ಕೆರೆಗೆ ಹಾರಿ ಪ್ರಾಣ ಕಳೆದುಕೊಳ್ಳಬೇಕೆಂದು ಅವಳು ಬಂದದ್ದು. ಆದರೆ ಮನಸ್ಸು ಎಲ್ಲೆಲ್ಲೊ ಆಡುತ್ತಿದೆ. ಈ ದೃಶ್ಯ ಅಸಂಬಂಧವಾಗಿ ಮರುಕಳಿಸತ್ತೆ! ದಾರಿಯಲ್ಲಿ ಕಾರಿ ನಿಧಾನ ಮಾಡಿದಾಗ ಕಂಡದ್ದು: ಹುಲ್ಲು ಹೊದೆಸಿದ ಗುಡಿಸಲು. ಎದುರು ಪೆಟ್ಟಿಗೆ ಗೂಡಿನ […]
ತಿಂಗಳು: ಆಗಷ್ಟ್ 2025
ನನ್ನ ನೆನಪು
ಎಲ್ಲ ಕಡೆ ಬಸ್ಸು ತಪ್ಪಿ ಭಾರದ ಕೈ ನೋಯುವ ಬ್ಯಾಗಿನೊಂದಿಗೆ ಧೂಳು ಮುಕ್ಕುವ ಸಂಜೆ ದಣಿದು ನಿಂತಾಗ ಅಕ್ಕ ಪಕ್ಕ ಸರಿಯುವ ಮಲ್ಲಿಗೆ ಮುಡಿದ ತುರುಬಿನ ಕಣ್ಣುಗಳಲ್ಲಿ ಅಮೃತವೀಯುವ ಹೆಂಗಸರನ್ನು ಕಂಡು ಅಮ್ಮನ ನೆನಪಾಯಿತು […]
ಚಿಗುರಿತು ಈ ಹುಲುಗಲ
ಚಿಗುರಿತು ಈ ಹುಲುಗಲ- ಶಿವ-ಪಾರ್‍ವತಿ ಅಪ್ಪಿದಂತೆ, ಹೊಸ ಸೃಷ್ಟಿಗೆ ಒಪ್ಪಿದಂತೆ, ಚಿಗುರಿತು ಈ ಹುಲುಗಲ! ಯಾ ವಿಮಾನದಿಂದ ಬಂದು ಇಳಿದನೇನೊ ಚೈತ್ರ ಬೇರಿನಿಂದ ತುದಿಯವರೆಗು ಮೂಕ ತಂತಿ ಮಿಡಿತ. ಒಂದು ಇರುಳು, ಒಂದು ಬೆಳಗು, […]
ಒಂದು ರಾತ್ರಿ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಾನು ಪ್ರೇಮವನ್ನೂ ಕೇಳಿದೆ “ಹೇಳು ನಿಜವಾಗಿ, ನೀನು ಯಾರು?” ಆಕೆ ಹೇಳಿದಳು “ನಾನು?” “ನಾನು ಸಾವಿಲ್ಲದ ಜೀವ ಕೊನೆಯಿಂದ ಆನಂದ ಪ್ರವಾಹ” *****
ಜಾಮೀನು ಸಾಹೇಬ
-೧- ದಯಾನಂದ ಮೊದಲನೇ ಸಲ ಜಾಮೀನು ನಿಂತದ್ದು ತನ್ನ ಅಪ್ಪನಿಗೆ. ಆಗ ಅವನಿಗೆ ಇಪ್ಪತ್ತೆರಡು ವರ್ಷ. ಬಿ. ಎ. ಕೊನೆಯ ವರ್ಷದ ಪರೀಕ್ಷೆಯನ್ನು ಎರಡು ಸಲ ಪ್ರಯತ್ನಿಸಿದರೂ ದಾಟಲಾಗದೇ ಹೆಣಗಾಡುತ್ತಿದ್ದ. ಅವನ ವಾರಿಗೆಯ ಹಲವರು […]
ಅಂತರಾಳದ ಬದುಕು
“ಆಗ ಹೋಗದ್ದೆಲ್ಲ ವರದಿ ಮಾಡುತ್ತೀ, ನನ್ನದೊಂದು ಸುದ್ದಿ ವರದಿ ಮಾಡು ನೋಡುವ.” ಎಂಬುದು ಚಿಕ್ಕಮ್ಮ ಯಾವತ್ತೂ ಮಾಡುವ ಒಂದು ಕುಶಾಲು. “ನೀನು ಮಾಡುವ ವರದಿ ವರದಿಯೇ ಅಲ್ಲ, ದಂಡ” ಎನ್ನುವಳು. “ಸುದ್ದಿ ಮಾಡು. ವರದಿ […]
