ಏನೋ ಸಾವೆನ್ನುವ

ಏನೋ ಸಾವೆನ್ನುವ ‘ಅದು’ ನಿರೀಕ್ಷಿಸುತ್ತಾ ಇರೋದು ಎಲ್ಲೋ, ಮುಂದೆಂದೋ ಈಗಂತೂ ಅಲ್ಲ. ಎನ್ನಿಸುವಂತೆ ಆಪ್ತರ ಲೋಕಾಭಿರಾಮದ ಮಾತು, ನೋವಾಗದಂತೆ ಸೂಜಿಯಲ್ಲಿ ರಕ್ತ ಸೆಳೆಯುವ ನರ್ಸಿನ ಮುಗುಳ್ನಗೆ ಹಾಸಿಗೆ ಪಕ್ಕದಲ್ಲೊಂದು ಇನ್ನಷ್ಟು ಅರಳುವ ಭರವಸೆಯ ಗುಲಾಬಿ […]

ಹೀಗೊಂದು ದಿನ ಕಾಯುತ್ತಾ

ನೆನಪಿನಾಳದಿಂದ ಘಂ ಎಂದಿತ್ತು ಬೆಳ್ಳಿ ನೀಲಾಂಜನದ ಸುಟ್ಟ ತುಪ್ಪದ ಬುತ್ತಿ ಬಾದಾಮಿ, ಖರ್ಜೂರ, ದ್ರಾಕ್ಷಿ, ಗೋಡಂಬಿ ಚಿಗುಳಿ, ಎಳ್ಳುಂಡೆ; ತಟ್ಟೆ ತುಂಬ ತಿಂಡಿ ಬಟ್ಟಲಲಿ ಕಾದ ಕೇಸರಿ ಹಾಲು….. ಹನಿ ಹನಿ ಮಳೆ ಬಿದ್ದು […]

ಘೋಷಣೆ

“ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” -ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. […]

ಅಧಿಕಾರ

ನನ್ನ ಹಗುರು ಕಣ್ಣುಗಳಿಂದ ತಟತಟ ಉದುರುವ ಕಂಬನಿಯೇ ಮಂಡಿ ತರಚಿದಾಗೆಲ್ಲ ಬ್ಲೇಡು ಕುಯ್ದಾಗೆಲ್ಲ ಧಳ್ಳೆಂದು ಚಿಮ್ಮುವ ಕಡುರಕ್ತವೇ ತೆಪ್ಪಗೆ ಜಿನುಗುವ ಬೆವರೇ ಹೇಳಿ, ನಿಮ್ಮ ನಡುವೆಯೂ ಎಲ್ಲಿಗೆಲ್ಲಿಯ ಸಂಬಂಧ ನಿಮ್ಮ ಮೇಲಿಲ್ಲವೆ ನನಗೂ ಒಂದಿಷ್ಟು […]

ಪಕ್ಷಿಗಾಗಿ ಕಾದು

ಮೊದಲೊಂದು ಪಂಜರ ಬರಿ ಅದು ಖಾಲಿಯಾಗಿದ್ದು, ತೆರೆದೂ ಇರಬೇಕು-ಹಾಗೆ. ಆಮೇಲೆ ಏನೋ ಸರಳವಾದ, ಬರುವ ಪಕ್ಷಿಗೆ ಅಗತ್ಯವೆನ್ನಿಸುವ ಏನನ್ನೋ ಪಂಜರದಲ್ಲಿ ಬಿಡಿಸು ಆಮೇಲೆ ಈ ನಿನ್ನ ಚಿತ್ರವನ್ನು ನಿನಗೆ ಇಷ್ಟವಾದ ಮರಕ್ಕೆ ಆನಿಸಿ ಇಡು. […]

………. – ೧

ಸುರಗಿ ಹೂವಿನ ಕಂಪು ಮಳೆ ಮಣ್ಣಿನ ಕಂಪು ಒಲೆಯೊಳಗೆ ಸುಟ್ಟ ಗೇರು ಬೀಜದ ಕಂಪು ಎಲ್ಲಿಂದ ಸುಳಿದಿತ್ತು ಈ ಕೆಂಪು, ಒಂದೇ ಕ್ಷಣ ಧಿಗ್ಗನೆದ್ದು ಮುಳುಗಿತ್ತು. ಘಳಿಗೆಗೊಂದೊಂದು ವಾಸನೆ ಎಂದೋ ಎಲ್ಲೋ ಆಗಿದ್ದು ತಟ್ಟನೆ […]

ಎಲೆಗೆ

ಎಲೆ ಎಲೆಯೆ ನಿನ್ನ ಹಸಿ ಹಸಿದ ಹಸಿ ರು ಮೈಗುಂಟ ಸರಾಗ ಕೊರೆಯುತ್ತವೆ ನರಗಳ ದೌರ್‍ಬಲ್ಯ. ಹಾದಿಗಳೆಲ್ಲ ಕಾಲು ಚಾಚಿ ಮಲಗಿವೆ ಅಲ್ಲಲ್ಲಿ ಇತಿಹಾಸ ಹೆಕ್ಕುತ್ತ ಸಂಚರಿಸುವ ಬಾಧೆಗಳು ತೊಲಗಿವೆ ಹಸಿರುಗಚ್ಚುತ್ತಿರುವ ಕೋಶಗಳೆದುರೂ ಮೈ […]

ಇಷ್ಟಾರ್ ಎಂಬ ಬ್ಯಾಬಿಲೋನಿಯನ್ ಮಾತೃದೇವತೆಗೆ ಒಂದು ಹಾಡು

ಡೆನಿಸ್ ಲೆವೆರಟಾವ್ ಚಂದ್ರ ಹಂದಿ,ಅವಳು ಗುಟುರುವುದು ನನ್ನ ಗಂಟಲಿನಿಂದನನ್ನ ಒಳಗೆಲ್ಲ ಬೆಳಗುವ ಹಾಗೆ ಅವಳು ಹೊಳೆಯುತ್ತ ಹೋದಂತೆಅಂತರಾಳದ ನನ್ನ ಕೆಸರು ಸಂಭ್ರಮಿಸಿಕಾಂತಿಯುಕ್ತ ಬೆಳ್ಳಿಗುಳ್ಳೆಗಳಾಗಿ ಹೊಮ್ಮಿ ಚಿಮ್ಮುತ್ತವೆ ನಾನು ಗಂಡು ಹಂದಿಮತ್ತು ಕವಿಅವಳು ತನ್ನ ಧವಳ […]

ನಡೆದದ್ದು

ಹಾಗೇ ಕಾಲು….. ಹೆಜ್ಜೆ ಮುಂದೊಂದು ಹೆಜ್ಜೆ ದೂರ…. ದೂರದ ತನಕ ತನ್ನ ಪಾಡಿಗೆ ತಾನು, ಅಕ್ಕ ಪಕ್ಕದ ಗಿಡಮರಗಳೆಲ್ಲಾ ಮುಂದು ಮುಂದಕ್ಕೆ ಸಾಗಿದಹಾಗೆ, ನಡೆದಷ್ಟೂ ಸುಮ್ಮನೆ ನಡೆಸುತ್ತದೆ ದಿಕ್ಕಿಲ್ಲದ ಮನಸ್ಸು. ಹಾದಿಯಂಚಿಗೆ ಗುಡ್ಡಗಾಡು ಸರಿದು […]