ಅಸ್ತಿತ್ವ

ನಾನು
ಮೈತುಂಬ ಬಾಯಾಗಿ
ತುಂಬಿ
ತುದಿಯಾಗಿರುವ
ಬದ್ಧ-
ಬುಗುರಿ.

ಗುರುತ್ವ
– ಬಿಂಬದ ಸುತ್ತೂ ಸುತ್ತಾಗಿಸಿ
ಹತ್ತಿ ಹತ್ತಾಗಿಸಿ ಗರಾ ಗರಾ
ತಿರುಗಿಸಿಕೊಂಡು ತಿರುಗಿ ನೇರ
ನಿಗುರಿ ನಿಂತರೆ ಮಾತ್ರ
ನನಗೆ ಏನಾದರೂ
ಅಸ್ತಿತ್ವ-ಒಂದು
ಗುರಿ

ಇಲ್ಲವಾದರೆ-
ತೆಪ್ಪಗೆ ಕೈಕಾಲೆಳೆದು
ಹವೆಯಾಗಿ ಹರಿದೀ
ವರ್ತಮಾನದಲ್ಲಿ
ತೇಲುವ
ನಿರ್ಜನ ಸೌಧಗಳ
ಅಂಗಾತನಗರಿ
*****