ನನ್ನ ನೆನಪು

ಎಲ್ಲ ಕಡೆ ಬಸ್ಸು ತಪ್ಪಿ ಭಾರದ ಕೈ ನೋಯುವ ಬ್ಯಾಗಿನೊಂದಿಗೆ ಧೂಳು ಮುಕ್ಕುವ ಸಂಜೆ ದಣಿದು ನಿಂತಾಗ ಅಕ್ಕ ಪಕ್ಕ ಸರಿಯುವ ಮಲ್ಲಿಗೆ ಮುಡಿದ ತುರುಬಿನ ಕಣ್ಣುಗಳಲ್ಲಿ ಅಮೃತವೀಯುವ ಹೆಂಗಸರನ್ನು ಕಂಡು ಅಮ್ಮನ ನೆನಪಾಯಿತು […]

ಮುದ್ದು ಮಕ್ಕಳಿಗೊಂದು ಕವಿತೆ

ನೀಟಾಗಿ ಪುಟು ಪುಟು ಎಳೆ ಕ್ರಾಪು ಬಾಚಿ ಪೌಡರು ಘಮ ಘಮಿಸುವ ಪುಟಾಣಿ ಮಕ್ಕಳೇ ಖುಷಿಯಾಗುತ್ತದೆ ನಿಮ್ಮ ಕಂಡು -ನಿಮ್ಮ ಹಾಗೆಯೇ ನಾನೂ ಇದ್ದೆನಲ್ಲಾ ತಕ್ಷಣ ನೋಯ್ದು ಕಹಿಯಾಗುತ್ತದೆ ಮನ -ನನ್ನ ಹಾಗೆಯೇ ಮುಂದೆ […]

ಏತನ್ಮಧ್ಯೆ

ನುಗ್ಗೇಕಾಯಿ ಸಾಂಬಾರಿನ ಪರಿಮಳದ ಓಣಿಗಳಲ್ಲಿ ದಾರಿ ಬದಿ ಮನೆ ಮನೆಯಂಗಳದಿ ತುಳಸೀಕಟ್ಟೆಗೆ ಸುತ್ತು ಹಾಕುವ ಹಳದೀ ಮುತ್ತೈದೆಯರು ಅಂಗಡಿ ಗಲ್ಲಾಗಳಲ್ಲಿ ದಿಂಬು ಕೂತ ಮೂರು ನಾಲ್ಕು ಲಾರಿಗಳುಳ್ಳ ಅವರ ದೊಗಳೆ ಗಂಡಂದಿರು ಊರ ಹೊರಗೆ […]

ಗುರುತು

ಅಲ್ಲಿ ರಸ್ತೆಯ ಮೇಲೆ ಸಿಕ್ಕಾಗ ಹಲೋ ಎಂದೆವು ಅಲ್ಲೇ ನಾವು ನಂತರ ನಕ್ಕೆವಿರಬೇಕು ಈಗ ಮರೆಯುತ್ತಿದ್ದೇವೆ ಭಾವಗಳನ್ನು ಕ್ಲಿಷ್ಟ ಸ್ವಭಾವಗಳನ್ನು ಸುಪ್ತ ಅಭಾವಗಳನ್ನು ತಿರುವುಗಳಲ್ಲಿ ನೀವೆಲ್ಲ ಸಿಗರೇಟು ಹಚ್ಚಿದ್ದು ನನಗೆ ಬಲವಂತ ಮಾಡಿದ್ದು ನಾನು […]

ಜಾಗರದ ಜೀವಗಳಿಗೆ…

ಹನ್ನೊಂದರ ಆಸುಪಾಸು ಹೊಟೆಲುಗಳು ಮುಚ್ಚುತ್ತವೆ. ಸಾವಿರಗಟ್ಟಲೆ ಪಾತ್ರೆ ಪಗಡಿ ಲೋಟ ತಾಟುಗಳು ಎರಡೂವರೆಯ ತನಕ ತೊಳೆಯಲ್ಪಡುತ್ತವೆ. ಸಿಂಕುಗಳು, ಕನ್ನಡಿಗಳು ವ್ಹಿಮ್ ಹಾಕಿ ಫಳಫಳ ಉಜ್ಜಲ್ಪಡುತ್ತವೆ. ಟೇಬಲುಗಳ ಮೇಲೆ ಬೋರಲು ಕುರ್ಚಿಗಳನ್ನಿಟ್ಟು ಫಿನೈಲ್ ಹಾಕಿ ನೆಲ […]

ನನ್ನ ಕನಸಿನ ನಾಡು

ಸಿಗಲಿ ಪ್ರತಿಯೊಬ್ಬನಿಗೊಂದು ಗಟ್ಟಿ ತಲೆದಿಂಬು ಅಥವಾ ದಿಂಬಿದ್ದವನಿಗೊಂದು ಗಟ್ಟಿತಲೆ ಗಟ್ಟಿಯೆಂದರೆ ಗಟ್ಟಿ ಮುಟ್ಟಾದ ತಲೆ ಕಲ್ಲಿನಂಥಾ ಖರ್‍ಚಾದ ಬ್ಯಾಟರಿ ಸೆಲ್ಲಿನಂಥಾ ತಲೆ ಮತ್ತೆ ಹಾಸಿರಲಿ ಮೆತ್ತನೆ ಮೆತ್ತೆ ಮಂಚ ಸುತ್ತಾ ಹಾಯಾಗಿ ತೂಗಿ ಬಿದ್ದಿರಲಿ […]

ಉಡುಪಿ

ಮಣಿಪಾಲದ ಗುಡ್ಡದಾಸ್ಪತ್ರೆಯಿಂ ದಿಳಿದು ತೇಲಿ ಬರುವ ಘಂ ಘನ ಗಂಭೀರ ಸ್ಪಿರಿಟ್‌’ ಲೈಸಾಲ್‌ ವಾಸನೆಗೂ ಮೂಗು ಮುರಿದು ತೆಕ್ಕೆ ಮುದುಡಿ ಮುದುಡಿ ಮಲಗಿ ಪಕ್ಕಾಗುವ ಅನಾದಿ ರೋಗಿ: ಉಡುಪಿ ಈ ಉಡುಪಿಯಲ್ಲಿ ನಾನಾ ಉಡುಪಿನಲ್ಲಿ […]

ಸ್ವರ

ಬಿಟ್ಟ ನಿಟ್ಟುಸಿರ ಸ್ವರ ಸಮ್ಮಿಳಿಸಿ ಸಂ ಯೋಜಿಸಿ ಮಿಡಿ ಮಿಡಿ ದು- ಹೂ ಹಾ ರ ತರಂಗ ಮೀಟುವ ಕೊಳಲೇ ನಿನ್ನ ದನಿಯೊಡಲ ಬೇರು ಬಿಟ್ಟಿರುವುದು ಇಲ್ಲೇ ಈ ನನ್ನ ಗಟ್ಟಿಗಂಟಲ ಒಳಪೆಟ್ಟಿಗೆಯಲ್ಲೇ ಆದರೆ […]

ಜ್ವರ-ಒಂದು ಆಕ್ರಮಣ

೧ ಬಿಸಿ ಬಿಸಿ ಜ್ವರ ಹೊದ್ದು ಕುದಿಯುತ್ತ ಮಲಗಿದ್ದೆ ಹೊರಗೆ ಐಸ್‌ ಕ್ಯಾಂಡಿಯವನು ಕೂಗಿಕೊಳ್ಳುತ್ತಿದ್ದ ಈಗೆಲ್ಲ ಕಣ್ತುಂಬ ಫಕ್ತ ಚಿನ್ಹೆಗಳು ಕಪ್ಪು ಅವಕಾಶ ಮೋಡ ಮುಚ್ಚಿದ ಗಗನ ರೂಹು ತಾಳದೆ ಬಿದ್ದ ಬೆನಕನ ಮಣ್ಣು […]

ಪುಣ್ಯ

ಮಂತ್ರಿ ಮಹಾಶಯರ ಕಾರಿನ ಹಿಂದಿನ ಸೀಟಿನಲ್ಲಿ ಮುದುಡಿ ಕೂತಿದ್ದವು ಹಾರದ ಹೂವು ಕಲ್ಲು ದೇವರ ಗುಡಿಗೋ ಕಲ್ಲು ಸಕ್ಕರೆಯಂಥ ಹುಡುಗಿಯರ ಮುಡಿಗೋ -ಸಲ್ಲಲೂ ಪುಣ್ಯ ಬೇಕು! *****