ಯಾರೆ ರಂಗನ ಯಾರೆ ಕೃಷ್ಣನ

ಶಂಕರಾಭರಣ ಆದಿ

ಯಾರೆ ರಂಗನ ಯಾರೆ ಕೃಷ್ಣನ
ಯಾರೆ ರಂಗನ ಕರೆಯ ಬಂದವರು ಪ

ಗೋಪಾಲಕೃಷ್ಣನ ಪಾಪವಿನಾಶನ
ಈ ಪರಿಯಿಂದಲಿ ಕರೆಯಬಂದವರು ೧

ವೇಣುವಿನೊದನ ಪ್ರಾಣ ಪ್ರಿಯನ
ಜಾಣೆಯರರಸನ ಕರೆಯ ಬಂದವರು ೨

ಕರಿರಾಜವರದನ ಪರಮಪುರುಷನ
ಪುರಂದರವಿಠಲನ ಕರೆಯಬಂದವರು ೩
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.