ತಟಕ್ಕನೆ ಯಾವುದೇ ಕೃತಿಯನ್ನಾಗಲಿ, ಬರವಣಿಗೆಯನ್ನಾಗಲಿ ಒಪ್ಪಿಕೊಳ್ಳದ ಮೊಂಡಾಟದ ಹಠವಾದಿ ಓದುಗ ನನ್ನಲ್ಲಿ ಸದಾ ಜಾಗರೂಕನಾಗಿರುತ್ತಾನೆ. ಸುತ್ತಮುತ್ತಲಿನವರಿಗೆಲ್ಲ ಒಮ್ಮೊಮ್ಮೆ ಕಿರಿಕಿರಿಯೆನ್ನಿಸಬಹುದಾದಷ್ಟು – ಕೃತಿಯೊಂದಿಗೆ, ಪಾತ್ರಗಳೊಂದಿಗೆ, ವಿವರಗಳೊಂದಿಗೆ ಹೊಡೆದಾಡುತ್ತಲೇ, ಜಗಳ ಮಾಡುತ್ತಲೇ ಸಾಗುತ್ತ ಹೋಗುವ ಅವನ ಎಲ್ಲ ಅಭಿಪ್ರಾಯಗಳನ್ನು ಬದಿಗೊತ್ತಿ ವಿವೇಕ್ ಶಾನಭಾಗರ ‘ಇನ್ನೂ ಒಂದು’ ಕಾದಂಬರಿಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಕೃತಿಯ ಲೋಪಗಳನ್ನು ತೋರಿಸುವ ವಿಮರ್ಶಕ ಪ್ರವೃತ್ತಿ ನನ್ನದಲ್ಲ, ಓದುಗನಾಗಿ ಈ ಕಾದಂಬರಿ ಎತ್ತಿರುವ ಅನೇಕ ಮಹತ್ವದ ಪ್ರಶ್ನೆಗಳನ್ನು ಗುರುತಿಸುವ ಮೂಲಕ ಈ ಕೃತಿ ಒಡ್ದುವ ಸಂವಾದಕ್ಕೆ ಕನ್ನಡಸಾಹಿತ್ಯ.ಕಾಂ ತೆರೆದುಕೊಳ್ಳಲಿ ಎಂಬ ಸದುದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ಅನಂತಮೂರ್ತಿಯವರ ‘ದಿವ್ಯ’ ದಂತೆಯೆ ಈ ಕಾದಂಬರಿಯನ್ನೂ ಸಂಕ್ಷಿಪ್ತಗೊಳಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಕೃತಿಯ ಇಡೀ ಪಠ್ಯವನ್ನು ನೀಡಿ ಮಾರಾಟಕ್ಕೆ ಧಕ್ಕೆ ತರಬಾರದೆಂಬದು ಎಂಬ ನಂಬಿಕೆಯನ್ನು ಪ್ರತಿಪಾದಿಸುತ್ತ ನೂರ ಹನ್ನೊಂದು ಪುಟದ ಈ ಕೃತಿಯನ್ನು ಪ್ರಕಟಣೆ: ಅಕ್ಷರ ಪ್ರಕಾಶನ, (ಸಾಗರ) ,ಕರ್ನಾಟಕ. ಬೆಲೆ ರೂ: ೫೦.೦೦. ಅನೇಕ ಮಹತ್ವದ ಪ್ರಶ್ನೆಗಳನ್ನು ಎತ್ತಿ ತಳಮಳಕ್ಕೀಡುಮಾಡಿಬಿಡುವ ಈ ಕೃತಿಯನ್ನು ಓದಿ ಪ್ರತಿಕ್ರಿಯಿಸಿದರೆ, ಉತ್ತಮ ಚರ್ಚೆಯೊಂದಕ್ಕೆ ದಾರಿಯಾಗುತ್ತದೆ ಎಂಬ ವಿಶ್ವಾಸವಿದೆ.
Related Posts
ಇಂದು ವಿಶ್ವ ಕನ್ನಡ ಸಮ್ಮೇಳನ
- ಶೇಖರ್ ಪೂರ್ಣ
- ಆಗಷ್ಟ್ 30, 2002
- 0
ಈ ಕಿರಿಕಿರಿಗಳಾಚೆ ನೋಡಬಹುದಾದ ಪಕ್ವತೆಯುಳ್ಳ ಹಿರಿಯರು, ಉತ್ಸಾಹಿ ಯುವಕರೂ ಒಂದೆಡೆ ಸೇರುತ್ತಾರೆ. ಉತ್ಸಾಹ, ಸಂಭ್ರಮಕ್ಕಷ್ಟೆ ಸೀಮಿತವಾಗದೆ ಹೆಚ್ಚು ಅರ್ಥವತ್ತಾದ ಆಲೋಚನೆಗಳು-ಕಾರ್ಯಕ್ರಮಗಳು ಈ ಸಮ್ಮೇಳನದಿಂದ ಬರಲಿ ಎಂದು ನಿರೀಕ್ಷಿಸುತ್ತಲೆ….ಕೆಳಗಿನ ಮಾತುಗಳು: “ಕರ್ನಾಟಕ ಇಂದು ಬರದ ದವಡೆಗೆ […]
ಸಂಭ್ರಮ ಶೋಕ – ಸಾಮೂಹಿಕ ಪ್ರಯತ್ನ
- ಶೇಖರ್ ಪೂರ್ಣ
- ಆಗಷ್ಟ್ 3, 2003
- 0
ಸಂಭ್ರಮ: ಯಶವಂತ ಚಿತ್ತಾಲ ಹಾಗು ಚನ್ನವೀರ ಕಾಣವಿಯವರಿಗೆ ಎಪ್ಪತ್ತೈದು. ಈ ಅವರ ಕೃತಿಗಳನ್ನು ಸ್ಮರಿಸಿಕೊಳ್ಳುವುದರ ದೃಷ್ಟಿಯಿಂದ ಈ ಸಂಚಿಕೆಯ ಬಹುಭಾಗ ಆ ದೊಡ್ಡಜೀವಗಳಿಗೆ ಮೀಸಲಾಗಿಟ್ಟಿರುವುದು ಸ್ಪಷ್ಟವಾಗಿದೆ. ಅಹಂಕಾರವೋ- ಕೃತಿಗಿಂತಲೂ ಅಧಿಕವಾದದ್ದನ್ನು ಲೇಖಕ ಹೇಳಲಾಗದು ಎಂಬ […]
ಬರಹ ೫
- ಶೇಖರ್ ಪೂರ್ಣ
- ಜೂನ್ 6, 2002
- 0
‘ಬರಹ ೫.೦’ರ ಮಧ್ಯಾವೃತ್ತಿ, ತಂತ್ರಾಂಶ ಅಭಿವೃದ್ಧಿ ಪೆಟ್ಟಿಯ ಸಹಿತ, ಇದೀಗ ಕನ್ನಡ ತಂತ್ರಾಂಶ ಆಸಕ್ತರ ಮುಂದಿದೆ. ಕನ್ನಡಕ್ಕೆ ಸಂಬಂಧಪಟ್ಟ ತಂತ್ರಾಂಶಗಳ ಅಭಿವೃದ್ಧಿಯೂ ಸೇರಿದಂತೆ, ಬರಲಿರುವ ದಿನಗಳಲ್ಲಿ ಅಂತರ್ಜಾಲದಲ್ಲಿಯೂ ಕೂಡ ಕನ್ನಡದ ಬೆಳವಣಿಗೆಗೆ ಇದೊಂದು ಮಹತ್ವದ […]