………. – ೫

ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. *****

ದೃಷ್ಟಿ ನಿವಾರಣೆ

ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****

ಮಳೆಗಾಳಿ

ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ *****

ಸಭ್ಯ/ಪೋಲಿ

ಆಹಾ, ಅದೆಷ್ಟು ಮಾದಕ ಜುಲುಮೆಯ ಗಂಧವತಿ ಪುಷ್ಪ! ಆಸೆಯಾಗಿ ಹತ್ತಿರದಿಂದ ಮೂಸಿದರೆ ಉಸಿರ ಬಿಸಿಗೇ ಬಾಡಿ ಉದುರೀತಲ್ಲವೇ? ದಮ್ಮಿನ ವಸಂತದಲ್ಲಿ ಸೂಕ್ಷ್ಮ ಮೂಗಿಗೂ ಅದರ ಘಾಟು ಹಿತವಲ್ಲವೆನ್ನುವರು, ಬಲ್ಲವರು, ಅಲ್ಲವೆ? ಎಂದು ಅದರ ಅಲ್ಪಾಯುವಾದ […]

ಪ್ರಣಯ ಪಂಚಮಿ

೧ ತುಂಟಾಗಿ ನಾಚಿ ಮೊಣಕಾಲು ಮಡಿಸಿ, ಗಲ್ಲ ಊರಿ ಮುನಿದ೦ತೆ ನಟಿಸಿ ಕಣ್ಣುಗಳನ್ನು ತುಂಬಿಕೊಂಡವನನ್ನು ತನ್ನ ಖಾಸಗಿ ಕತ್ತಲೆಗೆ ಒಯ್ಯುತ್ತ ಒಡಲುಗೊಳ್ಳುವ ಅವಳ ನಿರೀಕ್ಷೆ: ಅವನ ಧಾರಾಳ ಅವಕಾಶ ಮತ್ತು ಆಗ್ರಹ ೨ ಸುಮ್ಮಗೆ […]

………. – ೩

ನಾವು ನಮ್ಮ ನಮ್ಮ ದಿನಚರಿಯಲ್ಲಿ ಎಂದಿನಂತೆ……… ಒಬ್ಬರ ಮುಂದೊಬ್ಬರು ಸುಮ್ಮನೆ ಹಾಗೆ ಇರುತ್ತೇವೆ. ಆಗಲೂ ಹಾಗೆ ಈಗಲೂ ಹಾಗೆ ‘ಆ’ ಅನ್ನುವುದು ‘ಈ’ ಆದಮಾತ್ರಕ್ಕೆ ಎಷ್ಟೊಂದು ಬದಲಾವಣೆ ಎಲ್ಲದರಲ್ಲು!! *****