ಚಿಂತೆ

ತನ್ನ ತುರುಬಿನಲಿ
ಒಂಟಿಗೂದಲ ಗುರುತಿಸಿ
ಹೌಹಾರಿದ ಚೆಲುವೆ ಯೌವನಸ್ಥೆ-
ಆ ಚಿಂತೆಯನ್ನೇ ತಲೆಗೆ ಹಚ್ಚಿಕೊಂಡು
ಇಡೀ ತಲೆಯನ್ನೇ ನರೆತಿಸಿಕೊಂಡಳು.
*****