ಕನ್ನಡ ಮಾಧ್ಯಮ Posted on ಮೇ 2, 2025ಮೇ 4, 2025 by ನಿಸಾರ್ ಅಹಮದ್ ಕೆ ಎಸ್ ಸ್ವಂತ ಮನೆಯಲಿ ಸ್ಟೇಯಿನ್ಲೆಸ್ ಸ್ಟೀಲಿನ ಪಾತ್ರೆಯ ಬಳಸುತ ಮನಸಾರ, ಪರರಿಗೆ ಮಡಕೆಯ ಮಹಿಮೆಯ ದಿನವೂ ಬೋಧಿಸುತಿರುವನು ಕುಂಬಾರ. *****
ಹನಿಗವನ ವೈಖರಿ ನಿಸಾರ್ ಅಹಮದ್ ಕೆ ಎಸ್ ಸೆಪ್ಟೆಂಬರ್ 26, 2025 0 ಮಣ್ಣಿನ ಮಗನ ಆಡಳಿತ ಬಲು ಭರ್ಜರಿ, ನಾಡಿನ ಇತಿಹಾಸದಲ್ಲೆ ಗೋಲ್ಡನ್ ಛಾಪ್ಟರ್; ಚಿರ ವಿನೂತನ ರೈತರ ಉದ್ಧಾರದ ವೈಖರಿ; ಪ್ರತಿ ನಿತ್ಯ ಏರಿ ಕಾಂಟೆಸ, ವಿಮಾನ, ಹೆಲಿಕಾಪ್ಟರ್. *****
ಹನಿಗವನ ಸೋಜಿಗ ನಿಸಾರ್ ಅಹಮದ್ ಕೆ ಎಸ್ ಜೂನ್ 21, 2024 0 ಇತಿಹಾಸದಲ್ಲಿ ಶಕ ಪುರುಷರು ಇರುವಂತೆ ವಿದೂ ಷಕ ಪುರುಷರು ಇದ್ದಾರೆ. *****
ಹನಿಗವನ ಸ್ಥಾನಾಂತರ ನಿಸಾರ್ ಅಹಮದ್ ಕೆ ಎಸ್ ನವೆಂಬರ್ 13, 2023 0 ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ ಆಮೇಲೆ ಬಂದ ಮಂದಿ ಹೆದ್ದಾರಿ ಜೊತೆ ಹೋಲಿಸಿದಂತೆ ಕಿಷ್ಕಂಧಿತ ಸಂದಿಗೊಂದಿ. *****