ಗಾಂಧೀನಗರಿಗರ ‘ಸಿನಿಮಾ ಫಾರ್‍ಮುಲ’ ಈಗ ಬದಲಾಗುತ್ತಿದೆ

ಯಾವುದೇ ನಿರ್ಮಾಪಕರ ಬಳಿ ವ್ಯಾಪಾರಿ ಚಿತ್ರಕ್ಕೆ ಕತೆ ಹೇಳಹೊರಟಾಗ ಅದಕ್ಕೆ ಅವರದೇ ಆದ ಒಂದು ಫಾರ್‍ಮುಲ ಇತ್ತು. ೪-೫ ಹಾಡು ೩-೪ ಫೈಟು ಒಂದೋ ಎರಡೋ ಕ್ಯಾಬರೆ, ಕೆಲವು ಸೆಂಟಿಮೆಂಟ್ ಸೀನ್ಸ್ ಇರಲೇಬೇಕು ಎನ್ನುತ್ತಿದ್ದರು. […]

ನಡತೆ

ಹಿರಿಯರ ಹಿರಿತನ ಅರಿವಾಗುವುದು ಹಿರಿಯರಾಗಿ ನಡೆದುಕೊಳ್ಳುವುದರಲ್ಲಿ ಮಾತ್ರವಲ್ಲ ಹೆರರನ್ನೂ ಹಿರಿಯರಾಗಿ ನಡೆಸಿಕೊಳ್ಳುವುದರಲ್ಲಿ. *****

ಗೆಳೆತನ

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು; ಜೀವನದನಂತ ದುರ್‍ಭರ ಬವಣೆ ನೋವುಗಳ ಕಾವುಗಳ ಮೌನದಲಿ ನುಂಗಿರುವೆನು. ಗೆಳೆತನವೆ ಇಹಲೋಕಕಿರುವ ಅಮೃತ ಅದನುಳಿದರೇನಿಹುದು – ಜೀವನ್ಮೃತ! ನಲ್ಲನಲ್ಲೆಯರೊಲವು, ಬಂಧುಬಳಗದ ಬಲವು ತನ್ನಿಚ್ಛೆ ಪೂರೈಸುವವರ […]

ಅಶೋಕ ಎಪಿಸೋಡ್

ನಾನು ಅವಳನ್ನು ಹಾಗೆ ನೊಡಬಾರದಿತ್ತಾ..? ನಾನು ಅವಳನ್ನು ಹಾಗೆ ನೊಡಬಾರದಿತ್ತು.. ಅವಳು ಉಟ್ಟಿರೋ ಜೇನು ತುಪ್ಪದ ಬಣ್ಣದ ಸೀರೆಗೂ ದೃಷ್ಟಿಯಾಗುವ ಹಾಗೆ.. *********** ನಂಗೆ ಒಂದು ದುರಭ್ಯಾಸ.. ಒಂದು ಗಂಡು-ಹೆಣ್ಣು ಕೂತು ಮಾತಾಡ್ತಿದ್ದಾರೇಂದ್ರೆ ಅವರಿಬ್ಬರ […]

ತಿಳಿಯಲಿಲ್ಲ

ನಿನಗೆ ಇದು ತಿಳಿಯುವುದಿಲ್ಲ ಸುಮ್ಮನಿರು ನೀನು ಎಂದನ್ನುತ್ತಲೇ ಅಪ್ಪ ಸತ್ತ ಅಜ್ಜ ಸತ್ತ…… ನೀನಿನ್ನೂ ಮಗು ಅನ್ನುತ್ತಾ ಎಲ್ಲರೂ ಸತ್ತರು ನಾನೊಬ್ಬ ಉಳಿದೆ ನನಗದು ತಿಳಿಯಲಿಲ್ಲ. ಬೇಡವೇ ಬೇಡ ಎಂದು ನಾನೂ ಸಾಯಲಿಲ್ಲ… ತಪ್ಪಿ […]

ಗೋಳಗುಮ್ಮಟ

ಬ್ರಹ್ಮಾಂಡಮಂ ನಿರ್‍ಮಿಸಿದ ಕರ್‍ತಾರನದಟು ಬಿಡಿಸಲಾಗದ ಒಗಟು; ಆ ಗೂಢತಮ ತಮೋ ವಿಸ್ತೀರ್‍ಣದಲಿ ಬೆಳಕಿನರಿಲುಗಳ ಸೋದಿಸಿಹ ಧುರಧರನು ವಿಜ್ಞಾನಿ; ಪೂರ್‍ಣತೆಯನರಿಯನೈ ಸೃಷ್ಟಿಕರ್‍ತಾರನಾಡುಂಬೊಲದ ಕಮ್ಮಟಿಕೆ ಧೀಂಕಿಡುವ ಮನುಜಕೃತಿ ಗೋಳಗುಮ್ಮಟವೈಸೆ? ಮುಗಿಲನಿಲ್ಲಿಯೆ ನೆಲಕೆ ಎಳೆದು ತಂದಿಹ ಶಿಲ್ಪಿ ಭವ್ಯತೆಗೆ […]

ಸಿನಿ ಅವಾರ್ಡ್ಸ್ ಜಗಳದಲ್ಲಿ ಜೀತಗಳು ಮತ್ತು ಭಿಕ್ಷಾಪಾತ್ರೆ

ಈ ಬಾರಿಯ ಸರಕಾರಿ ಕನ್ನಡ ಚಲನಚಿತ್ರ ಪ್ರಶಸ್ತಿಯ ಹಗರಣ ಒಂದು ರೀತಿ ಹಾದಿರಂಪ ಬೀದಿರಂಪವಾಗಿ ಚಾನೆಲ್ ವಾರ್‌ಗೂ ದಾರಿಮಾಡಿರುವುದು ಪತ್ರಿಕೆಗಳಲ್ಲಿ ಜಾಹೀರಾತುಗಳಲ್ಲಿಯೂ ಕಾಣುವ ದಿನ ಬಂದು ಪ್ರಶಸ್ತಿಗಳೇ ತನ್ನ ಮೌಲ್ಯ ಕಳೆದು ಕೊಳ್ಳುವಂತಾಗಿದೆ. ಈಗ […]

ಅಲೆಮಾರಿ ಮತ್ತೆ ಬಂದ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಅಲೆಮಾರಿ ಗುಲಾಮ ಮತ್ತೆ ವಾಪಸಾಗಿದ್ದಾನೆನಿನ್ನೆದುರು ಮೇಣದಬತ್ತಿಯಂತೆ ಕರಕಾಗುತ್ತ ಕೊರಗಿದ್ದಾನೆ ಓ ಆತ್ಮವೆ, ಮಂದಸ್ಮಿತವಾಗು, ಪನ್ನೀರಿನಂತಾಗುಮುಚ್ಚದಿರು ಬಾಗಿಲು, ಆತ್ಮವೆ, ಆತನೀಗ ಅನಾಥ ನೀನು ಬಾಗಿಲು ಬಡಿದು […]

ಮಾತಂಗ ಬೆಟ್ಟದಿಂದ

೧ ದುಂಡಾದ ಬಂಡೆಗಳ ಮೇಲುರುಳಿ, ನುಣ್ಣನೆಯ ಹಾಸುಗಲ್ಲಲಿ ಜಾರಿ, ಅಲ್ಲಲ್ಲಿ ಮಡುಗಟ್ಟಿ ಚಕ್ರ ತೀರ್ಥವ ರಚಿಸಿ, ಬೆಟ್ಟದಡಿಗಳ ಮುಟ್ಟಿ ಪಂಪಾನಗರಿಗಿಂಬುಗೊಟ್ಟ, ತುಂಗಭದ್ರೆಯ ಜಲತರಂಗದಿ ಮಿಂದು, ಶ್ರೀ ವಿರೂಪಾಕ್ಷಂಗೆ ಕೈಮುಗಿದು, ಭುವನೇಶ್ವರಿಗೆ ನಮಿಸಿ, ಸಂಪೂಜಿತ ವಿಜಯ […]

ಕುಮಟೆಗೆ ಬಂದಾ ಕಿಂದರಿಜೋಗಿ

ಈ ಕಥಾ ಪ್ರಸಂಗ ಬಹಳ ವರ್ಷಗಳ ಹಿಂದೆ ಕುಮಟೆಯಲ್ಲಿ ನಡೆಯಿತು. ಕಥೆ ಕೇಳಿದ ಮೇಲೆ ಇದು ನಮ್ಮ ಕಾಲಕ್ಕೆ ಸೇರಿದ್ದೇ ಅಲ್ಲವೆಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಲ್ಲ. ನನಗೂ ಮೊದಲು ಹಾಗೇ ಅನ್ನಿಸಿತ್ತು. ಆದರೆ ಇದು […]