ಅಧಿಕಾರ

ನನ್ನ
ಹಗುರು ಕಣ್ಣುಗಳಿಂದ
ತಟತಟ
ಉದುರುವ ಕಂಬನಿಯೇ
ಮಂಡಿ ತರಚಿದಾಗೆಲ್ಲ ಬ್ಲೇಡು
ಕುಯ್ದಾಗೆಲ್ಲ ಧಳ್ಳೆಂದು ಚಿಮ್ಮುವ
ಕಡುರಕ್ತವೇ
ತೆಪ್ಪಗೆ ಜಿನುಗುವ ಬೆವರೇ

ಹೇಳಿ,
ನಿಮ್ಮ ನಡುವೆಯೂ
ಎಲ್ಲಿಗೆಲ್ಲಿಯ ಸಂಬಂಧ
ನಿಮ್ಮ ಮೇಲಿಲ್ಲವೆ
ನನಗೂ
ಒಂದಿಷ್ಟು ಅಧಿಕಾರ?
*****