ನುಡಿಯ ಏಳಿಗೆ

ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ
ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ;
ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ
ಸರಕಾರದ ಸಿರಿಗನ್ನಡದುದ್ಧಾರ.
*****