ನೆಹರು : ಶ್ರದ್ಧಾಂಜಲಿ

ಬಾನ ನೀಲಿಯ ಕುಡಿದು, ನಕ್ಷತ್ರಗಳ ಮುಡಿದು ಮೋಡ-ಕುಡಿ ಮಿಂಚುಗಳ ಧಾರೆ ಹಿಡಿದು ನದಿನದಿಗೆ ಧುಮುಕಿಸಿದ ಆ ಹಿಮಾದ್ರಿಯ ಶಿಖರ ನೆಲಕೊರಗಿ ನಿದ್ರಿಸಿತು; ಏಳ್ವುದೆಂದು? ಯಾರು ಬಂದರು ತೆರೆವ ಬಾಗಿಲವು, ಸೋತವರ- ನೆತ್ತಿಕೊಳ್ಳುವ ಹೆಗಲು, ತುಂಬಿದುಡಿಯು; […]

ಪಯಣ

ಆಗ, ಮೂರುಸಂಜೆಯ ಹೊತ್ತಿಗೆ ಭೆಟ್ಟಿಯಾಗಲು ಬಂದಾತ ಹೇಳಿ ಹೋಗಿದ್ದ-“ನಾಳೆ ನಸುಕಿನಲ್ಲಿ ಕೋಳಿ ಕೂಗುವ ಮೊದಲೇ ಹೊರಡಬೇಕು ಸಿದ್ಧನಾಗಿರು” ಎಂದು. ಎಂತಲೇ, ರಾತ್ರಿಯ ಊಟ ಮುಗಿಸಿದ್ದೇ ಅವನು ಹೊರಡುವ ಸಿದ್ಧತೆಗೆ ತೊಡಗಿದ್ದ. ಕಳೆದ ನಾಲ್ಕಾರು ದಿನಗಳಲ್ಲಿ […]

ದೇಹವೆಂಬ ಹರಕು ಬಟ್ಟೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಬಾರಿ ನಾನು ನಿಜವಾಗಿಯೂ ಪೂರ್‍ಣ, ಅಖಂಡ ಎಲ್ಲ ಪರಿಣಾಮಗಳಿಂದ ಮುಕ್ತ, ನಿಜವಾಗಿಯೂ ಪೂರ್‍ಣ ಈಗ ಚತುರ್‍ಭೂತಗಳ ಸೃಷ್ಟಿಯಾದ ವಿಗ್ರಹ ಚೂರು ಚೂರು ಚೂರಾಯಿತು ಮತ್ತೆ […]

ಭೂಮಿ-ತೂಕ

ಮಾತು-ಬೆಳ್ಳಿ, ಕತ್ತಲೆಯ ತಳ್ಳಿ ಸುತ್ತೆಲ್ಲ ಮಿನುಗುತಿರಲು ಮೌನ-ಧ್ಯಾನ ಬಂಗಾರ ಕೃತಿಯು ಮೂಡಲಕೆ ಮೂಡಿ ಬರಲು ಜಗದ ಅಂಗಳವ ದಾಟಿ ಒಳಗೆ ಭಾರತದ ಗರ್‍ಭಗುಡಿಗೆ ಸೂರ್‍ಯಕಿರಣ ಶಿವಲಿಂಗ ತಾಗೆ ಹೂವಾಗಿ ಎಲ್ಲರೆದಗೆ. ಹೊರಗೆ ಬರಲಿ ಬಂಗಾರ […]

ಕೆಂಡದ ಮಳೆ ಕರೆವಲ್ಲಿ ಉದಕವಾಗಿದ್ದವರ ಕಥೆ

ಪೀರಣ್ಣ ಇಳಿದ ಕೂಡಲೆ ಮಹಾದೇವಿ ಧೂಳೆಬ್ಬಿಸುತ್ತ ಓಡಿತು.  ಧೂಳು ಕರಗುವ ಮಟ ಮೂಗಿಗೆ ಅಡ್ಡಲಾಗಿ ಕರ್ಚೀಪು ಇಡುವುದನ್ನು ಮರೆಯಲಿಲ್ಲ ಆತ.  ಕರಗುತ್ತಿದ್ದ ಧೂಳಿನಾಚೆ ಕಣ್ಣುಚೆಲ್ಲಿದ.  ದುಮ್ಮ ಹಂತ ಹಂತವಾಗಿ ಕರಗುತ್ತಲೆ ಪ್ರಕೃತಿ ವಿರಾಜಮಾನವಾಯಿತು.  ಬರೆದ […]

ಪ್ರಸ್ನೆ – ಹುತ್ತರ

“ಹಲ್ಪ ಪ್ರಾಣ ಮ‌ಆ ಪ್ರಾಣ ಹೇನೆಂಬುದರ ಹರಿವಿಲ್ಲದ ಹಿವನೊಬ್ಬ ಕೋಣ. ಸಿಸ್ಯನಾಗಿ ಹನುಗ್ರಯಿಸಿ ನೀಡಿ ಹೊಳ್ಳೆಯ ಸಿಕ್ಸಣ.” “ಆಗೆಯೇ ಹಾಗಲಿ, ಎದರಬೇಡ ಹೀವೊತ್ತಿನಿಂದಲೇ ಹೋದು ಹಾರಂಬಿಸೋಣ.” *****

ಇಂದೆ ಸೀಮೋಲ್ಲಂಘನ

ಯುದ್ಧ ಬಂದಿತು ಸಿದ್ಧರಾಗಿರಿ ಇಂದೆ ಸೀಮೋಲ್ಲಂಘನ! ಪೂರ್‍ವ-ಪಶ್ಚಿಮ, ದಕ್ಷಿಣೋತ್ತರ ನೀಡಿ ಹಸ್ತಾಂದೋಲನ. ‘ಮಾಡು ಇಲ್ಲವೆ ಮಡಿಯಿರೆ’ನ್ನುತ ಎಂತು ಬಿಡುಗಡೆ ಪಡೆದೆವು- ನಾಡ ಕಟ್ಟುತ ಬೆವರು ಹರಿಯಿಸಿ ದೂರ ಗುರಿಯೆಡೆ ನಡೆದೆವು. ಬಂತು ಉತ್ತರದಿಂದ ಹತ್ತಿರ […]

ಬೇಟೆ, ಬಳೆ ಮತ್ತು ಓತಿಕೇತ

( ಈ ಕಥೆ ಗೆಳೆಯ ಚಂದ್ರಶೇಖರ ಕಂಬಾರರಿಗೆ ಅರ್ಪಿತ ) ‘ಅದೆಷ್ಟು ಸಾವಿರ ವರ್ಷಗಳ ಹಿಂದೆಯೊ ಏನೊ. ಕ್ರಿಸ್ತನಿಗೂ ಹಿಂದೆ. ಬುದ್ಧನಿಗೂ ಹಿಂದೆ. ಕಾಣಿಸ್ತ ಇದೆಯ? ಎದುರು ಬಂಡೆ ಮೇಲೆ? ಅದು ಆ ಮಾನವ […]

ಚುಂಬನ

ಹೆದ್ದಾರಿಯ ನಟ್ಟ ನಡುವೆ ಎದುರು ಬದುರು ಬಸ್ಸುಗಳಿಗೆ ಮೊಟ್ಟ ಮೊದಲ ನೋಟದಲ್ಲೆ ಪ್ರೇಮ ಉಕ್ಕಿತು ತಡೆಯಲಾಗದೆ ಎರಡು ಮೈಮರೆತು ಭರದಿಂದ ಮುಗಿಸಿಬಿಟ್ಟವು ಅಲ್ಲಿ ಪ್ರಥಮ ಚುಂಬನ ಪಾಪ ಒಳಗಿದ್ದ ಎಲ್ಲರದು ದಂತಭಗ್ನ *****

ರಾಷ್ಟ್ರದ ಕರೆ

ಹಸುರಿನ ಹೂವಿನ ಹೊದರಿನ ಒಳಗೆ ಬುಸುಗಟ್ಟಿದೆ ಘನ ಘಟಸರ್‍ಪ, ನುಸುಳುತ ಕಾಲಿನ ಕೆಳಗೇ ಬಂದಿದೆ ಹಿಮಗಿರಿ ಕೂಡವಿತು ದೀರ್‍ಘತಪ. ‘ಬರಿ ಮೈ ತಣ್ಣಗೆ, ಮನದಲಿ ಬಿಸಿ ಹಗೆ’ ಉಸಿರೋ ಮೋಸದ ಬೆಂಕಿ ಬಲೆ! ‘ಹೊಸನಾತೆ’ನ್ನುತ […]