ಕವಿ-ಲೋಕ

ಲೋಕವೇ, ನಿನಗಂಟಿಕೊಂಡಿರುವನಕ ನನ್ನ ಚಟುವಟಿಕೆ. ಬೇರ್ಪಟ್ಟೆನೆ? ನಿರರ್ಥಕ: ಕೆಟ್ಟು ಹೋದ ಬಲ್ಬಿನ ಥರ. ನಾನಿರಲಿ ಇರದಿರಲಿ ನಿನಗಾವ ಬಾಧಕ? ನಡೆಯುತ್ತಲೇ ಇರುವೆ ನಿನ್ನಷ್ಟಕ್ಕೆ ಸುಮ್ಮನೆ. ಆದರಿಷ್ಟೆ: ನಾನಿದ್ದರೆ ನಿನ್ನೊಂದಿಗೆ, ಮಂದಿಗೆ ನಿನ್ನ ಚಲನವಲನದ ಸೂಚಕ: […]

ವಾಕ್ ಹೋಗಿ

ವಾಕ್ ಹೋಗಿ ಬದುಕು ಕಲೆಯಂತೆ ಸಮಾನಾಂತರ ಸಾಗಿದ ದೀಪದ ತಂತಿಗಳಲ್ಲೊಂದರಿಂದ ಯಾವುದೋ ಅಪ್ರಖ್ಯಾತ ಪಕ್ಷಿಯ ಅರ್ಧ ಮೀಟರಿನ ಶಬ್ದ ಕಿವಿ ಹೊಕ್ಕು ಕುತೂಹಲಕ್ಕೆ ಕತ್ತೆತ್ತಿ ನೋಡಿದರೆ ಬರೀ ಅನಾಥ ಸಂಜೆ. *****