ಸೋವಿಯತ್ ರಷ್ಯಾ

ಕೊಳೆಯಬೇಕಾದ ಲೆನಿನ್ ಹೆಣವನ್ನು
ಕೊಳೆಯದಂತೆ ಕಾದರು,
ಮಾರ್ಕ್ಸ್ ಎನ್ನುವಂತೆ ಸ್ಟೇಟೆ ಉ
ವಿದರ್ಸ್ ಅವೆ ಎಂದರು


ಸೈಂಟಿಫಿಕ್ಕಾಗಿ ಅರಳಿದ ಗುಪ್ತ ಪೋಲೀಸ್ ದಳಗಳು
ಇನ್ನೇನು ಉದುರಿ
ಇನ್ನೆನು ಬಿಡಲಿರುವ ಫಲವನ್ನು
ಸ್ವತಂತ್ರ ಮಾರುಕಟ್ಟೆಯಲ್ಲಿಟ್ಟು ಇನ್ನು ಮಾರಲಿದ್ದಾರೆ-
ಅಮೇರಿಕಾದಲ್ಲಿ, ಯೂರೋಪಲ್ಲಿ, ಮೂರನೇ ಜಗತ್ತಲ್ಲೂ
ಎಂಬ ಸುದ್ದಿಯನ್ನು ಮಾಸ್ಕೋದಲ್ಲಿ ಮಳೆಯಾದರೆ ಕಲ್ಕತ್ತದಲ್ಲಿ ಕೊಡೆ ಹಿಡಿಯುವ
ಕಾಂರೇಡರು ಸುತರಾಂ ಒಪ್ಪದೆ, ಮೊದಲ ಬಾರಿಗೆ ರೇಗಿ
ಕೊಡೆಯನ್ನು ಮಡಚಿ ಕಂಕುಳಲ್ಲಿಟ್ಟು
ಸ್ಟಾಲಿನ್ ನಂತರ ಯಜ್ಞ ಶಾಸ್ತ್ರೋಕ್ತವಾಗಿ ನದೆಯಲಿಲ್ಲ
ಎಂಬುದನ್ನು ತಮ್ಮ ಪ್ರಮಾಣ ಗ್ರಂಥದಲ್ಲಿ ಕೋಟ್ ಮಾಡಿ, ತೋರಿಸಿ,
ಟೀಕಿಸುತ್ತಾರಲ್ಲ-
ಅವರ ಕೆಚ್ಚು ನೋಡಿ, ನಿಷ್ಠೆ ನೋಡಿ, ಮುಂದಾಲೋಚನೆ ನೋಡಿ ವೋಟ್ ಕೊಟ್ಟರೆ
ಮಾಸ್ಕೋದಲ್ಲಿ ನೆಟ್ಟದ್ದು ಕಲ್ಕತ್ತದಲ್ಲಿ ಯಾಕೆ
ದಳಗಳು ಉದುರಿ ಫಲವಾಗಬಾರದು-ಹೇಳಿ.


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.