ನಡತೆ Posted on ಫೆಬ್ರವರಿ 16, 2024ಸೆಪ್ಟೆಂಬರ್ 18, 2025 by ನಿಸಾರ್ ಅಹಮದ್ ಕೆ ಎಸ್ ಹಿರಿಯರ ಹಿರಿತನ ಅರಿವಾಗುವುದು ಹಿರಿಯರಾಗಿ ನಡೆದುಕೊಳ್ಳುವುದರಲ್ಲಿ ಮಾತ್ರವಲ್ಲ ಹೆರರನ್ನೂ ಹಿರಿಯರಾಗಿ ನಡೆಸಿಕೊಳ್ಳುವುದರಲ್ಲಿ. *****
ಹನಿಗವನ ವಾಸ್ತವತೆ ನಿಸಾರ್ ಅಹಮದ್ ಕೆ ಎಸ್ ಏಪ್ರಿಲ್ 19, 2024 0 ಬಸ್ ಸ್ಟಾಂಡಿನ ಕಕ್ಕಸಿನ ಸ್ಥಿತಿ ತುಂಬಾ ಶೌಚನೀಯ. *****
ಹನಿಗವನ ಆ ಮರ-ಈ ಮರ ನಿಸಾರ್ ಅಹಮದ್ ಕೆ ಎಸ್ ಜನವರಿ 1, 2007 0 ನಮ್ಮ ತೆಂಗಿನ ಮರ ಒಳಿತಿನ ತಾಯಿ ಮೇಲ್ನೋಟಕ್ಕೆ ಬಹಳ ಸಾದಾಸೀದಾ – ಆದರದ ಕಲ್ಪ ವೃಕ್ಷ. ಜಪಾನಿಗಳ ಕುಂಡದ ಬೋನ್ಸಾಯಿ ಎರೆಯುತ್ತದೆ ನಿಜ, ಬೆರಗು ವಿನೋದ- ಆದರದು ಅಲ್ಪ ವೃಕ್ಷ. *****
ಹನಿಗವನ ಅಪಮೌಲ್ಯೀಕರಣ ನಿಸಾರ್ ಅಹಮದ್ ಕೆ ಎಸ್ ಡಿಸೆಂಬರ್ 25, 2023 0 ಜಗಜ್ಯೋತಿ ಎನ್ನಿಸಿದ ಮಹಾ ಜಾತ್ಯತೀತ ಚೇತನವನ್ನು ಅನುಯಾಯಿಗಳು ‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು ಬಸವ ಳಿದುಹೋದ; ತನ್ನ ದಿವ್ಯ ಸಂದೇಶಗಳ ಪಾಲಿಗೆ ಬಸವ ಅಳಿದು ಹೋದ. *****