ಖೋಜರಾಜ

“ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” -ಗೀತೆ ರಾತ್ರಿಯ ಕತ್ತಲಿನಲ್ಲಿ ಯಾರ ಕಣ್ಣಿಗೂ ಬೀಳದೆ ಎಲ್ಲೆಲ್ಲಿಂದಲೂ ಹೊಲಸು ಕೊಚ್ಚೆ ಗುಂಡಿಗಳಿಂದ ಗೊಟರು ಹಾಕುವ ಗೊಂಟರು ಕಪ್ಪೆಗಳ ಶ್ವಾಸಕೋಶ ಎಂಥದಿರಬೇಕೆಂದು ಯೋಚಿಸುತ್ತ ನಿದ್ದೆ ಬಾರದ ರಾಜಣ್ಣ […]

ಹರಿಕಾಂತರರ ಸಣ್ಣಿ

ಮಹಾಬಲೇಶ್ವರ ದೇವಸ್ಥಾನದ ಹಿಂಬದಿಯಲ್ಲೇ ಸಮುದ್ರ, ಸಮುದ್ರಕ್ಕೂ ದೇವಸ್ಥಾನಕ್ಕೂ ನಡುವೆ ಮರಳ ದಂಡೆ. ಊರಿನಿಂದ ಸಮುದ್ರಕ್ಕೆ ಹೋಗುವ ಕಾಲುದಾರಿ; ದೇವಸ್ಥಾನದ ಮಗ್ಗುಲಲ್ಲೇ ಇರುವುದರಿಂದ, ಈ ದಾರಿಯಲ್ಲಿ ಓಡಿಯಾಡುವ ಜನ ಬಹಳ. ದೇವಸ್ಥಾನಕ್ಕೆ ಬರುವ ಭಕ್ತರಂತೂ ಸಮುದ್ರ […]

ಡಾ|| ವಿನಾಯಕ ಜೋಷಿಯ ಮುನ್ನೂರ ಅರವತ್ತೈದನೆ ಒಂದು ವರ್ಷ

ಬಳ್ಳಾರಿ ಅನ್ನೋ ಊರಿನಲ್ಲಿ ಅಂತೂ ಇಂತೂ ಐದು ವರ್ಷ ಮುಗಿಸಿದ್ದ ಡಾ.ವಿನಾಯಕ ಜೋಷಿ, ಎಂ. ಬಿ.ಬಿ.ಎಸ್. ಹೆಸರಿನ ಹಿಂದೆ ಒಂದು,ಮತ್ತು ಮುಂದೆ ನಾಲ್ಕಕ್ಷರ ಹಾಕಿಕೊಳ್ಳಲು ತಲಾ ಒಂಭತ್ತು ತಿಂಗಳು ಬೇಕಾಗಿತ್ತು. ತನ್ನ ಹೆಸರನ್ನು ಒಂದು […]

ಹಿತ್ತಲಮನಿ ಕಾಶೀಂಸಾಬ

ರಂಗರಾಯರದು ನಾಕೆತ್ತಿನ ಕಮತದ ಮನಿ. ಮನೆಯಲ್ಲಿ ಸಾಕಷ್ಟು ಆಕಳೂ ಇದ್ದವು. ಕಾಶೀಂಸಾಬ ಚಿಕ್ಕಂದಿನಿಂದಲೂ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ. ನಂಬಿಗಸ್ತನಾಗಿದ್ದರಿಂದ ರಾಯರ ಮನೆಯಲ್ಲಿ ಅವನು ಕೆಲಸದ ಆಳು ಎಂದಾಗಿರಲೇ ಇಲ್ಲ. ಅವರ ಮನೆಯವರಲ್ಲೇ ಒಬ್ಬನಾಗಿದ್ದ. […]

ಗೃಹಭಂಗ – ೬

ಅಧ್ಯಾಯ ೧೧ – ೧- ಇಷ್ಟು ದಿನವಾದರೂ ಕಮಲುವಿನ ಹೊಟ್ಟೆಯಲ್ಲಿ ಮಕ್ಕಳಾಗಲಿಲ್ಲ. ತಾನು ಸಾಕಿ ಬೆಳೆಸಿದ ಮೊಮ್ಮಗನಿಂದ ವಂಶ ಬೆಳೆಯದ್ದನ್ನು ಕಂಡ ಅಕ್ಕಮ್ಮ ಕೊರಗುತ್ತಿದ್ದಳು. ಮಕ್ಕಳಿಲ್ಲದಿದ್ದರೆ ಬೇಡ, ಇವಳು ತನ್ನ ಗಂಡ ಮತ್ತು ಅಜ್ಜಿಯನ್ನೂ […]

ಗೃಹಭಂಗ – ೫

ಅಧ್ಯಾಯ ೧೦ – ೧ – ಗಂಡನನ್ನು ಒಳಗೆ ಸೇರಿಸಿಕೊಂಡು ತನ್ನೊಬ್ಬಳನ್ನು ಇನ್ನೂ ಬಹಿಷ್ಕಾರದಲ್ಲಿ ಇಟ್ಟ ಸಂಗತಿಯನ್ನು ಕೇಳಿದಾಗ ನಂಜುವಿಗೆ ದುಃಖಕ್ಕಿಂತ ಹೆಚ್ಚಾಗಿ ತಿರಸ್ಕಾರ ಉಂಟಾಯಿತು. ಧರ್ಮ, ಕರ್ಮ, ಶ್ರಾದ್ಧ ಸಂಬಂಧ ಮೊದಲಾದ ಬಗೆಗೆ […]

ಗೃಹಭಂಗ – ೪

ಅಧ್ಯಾಯ – ೮ – ೧ – ಅಕ್ಕಮ್ಮ ನಾಲ್ಕು ತಿಂಗಳ ಕಾಲ ಬಾಣಂತಿತನ ಮಾಡಿದಳು. ಮೊಮ್ಮಗಳನ್ನು ಯಾವ ಕೆಲಸ ಮಾಡಲೂ ಬಿಡದೆ ಮುಚ್ಚಟೆಯಿಂದ ನೋಡಿಕೊಂಡರೂ ಎರಡನೇ ತಿಂಗಳಿನಲ್ಲಿಯೇ ಅವಳು ಎದ್ದು ಕೂತು ಖಾನೀಷುಮಾರಿ […]

ಬಿಟ್ಟ್ಯಾ

ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ. ಸುಸ್ತಾಗಿ ಊರ ಹೊರಗಿನ ಒಂದು ಗಿಡದ […]

ಗೃಹಭಂಗ – ೩

ಅಧ್ಯಾಯ ೬ – ೧ – ಸುಮಾರು ಆರು ತಿಂಗಳು ಕಳೆದ ಮೇಲೆ ಒಂದು ಕತ್ತಲೆಯ ನಡುರಾತ್ರಿಯಲ್ಲಿ ಅಪ್ಪಣ್ಣಯ್ಯ ಬಂದು ಬೆಸ್ತರ ಕೇರಿಯ ಮಾಟನ ಮನೆಯ ಬಾಗಿಲನ್ನು ಬಡಿದ. ಒಳಗಿನಿಂದ ಎದ್ದು ಬಂದ ಮಾಟ […]

ಗೃಹಭಂಗ – ೨

ಅಧ್ಯಾಯ ೪ – ೧ – ನಂಜಮ್ಮನಿಗೆ ಏಳು ತಿಂಗಳಾದಾಗ ಒಂದು ದಿನ ಕಂಠೀಜೋಯಿಸರು ತಮ್ಮ ಬಿಳೀ ಕುದುರೆ ಏರಿ ರಾಮಸಂದ್ರಕ್ಕೆ ಬಂದರು. ಈ ಸಲ ಹಗಲು ಹೊತ್ತಿನಲ್ಲಿ ಬಂದರು. ಅವರು ಇಳಿದ ಎರಡು […]