ವಕ್ರ Posted on ಮೇ 23, 2025ಮೇ 25, 2025 by ನಿಸಾರ್ ಅಹಮದ್ ಕೆ ಎಸ್ ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****
ಹನಿಗವನ ಹೋಲಿಕೆ ನಿಸಾರ್ ಅಹಮದ್ ಕೆ ಎಸ್ ಜುಲೈ 24, 2023 0 ಫುಟ್ಪಾತಿನ ಮೇಲಿನ ಮರ ರಸ್ತೆಗಿಳಿದ ತೆರದಿ ಹೆಂಗಳುಡುಪು ಮರ್ಯಾದೆಯ ಗಡಿ ಮೀರಿದೆ ಭರದಿ. *****
ಹನಿಗವನ ವಾಸ್ತವತೆ ನಿಸಾರ್ ಅಹಮದ್ ಕೆ ಎಸ್ ಏಪ್ರಿಲ್ 19, 2024 0 ಬಸ್ ಸ್ಟಾಂಡಿನ ಕಕ್ಕಸಿನ ಸ್ಥಿತಿ ತುಂಬಾ ಶೌಚನೀಯ. *****
ಹನಿಗವನ ಸಾಮ್ಯ ನಿಸಾರ್ ಅಹಮದ್ ಕೆ ಎಸ್ ಜುಲೈ 10, 2023 0 ಹೊತ್ತಾರೆಯ ಮಂಜಿನಲ್ಲಿ ಹೂ ತಳೆದ ಪಿಚಕಾರಿಯ ಮರ ಗಾಂಧಿ ಬಜಾರಿನ ಬಸ್ಸಿನ ಅಡಿ ಸಿಕ್ಕ ಬಿಳಿ ನಾಯಿ ಮರಿಯ ಥರ. *****