ರಾತ್ರೆ Posted on ಆಗಷ್ಟ್ 18, 2023ಮೇ 10, 2023 by ಜಯಂತ ಕಾಯ್ಕಿಣಿ ನಾ ರಾತ್ರೆ ತಲೆ ತಿರುಗಿ ಬಿದ್ದ ನಕ್ಷತ್ರ ಹೆಕ್ಕುವೆ ತಿಳಿ ಬೆಳಕು ಗುಡಿಸುವೆ ಹಸನು ಹಸನು ಮಾಡುವೆ ಒಳ ಕತ್ತಲೆ *****
ಹನಿಗವನ ಹೂವು ಜಯಂತ ಕಾಯ್ಕಿಣಿ ಜುಲೈ 7, 2023 0 ಈ ಚೆಪ್ಪೆ ನೆಲದಾಳದಿಂದ ಬಳಕ್ಕನೆ ಪುಟಿದ ದಳ ದಳ ಬಣ್ಣ ಹೊರತಾಗದ ಸುಖದಚ್ಚರಿ *****
ಹನಿಗವನ ಫರಕು ನಿಸಾರ್ ಅಹಮದ್ ಕೆ ಎಸ್ ಜೂನ್ 12, 2023 0 ಅಭಿ ಮಾನ ಬೇರೆ ಮಾನ ಬೇರೆ: ಒಂದು ನಾವೇ ಬೆಳಸಿಕೊಳ್ಳುವ ಸೊತ್ತು; ಇನ್ನೊಂದು ಹೆರರು ನಮಗೆ ಕಟ್ಟುವ ಕಿಮ್ಮತ್ತು. *****
ಹನಿಗವನ ನಿರರ್ಥಕ ನಿಸಾರ್ ಅಹಮದ್ ಕೆ ಎಸ್ ಜನವರಿ 1, 2007 0 ಅಕ್ರಮ ಗಳಿಕೆಯಲಿ ತೊಡಗಿ ಗುಡಿ ಕಟ್ಟಿಪಾಪ ತೊಳೆಯುವ ಚಪಲ-ಕೋಣೆಯಲಿ ಫ್ಯಾನ್ ಹಾಕಿ ಕಸ ಗುಡಿಸುವಕಾಯಕದ ಹಾಗೆ ಅಸಫಲ.