ವಿಮರ್‍ಶಕ

ಸುತ್ತಿಗೆ ಕೈಯ್ಯಲ್ಲಿರುವವನಿಗೆ ಸುತ್ತ ಎಲ್ಲೆಲ್ಲು ಕಾಣಿಸುತ್ತವೆ ಭರ್‍ಜರಿ ಮೊಳೆ; ವಿಮರ್‍ಶೆ ಕೈಗೆತ್ತಿಕೊಂಡವನಿಗೆ ಗೋಚರಿಸುತ್ತವೆ ಬರೀ ದೋಷಪೂರ್‍ಣ ಕೃತಿಗಳೆ. *****

ಪ್ರಸ್ನೆ – ಹುತ್ತರ

“ಹಲ್ಪ ಪ್ರಾಣ ಮ‌ಆ ಪ್ರಾಣ ಹೇನೆಂಬುದರ ಹರಿವಿಲ್ಲದ ಹಿವನೊಬ್ಬ ಕೋಣ. ಸಿಸ್ಯನಾಗಿ ಹನುಗ್ರಯಿಸಿ ನೀಡಿ ಹೊಳ್ಳೆಯ ಸಿಕ್ಸಣ.” “ಆಗೆಯೇ ಹಾಗಲಿ, ಎದರಬೇಡ ಹೀವೊತ್ತಿನಿಂದಲೇ ಹೋದು ಹಾರಂಬಿಸೋಣ.” *****

ಅಂಗಾರಿ

ಕಣ್ಣು ಸಿಡಿಲಿನ ಮಡಿಲು ದನಿ ಗುಡುಗೋ ತಡಸಲು ಏದುಸಿರು ಬಿರುಗಾಳಿ ಬಸಿರು ಮೊಗದಲ್ಲಿ ಕಾರ್‍ಮಿಂಚು ಮನಸ್ಸಲ್ಲಿ ಕೊಚ್ಚಿ ಹಾಕೋ ಸಂಚು; ಬಂತೋ ಕೋಪ ಎದುರು ನಿಂತೋನು ಬೇಕೂಫ: ಬಂಗಾರಿ ಆಗ್ತಾನೆ ಮಲೆನಾಡಿನ ಮುಂಗಾರಿ. *****

ಮುಯ್ಯಿ

ಬಾಪೂಜಿಯನ್ನು ಮುಗಿಸಿ ವರ್‍ಷಗಳು ಗತಿಸಿದ್ದರೂ ಇನ್ನೂ ಮುಗಿದಿಲ್ಲ ಕೇಡು, ಕ್ರೋಧದ ‘ಮೂಡು’; ಬೇಕಾದರೆ ನೀವೇ ಹೋಗಿ ಪ್ರತ್ಯಕ್ಷ ಪರೀಕ್ಷಿಸಿ ಅಂಚೆ ಕಛೇರಿಯಲ್ಲಿ ದಿನವೂ ತೀರಿಸಿಕೊಳ್ಳುವ ಸೇಡು! *****

ಅಡ್ಡ ವೈಸು

“ಗೀತಾ, ಮನೆ ಮುಗೀತಾ? ಯಾವಾಗ ಗೃಹಪ್ರವೇಶ?” “ಮುಗೀತೂರಿ, ಆದ್ರೆ ಕಂಟ್ರಾಕ್ಟರ್ ಮಾಡ್ದ ಸಖತ್ ಮೋಸ”. “ಯಾಕೆ? ಏನಾಯ್ತು ಅಂಥದ್ದು? ಪೀಕಿಸಿದ್ನ ದುಡ್ಡು ಜಾಸ್ತಿ?” “ಅವನ ಮನೆ ಹಾಳಾಗ, ಕರಗಿಸಿಬಿಟ್ಟ ಕಣ್ರಿ ಇದ್ದ ಬದ್ದ ಆಸ್ತಿ”. […]

ವೈಖರಿ

ಮಣ್ಣಿನ ಮಗನ ಆಡಳಿತ ಬಲು ಭರ್‍ಜರಿ, ನಾಡಿನ ಇತಿಹಾಸದಲ್ಲೆ ಗೋಲ್ಡನ್ ಛಾಪ್ಟರ್; ಚಿರ ವಿನೂತನ ರೈತರ ಉದ್ಧಾರದ ವೈಖರಿ; ಪ್ರತಿ ನಿತ್ಯ ಏರಿ ಕಾಂಟೆಸ, ವಿಮಾನ, ಹೆಲಿಕಾಪ್ಟರ್. *****

ಹುಲಿ-ಇಲಿ

ಕಛೇರಿಯಲ್ಲಿ ಏನಿವನ ದರ್ಪ! ಸದಾ ಬುಸ್ಸೆನ್ನುವ ಕಾಳಿಂಗ ಸರ್ಪ; ಬಾಯಿ ತೆರೆದನೋ ಬೈಗುಳ, ಉಗಿತ; ಗಂಟು ಮುಸುಡಿಯ ರಕ್ತಾಕ್ಷಿ; ಮನೆಯಲಿ ಉಡುಗಿ ಜಂಘಾಬಲವೇ ಮಡದಿಯ ಕೈಯಲಿ ಊದುಗೊಳವೆ, ಅವಳೆದುರಾದರೆ ಗಂಡತಿಯಾಗುತ ಹಲ್ಕಿರಿಯುವ ಸೀಡ್‌ಲೆಸ್‌ ದ್ರಾಕ್ಷಿ. […]

ವಿಧೇಯ ಪುತ್ರ

“ನಾವು ಬದುಕಿರೋವಾಗ್ಲೇ ಹೀಗೆ, ಗೊಟಕ್ಕಂದ್ರೆ ಹೇಗೋ ಏನೋ, ಇನ್ನು ನಮ್ಮನ್ನ ಜ್ಞಾಪ್ಕಾ ಇಡ್ತಾನ?” _ಮನಸಾರೆ ನೊಂದು ಆಡಿಕೊಂಡಿರಲು ಮುದಿ ತಾಯಿ ತಂದೆ ಅಮಾವ್ರಗಂಡ ಬಿರುದಿನ ಮಗನನ್ನ; ಸುಪುತ್ರ ಸಮಾಧಾನಿಸಿದ: “ಯಾಕೆ ಪಡ್ತೀರಿ ಅನುಮಾನ? ನಂಬಿಕೆ […]

ಮಾತಿನ ಗುಟ್ಟು

`ಮಯೂರ’ ಕ್ಕಿಂತ `ಸುಧಾ’ ವಾಸಿಅಂದ್ರೊಮ್ಮೆ ಗುಂಡಯ್ಯ ಶೆಟ್ಟಿ.ಸಾಹಿತ್ಯ ಪ್ರೇಮಕ್ಕೆ ಅಚ್ಚರಿ ಪಟ್ಟುಅಂದ್ಕೊಂಡೆ: ಆಸಾಮಿ ಗಟ್ಟಿ.ಆಮೇಲೆ ಅರಿತೆ ಶೆಟ್ರು ಆ ದಿವ್ಸಆಡಿದ ಮಾತಿನ ಗುಟ್ನ_“ಅನುಭವದ ಮಾತು ನಾನಂದದ್ದು:ಕಟ್‌ಬಹುದು ದೊಡ್ಡ ದೊಡ್ಡ ಪೊಟ್ನ”.*****