೧ ಈ ಕಾಲನೆಂಬುವ ಪ್ರಾಣಿ ಕೈಗೆ ಸಿಕ್ಕರೆ ಚೆನ್ನಾಗಿ ಥಳಿಸಬೇಕೆಂದಿದ್ದೆ; ಎಲ್ಲೊ ತಲೆಮರೆಸಿಕೊಂಡು ಓಡಾಡುತಿದ್ದಾನೆ. ಆಕಾಶದಲ್ಲಿ ಮಿಂಚಿ, ಭೂಕಂಪದಲ್ಲಿ ಗದಗದ ನಡುಗಿ, ಜ್ವಾಲಾಮುಖಿಯೊಳಗೆ ಸಿಡಿದು ನುಚ್ಚುನೂರಾಗಿ, ನದಿನದಿಯ ಗರ್ಭವ ಹೊಕ್ಕು, ಮಹಾಪೂರದಲಿ ಹೊರಬಂದು ನಮ್ಮೆದೆಯಲ್ಲಿ […]
ಟ್ಯಾಗ್: Chennaveera Kanavi
ಕಾಲಪುರುಷನಲ್ಲಿ ಕವಿಗಳ ಕೋರಿಕೆ
ಏನಮ್ಮ ಕಾಲಪುರುಷ ನಿನ್ನ ಮುಖದರುಶನವನೊಮ್ಮೆ ದಯಪಾಲಿಸಯ್ಯ. ಕಣ್ತುಂಬ ನೋಡಿ, ನಿನ್ನ ರೂಪವನೊಮ್ಮೆ ಅಚ್ಚೊತ್ತಿಕೊಳ್ಳುವೆವು ಹಣೆಯ ಪಾದಕೆ ಹಚ್ಚಿ ನಮಿಸುವೆವು ಸಾಷ್ಟಾಂಗವೆರಗುವೆವು, ಆಯಿತೋ? ಈ ಸೃಷ್ಟಿ ಜೊತೆಗೇ ನಿನ್ನ ರಥವೂ ಹೊರಟು ಬಂದಿಹುದು- (ಉರುಳುತಿದ ಕುರುಡು […]
ಯುಗ ಯುಗದ ಹಾಡು
ಯುಗ ಯುಗಕೂ ಉರುಳುತಿಹುದು ಜಗದ ರಥದ ಗಾಲಿ, ಹಗಲು ಇರುಳು ಮರಳಿ ಮಸೆದು ಸಾಹಸ ಮೈತಾಳಿ. ಕಾಡು-ನಾಡು, ದೇಶ-ಕೋಶ ಭಾಷೆ-ಭಾವ ದಾಟಿ, ಭೂಮಿ-ಬಾನು, ಬೆಂಕಿ-ನೀರು ಗಾಳಿ-ರಾಟಿ-ಧಾಟಿ. ನವ ಜನಾಂಗ ಮೂಡಿ, ಮೊಳಗಿ ಬದುಕು ತಿದ್ದಿ […]
ಹೊಸ ಬಾಳಿನ ಯೋಜನೆ
೧ ಇದು ನೆಲದ ತುಂಡಲ್ಲ ಐದು ಖಂಡದ ಅಖಂಡ ಜೀವ ಪಿಂಡ. ಇದರ ಬದುಕಿನ ಮೇರೆ ಭೋರ್ಗರೆವ ಸಾಗರವು ಜೊಂಡು ಪಾಚಿಯ ಚಿಕ್ಕ ಹೊಂಡವಲ್ಲ. ವಿಶ್ವದಂಚಿನವರೆಗು ತೇಲಿಬಿಡು ನೌಕೆಗಳ ಸಪ್ತಸಾಗರಗಳನು ಸುತ್ತಿಬರಲಿ; ಕಳಿಸಿದರೆ ಕಳಿಸು […]
ಅಂತೂ ಕೊನೆಗೆ ಬಂತು ಮಳೆ
ಅಂತೂ ಕೊನೆಗೆ ಬಂತು ಮಳೆ- ತಂತಿ ವಾದ್ಯವ ನುಡಿಸು, ಮದ್ದಳೆಯ ಬಡಿ, ಹೂಡಿ ಕೇಕೆ. ಓಡಿ ಹೋಗುವ ಮೋಡಗಳ ಹಿಡಿದು ಹಿಂಡು. ಬಳುಕಿ ಬಾಗುವ ಮಳೆಯ ಸೆಳಕುಗಳ ಸೇವಿಗೆಯ ಸಿವುಡು ಕಟ್ಟಿಡು; ಬೇಕು ಬೇಕಾದಾಗ […]
ನೀರು ಹರಿದಿದೆ ನಿರಾತಂಕ
ಆಗಸದ ಆಣೆಕಟ್ಟನು ಒಡೆದು ನುಗ್ಗಿದವು ನೂರು ನಾಯ್ಗರಾ ತಡಸಲು! ಕಣ್ಣು ಕಟ್ಟಿ, ಗಿಮಿಗಿಮಿ ಗಾಣವಾಡಿಸಿತು ಗಾಳಿ ನೆನೆ ನೆನೆದು ನೆಲವೆ ಕುಪ್ಪರಿಸಿತ್ತು, ಮುಗಿಲು ಹೊಚ್ಚಿತು ಕಪ್ಪು ಕಂಬಳಿಯ ಕತ್ತಲು, ರಮ್….ರಮ್….ರಮ್…. ರಣ ಹಲಗೆ ಸದ್ದಿನಲಿ […]
ಧಾರವಾಡದಲ್ಲಿ ಮಳೆಗಾಲ
ಏನಿದೀ ಹನಿಹನಿಯ ತೆನೆತೆನೆ ಸಿವುಡುಗಟ್ಟುತ ಒಗೆವುದು! ಗುಡ್ಡ ಗುಡ್ಡಕೆ ಗೂಡು ಬಡಿಯುತ ಬೇರೆ ಸುಗ್ಗಿಯ ಬಗೆವುದು. ಸೆಳಸೆಳಕು ಬೆಳೆ ಕೊಯಿದರೂ ಆ ಮೋಡದೊಕ್ಕಲು ತಂಗದು ಬಾನ ಮೇಟಿಗೆ ಸೋನೆ ತೂರುತ ರಾಶಿಮಾಡದೆ ಹಿಂಗದು. ಏನು […]
ಗಗನದಿ ಸಾಗಿವೆ
ಗಗನದಿ ಸಾಗಿವೆ, ಬಾಗಿವೆ ಮೋಡ ಹೋಗಿವೆ ನೀರನು ಸುರಿದು; ಬರುವವು, ಬಂದೇ ಬರುವವು ನೋಡ ತುಂಬಿಸಿ ತುಳುಕಿಸಿ ಹರಿದು. ಇಳೆಗೂ ಬಾನಿಗು ಮಳೆ ಜೋಕಾಲಿ- ತೂಗಿದೆ, ತಂಗಿದೆ ಚೆಲುವು; ಹಸುರೇ ಹಬ್ಬಿದೆ, ಹಸುರೇ ತಬ್ಬಿದೆ […]
