ಚಿಂತೆ

ತನ್ನ ತುರುಬಿನಲಿ ಒಂಟಿಗೂದಲ ಗುರುತಿಸಿ ಹೌಹಾರಿದ ಚೆಲುವೆ ಯೌವನಸ್ಥೆ- ಆ ಚಿಂತೆಯನ್ನೇ ತಲೆಗೆ ಹಚ್ಚಿಕೊಂಡು ಇಡೀ ತಲೆಯನ್ನೇ ನರೆತಿಸಿಕೊಂಡಳು. *****

ಹಿತೋಪದೇಶ

ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. *****

ಅಚ್ಚರಿಯ ಪರಿ

ಬಾಂಬಿನ ಗೋತ್ರ ದ ಆನೆ ವಿಶೇಷಣದ ಚೋಟುದ್ದದ ಸೊರಗು ದೇಹ- ನಾನೂ ಕಿರಿ ಮಗನ ಕಣ್ಣುಗಳ ಬೆರಗೂ ಏಕಾಗ್ರ ವೀಕ್ಷಿಸಿ ಕಾದಿರಲು ಊದು ಬತ್ತಿಯ ತುದಿ ತಾಕಿದ್ದೇ ತಡ ಫರ್ಲಾಂಗು ಗಾತ್ರ ಶಬ್ದ ಹೊಮ್ಮಿ, […]

ಆ ಮರ-ಈ ಮರ

ನಮ್ಮ ತೆಂಗಿನ ಮರ ಒಳಿತಿನ ತಾಯಿ ಮೇಲ್ನೋಟಕ್ಕೆ ಬಹಳ ಸಾದಾಸೀದಾ – ಆದರದ ಕಲ್ಪ ವೃಕ್ಷ. ಜಪಾನಿಗಳ ಕುಂಡದ ಬೋನ್ಸಾಯಿ ಎರೆಯುತ್ತದೆ ನಿಜ, ಬೆರಗು ವಿನೋದ- ಆದರದು ಅಲ್ಪ ವೃಕ್ಷ. *****