………. – ೧೧

ನೀರಿನ ತುಂಬ ಮೋಡ ಮೋಡದ ಮೇಲೆಲ್ಲ ಅಲೆ ಅಲೆಯಾಗಿ ಹರಿವ ಮೀನು ಮೋಡದೊಳಗೆ ಗುಡುಗು, ನೀರಲ್ಲಿ ಸುಳಿ ಮಿಂಚು ನದಿಯ ತಳದಲ್ಲೊಂದು ಕಥೆ ನದಿಯ ಮುಖದಲ್ಲಿ ನಗುವ ತರಂಗಗಳು. *****

ಆನ್ ಓಡ್ ಟು ಸಾಸ್ಯೂರ್‍ ಅಂದರೆ,

ಸಸ್ಯೂರ್‌ನಿಗಾಗಿ ಬರೆದ ಕಿರುಗೀತೆ ಎಂದಲ್ಲ ‘ಮರ’ಕ್ಕೆ ಮರವೆನ್ನದೆ ಸುಮ್ಮನೆ ಬೇರೇನೋ ಕರೆದಿದ್ದರೆ, ‘ಮರ’ ಬೇರೇನೋ ಆಗಿರುತ್ತಿತ್ತು. ಅದನ್ನು ‘ಆಕಾಶ’ ಎಂದು ಕರೆದಿದ್ದರೆ, ಅದು ಮೂರಕ್ಷರದ ಮರವಾಗಿ; ಮೂರಕ್ಷರದ ಆಕಾಶ ಮತ್ತೇನೋ ಆಗಿರುತ್ತಿತ್ತು. ಹುಡುಗಿಯರಿಗೆ ಸುಮ್ಮನೆ […]

ಗೆಳೆಯರು

ಬಹುದೂರದೂರಿನ ಅಪರಿಚಿತ ಜಾತ್ರೆಯ ಪೀಪಿ ಬೊಂಬೈ ಮಿಠಾಯಿ ಮಕ್ಕಳಳು ತೇರು ಪುಗ್ಗೆ ಬ್ಯಾಂಡು ಬಿಸಿಲು ಗಳ ದಪ್ಪ ಉಸಿರಿನ ನಡುವೆ ಥಟ್ಟನೆ ಒಬ್ಬ ಪರಿಚಿತ ಸಿಕ್ಕ ಖುಷಿ-ಗೆಳೆಯರು ಇದ್ದಾಗ ಬೇಡ ಇಲ್ಲದಾಗ ಬೇಕು ಹೊಳಹು […]

………. – ೧೦

ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ ನವಗ್ರಹಗಳು ನೀರು, ಗಾಳಿ, ಅಗ್ನಿ, ಭೂಮಿ, ಆಕಾಶ, ಮಾರುಕಟ್ಟೆಯ ತುಂಬ ಪಂಚಭೂತಗಳ ಸಂಕ್ಷೇಪ ರೂಪ. *****

………. – ೯

ಸೂರ್‍ಯ ಬಲ್ಬಿನ ಯುಗದಲ್ಲೂ ದೀಪಾವಳಿಗೊಮ್ಮೆ ಮಣ್ಣಿನ ಹಣತೆ ಮನೆಸುತ್ತ; ಬಣ್ಣ ಬಣ್ಣದ ಮೋಂಬತ್ತಿ ಸಾಲು ಹಬ್ಬ ಹಳೆಯದಾದರೂ ಬೆಳಕು ಮಾತ್ರ ವಸಾಹತುಶಾಹಿಗೆ ಬದ್ಧ. *****