ಆ ಮರ-ಈ ಮರ

ನಮ್ಮ ತೆಂಗಿನ ಮರ
ಒಳಿತಿನ ತಾಯಿ
ಮೇಲ್ನೋಟಕ್ಕೆ ಬಹಳ ಸಾದಾಸೀದಾ
– ಆದರದ ಕಲ್ಪ ವೃಕ್ಷ.
ಜಪಾನಿಗಳ ಕುಂಡದ ಬೋನ್ಸಾಯಿ
ಎರೆಯುತ್ತದೆ ನಿಜ, ಬೆರಗು ವಿನೋದ-
ಆದರದು ಅಲ್ಪ ವೃಕ್ಷ.
*****