ಶ್ವೇತಪುತ್ರಿ

ಗಾಳಿಯ ಬೆರಳಿಗೆ ಬೆಳ್ಳಿಯ ಉಂಗುರ ತೊಡಿಸುತ ಬರುತಿಹ ಒಯ್ಯಾರಿ! ಹೊಗೆಯ ಸುರುಳಿಗಳ ಅರಳಿನ ಮಾಲೆಯ ಕೊರಳಿಗೆ ಸೂಡುವ ಸುಕುಮಾರಿ! ಬಿಳಿಯ ಪತ್ತಲದ ತೆಳ್ಳನೆಯುಡುಗೊರೆ ಕೆಂಗಿಡಿ ಕೆಂಬರಳಿನ ನತ್ತು, ನಿರಾಭರಣ ಸುಂದರಿ ಸುವಿಲಾಸಿನಿ ಕಲಿಸಿದರಾರೀ ಹೊಸ […]

ವಸಂತೋತ್ಸವ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರೇಮ ವಸಂತೋತ್ಸವದ ಮಂದ ಆಗಮನ ಧೂಳಿನ ಬಟ್ಟಲಾಯಿತು ನಂದನವನ ಎಲ್ಲೆಡೆಗೆ ದೇವಲೋಕದ ಧ್ವನಿ ಹಬ್ಬಿತು ಆತ್ಮದ ಹಕ್ಕಿ ಚಡಪಡಿಸಿ ದಿಗಂತಕ್ಕೆ ಹಾರಿತು ಮುತ್ತುಗಳಿಂದ ಕಿಕ್ಕಿರಿಯಿತು ಕಡಲು […]

ಆನ್ ಓಡ್ ಟು ಸಾಸ್ಯೂರ್‍ ಅಂದರೆ,

ಸಸ್ಯೂರ್‌ನಿಗಾಗಿ ಬರೆದ ಕಿರುಗೀತೆ ಎಂದಲ್ಲ ‘ಮರ’ಕ್ಕೆ ಮರವೆನ್ನದೆ ಸುಮ್ಮನೆ ಬೇರೇನೋ ಕರೆದಿದ್ದರೆ, ‘ಮರ’ ಬೇರೇನೋ ಆಗಿರುತ್ತಿತ್ತು. ಅದನ್ನು ‘ಆಕಾಶ’ ಎಂದು ಕರೆದಿದ್ದರೆ, ಅದು ಮೂರಕ್ಷರದ ಮರವಾಗಿ; ಮೂರಕ್ಷರದ ಆಕಾಶ ಮತ್ತೇನೋ ಆಗಿರುತ್ತಿತ್ತು. ಹುಡುಗಿಯರಿಗೆ ಸುಮ್ಮನೆ […]

ಅಂಚೆಯಾಳು

೧ ಅಂಚೆಯಾಳು ಬಂದನೇನು? ತಂದನೇನು ಓಲೆಯ? ಮನವ ಕೊಂಡು ಕೊನೆವ ಒಲವು ಸಮೆದ ನುಡಿಯ ಮಾಲೆಯ? ಕಳುಹಲಿಲ್ಲವೇನು ಗಾಳಿಯೊಡನೆ ಬಯಲಿನಾಲಯ? ಅವನ ಬರವ ಹಾರೈಸುತ ಯೋಚನೆಯೊಡನೋಲವಿಸುತ ಬಂಧು ಬಳಗವೆಲ್ಲವಿಲ್ಲೆ ಎದೆಗೆ ಬಿಜಯಗೈಸುತ ದೂರ ಸಾರಿ […]

ಗೆಳೆಯರು

ಬಹುದೂರದೂರಿನ ಅಪರಿಚಿತ ಜಾತ್ರೆಯ ಪೀಪಿ ಬೊಂಬೈ ಮಿಠಾಯಿ ಮಕ್ಕಳಳು ತೇರು ಪುಗ್ಗೆ ಬ್ಯಾಂಡು ಬಿಸಿಲು ಗಳ ದಪ್ಪ ಉಸಿರಿನ ನಡುವೆ ಥಟ್ಟನೆ ಒಬ್ಬ ಪರಿಚಿತ ಸಿಕ್ಕ ಖುಷಿ-ಗೆಳೆಯರು ಇದ್ದಾಗ ಬೇಡ ಇಲ್ಲದಾಗ ಬೇಕು ಹೊಳಹು […]

ರೈಲು ಬಂಟ

“ಹಿಂದಿನಳಲ ಮರೆತುಬಿಡು ಇಂದು ಅಡಿಯ ಮುಂದಕಿಡು ಇಡು, ಇಡು ಇಟ್ಟು ಬಿಡೂ” ಎನುತ ಗಾಡಿ ಓಡುತಿಹುದು ಓಡುತಿಹುದು ಮುಂದಕ ಮುಂದಕಿಟ್ಟ ಹೆಜ್ಜೆಯಿನಿತು ಸರಿಸದಂತೆ ಹಿಂದಕೆ! ತಂತಿ ಕಂಬ ಗಿಡದ ಸಾಲು ದಾಟಿ ನುಗ್ಗುತಿಹುದು ರೈಲು […]

ಮಾತಿನ ಮುಸುಕು

ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು […]

………. – ೧೦

ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ ನವಗ್ರಹಗಳು ನೀರು, ಗಾಳಿ, ಅಗ್ನಿ, ಭೂಮಿ, ಆಕಾಶ, ಮಾರುಕಟ್ಟೆಯ ತುಂಬ ಪಂಚಭೂತಗಳ ಸಂಕ್ಷೇಪ ರೂಪ. *****

ಕೊನೆಯ ಎಚ್ಚರಿಕೆ !

೧ ಏಸುಕ್ರಿಸ್ತ ಏಸು ಬುದ್ಧ ಏಸು ಬಸವ ಬಂದರೂ, ತಮ್ಮ ಅಂತರಂಗವನ್ನೆ ಲೋಕದೆದುರು ತೆರೆದರೂ ನಶ್ವರದಲಿ ಈಶ್ವರನನು ಕಂಡು ಜಗದ ಕಲ್ಯಾಣಕೆ ಎದೆಯ ಪ್ರಣತಿ ಜ್ಯೋತಿಯಲ್ಲಿ ದಯೆಯ ತೈಲವೆರೆದರೂ, ಪುಣ್ಯ ಪುರುಷ ಗಾಂಧಿ ತಂದೆ […]