ರಾದ್ಧಕ್ಕೆಂದು ಮಾತ್ರ ಮನೆಗೆ ಬರುತ್ತಿದ್ದ ಸುಬ್ಬಣ್ಣಕಕ್ಕ ಒಂದು ದಿನ ಅಕಸ್ಮಾತ್ ಮನೆಗೆ ಬಂದ. ಅಪ್ಪನ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ. ಅಪ್ಪ ‘ದೀರ್ಘಾಯುವಾಗು’ ಎಂದು ಅವನನ್ನು ಹರಸಿದರು. ಸುಬ್ಬಣ್ಣಕಕ್ಕ ಎದ್ದು ನಿಂತು ಕತ್ತನ್ನು ಬಾಗಿಸಿ ಕೈಮುಗಿದು ಹೇಳಿದ:
“ಇವತ್ತು ಬೆಳಿಗ್ಗೆ ಜಪಕ್ಕೆಂದು ಏಳುವ ಮುಂಚೆ ದೈವಾಜ್ಞೆಯಾದ ಹಾಗೆ ಅನಿಸಿತು ನೀನಿನ್ನು ಸ್ವತಂತ್ರನಾಗುವ ಕಾಲ ಬಂದಿದೆ, ಆ ಅಧಿಕಾರವನ್ನ ನೀನು ಪಡೆದಿ ಅಂತ. ಜಪ ಮುಗಿದ ಮೇಲೆ ಚಿಂತೆಯಾಯಿತು: ದೈವಾಜ್ಞೆಯೆಂದು ನಾನು ಬಗೆದಿದ್ದು ನಿದ್ದೆಗಣ್ಣಲ್ಲಿದ್ದ ನನ್ನ ಭ್ರಮೆಯೋ, ನನ್ನ ಶರೀರದಲ್ಲಿ ಭಗ್ನವಾಗದೆ ಉಳಿದಿರುವ ನನ್ನ ಅಹಂಕಾರದ ಮೋಸವೋ ಬಗೆಹರಿಯಲಿಲ್ಲ. ಹೊರಗೆ ಬಂದು ಒಂದು ಅಶ್ವಥದ ಎಲೆಯನ್ನು ಗಾಳಿಗೆ ಹಿಡಿದು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸಿ ಹೇಳಿದೆ: ದೈವಾಜ್ಞೆ ಎಂದು ನಾನು ಬಗೆದದ್ದು ನಿಜವಾದರೆ ಇದು ಅಂಗಾತನೆ ಬೀಳಲಿ-ಇಲ್ಲವೇ ಮಗುಚಿ ಬೀಳಲಿ. ಗಾಳಿಯಲ್ಲಿ ಎಲೆ ಸುತ್ತಿ ಸುತ್ತಿ ಅಂಗಾತ ಬಿತ್ತು. ದೈವಾಜ್ಞೆಯ ನಂತರ ಹಿರಿಯನ ಆಜ್ಞೆಗೆಂದು ನಿಮ್ಮ ಹತ್ತಿರ ಬಂದಿದ್ದೇನೆ. ನಾನು ಸನ್ಯಾಸವನ್ನು ಸ್ವೀಕರಿಸಿದರೆ ಆತ್ಮಶ್ರಾದ್ಧವನ್ನು ಮಾಡಿಕೊಂಡು ಎಲ್ಲ ಸಂಬಂಧವನ್ನೂ ತೊರೆಯಬೇಕಾಗುತ್ತದೆ-ಪಿತೃ‌ಋಣ, ಗುರು‌ಋಣ, ದೇವ‌ಋಣ, ಇತ್ಯಾದಿ ಎಲ್ಲ ಋಣದ ಭಾರವನ್ನು ನಿಮ್ಮೊಬ್ಬರ ತಲೆಯ ಮೇಲೆ ಹೊರಿಸಬೇಕಾಗುತ್ತದೆ. ನನಗೆ ಆ ಅಧಿಕಾರ ಇದೆಯೆ ಎಂದು ನಿಮ್ಮ ಅನುಜ್ಞೆಗೆ ಕಾದಿದ್ದೇನೆ.”
ಮಾತನ್ನು ಮುಗಿಸಿ ಸುಬ್ಬಣ್ಣಕಕ್ಕ ಹಾಗೆಯೇ ಕೈಮುಗಿದು ವಿಗ್ರಹದ ಹಾಗೆ ನಿಂತ. ಅಪ್ಪನ ಕಣ್ಣಲ್ಲಿ ನೀರು ಸುರಿಯಿತು. ಯಾರೂ ಮಾತಾಡಲಿಲ್ಲ. ಕೊನೆಗೆ ಆರ್ದ್ರವಾದ ಕಂಠದಿಂದ ಅಪ್ಪ ಅಂದರು:
“ನೀನು ಮಹಾತ್ಮ. ದೈವಾಜ್ಞೆಯನ್ನು ತಡೆಯುವ ಅಧಿಕಾರ ನನಗೆ ಎಲ್ಲಿದೆ? ನಿನ್ನ ತಪಸ್ಸಿನಿಂದ ಪಶು-ಪಕ್ಷಿಯಾದಿಯಾಗಿ ಸಮಸ್ತಕ್ಕೂ ಕಲ್ಯಾಣವಾಗಲಿ.”
ಅಪ್ಪ ನಮ್ಮನ್ನೆಲ್ಲ ಕರೆದು ಸುಬ್ಬಣ್ಣಕಕ್ಕನ ಕಾಲಿಗೆ ಎರಗಲು ಹೇಳಿದರು.
“ನೀನು ಸನ್ಯಾಸಿಯಾಗಿ ಬಾ ಮಗು. ಆಗ ನಿನ್ನ ಕಾಲಿಗೆ ನಾನೂ ಎರಗಿ ಕರ್ಮದಿಂದ ಬಿಡುಗಡೆ ಹೊಂದುತ್ತೇನೆ. ಈಗ ನಿನಗೆ ನಾನು ನಮಸ್ಕಾರ ಮಾಡಿದರೆ ನಿನ್ನ ಆಯಸ್ಸಿಗೆ ಒಳ್ಳೆಯದಲ್ಲ.”
ಎಂದು ಅಪ್ಪ ಕಣ್ಣೊರೆಸಿಕೊಂಡು ಅಮ್ಮನನ್ನು ಹತ್ತಿರ ಕರೆದು ‘ದೇವರಿಗೆ ಇನ್ನೊಂದು ದೀಪ ಹಚ್ಚಿ ಬಾ’ ಎಂದರು.
ಸುಬ್ಬಣ್ಣಕಕ್ಕ ಮತ್ತೆ ಅಣ್ಣನಿಗೆ ಅತ್ತಿಗೆಗೆ ನಮಸ್ಕರಿಸಿ, ಮೆಟ್ಟಿಲಿಳಿದು, ತಿರುಗಿ ನೋಡದೆ ನಡೆಯುತ್ತಿದ್ದಂತೆ ಅಪ್ಪ,
“ನಿನ್ನ ಪ್ರಾಣವಾಯುವನ್ನ ಕಾಯುವ ಭೌತಶರೀರಾನ್ನ ತೀರಾ ಅಸಡ್ಡೇಂದ ನೋಡಬೇಡಪ್ಪ” ಎಂದರು.
ಸುಬ್ಬಣ್ಣಕಕ್ಕ ಕಾವಿಯನ್ನು ಧರಿಸಿ ಕೈಯಲ್ಲೊಂದು ದಂಡವನ್ನೂ ಕಮಂಡಲವನ್ನೂ ಹಿಡಿದು ಬದರಿಕಾಶ್ರಮಕ್ಕೆ ನಡೆದ.
*
*
*
ಸ್ಟೂ‌ಅರ್ಟ್ ಮತ್ತು ಕೇಶವ ಒಂದು ಕ್ಷುದ್ರವಾಗಿ ಕಾಣುವ ಐದು ಅಂತಸ್ತಿನ ಮನೆಯ ಎದುರು ಬಂದು ನಿಂತರು. ಕೆಳಗೆ ‘ರೋರಿಂಗ್ ಟ್ವೆಂಟೀಸ್’ ಎಂದು ಬೋರ್ಡ್ ಇತ್ತು. ಆದರೂ ಇನ್ನೂ ಬಾಗಿಲು ತೆಗೆದಿರಲಿಲ್ಲ. ತೆರೆಯುವ ಕಾಲ ಕಾಲ ರಾತ್ರಿ ೧೦-೩೦ ಎಂದು ಬರೆದಿತ್ತು. ‘ಈಗಿನ್ನೂ ಗಂಟೆ ೮-೩೦’ ಎಂದ ಸ್ಟೂ‌ಅರ್ಟ್. ‘ಏನು ಮಾಡೋಣ?’ ಎಂದು ಕೇಶನನ್ನುಕೇಶವನನ್ನು ಕೇಳಿದ. “ನೀನು ಹೇಳಿದ ಹಾಗೆ. ಬೇರೆ ಎಲ್ಲಾದರೂ ಹೋಗೋಣ” ಎಂದು ಕೇಶವ ಹೇಳಿದ. ದಾರಿಯಲ್ಲಿ ಇಂಗ್ಲಿಷಿನಲ್ಲಿ ಅತ್ಯಂತ ಕಷ್ಟದಿಂದ ಮಾತು ಹುಡುಕುತ್ತ ಅಪ್ಪ ಚಿಕ್ಕಪ್ಪನ ಕತೆಯನ್ನು ಹೇಳಿದ. ಹೇಳಿ ಮುಗಿಸಿದ ಮೇಲೆ ಒಂದು ಪ್ರಶ್ನೆ ಅವನನ್ನು ಕಾಡಿತು. ಅಮ್ಮ, ತಂಗಿಯರು, ಮಾಧು, ಅಪ್ಪ, ಶ್ಯಾಮಕಕ್ಕ, ಸುಬ್ಬಣ್ಣಕಕ್ಕ, ಸ್ಟೂ‌ಅರ್ಟ್, ತಾನು- ತಪ್ತರು, ಸಂತರು, ಸಭ್ಯರು, ಅನುರಾಗಿಗಳು, ವಿರಾಗಿಗಳು, ಅಮ್ಮನ ಹಾಗೆ ಯಾವ ಸ್ವಾರ್ಥವೂ ಇಲ್ಲದೆ ಮದುವೆ ಮುಂಜಿಯೆಂದು ಬಾಳನ್ನು ನಡೆಸುವವರು…. ಗುರಿಯೇನು, ಗಮ್ಯವೇನು….ಹೊಳೆಯುವುದಿಲ್ಲ. ಅಪ್ಪ, ಶ್ಯಾಮಕಕ್ಕ, ತಾನು, ಪ್ರಾಯಶಃ ಮಾಧು-ಅದೃಶ್ಯದಲ್ಲಿ, ಅವ್ಯಕ್ತದಲ್ಲಿ, ಅಚಿಂತ್ಯದಲ್ಲಿ ಬೇರುಬಿಟ್ಟದ್ದೊಂದು ನಮ್ಮ ನಾಲ್ವರ ಸ್ವಭಾವದಲ್ಲೂ ಇಲ್ಲದೇ ಇರಬಹುದು; ತಿರುಳಿನಲ್ಲಿ ಶೂನ್ಯವಿರಬಹುದು; ನಮ್ಮ ಸ್ವಭಾವದ ಮತ್ತು ನಮ್ಮನ್ನು ಆವರಿಸಿದ ಪದಾರ್ಥ ಲೋಕದ ಮೇಲಿನ ನಮ್ಮ ಹಿಡಿತ ಸಡಿಲವಾದ ಕ್ಷಣ, ಕಪ್ಪು-ಶೂನ್ಯ ನಮ್ಮನ್ನು ಆವರಿಸಿಬಿಡಬಹುದು. ಯಾವುದಕ್ಕಾದರೂ ಜೋತು ಬಿದ್ದಿರಲೇಬೇಕು ನಾವು-ಭಯಂಕರವಾದ ಠೊಳ್ಳು ಶೂನ್ಯ ಒಳಗೆ. ಸ್ವಭಾವದ ಪ್ರಳಯದಲ್ಲಿ ಬದುಕ ಹೊರಟ ನಮ್ಮ ಜೀವನದಲ್ಲಿ ಧೃಡತೆಯಿಲ್ಲ, ಕೌಶಲವಿಲ್ಲ-ಕೋಲಾಹಲ, ಕುದಿ, ಉರಿ, ಸ್ಟೂ‌ಅರ್ಟ್‌ನಂತಾಗಲಿ, ಸುಬ್ಬಣ್ಣಕಕ್ಕನಂತಾಗಲೀ ಕುಲುಮೆಯಲ್ಲಿಟ್ಟು, ಎರಕದಲ್ಲಿ ಹೊಯ್ದು, ತಿದ್ದಿ, ತೀಡಿ, ಒಳಗಿನಿಂದೊಂದು ಶಿಲ್ಪವನ್ನು ರೂಪಿಸಿಕೊಳ್ಳುವ ಕೌಶಲವಿಲ್ಲ. ನನಗೆ ನನ್ನ ಬಾಳು ಹಾಗೊಂದು ಪೂರ್ವನಿಶ್ಚಿತ ಶಿಲ್ಪವಾಗುವುದರಲ್ಲಿ ನಂಬಿಕೆಯೂ ಇಲ್ಲ. ಹತ್ತಿಕೊಂಡದ್ದು ಸಂಪೂರ್ಣ ಉರಿದು ಬೂದಿಯಾಗಬೇಕು. ಅದು ಶುಭ್ರ, ಇಲ್ಲವೇ ಕರಟಿ ಮಸಿಯಾಗುತ್ತದೆ.

ಭಾಗ : ಐದು

ಕಿರಿದಾದ ಸುತ್ತಿಕೊಂಡು ಹೋಗುವ ತುಕ್ಕು ಹಿಡಿದ ಕಬ್ಬಿಣದ ಮಹಡಿ ಮೆಟ್ಟಿಲಗಳ ಬುಡದಲ್ಲೊಂದು ಗೂಡಿನಂತಹ ಜಾಗ. ಅಲ್ಲೊಬ್ಬ ಪ್ಲಕಾರ್ಡ್ ಹಿಡಿದ ನೀಗ್ರೊ:
SಖಿಖIP ಖಿ‌ಇಂSಇ
ಔ‌ಓ ಖಿ‌ಊ‌ಇ ಈ‌ಐ‌ಔ‌ಔಖ Sಊ‌ಔW
ಹತ್ತು, ಹತ್ತು ಶಿಲಿಂಗ್ ಕೊಟ್ಟು ಕೇಶವ ಎರಡು ಟಿಕೆಟ್‌ಗಳನ್ನು ಪಡೆದ. ತನ್ನ ಪಾಲಿನ ಹತ್ತು ಶಿಲಿಂಗ್‌ನ್ನು ಸ್ಟೂ‌ಅರ್ಟ್ ಕೊಡಹೋದರೆ ‘ಬೇಡ, ಇವತ್ತು ನೀನು ನನ್ನ ಗೆಸ್ಟ್’ ಎಂದ. ಕಿರಿದಾದ ಮೆಟ್ಟಿಲುಗಳನ್ನು ಕೇಶವ ಮುಂದಾಗಿ, ಸ್ಟೂ‌ಅರ್ಟ್ ಹಿಂದಾಗಿ ಹತ್ತಿಹೋಗಿ ಕಪ್ಪು ಕರ್ಟನ್ ಹಾಕಿದ್ದ ಒಂದು ರೂಮನ್ನು ಹೋಗುತ್ತಿದ್ದಂತೆ, ಎಲ್ಲ ದೀಪಗಳು ಥಟ್ಟನೆ ಆರಿ, ಮಿಣಿ ಮಿಣಿ ಒಂದು ದೀಪ ಮಾತ್ರ ಕೆಂಪಗೆ ಎಲ್ಲಿಂದಲೋ ಉರಿದು, ಕೇಶವನಿಗೆ ದಿಗ್ಭ್ರಮೆಯಾಯಿತು.
‘ಸ್ಟೂ‌ಅರ್ಟ್’ ಎಂದು ಕರೆದು ಗೆಳೆಯನಿಗಾಗಿ ಕೈನೀಡುತ್ತಿದ್ದಂತೆ ಒಬ್ಬ ಹುಡುಗಿ ಎಲ್ಲಿಂದಲೋ ಪ್ರತ್ಯಕ್ಷಳಾಗಿ ಅವನ ಕೈ ಹಿಡಿದು ಮೃದುವಾಗಿ ಎಳೆದಳು. ಇನ್ನೊಂದು ಕ್ಷಣದಲ್ಲಿ ಕೇಶವ ಮೆತ್ತನೆಯ ಸೋಫ ಒಂದರ ಮೇಲೆ ಕೂತಿದ್ದ. ಪಕ್ಕದಲ್ಲಿ ಹುಡುಗಿ ಕೂತಿದ್ದಳು. ಕೆಂಪು ದೀಪದ ಮಬ್ಬಿನಲ್ಲಿ ‘ಸ್ಟೂ‌ಅರ್ಟ್’ ‘ಸ್ಟೂ‌ಅರ್ಟ್’ ಎಂದು ಒಣಗಿದ ಗಂಟಲಿನಲ್ಲಿ ಕರೆಯುತ್ತ ಹುಡುಕಿದ.
“ನಿನ್ನ ಗೆಳೆಯನೆಲ್ಲಿ ಎಂದು ಹುಡುಕುತ್ತಿದ್ದಿ ಅಲ್ಲವೆ? ಇಲ್ಲಿಗೆ ಬರುವವರೆಲ್ಲ ಮೊದಲು ಹಾಗೇ ಮಾಡುತ್ತಾರೆ. ನಂತರ ಸರಿಹೋಗುತ್ತಾರೆ….”
“ಅಹಾ?” ಎಂದು ಕೇಶವ ಚೇತರಿಸಿಕೊಂಡ.
“ಇದು ಎಲ್ಲ ಸ್ಟ್ರಿಪ್ ಟೀಸ್ ಕ್ಲಬ್ಬುಗಳಂತಲ್ಲ. ಇಲ್ಲಿ ನಿನಗೆ ವಿಶೇಷವಾದ ಅನುಭವವಾಗುತ್ತದೆ….ಎಲ್ಲ ದೇಶದ ಎಲ್ಲ ಜನಾಂಗದ ಹುಡುಗಿಯರನ್ನೂ ನೀನು ಇಲ್ಲಿ ಬೆತ್ತಲೆ ನೋಡಬಹುದು-ಓಹೋ-ಮಾತಿನ ಭರದಲ್ಲಿ ಪರಿಚಯ ಮಾಡಿಕೊಳ್ಳುವುದಕ್ಕೆ ಮರೆತೆ. ನಾನು ಜೆನೆಟ್-ನೀನು?”
“ನಾನು ಕೇಶವ್…”
“ಕೇಶವ್-ಮುದ್ದಾಗಿದೆ ಹೆಸರು….ಇಲ್ಲಿ ಹವ ನಿನಗೆ ಒಗ್ಗುತ್ತದೆ?”
“ಈ ಸಾರಿ ವಿಂಟರ್ ಹೋದ ಸಾರಿಯಷ್ಟು ಭಯಂಕರವಾಗಿಲ್ಲವೆನ್ನುತ್ತಾರೆ ನಿಜವೆ?”
“ಜೀಸಸ್-ಹೋದ ವಿಂಟರನ್ನು ಮತ್ತೆ ನೆನಪು ಮಾಡಬೇಡ.”
ಸ್ವಲ್ಪ ಹೊತ್ತು ಮೌನ. ಕೇಶವ ಮಾತಿಗಾಗಿ ಹುಡುಕುತ್ತ ಕೂತ. ಆದರೆ ಜೆನೆಟ್ ತಾನೇ ಮಾತಿಗೆ ಪ್ರಾರಂಭಿಸಿದಳು;
“ನಮ್ಮ ಜೊತೆ ಒಬ್ಬ ಸಿಲೋನ್ ಹುಡುಗಿಯಿದ್ದಾಳೆ. ನಮಗೆ ನಾಚಿಕೆಯಾಗುವಂತೆ ಇಂಗ್ಲಿಷ್ ಮಾತಾಡ್ತಾಳೆ- ನಿನ್ನ ಇಂಗ್ಲಿಷ್ ಕೂಡ ಎಷ್ಟು ಚೆನ್ನಾಗಿದೆ!”
“ನಿನ್ನ ಮುಖ ನನಗೆ ಕಾಣಿಸುತ್ತಿಲ್ಲ. ಹೀಗೆ ಕತ್ತಲಲ್ಲಿ ಮುಖ ನೋಡದೆ ಮಾತಾಡೋದು ಕಷ್ಟ ಅಲ್ಲವೆ?-ದೀಪವನ್ನು ಹಾಕಲೆ?”
ಕೇಶವ ಧೈರ್ಯ ತಂದು ಕೇಳಿದ. ಅವನಲ್ಲಿ ಸ್ಟೂ‌ಅರ್ಟ್ ಎಲ್ಲಿ ಕೂತಿರಬಹುದೆಂದು ತವಕ-ಗಾಬರಿ. ಇನ್ನೆರಡು ಜನ ಒಳಗೆ ಬಂದ ಸದ್ದು, ಸೋಫದ ಮೇಲೆ ಕೂತ ಸದ್ದು, ಪಿಸ ಪಿಸ ಮಾತು.
“ಇಲ್ಲಿ ಬರುವವರೆಲ್ಲ ಕತ್ತಲೆಯನ್ನು ಬಯಸುತ್ತಾರೆ. ನಿನ್ನ ಆಸೆ ವಿಚಿತ್ರ. ಸ್ವಲ್ಪ ತಾಳು-ಬೆಳಕಾಗುತ್ತದೆ.”
ಜೆನೆಟ್ ಬೆತ್ತಲೆಯಾಗಿರಬಹುದೆ ಎಂದು ಕೇಶವನಿಗೆ ಆಸೆಯಾಯಿತು; ಆಗಿರಬಹುದೆಂದು ಭಯವಾಯಿತು. ಮೆಲ್ಲಗೆ ಅವಳನ್ನು ತಡವಿದೆ:-ಇಲ್ಲ-ಬಟ್ಟೆ ಹಾಕಿದ್ದಳು. ಸಮಾಧಾನವಾಗಿ ನಿರಾಸೆಯಾಯಿತು.
“ಇಲ್ಲಿ ಕುಡಿಯಬಹುದು ಕೇ…ಇನ್ನೊಮ್ಮೆ ನಿನ್ನ ಹೆಸರು ಹೇಳು…ಸೊರ್ರ್ಯ್….”
“ಕೇಶವ್.”
ತಾನೇ ಮೊದಲು ಸೂಚಿಸಬಾರದಿತ್ತೆ- ತಪ್ಪಾಯಿತು- ಎಂದು ಕೇಶವ ‘ಎರಡು ಶೆರಿ’ ಎಂದ.
ಎರಡು ಶೆರಿಯನ್ನು ತಂದಿಟ್ಟವಳ ಮುಖವೂ ಕಾಣಿಸಲಿಲ್ಲ. ಇನ್ನಿಬ್ಬರು ಒಳಬಂದ ಸದ್ದು…ಪಿಸ, ಪಿಸ, ಮಾತು. ಯಾರೋ ಇಬ್ಬರು ದೊಡ್ಡದೊಂದು ಪೆಟ್ಟಿಗೆಯನ್ನು ಹೊತ್ತು ಒಳಗೆ ತೆಗೆದುಕೊಂಡು ಹೋದ ಸದ್ದು- ಆಯಾಸದ ಉಸಿರು… ರೂಮಿನ ತುಂಬ ಅಸ್ಪಷ್ಟ ರೂಪಗಳು….
ಕೂತ ಎಲ್ಲರೂ ಶೆರಿಯನ್ನು ಆರ್ಡರ್ ಮಾಡಿರಬೇಕು; ತಟ್ಟೆ ಹಿಡಿದು ಒಬ್ಬಳು ಖಿhಚಿಟಿಞs ಎನ್ನುತ್ತಾ ಶೆರಿಯನ್ನು ಕೊಟ್ಟ ಸದ್ದು. ಎಲ್ಲರೂ ತನ್ನಂತೆ ಶೆರಿಯನ್ನು ಆರ್ಡರ್ ಮಾಡಿದಾರೆ, ಸ್ಟೂ‌ಅರ್ಟ್ ಕೂಡ- ಎಂದು ಸಮಾಧಾನ. ಕಡ್ಡಿ ಗೀರಿದ ಬೆಳಕು, ಅಲ್ಲೊಂದು ಇಲ್ಲೊಂದು ಮುಖ ಮತ್ತೆ ಕತ್ತಲು…ಸುತ್ತಲೂ ಕೆಂಪು ತುದಿಯ ಸಿಗರೇಟುಗಳು. ಕೇಶವ ತಾನೊಂದು ಸಿಗರೇಟ್ ಹಚ್ಚಿದ. ಜೆನೆಟ್‌ಗೊಂದನ್ನು ಕೊಟ್ಟು ಮತ್ತೆ ಕಡ್ಡಿ ಗೀರಲು ಹೋದ. ‘ಬೇಡ ನಿನ್ನ ಸಿಗರೇಟಿನ ಟiಟಿಞ ಕೊಡು’ ಎಂದಳು. ಖಿhಚಿಟಿಞs ಎಂದಳು.
ಮಿಣಮಿಣನೆ ಮಿನುಗುತ್ತಿದ್ದ ಕೆಂಪು ದೀಪವೂ ಆರಿ ಕತ್ತಲು ಕವಿಯಿತು. ಎದುರಿನಿಂದೊಂದು ಫರದೆ ಸರಿದ ಸಪ್ಪಳ. ಅದರೊಳಗಿಂದ ಫಕ್ಕನೆ ಉಜ್ವಲವಾದೊಂದು ದೀಪ, ಮೆತ್ತಗೊಂದು ಪಿಯಾನ್ಪಿಯಾನೊ ವಾದನದ ರಿಕಾರ್ಡ್ ಪ್ರಾರಂಭವಾಯಿತು. ಬೆಳಕಿನ, ಸಂಗೀತದ ಆವೃತ್ತದಲ್ಲೊಬ್ಬಳು ಹುಡುಗಿ ಕುಣಿಯುತ್ತ ಬಂದಳು- ಸಂಪೂರ್ಣ ವಸ್ತ್ರಾಲಂಕೃತೆಯಾಗಿ,
“ಹುಡುಗಿ ಚೆನ್ನಾಗಿದ್ದಾಳೆ ಅಲ್ಲವೆ?”
ಜೆನೆಟ್ ಪ್ರಶ್ನೆಗೆ ಕೇಶವ ‘ಹೌದು’ ಎಂದ. ದೀಪ ಹತ್ತಿದಾಗ ಕೇಶವನಿಗೆ ಮತ್ತೆ ಎನ್ನಿಸಿದ ಭಯ, ಆಸೆ, ವಸ್ತ್ರ ಉಟ್ಟವಳನ್ನು ಕಂಡು ಮಾಯವಾಗಿ ನಿರಾಸೆಯಾಗಿತ್ತು.
ಬೆಳಕಿನ ವೃತ್ತದಿಂದ ಕತ್ತಲೆಗೆ, ಮತ್ತೆ ಬೆಳಕಿಗೆ ಅವಳು ಸಂಗೀತ ನಾದಕ್ಕೆ ಕೈ ಬಾಚಿ ಓಲಾಡುತ್ತ, ಮೈ ಬಳುಕಿಸುತ್ತ, ಬೆಲ್ಟ್ ಬಿಚ್ಚಿ ತೆರೆಯಾಚೆಯಿಂದ ಒಡ್ಡಿದ ಕೈಗೆ ಕೊಟ್ಟಳು. ಪಿಯಾನೊ- ವಾದನದ ಜೊತೆಗೆ ಈಗ ಒಂದು ವಯೋಲಾದ ಧ್ವನಿ ಬೆರೆಯಿತು. ಬಾಯಲ್ಲೊಂದು ಚೂಯಿಂಗ್ ಗಮ್ಮನ್ನು ಸವಿಯುತ್ತ, ತುಟಿಯಲ್ಲಿ ನಸುನಗುತ್ತ, ತನ್ನ ಡ್ರೆಸ್ಸಿನ ಜಿಪ್ಪನ್ನು ಎಳೆದಳು. ಕಚ್ಚುವ, ಚೀಪುವ, ನುಂಗುವ, ಸವಿಯುವ ಮೂಕ ಅಭಿನಯದಲ್ಲಿ ಗಲ್ಲವನ್ನು ಅಲ್ಲಾಡಿಸುತ್ತ ಹೆಗಲಿನಿಂದ ಡ್ರೆಸ್ಸನ್ನು ಸರಿಸಿ ಕೆಳಗೆ ಜಾರುವಂತೆ ತಳ್ಳಿ, ಥಟ್ಟನೆ ಎಳೆದು ಅದನ್ನು ಮತ್ತೆ ಧರಿಸಿ, ನಾಚಿಕೆಯಿಂದ ಮುಖ ಮುಚ್ಚಿಕೊಂಡಳು. ಮತ್ತೆ ಬೆನ್ನು ತಿರುಗಿಸಿ, ಡ್ರೆಸ್ಸನ್ನು ಸೊಂಟದವರೆಗೆ ಜರುಗಿಸಿ, ಎತ್ತಿಕೊಂಡಳು.
“ಅವಳ ಹೆಸರು ರೋಸಿ- ಪ್ಯಾರಿಸ್‌ನಿಂದ ‘ಸ್ಟ್ರಿಪ್ ಟೀಸ್’ ಕಲಿತು ಬಂದಿದ್ದಾಳೆ. ಇಲ್ಲಿರುವ ಎಲ್ಲ ಹುಡುಗಿಯರನ್ನೂ ಮೀರಿಸುತ್ತಾಳೆ” ಎಂದು ಜೆನೆಟ್ ಪಿಸುಗುಟ್ಟಿದಳು.
ಸಂಗೀತದ ವೇಗ ಹೆಚ್ಚುತ್ತ ಹೋಯಿತು. ಕೇಶವನಿಗೆ ತಿಳಿಯದ ಇನ್ನೆರಡು ವಾದ್ಯಗಳು ಬೆರೆತುಕೊಂಡವು. ಭಯದಿಂದ ಕೇಶವನ ಎದೆ ಹೊಡೆದುಕೊಳ್ಳಹತ್ತಿತು. ತೋಳು ಕಂಕುಳು ಬರಿದಾಯಿತು. ಬೆಳಕಿನ ವೃತ್ತದಲ್ಲಿದ್ದವಳು ಗಾಬರಿಯಾದವಳಂತೆ ಕತ್ತಲೆಗೆ ಸರಿದಳು. ಸಂಗೀತದ ಪರಾಕಾಷ್ಠೆಯಲ್ಲಿ ಬೆಳಕಿಗೆ ಮತ್ತೆ ಬಂದಳು- ಬ್ರೇಸಿಯರ್ಸ್ ಮತ್ತು ಕಾಚವನ್ನು ಮಾತ್ರ ಧರಿಸಿ. ಒಂದು ಕ್ಷಣ….ಎರಡು ಕ್ಷಣ…..ಕಪ್ಪು ಪರದೆ ಬಿತ್ತು.
ರೂಮಿನಲ್ಲಿ ಕಣ್ಣು ಕುಕ್ಕುವಂತಹ ದೀಪಗಳು ಹತ್ತಿಕೊಂಡವು. ಬೆಳಕನ್ನು ನೋಡಲಾರದೆ ನಿದ್ದೆಯಿಂದೆದ್ದವನಂತೆ ಕೇಶವ ಕಣ್ಣುಗಳನ್ನುಜ್ಜಿಕೊಂಡ. ಕೈಯಿಂದ ಕಣ್ಣುಗಳನ್ನು ಮರೆಮಾಡಿ ಸ್ಟೂ‌ಅರ್ಟ್‌ನನ್ನು ಹುಡುಕಿದ. ಇನ್ನೊಂದು ಮೂಲೆಯಲ್ಲಿ ಸೀರೆಯುಟ್ಟ ಸಿಲೋನ್ ಹುಡುಗಿಯೊಬ್ಬಳ ಜೊತೆ ಕೂತು ಸ್ಟೂ‌ಅರ್ಟ್ ಶೆರಿ ಕುಡಿಯುತ್ತಿದ್ದ. ಮಧ್ಯವಯಸ್ಸಿನ ತ್ರೀಪೀಸ್ ಸೂಟು ಧರಿಸಿದವನೊಬ್ಬ ತೊಡೆಯ ಮೇಲೆ ಹ್ಯಾಟನ್ನು ಇಟ್ಟು ನೀಗ್ರೋ ಹುಡುಗಿಯ ಜೊತೆ ಮಾತಾಡುತ್ತಿದ್ದ. ಉಳಿದವರು ತನ್ನಂತೆಯೆ ಬೇರೆ ಬೇರೆ ಬಣ್ಣದ ಕೂದಲಿನ ಬಿಳಿ ಹುಡುಗಿಯರ ಜೊತೆ ಕೂತಿದ್ದರು. ಅವರಲ್ಲಿ ಇಬ್ಬರು ನೀಗ್ರೋ ಹುಡುಗರು ಇದ್ದರು.
ತಾವು ಕೂತಿದ್ದ ಜಾಗವನ್ನು ಕಂಡು ಕೇಶವನಿಗೆ ಬೆರಗಾಯಿತು. ಎರಡು ಕಪ್ಪು ಫರದೆಗಳನ್ನು ಬಿಟ್ಟರೆ ರೂಮು ಕೆಂಪು ಬಣ್ಣದ ಓರೆ ಕೋರೆಯಾಗಿ ಜೋಡಿಸಿದ ಇಟ್ಟಿಗೆಗಳಿಂದ ಒಂದು ಗುಹೆಯ ರೂಪದಲ್ಲಿತ್ತು. ಪೊಟರೆಗಳಂತಹ ಸಂದಿಗಳಲ್ಲಿ ಸೋಫಗಳು. ಒಂದು ಮೂಲೆಯಲ್ಲಿ ಚಾಚಿದ ಕೆಂಪು ಇಟ್ಟಿಗೆಗಳ ಗೂಡಿನಲ್ಲಿ ಸೀಸೆಗಳು. ಅಲ್ಲೆ ಒಂದು ಮೇಜು, ಕುರ್ಚಿ; ಕುರ್ಚಿಯ ಮೇಲೆ ಆ ಕ್ಲಬ್ಬಿನ ಒಡತಿಯಂತೆ ಕಾಣುವ, ಬೆಳ್ಳಿಯ ಫ್ರೇಮಿನ ಕನ್ನಡಕ ಹಾಕಿಕೊಂಡ, ನೋಡಲು ಉಪಾಧ್ಯಾಯಿನಿಯಂತೆ ಇದ್ದ ಒಬ್ಬ ಹೆಂಗಸು. ಕೇಶವ ಇನ್ನೊಮ್ಮೆ ತಾವು ಕೂತಿದ್ದ ಜಾಗವನ್ನು ನೋಡಿದ: ಈಗ ಅದರ ಒಟ್ಟು ಸ್ವರೂಪ ಗುಹೆಯಂತೆ ಕಾಣಲಿಲ್ಲ. ಗಕ್ಕನೆ ಎನಿಸಿತು: ಮಾಂಸಖಂಡಗಳಂತೆ ಕೆಂಪಾಗಿ ವಿವಿಧ ಪದರಗಳಲ್ಲಿ ಜೋಡಿಸಿದ್ದ ಇಟ್ಟಿಗೆಯ ಈ ಪ್ರದೇಶ ಗರ್ಭಕೋಶದಂತೆ ತನಗೆ ಕಾಣುತ್ತಿಲ್ಲವೆ?
“ಈ ರೂಮ್ ನಿನಗೆ ಹಿಡಿಸಿತೆ? ಎಂದಳು ಜೆನೆಟ್, ಕೇಶವ ಪರೀಕ್ಷಿಸುತ್ತಿರುವುದನ್ನು ನೋಡಿ.
“ಹೌದು” ಎಂದು ಕೇಶವ ಜೆನೆಟ್‌ನ್ನು ನೋಡಿ ನಕ್ಕ.
“ಇದರ ಆಕಾರದ ಬಗ್ಗೆ ನಿನಗೆ ಏನನ್ನಿಸಿತು?”
“ಮೊದಲು ಗುಹೆಯಂತೆ ಎನ್ನಿಸಿತು. ಈಗ ಗರ್ಭಕೋಶದಂತೆ ಇದೆ ಎಂದು ಅನ್ನಿಸುತ್ತದೆ.”
ಒಬ್ಬೊಬ್ಬರಿಗೆ ಒಂದೊಂದು ಥರ ಎನ್ನಿಸುತ್ತೆ. ನಾನು ಇಲ್ಲಿ ಸಂಧಿಸಿದ ಪ್ರತಿಯೊಬ್ಬ ಗೆಳೆಯನೂ ಬೇರೆ ಬೇರೆ ರೀತಿಯಲ್ಲಿ ಇದನ್ನು ವರ್ಣಿಸಿದ್ದಾನೆ.”
ಮೂಲೆಯಲ್ಲಿ ಬರೆಯುತ್ತಿದ್ದ ಒಡತಿ ಪುಟ್ಟಪುಟ್ಟ ತಟ್ಟೆಗಳಲ್ಲಿ ಬಿಲ್‌ಗಳನ್ನು ತಂದಳು. ಕೇಶವ ತನ್ನ ಬಿಲ್ಲನ್ನೆತ್ತಿ ಅದರಲ್ಲಿ ಮೂವತ್ತು ಶಿಲಿಂಗ್ ಎಂದು ಬರೆದದ್ದನ್ನು ನೋಡಿ ಕಂಗಾಲಾದ. ಅಬ್ಬಬ್ಬ ಎಂದರೆ ತಾವು ಕುಡಿದ ಶೆರಿಯ ಬೆಲೆ ಆರು ಅಥವಾ ಎಂಟು ಶಿಲಿಂಗ್. ‘ಸ್ಟೂ‌ಅರ್ಟ್’ ಎಂದ. ಬಿಲ್ ತಂದ ಒಡತಿ “ನಿನ್ನ ಗೆಳೆಯನ ಹೆಸರು ಸ್ಟೂ‌ಅರ್ಟ್ ಎಂದೆ? ಎಷ್ಟು ಸೊಗಸಾದ ಹೆಸರು, ಅಲ್ಲವೇ ಜೆನೆಟ್?” ಎಂದಳು.
ಸ್ಟೂ‌ಅರ್ಟ್‌ಗೆ ಕೇಶವ ಕರೆದದ್ದು ಕೇಳಿಸಲಿಲ್ಲ. ಜೆನೆಟ್ ಹೇಳಿದಳು:
“ಇವನ ಹೆಸರು ಕೇಶವ್- ಇವನದೂ ಸೊಗಸಾದ ಹೆಸರು. ಅಲ್ಲವೇ ಬಾಬರಾ?” ಒಡತಿ ಬಾಬರಾ ಹೇಳಿದಳು:
“ಚಿಲ್ಲರೆ ಇಲ್ಲದಿದ್ದರೆ ಚಿಂತೆಯಿಲ್ಲ. ಎರಡು ಪೌಂಡುಗಳನ್ನು ಕೊಡು- ನಾನು ಚಿಲ್ಲರೆ ಕೊಡುತ್ತೇನೆ.”
ಕೇಶವ ‘ಪರವಾಗಿಲ್ಲ’ ಎಂದು ಜೇಬಿನಿಂದ ಮೂವತ್ತು ಶಿಲಿಂಗ್‌ಗಳನ್ನು ತಟ್ಟೆಯ ಮೇಲಿಟ್ಟ. ‘ಸರ್ವಿಂಗ್ ಚಾರ್ಜ್ ಎರಡೂವರೆ ಶಿಲಿಂಗ್’ ಎಂದಳು. ಬಾಬರಾ. ಇನ್ನೊಂದು ಎರಡೂವರೆ ಶಿಲಿಂಗ್‌ನ್ನು ಕೇಶವ ತಟ್ಟೆಗೆ ಹಾಕಿದ. ಬಾಬರಾ ಖಿhಚಿಟಿಞs ಎಂದು ಮುಂದೆ ಹೋದಳು. ಜೆನೆಟ್ ಕೇಶವನ ಕೈಹಿಡಿದು,
“ಇಲ್ಲಿ ಬರುವವರೆಲ್ಲ ನಿನ್ನಂತೆ ಬಿಲ್ ನೋಡಿ ಗಾಬರಿಯಾಗುತ್ತಾರೆ, ನಾನು ಇಲ್ಲಿ ಹೋಸ್ಟೆಸ್. ನನಗೆ ಶೆರಿಯನ್ನು ಕುಡಿಸಲೆಂದು ನಿನಗೆ ವಿಶೇಷವಾದ ಚಾರ್ಜ್ ಮಾಡಲಾಗಿದೆ, ಅಷ್ಟೆ. ಅheeಡಿ uಠಿ ಜಚಿಡಿಟiಟಿg” ಎಂದಳು.
“ಂಟಟ ಡಿighಣ. ಇನ್ನೊಂದು ಸಿಗರೇಟ್?” ಎಂದು ಕೇಶವ ತನ್ನ ಬೆವರೊರೆಸಿಕೊಂಡು ಜೆನೆಟ್‌ಗೆ ಸಿಗರೇಟನ್ನು ಹಿಡಿದ. ಜೆನೆಟ್ ಎರಡು ಸಿಗರೇಟನ್ನು ತೆಗೆದು,
“ನನ್ನ ಗೆಳತಿಗೊಂದು- ಪರವಾಗಿಲ್ಲ ತಾನೆ?” ಎಂದಳು.
“ಓಹೋ” ಎಂದ ಕೇಶವ.
….ದೀಪವಾರಿ ಕತ್ತಲೆಯಾಯಿತು. ಫರದೆ ಸರಿಯಿತು. ಒಳಗಿನ ದೋಪದೀಪ ಹತ್ತಿಕೊಂಡಿತು. ಸ್ಟೂ‌ಅರ್ಟ್ ಕತ್ತಲೆಯಲ್ಲಿ ಕೇಶವನ ಬಳಿ ಬಂದು, ಕೈಹಿಡಿದು, ಅವನ ಕಿವಿಯಲ್ಲಿ ಅನ್ನುತ್ತಿದ್ದಂತೆ ಬೆಳಕಿಗೆ ಅರೆ- ನಗ್ನ ರೋಸಿ ಬಂದಿದ್ದಳು. ‘ಏನು’ ಎಂದು ಅವಸರದಲಿಅವಸರದಲ್ಲಿ ಕೇಶವ ಕೇಳಿದ. ಪಿಯಾನೊ- ಸಂಗೀತ ಪ್ರಾರಂಭವಾಯಿತು.
“ಇದು ಕ್ಲಿಪ್ ಜಾಯಿಂಟ್ ಕೇಶವ್, ಇಲ್ಲಿರುವ ಹೆಂಗಸರು ಷರ್ಕ್ಸ್, ಜೇಬನ್ನು ಕತ್ತರಿಸಿ ಕಳಿಸುತ್ತಾರೆ. ಅನುಭವ ಇಲ್ಲದೆ ಇಲ್ಲಿಗೆ ನಿನ್ನನ್ನು ಕರಕೊಂಡು ಬಂದೆ-ಕ್ಷಮಿಸು. ಇಲ್ಲಿ ಇನ್ನೊಂದು ಕ್ಷಣಾ ಇರೋದು ಬೇಡ, ಬಾ” ಎಂದು ಸ್ಟೂ‌ಅರ್ಟ್ ಕೇಶವನನ್ನು ಎಳೆದ.
ಕೇಶವ ತಬ್ಬಿಬ್ಬಾದ. ರೋಸಿಯಿಂದ ಅವನಿಗೆ ಕಣ್ಣನ್ನು ಕೀಳಲಾಗಲಿಲ್ಲ-
“ಸ್ಟೂ‌ಅರ್ಟ್ ಡಾರ್ಲಿಂಗ್- ಇನ್ನು ನಿಮ್ಮಿಂದ ಏನೂ ಹಣವನ್ನು ತೆಗೆದುಕೊಳ್ಳುವುದಿಲ್ಲ. ಡ್ರಿಂಕ್ ಆರ್ಡರ್ ಮಾಡಿರದಿದ್ದರೆ ಈ ಹಣಾನ್ನ ಕೊಡಬೇಕಾಗಿ ಬರ್ತಿರಲಿಲ್ಲ. ನಿನ್ನ ಗೆಳೆಯ ಇದ್ದು ಹೋಗಲಿ” ಎಂದು ಜೆನೆಟ್ ಮೃದುವಾಗಿ ಹೇಳಿದಳು.
ಕೇಶವ ಯಾಚಿಸುವ ಧ್ವನಿಯಲ್ಲಿ-
“ಸ್ವಲ್ಪ ಹೊತ್ತು ಇದ್ದು ಹೋಗೋಣ- ಸ್ಟೂ‌ಅರ್ಟ್. ಯಾಕೆ ಅವಸರ?” ಎಂದ.
‘ಔh! I ಚಿm soಡಿಡಿಥಿ’ ಎಂದು ಸ್ಟೂ‌ಅರ್ಟ್ ತಿರುಗಿ ತಾನು ಕೂತಿದ್ದ ಜಾಗಕ್ಕೆ ಹೋದ. ಅರ ನಗ್ನಳಾಗಿದ್ದ ರೋಸಿ ಒಂದೊಂದಾಗಿ ಬ್ರೇಸಿಯರ್‌ಗೆ ಸಿಕ್ಕಿದ ತೆಳುವಾದ ಮಸ್ಲಿನ್ ಬಟ್ಟೆಗಳನ್ನು ಸರಿಸುತ್ತ ಓಲಾಡಿದಳು. ಅನಂತರ ಒಂದೊಂದಾಗಿ ಬಿಚ್ಚಿದ್ದನ್ನು ಚಾಚಿದ ಕೈಗೆ ನೀಡುತ್ತ ಬೆಳಕಿನಿಂದ ಕತ್ತಲೆಗೆ, ಕತ್ತಲೆಯಿಂದ ಬೆಳಕಿಗೆ ಪ್ರತ್ಯಕ್ಷವಾಗಿ, ಮಾಯವಾಗಿ, ಕೊನೆಗೆ ಬಿಚ್ಚಿದ ಬ್ರೇಸಿಯರನ್ನು ಮೊಲೆಗಳಿಗವಚಿಕೊಂಡು ನಾಚಿ ನಿಂತಳು. ಸ್ನಾನ ಮಾಡಿ ಮಡಿ ಉಟ್ಟು ಬಂದ ಬ್ರಾಹ್ಮಣ ಹೆಂಗಸರ, ಕೊಟ್ಟಿಗೆಯಲ್ಲಿ ಸಗಣಿ ಎತ್ತುವ ಹೆಣ್ಣುಗಳ ನಗ್ನ ಎದೆಗಳನ್ನು ನೋಡಿದಾಗ ಏನೊಂದು ಭಾವನೆ ಅನ್ನಿಸದಿದ್ದರೂ ಈಗ ಮಾತ್ರ ಕೇಶವನಿಗೆ ಬೆಚ್ಚಗಾಗಿ ಭಯವಾಯಿತು. ನಾಚಿದವಳು ಮುಖವೆತ್ತಿ ಧೈರ್ಯ ತಂದುಕೊಂಡು ಬ್ರೇಸಿಯರನ್ನು ಚಾಚಿದ ಕೈಗಿತ್ತು ನಿಂತಳು. ಮತ್ತೆ ಗಲ್ಲವನ್ನು ಸವಿಯುವಂತೆ ಅಲ್ಲಾಡಿಸುತ್ತ ಕಾಚಕ್ಕೆ ಸಿಕ್ಕಿಸಿದ ಮಸ್ಲಿನ್ ಬಟ್ಟೆಗಳನ್ನು ಒಂದೊಂದಾಗಿ ಸರಿಸಿ ಚಾಚಿದ ಕೈಗೆ ಎಸೆದಳು. ಕೊನೆಗೆ ಬರಿ ಕಾಚದಲ್ಲಿ ನಿಂತು ಅಲ್ಲೆ ಹಾಸಿದ್ದ ಸುಪ್ಪತ್ತಿಗೆಯ ಮೇಲೆ ಮಲಗಿ, ಕೂತವರಿಗೆ ಬೆನ್ನು ಮಾಡಿ, ಕಾಚವನ್ನು ಸರಿಸಿ ಬಿಚ್ಚಿದಳು. ನಂತರ ಮೆಲ್ಲಮೆಲ್ಲನೆ ಮಗ್ಗುಲಾಗುವಂತೆ ನಟಿಸುತ್ತ, ಮುಖವನ್ನು ಮಾತ್ರ ತಿರುಗಿಸಿ, ನಾಚಿಕೆಯಿಂದ ಕಣ್ಣು ಮುಚ್ಚಿದಳು.
ಕೇಶವನ ಕಣ್ಣು ನೋಡುವ ಕಾಮದಿಂದ ಜ್ವಲಿಸಿತು; ಮೈಮುಟ್ಟುವ ಕಾಮದಿಂದ ಜ್ವಲಿಸಿತು; ಕಿವಿ ಅವಳು ನರಳುವುದನ್ನು ಕೇಳುವ ಕಾಮದಿಂದ ಜ್ವಲಿಸಿತು; ನಾಲಗೆ ಅವಳ ಮುತ್ತಿನ ರುಚಿಯನ್ನು ಅನುಭವಿಸುವ ಕಾಮದಿಂದ ಜ್ವಲಿಸಿತು. ಇನ್ನೇನು ಸಂಪೂರ್ಣ ತಿರುಗಿ ಬಿಡುವಳು ಎನ್ನುವಷ್ಟು ತಿರುಗುತ್ತಿದ್ದಾಳೆಯೆ?-ಭಯವಾಯಿತು. ಬೆಂಕಿಯ ಜ್ವಾಲೆಗಳ ನಡುವೆ ನಿಂತು ನೋಡಿದ- ವಿದ್ಯುಚ್ಛಕ್ತಿಯನ್ನು ತುಂಬಿಕೊಂಡ ಪಾತಾಳದ ಹಳಿಗಳಂತೆ, ಕೈಯಲ್ಲೆತ್ತಿದ ಸೆಟೆದ ಸರ್ಪದಂತೆ, ಎಲ್ಲ ಬಾಗಿಲುಗಳೂ ಧಡೀರನೆ ತೆರೆದುಕೊಂಡಂತೆ ಇಲ್ಲ, ಥಟ್ಟನೆ ನಾಚಿದಂತೆ ಇಲ್ಲದವಳಂತೆ ಬೆನ್ನು ತಿರುಗಿಸಿದಳು.
ಫರದೆ ಬಿದ್ದಿತು-
ಮತ್ತು ಎಲ್ಲ ದೀಪಗಳೂ ಹತ್ತಿ ಅಸಹ್ಯವಾದ ಬೆಳಕಾಯಿತು.
ಕಣ್ಣುಗಳನ್ನು ಮುಚ್ಚಿ ಕೇಶವ “ನಾನು ಒಳಗೆ ಹೋಗಬಹುದೆ?” ಎಂದ. ಜೆನೆಟ್ “ಬಾಬರಾ” ಎಂದು ಒಡತಿಯನ್ನು ಕರೆದು “ಕೇಶವ್ ಒಳಗೆ ಹೋಗಬೇಕಂತೆ” ಎಂದಳು. ಸ್ಟೂ‌ಅರ್ಟ್ ಎದ್ದು ಬಂದು “ಬಾ ಕೇಶವ್” ಎಂದ. ಕೇಶವ “ಇಲ್ಲ- ನಾನು ಒಳಗೆ ಹೋಗಲೇಬೇಕು” ಎಂದ. “ಬೇಡ ಕೇಶವ್. ಅವಳ ಮೊಲೆಗಳು ಜೋತು ಬಿದ್ದಿದ್ದಾವೆ. ಇದಕ್ಕಿಂತ ಸುಂದರವಾದದ್ದನ್ನು ನೋಡುವೆಯಂತೆ- ಬೇರೆ ಎಲ್ಲಾದರೂ ಹೋಗೋಣ” ಎಂದು ಸ್ಟೂ‌ಅರ್ಟ್ ಯಾಚಿಸುವ ಧ್ವನಿಯಲ್ಲಿ ಕೇಶವನಿಗೆ ಒತ್ತಾಯ ಮಾಡಿದ.
“ಸಾಧ್ಯವಿಲ್ಲ-ನಾನು ಹೋಗಲೇ ಬೇಕು” ಎಂದು ಕೇಶವ ಸ್ಟೂ‌ಅರ್ಟ್‌ನಿಂದ ಕೈ ಎಳೆದುಕೊಂಡ. ಬಾಬರಾ ಮೆಲ್ಲನೆ ಕೇಶವನನ್ನು ಎಳೆದು ಒಳಗೆ ಕರೆದುಕೊಂಡು ಹೋದಳು.
*
*
*
ಒಳಗೆ ಮೂರು ಕೋಣೆಗಳಿದ್ದವು. ಒಂದರ ಮೇಲೆ ಒಙSಖಿ‌ಇಖಙ ಃಙ ಙ‌ಔUಖ SIಆ‌ಇ ಎಂದು ಬರೆದಿತ್ತು. ಇನ್ನೊಂದರ ಮೇಲೆ ಒಙSಖಿ‌ಇಖಙ ಖ‌ಇಗಿ‌ಇಂಐ‌ಇ‌ಆ Iಓ ಆಂಖ‌ಏ‌ಓ‌ಇSS ಎಂದು ಬರೆದಿತ್ತು. ಮೂರನೇ ಕೋಣೆಯ ಮೇಲೆ ಮಾಸಿದ ಅಕ್ಷರದಲ್ಲಿ ಒಙSಖಿ‌ಇಖಙ ಈUಐ‌ಐಙ ಖ‌ಇಗಿ‌ಇಂಐ‌ಇ‌ಆ ಎಂದು ಬರೆದಿತ್ತು. ಬಾಬರಾ ಕನ್ನಡಕವನ್ನು ತೆಗೆದು ಕರ್ಚೀಫಿನಿಂದ ಒರೆಸುತ್ತ ವಿವರಿಸಿದಳು:
“ಮೊದಲನೇ ಕೋಣೆಗೆ ಎರಡು ಪೌಂಡ್, ಎರಡನೆಯದಕ್ಕೆ ಮೂರು ಪೌಂಡ್ ಹತ್ತು ಶಿಲಿಂಗ್, ಮೂರನೆಯದಕ್ಕೆ ಐದು ಪೌಂಡ್. ಮೊದಲನೆ ರೂಮಿನಲ್ಲಿ ರೋಸಿ ಅರೆನಗ್ನಳಾಗಿ ಪಕ್ಕದಲ್ಲಿ ಕೂತು ಶೆರಿ ಕುಡಿದು ಬ್ರೇಸಿಯರ್‌ನ್ನು ಮಾತ್ರ ಬಿಚ್ಚುತ್ತಾಳೆ; ಎರಡನೆಯ ರೂಮಿನಲ್ಲಿ ಕತ್ತಲೆಯಲ್ಲಿ ಪೂರ್ಣ ನಗ್ನಳಾಗಿ ನಿನ್ನ ಪಕ್ಕದಲ್ಲಿ ನಿಲ್ಲುತ್ತಾಳೆ; ಮೂರನೆ ರೂಮಿನಲ್ಲಿ ಬೆಳಕಿನಲ್ಲಿ ಪೂರ್ಣ ನಗ್ನಳಾಗಿ ನಿಲ್ಲುತ್ತಾಳೆ.”
“ನಾಲ್ಕನೆಯ ರೂಮೊಂದು ಇಲ್ಲವೆ?”
ಒಣಗಿದ ಗಂಟಲಿನಲ್ಲಿ ಕೇಶವ ಕೇಳಿದ ಪ್ರಶ್ನೆಗೆ ಬಾಬರಾ ತಪ್ಪು ಉತ್ತರ ಹೇಳಿದ ವಿದ್ಯಾರ್ಥಿಯನ್ನು ನೋಡುವ ಉಪಾಧ್ಯಾಯಿನಿಯಂತೆ ಕೇಶವನನ್ನು ನೋಡಿ ಒಙSಖಿ‌ಇಖಙ ಈUಐ‌ಐಙ PಔSSಇSSಇ‌ಆ? ಎಂದು ಪ್ರಶ್ನಾರ್ಥಕವಾಗಿ ಕೇಳಿ,
“ಇಲ್ಲಿ ಬರುವ ಜನ ಇಷ್ಟಕ್ಕೇ ತೃಪ್ತರಾಗಿ, ಕೃತಾರ್ಥರಾಗಿ, ಕೃತಜ್ಞರಾಗಿ, ಹೋಗುತ್ತಾರೆ. ಅಲ್ಲದೆ ಅದಕ್ಕಿಂತ ಮುಂದಿನ ಅನುಭವವನ್ನು ಕೊಡಲು ನಮಗೆ ಲೈಸೆನ್ಸ್ ಇಲ್ಲ.”
“ನಾನು ಐದು ಪೌಂಡಿನ ರೂಮಿಗೆ ಹೋಗುತ್ತೇನೆ” ಎಂದು ಐದು ಪೌಂಡನ್ನು ಬಾಬರಾಗೆ ಕೊಟ್ಟ.
“ಕರೆದುಕೊಂಡು ಬಂದ ಚಾರ್ಜ್ ಹತ್ತು ಶಿಲಿಂಗ್-ಪ್ಲೀಸ್” ಎಂದು ಬಾಬರಾ ಕೈಯೊಡ್ಡಿದಳು.
ಇನ್ನೊಂದು ಹತ್ತು ಶಿಲಿಂಗನ್ನೆತ್ತಿ ಕೇಶವ ಅವಳ ಕೈಯಲಿಟ್ಟ. ಬಾಬರಾ ಖಿhಚಿಟಿಞs ಎಂದು ರೂಮಿನೊಳಕ್ಕೆ ಕೇಶವನನ್ನು ಬಿಟ್ಟು ಬಾಗಿಲನ್ನು ಮುಚ್ಚಿ ಹೋದಳು.
*
*
*
ರೂಮಿನ ವಾಲ್-ಪೇಪರು ಹರಿದು ಕ್ಷುದ್ರವಾಗಿ ಕಾಣಿಸುತ್ತಿತ್ತು. ಅಗ್ಗಿಷ್ಟಿಕೆಯಲ್ಲಿ ವಿಂಟರಿನಲ್ಲಿ ಉರಿಸಿದ ಇದ್ದಿಲಿನ ಬೂದಿ ಇನ್ನೂ ತೆಗೆದಿರಲಿಲ್ಲ. ರೂಮಿನ ಮಧ್ಯದಲ್ಲೊಂದು ಛಾವಣಿಯಿಂದ ಶೇಡ್ ಇಲ್ಲದ ಬಲ್ಬು ಉರಿಯುತ್ತಿತ್ತು. ಒಂದು ಮೂಲೆಯಲ್ಲಿ ಗೋಡೆಗೆ ಒರಗಿಸಿದ ಮೂರು ಕಾಲಿನ ಕುರ್ಚಿ. ಇನ್ನೊಂದು ಮೂಲೆಯಲ್ಲಿ ಖಾಲಿಯಾದ ಬಿಯರ್ ಸೀಸೆಗಳು. ಮಣ್ಣಿನ ನೆಲದ ಮೇಲೆ ಕಾರ್ಪೆಟ್ ಇರಲಿ- ಲಿನೋಲಿಯಂ ಸಹಿತ ಇರಲಿಲ್ಲ. ಆದರೆ ರೂಮಿನ ಕ್ಷುದ್ರತೆಗಿಂತ ಕೇಶವನಿಗೆ ಕಾಯುವುದು ಅಸಹ್ಯವಾಯಿತು. ಕೊನೆಗೆ ಞಟಿoಛಿಞ ಮಾಡಿ ಬಾಗಿಲು ತೆರೆದು ರೋಸಿ ಬ್ರೇಸಿಯರ್ಸ್ ಮತ್ತು ಕಾಚಾದಲ್ಲಿ ನಿಂತಳು. ಬಾಗಿಲನ್ನು ಮುಚ್ಚಿದಳು.
ಕೇಶವನಿಗೆ ದಿಗಿಲಾಗಿ ಕಣ್ಣು ಮುಚ್ಚಿದ. ತಾನು ನೋಡಿದ್ದನ್ನೆಲ್ಲ ನೆನೆಸಿ ಧೈರ್ಯ ಪಡೆದು ಕಣ್ಣು ತೆರೆದು ತನ್ನ ಜಾಕೆಟ್ ಬಿಚ್ಚಲು ಹೋದ.
ರೋಸಿ, “ನೀನು ಸ್ಟ್ರಿಪ್ ಮಾಡಿಕೊಳ್ಳಬೇಕಾಗಿಲ್ಲ” ಎಂದಳು.
ಕೇಶವ ಮಾತು ಬಾರದೆ ನಿಂತ. ರೋಸಿ ಬ್ರೇಸಿಯರನ್ನು ಬಿಚ್ಚಿ ಆಕಳಿಸಿದಳು. ಕೇಶವ ಅವಳ ಹತ್ತಿರ ಹೋಗಿ ಮುತ್ತಿಡಲು ಬಾಯಿಯನ್ನು ಒಡ್ಡಿದ.
“Soಡಿಡಿಥಿ . ನಾನು ಮುತ್ತುಗಳನ್ನು ತೆಗೆದುಕೊಳ್ಳುವುದಿಲ್ಲ” ಎಂದು ರೋಸಿ ಮುಖವನ್ನು ತಿರುಗಿಸಿದಳು.
ಕೇಶವ ಅವಳ ಮುಖವನ್ನು ಸವರಿ ಮೆಲ್ಲನೆ ಅವಳ ಮೊಲೆಗಳನ್ನು ಮುಟ್ಟಿದ.
“ನಾನು ಮೊಲೆಯನ್ನೂ ಮುಟ್ಟಿಸಿಕೊಳ್ಳುವುದಿಲ್ಲ. ಕ್ಷಮಿಸು” ಎಂದು ರೋಸಿ ಗಂಭೀರವಾಗಿ ಹೇಳಿದಳು. ಕೇಶವನಿಗೆ ಕಾಲು ಬತ್ತಿದಂತಾಗಿ ನೆಲದ ಮೇಲೆ ಕೂತ. ಮ್ಯೂಸಿಯಂನಲ್ಲಿ ಮುಟ್ಟಬಾರದ ನಗ್ನ ವಿಗ್ರಹವನ್ನು ಕದ್ದು ಮುಟ್ಟುವವನಂತೆ ಮೆಲ್ಲಗೆ ಅವಳ ಕಾಲನ್ನು ತೊಡೆಗಳನ್ನು ಸವರುತ್ತ ಧೈರ್ಯ ಮಾಡಿ ಮೇಲಕ್ಕೆ ಹೋದ. ಅವಳು ಅವನಿಗೆ ಬೆನ್ನು ಮಾಡಿ ಕಾಚವನ್ನು ಬಿಚ್ಚಿ ತಿರುಗಿಕೊಂಡಳು.
ಕೇಶವನ ಕಣ್ಣುಗಳು ನಿಧಾನವಾಗಿ ಮುಚ್ಚಿಕೊಂಡವು. ಮೈ ನಡುಗಿತು. ತುಂಬ ಬಳಲಿಕೆಯಾಗಿ ನೆಲದ ಮೇಲೆ ಮುದ್ದೆಯಾಗಿ ಕೂತ. ಕಣ್ಣು ತೆರೆದಾಗ ಮತ್ತೆ ಅವಳು ಕಾಚಾವನ್ನು ಧರಿಸಿ ಆಕಳಿಸುತ್ತ Soಡಿಡಿಥಿ ಎಂದಳು. ಸೆಟೆದು ಹೆಡೆಯೆತ್ತಿದ ಸರ್ಪ ಸೊರಗಿ ಸಿಂಬಳದ ಹುಳುವಾಯಿತು.
ದೊಡ್ಡದೊಂದು ಗುಡಾಣದಲ್ಲಿ ಸಣ್ಣ ಇಲಿಯ ಹಾಗೆ,-ಎಣ್ಣೆ-ನುಣುಪಿನ ಪಾತ್ರೆಯೊಳಗೆ ತೆವಳುತ್ತ ಪರಚುತ್ತ ವಿಲವಿಲನೆ ಒದ್ದಾಡಿದ ಹಾಗೆ,- ಇದನ್ನು ಕನಸಿನಲ್ಲಿ ನೋಡುತ್ತಿದ್ದ ಹಾಗೆ- ಕಾಣುವ ಕಣ್ಣಾಗಿ, ಜಾರುವ ಇಲಿಯಾಗಿ, ಚಾಚಲಾರದ ಕೈಯಾಗಿ, ಗರಬಡಿದ ಹಾಗೆ-
ಕನಸು ಮುಗಿದು ನಿರಾಕಾರವಾದ ಚಡಪಡ ಮಾತ್ರ ಉಳಿದು, ಕಸಿವಿಸಿಯ ಕಾರಣ ಹುಡುಕುತ್ತ ಕಂಡ ಕನಸನ್ನು ಮತ್ತೆ ನೆನೆಸಿಕೊಳ್ಳಲು ಅಗೆದು ಅಗೆದು ಒಳಕ್ಕೆ ಹೋದ ಹಾಗೆ,-
ಅಗೆಯುವಾಗ್ಗೆ ಮೊದಲು- ಮಣ್ಣು, ಮರಳು, ಮಣ್ಣು, ಎರೆಹುಳು, ಕಿಲುಬುಗಟ್ಟಿದ ನಾಣ್ಯದೊಂದು ಚೂರು, ಮಡಕೆಯ ಚೂರು, ತುಕ್ಕು ಹಿಡಿದ ಕಬ್ಬಿಣದ ಹಾರೆ,
ಇನ್ನೂ ಕೆಳಗೆ ತನ್ನ ಚಡಪಡದ ಕನಸಿಗೆಂದು ಅಗೆದ ಹಾಗೆ, ಅಲ್ಲಿ ಬರಿ ಶೂನ್ಯವಿದ್ದ ಹಾಗೆ-
ಶೂನ್ಯದಲ್ಲೊಂದು ರೂಮು, ರೂಮಿನಲ್ಲೊಬ್ಬಳು ಬೆತ್ತಲೆ ನಿಂತ ಹುಡುಗಿ….ಕತ್ತಲೆ….ಶೂನ್ಯ….ಸಿಂಬಳದ ಹುಳ….
ಸುಬ್ಬಣ್ಣಕಕ್ಕನಿಗೂ ಬಹುಶಃ ಕೊನೆಯಲ್ಲಿ ಈ ಶೂನ್ಯದ ಅನುಭವವಾಗಿರಬಹುದೆ? ಉಪವಾಸದಲ್ಲಿ ಕೃಶನಾಗಿ, ದೇವರನ್ನು ಹುಡುಕಿ ಗುಹೆ ಗಹ್ವರ ಅಲೆದು, ಕೊನೆಗೊಂದು ತನ್ನಂತೆಯೇ ಕೃಶವಾದ ಕ್ಷುದ್ರ ಪರಮಾರ್ಥವನ್ನವನು ಕಂಡಿರಬಹುದೆ? ಈ ಕ್ಲಿಪ್ ಜಾಯಿಂಟಿನಿಂದ ಮೊದಲು ಎದ್ದು ಸ್ಟೂ‌ಅರ್ಟ್ ಇದ್ದಲ್ಲಿಗೆ ಹೋಗಬೇಕು….ಪೆಚ್ಚಾದೆ.
“ನನ್ನ ಪ್ಲ್ಯಾಟಿನಲ್ಲಿ ನೀನು ರಾತ್ರೆಯನ್ನು ಕಳೆಯ ಬಯಸಿದರೆ ಹತ್ತು ಪೌಂಡ್. ಬಾಬರಾಗೆ ಮಾತ್ರ ತಿಳಿಸಬೇಡ. ಹ್ಯಾಂಪ್ ಸ್ಟೇಡ್‌ನಲ್ಲಿ ಇಸ್ಲಿಂಗ್‌ಟನ್ ಬೀದಿಯಲ್ಲಿ ನಂಬರ್ ೧೦ನೇ ಮನೆ. ಈಗ ಐದು ಪೌಂಡ್ ಕೊಡು. ಅಲ್ಲಿ ಬಂದ ಮೇಲೆ ಉಳಿದದ್ದು….” ಎಂದು ರೋಸಿ ಹೇಳಿದಳು.
“ಬೇಡ” ಎಂದು ಕೇಶವ ತಲೆಯಾಡಿಸಿದ.
ಪ್ರಾಯಶಃ ಕೊನೆಯಲ್ಲಿ, ಅತ್ಯುನ್ನತ ಉದ್ದೇಶಗಳ ಕಮಿಟಿಗಳ ಮೇಲೊಂದು ಕಮಿಟಿಯ ಅನಂತ ಅಪಾರ ಶುಭ್ರ ಸ್ವಚ್ಛ ರೂಮುಗಳ ಮೇಲಿನ ರೂಮುಗಳ ಕೊನೆಯಲ್ಲಿ ಸೆಂಟ್ರಲ್ಲಿಹೀಟೆಡ್ ಜಗತ್ತಾಗಿ ಸ್ಟೂ‌ಅರ್ಟ್‌ಗೆ ಈ ಶೂನ್ಯದ ಅನುಭವವಾಗಬಹುದು.
ಮೊದಲು ಈ ಕ್ಲಿಪ್ ಜಾಯಿಂಟಿನಿಂದ ಎದ್ದು ಹೊರಗೆ ಹೋಗಬೇಕು.
“ಇಲ್ಲಿಯಂತೆ ನಾನು ಅಲ್ಲಿ ನಿನ್ನ ಹತ್ತಿರ ನಡೆದುಕೊಳ್ಳೋದಿಲ್ಲ. ಈಗ ದುಡ್ಡಿಲ್ಲದಿದ್ದರೆ ಬೇಡ. ಬರುವಾಗ ತರುವಿಯಂತೆ. ನನಗೆ ಇಲ್ಲಿ ಹೆಚ್ಚು ಸ್ವಾತಂತ್ರ್ಯ ಇಲ್ಲ. ಬಾಬರಾಗೆ ತಿಳಿಸಬೇಡ, ಒಂದು ಮುತ್ತನ್ನು ಕೊಡುತ್ತೇನೆ ಏಳು”.
ಅವಸರದಲ್ಲಿ ಮಾತಾಡುತ್ತ ರೋಸಿ ಬಗ್ಗಿದಳು. ಬೇಡ. ಏನೂ ಬೇಡ. ಪೂಜೆ, ಜಪ, ವ್ರತಗಳಲ್ಲಿ ತೊಡಗಿದ್ದ ಅಪ್ಪನನ್ನು ಗಿಡಗ-ಕಣ್ಣಿನಿಂದ ಈ ಶೂನ್ಯ ಮೊದಲಿನಿಂದಲೂ ಕಾಡಿರಬಹುದೆ? ಬೇಡವೆನ್ನಿಸಿದ ಮೇಲೆ ಮುತ್ತಿಡುವ, ಆ ಮುತ್ತನ್ನೂ ಇನ್ನಷ್ಟು ಸುಲಿಯಲೆಂದು ಕೊಡುವ, ಈ ಕ್ಲಿಪ್ ಜಾಯಿಂಟಿನಿಂದ ಬೇಗ ಪಾರಾಗಬೇಕು….
ಬಾಬರಾ ಬಂದು ಬಾಗಿಲು ತಟ್ಟಿ “ರೋಸಿ” ಎಂದು ಕರೆದಳು. “ಬಂದೆ” ಎಂದು ರೋಸಿ ಕೇಶವನನ್ನು ಚುಂಬಿಸಿ, “ಮತ್ತೆ ನೋಡುತ್ತೇನೆ. ಬೈ’ ಎಂದು ಕಣ್ಣು ಹೊಡೆದು ಹೊರಟು ಹೋದಳು.
ಕೇಶವ ಮಣ್ಣಾದ ಕೈಯನ್ನು ಕೊಡವಿಕೊಂಡ. ತೋಳಿನಿಂದ ಬಾಯಿಯನ್ನು ಒರೆಸಿಕೊಂಡ. ಪ್ಯಾಂಟಿನಿಂದ ಧೂಳನ್ನು ಕೊಡವಿ, ತುಂಬ ಬಳಲಿಕೆಯಾಗಿ ಮೂರು ಕಾಲಿನ ಕುರ್ಚಿಯ ಮೇಲೆ ಹೋಗಿ ಕೂತ. ಸಿಗರೇಟು ಹಚ್ಚಿದ….
ಈ ಐದು ಪೌಂಡ್ ಹತ್ತು ಶಿಲಿಂಗ್ ಮತ್ತು ಎರಡು ಹತ್ತು ಶಿಲಿಂಗ್ ಮತ್ತು ಮುವ್ವತ್ತು ಪ್ಲಸ್ ಎರಡೂವರೆ ಶಿಲಿಂಗ್ ಬಿಯರ್ ಇತ್ಯಾದಿ ಹತ್ತು ಶಿಲಿಂಗ್ ಲಂಡನ್ನಿಗೆ ಬಂದು ಹೋದ ಪ್ರಯಾಣದ ಖರ್ಚು ನಾಲ್ಕು ಪೌಂಡ್ ಇಳಿದುಕೊಂಡ ಸ್ಥಳದ ಎರಡು ಪೌಂಡ್ ಇತರೆ ಖರ್ಚು ಎರಡು ಪೌಂಡ್- ಒಟ್ಟು ಹದಿನಾರು ಪೌಂಡ್‌ಗಳ ಮೇಲೆ-ಪೆಚ್ಚಾದೆ-ಅಮ್ಮನಿಗೆ ಕಳಿಸಿದ್ದರೆ ಎರಡು ತಿಂಗಳ ಸಂಸಾರ ನಿರ್ವಹಣೆಯಾಗುತ್ತಿತ್ತು- ಮತ್ತದೇ ಹಿಂದಿನ ಚಿಂತೆಗಳು, ಈ ಕ್ಲಿಪ್ ಜಾಯಿಂಟಿನಿಂದ ಮೊದಲು ತೊಲಗಬೇಕು….
ಮಾಧು ಆತ್ಮಹತ್ಯೆ ಮಾಡಿಕೊಂಡರೆ….
ಸ್ಟೂ‌ಅರ್ಟ್ ಕರೆದದ್ದು ಕೇಳಿ ಕೇಶವ ಮೂರು ಕಾಲಿನ ಕುರ್ಚಿಯಿಂದ ಎದ್ದು ನಿಂತ.
*****
ಆಗಸ್ಟ್, ೧೯೬೪, ಬರ್ಮಿಂಗಂ

ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.