ರಣಸೆಖೆಗೆ ಬೆಂದು ಕೆಂಪಾಗಿ ಸೂರ್ಯ ಓ ಅಲ್ಲೆಲ್ಲೋ ಮುಳುಗಿದಾಗ-ಇಲ್ಲಿ ರಾತ್ರಿಯಾಗುವದಂತೆ ಹಗಲಿಡೀ ಕಿಲ ಕಿಲ ನಕ್ಕ ಹೂಗಳು ಪಕಳೆಯೊಡ್ಡಿ ಬೆಳದಿಂಗಳಲ್ಲಿ ತೊಯ್ದು ನಕ್ಷತ್ರಗಳಾಗುವವಂತೆ ಮತ್ತು……. ಕನವರಿಸುವ ಕಟ್ಟಡಗಳ ಸಿಮೆಂಟು ಬ್ಯಾಂಡೇಜೊಳಗಿನ ಮಣ್ಣ ಹಸಿ ಗಾಯ […]
ಟ್ಯಾಗ್: Kannada Poetry
ಅಜ್ಜೀ ಕವಿತೆ
ಮೊನ್ನೆ ರಜದಲ್ಲಿ ಕುತೂಹಲಕ್ಕೆಂದೇ ಮಲೆನಾಡ ಮೂಲೆಯ ಒಬ್ಬಂಟಿ ಅಜ್ಜಿಮನೆಗೆ ಹೋಗಿದ್ದೆ ಸುತ್ತಲೂ ಒಸರುವ ತೇವ ಹಸಿರು ಹೊಗೆ ಜಿಗಣೆ ತನ್ಮಧ್ಯೆ ಅಜ್ಜಿ ಸುಟ್ಟ ಹಲಸಿನ ಹಪ್ಪಳ ಹದಾ ಮೆಲ್ಲುತ್ತಿರುವಾಗ ಮೆತ್ತಗೆ ಕೇಳಿದಳು- ಏನೋ ಮರೀ […]
ಕೋಟಿತೀರ್ಥ
(೧೯೭೫-೧೯೭೯) ಕಣ್ಣು ಕಾಣದ ಕತ್ತಲಲ್ಲಿ ಸನ್ನೆ ಕೈ ಕುಲುಕು ಅಕ್ಷರಶಃ ಕಾಣದ ಒದ್ದೆ ಪಾಟಿಯ ಮೇಲೆ ಮುರುಕು ಬಳಪ ದಾರಿ ಮೇಲೆಲ್ಲೋ ಸಿಕ್ಕುವ ಕೈಕಳೆದ ಕರವಸ್ತ್ರ ಒಂಟಿ ಚಪ್ಪಲಿ ನಿಬ್ಬು ಪಠ್ಯಪುಸ್ತಕ ತುಂಬ ಶಾಯಿ […]
ಕೋಳಿ ಕೂಗುವ ಮುನ್ನ
ರಕ್ತ ಕುಡಿಯುವ ಪಾತರಗಿತ್ತಿಗಳು ಹಣ್ಣಾಗಿ ತೊಳೆ ತೊಳೆ ಚಿಗುರಿ ಬೆವರುತ್ತಲೇ ಧಗೆಯುಂಡು ಧಾವಿಸುವ ಬಣ್ಣಗಳು ಕಣ್ಣು ತುಂಬ. ಒಂದರ ಮೇಲೊಂದು ಧಬ ಧಬ ಬಿದ್ದ ಹಾಡಿಸುವ ತಂತು-ಮೋಹಿಸುವ ವೈವಾಟು ಕಾಲು ಕೈ ಹಿಂಡಿ ನೂಲೆಳೆವ […]