ಸುಟ್ಟಾವು ಬೆಳ್ಳಿ ಕಿರಣ

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯ ಬೇಡ ಗೆಳತಿ ತತ್ತರಿಸುವಂತೆ ಕಾಲಲ್ಲಿ ಕಮಲ ಮುತ್ತುವವು ಮೊಲದ ಹಿಂಡು […]

ರಾಣಿಯ ಪ್ರೇಮ

ಉತ್ತರ ದಿಕ್ಕಿಗೆ ರಾಣಿಯೊಬ್ಬಳು ಇದ್ದಳು ಬಲು ಹಿಗ್ಗಿ ಎತ್ತರದಲ್ಲಿ ರಾಣಿಯಿದ್ದಳು ಕಣ್ಣುಗಳಿಗೆ ಸುಗ್ಗಿ ಆಳನು ಕರೆದಳು ಪಟ್ಟದ ರಾಣಿ ಆಳು ಬಾರೊ ನನ್ನ ಜೀತಗಾರನ ಜೊತೆಗೆ ಕರೆದಳು ಪ್ರೀತಿ ಮಾಡೊ ನನ್ನ ಆಳು: ಕೊಕ್ಕರೆಯೊಂದು […]

ನೆನ್ನೆ ದಿನ

ನೆನ್ನೆ ದಿನ ನನ್ನಜನ ಬೆಟ್ಟದಂತೆಬಂದರು. ಕಪ್ಪುಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ ಇರುವೆಯಂತೆ ಹರಿವ ಸಾಲು ಹುಲಿ […]

ನಲವತ್ತೇಳರಸ್ವಾತಂತ್ರ್ಯ

ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಟಾಟಾ ಬಿರ್ಲಾ ಜೋಬಿಗೆ ಬಂತು ಜನಗಳ ತಿನ್ನುವ ಬಾಯಿಗೆ ಬಂತು ಕೋಟ್ಯಾಧೀಶನ ಕೋಣೆಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಬಡವ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ […]

ಮಾತಾಡಬೇಕು

ಕತ್ತಾಳೆಯ ಮುಳ್ಳುಗಳು ಹಾಲಿಲ್ಲದ ಕಳ್ಳಿಗಳು ಮೈ ಸಿಗಿಯುವ ಬಾಡಬಕ್ಕದ ಗಿಡಗಳು ಇವುದರ ಜೊತೆಗೆ ಕೊಂಚ ಮಾತಾಡಬೇಕು ಬಾಡಿಗೆ ಬೆಳಕಿನ ಚಂದ್ರನಿಗೆರವಷ್ಟು ಪ್ರಶ್ನೆ ಕೇಳಬೇಕು ಚಂದದ ಗುಲಾಬಿಯನ್ನು ಮುಳ್ಳುಗಳಿಂದ ಬಿಡುಗಡೆ ಮಾಡಬೇಕು ಜಲವಿಲ್ಲದ ಬಾವಿಗಳು ಮಾತಿಲ್ಲದ […]

ಗಳ್ಡಗಳು

ನಾನ್ ಹ್ಯಣ ನನ್ ಸುಟ್ಟುಡಿ ಬರೆ ಉಸುರ್‌ಕೊಟ್ ಓಡಾಡುಸ್ ಬ್ಯಾಡಿ ಕೂಲೀಗ್ ಕರೀಬ್ಯಾಡಿ ದುಡಿಯಾಕ್ಯಳೀ ಬ್ಯಾಡಿ ಕ್ವಳ್ಜೆ ಜಾಗ್ದೇಲ್ ಮಲುಗ್ಸಿ ಕಕ್ಕಸ್ ಪೈಪ್ ಇತ್ ಕಡೀಕ್ ತಿರುಗುಸ್ ಬ್ಯಾಡಿ ಜೀತ ಸಾಲ ಬಡ್ಡಿ ಚಪ್ಪಡಿ […]

ಬಡ ದಶರಥನ ಸಾಂತ್ವನ

೧ ಹೇಳಿ ಕೇಳಿ ಕುಚೇಲನಲ್ಲವೆ ನಾನು? ಅವಳಿಗಿವೆ ಎರಡು ಜಡೆ ತೊಡುತಾಳವಳು ಮಸ್ಲಿನ್ ತೊಟ್ಟಿದ್ದಾಳೆ ಎತ್ತರದಟ್ಟೆ ದಿಮಾಕು ಚಪ್ಪಲಿ ಅವರು ಹಾಗೆ ಇವರು ಹೀಗೆ ಸರಿಯೆ, ನಮಗೇಕೆ, ಅದು? ತಿಂಗಳ ಮೊದಲದಿನವೇ ಏಕೆ ಹಗರಣ? […]