ಮಾತಿನ ಗುಟ್ಟು

`ಮಯೂರ’ ಕ್ಕಿಂತ `ಸುಧಾ’ ವಾಸಿಅಂದ್ರೊಮ್ಮೆ ಗುಂಡಯ್ಯ ಶೆಟ್ಟಿ.ಸಾಹಿತ್ಯ ಪ್ರೇಮಕ್ಕೆ ಅಚ್ಚರಿ ಪಟ್ಟುಅಂದ್ಕೊಂಡೆ: ಆಸಾಮಿ ಗಟ್ಟಿ.ಆಮೇಲೆ ಅರಿತೆ ಶೆಟ್ರು ಆ ದಿವ್ಸಆಡಿದ ಮಾತಿನ ಗುಟ್ನ_“ಅನುಭವದ ಮಾತು ನಾನಂದದ್ದು:ಕಟ್‌ಬಹುದು ದೊಡ್ಡ ದೊಡ್ಡ ಪೊಟ್ನ”.*****

ಅಂಟಿಗ

ಬಾಲು ಬೀದೀಲಿ ಸಿಕ್ಕಾಗ ಬೀಳ್ತಾನೆ ದುಂ ಬಾಲು. ಮಾಡ್ತಾನೆ ಚಾಲು ಕೊರೆಯೋಕೆ ಸೊಲ್ಲಿನ ಜೊತೆ ಜೊಲ್ಲು ಎರೆಯೋಕೆ. ಕಳಚಿಕೊಳ್ಳೋಕೆ ಬಿಡ ಈ ನರರೂಪಿ ಉಡ. ಅದಕ್ಕೇ ಅವನಿಗನ್ನೋದು ನಾವೆಲ್ಲ: “ಬಾಲು, ನೀನು ಮನುಷ್ಯ ಅಲ್ಲ, […]

ವಕ್ರ

ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****

ಅವಿವೇಕಿ

ವಿದ್ಯೆ ಖರೀದಿಸಿದ ಮಾತ್ರಕ್ಕೆ ಬುದ್ದಿ ಬಂತೆ? ಉಬ್ಬೆಗೆ ಹಾಕಿದರೆ ನಯವಾಗುವುದೆ ಬೊಂತೆ? ಯಾವೊತ್ತಿಗೂ ಈ ಅಸಂಸ್ಕೃತ ಖೋಡಿ ಅವಿನಯ ಪೊಗರುಗಳ ಜೈಲೆ; ಗುರುತಿನ ಗುರು ಹಿರಿಯರು ಜೊತೆಗೂಡಿ ಬೀದಿಯೊಳೆದುರಾದರೆ, ಇವ ನೋಡಿ ಸಲಾಂ ಮಾಡುವುದು […]

ವಚನಾಮೃತ

“ಹೊರಗಡೆ ಎಲ್ಲಿದೆ? ಒಳಗಡೆ ಇದೆ ಸುಖ; ತೊಳಲುತ ಬಳಲುವೆ ಏತಕೆ ಬಡ ಮಿಕ ಹುಡುಕು ಮನದಲೆ, ಮನೆಯಲ್ಲೆ; ಪೇಟೆ ಅಲೆಯದಿರು ಕೊಳ್ಳಲು ಗೋವ ಅಡುಗೆಮನೆಯೊಳಿದ ಅರಸುವ ಖೋವ ಪಾತ್ರೆಯ ಹಾಲಿನ ಕೆನೆಯಲ್ಲೆ.” _ಭಜಿಸುತ ಗುರುಗಳ […]