………. – ೪ Posted on ಆಗಷ್ಟ್ 25, 2023ಏಪ್ರಿಲ್ 28, 2023 by ಮಮತ ಜಿ ಸಾಗರ ಚರ್ಮದಡಿಗೆ ಮೂಳೆ, ಮಾಂಸ, ಹರಿವ ಕತ್ತಲು. ಮುಖದಲ್ಲಿ; ಕತ್ತಲ ಚಹರೆ ತೊಟ್ಟ ಭಾವವೆ ಬೇರೆ. *****
ಹನಿಗವನ ಸಾವು ಜಯಂತ ಕಾಯ್ಕಿಣಿ ಫೆಬ್ರವರಿ 17, 2023 0 ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ ಯಾರೋ ಕರೆದಂತೆ ಪಾಠದ ಮಧ್ಯಕ್ಕೇ ಸಟ್ಟನೆ ಎದ್ದು ಹೊರಗೆ ನಡೆದುಬಿಡುತ್ತಾರೆ *****
ಹನಿಗವನ ಹಿತವಾದ ನಿಸಾರ್ ಅಹಮದ್ ಕೆ ಎಸ್ ಜನವರಿ 26, 2024 0 `ಗುರುವೇ, ಜೀವನದಲ್ಲಿ ನಾನು ಹಿಡಿಯಬೇಕಾದದ್ದು ಯಾವ ದಾರಿ?’ ‘ಜವಾಬು ದಾರಿ’ *****
ಹನಿಗವನ ಗುಣದ ಗರಿಮೆ ನಿಸಾರ್ ಅಹಮದ್ ಕೆ ಎಸ್ ಜನವರಿ 1, 2007 0 ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****