ಕಛೇರಿಯಲ್ಲಿ ಏನಿವನ ದರ್ಪ! ಸದಾ ಬುಸ್ಸೆನ್ನುವ ಕಾಳಿಂಗ ಸರ್ಪ; ಬಾಯಿ ತೆರೆದನೋ ಬೈಗುಳ, ಉಗಿತ; ಗಂಟು ಮುಸುಡಿಯ ರಕ್ತಾಕ್ಷಿ; ಮನೆಯಲಿ ಉಡುಗಿ ಜಂಘಾಬಲವೇ ಮಡದಿಯ ಕೈಯಲಿ ಊದುಗೊಳವೆ, ಅವಳೆದುರಾದರೆ ಗಂಡತಿಯಾಗುತ ಹಲ್ಕಿರಿಯುವ ಸೀಡ್‌ಲೆಸ್ ದ್ರಾಕ್ಷಿ. […]
ಲೇಖಕ: ನಿಸಾರ್ ಅಹಮದ್ ಕೆ ಎಸ್
ವಿಧೇಯ ಪುತ್ರ
“ನಾವು ಬದುಕಿರೋವಾಗ್ಲೇ ಹೀಗೆ, ಗೊಟಕ್ಕಂದ್ರೆ ಹೇಗೋ ಏನೋ, ಇನ್ನು ನಮ್ಮನ್ನ ಜ್ಞಾಪ್ಕಾ ಇಡ್ತಾನ?” _ಮನಸಾರೆ ನೊಂದು ಆಡಿಕೊಂಡಿರಲು ಮುದಿ ತಾಯಿ ತಂದೆ ಅಮಾವ್ರಗಂಡ ಬಿರುದಿನ ಮಗನನ್ನ; ಸುಪುತ್ರ ಸಮಾಧಾನಿಸಿದ: “ಯಾಕೆ ಪಡ್ತೀರಿ ಅನುಮಾನ? ನಂಬಿಕೆ […]
ಮಾತಿನ ಗುಟ್ಟು
`ಮಯೂರ’ ಕ್ಕಿಂತ `ಸುಧಾ’ ವಾಸಿಅಂದ್ರೊಮ್ಮೆ ಗುಂಡಯ್ಯ ಶೆಟ್ಟಿ.ಸಾಹಿತ್ಯ ಪ್ರೇಮಕ್ಕೆ ಅಚ್ಚರಿ ಪಟ್ಟುಅಂದ್ಕೊಂಡೆ: ಆಸಾಮಿ ಗಟ್ಟಿ.ಆಮೇಲೆ ಅರಿತೆ ಶೆಟ್ರು ಆ ದಿವ್ಸಆಡಿದ ಮಾತಿನ ಗುಟ್ನ_“ಅನುಭವದ ಮಾತು ನಾನಂದದ್ದು:ಕಟ್‌ಬಹುದು ದೊಡ್ಡ ದೊಡ್ಡ ಪೊಟ್ನ”.*****
ಕನ್ನಡ ಮಾಧ್ಯಮ
ಸ್ವಂತ ಮನೆಯಲಿ ಸ್ಟೇಯಿನ್ಲೆಸ್ ಸ್ಟೀಲಿನ ಪಾತ್ರೆಯ ಬಳಸುತ ಮನಸಾರ, ಪರರಿಗೆ ಮಡಕೆಯ ಮಹಿಮೆಯ ದಿನವೂ ಬೋಧಿಸುತಿರುವನು ಕುಂಬಾರ. *****
ಬುದ್ಧಿ ಮಾತು
“ನಾನು ನನ್ನದು ಅನ್ನುವುದು ಅಹಂಕಾರ” ಅಂದ ಹಿರಿಯರ ವಾಕ್ಯವ ನನ್ನಿ_ ಎನ್ನುತ ನಂಬಿ ಕರೆಯೋಲೆ ಕಳಿಸಿದ: “ನನ್ನ ಹೆಂಡತಿ ಮದುವೆಗೆ ಬನ್ನಿ” *****
