ಬುದ್ಧಿ ಮಾತು Posted on ಏಪ್ರಿಲ್ 11, 2025ಏಪ್ರಿಲ್ 13, 2025 by ನಿಸಾರ್ ಅಹಮದ್ ಕೆ ಎಸ್ “ನಾನು ನನ್ನದು ಅನ್ನುವುದು ಅಹಂಕಾರ” ಅಂದ ಹಿರಿಯರ ವಾಕ್ಯವ ನನ್ನಿ_ ಎನ್ನುತ ನಂಬಿ ಕರೆಯೋಲೆ ಕಳಿಸಿದ: “ನನ್ನ ಹೆಂಡತಿ ಮದುವೆಗೆ ಬನ್ನಿ” *****
ಹನಿಗವನ ಸಾವು ಜಯಂತ ಕಾಯ್ಕಿಣಿ ಫೆಬ್ರವರಿ 17, 2023 0 ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ ಯಾರೋ ಕರೆದಂತೆ ಪಾಠದ ಮಧ್ಯಕ್ಕೇ ಸಟ್ಟನೆ ಎದ್ದು ಹೊರಗೆ ನಡೆದುಬಿಡುತ್ತಾರೆ *****
ಹನಿಗವನ ಅಮ್ಮನಿಗೆ – ೨ ಮಮತ ಜಿ ಸಾಗರ ಆಗಷ್ಟ್ 3, 2003 0 ಅವಳು ತಲೆ ಎತ್ತಿ ನೋಡಿದರೆ ಆಕಾಶದ ತುಂಬ ಬೆಳಕು ಅವಳ ಕಣ್ಣಲ್ಲಿ ತೇಲೋ ಮೋಡ. ಕಣ್ಣ ಮುಚ್ಚಿದರೆ, ಆಕಾಶಕ್ಕೇ ಕತ್ತಲು ಮೋಡ ಒಡೆದು ದುಃಖ ಧಾರಾಕಾರ. *****
ಹನಿಗವನ ಸೋಜಿಗ ನಿಸಾರ್ ಅಹಮದ್ ಕೆ ಎಸ್ ಜೂನ್ 21, 2024 0 ಇತಿಹಾಸದಲ್ಲಿ ಶಕ ಪುರುಷರು ಇರುವಂತೆ ವಿದೂ ಷಕ ಪುರುಷರು ಇದ್ದಾರೆ. *****