ಸಾಕ್ಷಿ

ಹತ್ತಾರು ರಸ್ತೆಗಳು
ಒಂದನ್ನೊಂದು
ಕತ್ತರಿಸುತ್ತ ಕೂತರೆ
ಹೋಗುವುದೆಲ್ಲಿಗೆ ಹೇಳು
ಹತ್ತೂ ಕಡೆ ಕನ್ನಡಿ
ಹಿಡಿದು ನೀ
ಕೂತರೆ ನಾ
ಬತ್ತಲಾಗದೆ ಉಪಾಯವಿದೆಯೆ?
*****