ಇರುವ ಅಲ್ಪದರಲ್ಲಿ ತೃಪ್ತಿಯು, ಅಧಿಕವಿದ್ದರೆ ಮೋದವು. ಚಿಂತೆ ಕಾಳಜಿಯಿಂದ ಕೂಡಿಡುವಂತೆ ಬಂದರೆ ಸಮಯವು ನುಸುಳಿ ನನ್ನೆಡೆ ಬರುವ ಹೊತ್ತಿಗೆ ಅವಕೆ ರುಚಿ ತೋರಿಸುವೆನು: ಬುಂಡೆಯಲಿ ನೊರೆ ಹೆಂಡವೀಯುತ ಹಳೆಯ ಹಳ್ಳಿಯ ಹಾಡನು. ಪೀಡಿಸುವ ಯೋಚನೆಯ […]
ಟ್ಯಾಗ್: ನೆಲ-ಮುಗಿಲು
ನನಗೆ ನನ್ನವಳೆ
ನನಗೆ ನನ್ನವಳೆ ಹೆಂಡತಿಯಿರುವಳು ಉಳಿದರ ಜೊತೆ ನಾ ಕೂಡಿಲ್ಲ; ಯಾರೂ ಅನ್ನರು “ಜಾರೆಯ ಗಂಡ” ಬೇರೆ ಮಿಂಡರದು ಭಯವಿಲ್ಲ. ಖರ್‍ಚಿಗಿಹುದು ಒಂದಾಣೆ ನನ್ನ ಬಳಿ ಯಾರುಪಕಾರವು ಬೇಕಿಲ್ಲ; ಕೈಗಡ ಕೊಡುವದಕೇನೂ ಇಲ್ಲ, ಮಂದಿಗೆ ಸಾಲವ […]
ಒಡಲ ನರಕದ ಭಾಂಡ
ಒಡಲ ನರಕದ ಭಾಂಡ ಕುದಿಸಿ ಭಟ್ಟಿಯ ತೆಗೆದ ಮೋಹಿನಿಯ ಕಣ್ಣೀರ ಗುಟುಕನೆಷ್ಟೋ ಕುಡಿದೆ. ಭರವಸೆಗೆ ಅಂಜಿಕೆಯ, ಶಂಕೆಗಾಸೆಯ ಸವರಿ ಕಳಕೊಂಡೆ ಗೆದ್ದೆನೆನ್ನುತ ಕೈಗೆ ಬಂದುದನು. ನಾ ಸುದೈವಿಯು ಎಂದು ಹಿಗ್ಗಿ ಹಾರೈಸಿರಲು ಯಾವ ಅಪರಾಧಕೀ […]
ಅಮೃತ ಶಿಲೆಯಲ್ಲ
ಅಮೃತಶಿಲೆಯಲ್ಲ, ಅರಸರಟ್ಟಹಾಸದ ಸ್ವರ್‍ಣ- ಸ್ಮಾರಕವಲ್ಲ- ಈ ಕವನ ಭವನದ ಎದುರು; ದಿನ ದಿನಕೆ ಮಾಸಿ ಬುರುಸುಗಟ್ಟುವದು ಕಲ್ಲಿನ ಪ್ರತಿಮೆ; ನುಡಿಯೊಳಗೂ ಮತ್ತಿನಿತು ಹೊಳೆದು ಹೊಡಕರಿಸಿ ನಿಲ್ಲುವ ನೀನು; ಕಾಳಗದಲೆಲ್ಲ ವಿಗ್ರಹ ಹಾಳು. ಗಲಭೆಯಲಿ ಭಾರಿ […]
ಮುಕ್ಕಿ ಮೊಗೆಯುವ ಕಾಲ!
೧ ಮುಕ್ಕಿಮೊಗೆಯುವ ಕಾಲ! ಮೊಂಡಗೊಳಿಸುವೆ ಸಿಂಹ ಪಂಜಗಳ; ನಿನ್ನಿಂದ ತನ್ನ ಮಕ್ಕಳ ತಾನೆ ನುಂಗುತಿಹುದೀ ಭೂಮಿ. ಉಗ್ರವ್ಯಾಘ್ರನ ಹರಿತ ಹಲ್ಲು ಕಿತ್ತೆಸೆವೆ. ಪುರಾತನ ಪಕ್ಷಿ ಫೀನಿಕ್ಸ್ ತನ್ನ ರಕ್ತದಿ ಬೂದಿ, ನಿನ್ನ ಪುಟಿಗಾಲಿನಲಿ ಹರ್‍ಷ-ದುಃಖದ […]
ಹಳಕಟ್ಟಿಯವರು
ಯಾವುದೋ ಅಮೃತಗಳಿಗೆ, ನಿಮ್ಮ ದೃಷ್ಟಿಗೆ ಬಿತ್ತು ಹೂತಿಟ್ಟ ಹೊನ್ನಗಣಿ! ತೋಡಿದಿರಿ ಹಗಲಿರುಳು ಮೈಮರೆತು; ಹೊರದೆಗೆದು ಹೇರಿದಿರಿ ಬಂಡಿ ಬಂಡಿ ಚಿನ್ನದ ಅದಿರು; ಹಿಂಗಿತು ಹಸಿವು ನೀರಡಿಕೆ. ತಾಳೆಗರಿ ಗರಿಯೊಡೆದು ಮರಮರವೇರಿ ಕುಕಿಲಿ ಬೆಳಕನೆಚ್ಚರಿಸಿದವು; ನಡುವೆ […]
ದ.ಬಾ.ಕು. ಸ್ಮೃತಿ
ದ.ಬಾ.ಕು. ಮೂರಕ್ಷರವೆ ಸಾಕು: ದಣಿವುದೋರದ ಆ ಮುಖದ ಮುಗುಳುನಗೆ, ಸ್ನೇಹ ತುಂಬಿದ ಜೀಕು. ಕಣ್ಣಕಾಂತಿಗೆ ಏಕೆ ಬೇರೆ ಬಣ್ಣದ ಮಾತು? ಇರುವ ಕೊರಗೆಲ್ಲವನು ಸೋಸಿ ಕರಗಿಸಿ ತೆಗೆದ ಮನಸಿನುಲ್ಲಾಸ, ಮಣಿದು ಬದುಕದ, ಇದ್ದುದಿನಿ- ದಾಗಿಸುವ […]
ನಮಿಸು: ಗೋವಿಂದ ಪೈ
ಕಣ್ಮುಟ್ಟ ಕಂಡಿಲ್ಲ; ಆದರು ಮನದೊಳೆಂದೊ ಮೂರ್‍ತಿಗೊಂಡಿದೆ ಚಿತ್ರ. ಎಲೆ-ಹೂವ ಕಂಡರೂ ಮೂಲ ಆಧಾರವನು ಕಾಂಬ ಕಣ್ಣಿನ ಹೊಳಪು. ಎಲ್ಲವನು ಎಣಿಸಿಟ್ಟ ಬೆಳ್ಳಿಯ ತಿಜೋರಿ. ಅಗೊ ನೆನಹು ಬೀಗದ ಕೈ, ನಮಿಸು: ಗೋವಿಂದ ಪೈ. ಮಾನವೀಯತೆಗೆ […]
ಉತ್ತಂಗಿಯವರನ್ನು ನೆನೆದು
ಉತ್ತಂಗಿ! ಜೀವನದ ಸತ್ಯದಿಂದೆತ್ತರಕೆ ಬೆಳೆದು ಬಾಗಿದ ವೃಕ್ಷ; ಎಲ್ಲ ಋತುಮಾನಕ್ಕು ಎದೆಗೊಟ್ಟು, ಎಂಥ ಕಾಲಕು ಚಿಗುರುನಗೆ ನಕ್ಕು ಹೂಗೊಂಚಲವ ಹಿಡಿದು; ಎಲೆಯ ಮರೆಗಿವೆ ಹರಕೆ ಹೊತ್ತ ಹಣ್ಣುಗಳೆಷ್ಟೊ [ಇಳಿಸಿಕೊಳ್ಳುವರಾರು?] ಮನೆಯಿಂದ ಮನೆಗೆ ಸರ್‍ವಜ್ಞಮೂರ್‍ತಿಯ ನಿಲವ […]
ಶತಾಯುಷಿ ವಿಶ್ವೇಶ್ವರಯ್ಯನವರು
ಘನತೆ-ಗೌರವ-ಸಮತೆಗಿಷ್ಟಗಲ ತೆರೆದ ಕಿವಿ. ಕ್ಷಿತಿಜದಂಚಿಗೆ ತಾಗಿ ಆಚೆ ಹೊಳೆಯುವ ದೃಷ್ಟಿ. ಯೋಜನೆಯ ಮೇಜು ಹಣೆ, ತುಟಿ-ವಿನಯ-ಸಂತುಷ್ಟಿ. ನೇರ ಬಾಳಿದ ಮೂಗು, ದುಡಿಮೆ-ದೀಕ್ಷಾ-ತವಸಿ. ಶುಭ್ರ ಜರಿಪೇಟೆ: ಮೇಧಾಕಿರೀಟ; ಶಾಂತರಸ. ಓರಣಕೆ ತೋರಣವಕಟ್ಟಿದುಡುತೊಡುಗೆ. ನಡಿಗೆ- ನೂರು ಸಂವತ್ಸರದ […]
