ಅಸ್ತಿತ್ವ

ನಾನು ಮೈತುಂಬ ಬಾಯಾಗಿ ತುಂಬಿ ತುದಿಯಾಗಿರುವ ಬದ್ಧ- ಬುಗುರಿ. ಗುರುತ್ವ – ಬಿಂಬದ ಸುತ್ತೂ ಸುತ್ತಾಗಿಸಿ ಹತ್ತಿ ಹತ್ತಾಗಿಸಿ ಗರಾ ಗರಾ ತಿರುಗಿಸಿಕೊಂಡು ತಿರುಗಿ ನೇರ ನಿಗುರಿ ನಿಂತರೆ ಮಾತ್ರ ನನಗೆ ಏನಾದರೂ ಅಸ್ತಿತ್ವ-ಒಂದು […]

ಈ ನಮ್ಮ ಕಾಲದಲ್ಲಿ ಏನೇನು ಚೆಂದ?

ನಮ್ಮ ಕಮ್ಯುನಿಸ್ಟರ ದೇಶದಲ್ಲಿ ಗುಟ್ಟಾದ ದೇವರ ಗುಡಿ ಚೆಂದ ಬಲರೆಪ್ಪೆ ಅದುರೀತೆಂದು ಭಯ ಬೀಳುವ ಸುಶಿಕ್ಷಿತಳ ಬೆಡಗು ಚೆಂದ ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ ನೀತಿವಂತ ಸಭ್ಯರ ಘನತೆಗಿಂತ ತಂಗಿಯ ಹೇನು ಹೆಕ್ಕುತ್ತ […]

ಜಾಜಿ – ೨

ದೂರ ದೂರದ ತನಕ ದಾರಿ ಕಾಯುವ ಹುಡುಗಿ ಏನು ಹೇಳೆ ನಿನ್ನ ಮನದ ಅಳಲು. ಯಾವ ಊರಿನ ಅವನು! ಯಾವ ಊರಿನ ಇವಳು! ಆಲಿಕಲ್ಲಿನ ಮಳೆಯ ಕಪ್ಪು ಮೋಡ ಜಾಡು ನದಿಯ ನಾಡಿಯಲ್ಲೆಲ್ಲಾ ತಣ್ಣನೆಯ […]

ಚಿಂತೆ

ತನ್ನ ತುರುಬಿನಲಿ ಒಂಟಿಗೂದಲ ಗುರುತಿಸಿ ಹೌಹಾರಿದ ಚೆಲುವೆ ಯೌವನಸ್ಥೆ- ಆ ಚಿಂತೆಯನ್ನೇ ತಲೆಗೆ ಹಚ್ಚಿಕೊಂಡು ಇಡೀ ತಲೆಯನ್ನೇ ನರೆತಿಸಿಕೊಂಡಳು. *****

ಮೂರನೇಯತ್ತೆಯ ಮೊದಲ ಮಳೆ

ಮೊದಲ ಮಳೆ ಸುರಿದಾಗ ಮನೆಯ ನುಣ್ಣನಂಗಳಕೆಲ್ಲ ಪರಿಮಳದ ಮಾತು ಮುಂಜಾನೆ ಎದ್ದು ಕಣ್ಣುಜ್ಜುತ ಬೆಚ್ಚನೆ ಹಾಸಿಗೆ ಬಿಟ್ಟು ಹೊಸ್ತಿಲಿಗೆ ಬಂದಾಗ ಮೆಟ್ಟಿಲಿನೆತ್ತರಕೂ ಕರಗಿದ ಕಾಗದ ಕಸ ಮಣ್ಣು ಚೂರು ಒರೆದ ಅಂಗಳ ಗುಡ್ಡೆಗಟ್ಟಿ ಒಕ್ಕಿ […]

ಕುದುರೆಗಳು

– ಎಡ್ವಿನ್ ಮುಯಿರ್ ಪ್ರಪಂಚವನ್ನು ಚಿರನಿದ್ದೆಗೆ ತಳ್ಳಿದ ಏಳು ದಿನಗಳ ಯುದ್ಧ ಕೊನೆಯಾಗಿ ಇನ್ನೇನು ಒಂದುವರ್ಷ ಕಳೆಯುವುದರ ಒಳಗೆ ಸಂಧ್ಯಾಕಾಲ ಕತ್ತಲಿಗೆ ಜಾರುತ್ತ ಇರುವ ಹೊತ್ತಲ್ಲದ ಹೊತ್ತಿನಲ್ಲಿ ಬಂದೇಬಿಟ್ಟವು ಅವು ಅಪರೂಪದ ಕುದುರೆಗಳು ಅಷ್ಟರಲ್ಲಿ […]

ಪ್ರೀತಿಯ ಹುಡುಗ

ಹಾಗೆ ಪ್ರೀತಿಯ ಹುಡುಗ, ಏನೇನೋ ಮಾತುಗಳು – ಬೇಕಾಬಿಟ್ಟಿ. ಎಲ್ಲಿಲ್ಲದ ಕಾಳಜಿ ದೇಶದ ಬಗ್ಗೆ ಅಡಿಗೆಯ ಉಪ್ಪು ಹುಳಿ ಖಾರದ ಬಗ್ಗೆ ಅವನು ಹಾಗೇ! ಭುಜಕ್ಕೆ ಭುಜ ತಾಗಿ ಮೈಯ್ಯೆಲ್ಲ ನಡುಗಿದರೂ ಏನೂ ಆಗದಹಾಗೆ […]

ಸಾವು

ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ ಯಾರೋ ಕರೆದಂತೆ ಪಾಠದ ಮಧ್ಯಕ್ಕೇ ಸಟ್ಟನೆ ಎದ್ದು ಹೊರಗೆ ನಡೆದುಬಿಡುತ್ತಾರೆ *****