ಎರಡೂ ಬಲೆಯೇ:
ಹೀಗಿದ್ದರೂ
ಜೇಡನ ಬಲೆಯಿಂದ ಮೀನು
ಹಿಡಿಯಲಾಗದು;
ಮೀನಿನ ಬಲೆಯಿಂದ ನೊಣ
ದಕ್ಕಲಾರದು.
*****
Related Posts
ಮುಯ್ಯಿ
- ನಿಸಾರ್ ಅಹಮದ್ ಕೆ ಎಸ್
- ನವೆಂಬರ್ 7, 2025
- 0
ಬಾಪೂಜಿಯನ್ನು ಮುಗಿಸಿ ವರ್ಷಗಳು ಗತಿಸಿದ್ದರೂ ಇನ್ನೂ ಮುಗಿದಿಲ್ಲ ಕೇಡು, ಕ್ರೋಧದ ‘ಮೂಡು’; ಬೇಕಾದರೆ ನೀವೇ ಹೋಗಿ ಪ್ರತ್ಯಕ್ಷ ಪರೀಕ್ಷಿಸಿ ಅಂಚೆ ಕಛೇರಿಯಲ್ಲಿ ದಿನವೂ ತೀರಿಸಿಕೊಳ್ಳುವ ಸೇಡು! *****
ಪವಾಡ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಶಿಲ್ಪಿಯೋಗಿಯ ಕೈಗೆ ಸಿಕ್ಕಿದ ಒರಟು ಕಲ್ಲು ಕೇವಲ ಕಲೆಯಲ್ಲ, ಅತ್ಯದ್ಭುತ ಮಿರಾಕಲ್ಲು. *****
ಅಪಮೌಲ್ಯೀಕರಣ
- ನಿಸಾರ್ ಅಹಮದ್ ಕೆ ಎಸ್
- ಡಿಸೆಂಬರ್ 25, 2023
- 0
ಜಗಜ್ಯೋತಿ ಎನ್ನಿಸಿದ ಮಹಾ ಜಾತ್ಯತೀತ ಚೇತನವನ್ನು ಅನುಯಾಯಿಗಳು ‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು ಬಸವ ಳಿದುಹೋದ; ತನ್ನ ದಿವ್ಯ ಸಂದೇಶಗಳ ಪಾಲಿಗೆ ಬಸವ ಅಳಿದು ಹೋದ. *****
