ಕೆಲವು ಬೇವಾರಸೀ ಟಿಪ್ಪಣಿ

(೨೧ನೇ ಜುಲೈ ೨೦೦೧) ಇಂಗ್ಲಿಷಿನ ‘ಲಿಗಸಿ’ ಇದಕ್ಕೆ ಕನ್ನಡದ ಪರಿಭಾಷೆಯನು? ಹುಡುಕುತ್ತಲೇ ಇದ್ದೇನೆ. ಕಳೆದ ಹತ್ತು ವರ್ಷಗಳಿಂದ… ಅಂದರೆ ಮೈಯಲ್ಲಿ ಗಂಡಸ್ತಿಕೆಯ ಛಾಪು ಗಟ್ಟಿಕೊಂಡಂದಿನಿಂದ. ಮನಸ್ಸು ಹುಡುಗು ಅಳುಮುಂಜಿತನವನ್ನು ಕಳಚಿಕೊಂಡಾಗಿನಿಂದ. ಅಮ್ಮನ ಸೆರಗಿನಾಚೆಗಿನ ಪ್ರಪಂಚಕ್ಕೆ […]

ಕಟಕಟೆಯಲ್ಲಿ ಇಂದು ಫಿರ್ಯಾದುಗಳ ಗೋಜಿಲ್ಲ

ಎಲ್ಲ ನೇರ ಅಂತ ಲಾಯರ್ ಹೇಳಿದ್ದರು. ಈ ನಾಲ್ಕಂತಸ್ತಿನ ಎರಡನೇ ಮಹಡಿಗೆ ಕುರಿಮಂದೆಯಂತಹ ಜನಜಂಗುಳಿಯಲ್ಲಿ ನಿರ್ವಿಣ್ಣವಾಗಿ ಹತ್ತಿ ಬಲಗಡೆಯ ಹತ್ತಡಿಯಗಲದ ಜನವೇ ಜನವಿದ್ದ ಕಾರಿಡಾರಿನಲ್ಲಿ ಹೆಜ್ಜೆ ಹಾಕುವಾಗ ನಿಮ್ಮ ರಿಸ್ಟ್‌ವಾಚು ಹತ್ತು ಮುಕ್ಕಾಲು ತೋರಿಸುತ್ತಿರುತ್ತದೆ. […]

ಎಲ್ಲವೂ ತುಂಬಿ ತುಂಬಿ

ಶಿವಾಜೋಯಿಸರಿಗೆ ಏನೊಂದೂ ತೋರದಿದ್ದಾಗ, ಸುಮ್ಮನೆ ಬೆಂಗಳೂರಿನ ಓಣಿ ಕೋಣಿಗಳಲ್ಲಿ ಬೀದಿ ಉದ್ಯಾನ ಸುತ್ತಬೇಕೆನಿಸುತ್ತದೆ. ಅದೇ ಅವರ ಹವ್ಯಾಸ. ಹಿಂದಿನ ದಿನಗಳಲ್ಲಿ ಪ್ರಜಾ ಸಂಕ್ಷೇಮ ವಿಚಾರಿಸಲು ಹೋಗುತ್ತಿದ್ದ ಛದ್ಮ ವೇಷಧಾರಿ ರಾಜಮಹಾರಾಜರ ಹಾಗೆ! ರಿಟೈರಾದಮೇಲೆ ಜೋಯಿಸರು […]

ಇಷ್ಟು ನಕ್ಷತ್ರಗಳಲ್ಲಿ ಯಾವುದು ನನಗೆ?

ಮಧುಕರ, ಇನ್ನೊಮ್ಮೆ ಯೋಚಿಸುತ್ತ ಕೂತರೆ ಹಿಂದೆ ಅನೇಕ ಸಲ ಆದ ಹಾಗೆ ಅಡಧಳೆಯಾಗಿ, ಮನಸ್ಸಿಗೆ ನಿಷ್ಕಾರಣ ಕಣಕಣಿ ಆವರಿಸಿ; ನಿರ್ಧಾರ ಬದಲಾಗುವ ಎಲ್ಲ ಶಕ್ಯತೆಯೂ ಇದೆಯೆಂದು ಅನ್ನಿಸಿದ್ದರಿಂದ ಅಂದುಕೊಂಡದ್ದನ್ನು ಪಕ್ಕೀಮಾಡಲು ಟಪಾಲು ಬರೆದುಹಾಕಿದ್ದ. “…ಈ […]

ಏಕಾಂಗಿ

ಮೂರ್ತಿಗೆ ಈಚೆಗೆ ವಿವರಿಸಲಾಗದ ಆತಂಕ ಹೆಚ್ಚಾಗ ತೊಡಗಿದೆ. ನಾಡಿನ ಖ್ಯಾತ ನಾಸ್ತಿಕ ಬುದ್ಧಿಜೀವಿಯೆಂದು ಮೊದಮೊದಲು ಹೆಮ್ಮೆಯಿಂದ ಬೀಗುತ್ತಿದ್ದರೂ ಈಚೆಗೆ ಅಧೀರತೆ ಹೆಚ್ಚಾಗತೊಡಗಿ, ಮಾತಿನಲ್ಲಿ ಮೊದಲಿದ್ದ ಆತ್ಮವಿಶ್ವಾಸ ಕಡಿಮೆಯಾಗಿ ಬಿಟ್ಟಿದೆ. ಎರಡು ದಿನದ ಹಿಂದೆ ತಾನೆ […]

ಬೆಸಿಲ್ ಒಪ್ಪಂದ

ಗಾಜಿನ ಗೋಡೆಯಂತೆ ಹರಡಿಕೊಂಡ ಕಿಟಕಿಯ ಕರ್ಟನುಗಳು ಅವಳ ಹಿಂದೆ ನಾಲಿಗೆ ಚಾಚುತ್ತ ಹೊರಳುತ್ತಿದ್ದವು. ಛಾವಣಿಗೆ ನೇತು ಹಾಕಿದಂತಿದ್ದ ಆ ಟಿವಿಯಲ್ಲಿ ಅನಗತ್ಯವಾಗಿ ಕೊಲೆಗಳಾಗುತ್ತಿದ್ದವು, ರಾಜಕಾರಣಿಗಳು ಬೈದುಕೊಳ್ಳುತ್ತಿದ್ದರು. ಹುಡುಗಿಯರು ಬಟ್ಟೆ ತೊಡದಂತೆ ಕಾಣಿಸಿಕೊಂಡು ಮರೆಯಾಗುತ್ತಿದ್ದರು. ರಾತ್ರಿಯಿಡೀ […]

ಮುತ್ತುಚ್ಚೇರ

[೧] ಜಡಿಮಳೆಯ ಅಡಿಯಲ್ಲೇ ದಾಪುಗಾಲು ಹಾಕುತ್ತಿದ್ದರು ಬೀರಾನ್ ಕೋಯಾ. ನಾಲ್ಕು ಹೆಜ್ಜೆಗಳಿಗೊಮ್ಮೆ ರಪ್ಪನೆ ರಾಚುವ ಮಳೆಗಾಳಿ ಮುದಿ ಕೋಲುದೇಹವನ್ನು ಥರಗುಟ್ಟಿಸುತ್ತಿತ್ತು. ಎರಡೂ ಕೈಗಳಿಂದ ಅಮುಕಿ ಹಿಡಿದಿದ್ದ ಕೊಡೆಯನ್ನು ಸ್ವಲ್ಪ ವಾಲಿಸಿದ ಕೋಯಾ ಕೈಗಡಿಯಾರಕ್ಕೆ ಕಣ್ಣು […]

ಆಭಾ

ಆಗಿನ್ನೂ ಸಮಿತಾ ರೂಮಿಗೆ ಬಂದವಳು ಸ್ನಾನ ಮಾಡಿ ಚಹಾ ಕುಡಿಯುತ್ತ ಕುಳಿತಿದ್ದಳಷ್ಟೆ. ಬೆಲ್ಲಾಯಿತು. ತೆರೆದರೆ ಆಭಾ. ಆಭಾ ಏನು ಮೊದಲೇ ಗುರುತಿನವಳಲ್ಲ. ಒಳಗೆ ಬರಬರುತ್ತಲೇ ಕೈಕುಲುಕಿದಳು. ತನ್ನ ಹೆಸರು ಹೇಳುತ್ತ ಚಪ್ಪಲಿಯನ್ನು ಆಚೆಗೊಂದು ಈಚೆಗೊಂದು […]

ಯಾನ

೧. ನಾನು – ನೀನು ಹೊತ್ತು ಜಾರಿ ತಾಸೆರಡು ಸರಿದಂತೆ ಊಟ ಮುಗಿಸಿ ದೀಪವಾರಿಸಿ ಹಾಸಿಗೆಯಲ್ಲಿ ಮೈಚೆಲ್ಲುವಷ್ಟರಲ್ಲಿ ಹಕ್ಕಿಯಾಕಾರವೊಂದು ತೇಲುತ್ತಾ ಬಂದು ನನ್ನ ಕಿಟಕಿಯ ಸರಳಿನ ಮೇಲೆ ಕುಳಿತು ನಿಶ್ಚಲವಾದದ್ದನ್ನು ಕಂಡೆ. “ಯಾರು ನೀನು?” […]

ವಿಸರ್ಜನೆ

ಭಾಗ: ಒಂದು ಕೆಲವು ತಿಂಗಳ ಹಿಂದೆ ನಾನು ಸೇವಾ ನಿವೃತ್ತನಾದ ಮೇಲೆ ಹೀಗೇ ಊರಿನ ಕಡೆಗೆ ಕೆಲವು ದಿನ ಸುತ್ತಾಡಿ ಬಂದರೆ ಹೇಗೆ ಎಂದು ವಿಚಾರ ಮಾಡುತ್ತಿದ್ದ ಹೊತ್ತಿಗೇ ಕುಮಟೆಯಲ್ಲಿ ಸದ್ಯವೇ ಹೊಸ ಮನೆ […]